ವಿಷಯಕ್ಕೆ ಹೋಗು

ಫ್ರೀಟೌನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಫ್ರೀಟೌನ್
ಫ್ರೀಟೌನ್ ಒಂದು ನೋಟ
ಫ್ರೀಟೌನ್ ಒಂದು ನೋಟ
ದೇಶ ಸಿಯೆರ್ರಾ ಲಿಯೋನ್
ಪ್ರಾಂತಪಶ್ಚಿಮ ಪ್ರದೇಶ
ಜಿಲ್ಲೆಪಶ್ಚಿಮ ಪ್ರದೇಶದ ಜಿಲ್ಲೆಗಳು
ಸ್ತಾಪನೆಮಾರ್ಚ್ ೧೧, ೧೭೯೨
Government
 • Typeಸಿಟಿ ಕೌನ್ಸಿಲ್
 • ಮೇಯರ್ಫ್ರಾಕ್ಲಿನ್ ಬೊಡ್ ಗಿಬ್ಸನ್
 • ಉಪಮೇಯರ್ಹನಾ ಮೇರಿ ಜಿಯ[೧][೨]
Area
 • Total
೩೫೭ km2 (೧೩೮ sq mi)
Elevation
೨೬ m (೮೫ ft)
Population
 (2010)
 • Total
೧.೨ million
Time zoneಜಿ.ಎಂ.ಟಿ
ಫ್ರೀಟೌನ್ ನ ಉಪಗ್ರಹ ಚಿತ್ರ, 2006.

ಆಫ್ರಿಕಾ ಖಂಡದಲ್ಲಿನ ಪುಟ್ಟ ರಾಷ್ಟ್ರವಾದ ಸಿಯೆರ್ರಾ ಲಿಯೋನ್ ನ ರಾಜಧಾನಿ "ಫ್ರೀಟೌನ್ ". ದೇಶದ ಮುಖ್ಯ ಬಂದರು ಹಾಗೂ ಪ್ರಮುಖ ರಾಜಕೀಯ, ಸಾಂಸ್ಕೃತಿಕ ನಗರವಾಗಿದೆ. ೨೦೦೪ ರ ಜನಗಣತಿಯ ಪ್ರಕಾರ ಈ ನಗರದ ಜನಸಂಖ್ಯೆ ೭೭೨,೮೭೩. ಇಲ್ಲಿನ ಮುಖ್ಯ ಉದ್ಯಮ ಮೀನುಗಾರಿಕೆ ಹಾಗು ಬಂದರಿನ ಮೇಲೆ ಅವಲಂಬಿತವಾಗಿದೆ. ಇದು ವಿಶ್ವದಲ್ಲಿ ಆಳವಾದ ನೈಸರ್ಗಿಕ ಬಂದರುಗಳಲ್ಲಿ ಒಂದು. ಫ್ರೀಟೌನ್ ನಲ್ಲಿ ಮುಸಲ್ಮಾನರು ಮತ್ತು ಕ್ರೈಸ್ತರು ಹೆಚ್ಚಾಗಿ ವಾಸಿಸುತ್ತಾರೆ. ಹಾಗು ಇತರೆ ಆಫ್ರಿಕಾದ ಬುಡಕಟ್ಟು ಜನಾಂಗದವರು ಇರುತ್ತಾರೆ. ಸಿಯೆರ್ರಾ ಲಿಯೋನ್ ನ ಜನರು ಮಾತನಾಡುವ ಮುಖ್ಯ ಭಾಷೆ, "ಕ್ರೆಯೋ". ಇದು ಆಫ್ರಿಕಾದ ಕ್ರೆಯೋಲೆ ಎಂಬ ಬುಡಕಟ್ಟು ಜನಾಂಗದವರು ಮಾತನಾಡುವ ಭಾಷೆಯಾಗಿತ್ತು. ಉಳಿದಂತೆ, "ಲಿಂಗುವಾ ಫ್ರಾಂಕಾ" ಎಂಬ ಭಾಷೆ ಕೂಡ ಮಾತನಾಡಲಾಗುತ್ತದೆ. ಶಿಕ್ಷಣಕ್ಕೆ ಮುಖ್ಯ ಕೇಂದ್ರವಾದ ಫ್ರೀಟೌನ್ ನಲ್ಲಿ ೨ ವಿಶ್ವ ವಿದ್ಯಾಲಯಗಳಿವೆ. ಇಲ್ಲಿನ "ಲುಂಗಿ" ಎಂಬ ಪ್ರದೇಶದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ವರ್ಷದ ಬಹುಪಾಲು ಇಲ್ಲಿ ಬಿಸಿಯ ವಾತಾವರಣವಿರುತ್ತದೆ. ಇಲ್ಲಿ ಹಳೆಯ ಕಟ್ಟಡಗಳು ಹಾಗು ವಸ್ತು ಸಂಗ್ರಹಾಲಯವಿದ್ದು, ದೇಶದ ಪ್ರಮುಖ ಪ್ರವಾಸಿ ತಾಣವಾಗಿದೆ.