ಹಸ್ತಪ್ರತಿ
ಹಸ್ತಪ್ರತಿ ಅಥವಾ ಕೈಯೆಳೆತ ಎಂದರೆ ಮುದ್ರಿತವಲ್ಲದೆ ಹಾಗೂ ಇನ್ನಾವುದಾದರೂ ರೀತಿಯಲ್ಲಿ ನಕಲಾದುದಲ್ಲದೆ, ಒಬ್ಬರಿಂದ ಅಥವಾ ಕೆಲವು ಜನರಿಂದ ಕೈಯಾರೆ ಸೃಷ್ಟಿಸಲ್ಪಟ್ಟ, ಕೈಬರಹದಲ್ಲಿ ಬರೆದ ಪತ್ರಗಳಂತಹ, ವಿಷಯಗಳ ದಾಖಲಾತಿ ಹೊಂದಿರುವಂತಹ ಪತ್ರ. ಬರವಣಿಗೆಯಲ್ಲಲ್ಲದೆ ಕೈಗಳನ್ನು ಬಳಸಿ ವಿಷಯಗಳನ್ನು ದಾಖಲಿಸಿದಂತಹ ಇತರ ವಿಧಾನಗಳಿಗೂ ಈ ಪದವನ್ನು ಬಳಸಬಹುದು, ಉದಾಹರಣೆಗೆ ಗಟ್ಟಿಯಾದ ವಸ್ತುಗಳ ಮೇಲೆ ಉಳಿಯಿಂದ ಮಾಡಿದ ಕೆತ್ತನೆಗಳು ಅಥವಾ ಪ್ಲ್ಯಾಸ್ಟರ್ ಮೇಲೆ ಚಾಕುವಿನಂತಹ ಚೂಪಾದ ತುದಿಯಿಂದ ಕೆರೆಯಲ್ಪಟ್ಟಂತಹವು (ಇದೇ ಗ್ರ್ಯಾಫಿಟಿ ಯ ಮೂಲ ಅರ್ಥ)ಅಥವಾ ಒಂದು ಶಲಾಕೆಯನ್ನು ಬಳಸಿ ಮೇಣದ ಸಣ್ಣ ತುಣುಕುಗಳ ಮೇಲೆ ಕೆತ್ತನೆ ಮಾಡುವುದು (ರೋಮನ್ನರು ಈ ರೀತಿಯೇ ಟಿಪ್ಪಣಿಗಳನ್ನು ಮಾಡುತ್ತಿದ್ದದ್ದು), ಅಥವಾ ಚೂಪಾದ ತಿಲಕಾಷ್ಠದಿಂದ ಒತ್ತಿ ಸಮತಟ್ಟಾದ ಸಣ್ಣ ಹಲಗೆಗಳ ಅಥವಾ ಸುಟ್ಟಿರದ ಮಣ್ಣಿನ ಮೇಲೆ ಬರೆಯಲ್ಪಟ್ಟ ಬೆಣೆಯಾಕಾರದ ಬರವಣಿಗೆಗಳನ್ನೂ ಹಸ್ತಪ್ರತಿಯೆಂದೇ ಕರೆಯಲಾಗುತ್ತವೆ.
ಇತಿವೃತ್ತ
[ಬದಲಾಯಿಸಿ]- ಮ್ಯಾನ್ಯುಸ್ಕ್ರಿಫ್ಟ್ (ಹಸ್ತಪ್ರತಿ) ಎಂಬ ಪದವು ಮಧ್ಯಕಾಲೀನ ಲ್ಯಾಟಿನ್ ಪದವಾದಮ್ಯಾನ್ಯುಸ್ಕ್ರಿಪ್ಟಮ್ ಎಂಬ ಪದದಿಂದ ವ್ಯುತ್ಪತ್ತಿಯಾಗಿದ್ದು, ಈ ಪದವನ್ನು ಮೊದಲ ಬಾರಿಗೆ 1594ರಲ್ಲಿ ಮಧ್ಯಕಾಲೀನ ಯುಗದಲ್ಲಿ ಜರ್ಮನ್ ಭಾಷೆಯಲ್ಲಿ ಬಳಸುತ್ತಿದ್ದ ಪದದ ಲ್ಯಾಟಿನೀಕರಣವಾಗಿ ಉಪಯೋಗಿಸಲಾಯಿತು.
- ಹೋಲಿಸಿ ಮಿಡಲ್ ಹೈ ಜರ್ಮನ್ ಹ್ಯಾಥ್ ಕ್ರ್ಯಾಫ್ಟ್ (ಸುಮಾರು 1450), ಹಳೆಯ ನಾರ್ಸ್ ಹ್ಯಾಂಡ್ರಿಟ್ ( 1300ಕ್ಕೂ ಮೊದಲು), ಹಳೆಯ ಇಂಗ್ಲಿಷ್ ಹ್ಯಾಂಡ್ಜ್ ರಿಟ್ (1150ಕ್ಕೂ ಮೊದಲು), ಈ ಎಲ್ಲವುಗಳ ಅರ್ಥ "ಮ್ಯಾನ್ಯುಸ್ಕ್ರಿಪ್ಟ್", ಅರ್ಥಾತ್, "ಕೈಯಲ್ಲಿ ಬರೆದದ್".
- ಪ್ರಕಾಶನ ಪಠ್ಯಪುಸ್ತಕ ಸಂಬಂಧಿತ ಸಂದರ್ಭಗಳಲ್ಲಿ "ಹಸ್ತಪ್ರತಿ" ಎಂದರೆ ಪ್ರಕಾಶಕ ಅಥವಾ ಮುದ್ರಕರಿಗೆ ಪ್ರಕಾಶನಕ್ಕೆ ಅನುವಾಗಲೆಂದು ಮಂಡಿಸಿದಂತಹ ಪಠ್ಯವಾಗಿದ್ದು, ಇದು ಸಾಮಾನ್ಯವಾಗಿ ಟೈಪ್ ರೈಟರ್ ನಲ್ಲಿ ತಯಾರಿಸಿದ ಟೈಪ್ ಸ್ಕ್ರಿಪ್ಟ್ ಅಥವಾ, ಈಗಿನ ದಿನಗಳಲ್ಲಿ PCಯಿಂದ ಪ್ರಿಂಟೌಟ್ ತೆಗೆದಂತಹ ಹಸ್ತಪ್ರತಿ ಮಾದರಿಯಲ್ಲಿ ತಯಾರಿಸಿದಂತಹ ಗದ್ಯವಾಗಿರುತ್ತದೆ.ಹಸ್ತಪ್ರತಿಗಳನ್ನು ಅವುಗಳಲ್ಲಿರುವ ವಸ್ತುವಿಷಯಗಳ ಆಧಾರದ ಮೇಲೆ ವರ್ಣಿಸುವ ಪದ್ಧತಿ ಇಲ್ಲ;
- ಅವುಗಳಲ್ಲಿ ಬರವಣಿಗೆಯು ಗಣಿತದ ಲೆಕ್ಕಾಚಾರಗಳು, ಭೂಪಟಗಳು, ವಿವರಣಾತ್ಮಕ ಚಿತ್ರಗಳು ಅಥವಾ ಚಿತ್ರರೂಪದ ಉದಾಹರಣೆಗಳೂ ಇರಬಹುದು. ಹಸ್ತಪ್ರತಿಗಳು ಕಾಗದದ/ಚರ್ಮದ ಸುರುಳಿಗಳ ಅಥವಾ ಪುಸ್ತಕಗಳ ಅಥವಾ ಕೈಬರಹದ ಗ್ರಂಥಗಳ ಮಾದರಿಗಳಲ್ಲಿ ಇರಬಹುದು. ಪ್ರಕಾಶಮಯ ಹಸ್ತಪ್ರತಿಗಳು ಚಿತ್ರಗಳು, ಅಂಚುಗಳಿಗೆ ಅಲಂಕಾರಗಳು, ಸವಿಸ್ತಾರವಾಗಿ ನಿಮಗ್ನಗೊಳಿಸಲ್ಪಟ್ಟ ದೊಡ್ಡಕ್ಷರ ಗಳು ಅಥವಾ ಸಂಪೂರ್ಣ-ಪುಟದ ರೇಖಾಚಿತ್ರಗಳಿಂದ ಶ್ರೀಮಂತವಾಗಿರುತ್ತವೆ.
ಸಾಂಸ್ಕೃತಿಕ ಹಿನ್ನೆಲೆ
[ಬದಲಾಯಿಸಿ]- ವಾಡಿಕೆಯಲ್ಲಿರುವ ಹ್ರಸ್ವರೂಪಗಳೆಂದರೆ ಹಸ್ತಪ್ರತಿಗೆ MS ಮತ್ತು ಹಸ್ತಪ್ರತಿಗಳು ಎನ್ನಲುMSS .[೨][೩] ಈ ಎರಡನೆಯ s ಬಹುವಚನ ಸೂಚಕ ಮಾತ್ರವಲ್ಲ; ಹಳೆಯ ಸಂಪ್ರದಾಯದಂತೆ ಬಹುವಚನಗಳನ್ನು ಬಳಸಲು ಹ್ರಸ್ವೀಕೃತ ಪದದ ಕೊನೆಯ ಅಕ್ಷರವನ್ನು ಎರಡು ಬಾರಿ ಬಳಸ ಲಾಗುತ್ತಿತ್ತು; ಉದಾಹರಣೆಗೆ pp. ಎಂದರೆ "ಪುಟಗಳು" ಎಂದರ್ಥ.
- ಚೀನಾದಲ್ಲಿನ ವುಡ್ ಲಾಕ್ ಮುದ್ರಣದ ಸಂಶೋಧನೆಗೆ ಮುಂಚಿನ ದಿಗಳಲ್ಲಿ ಅಥವಾ ಸ್ಥಾನಪಲ್ಲಟಗೊಳಿಸಬಹುದಾದ ಟೈಪ್ ಅನ್ನು ಯೂರೋಪ್ ನ ಒಂದು ಪ್ರಿಂಟಿಂಗ್ ಪ್ರೆಸ್ ನಲ್ಲಿ ಕಂಡುಹಿಡಿಯುವವರೆಗೆ ಎಲ್ಲಾ ದಸ್ತಾವೇಜು/ದಾಖಲೆಗಳ ಅಸಲು ಪ್ರತಿ ಮತ್ತು ನಕಲು ಪ್ರತಿಗಳೆರಡನ್ನೂ ಕೈಯಲ್ಲೇ ಬರೆಯಬೇಕಾಗುತ್ತಿತ್ತು.
- ಐತಿಹಾಸಿಕವಾಗಿ, ಹಸ್ತಪ್ರತಿಗಳನ್ನು ಸುರುಳಿಗಳು (ಲ್ಯಾಟಿನ್ ನಲ್ಲಿ ವಾಲ್ಯುಮೆನ್ ) ಅಥವಾ ಪುಸ್ತಕಗಳು, (ಕೈಬರಹದ ಗ್ರಂಥ ಗಳ, (ಬಹುವಚನ ಕೋಡಿಸಿಸ್ ) ರೂಪದಲ್ಲಿ ತಯಾರಿಸಲಾಗುತ್ತಿತ್ತು. ಹಸ್ತಪ್ರತಿಗಳನ್ನು ವೆಲ್ಲಂ ಮತ್ತು ಇತರ ಚರ್ಮ ಕಾಗದಗಳು, ಪಪೈರಸ್, ಮತ್ತು ಕಾಗದಗಳ ಮೇಲೆ ರಚಿಸಲಾಗುತ್ತಿತ್ತು. ರಷ್ಯಾದಲ್ಲಿ ಹನ್ನೊಂದನೆಯ ಶತಮಾನದಲ್ಲಿ ತಯಾರಾದ ಬರ್ಚ್ ತೊಗಟೆಯ ಪತ್ರಗಳು ಇಂದಿಗೂ ಸುಸ್ಥಿತಿಯಲ್ಲಿವೆ.
- ಭಾರತದಲ್ಲಿ ತಾಳೆಗರಿಯ ಹಸ್ತಪ್ರತಿಗಳು,ವಿಶಿಷ್ಟವಾದ ಉದ್ದನೆಯ ಆಯತಾಕಾರದ ಆಕಾರವನ್ನು ಹೊಂದಿದವುಗಳಾಗಿದ್ದು, ಪುರಾತನ ಕಾಲದಿಂದ ಹಿಡಿದು19ನೆಯ ಶತಮಾನದವರೆಗೆ ಬಳಕೆಯಲ್ಲಿದ್ದವು. ಕಾಗದವು ಚೀನಾದಿಂದ ಆರಂಭವಾಗಿ ಇಸ್ಲಾಂ ಪ್ರಪಂಚದಲ್ಲಿ ಹರಡಿ ಯೂರೋಪನ್ನು 14ನೆಯ ಶತಮಾನದಲ್ಲಿ ತಲುಪಿತು ಹಾಗೂ 15ನೆಯ ಶತಮಾನದ ಕೊನೆಯ ವೇಳೆಗೆ ಹಲವಾರು ಉದ್ದೇಶಗಳಿಗಾಗಿ ಚರ್ಮಕಾಗದದ ಬದಲು ಬಳಸಲಾಗುತ್ತಿತ್ತು.
- ಗ್ರೀಕ್ ಅಥವಾ ಲ್ಯಾಟಿನ್ ಕೃತಿಗಳು ಪ್ರಕಾಶನಗೊಂಡಾಗ ಒಂದು ಲೇಖಾಲಯದಲ್ಲಿ ಹಲವಾರು ವೃತ್ತಿಪರ ಲೇಖಕರು ಕುಳಿತು ಆ ಕೃತಿಗಳ ನಕಲನ್ನು ಏಕಕಾಲದಲ್ಲಿ ತಯಾರಿಸುತ್ತಿದ್ದರು; ಪ್ರತಿ ಲೇಖಕನಿಗೂ ಮೂಲಕೃತಿನ್ನು ಜೋರಾಗಿ ಓದಿ ಹೇಳಲಾಗುತ್ತಿತ್ತು. ಅತ್ಯಂತ ಪ್ರಾಚೀನವಾದ ಬರೆಯಲ್ಪಟ್ಟ ಹಸ್ತಪ್ರತಿಗಳು ಮಧ್ಯಪೂರ್ವದಲ್ಲಿ ಅವುಗಳಿರುವ ಸ್ಥಳಗಳ ಸಂಪೂರ್ಣ ಶುಷ್ಕತೆಯ ಪ್ರಭಾವದಿಂದ ಸಂರಕ್ಷಿತವಾಗಿವೆ;
- ಈಜಿಪ್ಟಿನ ಗೋರಿಗಳ ಸಾರ್ಕೋಫಾಗೀಗಳಲ್ಲಿ, ಅಥವಾ ಮಮ್ಮಿಗಳ-ಸುತ್ತುವರಿಪದರಗಳಾಗಿ ಮರುಬಳಕೆಯಾಗುವುದರ ಮೂಲಕ, ಆಕ್ಸಿರಿಂಖಸ್ ನ ಮಿಡ್ಡೆನ್ ಗಳಲ್ಲಿ ತ್ಯಜಿಸಲ್ಪಟ್ಟು ಅಥವಾ ಸಂರಕ್ಷಣೆಗೆಂದು ಜಾಡಿಗಳಲ್ಲಿ ಮುಚ್ಚಿಟ್ಟು (ನಾಗ್ ಹಮ್ಮಾಡಿ ಗ್ರಂಥಾಲಯದಲ್ಲಿ) ಹುಗಿದಿಡಲ್ಪಟ್ಟು ಅಥವಾ ಶುಷ್ಕವಾದ ಗುಹೆಗಳಲ್ಲಿ ಇರಿಸಲ್ಪಟ್ಟು (ಡೆಡ್ ಸೀ ಸುರುಳಿಗಳು) ಇವುಗಳು ಸಂರಕ್ಷಿಸಲ್ಪಟ್ಟವು.
- ಟೋಚಾರಿಯನ್ ಭಾಷೆಗಳಲ್ಲಿ ಬರೆದ ಹಸ್ತಪ್ರತಿಗಳು ತಾಳೆಗರಿಗಳಲ್ಲಿ ಬರೆಯಲ್ಪಟ್ಟವಾಗಿದ್ದು, ಮಧ್ಯ ಏಷ್ಯಾದ ಟಾರಿಂ ಬೇಸಿನ್ ನ ಮರಳುಗಾಡಿನ ಹೂಳುವಿಕೆಗಳಲ್ಲಿ (ಗೋರಿಗಳಲ್ಲಿ) ಸಂರಕ್ಷಣೆಗೊಂಡವು. ಹರ್ಕ್ಯುಲೇನಿಯಂನಲ್ಲಿ ವಿಲ್ಲಾ ಆಫ್ ದ ಪಪೈರಿಯ ಗ್ರೀಕ್ ಗ್ರಂಥಾಲಯವನ್ನು ಅಗ್ನಿಪರ್ವತದ ಬೂದಿಯು ಸಂರಕ್ಷಿಸಿತು. ವಿಪರ್ಯಾಸವೆಂದರೆ, ಪುರಾತತ್ವ ಗ್ರಂಥಾಲಯಗಳಲ್ಲಿ ಬಹಳ ಮುತುವರ್ಜಿಯಿಂದ ಸಂರಕ್ಷಿಸಲ್ಪಟ್ಟ ಹಸ್ತಪ್ರತಿಗಳು ಸಂಪೂರ್ಣವಾಗಿ ನಾಶಗೊಂಡಿವೆ.
- ಬೇರೆಡೆಗೆ ಹೋಲಿಸಿದರೆ ಇಟಲಿ ಮತ್ತು ಗ್ರೀಸ್ ನಲ್ಲಿರುವ ಹೆಚ್ಚಿನ ಪ್ರಮಾಣದ ತೇವಾಂಶವಿರುವ ವಾತಾವರಣದಲ್ಲಿ ಪಪೈರಸ್ ಹೆಚ್ಚೆಂದರೆ ಒಂದು ಅಥವಾ ಎರಡು ಶತಮಾನಗಳ ಕಾಲ ಬಾಳಿಕೆ ಬರುವುದಷ್ಟೆ; ಸಾಮಾನ್ಯವಾಗಿ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ನಂತರ ಚರ್ಮಕಾಗದಗಳ ಮೇಲೆ ನಕಲುಗೊಳಿಸಲ್ಪಟ್ಟ ಕೃತಿಗಳು ಉಳಿದಿರುವುವಾದರೂ, ಅದರಲ್ಲೂ ಎಲ್ಲವೂ ಉಳಿದಿವೆಯೆಂದೇನಲ್ಲ.
- ಮೊದಲಿಗೆ ಎಲ್ಲಾ ಪುಸ್ತಕಗಳೂ ಹಸ್ತಪ್ರತಿಯ ರೂಪದಲ್ಲೇ ಇದ್ದವು. ಚೀನಾದಲ್ಲಿ ಮತ್ತು ನಂತರದ ದಿನಗಳಲ್ಲಿ ಫೂರ್ವ ಏಷ್ಯಾದ ಇತರ ಭಾಗಗಳಲ್ಲಿ, ಸುಮಾರು ಏಳನೆಯ ಶತಮಾನದಿಂದ ಪುಸ್ತಕಗಳ ಮುದ್ರಣವನ್ನು ವುಡ್ ಬ್ಲಾಕ್ ಪ್ರಿಂಟಿಂಗ್ ಮೂಲಕ ಮಾಡಲಾಗುತ್ತಿತ್ತು. ನಮಗೆ ದೊರೆತಿರುವ ಮೊದಲ ಉದಾಹರಣೆಯೆಂದರೆ 868ನೇ ಇಸವಿಯ ಡೈಮಂಡ್ ಸೂತ್ರ.
- ಚಾಲಿತ ಮಾದರಿ ಮುದ್ರಣವು ಸುಮಾರು1450ನೆಯ ಇಸವಿಯಲ್ಲಿ ಆರಂಭವಾಗುವವರೆಗೆ ಇಸ್ಲಾಮಿಕ್ ಜಗದ ಮತ್ತು ಎಲ್ಲಾ ಪಾಶ್ಚಿಮಾತ್ಯ ಕೃತಿಗಳೂ ಹಸ್ತಪ್ರತಿಯ ರೂಪದಲ್ಲೇ ಇದ್ದವು. ಮುದ್ರಣವು ದುಬಾರಿಯಾಗಿದ್ದುದರಿಂದ ಪುಸ್ತಕಗಳ ಹಸ್ತಪ್ರತಿಗಳ ನಕಲು ತಯಾರಿಕೆ ಕನಿಷ್ಠ ಒಂದು ಶತಮಾನದವರೆಗೆ ಮುಂದುವರಿಯಿತು. ಹತ್ತೊಂಬತ್ತನೆಯ ಶತಮಾನದ ಅಂತ್ಯದಲ್ಲಿ ಟೈಪ್ ರೈಟರ್ ನ ಆವಿಷ್ಕಾರವಾಗುವವರೆಗೆ ಎಲ್ಲಾ ಖಾಸಗಿ ಅಥವಾ ಸರ್ಕಾರಿ ದಾಖಲೆಗಳು ಹಸ್ತಪ್ರತಿಗಳ ರೂಪದಲ್ಲಿಯೇ ಇದ್ದವು.
- ಪ್ರತಿ ಬಾರಿ ಹಸ್ತಪ್ರತಿಯನ್ನು ನಕಲು ಮಾಡಿದಾಗಲೂ ತಪ್ಪುಗಳು ಆಗುವ ಸಾಧ್ಯತೆಯಿರುವುದರಿಂದ, ಹಸ್ತಪ್ರತಿಯಿಂದ ನಕಲುಗೊಳಿಸಿದ ಎಲ್ಲಾ ಬರವಣಿಗೆಗಳನ್ನು ವಿಮರ್ಶಿಸಲು ಮತ್ತು ಅಧ್ಯಯನ ಮಾಡಲು ಒಂದೇ ಲೇಖನದ ವಿವಿಧ ಲಿಖಾವತುಗಳ ವರ್ಗೀಕರಣವು ಮೂಲಭೂತ ಅಗತ್ಯವಾಯಿತು.
- ಆಗ್ನೇಯ ಏಷ್ಯಾದಲ್ಲಿ, ಮೊದಲ ಸಹಸ್ರಮಾನದಲ್ಲಿ, ಸಾಕಷ್ಟು ಹಿರಿದಾದ ಪ್ರಾಮುಖ್ಯತೆಯುಳ್ಳ ದಾಖಲೆಗಳನ್ನು ತಾಮ್ರದತಟ್ಟೆಗಳಂತಹ ಮೃದುವಾದ ಲೋಹದ ಹಾಳೆಗಳ ಮೇಲೆ ಕೆತ್ತನೆಗೊಳಿಸಲಾಯಿತು; ಈ ಹಾಳೆಗಳು ಸಂಸ್ಕರಣಗೊಳಿಸುವನ ಅಗ್ನಿಯಲ್ಲಿ ಮೃದುಗೊಂಡನಂತರ ಲೋಹದ ಶಲಾಕೆಯಿಂದ ಕೆತ್ತನೆಗೊಳಪಡುತ್ತಿತ್ತು. ಉದಾಹರಣೆಗೆ, ಫಿಲಿಪೈನ್ಸ್ ನಲ್ಲಿ, 900ನೆಯ ಇಸವಿಯಲ್ಲೇ, ಮಾದರಿ ದಾಖಲೆಗಳನ್ನು ಶಲಾಕೆಯಿಂದಿ ಕೆತ್ತುತ್ತಿರಲಿಲ್ಲ.
- ಬದಲಿಗೆ ಇಂದಿನ ದಿನಗಳ ಡಾಟ್-ಮ್ಯಾಟ್ರಿಕ್ಸ್ ಪ್ರಿಂಟರ್ ಗಳಂತೆ ಕೊರೆಯಲ್ಪಡುತ್ತಿತ್ತು. ಸರ್ವೇಸಾಮಾನ್ಯವಾಗಿ ಕೆತ್ತನೆಗೊಳಪಡುತ್ತಿದ್ದ ಬೊಂಬಿನ ಎಲೆಗಳು ಮತ್ತು ಕಡ್ಡಿಗಳಿಗೆ ಹೋಲಿಸಿದರೆ ಈ ವಿಧದ ದಾಖಲೆಗಳು ಬಹಳ ಅಪರೂಪವಾದವು. ಆದರೆ, ಉಷ್ಣಭರಿತ, ತೇವಾಂಶಭರಿತ ವಾತಾವರಣದಲ್ಲಿ ಲೋಹದ ದಾಖಲೆಗಳು ಬಾಳಿಕೆ ಬರುವಷ್ಟು ಕಾಗದವಾಗಲಿ, ಎಲೆಗಳಾಗಲಿ, ಬಾಳುತ್ತಿರಲಿಲ್ಲ.
- ಬರ್ಮಾದಲ್ಲಿ, ಕಮ್ಮವಾಕ ಎಂಬ ಬೌದ್ಧ ಹಸ್ತಪ್ರತಿಗಳನ್ನು ಹಿತ್ತಾಳೆ, ತಾಮ್ರ ಅಥವಾ ದಂತದ ಹಾಳೆಗಳಲ್ಲಿ ಕೊರೆಯುತ್ತಿದ್ದರು ಹಾಗೂ ಬೌದ್ಧಭಿಕ್ಷುಗಳು ತ್ಯಜಿಸಿದ ವಸ್ತ್ರಗಳನ್ನು ಮಡಿಸಿ, ಹೊಂಬಣ್ಣದ ಗಚ್ಚಿ ಬಳೆದು ಅವುಗಳನ್ನು ಸಹ ಹಸ್ತಪ್ರತಿ ಬರೆಯಲು ಬಳಸಲಾಗುತ್ತಿತ್ತು. ಇಟಲಿಯಲ್ಲಿ ಕೆಲವು ಪ್ರಮುಖ ಎಟ್ರುಸ್ಕನ್ ಲೇಖನಗಳನ್ನು ಅಂತೆಯೇ ತೆಳುವಾದ ಚಿನ್ನದ ತಗಡುಗಳ ಮೇಲೆ ಕೊರೆಯಲಾಗಿತ್ತು:
- ಇದೇ ಮಾದರಿಯ ಹಾಳೆಗಳು/ತಗಡುಗಳು ಬಲ್ಗೇರಿಯಾದಲ್ಲೂ ದೊರೆತಿವೆ. ತಾಂತ್ರಿಕವಾಗಿ, ಇವೆಲ್ಲವೂ ಹಸ್ತಪ್ರತಿಗಳಲ್ಲ; ಕೆತ್ತನೆಗಳು. ಉಳಿದಿರುವ ಹಸ್ತಪ್ರತಿಗಳಲ್ಲಿರುವ ಈ ಬರಹಗಳ, ಅಥವಾ "ಹಸ್ತ"ದ ಅಧ್ಯಯನವನ್ನು ಪ್ಯಾಲಿಯೋಗ್ರಫಿ ಎಂದು ಕರೆಯುತ್ತಾರೆ. ಪಾಶ್ಷಿಮಾತ್ಯ ಜಗತ್ತಿನಲ್ಲಿ, ಶಾಸ್ತ್ರೀಯ ಕಾಲದಿಂದ ಆರಂಭವಾಗಿ, ಕ್ರಿಶ್ಚಿಯನ್ ಯುಗದ ಮೊದಲ ಶತಮಾನಗಳವರೆಗೆ ಪದಗಳ ಮಧ್ಯೆ ವಿರಾಮವೀಯದೆ (ಸ್ಕ್ರಿಪ್ಟೋ ಕಂಟೀನ್ಯುಯಾ) ಹಸ್ತಪ್ರತಿ ರಚನೆಯು ಬಳಕೆಯಲ್ಲಿದ್ದು, ತರಬೇತು ಇಲ್ಲದವರಿಗೆ ಇದನ್ನು ಓದುವುದು ಬಹಳ ತ್ರಾಸದಾಯಕವಾಗಿರುತ್ತಿತ್ತು.
- ವರ್ತಮಾನದಲ್ಲಿರುವ ಈ ಗ್ರೀಕ್ ಮತ್ತು ಲ್ಯಾಟಿನ್ ನಲ್ಲಿ ಬರೆದ ಮೊದಮೊದಲ ಹಸ್ತಪ್ರತಿಗಳ ನಕಲುಗಳು ಸುಮಾರು ನಾಲ್ಕನೆಯ ಶತಮಾನದಿಂದ ಎಂಟನೆಯ ಶತಮಾನದ ಕಾಲದವಾಗಿದ್ದು, ಎಲ್ಲಾ ದೊಡ್ಡಕ್ಷರಗಳ ಪ್ರಯೋಗ ಅಥವಾ ಎಲ್ಲಾ ಚಿಕ್ಕಕ್ಷರಗಳ ಪ್ರಯೋಗದ ಆಧಾರದ ಮೇಲೆ ವರ್ಗೀಕೃತವಾಗಿವೆ. ಡೆಡ್ ಸೀ ಸ್ಕ್ರಾಲ್ಸ್ ನಂತಹ ಹೀಬ್ರೂ ಹಸ್ತಪ್ರತಿಗಳಲ್ಲಿ ಇಂತಹ ವಿಂಗಡಣೆಗಳಿಲ್ಲ.
- ಎಲ್ಲಾ ದೊಡ್ಡಕ್ಷರಗಳನ್ನೇ ಬಳಸಿರುವ ಹಸ್ತಪ್ರತಿಗಳನ್ನು ಮೇಜಸ್ಕ್ಯೂಲ್ ಎಂದೂ, ಎಲ್ಲಾ ಚಿಕ್ಕಕ್ಷರಗಳನ್ನೇ ಬಳಸಿರುವ ಹಸ್ತಪ್ರತಿಗಳನ್ನು ಮಿನಿಸ್ಕ್ಯೂಲ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಅನ್ಷಿಯಲ್ ನಂತಹ ಮೇಜಸ್ಕ್ಯೂಲ್ ಹಸ್ತಪ್ರತಿಗಳನ್ನು ಹೆಚ್ಚಿನ ಗಮನವಹಿಸಿ ಬರೆಯುತ್ತಾರೆ.
- ಪ್ರತಿ ಅಕ್ಷರದ ನಂತರ ಲೇಖಕ ತನ್ನ ಲೇಖನಿ ಎತ್ತಿ ಬರೆಯುವುದರಿಂದ ಒಂದು ಕ್ರಮ ಮತ್ತು ನಿಯಮಾನುಸರಣೆಯ ಸ್ಪಷ್ಟ ಪ್ರಭಾವವು ಗೋಚರಿಸುತ್ತದೆ. ಆದರೆ ಸಣ್ಣಕ್ಷರದ ಹಸ್ತಪ್ರತಿಗಳು ಲೇಖನಿಯೆತ್ತಿಯೂ, ಅಥವಾ ಮೋಡಿ ಅಕ್ಷರದಲ್ಲೂ, ಎಂದರೆ ಲೇಖನಿಯನ್ನು ಎತ್ತದೆಯೇ ಸಾಲಾಗಿ ಬರೆದುಕೊಂಡುಹೋಗುವ ರೀತಿಯಲ್ಲಿಯೂ ಬರೆಯಲ್ಪಡಬಹುದು.
ಆಧುನಿಕ ವ್ಯತ್ಯಯಗಳು
[ಬದಲಾಯಿಸಿ]- ಗ್ರಂಥಾಲಯ ವಿಜ್ಞಾನಕ್ಕೆ ಸಂಬಂಧಿಸಿದಂತೆ, ಗ್ರಂಥಾಲಯ ಅಥವಾ ಪ್ರಾಚ್ಯದಾಖಲುಸಂಗ್ರಹಾಲಯದಲ್ಲಿರುವ ಯಾವುದೇ ಕೈಬರಹದಲ್ಲಿರುವ ವಸ್ತುವನ್ನು ಹಸ್ತಪ್ರತಿ ಎಂದು ಕರೆಯಲಾಗುತ್ತದೆ; ಉದಾಹರಣೆಗೆ, ಗ್ರಂಥಾಲಯದಲ್ಲಿ ಸಂಗ್ರಹಿತವಾದ ಯಾವುದೋ ಐತಿಹಾಸಿಕ ವ್ಯಕ್ತಿಯು ಬರೆದಂತಹ ಓಲೆಗಳು ಅಥವಾ ಡೈರಿ(ದಿನಚರಿ) . ಈ ವಿಧಧ ಹಸ್ತಪ್ರತಿಗಳ ಸಂಗ್ರಹವನ್ನು ಪತ್ತೆಹಚ್ಚುವ ಸಾಧನಗಳು ಎಂದು ಕರೆಯಲಾಗುತ್ತದೆ.
- ಇದು ವಿಷಯಾನುಕ್ರಮಣಿಕೆ ಅಥವಾ ವಿಷಯಸೂಚಿ ಪಟ್ಟಿಯಂತೆಯೇ ಇದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವಿಷಯಸಂಗ್ರಹ ಮಾದರಿಗಳಾದDACS ಮತ್ತುISAD(G)ಗಳಿಗೆ ಅನುಗುಣವಾಗಿರುತ್ತವೆ. ಆದರೆ, ಇತರ ಸಂದರ್ಭಗಳಲ್ಲಿ, "ಹಸ್ತಪ್ರತಿ" ಎಂಬ ಪದ ಕೈಬರಹದ ಕೃತಿಗೆ ಮಾತ್ರ ಸೀಮಿತಗೊಂಡಿಲ್ಲ. ಸಾದೃಶ್ಯವಾಗಿ ಟೈಪ್ ಸ್ಕ್ರಿಪ್ಟ್ ಅನ್ನು ಟೈಪ್ ರೈಟರ್ ನಿಂದ ಪಡೆದ ಬರಹವೆನ್ನಲಾಯಿತು.
- ಪುಸ್ತಕ, ನಿಯತಕಾಲಿಕ, ಮತ್ತು ಸಂಗೀತದ ಪ್ರಕಾಶನಗಳಲ್ಲಿ ಹಸ್ತಪ್ರತಿಯು ಒಬ್ಬ ಲೇಖಕ ಅಥವಾ ಸಂಕಲನಕಾರನು ಬರೆದ ಅಸಲಿ ಬರಹವಾಗಿದ್ದು, ಸಾಮಾನ್ಯವಾದ ಟೈಪಿಂಗ್ ಮತ್ತು ಕೃತಿರಚನಾವಿನ್ಯಾಸಗಳಿಗೆ ಬದ್ಧವಾಗಿರುತ್ತದೆ. ("ಕೈಬರಹದ ಸಂಗೀತಕ್ಕೆಂದು ಸಾಮಾನ್ಯವಾಗಿ ಬಳಸುವ ದಂಡಕಾಷ್ಠದ ಕಾಗದವನ್ನು, ಈ ಕಾರಣಗಳಿಂದ, ಆಗಾಗ್ಗೆ "ಹಸ್ತಪ್ರತಿ ಕಾಗದ"ವೆಂದು ಕರೆಯಲಾಗುತ್ತದೆ.)
- ಚಲನಚಿತ್ರ ಮತ್ತು ನಾಟಕಗಳಲ್ಲಿ, ಹಸ್ತಪ್ರತಿ, ಅಧವಾ ಹ್ರಸ್ವವಾಗಿ ಸ್ಕ್ರಿಪ್ಟ್ ಎನ್ನುವುದು ಲೇಖಕನ ಅಥವಾ ನಾಟಕಕಾರನ ಬರಹವಾಗಿದ್ದು ನಾಟಕದ ಕಂಪನಿ ಅಥವಾ ಚಲನಚಿತ್ರದ ಸಿಬ್ಬಂದಿ ಈ ಕೃತಿಯನ್ನು ತೆರೆಗೆ/ವೇದಿಕೆಗೆ ತಂದು ಪ್ರದರ್ಶನ ಅಥವಾ ಚಿತ್ರೀಕರಣಮಾಡುವಾಗ ಬಳಸಿಕೊಳ್ಳುತ್ತಾರೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಚಲನಚಿತ್ರಕ್ಕೆಂದು ಬರೆದ ಬರವಣಿಗೆಯನ್ನು ಸ್ಕ್ರೀನ್ ಪ್ಲೇಎನ್ನುತ್ತಾರೆ; ಟೆಲಿವಿಷನ್‍ಗಾಗಿ ಬರೆದ ಹಸ್ತಪ್ರತಿಯು ಟೆಲಿಪ್ಲೇ;
- ನಾಟಕಕ್ಕಾಗಿ ಬರೆದುದು ಸ್ಟೇಜ್ ಪ್ಲೇ; ಮತ್ತು ಶ್ರವಣಕ್ಕೆಂದೇ ಸೀಮಿತವಾದ ಬರಹವನ್ನು ಹಲವಾರು ಬಾರಿ ರೇಡಿಯೋ ಪ್ಲೇಎಂದು ಕರೆಯುತ್ತಾರೆ, ರೇಡಿಯೋಯೇತರ ಸ್ಥಳಗಳಿಂದ ಬಿತ್ತರವಾದಾಗಲೂ ಈ ಹೆಸರನ್ನೇ ಆ ಬರವಣಿಗೆಗಳಿಗೆ ನೀಡಲಾಗುತ್ತದೆ. ವಿಮೆಯಲ್ಲಿ, ವಿಮಾದಾರರು ಕಪಾಟಿನಿಂದೆತ್ತಿ ನೀಡಿದ ಮಾಮೂಲಿ ಪಾಲಿಸಿ ಅರ್ಜಿಯಾಧಾರಿತವಲ್ಲದೆ, ವಿಮಾದಾರರು ಮತ್ತು ಪಾಲಿಸಿ ಪಡೆದವರು ಚರ್ಚಿಸಿ ಒಪ್ಪಂದಕ್ಕೆ ಬಂದು ಪಡೆದಂತಹ ವಿಮೆಗೆ ಮ್ಯಾನ್ಯುಸ್ಕ್ರಿಪ್ಟ್ ಪಾಲಿಸಿ ಎಂದು ಕರೆಯುತ್ತಾರೆ.
ಯೂರೋಪ್ ನ ಹಸ್ತಪ್ರತಿ ಚರಿತ್ರೆ
[ಬದಲಾಯಿಸಿ]- ಉಳಿದುಕೊಂಡಿರುವ ಬಹುತೇಕ ಹಸ್ತಪ್ರತಿಗಳು ಕೋಡೆಕ್ಸ್ (ಕೈಬರಹದ ಗ್ರಂಥ) ಮಾದರಿಯಲ್ಲಿವೆ(ಆಧುನಿಕ ಪುಸ್ತಕದಲ್ಲಿದ್ದಂತೆ); ಇವು ಲೇಟ್ ಆಂಟಿಕ್ವಿಟಿಯಿಂದ ಸುರುಳಿಗಳ ಸ್ಥಾನವನ್ನು ತುಂಬಿದವು. ಚರ್ಮಕಾಗದ, ಅಥವಾ ವೆಲ್ಲಂ ಎಂದು ಕರೆಯ ಲಾಗುವ ಶ್ರೇಷ್ಠಮಟ್ಟದ ಚರ್ಮಕಾಗದವು ಪಪೈರಸ್ ನ ಬದಲಿಗೆ ಬಳಸಲಾರಂಭಿಸಲಾಯಿತು;
- ಪಪೈರಸ್ ದೀರ್ಘಕಾಲ ಬಾಳಿಕೆ ಬರುತ್ತಿರಲಿಲ್ಲ ಮತ್ತು ಪಪೈರಸ್ ರೋಮ್ ಸಾಮ್ರಾಜ್ಯದಾದ್ಯಂತ ಬಳಸಲಾಗುತ್ತಿತ್ತಾದರೂ, ಇಂದಿನವರೆಗೆ ಉಳಿದಿರುವುದು ಈಜಿಪ್ಟ್ ನ ಅತಿ ಶುಷ್ಕ ಸ್ಥಳಗಳಲ್ಲಿದ್ದವು ಮಾತ್ರ. ಚರ್ಮಕಾಗದವು ಸಾಮಾನ್ಯವಾಗಿ ಪ್ರಾಣಿಗಳ ಚರ್ವಮದಿಂದ ತಯಾರಿಸಲ್ಪಡುತ್ತವೆ, ಹೆಚ್ಚಾಗಿ ಕರು, ಕುರಿ, ಮತ್ತು/ಅಥವಾ ಆಡುಗಳ ಚರ್ಮಗಳನ್ನು ಬಳಸಲಾಗುವುದಾದರೂ ಇತರ ಪ್ರಾಣಿಗಳ ಚರ್ಮಗಳೂ ಬಳಕೆಯಲ್ಲಿವೆ.
- ಚರ್ಮವನ್ನು ಹದಗೊಳಿಸಿ ತಯಾರಿಸಿದ ರೀತಿಯಲ್ಲಿ ತೋರಿಸಿದ ಕುಶಲತೆಯ ಮೇಲೆ ಈ ಚರ್ಮಕಾಗದಗಳ ಗುಣಮಟ್ಟವು ನಿರ್ಧರಿತವಾಗುತ್ತದೆ. ಉತ್ತರ ಯೂರೋಪ್ ನಲ್ಲಿ ಕರು ಅಥವಾ ಕುರಿಯ ಚರ್ಮದಿಂದ ತಯಾರಾದ ಚರ್ಮಕಾಗದಗಳು ಸರ್ವೇಸಾಮಾನ್ಯವಾಗಿದ್ದವು; ದಕ್ಷಿಣ ಯೂರೋಪ್ ನ ನಾಗರಿಕರು ಆಡಿನ ಚರ್ಮಕ್ಕೆ ಆದ್ಯತೆ ನೀಡಿದರು.[೪]. ಸಾಮಾನ್ಯವಾಗಿ, ಚರ್ಮಕಾಗದವು ಬಿಳಿ ಅಥವಾ ಕೆನೆಯ ಬಣ್ಣದ್ದಾಗಿದ್ದು,ಪ್ರಾಣಿಯ ಚರ್ಮದಲ್ಲಿನ ರಕ್ತನಾಳಗಳು ಕಾಣುವಂತಿದ್ದರೆ ಅದು ಕರುವಿನ ಚರ್ಮದ್ದು. ಹಳದಿಯಾಗಿದ್ದರೆ, ಜಿಡ್ಡಾಗಿದ್ದರೆ ಅಥವಾ ಫಳಫಳ ಹೊಳೆಯುತ್ತಿದ್ದರೆ ಅದು ಆಡಿನ ಚರ್ಮದ್ದು[೪].
- ವೆಲ್ಲಂ ಎಂಬ ಪದವು ಲ್ಯಾಟಿನ್ ಪದವಾದ ಲಿಟುಲಿನಮ್ ಎಂಬುದರಿಂದ ವ್ಯುತ್ಪತ್ತಿಯಾಗಿದ್ದು ಇದರ ಅರ್ಥ "ಕರುವಿನದು"/"ಕರುವಿನಿಂದ ತಯಾರಿಸಲ್ಪಟ್ಟದ್ದು" ಎಂದಿದೆ. ಆಧುನಿಕ ಚರ್ಮಕಾಗದ ತಯಾರಕರಿಗೆ ಮತ್ತು ಅದರ ಮೇಲೆ ಬರೆಯವ ಲೇಖಕರಿಗೆ, ಹಾಗೂ ಹಿಂದಿನ ತತ್ಕಾರ್ಯನಿರತರಿಗೂ ಸಹ, ಚರ್ಮಕಾಗದ ಮತ್ತು ವೆಲ್ಲಂ ಎಂಬ ಪದಗಳ ಬಳಕೆಯು ವಿವಿಧ ತಯಾರಿಕೆಯ ಕ್ರಮಗಳು.
- ಗುಣಮಟ್ಟ ಮತ್ತು ದಪ್ಪವನ್ನು ಆಧರಿಸಿ ಬಳಸುವ ಪರಿಪಾಠವಿತ್ತೇ ವಿನಹ ಯಾವ ಪ್ರಾಣಿಯ ಚರ್ಮ ಎಂಬುದು ಮುಖ್ಯವಾಗಿರಲಿಲ್ಲ ಹಾಗೂ ತತ್ಕಾರಣ ಸರ್ವಾನುಕೂಲಿ ಪದವಾದ "ಪದರ" ಎಂಬುದನ್ನು ಆಧುನಿಕ ಪಠ್ಯಗಳಲ್ಲಿ ಬಳಸಲಾಗುತ್ತದೆ; ವಿಶೇಷತಃ ಇಂತಹುದೇ ಪ್ರಾಣಿಯ ಚರ್ಮವೆಂದು ಪರೀಕ್ಷಿಸಿ ನಿರ್ಧರಿಸದ ಸಂದರ್ಭಗಳಲ್ಲಿ.[೪].
ಹಸ್ತಪ್ರತಿಯ ತಯಾರಿಕೆ
[ಬದಲಾಯಿಸಿ]- ಹಸ್ತಪ್ರತಿಯನ್ನು ಸೃಷ್ಟಿಸಲು ಕೈಗೊಳ್ಳಬೇಕಾಗಿದ್ದ ಮೊದಲ ಕಾರ್ಯವೆಂದರೆ ಲೇಖಕನು ಬರೆಯುಲು ಸಾಧ್ಯವಾಗುವಂತೆ ಚರ್ಮವನ್ನು ಸಿದ್ಧಪಡಿಸುವುದು. ಚರ್ಮವನ್ನು ನೀರು ಮತ್ತು ಸುಣ್ಣವನ್ನು ಬಳಸಿ ತೊಳೆಯಲಾಗುತ್ತಿತ್ತು (ಆದರೆ ಒಟ್ಟಿಗೇ ಅಲ್ಲ, ನೀರಿನಲ್ಲೇ ಪ್ರತ್ಯೇಕವಾಗಿ, ನಂತರ ಸುಣ್ಣದಲ್ಲೇ ಪ್ರತ್ಯೇಕವಾಗಿ) ಹಾಗೂ ಈ ಚರ್ಮವು ಸುಣ್ಣದಲ್ಲಿ ಕೆಲವು ದಿನಗಳ ವರೆಗೆ ನೆನೆಯಲು ಬಿಡಲಾಗುತ್ತಿತ್ತು.[೧]
- ಚರ್ಮದ ಮೇಲಿನ ರೋಮಗಳನ್ನು ತೆಗೆದುಬಿಡಲಾಗುತ್ತಿತ್ತು. ಚರ್ಮವನ್ನು ಎಳೆದುಕಟ್ಟಿ ಒಣಗಿಸಲಾಗುತ್ತಿತ್ತು. ನಂತರ ಅದನ್ನು ಒಂದು ಚೌಕಟ್ಟಿಗೆ ಅಳವಡಿಸಲಾಗುತ್ತಿತ್ತು. ಇಂತಹ ಚೌಕಟ್ಟುಗಳನ್ನು ಹೆರ್ಸ್ ಎಂದು ಕರೆಯಲಾಗುತ್ತದೆ.[೪] ನಂತರ ಆ ಚರ್ಮಕಾಗದ ತಯಾರಕನು ಪರಿಧಿಯ ಸುತ್ತಣ ಕೆಲವು ಕೇಂದ್ರಗಳಲ್ಲಿ ಚರ್ಮವನ್ನು ಜೋಡಣೆ ಮಾಡುತ್ತಿದ್ದನು. ಚರ್ಮವು ಹೆರ್ಸ್ ಗೆ ದಾರಗಳಿಂದ ಜೋಡಿಸಲ್ಪಟಿಸುತ್ತಿತ್ತು.
- ಚರ್ಮವು ಹರಿಯದಂತಿರಲು ತಯಾರಕನು ಯಾವ ಜಾಗದಲ್ಲಿ ಚರ್ಮಕ್ಕೆ ದಾರವನ್ನು ಜೋಡಿಸಲಾಗುತ್ತಿತ್ತೋ ಆ ಜಾಗವನ್ನು ಒಂದು ನುಣುಪಾದ ಕಲ್ಲಿನ ಸುತ್ತ ಸುತ್ತುತ್ತಿದ್ದನು, ಹೀಗೆ ಚರ್ಮ ಸುತ್ತಲ್ಪಡುವ ಕಲ್ಲನ್ನು ಪಿಪ್ಪಿನ್ ಎಂದು ಕರೆಯಲಾಗುತ್ತದೆ[೪]. ಇದಾದನಂತರ, ಒಂದು ಅರ್ಧಚಂದ್ರಾಕಾರದ ಲ್ಯೂನಾರಿಯಂ ಅಥವಾ ಲ್ಯೂನೆಲ್ಲಮ್ ಎಂದು ಕರೆಯಲ್ಪಡುವ ಒಂದು ಚಾಕುವಿನಿಂದ ಅಳಿದುಳಿದ ಕೂದಲುಗಳನ್ನು ತೆಗೆಯಲಾಗುತ್ತಿತ್ತು.
- ಚರ್ಮವು ಸಂಪೂರ್ಣವಾಗಿ ಒಣಗಿದ ನಂತರ, ಅದನ್ನು ಸಮಗ್ರವಾಗಿ ಸ್ವಚ್ಛಗೊಳಿಸಿ ಪದರಗಳಾಗಿ ಸಂಸ್ಕರಿಸಲಾಗುತ್ತಿತ್ತು. ಒಂದು ಚರ್ಮದಿಂದ ತೆಗೆಯಬಹುದಾದ ಹಾಳೆಗಳ ಸಂಖ್ಯೆಯು ಚರ್ಮದ ಅಳತೆ ಹಾಗೂ ಬೇಕಾಗಿರುವ ಹಾಳೆಗಳ ಅಳತೆಗಳ ಮೇಲೆ ನಿರ್ಧರಿತವಾಗುತ್ತದೆ. ಉದಾಹರಣೆಗೆ ಒಂದು ಮಾಮೂಲು ಕರುವಿನ ಚರ್ಮವು ಮಧ್ಯಮ ಅಳತೆಯ ಮೂರೂವರೆ ಹಾಳೆಗಳು ಅಥವಾ ಬರವಣಿಗೆಗೆ ಅರ್ಹವಾದ ವಸ್ತುವನ್ನು ಒದಗಿಸುತ್ತದೆ.
- ಇದನ್ನು ಒಂದಕ್ಕೊಂದು ಹೊಂದಿಕೊಂಡ ಹಾಳೆಗಳಂತೆ ಜೋಡಿಸಿದಾಗ ಸಂಖ್ಯೆ ದುಪ್ಪಟ್ಟಾಗುತ್ತದೆ ಮತ್ತು ಇದನ್ನು ಬೈಫೋಲಿಯಂ ಎಂದು ಕರೆಯಲಾಗುತ್ತದೆ. ಆಧುನಿಕ ಪದರಗಳ (ಹಾಳೆಗಳ) ತಯಾರಕರು ಅನುಸರಿಸುವಂತಹ ಮಧ್ಯಕಾಲೀನ ಯುಗದ ಸೂಚನೆಗಳನ್ನು ಲಿಪಿಕಾರನು ಬರೆದಿರುವಂತಹ ಹಸ್ತಪ್ರತಿಗಳು ಇದ್ದವು ಎಂಬುದಕ್ಕೆ ಪುರಾವೆಗಳನ್ನು ಇತಿಹಾಸಕಾತಜ್ಞರು ಕಂಡುಹಿಡಿದಿದ್ದಾರೆ
- [೫] . ಯಾವುದೇ ನೈಸರ್ಗಿಕ ಉತ್ಪನ್ನದಲ್ಲಿ ಕೆಲವು ನ್ಯೂನತೆಗಳು ಇರುವುದು ಸಹಜವೇ.ಈ ನ್ಯೂನತೆಗಳು ಆ ಪದರದಲ್ಲಿನ ಯಾವುದೇ ವಿಧವಾದ ದೋಷಗಳಿರಬಹುದು.
- ಆ ದೋಷಗಳು ತಯಾರಿಕೆಯ ಕಾಲದಲ್ಲಿ ಮಾನವ ನಿರ್ಮಿತವಾದದ್ದು ಅಥವಾ ಪ್ರಾಣಿಯನ್ನು ಕೊಂದಾ ಆದದ್ದು ಆಗಿರಬಹುದು. ಬರವಣಿಗೆಯ ಕಾಲದಲ್ಲೂ ದೋಷಗಳು ಕಾಣಿಸಿಕೊಳ್ಳಬಹುದು. ಹಾಗೂ ಅದನ್ನು ಸೂಕ್ತವಾದ ಸ್ಥಿತಿಯಲ್ಲಿ ಮತ್ತು ಸ್ಥಳದಲ್ಲಿ ಶೇಖರಿಸದಿದ್ದರೆ, ಹಸ್ತಪ್ರತಿಯ ಮುಂದಿನ ದಿನಗಳಲ್ಲಿಯೂ (ಬರೆದ ಹಲವಾರು ವರ್ಷಗಳ ನಂತರವೂ) ದೋಷಗಳು ಗೋಚರವಾಗಬಹುದು.
ಬರವಣಿಗೆಗಾಗಿ ಹಾಳೆಗಳನ್ನು ಸಿದ್ಧಗೊಳಿಸುವಿಕೆ
[ಬದಲಾಯಿಸಿ]- ಲೇಖಕನು ಏನೇ ಮಾಡುವ ಮುನ್ನ, ಹಾಳೆಯನ್ನು ಸಿದ್ಧಪಡಿಸುವುದು ಅತ್ಯಗತ್ಯ. ವಾಡಿಕೆಯಂತೆ ಈಗಿನ ಕಾಲದಲ್ಲಿ ಅವುಗಳನ್ನು ಸಿದ್ಧಗೊಳಿಸುವ ಹಂತಗಳನ್ನು ಮತ್ತು ಮಧ್ಯಕಾಲದಲ್ಲಿ ಅವುಗಳನ್ನು ಸಿದ್ಧಗೊಳಿಸುತ್ತಿದ್ದ ಸ್ತರಗಳನ್ನು ಇಲ್ಲಿ ಹಂತಹಂತವಾಗಿ ನೀಡಲಾಗುತ್ತದೆ. ಮೊದಲಿಗೆ ಕ್ವೈರ್ ಗಳನ್ನು ಸಿದ್ಧಗೊಳಿಸಬೇಕು.
- ಹಲವಾರು ಹಾಳೆಗಳನ್ನು ಒಟ್ಟುಗೂಡಿಸಿದ ರಾಶಿಗೆ ಕ್ವೈರ್ ಗಳು ಎನ್ನುವರು. "ಇಂಟ್ರೊಡಕ್ಷನ್ ಟು ಮ್ಯಾನ್ಯುಸ್ಕ್ರಿಪ್ಟ್ ಸ್ಟಡೀಸ್" ಎಂಬ ಪುಸ್ತಕವನ್ನು ಬರೆದ ರೇಮಂಡ್, ಕ್ಲೆಮೆನ್ಸ್ ಮತ್ತು ತಿಮೋತಿ ಗ್ರಹಾಂರವರು "ಸಮಗ್ರ ಮಧ್ಯಕಾಲೀನ ಯುಗದಲ್ಲಿ ಕ್ವೈರ್ ಬರಹಗಾರನ ಮೂಲ ಬರವಣಿಗೆಯ ಸಾಧನವಾಗಿತ್ತು" ಎಂದು ಸೂಚಿಸಿದ್ದಾರೆ.[೪]
ಎಲೆಗಳನ್ನು ಚುಚ್ಚುವುದು ಮತ್ತು ಗೆರೆ ಹಾಕುವುದು
[ಬದಲಾಯಿಸಿ]- "ಇಂಟ್ರೊಡಕ್ಷನ್ ಟು ಮ್ಯಾನ್ಯುಸ್ಕ್ರಿಪ್ಟ್ ಸ್ಟಡೀಸ್" ನಲ್ಲಿ, ಕ್ಲೆಮೆನ್ಸ್ ಮತ್ತು ತಿಮೋತಿ ಗ್ರಹಾಂರವರು ಎಲೆಗಳ ಚುಚ್ಚುವಿಕೆ ಮತ್ತು ಗೆರೆ ಹಾಕುವಿಕೆಯನ್ನು ಸೂಕ್ತವಾಗಿ ವರ್ಣಿಸಿದ್ದಾರೆ. “ಚುಚ್ಚುವಿಕೆಯೆಂದರೆ ಚರ್ಮಕಾಗದದ(ಅಥವಾ ಪದರದ) ಮೇಲೆ ಗೆರೆಗಳನ್ನು ಹಾಕಲು ಅನುವಾಗುವ ಮಾದರಿಯಲ್ಲಿ ರಂಧ್ರಗಳನ್ನು ಉಂಟುಮಾಡುವ ಒಂದು ಕ್ರಿಯೆ.
- ಚುಚ್ಚಿದ ಗುರುತುಗಳ ಮಧ್ಯದಲ್ಲಿ ನಂತರ ತೆರೆಗಳನ್ನು ಎಳೆಯಲಾಗುತ್ತಿತ್ತು.”[೪]ಹಾಗೂ ಗೆರೆ ಹಾಕುವುದರ ಬಗ್ಗೆ “ ಬರವಣಿಗೆ/ಅಕ್ಷರಗಳು ಕ್ರಮವಾಗಿ ಬರೆಯಲ್ಪಡಲು ಮಾರ್ಗಸೂಚಿಯಾದ ಗೆರೆಗಳನ್ನು ಎಳೆಯುವ ಪ್ರಕ್ರಿಯೆ. ಬಹುತೇಕ ಹಸ್ತಪ್ರತಿಗಳಲ್ಲಿ ಸಮರೇಖೆಯ ಗೆರೆಗಳನ್ನು ಎಳೆಯಲಾಗುತ್ತಿತ್ತು ಮತ್ತು ಈ ರೇಖೆಗಳ ಮೇಲೆ (ಮೇಲ್ಭಾಗದಲ್ಲಿ) ಅಕ್ಷರಗಳನ್ನು ಬರೆಯಲಾಗುತ್ತಿತ್ತು.
- ಲಂಬ ಸೀಮಾರೇಖೆಗಳು ಅಂಕಣಗಳ ಎಲ್ಲೆಯನ್ನು ನಿರ್ಧರಿಸುವ ಕುರುಹಾಗಿ ಬಳಸಲಾಗುತ್ತಿದ್ದವು”[೪] ಈ ಹಂತದ ನಂತರ ಬರಹಗಾರನು ತನ್ನ ಕೆಲಸಕ್ಕೆ ತೊಡಗಿ ಮೂಲಕೃತಿಯಿಂದ ತನ್ನ ಚರ್ಮಕಾಗದದ ಸಂಗ್ರಹಕ್ಕೆ ನಕಲಿಸಲು ಆರಂಭಿಸುತ್ತಾನೆ.
ಕ್ವೈರ್ ತಯಾರಿಸುವಿಕೆ
[ಬದಲಾಯಿಸಿ]- ಲೇಖಕನು, ಸಾಮಾನ್ಯವಾಗಿ ಭಿಕ್ಷುವು, ಹಾಳೆಗಳ ರೋಮ ಮತ್ತು ಮಾಂಸಲ ಪಾರ್ಶ್ವಗಳನ್ನು ಜೋಡಿಸಿ,ತನ್ನ ಹಾಳೆಗಳ ರಾಶಿಯ (ಕ್ವೈರ್ ನ) ಸ್ವರೂಪವನ್ನು ನಿರ್ಧರಿಸುತ್ತಾನೆ. ಕ್ಯಾರೋಲಿಂಗಿಯನ್ ಕಾಲದಿಂದ ಆರಂಭವಾಗೊ ಮಧ್ಯಯುಗದವರೆಗೆ ಕ್ವೈರ್ ಮಡಿಸುವ/ಹೊಂದಿಸುವ ವಿವಿಧ ರೀತಿಗಳು ಚಾಲ್ತಿಯಲ್ಲಿದ್ದವು.
- ಉದಾಹರಣೆಗೆ, ಇಡೀ ಯೂರೋಪ್ ನ ಮುಖ್ಯಪ್ರಾಂತ್ಯಗಳಲ್ಲಿ ಮಧ್ಯಕಾಲೀನ ಯುಗದ ಸಂಪೂರ್ಣ ಅವಧಿಯಲ್ಲಿ ಕ್ವೈರ್ ಅನ್ನು ಒಂದೇ ಶೈಲಿಯ ಹಾಳೆಗಳ ಮೇಲೆ ಮಡತೆಯಾಗುವಂತೆ ಮಡಿಸಲಾಗುತ್ತಿತ್ತು. ರೋಮದ ಪಾರ್ಶ್ವವು ರೋಮದ ಪಾರ್ಶ್ವದ ಮೇಲೆಯೇ ಹೊಂದಿಕೆಯಾಗುತ್ತಿತ್ತು ಮತ್ತು ಮಾಂಸಲದ್ದು ಮಾಂಸಲದ ಮೇಲೆ. ಆದರೆ ಬ್ರಿಟಿಷ್ ದ್ವೀಪಗಳಲ್ಲಿ ಈ ಕ್ರಮವಿರದೆ, ಎಂಟು ಪುಟಗಳ ಕ್ವೈರ್ ಆಗಿ ತೆರೆದುಕೊಳ್ಳುವಂತೆ ಮಡಿಸಲಾಗುತ್ತಿತ್ತು.
- ಒಂಟಿ ಹಾಳೆಗಳು ಮೂರನೆಯ ಮತ್ತು ಆರನೆಯ ಪುಟಗಳ ಸ್ಥಾನದಲ್ಲಿರುತ್ತಿದ್ದವು[೪]. ಬರಹಗಾರನಿಗೆ ಬೇಕಾದ ರೀತಿಯಲ್ಲಿ ಕ್ವೈರನ್ನು ಜೋಡಿಸಿದ ನಂತರ ಅದಕ್ಕೆ ದಾರ ಕಟ್ಟಬೇಕಾಗುತ್ತಿತ್ತು. ಕ್ವೈರ್ ನ ಎಲ್ಲಾ ಕಾಗದಗಳನ್ನು ಜೋಡಿಸಿ ದಾರದಿಂದ ಅದಕ್ಕೆ ಬಂಧಿಸಲಾಗುತ್ತಿತ್ತು. ಹೀಗೆ ದಾರದಿಂದ ಬಂಧಿಸಿದ ನಂತರ ಲೇಖಕನು ಚರ್ಮಕಾಗದದ ಒಂದು ರೇಖೆಯನ್ನು ಹಸ್ತಪ್ರತಿಯ "ಬೆನ್ನುಮೂಳೆ"ಗೆ ಹೊಲಿಯುವುದರ ಮೂಲಕ ಹೊಲಿಗೆಯನ್ನು ಉಳಿಸಿಕೊಳ್ಳುವುದನ್ನು ಸಾಧಿಸಿ ದಂತಾಗುತ್ತದೆ.
ಹಸ್ತಪ್ರತಿಗಳ ಸಾಮಾನ್ಯ ವರ್ಗಗಳ ಒಂದು ನಮೂನೆ
[ಬದಲಾಯಿಸಿ]ಪುರಾತನ ಬರಹಗಳಿಂದ ಮಧ್ಯಕಾಲೀನ ಯುಗದ ನಕ್ಷೆಗಳವರೆಗೆ ಯಾವುದೇ ಅಧ್ಯಯನಕ್ಕೆಂದು ಬರಹರೂಪಕ್ಕಿಳಿಸಲಾದುದು ಹಸ್ತಪ್ರತಿಗಳ ರೂಪದಲ್ಲಿರುತ್ತಿತ್ತು. ಕೆಲವು ಸಾಮಾನ್ಯವಾಗಿ ಕಂಡುಬಂದ ಮಾದರಿಗಳೆಂದರೆ ಬೈಬಲ್ ಗಳು, ಧಾರ್ಮಿಕ ವಿವರಣೆಗಳು, ಆಧ್ಯಾತ್ಮ, ಕಾನೂನು ಮತ್ತು ಸರ್ಕಾರಿ ಬರವಣಿಗೆಗಳು.
ಬೈಬಲ್ ಗಳು
[ಬದಲಾಯಿಸಿ]- “ಬೈಬಲ್ ಮಧ್ಯಕಾಲೀನ ಯುಗದಲ್ಲಿ ಅತಿ ಹೆಚ್ಚು ಓದಲ್ಪಟ್ಟ ಪುಸ್ತಕ.”[೬]
ಬೈಬಲ್ ಮಧ್ಯಕಾಲೀನ ಧಾರ್ಮಿಕ ಜೀವನದ ಕೇಂದ್ರವಾಗಿತ್ತು. ಬೈಬಲ್ ನೊಡನೆ ಹಲವಾರು ವಿವರಣೆಗಳೂ ಬಂದವು.
- ವಿವರಣೆಗಳನ್ನು ಸಂಪುಟಗಳಲ್ಲಿ ಬರೆಯಲಾಗುತ್ತಿತ್ತು; ಕೆಲವಂತೂ ಕೇವಲ ಗ್ರಂಥದ ಒಂದು ಪುಟದ ಬಗ್ಗೆಯೇ ಆ ಮಟ್ಟಕ್ಕೆ ಕೇಂದ್ರೀಕೃತವಾಗಿದ್ದವು. ಯೂರೋಪ್ ನಾದ್ಯಂತ ತಮ್ಮ ಬೈಬಲ್ ಜ್ಞಾನದ ಬಗ್ಗೆ ಹೆಮ್ಮೆಪಡುತ್ತಿದ್ದಂತಹ ವಿಶ್ವವಿದ್ಯಾಲಯಗಳಿದ್ದವು. ವಿಶ್ವವಿದ್ಯಾಲಯಗಳಲ್ಲದೆ, ಕೆಲವು ನಗರಗಳಲ್ಲಿ ಅವುಗಳದೇ ಆದ ಮಧ್ಯಕಾಲೀನ ಯುಗದ ಪ್ರತಿಷ್ಠಿತ ವ್ಯಕ್ತಿಗಳಿದ್ದರು.
ಬುಕ್ ಆಫ್ ಅವರ್ಸ್
[ಬದಲಾಯಿಸಿ]- ಬುಕ್ ಆಫ್ ಅವರ್ಸ್ ಎಂಬುದು ಮಧ್ಯಕಾಲೀನ ಯುಗದಲ್ಲಿ ಜನಪ್ರಿಯವಾಗಿದ್ದ ಭಕ್ತಿರಸ ಹೊಂದಿದ ಕೃತಿ. ಇದು ಇಂದಿಗೂ ಉಳಿದಿರುವ ಮಧ್ಯಕಾಲೀನ ಯುಗದ ಸಾಮಾನ್ಯವಾದ ಪ್ರಕಾಶಮಯ ಹಸ್ತಪ್ರತಿ. ಎಲ್ಲಾ ಹಸ್ತಪ್ರತಿಗಳಂತೆಯೇ ಬುಕ್ ಆಫ್ ಅವರ್ಸ್ ನ ಪ್ರತಿ ಹಸ್ತಪ್ರತಿಯೂ ತನ್ನದೇ ಆದ ವೈಶಿಷ್ಠ್ಯವನ್ನು ಹೊಂದಿದೆ.
- ಆದರೆ ಬಹುತೇಕ ಹಸ್ತಪ್ರತಿಗಳಲ್ಲಿ ಅದೇ ಗದ್ಯಗಳು, ಪ್ರಾರ್ಥನೆಗಳು, ಮತ್ತು ಸ್ತುತಿಗಳನ್ನು ಪುನರಾವರ್ತಿತವಾಗಿದ್ದು, ಕ್ರಿಶ್ಚಿಯನ್ ಭಕ್ತಿಭಾವಕ್ಕೆ ಅನುಗುಣವಾದ ಅಲಂಕಾರಗಳನ್ನು ಹೊಂದಿದೆ. ಪ್ರಕಾಶಮಯತೆ ಅಥವಾ ಅಲಂಕಾರಗಳು ಹಲವಾರು ಉದಾಹರಣೆಗಳಲ್ಲಿ ಕನಿಷ್ಠ ಮಟ್ಟದಲ್ಲಿವೆ; ಕೆಲವುಗಳಲ್ಲಂತೂ ಸ್ತುತಿಗಳ ಮತ್ತು ಇತರ ಪ್ರಾರ್ಥನೆಗಳ ಮೊದಲಿನ ಅಕ್ಷರಗಳಾದ ದೊಡ್ಡಕ್ಷರಗಳು ಮಾತ್ರ ಅಲಂಕೃತವಾಗಿವೆ, ಆದರೆ ಶ್ರೀಮಂತ ಪೋಷಕರಿಗೆಂದು ತಯಾರಿಸಿದ ಪುಸ್ತಕಗಳಲ್ಲಿ ಆಡಂಬರದ ಅಲಂಕಾರವಿದ್ದು ಸಂಪೂರ್ಣ ಪುಟದ ಮಿನಿಯೇಚರ್ ಗಳನ್ನು ಹೊಂದಿವೆ.
ಪೂಜಾವಿಧಿಗೆ ಸಂಬಂಧಿಸಿದ ಪುಸ್ತಕಗಳು ಮತ್ತು ಕ್ಯಾಲೆಂಡರ್ ಗಳು
[ಬದಲಾಯಿಸಿ]- ಬೈಬಲ್ ಗಳೊಡನೆ, ಮಧ್ಯಕಾಲೀನ ಯುಗದಲ್ಲಿ ತಯಾರಾದ ಅಸಂಖ್ಯಾತ ಹಸ್ತಪ್ರತಿಗಳನ್ನು ಚರ್ಚುಗಳಲ್ಲಿ ಬಳಸಲಾಗುತ್ತಿತ್ತು. ಚರ್ಚಿನ ಆಚಾರ ಮತ್ತು ಪೂಜಾವಿಧಿಯ ಸಂಕೀರ್ಣ ವ್ಯವಸ್ಥೆಯ ಕಾರಣಗಳಿಂದ, ಈ ಪುಸ್ತಕಗಳನ್ನು ಕಡೆಗೂ ಬರೆಯ ಲಾಯಿತು ಮತ್ತು ಮಧ್ಯಕಾಲೀನ ಯುಗದ ಅತ್ಯಂತ ವೈಭವೀಕೃತ ಹಸ್ತಪ್ರತಿಗಳಾಗಿ ಇವು ರಾರಾಜಿಸಿದವು. ಪೂಜಾವಿಧಿಯ ಗ್ರಂಥಗಳು ಸಾಮಾನ್ಯವಾಗಿ ಎರಡು ವೈವಿಧ್ಯಗಳಲ್ಲಿ ದೊರೆಯುತ್ತಿದ್ದವು.
- ಸಾಮೂಹಿಕ ಪ್ರಾರ್ಥನೆಯಲ್ಲಿ ಬಳಸುವಂತಹವು ಮತ್ತು ದೈವಿಕರ ಕಚೇರಿಯಲ್ಲಿ ಬಳಸುವಂತಹವು.[೪] ಬಹುತೇಕ ಪೂಜಾವಿಧಿಗಳ ಪುಸ್ತಕಗಳ ಮುಂಪುಟದಲ್ಲಿ ಒಂದು ಕ್ಯಾಲೆಂಡರ್ ಇರುತ್ತಿತ್ತು.ಇದರಲ್ಲಿ ಕ್ರಿಸ್ತನ ಜೀವನದ ಪ್ರಮುಖ ದಿನಗಳು ಹಾಗೂ ಯಾವ ಯಾವ ಸಂತರನ್ನು ಎಂದೆಂದು ಗೌರವಿಸಬೇಕೆಂಬ ಮಾಹಿತಿಗಳು ಸುಲಭವಾಗಿ ದೊರೆಯುತ್ತಿದ್ದವು. ಆ ಪೂಜಾವಿಧಿಯ ಕ್ಯಾಲೆಂಡರ್ ನ ಮಾದರಿಯು ಈ ಕೆಳಕಂಡಂತಿತ್ತು:
ಮಧ್ಯಕಾಲೀನ ಯುಗದ ಪೂಜಾವಿಧಿ ಸೂಚಿಸುವ ಕ್ಯಾಲೆಂಡರ್ ನ ಒಂದು ನಮೂನೆ
[ಬದಲಾಯಿಸಿ]ಜನವರಿ,ಆಗಸ್ಟ್, ಡಿಸೆಂಬರ್ | ಮಾರ್ಚ್, ಮೇ, ಜುಲೈ, ಅಕ್ಟೋಬರ್ | ಏಪ್ರಿಲ್, ಜೂನ್, ಸೆಪ್ಟೆಂಬರ್, ನವೆಂಬರ್ | ಫೆಬ್ರವರಿ |
---|---|---|---|
ಕಾಲ್ 1 | ಕಾಲ್ 1 | ಕಾಲ್ 1 | ಕಾಲ್ 1 |
IV ನಾನ್. (2) | VI ನಾನ್. (2) | IV ನಾನ್. (2) | IV ನಾನ್. (2) |
III ನಾನ್. (3) | V ನಾನ್. (3) | III ನಾನ್. (3) | III ನಾನ್. (3) |
II ನಾನ್. (4) | IV ನಾನ್. (4) | II ನಾನ್. (4) | II ನಾನ್. (4) |
ನಾನ್. (5) | III ನಾನ್. (5) | ನಾನ್. (5) | ನಾನ್. (5) |
VIII ಐಡಿ. (6) | II ನಾನ್. (6) | VIII ಐಡಿ. (6) | VIII ಐಡಿ. (6) |
VII ಐಡಿ. (7) | ನಾನ್. (7) | VII ಐಡಿ. (7) | VII ಐಡಿ. (7) |
VI ಐಡಿ. (8) | VIII ಐಡಿ. (8) | VI ಐಡಿ. (8) | VI ಐಡಿ. (8) |
V ಐಡಿ. (9) | VII ಐಡಿ. (9) | V ಐಡಿ. (9) | V ಐಡಿ. (9) |
IV ಐಡಿ. (10) | VII ಐಡಿ. (10) | IV ಐಡಿ. (10) | IV ಐಡಿ. (10) |
III ಐಡಿ. (11) | V ಐಡಿ. (11) | III ಐಡಿ. (11) | III ಐಡಿ. (11) |
II ಐಡಿ. (12) | IV ಐಡಿ. (12) | II ಐಡಿ. (12) | II ಐಡಿ. (12) |
ಐಡಿ (13) | III ಐಡಿ. (13) | ಐಡಿ (13) | ಐಡಿ (13) |
XIX ಕಾಲ್. (14) | II ಐಡಿ. (14) | XVIII ಕಾಲ್. (14) | XVI ಕಾಲ್. (14) |
XVIII ಕಾಲ್. (15) | ಐಡಿ (15) | XVII ಕಾಲ್. (15) | XV ಕಾಲ್. (15) |
XVII ಕಾಲ್. (16) | XVII ಕಾಲ್. (16) | XVI ಕಾಲ್. (16) | XIV ಕಾಲ್. (16) |
XVI ಕಾಲ್. (17) | XVI ಕಾಲ್. (17) | XV ಕಾಲ್. (17) | XIII ಕಾಲ್. (17) |
XV ಕಾಲ್. (18) | XV ಕಾಲ್. (18) | XIV ಕಾಲ್. (18) | XII ಕಾಲ್. (18) |
XIV ಕಾಲ್. (19) | XIV ಕಾಲ್. (19) | XIII ಕಾಲ್. (19) | XI ಕಾಲ್. (19) |
XIII ಕಾಲ್. (20) | XIII ಕಾಲ್. (20 | XII ಕಾಲ್. (20) | X ಕಾಲ್. (20) |
XII ಕಾಲ್. (21) | XII ಕಾಲ್. (21) | XI ಕಾಲ್. (21) | IX ಕಾಲ್. (21) |
XI ಕಾಲ್. (22) | XI ಕಾಲ್. (22) | X ಕಾಲ್. (22) | VIII ಕಾಲ್. (22) |
X ಕಾಲ್. (23) | X ಕಾಲ್. (23) | IX ಕಾಲ್. (23) | VII ಕಾಲ್. (23) |
IX ಕಾಲ್. (24) | IX ಕಾಲ್. (24) | VIII ಕಾಲ್. (24) | VI ಕಾಲ್ (ಅಧಿಕದಿನ ವರ್ಷದ ಅಧಿಕ ದಿನ ) |
VIII ಕಾಲ್. (25) | VIII ಕಾಲ್. (25) | VII ಕಾಲ್. (25) | VI ಕಾಲ್. (24/25) |
VII ಕಾಲ್. (26) | VII ಕಾಲ್. (26) | VI ಕಾಲ್. (26) | V ಕಾಲ್. [25] ^ [24] |
VI ಕಾಲ್. (27) | VI ಕಾಲ್. (27) | V ಕಾಲ್. (27) | V ಕಾಲ್. (26/27) |
V ಕಾಲ್. (28) | V ಕಾಲ್. (28) | V ಕಾಲ್. (28) | V ಕಾಲ್. (28) |
IV ಕಾಲ್. (29) | IV ಕಾಲ್. (29) | III ಕಾಲ್. (29) | III ಕಾಲ್. 28.68 |
III ಕಾಲ್. (30) | III ಕಾಲ್. (30) | II ಕಾಲ್. (30) | |
II ಕಾಲ್. (31) | II ಕಾಲ್. (31) |
- ಮಧ್ಯಕಾಲೀನ ಯುಗದ ಬಹುತೇಕ ಕ್ಯಾಲೆಂಡರ್ ಗಳು ದಿನದ ದಿನಾಂಕಗಳನ್ನು ರೋಮನ್ ರೀತಿಯ ಕಾಲಗಣನಾಕ್ರಮಕ್ಕೆ ಅನುಗುಣವಾಗಿಯೇ ನೀಡುತ್ತವೆ. ರೋಮನ್ ಮಾದರಿಯಲ್ಲಿ ಪ್ರತಿ ತಿಂಗಳಲ್ಲೂ ಮೂರು ಖಚಿತವಾದ ಅಂಶಗಳಿದ್ದು, ಅವನ್ನು ಕ್ಯಾಲೆಂಡ್ (ಕಾಲ್)ಗಳು, ನಾನ್ ಗಳು ಮತ್ತು ಐಡೆಸ್ ಗಳೆಂದು ಕರೆಯುತ್ತಿದ್ದರು. ನಾನ್ ಗಳು ಜನವರಿ ಫೆಬ್ರವರಿ, ಏಪ್ರಿಲ್, ಜೂನ್, ಆಗಸ್ಟ್, ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್ ಗಳ ಐದನೆಯ ದಿನದಂದು ಬೀಳುತ್ತಿದ್ದವು.
- ಆದರೆ ಮಾರ್ಚ್, ಮೇ, ಜುಲೈ ಮತ್ತು ಅಕ್ಟೋಬರ್ ಗಳಲ್ಲಿ ಏಳನೆಯ ದಿನ ಬೀಳುತ್ತಿತ್ತು. ಐಡೆಸ್ ನಾನ್ ಗಳು ಐದನೆಯ ದಿನ ಬಿದ್ದ ತಿಂಗಳುಗಳಲ್ಲಿ ಹದಿಮೂರರಂದು ಮತ್ತು ಇನ್ನು ನಾಲ್ಕು ತಿಂಗಳಲ್ಲಿ ಹದಿನೈದರಂದು ಬೀಳುತ್ತಿತ್ತು. ಮಿಕ್ಕೆಲ್ಲಾ ದಿನಗಳನ್ನೂ ಈ ದಿನಗಳ ಹಿಂದೆ ಎಷ್ಟು ದಿನಗಳಿವೆ ಎಂಬ ಆಧಾರದ ಮೇಲೆ ಲೆಕ್ಕ ಹಾಕಿ ದಿನಾಂಕಗಳನ್ನು ಗುರುತಿಸಲಾಗುತ್ತಿತ್ತು.[೭]
ವಿವಿಧ ಲಿಪಿಗಳು
[ಬದಲಾಯಿಸಿ]- ಮೆರೋವಿಂಗಿಯನ್ ಹಸ್ತಪ್ರತಿ, ಅಥವಾ "ಲಕ್ಸ್ಯೂಯಿಲ್ ಮಿನಿಸ್ಕ್ಯೂಲ್", ಎಂಬ ಹಸ್ತಪ್ರತಿಯು ಪಶ್ಚಿಮ ಫ್ರ್ಯಾನ್ಸ್ ನ ಒಂದು ಕ್ರೈಸ್ತಮಠವಾದ ಲಕ್ಸ್ಯೂಯಲ್ ಅಬ್ಬೇ ಸಂಬಂಧಿತ ಹೆಸರನ್ನಿಡಲಾಗಿದೆ; ಇದನ್ನು ಐರಿಷ್ ಮಿಷನರಿಯಾದ ಸೇಂಟ್ ಕೊಲಂಬಾ ಸುಮಾರು 590ನೆಯ ಇಸವಿಯಲ್ಲಿ ಸ್ಥಾಪಿಸಿದರು.[೮][೯] ಕ್ಯಾರೋಲಿನ್ ಮಿನಿಸ್ಕ್ಯೂಲ್ ಎಂಬುದು ಯೂರೋಪ್ ನಲ್ಲಿ ಅಭಿವೃದ್ಧಿಗೊಂಡ ಒಂದು ಬರವಣಿಗೆಯ ಸ್ತರವಾಗಿರುವ ಬರಹರೂಪವಾಗಿದ್ದು, ರೋಮನ್
- ಅಕ್ಷರಮಾಲೆಯನ್ನು ಒಂದು ಪ್ರಾಂತ್ಯದಿಂದ ಮತ್ತೊಂದು ಪ್ರಾಂತ್ಯದಲ್ಲಿರುವ ಅಕ್ಷರಸ್ಥರು ಸುಲಭವಾಗಿ ಗುರುತಿಸಲು ಅನುಕೂಲವಾಗುತ್ತದೆ. ಇದನ್ನು ಸುಮಾರು 800ರಿಂದ 1200ರವರೆಗಿನ ಚಾರ್ಲೆಮಾಗ್ನೆಯ ಚಕ್ರಾಧಿಪತ್ಯದಲ್ಲಿ ಬಳಸಲಾಗಿತ್ತು. ಕೈಬರಹದ ಗ್ರಂಥಗಳು, ಶಾಸ್ತ್ರೀಯ ಮತ್ತು ಕ್ರಿಶ್ಚಿಯನ್ ಲೇಖನಗಳು ಮತ್ತು ಶೈಕ್ಷಣಿಕ ವಿಷಯಗಳನ್ನು ಕ್ಯಾರೋಲಿಂಗಿಯನ್ ಕ್ರಾಂತಿಯುದ್ದಕ್ಕೂ ಕ್ಯಾರೋಲಿಂಗಿಯನ್ ಮಿನಿಸ್ಕ್ಯೂಲ್ ನಲ್ಲಿ ಬರೆಯಲಾಗಿತ್ತು.
- ಈ ಬರವಣಿಗೆಯು ಬ್ಲ್ಯಾಕ್ ಲೆಟರ್ ಆಗಿ ವೃದ್ಧಿಗೊಂಡು ನಂತರ ಅಪ್ರಯೋಜಕವಾಯಿತು; ಅದನ್ನು ನಂತರ ಇಟಾಲಿಯನ್ ಕ್ರಾಂತಿಯಲ್ಲಿ ಪುನರುಜ್ಜೀವನಗೊಳಿಸಿದುದು ಈಗಿನ ಬರಹರೂಪಗಳಿಗೆ ಬುನಾದಿಯಾಗಿದೆ.[೪] ಇಂಟ್ರೊಡಕ್ಷನ್ ಟು ಮ್ಯಾನ್ಯುಸ್ಕ್ರಿಪ್ಟ್ ಸ್ಟಡೀಸ್ ನಲ್ಲಿ, ಕ್ಲೆಮೆಂಟ್ಸ್ ಮತ್ತು ಗ್ರಹಾಂ ಈ ಬರಹದ ಆದಿಯನ್ನು ಟೂರ್ಸ್ ನಲ್ಲಿರುವ ಅಬ್ಬೆ ಆಫ್ ಸೇಂಟ್-ಮಾರ್ಟಿನ್ ನೊಡನೆ ತಳುಕುಹಾಕಿದ್ದಾರೆ.[೪]
- ಕ್ಯಾರೋಲಿನ್ ಮಿನಿಸ್ಕ್ಯೂಲ್ ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡ್ ಗೆ ಆಗಮಿಸಿತು. ದ್ವೀಪವಾಸಿಗಳ ಬರಹವನ್ನು ಬದಿಗೊತ್ತಿದ ಈ ಬರವಣಿಗೆಯನ್ನು ಅಲ್ಲಿ ಹೊಂದಿಸಿಕೊಳ್ಳುವದಕ್ಕೆ ಪಾದ್ರಿಗಳಾದ ಡನ್ ಸ್ಟನ್, ಯೀಥೆಲ್ವೋಲ್ಡ್ ಮತ್ತು ಓಸ್ವಾಲ್ಡ್ ರು ಯೂರೋಪ್ ಖಂಡದ ಹಸ್ತಪ್ರತಿಗಳನ್ನು ಆಮದು ಮಾಡಿಕೊಂಡಿದ್ದು ಹೆಚ್ಚಿನ ಪ್ರೋತ್ಸಾಹ ನೀಡಿದಂತಾಯಿತು.
- ಈ ಲಿಖಿತರೂಪವು ಬಹಳ ಬೇಗ ವ್ಯಾಪಕವಾಗಿ ಹರಡಿತು ಹಾಗೂ ಹಲವಾರು ಲ್ಯಾಟಿನ್ ಲೇಖನಗಳನ್ನು ನಕಲು ಮಾಡಲು ಇಂಗ್ಲಿಷ್ ಕೇಂದ್ರಗಳು ಇದನ್ನು ಬಳಸಿಕೊಂಡವು. ಇಂಗ್ಲಿಷ್ ಲೇಖಕರು ಈ ಕ್ಯಾರೋಲಿಂಗಿಯನ್ ಸ್ಕ್ರಿಪ್ಟನ್ನು ಅಳವಡಿಸಿಕೊಂಡು, ಅದಕ್ಕೆ ಒಂದು ಪ್ರಮಾಣ ಮತ್ತು ಸ್ಪಷ್ಟತೆಯನ್ನು ನೀಡಿದರು.[9] ಕ್ಯಾರೋಲಿನ್ ಮಿನಿಸ್ಕ್ಯೂಲ್ ನ ಈ ಪರಿಷ್ಕೃತ ರೂಪವನ್ನು ಪ್ರೋಟೋಗೋಥಿಕ್ ಬುಕ್ ಹ್ಯಾಂಡ್ ಎಂದು ಕರೆಯಲಾಯಿತು.
- ಕ್ಯಾರೋಲಿನ್ ಮಿನಿಸ್ಕ್ಯೂಲ್ ನಿಂದ ಉಗಮವಾದ ಮತ್ತೊಂದು ಬರಹರೂಪವೇ ಜರ್ಮನ್ ಪ್ರೋಟೋಗೋಥಿಕ್ ಬುಕ್ ಹ್ಯಾಂಡ್. ಇದರ ಉಗಮವು 12ನೆಯ ಶತಮಾನದ ಉತ್ತರಾರ್ಧದಲ್ಲಿ ದಕ್ಷಿಣ ಜರ್ಮನಿಯಲ್ಲಿ ಆಯಿತು. <ಆಕರ ಹೆಸರು= “ಸ್ಕ್ರಿಪ್ಟ್" > ಕ್ಲೆಮೆನ್ಸ್. ರೇಮಂಡ್ ಮತ್ತು ತಿಮೋತಿ ಗ್ರಹಾಂ."ಇಂಗ್ಲಿಷ್ ಪ್ರೋಟೋಗೋಥಿಕ್ ಬುಕ್ ಹ್ಯಾಂಡ್." ಇನ್ ಇಂಟ್ರೊಡಕ್ಷನ್ ಟು ಮ್ಯಾನ್ಯುಸ್ಕ್ರಿಪ್ಟ್ ಸ್ಟಡೀಸ್. ಇಥಾಕಾ: ಕಾರ್ನೆಲ್ ವಿಶ್ವವಿದ್ಯಾಲಯ ಮುದ್ರಣಾಲಯ, 2008. 146-147.</ಆಕರ>
- ಎಲ್ಲಾ ಪ್ರತ್ಯೇಕ ಕಾಗದಗಳೂ ಕ್ಯಾರೋಲಿನ್ ಮಾದರಿಯವೆ; ಆದರೆ ಅದರಿಂದಲೇ ಉಗಮವಾದ ಇಂಗ್ಲಿಷ್ ಪ್ರೋಟೋಗೋಥಿಕ್ ಬುಕ್ ಹ್ಯಾಂಡ್ ನ ರೀತಿಯದೇ. ಇದನ್ನು h ಅಕ್ಷರದ ತೋಳುಭಾಗದಲ್ಲಿ ಕಾಣಬಹುದು. ಅದರಲ್ಲಿ ಒಂದು ಸಣ್ಣರೇಖೆಯು ಎಡಕ್ಕೆ ತಿರುಗಿ ಚೂಪಾಗುತ್ತಾ ಸಾಗುತ್ತದೆ. ಮೊದಲು ಓದಿದಾಗ ಜರ್ಮನ್ ಪ್ರೋಟೋಗೋಥಿಕ್ h ಜರ್ಮನ್ ಪ್ರೋಟೋಗೋಥಿಕ್ bಯಂತೆ ಕಾಣುತ್ತದೆ. [೧೦]
- ಜರ್ಮನ್ ಪ್ರೋಟೋಗೋಥಿಕ್ ಬುಕ್ ಹ್ಯಾಂಡ್ ನಿಂದ ಮತ್ತಷ್ಟು ಬರಹರೂಪಗಳು ಚಿಮ್ಮಿದವು. ಇವುಗಳ ನಂತರ ಬಾಸ್ಟರ್ಡ್ ಆಂಗ್ಲಿಕಾನಾ ಎಂಬುದು ಉಗಮವಾಯಿತು, ಇದನ್ನು ಹೆಚ್ಚೆಂದರೆ ಹೀಗೆ ವರ್ಣಿಸಬಹುದು: ಗೋಥಿಕ್ ಯುಗದಲ್ಲಿ ಪುಸ್ತಕಗಳನ್ನು ನಕಲು ಮಾಡಲು ನಿಯಮಿಸಿದ್ದ ಕ್ರಮಬದ್ಧ ಹಸ್ತಗಳು ಮತ್ತು ದಾಖಲೆಗಳನ್ನು ಬರೆಯಲು ಬಳಸುತ್ತಿದ್ದ ಮೋಡಿ ಅಕ್ಷರದ ಬರವಣಿಗೆಗಳು ಏಕಕಾಲದಲ್ಲಿ ಸಹಸ್ಥಾಪಿತವಾಗಿದ್ದುದರಿಂದ ಮೂಲಭೂತವಾಗಿ ಭಿನ್ನವಾದ ಈ ಎರಡು ಬರವಣಿಗೆಗಳ ಮಾದರಿಗಳ ಶೈಲಿ-ಸಂಕರವಾಯಿತು. ಗಮನಾರ್ಹವಾದ ರೀತಿಯಲ್ಲಿ, ಲೇಖಕರು ಕೆಲವು ಮೋಡಿ ಅಕ್ಷರದ ಬರವಣಿಗೆಗಳನ್ನು ಮೇಲುಸ್ತರಕ್ಕೆ ಏರಿಸಲು ತೊಡಗಿದರು;
- ಹೀಗೆ ವಿಧಿವತ್ತಾದ ರೀತಿಗೆ ತೊಡಗಿಸಲಾದ ಬರವಣಿಗೆಗಳನ್ನು ಬಾಸ್ಟರ್ಡ್ ಸ್ಕ್ರಿಪ್ಟ್ ಎಂದು ಕರೆಯಲಾಯಿತು(ಆದರೆ ಮೋಡಿ ಅಕ್ಷರಗಳನ್ನು ತನ್ನಲ್ಲಿಯೇ ಜೋಡಣೆಗೊಳಿಸಲ್ಪಟ್ಟಿದ್ದ ಬುಕ್ ಹ್ಯಾಂಡ್ ಗಳನ್ನು ಹೈಬ್ರಿಡ್ (ಮಿಶ್ರತಳಿ) ಸ್ಕ್ರಿಪ್ಟ್ ಎಂದು ಕರೆಯಲಾಯಿತು). ಇದರ ಹೆಚ್ಚುಗಾರಿಕೆಯೆಂದರೆ ಶುದ್ಧ ಬುಕ್ ಹ್ಯಾಂಡ್ ಬರೆಯುವುದಕ್ಕಿಂತಲೂ ಈ ವಿಧದ ಬರವಣಿಗೆಗಳನ್ನು ಹೆಚ್ಚು ವೇಗವಾಗಿ ಬರೆಯಬಹುದಾಗಿತ್ತು; ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಹಾಗೂ ಲೇಖಕರು ದೀರ್ಘವಾದ ಬರವಣಿಗೆಗಳಿಗೆ ಆತುಕೊಳ್ಳುತ್ತಿದ್ದ ಆ ದಿನಗಳಲ್ಲಿ ಈ ವಿಧದ ಬರವಣಿಗೆಯು ಬರಹಗಾರರಿಗೆ ಆಪ್ಯಾಯಮಾನವಾಯಿತು. ಇಂಗ್ಲೆಂಡ್ ನಲ್ಲಿ, 14ನೆಯ ಮತ್ತು 15ನೆಯ ಶತಮಾನಗಳಲ್ಲಿ, ಈ ಬಾಸ್ಟರ್ಡ್ ಆಂಗ್ಲಿಕಾನಾ ಎಂದೇ ಹೆಸರಾದ ಬರವಣಿಗೆಯ ಶೈಲಿಯಲ್ಲಿ ಹಲವಾರು ಪುಸ್ತಕಗಳನ್ನು ಬರೆಯಲಾಯಿತು.
ಗೋಥಿಕ್ ಯುಗದಲ್ಲಿ ಪುಸ್ತಕಗಳನ್ನು ನಕಲು ಮಾಡಲು ನಿಯಮಿಸಿದ್ದ ಕ್ರಮಬದ್ಧ ಹಸ್ತಗಳು ಮತ್ತು ದಾಖಲೆಗಳನ್ನು ಬರೆಯಲು ಬಳಸುತ್ತಿದ್ದ ಮೋಡಿ ಅಕ್ಷರದ ಬರವಣಿಗೆಗಳು ಏಕಕಾಲದಲ್ಲಿ ಸಹಸ್ಥಾಪಿತವಾಗಿದ್ದುದರಿಂದ ಮೂಲಭೂತವಾಗಿ ಭಿನ್ನವಾದ ಈ ಎರಡು ಬರವಣಿಗೆಗಳ ಮಾದರಿಗಳ ಶೈಲಿ-ಸಂಕರವಾಯಿತು. ಗಮನಾರ್ಹವಾದ ರೀತಿಯಲ್ಲಿ, ಲೇಖಕರು ಕೆಲವು ಮೋಡಿ ಅಕ್ಷರದ ಬರವಣಿಗೆಗಳನ್ನು ಮೇಲುಸ್ತರಕ್ಕೆ ಏರಿಸಲು ತೊಡಗಿದರು; ಹೀಗೆ ವಿಧಿವತ್ತಾದ ರೀತಿಗೆ ತೊಡಗಿಸಲಾದ ಬರವಣಿಗೆಗಳನ್ನು ಬಾಸ್ಟರ್ಡ್ ಸ್ಕ್ರಿಪ್ಟ್ ಎಂದು ಕರೆಯಲಾಯಿತು(ಆದರೆ ಮೋಡಿ ಅಕ್ಷರಗಳನ್ನು ತನ್ನಲ್ಲಿಯೇ ಜೋಡಣೆಗೊಳಿಸಲ್ಪಟ್ಟಿದ್ದ ಬುಕ್ ಹ್ಯಾಂಡ್ ಗಳನ್ನು ಹೈಬ್ರಿಡ್ (ಮಿಶ್ರತಳಿ) ಸ್ಕ್ರಿಪ್ಟ್ ಎಂದು ಕರೆಯಲಾಯಿತು). ಇದರ ಹೆಚ್ಚುಗಾರಿಕೆಯೆಂದರೆ ಶುದ್ಧ ಬುಕ್ ಹ್ಯಾಂಡ್ ಬರೆಯುವುದಕ್ಕಿಂತಲೂ ಈ ವಿಧದ ಬರವಣಿಗೆಗಳನ್ನು ಹೆಚ್ಚು ವೇಗವಾಗಿ ಬರೆಯಬಹುದಾಗಿತ್ತು; ಪುಸ್ತಕಗಳಿಗೆ ಬೇಡಿಕೆ ಹೆಚ್ಚುತ್ತಿದ್ದ ಹಾಗೂ ಲೇಖಕರು ದೀರ್ಘವಾದ ಬರವಣಿಗೆಗಳಿಗೆ ಆತುಕೊಳ್ಳುತ್ತಿದ್ದ ಆ ದಿನಗಳಲ್ಲಿ ಈ ವಿಧದ ಬರವಣಿಗೆಯು ಬರಹಗಾರರಿಗೆ ಆಪ್ಯಾಯಮಾನವಾಯಿತು. ಇಂಗ್ಲೆಂಡ್ ನಲ್ಲಿ, 14ನೆಯ ಮತ್ತು 15ನೆಯ ಶತಮಾನಗಳಲ್ಲಿ, ಈ ಬಾಸ್ಟರ್ಡ್ ಆಂಗ್ಲಿಕಾನಾ ಎಂದೇ ಹೆಸರಾದ ಬರವಣಿಗೆಯ ಶೈಲಿಯಲ್ಲಿ ಹಲವಾರು ಪುಸ್ತಕಗಳನ್ನು ಬರೆಯಲಾಯಿತು.
ಯುಎಸ್ ನ ಮಧ್ಯಕಾಲೀನಯುಗದ ಹಸ್ತಪ್ರತಿಗಳ ಪ್ರಮುಖ ಭಂಡಾರಗಳು
[ಬದಲಾಯಿಸಿ]
- ಮ್ಯಾಟೆನಾಡರನ್ (ಯೆರೆವಾನ್, ಆರ್ಮೇನಿಯಾ)= 17,000ಕ್ಕೂ ಮಿಗಿಲಾದುದು
- ಪಿಯರ್ಪಾಂಟ್ ಮಾರ್ಗನ್ = 1,300 (ಪ್ಯಾಪೈರಿ ಸೇರಿದಂತೆ)
- ಬೀಯ್ನೆಕ್ ಅಪರೂಪದ ಪುಸ್ತಕಗಳು ಮತ್ತು ಹಸ್ತಪ್ರತಿಗಳ ಗ್ರಂಥಾಲಯ, ಯೇಲ್ = 1,100
- ಹೌಟನ್ ಗ್ರಂಥಾಲಯ, ಹಾರ್ವರ್ಡ್ = 850
- ಪ್ರಿನ್ಸ್ ಟನ್ ಯೂನಿವರ್ಸಿಟಿ ಗ್ರಂಥಾಲಯ = 500
- ಹಂಟಿಂಗ್ಟನ್ ಗ್ರಂಥಾಲಯ = 400
- ನ್ಯೂಬೆರಿ ಗ್ರಂಥಾಲಯ = 260
@ ಕಾರ್ನೆಲ್ ವಿಶ್ವವಿದ್ಯಾಲಯ ಗ್ರಂಥಾಲಯ = 150
ಇವನ್ನೂ ನೋಡಿ
[ಬದಲಾಯಿಸಿ]
- ಅಮೆರಿಕದ ಪ್ರಕಾಶಮಯ ಹಸ್ತಪ್ರತಿ
- ಗೆಂಕೋ ಯೋಶೀ
- ಗಾಸ್ಪೆಲ್ ಪುಸ್ತಕ
- ಹಿಬೆರ್ನೋ-ಸ್ಯಾಕ್ಸನ್ ಪ್ರಕಾಶಮಯ ಹಸ್ತಪ್ರತಿಗಳ ಪಟ್ಟಿ
- ಹಸ್ತಪ್ರತಿ ಸಂಸ್ಕೃತಿ
- ಸಣ್ಣ (ಪ್ರಕಾಶಮಯ ಹಸ್ತಪ್ರತಿ)
- ಸಂಗೀತದ ಹಸ್ತಪ್ರತಿ
- ಪ್ರಕಾಶಮಯ ಹಸ್ತಪ್ರತಿಗಳ ಸಂರಕ್ಷಣೆ
- ಮುದ್ರಣಾಲಯ
- ವಾಯ್ನಿಕ್ ಹಸ್ತಪ್ರತಿ
- ವುಡ್ ಬ್ಲಾಕ್ ಮುದ್ರಣ
ಬಾಹ್ಯ ಕೊಂಡಿಗಳು
[ಬದಲಾಯಿಸಿ]Look up manuscript or handwrit in Wiktionary, the free dictionary.Wikimedia Commons has media related to Manuscripts.
- ಬ್ರಿಟಿಷ್ ಗ್ರಂಥಾಲಯದ ಹಸ್ತಪ್ರತಿ ಪಾರಿಭಾಷಿಕ ಶಬ್ದಗಳ ಅರ್ಥಕೋಶ, ಬಹುತೇಕ ಅಂಶಗಳು ಪಶ್ಚಿಮದ ಮಧ್ಯಕಾಲೀನ ಯುಗದ ಹಸ್ತಪ್ರತಿಗಳಿಗೆ ಸಂಬಂಧಿಸುದುದು Archived 2006-12-05 ವೇಬ್ಯಾಕ್ ಮೆಷಿನ್ ನಲ್ಲಿ.
- ಸೆಂಟರ್ ಫಾರ್ ದ ಹಿಸ್ಟರಿ ಆಫ್ ದ ಬುಕ್, ಎಡಿನ್ಬರ್ಗ್ ವಿಶ್ವವಿದ್ಯಾಲಯ. Archived 2008-06-24 ವೇಬ್ಯಾಕ್ ಮೆಷಿನ್ ನಲ್ಲಿ.
- ಚೈನೀಸ್ ಕೋಡಿಕಾಲಜಿ
- ಹಸ್ತಪ್ರತಿಗಳ ವಿಭಾಗ, ಚಾಪೆಲ್ ಹಿಲ್ ನಲ್ಲಿರುವ ಯೂನಿವರ್ಸಿಟಿ ಆಫ್ ನಾರ್ತ್ ಕೆರೋಲಿನಾ Archived 2008-12-21 ವೇಬ್ಯಾಕ್ ಮೆಷಿನ್ ನಲ್ಲಿ.
- ಸರಸ್ವತಿಮಹಲ್ ಗ್ರಂಥಾಲಯ, ಇದರಲ್ಲಿ ಸಂಸ್ಕೃತ, ತಮಿಳ್, ಮರಾಠಿ ಮತ್ತು ತೆಲುಗಿನ ಹಸ್ತಪ್ರತಿಗಳ ಅತ್ಯಂತ ಶ್ರೀಮಂತವಾದ ಸಂಗ್ರಹ Archived 2004-11-29 ವೇಬ್ಯಾಕ್ ಮೆಷಿನ್ ನಲ್ಲಿ. ವಿದೆ
- ಸ್ಕೋಯೆನ್ ಸಂಗ್ರಹ - ಎಲ್ಲಾ ವಿಧದ ಹಸ್ತಪ್ರತಿಗಳನ್ನು ಹೊಂದಿರುವ ಜಗತ್ತಿನ ಅತಿ ದೊಡ್ಡ ಖಾಸಗಿ ಸಂಗ್ರಹ, ಹಲವಾರು ವಿವರಣೆಗಳು ಮತ್ತು ಚಿತ್ರಗಳ ಸಹಿತ
- Herbermann, Charles, ed. (1913). . Catholic Encyclopedia. New York: Robert Appleton Company.
{{cite encyclopedia}}
: Cite has empty unknown parameters:|HIDE_PARAMETER4=
,|HIDE_PARAMETER2=
,|HIDE_PARAMETERq=
,|HIDE_PARAMETER20=
,|HIDE_PARAMETER5=
,|HIDE_PARAMETER8=
,|HIDE_PARAMETER7=
,|HIDE_PARAMETER6=
,|HIDE_PARAMETER9=
,|HIDE_PARAMETER1=
, and|HIDE_PARAMETER3=
(help)- ನ್ಯೂಬೆರಿ ಗ್ರಂಥಾಲಯ ಹಸ್ತಪ್ರತಿ ಸಂಶೋಧನೆ Archived 2010-12-02 ವೇಬ್ಯಾಕ್ ಮೆಷಿನ್ ನಲ್ಲಿ.
- ಗೆಟ್ಟಿ ಪ್ರದರ್ಶನಗಳು
ಉಲ್ಲೇಖಿಸಲ್ಪಟ್ಟ ಕೃತಿಗಳು
[ಬದಲಾಯಿಸಿ]
- ↑ Buringh, Eltjo; van Zanden, Jan Luiten: "Charting the “Rise of the West”: Manuscripts and Printed Books in Europe, A Long-Term Perspective from the Sixth through Eighteenth Centuries", The Journal of Economic History, Vol. 69, No. 2 (2009), pp. 409–445 (416, table 1)
- ↑ ಹಾರ್ಪರ್, ಡೌಗ್ಲಾಸ್. ಹಸ್ತ ಪ್ರತಿ ಆನ್ ಲೈನ್ ವ್ಯುತ್ಪತ್ತಿ ನಿಘಂಟು. ನವೆಂಬರ್ 2006 ಪುನಶ್ಚೇತನ 10-11-2007.
- ↑ "ಮಧ್ಯಕಾಲೀನ್ ಇಂಗ್ಲಿಷ್ ಸಾಹಿತ್ಯದ ಹಸ್ತಪ್ರತಿಗಳು Archived 2008-12-09 ವೇಬ್ಯಾಕ್ ಮೆಷಿನ್ ನಲ್ಲಿ.." www.ಲೈಬ್ರರಿ.ರೋಚೆಸ್ಟರ್.ಎಜು. 24 ಜೂನ್ 2004 ರೋಚೆಸ್ಟರ್ ಗ್ರಂಥಾಲಯಗಳ ವಿಶ್ವವಿದ್ಯಾಲಯ. ಭೇಟಿಯಿತ್ತಿದ್ದು 10-11-2007.
- ↑ ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ ೪.೧೧ ಕ್ಲೆಮೆಂಟ್ಸ್, ರೇಮಂಡ್ ಮತ್ತು ತಿಮೋತಿ ಗ್ರಹಾಂ. ಇಂಟ್ರೊಡಕ್ಷನ್ ಟು ಮಾನ್ಯುಸ್ಕ್ರಿಪ್ಟ್ ಸ್ಟಡೀಸ್.
- ಇಥಾಕಾ: ಕಾರ್ನೆಲ್ ವಿಶ್ವವಿದ್ಯಾಲಯ ಮುದ್ರಣಾಲಯ, 2008.
- ↑ ಥಾಂಪ್ಸನ್, ಡೇನಿಯಲ್. "ಮೆಡೀವಲ್ ಪಾರ್ಚ್ಮೆಂಟ್-ಮೇಕಿಂಗ್." ದ ಲೈಬ್ರರಿ 16, ಸಂಖ್ಯೆ. 4 (1935).
- ↑ ಬೆರಿಲ್ ಸ್ಮಾಲೀ, ದ ಸ್ಟಡಿ ಆಫ್ ದ ಬೈಬಲ್ ಇನ್ ದ ಮಿಡಲ್ ಏಜಸ್. 3ನೆಯ ಆವೃತ್ತಿ. (ಆಕ್ಸ್ ಫರ್ಡ್, 1983), xxvii
- ↑ ಎಫ್.ಪಿ. ಪಿಕೆರ್ಲಿಂಗ್, ದ ಕ್ಯಾಲೆಂಡರ್ ಪೇಜಸ್ ಆಫ್ ಮೆಡೀವಲ್ ಸರ್ವೀಸ್ ಬುಕ್ಸ್: ಎನ್ ಇಂಟ್ರೊಡಕ್ಟರಿ ನೋಟ್ ಫಾರ್ ದ ಆರ್ಟ್ ಹಿಸ್ಟರಿಯನ್ಸ್ (ರೀಡಿಂಗ್, ಯುಕೆ., 1980.
- ↑ ಬ್ರೌನ್, ಮಿಚೆಲ್, ಪಿ. ಆಂಗ್ಲೋ-ಸ್ಯಾಕ್ಸನ್ ಮ್ಯಾನ್ಯುಸ್ಕ್ರಿಪ್ಟ್ಸ್ . ಟೊರೊಂಟೋ, 1991.
- ↑ ಬ್ರೌನ್, ಮಿಚೆಲ್, ಪಿ. {1ಎ ಗೈಡ್ ಟು ವೆಸ್ಟ್ರನ್ ಹಿಸ್ಟಾರಿಕಲ್ ಸ್ಕ್ರಿಪ್ಟ್ಸ್ ಫ್ರಂ ಆಂಟಿಕ್ವಿಟಿ ಟು 1600{/1}. ಟೊರೊಂಟೋ,1990.
- ↑ ಕ್ಲೆಮೆಂಟ್ಸ್, ರೇಮಂಡ್ ಮತ್ತು ತಿಮೋತಿ ಗ್ರಹಾಂ."ಜರ್ಮನ್ ಪ್ರೋಟೋಗೋಥಿಕ್ ಬುಕ್ ಹ್ಯಾಂಡ್." ಹಸ್ತಪ್ರತಿ ಅಧ್ಯಯನಕ್ಕೊಂದು ಪರಿಚಯ ಪಡಿಸುವಿಕೆ. ಇಥಾಕಾ: ಕಾರ್ನೆಲ್ ವಿಶ್ವವಿದ್ಯಾಲಯ ಮುದ್ರಣಾಲಯ, 2008. 149-150.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Commons category link is on Wikidata
- CS1 errors: empty unknown parameters
- Articles incorporating a citation from the 1913 Catholic Encyclopedia with Wikisource reference
- ಹಸ್ತಪ್ರತಿಗಳು
- ಪುಸ್ತಕದ ಪಾರಿಭಾಷಿಕ ಪದಗಳು
- ಪುಸ್ತಕಗಳು