ವಿಷಯಕ್ಕೆ ಹೋಗು

ಸುರುಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೋಷುವಾ ಸುರುಳಿ

ಸುರುಳಿ ಎಂದರೆ ಬರಹವನ್ನು ಹೊಂದಿರುವ ಜಂಬು ಕಾಗದ, ಚರ್ಮಕಾಗದ, ಅಥವಾ ಕಾಗದದ ಸುತ್ತು.[]

ಸುರುಳಿಯನ್ನು ಸಾಮಾನ್ಯವಾಗಿ ಪುಟಗಳಾಗಿ ವಿಭಜಿಸಲಾಗಿರುತ್ತದೆ. ಪುಟಗಳು ಕೆಲವೊಮ್ಮೆ ಅಂಚುಗಳಲ್ಲಿ ಒಟ್ಟಾಗಿ ಅಂಟಿಸಲಾಗಿರುವ ಜಂಬು ಕಾಗದ ಅಥವಾ ಚರ್ಮಕಾಗದದ ಪ್ರತ್ಯೇಕ ಹಾಳೆಗಳಾಗಿರುತ್ತವೆ, ಅಥವಾ ಬರವಣಿಗೆ ವಸ್ತುವಿನ ಕೂಡಿಕೊಂಡಿರುವ ಸುತ್ತಿನ ಗುರುತಿರುವ ವಿಭಾಗಗಳಾಗಿರಬಹುದು. ಸುರುಳಿಯನ್ನು ಸಾಮಾನ್ಯವಾಗಿ ಬಿಚ್ಚಿದಾಗ, ಬರವಣಿಗೆ ಅಥವಾ ವಾಚನಕ್ಕಾಗಿ, ಒಂದು ಸಮಯದಲ್ಲಿ ಒಂದು ಪುಟ ಬಹಿರಂಗವಾಗುತ್ತದೆ, ಮತ್ತು ಉಳಿದ ಪುಟಗಳು ಗೋಚರ ಪುಟದ ಎಡಕ್ಕೆ ಮತ್ತು ಬಲಕ್ಕೆ ಸುತ್ತಿಕೊಂಡಿರುತ್ತವೆ. ಸುರುಳಿಯನ್ನು ಬದಿಯಿಂದ ಬದಿಗೆ ಬಿಚ್ಚಲಾಗುತ್ತದೆ, ಮತ್ತು ಪಠ್ಯವನ್ನು ಪುಟದ ಮೇಲಿನಿಂದ ಕೆಳಕ್ಕೆ ಸಾಲುಗಳಲ್ಲಿ ಬರೆಯಲಾಗುತ್ತದೆ. ಭಾಷೆಯನ್ನು ಅವಲಂಬಿಸಿ, ಅಕ್ಷರಗಳನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ, ಅಥವಾ ದಿಕ್ಕಿನಲ್ಲಿ ಬದಲಿಯಾಗುವಂತೆ ಬರೆದಿರಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Beal, Peter. (2008) "scroll" in A Dictionary of English Manuscript Terminology 1450–2000 Online edition.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಸುರುಳಿ&oldid=912635" ಇಂದ ಪಡೆಯಲ್ಪಟ್ಟಿದೆ