ವಿಷಯಕ್ಕೆ ಹೋಗು

ಧ್ಯಾನ ಶ್ಲೋಕಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಗವದ್ಗೀತ : ಕುರುಕ್ಷೇತ್ರ ನಲ್ಲಿ ಕೃಷ್ಣ ಮತ್ತು ಅರ್ಜುನ, 18-19 ನೇ ಶತಮಾನದ ವರ್ಣಚಿತ್ರದ ಜೋಡಣೆ.
  • ಶ್ರೀಮದ್ ಭಗವದ್ಗೀತಾ ಧ್ಯಾನ ಶ್ಲೋಕಗಳು

ಅದ್ಯಯನ ಕ್ರಮ

[ಬದಲಾಯಿಸಿ]

  • ಸಾಮಾನ್ಯವಾಗಿ ಎಲ್ಲರೂ ಗೀತಾ ಪಠಣದ ಆರಂಭದಲ್ಲಿ ಒಂಭತ್ತು ಧ್ಯಾನ ಶ್ಲೋಕಗಳನ್ನು ಹೇಳುವ ರೂಢಿ ಇದೆ. ಇವು ಸೊಗಸಾದ ಭಾಷಾ ಸೌಂದರ್ಯವುಳ್ಳ , ಲಯಬದ್ಧವಾದ, ಭಕ್ತಿಪೂರ್ಣವಾದ ಶ್ಲೋಕಗಳಾಗಿವೆ. ವೈಷ್ಣವರಲ್ಲಿ ಧ್ಯಾನ ಶ್ಲೋಕದ ಪ್ರಸಿದ್ಧವಾದ ಒಂಭತ್ತನೆಯ ಶ್ಲೋಕವನ್ನು ಮಾತ್ರಾ ಹೇಳುವ ರೂಢಿ ಇದೆ. ಹೆಚ್ಚಾಗಿ ಮೊದಲಿಗೆ,
ಗೀತಾ ಸುಗೀತಾ ಕರ್ತವ್ಯಾ | ಕಿಮನ್ಯೈಃ ಶಾಸ್ತ್ರ ವಿಸ್ತರೈಃ ||
ಯಾ ಸ್ವಯಂ ಪದ್ಮನಾಭಸ್ಯ | ಮುಖ ಪದ್ಮಾ ದ್ವಿನಿಃ ಸೃತಾ ||
  • ಎಂಬ ಶ್ಲೋಕ ಹೇಳಿ ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಗೀತಾ ಪಠಣ ಮಾಡುತ್ತಾರೆ.
  • ಕೆಲವರು ಗೀತಾ ಪಠಣದ ಕೊನೆಯಲ್ಲಿ ವರಾಹ ಪುರಾಣ ದಲ್ಲಿರುವ ಗೀತಾ ಮಹಾತ್ಮ್ಯವನ್ನು ಪಠಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಹೃದಯಾದಿ ಕರಷಡಂಗ ವಿನ್ಯಾಸದೊಂದಿಗೆ ಮುಗಿಸುತ್ತಾರೆ; ಆದರೆ ಅದು ಕಡ್ಡಾಯವಲ್ಲ ; ಏಕೆಂದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಹೇಳಿಲ್ಲ. ಅದನ್ನು ಕೆಲವೇ ಸಂಪ್ರಾದಾಯದವರು ಅನುಸರಿಸುತ್ತಾರೆ. ಕೆಲವರಲ್ಲಿ ಸ್ಕಂದ ಪುರಾಣದ ಗೀತಾ ಮಹಾತ್ಮ್ಯ ಹೇಳಿ/ ಓದಿ ಧ್ಯಾನ ಶ್ಲೋಕ ಹೇಳಿ ಕರಷಡಂಗ ವಿನ್ಯಾಸ ಮಾಡಿ ಮುಕ್ತಾಯ ಮಾಡುತ್ತಾರೆ. ಪಾರಾಯಣ ಪೂಜೆ ಮಾಡುವವರು ಆರತಿ ಪದ್ಯ ಗಳನ್ನು ಹೇಳುತ್ತಾರೆ. ಆದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಮಾಡಲು ಹೇಳಿಲ್ಲ. ಕೊನೆಯಲ್ಲಿ ಕೆಲವು ಜನಪ್ರಿಯ ಸ್ತೋತ್ರ ಹೇಳುವ ರೂಢಿಯೂ ಇದೆ.

-

  • ಭಗವದ್ಗೀತೆಯ ಒಂದೇ ಅಧ್ಯಾಯ ಓದುವವರು ಮುಂದಿನ ಅಧ್ಯಾಯದ ಮೊದಲ ಶ್ಲೋಕ ಓದಿ (ಪಠಿಸಿ) ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಮುಕ್ತಾಯ ಮಾಡುತ್ತಾರೆ. ಕಾಲಾವಕಾಶ ವಿರದಿದ್ದಲ್ಲಿ ಕೊನೆಯ (೯) ಧ್ಯಾನ ಶ್ಲೋಕದಿಂದ ಆರಂಬಿಸಿ ಪಠನಾ ನಂತರ ಅದನ್ನೇ ಹೇಳಿ ಮುಗಿಸಬಹುದು.

ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ,
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್
ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್ || ೧ ||
  • ಟೀಕೆ : ಅಮ್ಮ (ಅಂಬ) ಭಗವದ್ಗೀತೆ , ಭಗವಂತನಾದ ನಾರಾಯಣನು ತಾನೇ ಅರ್ಜುನನಿಗೆ ಹೇಳಿದ್ದಾಗಿಯೂ, ಪುರಾಣಗಳನ್ನು ಬರೆದ ಋಷಿಗಳಾದ ವ್ಯಾಸರು ಮಹಾಭಾರತದ ನಡುವೆ ಪೋಣಿಸಿದ್ದಾಗಿಯೂ, ಅದ್ವೈತವೆಂಬ ಅಮೃತ ಮಳೆಯನ್ನು ಸುರಿಸುವಳಾಗಿಯೂ , ಭಗವತ್ಸ್ವರೂಪಳಾಗಿಯೂ, ಹದಿನೆಂಟು ಅಧ್ಯಾಯ ಉಳ್ಳವಳಾಗಿಯೂ, ಸಂಸಾರ ದುಃಖವನ್ನು ಹೋಗಲಾಡಿಸತಕ್ಕವಳಾಗಿಯೂ ಇರುವ ನಿನ್ನನ್ನು ಧ್ಯಾನಿಸುತ್ತೇನೆ. ||೧ ||

-

ನಮೋ‌sಸ್ತು ತೇ ವ್ಯಾಸ ವಿಶಾಲಬುದ್ಧೆ ಫುಲ್ಲಾರವಿಂದಾಯತಪತ್ರನೇತ್ರ |
ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ || ೨ ||
  • ಟೀ : ಭಾರತವೆಂಬ ಸಮೃದ್ಧಿಯಾದ ಎಣ್ಣೆಯುಳ್ಳ ಜ್ಞಾನಮಯವೆಂಬ ದೀಪವನ್ನು ಹಚ್ಚಿದವರಾಗಿಯೂ , ಅರಳಿದ ಕಮಲದಂತೆ ಅಗಲವಾದ ಕಣ್ಣುಳ್ಳವರಾಗಿಯೂ , ವಿಸ್ತಾರವಾದ ಬುದ್ಧಿಯುಳ್ಳವರಾಗಿಯೂ , ಇರುವ ವ್ಯಾಸರೇ ನಿಮಗೆ ನಮಸ್ಕಾರ. || ೨ ||

-

ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೆ |
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || ೩ ||
  • ಟೀ : ಶರಣರಿಗೆ ಕಲ್ಪವೃಕ್ಷವಾದವನೂ , ಒಂದುಕೈಯಲ್ಲಿ ಚಾಟಿಯಿಂದ ಕೂಡಿದ ಬೆತ್ತ ಹಿಡಿದಿರುವವನೂ, ಜ್ಞಾನೋಪದೇಶ ಲಕ್ಷಣವನ್ನು ತೋರಿಸುವ ಹಸ್ತಮುದ್ರೆಯುಳ್ಳವನೂ, ಗೀತೆಯೆಂಬ ಅಮೃತವನ್ನು ಕರೆಯುತ್ತಿರುವವನೂ ಆದ ಕೃಷ್ಣನಿಗೆ ಅಡ್ಡಬೀಳುತ್ತೇನೆ (ನಮಸ್ಕರಿಸುತ್ತೇನೆ). ||೩||

-

ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ|
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||೪||
  • ಟೀ : ಎಲ್ಲಾ ಉಪನಿಷತ್ ಗಳೂ ಆಕಳುಗಳು ; ಗೋಪಾಲ ನಂದನನಾದ ಶ್ರೀಕೃಷ್ಣ ಹಾಲು ಕರೆಯುವವನು. ಅರ್ಜುನನು ಕರು. ಹಾಲು ಕುಡಿಯುವವರು ಪಂಡಿತರು ; ಶ್ರೇಷ್ಟವಾದ ಗೀತಾಮೃತವು ಹೀಗೆ ಕರೆದ ಹಾಲು.||೪||

-

ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || ೫ ||
  • ಟೀ : ವಸುದೇವನ ಮಗನಾಗಿಯೂ , ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ ಬಹು ಸಂತೋಷವನ್ನು ಉಂಟುಮಾಡುವವನಾಗಿಯೂ , ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಇರುವ ಕೃಷ್ಣನಿಗೆ ಎರಗುತ್ತೇನೆ. ||೫||

-

ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕ್ರಪೇಣ ವಹನೀ ಕರ್ಣೇನ ವೇಲಾಕುಲಾ |
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || ೬ ||

-

ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಮ್
ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ |
ಲೋಕೆ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ
ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || ೭ ||
  • ಟೀ : ಪರಾಶರರ ಮಗನಾದ ವ್ಯಾಸರ ಮಾತುಗಳೆಂಬ ಸರೋವರದಲ್ಲಿ ಹುಟ್ಟಿದ್ದಾಗಿಯೂ , ನಿರ್ಮಲವಾಗಿಯೂ, ಗೀತೆಯೆಂಬ ಶ್ರೇಷ್ಠವಾದ ಗಂಧವನ್ನುಳ್ಳದ್ದಾಗಿಯೂ, ಅನೇಕ ಉಪಕಥೆ ಗಳೆಂಬ ಎಸಳುಗಳನ್ನುಳ್ಳದ್ದಾಗಿಯೂ, ಹರಿಕಥೆಯೆಂಬತಿಳಿವಿನಿಂದ ಅರಳಿದ್ದಗಿಯೂ, ಜಗತ್ತಿನಲ್ಲಿ ಸಜ್ಜನರೆಂಬ ಭ್ರಮರಗಳು ಯಾವಾಗಲೂ ಸಂತೋಷದಿಂದ ಕುಡಿಯುತ್ತಿರುವುದಾಗಿಯೂ , ಕಲಿಯುಗದ ದೋಷವನ್ನು ಕಳೆಯುವುದಾಗಿಯೂ ಇರುವ ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನುಂಟುಮಾಡಲಿ ||೭ ||

-

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ ||೮|| (* ಯತ್ ಕೃಪಾ ತಮಹಂ)
  • ಟೀ : ಯಾರ ಕೃಪೆಯು ಮೂಕನನ್ನು ಮಾತಾಳಿಯನ್ನಾಗಿಯೂ , ಕುಂಟನನ್ನು ಪರ್ವತವನ್ನು ದಾಟುವವನನ್ನಾಗಿಯೂ , ಮಾಡುವುದೋ ಆ ಪರಮಾನಂದ ಸ್ವರೂಪನಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ. ||೮||

-

ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಃ ಸ್ತುನ್ವಂತಿ ದಿವ್ಯೈ ಸ್ತವೈಃ |
ವೇದೈಃ ಸಾಂಗಪದಕ್ರಮೋಪನಿಷದೈ ರ್ಗಾಯಂತಿ$ ಯಂ ಸಾಮಗಾಃ ||
ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ |
ಯಸ್ಯಾಂತಂ ನ ವಿದುಃ ಸುರಾಸುರಾ ಗಣಾ ದೇವಾಯ ತಸ್ಮೈ ನಮಃ ||೯||
  • ಯಾವನನ್ನು ಬ್ರಹ್ಮನೂ ವರುಣನೂ ಇಂದ್ರನೂ ಮರುತ್ತುಗಳೂ ದಿವ್ಯವಾದ ಸ್ತೋತ್ರಗಳಿಂದ ಹೊಗಳುತ್ತಾರೋ, ಯಾವನನ್ನು ಸಾಮ ಗಾಯಕರು ಪದಗಳಿಂದಲೂ, ಕ್ರಮಗಳಿಂದಲೂ ಕೂಡಿರುವ ವೇದಗಳಿಂದ ಗಾನಮಾಡುತ್ತಾರೋ, ಯಾವನನ್ನು ಯೋಗಿಗಳು ಧ್ಯಾನದಲ್ಲಿ ಮನಸ್ಸನ್ನು ಒಮ್ಮಖವಾಗಿ ಮಾಡಿಕೊಂಡು ನೋಡುವರೋ, ಯಾರ ಆಳವನ್ನು ದೇವತೆಗಳೂ, ರಾಕ್ಷಸರೂ, ಯಾರೂ ತಿಳಿಯರೋ, ಆ ದೇವನಿಗೆ ನಮಸ್ಕಾರ.
  • ಟಿಪ್ಪಣಿ $ : (೧ ವೇದ ಮಂತ್ರಗಳನ್ನು - ಪದ, ಕ್ರಮ, ಜಟೆ , ಘನ ಈ ವಿಶಿಷ್ಟ ವಿಧಾನದಲ್ಲಿ ಪಠಿಸುವರು)

[] []

ಉಲ್ಲೇಖಗಳು =

[ಬದಲಾಯಿಸಿ]
  1. ಭಗವದ್ಗೀತೆ -ಅನಾಸಕ್ತಿಯೊಗ -ಲೇ.ಗಾಂಧೀಜಿ;
  2. ಭಗವದ್ಗೀತೆ- ಗೀತಾ ಪ್ರೆಸ್ ಘೋರಕಪುರ.

ಉಲ್ಲೇಖ

[ಬದಲಾಯಿಸಿ]