ವಿಷಯಕ್ಕೆ ಹೋಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

, ಕನ್ನಡ ವರ್ಣಮಾಲೆಯ ಟ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ.

ಚಾರಿತ್ರಿಕ ಹಿನ್ನೆಲೆ

[ಬದಲಾಯಿಸಿ]

ಅಶೋಕನ ಕಾಲದಲ್ಲಿ ಅಟ್ಟದ ಮೆಟ್ಟಲಿನಂತಿದ್ದ ಈ ಅಕ್ಷರಕ್ಕೆ ಬಾಗು ಬಂದದ್ದು ಶಾತವಾಹನರ ಕಾಲದಲ್ಲಿ. ಆ ಬಾಗಿಗೆ ಹೊಕ್ಕಳು ಕಾಣಿಸಿಕೊಂಡುದು ಬಾದಾಮಿಚಾಳುಕ್ಯರ ಕಾಲದಲ್ಲಿ. ಕದಂಬರ ಕಾಲಕ್ಕಾಗಲೆ ಮೂಡಿದ ತಲೆಕಟ್ಟು ಖಚಿತವಾಗುತ್ತ ಹೋಗಿ ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಸ್ಪಷ್ಟವಾಯಿತು. ಅಕ್ಷರಕ್ಕೆ ಈಗಿನ ಸ್ವರೂಪ ಬರಹತ್ತಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ಸ್ವರೂಪವೇ ಈಗ ಮುಂದುವರಿಯುತ್ತಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡ&oldid=1246972" ಇಂದ ಪಡೆಯಲ್ಪಟ್ಟಿದೆ