ಡೇವಿಡ್ ಬೆಕ್‌ಹ್ಯಾಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಡೇವಿಡ್ ಬೆಕ್‌ಹ್ಯಾಮ್
David-Beckham3.jpg
Personal information
Full name David Robert Joseph Beckham
Date of birth (1975-05-02) ೨ ಮೇ ೧೯೭೫(ವಯಸ್ಸು ೪೧)
Place of birth Leytonstone, London, England
Height 6 ft 0 in (1.83 m)[೧]
Playing position Midfielder
Club information
Current club Los Angeles Galaxy
Number 23
Youth career
Brimsdown Rovers
1987–1991 Tottenham Hotspur
1991–1993 Manchester United
Senior career*
Years Team Apps (Gls)
1993–2003 Manchester United 265 (62)
1995 Preston North End (loan) 5 (2)
2003–2007 Real Madrid 116 (13)
2007– Los Angeles Galaxy 42 (7)
2009 Milan (loan) 18 (2)
National team
1994–1996 England U-21 9 (0)
1996– England 115 (17)
 • Senior club appearances and goals counted for the domestic league only and correct as of 02 November 2009.

† Appearances (Goals).

‡ National team caps and goals correct as of 24 October 2009

ಡೇವಿಡ್ ರಾಬರ್ಟ್‌ ಜೋಸೆಫ್‌ ಬೆಕ್‌ಹ್ಯಾಮ್ , OBE[೨] (೧೯೭೫ ಮೇ ೨ ಜನನ)[೩] ಒಬ್ಬ ಇಂಗ್ಲಿಷ್‌ ಫುಟ್‌ಬಾಲ್ ಆಟಗಾರ. ಮಿಡ್‌ಫೀಲ್ಡ್‌ನಲ್ಲಿ ಆಡುವ ಡೇವಿಡ್ ಬೆಕ್‌ಹ್ಯಾಮ್ ಪ್ರಸ್ತುತ ಅಮೆರಿಕಾಮೇಜರ್ ಲೀಗ್ ಸಾಕರ್‌‌ ಕ್ಲಬ್‌ ಲಾಸ್ ಎಂಜಲೀಸ್ ಗ್ಯಾಲಕ್ಸಿ[೪] ಮತ್ತು ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ.FIFA ವಿಶ್ವದ ವರ್ಷದ ಆಟಗಾರ[೫] ಸ್ಪರ್ಧೆಯಲ್ಲಿ ಎರಡು ಬಾರಿ ರನ್ನರ್ ಅಪ್‌ ಮತ್ತು 2004ರಲ್ಲಿ ವಿಶ್ವದಲ್ಲೇ ಅತ್ಯಂತ ಹೆಚ್ಚು ವೇತನ ಪಡೆದ ಫುಟ್‌ಬಾಲ್ ಆಟಗಾರನೆಂಬ [೬] ಹೆಗ್ಗಳಿಕೆಗೆ ಪಾತ್ರರಾಗಿರುವ ಬೆಕ್‌ಹ್ಯಾಮ್, 100 ಚಾಂಪಿಯನ್ ಲೀಗ್ ಪಂದ್ಯಗಳಲ್ಲಿ ಆಡಿದ ಮೊದಲ ಬ್ರಿಟೀಷ್ ಫುಟ್‌ಬಾಲ್ ಆಟಗಾರನೂ ಹೌದು.[೫] 2003 ಮತ್ತು 2004ನೇ ಸಾಲಿನಲ್ಲಿ ಗೂಗಲ್‌ ಜಾಲತಾಣದಲ್ಲಿ ಇತರಾವುದೇ ಕ್ರೀಡೆಗೆ ಹೋಲಿಸಿದರೆ "ಡೇವಿಡ್ ಬೆಕ್‌ಹ್ಯಾಮ್" ಅತ್ಯಂತ ಹೆಚ್ಚು ಬಾರಿ ಹುಡುಕಲ್ಪಟ್ಟ ಆಟಗಾರ.[೭] ಹೀಗೆ ಜಾಗತಿಕವಾಗಿ ಗುರುತಿಸಿಕೊಂಡಿದ್ದರಿಂದಾಗಿ ಬೆಕ್‌ಹ್ಯಾಮ್ ಜಾಹೀರಾತು ಬ್ರ್ಯಾಂಡ್ ಮತ್ತು ಅಗ್ರ ಫ್ಯಾಷನ್ ಐಕಾನ್ ಆಗಿ ಪರಿವರ್ತನೆಯಾದರು.[೮][೯] 2000[೧೦], ನವೆಂಬರ್ 15ರಿಂದ 2006 FIFA ವಿಶ್ವ ಕಪ್‌ ಅಂತಿಮ ಪಂದ್ಯದವರೆಗೆ[೧೧] ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಬೆಕ್‌ಹ್ಯಾಮ್, ಈ ಅವಧಿಯಲ್ಲಿ 58 ಪಂದ್ಯಗಳಲ್ಲಿ ಆಡಿದ್ದಾರೆ. ಅಂದಿನಿಂದ ಶುರುವಾಗಿ ಇಂದಿನವರೆಗೂ ದೇಶವನ್ನು ಪ್ರತಿನಿಧಿಸುವುದನ್ನು ಬೆಕ್‌ಹ್ಯಾಮ್ ಮುಂದುವರಿಸಿದ್ದಾರೆ. 2008 ಮಾರ್ಚ್ 26ರಂದು ಫ್ರಾನ್ಸ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬೆಕ್‌ಹ್ಯಾಮ್ ಪ್ರತಿನಿಧಿಸಿದರು. ಬೆಕ್ಹಾಂಗೆ ಇದು ನೂರನೇ ಪಂದ್ಯವಾದ ಕಾರಣ ಈ ಪಂದ್ಯಕ್ಕೆ ಭಾರಿ ಪ್ರಚಾರವೂ ದೊರೆತಿತ್ತು.[೧೨] ಇಂಗ್ಲೆಂಡ್ ತಂಡಕ್ಕಾಗಿ ಅತ್ಯಂತ ಹೆಚ್ಚು ಬಾರಿ ಆಡಿದ ದಾಖಲೆ ಬೆಕ್‌ಹ್ಯಾಮ್ ಹೆಸರಲ್ಲಿದ್ದು, 115 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.[೧೩]ಮ್ಯಾಂಚೆಸ್ಟರ್ ಯುನೈಟೆಡ್ ಜೊತೆ ವೃತ್ತಿಪರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಬೆಕ್‌ಹ್ಯಾಮ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು, 1992ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ಚೊಚ್ಚಲ ಪಂದ್ಯ ಆಡಿದ್ದು ಅವರ ಹೆಗ್ಗಳಿಕೆ.[೫] ಬೆಕ್‌ಹ್ಯಾಮ್ ಉಪಸ್ಥಿತಿಯಲ್ಲಿ ಯುನೈಟೆಡ್ ತಂಡ ಆರು ಬಾರಿ ಪ್ರೀಮಿಯರ್ ಲೀಗ್, ಎರಡು ಬಾರಿ FA ಕಪ್, ಮತ್ತು 1999ರಲ್ಲಿ UEFA ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯನ್ನು ಗೆದ್ದುಕೊಂಡಿತು.[೫] 2003ರಲ್ಲಿ ರಿಯಲ್ ಮ್ಯಾಡ್ರಿಡ್‌ ತಂಡದೊಂದಿಗೆ ಕರಾರು ಮಾಡಿಕೊಳ್ಳುವ ಸಲುವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಬೆಕ್‌ಹ್ಯಾಮ್ ತೊರೆದರು. ನಂತರದ ನಾಲ್ಕು ಸೀಸನ್‌ [೧೪] ರಿಯಲ್ ಮ್ಯಾಡ್ರಿಡ್ ತಂಡದಲ್ಲಿ ಆಡಿದರು, ಅಲ್ಲದೆ ಅವರು ತಂಡದಲ್ಲಿದ್ದ ಕೊನೆಯ ವರ್ಷ ಲಾ ಲೀಗಾ ಚಾಂಪಿಯನ್‌ಶಿಪ್‌ಅನ್ನು ರಿಯಲ್ ಮ್ಯಾಡ್ರಿಡ್‌ ಗೆದ್ದುಕೊಂಡಿತು.[೧೫]ಬೆಕ್‌ಹ್ಯಾಮ್ ಅವರು ರಿಯಲ್ ಮ್ಯಾಡ್ರಿಡ್‌‌ ತಂಡವನ್ನು ತೊರೆದು ಮೇಜರ್ ಲೀಗ್ ಸಾಕರ್‌‌ ಕ್ಲಬ್ ಲಾಸ್ ಎಂಜಲೀಸ್ ಗ್ಯಾಲಕ್ಸಿಯೊಂದಿಗೆ ಐದು ವರ್ಷಗಳ ಕರಾರಿಗೆ ಸಹಿ ಹಾಕುತ್ತಿದ್ದಾರೆಂದು 2007 ಜನವರಿಯಲ್ಲಿ ಘೋಷಿಸಲಾಯಿತು.[೧೬] ಲಾಸ್ ಎಂಜಲೀಸ್ ಗ್ಯಾಲಕ್ಸಿ ಜೊತೆಗಿನ ಬೆಕ್‌ಹ್ಯಾಮ್‌‌ ಕರಾರು 2007 ಜುಲೈ 1ರಂದು ಕಾರ್ಯರೂಪಕ್ಕೆ ಬಂತು, ಗ್ಯಾಲಕ್ಸಿಯು ಬೆಕ್‌ಹ್ಯಾಮ್‌ಗೆ MLS ಇತಿಹಾಸದಲ್ಲೇ ಅತ್ಯಂತ ಹೆಚ್ಚು ವೇತನವನ್ನು ನೀಡಿತು.[೧೭] 2007, 2008 ಮತ್ತು 2009ರಲ್ಲಿ ಗ್ಯಾಲಕ್ಸಿ ತಂಡಕ್ಕೆ ಬೆಕ್‌ಹ್ಯಾಮ್ ಆಡುವ ಕರಾರಿನ ಮೌಲ್ಯ ವರ್ಷಕ್ಕೆ $6.5m.[೧೮][೧೯][೨೦] 2007 ಜುಲೈ 21ರಂದು ದಿ ಹೋಮ್ ಡೆಪಾಟ್ ಸೆಂಟರ್‌‌[೨೧]‌ನಲ್ಲಿ ಚೆಲ್ಸಿಯಾ ತಂಡದ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದರು, ಇದು ಸ್ನೇಹಿ ಪಂದ್ಯವಾಗಿತ್ತು. ಅಗಸ್ಟ್ 15ರಂದು ಅಧಿಕೃತ ತಂಡದೊಂದಿಗೆ ಮೊದಲ ಬಾರಿ ಮೈದಾನಕ್ಕಿಳಿದ ಬೆಕ್‌ಹ್ಯಾಮ್ 2007 ಸೂಪರ್‌ಲೀಗಾ ಸೆಮಿ-ಫೈನಲ್ ಪಂದ್ಯದಲ್ಲಿ ಚೊಚ್ಚಲ ಗೋಲು ಹೊಡೆದರು.[೨೨]ಅಗಸ್ಟ್ 18ರಂದು ಜಿಯಾಂಟ್ಸ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ಬೆಕ್‌ಹ್ಯಾಮ್ ಮೊದಲ ಲೀಗ್ ಪಂದ್ಯವನ್ನಾಡಿದರು.[೨೩]ನಂತರದ ದಿನಗಳಲ್ಲಿ ಮಾಜಿ ಸ್ಪೈಸ್ ಹುಡುಗಿ ವಿಕ್ಟೋರಿಯಾ ಬೆಕ್‌ಹ್ಯಾಮ್ (ನೀ ಆಡಮ್ಸ್)ರನ್ನು ಬೆಕ್‌ಹ್ಯಾಮ್‌ ವಿವಾಹವಾದರು.[೨೪] ಮೂವರು ಪುತ್ರರನ್ನು ಪಡೆದಿರುವ ಬೆಕ್‌ಹ್ಯಾಮ್ ದಂಪತಿಗಳು ಪ್ರಸ್ತುತ ಕ್ಯಾಲಿಫೋರ್ನಿಯಾದ ಬೇವರ್ಲಿ ಹಿಲ್ಸ್‌ನಲ್ಲಿ ವಾಸಿಸುತ್ತಿದ್ದಾರೆ.

ಪರಿವಿಡಿ

ಕ್ಲಬ್ ವೃತ್ತಿ[ಬದಲಾಯಿಸಿ]

ಬಾಲ್ಯ ಮತ್ತು ಆರಂಭಿಕ ವೃತ್ತಿ[ಬದಲಾಯಿಸಿ]

ಬೆಕ್‌ಹ್ಯಾಮ್ ಲಿಟಾನ್‌ಸ್ಟೋನ್‌‌ವಿಪ್ಸ್ ಕ್ರಾಸ್ ಯುನಿವರ್ಸಿಟಿ ಹಾಸ್ಪಿಟಲ್‌ನಲ್ಲಿ ಜನಿಸಿದರು, ಈ ಸ್ಥಳ ಇಂಗ್ಲೆಂಡ್‌ನ ಲಂಡನ್‌ನಲ್ಲಿದೆ.[೨೫] ಅವರ ತಂದೆ ಡೇವಿಡ್ ಎಡ್ವರ್ಡ್ ಅಲನ್ "ಟೆಡ್" ಬೆಕ್‌ಹ್ಯಾಮ್ (ಬಿ. ಎಡ್ಮಂಟನ್, ಲಂಡನ್, ಜುಲೈ–ಸೆಪ್ಟೆಂಬರ್ 1948), ಒಬ್ಬ ಅಡುಗೆ ವಿನ್ಯಾಸಕ ಮತ್ತು ತಾಯಿ (ಎಂ. ಲಂಡನ್ ಬರೌಫ್ ಆಫ್ ಹಾಕ್ನೇಯ್, 1969)[೨೬] ಸಂದ್ರಾ ಜಾರ್ಜಿಯಾ ವೆಸ್ಟ್ (ಬಿ. 1949)ರದ್ದು [೨೭] ಕೇಶ ಶೃಂಗಾರ ವೃತ್ತಿ. ಬಾಲ್ಯದಲ್ಲಿ ಚಿಂಗ್‌ಫೋರ್ಡ್‌ನ ರಿಡ್ಜ್‌ವೇ ಪಾರ್ಕಿನಲ್ಲಿ ದಿನನಿತ್ಯ ಫುಟ್‌ಬಾಲ್ ಆಡುತ್ತಿದ್ದ ಬೆಕ್‌ಹ್ಯಾಮ್, ಓದಿದ್ದು ಚೇಸ್ ಲೇನ್ ಪ್ರಾಥಮಿಕ ಶಾಲೆ ಮತ್ತು ಚಿಂಗ್‌ಫೋರ್ಡ್‌ ಫೌಂಡೇಷನ್ ಶಾಲೆಯಲ್ಲಿ. 2007ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಬೆಕ್‌ಹ್ಯಾಮ್ ಹೀಗೆ ಹೇಳಿದ್ದಾರೆ, "ನೀನು ದೊಡ್ಡವನಾದಾಗ ಏನು ಮಾಡಬೇಕೆಂದು ಬಯಸಿದ್ದೀ ಎಂದು ಶಾಲೆಯಲ್ಲಿ ಅಧ್ಯಾಪಕರು ಕೇಳಿದಾಗಲೆಲ್ಲಾ , ಫುಟ್‌ಬಾಲ್ ಆಟಗಾರನಾಗುವುದಾಗಿ ನಾನು ಉತ್ತರಿಸುತ್ತಿದ್ದೆ. ಇಲ್ಲ, ನಿಜವಾಗಿಯೂ ನೀನು ಏನು ಮಾಡಬೇಕೆಂದು ಬಯಸಿದ್ದಿ.. ಉದ್ಯೋಗ ದೃಷ್ಟಿಯಲ್ಲಿ? ಎಂದು ಅವರು ಮರು ಪ್ರಶ್ನೆ ಹಾಕುತ್ತಿದ್ದರು. ಆದರೆ ನಾನು ಯಾವತ್ತೂ ಫುಟ್‌ಬಾಲ್ ಆಟಗಾರನಾಗಲು ಮಾತ್ರ ಬಯಸಿದ್ದೆ." [೨೮] ತಾಯಿಯ ತಂದೆ(ತಾತ) ಯಹೂದಿ,[೨೯] ಆದ್ದರಿಂದ ತಾವು ಕೂಡ "ಅರ್ಧ ಯಹೂದಿ"[೩೦] ಯೆಂದು ಬಣ್ಣಿಸಿರುವ ಬೆಕ್‌ಹ್ಯಾಮ್‌, ತಮ್ಮ ಮಾತುಗಳಲ್ಲಿ ಯಹೂದಿ ಧರ್ಮದ ಪ್ರಭಾವವಿದೆ ಎಂದಿದ್ದಾರೆ. ಬಾಲ್ಯದಲ್ಲಿ ಹೆತ್ತವರು ಮತ್ತು ಇಬ್ಬರು ಸಹೋದರಿಯರಾದ ಜೋನ್ನೆ ಮತ್ತು ಲಿನ್ನೆ ಜೊತೆ ನಿಯತವಾಗಿ ಚರ್ಚ್‌ಗೆ ಹೋಗುತ್ತಿದ್ದುದಾಗಿ ಬೋತ್ ಫೀಟ್ ಆನ್ ದಿ ಗ್ರೌಂಡ್ ಪುಸ್ತಕದಲ್ಲಿ ಬೆಕ್‌ಹ್ಯಾಮ್ ಹೇಳಿಕೊಂಡಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಕಟ್ಟಾ ಅಭಿಮಾನಿಗಳಾಗಿದ್ದ ಬೆಕ್‌ಹ್ಯಾಮ್ ಹೆತ್ತವರು, ಅತಿಥೇಯ ತಂಡದ ಪಂದ್ಯಗಳನ್ನು ನೋಡಲೆಂದೇ ಲಂಡನ್‌ನಿಂದ ಓಲ್ಡ್ ಟ್ರಾಫರ್ಡ್‌ಗೆ ಪ್ರಯಾಣಿಸುತ್ತಿದ್ದರಂತೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮೇಲೆ ಹೆತ್ತವರಿಗಿದ್ದ ಪ್ರೀತಿ ಸಹಜವಾಗಿಯೇ ಡೇವಿಡ್‌ಗೂ ಬಂದಿತ್ತು, ಮತ್ತು ಕ್ರಮೇಣವಾಗಿ ಫುಟ್‌ಬಾಲ್ ಆತನ ನೆಚ್ಚಿನ ಆಟವಾಯಿತು. ಬಳಿಕ ಮ್ಯಾಂಚೆಸ್ಟರ್‌ನಲ್ಲಿರುವ ಬಾಬಿ ಚಾರ್ಲ್ಟನ್‌ ನಡೆಸುವ ಫುಟ್‌ಬಾಲ್ ಶಾಲೆಯೊಂದಕ್ಕೆ ಬೆಕ್‌ಹ್ಯಾಮ್ ಸೇರಿದರು, ಅಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಗೆದ್ದು FC ಬಾರ್ಸಿಲೋನಾದಲ್ಲಿ ನಡೆಯುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆದರು. ರಿಡ್ಜ್ ವೇ ರೋವರ್ಸ್ ಎಂಬ ಸ್ಥಳೀಯ ಯವಕರ ತಂಡದಲ್ಲಿ ಬೆಕ್‌ಹ್ಯಾಮ್ ಆಡಿದರು. ಸ್ಟುವರ್ಟ್ ಅಂಡರ್‌ವುಡ್, ಸ್ಟೀವ್ ಕಿರ್ಬಿ ಮತ್ತು ಬೆಕ್‌ಹ್ಯಾಮ್ ತಂದೆ ಈ ತಂಡದ ತರಬೇತುದಾರರಾಗಿದ್ದರು. 1986ರಲ್ಲಿ ವೆಸ್ಟ್‌ಹ್ಯಾಮ್ ಯುನೈಟೆಡ್‌ ವಿರುದ್ದ ನಡೆದ ಪಂದ್ಯದಲ್ಲಿ ಬೆಕ್‌ಹ್ಯಾಮ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಆಕರ್ಷಣೆಯ ಕೇಂದ್ರವಾಗಿದ್ದರು. ಬಳಿಕ ಸ್ಥಳೀಯ ಕ್ಲಬ್‌ಗಳಾದ ಲೀಟನ್ ಒರಿಯಂಟ್‌, ನಾರ್ವಿಚ್ ಸಿಟಿ‌ಯಲ್ಲಿ ಅಭ್ಯಾಸ ನಡೆಸಿದರು, ಮತ್ತು ಘನತೆವೆತ್ತ ಟೊಟೆನ್‌ಹ್ಯಾಮ್ ಹಾಟ್ಸ್‌ಪರ್ ಶಾಲೆಗೂ ತೆರಳಿದರು. ಟೊಟೆನ್‌ಹ್ಯಾಮ್ ಹಾಟ್ಸ್‌ಪುರ್ ಅವರಾಡಿದ ಮೊದಲ ಕ್ಲಬ್. ಅಲ್ಲಿದ್ದ ಎರಡು ವರ್ಷಗಳ ಅವಧಿಯಲ್ಲಿ ಬೆಕ್‌ಹ್ಯಾಮ್ ಬ್ರಿಮ್ಸ್‌ಡೌನ್ ರೋವರ್ಸ್ ಯುವಕರ ತಂಡದಲ್ಲಿ ಆಡಿದರು. 1990ರಲ್ಲಿ 15 ವರ್ಷಕ್ಕಿಂತ ಕೆಳಗಿನ ಆಟಗಾರರ ವಿಭಾಗದಲ್ಲಿ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದರು.[೩೧] ನಂತರ ಬ್ರಡೆನ್ಟನ್ ಪ್ರಿಪರೇಟರಿ ಅಕಾಡೆಮಿಯಲ್ಲಿ ಅಭ್ಯಾಸ ಕೈಗೊಂಡರು, ಆದರೆ ತಮ್ಮ ಹದಿನಾಲ್ಕನೇ ಹುಟ್ಟುಹಬ್ಬದ ದಿನ ಮ್ಯಾಂಚೆಸ್ಟರ್ ಯುನೈಟೆಡ್‌ನಲ್ಲಿ ಶಾಲಾ ದಾಖಲಾತಿ ಅರ್ಜಿಗಳಿಗೆ ಸಹಿ ಹಾಕಿದರು, ತರುವಾಯ 1991 ಜುಲೈ 8ರಂದು ಯೂತ್ ಟ್ರೇನಿಂಗ್‌ ಸ್ಕೀಮ್‌ ಗುತ್ತಿಗೆಗೆ ಸಹಿ ಹಾಕಿದರು.

ಮ್ಯಾಂಚೆಸ್ಟರ್‌ ಯುನೈಟೆಡ್‌ F.C.[ಬದಲಾಯಿಸಿ]

1992ರಲ್ಲಿ ಮ್ಯಾಂಚೆಸ್ಟರ್‌ ಯುನೈಟೆಡ್‌‌ಗೆ FA ಯೂತ್ ಕಪ್‌ ಗೆದ್ದುಕೊಟ್ಟ ಕ್ಲಬ್‌ನ ಯುವ ತಂಡದ ಸದಸ್ಯರ ಪೈಕಿ ಬೆಕ್‌ಹ್ಯಾಮ್ ಕೂಡ ಒಬ್ಬರು, ಕ್ರೈಸ್ಟಲ್ ಪ್ಯಾಲೇಸ್‌ ವಿರುದ್ಧ ನಡೆದ ಫೈನಲ್ ಪಂದ್ಯದ ಉತ್ತರಾರ್ಧದ[೩೨] ಆಟದಲ್ಲಿ ಬೆಕ್‌ಹ್ಯಾಮ್ ಗೋಲು ಹೊಡೆದು ತಂಡದ ವಿಜಯಕ್ಕೆ ಕಾರಣರಾದರು. ಅದೇ ವರ್ಷ ಬ್ರೈಟನ್ & ಹೊವ್ ಅಲ್ಬಿಯಾನ್ ತಂಡದ ವಿರುದ್ಧ ನಡೆದ ಲೀಗ್ ಕಪ್‌ ಪಂದ್ಯದಲ್ಲಿ ಯುನೈಟೆಡ್‌ನ ಮೊದಲ ತಂಡದಲ್ಲಿ ಬದಲಿ ಆಟಗಾರನಾಗಿ ಆಡಿದರು. ನಂತರದ ಕೆಲವೇ ದಿನಗಳಲ್ಲಿ ಮೊದಲ ವೃತ್ತಿಪರ ಕರಾರಿಗೆ ಸಹಿ ಹಾಕಿದರು. ಮರುವರ್ಷವೂ ಯುನೈಟೆಡ್ ತಂಡ ಯೂತ್ ಕಪ್ ‌ಪಂದ್ಯಾವಳಿಯ ಫೈನಲ್ ತಲುಪಿತು, ಆದರೆ ಬೆಕ್‌ಹ್ಯಾಮ್ ತಂಡದಲ್ಲಿದ್ದೂ ಲೀಡ್ಸ್ ಯುನೈಟೆಡ್ ವಿರುದ್ಧ ಸೋತಿತು, ಆದರೆ 1994ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌‌ನ ಮೀಸಲು ತಂಡ ಲೀಗ್ ಪಂದ್ಯಾವಳಿಯನ್ನು ಗೆದ್ದುಕೊಂಡಾಗ ಇನ್ನೊಂದು ಪದಕ ಬೆಕ್‌ಹ್ಯಾಮ್ ಮುಡಿಗೇರಿತು. 1994 ಡಿಸೆಂಬರ್ 7ರಂದು ಬೆಕ್‌ಹ್ಯಾಮ್ UEFA ಚಾಂಪಿಯನ್ಸ್ ಲೀಗ್‌ನಲ್ಲಿ ಮೊದಲ ಬಾರಿಗೆ ಆಡಿದರು, ಗುಂಪಿನ ಹಂತದ ಅಂತಿಮ ಹಣಾಹಣಿಯಲ್ಲಿ ಗೋಲು ಹೊಡೆದು ಗಲಟಸರಾಯ್‌‌ ತಂಡವನ್ನು 4–0ರಿಂದ ಮಣಿಸಿದರು. ಆದರೆ ಈ ವಿಜಯ ಕ್ಷಣಿಕವಾಗಿತ್ತು, ಏಕೆಂದರೆ ಪಂದ್ಯಾವಳಿಯಲ್ಲಿ ಪಾಲ್ಗೊಂಡ ನಾಲ್ಕು ತಂಡಗಳ ಪೈಕಿ ಮ್ಯಾಂಚೆಸ್ಟರ್ ಯುನೈಟೆಡ್ ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಗೋಲುಗಳಲ್ಲಿನ ವ್ಯತ್ಯಾಸದಿಂದಾಗಿ ದ್ವಿತೀಯ ಸ್ಥಾನ FC ಬಾರ್ಸಿಲೋನಾ ಪಾಲಾಯಿತು.ಸಾಂಘಿಕ ಆಟದ ಮೊದಲ ಹಂತದ ಅನುಭವ ಪಡೆಯುವುದಕ್ಕಾಗಿ 1994–95 ಸೀಸನ್‌‌ನಲ್ಲಿ ಆಡಲೆಂದು ಎರವಲು ಮೇಲೆ ಬೆಕ್‌ಹ್ಯಾಮ್‌ ಪ್ರಿಸ್ಟನ್ ನಾರ್ಥ್ ಎಂಡ್‌ಗೆ ತೆರಳಿದರು. ತಾವಾಡಿದ ಐದು ಪಂದ್ಯಗಳಲ್ಲಿ ಎರಡು ಗೋಲು ಬಾರಿಸಿ ಗಮನ ಸೆಳೆದರು, ಅದರಲ್ಲೂ ಕಾರ್ನರ್ ಕಿಕ್‌ನಿಂದ ನೇರವಾಗಿ ಹೊಡೆದ ಗೋಲು ಗಮನಾರ್ಹವಾಗಿತ್ತು.[೩೩] ನಂತರ ಬೆಕ್‌ಹ್ಯಾಮ್ ಮ್ಯಾಂಚೆಸ್ಟರ್‌ಗೆ ವಾಪಸಾದರು. 1995 ಎಪ್ರಿಲ್ 2ರಲ್ಲಿ ಬೆಕ್‌ಹ್ಯಾಮ್‌ಗೆ ಕೊನೆಗೂ ಮ್ಯಾಂಚೆಸ್ಟರ್ ಯುನೈಟೆಡ್ ಪರ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಸುಯೋಗ ಕೂಡಿ ಬಂತು. ಇದು ಬೆಕ್‌ಹ್ಯಾಮ್‌ಗೆ ಪ್ರೀಮಿಯರ್ ಲೀಗ್ ಚೊಚ್ಚಲ ಪಂದ್ಯವೂ ಹೌದು, ಆದರೆ ಲೀಡ್ಸ್ ಯುನೈಟೆಡ್‌ ವಿರುದ್ಧ ನಡೆದ ಈ ಪಂದ್ಯ ಯಾವುದೇ ಗೋಲುಗಳಿಲ್ಲದೆ ಡ್ರಾದೊಂದಿಗೆ ನೀರಸವಾಗಿ ಮುಕ್ತಾಯ ಕಂಡಿತ್ತು. ಯುನೈಟೆಡ್‌ ತಂಡದ ಯುವ ಆಟಗಾರರ ಬಗ್ಗೆ ವ್ಯವಸ್ಥಾಪಕ ಸರ್ ಅಲೆಕ್ಸ್ ಫರ್ಗುಸನ್‌ ಭಾರಿ ಆತ್ಮವಿಶ್ವಾಸ ಹೊಂದಿದ್ದರು. 1990ರಲ್ಲಿ ಯುನೈಟೆಡ್ ತಂಡಕ್ಕೆ ಫರ್ಗುಸನ್ ಸೇರ್ಪಡೆ ಮಾಡಿದ ಯುವ ಪ್ರತಿಭೆಗಳ ಪೈಕಿ ಬೆಕ್‌ಹ್ಯಾಮ್ ಕೂಡ ಒಬ್ಬರು("ಫರ್ಗೀಸ್ ಮರಿಹಕ್ಕಿಗಳೆಂದೇ ಖ್ಯಾತಿ"), ಈ ತಂಡದಲ್ಲಿ ನಿಖಿ ಬಟ್, ಗ್ಯಾರಿ ಮತ್ತು ಫಿಲ್ ನೆವಿಲ್ಲೆಯಂತಹ ಪ್ರತಿಭೆಗಳಿದ್ದರು. 1994–95 ಸೀಸನ್‌ ಮುಗಿದ ನಂತರ ಪೌಲ್ ಇನ್ಸ್, ಮಾರ್ಕ್ ಹಗ್ಸ್, ಮತ್ತು ಆಂಡ್ರೆಯೇ ಕ್ಯಾಂಟೆಲ್ಸ್ಕಿಸ್‌ ರಂತಹ ಅನುಭವಿ ಆಟಗಾರರು ಕ್ಲಬ್‌ಅನ್ನು ತೊರೆದಾಗ, ಇತರೆ ಕ್ಲಬ್‌ಗಳಿಂದ ತಾರಾ ವರ್ಚಸ್ಸಿನ ಆಟಗಾರರನ್ನು ಖರೀದಿಸುವ ಬದಲು ಯುವ ಆಟಗಾರರನ್ನೇ ಮೈದಾನಕ್ಕಿಳಿಸಲು ಫರ್ಗುಸನ್ ತೀರ್ಮಾನಿಸಿದ್ದರು.(ಡರ್ರೇನ್ ಆಂಡರ್ಟನ್, ಮಾರ್ಕ್ ಓವರ್‌ಮಾರ್ಸ್, ಮತ್ತು ರಾಬರ್ಟ್ ಬ್ಯಾಗಿಯೋ ಮೊದಲಾದವರನ್ನು ಯುನೈಟೆಡ್ ಖರೀದಿಸಲಿದೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು, ಆದರೆ ಆ ಬೇಸಿಗೆಯಲ್ಲಿ ಯಾವುದೇ ಪ್ರಮುಖ ಗುತ್ತಿಗೆಗಳು ನಡೆಯಲಿಲ್ಲ). ಫರ್ಗುಸನ್ ಅವರ ಈ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಯಿತು. ಕ್ರೀಡಾ ಸೀಸನ್‌‌ನ ಆರಂಭದಲ್ಲೇ ಯುನೈಟೆಡ್ ತಂಡ ಅಸ್ಟನ್ ವಿಲ್ಲಾ[೩೪] ಎದುರು 3–1ರಿಂದ ಸೋತಾಗ ಟೀಕೆಗಳು ಇನ್ನೂ ಹೆಚ್ಚಿದವು, ಈ ಪಂದ್ಯದಲ್ಲಿ ಯುನೈಟೆಡ್ ಪರ ಬಂದಿದ್ದ ಏಕೈಕ ಗೋಲನ್ನು ಬೆಕ್‌ಹ್ಯಾಮ್ ಹೊಡೆದಿದ್ದರು; ಆದರೆ ಯುವ ಆಟಗಾರರು ಉತ್ತಮವಾಗಿ ಆಡಿದ ಫಲವಾಗಿ ಯುನೈಟೆಡ್ ತಂಡ ನಂತರದ ಐದು ಪಂದ್ಯಗಳನ್ನು ಗೆದ್ದಿತು. ಬೆಕ್‌ಹ್ಯಾಮ್ ಬಲುಬೇಗನೆ ಯುನೈಟೆಡ್ ತಂಡದ ಬಲ-ಬದಿಯ ಮಿಡ್‌ಫೀಲ್ಡರ್ ಆಗಿ ಗುರುತಿಸಿಕೊಂಡರು (ಮುಂಚೂಣಿಯಲ್ಲಿ ಆಡುತ್ತಿದ್ದ ಆಂಡ್ರೆಯೇ ಕ್ಯಾಂಟೆಲ್ಸ್ಕಿಸ್ ಸ್ಥಾನದಲ್ಲಿ). ಯುನೈಟೆಡ್ ತಂಡ ಪ್ರೀಮಿಯರ್ ಲೀಗ್ ಪ್ರಶಸ್ತಿ ಮತ್ತು ಆ ಸೀಸನ್‌ನಲ್ಲಿ ಎರಡು ಬಾರಿ FA ಕಪ್‌ ಗೆಲ್ಲುವಲ್ಲಿ ಬೆಕ್‌ಹ್ಯಾಮ್ ಪ್ರಮುಖ ಪಾತ್ರವಹಿಸಿದರು. ಚೆಲ್ಸಿಯಾ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ ಬೆಕ್‌ಹ್ಯಾಮ್ ವಿಜಯೀ ಗೋಲನ್ನು ಬಾರಿಸಿದರೆ, FA ಕಪ್‌ ಫೈನಲ್‌ ಪಂದ್ಯದಲ್ಲಿ ಎರಿಕ್ ಕ್ಯಾಂಟೊನಾ ಒಂದು ಮೂಲೆಯಿಂದ ಗೋಲು ಹೊಡೆಯಲು ಕಾರಣೀಭೂತರಾದರು. ಹೊಸ ವರ್ಷದ ತಿರುವಿನಲ್ಲಿ ಆದಾಗಲೇ ನ್ಯೂಕ್ಯಾಸ್ಟಲ್ ಯುನೈಟೆಡ್‌ ಮುಂಚೂಣಿಯಲ್ಲಿತ್ತು. ಯುನೈಟೆಡ್‌ ತಂಡ ಕೇವಲ 10 ಅಂಕಗಳನ್ನು ಮಾತ್ರ ಹೊಂದಿತ್ತು. ಬೆಕ್‌ಹ್ಯಾಮ್ ಮಾಡಿದ ಸಾಧನೆಯನ್ನೇ ಮರುಕಳಿಸುವಂತೆ ಮಾಡುವುದು ಈ ಹೊತ್ತಿನಲ್ಲಿ ಅಸಂಭವ ಎಂದೇ ಭಾವಿಸಲಾಗಿತ್ತು, ಆದರೆ ಬೆಕ್‌ಹ್ಯಾಮ್ ಮತ್ತು ತಂಡದ ಸಹ ಆಟಗಾರರು ಮಾರ್ಚ್ ಮಧ್ಯದ ವೇಳೆಗೆ ಲೀಗ್ ಪಂದ್ಯಾವಳಿಯ ಅಂತಿಮ ಹಂತದಲ್ಲಿ ಟೈನ್‌ಸೈಡರ್ ತಂಡವನ್ನು ಸ್ಥಾನಪಲ್ಲಟಗೊಳಿಸಿ ಕ್ರೀಡಾ ಸೀಸನ್‌ ಮುಗಿಯುವವರೆಗೂ ಅಗ್ರ ಸ್ಥಾನವನ್ನು ಕಾಯ್ದುಕೊಂಡರು.ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಬೆಕ್‌ಹ್ಯಾಮ್‌ ನಿಯತವಾಗಿ ಆಡುತ್ತಿದ್ದರೂ (ಉನ್ನತ ಗುಣಮಟ್ಟದ ಜೊತೆಗೆ ಸ್ಥಿರವಾಗಿ) ಯುರೋ 96ಗಿಂತ ಮೊದಲು ಇಂಗ್ಲೆಂಡ್ ತಂಡಕ್ಕೆ ಸೇರಿಕೊಳ್ಳಲು ಸಾಧ್ಯವಾಗಲಿಲ್ಲ.[೩೫]1996–97 ಸೀಸನ್‌ನ ಆರಂಭದಲ್ಲಿ ಡೇವಿಡ್ ಬೆಕ್‌ಹ್ಯಾಮ್‌ಗೆ ೧೦ ಸಂಖ್ಯೆಯ ಅಂಗಿಯನ್ನು ಕೊಡಮಾಡಲಾಗಿತ್ತು, ಇದೇ ಸಂಖ್ಯೆಯ ಅಂಗಿಯನ್ನು ಇತ್ತೀಚೆಗೆ ಮಾರ್ಕ್ ಹಗ್ಸ್ ಧರಿಸಿದ್ದು ಇಲ್ಲಿ ಗಮನಾರ್ಹ. 1996 ಅಗಸ್ಟ್ 17 ಬೆಕ್‌ಹ್ಯಾಮ್ ಜೀವನದಲ್ಲಿ ಮರೆಯಲಾರದ ದಿನ (ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಆರಂಭದ ದಿನವದು). ವಿಂಬ್ಲೆಡನ್ ವಿರುದ್ಧದ ಪಂದ್ಯದಲ್ಲಿ ಬೆಕ್‌ಹ್ಯಾಮ್ ಅಭೂತಪೂರ್ವ ಗೋಲು ದಾಖಲಿಸಿದಾಗ ಜಗತ್ತಿನಾದ್ಯಂತ ಮನೆಮಾತಾದರು. ಆ ರೋಚಕ ಕ್ಷಣಗಳು ಹೀಗಿವೆ; ಯುನೈಟೆಡ್ ತಂಡ 2–0ಯೊಂದಿಗೆ ಮುನ್ನಡೆಯಲ್ಲಿದ್ದಾಗ, ವಿಂಬ್ಲೆಡನ್ ತಂಡದ ಗೋಲುಕೀಪರ್ ನೇಲ್ ಸುಲ್ಲೀವನ್ ಗೋಲು ಕಂಬದಿಂದ ಸಾಕಷ್ಟು ದೂರದಲ್ಲಿರುವುದನ್ನು ಗಮನಿಸಿದ ಬೆಕ್‌ಹ್ಯಾಮ್, ಮಿಂಚಿನಂತೆ ಕಾರ್ಯಪ್ರವೃತ್ತರಾಗಿ ಚೆಂಡನ್ನು ಸಾಗಿಸುತ್ತಾ ಮುನ್ನಡೆದು ಅರ್ಧದಾರಿಯಲ್ಲೇ ಚೆಂಡನ್ನು ಬೂಟಿನಿಂದ ಬಲವಾಗಿ ಒದೆದರು, ಅದು ಗೋಲುಕೀಪರ್ ತಲೆ ಮೇಲಿಂದ ಹೋಗಿ ಗೋಲು ಕಂಬದ ಬಲೆಗೆ ಬಿದ್ದಿತು.[೩೬] ಬೆಕ್‌ಹ್ಯಾಮ್ ಈ ಅವಿಸ್ಮರಣೀಯ ಗೋಲು ಹೊಡೆದಾಗ ಅವರು ಚಾರ್ಲಿ ಮಿಲ್ಲರ್(ಬೂಟುಗಳ ಮೇಲೆ "ಚಾರ್ಲಿ" ಕಸೂತಿ)ಗೆಂದೇ ಮಾಡಿಸಿದ್ದ ಬೂಟನ್ನು ಧರಿಸಿದ್ದರು, ಆದರೆ ಆ ಬೂಟು ಪಂದ್ಯದ ಮೊದಲು ಆಕಸ್ಮಿಕವಾಗಿ ಬೆಕ್‌ಹ್ಯಾಮ್‌ ಕೈಸೇರಿತ್ತು.[೩೭] 1996–97 ಸೀಸನ್‌ನ ಸಂದರ್ಭದಲ್ಲಿ, ಪ್ರೀಮಿಯರ್ ಲೀಗ್ ಚಾಂಪಿಯನ್‌ಶಿಪ್‌ಗೆ ಯುನೈಟೆಡ್ ತಂಡವನ್ನು ಆಯ್ಕೆ ಮಾಡುವಾಗ ಬೆಕ್‌ಹ್ಯಾಮ್ ಸಹಜವಾಗಿ ಮೊದಲ ಆಯ್ಕೆ ಆಗಿದ್ದರು, ಮತ್ತು ಬ್ರಿಟನ್ನಿನ ವರಿಷ್ಠರು PFA ವರ್ಷದ ಯುವ ಆಟಗಾರ ಪ್ರಶಸ್ತಿ ನೀಡಿ ಗೌರವಿಸಿದರು.[೩೮]1997 ಮೇ 18ರಂದು ಎರಿಕ್ ಕ್ಯಾಂಟೊನಾ ಪುಟ್‌ಬಾಲ್ ಜಗತ್ತಿಗೆ ವಿದಾಯ ಹೇಳಿದರು, ಅಲ್ಲದೆ ತಮಗೆ ಮೀಸಲಾಗಿದ್ದ 7 ಸಂಖ್ಯೆಯ ಅಂಗಿಯನ್ನು ಉಚಿತವಾಗಿ ನೀಡಿದರು. ಬಳಿಕ ಕ್ಯಾಂಟೊನಾ ಜಾಗವನ್ನು ಟೊಟೆನ್‌ಹ್ಯಾಮ್ ಹಾಟ್ಸ್‌ಪರ್‌ನಿಂದ ಆಗಮಿಸಿದ ಟೆಡ್ಡಿ ಶೆರಿಂಗ್ಹಾಮ್ ತುಂಬಿದರು. ಇದೇ ವೇಳೆ ಬೆಕ್‌ಹ್ಯಾಮ್ ತಮ್ಮ 10 ಸಂಖ್ಯೆಯ ಅಂಗಿಯನ್ನು ಶೆರಿಂಗ್ಹಾಮ್‌ಗೆ ಕೊಟ್ಟು, 7 ಸಂಖ್ಯೆಯ ಜಾಕೀಟನ್ನು ಪಡೆದುಕೊಂಡರು. ಸ್ವತಃ ಕ್ಯಾಂಟೋನಾರೇ ನಿವೃತ್ತಿಯಾಗಿರುವಾಗ 7 ಸಂಖ್ಯೆಯ ಅಂಗಿಯನ್ನು ದೂರವಿಡುವುದೇ ಸೂಕ್ತ ಎಂಬುದು ಕೆಲವು ಅಭಿಮಾನಿಗಳ ಅಂಬೋಣವಾಗಿತ್ತು, ಆದರೆ ಈ ಸಂಖ್ಯೆಯ ಅಂಗಿ ಈಗಲೂ ಬಳಕೆಯಲ್ಲಿದೆ(ಇತ್ತೀಚಿನವರೆಗೂ ಇಂಗ್ಲೆಂಡ್‌ನ ಇನ್ನೊಬ್ಬ ಖ್ಯಾತ ಆಟಗಾರ ಮೈಕೆಲ್ ಒವೆನ್ ಧರಿಸುತ್ತಿದ್ದರು).ಯುನೈಟೆಡ್ ತಂಡ 1997–98ರ ಅವಧಿಯನ್ನು ಯಶಸ್ವಿಯಾಗಿಯೇ ಆರಂಭಿಸಿದರೂ, ಉತ್ತರಾರ್ಧದಲ್ಲಿ ಸ್ಥಿರ ಪ್ರದರ್ಶನ ನೀಡದ ಕಾರಣ ಅರ್ಸೆನಲ್‌ ನಂತರದ ದ್ವಿತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.[೩೯] ಬೆಕ್‌ಹ್ಯಾಮ್ 1998–99ರ ಅವಧಿಯಲ್ಲಿ ಪ್ರೀಮಿಯರ್ ಲೀಗ್‌, FA ಕಪ್ ಮತ್ತು ಚಾಂಪಿಯನ್ಸ್ ಲೀಗ್ ಗೆದ್ದು ತ್ರಿವಿಕ್ರಮ ಸಾಧನೆಗೈದ ಯುನೈಟೆಡ್ ತಂಡದ ಸದಸ್ಯನಾಗಿದ್ದರು. ಇದೊಂದು ಇಂಗ್ಲಿಷ್ ಫುಟ್‌ಬಾಲ್‌ ಇತಿಹಾಸದಲ್ಲಿ ಅಪೂರ್ವ ಸಾಧನೆಯಾಗಿದೆ. ವಿಶ್ವ ಕಪ್‌ನಿಂದ ಹೊರದಬ್ಬಲ್ಪಟ್ಟ ಬಳಿಕ ಎದುರಾದ ಟೀಕೆಗಳಿಂದಾಗಿ ಬೆಕ್‌ಹ್ಯಾಮ್ ಇಂಗ್ಲೆಂಡ್ ಅನ್ನು ತೊರೆಯಬಹುದು ಎಂಬ ಊಹಾಪೋಹಗಳು ಕೇಳಿ ಬಂದಿತ್ತು, ಆದರೆ ಬೆಕ್‌ಹ್ಯಾಮ್ ಎಲ್ಲ ವದಂತಿಗಳನ್ನು ಸುಳ್ಳಾಗಿಸಿ ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗೆ ಉಳಿಯಲು ತೀರ್ಮಾನಿಸಿದರು. ಈ ನಿರ್ಧಾರಕ್ಕೆ ಸಕಾರಣವೂ ಇತ್ತು. ಪ್ರೀಮಿಯರ್ ಲೀಗ್ ಪ್ರಶಸ್ತಿಯ ಕನಸನ್ನು ಖಾತ್ರಿಪಡಿಸಿಕೊಳ್ಳಬೇಕಾದರೆ, ಆ ಅವಧಿಯ ಕೊನೆಯ ಲೀಗ್ ಪಂದ್ಯದಲ್ಲಿ ಟೊಟೆನ್‌ಹ್ಯಾಮ್ ಹಾಟ್ಸ್‌ಪರ್‌ ವಿರುದ್ಧ ಯುನೈಟೆಡ್ ತಂಡಕ್ಕೆ ಗೆಲುವು ಅಗತ್ಯವಾಗಿತ್ತು (ಸ್ಥಳೀಯ ಸಾಂಪ್ರದಾಯಿಕ ವೈರಿ ಆರ್ಸೆನಲ್ ತಂಡವನ್ನು ಪ್ರಶಸ್ತಿಯ ಓಟದಿಂದ ಹೊರಗಿಡುವ ದೃಷ್ಟಿಯಿಂದ ಟೊಟೆನ್‌ಹ್ಯಾಮ್ ಹಾಟ್ಸ್‌ಪರ್‌ ಸೋಲಲು ಸಿದ್ಧವಾಗಿತ್ತು ಎಂದು ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದವು), ಆದರೆ ಟೊಟೆನ್‌ಹ್ಯಾಮ್ ಪಂದ್ಯದ ಆರಂಭದಲ್ಲೇ ಮುನ್ನಡೆ ಸಾಧಿಸಿತು. ಆದರೆ ಬೆಕ್‌ಹ್ಯಾಮ್ ಗೋಲು ಹೊಡೆದು ಪಂದ್ಯವನ್ನು ಸಮಬಲಕ್ಕೆ ತಂದರು, ಪಂದ್ಯ ಮತ್ತು ಪ್ರೀಮಿಯರ್ ಲೀಗ್ ಎರಡೂ ಯುನೈಟೆಡ್ ತಂಡದ ಕೈವಶವಾಯಿತು. ನ್ಯೂಕ್ಯಾಸ್ಟಲ್ ಯುನೈಟೆಡ್ ವಿರುದ್ಧದ FA ಕಪ್ ಫೈನಲ್ ಪಂದ್ಯದಲ್ಲಿ ಬೆಕ್‌ಹ್ಯಾಮ್ ಕೇಂದ್ರ-ಮಿಡ್‌ಫೀಲ್ಡ್ ಸ್ಥಾನದಲ್ಲಿ ಆಡಿದರು. ಬೇರನ್ ಮುನಿಚ್‌ ವಿರುದ್ಧದ 1999 UEFA ಚಾಂಪಿಯನ್ಸ್ ಲೀಗ್ ಪೈನಲ್ ಪಂದ್ಯದಲ್ಲೂ ಬೆಕ್‌ಹ್ಯಾಮ್ ಕೇಂದ್ರ-ಮಿಡ್‌ಫೀಲ್ಡ್ ಸ್ಥಾನದಲ್ಲಿ ಆಡಬೇಕಾಗಿ ಬಂತು, ಏಕೆಂದರೆ ಮೊದಲ ಹಂತದ ಕೇಂದ್ರ-ಮಿಡ್‌ಫೀಲ್ಡರ್‌ಗಳನ್ನು ಪಂದ್ಯದಿಂದ ಅಮಾನತುಗೊಳಿಸಲಾಗಿತ್ತು. ಪಂದ್ಯದ ಸಾಮಾನ್ಯ ಅವಧಿಯಲ್ಲಿ ಯುನೈಟೆಡ್ 1-0ಯೊಂದಿಗೆ ಸೋಲಿನ ಅಂಚಿನಲ್ಲಿತ್ತು, ಆದರೆ ನೀಡಲಾದ ಹೆಚ್ಚುವರಿ ಸಮಯದಲ್ಲಿ ಎರಡು ಗೋಲು ಹೊಡೆಯುವ ಮೂಲಕ ಟ್ರೋಫಿಯನ್ನು ಗೆದ್ದುಕೊಂಡಿತು.ಎರಡು ಗೋಲುಗಳೂ ಬೆಕ್‌ಹ್ಯಾಮ್‌ರಿಂದ ಬಂದಿದ್ದವು. ಈ ನಿರ್ಣಾಯಕ ಗೋಲುಗಳು, ಜೊತೆಗೆ ಉಳಿದ ಅವಧಿಯಲ್ಲಿ ಪ್ರದರ್ಶಿಸಿದ ಅದ್ಭುತ ಆಟಗಳಿಂದಾಗಿ 1999 ವರ್ಷದ ಯುರೋಪಿಯನ್ ಫುಟ್‌ಬಾಲ್ ಆಟಗಾರ ಮತ್ತು FIFA ವಿಶ್ವದ ವರ್ಷದ ಆಟಗಾರ ಸ್ಪರ್ಧೆಯಲ್ಲಿ ಬೆಕ್‌ಹ್ಯಾಮ್ ರನ್ನರ್ ಅಪ್ ಪ್ರಶಸ್ತಿ ಪಡೆದರು, ಆದರೆ ಪ್ರಶಸ್ತಿಗಳೆರಡನ್ನೂ ರಿವಾಲ್ಡೊ ಜಯಿಸಿದರು.

ಬ್ರಿಸ್ಟೋಲ್ ರೋವರ್ಸ್ ವಿರುದ್ಧದ ಪಂದ್ಯದಲ್ಲಿ ಬೆಕ್‌ಹ್ಯಾಮ್

1998–99ರ ಅವಧಿಯಲ್ಲಿ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದಾಗ್ಯೂ, ಎದುರಾಳಿ ತಂಡದ ಅಭಿಮಾನಿಗಳು ಮತ್ತು ಪತ್ರಕರ್ತರ ನಡುವೆ ಬೆಕ್‌ಹ್ಯಾಮ್ ಜನಪ್ರಿಯರಾಗಿರಲಿಲ್ಲ. ನೆಕಕ್ಸಾ ವಿರುದ್ಧದ ವರ್ಲ್ಡ್‌ ಕ್ಲಬ್ ಚಾಂಪಿಯನ್‌ಶಿಪ್‌‌ ಪಂದ್ಯದಲ್ಲಿ ಉದ್ದೇಶಪೂರ್ವಕವಾಗಿ ಫೌಲ್ ಎಸಗಿ ಮೈದಾನದಿಂದ ಹೊರಗೆ ಬಂದು ತೀವ್ರ ಟೀಕೆ ಎದುರಿಸಿದರು. ಪತ್ನಿಯ ಪ್ರಭಾವದಿಂದಲೇ ಹೀಗಾಗಿರಬಹುದು, ಇಲ್ಲವೇ ಪ್ರಚಾರಕ್ಕೋಸ್ಕರ ಯುನೈಟೆಡ್ ತಂಡವೇ ಈ ರೀತಿ ಮಾಡಿಸಿರಬಹುದು ಎಂದು ಮಾಧ್ಯಮಗಳಲ್ಲಿ ವರದಿಯಾಯ್ತು[೪೦]. ಆದರೆ ತಂಡದ ವ್ಯವಸ್ಥಾಪಕರು ಈ ಬೆಳವಣಿಗೆಯನ್ನು ಸಾರ್ವಜನಿಕವಾಗಿ ಬೆಂಬಲಿಸಿದ ಕಾರಣ ಬೆಕ್‌ಹ್ಯಾಮ್‌ ತಂಡದಲ್ಲೇ ಉಳಿದರು. 1999-2000ರ ಅವಧಿಯಲ್ಲಿ ಇಟೆಲಿಜುವೆಂಟಸ್‌ಗೆ ಬೆಕ್‌ಹ್ಯಾಮ್‌ ವರ್ಗವಾಗುವ ಮಾತು ಕೇಳಿ ಬಂದಿತ್ತು, ಆದರೆ ಇದು ನಡೆಯಲೇ ಇಲ್ಲ. 2000ದ ಆರಂಭದಲ್ಲೇ ಯುನೈಟೆಡ್ ತಂಡದ ವ್ಯವಸ್ಥಾಪಕ ಫರ್ಗುಸನ್ ಮತ್ತು ಬೆಕ್‌ಹ್ಯಾಮ್ ನಡುವಿನ ಸಂಬಂಧ ಹದಗೆಡತೊಡಗಿತು, ಫುಟ್‌ಬಾಲ್ ಹೊರತಾಗಿ ಬೆಕ್‌ಹ್ಯಾಮ್‌ರಿಗಿದ್ದ ಖ್ಯಾತಿ ಮತ್ತು ಬದ್ಧತೆಗಳು ಇದಕ್ಕೆ ಕಾರಣವಿದ್ದಿರಬಹುದು ಎಂದು ಊಹಿಸಲಾಯ್ತು. ಈ ಘಟನಾವಳಿಗಳು ನಡೆದದ್ದು 2000ರಲ್ಲಿ. ಗ್ಯಾಸ್ಟ್ರೋಎಂಟ್ರೈಟಿಸ್‌ನಿಂದ ಬಳಲುತ್ತಿದ್ದ ಮಗ ಬ್ರೂಕ್ಲಿನ್‌ನನ್ನು ನೋಡಿಕೊಳ್ಳಲೆಂದು ತರಬೇತಿಯಿಂದ ಬೆಕ್‌ಹ್ಯಾಮ್‌ ವಿನಾಯಿತಿ ಕೇಳಿದ್ದರು. ಆ ಪ್ರಕಾರ ಬೆಕ್‌ಹ್ಯಾಮ್‌‌ಗೆ ಅನುಮತಿ ನೀಡಲಾಗಿತ್ತು, ಆದರೆ ಅದೇ ದಿನ ರಾತ್ರಿ ಲಂಡನ್ ಫ್ಯಾಶನ್ ವೀಕ್‌ನಲ್ಲಿ ವಿಕ್ಟೋರಿಯಾ ಬೆಕ್‌ಹ್ಯಾಮ್ ಛಾಯಾಗ್ರಾಹಕರಿಗೆ ಫೋಸು ನೀಡಿದ್ದು ಫರ್ಗುಸನ್‌ರನ್ನು ಕೆರಳಿಸಿತು, ಆ ಒಂದು ದಿನ ಮಟ್ಟಿಗೆ ಬ್ರೂಕ್ಲಿನ್‌ನನ್ನು ವಿಕ್ಟೋರಿಯಾ ನೋಡಿಕೊಂಡಿದ್ದರೆ ಬೆಕ್‌ಹ್ಯಾಮ್‌ಗೆ ತರಬೇತಿಯಲ್ಲಿ ಪಾಲ್ಗೊಳ್ಳಬಹುದಾಗಿತ್ತು ಎಂದು ಕಿಡಿಕಾರಿದರು. ಫರ್ಗುಸನ್ ಇನ್ನೂ ಮುಂದುವರಿದು ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಬರುವಷ್ಟೂ ಹಣವನ್ನು ಬೆಕ್‌ಹ್ಯಾಮ್‌ಗೆ ದಂಡ (ಎರಡು ವಾರದ ವೇತನ – ಅಂದು £50,000)ವಿಧಿಸಿದರು, ಮತ್ತು ಯುನೈಟೆಡ್‌ನ ಪ್ರಮುಖ ಎದುರಾಳಿ ಲೀಡ್ಸ್ ಯುನೈಟೆಡ್ ವಿರುದ್ಧದ ಪಂದ್ಯಕ್ಕೆ ಕೈಬಿಟ್ಟರು. ಬೆಕ್‌ಹ್ಯಾಮ್ "ತಮ್ಮ ಸಹ ಆಟಗಾರರೊಂದಿಗೆ ನ್ಯಾಯಯುತವಾಗಿರಲಿಲ್ಲ" [೪೧] ವೆಂದು ಫರ್ಗುಸನ್ ತಮ್ಮ ಆತ್ಮಚರಿತ್ರೆಯಲ್ಲಿ ಹರಿಹಾಯ್ದಿದ್ದಾರೆ. ಅಚ್ಚರಿಯೆಂದರೆ, ತಮ್ಮ ಕ್ಲಬ್‌ಗಾಗಿ ಉತ್ತಮ ಆಟ ಆಡಿದ್ದ ಬೆಕ್‌ಹ್ಯಾಮ್, ಯುನೈಟೆಡ್ ತಂಡ ಪ್ರೀಮಿಯರ್ ಲೀಗ್ ಅನ್ನು ದಾಖಲೆ ಅಂತರದಲ್ಲಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

"ವಿವಾಹವಾಗುವ ತನಕ ಆತ(ಬೆಕ್‌ಹ್ಯಾಮ್) ಸಮಸ್ಯೆಯಾಗಿರಲಿಲ್ಲ. ರಾತ್ರಿ ಹೊತ್ತಲ್ಲೂ ಅಕಾಡೆಮಿ ತರಬೇತುದಾರರೊಂದಿಗೆ ಅಭ್ಯಾಸಕ್ಕಾಗಿ ತೆರಳುತ್ತಿದ್ದ, ಅತ್ಯುತ್ತಮ ಯುವ ಜತೆಗಾರನೂ ಆಗಿದ್ದ. ಆದರೆ ವಿವಾಹದ ಬಳಿಕ ಮನರಂಜನೆಯಲ್ಲಿ ತೊಡಗಿಸಿಕೊಂಡದ್ದು ನಮಗೆ ಅರಗಿಸಿಕೊಳ್ಳಲು ಕಷ್ಟಕರವಾಗಿತ್ತು - ಆ ಕ್ಷಣದಿಂದ ಅವರ ಜೀವನ ಮೊದಲಿನಂತೆ ಇರಲಿಲ್ಲ. ಆತ ಬಹು ದೊಡ್ಡ ವ್ಯಕ್ತಿ, ಫುಟ್‌ಬಾಲ್ ಒಂದು ಚಿಕ್ಕ ಭಾಗವಷ್ಟೇ."' – ಬೆಕ್‌ಹ್ಯಾಮ್‌ರ ವಿವಾಹದ ಬಗ್ಗೆ 2007ರಲ್ಲಿ ಅಲೆಕ್ಸ್ ಫರ್ಗುಸನ್ ಹೇಳಿದ್ದು.[೪೨]

1999-2000ರಲ್ಲಿ ಆರ್ಸೆನಲ್ ಮತ್ತು ಲೀಡ್ಸ್ ಯುನೈಟೆಡ್ ತಂಡಗಳು ತೀವ್ರ ಪೈಪೋಟಿ ನೀಡಿದ್ದಾಗ್ಯೂ 18-ಅಂಕಗಳ ಅಂತರದೊಂದಿಗೆ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯುನೈಟೆಡ್ ತಂಡಕ್ಕೆ ಬೆಕ್‌ಹ್ಯಾಮ್ ನೆರವಾಗಿದ್ದರು. ಈ ಸೀಸನ್‌ನ ಅಂತಿಮ 11 ಲೀಗ್ ಪಂದ್ಯಗಳನ್ನು ಯುನೈಟೆಡ್ ಗೆದ್ದುಕೊಂಡಿತ್ತು, ಅತ್ಯುತ್ತಮ ಫಾರ್ಮ್‌ನಲ್ಲಿದ್ದ ಬೆಕ್‌ಹ್ಯಾಮ್ ಈ ಪಂದ್ಯಗಳಲ್ಲಿ 5 ಗೋಲುಗಳನ್ನು ಹೊಡೆದರು. ಈ ಅವಧಿಯಲ್ಲಿ ಹೊಡೆದ ಆರು ಗೋಲುಗಳಲ್ಲದೆ, ಒಟ್ಟಾರೆಯಾಗಿ ಎಂಟು ಗೋಲುಗಳು ಅವರ ಬತ್ತಳಿಕೆ ಸೇರಿದ್ದವು. ಯುನೈಟೆಡ್ ತಂಡ 2000-01ರಲ್ಲಿ ಸತತ ಮೂರನೇ ಬಾರಿ ಲೀಗ್ ಪ್ರಶಸ್ತಿ ಗೆಲ್ಲುವಾಗಲೂ ಬೆಕ್‌ಹ್ಯಾಮ್ ನಿರ್ಣಾಯಕ ಆಟ ಪ್ರದರ್ಶಿಸಿದ್ದರು - ಯಾವುದೇ ಕ್ಲಬ್ ಸಾಲುಸಾಲಾಗಿ ಮೂರು ಲೀಗ್ ಪ್ರಶಸ್ತಿಗಳನ್ನು ಜಯಿಸಿರುವುದು ಇದು ನಾಲ್ಕನೇ ಬಾರಿ. ಬೆಕ್‌ಹ್ಯಾಮ್ ಒಟ್ಟು ಒಂಭತ್ತು ಗೋಲು ಹೊಡೆದಿದ್ದಾರೆ, ಇದರಲ್ಲಿ ಎಲ್ಲ ಪ್ರೀಮಿಯರ್ ಲೀಗ್‌‌ ಗೋಲುಗಳು ಸೇರಿವೆ.2002 ಎಪ್ರಿಲ್ 10ರಂದು ಡೆಪೊರ್ಟಿವೊ ಲಾ ಕೊರುನಾ ವಿರುದ್ಧದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಬೆಕ್‌ಹ್ಯಾಮ್‌ ತಮ್ಮ ಎಡ ಪಾದದ ಎರಡನೇ ಎಲುಬು ಮುರಿದುಕೊಂಡರು. ಉದ್ದೇಶಪೂರ್ವಕವಾಗಿಯೇ ಬೆಕ್‌ಹ್ಯಾಮ್ ಗಾಯಮಾಡಿಕೊಂಡಿರಬಹುದು ಎಂದು ಬ್ರಿಟೀಷ್ ಮಾಧ್ಯಮಗಳಲ್ಲಿ ವರದಿಯಾಯ್ತು, ಏಕೆಂದರೆ ಅರ್ಜೆಂಟೀನಾದ ಆಟಗಾರ ಅಲ್ಡೊ ಡಸ್ಚರ್‌ನಿಂದಾಗಿ ಬೆಕ್‌ಹ್ಯಾಮ್ ಗಾಯಗೊಂಡಿದ್ದರು ಮತ್ತು ಇನ್ನೇನು..ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ತಂಡ ಮುಖಾಮುಖಿಯಾಗುವುದರಲ್ಲಿತ್ತು.[೪೩] ಗಾಯದ ಸಮಸ್ಯೆಯಿಂದಾಗಿ ಬೆಕ್‌ಹ್ಯಾಮ್‌ಗೆ ಸೀಸನ್‌ನ ಉಳಿದ ಅವಧಿಯಲ್ಲಿ ಯುನೈಟೆಡ್ ಪರವಾಗಿ ಆಡಲು ಸಾಧ್ಯವಾಗಲಿಲ್ಲ, ಪ್ರೀಮಿಯರ್ ಲೀಗ್ ಪ್ರಶಸ್ತಿ ಕೂಡ ಆರ್ಸೆನಲ್ ಪಾಲಾಯಿತು (ಅಲ್ಲದೆ ಬೇಯರ್ ಲೆವೆರ್ಕುಸೆನ್ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ ಸೋತು ಯುರೋಪಿಯನ್ ಕಪ್ ಪಂದ್ಯಾವಳಿಯಿಂದ ಹೊರ ಬಂದಿತು). ನಂತರ ಹಲವು ಸುತ್ತಿನ ಮಾತುಕತೆಗಳು ನಡೆದು ಮೇ ತಿಂಗಳಲ್ಲಿ ಕ್ಲಬ್ ಜೊತೆ ಮೂರು ವರ್ಷಗಳ ಕರಾರಿಗೆ ಸಹಿ ಹಾಕಿದರು, ಮತ್ತು ಭಾವಚಿತ್ರದ ಹಕ್ಕುಗಳಿಗೆ ಬೆಕ್‌ಹ್ಯಾಮ್‌ ಹೆಚ್ಚಿನ ಬೇಡಿಕೆ ಮುಂದಿಟ್ಟ ಕಾರಣ ಅದಕ್ಕೆ ಸಂಬಂಧಪಟ್ಟಂತೆಯೇ ಹೆಚ್ಚಿನ ಮಾತುಕತೆಗಳು ನಡೆದವು. ಹೊಸ ಕರಾರು ಮತ್ತು ಜಾಹೀರಾತುಗಳಿಂದ ಬರುವ ಆದಾಯದಿಂದಾಗಿ ಬೆಕ್‌ಹ್ಯಾಮ್ ಆ ಹೊತ್ತಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರನೆಂಬ ಖ್ಯಾತಿಗೆ ಪಾತ್ರರಾದರು.[೪೪]ಯುನೈಟೆಡ್ ತಂಡದ ಆಟಗಾರನಾಗಿ ಬೆಕ್‌ಹ್ಯಾಮ್‌ ಪಾಲಿಗೆ 2001-02 ಅತ್ಯುತ್ತಮ ಕಾಲ ಎಂಬುದರಲ್ಲಿ ಎರಡು ಮಾತಿಲ್ಲ. 28 ಲೀಗ್ ಪಂದ್ಯಗಳಲ್ಲಿ 11 ಗೋಲು ಮತ್ತು ಎಲ್ಲ 42 ಪಂದ್ಯಗಳು ಸೇರಿ ಒಟ್ಟು 16 ಗೋಲುಗಳು ಬೆಕ್‌ಹ್ಯಾಮ್ ಬುಟ್ಟಿಗೆ ಸೇರಿಕೊಂಡಿವೆ. 2002–03 ಅವಧಿಯಲ್ಲಿ ಕಾಣಿಸಿಕೊಂಡ ಗಾಯದ ಸಮಸ್ಯೆಯಿಂದಾಗಿ ಬೆಕ್‌ಹ್ಯಾಮ್‌ಗೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಮತ್ತೆ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ, ಬದಲಿ ಆಟಗಾರ ಒಲ್ ಗುನ್ನಾರ್ ಸೊಲ್ಸ್‌ಕೆಜರ್ ಬಲ ಬದಿಯ ಮಿಡ್‌ಫೀಲ್ಡ್‌ನಲ್ಲಿ ಆಡಿ ಬೆಕ್‌ಹ್ಯಾಮ್‌ ಸ್ಥಾನವನ್ನು ತುಂಬಿದರು. 2003 ಫೆಬ್ರವರಿ 15ರ ವೇಳೆಗೆ ತಂಡದ ವ್ಯವಸ್ಥಾಪಕರೊಂದಿಗಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. FA ಕಪ್‌ ಪಂದ್ಯಾವಳಿಯಲ್ಲಿ ಆರ್ಸೆನಲ್ ವಿರುದ್ಧ ಸೋತಾಗ, ಕೆರಳಿದ ಅಲೆಕ್ಸ್ ಫರ್ಗುಸನ್ [೪೫][೪೬][೪೭][೪೮][೪೯]

[೫೦][೫೧]ಬೂಟನ್ನು ಎಸೆದರು ಅಥವಾ ಒದೆದರು, ಅದು ಬೆಕ್‌ಹ್ಯಾಮ್‌ರ ಕಣ್ಣಿಗೆ ಬಡಿದು ಗಾಯವಾಗಿ ಹೊಲಿಗೆ ಹಾಕಬೇಕಾಗಿ ಬಂತು. ಈ ಘಟನೆ ಬೆಕ್‌ಹ್ಯಾಮ್‌ರನ್ನು ಒಳಗೊಂಡು ಸಾಕಷ್ಟು ವದಂತಿಗಳಿಗೆ ಎಡೆ ಮಾಡಿಕೊಟ್ಟಿತು, ಕ್ಲಬ್‌ಅನ್ನು ಮೊದಲು ತೊರೆಯುವ ವ್ಯಕ್ತಿ (ಫರ್ಗುಸನ್ ಅಥವಾ ಬೆಕ್‌ಹ್ಯಾಮ್?) ಯಾರು ಎಂಬ ಬಗ್ಗೆ ಬುಕ್ಕೀಗಳು ಪಣ ಒಡ್ಡಲಾರಂಭಿಸಿದರು.[೫೨]ಯುನೈಟೆಡ್ ತಂಡ ಸೀಸನ್‌ಅನ್ನು ಕೆಟ್ಟದಾಗಿ ಆರಂಭಿಸಿದರೂ, ಡಿಸೆಂಬರ್ ಬಳಿಕ ಆಟದಲ್ಲಿ ಅದರ ಗಮನಾರ್ಹ ಸುಧಾರಣೆಯಾಯಿತು. ನಂತರ ಯುನೈಟೆಡ್ ತಂಡ ಲೀಗ್ಅನ್ನು ಜಯಿಸಿದ್ದೂ ಅಲ್ಲದೆ ಬೆಕ್‌ಹ್ಯಾಮ್ ಒಟ್ಟು 52 ಪಂದ್ಯಗಳಲ್ಲಿ 11 ಗೋಲುಗಳನ್ನು ಹೊಡೆದರು. ಆಗಲೂ ಬೆಕ್‌ಹ್ಯಾಮ್‌ಗೆ ಇಂಗ್ಲೆಂಡ್‌ ತಂಡದಲ್ಲಿ ಮೊದಲ ಪ್ರಾಶಸ್ತ್ಯವಿತ್ತು, ಇದರ ಜೊತೆಗೆ ಫುಟ್‌ಬಾಲ್‌ಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜೂನ್ 13ರಂದು ಅವರಿಗೆ OBE ಪ್ರಶಸ್ತಿ ನೀಡಿ ಗೌರವಿಸಲಾಯಿತು.[೫೩]ಬೆಕ್‌ಹ್ಯಾಮ್ ಯುನೈಟೆಡ್ ಪರವಾಗಿ 265 ಪಂದ್ಯಗಳಲ್ಲಿ ಆಡಿದ್ದಾರಲ್ಲದೆ, 61 ಗೋಲುಗಳನ್ನು ಹೊಡೆದಿದ್ದಾರೆ. 81 ಚಾಂಪಿಯನ್ಸ್ ಲೀಗ್ ಪಂದ್ಯಗಳಲ್ಲೂ ಆಡಿದ್ದಾರೆ, ಮತ್ತು 15 ಗೋಲುಗಳನ್ನು ಗಳಿಸಿದ್ದಾರೆ. 12 ವರ್ಷಗಳ ಅವಧಿಯಲ್ಲಿ ಬೆಕ್‌ಹ್ಯಾಮ್ ಆರು ಪ್ರೀಮಿಯರ್ ಲೀಗ್ ಪ್ರಶಸ್ತಿಗಳು, ಎರಡು FA ಕಪ್, ಯುರೋಪಿಯನ್ ಕಪ್‌, ಇಂಟರ್ನಾಷನಲ್ ಕಪ್ ಮತ್ತು FA ಯೂತ್ ಕಪ್‌ಅನ್ನು ಜಯಿಸಿ ಕೊಟ್ಟಿದ್ದಾರೆ. ಈ ಒಂದು ಹಂತದಲ್ಲಿ ಬೆಕ್‌ಹ್ಯಾಮ್‌ ತಂಡಕ್ಕಾಗಿ ಅತ್ಯಂತ ಹೆಚ್ಚು ಕಾಲ ಆಡಿದ ಆಟಗಾರರ ಜೊತೆ ಜಂಟಿಯಾಗಿ ದ್ವಿತೀಯ ಸ್ಥಾನವನ್ನು ಹಂಚಿಕೊಂಡರು (ನಿಖಿ ಬಟ್, ಗ್ಯಾರಿ ನೆವಿಲ್ಲೆ ಮತ್ತು ಪೌಲ್ ಸ್ಕೋಲ್ಸ್ ಬೆಕ್‌ಹ್ಯಾಮ್ ಜೊತೆ ತಂಡಕ್ಕೆ ಸೇರ್ಪಡೆಯಾದವರು). ತಂಡಕ್ಕಾಗಿ ಅತ್ಯಂತ ಹೆಚ್ಚು ಕಾಲ ಆಡಿದ ದಾಖಲೆ ರ್ಯಾನ್ ಗಿಗ್ಸ್‌ ಹೆಸರಲ್ಲಿದೆ.

ರಿಯಲ್ ಮ್ಯಾಡ್ರಿಡ್‌[ಬದಲಾಯಿಸಿ]

ಬೆಕ್ಹಾಂ (ಉನ್ನತ) ಮತ್ತು ಜೆನೆಡಿನ್ ಜಿದಾನೆ ರಿಯಲ್ ಮ್ಯಾಡ್ರಿಡ್

ಈ ನಡುವೆ ಬೆಕ್‌ಹ್ಯಾಮ್‌ರನ್ನು FC ಬಾರ್ಸಿಲೋನಾ[೫೪] ತಂಡಕ್ಕೆ ಮಾರಾಟ ಮಾಡಲು ಮ್ಯಾಂಚೆಸ್ಟರ್ ಯುನೈಟೆಡ್ ಉತ್ಸುಕವಾಗಿತ್ತು, ಆದರೆ ಬೆಕ್‌ಹ್ಯಾಮ್ ರಿಯಲ್ ಮ್ಯಾಡ್ರಿಡ್‌ ಜೊತೆ ನಾಲ್ಕು ವರ್ಷಗಳ ಕರಾರಿಗೆ ಸಹಿ ಹಾಕಿದರು. ಇದರೊಂದಿಗೆ ಅವರು 35 ದಶಲಕ್ಷ £25m) ವರ್ಗಾವಣೆ ಶುಲ್ಕವನ್ನೂ ಪಡೆದರು.[೫೫] 2003 ಜುಲೈ 1ರಂದು ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿತು, ಇದರೊಂದಿಗೆ ಲೌರೀ ಕನ್ನಿಂಗ್ಹಾಮ್‌ ಮತ್ತು ಸ್ಟೀವ್ ಮೆಕ್ಮನನ್ ಬಳಿಕ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಆಡುತ್ತಿರುವ ಮೂರನೇ ಇಂಗ್ಲಿಷ್ ಆಟಗಾರನೆಂಬ ಹೆಗ್ಗಳಿಕೆ ಅವರದ್ದಾಯಿತು. ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಇಂಗ್ಲೆಂಡ್ ತಂಡದಲ್ಲಿ ಆಡುತ್ತಿದ್ದಾಗ ಬೆಕ್‌ಹ್ಯಾಮ್ ಏಳನೇ ಸಂಖ್ಯೆಯ ಅಂಗಿಯನ್ನು ಧರಿಸುತ್ತಿದ್ದರೂ, ಮ್ಯಾಡ್ರಿಡ್ ತಂಡದಲ್ಲಿ ಅದೇ ಸಂಖ್ಯೆಯ ಅಂಗಿಯನ್ನು ಧರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಏಳನೇ ಸಂಖ್ಯೆಯ ಅಂಗಿಯನ್ನು ರಿಯಲ್ ಮ್ಯಾಡ್ರಿಡ್ ಕ್ಲಬ್‌ನ ನಾಯಕ ರೌಲ್ ಧರಿಸುತ್ತಿದ್ದರು.ಏಳರ ಬದಲಾಗಿ 23 ಸಂಖ್ಯೆಯ ಅಂಗಿಯನ್ನು ಧರಿಸಲು ಬೆಕ್‌ಹ್ಯಾಮ್ ನಿರ್ಧರಿಸಿದರು, ಈ ತೀರ್ಮಾನಕ್ಕೆ ಬಾಸ್ಕೆಟ್‌ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ತಮಗೆ ಸ್ಫೂರ್ತಿಯೆಂದೂ ಹೇಳಿದರು. ಮೈಕೆಲ್ ಜೋರ್ಡಾನ್ ಕೂಡ 23 ಸಂಖ್ಯೆಯ ಅಂಗಿಯನ್ನು ಧರಿಸುತ್ತಿದ್ದುದು ಇಲ್ಲಿ ಗಮನಾರ್ಹ.[೫೬]ಬೆಕ್‌ಹ್ಯಾಮ್ ತಂಡದಲ್ಲಿದ್ದೂ ಸೀಸನ್ ಕೊನೆಗೆ ರಿಯಲ್ ಮ್ಯಾಡ್ರಿಡ್‌ ನಾಲ್ಕನೇ ಸ್ಥಾನಕ್ಕಷ್ಟೇ ತೃಪ್ತಿಪಡಬೇಕಾಯಿತು, ಮತ್ತು UEFA ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್ ಹಂತದಲ್ಲೇ ಹೊರ ನಡೆಯಬೇಕಾಯಿತು. ಆದರೆ ಬೆಕ್‌ಹ್ಯಾಮ್ ತಾವೆದುರಿಸಿದ ಮೊದಲ 16 ಪಂದ್ಯಗಳಲ್ಲಿ 5 ಬಾರಿ ಗೋಲು ಹೊಡೆದು(ಲಾ ಲೀಗಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಪಂದ್ಯ ಆರಂಭಗೊಂಡ ಮೂರೇ ನಿಮಿಷದಲ್ಲಿ ಗೋಲು ಹೊಡೆದದ್ದು ಸೇರಿಸಿ) ರಿಯಲ್ ಮ್ಯಾಡ್ರಿಡ್‌ ಅಭಿಮಾನಿಗಳ ಕಣ್ಮಣಿಯಾದರು, ಆದರೆ ಪ್ರತಿ ವರ್ಷದ ಸ್ಪಾನಿಷ್ ಲೀಗ್ ಅಥವಾ ಚಾಂಪಿಯನ್ಸ್ ಲೀಗ್‌ಅನ್ನು ಗೆಲ್ಲಬೇಕೆಂಬ ಕ್ಲಬ್ ಅಧ್ಯಕ್ಷರ ನಿರೀಕ್ಷೆಗಳೆಲ್ಲ ಹುಸಿಯಾದವು. 2004 ಜುಲೈನಲ್ಲಿ ಸ್ಪೇನ್‌ನಲ್ಲಿ ಬೆಕ್‌ಹ್ಯಾಮ್ ಪೂರ್ವಾಭ್ಯಾಸದಲ್ಲಿ ಪಾಲ್ಗೊಂಡಿದ್ದಾಗ, ಅಪರಿಚಿತನೊಬ್ಬ ಪೆಟ್ರೋಲ್ ತುಂಬಿದ್ದ ಕ್ಯಾನ್ ‌ಅನ್ನು ಹೊತ್ತುಕೊಂಡು ಬೆಕ್‌ಹ್ಯಾಮ್‌ರ ಮನೆ ಗೋಡೆಯನ್ನು ಏರಿದ್ದ. ವಿಕ್ಟೋರಿಯಾ ಮತ್ತು ಮಕ್ಕಳು ಮಾತ್ರ ಆ ಸಮಯದಲ್ಲಿ ಮನೆಯಲ್ಲಿದ್ದರು, ಆದರೆ ಆತ ಮನೆ ಪ್ರವೇಶಿಸುವ ಮೊದಲೇ ಭದ್ರತಾ ಸಿಬ್ದಂದಿ ಸೆರೆಹಿಡಿದಿದ್ದರು.[೫೭] ಇದರ ಹೊರತಾಗಿ 2004 ಅಕ್ಟೋಬರ್ 9ರಂದು ಬೆಕ್‌ಹ್ಯಾಮ್ ಮತ್ತೆ ಸುದ್ದಿಯಲ್ಲಿದ್ದರು, ಇಂಗ್ಲೆಂಡ್ ಪರ ಆಡುತ್ತಿದ್ದಾಗ ಪಂದ್ಯದಿಂದ ಹೊರಗುಳಿಯಲೆಂದೇ ಉದ್ದೇಶಪೂರ್ವಕವಾಗಿ ವೇಲ್ಸ್ ಆಟಗಾರ ಬೆನ್ ಥ್ಯಾಚರ್‌ರನ್ನು ಫೌಲ್ ಮಾಡಿದ್ದಾಗಿ ಹೇಳಿಕೊಂಡರು. ಮುಂಜಾಗ್ರತೆಯ ಕ್ರಮವಾಗಿ ಒಂದು ಪಂದ್ಯದಿಂದ ಬೆಕ್‌ಹ್ಯಾಮ್ ಅಮಾನತುಗೊಳ್ಳಬೇಕಿತ್ತು, ಆದರೆ ಈ ನಡುವೆ ಗಾಯಗೊಂಡ ಕಾರಣ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಪರ ಆಡುವುದು ಕಷ್ಟಸಾಧ್ಯವೆಂದು ಅವರಿಗೆ ತಿಳಿದಿತ್ತು. ಪಂದ್ಯದಿಂದ ಹೊರಗುಳಿಯುವುದು ಖಚಿತವಾಗಿದ್ದರೂ, ಒಂದು ಪಂದ್ಯದ ಮಟ್ಟಿಗೆ ಅಮಾನತುಗೊಳ್ಳುವ ಸಲುವಾಗಿಯೇ ಉದ್ದೇಶಪೂರ್ವಕವಾಗಿ ಥ್ಯಾಚರ್‌ನ್ನು ಫೌಲ್ ಮಾಡಿದ್ದರು. ಈ ಕುರಿತು ವಿವರಣೆ ನೀಡುವಂತೆ ದಿ ಫುಟ್‌ಬಾಲ್ ಅಸೋಸಿಯೇಷನ್‌ ಬೆಕ್‌ಹ್ಯಾಮ್‌ರನ್ನು ಕೇಳಿತು. ತಮ್ಮಿಂದ ತಪ್ಪಾಗಿರುವುದನ್ನು ಬೆಕ್‌ಹ್ಯಾಮ್ ಒಪ್ಪಿಕೊಂಡರಲ್ಲದೆ, ಕ್ಷಮೆ ಕೋರಿದರು.[೫೮] ಆದರೆ ಕೆಲವು ದಿನಗಳ ನಂತರ ಬೆಕ್‌ಹ್ಯಾಮ್ ಮತ್ತೆ ಮೈದಾನದಿಂದ ಹೊರಗೆ ಕಳುಹಿಸಲ್ಪಟ್ಟರು, ವೆಲೆನ್ಶಿಯಾ CF ವಿರುದ್ಧ ರಿಯಲ್ ಮ್ಯಾಡ್ರಿಡ್‌ ಪರ ಆಡುತ್ತಿದ್ದಾಗ ಹಳದಿ ಕಾರ್ಡ್‌ನ್ನು ಪಡೆದರು, ರೆಫರಿಯ ತೀರ್ಮಾನವನ್ನು ವಂಗ್ಯವಾಗಿ ಅನುಮೋದಿಸಿದ್ದಕ್ಕೆ ಎರಡನೆ ಹಳದಿ ಕಾರ್ಡ್‌ ದೊರೆತಾಗ ತಾನಾಗಿಯೇ ಹೊರನಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಮೇಲ್ಮನವಿ ಮೇರೆಗೆ ಎರಡು ದಿನಗಳ ನಂತರ ಅಮಾನತನ್ನು ರದ್ದುಪಡಿಸಲಾಯಿತು. ಆ ಸೀಸನ್‌ನಲ್ಲಿ 2005 ಡಿಸೆಂಬರ್ 3ರಂದು ಗೆಟಾಫೆ CF ವಿರುದ್ಧದ ಲೀಗ್ ಪಂದ್ಯದಲ್ಲಿ ಬೆಕ್‌ಹ್ಯಾಮ್ ಮೂರನೇ ಬಾರಿ ಮೈದಾನದಿದ ಹೊರಗೆ ಕಳುಹಿಸಲ್ಪಟ್ಟರು, ಆದರೂ ಆ ಸೀಸನ್‌ನಲ್ಲಿ ಲಾ ಲೀಗಾದಲ್ಲಿ ಗೋಲು ಹೊಡೆಯಲು ನೆರವಾದವರ ಸಾಲಿನಲ್ಲಿ ಅವರು ಮುಂಚೂಣಿಯಲ್ಲಿದ್ದರು. 2005–06 ಲಾ ಲೀಗಾ ಪಂದ್ಯಾವಳಿಯಲ್ಲಿ 12 ಅಂಕಗಳ ಬಹುದೊಡ್ಡ ಅಂತರವಿದ್ದಾಗ್ಯೂ ರಿಯಲ್ ಮ್ಯಾಡ್ರಿಡ್‌ ದ್ವಿತೀಯ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು, ಬಾರ್ಸಿಲೋನಾ ಅಗ್ರ ಪಡೆಯಿತು. ಆದರೆ ಚಾಂಪಿಯನ್ಸ್ ಲೀಗ್‌ನಲ್ಲಿ ಆರ್ಸೆನಲ್ ವಿರುದ್ಧ ಸೋತ ನಂತರ ಮ್ಯಾಡ್ರಿಡ್‌ ಕೊನೆಯ 16ರ ಘಟ್ಟವನ್ನಷ್ಟೇ ತಲುಪಲು ಶಕ್ತವಾಯಿತು.

ರಿಯಲ್ ಮ್ಯಾಡ್ರಿಡ್ ಜೊತೆ ಪೂರ್ವಾಭ್ಯಾಸ

ಈ ಅವಧಿಯಲ್ಲಿ ಬೆಕ್‌ಹ್ಯಾಮ್ ಕ್ಯಾಲಿಫೋರ್ನಿಯಾದ ಲಾಸ್ ಎಂಜಲೀಸ್‌ ಮತ್ತು ಪೂರ್ವ ಲಂಡನ್‌ನಲ್ಲಿ ಫುಟ್‌ಬಾಲ್ ಅಕಾಡೆಮಿಗಳನ್ನು ಸ್ಥಾಪಿಸಿದರು. ಪುಸ್ತಕಗಳ ಆಸ್ಕರ್ ಎಂದೇ ಖ್ಯಾತಿವೆತ್ತ 2006 ಸಾಲಿನ ಬ್ರಿಟೀಷ್ ಬುಕ್ ಪ್ರಶಸ್ತಿಗಳ ತೀರ್ಪುಗಾರನಾಗಿಯೂ ನೇಮಕಗೊಂಡರು.[೫೯] 2007ರಲ್ಲಿ ರಿಯಲ್ ಮ್ಯಾಡ್ರಿಡ್‌ ಮೂರು ವರ್ಷಗಳಲ್ಲೇ ಮೊದಲ ಬಾರಿಗೆ ಸ್ಪಾನಿಷ್ ಲಾ ಲೀಗಾ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಬಾರ್ಸಿಲೋನಾ ವಿರುದ್ಧ ರಿಯಲ್ ಮ್ಯಾಡ್ರಿಡ್ ಮೇಲುಗೈ ಹೊಂದಿದ್ದುದೇ ಇದಕ್ಕೆ ಕಾರಣ. ರಿಯಲ್ ಮ್ಯಾಡ್ರಿಡ್‌ ಸೇರಿದ ಬಳಿಕ ಬೆಕ್‌ಹ್ಯಾಮ್‌ಗೆ ಇದು ಮೊದಲ ಪ್ರಶಸ್ತಿ ಕೂಡ ಹೌದು.ಆರಂಭದಲ್ಲಿ ತಂಡದ ವ್ಯವಸ್ಥಾಪಕ ಫ್ಯಾಬಿಯೊ ಕ್ಯಾಪೆಲ್ಲೊ ಬೆಕ್‌ಹ್ಯಾಮ್ ಪರವಾಗಿಲ್ಲದ್ದರಿಂದ ಫುಟ್‌ಬಾಲ್ ಸೀಸನ್‌ನ ಆರಂಭದಲ್ಲಿ ಅವರಿಗೆ ಕೆಲವಾರು ಪಂದ್ಯಗಳನ್ನಷ್ಟೇ ಆಡಲು ಸಾಧ್ಯವಾಯಿತು, ಬಲ ಪಾರ್ಶ್ವದಲ್ಲಿ ಆಡುವ ಜೋಸ್ ಅಂಟೊನಿಯೋ ಸಾಮಾನ್ಯವಾಗಿ ಪಂದ್ಯಕ್ಕೆ ಆಯ್ಕೆಯಾಗುತ್ತಿದ್ದರು. ಬೆಕ್‌ಹ್ಯಾಮ್ ಆಡಿದ ಮೊದಲ ಒಂಭತ್ತು ಪಂದ್ಯಗಳ ಪೈಕಿ, ಏಳರಲ್ಲಿ ಮ್ಯಾಡ್ರಿಡ್ ಪರಾಭವಗೊಂಡಿತು ರಿಯಲ್ ಮ್ಯಾಡ್ರಿಡ್‌‌‌ ಕ್ರೀಡಾ ನಿರ್ದೇಶಕ ಪ್ರಿಡ್ರ್ಯಾಗ್ ಮಿಜಟೋವಿಕ್ ಅವರು ಕರಾರಿನ ಬಗ್ಗೆ ಬೆಕ್‌ಹ್ಯಾಮ್ ಜೊತೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ ಬೆಕ್‌ಹ್ಯಾಮ್‌ರನ್ನು ಈ ಸೀಸನ್ ನಂತರ ರಿಯಲ್ ಮ್ಯಾಡ್ರಿಡ್‌ ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು 2007 ಜನವರಿ 10ರಂದು ಘೋಷಿಸಿದರು. ಆ ನಂತರ ತಿಪ್ಪರಲಾಗ ಹೊಡೆದ ಮಿಜಟೋವಿಕ್, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು ಬೆಕ್‌ಹ್ಯಾಮ್‌ರ ಕರಾರನ್ನು ನವೀಕರಿಸಲಾಗಿಲ್ಲ ಎಂದಷ್ಟೇ ಹೇಳಿದ್ದಾಗಿ ಸ್ಪಷ್ಟನೆ ನೀಡಿದರು.[೬೦]ಈ ಮಧ್ಯೆ, ಲಾಸ್ ಎಂಜಲೀಸ್ ಗ್ಯಾಲಕ್ಸಿ ತಂಡದೊಂದಿಗೆ ಆಡಲು ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ 2007 ಜನವರಿ 11ರಂದು ಬೆಕ್‌ಹ್ಯಾಮ್ ಪ್ರಕಟಿಸಿದರು. ಈ ಒಪ್ಪಂದ 2007 ಜುಲೈ 1ರಿಂದ ಕಾರ್ಯರೂಪಕ್ಕೆ ಬರಲಿದೆಯೆಂದೂ ತಿಳಿಸಿದರು. ರಿಯಲ್ ಮ್ಯಾಡ್ರಿಡ್ ಪರ ಬೆಕ್‌ಹ್ಯಾಮ್ ಕೊನೆಯ ಪಂದ್ಯವನ್ನು ಆಡಿದ್ದಾರೆ, ಹೀಗಿದ್ದೂ ತಂಡದೊಂದಿಗೆ ಅಭ್ಯಾಸದಲ್ಲಿ ಅವರು ಪಾಲ್ಗೊಳ್ಳುತ್ತಾರೆ ಎಂದು ಫ್ಯಾಬಿಯೊ ಕ್ಯಾಪೆಲ್ಲೊ 2007 ಜನವರಿ 13ರಂದು ತಿಳಿಸಿದರು.[೬೧]ನಂತರದ ದಿನಗಳಲ್ಲಿ ಕ್ಯಾಪೆಲ್ಲೊ ತಮ್ಮ ಹೇಳಿಕೆಯಿಂದ ಹಿಂದೆ ಸರಿಯಬೇಕಾಗಿ ಬಂತು ಮತ್ತು 2007 ಫೆಬ್ರವರಿ 10ರಂದು ರಿಯಲ್ ಸೊಶೀಡ್ಯಾಡ್ ವಿರುದ್ಧದ ಪಂದ್ಯದಲ್ಲಿ ತಂಡದೊಂದಿಗೆ ಬೆಕ್‌ಹ್ಯಾಮ್ ಸೇರಿಕೊಂಡರು - ಬೆಕ್‌ಹ್ಯಾಮ್ ಗೋಲು ಹೊಡೆದಿದ್ದೇ ಅಲ್ಲದೆ ರಿಯಲ್ ಮ್ಯಾಡ್ರಿಡ್‌ ಜಯಭೇರಿ ಮೊಳಗಿಸಿತು.[೬೨] 2007 ಮಾರ್ಚ್ 7ರಲ್ಲಿ ನಡೆದ UEFA ಚಾಂಪಿಯನ್ಸ್ ಲೀಗ್‌ನ ಪಂದ್ಯದಲ್ಲಿ ಬೆಕ್‌ಹ್ಯಾಮ್ ರಿಯಲ್ ಮ್ಯಾಡ್ರಿಡ್ ಪರವಾಗಿ ಕೊನೆಯ ಬಾರಿ ಆಡಿದರು, ಆದರೆ ರಿಯಲ್ ಮ್ಯಾಡ್ರಿಡ್‌ ತಂಡ ಸೋತು ಲೀಗ್‌ನಿಂದ ಹೊರಬಿತ್ತು (ಉಭಯ ತಂಡಗಳು ಸಮಬಲ ಸಾಧಿಸಿದ್ದ ವೇಳೆ 'ಅವೇ ಗೋಲ್ಸ್ ರೂಲ್' ವಿಧಾನದಿಂದ ವಿಜಯೀ ತಂಡವನ್ನು ನಿರ್ಧರಿಸಲಾಯಿತು). ಚಾಂಪಿಯನ್ಸ್ ಲೀಗ್‌ನಲ್ಲಿ ಬೆಕ್‌ಹ್ಯಾಮ್ ಒಟ್ಟು 103 ಬಾರಿ ಆಡಿದ್ದಾರೆ, ಸಮಕಾಲೀನ ಆಟಗಾರರ ಪೈಕಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಅವರದ್ದು.2007 ಜೂನ್ 17, ಲಾ ಲೀಗಾ ಸೀಸನ್‌ನ ಅಂತಿಮ ದಿನದಂದು ಮ್ಯಾಡ್ರಿಡ್ ಪರವಾಗಿ ಕೊನೆಯ ಪಂದ್ಯವನ್ನು ಆಡಿದ ಬೆಕ್‌ಹ್ಯಾಮ್ RCD ಮಲ್ಲೊರ್ಕಾವನ್ನು 3-1ರಿಂದ ಮಣಿಸಿ ಬಾರ್ಸಿಲೋನಾದಿಂದ ಪ್ರಶಸ್ತಿಯನ್ನು ಕಸಿದುಕೊಂಡರು. ಈ ಪಂದ್ಯದಲ್ಲಿ ಬೆಕ್‌ಹ್ಯಾಮ್ ಬಳಲಿ ನಿತ್ರಾಣಗೊಂಡು ಮೈದಾನದಿಂದ ಹೊರನಡೆದಾಗ, ಬದಲಿ ಆಟಗಾರನಾಗಿ ಬಂದ ಜೋಸ್ ಅಂಟೊನಿಯೊ ರಿಯೆಸ್‌ ಎರಡು ಗೋಲು ಹೊಡೆಯುವುದರೊಂದಿಗೆ ತಂಡ ಸೀಸನ್‌ನ ಮೊದಲ ಲಾ ಲೀಗಾ ಪ್ರಶಸ್ತಿಯನ್ನು ಜಯಿಸಿತು. ಕ್ಲಬ್‌ನೊಂದಿಗೆ ಬೆಕ್‌ಹ್ಯಾಮ್ ಕರಾರು ಮಾಡಿಕೊಂಡ ನಂತರ ಗೆದ್ದುಕೊಂಡ ಮೊದಲ ಪ್ರಶಸ್ತಿ ಇದಾಗಿದೆ. ಉಭಯ ತಂಡಗಳು ಸಮಬಲ ಸಾಧಿಸಿದ್ದಾಗ್ಯೂ, ಮ್ಯಾಡ್ರಿಡ್ ತಂಡ ಮುಖಾಮುಖಿ ದಾಖಲೆಯಲ್ಲಿ ಮೇಲುಗೈ ಸಾಧಿಸಿದ್ದ ಕಾರಣ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಸಾಧನೆಗೆ ಬೆಕ್‌ಹ್ಯಾಮ್ ಆರು ತಿಂಗಳು ಗಮನಾರ್ಹ ಆಟವಾಡಿದ್ದೂ ಒಂದು ಕಾರಣ. ಡೇವಿಡ್ ಬೆಕ್‌ಹ್ಯಾಮ್ ತಮ್ಮ ಆಟದಲ್ಲಿ ಸುಧಾರಣೆ ಕಂಡುಕೊಂಡಿರುವುದರಿಂದ LA ಗ್ಯಾಲಕ್ಸಿಗೆ ಅವರು ವರ್ಗಾವಣೆಗೊಳ್ಳುವುದನ್ನು ತಪ್ಪಿಸಲು ಪ್ರಯತ್ನಿಸುವುದಾಗಿ ರಿಯಲ್ ಮ್ಯಾಡ್ರಿಡ್‌ ಸೀಸನ್‌ನ ಕೊನೆಯಲ್ಲಿ ಘೋಷಿಸಿತು, ಆದರೆ ಮ್ಯಾಡ್ರಿಡ್‌ ಮಾತುಗಳನ್ನು ಕೇಳಲು LA ಗ್ಯಾಲಕ್ಸಿ ನಿರಾಕರಿಸಿತು, ಈ ನಿಟ್ಟಿನಲ್ಲಿ ಮ್ಯಾಡ್ರಿಡ್‌ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು.[೬೩]ರಿಯಲ್ ಮ್ಯಾಡ್ರಿಡ್ ತಂಡದ ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಏರಲು ಬೆಕ್‌ಹ್ಯಾಮ್‌ರೇ ಮೂಲ ಕಾರಣ, ಅವರು ತಂಡದಲ್ಲಿದ್ದ ವರ್ಷಗಳಲ್ಲಿ ಕ್ಲಬ್‌ನ ಮಾರುಕಟ್ಟೆ US$600 ದಶಲಕ್ಷಕ್ಕೆ ಏರಿತ್ತು ಎಂದು ಫೋರ್ಬ್ಸ್ ಮ್ಯಾಗಜಿನ್ ವರದಿ ಮಾಡಿತು. ಈ ವರದಿ ಬರುವ ಹೊತ್ತಿಗೆ ಬೆಕ್‌ಹ್ಯಾಮ್ ರಿಯಲ್ ಮ್ಯಾಡ್ರಿಡ್ ತಂಡಕ್ಕೆ ವಿದಾಯ ಹೇಳಿ ಒಂದು ತಿಂಗಳಾಗಿತ್ತು.

ಲಾಸ್ ಎಂಜಲೀಸ್ ಗ್ಯಾಲಕ್ಸಿ[ಬದಲಾಯಿಸಿ]

ಮೇಜರ್ ಲೀಗ್ ಸಾಕರ್‌ಲಾಸ್ ಎಂಜಲೀಸ್ ಗ್ಯಾಲಕ್ಸಿಯನ್ನು ಸೇರಿಕೊಳ್ಳುವುದಕ್ಕಾಗಿ ಡೇವಿಡ್ ಬೆಕ್‌ಹ್ಯಾಮ್ ರಿಯಲ್ ಮ್ಯಾಡ್ರಿಡ್‌ ತಂಡವನ್ನು ತೊರೆಯುತ್ತಿರುವುದು 2007 ಜನವರಿ 11ರಂದು ಖಚಿತವಾಯಿತು. ಮಾರನೇ ದಿನ, 2007 MLS ಸೂಪರ್‌ಡ್ರಾಫ್ಟ್ ಸಂಯೋಗದೊಂದಿಗೆ ಬೆಕ್‌ಹ್ಯಾಮ್ ಅಧಿಕೃತ ಪತ್ರಿಕಾಗೋಷ್ಠಿ ಕರೆದರು.[೬೪]

I'm coming there not to be a superstar. I'm coming there to be part of the team, to work hard and to hopefully win things. With me, it's about football. I'm coming there to make a difference. I'm coming there to play football... I'm not saying me coming over to the States is going to make soccer the biggest sport in America. That would be difficult to achieve. Baseball, basketball, American football, they've been around. But I wouldn't be doing this if I didn't think I could make a difference.[೬೫]

Beckham on going to America
From ESPN
ಬೆಕ್‌ಹ್ಯಾಮ್(ಕೇಂದ್ರ) LA ಗ್ಯಾಲಕ್ಸಿಗಾಗಿ ಮೊದಲ ಗೋಲನ್ನು ಹೊಡೆದರು

ಲಾಸ್ ಎಂಜಲೀಸ್ ಗ್ಯಾಲಕ್ಸಿ ಜೊತೆಗಿನ ಬೆಕ್‌ಹ್ಯಾಮ್‌ ಕರಾರು ಜುಲೈ 11ರಂದು ಕಾರ್ಯರೂಪಕ್ಕೆ ಬಂತು, ಮತ್ತು ಬೆಕ್‌ಹ್ಯಾಮ್‌ ಇನ್ನು ಮುಂದೆ ಗ್ಯಾಲಕ್ಸಿ ತಂಡಕ್ಕೆ ಆಡಲಿದ್ದಾರೆ ಎಂದು ಜುಲೈ13ರಂದು ದಿ ಹೋಮ್ ಡೆಪಾಟ್ ಸೆಂಟರ್‌ನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.ಬೆಕ್‌ಹ್ಯಾಮ್ 23 ಸಂಖ್ಯೆಯನ್ನು ಧರಿಸಲು ನಿರ್ಧರಿಸಿದರು. ಈ ಔಪಚಾರಿಕ ಪರಿಚಯದ ಮುನ್ನವೇ ಗ್ಯಾಲಕ್ಸಿ ಜಾಕೀಟುಗಳು 250,000 ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿವೆ ಎಂದೂ ಈ ಸಂದರ್ಭದಲ್ಲಿ ಘೋಷಿಸಲಾಯಿತು.[೬೬] ಜುಲೈ 21ರಂದು ವಿಶ್ವ ಸಾಕರ್ ಸರಣಿಯಲ್ಲಿ ಬೆಕ್‌ಹ್ಯಾಮ್ ಗ್ಯಾಲಕ್ಸಿ ಪರವಾಗಿ ಚೊಚ್ಚಲ ಪಂದ್ಯವನ್ನಾಡಿದರು, ಚೆಲ್ಸಿಯಾ ವಿರುದ್ಧ ಸೋತ ಈ ಪಂದ್ಯದಲ್ಲಿ ಬೆಕ್‌ಹ್ಯಾಮ್ 78ನೇ ನಿಮಿಷಕ್ಕೆ ಮೈದಾನಕ್ಕಿಳಿದಿದ್ದರು.[೬೭] ಎರಡು ವಾರಗಳ ನಂತರ ಅಗಸ್ಟ್ 9ರಂದು DC ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಲೀಗ್‌ಗೆ ಪಾದಾರ್ಪಣೆ ಮಾಡಿದರು.[೬೮]ಮರು ವಾರ ಅಂದರೆ ಅಗಸ್ಟ್ 15ರಂದು ಸೂಪರ್‌‌ಲೀಗಾ ಸೆಮಿ-ಫೈನಲ್ ಪಂದ್ಯದಲ್ಲಿ ಮತ್ತದೇ DC ಯುನೈಟೆಡ್ ವಿರುದ್ಧ ಆಡಿದರು. ಈ ಪಂದ್ಯದಲ್ಲಿ ಗ್ಯಾಲಕ್ಸಿ ಆಟಗಾರನಾಗಿ ಬೆಕ್‌ಹ್ಯಾಮ್ ಅನೇಕ ಪ್ರಥಮಗಳನ್ನು ಕಂಡರು; ಬೆಕ್‌ಹ್ಯಾಮ್‌ಗೆ ಇದು ಮೊದಲ ಪಂದ್ಯ, ಮೊದಲ ಹಳದಿ ಕಾರ್ಡ್ ಮತ್ತು ನಾಯಕನಾಗಿಯೂ ಮೊದಲ ಪಂದ್ಯ.[೬೯] ಈ ಪಂದ್ಯದಲ್ಲಿ ತಂಡಕ್ಕಾಗಿ ಬೆಕ್‌ಹ್ಯಾಮ್ ಫ್ರೀ ಕಿಕ್ ಮೂಲಕ ಮೊದಲ ಗೋಲು ಹೊಡೆದರು, ಅಲ್ಲದೆ ಉತ್ತರಾರ್ಧದಲ್ಲಿ ಲ್ಯಾಂಡನ್ ಡೊನೊವನ್‌ಗೆ ಗೋಲು ಹೊಡೆಯಲು ಸಹಕರಿಸಿದರು. ಈ ಗೋಲುಗಳು ಗ್ಯಾಲಕ್ಸಿಗೆ 2-0 ಜಯ ತಂದುಕೊಟ್ಟಿತು, ಮತ್ತು ಅಗಸ್ಟ್ 29ರಂದು ಪಚುಕಾ ವಿರುದ್ಧ ನಡೆಯಲಿದ್ದ ನಾರ್ಥ್ ಅಮೆರಿಕನ್ ಸೂಪರ್‌ಲೀಗಾ ಫೈನಲ್‌ನಲ್ಲಿ ಆಡಲು ಸ್ಥಾನ ಕಲ್ಪಿಸಿಕೊಟ್ಟಿತು.

ಡೇವಿಡ್ ಬೆಕ್‌ಹ್ಯಾಮ್

ಪಚುಕಾ ವಿರುದ್ಧದ ಸೂಪರ್‌ಲೀಗಾ ಫೈನಲ್ ಪಂದ್ಯದ ವೇಳೆ, ಬೆಕ್‌ಹ್ಯಾಮ್ ತಮ್ಮ ಮೊಣ ಕಾಲಿಗೆ ಗಾಯ ಮಾಡಿಕೊಂಡರು. ಅವರು ಮೂಳೆಕಟ್ಟನ್ನು ಉಳುಕಿಸಿಕೊಂಡಿರುವುದು MRI ಪರೀಕ್ಷೆಯಲ್ಲಿ ಕಂಡು ಬಂದ ಕಾರಣ ಆರು ವಾರಗಳ ವಿಶ್ರಾಂತಿ ಪಡೆಯಬೇಕಾಯಿತು. ಆದರೂ ತಮ್ಮದೇ ನೆಲದಲ್ಲಿ ನಡೆದ ಸೀಸನ್‌ನ ಕೊನೆಯ ಪಂದ್ಯಕ್ಕೆ ಬೆಕ್‌ಹ್ಯಾಮ್ ಹಾಜರಾದರು. ಅಕ್ಟೋಬರ್ 21ರಂದು ಸೀಸನ್‌ನ MLS ಫೈನಲ್ ಪಂದ್ಯದಲ್ಲಿ ಚಿಕಾಗೋ ಫೈರ್ ವಿರುದ್ಧ 1–0ಯಿಂದ ಸೋತು ನಿರ್ಣಾಯಕ ಹೋರಾಟದಿಂದ ಹೊರಬರಬೇಕಾಯಿತು. ಈ ಪಂದ್ಯದಲ್ಲಿ ಬೆಕ್‌ಹ್ಯಾಮ್ ಬದಲಿ ಆಟಗಾರನಾಗಿ ಆಡಿದರು, ಈ ಅವಧಿಯಲ್ಲಿ ಅವರಾಡಿದ ಒಟ್ಟು ಪಂದ್ಯಗಳು; ಎಂಟು (5 ಲೀಗ್), ಒಂದು ಗೋಲು (0 ಲೀಗ್) ಮತ್ತು ಮೂರು ನೆರವುಗಳು (2 ಲೀಗ್).2008 ಜನವರಿ 4ರಿಂದ ಮೂರು ವಾರಗಳ ಕಾಲ, ಪೂರ್ವಾವಧಿ ಅಭ್ಯಾಸಕ್ಕಾಗಿ ಗ್ಯಾಲಕ್ಸಿಗೆ ಮರಳುವವರೆಗೆ ಆರ್ಸೆನಲ್ ತಂಡದೊಂದಿಗೆ ಬೆಕ್‌ಹ್ಯಾಮ್ ಅಭ್ಯಾಸ ನಡೆಸಿದರು.[೭೦]ಎಪ್ರಿಲ್ 3ರಂದು ಸ್ಯಾನ್ ಜೋಸ್ ಅರ್ಥ್‌ಕ್ವೇಕ್ಸ್‌ ವಿರುದ್ಧದ ಪಂದ್ಯದಲ್ಲಿ ಗ್ಯಾಲಕ್ಸಿ ತಂಡದಲ್ಲಿದ್ದುಕೊಂಡು 9ನೇ ನಿಮಿಷದಲ್ಲಿ ಮೊದಲ ಲೀಗ್ ಗೋಲು ಹೊಡೆದರು.[೭೧] 2008 ಮೇ 24ರಂದು ಗ್ಯಾಲಕ್ಸಿಯು ಕನ್ಸಾಸ್ ಸಿಟಿ ವಿಝಾರ್ಡ್ಸ್‌ ತಂಡವನ್ನು 3–1 ಗೋಲುಗಳಿಂದ ಮಣಿಸಿ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ದಾಖಲೆ ಜಯ ಪಡೆಯಿತು. ಈ ಜಯದೊಂದಿಗೆ ಗ್ಯಾಲಕ್ಸಿ ತಂಡ ವೆಸ್ಟರ್ನ್ ಕಾನ್ಫರೆನ್ಸ್‌ನಲ್ಲಿ ಮೊದಲ ಸ್ಥಾನಕ್ಕೇರಿತು. ಈ ಪಂದ್ಯದಲ್ಲಿ ಬೆಕ್‌ಹ್ಯಾಮ್ 70 ಯಾರ್ಡ್ ದೂರದಿಂದ ಎಂಪ್ಟಿ-ನೆಟ್ ಗೋಲು(ಗೋಲು ಕೀಪರ್ ಇಲ್ಲದ ಸಂದರ್ಭ) ಹೊಡೆದರು.ಬೆಕ್‌ಹ್ಯಾಮ್ ಅರ್ಧಹಾದಿಯಲ್ಲೇ ಗೋಲು ಹೊಡೆಯುತ್ತಿರುವುದು ಅವರ ವೃತ್ತಿ ಜೀವನದಲ್ಲಿ ಇದು ಎರಡನೇ ಬಾರಿ. ಇದಕ್ಕೂ ಮೊದಲು ಸೆಲ್ಹರಸ್ಟ್ ಪಾರ್ಕ್‌ನಲ್ಲಿ ವಿಂಬ್ಲೆಡನ್‌ ವಿರುದ್ಧದ ಪಂದ್ಯದಲ್ಲಿ ಬೆಕ್‌ಹ್ಯಾಮ್ ಇದೇ ರೀತಿ ಗೋಲು ಹೊಡೆದಿದ್ದರು.[೭೨] ಆದರೂ ಫುಟ್‌ಬಾಲ್ ಸೀಸನ್‌ನ ಕೊನೆಯ ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮ ಮಟ್ಟದ ಆಟ ಪ್ರದರ್ಶಿಸಲು ವಿಫಲವಾದ ಗ್ಯಾಲಕ್ಸಿಗೆ ಒಟ್ಟಾರೆಯಾಗಿ ಆ ವರ್ಷ ನಿರಾಶಾದಾಯಕ ವರ್ಷವಾಗಿತ್ತು.ಈ ಮಧ್ಯೆ ಮಿಲನ್‌ನಿಂದ ಬೆಕ್‌ಹ್ಯಾಮ್ ವಾಪಸಾದ ಹೊತ್ತಿಗೆ, ಫುಟ್‌ಬಾಲ್ ಸೀಸನ್‌ನ ಅರ್ಧ ಭಾಗವೇ ಮುಗಿದು ಹೋಗಿದ್ದ ಕಾರಣ LAಯ ಅನೇಕ ಅಭಿಮಾನಿಗಳು ಅವರನ್ನು ಇಷ್ಟಪಡಲಿಲ್ಲ ಮತ್ತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು, ಪ್ರತಿಭಟನಾ ಸೂಚಕವಾಗಿ "ವಂಚಕನೇ ಮನೆಗೆ ತೆರಳು", "ಪಾರ್ಟ್ ಟೈಂ ಆಟಗಾರ" ಎಂಬಿತ್ಯಾದಿ ಘೋಷಣೆಗಳಿದ್ದ ಫಲಕಗಳನ್ನು LA ಅಭಿಮಾನಿಗಳು ಪ್ರದರ್ಶಿಸಿದರು.[೭೩]

ಮಿಲನ್‌ಗೆ ಎರವಲು[ಬದಲಾಯಿಸಿ]

AC ಮಿಲನ್ ಪರ ಬೆಕ್ಹಾಂ ಆಟ

ಫ್ಯಾಬಿಯೊ ಕ್ಯಾಪೆಲ್ಲೊ ಅಧಿಕಾರಾವಧಿಯಲ್ಲಿ ಇಂಗ್ಲೆಂಡ್ ತಂಡದಲ್ಲಿದ್ದುಕೊಂಡು ಯಶಸ್ಸು ಕಂಡಿದ್ದ ಬೆಕ್‌ಹ್ಯಾಮ್, 2009ರ ವಿಶ್ವ ಕಪ್ ಅರ್ಹತಾ ಪಂದ್ಯಗಳಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಯುರೋಪಿಗೆ ವಾಪಸಾಗುವರೆಂಬ ಊಹಾಪೋಹಗಳು 2008ರಲ್ಲಿ ಕೇಳಿ ಬಂದಿತ್ತು. ಈ ನಡುವೆ, 2009 ಜನವರಿ 7ರಿಂದ ಬೆಕ್‌ಹ್ಯಾಮ್ ಎರವಲು ಮೇಲೆ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂದು AC ಮಿಲನ್‌ 2008 ಅಕ್ಟೋಬರ್ 30ರಂದು ಘೋಷಿಸಿತು.[೭೪] ಈ ಎಲ್ಲ ವದಂತಿಗಳ ನಡುವೆಯೂ, MLSಅನ್ನು ತೊರೆಯುವ ಯಾವುದೇ ಇರಾದೆಯಿಲ್ಲ ಎಂದು ಬೆಕ್‌ಹ್ಯಾಮ್ ಸ್ಪಷ್ಟನೆ ನೀಡಿದರು, ಅಲ್ಲದೆ ಮಾರ್ಚ್‌ ವೇಳೆ 2009 ಸೀಸನ್‌ ಶುರುವಾಗುವ ಹೊತ್ತಿಗೆ ಗ್ಯಾಲಕ್ಸಿ ತಂಡಕ್ಕೆ ಮರಳುವುದಾಗಿ ಅವರು ಘೋಷಿಸಿದರು.[೭೫] ಈ ವರ್ಗಾವಣೆ ಕುರಿತು ಮಿಲನ್‌ ಕ್ಲಬ್‌ನೊಳಗೂ, ಹೊರಗೂ ಸಹಮತವಿರಲಿಲ್ಲ. ಇದು ಮಾರುಕಟ್ಟೆ ತಂತ್ರಗಾರಿಕೆ ಬಿಟ್ಟರೆ ಇನ್ನೇನೂ ಅಲ್ಲ ಎಂದು ಕ್ಲಬ್‌ನ ಕೆಲವು ಆಟಗಾರರು ಅಭಿಪ್ರಾಯಪಟ್ಟರು.[೭೬] ಮಿಲನ್‌ನಲ್ಲಿ [[ಕ್ರಿಸ್ಟಿಯನ್ ವೇರಿ|ಕ್ರಿಸ್ಟಿಯನ್ ವೇರಿ]] ಧರಿಸುತ್ತಿದ್ದ 32 ಸಂಖ್ಯೆಯ ಅಂಗಿಯನ್ನು ಬೆಕ್‌ಹ್ಯಾಮ್ ಆರಿಸಿಕೊಂಡರು, ಈವರೆಗೆ ಅವರು ಧರಿಸಿದ್ದ 7 ಮತ್ತು 23 ಸಂಖ್ಯೆಯ ಅಂಗಿಗಳನ್ನು ಇತರ ಆಟಗಾರರು ಅದಾಗಲೇ ಬಳಸುತ್ತಿದ್ದರು. ಈ ನಡುವೆ ಬೆಕ್‌ಹ್ಯಾಮ್‌ ವೈದ್ಯಕೀಯ ಪರೀಕ್ಷೆಗೊಳಗಾದರು, ಇನ್ನೂ ಐದು ವರ್ಷಗಳ ಕಾಲ 38ನೇ ವಯಸ್ಸಿನವರೆಗೂ ಆಡಬಹುದೆಂದು ಕ್ಲಬ್‌ನ ವೈದ್ಯರು ಬೆಕ್‌ಹ್ಯಾಮ್‌ರಿಗೆ ತಿಳಿಸಿದರು.[೭೭]

ಫ್ಲಾಮಿನಿ ಮತ್ತು ಫಿಲಿಪ್ಪೊರೊಂದಿಗಿರುವ ಬೆಕ್‌ಹ್ಯಾಮ್.

2009 ಜನವರಿ 11ರಂದು ಮಿಲನ್ ತಂಡದ ಪರವಾಗಿ ರೋಮಾ ವಿರುದ್ಧ ಚೊಚ್ಚಲ ಸೀರಿ A ಪಂದ್ಯವನ್ನಾಡಿದರು, 89 ನಿಮಿಷಗಳವರೆಗೂ ಆಟ ಮುಂದುವರಿದು 2-2 ಡ್ರಾದಲ್ಲಿ ಮುಕ್ತಾಯಗೊಂಡಿತು.[೭೮] ಜನವರಿ 25ರಂದು ಬೊಲೊಗ್ನಾ ವಿರುದ್ಧದ ಸೀರಿ A ಪಂದ್ಯದಲ್ಲಿ ತಮ್ಮ ಮೊದಲ ಗೋಲು ದಾಖಲಿಸಿ, ಮಿಲನ್‌ಗೆ 4–1ರಿಂದ ಪಂದ್ಯವನ್ನು ಗೆದ್ದುಕೊಟ್ಟರು. ಬೆಕ್‌ಹ್ಯಾಮ್‌ಗೆ ಇದು ಮೂರನೇ ಪಂದ್ಯವಾಗಿತ್ತು.[೭೯] ಮಾರ್ಚ್ ವೇಳೆಗೆ ಬೆಕ್‌ಹ್ಯಾಮ್ L.A.ಗೆ ವಾಪಸಾಗುವ ನಿರೀಕ್ಷೆಯಿತ್ತಾದರೂ, ಇಟೆಲಿಯ ಕ್ಲಬ್(ಮಿಲನ್) ಆಡಿದ ಆರಂಭದ ಪಂದ್ಯಗಳಲ್ಲೇ ಅವರು ಮಿಂಚಿದರು. ಮೊದಲ ನಾಲ್ಕು ಪಂದ್ಯಗಳಲ್ಲಿ ಬೆಕ್‌ಹ್ಯಾಮ್ ಎರಡು ಗೋಲು ಹೊಡೆದರೆ, ಇನ್ನು ಹಲವು ಗೋಲುಗಳು ಅವರ ಮೂಲಕ ಬಂದಿದ್ದವು. ಈ ನಡುವೆ, ಬೆಕ್‌ಹ್ಯಾಮ್‌ಗೆ ಬಹು-ದಶಲಕ್ಷ ಡಾಲರ್ ಸಂಭಾವನೆ ನೀಡುವ ಪ್ರಸ್ತಾಪವನ್ನು ಇಟೆಲಿಯ ಕ್ಲಬ್‌ ಮುಂದಿಟ್ಟಿರುವುದಾಗಿ ವರದಿಯಾಯಿತು. ಇದರ ಬೆನ್ನಿಗೆ ಬೆಕ್‌ಹ್ಯಾಮ್ ಮಿಲನ್‌ನಲ್ಲೇ ಉಳಿದುಕೊಳ್ಳಲಿದ್ದಾರೆ ಎಂಬ ವದಂತಿಗಳೂ ಹರಡಿದವು. ಈ ಊಹಾಪೋಹಗಳು ಫೆಬ್ರವರಿ 4ರಂದು ದೃಢೀಕರಿಸಲ್ಪಟ್ಟಿತು. 2010 ವಿಶ್ವ ಕಪ್‌ ಉದ್ದಕ್ಕೂ ಇಂಗ್ಲೆಂಡ್ ಪರ ಆಡುವ ನಿಟ್ಟಿನಲ್ಲಿ ತಾವು ಶಾಶ್ವತ ವರ್ಗಾವಣೆಯನ್ನು ಬಯಸುತ್ತಿರುವುದಾಗಿ ಬೆಕ್‌ಹ್ಯಾಮ್ ಹೇಳಿಕೆ ನೀಡಿದ್ದು ವದಂತಿಗಳಿಗೆ ಪುಷ್ಠಿ ನೀಡಿತು. ಆದರೆ ವೇತನ ಲೆಕ್ಕಾಚಾರದಲ್ಲಿ ಗ್ಯಾಲಕ್ಸಿಯನ್ನು ಸರಿಗಟ್ಟಲು ಮಿಲನ್ ವಿಫಲವಾಯಿತು, ಗ್ಯಾಲಕ್ಸಿ ಅದಾಗಲೆ ಬೆಕ್‌ಹ್ಯಾಮ್‌ಗೆ $10-15 ದಶಲಕ್ಷ ಬೆಲೆ ಕಟ್ಟಿತ್ತು.[೮೦] ಈ ಎಲ್ಲ ವದಂತಿಗಳ ನಡುವೆಯೂ, ವೇತನದ ಬಗ್ಗೆ ಮಾತುಕತೆಗಳು ಮುಂದುವರಿದವು.[೮೧] ಬೆಕ್‌ಹ್ಯಾಮ್‌‌ ಜುಲೈ ಮಧ್ಯದವರೆಗೂ ಮಿಲನ್ ತಂಡದಲ್ಲಿ ಆಡಲಿದ್ದಾರೆಂದು ಲಾಸ್ ಎಂಜಲೀಸ್ ಟೈಮ್ಸ್ ಮಾರ್ಚ್ 2ರಂದು ವರದಿ ಮಾಡಿತು.[೮೨] ಈ ವರದಿಯನ್ನು ದೃಢೀಕರಿಸಿದ ಬೆಕ್‌ಹ್ಯಾಮ್ ಮಾತುಕತೆಗಳ ವಿವರಗಳನ್ನು ಬಹಿರಂಗಪಡಿಸಿದರು. ಇದೊಂದು ವಿಶಿಷ್ಟ ಕಾಲಪಾಲುದಾರಿಕೆಯಾಗಿದ್ದು, ಆ ಪ್ರಕಾರ ಜುಲೈ ಮಧ್ಯದಿಂದ ಶುರುವಾಗಿ 2009 MLS ಅವಧಿ ಮುಗಿಯುವವರೆಗೂ L.A. ಜೊತೆ ಬೆಕ್‌ಹ್ಯಾಮ್ ಆಡುವರು.[೮೩]

ಅಂತರರಾಷ್ಟ್ರೀಯ ವೃತ್ತಿ ಜೀವನ[ಬದಲಾಯಿಸಿ]

ಇಂಗ್ಲೆಂಡ್ ನಾಯಕನಾಗಿ ಬೆಕ್‌ಹ್ಯಾಮ್

1996 ಸೆಪ್ಟೆಂಬರ್ 1ರಂದು ಮೊಲ್ಡೊವಾ ವಿರುದ್ಧದ ವಿಶ್ವ ಕಪ್ ಅರ್ಹತಾ ಪಂದ್ಯದ ವೇಳೆ ಇಂಗ್ಲೆಂಡ್ ರಾಷ್ಟ್ರೀಯ ಫುಟ್‌ಬಾಲ್ ತಂಡದಲ್ಲಿ ಮೊದಲ ಬಾರಿಗೆ ಬೆಕ್‌ಹ್ಯಾಮ್‌ ಕಾಣಿಸಿಕೊಂಡರು.[೮೪]1998 FIFA ವಿಶ್ವ ಕಪ್‌ ಸಂದರ್ಭದಲ್ಲಿ ಇಂಗ್ಲೆಂಡ್ ಪಾಲ್ಗೊಂಡ ಎಲ್ಲ ಅರ್ಹತಾ ಪಂದ್ಯಗಳಲ್ಲಿ ಬೆಕ್‌ಹ್ಯಾಮ್ ಆಡಿದ್ದರು, ಇಷ್ಟೇ ಅಲ್ಲದೆ ಫ್ರಾನ್ಸ್[೮೫] ವಿರುದ್ಧದ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಭಾಗವಾಗಿದ್ದರು, ಆದರೆ ಇನ್ನೊಂದೆಡೆ ಬೆಕ್‌ಹ್ಯಾಮ್‌ ಪಂದ್ಯದತ್ತ[೮೬] ಗಮನವಿಡುತ್ತಿಲ್ಲವೆಂದು ತಂಡದ ವ್ಯವಸ್ಥಾಪಕ ಗ್ಲೆನ್ ಹಾಡಲ್ಸಾರ್ವಜನಿಕವಾಗಿ ಹರಿಹಾಯ್ದಿದ್ದರು. ಹೀಗಾಗಿ ಇಂಗ್ಲೆಂಡ್‌ನ ಮೊದಲೆರಡೂ ಪಂದ್ಯಗಳಲ್ಲೂ ಬೆಕ್‌ಹ್ಯಾಮ್‌ ಆಡಿರಲಿಲ್ಲ. ಕೊಲಂಬಿಯಾ ವಿರುದ್ಧದ ಮೂರನೇ ಪಂದ್ಯಕ್ಕೆ ಅವರು ಆಯ್ಕೆಯಾದರು. ಈ ಪಂದ್ಯದಲ್ಲಿ ಬಹು ದೂರದಿಂದ ಫ್ರೀ ಕಿಕ್ ಗೋಲು ಹೊಡೆದ ಬೆಕ್‌ಹ್ಯಾಮ್ ಇಂಗ್ಲೆಂಡ್‌ ತಂಡಕ್ಕೆ 2-0 ಅಂತರದಿಂದ ಜಯ ತಂದುಕೊಟ್ಟರು. ಇಂಗ್ಲೆಂಡ್ ತಂಡಕ್ಕಾಗಿ ಅವರು ಹೊಡೆದ ಮೊದಲ ಗೋಲು ಇದು.ಸ್ಪರ್ಧೆಯ ಎರಡನೇ ಸುತ್ತಿನ (ಅಂತಿಮ 16), ಇಂಗ್ಲೆಂಡ್‌-ಅರ್ಜೆಂಟೀನಾ ಪಂದ್ಯದಲ್ಲಿ ಬೆಕ್‌ಹ್ಯಾಮ್ ಕೆಂಪು ಕಾರ್ಡ್‌ ಪಡೆದರು.[೮೭] ಡಿಯಾಗೊ ಸಿಮಿಯೋನ್‌ರಿಂದ ಫೌಲ್‌ಗೊಳಗಾದ ಬೆಕ್‌ಹ್ಯಾಮ್, ಸ್ವಲ್ಪಹೊತ್ತು ನೆಲದಲ್ಲೇ ಬಿದ್ದುಕೊಂಡಿದ್ದು ಸಿಮಿಯೋನ್‌ನ ಮೀನಖಂಡಕ್ಕೆ ಒದೆದರು. ಒದೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಸಿಮಿಯೋನ್, ಬೆಕ್‌ಹ್ಯಾಮ್‌ರನ್ನು ಮೈದಾನದಿಂದ ಹೊರಕ್ಕೆ ಕಳುಹಿಸಲು ಪ್ರಯತ್ನಿಸಿದರು. ಅದು ಸಫಲವಾಗದಿದ್ದಾಗ ಇಡೀ ತಂಡವನ್ನು ಸೇರಿಸಿಕೊಂಡು ಬೆಕ್‌ಹ್ಯಾಮ್‌ರನ್ನು ಹೊರಕ್ಕೆ ಕಳುಹಿಸುವಂತೆ ರೆಫರಿಯನ್ನು ಒತ್ತಾಯಿಸಿದರು.[೮೮] ಅಂತಿಮವಾಗಿ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತು ಮತ್ತು ಇಂಗ್ಲೆಂಡ್ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಹೊರಬಿದ್ದಿತು. ಇಂಗ್ಲೆಂಡ್ ತಂಡ ಹೊರ ನಡೆಯುವಂತಾದ್ದಕ್ಕೆ ಅನೇಕ ಅಭಿಮಾನಿಗಳು ಮತ್ತು ಪತ್ರಕರ್ತರು ಬೆಕ್‌ಹ್ಯಾಮ್‌ರನ್ನು ದೂರಿದರು, ಟೀಕೆ ಮತ್ತು ಹೀಯಾಳಿಕೆಗಳಿಗೂ ಅವರು ಗುರಿಯಾದರು. ಲಂಡನ್‌ನ ಪಬ್ ಒಂದರ ಹೊರಗಡೆ ಬೆಕ್‌ಹ್ಯಾಮ್‌‌ರ ಪ್ರತಿಕೃತಿಯನ್ನು ನೇಣಿಗೆ ಹಾಕಲಾಯಿತು. ಡೈಲಿ ಮಿರರ್ ಪತ್ರಿಕೆ ಗುರಿ ಹಲಗೆಯ ಗುರಿಗಣ್ಣಿನಲ್ಲಿ ಬೆಕ್‌ಹ್ಯಾಮ್‌‌ರ ಭಾವಚಿತ್ರ ಪ್ರಕಟಿಸಿತು.ವಿಶ್ವ ಕಪ್ ನಂತರ ಬೆಕ್‌ಹ್ಯಾಮ್ ಜೀವ ಬೆದರಿಕೆಗಳನ್ನೂ ಎದುರಿಸಿದರು.[೮೯]UEFA ಯುರೋ 2000 ಪಂದ್ಯಾವಳಿಯಲ್ಲಿ ಪೋರ್ಚುಗಲ್ ವಿರುದ್ಧ 3–2 ಗೋಲುಗಳಿಂದ ಇಂಗ್ಲೆಂಡ್ ಪರಾಭವಗೊಂಡಾಗ ಬೆಕ್‌ಹ್ಯಾಮ್ ಕುರಿತ ಟೀಕೆಗಳು ತಾರಕಕ್ಕೇರಿದವು. ಈ ಪಂದ್ಯದ ಎರಡು ಗೋಲುಗಳಿಗೆ ಬೆಕ್‌ಹ್ಯಾಮ್‌ ಕಾರಣೀಭೂತರಾಗಿದ್ದರೂ, ಇಂಗ್ಲೆಂಡ್ ಅಭಿಮಾನಿಗಳ ಗುಂಪೊಂದು ಪಂದ್ಯದುದ್ದಕ್ಕೂ ಅವರನ್ನು ಹಂಗಿಸಿತು.[೯೦] ಬೆಕ್‌ಹ್ಯಾಮ್ ಮಧ್ಯದ ಬೆರಳನ್ನು ಎತ್ತುವ ಮೂಲಕ ಇದಕ್ಕೆ ಪ್ರತಿಕ್ರಿಯಿಸಿದರು, ಈ ನಡವಳಿಕೆ ಟೀಕೆಗೆ ಗುರಿಯಾಯಿತು. ಈ ಮೊದಲು ಬೆಕ್‌ಹ್ಯಾಮ್ ನಿಂದನೆಯನ್ನು ಪ್ರೋತ್ಸಾಹಿಸುತ್ತಿದ್ದ ಕೆಲವು ಪತ್ರಿಕೆಗಳು ತೆಗಳುವುದನ್ನು ನಿಲ್ಲಿಸುವಂತೆ ಓದುಗರನ್ನು ಕೇಳಿಕೊಂಡವು.[೯೧]ಅಕ್ಟೋಬರ್‌ನಲ್ಲಿ ಇಂಗ್ಲೆಂಡ್ ವ್ಯವಸ್ಥಾಪಕ ಕೆವಿನ್ ಕೀಗನ್‌ ತಮ್ಮ ಸ್ಥಾನಕ್ಕೆ ರಾಜೀನಾಮೆಯಿತ್ತ ಬಳಿಕ 2000 ನವೆಂಬರ್ 15ರಂದು ಹಂಗಾಮಿ ವ್ಯವಸ್ಥಾಪಕ ಪೀಟಲ್ ಟೇಲರ್ ನಾಯಕನ ಸ್ಥಾನಕ್ಕೆ ಬೆಕ್‌ಹ್ಯಾಮ್‌ಗೆ ಬಡ್ತಿ ನೀಡಿದರು. ನಂತರ ನೂತನ ವ್ಯವಸ್ಥಾಪಕ ಸ್ವೆನ್-ಗೊರಾನ್ ಎರಿಕ್ಸನ್ ಅಧಿಕಾರಾವಧಿಯಲ್ಲೂ ಬೆಕ್‌ಹ್ಯಾಮ್‌ ನಾಯಕನಾಗಿ ಮುಂದುವರಿದರು. 2002 FIFA ವಿಶ್ವ ಕಪ್ ಫೈನಲ್ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಅರ್ಹವಾಗುವಲ್ಲಿ ಅವರು ನೆರವಾದರು, ಮುನಿಚ್‌ನಲ್ಲಿ ಜರ್ಮನಿ ವಿರುದ್ಧ 5–1ರ ಭಾರಿ ಗೆಲುವು ವಿಶ್ವ ಕಪ್‌ ಪ್ರವೇಶಿಸಲು ಪೂರಕವಾಯಿತು. 2001 ಅಕ್ಟೋಬರ್ 6ರಂದು ಗ್ರೀಸ್-ಇಂಗ್ಲೆಂಡ್ ನಡುವಿನ ಮಹತ್ವದ ಪಂದ್ಯ 2-2 ಡ್ರಾದಲ್ಲಿ ಮುಕ್ತಾಯಗೊಂಡಾಗ ಬೆಕ್‌ಹ್ಯಾಮ್ ಖಳನಾಯಕ ಪಟ್ಟವನ್ನು ಕಳಚಿ ಪೂರ್ಣ ಪ್ರಮಾಣದ ನಾಯಕನಾದರು. ವಿಶ್ವ ಕಪ್‌ಗೆ ಅರ್ಹಗೊಳ್ಳಬೇಕಿದ್ದರೆ ಇಂಗ್ಲೆಂಡ್ ಈ ಪಂದ್ಯವನ್ನು ಜಯಿಸುವುದು ಅಥವಾ ಡ್ರಾ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು, ಆದರೆ ಒಂದು ಹಂತದಲ್ಲಿ 2–1 ಗೋಲುಗಳೊಂದಿಗೆ ಇಂಗ್ಲೆಂಡ್ ಹಿಂದಿತ್ತು, ಕಾಲಾವಕಾಶವೂ ಕಡಿಮೆಯಿತ್ತು. ಗ್ರೀಕ್ ಪೆನಾಲ್ಟಿ ಸ್ಥಳದಿಂದ ಎಂಟು ಯಾರ್ಡ್ (7 ಮೀಟರ್) ಹೊರಗೆ ಟೆಡ್ಡಿ ಶೆರ್ರಿಗ್ಹಾಂ ಫೌಲ್ ಆದಾಗ ಇಂಗ್ಲೆಂಡ್ ತಂಡಕ್ಕೆ ಫ್ರೀ-ಕಿಕ್ ಅವಕಾಶ ದೊರೆಯಿತು. ಈ ಅವಕಾಶವನ್ನು ಬಳಸಿಕೊಂಡ ಬೆಕ್‌ಹ್ಯಾಮ್ ಮಿಂಚಿನ ವೇಗದಲ್ಲಿ ಗುಂಗುರಾಗಿ ಗೋಲು ದಾಖಲಿಸಿ ತಂಡವನ್ನು ವಿಶ್ವ ಕಪ್‌ಗೆ ಕೊಂಡೊಯ್ದರು. ಬೆಕ್‌ಹ್ಯಾಮ್ ಹೊಡೆದ ಈ ಗೋಲು ಮುಂದಕ್ಕೆ ಅವರ ವಿಶಿಷ್ಟ ಗುರುತಾಯಿತು. ಇದಾದ ಕೆಲವೇ ದಿನಗಳಲ್ಲಿ, 2001ರ BBC ವರ್ಷದ ಕ್ರೀಡಾ ವ್ಯಕ್ತಿ ಪ್ರಶಸ್ತಿಗೆ ಭಾಜನರಾದರು. ಆದರೆ ಬೆಕ್‌ಹ್ಯಾಮ್, FIFA ವಿಶ್ವ ವರ್ಷದ ಆಟಗಾರ ಹಣಾಹಣಿಯಲ್ಲಿ ಮತ್ತೆ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು, ಪೋರ್ಚುಗಲ್‌ನ ಲೂಯಿಸ್ ಫಿಗೊ ಪ್ರಶಸ್ತಿಯನ್ನು ಪಡೆದರು. 2002 FIFA ವಿಶ್ವ ಕಪ್ ಹೊತ್ತಿಗೆ ಬೆಕ್‌ಹ್ಯಾಮ್ ದೈಹಿಕವಾಗಿ ಭಾಗಶಃ ಸಮರ್ಥರಾಗಿದ್ದರು, ಮತ್ತು ಸ್ವೀಡನ್‌ ವಿರುದ್ಧ ಆರಂಭಿಕ ಪಂದ್ಯವನ್ನಾಡಿದರು. ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಬೆಕ್‌ಹ್ಯಾಮ್ ಪೆನಾಲ್ಟಿ ಗೋಲು ಹೊಡೆದು ಇಂಗ್ಲೆಂಡ್‌ ಗೆಲುವಿಗೆ ಕಾರಣರಾದರು, ಈ ಸೋಲಿನೊಂದಿಗೆ ಅರ್ಜೆಂಟೀನಾ ನಾಕೌಟ್ ಹಂತಕ್ಕೆ ತಲುಪಲು ವಿಫಲವಾಯಿತು. ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪ್ರಶಸ್ತಿಯ ಫೇವರಿಟ್ ಬ್ರೆಜಿಲ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿತ್ತು. ನಂತರದ ತಿಂಗಳು, ಮ್ಯಾಂಚೆಸ್ಟರ್‌ನಲ್ಲಿ ನಡೆದ 2002 ಕಾಮನ್‌ವೆಲ್ತ್ ಗೇಮ್ಸ್‌‌ ಉದ್ಘಾಟನಾ ಸಮಾರಂಭದಲ್ಲಿ ಕಿರ್ಸ್ಟಿ ಹೊವರ್ಡ್‌ ಅವರು ಜುಬಿಲೀ ಬ್ಯಾಟನ್ ಟೂ ದಿ ಕ್ವೀನ್ ಗೌರವ ಪಡೆಯುವಾಗ ಬೆಕ್‌ಹ್ಯಾಮ್ ಜೊತೆಯಾಗಿದ್ದರು. UEFA ಯುರೋ 2004ನ ಎಲ್ಲ ಇಂಗ್ಲೆಂಡ್ ಪಂದ್ಯಗಳಲ್ಲೂ ಬೆಕ್‌ಹ್ಯಾಮ್ ಆಡಿದರು, ಆದರೆ ಪಂದ್ಯಾವಳಿ ಅವರ ಪಾಲಿಗೆ ನಿರಾಶೆ ತಂದಿತ್ತು. ಫ್ರಾನ್ಸ್ ವಿರುದ್ಧದ ಪಂದ್ಯದಲ್ಲಿ ಪೆನಾಲ್ಟಿ ಗೋಲು ದಾಖಲಿಸುವಲ್ಲಿ ವಿಫಲರಾದ್ದರಿಂದಾಗಿ ಇಂಗ್ಲೆಂಡ್ 2-1ರಿಂದ ಸೋಲು ಅನುಭವಿಸಿತ್ತು, ಮತ್ತು ಪೋರ್ಚುಗಲ್ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಮತ್ತೊಂದು ಪೆನಾಲ್ಟಿ ಶೂಟೌಟ್ ಅವಕಾಶವನ್ನು ಕಳೆದುಕೊಂಡಿದ್ದರು. ಶೂಟೌಟ್‌ನಲ್ಲಿ ವಿಫಲವಾದ ಇಂಗ್ಲೆಂಡ್ ಸ್ಪರ್ಧೆಯಿಂದ ಹೊರಬಿತ್ತು.2005 ಜನವರಿಯಲ್ಲಿ ಬೆಕ್‌ಹ್ಯಾಮ್ UNICEFಸೌಹಾರ್ದ ರಾಯಭಾರಿಯಾದರು, ಅಲ್ಲದೆ 2012 ಬೇಸಿಗೆ ಒಲಂಪಿಕ್ ಕ್ರೀಡಾಕೂಟಕ್ಕಾಗಿ ಲಂಡನ್‌ನ ಯಶಸ್ವಿ ಬಿಡ್‌ಗೆ ಪ್ರಚಾರ ನೀಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.[೯೨] 2005 ಅಕ್ಟೋಬರ್‌ನಲ್ಲಿ ಆಸ್ಟ್ರಿಯಾ ವಿರುದ್ಧ ಪಂದ್ಯ ಪ್ರಗತಿಯಲ್ಲಿದ್ದಾಗ ಬೆಕ್‌ಹ್ಯಾಮ್ ಮೈದಾನದಿಂದ ಹೊರಗೆ ಕಳುಹಿಸಲ್ಪಟ್ಟರು, ಮೈದಾನದಿಂದ ಹೊರಗೆ ಕಳುಹಿಸಲ್ಪಟ್ಟ ಇಂಗ್ಲೆಂಡ್‌ನ ಮೊದಲ ನಾಯಕ ಮತ್ತು ಇಂಗ್ಲೆಂಡ್‌‌ಗಾಗಿ ಆಡುತ್ತಿರುವಾಗ ಎರಡು ಬಾರಿ ಹೊರಗೆ ಕಳುಹಿಸಲ್ಪಟ್ಟ ಮೊದಲ ಆಟಗಾರ (ಏಕೈಕ ಆಟಗಾರ) ಎಂಬ ಅಪಖ್ಯಾತಿಗೆ ಅವರು ತುತ್ತಾದರು. ಮರು ತಿಂಗಳು ಅರ್ಜೆಂಟೀನಾ ವಿರುದ್ಧ ನಡೆದ ಅಂತರರಾಷ್ಟ್ರೀಯ ಸ್ನೇಹಿ ಪಂದ್ಯದಲ್ಲಿ ಬೆಕ್‌ಹ್ಯಾಮ್ 50ನೇ ಬಾರಿ ಇಂಗ್ಲೆಂಡ್ ತಂಡದ ನೇತೃತ್ವವಹಿಸಿದರು.2006 ಜೂನ್ 10ರಂದು 2006 FIFA ವಿಶ್ವ ಕಪ್‌ ಉದ್ಘಾಟನಾ ಪಂದ್ಯದಲ್ಲಿ ಪೆರುಗ್ವೆ ವಿರುದ್ಧ ಬೆಕ್‌ಹ್ಯಾಮ್ ಹೊಡೆದ ಫ್ರೀ ಕಿಕ್ಅನ್ನು ಕಾರ್ಲೋಸ್ ಗಮರ್ರ್ ಯಶಸ್ವಿಯಾಗಿ ಗೋಲು ಕಂಬಕ್ಕೆ ತಲುಪಿಸಿದರು. ಇಂಗ್ಲೆಂಡ್ ಈ ಪಂದ್ಯವನ್ನು 1–0ಯಿಂದ ಜಯಿಸಿತು, ಒಂದರ್ಥದಲ್ಲಿ ಈ ಗೋಲನ್ನು ಬೆಕ್‌ಹ್ಯಾಮ್‌ ಹೊಡೆದ ಸ್ವಂತ-ಗೋಲು ಎನ್ನಬಹುದು. 2006 ಜೂನ್ 15ರಂದು ಟ್ರಿನಿಡಾಡ್ ಮತ್ತು ಟೊಬ್ಯಾಗೊ ವಿರುದ್ಧ ಇಂಗ್ಲೆಂಡ್ ಆಡಿದ ಪಂದ್ಯದಲ್ಲಿ, 83ನೇ ನಿಮಿಷದಲ್ಲಿ ಬೆಕ್‌ಹ್ಯಾಮ್ ಚೆಂಡನ್ನು ಕ್ರಾಸ್ ಮಾಡಿದಾಗ ಪೀಟರ್ ಕ್ರೌಚ್ ಯಶಸ್ವಿಯಾಗಿ ಗೋಲು ಹೊಡೆದರು. ಈ ಗೋಲಿನೊಂದಿಗೆ ಇಂಗ್ಲೆಂಡ್ 1–0 ಮುನ್ನಡೆ ಸಾಧಿಸಿತು. ನಂತರದ ಅವಧಿಯಲ್ಲಿ ಸ್ಟೀವನ್ ಗೆರ್ರಾರ್ಡ್‌ ಗೋಲು ಹೊಡೆಯಲು ಬೆಕ್‌ಹ್ಯಾಮ್ ನೆರವಾದರು. ಕೊನೆಗೆ ಇಂಗ್ಲೆಂಡ್ ಪಂದ್ಯವನ್ನು 2–0ಯಿಂದ ಜಯಿಸಿತು. ಈ ಪಂದ್ಯದಲ್ಲಿನ ಅತ್ಯುತ್ತಮ ಆಟಕ್ಕಾಗಿ ಪಂದ್ಯಾವಳಿಯ ಪ್ರಾಯೋಜಕ ಬಡ್‌ವೈಯಸರ್ ಅವರು ಬೆಕ್‌ಹ್ಯಾಮ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪ್ರಕಟಿಸಿದರು.

ಈಕ್ವೆಡರ್ ವಿರುದ್ಧ ಇಂಗ್ಲೆಂಡ್ ಆಡಿದ ಎರಡನೇ ಸುತ್ತಿನ ಪಂದ್ಯದಲ್ಲಿ ಬೆಕ್‌ಹ್ಯಾಮ್ 59ನೇ ನಿಮಿಷದಲ್ಲಿ ಫ್ರೀ ಕಿಕ್ ಮೂಲಕ ಗೋಲು ಹೊಡೆದರು. ಇಂಗ್ಲೆಂಡ್ ಈ ಪಂದ್ಯವನ್ನು 1-0ಯಿಂದ ಗೆದ್ದುಕೊಂಡಿತಲ್ಲದೆ, ಕ್ವಾರ್ಟರ್‌-ಫೈನಲ್‌ ಪಂದ್ಯಗಳಿಗೆ ಪ್ರವೇಶ ಪಡೆಯಿತು. ಮೂರು ಪ್ರತ್ಯೇಕ ವಿಶ್ವ ಕಪ್‌ಗಳಲ್ಲೂ[೯೩] ಫ್ರೀ ಕಿಕ್ ಗೋಲು ಹೊಡೆದ ಮೊದಲ ಇಂಗ್ಲಿಷ್ ಆಟಗಾರನೆಂಬ ಕೀರ್ತಿಗೆ ಬೆಕ್‌ಹ್ಯಾಮ್ ಪಾತ್ರರಾದರು. ಪಂದ್ಯ ಆರಂಭಗೊಳ್ಳುವುದಕ್ಕೆ ಮುನ್ನ ಬೆಕ್‌ಹ್ಯಾಮ್ ಅನಾರೋಗ್ಯಕ್ಕೀಡಾಗಿದ್ದರು ಮತ್ತು ವಿಜಯೀ ಗೋಲು ಹೊಡೆದ ನಂತರ ನೀರಿನ ಅಂಶ ಕಡಿಮೆಯಾಗಿ ಅಸ್ವಸ್ಥಗೊಂಡು ಅನೇಕ ಬಾರಿ ವಾಂತಿ ಮಾಡಿದರು.

ಪೋರ್ಚುಗಲ್ ವಿರುದ್ಧದ ಕ್ವಾರ್ಟರ್‌-ಫೈನಲ್ ಪಂದ್ಯದಲ್ಲಿ, ಆಟದ ಉತ್ತರಾರ್ಧದ ಆರಂಭದಲ್ಲೇ ಬೆಕ್‌ಹ್ಯಾಮ್ ಗಾಯಗೊಂಡರು. ಬದಲಿ ಆಟಗಾರ ಬಂದರೂ ಇಂಗ್ಲೆಂಡ್ ತಂಡ ಪೆನಾಲ್ಟಿ (3-1)ಯಲ್ಲಿ ಪರಾಭವಗೊಂಡಿತು, ಹೆಚ್ಚುವರಿ ಸಮಯದಲ್ಲೂ ಉಭಯ ತಂಡಗಳು ಗೋಲಿಲ್ಲದೆ 0–0 ಇದ್ದಾಗ ಪೆನಾಲ್ಟಿ ಮೊರೆ ಹೋಗಲಾಗಿತ್ತು.

ತಮಗೆ ಆಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬದಲಿ ಆಟಗಾರ ಮೈದಾನಕ್ಕಿಳಿದಾಗ ತಲ್ಲಣಗೊಂಡಿದ್ದ ಬೆಕ್‌ಹ್ಯಾಮ್, ಭಾವೋದ್ವೇಗಕ್ಕೆ ಒಳಗಾಗಿ ಒಂದು ಹಂತದಲ್ಲಿ ಕಣ್ಣೀರಿಟ್ಟರು.

ವಿಶ್ವ ಕಪ್ ಪಂದ್ಯಾವಳಿಯಿಂದ ಇಂಗ್ಲೆಂಡ್ ಹೊರಬಂದ ಮರುದಿನವೇ ಬೆಕ್‌ಹ್ಯಾಮ್ ಪತ್ರಿಕಾಗೋಷ್ಠಿ ಕರೆದು ಭಾವುಕರಾಗಿ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದನ್ನು ಪ್ರಕಟಿಸಿದರು,[೯೪]; "ನನ್ನ ದೇಶದ ನೇತೃತ್ವವಹಿಸಲು ಅವಕಾಶ ದೊರೆತದ್ದು ಗೌರವ, ಮಾತ್ರವಲ್ಲದೆ ನನ್ನ ಪಾಲಿನ ಸುಯೋಗ. ನಾನಾಡಿದ 95[೯೫] ಪಂದ್ಯಗಳ ಪೈಕಿ 58 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದೇನೆ. ಸ್ಟೀವ್ ಮೆಕ್‌ಲಾರೆನ್ ಮಾರ್ಗದರ್ಶನದಲ್ಲಿ ಹೊಸ ಪರ್ವಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಾಯಕತ್ವವನ್ನು ಇನ್ನೊಬ್ಬರಿಗೆ ಹಸ್ತಾಂತರಿಸುವುದು ಸೂಕ್ತ ಎಂದು ಭಾವಿಸಿದ್ದೇನೆ" ಎಂದರು.

(ಬೆಕ್‌ಹ್ಯಾಮ್ ನಿಜವಾಗಿ ಅಲ್ಲಿವರೆಗೂ 94 ಪಂದ್ಯಗಳನ್ನು ಆಡಿದ್ದರು.

ನಂತರ ಚೆಲ್ಸಿಯಾ ತಂಡದ ನಾಯಕ ಜಾನ್ ಟೆರ್ರಿ ಇಂಗ್ಲೆಂಡ್ ತಂಡದ ನೇತೃತ್ವವಹಿಸಿಕೊಂಡರು.[೯೬]

ವಿಶ್ವ ಕಪ್ ನಂತರ ನಾಯಕ ಸ್ಥಾನದಿಂದ ಕೆಳಗಿಳಿದ ಬಳಿಕ, ಇಂಗ್ಲೆಂಡ್ ರಾಷ್ಟ್ರೀಯ ತಂಡದಿಂದಲೂ ಅವರನ್ನು ಕೈಬಿಡಲಾಯಿತು. 2006 ಅಗಸ್ಟ್ 11ರಂದು ನೂತನ ತರಬೇತುದಾರ ಸ್ಟೀವ್ ಮೆಕ್‌ಲಾರೆನ್ ಆಯ್ಕೆ ಮಾಡಿದ ರಾಷ್ಟ್ರೀಯ ತಂಡದಲ್ಲಿ ಬೆಕ್‌ಹ್ಯಾಮ್ ಹೆಸರು ಇರಲಿಲ್ಲ.

ತಂಡದೊಂದಿಗೆ ಹೊಸ ದಿಕ್ಕಿನತ್ತ ಮುನ್ನಡೆಯಲು ನಿರ್ಧರಿಸಿರುವುದರಿಂದ ಬೆಕ್‌ಹ್ಯಾಮ್‌ರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಲಿಲ್ಲ ಎಂದು ಮೆಕ್‌ಲಾರೆನ್ ಸಮಜಾಯಿಷಿ ನೀಡಿದರು.

ಭವಿಷ್ಯದಲ್ಲಿ ಬೆಕ್‌ಹ್ಯಾಮ್‌ ಮತ್ತೆ ತಂಡಕ್ಕೆ ಸೇರಿಕೊಳ್ಳಬಹುದು ಎಂದೂ ಮೆಕ್‌ಲಾರೆನ್ ತಿಳಿಸಿದರು. ಶಾನ್ ರೈಟ್-ಫಿಲಿಪ್ಸ್, ಕೀರನ್ ರಿಚರ್ಡ್ಸನ್, ಮತ್ತು ಬೆಕ್‌ಹ್ಯಾಮ್‌ಗೆ ಪರ್ಯಾಯವಾಗಿ ಆರನ್ ಲೆನನ್‌ ಮೊದಲಾದವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಅಂತಿಮವಾಗಿ ಬೆಕ್‌ಹ್ಯಾಮ್ ಸ್ಥಾನಕ್ಕೆ ಸ್ಟೀವನ್ ಗೆರ್ರಾರ್ಡ್‌‌ರನ್ನು ಆರಿಸಿಕೊಳ್ಳಲು ಮೆಕ್‌ಲಾರೆನ್ ತೀರ್ಮಾನಿಸಿದರು.

ಬ್ರೆಜಿಲ್‌ನ ಜಾನ್ ಟೆರ್ರಿ ಸ್ಕೋರು ಮಾಡಿದಕ್ಕೆ ಪ್ರತಿಯಾಗಿ ಬೆಕ್‌ಹ್ಯಾಮ್ ಫ್ರೀ ಕಿಕ್ ಮಾಡುತ್ತಿರುವುದು

ಬೆಕ್‌ಹ್ಯಾಮ್‌ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಮೆಕ್‌ಲಾರೆನ್ 2007 ಮೇ 26ರಂದು ಪ್ರಕಟಿಸಿದರು. ನಾಯಕನ ಸ್ಥಾನದಿಂದ ಕೆಳಗಿಳಿದ ನಂತರ ತಂಡಕ್ಕೆ ಬೆಕ್‌ಹ್ಯಾಮ್‌ ವಾಪಸಾಗುತ್ತಿರುವುದು ಅದೇ ಮೊದಲು. ಹೊಸ ವೆಂಬ್ಲಿ ಕ್ರೀಡಾಂಗಣದಲ್ಲಿ ಬ್ರೆಜಿಲ್-ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದಲ್ಲಿ ಬೆಕ್‌ಹ್ಯಾಮ್ ಉತ್ತಮವಾಗಿ ಆಡಿದರು. ಮೆಕ್‌ಲಾರೆನ್ ಮಾರ್ಗದರ್ಶನದಲ್ಲಿ ಬೆಕ್‌ಹ್ಯಾಮ್‌ಗೆ ಆಗಷ್ಟೇ ಆಟ ಆರಂಭಿಸಿದ್ದರು.

ಪಂದ್ಯದ ಉತ್ತರಾರ್ಧದಲ್ಲಿ, ಇಂಗ್ಲೆಂಡ್‌ ಪರ ಗೋಲು ಹೊಡೆಯುವ ಅವಕಾಶ ಮಾಡಿಕೊಟ್ಟರು, ನಾಯಕ ಜಾನ್ ಟೆರ್ರಿ ಗೋಲು ಹೊಡೆದರು.

ಮೇಲ್ನೋಟಕ್ಕೆ ಬ್ರೆಜಿಲ್ ವಿರುದ್ಧ ಇಂಗ್ಲೆಂಡ್ ಜಯಗಳಿಸುವ ಸಾಧ್ಯತೆಗಳು ಕಂಡು ಬಂದಿತ್ತು, ಆದರೆ ಪಂದ್ಯದ ಕೊನೆಯ ಕ್ಷಣಗಳಲ್ಲಿ ಹೊಸಬ ಡಿಯಗೊ ಗೋಲು ಹೊಡೆದು ಪಂದ್ಯವನ್ನು ಸಮನಾಗಿಸಿದರು.

ನಂತರ ಇಂಗ್ಲೆಂಡ್ ಆಡಿದ ಈಸ್ಟೊನಿಯಾ ವಿರುದ್ಧದ ಯುರೋ 2008 ಅರ್ಹತಾ ಪಂದ್ಯದಲ್ಲಿ ಮೈಕೆಲ್ ಒವೆನ್ ಮತ್ತು ಪೀಟರ್ ಕ್ರೌಚ್‌ಗೆ ತಮ್ಮದೇ ಆದ ಶೈಲಿಯಲ್ಲಿ ಗೋಲು ಹೊಡೆಯುವ ಎರಡು ಅವಕಾಶಗಳನ್ನು ದೊರಕಿಸಿಕೊಟ್ಟರು, ಈ ಗೋಲುಗಳಿಂದಾಗಿ ಇಂಗ್ಲೆಂಡ್ 3-0ಯಿಂದ ಪಂದ್ಯವನ್ನು ಉಳಿಸಿಕೊಂಡಿತು.

ಆ ಎರಡು ಪಂದ್ಯಗಳಲ್ಲಿ ಬಂದ ನಾಲ್ಕು ಗೋಲುಗಳ ಪೈಕಿ ಮೂರು ಗೋಲುಗಳು ಬೆಕ್‌ಹ್ಯಾಮ್ ನೆರವಿನಿಂದ ಬಂದಿದ್ದವು,[೯೭] ಮತ್ತು ಮೇಜರ್ ಲೀಗ್ ಸಾಕರ್‌ಗೆ ತೆರಳಿದ ಬಳಿಕವೂ ಇಂಗ್ಲೆಂಡ್ ತಂಡದಲ್ಲಿ ಆಡಲು ಬಯಸುವುದಾಗಿ ಬೆಕ್‌ಹ್ಯಾಮ್ ಹೇಳಿಕೆ ನೀಡಿದರು.

2007 ಅಗಸ್ಟ್ 22ರಂದು ಜರ್ಮನಿ ವಿರುದ್ಧದ ಸ್ನೇಹಿ ಪಂದ್ಯದಲ್ಲಿ ಇಂಗ್ಲೆಂಡ್ ಪರವಾಗಿ ಬೆಕ್‌ಹ್ಯಾಮ್ ಆಡಿದರು, ಇದರೊಂದಿಗೆ ಯುರೋಪ್ ಹೊರತಾದ ಕ್ಲಬ್ ತಂಡದಲ್ಲಿದ್ದುಕೊಂಡು ಇಂಗ್ಲೆಂಡ್ ಪರವಾಗಿ ಆಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು.[೯೮]

2007 ನವೆಂಬರ್ 21ರಂದು ಕ್ರೊವೇಷಿಯಾ ವಿರುದ್ಧ ಬೆಕ್‌ಹ್ಯಾಮ್ 99ನೇ ಪಂದ್ಯವನ್ನಾಡಿದರು, ಈ ಪಂದ್ಯದಲ್ಲಿ ಪೀಟರ್ ಕ್ರೌಚ್‌ಗೆ ಗೋಲು ಹೊಡೆಯುವ ಅವಕಾಶ ಗಳಿಸಿಕೊಟ್ಟು ಪಂದ್ಯ 2–2 ಡ್ರಾದಲ್ಲಿ ಮುಕ್ತಾಯಗೊಳ್ಳಲು ಕಾರಣರಾದರು. ಆದರೆ ನಂತರದ ಪಂದ್ಯವನ್ನು ಇಂಗ್ಲೆಂಡ್ 2–3 ಗೋಲುಗಳಿಂದ ಸೋತಿದ್ದರಿಂದಾಗಿ ಯುರೋ 2008 ಫೈನಲ್ಸ್‌ಗೆ ಅರ್ಹಗೊಳ್ಳಲು ವಿಫಲವಾಯಿತು.

ಹೀಗಿದ್ದೂ, ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಹೊಂದುವ ಯಾವುದೇ ಯೋಚನೆ ತಮ್ಮ ಮುಂದಿಲ್ಲವೆಂದು ಬೆಕ್‌ಹ್ಯಾಮ್ ತಿಳಿಸಿದರು, ಅಲ್ಲದೆ ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ಮುಂದುವರಿಸಲು ಬಯಸಿರುವುದಾಗಿಯೂ ಹೇಳಿದರು.[೯೯]


ಸ್ವಿಟ್ಜರ್‌ಲ್ಯಾಂಡ್ ವಿರುದ್ಧದ ಸ್ನೇಹಿ ಪಂದ್ಯದಲ್ಲಿ ಆಡಲು ಇಂಗ್ಲೆಂಡ್‍‌ನ ಹೊಸ ತರಬೇತುದಾರ ಮತ್ತು ‌ರಿಯಲ್ ಮ್ಯಾಡ್ರಿಡ್‌‌ನ ವ್ಯವಸ್ಥಾಪಕ ಹಾಗೂ ಬೆಕ್‌ಹ್ಯಾಮ್‌ರ ಹಳೇ ಸ್ನೇಹಿತ ಫ್ಯಾಬಿಯೊ ಕ್ಯಾಪೆಲ್ಲೊ ಕಳುಹಿಸಿಕೊಟ್ಟಾಗ್ಯೂ, ಬೆಕ್‌ಹ್ಯಾಮ್ ಅದನ್ನು ಬಳಸಿಕೊಳ್ಳಲಿಲ್ಲ. ಒಂದು ವೇಳೆ ಆಡಿದ್ದಲ್ಲಿ ಬೆಕ್‌ಹ್ಯಾಮ್‌ಗೆ ಅದು 100ನೇ ಪಂದ್ಯವಾಗುತ್ತಿತ್ತು; ಕಳೆದ ಮೂರು ತಿಂಗಳುಗಳಿಂದ ಸ್ಪರ್ಧಾತ್ಮಕ ಫುಟ್‌ಬಾಲ್‌ನಲ್ಲಿ ತಾನು ಆಡಿಲ್ಲದ ಕಾರಣ, ಈಗ ಪಂದ್ಯದಲ್ಲಿ ಪಾಲ್ಗೊಳ್ಳುವ ಸ್ಥಿತಿಯಲ್ಲಿಲ್ಲ ಎಂದು ಬೆಕ್‌ಹ್ಯಾಮ್ ಒಪ್ಪಿಕೊಂಡರು.[೧೦೦]

2008 ಮಾರ್ಚ್ 20ರಂದು ಬೆಕ್‌ಹ್ಯಾಮ್‌ರನ್ನು ಕ್ಯಾಪೆಲ್ಲೊ ಇಂಗ್ಲೆಂಡ್ ತಂಡಕ್ಕೆ ವಾಪಸ್ ಕರೆಸಿಕೊಂಡರು, ಮಾರ್ಚ್ 26ರಂದು ಪ್ಯಾರಿಸ್‌ನಲ್ಲಿ ಫ್ರಾನ್ಸ್ ವಿರುದ್ಧ ಸ್ನೇಹಿ ಪಂದ್ಯ ಆಡಿದರು.

ಇದರೊಂದಿಗೆ ಬೆಕ್‌ಹ್ಯಾಮ್ 100 ಫುಟ್‌ಬಾಲ್ ಪಂದ್ಯಗಳಲ್ಲಿ ಆಡಿದ ಏಕೈಕ ಇಂಗ್ಲಿಷ್ ಆಟಗಾರನೆಂಬ ದಾಖಲೆ ಬರೆದರು.

ಮುಂದಿನ ದಿನಗಳಲ್ಲಿ 2010 FIFA ವಿಶ್ವ ಕಪ್‌ ನಿರ್ಣಾಯಕ ಅರ್ಹತಾ ಪಂದ್ಯಗಳು ನಡೆಯಲಿರುವುದರಿಂದ ಬೆಕ್‌ಹ್ಯಾಮ್‌ಗೆ ಇಂಗ್ಲೆಂಡ್ ತಂಡದಲ್ಲಿ ಸುದೀರ್ಘ ಭವಿಷ್ಯವಿರುವ ಬಗ್ಗೆ ಕ್ಯಾಪೆಲ್ಲೊ 2008 ಮಾರ್ಚ್ 26ರಂದು ಸುಳಿವು ನೀಡಿದರು.[೧೦೧]

ವೆಂಬ್ಲಿ ಕ್ರೀಡಾಂಗಣದಲ್ಲಿ ಮೇ 28ರಂದು ಯುನೈಟೆಡ್ ಸ್ಟೇಟ್ಸ್‌‌ ತಂಡವನ್ನು ಇಂಗ್ಲೆಂಡ್ ಎದುರಿಸಲಿದ್ದ ಹಿನ್ನೆಲೆಯಲ್ಲಿ ಕ್ಯಾಪೆಲ್ಲೊ 2008 ಮೇ 11ರಂದು ತಮ್ಮ 31 ಮಂದಿ ಆಟಗಾರರ ತಂಡಕ್ಕೆ ಫಾರ್ಮಿನಲ್ಲಿರುವ ಬೆಕ್‌ಹ್ಯಾಮ್‌ರನ್ನೂ ಸೇರಿಸಿಕೊಂಡರು. ಇದಕ್ಕೂ ಮೊದಲು ಜೂನ್ 1ರಂದು ಟ್ರಿನಿಡಾಡ್ ಮತ್ತು ಟೊಬ್ಯಾಗೊ ವಿರುದ್ಧ ಬೆಕ್‌ಹ್ಯಾಮ್‌ ಆಡಿದ್ದರು.

ಪಂದ್ಯ ಆರಂಭವಾಗುವುದಕ್ಕಿಂತ ಮೊದಲು ಬಾಬಿ ಚಾರ್ಲ್ಟನ್‌ ಅವರು ಬೆಕ್‌ಹ್ಯಾಮ್‌ಗೆ 100ನೇ ಪಂದ್ಯದ ನೆನಪಿಗಾಗಿ ಚಿನ್ನದ ಟೋಪಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದರು, ಈ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಕ್ರೀಡಾಂಗಣದ ಪ್ರೇಕ್ಷಕ ವರ್ಗ ಎದ್ದುನಿಂತು ಕರತಾಡನ ಮಾಡಿತು. ಪಂದ್ಯದುದ್ದಕ್ಕೂ ಅತ್ಯುತ್ತಮವಾಗಿ ಆಡಿದ ಬೆಕ್‌ಹ್ಯಾಮ್, ನಾಯಕ ಜಾನ್ ಟೆರ್ರಿಗೆ ವಿಜಯೀ ಗೋಲು ಹೊಡೆಯುವ ಅವಕಾಶ ದೊರಕಿಸಿಕೊಟ್ಟರು.

ಪಂದ್ಯಾರ್ಧದಲ್ಲಿ ಬೆಕ್‌ಹ್ಯಾಮ್ ಬದಲಿ ಆಟಗಾರ ಡೇವಿಡ್ ಬೆಂಟ್ಲೆಯನ್ನು ಮೈದಾನಕ್ಕಿಳಿಸಿದಾಗ, ಬೆಕ್‌ಹ್ಯಾಮ್ ಅಭಿಮಾನಿಗಳ ಸಮೂಹ ಈ ನಿರ್ಧಾರವನ್ನು ಗೇಲಿ ಮಾಡಿತು.[೧೦೨]

ಅಚ್ಚರಿಯ ಬೆಳವಣಿಗೆಯೊಂದರಲ್ಲಿ, 2008 ಜೂನ್ 1ರಂದು ಟ್ರಿನಿಡಾಡ್ ಮತ್ತು ಟೊಬ್ಯಾಗೊ ವಿರುದ್ಧ ನಡೆದ ಸ್ನೇಹಿ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವಂತೆ ಬೆಕ್‌ಹ್ಯಾಮ್‌ರನ್ನು ಕ್ಯಾಪೆಲ್ಲೊ ಕೇಳಿಕೊಂಡರು.

2006ರ ವಿಶ್ವ ಕಪ್ ಬಳಿಕ ಬೆಕ್‌ಹ್ಯಾಮ್ ಅದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು. ಆ ನಂತರ ಬೆಕ್‌ಹ್ಯಾಮ್ ಪರ ನಾಟಕೀಯ ಬೆಳವಣಿಗೆಗಳು ನಡೆದವು.

ಎರಡು ವರ್ಷಗಳ ಕಾಲ ಬೆಕ್‌ಹ್ಯಾಮ್‌ರನ್ನು ಇಂಗ್ಲೆಂಡ್ ತಂಡದಿಂದ ಸಂಪೂರ್ಣವಾಗಿ ಹೊರಗಿಡಲಾಗಿತ್ತಾದರೂ(ತಾತ್ಕಾಲಿಕವಾಗಿ), ಮತ್ತೆ ನಾಯಕನಾಗಿ ತಂಡಕ್ಕೆ ಮರಳಿದರು.[೧೦೩]

ಬೆಲಾರಸ್‌ ವಿರುದ್ಧ ಮಿನ್‌ಸ್ಕ್‌ನಲ್ಲಿ ನಡೆದ 2010 ವಿಶ್ವ ಕಪ್‌ ಅರ್ಹತಾ ಪಂದ್ಯದಲ್ಲಿ ಬೆಕ್‌ಹ್ಯಾಮ್ 87ನೇ ನಿಮಿಷದಲ್ಲಿ ತಮ್ಮ ವೃತ್ತಿ ಜೀವನದ 107ನೇ ಪಂದ್ಯ ಆಡುವುದಕ್ಕಾಗಿ ಕಣಕ್ಕಿಳಿದರು. ಇದರೊಂದಿಗೆ ಇಂಗ್ಲೆಂಡ್ ಇತಿಹಾಸದಲ್ಲಿ ಅತ್ಯಂತ ಹೆಚ್ಚು ಪಂದ್ಯಗಳನ್ನಾಡಿದ 3ನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. ಬಾಬಿ ಚಾರ್ಲ್ಟನ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಈ ಪಂದ್ಯವನ್ನು ಇಂಗ್ಲೆಂಡ್ 3-1ರಿಂದ ಜಯಿಸಿತು.

2009 ಫೆಬ್ರವರಿ 11ರಂದು ಬೆಕ್‌ಹ್ಯಾಮ್ ತಮ್ಮ ವೃತ್ತಿ ಜೀವನದ 108ನೇ ಪಂದ್ಯವನ್ನಾಡಿ ಇಂಗ್ಲಿಷ್ ಔಟ್‌ಫೀಲ್ಡ್ ಆಟಗಾರ ಬಾಬಿ ಮೂರೆ ಅವರ ಸಾಧನೆಯನ್ನು ಸರಿಗಟ್ಟಿದರು, ಸ್ಪೇನ್ ವಿರುದ್ಧದ ಸ್ನೇಹಿ ಪಂದ್ಯದಲ್ಲಿ ಸ್ಟಿವಾರ್ಟ್ ಡೌನಿಂಗ್‌‌ ಬದಲಿಗೆ ಆಟವಾಡಿದಾಗ ಈ ಸಾಧನೆ ಸಾಧ್ಯವಾಯಿತು.[೧೦೪]

2009 ಮಾರ್ಚ್ 28ರಂದು, ಸ್ಲೋವಾಕಿಯಾ ವಿರುದ್ಧದ ಸ್ನೇಹಿ ಪಂದ್ಯದಲ್ಲಿ ಮತ್ತೆ ಬದಲಿ ಆಟಗಾರನಾಗಿ ಕಣಕ್ಕಿಳಿಯುವುದರೊಂದಿಗೆ ಬಾಬಿ ಮೂರೆಯ ದಾಖಲೆಯನ್ನು ಮುರಿದರು. ಈ ಪಂದ್ಯದಲ್ಲೂ ಅದ್ಭುತ ಆಟ ಪ್ರದರ್ಶಿಸಿದ ಬೆಕ್‌ಹ್ಯಾಮ್, ವಾನೆ ರೂನಿಗೆ ಗೋಲು ಹೊಡೆಯಲು ನೆರವಾದರು.[೧೦೫]

ಅಂತರರಾಷ್ಟ್ರೀಯ ಗೋಲುಗಳು[ಬದಲಾಯಿಸಿ]

2009 ಅಕ್ಟೋಬರ್ 28ರವರೆಗೆ

1. 26 ಜೂನ್ 1998 ಸ್ಟೇಡ್ ದಿ ಗೆರ್ಲೆಂಡ್, ಲ್ಯಾನ್  ಕೊಲೊಂಬಿಯ 2–0 2–0 1998 FIFA ವಿಶ್ವ ಕಪ್ [೨]
2. 24 ಮಾರ್ಚ್ 2001 ಆನ್‌ಫೀಲ್ಡ್, ಲಿವರ್‌ಪೂಲ್  Finland 2–1 2–1 FIFA ವಿಶ್ವ ಕಪ್ 2002 ಅರ್ಹತಾ ಪಂದ್ಯ [೩]
3. 25 ಮೇ 2001 ಪ್ರೈಡ್ ಪಾರ್ಕ್, ಡರ್ಬಿ  ಮೆಕ್ಸಿಕೋ 3–0 4–0 ಸ್ನೇಹಿ ಪಂದ್ಯ [೪]
4. 6 ಜೂನ್ 2001 ಒಲಿಂಪಿಕ್ ಕ್ರೀಡಾಂಗಣ, ಅಥೆನ್ಸ್  ಗ್ರೀಸ್ 2–0 2–0 FIFA ವಿಶ್ವ ಕಪ್ 2002 ಅರ್ಹತಾ ಪಂದ್ಯ [೫]
5. 6 ಅಕ್ಟೋಬರ್ 2001 ಹಳೇ ಟ್ರಾಫರ್ಡ್, ಮ್ಯಾಂಚೆಸ್ಟರ್  ಗ್ರೀಸ್ 2–2 2–2 FIFA ವಿಶ್ವ ಕಪ್ 2002 ಅರ್ಹತಾ ಪಂದ್ಯ [೬]
6. 10 ನವೆಂಬರ್ 2001 ಓಲ್ಡ್ ಟ್ರಾಫರ್ಡ್‌, ಮ್ಯಾಂಚೆಸ್ಟರ್  Sweden 1–0 1–1 ಸ್ನೇಹಿ ಪಂದ್ಯ [೭]
7. 7 ಜೂನ್ 2002 ಸಪ್ಪೊರೊ ಡೊಮ್, ಸಪ್ಪೊರೊ  ಅರ್ಜೆಂಟೀನ 1–0 1–0 2002 FIFA ವಿಶ್ವ ಕಪ್ [೮]
8. 12 ಅಕ್ಟೋಬರ್ 2002 ಟೆಹಿಲ್ನ್ ಪೊಲ್, ಬ್ರಾಟಿಸ್ಲಾವಾ  ಸ್ಲೊವಾಕಿಯ 1–1 2–1 UEFA ಯುರೋ 2004 ಅರ್ಹತಾ ಪಂದ್ಯ [೯]
9. 16 ಅಕ್ಟೋಬರ್ 2002 ಸೈಂಟ್ ಮೇರೀಸ್ ಕ್ರೀಡಾಂಗಣ ಕ್ರೀಡಾಂಗಣ, ಸೌತಂಪ್ಟನ್  Macedonia 1–1 2–2 UEFA ಯುರೋ 2004 ಅರ್ಹತಾ ಪಂದ್ಯ [೧೦]
10. 29 ಮಾರ್ಚ್ 2003 ರೇನ್‌ಪಾರ್ಕ್ ಸ್ಟೇಡಿಯನ್, ವಡಝ್  Liechtenstein 2–0 2–0 UEFA ಯುರೋ 2004 ಅರ್ಹತಾ ಪಂದ್ಯ [೧೧]
11. 2 ಎಪ್ರಿಲ್ 2003 ಬೆಳಕಿನ ಕ್ರೀಡಾಂಗಣ, ಸಂಡರ್ಲೆಂಡ್  ಟರ್ಕಿ 2–0 2–0 UEFA ಯುರೋ 2004 ಅರ್ಹತಾ ಪಂದ್ಯ [೧೨]
12. 20 ಅಗಸ್ಟ್ 2003 ಪೋರ್ಟ್ಮನ್ ರಸ್ತೆ, ಇಪ್ಸ್‌ವಿಚ್  Croatia 1–0 3–1 ಸ್ನೇಹಿ ಪಂದ್ಯ [೧೩]
13. 6 ಸೆಪ್ಟೆಂಬರ್ 2003 ಗ್ರಾಡ್ಸ್ಕಿ, ಸ್ಕೊಪ್ಜ್  Macedonia 2–1 2–1 UEFA ಯುರೋ 2004 ಅರ್ಹತಾ ಪಂದ್ಯ [೧೪]
14. 18 ಅಗಸ್ಟ್ 2004 ಸೈಂಟ್ ಜೇಮ್ಸ್ ಪಾರ್ಕ್, ನ್ಯೂಕ್ಯಾಸ್ಟಲ್  Ukraine 1–0 3–0 ಸ್ನೇಹಿ ಪಂದ್ಯ [೧೫]
15. 9 ಅಕ್ಟೋಬರ್ 2004 ಓಲ್ಡ್ ಟ್ರಾಫರ್ಡ್‌, ಮ್ಯಾಂಚೆಸ್ಟರ್  Wales 2– 0 2–0 FIFA ವಿಶ್ವ ಕಪ್ 2006 ಅರ್ಹತಾ ಪಂದ್ಯ [೧೬]
16. 30 ಮಾರ್ಚ್ 2005 ಸೈಂಟ್ ಜೇಮ್ಸ್ ಪಾರ್ಕ್, ನ್ಯೂಕ್ಯಾಸ್ಟಲ್  ಅಜೆರ್ಬೈಜಾನ್ 2– 0 2–0 FIFA ವಿಶ್ವ ಕಪ್ 2006 ಅರ್ಹತಾ ಪಂದ್ಯ [೧೭]
17. 25 ಜೂನ್ 2006 ಗೊಟ್ಲಿಯಬ್-ಡಯಮ್ಲರ್, ಸ್ಟುಟ್‌ಗಾರ್ಟ್  Ecuador 1–0 1–0 FIFA ವಿಶ್ವ ಕಪ್ 2006 [೧೮]

ಶಿಸ್ತು[ಬದಲಾಯಿಸಿ]

"ಆಟದಲ್ಲಿ ನಿಖರತೆಯನ್ನು ಸಾಧಿಸುವುದಕ್ಕಾಗಿ ಬೆಕ್‌ಹ್ಯಾಮ್ ಶಿಸ್ತುಬದ್ಧವಾಗಿ ಅಭ್ಯಾಸ ನಡೆಸುತ್ತಿದ್ದರು, ಸಾಮಾನ್ಯವಾಗಿ ಇತರ ಆಟಗಾರರು ಈ ವಿಚಾರದಲ್ಲಿ ಅಷ್ಟಾಗಿ ಆಸಕ್ತಿ ವಹಿಸುವುದಿಲ್ಲ" ಎಂದು ಬೆಕ್‌ಹ್ಯಾಮ್‌ರ ಮಾಜಿ ವ್ಯವಸ್ಥಾಪಕ ಅಲೆಕ್ಸ್ ಫರ್ಗುಸನ್ ಹೇಳಿದ್ದಾರೆ.[೧೦೬]

2007ರಲ್ಲಿ ರಿಯಲ್ ಮ್ಯಾಡ್ರಿಡ್‌ ವ್ಯವಸ್ಥಾಪಕ ಮಂಡಳಿಯೊಂದಿಗೆ ಸಂಬಂಧ ಹದಗೆಟ್ಟ ಸಂದರ್ಭದಲ್ಲೂ, ಬೆಕ್‌ಹ್ಯಾಮ್ ದಿನನಿತ್ಯವೂ ತಪ್ಪದೆ ತರಬೇತಿಗೆ ಹಾಜರಾಗುತ್ತಿದ್ದರು. ರಿಯಲ್ ಮ್ಯಾಡ್ರಿಡ್ ಅಧ್ಯಕ್ಷ ರಾಮೊನ್ ಕಾಲ್ಡರನ್ ಮತ್ತು ವ್ಯವಸ್ಥಾಪಕ ಫ್ಯಾಬಿಯೊ ಕ್ಯಾಪೆಲ್ಲೊ ಅವರು ಬೆಕ್‌ಹ್ಯಾಮ್‌ರ ವೃತ್ತಿಪರತೆ ಮತ್ತು ಕ್ಲಬ್ ಮೇಲಿದ್ದ ಬದ್ಧತೆಯನ್ನು ಶ್ಲಾಘಿಸಿದ್ದಾರೆ.[೧೦೭][೧೦೮]

ಬೆಕ್‌ಹ್ಯಾಮ್ ಎರಡು ಬಾರಿ ಕೆಂಪು ಕಾರ್ಡ್ ಪಡೆದ ಇಂಗ್ಲೆಂಡ್‌ನ ಮೊದಲ ಆಟಗಾರ, ಅಲ್ಲದೆ ಆಟ ಪ್ರಗತಿಯಲ್ಲಿದ್ದಾಗಲೇ ಮೈದಾನದಿಂದ ಹೊರಗೆ ಕಳುಹಿಸಲ್ಪಟ್ಟ ಇಂಗ್ಲೆಂಡ್‌ನ ಮೊದಲ ನಾಯಕನೂ ಹೌದು.[೧೦೯]

1998 FIFA ವಿಶ್ವ ಕಪ್‌ನಲ್ಲಿ ಅರ್ಜೆಂಟೀನಾಡಿಯಾಗೊ ಸಿಮಿಯೋನ್ ಫೌಲ್ ಮಾಡಿದಾಗ ಕೆರಳಿದ ಬೆಕ್‌ಹ್ಯಾಮ್ ಅವರನ್ನು ಒದೆದು ಬೀಳಿಸಿ ಕುಖ್ಯಾತರಾಗಿದ್ದರು, ಇದಕ್ಕಾಗಿ ಕೆಂಪು ಕಾರ್ಡ್‌ಅನ್ನು ಪಡೆದಿದ್ದರು.

ಇಂಗ್ಲೆಂಡ್ ತಂಡ ಪೆನಾಲ್ಟಿಯಲ್ಲಿ ಅರ್ಜೆಂಟೀನಾಕ್ಕೆ ಶರಣಾಗಿತ್ತು, ಮತ್ತು ಸಾರ್ವಜನಿಕ ಅಪರಾಧಿಗಳ ಪಟ್ಟಿಯಲ್ಲಿ ಬೆಕ್‌ಹ್ಯಾಮ್ ಹೆಸರೂ ಸೇರ್ಪಡೆಯಾಗಿತ್ತು.

ರಿಯಲ್ ಮ್ಯಾಡ್ರಿಡ್‌ ತಂಡದಲ್ಲಿ ಆಡುತ್ತಿದ್ದ ವೇಳೆ ದಾಖಲೆಯಾಗಿ 41 ಬಾರಿ ಹಳದಿ ಕಾರ್ಡ್ ಮತ್ತು ನಾಲ್ಕು ಬಾರಿ ಕೆಂಪು ಕಾರ್ಡ್‌ಗಳನ್ನು ಪಡೆದಿದ್ದರು.[೧೧೦]

ಪ್ರಶಸ್ತಿಗಳು[ಬದಲಾಯಿಸಿ]

ಕ್ಲಬ್[ಬದಲಾಯಿಸಿ]

ಮ್ಯಾಂಚೆಸ್ಟರ್‌ ಯುನೈಟೆಡ್‌ F.C.[ಬದಲಾಯಿಸಿ]

ರಿಯಲ್‌ ಮ್ಯಾಡ್ರಿಡ್‌ C.F.[ಬದಲಾಯಿಸಿ]

ಲಾಸ್ ಎಂಜಲೀಸ್ ಗ್ಯಾಲಕ್ಸಿ[ಬದಲಾಯಿಸಿ]

ವೈಯಕ್ತಿಕ ಸಾಧನೆ[ಬದಲಾಯಿಸಿ]

ಗೌರವಗಳು ಮತ್ತು ವಿಶೇಷ ಪ್ರಶಸ್ತಿಗಳು[ಬದಲಾಯಿಸಿ]

ಅಂಕಿಅಂಶಗಳು[ಬದಲಾಯಿಸಿ]

ಕ್ಲಬ್ ಅವಧಿ ಲೀಗ್‌ ಪಂದ್ಯಗಳು ಕಪ್‌ ಲೀಗ್‌ ಕಪ್‌ ಭೂಖಂಡದ ಹೊರಪದರ ಇತರ[೧೧೭] ಒಟ್ಟ
ಆಪ್ಸ್ ಗೋಲುಗಳು ಆಪ್ಸ್ Goals ಆಪ್ಸ್ ಗೋಲುಗಳು ಆಪ್ಸ್ ಗೋಲುಗಳು ಆಪ್ಸ್ ಗೋಲುಗಳು ಆಪ್ಸ್ ಗೋಲುಗಳು
ಮ್ಯಾಂಚೆಸ್ಟರ್ ಯುನೈಟೆಡ್ 1992–93 0 0 0 0 1 0 0 0 0 0 1 0
1993–94 0 0 0 0 0 0 0 0 0 0 0 0
Preston North End (loan) 1994–95 5 2 0 0 0 0 0 0 5 2
ಮ್ಯಾಂಚೆಸ್ಟರ್ ಯುನೈಟೆಡ್ 1994–95 4 0 2 0 3 0 1 1 0 0 10 1
1995–96 [33] 7 3 1 2 0 2 0 0 0 40 8
1996–97 FA ಪ್ರೀಮಿಯರ್‌ ಲೀಗ್‌ 36 8 2 1 0 0 10 2 1 1 49 12
1997–98 37 9 4 2 0 0 8 0 1 0 50 11
1998–99 34 6 7 1 1 0 12 2 1 0 55 9
1999–2000 31 6 0 0 12 2 5 0 48 8
2000–01 31 9 2 0 0 0 12 0 1 0 46 9
2001–02 28 11 1 0 0 0 13 5 1 0 43 16
2002–03 31 6 3 1 5 1 13 3 0 0 52 11
ಒಟ್ಟು 265 62 24 6 12 1 83 15 10 1 399 87
ರಿಯಲ್ ಮ್ಯಾಡ್ರಿಡ್‌ 2003–04 32 3 4 2 7 1 0 0 43 6
2004–05 30 4 0 0 8 0 0 0 38 4
2005–06 31 3 3 1 7 1 0 0 41 5
2006–07 23 3 2 1 6 0 0 0 31 4
ಒಟ್ಟು 116 13 9 4 28 2 0 0 153 19
ಲಾಸ್ ಎಂಜಲೀಸ್ ಗ್ಯಾಲಕ್ಸಿ 2007 5 0 0 0 2 1 7 1
2008 25 5 0 0 0 0 25 5
rowspan="2"valign="center" ಮಿಲನ್ (ಎರವಲು) 2008-09 18 2 0 0 0 0 2 0 20 2
ಲಾಸ್ ಎಂಜಲೀಸ್ ಗ್ಯಾಲಕ್ಸಿ 2009 12 2 0 0 0 0 12 2
ಒಟ್ಟು 42 7 0 0 2 1 44 8
ವೃತ್ತಿ ಜೀವನದ ಒಟ್ಟು ಸಾಧನೆ 446 86 33 10 12 1 111 17 14 2 616 116

ಡೇವಿಡ್ ಬೆಕ್‌ಹ್ಯಾಮ್ ಅಕಾಡೆಮಿ[ಬದಲಾಯಿಸಿ]

2005ರಲ್ಲಿ, ಬೆಕ್‌ಹ್ಯಾಮ್ ಡೇವಿಡ್ ಬೆಕ್‌ಹ್ಯಾಮ್ ಅಕಾಡೆಮಿ ಫುಟ್‌ಬಾಲ್ ಶಾಲೆಯನ್ನು ಸ್ಥಾಪಿಸಿದರು, ಇದರ ಎರಡು ಶಾಖೆಗಳು ಲಂಡನ್ ಮತ್ತು ಕ್ಯಾಲಿಫೋರ್ನಿಯಾಲಾಸ್ ಎಂಜಲೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ. ನತಾಲ್‌ನ ಕಾಬೊ ಸಾವೊ ರೊಖ್, ಬ್ರೆಜಿಲ್ ಮತ್ತು ಏಷ್ಯಾದಲ್ಲೂ ಶಾಲೆಯ ಶಾಖೆಗಳನ್ನು ತೆರೆಯುವ ಯೋಜನೆಗಳಿವೆ.

ವೈಯುಕ್ತಿಕ ಜೀವನ[ಬದಲಾಯಿಸಿ]

2007ರಲ್ಲಿ ಸಿಲ್ವರ್‌ಸ್ಟೋನ್‌ನಲ್ಲಿ ನಡೆದ ಬ್ರಿಟೀಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಡೇವಿಡ್ ಮತ್ತು ವಿಕ್ಟೋರಿಯಾ ಬೆಕ್‌ಹ್ಯಾಮ್.

1997ರಲ್ಲಿ ವಿಕ್ಟೋರಿಯಾ ಆಡಮ್ಸ್ ಮ್ಯಾಂಚೆಸ್ಟರ್ ಯುನೈಟೆಡ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದಾಗಿನಿಂದ ಆಕೆಯನ್ನು ಪ್ರೀತಿಸಲು ಆರಂಭಿಸಿದರು. ಪಾಸ್ ಸಂಗೀತಸ್ಪೈಸ್ ಗರ್ಲ್ಸ್ ತಂಡದ ಪಾಶ್ ಸ್ಪೈಸ್ ಎಂದೇ ವಿಕ್ಟೋರಿಯಾ ಖ್ಯಾತರಾಗಿದ್ದರು, ಆ ಹೊತ್ತಿಗೆ ವಿಶ್ವ ಪ್ರಸಿದ್ಧವಾಗಿದ್ದ ಪಾಪ್ ಸಂಗೀತ ತಂಡಗಳ ಪೈಕಿ ಇದೂ ಒಂದು. ಇನ್ನೊಂದೆಡೆ ಬೆಕ್‌ಹ್ಯಾಮ್ ತಂಡ ಕೂಡ ಯಶಸ್ಸಿನ ಉತ್ತುಂಗದಲ್ಲಿತ್ತು. ಆದ್ದರಿಂದ ಅವರ ಸಂಬಂಧ ಮಾಧ್ಯಮಗಳ ಗಮನ ಸೆಳೆಯಿತು. ಈ ಜೋಡಿಯನ್ನು ಮಾಧ್ಯಮಗಳು "ಪಾಸ್ ಮತ್ತು ಬೆಕ್ಸ್" ಎಂದು ಕರೆದವು. 1998 ಜನವರಿ 24ರಂದು ಇಂಗ್ಲೆಂಡ್‌ಚೆಶಂಟ್‌ ರೆಸ್ಟರಂಟ್‌ನಲ್ಲಿ ವಿಕ್ಟೋರಿಯಾ ಎದುರು ಬೆಕ್‌ಹ್ಯಾಮ್ ವಿವಾಹದ ಪ್ರಸ್ತಾಪ ಮುಂದಿಟ್ಟರು.

ಐರ್ಲೆಂಡ್‌ಲಟ್ರೆಲ್ಲ್‌ಸ್ಟೌನ್ ಕ್ಯಾಸಲ್‌ನಲ್ಲಿ 1999 ಜುಲೈ 4ರಂದು ವಿಕ್ಟೋರಿಯಾಳನ್ನು ಬೆಕ್‌ಹ್ಯಾಮ್‌ ವಿವಾಹವಾದರು, ಅಂದಿನಿಂದ ಆಕೆಯ ಹೆಸರು ವಿಕ್ಟೋರಿಯಾ ಬೆಕ್‌ಹ್ಯಾಮ್ ಎಂದು ಬದಲಾಯಿತು. ಈ ವಿವಾಹ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿತು. ಬೆಕ್‌ಹ್ಯಾಮ್‌ರ ತಂಡದ ಸಹ ಆಟಗಾರ ಗ್ಯಾರಿ ನೆವಿಲ್ಲೆ ಬೆಸ್ಟ್ ಮ್ಯಾನ್ ಆದರೆ, ದಂಪತಿಗಳ ನಾಲ್ಕು ತಿಂಗಳ ಪುತ್ರ ಬ್ರೂಕ್ಲಿನ್ ಉಂಗುರ ಧಾರಕನಾಗಿದ್ದನು.

OK! ಜೊತೆ ಬೆಕ್‌ಹ್ಯಾಮ್ ವಿಶೇಷ ಒಪ್ಪಂದ ಮಾಡಿಕೊಂಡಿದ್ದ ಕಾರಣ ಮಾಧ್ಯಮಗಳನ್ನು ಈ ಸಮಾರಂಭದಿಂದ ದೂರವಿಡಲಾಗಿತ್ತು.

ಆದರೂ ಚಿನ್ನದ ಸಿಂಹಾಸದಲ್ಲಿ ಕುಳಿತಿದ್ದ ದಂಪತಿಗಳ ಚಿತ್ರವನ್ನು ಪಡೆಯುವಲ್ಲಿ ಸುದ್ದಿ ಪತ್ರಿಕೆಗಳು ಯಶಸ್ವಿಯಾಗಿದ್ದವು, ಮ್ಯಾಗಜಿನ್‌ ಗಳು ಇದಕ್ಕೆ ಹೊರತಾಗಿದ್ದವು.[೧೧೮] ವಿವಾಹ ಪ್ರಯುಕ್ತದ ಸ್ವಾಗತಕೂಟದಲ್ಲಿ 437 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು, ಇದಕ್ಕೆ ಸುಮಾರು £500,000 ವೆಚ್ಚ ಮಾಡಲಾಗಿತ್ತೆಂದು ಅಂದಾಜು ಮಾಡಲಾಗಿದೆ.[೧೧೯]

1999ರಲ್ಲಿ ಬೆಕ್‌ಹ್ಯಾಮ್ ಉತ್ತರ ಲಂಡನ್‍ಹರ್ಟ್‌ಫೊರ್ಡ್‌ಶೈರ್‌ನಲ್ಲಿ ಮನೆಯನ್ನು ಖರೀದಿಸಿದರು. ಇದಕ್ಕೆ ಸಾಕಷ್ಟು ಪ್ರಚಾರ ದೊರೆತು, ಅನೌಪಚಾರಿಕವಾಗಿ ಬೆಕ್ಕಿಗ್ಹಾಂ ಅರಮನೆಯೆಂದೇ ಪ್ರಸಿದ್ಧಿಯಾಗಿತ್ತು.

ಈ ಮನೆಯ ಅಂದಾಜು ವೆಚ್ಚ £7.5 ದಶಲಕ್ಷ. ಡೇವಿಡ್ ಮತ್ತು ವಿಕ್ಟೋರಿಯಾಗೆ ಮೂವರು ಪುತ್ರರಿದ್ದಾರೆ: ಬ್ರೂಕ್ಲಿನ್ ಜೋಸೆಫ್ ಬೆಕ್‌ಹ್ಯಾಮ್ (ಇಂಗ್ಲೆಂಡ್‌ನ, ಲಂಡನ್‌ನಲ್ಲಿ 1999 ಮಾರ್ಚ್ 4ರಂದು ಜನನ), ರೊಮಿಯೊ ಜೇಮ್ಸ್ ಬೆಕ್‌ಹ್ಯಾಮ್ (ಇಂಗ್ಲೆಂಡ್‌ನ, ಲಂಡನ್‌ನಲ್ಲಿ 2002 ಸೆಪ್ಟೆಂಬರ್ 1ರಂದು ಜನನ) ಮತ್ತು ಕ್ರೂಜ್ ಡೇವಿಡ್ ಬೆಕ್‌ಹ್ಯಾಮ್ (ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ 2005 ಫೆಬ್ರವರ 20ರಂದು ಜನನ) ("ಕ್ರಾಸ್‌"ಗೆ ಸ್ಪಾನಿಷ್‌ನಲ್ಲಿ "ಕ್ರೂಜ್" ಎನ್ನಲಾಗುತ್ತದೆ). ಬ್ರೂಕ್ಲಿನ್ ಮತ್ತು ರೊಮಿಯೊ ಇಬ್ಬರಿಗೂ ಗಾಡ್‌ಫಾದರ್ ಎಲ್ಟನ್ ಜಾನ್ ಮತ್ತು ಗಾಡ್‌ಮದರ್ ಎಲಿಜಬೆತ್ ಹರ್ಲಿ ಆಗಿದ್ದರು.[೧೨೦] ಇನ್ನಷ್ಟು ಮಕ್ಕಳನ್ನು ಪಡೆಯಲು ನಾವು ಬಯಸಿದ್ದೇವೆ, ಅದರಲ್ಲೂ ಮಗಳನ್ನು ಪಡೆದರೆ ಚೆನ್ನಾಗಿರುತ್ತದೆ ಎಂದು ಬೆಕ್‌ಹ್ಯಾಮ್ ದಂಪತಿಗಳು ಹೇಳಿಕೆ ನೀಡಿದ್ದಾರೆ.[೧೨೧] ಜುಲೈನಲ್ಲಿ ಲಾಸ್ ಎಂಜಲೀಸ್ ಗ್ಯಾಲಕ್ಸಿಗೆ ವರ್ಗವಾಗಲಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಅನುಕೂಲವಾಗಿ ಬೆಕ್‌ಹ್ಯಾಮ್ ಕುಟುಂಬ 2007 ಎಪ್ರಿಲ್‌ನಲ್ಲಿ ಕ್ಯಾಲಿಫೋರ್ನಿಯಾದ ಬೇವರ್ಲಿ ಹಿಲ್ಸ್‌ನಲ್ಲಿ ಹೊಸ ಇಟೆಲಿಯನ್ ವಿಲ್ಲಾವನ್ನು ಖರೀದಿಸಿತು.

ಈ ಮನೆ $22 ದಶಲಕ್ಷ ಮೌಲ್ಯದ್ದಾಗಿದ್ದು, ಖ್ಯಾತನಾಮರಾದ ಟಾಮ್ ಕ್ರೂಸ್, ಕೇಟೀ ಹೋಲ್‌ಮ್ಸ್, ಟಿವಿ ನಿರೂಪಕ ಜೇ ಲೆನೊ ನಿವಾಸಗಳ ಪಕ್ಕದಲ್ಲೇ ಇದೆ. ನಗರಕ್ಕೆ ಅಭಿಮುಖವಾಗಿದ್ದು, ಇಲ್ಲಿರುವ ಸ್ವತಂತ್ರ ಮನೆಗಳ ಪೈಕಿ ಬೆಕ್‌ಹ್ಯಾಮ್ ಮನೆಯೂ ಒಂದು.

ಪ್ರಣಯ ಪ್ರಸಂಗಗಳು[ಬದಲಾಯಿಸಿ]

ಬೆಕ್‌ಹ್ಯಾಮ್‌ ತಮ್ಮ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರಾಗಿ ಬೆಕ್‌ಹ್ಯಾಮ್‌‌ರ ಮಾಜಿ ಸಹಾಯಕಿ ರೆಬೆಕ್ಕಾ ಲೂಸ್‌ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ 2004 ಎಪ್ರಿಲ್‌ನಲ್ಲಿ ಬ್ರಿಟೀಷ್ ಟಾಬ್ಲಾಯಿಡ್ ನ್ಯೂಸ್ ಆಫ್ ದಿ ವರ್ಲ್ಡ್‌ ವರದಿ ಮಾಡಿತ್ತು.[೧೨೨][೧೨೩] ಒಂದು ವಾರದ ನಂತರ, ಬೆಕ್‌ಹ್ಯಾಮ್ ಜೊತೆ ಎರಡು ಬಾರಿ ತಾನು ಹಾಸಿಗೆ ಹಂಚಿಕೊಂಡಿದ್ದಾಗಿ ಮಲೇಶಿಯಾ ಸಂಜಾತ ಆಸ್ಟ್ರೇಲಿಯಾದ ರೂಪದರ್ಶಿ ಸರಾಹ್ ಮಾರ್ಬೆಕ್ ಹೇಳಿಕೊಂಡಿದ್ದಳು. ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದ ಬೆಕ್‌ಹ್ಯಾಮ್, "ಹಾಸ್ಯಾಸ್ಪದ" ಎಂದಿದ್ದರು.[೧೨೪]ಬೆಕ್‌ಹ್ಯಾಮ್ ದಾಂಪತ್ಯ ದ್ರೋಹ ಆರೋಪದ ಬಗ್ಗೆ ಇದುವರೆಗೆ ಯಾವುದೇ ಪುರಾವೆಗಳು ದೊರೆತಿಲ್ಲ.[೧೨೫]

W ಮ್ಯಾಗಜೀನ್‌ ಗೆ ನೀಡಿದ ಸಂದರ್ಶನವೊಂದರಲ್ಲಿ ವರದಿಗಾರನೊಂದಿಗೆ ವಿಕ್ಟೋರಿಯಾ ಬೆಕ್‌ಹ್ಯಾಮ್ ಹೀಗೆ ಹೇಳಿದ್ದಾರೆ; "ನಾನು ಸುಳ್ಳು ಹೇಳಲಾರೆ: ಅದು ನಿಜವಾಗಿಯೂ ಕಷ್ಟಕಾಲವಾಗಿತ್ತು.

ನಮ್ಮ ಇಡೀ ಕುಟುಂಬಗಳಿಗೆ ನುಂಗಲಾರದ ತುತ್ತಾಗಿತ್ತು. ಆದರೆ ಬಹಳಷ್ಟು ಮಂದಿಗೆ ಅವರದ್ದೇ ಆದ ಮೌಲ್ಯವಿದೆ ಎಂಬುದನ್ನು ಅರ್ಥೈಸಿಕೊಂಡೆ." [೧೨೬]

ಕಾನೂನು ವಿವಾದಗಳು[ಬದಲಾಯಿಸಿ]

ಬೆಕ್‌ಹ್ಯಾಮ್ ಕೂಡ ಕಾನೂನು ವಿವಾದಗಳಿಗೆ ಹೊರತಾಗಿರಲಿಲ್ಲ, 2008 ಡಿಸೆಂಬರ್‌ನಲ್ಲಿ ಬೆಕ್‌ಹ್ಯಾಮ್ ಮತ್ತು ಅವರ ಅಂಗರಕ್ಷಕನ ವಿರುದ್ಧ ಪಾಪರಾಜಿ ಛಾಯಾಗ್ರಾಹಕ ಎಮಿಕ್‌ಲ್ಸ್ ಡಿ ಮತಾ ಕೇಸು ದಾಖಲಿಸಿದ್ದರು. ಬೇವರ್ಲಿ ಹಿಲ್ಸ್‌ನಲ್ಲಿ ಬೆಕ್‌ಹ್ಯಾಮ್‌ರ ಛಾಯಾಚಿತ್ರ ತೆಗೆಯಲು ಪ್ರಯತ್ನಿಸುತ್ತಿದ್ದಾಗ ತಮ್ಮ ಮೇಲೆ ಇಬ್ಬರೂ ಹಲ್ಲೆ ನಡೆಸಿದ್ದಾರೆ ಎಂಬುದು ಅವರ ಆರೋಪ. ಈ ಘಟನೆಯಲ್ಲಿ ತಮ್ಮ ಬ್ಯಾಟರಿಗೆ ಹಾನಿಯಾಗಿದೆ, ಮತ್ತು ಈ ಹಿಂಸೆಯಿಂದ ತಾನು ಆಂತರಿಕವಾಗಿ ಯಾತನೆ ಅನುಭವಿಸಿದ್ದಾಗಿ ದೂರಿನಲ್ಲಿ ಹೇಳಿದ್ದರು. ಆದರೆ ಅವರ ಆರೋಪಗಳಲ್ಲಿ ನಿಖರತೆ ಇರಲಿಲ್ಲ.[೧೨೭]

ಫುಟ್‌ಬಾಲ್ ಆಚೆಗಿನ ಖ್ಯಾತಿ[ಬದಲಾಯಿಸಿ]

LA ಗ್ಯಾಲಕ್ಸಿ ಮತ್ತು ದಿ ಮಿನ್ನೆಸೋಟಾ ಥಂಡರ್ ಮಧ್ಯೆ ನಡೆದ ಮೊದಲ ವಾರ್ಷಿಕ COPA ಮಿನ್ನೆಸೋಟಾ ಸಹಾಯಾರ್ಥ ಆಟದ ನಂತರ ಡೇವಿಡ್ ಬೆಕ್‌ಹ್ಯಾಮ್ ಅವರು ಅಭಿಮಾನಿಗಳಿಗೆ ಹಸ್ತಾಕ್ಷರ ನೀಡುತ್ತಿರುವುದು.

ಬೆಕ್‌ಹ್ಯಾಮ್‌ರ ಖ್ಯಾತಿ ಫುಟ್‌ಬಾಲ್‌ ಅಂಕಣದಿಂದಾಚೆಗೂ ಎಷ್ಟರಮಟ್ಟಿಗೆ ವ್ಯಾಪಿಸಿತ್ತೆಂದರೆ ಕೋಕಾ-ಕೋಲಾ ಮತ್ತು ಐಬಿಎಂ ನಂತಹ ಬಹುರಾಷ್ಟ್ರೀಯ ಕಂಪೆನಿಗಳು ಕೂಡ ಇವರನ್ನು ತತ್‌ಕ್ಷಣವೇ ಗುರುತು ಹಿಡಿಯಲು ಶಕ್ಯವಾಗಿದ್ದವು.[೧೨೮] ಇದಲ್ಲದೆ ಸ್ಪೈಸ್ ಗರ್ಲ್ಸ್ ತಂಡದ ಭಾಗವಾಗಿ ಪ್ರಖ್ಯಾತರಾಗಿದ್ದ ವಿಕ್ಟೋರಿಯಾ ಜೊತೆಗಿನ ವೈವಾಹಿಕ ಸಂಬಂಧ ಕೂಡ ಡೇವಿಡ್‌ರ ಖ್ಯಾತಿಯನ್ನು ಫುಟ್‌ಬಾಲ್‌ನಿಂದಾಚೆಗೆ ಒಯ್ಯಲು ಸಹಕಾರಿಯಾಯಿತು.

ಫ್ಯಾಶನ್‌ಗೆ ಹೆಸರಾಗಿರುವ ಬೆಕ್‌ಹ್ಯಾಮ್, ಈಗ ವಿಕ್ಟೋರಿಯಾ ಜೊತೆ ಸೇರಿಕೊಂಡಿದ್ದರಿಂದ ವಸ್ತ್ರ ವಿನ್ಯಾಸಕರು, ಆರೋಗ್ಯ ಮತ್ತು ಫಿಟ್ನೆಸ್ ತಜ್ಞರು, ಫ್ಯಾಶನ್ ಮ್ಯಾಗಜೀನ್‌ಗಳು, ಸುಗಂಧ ದ್ರವ್ಯ ಮತ್ತು ಸೌಂದರ್ಯವರ್ಧಕಗಳ ತಯಾರಕರು, ಕೂದಲು ವಿನ್ಯಾಸಕರು, ವ್ಯಾಯಾಮ ಪ್ರಚಾರಕರು, ಆರೋಗ್ಯ ಮತ್ತು ವಿನೋದ ಸಂಸ್ಥೆಗಳ ನಡುವೆ ಅತಿ ಬೇಡಿಕೆಯುಳ್ಳ ಲಾಭದಾಯಕ ದಂಪತಿಗಳಾಗಿ ಪರಿಣಮಿಸಿದರು. ಇದಕ್ಕೆ ಇತ್ತೀಚೆಗಿನ ಉದಾಹರಣೆಯೆಂದರೆ ಆಫ್ಟರ್ ಶೇವ್ ನಂತರ ಹಾಕುವ ಹೊಸ ಉತ್ಪನ್ನಗಳು ಮತ್ತು ಸುಗಂಧಗಳಿಗೆ ಡೇವಿಡ್ ಬೆಕ್‌ಹ್ಯಾಮ್ ಇನ್‌ಸ್ಟಿಂಕ್ಟ್ ಎಂದು ಹೆಸರಿಡಲಾಗಿದೆ.[೧೨೯]2002ರಲ್ಲಿ ಮೆಟ್ರೋಸೆಕ್ಶುವಲ್ ಪದವನ್ನು[೧೩೦][೧೩೧] ಹುಟ್ಟು ಹಾಕಿದ ವ್ಯಕ್ತಿಯೇ ಬೆಕ್‌ಹ್ಯಾಮ್ ಸರ್ವಶ್ರೇಷ್ಟ "ಮೆಟ್ರೋಸೆಕ್ಶುವಲ್" ಎಂದು ಕರೆದರು. ಅಂದಿನಿಂದ ಅನೇಕ ಲೇಖನಗಳಲ್ಲಿ ಈ ಪದವನ್ನು ಬಳಸಿ ಬೆಕ್‌ಹ್ಯಾಮ್‌ರನ್ನು ವರ್ಣಿಸಲಾಯಿತು.

2007ರಲ್ಲಿ USನಲ್ಲಿ ಸುಗಂಧ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡಲು ಬೆಕ್‌ಹ್ಯಾಮ್‌ಗೆ $13.7 ದಶಲಕ್ಷ ರೂಪಾಯಿ ನೀಡಲಾಗಿದೆ ಎಂದು ವರದಿಯಾಗಿತ್ತು. ಫ್ಯಾಶನ್ ಜಗತ್ತಿನ ಅನೇಕ ಮ್ಯಾಗಜೀನ್‌ಗಳ ಮುಖಪುಟದಲ್ಲಿ ಡೇವಿಡ್ ರಾರಾಜಿಸಿದ್ದಕ್ಕೆ ಲೆಕ್ಕವೇ ಇಲ್ಲ. 2007ರಲ್ಲಿ U.S.ಕವರ್ಸ್ ತನ್ನ ಅಗಸ್ಟ್ 2007 W ಆವೃತ್ತಿಯಲ್ಲಿ ಪುರುಷರ ಮ್ಯಾಗಜಿನ್ ವಿವರಗಳನ್ನು ಸೇರಿಸಿಕೊಂಡಿತು, ವಿಕ್ಟೋರಿಯಾ ಕೂಡ ಇದರಲ್ಲಿದ್ದರು.[೧೩೨]

ಗೂಗಲ್‌ ಪ್ರಕಾರ, 2003 ಮತ್ತು 2004ನೇ ಸಾಲಿನಲ್ಲಿ ಗೂಗಲ್‌ ಜಾಲತಾಣದಲ್ಲಿ ಇತರಾವುದೇ ಕ್ರೀಡೆಗೆ ಹೋಲಿಸಿದರೆ "ಡೇವಿಡ್ ಬೆಕ್‌ಹ್ಯಾಮ್" ಅತ್ಯಂತ ಹೆಚ್ಚು ಬಾರಿ ಹುಡುಕಲ್ಪಟ್ಟ ಆಟಗಾರ.[೧೩೩]

2007 ಜುಲೈ 12ರಂದು ಲಾಸ್ ಎಂಜಲೀಸ್‌ಗೆ ಬೆಕ್‌ಹ್ಯಾಮ್ ದಂಪತಿಗಳು ಆಗಮಿಸಿದಾಗ, ಇನ್ನೂ ಔಪಚಾರಿಕ ಪರಿಚಯವಾಗುವುದಕ್ಕಿಂತ ಮೊದಲೇ ಲಾಸ್ ಎಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪಾಪರಾಜಿ ಮತ್ತು ಸುದ್ದಿ ವರದಿಗಾರರಿಂದ ತುಂಬಿ ತುಳುಕುತ್ತಿತ್ತು.[೧೩೪] ಮರುದಿನ ರಾತ್ರಿ LAಗೆ ಆಗಮಿಸಿದ ಕುರಿತು ಮಾತನಾಡಲು NBC ಟಿವಿಯ ದಿ ಟೂನೈಟ್ ಶೋನಲ್ಲಿ ಜೇ ಲೆನೊ ಜೊತೆ ವಿಕ್ಟೋರಿಯಾ ಕಾಣಿಸಿಕೊಂಡರು, ಮತ್ತು ಲೆನೊಗೆ ಅವರದ್ದೇ ಹೆಸರಿನೊಂದಿಗೆ 23 ಸಂಖ್ಯೆಯನ್ನು ಮುದ್ರಿಸಿರುವ ಗ್ಯಾಲಕ್ಸಿ ಜಾಕೀಟನ್ನು ಉಡುಗೊರೆಯಾಗಿ ನೀಡಿದರು. ವಿಕ್ಟೋರಿಯಾ ಕೂಡ ತಮ್ಮ NBC TV ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಜುಲೈ 22ರಂದು ಲಾಸ್ ಎಂಜಲೀಸ್‌ನ, ಮ್ಯೂಸಿಯಂ ಆಫ್ ಕಂಟೆಂಪರರಿ ಆರ್ಟ್‌ನಲ್ಲಿ ಬೆಕ್‌ಹ್ಯಾಮ್ ದಂಪತಿಗಳಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಸ್ವಾಗತಕೂಟ ಏರ್ಪಡಿಸಲಾಗಿತ್ತು. A-ಪಟ್ಟಿಯಲ್ಲಿದ್ದ ಸ್ಟೀವನ್ ಸ್ಪೀಲ್‌ಬರ್ಗ್, ಜಿಂ ಕ್ಯಾರಿ, ಜಾರ್ಜ್ ಕ್ಲೂನಿ, ಟಾಮ್ ಕ್ರೂಸ್, ಕೇಟಿ ಹೋಮ್ಸ್, ವಿಲ್ ಸ್ಮಿತ್, ಜೇಡಾ ಪಿಂಕೆಟ್ ಸ್ಮಿತ್, ಮತ್ತು ಓಪ್ರಾ ವಿನ್ಫ್ರೆ ಮೊದಲಾದ ಖ್ಯಾತನಾಮರು ಪಾಲ್ಗೊಂಡಿದ್ದರು.[೧೩೫]

ಬೆಕ್‌ಹ್ಯಾಮ್ ಅನೇಕ ಜಾಹೀರಾತುಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದರೊಂದಿಗೆ ವಿಶ್ವದುದ್ದಕ್ಕೂ ಅತ್ಯಂತ ಅತ್ಯಂತ ಚಿರಪರಿಚಿತ ಕ್ರೀಡಾ ವ್ಯಕ್ತಿಯಾಗಿ ಹೊರಹೊಮ್ಮಿದರು.

ಬೆಕ್‌ಹ್ಯಾಮ್ ಜೊತೆಗಿನ 10 ವರ್ಷಗಳ ಹಳೆಯ ಜಾಹೀರಾತು ಸಹಯೋಗವನ್ನು ಕೊನೆಗೊಳಿಸುತ್ತಿರುವುದಾಗಿ 2008 ಡಿಸೆಂಬರ್ 31ರಂದು ಪೆಪ್ಸಿ ಕೊ. ಘೋಷಿಸಿತು.[೧೩೬]

ಧರ್ಮಾರ್ಥ ಸೇವೆ[ಬದಲಾಯಿಸಿ]

ಮ್ಯಾಂಚೆಸ್ಟರ್ ಯುನೈಟೆಡ್ ತಂಡದೊಂದಿಗೆ ಇದ್ದಾಗಿನಿಂದಲೂ ಬೆಕ್‌ಹ್ಯಾಮ್ UNICEFಅನ್ನು ಬೆಂಬಲಿಸುತ್ತಿದ್ದರು, ಅಲ್ಲದೆ ಇಂಗ್ಲಿಷ್ ರಾಷ್ಟ್ರೀಯ ತಂಡದ ನಾಯಕನಾಗಿದ್ದಾಗ 2005 ಜನವರಿಯಲ್ಲಿ ಕ್ರೀಡಾ ಅಭಿವೃದ್ಧಿ ಮೇಲೆ ವಿಶೇಷ ಗಮನವಿಟ್ಟು UNICEFನ ಸೌಹಾರ್ದ ರಾಯಭಾರಿಯಾದರು.

ಮಕ್ಕಳಿಗಾಗಿ ಒಂದಾಗಿ, AIDS ವಿರುದ್ಧ ಒಂದಾಗಿ ಎಂಬ ಹಾಲಿ ಚಳವಳಿಯನ್ನು ಬೆಕ್‌ಹ್ಯಾಮ್ ಬೆಂಬಲಿಸಿದ್ದು ಇತ್ತೀಚಿನ ನಿದರ್ಶನ.

2007 ಜನವರಿ 17ರಂದು ಬೆಕ್‌ಹ್ಯಾಮ್ ಕೆನಡಾಒಂಟಾರಿಯೋಹಾಮಿಲ್ಟನ್‌ನ ಕ್ಯಾನ್ಸರ್ ರೋಗಿ 19 ವರ್ಷದ ರೆಬೆಕ್ಕಾ ಜಾನ್‌ಸ್ಟೋರ್‌ಗೆ ದೂರವಾಣಿ ಕರೆ ಮಾಡಿ ಅಚ್ಚರಿಯಲ್ಲಿ ಕೆಡವಿದರು. ಇದು ಅವರ ಮಾನವೀಯ ಪ್ರಜ್ಞೆಗೆ ಇನ್ನೊಂದು ಉದಾಹರಣೆ.

ದೂರವಾಣಿ ಮಾತುಕತೆ ಬಳಿಕ ತಮ್ಮ ಸಹಿಯಿರುವ ರಿಯಲ್ ಮ್ಯಾಡ್ರಿಡ್‌ ಜಾಕೀಟನ್ನು ಆಕೆಗೆ ಕಳುಹಿಸಿದರು.

ಆದರೆ ದುರದೃಷ್ಟವಶಾತ್ 2007 ಜನವರಿ 29ರಂದು ರೆಬೆಕ್ಕಾ ನಿಧನರಾದರು.[೧೩೭]

2006ರಲ್ಲಿ ನ್ಯೂಯಾರ್ಕ್ ಸಿಟಿಯಲ್ಲಿ ಆರಂಭವಾದ ಮಲೇರಿಯಾ ನೊ ಮೋರ್‌ಗೆ ಬೆಕ್‌ಹ್ಯಾಮ್ ವಕ್ತಾರರಾಗಿದ್ದರು. ಆಫ್ರಿಕಾದಲ್ಲಿ ಮಲೇರಿಯಾದಿಂದಾಗಿ ಸಾವನ್ನಪ್ಪುವ ಪ್ರಕರಣಗಳಿಗೆ ಕೊನೆ ಹಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಅಗ್ಗದ ಸೊಳ್ಳೆ ಪರದೆ ಅವಶ್ಯಕತೆ ಬಗ್ಗೆ 2007ರಲ್ಲಿ ಪ್ರಕಟಗೊಂಡ ಸಾರ್ವಜನಿಕ ಸೇವಾ ಘೋಷಣೆ ಜಾಹೀರಾತಿನಲ್ಲಿ ಬೆಕ್‌ಹ್ಯಾಮ್ ಕಾಣಿಸಿಕೊಂಡರು.

ಫಾಕ್ಸ್ ನೆಟ್‌ವರ್ಕ್ ಅಡಿಯಲ್ಲಿ ಫಾಕ್ಸ್ ಸಾಕರ್ ಚಾನೆಲ್ ಜೊತೆ ಸೇರಿಕೊಂಡು U.S.ನಲ್ಲಿ ಈಗ ಪ್ರಸಾರಗೊಳ್ಳುತ್ತಿರುವ TV ಸ್ಪಾಟ್‌‌ಅನ್ನು ಯೂಟ್ಯೂಬ್‌ನಲ್ಲಿ ಕಾಣಬಹುದು.[೧೩೮]

ಬೆಕ್‌ಹ್ಯಾಮ್ ಮೇಜರ್ ಲೀಗ್ ಸಾಕರ್‌ಗೆ ಸೇರಿದಾಗಿನಿಂದ "MLS W.O.R.K.S." ನಂತಹ ಧರ್ಮಾರ್ಥ ಸೇವೆಗಳ ಬಗ್ಗೆ U.S.ನಲ್ಲಿ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು. MLSನ ಮಾಜಿ ಮತ್ತು ಹಾಲಿ ಆಟಗಾರರೊಂದಿಗೆ ಸೇರಿಕೊಂಡು ನ್ಯೂಯಾರ್ಕ್ ಸಿಟಿಯ ಹಾರ್ಲೆ‌ಮ್‌ನಲ್ಲಿ 2007 ಅಗಸ್ಟ್ 17ರಂದು ಯುವ ಕ್ಲಿನಿಕ್ ನಡೆಸಿಕೊಟ್ಟರು. ಮಾರನೇ ದಿನವೇ ನ್ಯೂಯಾರ್ಕ್ ಸಿಟಿ ಪ್ರದೇಶದಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್ ರೆಡ್ ಬುಲ್ಸ್ ತಂಡದ ವಿರುದ್ಧ ಆಡುವುದರಲ್ಲಿದ್ದರು. ಎದುರಾಳಿ ತಂಡದ ಜಾಝಿ ಅಲ್ಟಿಡೋರ್‌ ಮತ್ತು ಜುವಾನ್ ಪಾಬ್ಲೊ ಎಂಜೆಲ್ ಅವರು ಬೆಕ್‌ಹ್ಯಾಮ್ ಜೊತೆಗಿದ್ದು, FC ಹಾರ್ಲೆ‌ಮ್ ಲಯನ್ಸ್‌‌ಗೇ ಪ್ರಯೋಜನವಾಗುವ ಸಲುವಾಗಿ ಪ್ರತಿಕೂಲ ಸ್ಥಿತಿಯಲ್ಲಿರುವ ಯುವಕರಿಗೆ ಪಾಠ ಮಾಡುವ ಕೌಶಲವನ್ನು ತಿಳಿಸಿಕೊಟ್ಟರು.[೧೩೯]

ಚಲನಚಿತ್ರ ನಟನೆ[ಬದಲಾಯಿಸಿ]

ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಮ್‌[ಬದಲಾಯಿಸಿ]

2002ರ ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಮ್ ಚಲನಚಿತ್ರದ ಆರ್ಕೈವ್‌‌ನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಬೆಕ್‌ಹ್ಯಾಮ್ ಚಲನಚಿತ್ರದಲ್ಲಿ ಸ್ವತಃ ನಟಿಸಿಲ್ಲ.

ಬೆಕ್‌ಹ್ಯಾಮ್ ಮತ್ತು ವಿಕ್ಟೋರಿಯಾ ಬೆಕ್‌ಹ್ಯಾಮ್ ಅತಿಥಿ ನಟರಾಗಿ ಕಾಣಿಸಿಕೊಳ್ಳಲು ಬಯಸಿದ್ದರೂ, ವೇಳಾಪಟ್ಟಿ ಎಡೆ ಮಾಡಿಕೊಡಲಿಲ್ಲ. ಆದ್ದರಿಂದ ಚಿತ್ರದ ನಿರ್ದೇಶಕರು ಸ್ಥಳೀಯ ತದ್ರೂಪಿಗಳನ್ನು ಬಳಸಿಕೊಂಡರು.[೧೪೦]

ದಿ ಗೋಲ್‌! ಕೃತಿತ್ರಯ[ಬದಲಾಯಿಸಿ]

2005ರಲ್ಲಿ ತೆರೆಕಂಡ ಗೋಲ್!: ದಿ ಡ್ರೀಮ್ ಬಿಗಿನ್ಸ್ ಚಲನಚಿತ್ರದಲ್ಲಿ ಜೆನೆಡಿನ್ ಜಿದಾನೆ ಮತ್ತು ರೌಲ್ ಜೊತೆ ಬೆಕ್‌ಹ್ಯಾಮ್ ಅತಿಥಿ ನಟನಾಗಿ ನಟಿಸಿದರು. ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಮ್ ಚಿತ್ರದಲ್ಲಿ ಬೆಕ್‌ಹ್ಯಾಮ್ ಪಾತ್ರದಲ್ಲಿ ನಟಿಸಿದ್ದ ಆಂಡಿ ಹಾರ್ಮರ್ ಈ ಚಿತ್ರದ ಒಂದು ಸನ್ನಿವೇಶದಲ್ಲೂ ಬೆಕ್‌ಹ್ಯಾಮ್ ಪಾತ್ರಾದಲ್ಲಿ ಕಾಣಿಸಿಕೊಂಡಿದ್ದಾರೆ.[೧೪೧]ಬೆಂಡ್ ಇಟ್ ಲೈಕ್ ಬೆಕ್‌ಹ್ಯಾಮ್ ಮುಂದಿನ ಚಿತ್ರGoal! 2: Living the Dream... [೧೪೨] ದಲ್ಲಿ ಬೆಕ್‌ಹ್ಯಾಮ್ ಸ್ವತಃ ದೊಡ್ಡ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರಧಾರಿ ರಿಯಲ್ ಮ್ಯಾಡ್ರಿಡ್‌‌ಗೆ ವರ್ಗಾವಣೆಗೊಳ್ಳುತ್ತಾನೆ. ಈ ಹೊತ್ತಿನಲ್ಲಿ ಕಥೆ ರಿಯಲ್ ಮ್ಯಾಡ್ರಿಡ್‌ ಮತ್ತು ಬೆಕ್‌ಹ್ಯಾಮ್ ಸುತ್ತ ತಿರುಗುತ್ತದೆ, ಕಾಲ್ಪನಿಕ ಪಾತ್ರಗಳ ಜೊತೆ ಮೈದಾನದೊಳಗೆ ಮತ್ತು ಹೊರಗೆ ರಿಯಲ್ ಮ್ಯಾಡ್ರಿಡ್‌ ತಂಡದ ಇತರ ಆಟಗಾರರ ಜೀವನದ ಸನ್ನಿವೇಶಗಳು ಚಿತ್ರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತವೆ. ಬೆಕ್‌ಹ್ಯಾಮ್ ನಟಿಸಿರುವGoal! 3: Taking on the World ಈ ಚಿತ್ರವನ್ನು ನೇರವಾಗಿ DVD ರೂಪದಲ್ಲಿ 2009 ಜೂನ್ 15ರಂದು ಹೊರತರಲಾಯಿತು.[೧೪೩]

ಲಾಸ್ ಎಂಜಲೀಸ್, ಕ್ಯಾಲಿಪೋರ್ನಿಯಾಕ್ಕೆ ಬೆಕ್‌ಹ್ಯಾಮ್ ಹೋದಾಗ್ಯೂ, ಚಿತ್ರರಂಗದಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಲು ತಮಗೆ ಆಸಕ್ತಿಯಿಲ್ಲ, ಅದು ತಮಗೆ ಹೊಂದಿಕೆಯಾಗುತ್ತಿಲ್ಲ ಎಂದರು.[೧೪೪]

ದಾಖಲೆಗಳು[ಬದಲಾಯಿಸಿ]

ಬೆಕ್‌ಹ್ಯಾಮ್ ಇಂಗ್ಲೆಂಡ್ ತಂಡದ ನಾಯಕ[೧೪೫] ನಾಗಿದ್ದಾಗ, ಇಂಗ್ಲೆಂಡ್‌ ತಂಡವನ್ನು 59 ಬಾರಿ ಮುನ್ನಡೆಸಿದರು, ಇದು ಇಂಗ್ಲೆಂಡ್ ಇತಿಹಾಸದಲ್ಲೇ ಅತಿ ಹೆಚ್ಚು.

2006 FIFA ವಿಶ್ವ ಕಪ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಈಕ್ವಡೋರ್ ವಿರುದ್ಧ ಫ್ರೀ ಕಿಕ್ ಗೋಲು ಹೊಡೆದು ಫುಟ್‌ಬಾಲ್ ಜಗತ್ತಿನ ಎರಡು ವಿಶೇಷ ಕ್ಲಬ್‌ಗಳ ಸದಸ್ಯತ್ವ ಪಡೆದುಕೊಂಡರು: ಬೆಕ್‌ಹ್ಯಾಮ್ ಮೂರು ವಿಶ್ವ ಕಪ್‌ಗಳಲ್ಲೂ ಗೋಲು ಹೊಡೆದ ಏಕೈಕ ಇಂಗ್ಲಿಷ್ ಆಟಗಾರ ಮತ್ತು ರಾಷ್ಟ್ರೀಯತೆಯನ್ನು ಬದಿಗಿರಿಸಿದರೆ ಈ ಸಾಧನೆ ಮಾಡಿದ 21ನೇ ಆಟಗಾರ; ರಿಯಲ್ ಮ್ಯಾಡ್ರಿಡ್‌‌ನ ಸಹ ಆಟಗಾರ ರೌಲ್‌ ಕೆಲವು ದಿನಗಳ ಹಿಂದೆಯಷ್ಟೇ ಈ ಸಾಧನೆ ಮಾಡಿದ್ದರು.[೧೪೬]

ವಿಶ್ವ ಕಪ್ ಇತಿಹಾಸದಲ್ಲಿ ನೇರ ಫ್ರೀ ಕಿಕ್‌ ಮೂಲಕ ಎರಡು ಬಾರಿ ಗೋಲು ಹೊಡೆದ 5ನೇ ಆಟಗಾರನೂ ಹೌದು; ಇತರ ನಾಲ್ವರೆಂದರೆ [[ಪೀಲೆ|ಪೀಲೆ]], ರೊಬರ್ಟೊ ರಿವೆಲಿನೊ, ಟಿಯೋಫಿಲೊ ಕ್ಯುಬಿಲ್ಲಾಸ್, ಮತ್ತು ಬರ್ನಾರ್ಡ್ ಗೆಂಘಿನಿ (ಈ ಮೊದಲು 1998 FIFA ವಿಶ್ವ ಕಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಬೆಕ್‌ಹ್ಯಾಮ್ ಈ ರೀತಿ ಗೋಲು ಹೊಡೆದಿದ್ದರು.

ಎಲ್ಲ ಮೂರು ಗೋಲುಗಳು ದಕ್ಷಿಣ ಅಮೆರಿಕಾ ತಂಡಗಳ (ಕೊಲಂಬಿಯಾ, ಅರ್ಜೆಂಟೀನಾ, ಮತ್ತು ಈಕ್ವೆಡೋರ್) ವಿರುದ್ಧ ಬಂದಿವೆ(ಮೇಲೆ ಹೇಳಿದ ಎರಡು ಫ್ರೀ ಕಿಕ್‌ಗಳು ಮತ್ತು ಅರ್ಜೆಂಟೀನಾ ವಿರುದ್ಧ ಪೆನಾಲ್ಟಿ).

ಟಟೂಗಳು (ಹಚ್ಚೆ)[ಬದಲಾಯಿಸಿ]

ಬೆಕ್‌ಹ್ಯಾಮ್ ಶರೀರದಲ್ಲಿ ಅನೇಕ ಹಚ್ಚೆಗಳಿವೆ. ಈ ಪೈಕಿ ಅವರ ಪತ್ನಿ ವಿಕ್ಟೋರಿಯಾ ಹೆಸರನ್ನು ಹಿಂದಿಯಲ್ಲಿ ಬರೆಯಲಾಗಿದೆ, ಏಕೆಂದರೆ ಇಂಗ್ಲಿಷ್‌ನಲ್ಲಿಡುವುದು "ಮೋಜಿನ"ನಂತೆ ಕಾಣಬಹುದು ಎಂಬುದು ಬೆಕ್‌ಹ್ಯಾಮ್ ಅಭಿಪ್ರಾಯವಾಗಿತ್ತು.

ಇನ್ನೊಂದು ಹಚ್ಚೆ ಹಿಬ್ರ್ಯೂ ಭಾಷೆಯಲ್ಲಿದೆ, לדודי ודודי לי הרעה בשושנים, ಭಾಷಾಂತರಿಸಿದಾಗ ಹೀಗೆ ಓದಿಸುತ್ತದೆ: "ಐ ಆಮ್ ಮೈ ಬಿಲವೆಡ್ಸ್, ಆಂಡ್ ಮೈ ಬಿಲವೆಡ್ ಈಸ್ ಮೈನ್, ದ್ಯಾಟ್ ಶೆಫರ್ಡ್ಸ್ ಅಮಾಂಗ್ ದಿ ಲಿಲೀಸ್."

ಇದನ್ನು ಹಿಬ್ರ್ಯೂ ಬೈಬಲ್‌ನ ಸಾಂಗ್ ಆಫ್ ಸಾಂಗ್ಸ್‌ನಿಂದ ಆರಿಸಿಕೊಳ್ಳಲಾಗಿದೆ ಮತ್ತು ನಿಷ್ಠೆ ಬಗ್ಗೆ ಈ ಪ್ರಶಂಸಾಗೀತೆ ಯಹೂದಿಗಳಲ್ಲಿ ಜನಪ್ರಿಯವಾಗಿದೆ. ಮಿತಿಯಿಲ್ಲದ ಹಚ್ಚೆಗಳು, ಅವುಗಳ ವಿನ್ಯಾಸ ಮತ್ತು ಅವುಗಳಿರುವ ಸ್ಥಳದಿಂದಾಗಿ "ಹೆಲ್ಸ್ ಏಂಜೆಲ್ ಬೈಕರ್" ಮತ್ತು "ಫುಟ್‌ಬಾಲ್ ಪುಂಡ" ನಂತೆ ಕಂಡ ಬೆಕ್‌ಹ್ಯಾಮ್ ಮಾಧ್ಯಮಗಳಲ್ಲಿ ನಗೆಪಾಟಲಿಗೀಡಾದರು.

ಹಚ್ಚೆಗಳು ಕೆಲವರ ನಂಬಿಕೆಗಳಿಗೆ ನೋವುಂಟು ಮಾಡಬಹುದು ಎಂದು ಭಾವಿಸಿದ್ದ ಬೆಕ್‌ಹ್ಯಾಮ್, ಫುಟ್‌ಬಾಲ್ ಆಡುವಾಗ ಹಚ್ಚೆಗಳು ಕಾಣದಂತೆ ಸಾಮಾನ್ಯವಾಗಿ ಉದ್ದ ಕೈ ಅಂಗಿಯನ್ನೇ ಧರಿಸುತ್ತಿದ್ದರು.[೧೪೭]

ಬೆಕ್‌ಹ್ಯಾಮ್ ಹಚ್ಚೆಗಳ ಕಾಲಗಣನೆ ಈ ಕೆಳಗಿನವುಗಳನ್ನು ಒಳಗೊಂಡಿವೆ:

 • ಎಪ್ರಿಲ್ 1999 - ಬೆನ್ನಿನಲ್ಲಿ ಪುತ್ರ ಬ್ರೂಕ್ಲಿನ್ ಹೆಸರು
 • ಎಪ್ರಿಲ್ 1999 - ಬೆನ್ನಿನಲ್ಲಿ "ಗಾರ್ಡಿಯನ್ ಏಂಜೆಲ್"
 • 2000 - ಎಡತೋಳಿನಲ್ಲಿ "ವಿಕ್ಟೋರಿಯಾ" ಹೆಸರು (ಹಿಂದಿಯಲ್ಲಿ)
 • ಎಪ್ರಿಲ್ 2002 - ಮುಂದೋಳಿನಲ್ಲಿ ರೋಮನ್ ಸಂಖ್ಯೆ VII (7) on his right forearm
 • ಮೇ 2003 - ಬಲತೋಳಿನಲ್ಲಿ ಲ್ಯಾಟಿನ್ ನುಡಿಗಟ್ಟು"ಪರ್ಫೆಕ್ಟೋ ಇನ್ ಸ್ಪಿರಿಚು" , "ಅಧ್ಯಾತ್ಮಿಕ ಪರಿಪೂರ್ಣತೆ", ಎಂದು ಭಾಷಾಂತರಿಸಲಾಗಿದೆ.
 • ಮೇ 2003 - ಲ್ಯಾಟಿನ್ ನುಡಿಗಟ್ಟು "ಅಟ್ ಅಮೆಮ್ ಇಟ್ ಫೊವೆಮ್" , "ಹಾಗಾಗಿ ನಾನು ಪ್ರೀತಿಸುತ್ತೇನೆ ಮತ್ತು ಸಲಹುತ್ತೇನೆ",ಎಂದು ಭಾಷಾಂತರಿಸಲಾಗಿದೆ.
 • 2003 - ಬೆನ್ನಿನಲ್ಲಿ ಪುತ್ರ ರೋಮಿಯೋ ಹೆಸರು
 • 2003 - ಬಲ ಭುಜದಲ್ಲಿ ಶಾಸ್ತ್ರೀಯ ಕಲೆ
 • 2004 - ಕೊರಳಿನ ಹಿಂಭಾಗದಲ್ಲಿ ಜಯ ಶಿಲುಬೆ
 • 2004 - ಬಲ ತೋಳಿನಲ್ಲಿ ಧ್ಯೇಯವಾಕ್ಯದೊಂದಿಗೆ ಏಂಜೆಲ್ "ಇನ್ ಫೇಸ್ ಆಫ್ ಅಡ್ವರ್ಸಿಟಿ"
 • ಮಾರ್ಚ್ 2005 - ಬೆನ್ನಿನಲ್ಲಿ ಪುತ್ರ ಕ್ರೂಜ್‌ ಹೆಸರು
 • ಜೂನ್ 2006 - ಬಲ ತೋಳು ಮತ್ತು ಭುಜಕ್ಕೆ ಎರಡನೇ ಏಂಜೆಲ್ ಮತ್ತು ಮೋಡಗಳನ್ನು ಸೇರಿಸಿಕೊಳ್ಳಲಾಯಿತು.
 • ಜನವರಿ 2008 - ಎಡ ಮುಂದೋಳಿನಲ್ಲಿ ವಿಕ್ಟೋರಿಯಾಳ ಚಿತ್ರ
 • ಫೆಬ್ರವರಿ 2008 - ಎಡ ಮುಂದೋಳಿನಲ್ಲಿ "ಫಾರ್‌ಎವರ್ ಬೈ ಯುವರ್ ಸೈಡ್"
 • 9 ಮಾರ್ಚ್ 2008 4ನೇ ಮಹಡಿ, ನಂ 8, ಕ್ಯಾಮರೂನ್ ರಸ್ತೆ, ತ್ಸಿಂ ಶಾ ತ್ಸುಯಿ ಹಾಂಗ್ ಕಾಂಗ್[೧೪೮] - ದಿ ಚೈನೀಸ್ ಪ್ರೊವರ್ಬ್ "Shēng sǐ yǒu mìng fù guì zaì tiān" (生死有命 富貴在天)

"ಮರಣ ಮತ್ತು ಜೀವನ ದೈವಕ್ಕೆ ಅಧೀನವಾಗಿದೆ. ಐಶ್ವರ್ಯ ಮತ್ತು ಗೌರವಗಳನ್ನು ಸ್ವರ್ಗ ನಿರ್ವಹಿಸುತ್ತದೆ" ಎಂದು ಮುಂಡದ ಕೆಳಗೆ ಎಡಬದಿಯ ಮೊಲೆತೊಟ್ಟಿನಿಂದ ಆರಂಭವಾಗಿ ತೊಡೆಸಂದಿನವರೆಗೆ ಬರೆಯಲಾಗಿದೆ.

 • ಜುಲೈ 2009 - 10ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಎಡ ತೋಳಿನಲ್ಲಿ "ರಿಂಗ್ o' ರೋಸಸ್".

ಬೆಕ್‌ಹ್ಯಾಮ್ ಶರೀರದಲ್ಲಿರುವ ಅನೇಕ ಹಚ್ಚೆಗಳು ಗೀಳು-ಬಲತ್ಕಾರದಿಂದಾಗಿ ಆಗಿವೆ, ಸೂಜಿಯ ನೋವಿನ ಚಟಕ್ಕೂ ಅವರು ಒಳಗಾಗಿದ್ದರು ಎಂದು ಹೇಳಲಾಗಿದೆ.[೧೪೯][೧೫೦]

ಇದನ್ನು ನೋಡಿರಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

ಪುಸ್ತಕಗಳು[ಬದಲಾಯಿಸಿ]

 • Beckham, David (2002). David Beckham: My Side. HarperCollinsWillow. (ISBN 0-00-715732-0). 
 • Beckham, David; Freeman, Dean (2001). Beckham: My World. Hodder & Stoughton Ltd. (ISBN 0-340-79270-1).  Cite uses deprecated parameter |coauthors= (help)
 • Beckham, David; Watt, Tom (2003). Beckham: Both Feet on the Ground. HarperCollins. (ISBN 0-06-057093-8).  Cite uses deprecated parameter |coauthors= (help)
 • Crick, Michael (2003). The Boss -- The Many Sides of Alex Ferguson. Pocket Books. (ISBN 0-7434-2991-5). 
 • Ferguson, Alex; McIlvanney, Hugh (1999). Managing My Life -- My Autobiography. Hodder & Stoughton. (ISBN 0-340-72855-8).  Cite uses deprecated parameter |coauthors= (help)

ಅಂತರ್ಜಾಲ[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ೫.೨ ೫.೩ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. http://www.mlsplayers.org/files/8_31_07_salary_info_alpha.pdf
 19. http://www.mlsplayers.org/files/9_7_08_salary_info_alpha.pdf
 20. http://www.mlsplayers.org/files/ಸೆಪ್ಟೆಂಬರ್_15_2009_salary_information__alphabetical.pdf
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. ದಿ FA - ಬೆಕ್ಸ್' ಬ್ರಿಮ್ಸ್‌ಡೌನ್ ಬೂಸ್ಟ್, 2004 ಸೆಪ್ಟೆಂಬರ್ 24 ಲೇಖನದಿಂದ 2007, ಜುಲೈ 7ರಂದು ಮರು ಸಂಪಾದಿಸಲಾಯಿತು.
 32. "ಸೆಕೆಂಡ್ ಲೆಗ್‌" ಸ್ಕೋರುಗಳು ಸಮನಾಗಿದ್ದಾಗ ವಿಜೇತರನ್ನು ನಿರ್ಧರಿಸಲು ಆಡುವ ಎರಡು ಪಂದ್ಯಗಳ ಪೈಕಿ ದ್ವಿತೀಯ ಪಂದ್ಯ. ಎರಡು ಪಂದ್ಯಗಳಿಂದ ಬಂದ ಸ್ಕೋರುಗಳನ್ನು ಒಟ್ಟು ಸೇರಿಸಿ ವಿಜೇತ ತಂಡವನ್ನು ನಿರ್ಣಯಿಸಲಾಗುತ್ತದೆ.
 33. ಬೆಕ್‌ಹ್ಯಾಮ್ನ ಪ್ರೈಡ್ ಅಟ್ OBE BBC ಕ್ರೀಡೆ; 13 ಜೂನ್ 2003, 2008, ಅಕ್ಟೋಬರ್ 22ರಂದು ಮರು ಸಂಪಾದಿಸಲಾಯಿತು.
 34. ಅಲೆನ್ ಹಾನ್ಸೆನ್‌'ನ ಅತ್ಯಂತ ಪ್ರಸಿದ್ಧ ಅಭಿಪ್ರಾಯ ಏನೆಂದರೆ "ಯು ಕಾಂಟ್ ವಿನ್ ಎನಿಥಿಂಗ್ ವಿದ್ ಕಿಡ್ಸ್", ದಿ ಬಾಸ್‌‌ 405ನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 30 ಮೀಟರ್ ದೂರದಿಂದ ಯುನೈಟೆಡ್ ಪರವಾಗಿ ಬೆಕ್‌ಹ್ಯಾಮ್ ಗೋಲು ಹೊಡೆದರು.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. ಸ್ಕೈ ಸ್ಪೋರ್ಟ್ಸ್' ಕಾಮೆಂಟೇಟರ್‌ಮಾರ್ಟಿನ್ ಟೈಲರ್‌'ನ ಮಾತುಗಳು "ಯು ವಿಲ್ ಸೀ ದ್ಯಾಟ್ ಓವರ್ ಅಂಡ್ ಓವರ್ ಎಗೇನ್" ಈ ಮಾತುಗಳು ಸತ್ಯವೆಂದು ಸಾಬೀತಾದ ಕಾರಣ ಪ್ರೀಮಿಯರ್ ಲೀಗ್ ಗೋಲನ್ನು 2003ರ ದಶಕದ ಗೋಲೆಂದು ಪರಿಗಣಿಸಿ ಮತಕ್ಕೆ ಹಾಕಲಾಯಿತು.
 37. "Beckham's Golden Boots". rediff.com. 2004-04-27. 
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 41. ದಿ ಬಾಸ್ 469.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 44. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 45. BBC 19 ಫೆಬ್ರವರಿ 2003 ಅಗಸ್ಟ್ 27ರಂದು ಪಡೆಯಲಾಯಿತು
 46. Channel4.com 21 ಡಿಸೆಂಬರ್ 2008
 47. Goal.com 28 ಎಪ್ರಿಲ್ 2009, 2009 ಅಗಸ್ಟ್ 27ರಂದು ಪಡೆಯಲಾಯಿತು
 48. ಮೆಟ್ರೋ 28 ಎಪ್ರಿಲ್ 2009 ಅಗಸ್ಟ್ 27ರಂದು ಪಡೆಯಲಾಯಿತು
 49. Sport.co.uk
 50. walesonline.co.uk
 51. The Sun 27 ಮಾರ್ಚ್ 2008
 52. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 53. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 54. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 55. ಸಮನಾಗಿ, ಸಮಯಕ್ಕೆ, £25 ದಶಲಕ್ಷ ಅಥವಾ US$41 ದಶಲಕ್ಷ.
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 58. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 59. ಮೌಲ್ ಕಿಂಬರ್ಲಿ. ಡೇವಿಡ್ ಬೆಕ್‌ಹ್ಯಾಮ್: ಸಾಕರ್ ತಾರೆ ಮತ್ತು ಬುಕ್ ಜಡ್ಜ್ ದಿ ಬುಕ್ ಸ್ಟಾಂಡರ್ಡ್ 11 ಜನವರಿ 2006
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. MLS ಸೂಪರ್‌ಡ್ರಾಫ್ಟ್ ಸುತ್ತಲಿನ ಘಟನೆಗಳು. MLSnet.com. 9 ಜನವರಿ 2007.
 65. "Beckham set to invade America". Associated Press. 2007-01-12. 
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 68. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 69. "Beckham takes captain's armband to great effect". ESPN.com. 2007-08-16. 
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 72. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 73. "Beckham booed by furious fans". BBC Sport. 2009-07-20. 
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 86. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 87. "ಅರ್ಜೆಂಟೀನಾ 2-2 ಇಂಗ್ಲೆಂಡ್", englandfc.com, 30 ಜೂನ್ 1998. 2006 ಜೂನ್ 25ರಂದು ಮರು ಸಂಪಾದಿಸಲಾಯಿತು.
 88. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 89. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 90. ಎ ರೆಫರೆನ್ಸ್ ಟು ಬ್ರೂಕ್ಲಿನ್. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 91. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 92. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 93. "ಇಂಗ್ಲೆಂಡ್ 1-0 ಇಕ್ವಡೋರ್", BBC ಸ್ಪೋರ್ಟ್, 2006 25 ಜೂನ್‌ರಂದು ಮರು ಸಂಪಾದಿಸಲಾಯಿತು.
 94. "ಇಂಗ್ಲೆಂಡ್ ನಾಯಕ ಸ್ಥಾನಕ್ಕೆ ಬೆಕ್‌ಹ್ಯಾಮ್ ರಾಜೀನಾಮೆ", BBC ಸ್ಪೋರ್ಟ್, 2006 ಜುಲೈ 2ರಂದು ಮರು ಸಂಪಾದಿಸಲಾಯಿತು.
 95. ಇದು ಬೆಕ್‌ಹ್ಯಾಮ್ ಎಸಗಿದ ತಪ್ಪು - ಇಷ್ಟೊತ್ತಿಗೆ ಅವರು ಇಂಗ್ಲೆಂಡ್ ಪರವಾಗಿ 94 ಬಾರಿ ಆಡಬಹುದಾಗಿತ್ತು.
 96. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 97. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 98. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 99. ನಿವೃತ್ತಿ: ಬೆಕ್ಹಾ ನಿರಾಕರಣೆ, BBC ಸ್ಪೋರ್ಟ್ 2007-11-21. BFI. 2007-06-19 ಮರು ಸಂಪಾದಿಸಲಾಯಿತು.
 100. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 101. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 102. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 103. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 104. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 105. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 106. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 107. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 108. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 109. ಬೆಕ್‌ಹ್ಯಾಮ್ ರೆಡ್ ಕಾರ್ಡ್ ಬಟ್ ಜಾಯ್ ಫಾರ್ ಸ್ವೆನ್, ದಿ ಸಂಡೇ ಟೈಮ್ಸ್ , 9 ಅಕ್ಟೋಬರ್ 2005. 2007, ಏಪ್ರಿಲ್‌ 21ರಂದು ಮರು ಸಂಪಾದಿಸಲಾಯಿತು.
 110. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 111. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 112. ೧೧೨.೦ ೧೧೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 113. "[೧]"
 114. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 115. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 116. ಡೇವಿಡ್ ಬೆಕ್‌ಹ್ಯಾಮ್: ಸಾಕರ್‌ನ ಮೆಟ್ರೋ ಸೆಕ್ಶುವಲ್. ಟೈಮ್‌ (ನಿಯತಕಾಲಿಕ)
 117. FA ಕಮ್ಯುನಿಟಿ ಶೀಲ್ಡ್, UEFA ಸೂಪರ್ ಕಪ್, 1}ಇಂಟರ್‌ಕಾಂಟಿನೆಂಟಲ್ ಕಪ್, FIFA ಕ್ಲಬ್ ವಿಶ್ವ ಕಪ್ ಮತ್ತು ಸೂಪರ್‌ಲೀಗಾ ಸೇರಿದಂತೆ ಇತರ ಸ್ಪರ್ಧಾತ್ಮಕ ಸ್ಪರ್ಧೆಗಳ ಜೊತೆ ಸೇರಿಸಲಾಗಿದೆ.
 118. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 119. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 120. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 121. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 122. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 123. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 124. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 125. "ಡಿಡ್ ಬೆಕ್ಸ್ ಹ್ಯಾವ್ ಎ ತ್ರೀಸಮ್‌?" ಡೈಲಿ ಮೇಲ್ 8 ಎಪ್ರಿಲ್ 2004 ಲೇಖನದಿಂದ. 2008-05-07ನಲ್ಲಿ ಮರು ಸಂಪಾದಿಸಲಾಯಿತು.
 126. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 127. ಛಾಯಾಗ್ರಹಕನ ಮೇಲೆ ಹಲ್ಲೆ; ಬೆಕ್‌ಹ್ಯಾಮ್ ವಿರುದ್ಧ ಮೊಕದ್ದಮೆ TMZ.com, 26 ಜನವರಿ 2009
 128. ಬೆಕ್‌ಹ್ಯಾಮ್ ದಿ ವರ್ಲ್ಡ್‌ವೈಡ್ ಬ್ರ್ಯಾಂಡ್, ಜೂನ್ 2006 ಅಸೋಸಿಯೇಟೆಡ್ ನ್ಯೂ ಮೀಡಿಯಾ ವೆಬ್‌ಸೈಟ್
 129. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 130. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 131. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 132. ಬೆಕ್‌ಹ್ಯಾಮ್: ಅಮೆರಿಕನ್ ಐಡಲ್ಸ್: W ಪೀಚರ್ ಸ್ಟೋರಿ ಆನ್ Style.com[dead link]
 133. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil)., Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 134. The ಬೆಕ್‌ಹ್ಯಾಮ್s ಟೇಕ್ ಹಾಲಿವುಡ್[dead link]
 135. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 136. ಪೆಪ್ಸಿ ಮತ್ತು ಬೆಕ್‌ಹ್ಯಾಮ್ ತಮ್ಮ ನಡುವಿನ ಒಪ್ಪಂದವನ್ನು ಅಂತ್ಯಗೊಳಿಸಿದರು.[dead link]
 137. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 138. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 139. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 140. Bend It Like Beckham ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ
 141. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 142. Goal! 2: Living the Dream... ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ
 143. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 144. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 145. "Beckham stands down". 2 July 2006 accessdate=14 July 2007.  Check date values in: |date= (help)
 146. "ಇಂಗ್ಲೆಂಡ್ 1-0 ಇಕ್ವಡೋರ್", BBC ಸ್ಪೋರ್ಟ್, 25 ಜೂನ್ 2006, 25 ಜೂನ್ 2006ರಂದು ಮರು ಸಂಪಾದಿಸಲಾಯಿತು.
 147. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 148. ಬೆಕ್‌ಹ್ಯಾಮ್ ಟಟೂ ಸ್ವೀಕರಿಸಿದರು (ಅನುಮತಿ 19/03/2008)2008, ಮಾರ್ಚ್ 9ರಂದು ಬೆಕ್ಹಾಂ ಹಾಂಗ್‌ ಕಾಂಗ್‌ನಲ್ಲಿ ಗ್ಯಾಬೀ ಎಂಬ ಕಲಾವಿದರೊಬ್ಬರಿಂದ ಹಚ್ಚೆ(=ಟಟೂ)ಯನ್ನು ಪಡೆದರು. ಲಿಬ್ರಾನ್ ಜೇಮ್ಸ್ ಮತ್ತು ಕೋಬ್ ಬ್ರ್ಯಾಂಟ್ ಕೂಡ ಅದೇ ಕಲಾವಿದನಿಂದ ಟಟೂವನ್ನು ಪಡೆದರು.
 149. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 150. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಡೇವಿಡ್ ಬೆಕ್‌ಹ್ಯಾಮ್]]

ಟೆಂಪ್ಲೇಟು:Commons2

Sporting positions
ಪೂರ್ವಾಧಿಕಾರಿ
Tony Adams
England football captain
November 2000 – 2006
ಉತ್ತರಾಧಿಕಾರಿ
John Terry
ಪೂರ್ವಾಧಿಕಾರಿ
Landon Donovan
Los Angeles Galaxy captain
2007 – 2008
ಉತ್ತರಾಧಿಕಾರಿ
Landon Donovan