ಕ್ರೀಡೆಗಳು
ಕ್ರೀಡೆ ಎಂಬುದು ಸಂಘಟಿತ,ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ನಿರ್ಧರಿಸಬಹುದು. ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವು ಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ದೈಹಿಕ ಚಟುವಟಿಕೆ ಜನರ, ಪ್ರಾಣಿಗಳ ಮತ್ತು/ಅಥವಾ ಚೆಂಡುಗಳು ಮತ್ತು ಯಂತ್ರಗಳಂತಹ ವಿವಿಧ ವಸ್ತುಗಳ ಚಲನೆಯನ್ನು ಒಳಗೊಂಡಿರುತ್ತದೆ. ಇದಕ್ಕೆ ವಿರುದ್ಧವಾಗಿ ಇಸ್ಪೀಟೆಲೆಗಳ ಆಟ ಮತ್ತು ಬೋರ್ಡ್ ಆಟದಂತ ಆಟಗಳನ್ನು ಮನಸ್ಸಿಗೆ ಸಂಬಂಧಿಸಿದ ಕ್ರೀಡೆಗಳೆಂದು ಕರೆದರೂ ಅವುಗಳಲ್ಲಿ ಕೆಲವನ್ನು ಒಲಿಂಪಿಕ್ ಕ್ರೀಡೆಗಳೆಂದು ಗುರುತಿಸಿದರೂ ಇವು ಕೇವಲ ಬುದ್ಧಿಶಕ್ತಿಯ ಕೌಶಲಗಳನ್ನು ಅಪೇಕ್ಷಿಸುತ್ತವೆ. ಜಾಗಿಂಗ್ ಮತ್ತು ಬೆಟ್ಟ ಹತ್ತುವಂತಹ ಸ್ಪರ್ಧಾತ್ಮಕವಲ್ಲದ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನೆಗಳು ಎಂದು ವರ್ಗೀಕರಿಸಲಾಗುವುದು.
ಗೋಲುಗಳನ್ನು ಸ್ಕೋರ್ ಮಾಡುವ ಅಥವಾ ಗೆರೆಯನ್ನು ಮೊದಲು ದಾಟುವಂತಹ ದೈಹಿಕ ಪಂದ್ಯಗಳು ಕ್ರೀಡೆಯ ಫಲಿತಾಂಶವನ್ನು ನಿರ್ಧರಿಸುತ್ತವೆ. ಆದರೂ ಡೈವಿಂಗ್ , ಕುದುರೆ ತರಬೇತಿ ಮತ್ತು ಫಿಗರ್ ಸ್ಕೇಟಿಂಗ್ ನಂತಹ ಕೆಲವು ಕ್ರೀಡೆಗಳಲ್ಲಿ ಕೌಶಲದvete le mierda ಮಟ್ಟವನ್ನು ಉತ್ತಮವಾಗಿ ನಿರ್ಧರಿಸಲಾದ ಮಾನದಂಡಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ. ಸೌಂದರ್ಯ ಸ್ಪರ್ಧೆ ಮತ್ತು ಶರೀರವರ್ಧನೆ ಪ್ರದರ್ಶನಗಳಂತಹ ಫಲಿತಾಂಶ ನಿರ್ಣಯಿಸುವ ಇತರ ಚಟುವಟಿಕೆಗಳಿಗೆ ಇದು ತದ್ವಿರುದ್ಧವಾಗಿರುತ್ತದೆ. ಈ ಚಟುವಟಿಕೆಗಳಲ್ಲಿ ಕೌಶಲವನ್ನು ತೋರಿಸಬೇಕಿಲ್ಲ ಮತ್ತು ಮಾನದಂಡವನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ.
ಸೋಲನ್ನು ಮತ್ತು ಸಾಧನೆಗಳನ್ನು ಕ್ರೀಡಾ ವಾರ್ತೆಯಲ್ಲಿ ವ್ಯಾಪಕವಾಗಿ ಪ್ರಸಾರಮಾಡುವಾಗ ಕ್ರೀಡೆಗಳ Enna vennum ನಿಖರವಾದ ದಾಖಲೆಗಳನ್ನು ಇಡಲಾಗುತ್ತದೆ ಮತ್ತು ಪರಿಷ್ಕರಿಸಲಾಗುತ್ತದೆ. ಕ್ರೀಡೆಗಳನ್ನು ಹೆಚ್ಚಾಗಿ ಮೋಜಿಗಾಗಿ ಅಥವಾ ಉತ್ತಮ ದೈಹಿಕ ಸ್ಥಿತಿಯಲ್ಲಿರಲು ಆಡಲಾಗುತ್ತದೆ. ವೃತ್ತಿಪರ ಕ್ರೀಡೆ ಮನರಂಜನೆಯ ಮುಖ್ಯ ಮೂಲವಾಗಿದೆ.
ಯಾವಾಗಲೂ ಯಶಸ್ವಿಯಾಗದಿದ್ದರೂ ಕ್ರೀಡೆಗಳಲ್ಲಿ ಭಾಗವಹಿಸುವವರು ಉತ್ತಮ ಕ್ರೀಡಾಪಟುತ್ವವನ್ನು ಪ್ರದರ್ಶಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಅಲ್ಲದೇ ಪ್ರತಿಸ್ಪರ್ಧಿಗಳು ಮತ್ತು ಅಧಿಕಾರಿಗಳ ಜತೆ ಗೌರವದಿಂದ ವರ್ತಿಸಬೇಕು ಹಾಗು ಆಟದಲ್ಲಿ ಸೋತಾಗ ಗೆದ್ದವರಿಗೆ ಅಭಿನಂಧಿಸಬೇಕೆಂಬ ಕ್ರೀಡಾಸ್ಪೂರ್ತಿಯ ನಡವಳಿಕೆಯ
ನಿಷ್ಪತ್ತಿ
[ಬದಲಾಯಿಸಿ]"ಕ್ರೀಡೆ" ಎಂಬ ಪದವು "ವಿರಾಮ" ವೆಂದು ಅರ್ಥಕೊಡುವ ಹಳೆಯ ಫ್ರೆಂಚ್ ನ ಡಿಸ್ಪೋರ್ಟ್ ಎಂಬ ಪದದಿಂದ ಬಂದಿದೆ. ಅಮೇರಿಕನ್ ಇಂಗ್ಲೀಷ್ ಮನರಂಜನೆ ಚಟುವಟಿಕೆಯ ಸಾಮಾನ್ಯ ವಿಧವನ್ನು ಸೂಚಿಸಲು "ಸ್ಪೋರ್ಟ್ಸ್" ಎಂಬ ಪದವನ್ನು ಬಳಸಿದರೆ, ಇತರ ಪ್ರಾದೇಶಿಕ ಉಪಭಾಷೆಗಳು ಕೇವಲ "ಸ್ಪೋರ್ಟ್" ಎಂಬ ಏಕವಚನವನ್ನು ಮಾತ್ರ ಬಳಸುತ್ತವೆ. ಈ ಪದದ ಪರ್ಷಿಯನ್ ಮೂಲ "ಬಾರ್ಡ್" ಎಂಬ ಪದವಾಗಿದ್ದು ಗೆಲುವು ಎಂಬ ಅರ್ಥವನ್ನು ಕೊಡುತ್ತದೆ.
ಇತಿಹಾಸ
[ಬದಲಾಯಿಸಿ]ಕ್ರಿಸ್ತಪೂರ್ವ 4000 ಇಸವಿಯ ಮೊದಲೇ ಚೀನೀಯರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಸೂಚಿಸುವಂತಹ ಹಸ್ತಕೃತಿಗಳು ಮತ್ತು ವಿನ್ಯಾಸಗಳಿವೆ.[೧] ಅಂಗಸಾಧನೆ ಚೀನಾದ ಪ್ರಾಚೀನ ಕಾಲದಲ್ಲಿ ಜನಪ್ರಿಯವಾಗಿದ್ದ ಕ್ರೀಡೆಯಂತೆ ಕಂಡುಬಂದಿದೆ. ಫೇರೋಗಳ ಸ್ಮಾರಕಗಳು ಪ್ರಾಚೀನ ಈಜಿಪ್ಟ್ ನಲ್ಲಿ ಈಜುವುದು ಮತ್ತು ಮೀನುಗಾರಿಕೆ ಒಳಗೊಂಡಂತೆ ಅನೇಕ ಕ್ರೀಡೆಗಳು ಅತ್ಯಂತ ಅಭಿವೃದ್ಧಿಯಾಗಿದ್ದವು ಹಾಗು ವಿಧಿಬದ್ಧವಾಗಿದ್ದವು ಎಂಬುದನ್ನು ಸೂಚಿಸುತ್ತವೆ.[೨] ಈಜಿಪ್ಟ್ ನ ಇತರ ಕ್ರೀಡೆಗಳು ಈಟಿಯನ್ನು ಎಸೆಯುವುದು, ಎತ್ತರದ ಜಿಗಿತ ಮತ್ತು ಕುಸ್ತಿಯನ್ನು ಒಳಗೊಂಡಿದ್ದವು. ಇರಾನಿನ ಸಾಂಪ್ರದಾಯಿಕ ಜೌರ್ಕಾನೆ ಕದನ ಕಲೆಗಳಂತಹ ಪ್ರಾಚೀನ ಪರ್ಷಿಯ ಕ್ರೀಡೆಗಳು ಯುದ್ಧ ಕೌಶಲಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದವು. ಇತರ ಕ್ರೀಡೆಗಳಲ್ಲೆಲ್ಲ ಪೋಲೋ ಮತ್ತು ಜೌಸ್ಟಿಂಗ್(ಅಶ್ವಾರೋಹಿ ಭಲ್ಲೆಯುದ್ಧ) ಪರ್ಶಿಯಾದಲ್ಲಿ ಹುಟ್ಟಿದ ಕ್ರೀಡೆಗಳಾಗಿವೆ.
ವ್ಯಾಪಕ ಕ್ರೀಡೆಗಳು ಪ್ರಾಚೀನ ಗ್ರೀಸ್ ನ ಕಾಲದಲ್ಲೆ ಮತ್ತು ಮಿಲಿಟರಿ ಸಂಸ್ಕೃತಿಯ ಸಮಯದಲ್ಲಿ ನೆಲೆಗೊಂಡಿದ್ದವು.ಅಲ್ಲದೇ ಗ್ರೀಸ್ ನಲ್ಲಿ ಕ್ರೀಡೆಯ ಬೆಳವಣಿಗೆ ಪರಸ್ಪರ ಗಮನಾರ್ಹ ಪ್ರಭಾವಬೀರಿವೆ. ಕ್ರೀಡೆಗಳು ಅವರ ಸಂಸೃತಿಯ ಪ್ರಮುಖ ಭಾಗವಾಗಿ ರೂಪುಗೊಂಡು,ಗ್ರೀಕರು ಒಲಿಂಪಿಕ್ ಕ್ರೀಡೆಗಳನ್ನು ಸೃಷ್ಟಿಸಿದರು. ಪ್ರಾಚೀನಕಾಲದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಪೆಲೊಪೊನ್ನೆಸಸ್ನ ಒಲಂಪಿಯಎಂದು ಕರೆಯಲಾದ ಸಣ್ಣ ಹಳ್ಳಿಯಲ್ಲಿ ಈ ಕ್ರೀಡೆಗಳು ನಡೆಯುತ್ತಿದ್ದವು.[೩]
ಪ್ರಾಚೀನ ಒಲಿಂಪಿಕ್ಸ್ ಕಾಲದಿಂದ ಹಿಡಿದು ಪ್ರಸ್ತುತ ಶತಮಾನದವರೆಗೂ ಕ್ರೀಡೆಗಳನ್ನು ಸಂಘಟಿತಗೊಳಿಸಲಾಗಿದೆ ಮತ್ತು ವಿಧಿಬದ್ಧಗೊಳಿಸಲಾಗಿದೆ. .ಕೈಗಾರಿಕೀಕರಣವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ರಾಷ್ಟ್ರಗಳ ಪ್ರಜೆಗಳಿಗೆ ಹೆಚ್ಚಿನ ವಿರಾಮದ ವೇಳೆಯನ್ನು ಕಲ್ಪಿಸಿತು. ಇದು ಪ್ರೇಕ್ಷಕ ಕ್ರೀಡೆಗಳಲ್ಲಿ ಭಾಗವಹಿಸಲು ಮತ್ತು ಅನುಸರಿಸಲು ,ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆಗೆ ಮತ್ತು ಹೆಚ್ಚಿನ ಸುಲಭಲಭ್ಯತೆಗೆ ನಾಗರಿಕರಿಗೆ ಹೆಚ್ಚು ಸಮಯಾವಕಾಶ ಸಿಕ್ಕಿತು. ಈ ಪ್ರವೃತ್ತಿಗಳು ಸಮೂಹ ಮಾಧ್ಯಮ ಮತ್ತು ಜಾಗತಿಕ ಸಂಪರ್ಕದ ಆಗಮನದೊಂದಿಗೆ ಮುಂದುವರಿಯಿತು. ವೃತ್ತಿಪರತೆಯು ವ್ಯಾಪಕವಾಗಿ ಹರಡಿತು. ಇದು ಕ್ರೀಡೆಗಳ ಜನಪ್ರಿಯತೆಯನ್ನು ಹೆಚ್ಚಿಸಿತು. ಹವ್ಯಾಸಿ ಕ್ರೀಡೆಗಳಿಗೆ ಸಂಬಂಧಿಸಿದ ಚಟುವಟಿಕೆ ಮತ್ತು ಸ್ಪರ್ಧೆಯಲ್ಲಿ ಸಂತೋಷಿಸುವಾಗ, ಕ್ರೀಡಾಭಿಮಾನಿಗಳು ಅಂತರಜಾಲ, ಆಕಾಶವಾಣಿ ಮತ್ತು ದೂರದರ್ಶನದ ಮೂಲಕ ವೃತ್ತಿಪರ ಕ್ರೀಡಾಪಟುಗಳ ಸಾಹಸಕಾರ್ಯಗಳನ್ನು ಅನುಸರಿಸಿದರು.
ಹೊಸ ಸಹಸ್ರಮಾನದಲ್ಲಿ, ಹೊಸ ಕ್ರೀಡೆಗಳು ಸ್ಪರ್ಧೆಯ ದೈಹಿಕ ರೂಪದಿಂದ ಮಾನಸಿಕ ಅಥವಾ ಬುದ್ಧಿವಂತಿಕೆಯ ರೂಪಕ್ಕೆ ಮುಂದುವರಿಯುತ್ತಿವೆ. ಎಲೆಕ್ಟ್ರಾನಿಕ್ ಕ್ರೀಡೆಗಳ ಸಂಘಟನೆಗಳು ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ.
ನಿರ್ವಹಣೆಯ ಕುರಿತು ತೀರ್ಪಿನ ಮೂಲಕ ಫಲಿತಾಂಶವನ್ನು ನಿರ್ಧರಿಸುವ ಚಟುವಟಿಕೆಗಳನ್ನು ಪ್ರದರ್ಶನಗಳು ಅಥವಾ ಸ್ಪರ್ಧೆ ಎಂದು ಪರಿಗಣಿಸಲಾಯಿತು.
ಕ್ರೀಡಾಪಟುತ್ವ
[ಬದಲಾಯಿಸಿ]ಕ್ರೀಡಾಪಟುತ್ವ ನ್ಯಾಯದ ಆಟಕ್ಕಾಗಿ ಪ್ರಯತ್ನಿಸುವ ನಡವಳಿಕೆ, ತಂಡದ ಸದಸ್ಯರು ಮತ್ತು ಪ್ರತಿಸ್ಪರ್ಧಿಯ ಬಗ್ಗೆ ಆದರಣೆ ಹಾಗು ನೈತಿಕ ನಡವಳಿಕೆ ಮತ್ತು ಪ್ರಾಮಾಣಿಕತೆ ಹಾಗೂ ಗೆಲುವು ಅಥವಾ ಸೋಲಿನಲ್ಲಿ ಘನತೆಯಿಂದ ವರ್ತಿಸುವುದು.[೪][೫]
ಕ್ರೀಡಾಪಟುತ್ವ ಚಟುವಟಿಕೆಯನ್ನು ಅದರ ಸಲುವಾಗಿಯೇ ಅನುಭವಿಸುವ ಆಕಾಂಕ್ಷೆಯನ್ನು ಮತ್ತು ವಿಶಿಷ್ಟ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಕ್ರೀಡಾ ವರದಿಗಾರ ಗ್ರಾಂಟ್ ಲ್ಯಾಂಡ್ ರೈಸ್ "ನೀವು ಆಟವನ್ನು ಗೆಲ್ಲುತ್ತೀರ ಅಥವಾ ಸೋಲುತ್ತೀರಾ ಎನ್ನುವುದು ಮುಖ್ಯವಲ್ಲ ನೀವು ಆಟವನ್ನು ಹೇಗೆ ಆಡಿದಿರಿ ಎಂಬುದು ಮುಖ್ಯ" ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಧುನಿಕ ಒಲಿಂಪಿಕ್ ನ ಸಂಸ್ಥಾಪಕ ಪೈರ್ರೆ ದೆ ಕೊಬಾರ್ಟಿನ್ ವ್ಯಕ್ತಪಡಿಸಿದ ಒಲಿಂಪಿಕ್ ಸೂತ್ರಗಳು: "ಅತ್ಯಂತ ಮುಖ್ಯವಾಗಿರುವುದೆಂದರೆ... ಗೆಲ್ಲುವುದಲ್ಲ ಆದರೆ ಪಾಲ್ಗೊಳ್ಳುವುದು". ಇವು ಈ ಭಾವನೆಯ ವಿಶೇಷವಾದ ಅಭಿವ್ಯಕ್ತಿಗಳಾಗಿವೆ.
ಕ್ರೀಡೆಗಳಲ್ಲಿ ಹಿಂಸೆ ನ್ಯಾಯವಾದ ಆಟದ ಎಲ್ಲೆ ಮೀರುವುದನ್ನು ಮತ್ತು ಉದ್ದೇಶಪೂರ್ವಕ ಆಕ್ರಮಣಶೀಲ ಹಿಂಸೆಯನ್ನು ಒಳಗೊಳ್ಳುತ್ತದೆ. ನಿಷ್ಠೆ, ಪ್ರಾಬಲ್ಯ, ಕೋಪ ಅಥವಾ ಸಂಭ್ರಮವನ್ನು ಪ್ರದರ್ಶಿಸುವ ಸಂದರ್ಭದಲ್ಲಿ ದಾರಿತಪ್ಪುವ ಕ್ರೀಡಾಪಟುಗಳು, ತರಬೇತುದಾರರು, ಅಭಿಮಾನಿಗಳು, ಮತ್ತು ಹೆತ್ತವರು ಕೆಲವೊಮ್ಮೆ ಜನರು ಮತ್ತು ಆಸ್ತಿಪಾಸ್ತಿಯ ಮೇಲೆ ಹಿಂಸಾತ್ಮಕ ನಡವಳಿಕೆ ತೋರಿಸುತ್ತಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ದೊಂಬಿ ಅಥವಾ ಪುಂಡಾಟಿಕೆಗಳು ಸಾಮಾನ್ಯವಾಗಿ ನಡೆಯುತ್ತಿರುವ ಸಮಸ್ಯೆಯಾಗಿವೆ.
ವೃತ್ತಿಪರ ಕ್ರೀಡೆಗಳು
[ಬದಲಾಯಿಸಿ]ಸಮೂಹ ಮಾಧ್ಯಮದ ವ್ಯಾಪಕತೆಯಿಂದ ಮತ್ತು ಅಧಿಕ ವಿರಾಮದ ಸಮಯದೊಂದಿಗೆ ಕ್ರೀಡೆಯ ಮನರಂಜನೆ ದೃಷ್ಟಿಕೋನವು ಕ್ರೀಡೆಯಲ್ಲಿ ವೃತ್ತಿಪರತೆಗೆ ದಾರಿ ಕಲ್ಪಿಸಿತು. ಇದು ಕೆಲವೊಂದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಇಲ್ಲಿ ಮನರಂಜನೆಯ ಅಂಶಕ್ಕಿಂತಲೂ ಸಂಬಳವೇ ಹೆಚ್ಚು ಪ್ರಧಾನವಾಗಿ ಕಂಡುಬಂತು. ಕ್ರೀಡೆಗಳು ಅತ್ಯಂತ ಹೆಚ್ಚು ಲಾಭದಾಯಕವಾಗಿಸಲು ಮತ್ತು ಜನಪ್ರಿಯಗೊಳಿಸುವುದಕ್ಕೆ ಮಾತ್ರ ಅವುಗಳನ್ನು ಬದಲಾಯಿಸಲಾಯಿತು. ಇದರಿಂದಾಗಿ ಅವು ಕೆಲವೊಂದು ನಿರ್ದಿಷ್ಟ ಮೌಲ್ಯಯುತ ಸಂಪ್ರದಾಯಗಳನ್ನು ಕಳೆದುಕೊಂಡವು.
ಮನರಂಜನೆ ಅಂಶಗಳು ಪುರುಷ ಕ್ರೀಡಾಪಟು ಮತ್ತು ಮಹಿಳಾ ಕ್ರೀಡಾಪಟುಗಳನ್ನು ಆಗಾಗ್ಗೆ ಪ್ರಸಿದ್ಧ ವ್ಯಕ್ತಿಯ ಸ್ಥಾನಮಾನಕ್ಕೆ ಏರಿಸುತ್ತದೆ ಎಂದರ್ಥ.
ರಾಜಕೀಯ
[ಬದಲಾಯಿಸಿ]ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(May 2010) |
ಒಂದು ಕಾಲದಲ್ಲಿ, ಕ್ರೀಡೆಗಳು ಮತ್ತು ರಾಜಕೀಯ ಒಂದರ ಮೇಲೆ ಮತ್ತೊಂದು ಪರಸ್ಪರ ಪ್ರಭಾವವನ್ನು ಹೊಂದಿದ್ದವು.
ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯು ಅಧಿಕೃತ ನಿಯಮವಾಗಿದ್ದಾಗ ಅನೇಕ ಕ್ರೀಡೆಗೆ ಸಂಬಂಧಿಸಿದ ಜನರು, ಅದರಲ್ಲೂ ವಿಶೇಷವಾಗಿ ರಗ್ಬಿ ಯೂನಿಯನ್‌ಗೆ ಸೇರಿದ್ದವರು ಅಲ್ಲಿ ಯಾವುದೇ ಸ್ಪರ್ಧಾತ್ಮಕ ಕ್ರೀಡೆಗಳಲ್ಲಿ ಭಾಗವಹಿಸುವುದಿಲ್ಲವೆಂಬ ಆತ್ಮಸಾಕ್ಷಿಯ ನಿಲುವನ್ನು ತಾಳಿದರು. ಈ ವರ್ಣಭೇದ ನೀತಿಯನ್ನು ಅಂತಿಮವಾಗಿ ನೆಲಸಮಗೊಳಿಸಲು ಇದು ಪರಿಣಾಮಕಾರಿಯಾದ ಕೊಡುಗೆ ಎಂದು ಕೆಲವರು ಭಾವಿಸಿದರು. ಆದರೆ ಇದು ವಿಸ್ತರಿಸಿ, ಕೆಟ್ಟ ಪರಿಣಾಮಗಳನ್ನು ವರ್ಧಿಸಬಹುದು ಎಂದು ಕೆಲವರು ಭಾವಿಸಿದರು.
ಬರ್ಲಿನ್ ನಲ್ಲಿ ನಡೆದ 1936 ರ ಬೇಸಿಗೆಯ ಒಲಿಂಪಿಕ್ಸ್ ಇದಕ್ಕೆ ನಿದರ್ಶನವಾಗಿದೆ. ಪೂರ್ವನಿದರ್ಶನದಲ್ಲಿ ಇದು ಉತ್ತಮ ಮಾನ್ಯತೆ ಗಳಿಸಿದೆ. ಅಲ್ಲಿ ಒಂದು ಸಿದ್ಧಾಂತ ಬೆಳೆದು, ಅದು ಪ್ರಚಾರದ ಮೂಲಕ ಪಂದ್ಯವಾಳಿಯ ವಿಸ್ತರಣೆಯನ್ನು ಬಲಪಡಿಸಲು ಅದನ್ನು ಬಳಸಿಕೊಂಡಿತು.
ಐರ್ಲೆಂಡ್ ನ ಇತಿಹಾಸದಲ್ಲಿ ಗ್ಯಾಲಿಕ್ ಕ್ರೀಡೆಗಳು ಸಾಂಸ್ಕೃತಿಕ ರಾಷ್ಟ್ರೀಯತೆಯೊಡನೆ ಸಂಬಂಧಹೊಂದಿವೆ. 20ನೇ ಶತಮಾನದ ಮಧ್ಯಾವಧಿಯವರೆಗೆಬ್ರಿಟಿಷ್ ಮೂಲದ್ದೆಂದು ಕಾಣಲಾಗುವ ಕಾಲ್ಚೆಂಡಾಟ ಅಥವಾ ಇತರ ಕ್ರೀಡೆಗಳನ್ನು ಅವಳು/ಅವನು ಆಡಿದರೆ ಅಥವಾ ಬೆಂಬಲಿಸಿದರೆ ಅಂಥವರು ಗ್ಯಾಲಿಕ್ ಅಥ್ಲೆಟಿಕ್ ಅಸೋಸಿಯೇಷನ್(GAA) ನಡೆಸುತ್ತಿದ್ದ ಗ್ಯಾಲಿಕ್ ಫುಟ್ ಬಾಲ್, ಹರ್ಲಿಂಗ್, ಅಥವಾ ಇತರ ಕ್ರೀಡೆಗಳನ್ನು ಆಡದಂತೆ ನಿಷೇಧಿಸಬಹುದಾಗಿತ್ತು. ಕಾಲ್ಚೆಂಡಾಟ ಮತ್ತು ರಗ್ಬಿ ಯೂನಿಯನ್ ಗಳು ಗ್ಯಾಲಿಕ್ ಸ್ಥಳಗಳಲ್ಲಿ ಆಡದಂತೆ GAA ಇತ್ತೀಚಿನ ವರೆಗು ನಿಷೇಧವನ್ನು ಹೇರುತ್ತಿತ್ತು. ಈ ನಿಷೇಧವು ಇನ್ನೂ ಜಾರಿಯಲ್ಲಿದೆ,ಆದರೆ ಲ್ಯಾಂಡ್ಸ್ ಡೌನೆ ರಸ್ತೆಯನ್ನು ಹೊಸದಾಗಿ ಅಭಿವೃದ್ಧಿಗೊಳಿಸಿದಾಗ ಕ್ರಾಕ್ ಪಾರ್ಕ್ ನಲ್ಲಿ ಫುಟ್ ಬಾಲ್ ಮತ್ತು ರಗ್ಬಿ ಆಟಗಳು ಆಡಲು ಅವಕಾಶವನ್ನು ನೀಡುವ ಮೂಲಕ ಇದನ್ನು ಬದಲಾಯಿಸಲಾಗಿದೆ. ಇತ್ತೀಚಿನವರೆಗೂ GAA 21 ನೇ ನಿಯಮದಡಿಯಲ್ಲಿ ಬ್ರಿಟಿಷ್ ಭದ್ರತಾ ಪಡೆಗಳ ಯೋಧರನ್ನು ಮತ್ತು RUCಯ ಯೋಧರನ್ನು ಗ್ಯಾಲಿಕ್ ಆಟಗಳನ್ನು ಆಡದಂತೆ ಕೂಡ ನಿಷೇಧಿಸಿತ್ತು. ಆದರೆ 1998 ರಲ್ಲಿ ಗುಡ್ ಫ್ರೈಡೆ ಒಪ್ಪಂದದ ಆಗಮನ ಅಂತಿಮವಾಗಿ ಈ ನಿಷೇಧವನ್ನು ತೆಗೆದುಹಾಕಿತು.
ಕ್ರೀಡೆಗಳನ್ನು ಅನುಸರಿಸುವಾಗ ಅಥವಾ ಅದರ ವರದಿಯಲ್ಲಿ ರಾಷ್ಟ್ರೀಯತೆ ಸ್ಪಷ್ಟವಾಗಿ ಕಂಡುಬರುತ್ತದೆ. ರಾಷ್ಟ್ರೀಯ ತಂಡಗಳಲ್ಲಿ ಸ್ಪರ್ಧಿಸುವ ಜನರು ಅಥವಾ ನಿರೂಪಕರು ಮತ್ತು ಪ್ರೇಕ್ಷಕರು ಪಕ್ಷಪಾತಿ ಧೋರಣೆಯನ್ನು ಹೊಂದಬಹುದು. ಕೆಲವು ಸಂದರ್ಭಗಳಲ್ಲಿ, ಇಂತಹ ಉದ್ವೇಗಗಳು ಕ್ರೀಡಾಂಗಣದಲ್ಲಿ ಮತ್ತು ಕ್ರೀಡಾಂಗಣದ ಆಚೆಗೆ (ಫುಟ್ ಬಾಲ್ ವಾರ್ ಅನ್ನು ನೋಡಿ) ಆಟಗಾರರು ಅಥವಾ ಪ್ರೇಕ್ಷಕರ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗುತ್ತವೆ. ಕ್ರೀಡೆಗಳನ್ನು ಅದರ ಅನುಕೂಲಕ್ಕಾಗಿ ಹಾಗೂ ಸ್ಪರ್ಧಿಗಳ ಸಂತೋಷಕ್ಕಾಗಿ ಆಡುವುದರಿಂದ ಈ ಪ್ರವೃತ್ತಿಗಳನ್ನು ಕ್ರೀಡೆಯ ಮೂಲಭೂತ ವಿಶಿಷ್ಟ ಲಕ್ಷಣಗಳಿಗೆ ವಿರುದ್ಧವಾಗಿ ಅನೇಕ ಮಂದಿ ಕಾಣುತ್ತಾರೆ.
ದೈಹಿಕ ಕಲೆ
[ಬದಲಾಯಿಸಿ]ಕ್ರೀಡೆಗಳು ಕಲೆಯೊಂದಿಗೆ ಅನೇಕ ಸಂಬಂಧಗಳನ್ನು ಹೊಂದಿದೆ. ಉದಾಹರಣೆಗೆ, ಫಿಗರ್ ಸ್ಕೇಟಿಂಗ್, ಕಲಾತ್ಮಕ ಅಂಗಸಾಧನೆ, ನೃತ್ಯಕ್ರೀಡೆ, ಮತ್ತು ತೈ ಚಿ ಗಳನ್ನು ಕಲಾತ್ಮಕ ಪ್ರದರ್ಶನಗಳೆಂದು ಪರಿಗಣಿಸಲಾಗುತ್ತದೆ. ಅಂತೆಯೇ, ದೇಹವರ್ಧನೆ, ಮುಕ್ತ ಓಟ, ಕದನ ಕಲೆಗಳು, ಪ್ರದರ್ಶನ ಕಲೆಗಳು, ಯೋಗ, ಬಾಸ್ ಬಾಲ್, ಕುದುರೆತರಬೇತಿ, ಮತ್ತು ಅಡಿಗೆಮನೆಯ ಕಲೆಗಳುಮುಂತಾದ ಚಟುವಟಿಕೆಗಳು ಕೂಡ ಅವುಗಳ ನಿರ್ವಹಣೆಯಲ್ಲಿ ಕ್ರೀಡೆ ಮತ್ತು ಕಲೆಯ ಅಂಶಗಳನ್ನು ಹೊಂದಿವೆ. ಸ್ಪ್ಯೇನ್ ನಲ್ಲಿ ನಡೆಯುವ ಬುಲ್ ಫೈಟಿಂಗ್ (ಗೂಳಿ ಕಾಳಗ) ಬಹುಶಃ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಇದನ್ನು ಸ್ಪೇನ್ ವೃತ್ತ ಪತ್ರಿಕೆಗಳ ಕಲಾಪುಟಗಳಲ್ಲಿ ವರದಿಮಾಡಲಾಗುತ್ತದೆ.
ಎಲ್ಲಾ ಕ್ರೀಡೆಗಳು ಉಪಯುಕ್ತ ಕಾರಣಗಳಿಗಾಗಿ ಅನುಸರಿಸುವ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಓಟವನ್ನು ಕ್ರೀಡೆಯ ರೂಪದಲ್ಲಿ ನಡೆಸಿದಾಗ ಅದು ಸುಮ್ಮನೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡಾಡುವುದನ್ನು ಹೊರತುಪಡಿಸಿದ ಕಾರಣಗಳಿಗೆ ಸಂಭವಿಸುತ್ತದೆ. ಅದರಿಂದ ಉಂಟಾಗುವ ಅನುಕೂಲಕ್ಕಾಗಿ ಈ ಚಟುವಟಿಕೆಯನ್ನು ನಡೆಸಿದರೆ ಕಿಮ್ಮತ್ತು ಸಿಗುತ್ತದೆ. ಇದು ಕಲಾತ್ಮಕ ಮೌಲ್ಯದ ಪರಿಕಲ್ಪನೆಗೆ ಸಮಾನವಾಗಿದೆ.ಇದು ಒಂದು ವಸ್ತುವಿನ ಸಾಮಾನ್ಯ ಬಳಕೆಯಿಂದ ಸಿಗುವ ಕಾರ್ಯಾತ್ಮಕ ಮೌಲ್ಯಕ್ಕಿಂತ ಹೆಚ್ಚಿನದೆಂದು ಕಾಣಲಾಗಿದೆ. ಉದಾಹರಣೆಗೆ , ಕಲಾತ್ಮಕವಾಗಿ ಸಂತೋಷ ನೀಡುವ ಕಾರು A ಯಿಂದ Bಗೆ ಸಿಗುವುದಲ್ಲದೇ,ತನ್ನ ಸೌಂದರ್ಯ,ಭಂಗಿ ಮತ್ತು ಆಕರ್ಷಣೆಯಿಂದ ಮೆಚ್ಚಿಸುತ್ತದೆ. ಇದೇ ರೀತಿಯಲ್ಲಿ, ನೆಗೆತ ಮುಂತಾದ ಕ್ರೀಡಾ ಪ್ರದರ್ಶನಗಳು ಕೇವಲ ಅಡಚಣೆಗಳನ್ನು ತಪ್ಪಿಸುವ ಪರಿಣಾಮಕಾರಿ ಮಾರ್ಗವಾಗಿ ಮಾತ್ರ ಮನಸ್ಸಿಗೆ ನಾಟುವುದಿಲ್ಲ. ಪ್ರದರ್ಶನದಲ್ಲಿ ತೋರಿಸುವ ಸಾಮರ್ಥ್ಯ , ಕೌಶಲ್ಯ ಮತ್ತು ಶೈಲಿಯ ಮೂಲಕ ಅದು ಆಕರ್ಷಿಸುತ್ತದೆ.
ಕಲೆ ಮತ್ತು ಕ್ರೀಡೆಗಳು ಪ್ರಾಚೀನ ಗ್ರೀಸ್ ಕಾಲದಲ್ಲಿ ಸ್ಪಷ್ಟವಾಗಿ ಪರಸ್ಪರ ನಂಟು ಹೊಂದಿದ್ದವು. ಅಂಗಸಾಧನೆಗಳು ಮತ್ತು ದೈಹಿಕ ವ್ಯಾಯಾಮಗಳು ಸ್ಪರ್ಧಿಗಳು ಪ್ರದರ್ಶಿಸುವ ಅಂಗಸೌಷ್ಟವ,ಸಾಹಸ ಮತ್ತು ಕೌಶಲದಿಂದ ಕಲಾತ್ಮಕ ಮೆಚ್ಚುಗೆ ಮತ್ತು ಮನ್ನಣೆಯನ್ನು ಗಳಿಸಿದವು. 'ಕಲೆ' ಎಂಬ ಆಧುನಿಕ ಪದವು ಕೌಶಲದ ರೂಪದಲ್ಲಿ ಪ್ರಾಚೀನ ಗ್ರೀಕ್‌ನ ಈ ಪದವಾದ 'ಅರೆಟೆ' ಗೆ ಸಂಬಂಧಿಸಿದೆ. ಈ ಕಾಲದಲ್ಲಿ ಕ್ರೀಡೆ ಮತ್ತು ಕಲೆಯ ನಿಕಟತೆಯು ಒಲಿಂಪಿಕ್ ಆಟಗಳ ಸ್ವರೂಪಗಳಿಂದ ತಿಳಿದುಬರುತ್ತದೆ. ಇಲ್ಲಿ ಕ್ರೀಡೆ ಮತ್ತು ಕಲಾತ್ಮಕ ಸಾಧನೆಗಳಾದ ಕಾವ್ಯ, ಶಿಲ್ಪ ಮತ್ತು ವಾಸ್ತುಶಿಲ್ಪಗಳು ಹೀಗೆ ಎರಡೂ ಆಚರಣೆಗಳಿಂದ ಕೂಡಿತ್ತು.
ತಂತ್ರಜ್ಞಾನ
[ಬದಲಾಯಿಸಿ]This article is in a list format that may be better presented using prose. (July 2010) |
ತಂತ್ರಜ್ಞಾನವು ಕ್ರೀಡೆಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕ್ರೀಡಾಪಟುವಿನ ಆರೋಗ್ಯಕ್ಕೆ, ಕ್ರೀಡಾಪಟುವಿನ ತಂತ್ರಕ್ಕೆ ಅಥವಾ ಸಲಕರಣೆಗಳ ಗುಣಕ್ಷಣಗಳಿಗೆ ಅನ್ವಯಿಸುವಂತೆ ಕ್ರೀಡೆಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.
- ಸಲಕರಣೆ - ಕ್ರೀಡೆ ಹೆಚ್ಚು ಸ್ಪರ್ಧಾತ್ಮಕವಾದಂತೆಲ್ಲ ಉತ್ತಮ ಸಲಕರಣೆಯ ಅವಶ್ಯಕತೆ ಹುಟ್ಟಿಕೊಂಡಿತು. ಹೊಸ ತಂತ್ರಜ್ಞಾನವನ್ನು ಅಳವಡಿಸಿದಾಗ, ಗಾಲ್ಫ್ ಕ್ಲಬ್ ಗಳು , (ಅಮೇರಿಕನ್) ಫುಟ್ ಬಾಲ್ ಹೆಲ್ಮೆಟ್ ಗಳು, ಟೆನ್ನಿಸ್ ರಾಕಿಟ್ ಗಳು, ಬೇಸ್ ಬಾಲ್ ಬ್ಯಾಟ್ ಗಳು, ಕಾಲ್ಚೆಂಡಾಟದ ಚೆಂಡುಗಳು, ಹಾಕಿ ಸ್ಕೇಟ್ ಗಳು, ಮತ್ತು ಇತರ ಎಲ್ಲಾ ಸಲಕರಣೆಗಳು ಕೂಡ ಗಮನಾರ್ಹ ಬದಲಾವಣೆಯನ್ನು ಕಂಡಿವೆ.
- ಆರೋಗ್ಯ - ಪೌಷ್ಟಿಕಾಂಶದಿಂದ ಗಾಯಗಳ ಚಿಕಿತ್ಸೆಯವರೆಗೂ,ಕಾಲಾಂತರದಲ್ಲಿ ಮಾನವನ ದೇಹದ ಅವಯವಗಳ ಬಗ್ಗೆ ಜ್ಞಾನ ಬೆಳೆದಂತೆಲ್ಲ, ಕ್ರೀಡಾಪಟುವಿನ ಸಾಮರ್ಥ್ಯವು ಬೆಳೆಯಿತು. ಕ್ರೀಡಾಪಟುಗಳು ಇನ್ನಷ್ಟು ಹೆಚ್ಚು ವಯಸ್ಸಿನ ತನಕ ಆಡಲು ಈಗ ಸಮರ್ಥರು , ಗಾಯಗಳಿಂದ ಬೇಗ ಗುಣಮುಖರಾಗಬಲ್ಲರು ಹಾಗು ಹಿಂದಿನ ಪೀಳಿಗೆಯ ಕ್ರೀಡಾಪಟುಗಳಿಗಿಂತ ಪರಿಣಾಮಕಾರಿ ತರಬೇತಿ ಪಡೆಯಬಲ್ಲರು.
- ಸೂಚನೆ - ಮುಂದುವರೆದ ತಂತ್ರಜ್ಞಾನವು ಕ್ರೀಡೆಗಳ ಮೇಲೆ ಸಂಶೋಧನೆಯನ್ನು ನಡೆಸಲು ಹೊಸ ಅವಕಾಶಗಳನ್ನು ಸೃಷ್ಟಿಸಿತು. ಹಿಂದೆ ಅರಿವಿನ ಸಾಮರ್ಥ್ಯದ ಹೊರಗಿದ್ದ ಕ್ರೀಡೆಗಳ ಅಂಶಗಳನ್ನು ಈಗ ನಾವು ವಿಶ್ಲೇಷಿಸಲು ಸಾಧ್ಯವಾಗಿದೆ. ಕ್ರೀಡಾಪಟುವಿನ ಚಲನೆಯನ್ನು ಸೆರೆಹಿಡಿಯುವ ಚಲನಚಿತ್ರದ ಬಳಕೆ ಅಥವಾ ದೈಹಿಕ ದೃಶ್ಯಗಳಿಗೆ ಮಾದರಿಯಾಗಿ ಸುಧಾರಿತ ಕಂಪ್ಯೂಟರ್ ಅನುಕರಣೆಗಳು ತಾವು ಹೇಗೆ ಆಡುತ್ತಿದ್ದೇವೆ ಮತ್ತು ಹೇಗೆ ಸ್ವತಃ ಸುಧಾರಣೆ ಮಾಡಿಕೊಳ್ಳಬಹುದು ಎಂದು ಅರಿಯುವ ಕ್ರೀಡಾಪಟುವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಪರಿಭಾಷಾ ಶಾಸ್ತ್ರ
[ಬದಲಾಯಿಸಿ]ಬ್ರಿಟಿಷ್ ಇಂಗ್ಲೀಷ್ , ನ ಕ್ರೀಡಾ ಚಟುವಟಿಕೆಗಳು ಸಾಮಾನ್ಯವಾಗಿ "ಸ್ಪೋರ್ಟ್" ಎಂದು ಕರೆಯುವ ಸಾಮಾನ್ಯ ನಾಮಪದದಿಂದ ಗುರುತಿಸಲಾಗುತ್ತದೆ. ಅಮೇರಿಕನ್ ಇಂಗ್ಲೀಷ್ ನಲ್ಲಿ, "ಸ್ಪೋರ್ಟ್ಸ್" ಪದವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಇಂಗ್ಲೀಷ್ ಉಪಭಾಷೆಗಳಲ್ಲಿ, "ಸ್ಪೋರ್ಟ್ಸ್" ಎಂಬ ಪದವನ್ನು ಒಂದು ನಿರ್ದಿಷ್ಟ ಕ್ರೀಡೆಗಿಂತ ಹೆಚ್ಚಿನ ಕ್ರೀಡೆಯನ್ನು ಸೂಚಿಸಲು ಬಳಸಲಾಗುತ್ತದೆ. ಉದಾಹರಣೆಗೆ ,"ಫುಟ್ ಬಾಲ್ ಅಂಡ್ ಸ್ವಿಮಿಂಗ್ ಆರ್ ಮೈ ಫೇವರೇಟ್ ಸ್ಪೋರ್ಟ್ಸ್", ವಾಕ್ಯವು ಇಂಗ್ಲೀಷ್ ಭಾಷಿಕರಿಗೆ ಸಹಜವಾಗಿ ಕಾಣುತ್ತದೆ " ಐ ಎಂಜಾಯ್ ಸ್ಪೋರ್ಟ್" ಎಂಬ ವಾಕ್ಯ ಉತ್ತರ ಅಮೆರಿಕದವರಿಗೆ "ಐ ಎಂಜಾಯ್ ಸ್ಪೋರ್ಟ್ಸ್"ಗಿಂತ ಕಡಿಮೆ ಸಹಜತೆಯಿಂದ ಕಾಣುತ್ತದೆ.
"ಸ್ಪೋರ್ಟ್" ಎಂಬ ಪದ ಕೆಲವೊಮ್ಮೆ ದೈಹಿಕ ಚಟುವಟಿಕೆ ಮಟ್ಟವನ್ನು ಪರಿಗಣಿಸದೇ ಎಲ್ಲಾ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಒಳ್ಳಗೊಳ್ಳುವಷ್ಟು ವಿಸ್ತರಿಸಿದೆ. ಕೌಶಲ ಆಟಗಳು ಮತ್ತು ಮೋಟರ್ ಕ್ರೀಡೆಗಳು ಎರಡೂ ಕೂಡ ದೈಹಿಕ ಕ್ರೀಡೆಗಳ ಕೌಶಲ, ಕ್ರೀಡಾಪಟುತ್ವ, ಮತ್ತು ಅತ್ಯಂತ ದೊಡ್ಡ ಮಟ್ಟದಲ್ಲಿ ದೈಹಿಕ ಕ್ರೀಡೆಗಳಿಗೆ ಸಂಬಂಧಿಸಿದ ವೃತ್ತಿಪರ ಪ್ರಾಯೋಜಕತ್ವದಂತಹ ಅನೇಕ ಗುಣಲಕ್ಷಣಗಳನ್ನು ತೋರಿಸುತ್ತದೆ. ಏರ್ ಸ್ಫೋರ್ಟ್ಸ್, ಬಿಲಿಯರ್ಡ್ಸ್, ಬ್ರಿಡ್ಜ್, ಚೆಸ್, ಮೋಟಾರ್ ಸೈಕಲ್ ರೇಸಿಂಗ್, ಮತ್ತು ಪವರ್ ಬೋಟಿಂಗ್ ಇವುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಕ್ರೀಡೆಗಳಾಗಿ ಮನ್ನಣೆ ನೀಡಿದೆ. ಅದರ ವಿಶ್ವ ಆಡಳಿತ ಮಂಡಳಿಗಳು IOC ಮಾನ್ಯತೆಯ ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ಸಂಸ್ಥೆಯಲ್ಲಿ ಪ್ರಾತಿನಿಧ್ಯ ಪಡೆದಿವೆ.[೬]
ವೀಕ್ಷಕರ ಕ್ರೀಡೆ
[ಬದಲಾಯಿಸಿ]ಭಾಗವಹಿಸುವರಿಗೆ ಮನರಂಜನೆ ರೂಪವಾಗಿದ್ದು, ಇವುಗಳಲ್ಲಿ ಹೆಚ್ಚು ಕ್ರೀಡೆಗಳನ್ನು ಪ್ರೇಕ್ಷಕರ ಎದುರಿನಲ್ಲಿ ಆಡಲಾಗುತ್ತದೆ. ಅತ್ಯಂತ ವೃತ್ತಿಪರ ಕ್ರೀಡೆಯನ್ನು ಒಂದು ವಿಧದ 'ಥಿಯೇಟರ್'ನಲ್ಲಿ ಆಡಲಾಗುತ್ತದೆ; ಸಾರ್ವಜನಿಕರ ವೀಕ್ಷಣೆಗೆ ಅವಕಾಶ(ಸಾಮಾನ್ಯವಾಗಿ ಶುಲ್ಕದೊಂದಿಗೆ) ನೀಡುವ ಮೂಲಕ ಕ್ರೀಡಾಂಗಣ, ಅಖಾಡ, ಗಾಲ್ಫ್ ಆಟದ ಬಯಲು, ರೇಸ್ ಟ್ರ್ಯಾಕ್, ಅಥವಾ ತೆರೆದ ರಸ್ತೆಗಳ ಮೇಲೆ ಆಡಲಾಗುತ್ತದೆ.
ದೊಡ್ಡ ಮಟ್ಟದಲ್ಲಿ ಟೆಲಿವಿಷನ್ ವೀಕ್ಷಕರು ಅಥವಾ ರೇಡಿಯೋ ಶ್ರೋತೃಗಳು ಸಾಮಾನ್ಯವಾಗಿ ಕ್ರೀಡೆಗಳತ್ತ ಆಕರ್ಷಣೆಗೆ ಒಳಗಾಗುತ್ತಾರೆ. ನಿರ್ದಿಷ್ಟ ಪಂದ್ಯವನ್ನು ಪ್ರಸಾರ ಮಾಡಲು ಅವುಗಳ 'ಹಕ್ಕನ್ನು' ಪಡೆಯುವುದಕ್ಕಾಗಿ ಎದುರಾಳಿ ಪ್ರಸಾರಕರು ದೊಡ್ಡ ಪ್ರಮಾಣದ ಹಣದ ಸವಾಲನ್ನು ಹರಾಜಿನಲ್ಲಿ ಒಡ್ಡುತ್ತಾರೆ. ಫುಟ್ ಬಾಲ್ ವರ್ಲ್ಡ್ ಕಪ್ ಜಗತ್ತಿನ ದೂರದರ್ಶನದ ನೂರಾರು ದಶಲಕ್ಷ ಪ್ರೇಕ್ಷಕರನ್ನು ಸೆಳೆಯುತ್ತದೆ; 2006 ನೇ ವರ್ಷದ ಫೈನಲ್ ಪಂದ್ಯವೊಂದೇ ವಿಶ್ವವ್ಯಾಪಿ ಸುಮಾರು 700 ದಶಲಕ್ಷ ಪ್ರೇಕ್ಷಕರನ್ನು ಆಕರ್ಷಿಸಿದೆ ಎಂದು ಅಂದಾಜುಮಾಡಲಾಗಿದೆ. ಕ್ರಿಕೆಟ್ ವರ್ಲ್ಡ್ ಕಪ್ ಜಾಗತಿಕ ಮಟ್ಟದಲ್ಲಿ ಪ್ರೇಕ್ಷಕರನ್ನು ಆಕರ್ಷಿಸುವ ಮತ್ತೊಂದು ಕ್ರೀಡೆಯಾಗಿದೆ. 2007 ರ ಕ್ರಿಕೆಟ್ ವರ್ಲ್ಡ್ ಕಪ್ ವಿಶ್ವವ್ಯಾಪಿ ಸುಮಾರು 2.3 ಶತಕೋಟಿ ವೀಕ್ಷಕರನ್ನು ಆಕರ್ಷಿಸಿತು. ಅಮೇರಿಕಾ ಸಂಯುಕ್ತ ಸಂಸ್ಥಾkradaygaನದಲ್ಲಿ, NFL,ಸೂಪರ್ ಬೌಲ್ ನ ಚಾಂಪಿಯನ್ ಷಿಪ್ ಆಟಗಳು ದೂರದರ್ಶನದ ವರ್ಷದ ಪ್ರಸಾರಗಳಲ್ಲಿ ಅತ್ಯಂತ ಹೆಚ್ಚು ಜನರು ವೀಕ್ಷಿಸಿರುವ ಪ್ರಸಾರವಾಗಿದೆ. ಸೂಪರ್ ಬೌಲ್ ಸನ್ ಡೇ ಅಮೆರಿಕದಲ್ಲಿ ವಾಸ್ತವವಾಗಿ ರಾಷ್ಟ್ರೀಯ ರಜಾದಿನವಾಗಿದೆ; ಇದರ ವೀಕ್ಷಕರು ಅಪಾರ ಸಂಖ್ಯೆಯಲ್ಲಿದ್ದು, 30 ಸೆಕೆಂಡುಗಳ ಪ್ರದರ್ಶನಕ್ಕಾಗಿ ಜಾಹೀರಾತು ಸ್ಥಳವನ್ನು $2.6mಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು.la kreedegalu
ಜನರ ಪಟ್ಟಿ
- ಕ್ರೀಡೆಯಲ್ಲಿ ಭಾಗವಹಿಸುವ ವ್ಯಕ್ತಿಗಳ ಪಟ್ಟಿ
- ವೃತ್ತಿಪರ ಕ್ರೀಡಾ ಸರಣಿಗಳ ಪಟ್ಟಿ
- ಕ್ರೀಡೆಗಳ ಕಾಲಾನುಕ್ರಮ
- ಸಂಬಂಧಿತ ವಿಚಾರಗಳು
- ಪೈಪೋಟಿ ಕ್ರೀಡೆಗಳು
- ಅಂಗವಿಕಲ ಕ್ರೀಡೆಗಳು
- ಅಭಿಮಾನಿಗಳ ಪ್ರಪಂಚ
- ಕ್ರೀಡೆಗಳ ಇತಿಹಾಸ
- ಬಹು ಕ್ರೀಡಾಪಂದ್ಯಗಳು
- ರಾಷ್ಟ್ರೀಯ ಕ್ರೀಡೆ
- ರಾಷ್ಟ್ರೀಯತೆ ಮತ್ತು ಕ್ರೀಡೆಗಳು
- ಒಲಿಂಪಿಕ್ ಆಟಗಳು
- ಪ್ಯಾರಲಿಂಪಿಕ್ ಆಟಗಳು
- ಪ್ರೇಕ್ಷಕರ ಕ್ರೀಡೆಗಳು
- ಪ್ರಾಯೋಜಕತ್ವ
- ಚಲನಚಿತ್ರಗಳಲ್ಲಿ ಕ್ರೀಡೆಗಳು
- ಕ್ರೀಡಾ ಆಡಳಿತ ಮಂಡಳಿಗಳು
- ಕ್ರೀಡೆಗಳ ಪ್ರಸಾರ
- ಕ್ರೀಡೆಗಳ ಕ್ಲಬ್
- ಕ್ರೀಡೆಗಳ ತರಬೇತಿ
- ಕ್ರೀಡೆಗಳ ಸಲಕರಣೆ
- ಕ್ರೀಡೆಗಳಲ್ಲಿ ಗಾಯಗಳು
- ಕ್ರೀಡಾ ಲೀಗ್ ಉಪಸ್ಥಿತಿಗಳು
- ಕ್ರೀಡಾ ಮಾರುಕಟ್ಟೆ
- ಜನರ ಹೆಸರಿನಲ್ಲಿ ಇಡುವ ಕ್ರೀಡಾಪದಗಳು
- ಮಹಿಳೆಯರ ಕ್ರೀಡೆಗಳು
ಘೋಷಣೆ
[ಬದಲಾಯಿಸಿ]^ ಮಾನವನು ಕಂಡುಕೊಂಡ ಯಾವುದೇ ಮನರಂಜನೆಯ ಮತ್ತು ವಿನೋದಗೊಳಿಸುವ ರೂಪವೇ ಕ್ರೀಡೆಯ(1300) ಪ್ರಾಚೀನ ವ್ಯಾಖ್ಯಾನವಾಗಿದೆ.[೭] ಇತರ ಅರ್ಥಗಳು ಜೂಜು ಮತ್ತು ಜೂಜಿಗಾಗಿ ಆಡಲಾದ ಇತರ ಆಟಗಳನ್ನು ಒಳಗೊಳ್ಳುತ್ತವೆ.ಅಲ್ಲದೇ ವ್ಯಾಯಾಮ ಅಗತ್ಯವಿರುವ ಕ್ರೀಡೆ ಸೇರಿದಂತೆ ಬೇಟೆ ಹಾಗೂ ಆಟಗಳು ಮತ್ತು ವಿನೋದಗಳು .[೮] ಸ್ಪೋರ್ಟ್ಸ್ ಎಂಬ ನಾಮಪದವು ವಿನೋದ ಮತ್ತು ಮನರಂಜನೆ ಎಂಬ ಪರ್ಯಾಯ ಅರ್ಥದ ಜೊತೆಯಲ್ಲಿ " ವಿಶಾಂತ್ರಿಯ ಮತ್ತು ಮೋಜಿಗಾಗಿ ಚಟುವಟಿಕೆಯಲ್ಲಿ ತೊಡಗಿರುವುದು" ಎಂದು ರಾಜೆಟ್ ವ್ಯಾಖ್ಯಾನಿಸಿದ್ದಾನೆ.[೯] ಅತ್ಯಂತ ಹೆಚ್ಚು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಅರ್ಥಕ್ಕೆ ಉದಾಹರಣೆ ಈ ಕೆಳಕಂಡಂತಿದೆ:"ಒಬ್ಬ ಪ್ರತಿಸ್ಪರ್ಧಿ ಅಥವಾ ಪ್ರತಿಸ್ಪರ್ಧಿಗಳ ತಂಡ ಮತ್ತೊಬ್ಬ ಸ್ಪರ್ಧಿ ಅಥವಾ ಸ್ಪರ್ಧಿಗಳ ತಂಡದ ವಿರುದ್ಧ ಆಟವಾಡುವ ಚಟುವಟಿಕೆ ಜತೆಗೆ. ಸ್ಕೋರ್ ಗಳಿಸುವ ನಿರ್ಣಾಯಕ ವಿಧಾನವಾಗಿದ್ದು...ತೀರ್ಪುಗಾರು ನಿರ್ಧರಿಸುವುದಿಲ್ಲ".[೧೦]
ಆಕರಗಳು
[ಬದಲಾಯಿಸಿ]- ↑ "Sports [[History]] in China".
{{cite web}}
: URL–wikilink conflict (help) - ↑ "Mr Ahmed D. Touny (EGY), IOC Member". Archived from the original on 2006-10-29. Retrieved 2010-08-23.
- ↑ "Ancient Olympic Games".
- ↑ "Merriam-Webster". Archived from the original on 2007-09-28. Retrieved 2010-08-23.
- ↑ e.g. ,ನೋಡಿ, ಜೊಯೆಲ್ ಫಿಶ್ ಮತ್ತು ಸೂಸನ್ ಮ್ಯಾಗೀ , 101 ವೇಸ್ ಟು ಬಿ ಅ ಟೆರಿಫಿಕ್ ಸ್ಪೋರ್ಟ್ಸ್ ಪೇರಂಟ್ , p. 168. ಫೈರ್ ಸೈಡ್, 2003. [೧] "ಡೇವಿಡ್ ಲೇಸಿ," ಇಟ್ ಟೇಕ್ಸ್ ಎ ಬ್ಯಾಡ್ ಲಾಸರ್ ಟು ಬಿಕಮ್ ಎ ಗುಡ್ ವಿನ್ನರ್." ದಿ ಗಾರ್ಡಿಯನ್ , ನವೆಂಬರ್ 10, 2007.
- ↑ "Recognized non-Olympic Sports". 2007-01-03.
- ↑ Douglas Harper. "sport (n.)". Online Etymological Dictionary. Retrieved 2008-04-20.
- ↑ Webster's Third New International Dictionary of the English Language, Unabridged. The Merriam-Webster Editorial Staff. Springfield, MA U.S.A.: G&C Merriam Company. 1967. pp. 2206, sport.
{{cite book}}
: CS1 maint: others (link) - ↑ Roget's II: The New Thesaurus, Third Edition. Houghton Mifflin Harcourt Publishing Company. 1995.
- ↑ Andrew Goodman (July 27, 2007). "That's absurd, golf isn't a sport". New Jersey Herald (newspaper). Retrieved 2008-05-16.
ಮುಂದಿನ ಓದಿಗಾಗಿ
[ಬದಲಾಯಿಸಿ]- ದಿ ಮೀನಿಂಗ್ ಆಫ್ ಸ್ಪೋರ್ಟ್ಸ್ ಬೈ ಮೈಕೆಲ್ ಮ್ಯಾಂಡಲ್(ಪಬ್ಲಿಕ್ ಅಫೇರ್ಸ್, ISBN 1-58648-252-1).
- ಜರ್ನಲ್ ಆಫ್ ದಿ ಫಿಲಾಸಫಿ ಆಫ್ ಸ್ಪೋರ್ಟ್ Archived 2008-10-12 ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- CS1 errors: URL–wikilink conflict
- CS1 maint: others
- Articles with hatnote templates targeting a nonexistent page
- Articles lacking sources from May 2010
- Articles with invalid date parameter in template
- All articles lacking sources
- Articles needing cleanup from July 2010
- All pages needing cleanup
- Articles with sections that need to be turned into prose from July 2010
- Pages using div col with unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕ್ರೀಡೆಗಳು
- Pages using ISBN magic links