ಪ್ರತಿಕೃತಿ
ಪ್ರತಿಕೃತಿ ಮೂಲ ಕಲಾಕಾರನಿಂದ ಕಾರ್ಯಗತಗೊಳಿಸಿದಂತೆ ಇರುವ ನಿಖರ ನಕಲೆತ್ತಿಕೆ, ಉದಾಹರಣೆಗೆ ಒಂದು ವರ್ಣಚಿತ್ರದ್ದು, ವಿಶೇಷವಾಗಿ ಮೂಲ ಕೃತಿಗಿಂತ ಪ್ರಮಾಣದಲ್ಲಿ ಚಿಕ್ಕದಿರುವಂಥದ್ದು.
ಪ್ರತಿಕೃತಿಯು ಅದರ ಆಕಾರ ಮತ್ತು ನೋಟಕ್ಕೆ ಸಂಬಂಧಿಸಿದಂತೆ ಮೂಲಕೃತಿಯನ್ನು ನಿಕಟವಾಗಿ ಹೋಲುವ ನಕಲೆತ್ತಿಕೆ. ಒಂದು ತಲೆಕೆಳಗಾದ ಪ್ರತಿಕೃತಿ ಅದರ ಸಂದುಗಳನ್ನು ತುಂಬುವ ಮೂಲಕ ಮೂಲಕೃತಿಗೆ ಪೂರಕವಾಗಿರುತ್ತದೆ. ಅದು ಐತಿಹಾಸಿಕ ಉದ್ದೇಶಗಳಿಗಾಗಿ ಬಳಸಲಾಗುವ ನಕಲಿರಬಹುದು, ಉದಾಹರಣೆಗೆ ಸಂಗ್ರಹಾಲಯದಲ್ಲಿ ಇಡಲು. ಕೆಲವೊಮ್ಮೆ ಮೂಲಕೃತಿ ಅಸ್ತಿತ್ವದಲ್ಲೇ ಇರುವುದಿಲ್ಲ. ಪ್ರತಿಕೃತಿಗಳು ಮತ್ತು ನಕಲೆತ್ತಿಕೆಗಳನ್ನು ಇತರರಿಗೆ ಬಳಸಲು ನೀಡುವಂತಹ ಒಂದು ಚಿತ್ರದ ಯಾವುದೇ ಪರವಾನಗಿಯ ರೂಪಕ್ಕೆ ಸಂಬಂಧಿಸಬಹುದು, ಛಾಯಾಚಿತ್ರಗಳ, ಅಂಚೆಪತ್ರಗಳ, ಮುದ್ರಿತ ಚಿತ್ರಗಳ, ಕಿರುರೂಪ ಅಥವಾ ಪೂರ್ಣ ಗಾತ್ರದ ನಕಲುಗಳ ಮೂಲಕ. ಒಟ್ಟಿನಲ್ಲಿ ಅವು ಮೂಲಕೃತಿಯ ಹೋಲಿಕೆಯನ್ನು ಪ್ರತಿನಿಧಿಸುತ್ತವೆ.
ಎಲ್ಲ ತಪ್ಪಾಗಿ ನೆಮ್ಮಿಸಲಾದ ವಸ್ತುಗಳು ಉದ್ದೇಶಪೂರ್ವಕ ಖೋಟಾ ತಯಾರಿಕೆಗಳಲ್ಲ. ಒಂದು ಸಂಗ್ರಹಾಲಯದ ಮಳಿಗೆಯು ಒಂದು ವರ್ಣಚಿತ್ರದ ಮುದ್ರಿತ ಚಿತ್ರ ಅಥವಾ ಒಂದು ಹೂದಾನಿಯ ಪ್ರತಿಕೃತಿಯನ್ನು ಮಾರಾಟಮಾಡುವ ರೀತಿಯಂತೆ, ಪ್ರತಿಮೆಗಳು, ವರ್ಣಚಿತ್ರಗಳು ಮತ್ತು ಇತರ ಬೆಲೆಬಾಳುವ ಕಲಾಕೃತಿಗಳ ನಕಲುಗಳು ಯುಗಗಳಾದ್ಯಂತ ಜನಪ್ರಿಯವಾಗಿವೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Hamma, Kenneth. "Public Domain Art in an Age of Easier Mechanical Reproducibility". D-Lib Magazine. Retrieved March 20, 2012.