ವಿಷಯಕ್ಕೆ ಹೋಗು

ಕುರು ರಾಜ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುರು ರಾಜ್ಯ
ಸಂಸ್ಕೃತ:कुरु राज्य

ಸು. ಕ್ರಿ.ಪೂ. 1200–ಸು. ಕ್ರಿ.ಪೂ. 500
 

Location of ಕುರು ರಾಜ್ಯ
ಉತ್ತರ ವೈದಿಕ ಕಾಲದಲ್ಲಿ ಕುರು ಮತ್ತು ಇತರ ರಾಜ್ಯಗಳು
Location of ಕುರು ರಾಜ್ಯ
ವೈದಿಕೋತ್ತರ ಕಾಲದಲ್ಲಿ ಕುರು ಮತ್ತು ಇತರ ಮಹಾಜನಪದಗಳು
ರಾಜಧಾನಿ ಆಸಂದೀವತ್, ನಂತರ ಹಸ್ತಿನಾಪುರ, ಕೌಶಾಂಬಿ ಮತ್ತು ಇಂದ್ರಪ್ರಸ್ಥ
ಭಾಷೆಗಳು ವೈದಿಕ ಸಂಸ್ಕೃತ
ಧರ್ಮ ವೈದಿಕ ಹಿಂದೂ ಧರ್ಮ
ಬ್ರಾಹ್ಮಣ ಧರ್ಮ
ಸರ್ಕಾರ ರಾಜಪ್ರಭುತ್ವ
ಐತಿಹಾಸಿಕ ಯುಗ ಕಬ್ಬಿಣಯುಗ
 -  ಸ್ಥಾಪಿತ ಸು. ಕ್ರಿ.ಪೂ. 1200
 -  ಸ್ಥಾಪನೆ ರದ್ದತಿ ಸು. ಕ್ರಿ.ಪೂ. 500
ಇಂದು ಇವುಗಳ ಭಾಗ  ಭಾರತ
Warning: Value specified for "continent" does not comply

ಕುರು ಉತ್ತರ ಭಾರತದಲ್ಲಿನ ಒಂದು ವೈದಿಕ ಇಂಡೊ-ಆರ್ಯ ಬುಡಕಟ್ಟು ಒಕ್ಕೂಟದ ಹೆಸರು. ಇದು ಆಧುನಿಕ ದಿನದ ರಾಜ್ಯಗಳಾದ ದೆಹಲಿ, ಹರ್ಯಾಣಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗ (ದೊವಾಬ್ ಪ್ರದೇಶ, ಪ್ರಯಾಗ್‍ವರೆಗೆ) ಒಳಗೊಳ್ಳುತ್ತಿತ್ತು ಮತ್ತು ವೈದಿಕ ಯುಗದ ಮಧ್ಯದಲ್ಲಿ ಕಾಣಿಸಿಕೊಂಡಿತು[೧][೨] (ಕ್ರಿ.ಪೂ. ೧೨೦೦-೮೫೦) ಮತ್ತು ಕ್ರಿ.ಪೂ. ೧೦೦೦ ರ ಸುಮಾರು ಭಾರತೀಯ ಉಪಖಂಡದಲ್ಲಿನ ಮೊದಲ ದಾಖಲಿತ ರಾಜ್ಯ ಮಟ್ಟದ ಸಮಾಜವನ್ನು ಅಭಿವೃದ್ಧಿಗೊಳಿಸಿತು. ಇದು ಪೂರ್ವ ವೈದಿಕ ಕಾಲದ ವೈದಿಕ ಪರಂಪರೆಯನ್ನು ನಿರ್ಣಾಯಕವಾಗಿ ಬದಲಿಸಿತು, ಉದಾಹರಣೆಗೆ ವೈದಿಕ ಸ್ತೋತ್ರಗಳನ್ನು ಸಂಗ್ರಹಗಳಾಗಿ ಒಪ್ಪವಾಗಿರಿಸಿದ್ದು, ಮತ್ತು ಹೊಸ ಧರ್ಮಾಚರಣೆಗಳನ್ನು ಅಭಿವೃದ್ಧಿಗೊಳಿಸಿದ್ದು (ಇವು ಭಾರತೀಯ ನಾಗರಿಕತೆಯಲ್ಲಿ ಸಂಪ್ರದಾಯಬದ್ಧ ಶ್ರೌತ ಆಚರಣೆಗಳ ಸ್ಥಾನವನ್ನು ಪಡೆದವು).

ಇದು ಪರೀಕ್ಷಿತ ಹಾಗೂ ಜನಮೇಜಯರ ಆಳ್ವಿಕೆಯ ಕಾಲದಲ್ಲಿ ಮಧ್ಯ ವೈದಿಕ ಕಾಲದ ಪ್ರಧಾನ ರಾಜಕೀಯ ಮತ್ತು ಸಾಂಸ್ಕೃತಿಕ ಕೇಂದ್ರವಾಯಿತು, ಆದರೆ ಉತ್ತರ ವೈದಿಕ ಕಾಲದಲ್ಲಿ ಪ್ರಮುಖವಾಗಿ ಉಳಿಯಲಿಲ್ಲ (ಕ್ರಿ.ಪೂ. ೮೫೦-೫೦೦), ಮತ್ತು ಕ್ರಿ.ಪೂ. ೫ನೇ ಶತಮಾನದಲ್ಲಿ ಮಹಾಜನಪದ ಕಾಲದಲ್ಲಿ ಸ್ಥಗಿತಸ್ಥಿತಿ ತಲುಪಿತ್ತು. ಆದರೆ, ಕುರುಗಳ ಬಗ್ಗೆ ಸಂಪ್ರದಾಯಗಳು ಮತ್ತು ದಂತಕಥೆಗಳು ವೈದಿಕೋತ್ತರ ಕಾಲದಲ್ಲಿ ಮುಂದುವರೆದವು, ಮತ್ತು ಮಹಾಭಾರತ ಮಹಾಕಾವ್ಯಕ್ಕೆ ಆಧಾರ ಒದಗಿಸಿದವು.

ಇತಿಹಾಸ[ಬದಲಾಯಿಸಿ]

ಭಾರತ ಮತ್ತು ಪುರು ಬುಡಕಟ್ಟುಗಳ ಮೈತ್ರಿ ಮತ್ತು ವಿಲೀನದ ಪರಿಣಾಮವಾಗಿ ಕುರು ಬುಡಕಟ್ಟಿನ ರಚನೆ ಮಧ್ಯ ವೈದಿಕ ಕಾಲದಲ್ಲಾಯಿತು. ಅವರ ಅಧಿಕಾರ ಕೇಂದ್ರ ಕುರುಕ್ಷೇತ್ರ ಪ್ರದೇಶದಲ್ಲಿದ್ದು, ಕುರುಗಳು ವೈದಿಕ ಕಾಲದ ಮೊದಲ ರಾಜಕೀಯ ಕೇಂದ್ರವನ್ನು ರೂಪಿಸಿದರು, ಮತ್ತು ಸುಮಾರು ಕ್ರಿ.ಪೂ ೧೨೦೦ ರಿಂದ ೮೦೦ ರ ವರೆಗೆ ಪ್ರಬಲರಾಗಿದ್ದರು. ಆಸಂದಿವತ್ ಮೊದಲ ಕುರು ರಾಜಧಾನಿಯಾಗಿತ್ತು, ಇದನ್ನು ಆಧುನಿಕ ಹರ್ಯಾಣಾದ ಅಸ್ಸಂಧ್‍ನೊಂದಿಗೆ ಗುರುತಿಸಲಾಗಿದೆ. ನಂತರದ ಸಾಹಿತ್ಯವು ಇಂದ್ರಪ್ರಸ್ಥ ಮತ್ತು ಹಸ್ತಿನಾಪುರವನ್ನು ಮುಖ್ಯ ಕುರು ನಗರಗಳಾಗಿ ಉಲ್ಲೇಖಿಸುತ್ತವೆ.

ಅಥರ್ವವೇದ (೧೦.೧೨೭) ಕುರುಗಳ ರಾಜ ಪರೀಕ್ಷಿತನನ್ನು ಸಂಪನ್ನ, ಸಮೃದ್ಧ ರಾಜ್ಯದ ಮಹಾನ್ ಆಡಳಿತಗಾರ ಎಂದು ಹೊಗಳುತ್ತದೆ. ಶತಪಥ ಬ್ರಾಹ್ಮಣದಂತಹ ಇತರ ಈಚಿನ ವೈದಿಕ ಪಠ್ಯಗಳು, ಪರೀಕ್ಷಿತನ ಮಗ ಜನಮೇಜಯನನ್ನು ಅಶ್ವಮೇಧ ಯಾಗವನ್ನು ಮಾಡಿದ ಮಹಾನ್ ವಿಜಯಶಾಲಿ ಎಂದು ಸ್ಮರಿಸುತ್ತದೆ. ಈ ಇಬ್ಬರು ಕುರು ರಾಜರು ಕುರು ರಾಜ್ಯದ ಬಲವರ್ಧನೆ ಮತ್ತು ಶ್ರೌತ ಆಚರಣೆಗಳ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇವರಿಬ್ಬರು ನಂತರದ ದಂತಕಥೆಗಳು ಮತ್ತು ಸಂಪ್ರದಾಯಗಳಲ್ಲಿ ಪ್ರಮುಖ ವ್ಯಕ್ತಿಗಳಾಗಿಯೂ ಕಾಣಿಸಿಕೊಳ್ಳುತ್ತಾರೆ.

ಅವೈದಿಕ ಸಾಲ್ವ ಬುಡಕಟ್ಟಿನಿಂದ ಪರಾಜಿತರಾದ ಮೇಲೆ ಕುರುಗಳು ಇಳಿತ ಹೊಂದಿದರು, ಮತ್ತು ವೈದಿಕ ಸಂಸ್ಕೃತಿಯ ಕೇಂದ್ರ ಪೂರ್ವಕ್ಕೆ ಪಾಂಚಾಲ ರಾಜ್ಯದೊಳಗೆ ಸ್ಥಳಾಂತರಗೊಂಡಿತು. ಉತ್ತರ ವೈದಿಕ ಕಾಲದಲ್ಲಿ, ಕುರುಗಳ ರಾಜಧಾನಿ ಕೌಶಾಂಬಿಗೆ ವರ್ಗಾವಣೆಯಾಯಿತು. ಇದಕ್ಕೆ ಕಾರಣ ಹಸ್ತಿನಾಪುರವು ಪ್ರವಾಹದಿಂದ ನಾಶವಾಯಿತು, ಜೊತೆಗೆ ಸ್ವತಃ ಕುರು ವಂಶದಲ್ಲೇ ವಿಪ್ಲವಗಳಾದವು. ವೈದಿಕೋತ್ತರ ಕಾಲದಲ್ಲಿ (ಅಂದರೆ ಕ್ರಿ.ಪೂ. ೬ನೇ ಶತಮಾನದ ವೇಳೆಗೆ) ಕುರು ವಂಶವು ಕುರು ಮತ್ತು ವತ್ಸ ಜನಪದವಾಗಿ ವಿಕಸನಗೊಂಡಿತು, ಮತ್ತು ಇವು ಅನುಕ್ರಮವಾಗಿ ಮೇಲಿನ್ ದೊವಾಬ್/ದೆಹಲಿ/ಹರ್ಯಾಣ ಹಾಗೂ ಕೆಳಗಿನ ದೊವಾಬ್ ಅನ್ನು ಆಳುತ್ತಿದ್ದವು. ಕುರು ವಂಶದ ವತ್ಸ ಶಾಖೆಯು ಮುಂದಕ್ಕೆ ಕೌಶಾಂಬಿ ಮತ್ತು ಮಥುರಾದಲ್ಲಿನ ಶಾಖೆಗಳಾಗಿ ವಿಭಜನೆಗೊಂಡಿತು.

ಸಮಾಜ[ಬದಲಾಯಿಸಿ]

ಮೌರ್ಯರ ಹಿಂದಿನ (ಗಂಗಾ ಬಯಲು) ಕುರುಗಳ ನಾಣ್ಯ. ಸುಮಾರು ಕ್ರಿ.ಪೂ. 350-315. AR 15 ಮನ – ಅರ್ಧ ಕರ್ಷಪಣ (15ಮಿ.ಮಿ., 1.50 ಗ್ರಾಂ). ಮೂರು ಸುರುಳಿಗಳುಳ್ಳ ಸಂಕೇತದಂತಹ ಜ್ಯಾಮಿತೀಯ ಮಾದರಿ /ಆರು ತೋಳುಗಳ ಸಂಕೇತ

ಕುರು ರಾಜ್ಯದೊಳಗೆ ಏಕೀಕರಣಗೊಂಡ ಬುಡಕಟ್ಟುಗಳು ಹೆಚ್ಚಾಗಿ ಅರೆ ಅಲೆಮಾರಿ, ಗ್ರಾಮೀಣ ಬುಡಕಟ್ಟುಗಳಾಗಿದ್ದವು. ಆದರೆ, ವಸಾಹತು ಪಶ್ಚಿಮ ಗಂಗಾ ಬಯಲಿನೊಳಗೆ ಸ್ಥಳಾಂತರವಾದಾಗ, ಅಕ್ಕಿ ಮತ್ತು ಜವೆಯ ನೆಲೆಸಿದ ಕೃಷಿ ಹೆಚ್ಚು ಪ್ರಮುಖವಾಯಿತು. ಈ ಕಾಲಾವಧಿಯ ವೈದಿಕ ಸಾಹಿತ್ಯ ಹೆಚ್ಚುವರಿ ಉತ್ಪಾದನೆಯ ಬೆಳವಣಿಗೆ ಮತ್ತು ಪರಿಣತ ಕುಶಲಕರ್ಮಿಗಳು ಮತ್ತು ಕರಕುಶಲಿಗಳ ಉದಯವನ್ನು ಸೂಚಿಸುತ್ತದೆ. ಕಬ್ಬಿಣವನ್ನು ಈ ಕಾಲದ ಪಠ್ಯವಾದ ಅಥರ್ವವೇದದಲ್ಲಿ ಮೊದಲ ಬಾರಿಗೆ ಶ್ಯಾಮ ಅಯಸ್ (ಅಕ್ಷರಶಃ ಕಪ್ಪು ಲೋಹ) ಎಂದು ಉಲ್ಲೇಖಿಸಲಾಯಿತು. ಋಗ್ವೇದಿಕ ಕಾಲದ ಆರ್ಯ ಮತ್ತು ದಾಸರ ದ್ವಿಮುಖ ಪದ್ಧತಿಯ ಬದಲಾಗಿ ಬಂದ ಚತುರ್ಮುಖ ವರ್ಣ ಪದ್ಧತಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿತ್ತು. ಆರ್ಯ ಸಾಮಾನ್ಯರು (ಈಗ ವೈಶ್ಯರೆಂದು ಕರೆಯಲ್ಪಟರು) ಮತ್ತು ದಾಸ ಕಾರ್ಮಿಕರನ್ನು (ಈಗ ಶೂದ್ರರೆಂದು ಕರೆಯಲ್ಪಟ್ಟರು) ನಿಯಂತ್ರಿಸುತ್ತಿದ್ದ ಬ್ರಾಹ್ಮಣ ಪುರೋಹಿತ ವರ್ಗ ಮತ್ತು ಕ್ಷತ್ರಿಯ ಶ್ರೀಮಂತವರ್ಗಗಳನ್ನು ಈಗ ಪ್ರತ್ಯೇಕ ವರ್ಗಗಳಾಗಿ ಹೆಸರಿಸಲಾಯಿತು.

ಕುರು ರಾಜರು ಮೂಲಭೂತ ಆಡಳಿತದ ಸಹಾಯದಿಂದ ಆಳುತ್ತಿದ್ದರು. ಇದರಲ್ಲಿ ಪುರೋಹಿತ, ಗ್ರಾಮದ ಮುಖಂಡ, ಸೇನಾಪತಿ, ಆಹಾರ ವಿತರಕ, ಬೇಹುಗಾರ, ದೂತ ಮತ್ತು ಗೂಢಚಾರರು ಸೇರಿದ್ದರು. ಇವರು ಸಾಮಾನ್ಯ ಜನರಿಂದ ಮತ್ತು ದುರ್ಬಲ ನೆರೆಯ ಬುಡಕಟ್ಟುಗಳಿಂದ ಕಡ್ಡಾಯ ಕಪ್ಪುಕಾಣಿಕೆ (ಬಲಿ) ಸಂಗ್ರಹಿಸುತ್ತಿದ್ದರು. ಇವರು ತಮ್ಮ ನೆರೆರಾಜ್ಯಗಳ ವಿರುದ್ಧ ಆಗಾಗ್ಗೆ ದಾಳಿಗಳನ್ನು ಮುನ್ನಡೆಸುತ್ತಿದ್ದರು, ವಿಶೇಷವಾಗಿ ಪೂರ್ವ ಮತ್ತು ದಕ್ಷಿಣಕ್ಕೆ. ಆಡಳಿತ ನಡೆಸಲು ನೆರವಾಗಲು, ರಾಜರು ಮತ್ತು ಅವರ ಬ್ರಾಹ್ಮಣ ಪುರೋಹಿತರು ವೈದಿಕ ಸೂಕ್ತಗಳನ್ನು ಸಂಗ್ರಹಗಳಾಗಿ ಹೊಂದಿಸಿದರು ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಎತ್ತಿಹಿಡಿಯಲು ಹಾಗೂ ವರ್ಗ ಶ್ರೇಣಿವ್ಯವಸ್ಥೆಯನ್ನು ಬಲಪಡಿಸಲು ಧರ್ಮಾಚರಣೆಗಳ ಹೊಸ ಸಮೂಹವನ್ನು (ಸಂಪ್ರದಾಯಬದ್ಧ ಶ್ರೌತ ಕ್ರಿಯಾವಿಧಿಗಳು) ಅಭಿವೃದ್ಧಿಪಡಿಸಿದರು. ಉನ್ನತ ಶ್ರೇಣಿಯ ಕುಲೀನರು ಬಹಳ ವಿಸ್ತಾರವಾದ ಯಾಗಗಳನ್ನು ಮಾಡಬಹುದಿತ್ತು, ಮತ್ತು ಅನೇಕ ಧರ್ಮಾಚರಣೆಗಳು ಮುಖ್ಯವಾಗಿ ತನ್ನ ಜನರ ಮೇಲೆ ರಾಜನ ಸ್ಥಾನವನ್ನು ಉದಾತ್ತಗೊಳಿಸುತ್ತಿದ್ದವು. ಅಶ್ವಮೇಧ ಯಾಗ ಉತ್ತರ ಭಾರತದಲ್ಲಿ ಒಬ್ಬ ಬಲಿಷ್ಠ ರಾಜನಿಗೆ ತನ್ನ ಪ್ರಾಬಲ್ಯವನ್ನು ಘೋಷಿಸಿಕೊಳ್ಳುವ ಒಂದು ರೀತಿಯಾಗಿತ್ತು.

ಮಹಾಕಾವ್ಯ ಸಾಹಿತ್ಯದಲ್ಲಿ[ಬದಲಾಯಿಸಿ]

ಮಹಾಭಾರತ ಮಹಾಕಾವ್ಯವು ಸಂಭಾವ್ಯವಾಗಿ ಸುಮಾರು ಕ್ರಿ.ಪೂ. ೧೦೦೦ರಲ್ಲಿ ಆಳ್ವಿಕೆ ನಡೆಸುತ್ತಿದ್ದ ಕುರು ವಂಶದ ಎರಡು ಶಾಖೆಗಳ ನಡುವಿನ ಸಂಘರ್ಷದ ಬಗ್ಗೆ ಹೇಳುತ್ತದೆ. ಆದರೆ, ವರ್ಣಿಸಲಾದ ನಿರ್ದಿಷ್ಟ ಘಟನೆಗಳು ಯಾವುದೇ ಐತಿಹಾಸಿಕ ಆಧಾರವನ್ನು ಹೊಂದಿವೆಯೆ ಎಂಬುದಕ್ಕೆ ಪುರಾತತ್ವಶಾಸ್ತ್ರವು ನಿರ್ಣಾಯಕ ಪುರಾವೆಯನ್ನು ಒದಗಿಸಿಲ್ಲ. ಮಹಾಭಾರತದ ಅಸ್ತಿತ್ವದಲ್ಲಿರುವ ಪಠ್ಯವು ಬೆಳವಣಿಗೆಯ ಅನೇಕ ಪದರಗಳ ಮೂಲಕ ಹೋಗಿದೆ ಮತ್ತು ಬಹುತೇಕವಾಗಿ ಸು. ಕ್ರಿ.ಪೂ. ೪೦೦ ಮತ್ತು ಕ್ರಿ.ಶ. ೪೦೦ ರ ನಡುವಿನ ಅವಧಿಗೆ ಸೇರಿದೆ. ಮಹಾಭಾರತದ ಚೌಕಟ್ಟು ಕಥೆಯೊಳಗೆ, ಐತಿಹಾಸಿಕ ರಾಜರಾದ ಪರೀಕ್ಷಿತ ಮತ್ತು ಜನಮೇಜಯರು ಕುರು ವಂಶಸ್ಥರೆಂದು ಗಮನಾರ್ಹವಾಗಿ ಚಿತ್ರಿಸಲ್ಪಟ್ಟಿದ್ದಾರೆ.

ಕುರು ವಂಶವೃಕ್ಷ[ಬದಲಾಯಿಸಿ]

ಇದು ಮಹಾಭಾರತದ ಪ್ರಕಾರ ವಂಶ ಹಾಗೂ ಉತ್ತರಾಧಿಕಾರ ಎರಡರದ್ದೂ ಸಂತತಿಯನ್ನು ತೋರಿಸುತ್ತದೆ. ವಿವರಕ್ಕಾಗಿ ಕೆಳಗಿನ ಟಿಪ್ಪಣಿಗಳನ್ನು ನೋಡಿ.

 
 
 
 
 
 
ಕುರು
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಗಂಗಾ
 
ಶಂತನು
 
ಸತ್ಯವತಿ
 
 
 
 
 
 
 
 
 
 
 
 
 
 
 
ಪರಾಶರ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಭೀಷ್ಮ
 
 
 
ಚಿತ್ರಾಂಗದ
 
 
 
ಅಂಬಿಕಾ
 
ವಿಚಿತ್ರವೀರ್ಯ
 
ಅಂಬಾಲಿಕಾ
 
 
 
ವ್ಯಾಸ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಧೃತರಾಷ್ಟ್ರ
 
ಗಾಂಧಾರಿ
 
ಶಕುನಿ
 
 
 
 
ಕುಂತಿ
 
ಪಾಂಡು
 
ಮಾದ್ರಿ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಕರ್ಣ
 
ಯುಧಿಷ್ಠಿರ
 
ಭೀಮ
 
ಅರ್ಜುನ
 
ಸುಭದ್ರೆನಕುಲ
 
ಸಹದೇವ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ದುರ್ಯೋಧನ
 
ದುಶ್ಯಾಸನ
 
ದುಶ್ಶಲೆ
 
(98 ಪುತ್ರರು)
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಅಭಿಮನ್ಯು
 
ಉತ್ತರೆ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಪರೀಕ್ಷಿತ
 
ಮದ್ರವತಿ
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
ಜನಮೇಜಯ

ಸಂಕೇತಗಳಿಗೆ ಕೀಲಿಕೈ

 • ಗಂಡು: ನೀಲಿ ಅಂಚು
 • ಹೆಣ್ಣು: ಕೆಂಪು ಅಂಚು
 • ಪಾಂಡವರು: ಹಸಿರು ಚೌಕ
 • ಕೌರವರು: ಹಳದಿ ಚೌಕ

ಟಿಪ್ಪಣಿಗಳು

 • : ಶಂತನು ಕುರು ರಾಜವಂಶದ ಒಬ್ಬ ರಾಜನಾಗಿದ್ದನು, ಮತ್ತು ಕುರು ಎಂಬ ಯಾವುದೇ ಪೂರ್ವಜನಿಂದ ಕೆಲವು ಪೀಳಿಗೆಗಳ ದೂರದಲ್ಲಿದ್ದನು. ಗಂಗಾಳೊಂದಿಗೆ ಅವನ ವಿವಾಹ ಸತ್ಯವತಿಯೊಂದಿಗಿನ ವಿವಾಹದ ಮೊದಲಾಯಿತು.
 • : ವಿಚಿತ್ರವೀರ್ಯನ ಮರಣದ ನಂತರ ವ್ಯಾಸರು ನಿಯೋಗ ಸಂಪ್ರದಾಯದಿಂದ ಪಾಂಡು ಮತ್ತು ಧೃತರಾಷ್ಟ್ರರ ತಂದೆಯಾದರು. ಧೃತರಾಷ್ಟ್ರ, ಪಾಂಡು ಮತ್ತು ವಿದುರರು ಅನುಕ್ರಮವಾಗಿ ಅಂಬಿಕಾ, ಅಂಬಾಲಿಕಾ ಮತ್ತು ಒಬ್ಬ ದಾಸಿಯ ಪುತ್ರರಾಗಿದ್ದರು.
 • : ಕರ್ಣನು ಕುಂತಿಗೆ ಸೂರ್ಯನ ಆವಾಹನೆ ಮೂಲಕ ಹುಟ್ಟಿದನು, ಪಾಂಡುವಿನೊಂದಿಗೆ ಅವಳ ವಿವಾಹ ಆಗುವುದಕ್ಕೆ ಮೊದಲು.
 • : ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಮತ್ತು ಸಹದೇವರು ಪಾಂಡುವಿನ ಅಂಗೀಕೃತ ಪುತ್ರರಾಗಿದ್ದರು ಆದರೆ ಕುಂತಿಯಿಂದ ವಿವಿಧ ದೇವತೆಗಳ ಆವಾಹನೆ ಮೂಲಕ ಜನಿಸಿದರು. ಅವರೆಲ್ಲರೂ ದ್ರೌಪದಿಯನ್ನು ವಿವಾಹವಾದರು (ವೃಕ್ಷದಲ್ಲಿ ತೋರಿಸಿಲ್ಲ) ಆದರೆ ಅವಳಿಗೆ ಐದು ಪುತ್ರರಾದರು. ಅವರನ್ನು ಉಪಪಾಂಡವರು ಎಂದು ಹೆಸರಿಸಲಾಯಿತು.
 • : ದುರ್ಯೋಧನ ಮತ್ತು ಅವನ ಸಿಬ್ಲಿಂಗ್‍ಗಳು ಅದೇ ಸಮಯದಲ್ಲಿ ಜನಿಸಿದರು, ಮತ್ತು ಪಾಂಡವರ ಸಮಾನ ಪೀಳಿಗೆಯವರಾಗಿದ್ದರು.
 • : ಹಸ್ತಿನಾಪುರದಲ್ಲಿ ಧೃತರಾಷ್ಟ್ರ ಮತ್ತು ಗಾಂಧಾರಿಯ ಆಳ್ವಿಕೆಯ ನಂತರ, ಯುಧಿಷ್ಠಿರ ಮತ್ತು ದ್ರೌಪದಿ ಸಿಂಹಾಸನವೇರಿದರು, ಅರ್ಜುನ ಮತ್ತು ಸುಭದ್ರೆಯಲ್ಲ.

ಉಲ್ಲೇಖಗಳು[ಬದಲಾಯಿಸಿ]

 1. Pletcher 2010, p. 63.
 2. Witzel 1995, p. 6.