ವಿಷಯಕ್ಕೆ ಹೋಗು

ಐತರೇಯ ಅರಣ್ಯಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಐತರೇಯ ಅರಣ್ಯಕವು ಋಗ್ವೇದಕ್ಕೆ ಸೇರಿದೆ. ಸಂಪ್ರದಾಯದ ನಂಬಿಕೆಯ ಪ್ರಕಾರ ಮಹೀದಾಸನು ಐತರೇಯ ಅರಣ್ಯಕದ ಋಷಿ. ಐತರೇಯ ಅರಣ್ಯಕದಲ್ಲಿ ಒಟ್ಟು ಐದು ಅರಣ್ಯಕಗಳಿವೆ.ಐದು ಅಧ್ಯಾಯಗಳೊನ್ನೊಳಗೊಂಡಿರುವ ಮೊದಲ ಅರಣ್ಯಕದಲ್ಲಿ ಗವಾಮಯನ ಸತ್ತ್ರಕ್ಕೆ ಸಂಬಂಧಿಸಿದ ಮಹಾವ್ರತವೆಂಬ ಕರ್ಮದ ವಿವರಣೆಯಿದೆ. ಎರಡನೆಯ ಅರಣ್ಯಕದಲ್ಲಿ ಏಳು ಅಧ್ಯಾಯಗಳಿವೆ. ಇವುಗಳಲ್ಲಿ ನಾಲ್ಕನೆಯ,ಐದನೆಯ ಮತ್ತು ಆರನೆಯ ಅಧ್ಯಾಯಗಳೇ ಐತರೇಯ ಉಪನಿಷತ್. ಏರಡು ಅಧ್ಯಾಯಗಳೊನ್ನೊಳಗೊಂಡಿರುವ ಮೂರನೆಯ ಅರಣ್ಯಕದಲ್ಲಿ ಸಂಹಿತಾ ವಿಷಯಕವಾದ ಉಪಾಸನೆಯನ್ನು ಹೇಳಿದೆ. ಒಂದೇ ಅಧ್ಯಾಯವನ್ನು ಹೊಂದಿರುವ ನಾಲ್ಕನೆಯ ಅರಣ್ಯಕದಲ್ಲಿ ಮಹಾನಾಮ್ನೀ ಮಂತ್ರಗಳ ಪಟ್ಟಿಯು ಬರುತ್ತದೆ. ಮೂರು ಅಧ್ಯಾಯಗಳಿರುವ ಕೊನೆಯ ಅರಣ್ಯಕದಲ್ಲಿ ಪುನಃ ಮಹಾವ್ರತದ ವಿಚಾರವಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: