ವಿಷಯಕ್ಕೆ ಹೋಗು

ಅಯೋಧ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಯೋಧ್ಯ ಇಂದ ಪುನರ್ನಿರ್ದೇಶಿತ)
ಅಯೋಧ್ಯೆ
ಅಯೋಧ್ಯೆ
city
Population
 (2001)
 • Total೪೯,೬೫೦

ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ ೫೫೫ ಕಿಲೋಮೀಟರ್ ದೂರದಲ್ಲಿದೆ. ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ನಾಯಕನಾದ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ.

ಚರಿತ್ರೆ

[ಬದಲಾಯಿಸಿ]

ಇದು ರಾಮಾಯಣ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿತ್ತು ಎಂದು ಪ್ರತೀತಿ. ಆಗ ಇದರ ವಿಸ್ತೀರ್ಣ ಸುಮಾರು ೧೨ ಯೋಜನ ಎಂದರೆ ಸುಮಾರು ೮೦ ರಿಂದ ೧೦೦ ಮೈಲಿಗಳ ಸುತ್ತಳತೆ ಇತ್ತು ಎಂದು ರಾಮಾಯಣದಲ್ಲಿ ಉಲ್ಲೇಖವಿದೆ.ಈಗ ಇದರ ಯಾವುದೇ ಕುರುಹುಗಳಿಲ್ಲವಾದರೂ ಈಗಿನ ಪಟ್ಟಣದ ಸುತ್ತಲೂ ಇರುವ ಎತ್ತರದ ದಿಬ್ಬ ಪ್ರದೇಶದ ಅಂದಾಜಿನಲ್ಲಿ ಈ ನಗರವನ್ನು ಗುರುತಿಸಿದ್ದಾರೆ.ಈ ನಗರವನ್ನು ಸೂರ್ಯವಂಶದ ರಾಜರು ಹಲವಾರು ಶತಮಾನ ಆಳಿದರು. ಅವರ ಸಂತತಿ ಮುಂದೆ ಚೆಲ್ಲಾಪಿಲ್ಲಿಯಾಗಿ ಹಲವಾರು ಪ್ರದೇಶಗಳಲ್ಲಿ ಹರಡಿಕೊಂಡ ನಂತರೆ ಈ ನಗರದ ಪ್ರಾಮುಖ್ಯತೆ ಮಸುಕಾಯಿತು.ಮುಂದೆ ಬೌದ್ಧರ ಕಾಲದಲ್ಲಿ ಕೋಸಲ ದೇಶದ ರಾಜಧಾನಿಯಾಗಿ ಸಾಕೇತ ಪ್ರಸಿದ್ಧಿಯಾಯಿತು. ಇದು ಅಯೋಧ್ಯೆಯ ಒಂದು ಭಾಗವಾಗಿರುವ ಸಾಧ್ಯತೆ ಇದೆ ಎಂದು ಇತಿಹಾಸ ತಜ್ಜ಼ರ ಅಭಿಪ್ರಾಯ.ಮುಂದೆ ದೆಹಲಿಯ ಸುಲ್ತಾನ ರ ಕಾಲದಲ್ಲಿ ಇದು ಅವಧ್ ಪ್ರದೇಶದ ಆಡಳಿತ ಕೇಂದ್ರವಾಗಿದ್ದು, ೧೮ನೆಯ ಶತಮಾನದಲ್ಲಿ ಅವಧ್ ನ ನವಾಬರ ರಾಜಧಾನಿಯಾಗಿತ್ತು.೧೭೬೫ರಲ್ಲಿ ಶುಜಾ-ಉದ್-ದೌಲನು ಫೈಜಾಬಾದನ್ನು ತನ್ನ ಆಡಳಿತ ಕೇಂದ್ರವನ್ನ್ನಾಗಿಸಿಕೊಂಡ ನಂತರ ಅಯೋಧ್ಯೆಯು ತನ್ನ ಎಲ್ಲಾ ಪ್ರಾಮುಖ್ಯತೆಯನ್ನು ಕಳಕೊಂಡು ಕೇವಲ ಧಾರ್ಮಿಕ ಕ್ಷೇತ್ರವಾಗಿ ಉಳಿಯಿತು. ಅಯೋಧ್ಯಾ ನಗರದ ಇತಿಹಾಸ:

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯನ್ನು (Ayodhya) ವಿಶ್ವ ದರ್ಜೆಯ ನಗರವನ್ನಾಗಿ ಮಾಡುವುದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕನಸಾಗಿದೆ. ಆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರಾಮ ಮಂದಿರದಿಂದಾಗಿ ಅತ್ಯುನ್ನತ ಪ್ರವಾಸಿ ತಾಣವಾಗಲಿರುವ ಅಯೋಧ್ಯೆಗೆ ಹಲವು ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳಿಗೆ ರಾಮಾಯಣದ ಪಾತ್ರಗಳ ಹೆಸರನ್ನು ಇಡುವುದಕ್ಕೆ ನಿರ್ಧರಿಸಲಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Vistara News". Vistara News. Retrieved 11 January 2024.
ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ಅಯೋಧ್ಯೆ&oldid=1253435" ಇಂದ ಪಡೆಯಲ್ಪಟ್ಟಿದೆ