ವಿಷಯಕ್ಕೆ ಹೋಗು

ಯೋಜನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯೋಜನವು ಹಿಂದಿನ ಸಂಸ್ಕೃತದವರು ಬಳಸಲ್ಪಡುತ್ತಿದ್ದ ದೂರದ ಒಂದು ಮಾಪನವಾಗಿತ್ತು. ಒಂದು ಯೋಜನವು ಸುಮಾರು 12–15 ಕಿ.ಮಿ. ನಷ್ಟಿರುತ್ತದೆ. (ಅಂದರೆ 4 ಕೋಶ = 1 ಯೋಜನ ಮತ್ತು 1 ಕೋಶ 3 - 3.75 ಕಿ.ಮಿ. ನಷ್ಟಾಗಿರುತ್ತದೆ)

ಉದ್ದದಲ್ಲಿ ಬದಲಾವಣೆಗಳು

[ಬದಲಾಯಿಸಿ]

ವಿಭಿನ್ನ ಖಗೋಳಶಾಸ್ತ್ರಜ್ಞರು ಅಳವಡಿಸಿಕೊಂಡ ವಿಭಿನ್ನ ಮಾನದಂಡಗಳನ್ನು ಅವಲಂಬಿಸಿ ಯೋಜನದ ಉದ್ದವು ಬದಲಾಗುತ್ತದೆ. ಉದಾಹರಣೆಗೆ, ಸೂರ್ಯ ಸಿದ್ಧಾಂತದಲ್ಲಿ (ಕ್ರಿ.ಶ. ೪ನೇ ಶತಮಾನದ ಕೊನೆ-ಕ್ರಿ.ಶ. ೫ನೇ ಶತಮಾನದ ಮುಂಚಿನ ಭಾಗ) ಒಂದು ಯೋಜನವು ೮ ಕಿ.ಮಿ ಗೆ (೫ ಮೈಲಿ) ಸಮಾನವಾಗಿತ್ತು,[೧] ಮತ್ತು ಇದು ಆರ್ಯಭಟನ ಆರ್ಯಭಟೀಯಕ್ಕೂ (೪೯೯) ಸತ್ಯವಾಗಿತ್ತು.[೨] ಆದರೆ, ೧೪ನೇ ಶತಮಾನದ ಗಣಿತಜ್ಞನಾದ ಪರಮೇಶ್ವರನು ಯೋಜನವು ಸುಮಾರು ೧.೫ ಪಟ್ಟು ಹೆಚ್ಚು ದೊಡ್ಡದು ಎಂದು, ಮತ್ತು ಸುಮಾರು ೧೩ ಕಿ.ಮಿ. ಗೆ (೮ ಮೈಲಿ) ಸಮವೆಂದು ವ್ಯಾಖ್ಯಾನಿಸಿದನು.[೩] ಶ್ರೀಲ ಭಕ್ತಿವೇದಂತ ಸ್ವಾಮಿ ಪ್ರಭುಪಾದರು ಭಾಗವತ ಪುರಾಣದ ತಮ್ಮ ಅನುವಾದಗಳಾದ್ಯಂತ ಯೋಜನದ ಸಮಾನವಾದ ಉದ್ದವನ್ನು ಸುಮಾರು ೧೩ ಕಿ.ಮಿ. ಎಂದು ನೀಡುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Richard Thompson (1997), "Planetary Diameters in the Surya-Siddhanta", Journal of Scientific Exploration, 11 (2): 193–200 [196]
  2. O'Connor, John J.; Robertson, Edmund F., "Aryabhata I", MacTutor History of Mathematics archive, University of St Andrews
  3. Richard Thompson (1997), "Planetary Diameters in the Surya-Siddhanta", Journal of Scientific Exploration, 11 (2): 193–200 [196]
"https://kn.wikipedia.org/w/index.php?title=ಯೋಜನ&oldid=1210684" ಇಂದ ಪಡೆಯಲ್ಪಟ್ಟಿದೆ