ಅಹಲ್ಯಾ ಬಾಯಿ ಹೋಳ್ಕರ
Ahilyabai Holkar | |
---|---|
Rani of Indore | |
ಆಳ್ವಿಕೆ | 1 December 1767 – 13 August 1795 |
ಪಟ್ಟಾಭಿಷೇಕ | 11 December 1767 |
ಪೂರ್ವಾಧಿಕಾರಿ | Male Rao Holkar |
ಉತ್ತರಾಧಿಕಾರಿ | Tukojirao Holkar |
Regent of Indore | |
Regency | 20 May 1766 – 5 April 1767 |
Subedar | Male Rao Holkar |
ಗಂಡ/ಹೆಂಡತಿ | Khande Rao Holkar |
ಸಂತಾನ | |
Male Rao Holkar (son) Muktabai (daughter) | |
ಪೂರ್ಣ ಹೆಸರು | |
Ahilya Bai Sahiba Holkar | |
ಮನೆತನ | Holkar |
ತಂದೆ | Mankoji Shinde |
ತಾಯಿ | Sushila Shinde |
ಜನನ | Chondi, Maratha Confederacy (present-day Ahmednagar District, Maharashtra, India) | ೩೧ ಮೇ ೧೭೨೫
ಮರಣ | 13 August 1795 Rajwada, Indore, Indore State, Maratha Confederacy (present-day, Madhya Pradesh, India) | (aged 70)
ಧರ್ಮ | Hinduism |
ಅಹಲ್ಯಾಬಾಯಿ ಹೋಳ್ಕರ್ (31 ಮೇ 1725–13 ಆಗಸ್ಟ್ 1795), [೧] ಈಕೆ ಮರಾಠಾ ಸಾಮ್ರಾಜ್ಯದಲ್ಲಿದ್ದ ಮಾಲ್ವ ಪ್ರಾಂತ್ಯದ ರಾಣಿ. ಮಹೇಶ್ವರವನ್ನು (ಈಗಿನ ಮಧ್ಯಪ್ರದೇಶದಲ್ಲಿದೆ) ರಾಜಧಾನಿಯನ್ನಾಗಿ ಮಾಡಿಕೊಂಡು ಹೋಳ್ಕರ್ ಮನೆತನದವಳು[೨]. ಭಾರತೀಯರ ಮನದಾಳದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿರುವ ಈಕೆ, ಉತ್ತಮ ಆಡಳಿತ, ಸಾಮಜಿಕ ಕಲ್ಯಾಣಗಳು, ಜನಾನುರಾಗಿ ಕಾರ್ಯ, ಮತ್ತು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗಳಿಂದಾಗಿ ಭಾರತೀಯರ ಮನೆ ಮಾತಾಗಿದ್ದಾರೆ[೩]. ಈಕೆ ನಿರ್ಮಿಸಿದ ದೇವಾಲಯಗಳು, ಸ್ನಾನಘಟ್ಟಗಳು ಮತ್ತು ಧರ್ಮಛತ್ರಗಳು (ವಿಶ್ರಾಂತಿಗೃಹಗಳು) ಭಾರತೀಯ ವಾಸ್ತುಶಿಲ್ಪ ಮತ್ತು ಅದರ ವಿವಿಧ ವೈಶಿಷ್ಟ್ಯಗಳನ್ನು ಅಭಿವ್ಯಕ್ತಪಡಿಸುತ್ತದೆ. ಅಹಲ್ಯಾಬಾಯಿಯ ದಾನ, ದತ್ತಿಗಳು ಮಾಳ್ವ ಪ್ರಾಂತ್ಯ ಮಾತ್ರವಲ್ಲದೆ ಭಾರತಖಂಡದಾದ್ಯಂತ ಪಸರಿಸಿವೆ[೪]. ದೇವಾಲಯಗಳು ಸ್ನಾನಘಟ್ಟಗಳು ಹಾಗು ಧರ್ಮಶಾಲಾ ಕಟ್ಟಡಗಳು ಹೆಸರಿಲ್ಲದೆ ನಿಂತಿದ್ದನ್ನು ನೋಡಿದಾಗ ಭಾರತೀಯರ ಮನಸ್ಸು ರಾಜಮಾತಾ ಅಹಲ್ಯಾಬಾಯಿ ಹೆಸರನ್ನು ಸ್ಮರಿಸುತ್ತದೆ. ಈಕೆಯನ್ನು ರಾಣಿಯಾಗಿ ನೊಡುವುದಕಿಂತ ಒಬ್ಬಸಾದ್ವಿ ಹಾಗೆ ಮತ್ತು ಮಾಳ್ವಾದ ಮಹಾನ್ ಆಡಳಿತಗಾರ್ತಿಯಾಗಿ ನೋಡಲಾಗುತ್ತದೆ. ಈಕೆಯನ್ನು ದೇವಾಲಯಗಳ ರಾಣಿ ಎಂದೂ ಸಹ ಕರೆಯುತ್ತಾರೆ [೫] [೪]. ಜೀವನದಲ್ಲಿ ಎದುರಿಸಿದ ಕಷ್ಟ ನಷ್ಟಗಳಿಗೆ ದುಃಖಿಸದೆ(ಕಡಿಮೆ ಅಯುವಿನಲ್ಲೇ ಗಂಡ ಮತ್ತು ಇಬ್ಬರು ಮಕ್ಕಳನ್ನು ಕಳೆದುಕೊಂಡಾಗ್ಯು) ದ್ರುತಿಗೆಡದೆ ಧಾರ್ಮಿಕ ಕಾರ್ಯದಲ್ಲಿ ಶ್ರದ್ದೆಯನ್ನು ಕಳೆದುಕೊಳ್ಳದೆ ಸ್ಥಿತಪ್ರಜ್ಞತೆಯನ್ನು ಕಾಪಾಡಿಕೊಂಡು ಭಾರತೀಯ ಸಂಸ್ಕೃತಿಯ ಉನ್ನತಾಗೆ ಶ್ರಮಿಸಿದ ಸಾದ್ವಿ.
ಇಂದೋರ್ ನಗರವನ್ನು ಒಂದು ಪ್ರಮುಖ ನಗರವಾಗಿ ಮಾರ್ಪಡಿಸಿದಲ್ಲದೆ ಕೈಗಾರಿಕೆಗಳನ್ನು[೬] ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದ್ದಾರೆ [೭]. ಭಾರತ ಸರ್ಕಾರವು 25 ನೇ ಆಗಸ್ಟ್ 1996 ರಂದು ಸಾದ್ವಿಯ 200ನೇ ಪುಣ್ಯ ತಿಥಿಯಂದು ಗೌರವಾರ್ಥವಾಗಿ ಅಂಚೆಚೀಟಿ ಬಿಡುಗಡೆ ಮಾಡಿತು[೮]. ಪ್ರಸ್ತುತ ಇಂದೋರ್ ನಲ್ಲಿರುವ ವಿಮಾನ ನಿಲ್ದಾಣಕ್ಕೆ "ದೇವಿ ಅಹಲ್ಯಾ ಬಾಯಿ ಹೋಳ್ಕರ್ ವಿಮಾನ ನಿಲ್ದಾಣ" ಎಂಬ ಹೆಸರನ್ನು ಇಡಲಾಗಿದೆ. ಇಂದೋರ್ ನಗರದ ವಿಶ್ವವಿದ್ಯಾನಿಲಯವನ್ನು ದೇವಿ ಅಹಲ್ಯಾ ವಿಶ್ವವಿದ್ಯಾಲಯ ಎಂದು ಹೆಸರಿಸಿದೆ. ಕೇವಲ ತನ್ನ ರಾಜ್ಯದಲ್ಲಿ ಮಾತ್ರವಲ್ಲದೆ ಭಾರತಖಂಡದಾದ್ಯಂತ ಮಂದಿರಗಳು, ಧರ್ಮ ಛತ್ರಗಳು, ಸ್ನಾನ ಘಟ್ಟಗಳು, ದೇವಸ್ಥನಕ್ಕೆ ದಾನ, ದತ್ತಿ ಮತ್ತು ವಾರ್ಷಿಕ ಪೂಜಾಗೆ ಗಂಗಾ ನೀರನ್ನು ಪೂರೈಸುವ ವ್ಯವಸ್ಥೆ ಮಾಡಿದ ಕೀರ್ತಿ ಈಕೆಯದು. ಪ್ರಮುಖವಾಗಿ ವಾರಣಾಸಿಯ ಕಾಶಿ ವಿಶ್ವನಾಥ ಮಂದಿರ, ಚೋಳದ ಗೌರಿ ಸೋಮನಾಥ ಮಂದಿರ ಮತ್ತು ಬನಾರಸ್ನಲ್ಲಿ ಪ್ರಸಿದ್ಧ ದಶಾಶ್ವಮೇಧ ಘಾಟ್ನ ನಿರ್ಮಾಣದಂತಹ ಹಲವಾರು ಪ್ರಸಿದ್ಧ ದೇವಾಲಯಗಳ ದುರಸ್ತಿ ಮತ್ತು ಸೇರ್ಪಡೆ ಸೇರಿದಂತೆ ಚಟುವಟಿಕೆಗಳನ್ನು ಉತ್ತೇಜಿಸಿದ ಕೀರ್ತಿ ಆಕೆಗೆ ಸಲ್ಲುತ್ತದೆ.
ಪತಿ ಖಂಡೇ ರಾವ್ ಹೋಳ್ಕರ್ ಮತ್ತು ಮಾವ ಮಲ್ಹಾರ್ ರಾವ್ ಹೋಳ್ಕರ್ ಅವರ ನಿಧನದ ನಂತರ, ಅಹಲ್ಯಾಬಾಯಿ ಸ್ವತಃ ಹೋಳ್ಕರ್ ರಾಜವಂಶದ ವ್ಯವಹಾರಗಳನ್ನು ಕೈಗೊಂಡರು. ಮಾಳ್ವಾಪ್ರಂತ್ಯದ ಮೇಲೆ ಆಕ್ರಮಣವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಯುದ್ದವನ್ನು ಮುನ್ನೆಡೆಸಿದರು.
ಹಿನ್ನೆಲೆ ಮತ್ತು ಮದುವೆ
[ಬದಲಾಯಿಸಿ]ಅಹಲ್ಯಾಬಾಯಿ ಮಹಾರಾಷ್ಟ್ರದ ಚೌಂಡಿ ಗ್ರಾಮದಲ್ಲಿ (ಈಗಿನ ಅಹಮದ್ನಗರ ಜಿಲ್ಲೆ) ಮಂಕೋಜಿ ಶಿಂಧೆ ಮತ್ತು ಸುಶೀಲಾ ಶಿಂಧೆ ದಂಪತಿಯ ಪುತ್ರಿಯಾಗಿ ಜನಿಸಿದರು. ಇವರದು ಮರಾಠಿ ಹಿಂದೂ ಕುಟುಂಬ, ಒಟ್ಟು ಐದು ಸಹೋದರರು. ತಂದೆ ಗೌರವಾನ್ವಿತ ಧಂಗರ್ (ಗಡಾರಿಯಾ) ಕುಟುಂಬದ ವಂಶಸ್ಥರು. ಮಂಕೋಜಿ ಶಿಂಧೆ ಗ್ರಾಮದ ಪಾಟೀಲ್ ಆಗಿ ಸೇವೆ ಸಲ್ಲಿಸುತ್ತಿದ್ದನು[೯] [೧೦]. ಮದುವೆಯಾಗಿ ಮಾಳ್ವ ಪ್ರಾಂತ್ಯದ ಜವಾಬ್ದಾರಿ ವಹಿಸಿಕೋಂಡ ಮೇಲೆ ತನ್ನ ಸಹೋದರರನ್ನು 1779 ಸಿ.ಇ. ಯಲ್ಲಿ ಜಹಗೀರ್ ಕೊಟ್ಟು ಸೈನ್ಯಕ್ಕೆ ಸೇರಿಸಿಕೋಂಡಳು.
ಪ್ರಚಲಿತ ಕಥನದ ಪ್ರಕಾರ, ಮರಾಠ ಪೇಶ್ವೆ ಬಾಜಿ ರಾವ್ನ ಸೈನ್ಯದ ಕಮಾಂಡರ್ ಮತ್ತು ಮಾಳವಾ ದೊರೆ ಮಲ್ಹಾರ್ ರಾವ್ ಹೋಳ್ಕರ್, ಪುಣೆಗೆ ಹೋಗುವ ದಾರಿಯಲ್ಲಿ ಚಂಡಿಯಲ್ಲಿ ವಿಶ್ರಮಿಸುತ್ತಿದ್ದಾಗ, ದೇವಾಲಯದ ಧರ್ಮಕಾರ್ಯದಲ್ಲಿ ನಿರತಳಾಗಿದ್ದ ಎಂಟು ವರ್ಷದ ಬಾಲಕಿ ಅಹಲ್ಯಾಬಾಯಿ ಯನ್ನು ನೊಡಿ. ಆಕೆಯ ಧರ್ಮನಿಷ್ಠೆ ಮತ್ತು ಚಾರಿತ್ರ್ಯದಿಂದ ಪ್ರಭಾವಿತನಾದ ಮಲ್ಹಾರ ರಾವ್ ಹೊಳ್ಕರ್ ತನ್ನ ಮಗ ಖಂಡೇರಾವ್ ನಿಗೆ ತಕ್ಕ ಪತ್ನಿಯಂಬ ಪೇಶ್ವೆಯವರ ಸಲಹೆಯ ಮೇರೆಗೆ ವಿವಾಹ ಪ್ರಸ್ತಾಪವನ್ನು ಇಡುತ್ತಾನೆ. ಮದುವೆಯಾದಾಗ ಅಹಲ್ಯಬಾಯಿಗೆ 8 ವರ್ಷ. 1733 ಸಿ.ಇ.[೧೧] ರಲ್ಲಿ ಖಂಡೇರಾವ್ ಜೊತೆ ವಿವಾಹವಾಯಿತು. ದಂಪತಿಗೆ 1745 ಸಿ.ಇ. ಯಲ್ಲಿ ಮಾಲೋಜಿ ಎಂಬ ಗಂಡು ಮಗು ಮತ್ತು 1748 ಸಿ.ಇ. ಯಲ್ಲಿ ಮುಕ್ತಾಬಾಯಿ ಎಂಬ ಹೆಣ್ಣು ಮಗು ಜನಿಸಿತು[೧೨].
ಹೊಳ್ಕರ ಮನೆತನ
[ಬದಲಾಯಿಸಿ]ಮಲ್ಹಾರ್ ರಾವ್ ಹೋಳ್ಕರ್ ಈ ಸಮಯದಲ್ಲಾಗಲೇ ಪ್ರಖ್ಯಾತಿಗೆ ಬಂದಿದ್ದರು. ಕುರಿಗಾಹಿ ವೃತ್ತಿಯನ್ನು ಮೀರಿ ಏಳು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ನೀಡುವ ಮೂವತ್ತು ಪರಗಣಗಳನ್ನು ಸಂಗ್ರಹಿಸುವ ಪ್ರದೇಶದ ಮೇಲೆ ಸುಭೇದಾರ್ ಪದವಿಗೆ ಏರಿದ್ದರು. 1748 ಸಿ.ಇ.ಯಲ್ಲಿ ಮಾಳ್ವ ಪ್ರಾಂತ್ಯದಲ್ಲಿ ಸರ್ಕಾರ್ ಮಲ್ಹಾರ ರಾವ್ ಸ್ಥಾನವು ಉತ್ತಮವಾಗಿತ್ತು. ಉತ್ತರ ಮತ್ತು ಮಧ್ಯ ಭಾರತದ ರಾಜಕಾರಣದಲ್ಲಿ ಕಿಂಗ್ ಮೇಕರ್ ಪಾತ್ರವನ್ನು ನಿರ್ವಹಿಸುತ್ತಿದ್ದರು. 1750 ಸಿ.ಇ. ಹೊತ್ತಿಗೆ ಪೇಶ್ವೆಗಳು ಮರಾಠ ಸಾಮ್ರಾಜ್ಯದ ಅಧಿಕೃತ ಆಡಳಿತಗಾರರಾದರು. ಮರಾಠ ಸಾಮ್ರಾಜ್ಯಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪೇಶ್ವೆ ಸರ್ಕಾರದಿಂದ ಸರ್ಕಾರ್ ಮಾಲ್ಹರ್ ರಾವ್ ಗೆ ಮೋಕಾಸ(ಕಂದಾಯ ವಸೂಲು ಮಾಡಲು ಅನುಮತಿ), ಸರ್ದೇಶಮುಖಿ, ಕಾಮವಿಶೀ ಮತ್ತು ಪಾಟೀಲ್ ಎಂಬ ಬಿರುದುಗಳನ್ನು ಕೊಡಲಾಗಿತ್ತು[೧೩]. ಇವರ ಅಧಿಕಾರ ನರ್ಮದಾ ನದಿಯ ಉತ್ತರ ಭಾಗ ಮತ್ತು ಸಹ್ಯಾದ್ರಿಯ ಎರಡೂ ಬದಿಗಳಲ್ಲಿ ಹರಡಿಕೊಂಡಿತ್ತು[೪]. 1751 ಸಿ.ಇ. ಹೊತ್ತಿಗೆ, ಮಲ್ಹಾರ ರಾವ್ ಮಾಳ್ವ ಪ್ರಾಂತ್ಯದಲ್ಲಿ ತಮ್ಮ ಅಧಿಕಾರವನ್ನು ದೃಢವಾಗಿ ಸ್ಥಾಪಿಸಿದರು. ನಶಿಸುತ್ತಿದ್ದ ಮೊಘಲ್ ಸಾಮ್ರಾಜ್ಯ ಒಂದು ಕಡೆಯಾದರೆ, ಪೇಶ್ವೆಯ ಮರಾಠಸಾಮ್ರಾಜ್ಯ ಇನ್ನೊಂದು ಕಡೆ. ಪೇಶ್ವೆಗಳ ಜೊತೆ ಒಪ್ಪಂದ ಮಾಡಿಕೊಂಡು ಜಾಮೀನ್ಧಾರ್ ನಾಗಿ ಗುರುತಿಸಲ್ಪಟ್ಟರು. 1753 ಸಿ.ಇ. ಹೊತ್ತಿಗೆ ಮಲ್ಹಾರ್ ರಾವ್ ಪೇಶ್ವೆಗೆ ಅನಿವಾರ್ಯ ಎನ್ನುವ ಮಟ್ಟಿಗೆ ಬೆಳೆದರು. ಇವರ ನಡುವೆ ಸ್ನೇಹ ಒಪ್ಪಂದಕ್ಕೆ ಸಹಿ ಹಾಕಲಾಯಿತು [೧೪]
ರಾಜಕೀಯ ತರಬೇತಿ
[ಬದಲಾಯಿಸಿ]ಮಲ್ಹರ್ ರಾವ್ ಅವರು ರಾಜತಾಂತ್ರಿಕತೆಯಲ್ಲಿ ಕುಶಲರಾಗಿದ್ದರು. ಮಂತ್ರಾಲೋಚನೆ, ವಿವಿಧ ಪ್ರಾಂತ್ಯಗಳೊಂದಿಗೆ ಒಪ್ಪಂದಗಳು, ರಾಜ್ಯದ ಹಣಕಾಸು ನಿರ್ವಹಣೆ, ಪ್ರಾಂತ್ಯದ ಸಮಸ್ಯೆಗಳಲ್ಲಿ (ಮೊಘಲರು ಮತ್ತು ಪೇಶ್ವೆಗಳೆರಡೂ) ಸೆಣಸಾಡುತ್ತಿದ್ದರು. ಕದನದ ಸಮಯದಲ್ಲಿ ಸ್ವತಃ ತಾವೇ ಸೈನ್ಯವನ್ನು ಮುನ್ನಡೆಸುತ್ತಿದ್ದರು. ಸಾಮ್ರಾಜ್ಯದ ಅಗುಹೋಗುಗಳನ್ನು ಅಹಲ್ಯಾಬಾಯಿ ಅಚ್ಚರಿಯ ಕಣ್ಣುಗಳಿಂದ ಗಮನಿಸುತ್ತಿದ್ದರು. ರಾಜಕೀಯ ಕುಟುಂಬದ ಹೊರಗಿರಲಿಲ್ಲ. ಪ್ರತಿಯೊಂದನ್ನು ಗಮನಿಸುತ್ತಾ ಅದರಲ್ಲಿ ಭಾಗವಹಿಸುತ್ತಾ ಸ್ವಾಭಾವಿಕವಾಗಿ ರಾಜಕೀಯದ ಅನಿವಾರ್ಯತೆಗಳ ಪಾಠವನ್ನು ಪಡೆಯುತ್ತಾ ಹೋದಳು. ದಾಖಲೆಗಳಲ್ಲಿ ಅಹಲ್ಯಾಬಾಯಿಗೆ ರಾಜಕೀಯ ಶಿಕ್ಷಣ ಕೊಟ್ಟಿರುವ ಯಾವುದೇ ಉಲ್ಲೇಖಗಳಿಲ್ಲ. ಆದಾಗ್ಯು ಹೊಳ್ಕರ್ ರಾಜ್ಯದ ಪತ್ರವ್ಯವಹಾರವನ್ನು ಗಮನಿಸಿದಾಗ ಇವರ ರಾಜಕೀಯ ನೈಪಣ್ಯತೆ ಎದ್ದು ಕಾಣುತ್ತದೆ.[೧೫]. 1754 ಸಿ.ಇ. ಯಿಂದ ಮಲ್ಹರಾ ರಾವ್ ನಡೆಸಿದ ಪತ್ರವ್ಯವಹಾರದಿಂದ(ಮರಾಠಿಯಿಂದ ಅನುವಾದಿಸಲಾಗಿದೆ) , ಅಹಲ್ಯಾಬಾಯಿ ಅವರು ಖಂಡೇ ರಾವ್ ಅವರೊಂದಿಗೆ ಅನೇಕ ಪತ್ರಗಳನ್ನು ಬರೆದಿದ್ದು ರಾಜಕೀಯವಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಮತ್ತು ಮಾರ್ಗದರ್ಶನ ಪಡೆದಿದ್ದು ಕಾಣಿಸುತ್ತದೆ. ತನ್ನ ವೈವಾಹಿಕ ಜೀವನದುದ್ದಕ್ಕೂ ತನ್ನ ಅತ್ತೆಯಾದ ಗೌತಮಾ ಬಾಯಿಯ ಆದರ್ಶ ಗುಣಗಳನ್ನು ಮೈದುಂಬಿಕೋಂಡಿದ್ದಳು. ಅಂತಿಮವಾಗಿ 1759 ರಲ್ಲಿ ಇವರ ಖಾಸಗಿ ಜಾಗೀರ್ ಅನ್ನು ಹಸ್ತಾಂತರಿಸಿದರು.[೧೬][೧೭]
1765 ರಲ್ಲಿ ಮಲ್ಹಾರ್ ರಾವ್ ಅವರಿಗೆ ಬರೆದ ಪತ್ರವು ಅವಳನ್ನು ಗ್ವಾಲಿಯರ್ಗೆ ಬೃಹತ್ ಫಿರಂಗಿಗಳೊಂದಿಗೆ ಮಿಲಿಟರಿ ದಂಡಯಾತ್ರೆಗೆ ಕಳುಹಿಸುವಾಗ ಅವಳ ಸಾಮರ್ಥ್ಯದಲ್ಲಿ ಅವನು ಹೊಂದಿದ್ದ ನಂಬಿಕೆಯನ್ನು ವಿವರಿಸುತ್ತದೆ:
" ...ಚಂಬಲ್ ದಾಟಿದ ನಂತರ ಗ್ವಾಲಿಯರ್ಗೆ ಮುಂದುವರಿಯಿರಿ. ನೀವು ನಾಲ್ಕೈದು ದಿನಗಳ ಕಾಲ ಅಲ್ಲಿ ನಿಲ್ಲಬಹುದು. ನಿಮ್ಮ ದೊಡ್ಡ ಫಿರಂಗಿಗಳನ್ನು ಇರಿಸಿಕೊಳ್ಳಿ ಮತ್ತು ಅದರ ಮದ್ದುಗುಂಡುಗಳನ್ನು ಸಾಧ್ಯವಾದಷ್ಟು ವ್ಯವಸ್ಥೆ ಮಾಡಿ ... ದೊಡ್ಡ ಫಿರಂಗಿಗಳನ್ನು ಗ್ವಾಲಿಯರ್ನಲ್ಲಿ ಇರಿಸಬೇಕು ಮತ್ತು ನೀವು ಒಂದು ತಿಂಗಳ ಕಾಲ ವೆಚ್ಚಗಳಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಿದ ನಂತರ ಮುಂದುವರಿಯಬೇಕು, ನೀವು ರಸ್ತೆಯ ರಕ್ಷಣೆಗಾಗಿ ಮಿಲಿಟರಿ ಪೋಸ್ಟ್ಗಳನ್ನು ಸ್ಥಾಪಿಸಬೇಕು.
ಈ ಪತ್ರವು ಅಹಲ್ಯಾಬಾಯಿ ಮಿಲಿಟರಿ ತರಬೇತಿಯನ್ನು ಮಾತ್ರವಲ್ಲ, ನಾಗರಿಕ ಮತ್ತು ಮಿಲಿಟರಿ ವ್ಯವಹಾರಗಳನ್ನು ನಡೆಸಲು ಸಾಕಷ್ಟು ಸಮರ್ಥಳಾಗಿದ್ದಳು ಎಂದು ಸ್ಪಷ್ಟವಾಗಿ ತೋರಿಸುತ್ತದೆ. 1765 ಸಿ.ಇ.ಯಲ್ಲಿ ಅಹ್ಮದ್ ಶಾ ದುರಾನಿ ಪಂಜಾಬ್ ಮೇಲೆ ದಾಳಿ ಮಾಡಿದಾಗ, ಮಲ್ಹಾರ್ ರಾವ್ ದೆಹಲಿಯಲ್ಲಿ ಅಬ್ದಾಲಿ-ರೊಹಿಲ್ಲಾ ಸೈನ್ಯದ ವಿರುದ್ಧ ಹೋರಾಡಲು ನಿರತರಾಗಿದ್ದರು. ಅದೇ ಸಮಯದಲ್ಲಿ, ಅಹಲ್ಯಾಬಾಯಿ ಗೋಹಾಡ್ ಕೋಟೆಯನ್ನು ವಶಪಡಿಸಿಕೊಂಡರು (ಗ್ವಾಲಿಯರ್ ಬಳಿ) [೧೮]
ಪತಿ ಖಂಡೆರಾವ್ ನಿಧನ
[ಬದಲಾಯಿಸಿ]1754 ಸಿ.ಇ ಯಲ್ಲಿ, ಇಮಾದ್-ಉಲ್-ಮುಲ್ಕ್ ಮತ್ತು ಮೊಘಲ್ ಚಕ್ರವರ್ತಿ ಅಹ್ಮದ್ ಷಾ ಬಹದ್ದೂರ್ ಅವರ ಸೇನಾಪತಿ ಮೀರ್ ಬಕ್ಷಿ ಅವರ ಬೆಂಬಲದ ಕೋರಿಕೆಯ ಮೇರೆಗೆ ಮಲ್ಹಾರ್ ರಾವ್ ಹೋಲ್ಕರ್ ಅವರೊಂದಿಗೆ ಭರತ್ಪುರದ ಜಾಟ್ ರಾಜಾ ಸೂರಜ್ ಮಾಲ್ನ ಕುಮ್ಹೇರ್ ಕೋಟೆಯನ್ನು ಮುತ್ತಿಗೆ ಹಾಕಿದರು. ಸೂರಜ್ ಮಾಲ್ ಮೊಘಲ್ ಚಕ್ರವರ್ತಿಯ ಬಂಡಾಯಗಾರ ವಜೀರ್ ಸಫ್ದರ್ ಜಂಗ್ ಪರವಾಗಿ ನಿಂತಿದ್ದರು. ಖಂಡೇ ರಾವ್ ಯುದ್ಧದ ಸಮಯದಲ್ಲಿ ತೆರೆದ ಪಲ್ಲಕ್ಕಿಯಲ್ಲಿ ತನ್ನ ಸೈನ್ಯವನ್ನು ಪರಿಶೀಲಿಸುತ್ತಿದ್ದಾಗ ಜಾಟ್ ಸೈನ್ಯದಿಂದ ಗುಂಡು ಹಾರಿಸಿದ ಫಿರಂಗಿ ಗುಂಡು ಅವನ ಸಾವಿಗೆ ಕಾರಣವಾಯಿತು. [೧೯] ತನ್ನ ಗಂಡನ ಮರಣದ ನಂತರ, ಅಹಲ್ಯಾಬಾಯಿಯನ್ನು ಅವಳ ಮಾವ ಸತಿ ಪದ್ದತಿಯಂತೆ ಜೀವ ಕಳೆದುಕೊಳ್ಳುವುದನ್ನು ತಡೆದರು. ಪತಿಯ ಮರಣದ ನಂತರ, ಮಲ್ಹಾರ್ ರಾವ್ ಹೋಳ್ಕರ್ ಅವರಿಂದ ಕದನ ವ್ಯವಹಾರಗಳಲ್ಲಿ ಹೆಚ್ಛು ತೊಡಗಿಸಿಕೊಂಡು ಅದರಲ್ಲಿ ಪರಿಣಿತಿ ಸಾಧಿಸಿದರು. [೨] [೨೦][೨೧]
ಈ ಸಮಯದಲ್ಲಿ ಮಲ್ಹಾರ್ ರಾವು ಮಾಡಿದ ವಿನಂತಿಯು ಹೊಳ್ಕರ್ ಸ್ಟೇಟ್ ದಾಖಲೆಗಳಲ್ಲಿ ಈ ರೀತಿ ಇದೆ.
"ಮಗಳೇ, ನನ್ನ ಮಗ ನನ್ನ ವೃದ್ಧಾಪ್ಯದಲ್ಲಿ ನನಗೆ ಆಸರೆಯಾಗುತ್ತಾನೆ ಎಂಬ ಭರವಸೆಯಿಂದ ಬೆಳೆಸಿದ ನನ್ನನ್ನು ತೊರೆದು ಹೋದನು, ಈಗ ನೀನು ಸಹ ಮುದುಕನನ್ನು ಒಬ್ಬಂಟಿಯಾಗಿ ಬಿಡುವೆಯಾ? ... ನೀನೂ ಸಹ ಯಾವುದೇ ಬೆಂಬಲವಿಲ್ಲದೆ ನನ್ನನ್ನು ಬಿಡುವುದೇ?
ಪಾಣಿಪತ್ ಕದನದ ನಂತರ
[ಬದಲಾಯಿಸಿ]1761 ಸಿ.ಇ. ಮೂರನೆಯ ಪಾಣಿಪತ್ ಯುದ್ಧದಲ್ಲಿ ಮರಾಠರ ಸೊಲಿನಿಂದ ದ್ರುತಿಗೆಡದೆ ಸುಬೇದಾರ್ ಮಲ್ಹಾರ್ ರಾವ್ ಹೊಳ್ಕರ್ ಉತ್ತರ ಮತ್ತು ಮಧ್ಯ ಭಾರತದಲ್ಲಿ ಮರಾಠರ ಪ್ರಾಬಲ್ಯವನ್ನು ಮರು ಸ್ಥಾಪಿಸಲು ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದನು. ಪೇಶ್ವೇ ಮನೆಯು ಗೃಹಕಲಹದಿಂದ ವಿಭಜನೆಯಾಗಿತ್ತು. ಹೈದರಾಬಾದಿನ ನಿಜಾಮ ಈ ಪರಿಸ್ಥಿತಿಯ ಲಾಭ ಪಡೆಯಲು ಪ್ರಯಲೆತ್ನಿಸುತ್ತಿದ್ದ. ಮಲ್ಹಾರ್ ರಾವ್ನ ಬಹುತೇಕ ಎಲ್ಲಾ ವೀರ ಯೋಧರು ಪಾಣಿಪತ್ ಮೈದಾನದಲ್ಲಿ ಪ್ರಾಣತೆತ್ತಿದ್ದರು. ನವ ಯುವಕರನ್ನು ನಿಜಾಮನು ಜಹಗೀರು ಕೊಡುವ ಭರವಸೆಯಿಂದ ಆಮಿಷಕ್ಕೆ ಒಳಗಾಗಿದ್ದರು. ಇಂಥ ದುರಿತ ಕಾಲದಲ್ಲಿ ಮಲ್ಹಾರ್ ರಾವ್ ಉತ್ತರದಲ್ಲಿ ಮರಾಠಾ ಪ್ರಾಬಲ್ಯವನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾದರು, ಎರಡನೆ ಮಾಧವ ರಾವ್ ಪೇಶ್ವೆ ಅಡಿಯಲ್ಲಿ ಯುವ ಮರಾಠರನ್ನು ಒಗ್ಗೂಡಿಸಿದರು. ಈ ಪ್ರಯತ್ನದಲ್ಲೇ, ಅವರು 20 ಮೇ 1766 ಸಿ.ಇ. ಆಲಂಪುರದಲ್ಲಿ ನಿಧನರಾದರು [೨೨].
ಆಳ್ವಿಕೆ
[ಬದಲಾಯಿಸಿ]ಮಲ್ಹಾರ್ ರಾವ್ ಅವರ ಮೊಮ್ಮಗನಾದ ಖಂಡೇ ರಾವ್ ಅವರ ಏಕೈಕ ಪುತ್ರ ಮಾಲೆ ರಾವ್ ಹೋಳ್ಕರ್ 1766 ಸಿ.ಇ. ರಲ್ಲಿ ಪೇಶ್ವೆಗೆ ನಿಷ್ಠಾವಂತ ಸೇವೆಯನ್ನು ಸಲ್ಲಿಸುವ ಷರತ್ತಿನ ಮೇಲೆ ಮಾಳ್ವಪ್ರಾಂತ್ಯದ ಪೂರ್ಣ ಅಧಿಕಾರದೊಂದಿಗೆ ತನ್ನ ಕೆಲವೊಂದು ಪ್ರಾಂತ್ಯವನ್ನು ಮರಾಠ ಸಾಮ್ರಜ್ಯಕ್ಕೆ ಬಿಟ್ಟುಕೊಟ್ಟು 23 ಆಗಸ್ಟ್ 1766 ರಂದು ಪೇಶ್ವೆಯಿಂದ ಇಂದೋರ್ನ ಆಡಳಿತಗಾರರಾದರು. ಅಧಿಕಾರ ಸ್ವೀಕರಿಸಿದಾಗ ಅವರಿಗೆ 21 ವರ್ಷ ವಯಸ್ಸಿನವರಾಗಿದ್ದರು [೨೩]. ಮಾಲೆ ರಾವ್ ಅಲ್ಪಕಾಲ ಅಧಿಕಾರದಲ್ಲಿ ಇದ್ದರು 8 ತಿಂಗಳ ಆಳ್ವಿಕೆಯ ನಂತರ 5 ಏಪ್ರಿಲ್ 1767 ರಂದು ಅವರು ನಿಧನರಾದರು [೨೪].
ತುಕೋಜಿ ರಾವ್ ಹೋಳ್ಕರ್ (ಮಲ್ಹಾರ್ ರಾವ್ ಅವರ ದತ್ತು ಮಗ) ನಂತರ 16,62,000 ರೂಪಾಯಿಗಳನ್ನು ವಾರ್ಷಿಕವಾಗಿ ಕಪ್ಪಕೊಡುವ ಒಪ್ಪಂದದ ಮೂಲಕ ಮಾಳ್ವದ ಸುಬೇದಾರ್ ಪಟ್ಟವನ್ನು ವಹಿಸಿಕೋಂಡರು. ಅವರು ಮೊದಲಿನಂತೆ ಮರಾಠರ ಎಲ್ಲಾ ಕದನಗಳಲ್ಲಿ ಪೇಶ್ವೆಯ ಜೊತೆ ಕಾದಬೇಕು ಎಂದು ಒಪ್ಪಂದವಾಯಿತು. ಹಾಗಗಿ ರಾಜ್ಯದ ಆಡಳಿತವನ್ನು ಅಹಲ್ಯಾಬಾಯಿ ವಹಿಸಿಕೋಳ್ಳಬೇಕಾಯಿತು[೨೫].
ಜವಾಭ್ದಾರಿ ವಹಿಸಿಕೊಳ್ಳುತಿದ್ದಾಗಲೇ ನೆರೆಯ ರಾಜ್ಯಗಳಿಂದ ದಂಗೆಯನ್ನು ಎದುರಿಸಿಬೇಕಾಯಿತು ಎಂದು ರಾಜ್ಯದ ದಾಖಲೆಗಳು ತೋರಿಸುತ್ತವೆ. ಪ್ರಮುಖವಾಗಿ ಜೈಪುರದ ಚಂದ್ರಾವಂತನಿಂದ. ಉದಯೋನ್ಮುಖ ಸುಬೇದಾರ ತುಕೋಜಿ ರಾವ್ ಹೋಳ್ಕರ್ ಮಾಳ್ವಪ್ರಾಂತ್ಯದ ಹೊರಾಟದಿಂದ ಹೊರಗಿದ್ದರು. ಪೇಶ್ವೆಯ ಅಡಿಯಲ್ಲಿ ವಿವಿಧ ಪ್ರಾಂತ್ಯದಲ್ಲಿ ಕದನವನ್ನು ಮಾಡುವ ಅನಿವರ್ಯತೆ ಇತ್ತು. ಪಾಣಿಪತ್ ಯುದ್ದದ ಭೀಕರ ಪರಿಣಾಮದಿಂದ ಪ್ರತಿಯೊಂದು ಮರಾಠನ ಮನೆಯು ಜರ್ಜರಿತವಾಗಿತ್ತು. ಕದನದಲ್ಲಿ ಪ್ರತಿಯೊಂದು ಮನೆಯು ಒಬ್ಬ ಮಗನನ್ನು ಕಳೆದುಕೋಂಡಿತ್ತು. ಸಾಮ್ರ್ಯಜ್ಯವನ್ನು ಮರು ನಿರ್ಮಿಸಲು ಪೇಶ್ವೆಯು ಶ್ರಮಿಸುತ್ತಿದ್ದನು. ದೇವಿ ಅಹಲ್ಯಾಬಾಯಿ ಆ ಎಲ್ಲಾ ಹಂತಗಳಲ್ಲಿ ತನ್ನ ಸ್ವಂತ ಅನುಭವದಿಂದ ಅನುದಾನರಹಿತ ಸಂಪನ್ಮೂಲಗಳಿಂದ ಮತ್ತು ನೈತಿಕತೆಯ ಆಧಾರದ ಮೇಲೆ ಹೋರಾಡುತಿದ್ದಳು. ಪ್ರತಿಯೋಂದು ಕದನದಲ್ಲೂ ಅವಳು ವಿಜಯಶಾಲಿಯಾದಳು [೨೬] [೨೭] [೨೮]. ವ್ಯಯಕ್ತಿಕ ಜೀವನವು ಸುಖಕರವಾಗಿರಲಿಲ್ಲ ರಾಜ್ಯ ದಾಖಲೆಗಳ ಪ್ರಕಾರ 1780 ಸಿ.ಇ. ಯಲ್ಲಿ ಮಗಳಾದ ಮುಕ್ತಾಬಾಯಿ ಅವರ ಪತಿಯ ಮರಣದ ನಂತರ ಅವರ 16 ವರ್ಷದ ಮಗನನ್ನು ಇವರ ಮಡಿಲಿಗೆ ಒಪ್ಪಿಸಿ ಸತಿ ಪದ್ದತಿಯಂತೆ ಮರಣ ಹೊಂದಿದಳು [೨೯]
ಆಡಳಿತ
[ಬದಲಾಯಿಸಿ]ಆ ಕಾಲದಲ್ಲಿ, ರಾಜ್ಯದ ಆಡಳಿತವು ಮಿಲಿಟರಿ ಮತ್ತು ನಾಗರಿಕ ಎಂಬ ವಿಭಾಗಗಳಾಗಿತ್ತು. ಸೈನಿಕ ಭಾಗವು ಮತ್ತೆ ಇಬ್ಭಾಗತ್ತು, ತುಕೋಜಿ ರಾವ್ ಹೋಳ್ಕರ್ ಅವರು ಸುಬೇದಾರರಾಗಿದ್ದರು ಮತ್ತು ಅವರು ಮರಾಠ ಸಾಮ್ರಾಜ್ಯದ ಸೇವೆಗೆ ನಿಲ್ಲಬೇಕಾಯಿತು. ಆದರೆ ದೇವಿ ಅಹಲ್ಯಾಬಾಯಿ ಅಂತರಿಕ ಮತ್ತು ಪ್ರಾಂತ್ಯದ ರಕ್ಷಣೆಗೆ ನಿಲ್ಲಬೇಕಾಯಿತು. ಅವಳು " ನಾನು ಮಲ್ಹಾರ್ ರಾವ್ ಅವರ ಸೊಸೆ " ಎಂದು ನಿರುಪಿಸಿದಳು. ಮಲ್ಹಾರ್ ರಾವ್ ಅವರು ಸ್ಥಾಪಿಸಿದ ಸರಂಜಾಮು ವ್ಯವಸ್ಥೆಯು ಸಮರ್ಥವಾಗಿತ್ತು ಮತ್ತು ಪುನಾ ಅಧಿಕಾರಿಗಳಿಂದ ಅನುಮೋದಿಸಲ್ಪಟ್ಟಿತ್ತು. ಸರಂಜಾಮು ಎಂದರೆ "ಶಿಬಿರದೊಳಗಿನ ಶಿಬಿರ". ಇದು ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದನ್ನು ದೇವಿ ಅಹಲ್ಯಾಬಾಯಿ ಯವರ ರಾಜತಾಂತ್ರಿಕ ಮತ್ತು ಆಡಳಿತ ಕೌಶಲ್ಯಗಳನ್ನು ರಾಜ್ಯದ ದಾಖಲೆಗಳು ಅನೈಚ್ಛಿಕವಾಗಿ ಬಹಿರಂಗಪಡಿಸುತ್ತವೆ. [೩೦] ನ್ಯಾಯದ ಆಡಳಿತವು [೩೧] ಮೃದುವಾಗಿದ್ದರೂ ವೇಗವಾಗಿತ್ತು, ಪ್ರಾಯೋಗಿಕವಾಗಿದ್ದರು ಆಧ್ಯಾತ್ಮಿಕವಾಗಿಯೂ, ಸಂಯಮದಿಂದ ಕೂಡಿದ್ದುಗಿ ದಾಖಲೆಗಳು ತೊರಿಸುತ್ತದೆ. ಮಾಳ್ವ ಮತ್ತು ಪೇಶ್ವೇಯವರ ನಡುವಿನ ಪತ್ರವ್ಯವಹಾರದಲ್ಲಿ ಇದನ್ನು ನಾವು ಕಾಣಬಹುದು.
ದಾನ ಮತ್ತು ದತ್ತಿಗಳು
[ಬದಲಾಯಿಸಿ]ಹೋಳ್ಕರ್ ಕುಟುಂಬವು ತಮ್ಮ ವೈಯಕ್ತಿಕ ಮತ್ತು ಕುಟುಂಬದ ಖರ್ಚುಗಳನ್ನು ಪೂರೈಸಲು ಸಾರ್ವಜನಿಕ ಹಣವನ್ನು ಬಳಸುತ್ತಿರಲಿಲ್ಲ. ಅವರ ಕುಟುಂಬದ ಆಸ್ತಿಯನ್ನು ಅಂದರೆ ತಮ್ಮ ಖಾಸಗಿ ಆಸ್ತಿಯ ಮೂಲಕ ದಾನ ಮತ್ತು ದತ್ತಿಗಳನ್ನು ಕೊಟ್ಟರು. ಅಹಲ್ಯಾಬಾಯಿ ಆ ಸಮಯದಲ್ಲಿ ಹದಿನಾರು ಕೋಟಿ ರೂಪಾಯಿಗಳನ್ನು (ತಮ್ಮ ವೈಯಕ್ತಿಕ ಹಣವನ್ನು) ಪಿತ್ರಾರ್ಜಿತವಾಗಿ ಪಡೆದಿದ್ದರು [೩೨]. ದೇವಿ ಅಹಲ್ಯಾಬಾಯಿ ತನ್ನ ಪ್ರಾಂತ್ಯದಲ್ಲಿ ಮಾತ್ರವಲ್ಲದೆ ಅಖಂಡ ಭರತಖಂಡದಾದ್ಯಂತ ಮಾಡಿದ ದತ್ತಿಗಳು ತುಂಬಾ ಪ್ರಸಿದ್ಧವಾಗಿವೆ. ಇದನ್ನು "ಹೋಳ್ಕರ್ ಸರ್ಕಾರವು 1923 ರ ದೇವಸ್ತಾನ ವರ್ಗೀಕರಣ ಪಟ್ಟಿ" ಯಲ್ಲಿ ವೆಚ್ಚದ ವಿವರಣೆಯನ್ನು ದಾಖಲಿಸಿದ್ದನ್ನು ಕಾಣಬಹುದು[೩೩]. ಹೋಳ್ಕರ್ ಸರ್ಕಾರವು ಈ ಕಾರ್ಯಕ್ಕೆ "ದೇವಸ್ಥಾನ ಅಧಿಕಾರಿ" ಗಳನ್ನು ನೇಮಿಸಿತು. ಅವರು ದೂರ ದೂರದ ಶ್ರದ್ಧಾ ಕೇಂದ್ರಗಳಿಗೆ ಪ್ರಯಾಣಿಸಿದರು ಮತ್ತು ಸ್ಥಳದಲ್ಲೇ ಮಾಹಿತಿಯನ್ನು ಸಂಗ್ರಹಿಸಿ ಅಗತ್ಯಕ್ಕೆ ತಕ್ಕಂತೆ ಅನುದಾನಗಳನ್ನು ಕೊಟ್ಟಾರು [೩೪].
ಎಲ್ಲಾ ಪವಿತ್ರ ಸ್ಥಳಗಳಲ್ಲಿ ದೇವಿ ಅಹಲ್ಯಾ ಮಾಡಿದ ವ್ಯವಸ್ಥೆಗಳನ್ನು ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ
ಜ್ಯೋತಿರ್-ಲಿಂಗಗಳೊಂದಿಗೆ ಸಂಪರ್ಕ ಹೊಂದಿದ ದತ್ತಿಗಳು [೩೫]
Sl No | Name of the Linga | Geographical
situation. |
Description of
eharity. |
Authority for
statement. |
1 | Shree Somanath | Kathiawad, on the sea side. | In 1786 A. D. The idol was re-installed | Maheshwar Durbar Batmipatre.
Part II, P.87 |
2 | Shree Mallikarjuna. | Dist. Karnul Madras Presidency. | Temple was built. | State Record. |
3 | Shree Onkareshwar. | Central India (on the Narbada bank.) | House for Drums, Flower-garden, Palanquin, Boat,
Silver-idol |
State Record. |
4 | Shree Vaijnath. | Nizam’s State | In 1784 A. D. The temple was re-built. | Bharat Itihasa Shanshodliak Mandal Report
Shak 1834, Bhadrapad Number. |
5 | Shree Nagnath. | Nizam’s State | In 1784 A, D.
Annual payment of Rs. 81/- for 1 worship. |
State Record. |
6 | Shree Vishwanath | Benares | (1) Mankarnikaghat
(2) Re-installation of Kashi- Vishwanath. (3) 6 Private temples. (4) Temple of the Ganges and 3 temples on the Ghat. (5) Shree Tarkeshwar temple. (6) Dashaswarnedha Ghat. (7) Female Mankarnika Ghat. (8) Dharmashala Rameshwar. (9) Dharmashala Kapildhara. (10) 9 Private Bungalows. (11) Garden-field. (12) Plinth on Shitala Ghat. (13) Dharmashala Uttar Kashi. (14) Establishment ofBramha-puri. |
State Record. |
7 | Shree Trimbakeshwar. | Nasik District. | Bridge of Kushawarta-Ghat | State Record. |
8 | Shree Ghirishneshwar | Verul Nizam’s State | Re-built Shivalaya Tirth. | Bharat I.S.M. R. Shak 1838, |
Shree Gokarna. | On the Western sea. Madras Presidency. | (1) Alms-House. | State Record. | |
Shree Mahakaleshwar | Ujjain (Central India) | Worship of the Linga on the Mahashivratra night, and food distribution on the day following. | State Record. | |
Shree Rameshwar | Madras Presidency. | Alms-House. Wells. Shree Radha-Krishna temple. | State Record. | |
Shree Bhima-Shankar | Bombay Presidency. | Alms-House, | State Record. |
ಸಪ್ತ ಪುರಿ ಮತ್ತು ಚಾರ್ ಧಾಮ್
[ಬದಲಾಯಿಸಿ]ಸಪ್ತ ಪುರಿ (ಏಳು ನಗರಗಳು) ಮತ್ತು ಚಾರ್ ಧಾಮ್ (ನಾಲ್ಕು ಭಾಗಗಳು)ಗಳು ಎಲ್ಲಾ ಜಾತಿ ಮತ್ತು ಪಂಥಗಳ ಆರಾಧನೆ ಮತ್ತು ತೀರ್ಥಯಾತ್ರೆಯ ಶ್ರದ್ದಾ ಕೆಂದ್ರಗಳು. ಇದರ ಸಮಗ್ರ ಅಭಿವ್ರುದ್ದಿ ಅಹಲ್ಯಾ ಬಾಯಿಯ ಉದ್ದೇಶ ಮತ್ತು ಸಾಧನೆಯಾಗಿದೆ[೩೬]. ಇದರ ವಿವರಗಳು ಇಂತಿವೆ
ದ್ವಾರಕಾ : ಅವಳು ಆಲೆಮನೆಯನ್ನು ಕಟ್ಟಿದಳು
ಉಜ್ಜಯಿನಿ (ಅವಂತಿಕಾ) : ಆಕೆ ನಾಲ್ಕು ಮಂದಿರ ಮತ್ತು ದತ್ತಿ ಕಟ್ಟಡವನ್ನು ನಿರ್ಮಿಸಿದಳು
ಕಾಂಚೀಪುರಂ : ಗಂಗಾಜಲವನ್ನು ವಾರ್ಷಿಕವಾಗಿ ಕಳುಹಿಸಲಾಗುತ್ತದೆ
ಮಥುರಾ : ಅವಳು ಮಂದಿರ 2 ಘಾಟ್ ಮತ್ತು ಒಂದು ದತ್ತಿ ಕಟ್ಟಡವನ್ನು ನಿರ್ಮಿಸಿದಳು
ಅಯೋಧ್ಯೆ : ಅವಳು 4 ರಾಮಮಂದಿರ ಮತ್ತು 3 ದತ್ತಿ ಕಟ್ಟಡಗಳನ್ನು ನಿರ್ಮಿಸಿದಳು
ಹರಿದ್ವಾರ(ಮಾಯಾ) : ಒಂದು ಘಾಟ್ ಮತ್ತು ದತ್ತಿ ಮನೆ
ವಾರಣಾಸಿ : ಮೇಲಿನ ಕೋಷ್ಟಕವನ್ನು ನೋಡಿ
ಬದರಿನಾಥ : 5 ಧರ್ಮಶಾಲೆಗಳು ಮತ್ತು ಎಂಟು ದತ್ತಿ ಕಟ್ಟಡಗಳು
ಜಗನಾಥ (ಪುರಿ) : ದೇವಸ್ಥಾನ, ಆಲ್ಮಹೌಸ್ ಮತ್ತು ಉದ್ಯಾನ ಭೂಮಿ
ಸಾರಂಶ
[ಬದಲಾಯಿಸಿ]ಭರತಖಂಡದ ಉದ್ದಗಲಕ್ಕೂ ದೇವಿ ಅಹಲ್ಯಾಬಾಯಿಯ ವಿವಿಧ ದತ್ತಿಗಳನ್ನು ನಾವು ಇಲ್ಲಿ ನೋಡುತ್ತೇವೆ. ಹೋಲ್ಕರ್ ಸ್ಟೇಟ್ ಹಿಸ್ಟರಿ ಸಂಪುಟದಲ್ಲಿ. II ಜೀವನ ಮತ್ತು ಜೀವನ-ದೇವಿ ಶ್ರೀ ಅಹಲ್ಯಾಬಾಯಿ (1725-1795 AD) ಪುಟ 42 ಪೂಜಾ ವೆಚ್ಚಗಳಿವೆ [೩೭]
ಆಕೆಯ ಕಾಲದಲ್ಲಿ ನಿರ್ಮಿಸಲಾದ ವಿವಿಧ ದೇವಾಲಯಗಳು ಘಾಟ್ಗಳು ಮತ್ತು ವಿಶ್ರಾಂತಿ ಗೃಹಗಳು ಭಾರತೀಯ ವಾಸ್ತುಶಿಲ್ಪ ಮತ್ತು ವಿವಿಧ ಶಾಲೆಗಳ ವಿವಿಧ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತವೆ. ಅವರು ಯುವ ಭಾರತೀಯ ವಾಸ್ತುಶೈಲಿಗೆ ಹಲವು ತರಬೇತಿ ಮೈದಾನಗಳಾದರು. ಅವಳ ಭೂಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ. ದೇವಿ ಅಹಲ್ಯಾಬಾಯಿ ಚಾರಿಟಿಯ ಅಂಶಗಳು ತೀರ್ಥಗಳು ಮತ್ತು ಕ್ಷೇತ್ರಗಳ ಪುನರುಜ್ಜೀವನವನ್ನು ಬಹಿರಂಗಪಡಿಸುತ್ತವೆ.
-
ಪ್ರಸ್ತುತಕಾಶಿ ವಿಶ್ವನಾಥ ದೇವಾಲಯವನ್ನು1780 ರಲ್ಲಿ ಅಹಲ್ಯಾಬಾಯಿ ನಿರ್ಮಿಸಿದರು.
-
ಬಿಹಾರದ ಗಾಯದವಿಷ್ಣುಪಾದ್ ದೇವಾಲಯದಪ್ರಸ್ತುತ ರಚನೆಯನ್ನು 1787 ರಲ್ಲಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ನಿರ್ಮಿಸಿದ್ದಾರೆ
-
ಅಹಲ್ಯಾ ಘಾಟ್,ವಾರಣಾಸಿ
-
ವಾರಣಾಸಿಯಲ್ಲಿಮಣಿಕರ್ಣಿಕಾ ಘಾಟ್
ಸಾವು
[ಬದಲಾಯಿಸಿ]ಅಹಲ್ಯಾಬಾಯಿ 13 ಆಗಸ್ಟ್ 1795 ರಂದು 70 ನೇ ವಯಸ್ಸಿನಲ್ಲಿ ನಿಧನರಾದರು. ಅಹಲ್ಯಾಬಾಯಿಯ ನಂತರ ಆಕೆಯ ಸೋದರಳಿಯ, ತುಕೋಜಿ ರಾವ್ ಹೋಳ್ಕರ್ ಅವರು 1797 ರಲ್ಲಿ ತಮ್ಮ ಮಗ ಕಾಶಿ ರಾವ್ ಹೋಳ್ಕರ್ ಪರವಾಗಿ ಸಿಂಹಾಸನವನ್ನು ತ್ಯಜಿಸಿದರು.
ಪರಂಪರೆ
[ಬದಲಾಯಿಸಿ]
"The reign of Ahilyabai, of Indore in central India, lasted for thirty years. This has become almost legendary as a period during which perfect order and good government prevailed and the people prospered. She was a very able ruler and organizer, highly respected during her lifetime, and considered as a saint by a grateful people after her death."
"For thirty years her reign of peace,
The land in blessing did increase;
And she was blessed by every tongue,
By stern and gentle, old and young.
Yea, even the children at their mother's feet,
Are taught such homely rhyming to repeat.
In latter days from Brahma came,
To rule our land, a noble Dame,
Kind was her heart and bright her fame,
And Ahilya was her honored name."
1820 ರ ದಶಕದಲ್ಲಿ ಅವರ ನೆನಪುಗಳನ್ನು ಸಂಗ್ರಹಿಸುವಾಗ, ಮಧ್ಯ ಭಾರತದ 'ವಸಾಹತು' ದ ಬಗ್ಗೆ ಹೆಚ್ಚು ನೇರವಾಗಿ ಕಾಳಜಿವಹಿಸುವ ಬ್ರಿಟಿಷ್ ಅಧಿಕಾರಿ ಸರ್ ಜಾನ್ ಮಾಲ್ಕಮ್ ಇವರ ಕಾರ್ಯದ ಬಗ್ಗೆ ಹೆಚ್ಛು ಪ್ರಭಾವಿತರಾಗಿದ್ದರು.
"Ahilyabai's extraordinary ability won her the regard of her subjects and of the other Maratha confederates, including Nana Phadnavis. With the natives of Malwa ... her name is sainted and she has styled an avatar or Incarnation of the Divinity. In the soberest view that can be taken of her character, she certainly appears, within her limited sphere, to have been one of the purest and most exemplary rulers that ever existed."
"This great ruler in Indore encouraged all within her realm to do their best, Merchants produced their finest clothes, trade flourished, the farmers were at peace and oppression ceased, for each case that came to the queen's notice was dealt with severely. She loved to see her people prosper, and to watch the fine cities grow, and to watch that her subjects were not afraid to display their wealth, lest the ruler should snatch it from them. Far and wide the roads were planted with shady trees, and wells were made, and rest-houses for travelers. The poor, the homeless, the orphaned were all helped according to their needs. The Bhils who had long been the torment of all caravans were routed from their mountain fastnesses and persuaded to settle down as honest farmers. Hindu and Musalman alike revered the famous Queen and prayed for her long life. Her last great sorrow was when her daughter became a Sati upon the death of Yashwantrao Phanse. Ahalya Bai was seventy years old when her long and splendid life closed. Indore long mourned its noble Queen, happy had been her reign, and her memory is cherished with deep reverence unto this day."
"From the original papers and letters, it becomes clear that she was the first-class politician, and that was why she readily extended her support to Mahadji Shinde. I have no hesitation in saying that without the support of Ahilyabai, Mahadji would never have gained so much importance in the politics of northern India."
"Definitely no woman and no ruler are like Ahilyabai Holkar."
"It reveals beyond doubt that all ideal virtues described by Plato and Bhattacharya were present in her personalities like Dilip, Janak, Shri Ram, Shri Krishna, and Yudhishthir. After thorough scrutiny of the long history of the world, we find only one personality of Lokmata Devi Ahilya that represents an absolutely ideal ruler."
ಜಾನ್ ಕೀ ಅವಳನ್ನು 'ದಿ ಫಿಲಾಸಫರ್ ಕ್ವೀನ್' ಎಂದು ಕರೆದರು, ಬಹುಶಃ ಇದು ' ಫಿಲಾಸಫರ್ ಕಿಂಗ್ ' ಭೋಜ್ ಅನ್ನು ಉಲ್ಲೇಖಿಸುತ್ತದೆ.
"Ahilyabai Holkar, the 'philosopher-queen' of Malwa, had evidently been an acute observer of the wider political scene. In a letter to the Peshwa in 1772, she had warned against association with the British and likened their embrace to a bear-hug: "Other beasts, like tigers, can be killed by might or contrivance, but to kill a bear it is very difficult. It will die only if you kill it straight in the face, Or else, once caught in its powerful hold, the bear will kill its prey by tickling. Such is the way of the English. And in view of this, it is difficult to triumph over them." |
25 ಆಗಸ್ಟ್ 1996 ರಂದು ಭಾರತ ಗಣರಾಜ್ಯವು ಅವಳ ಗೌರವಾರ್ಥವಾಗಿ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. [೩೮]
ಮಹಾನ್ ಆಡಳಿತಗಾರನಿಗೆ ಗೌರವವಾಗಿ ಇಂದೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇವಿ ಅಹಲ್ಯಾಬಾಯಿ ವಿಮಾನ ನಿಲ್ದಾಣ ಎಂದು ಹೆಸರಿಸಲಾಗಿದೆ. ಅಂತೆಯೇ, ಇಂದೋರ್ ವಿಶ್ವವಿದ್ಯಾಲಯವನ್ನು ದೇವಿ ಅಹಲ್ಯಾ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗಿದೆ. [೨]
13 ಮಾರ್ಚ್ 2024 ರಂದು, ಮಹಾರಾಷ್ಟ್ರ ರಾಜ್ಯ ಸರ್ಕಾರವು ಅಹ್ಮದ್ನಗರವನ್ನು ಅಹಲ್ಯಾನಗರ ಎಂದು ಮರುನಾಮಕರಣ ಮಾಡಲು ಅನುಮೋದಿಸಿತು. [೩೯]
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]- ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಅಹಲ್ಯಾದೇವಿ ಹೋಳ್ಕರ್ ಅವರ ಜೀವನವನ್ನು ಆಧರಿಸಿ "ಮಾತೋಶ್ರೀ" ಪುಸ್ತಕವನ್ನು ಬರೆದಿದ್ದಾರೆ [೪೦]
- ದೇವಿ ಅಹಲ್ಯಾಬಾಯಿ ಎಂಬ ಶೀರ್ಷಿಕೆಯ ಚಲನಚಿತ್ರವು 2002 ರಲ್ಲಿ ಮಲ್ಲಿಕಾ ಪ್ರಸಾದ್ ದೇವಿ ಅಹಲ್ಯಾಬಾಯಿಯಾಗಿ, ಶಬಾನಾ ಅಜ್ಮಿ ಹರ್ಕುಬಾಯಿಯಾಗಿ (ಖಂಡ ರಾಣಿ, ಮಲ್ಹಾರ್ ರಾವ್ ಹೋಳ್ಕರ್ ಅವರ ಪತ್ನಿ) ಮತ್ತು ಸದಾಶಿವ ಅಮ್ರಾಪುರ್ಕರ್ ಅವರನ್ನು ಮಲ್ಹಾರ್ ರಾವ್ ಹೋಳ್ಕರ್, ಅಹಲ್ಯಾಬಾಯಿಯ ಮಾವ ಆಗಿ ಒಳಗೊಂಡಿತ್ತು. [೪೧]
- UGC-CEC ಚಾನೆಲ್ VYAS ಗಾಗಿ ಸಾಕ್ಷ್ಯಚಿತ್ರವನ್ನು ಇಂದೋರ್ನ ಶೈಕ್ಷಣಿಕ ಮಲ್ಟಿಮೀಡಿಯಾ ಸಂಶೋಧನಾ ಕೇಂದ್ರವು ಆಕೆಯ ಜೀವನ ಮತ್ತು ಸಮಯದ ಕುರಿತು ಮಾಡಿದೆ.
- ಮಹಾರಾಷ್ಟ್ರದ ಥಾಣೆ ನಗರದಲ್ಲಿ, ಮಕ್ಕಳ ಉದ್ಯಾನವನಕ್ಕೆ ಅವರ ಹೆಸರನ್ನು 'ಅಹಲ್ಯಾದೇವಿ ಹೋಳ್ಕರ್ ಉದ್ಯಾನ' ಎಂದು ಹೆಸರಿಸಲಾಗಿದೆ. ಅಲ್ಲದೆ, ಅದೇ ನಗರದಲ್ಲಿ ಆಕೆಯ ಹೆಸರನ್ನು ರಸ್ತೆಗೆ ಹೆಸರಿಸಲಾಗಿದೆ.
- ಇಂದೋರ್ನಲ್ಲಿರುವ ವಿಮಾನ ನಿಲ್ದಾಣಕ್ಕೆ ಅವರ ಗೌರವಾರ್ಥವಾಗಿ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ ಎಂದು ಹೆಸರಿಸಲಾಗಿದೆ.
- ಮಧ್ಯಪ್ರದೇಶದ ಇಂದೋರ್ನಲ್ಲಿ ದೇವಿ ಅಹಲ್ಯಾ ವಿಶ್ವ ವಿದ್ಯಾಲಯ ಎಂಬ ಹೆಸರಿನ ಎರಡು ವಿಶ್ವವಿದ್ಯಾಲಯಗಳಿವೆ ಮತ್ತು ಮಹಾರಾಷ್ಟ್ರದ ಸೋಲಾಪುರದಲ್ಲಿ ಪುಣ್ಯಶ್ಲೋಕ ಅಹಲ್ಯಾದೇವಿ ಹೋಳ್ಕರ್ ಸೋಲಾಪುರ ವಿಶ್ವವಿದ್ಯಾಲಯವಿದೆ .
- 2006 ರಲ್ಲಿ, ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೇಖಾವತ್ ಅವರು ಸಂಸತ್ತಿನ ಗ್ರಂಥಾಲಯ ಕಟ್ಟಡದ ಆವರಣದಲ್ಲಿ ಅಹಲ್ಯಾಬಾಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
- 1994 ರ ಹಿಂದಿ TV ಸರಣಿ ದಿ ಗ್ರೇಟ್ ಮರಾಠದಲ್ಲಿ, ಅಹಲ್ಯಾಬಾಯಿಯ ಪಾತ್ರವನ್ನು ಮೃಣಾಲ್ ಕುಲಕರ್ಣಿಯವರು ಚಿತ್ರಿಸಿದ್ದಾರೆ.
- 2016 ರಲ್ಲಿ, ಆವಾಜ್: ಪುಣ್ಯಶ್ಲೋಕ ಅಹಿಲಿಬಾಯಿ ಹೋಳ್ಕರ್ ಎಂಬ ಶೀರ್ಷಿಕೆಯ ಟಿವಿ ಧಾರಾವಾಹಿಯು ಕಲರ್ಸ್ ಮರಾಠಿಯಲ್ಲಿ ಪ್ರಸಾರವಾಯಿತು, ಊರ್ಮಿಳಾ ಕೊಠಾರೆ ಅಹಿಲಿಬಾಯಿಯಾಗಿ ನಟಿಸಿದ್ದಾರೆ.
- 2021 ರಲ್ಲಿ, ಸೋನಿಯಲ್ಲಿ ಪುಣ್ಯಶ್ಲೋಕ ಅಹಲ್ಯಾಬಾಯಿ ಎಂಬ ಟಿವಿ ಧಾರಾವಾಹಿ ಪ್ರಸಾರವಾಯಿತು. ಅದಿತಿ ಜಲ್ತಾರೆ ಯುವ ಅಹಲ್ಯಾಬಾಯಿ ಪಾತ್ರವನ್ನು ನಿರ್ವಹಿಸಿದರು ಮತ್ತು ನಂತರ ಏತಾಶಾ ಸಂಸಗಿರಿ ವಯಸ್ಕ ಅಹಲ್ಯಾಬಾಯಿ ಪಾತ್ರವನ್ನು ನಿರ್ವಹಿಸಿದರು.
- ರಾಜ್ಯ ಹೆದ್ದಾರಿ 15 (ಪಶ್ಚಿಮ ಬಂಗಾಳ) ಅನ್ನು ಅಹಲ್ಯಾಬಾಯಿ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Pradesh (India), Madhya (1827). Madhya Pradesh District Gazetteers: Hoshangabad (in ಇಂಗ್ಲಿಷ್). Government Central Press. p. 64.
- ↑ ೨.೦ ೨.೧ ೨.೨ "Rani Ahilyabai Holkar". University of Indore. ಉಲ್ಲೇಖ ದೋಷ: Invalid
<ref>
tag; name "DAUniv" defined multiple times with different content - ↑ Baillie, Joanna; Spottiswoodes & Shaw. (1849) bkp CU-BANC (1849). Ahalya Baee: a poem. University of California Libraries. London, Printed for private circulation [Spottiswoodes and Shaw].
{{cite book}}
: CS1 maint: numeric names: authors list (link) - ↑ ೪.೦ ೪.೧ ೪.೨ Thombre P.v. (2007). Karanataka Devi Shree Ahilyabai Holkar. pp. 34–35.
- ↑ "Devi Ahilya Vishwavidyalaya, Indore". www.dauniv.ac.in. Retrieved 2024-07-31.
- ↑ "Maheshwar Textile Industry".
- ↑ "Devi Ahilya Vishwavidyalaya, Indore". www.dauniv.ac.in. Retrieved 2024-07-30.
- ↑ "Death Bicentenary of Ahilyabai Holkar (click for stamp information) ::: 1996-1997 » Commemorative Stamps » Stamps". www.indianphilatelics.com. Retrieved 2024-07-30.
- ↑ Khanolkar, D.D. (1979). Marathwada University Journal - Volumes 17-18 (in ಇಂಗ್ಲಿಷ್). Marathwada University. p. 67.
- ↑ Bhattacharya, Sabyasachi (2002). Education and the Disprivileged Nineteenth and Twentieth Century India (in ಇಂಗ್ಲಿಷ್). Orient BlackSwan. p. 40. ISBN 9788125021926.
- ↑ History of Madhya Pradesh: Gwalior State, Ahilyabai Holkar, Bhopal, Gohad, Aulikaras, Magrora, Bhoj Shala, Deur Kothar. Internet Archive. Books LLC. 2011-09-04. ISBN 978-1-156-49572-8.
{{cite book}}
: CS1 maint: others (link) - ↑ Thombre P.v. (2007). Karanataka Devi Shree Ahilyabai Holkar. p. 3.
- ↑ "A Divinely Gifted Queen Of Immortal Fame: Devi Ahilyabai Holkar" (in ಇಂಗ್ಲಿಷ್). Retrieved 2024-07-31.
- ↑ Thombre P.v. (2007). Karanataka Devi Shree Ahilyabai Holkar. p. 2.
- ↑ Thombre P.v. (2007). Karanataka Devi Shree Ahilyabai Holkar. p. 4.
- ↑ Nagrale, N.N. (1979). "Ahilyabai and Her Benevolent Administration". Proceedings of the Indian History Congress. 40: 700–706. JSTOR 44142013. Retrieved 2 June 2023.
- ↑ Abhang, C.J. (2018). "The Religious Policy of the Marathas in Malwa". Proceedings of the Indian History Congress. 79: 323–328. JSTOR 26906264. Retrieved 2 June 2023.
- ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. p. 4.
- ↑ Holkar, Madhusudan Rao (16 March 2021). "Khande Rao Holkar ki 267 vi Punytithi (17 March )". historyofbharat.com/. Madhusudan Rao Holkar. Archived from the original on 27 July 2022. Retrieved 27 July 2022.
- ↑ "Ahilyabai Holkar Information in English | Ahilyabai Holkar" (in ಅಮೆರಿಕನ್ ಇಂಗ್ಲಿಷ್). 2020-05-02. Retrieved 2020-05-03.[ಮಡಿದ ಕೊಂಡಿ]
- ↑ Anne Feldhaus (21 March 1996). Images of Women in Maharashtrian Literature and Religion. SUNY Press. pp. 184–. ISBN 978-0-7914-2838-2.
- ↑ Thombre P.v. (2007). Karanataka Devi Shree Ahilyabai Holkar. p. 9.
- ↑ History of Madhya Pradesh: Gwalior State, Ahilyabai Holkar, Bhopal, Gohad, Aulikaras, Magrora, Bhoj Shala, Deur Kothar. Internet Archive. Books LLC. 2011-09-04. ISBN 978-1-156-49572-8.
{{cite book}}
: CS1 maint: others (link) - ↑ History of Madhya Pradesh: Gwalior State, Ahilyabai Holkar, Bhopal, Gohad, Aulikaras, Magrora, Bhoj Shala, Deur Kothar. Internet Archive. Books LLC. 2011-09-04. ISBN 978-1-156-49572-8.
{{cite book}}
: CS1 maint: others (link) - ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. pp. 11–12.
- ↑ Thombre P.v. (2007). HOLKAR STATE HISTORY VOL. I LIFE AND LIFE'S-WORK OF SHREE DEVI AHILYA BAI HOLKAR. p. 13.
- ↑ Omkareshwar and Maheshwar: Travel Guide. Goodearth Publications. 2011. pp. 60–. ISBN 978-93-80262-24-6.
- ↑ R. V. Solomon; J. W. Bond (2006). Indian States: A Biographical, Historical, and Administrative Survey. Asian Educational Services. pp. 70–. ISBN 978-81-206-1965-4.
- ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. p. 64.
- ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. p. 95.
- ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. pp. 23–24.
- ↑ Arvind Javlekar (2002). Lokmata Ahilyabai. Ocean Books. p. 62. ISBN 978-81-88322-08-4.
- ↑ Abhang, C.J. (2018). "The Religious Policy of the Marathas in Malwa". Proceedings of the Indian History Congress. 79: 323–328. ISSN 2249-1937. JSTOR 26906264.
- ↑ https://censusindia.gov.in/nada/index.php/catalog/28391/download/31573/20_1921_HOL.pdf
- ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. p. 34.
- ↑ Thombre P.v. (2007). "CHAPTER VI.The Devi's Administration ( continued ) Charities and endowments.". LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. p. 36.
- ↑ Thombre P.v. (2007). LIFE AND LIFE'S-WORK OF SHREE DEVI AHILYA BAI HOLKAR [HOLKAR STATE HISTORY VOL. I]. p. 42.
- ↑ "Ahilyabai Holkar". Indianpost.com. 25 August 1996. Retrieved 17 September 2012.
- ↑ Banerjee, Shoumojit (2024-03-13). "Maharashtra's Ahmednagar to be officially called 'Ahilyanagar'". The Hindu (in Indian English). ISSN 0971-751X. Retrieved 2024-03-13.
- ↑ Mahajan, Sumitra (2021-01-19). Matoshree: Matoshree: सुमित्रा महाजन's Tale of Motherhood and Legacy (in ಹಿಂದಿ). Prabhat Prakashan. ISBN 978-93-5266-133-6.
- ↑ "NFDC: Cinemas of India". Nfdcindia.com. Retrieved 17 September 2012.
- Pages with reference errors
- Pages using the JsonConfig extension
- CS1 ಇಂಗ್ಲಿಷ್-language sources (en)
- CS1 maint: numeric names: authors list
- CS1 maint: others
- CS1 ಅಮೆರಿಕನ್ ಇಂಗ್ಲಿಷ್-language sources (en-us)
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from February 2022
- CS1 Indian English-language sources (en-in)
- CS1 ಹಿಂದಿ-language sources (hi)
- Pages with unreviewed translations
- ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ