ಲಕ್ಷ್ಮೀ ಗುರುರಾಜ್
ಲಕ್ಷ್ಮೀ ಗುರುರಾಜ್ | |
---|---|
Born | ಲಕ್ಷ್ಮೀ ೧೯೬೮-೦೫-೨೩ |
Occupation | ನೃತ್ಯ |
Years active | ೧೯೯೦ - |
Spouse | ಗುರುರಾಜ್ ಐತಾಳ್ |
Children | ೧ |
Parent(s) | ಕೃಷ್ಣಮೂರ್ತಿ ರಾವ್, ಪ್ರೇಮಾ ರಾವ್ |
ಇವರು ಉಡುಪಿಯ ನೃತ್ಯ ಗುರು. ಲಕ್ಶ್ಮೀ ಗುರುರಾಜ್ ರವರು ೧೯೬೮ರ ಮೇ ೨೩ ರಂದು ಉಡುಪಿಯ ಕೊಡವೂರಿನಲ್ಲಿ ಜನಿಸಿದರು. ಇವರ ತಂದೆ ಕೃಷ್ಣ ಮೂರ್ತಿ ರಾವ್ ಮತ್ತು ತಾಯಿ ಪ್ರೇಮಾ.
ವಿದ್ಯಾಭ್ಯಾಸ
[ಬದಲಾಯಿಸಿ]ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೊಡವೂರಿನಲ್ಲಿ ಮುಗಿಸಿದ್ದರು. ನಂತರ ಪೂರ್ಣಪ್ರಜ್ಞ ಕಾಲೇಜ್ ಉಡುಪಿಯಲ್ಲಿ ಬಿ ಎಸ್ಸಿ ಪದವಿಯನ್ನು ಪಡೆದರು. ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನು ದ್ವಿತಿಯ ಸ್ಥಾನದಲ್ಲಿ ಪಡೆದಿದ್ದಾರೆ[೧]. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ವಿಷಯದಲ್ಲಿ ಎಂಎ ಪದವಿಯನ್ನು ಪೂರೈಸಿದ್ದಾರೆ.
ನೃತ್ಯಜೀವನ
[ಬದಲಾಯಿಸಿ]ಲಕ್ಶ್ಮೀ ಯವರು ಮುಕುಂದ ಕೃಪಾ ಕಲಾ ಶಾಲೆಯಲ್ಲಿ ಮೋಹನ್ ರಾವ್ ರಲ್ಲಿ ಮೈಸೂರು ಶೈಲಿಯ ಭರತನಾಟ್ಯವನ್ನು ಕಲಿತರು. ಇದರ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಭುಜಂಗ ರಾವ್ ಅಲ್ಲಿ ಅಭ್ಯಾಸ ಮಾಡಿದರು. ನಂತರದಲ್ಲಿ ಸಂಗೀತ ಅಭ್ಯಾಸವನ್ನು ಮಧುರ್ ಪಿ ಬಾಲಸುಬ್ರಹ್ಮಣ್ಯ ರವರಲ್ಲಿ ಮುಂದುವರೆಸುತ್ತಿದ್ದಾರೆ. ಕೊಡವೂರಿನ ಮಾಧವ ರಾವ್ ರರಲ್ಲಿ ಮೂಗುರು ಶೈಲಿಯ ಭರತನಾಟ್ಯವನ್ನು ಕಲಿತ್ತಿದ್ದರು. ಭರತನಾಟ್ಯದ ವಿದ್ವತ್ ಪರೀಕ್ಷೆಯನ್ನು ಬೆಂಗಳೂರಿನ ಶ್ರೀಮತಿ ಸಂಧ್ಯಾ ಕೇಶವ ರಾವ್ ರಲ್ಲಿ ಕಲಿತರು. ಅವರಲ್ಲಿ ಪಂದನಲ್ಲೂರು ಶೈಲಿಯನ್ನು ಅಭ್ಯಾಸಮಾಡಿದ್ದಾರೆ. ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದರು. ೧೯೯೦ರಲ್ಲಿ ನೃತ್ಯ ನಿಕೇತನ ಎಂಬ ನೃತ್ಯ ಶಾಲೆಯನ್ನು ಮೊದಲಿಗೆ ಕೊಡವೂರಿನಲ್ಲಿ ಆರಂಭಿಸಿದರು, ನಂತರ ಉಡುಪಿಯಲ್ಲಿ ತಮ್ಮ ನೃತ್ಯ ತರಗತಿಯನ್ನು ಮುಂದುವರೆಸಿದ್ದಾರೆ [೨].ಮಂದಾರ ರಾಮಾಯಣ, ಹರಿಹರ ಮಹಾತ್ಮೆ, ಅಷ್ಟಲಕ್ಷ್ಮೀ ಸ್ತುತಿ, ಶ್ರೀ ಕೃಷ್ಣಂ ವಂದೇ ಜಗದ್ಗುರುಂ, ಕನಕ ಮೃಗ[೩], ಪಂಚವಟಿ, ಭಸ್ಮಾಸುರ ಮೋಹಿನಿ, ಅಷ್ಟದಿಕ್ಪಾಲಕ ಸ್ತುತಿ, ಸೂರ್ಯ ಪುಷ್ಪಾಂಜಲಿ ಹೀಗೆ ಹಲವರು ನೃತ್ಯಗಳನ್ನು ಮತ್ತು ನೃತ್ಯ ರೂಪಕಗಳನ್ನು ಸಂಯೋಜಿಸಿದ್ದಾರೆ. ಉಡುಪಿ, ಮಂಗಳೂರು, ಬೆಂಗಳೂರು, ಪುಣೆ, ಶ್ರೀಕಾಕುಲಂ, ದೆಹಲಿ, ತಿರುಪತಿ, ನಾಸಿಕ್, ಮುಂಬೈ, ಮುಡಬಿದ್ರಿ, ಧರ್ಮಸ್ಥಳಗಳಲ್ಲಿ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆಳ್ವಾಸ್ ನುಡಿಸಿರಿ, Archived 2019-05-21 ವೇಬ್ಯಾಕ್ ಮೆಷಿನ್ ನಲ್ಲಿ. ಭರತನಾಟ್ಯ ಮಹೋತ್ಸವ, ಮಾತೃಛಾಯಾ, ಸಂಗೀತ ನೃತ್ಯೋತ್ಸವ, ಅಂತರ್ ರಾಷ್ಟೀಯ ನೃತ್ಯ ದಿನಾಚರಣೆಗಳಲ್ಲಿ ನೃತ್ಯವನ್ನು ಮಾಡಿದ್ದಾರೆ. ಇತ್ತೀಚಿಗಷ್ಟೆ ಇವರ ಸಂಸ್ಥೆಯ ವತಿಯಿಂದ ನಾಟ್ಯಜಯಂತಿ ಮತ್ತು ನೃತ್ಯೋತ್ಸವನ್ನು ಉಡುಪಿಯ ರಾಜಾಂಗಣದಲ್ಲಿ ನೆಡೆಸಲಾಯಿತು.[೪] ಇವರ ನೃತ್ಯ ಸಂಸ್ಥೆ ನೃತ್ಯನಿಕೇತನ ಉಡುಪಿಯು ೨೫ ವರ್ಷಗಳ ಬೆಳ್ಳಿ ಸಂಭ್ರಮವನ್ನು ಉಡುಪಿಯ ರಾಜಾಂಗಣದಲ್ಲಿ ೨೦೧೫ರಲ್ಲಿ ಆಚರಿಸಲಾಯಿತು. ೨೦೧೯ರ ಡಿಸೆಂಬರ್ ೨೫ರಂದು ಇವರ ನೃತ್ಯ ಸಂಸ್ಥೆಯಾದ ನೃತ್ಯ ನಿಕೇತನ ಉಡುಪಿ (ರಿ), ತ್ರಿದಶಕ ಸಂಭ್ರಮಾಚರಣೆಯನ್ನು ಉಡುಪಿಯ ಅಂಬಲಪಾಡಿಯಲ್ಲಿ ಆಚರಿಸಲಾಯಿತು.[೫]
ಮನ್ನಣೆಗಳು
[ಬದಲಾಯಿಸಿ]- ಭಾರತೀಯ ನೃತ್ಯ ಕಲಾ ಪರಿಷತ್(ರಿ), ಮೈಸೂರು ಇವರಿಗೆ ನಾಟ್ಯಕಲಾಸಿಂಧು ಎಂಬ ಬಿರುದನ್ನು ನೀಡಿ, ಗೌರವಿಸಿದೆ.
- ಸೃಷ್ಟಿ ನೃತ್ಯ ಕಲಾ ಕುಟೀರ(ರಿ),ಉಡುಪಿಯು ಇವರಿಗೆ ಸೃಷ್ಟಿ ನೃತ್ಯಕಲಾ ಸನ್ಮಾನ ಮಾಡಿದೆ.
- ೧೯೯೩ರಲ್ಲಿ ನಾಟ್ಯ ಮಯೂರಿ ಬಿರುದನ್ನು ಪಡೆದರು.
- ಪಲಿಮಾರು ಮಠದಿಂದ ೨೦೧೯ರ ಶ್ರೀ ರಾಮ ವಿಠಲ ಪ್ರಶಸ್ತಿಯನ್ನು ಪಡೆದಿದ್ದಾರೆ[೬].
- ದೂರದರ್ಶನದ 'ಎ' ಗ್ರೇಡ್ ಕಲಾವಿದೆಯಾಗಿದ್ದಾರೆ.
- ಜ್ಞಾನ ದೇಗುಲ ಪ್ರಶಸ್ತಿಯನ್ನು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಟಾನ ನೀಡಿದೆ.[೭]
- ೯ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.[೮]
- ೨೦೧೯ನೇ ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.[೯]
ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ http://m.varthabharati.in/article/2019_04_03/185296
- ↑ https://www.udupipages.com/art-culture/nritya-niketana-kodavoor.php
- ↑ https://www.udayavani.com/supplements/art-culture/nritya-niketana-udupi
- ↑ https://www.udayavani.com/supplements/art-culture/nrithya-nikethana-lakshmi-gururaj-performance
- ↑ "ಆರ್ಕೈವ್ ನಕಲು". Archived from the original on 2019-12-29. Retrieved 2019-12-28.
- ↑ https://www.udayavani.com/district-news/udupi-news/let-the-achievements-make-more-pajavar-sri
- ↑ https://www-thehindu-com.cdn.ampproject.org/v/s/www.thehindu.com/news/national/karnataka/bannanje-govindacharya-to-be-felicitated-on-monday/article8568362.ece/amp/?amp_js_v=a2&_gsa=1&usqp=mq331AQDoAEC#referrer=https%3A%2F%2Fwww.google.com&_tf=From%20%251%24s&share=https%3A%2F%2Fwww.thehindu.com%2Fnews%2Fnational%2Fkarnataka%2Fbannanje-govindacharya-to-be-felicitated-on-monday%2Farticle8568362.ece
- ↑ https://m.vijaykarnataka.com/district/udupi/-/amp_articleshow/36969005.cms
- ↑ http://m.varthabharati.in/article/2019_10_30/217064
- Pages using the JsonConfig extension
- Pages using infoboxes with thumbnail images
- Pages using infobox person with multiple parents
- Pages using infobox person with unknown parameters
- Articles with hCards
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತೀಯ ಕಲಾವಿದರು
- ನೃತ್ಯ ಕಲಾವಿದರು
- ಭರತನಾಟ್ಯ ಕಲಾವಿದರು
- ಭಾರತೀಯ ನೃತ್ಯ ಕಲಾವಿದರು