ವಿಷಯಕ್ಕೆ ಹೋಗು

ದುಂಡು ಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Arabian jasmine
A 'Maid of Orleans' cultivar from Tunisia.
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಪಂಗಡ: ಜಾಸ್ಮಿನೀ
ಕುಲ: ಜಾಸ್ಮಿನಮ್
ಪ್ರಜಾತಿ:
J. sambac
Binomial name
Jasminum sambac
Synonyms[][]
  • Nyctanthes sambac L.
  • Mogorium sambac (L.) Lam.
  • Jasminum fragrans Salisb.
  • Jasminum sambac var. normale Kuntze
  • Jasminum bicorollatum Noronha
  • Jasminum blancoi Hassk.
  • Jasminum heyneanum Wall. ex G.Don
  • Jasminum odoratum Noronha
  • Jasminum pubescens Buch.-Ham. ex Wall.
  • Jasminum quadrifolium Buch.-Ham. ex Wall.
  • Jasminum quinqueflorum B.Heyne ex G.Don
  • Jasminum quinqueflorum var. pubescens G.Don
  • Jasminum sambac var. duplex Voigt
  • Jasminum sambac var. gimea (Zuccagni) DC.
  • Jasminum sambac var. goaense (Zuccagni) DC.
  • Jasminum sambac var. heyneanum Wall. ex G.Don) C.B.Clarke in J.D.Hooker
  • Jasminum sambac var. kerianum Kuntze
  • Jasminum sambac var. nemocalyx Kuntze
  • Jasminum sambac var. plenum Stokes
  • Jasminum sambac var. syringifolium Wall. ex Kuntze
  • Jasminum sambac var. trifoliatum Vahl
  • Jasminum sambac var. undulatum (L.) Kuntze
  • Jasminum sambac var. verum DC.
  • Jasminum sanjurium Buch.-Ham. ex DC.
  • Jasminum undulatum (L.) Willd.
  • Mogorium gimea Zuccagni
  • Mogorium goaense Zuccagni
  • Mogorium undulatum (L.) Lam.
  • Nyctanthes goa Steud.
  • Nyctanthes grandiflora Lour.
  • Nyctanthes undulata L.
ನೆರಳಿನಲ್ಲಿ ದುಂಡುಮಲ್ಲಿಗೆ
Jasminum sambac cultivars
'Maid of Orleans'
'Grand Duke of Tuscany'

ದುಂಡು ಮಲ್ಲಿಗೆಯು ಮಲ್ಲಿಗೆಯ ಒಂದು ಜಾತಿ. ಇದು ಭೂತಾನ್, ಉತ್ತರ ಹಿಮಾಲಯ, ಭಾರತ ಮತ್ತು ಪಾಕಿಸ್ತಾನದ ನೆರೆಹೊರೆಯಲ್ಲಿ ಕಂಡುಬರುತ್ತದೆ. ಇದರ ಉಳುಮೆ ಹೆಚ್ಚಾಗಿ ದಕ್ಷಿಣ ಮತ್ತು ದಕ್ಷಿಣ ಎಷ್ಯಾದಲ್ಲಿ ಮಾಡುತ್ತಾರೆ. ಇದನ್ನು ಬೆಳೆಯುವುದು ಹೆಚ್ಚಾಗಿ ಇದರ ಪರಿಮಳಕ್ಕೇ. ಈ ಹೂವನ್ನು ಸುಗಂಧ ತೈಲ ತಯಾರಿಸಲು ಬಳಸುತ್ತಾರೆ. ಇದು ಫಿಲಿಪೀನ್ಸ್ ದೇಶದ ರಾಷ್ಟ್ರದ ಹೂ ಆಗಿದೆ. ಅಲ್ಲಿ ಇದನ್ನು ಸಂಪಗೀಟ ಎಂದು ಕರೆಯುತ್ತಾರೆ. ಇಂಡೋನೇಶಿಯಾದ ಮೂರು ರಾಷ್ಟ್ರ ಹೂಗಳಲ್ಲಿ ಇದು ಒಂದಾಗಿದೆ. ಅಲ್ಲಿ ಇದನ್ನು ಮೇಲಾಟಿ ಪುಟಿಚ್ ಎಂದು ಕರೆಯುತ್ತಾರೆ.

ವಿವರಣೆ

[ಬದಲಾಯಿಸಿ]

ಇದು ಮೋಟು ಗಿಡ, ಸುಮಾರು ೦.೫ ಮೀಟರ್ ಇಂದ ೩ ಮೀಟರ್ ಉದ್ದ ಬೆಳೆಯುತ್ತದೆ.[] ಇದರ ಸಂತಾನೋತ್ಪತ್ತಿ ಕತ್ತರಿಸುವುದು, ಗೂಟಿ, ಮಾರ್ಕೋಟಿಂಗ್ ಕ್ರಮದಿಂದ ಆಗುತ್ತದೆ.

ಇದರ ಎಲೆಗಳು ೪-೧೨.೫ ಸೆಂಟಿಮೀಟರ್ ಉದ್ದ ಮತ್ತು ೨-೭.೫ ಸೆಂ.ಮಿ. ಅಗಲ ಇರುತ್ತವೆ. ಎಲೆಗಳು ದೀರ್ಘವತ್ತಾಕಾರ ಇಲ್ಲವೆ ಅಂಡಾಕಾರದವು. ನುಣುಪಾದ ಅಲಗುಳ್ಳವು, ಅಭಿಮುಖ ಅಥವಾ ಸುತ್ತು ಮಾದರಿಯಲ್ಲಿ ಜೋಡಣೆಗೊಂಡಿವೆ. ಹೂಗಳು ಮೃದುವಾಗಿದ್ದು ವರ್ಷವಿಡೀ ಅರಳುತ್ತವೆ. ಇವು ಗೊಂಚಲಲ್ಲಿ ೩-೧೨ ರಂತೆ ಒಟ್ಟಿಗೆ ಬೆಳೆಯುತ್ತವೆ.[] ದಳಗಳು ಒಂಟಿ ಸುತ್ತಿನಲ್ಲಿರಬಹುದು ಅಥವಾ ಅನೇಕ ಸುತ್ತುಗಳಲ್ಲಿರಬಹುದು. ಸಂಜೆ ಸುಮಾರು ೬-೮ ರ ಸಮಯದಲ್ಲಿ ಅರಳುತ್ತವೆ ಮತ್ತು ಇದರ ಆಯಸ್ಸು ೧೨-೨೦ ಗಂಟೆ ಕಾಲ ಮಾತ್ರ. ಇದನ್ನು ಬೆಳೆಯುವ ರೀತಿ ಬೇರೆ. ಒಂದೊಂದು ದೇಶದಲ್ಲಿ ಒಂದೊಂದು ರೀತಿ ಕರೆಯುತ್ತಾರೆ ಮತ್ತು ಅದರ ಮಹತ್ತ್ವವು ಕೂಡ ಬೇರೆ.

ಸಾಮಾನ್ಯ ಹೆಸರುಗಳು: ಬಂಗಾಳಿ-ಬೆಲೆ, ಆಂಗ್ಲ-ಅರೆಬಿಯನ್ ಜಾಸ್ಮೀನ್, ಗುಜರಾತಿ-ಮೊಗ್ರ, ಹಿಂದಿ ಮತ್ತು ಮರಾಠಿ-ಮೊಘ್ರ, ಕನ್ನಡ-ದುಂಡು ಮಲ್ಲಿಗೆ, ಕೊಂಕಣಿ-ಮೊಗರ, ಸಂಸ್ಕೃತ-ಮಾಲತಿ ಇತ್ಯಾದಿ.

ಬೇಸಾಯ

[ಬದಲಾಯಿಸಿ]

ಇದು ಬಲುಹಿಂದಿನಿಂದ ಕೃಷಿಯಲ್ಲಿದ್ದು ಹಲವಾರು ಬಗೆಗಳನ್ನು ಒಳಗೊಂಡಿದೆ. ಉದಾಹರಣೆಗೆ ಇರುವಂತಿಗೆ, ಸೂಜಿಮಲ್ಲಿಗೆ, ಏಳು ಸುತ್ತು ಮಲ್ಲಿಗೆ ಎಂಬ ಪ್ರಸಿದ್ಧ ಬಗೆಗಳೂ ದುಂಡುಮಲ್ಲಿಗೆಯ ವಿಭಿನ್ನ ರೂಪಗಳಾಗಿವೆ. ದುಂಡುಮಲ್ಲಿಗೆಯ ಬೆಳೆವಣಿಗೆಗೆ ಒಣಭೂಮಿ ಹಾಗೂ ನೇರ ಬಿಸಿಲು ಬಲು ಅನುಕೂಲ. ಬೇಸಿಗೆ ಮತ್ತು ಮಳೆಗಾಲದಲ್ಲಿ ಹೂ ಬಿಡುತ್ತದೆ. ಹೆಚ್ಚು ಹೂಬಿಡುವಂತೆ ಮಾಡಲು ಮೊಗ್ಗು ಕಚ್ಚುವುದಕ್ಕೆ ಮುನ್ನ ಎಲೆಗಳನ್ನೆಲ್ಲ ತೆಗೆದುಹಾಕುವುದು ಅಪೇಕ್ಷಣೀಯ. ಉತ್ತರಪ್ರದೇಶದ ಕನೌಜ್, ಜೋನ್‌ಪುರ, ಘಾಜಿಪುರ ಮತ್ತು ಸಿಕಂದರ್‌ಪುರಗಳಲ್ಲಿ ಇದನ್ನು ಬೃಹತ್ ಪ್ರಮಾಣದಲ್ಲಿ ಕೃಷಿಮಾಡಲಾಗುತ್ತದೆ.

ಮಲ್ಲಿಗೆಯನ್ನು ಕಟ್ಟಡದೊಳಗೆ ಆಥವ ಹೊರಗೆ ಭೂಮಿಯ ಮೇಲೆ ಎರಡೂ ಕಡೆ ಬೆಳೆಯಬಹುದು. ಮಲ್ಲಿಗೆಗೆ ಸೂರ್ಯನ ಕಿರಣ ಕನಿಷ್ಠ ೬ ಗಂಟೆ ಬೇಕು. ರಾತ್ರಿ ೦ ಡಿಗ್ರಿ ತಾಪಮಾನದಲ್ಲಿ ಬೆಳೆಯುತ್ತದೆ. ರಾಸಾಯನಿಕ ಗೊಬ್ಬರ ಅಗತ್ಯವಿಲ್ಲ. ಇದನ್ನು ವ್ಯಾಪಕವಾಗಿ ಅಲಂಕಾರ ಸಸ್ಯವಾಗಿ ಆಗ್ನೇಯ ಎಷ್ಯ, ಪೆಸಿಫಿಕ್ ದೀಪಗಳು, ಉಷ್ಣವಲಯದಲ್ಲಿ ಬೆಳೆಯುತ್ತಾರೆ. ಹಲವು ತಳಿಗಳು ಪ್ರಸ್ತುತದಲ್ಲಿ ಇವೆ. ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಮೊಗ್ಗುಗಳನ್ನು ಕೊಯ್ಲು ಮಾಡಲಾಗುತ್ತದೆ. ಹೂವಿನ ಮೊಗ್ಗುಗಳ ಗಾತ್ರ, ದೃಢತೆ, ಹವಾಮಾನ ಅವಲಂಬಿಸಿ ಬದಲಾಗುತ್ತದೆ. ಬಣ್ಣದ ಆಧಾರದ ಮೇಲೆ ಕಟಾವು ಮಾಡಲಾಗುತ್ತದೆ. ಹೂವು ಬಿಳಿ ಬಣ್ಣವಾಗಿರಬೇಕು. ಹಸಿರಾಗಿದ್ದರೆ ಸುವಾಸನೆ ಬೀರುವುದಿಲ್ಲ. ಅರಳಿರುವ ಹೂಗಳನ್ನು ಸುಗಂಧ ತೈಲ ತಯಾರಿಸಲು ಬಳಸುವುದಿಲ್ಲ.

ಇದು ಅರೇಬಿಯಾಕ್ಕೆ ಸ್ಥಳೀಯವಲ್ಲ. ಇದರ ಮೂಲ ಪೂರ್ವ ದಕ್ಷಿಣ ಏಷ್ಯ, ಆಗ್ನೇಯ ಏಷ್ಯ ಎಂದು ಆರಂಭಿಕ ಚೀನಿ ದಾಖಲೆಗಳಲ್ಲಿವೆ. ಈ ಸಸ್ಯ ಉಷ್ಣವಲಯದಲ್ಲಿ ಬೆಳೆಯುತ್ತದೆ ಮತ್ತು ಮಧ್ಯಪ್ರಾಚ್ಯದ ಶುಷ್ಕ ವಾತಾವರಣಗಳನ್ನು ಬೆಂಬಲಿಸುವುದಿಲ್ಲ. ಜಾಸ್ಮಿನನ್ನು ಅರೇಬಿಯ ಮತ್ತು ಪರ್ಷಿಯಾದಲ್ಲಿ ಒಬ್ಬ ವ್ಯಕ್ತಿ ಪರಿಚಯಿಸಿದ. ಅಲ್ಲಿ ಅವುಗಳನ್ನು ಉದ್ಯಾನದಲ್ಲಿ ಬೆಳೆಯುತ್ತಿದ್ದರು. ಅಲ್ಲಿಂದ ಯೂರೋಪ್‍ಗೆ ಪರಿಚಯಿಸಲಾಯಿತು. ಅಲ್ಲಿ ಅವರು ಅಲಂಕಾರಕ್ಕಾಗಿ ಬೆಳೆಯುತ್ತಿದ್ದರು. ೧೮ನೇ ಶತಮಾನದಲ್ಲಿ "ಸಾಂಬಾಕ್" ಎಂಬ ಸಾಮಾನ್ಯ ಹೆಸರಿನಲ್ಲಿ ಕರೆಯಲಾಗುತ್ತಿತ್ತು.[][]

ಮಧ್ಯಕಾಲೀನ ಅರೇಬಿಕ್‍ನಲ್ಲಿ "ಜ಼ಾನ್ಬಾಕ್" ಎಂದರೆ ಯಾವುದೇ ಜಾತಿಯ ಮಲ್ಲಿಗೆ ಹೂವಿನ ಎಣ್ಣೆ ಎಂದರ್ಥ. ಇದು ನಂತರ ಲಾಟಿನ್ ಭಾಷೆಗೆ ಪ್ರವೇಶವಾಯಿತು "ಸಾಂಬಾಕಸ್" ಮತ್ತು "ಸಾಬ್ಬಾಕಾ" ಎಂದು.

೧೭೫೩ ರಲ್ಲಿ ಲಿನೆಯಸ್ ತನ್ನ ಪುಸ್ತಕ ಸಿಸ್ಟೆಮಾ ನ್ಯಾಚುರಾದ ಮೊದಲ ಆವೃತ್ತಿಯಲ್ಲಿ ಈ ಸಸ್ಯವನ್ನು ನಿಕ್ಟ್ಯಾಂಥಸ್ ಸಾಂಬಾಕ್ ಎಂದು ವಿವರಿಸಲಾಗಿದೆ. ೧೭೮೯ ರಲ್ಲಿ, ವಿಲಿಯಮ್ ಐಟನ್ ಮಲ್ಲಿಗೆ ಜಾತಿಯನ್ನು ಮರು ವಿಂಗಡಿಸಿದ. ಅವನೂ ಸಹ ಇಂಗ್ಲಿಶ್‍ನಲ್ಲಿ ಇದನ್ನು "ಅರೇಬಿಯನ್ ಜಾಸ್ಮಿನ್" ಎಂದೇ ಹೆಸರಿಸಿದ.[]

ಔಷಧೀಯ ಉಪಯೋಗಗಳು

[ಬದಲಾಯಿಸಿ]

ಇದು ಕಾಮಾಲೆ ಮತ್ತು ಜೈವಿಕ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಹುಣ್ಣು, ಕೋಶಕಗಳು, ಚರ್ಮ ರೋಗಗಳಿಗೆ ಹೂವಿನ ಮೊಗ್ಗುಗಳು ಸಹಾಯಕ. ಮಲ್ಲಿಗೆಯ ರಸ ಕುಡಿಯುವುದರಿಂದ ಕ್ಯಾನ್ಸರ್ ಗುಣವಾಗುತ್ತದೆ. ಎಲೆಗಳು ಸ್ತನ ಗೆಡ್ಡೆಗಳಿಗೆ ಪರಿಣಾಮಕಾರಿ. ಚಹ ಮತ್ತು ಕಪ್ಪು ಚಹದಲ್ಲಿ ಬಳಸುತ್ತಾರೆ.

ಮಲಯದಲ್ಲಿ ಇದರ ಹೂವಿನ ಲೇಪವನ್ನು ತಲೆನೋವು ನಿವಾರಣೆಗೆ ಉಪಯೋಗಿಸುವರು. ಮುಖ ಹಾಗೂ ಕಣ್ಣುಗಳನ್ನು ತೊಳೆಯಲು ಇದರ ಹೂವಿನ ರಸ ಉತ್ತಮ. ಎಲೆಗಳ ಕಷಾಯ ಜ್ವರ, ವ್ರಣ ಚಿಕಿತ್ಸೆಗೆ ಬರುತ್ತದೆ.

ಫಿಲಿಪೈನ್ಸ್

[ಬದಲಾಯಿಸಿ]

ಇಲ್ಲಿ ಹೂವಿನ ಮಾಲೆಯನ್ನು ಫೋಟೊಗಳಿಗೆ ಇಡಲಾಗುತ್ತದೆ. ಇದಲ್ಲದೆ ಕೆಲವೊಮ್ಮೆ ಗೌರವ ಮತ್ತು ಪುರಸ್ಕಾರ ರೂಪದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಾರೆ. ಮದುವೆ ಸಮಾರಂಭಗಳಲ್ಲಿ ಬಳಸುತ್ತಾರೆ.

ಇಂಡೋನೇಷಿಯಾ

[ಬದಲಾಯಿಸಿ]

ಮಲ್ಲಿಗೆ ಈ ದೇಶದ ೩ ರಾಷ್ಟ್ರ ಹೂಗಳಲ್ಲಿ ಒಂದಾಗಿದೆ. ಮೋನೊಚಿರ್ಡ್ ಮತ್ತು ಗೈನ್ವ್ ಪಾಂಡ ಮತ್ತೆರಡು ರಾಷ್ಟ್ರ ಹೂಗಳಾಗಿವೆ. ಇದು ಪರಿಶುದ್ಧತೆ, ಪಾವಿತ್ರ್ಯತೆ, ಸರಳತೆ ಮತ್ತು ಪ್ರಾಮಾಣಿಕತೆಯನ್ನು ಸಂಕೇತಿಸುತ್ತದೆ ಎಂದು ಇಂಡೋನೇಷಿಯನ್ ಸಂಪ್ರದಾಯದಲ್ಲಿ ಪರಿಗಣಿತವಾಗಿದೆ. ಮದುವೆಗಳಲ್ಲಿ ಈ ಹೂ ಸಾಂಪ್ರದಾಯಿಕವಾಗಿದೆ, ವಿಶೇಷವಾಗಿ ಜಾವಾ ದ್ವೀಪದಲ್ಲಿ. ಸಂಪೂರ್ಣವಾಗಿ ಅರಳದ ಮೊಗ್ಗುಗಳನ್ನು ಮಾಲೆಯಲ್ಲಿ ಬಳಸುತ್ತಾರೆ. ಇನ್ನು ಕೆಲವೊಮ್ಮೆ ಆತ್ಮ ಮತ್ತು ಸಾವಿಗೆ ಸಂಭಂದಿಸಿದೆ.

ಕಾಂಬೋಡಿಯಾ

[ಬದಲಾಯಿಸಿ]

ಮಲ್ಲಿಗೆ ಹೂವನ್ನು ಬುದ್ಧನ ಅರ್ಪಣೆಗೆ ಬಳಸುತ್ತಾರೆ. ಜೂನ್ ಆರಂಭದ ಋತುವಿನ ಸಮಯದಲ್ಲಿ ಮರದ ಸೂಜಿಯ ಮೇಲೆ ಹೂಗಳನ್ನು ಇಟ್ಟು ಬುದ್ಧನಿಗೆ ಅರ್ಪಿಸುತ್ತಾರೆ.

ಚೀನಾ: ಮಲ್ಲಿಗೆ ಚಹವನ್ನು ಪ್ರಧಾನವಾಗಿ ಬಳಸುತ್ತಾರೆ. ಚೀನಾದ ಜಾನಪದ ಹಾಡು ಮೊ ಲಿ ಹುವಾ ಹಾಡಿನ ವಿಷಯವಾಗಿದೆ.

ಹವಾಯಿ

[ಬದಲಾಯಿಸಿ]

ಮಲ್ಲಿಗೆಯನ್ನು ಇಲ್ಲಿ ಪಿಕಾಕೆ ಎಂದು ಕರೆಯುತ್ತಾರೆ. ಪರಿಮಳಯುಕ್ತ ಲೆಇಸ್ ತಯಾರಿಸಲು ಬಳಸುತ್ತಾರೆ.

ಇಂಡಿಯಾ, ಪಾಕಿಸ್ತಾನ ಮತ್ತು ಮಧ್ಯಪ್ರಾಚ್ಯ

[ಬದಲಾಯಿಸಿ]

ಇಂಡಿಯಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ದೇಶಿಯ ಹೂವಾಗಿದೆ. ಮೊಗ್ಗಿನ ಜಡೆ ಮಾಡಲು ಬಳಸುತ್ತಾರೆ. ಮಲ್ಲಿಗೆ ಮೊಗ್ಗು ಮಗುವಿನ ಮೊದಲ ಹುಟ್ಟು ಹಬ್ಬದಲ್ಲಿ ಪ್ರಾಮುಖ್ಯ ಹೊಂದಿದೆ ಆ ದಿನ ಮಗುವಿನ ತಲೆಯ ಮೇಲೆ ಹೂಗಳನ್ನು ಚಿಮುಕಿಸುತ್ತಾರೆ.

ಶ್ರೀಲಂಕ

[ಬದಲಾಯಿಸಿ]

ಮಲ್ಲಿಗೆಯನ್ನು ಪಿಚ್ಚ, ಗಯಿತಪಿಚ್ಚ ಎಂದು ಕರೆಯುತ್ತಾರೆ, ಸಿತಾಪುಷ್ಪಾ, ಕತರೋಲು ಎಂದು ಕೂಡ ಹಳೆಯ ಪುಸ್ತಕಗಳಲ್ಲಿ ಉಲ್ಲೇಖವಿದೆ. ಮುಖ್ಯವಾಗಿ ಬುದ್ಧ ದೇವಾಲಯಗಳಲ್ಲಿ ಬಳಸುತ್ತಾರೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಬಳಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. "Jasminum sambac (L.) Aiton". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved March 8, 2011.
  2. Ginés López González (2006). Los árboles y arbustos de la Península Ibérica e Islas Baleares: especies silvestres y las principales cultivadas (in Spanish) (2 ed.). Mundi-Prensa Libros. p. 1295. ISBN 978-84-8476-272-0.{{cite book}}: CS1 maint: unrecognized language (link)
  3. Baby P. Skaria (2007). Aromatic Plants: Vol.01. Horticulture Science Series. The families and genera of vascular plants. Vol. 1. New India Publishing. p. 182. ISBN 978-81-89422-45-5. {{cite book}}: |work= ignored (help)
  4. Kenneth W. Leonhardt; Glenn I. Teves (2002). "Pikake A Fragrant-Flowered Plant for Landscapes and Lei Production" (PDF). Ornamentals and Flowers. College of Tropical Agriculture and Human Resources (CTAHR), University of Hawai'i at Manoa. Retrieved May 8, 2011.
  5. 胡秀英 (Hu Shiu-Ying) (2003). 秀苑擷英: 胡秀英敎授論文集 (in Chinese and English). 商務印書館(香港). pp. 263–265. ISBN 978-962-07-3152-5.{{cite book}}: CS1 maint: unrecognized language (link)
  6. A.K. Singh (2006). Flower Crops: Cultivation and Management. New India Publishing. pp. 193–205. ISBN 978-81-89422-35-6.
  7. William Aiton (1810). Hortus Kewensis, or A catalogue of the plants cultivated in the Royal botanic garden at Kew. Vol. 1 (2 ed.). Longman. p. 16.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: