ಜಮ್ಮು ಮತ್ತು ಕಾಶ್ಮೀರ ಸರ್ಕಾರ ೨೦೧೪-೧೬

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಮ್ಮು ಮತ್ತು ಕಾಶ್ಮೀರ ಸರ್ಕಾರ[ಬದಲಾಯಿಸಿ]

ಜಮ್ಮು ಮತ್ತು ಕಾಶ್ಮೀರ - ಭಾರತದ ರಾಜ್ಯಗಳಲ್ಲೊಂದು. ಈ ರಾಜ್ಯದ ಹಲವಾರು ಪ್ರಾಂತ್ಯಗಳು "ಪಾಕಿಸ್ತಾನ ಆಕ್ರಮಿತ ಕಾಶ್ಮೀರ" ('Pakistan Occupied Kashmir') ಎಂದು ಗುರುತಿಸಲ್ಪಟ್ಟಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಈ ರಾಜ್ಯದ ಬಗೆಗಿನ ಗಡಿವಿವಾದ ಸಂಪೂರ್ಣವಾಗಿ ಇನ್ನೂ ಬಗೆಹರಿದಿಲ್ಲ. ಚಳಿಗಾಲದಲ್ಲಿ ಜಮ್ಮು ಈ ರಾಜ್ಯದ ರಾಜಧಾನಿಯಾಗಿದ್ದು, ಬೇಸಿಗೆಕಾಲದಲ್ಲಿ ಶ್ರೀನಗರವು ಇಲ್ಲಿನ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ.

ರಾಜಕೀಯ ಮತ್ತು ಸರ್ಕಾರ[ಬದಲಾಯಿಸಿ]

ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ 2014
  • ಜಮ್ಮು-ಕಾಶ್ಮೀರ ಮತ್ತು ಜಾರ್ಖಂಡ್‌ನಲ್ಲಿ Nov 25, 2014 ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ.
  • ಜಮ್ಮು-ಕಾಶ್ಮೀರದ 15, ವಿಧಾನಸಭೆ ಕ್ಷೇತ್ರಗಳಿಗೆನಡೆದ ಚುನಾವಣೆಯಲ್ಲಿ ಶೇ.70 ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2008ರ ವಿಧಾನಸಭೆ ಚುನಾವಣೆಯಲ್ಲಿ ಶೇ.52.63 ಮತದಾನವಾಗಿತ್ತು.
  • 7 ಸಚಿವರು ಸೇರಿ 12 ಶಾಸಕರನ್ನು ಒಳಗೊಂಡು ಒಟ್ಟು 123 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,49,698 ಪುರುಷರು, 5,00539 ಮಹಿಳೆಯರು , 13 ಮಂಗಳಮುಖಿಯರು ಸೇರಿದಂತೆ 15 ಕ್ಷೇತ್ರಗಳಲ್ಲಿ 10,502,50 ಮತದಾರರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ 23-12-2014 ಫಲಿತಾಂಶ
  • ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳು 87; ಅದರಲ್ಲಿ ಜಮ್ಮು ಭಾಗದಲ್ಲಿ 37, ಲಡಾಖ್ ಭಾಗದಲ್ಲಿ 4, ಮುಸ್ಲಿಮ್ ಬಹುಸಂಖ್ಯಾತ ಭಾಗದಲ್ಲಿ 46 ಸ್ಥಾನಗಳಿವೆ. ಬಿಜೆಪಿಗೆ ಜಮ್ಮು ಭಾಗದಲ್ಲಿಯೇ 25 ಸ್ಥಾನಗಳು ಬಂದಿವೆ. ಉಳಿದ ಕಡೆ ಅದರ ಗಳಿಕೆ ಶೂನ್ಯ.ಆಗನ ಜನಪ್ರತಿನಿಧಿ ಶೇಕ್ ಅಬ್ದುಲ್ಲಾ ಅವರು ಮುಂದಾಲೋಚನೆ ಮಾಡಿ ಕಾಶ್ಮೀರ ಭಾಗಕ್ಕೆ ಯಾವಾಗಲೂ ಬಹುಮತ ಬರುವಂತೆ ವಿಧಾನಸಭೆ ಸ್ಥಾನಗಳನ್ನು ನಿಗದಿಗೋಳಿಸಿದ್ದಾರೆ. ಇನ್ನೂ 11(?)ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ.
ಪಕ್ಷ ಗೆಲವು ಶೇ.ವೋಟು ವೋಟು ಗಳಿಕೆ ವ್ಯತ್ಯಾಸ
ಭಾರತೀಯ ಜನತಾ ಪಕ್ಷ 25 23.0%, 1107194 +14
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (BSP ?) 1 1.4%, 67786
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 12 18.0%, 867883 -5
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 15 20.8%, 1000693 -12
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ 28 22.7%, 1092203 +7
ಜಮ್ಮು ಮತ್ತು ಕಾಶ್ಮೀರ ಜನರ People ಕಾನ್ಫರೆನ್ಸ್ 2 1.9%, 93182
ಜಮ್ಮು ಮತ್ತು ಕಾಶ್ಮೀರ ಜನರು ಪ್ರಜಾಸತ್ತಾತ್ಮಕ ರಂಗ (ಸೆಕ್ಯುಲರ್) 1 0.7%, 34886
ಸ್ವತಂತ್ರ 3 6.8%, 329881
ಇತರೆ- JKDPN+ JKNPP . 2.50%, 95941+26221 -4
ಒಟ್ಟು 87 . .
  • ಜಮ್ಮು ಕಾಶ್ಮೀರದಲ್ಲಿ 2015ಜನವರಿ 08 ರಿಂದ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ. (ಸರ್ಕಾರದ ಮೂಲಗಳು TOI-Bharti Jain,TNN|Jan 9, 2015.)
  • ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ 01/03/2015ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 49 ದಿನಗಳ ರಾಜ್ಯಪಾಲರ ಆಡಳಿತ ತೆರೆ ಕಂಡಿತು.
ಸಯೀದ್ ಅವರ ಬಳಿಕ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪಿಡಿಪಿಯ 12 ಹಾಗೂ ಬಿಜೆಪಿ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.(prajavani.[[೧]]

ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ನಿಧನ[ಬದಲಾಯಿಸಿ]

ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಗುರುವಾರ ಜನವರಿ 7, 2016 - ಬೆಳಗ್ಗೆ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಶ್ವಾಸಕೋಶ, ಉಸಿರಾಟದ ತೊಂದರೆ ಇದ್ದ ಹಿನ್ನೆಲೆಯಲ್ಲಿ ನವದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ದಾಖಲಾದ ದಿನದಿಂದ ಪ್ಲೇಟ್ ಲೆಟ್ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಯವಾಗುತ್ತಿತ್ತು.[೧]

ಹೊಸ ಮಂತ್ರಿಮಂಡಲ ರಚನೆ[ಬದಲಾಯಿಸಿ]

೪-೪-೨೦೧೬
  • ಮೂರು ತಿಂಗಳ ಚೌಕಾಸಿ ರಾಜಕೀಯದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ 04-04-2016 ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೆಹಬೂಬಾ ಜತೆ 22 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಸಂಪುಟದಲ್ಲಿ ಬಿಜೆಪಿಯ ಬಲ ಹೆಚ್ಚಿದೆ. ಕಪ್ಪು ದಿರಿಸಿನಲ್ಲಿ ಇದ್ದ 56 ವರ್ಷದ ಮೆಹಬೂಬಾ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ. ಅವರ ಜತೆ ಬಿಜೆಪಿಯ ನಿರ್ಮಲ್ ಸಿಂಗ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಫ್ತಿ ಮೊಹಮದ್ ಸಯೀದ್ ನಿಧನದ (ಜನ 7, 2016) ನಂತರ ಅವರ ಮಗಳು ಮೆಹಬೂಬಾ ಅವರು ಸರ್ಕಾರ ರಚಿಸಲು ಮೀನಮೇಷ ಎಣಿಸಿದ್ದರಿಂದ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು. ಸಯೀದ್ ಸರ್ಕಾರದಲ್ಲಿ ಆರು ಸಂಪುಟ ಸಚಿವ ಸ್ಥಾನ ಹೊಂದಿದ್ದ ಬಿಜೆಪಿ ಈ ಬಾರಿ ಎಂಟು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು. ಜತೆಗೆ ಮೂವರು ರಾಜ್ಯ ಸಚಿವರಾದರು.
  • ಹಿಂದಿನ ಸರ್ಕಾರದಲ್ಲಿ 11 ಸಂಪುಟ ಸಚಿವ ಸ್ಥಾನ ಹೊಂದಿದ್ದ ಪಿಡಿಪಿ ಈ ಬಾರಿ 9 ಸ್ಥಾನ ಪಡೆದಿದೆ. ಇದರ ಜತೆಗೆ ಮೂವರು ರಾಜ್ಯ ಸಚಿವರಿದ್ದಾರೆ. ಪ್ರತ್ಯೇಕವಾದಿ ಮುಖಂಡರಾಗಿದ್ದ ಅಬ್ದುಲ್ ಗನಿ ಲೋನ್‌ ಅವರ ಪುತ್ರ ಸಜ್ಜದ್ ಗನಿ ಲೋನ್ ಈ ಬಾರಿಯೂ ಬಿಜೆಪಿ ಕೋಟಾದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ.
  • ಜಮ್ಮು ಮತ್ತು ಕಾಶ್ಮೀರದ 13ನೇ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೆಹಬೂಬಾ ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ ಹಾಗೂ ದೇಶದ ಎರಡನೇ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ. 1980ರಲ್ಲಿ ಸೈದಾ ಅನ್ವರಾ ತೈಮೂರ್ ಅವರು ದೇಶದ ಪ್ರಥಮ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಆಗಿ ಅಸ್ಸಾಂನಲ್ಲಿ ಅಧಿಕಾರ ಸ್ವೀಕರಿಸಿದ್ದರು.ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಮೆಹಬೂಬಾ ಕಾಶ್ಮೀರ ವಿವಿಯಿಂದ ಕಾನೂನು ಪದವಿ ಪಡೆದಿದ್ದಾರೆ. 1996 ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 2002ರಲ್ಲಿ ಮತ್ತೆ ಶಾಸಕಿಯಾಗಿ ಆಯ್ಕೆಯಾದರಲ್ಲದೆ, 2004 ರಲ್ಲಿ ಅನಂತ್‌ನಾಗ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2014 ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು.

ರಾಜಕೀಯ ಬೆಳವಣಿಗೆ[ಬದಲಾಯಿಸಿ]

  • 2014 ಡಿಸೆಂಬರ್‌ 23: ವಿಧಾನಸಭೆಗೆ ಚುನಾವಣೆ; ಜಮ್ಮುವಿನಲ್ಲಿ ಭಾರಿ ಮುನ್ನಡೆ ಗಳಿಸಿದ ಬಿಜೆಪಿ; 37 ವಿಧಾನಸಭಾ ಕ್ಷೇತ್ರಗಳ ಪೈಕಿ 25ರಲ್ಲಿ ಗೆಲುವು; ಎರಡನೇ ಅತ್ಯಂತ ದೊಡ್ಡ ಪಕ್ಷ ಎಂಬ ಹೆಗ್ಗಳಿಕೆ
  • 2015 ಫೆಬ್ರುವರಿ 24: ಏಳು ವಾರಗಳಷ್ಟು ದೀರ್ಘ ಕಾಲ ನಡೆದ ಮಾತುಕತೆ ಬಳಿಕ ಪಿಡಿಪಿ–ಬಿಜೆಪಿ ಮೈತ್ರಿ
  • 2015 ಮಾರ್ಚ್‌: ಮುಖ್ಯಮಂತ್ರಿಯಾಗಿ ಮುಫ್ತಿ ಮೊಹಮ್ಮದ್‌ ಸಯೀದ್‌ ಪ್ರಮಾಣ
  • ಪ್ರತ್ಯೇಕತಾವಾದಿ ನಾಯಕ ಮಸ್ರತ್‌ ಆಲಂನನ್ನು ಬಿಡುಗಡೆ ಮಾಡಿದ ರಾಜ್ಯ ಸರ್ಕಾರ; ಮೈತ್ರಿಯಲ್ಲಿ ಮೊದಲ ಬಿರುಕು ಗೋಚರ, ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
  • 2016 ಜನವರಿ: ಮುಫ್ತಿ ಮೊಹಮ್ಮದ್‌ ಸಯೀದ್‌ ಸಾವು, ಪಿಡಿಪಿ ಮುಖ್ಯಸ್ಥೆಯಾದ ಮೆಹಬೂಬಾ ಮುಫ್ತಿ
  • 2016 ಫೆಬ್ರುವರಿ: ಬಿಜೆಪಿ ಜತೆಗಿನ ಮೈತ್ರಿ ‘ಜನಪ್ರಿಯ ಅಲ್ಲ’ ಎಂದ ಪಿಡಿಪಿ, ರಾಜ್ಯಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹ
  • 2016 ಏಪ್ರಿಲ್‌ 4: ಮುಖ್ಯಮಂತ್ರಿಯಾಗಿ ಮೆಹಬೂಬಾ ಪ್ರಮಾಣ
  • 2016 ಜೂನ್‌: ಪ್ರತ್ಯೇಕತಾವಾದಿಗಳ ಬಗ್ಗೆ ಪಿಡಿಪಿ ಮೃದುಧೋರಣೆ ತಾಳಿದೆ ಎಂದು ಬಿಜೆಪಿ ಅರೋಪ, ಮೈತ್ರಿ ಪಕ್ಷಗಳ ನಡುವೆ ಹೆಚ್ಚುತ್ತಲೇ ಹೋದ ಬಿರುಕು
  • 2016 ಸೆಪ್ಟೆಂಬರ್‌: ಕಾಶ್ಮೀರದ ಸರ್ಕಾರವು ನಾಜಿ ಆಳ್ವಿಕೆಗಿಂತಲೂ ಕೆಟ್ಟದಾಗಿದೆ ಎಂದು ಆರೋಪಿಸಿದ ಪಿಡಿಪಿ ಸಂಸದ ತಾರೀಖ್‌ ಕರ್ರಾ ರಾಜೀನಾಮೆ
  • 2017 ಮೇ: ಕಾಶ್ಮೀರಿ ವ್ಯಕ್ತಿಯನ್ನು ಸೇನಾ ಜೀಪಿನ ಮುಂದಕ್ಕೆ ಕಟ್ಟಿದ ಮೇಜರ್‌ ಗೊಗೊಯ್‌ ಕೃತ್ಯದ ವಿರುದ್ಧ ಬಿಜೆಪಿ–ಪಿಡಿಪಿ ವಾಕ್ಸಮರ: ಗೊಗೊಯ್‌ಗೆ ಬಿಜೆಪಿ ಶ್ಲಾಘನೆ, ಮಾನವ ಹಕ್ಕು ಉಲ್ಲಂಘನೆ ಎಂದ ಪಿಡಿಪಿ
  • 2018–ಜನವರಿ–ಏಪ್ರಿಲ್‌: ಕಠುವಾ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ; ಆರೋಪಿಗಳ ಪರ ಪ್ರತಿಭಟನೆಯಲ್ಲಿ ಬಿಜೆಪಿಯ ಸಚಿವರು ಭಾಗವಹಿಸಿದ್ದಕ್ಕೆ ಮೆಹಬೂಬಾ ಟೀಕೆ
  • 2018 ಜೂನ್‌: ಉಗ್ರರ ವಿರುದ್ಧದ ಕಾರ್ಯಾಚರಣೆ ಸ್ಥಗಿತವನ್ನು ರಮ್ಜಾನ್‌ ನಂತರ ವಿಸ್ತರಿಸದ ಕೇಂದ್ರದ ನಿರ್ಧಾರದ ಬಗ್ಗೆ ಪಿಡಿಪಿಗೆ ಭಿನ್ನಾಭಿಪ್ರಾಯ
  • 2018 ಜೂನ್‌ 18: ಜಮ್ಮು ಮತ್ತು ಕಾಶ್ಮೀರದ ಪಕ್ಷದ ಮುಖಂಡರನ್ನು ದೆಹಲಿಗೆ ಕರೆಸಿಕೊಂಡ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಚರ್ಚೆ
  • 2018 ಜೂನ್‌ 19: ಪ್ರಧಾನಿ ನರೇಂದ್ರ ಮೋದಿ ಜತೆಗೆ ಶಾ ಸಮಾಲೋಚನೆ, ಮೈತ್ರಿಯಿಂದ ಹೊರಗೆ ಬರಲು ನಿರ್ಧಾರ.
  • 2018 June 20 ಬಿಜೆಪಿ ಮೈತ್ರಿಯಿಂದ ಹೊರಗೆ, ಮೆಹಬೂಬಾ ರಾಜಿನಾಮೆ.

ನೋಡಿ[ಬದಲಾಯಿಸಿ]

  1. http://www.kannadaprabha.com/nation/j-k-cm-mufti-passes-away/267304.html[ಶಾಶ್ವತವಾಗಿ ಮಡಿದ ಕೊಂಡಿ]