ವಿಷಯಕ್ಕೆ ಹೋಗು

ಅಶೋಕ್ ಖೇಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಶೋಕ್ ಮಹಾರುದ್ರಪ್ಪ ಖೇನ್ಯ್
ಜನನಅಕ್ಟೋಬರ್ ೫ , ೧೯೫೦
ಬೀದರ್,ಕರ್ನಾಟಕ, ಭಾರತ
ಅಂತ್ಯ ಸಂಸ್ಕಾರ ಸ್ಥಳಬೆಂಗಳೂರು,ಕರ್ನಾಟಕ,ಭಾರತ
ವೃತ್ತಿಪೊಲಿಟಿಷಿಯನ್ ಮ್ಯಾನೇಜಿಂಗ್ ಡೈರೆಕ್ಟರ್ ಒಫ್ ಯಸ್ ಏ ಬಿ , ಫಿಲಡೆಲ್ಫಿಯಾ ಅಂಡ್ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಎಲೆಕ್ಟ್ರಿಕಲ್ ಇಂಜಿನಿಯರ್
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆನ್ಯಾಷನಲ್ ಇನ್ಸ್ಟಿಟ್ಯೂಟ್ ಒಫ್ ಟೆಕ್ನಾಲಜಿ ಕರ್ನಾಟಕ ವರ್ಚೆಸ್ಟರ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್
ಬಾಳ ಸಂಗಾತಿರೈತ ಖೇನ್ಯ್
ಮಕ್ಕಳುನಿಕೋಲಸ್ ಖೇಣಿ , ಬಾಬಿ ಖೇಣಿ

ಅಶೋಕ್ ಮಹಾರುದ್ರಪ್ಪ ಖೇನ್ಯ್ ಕರ್ನಾಟಕಬೀದರ್ ದಕ್ಷಿಣದ ಶಾಸಕರಾಗಿದ್ದಾರೆ []ಮತ್ತು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ (ನೈಸ್) ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ, ಇದು ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್(ಬಿಎಂಐಸಿ) ಯೋಜನೆಯ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ[]. ಅವರು ಇಂಡಿಯಾ ಇಂಟರ್ನ್ಯಾಷನಲ್ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರ್ಸ್ ಸೀಮಿತ ನಿರ್ದೇಶಕರಾಗಿದ್ದಾರೆ.

ಅಶೋಕ್ ಮಹಾರುದ್ರಪ್ಪ ಖೇಣಿ ಅವರು ಕರ್ನಾಟಕ ಬೀದರ್ ನಲ್ಲಿ ಅಕ್ಟೋಬರ್ ೫ , ೧೯೫೦ ರಂದು ಜನಿಸಿದರು. ಅವರ ತಂದೆಯ ಹೆಸರು ಮಹಾರುದ್ರಪ್ಪ ಮತ್ತು ಅವರ ಸಂಗಾತಿ ರೈತ ಖೇನ್ಯ್ .  ೧೯೯೨ ರಲ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲ್ಲಿಟ್ಟರು. ನಿಕೋಲಸ್ ಖೇನ್ಯ್ ಮತ್ತು ಬಾಬಿ ಖೇನ್ಯ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅವರ ವಿಶ್ರಾಂತಿ ಸ್ಥಳ ಬೆಂಗಳೂರು ಮತ್ತು ಅವರ ನಿವಾಸಗಳು ಫಿಲಡೆಲ್ಫಿಯಾ, ಯುಎಸ್ ಮತ್ತು ಬೆಂಗಳೂರು, ಭಾರತ. ಅವರು ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.[]

ಸಾಧನೆಗಳು

[ಬದಲಾಯಿಸಿ]

ಖೇನ್ಯ ಅವರು ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸ್(ನೈಸ್) ನ ಮಾಲೀಕರಾಗಿದ್ದಾರೆ. ಅವರು ಯುನೈಟೆಡ್ ಸ್ಟೇಟ್ಸ್ ನ ಅಧ್ಯಕ್ಷ ರೊನಾಲ್ಡ್ ರೀಗನ್ ರಿಂದ ೧೯೮೭ ರ ಅಲ್ಪಸಂಖ್ಯಾತ ಸಮುದಾಯ ಪ್ರಶಸ್ತಿಯಿಂದ ವರ್ಷದ ಅತ್ಯುತ್ತಮ ಉದ್ಯಮಿ ಸ್ವೀಕರಿಸಿದವರು.[] ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಖೇನಿ ಅವರು ಕ್ರಿಕೆಟ್ ತಂಡ ಕರ್ನಾಟಕ ಬುಲ್ಡೊಜರ್ಗಳನ್ನು ಹೊಂದಿದ್ದಾರೆ.[]೨೦೦೪ ರಲ್ಲಿ ಖೇನ್ಯ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್ ನ ಗೌರವಾನ್ವಿತ ಅಧ್ಯಕ್ಷರಾಗಿದ್ದರು.[]೧೯೯೫ ರಲ್ಲಿ ಕರ್ನಾಟಕದಲ್ಲಿ ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲು ಖೇನ್ಯ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆಯ ಸ್ಮರಣಿಕೆ ಪತ್ರವೊಂದಕ್ಕೆ ಸಹಿ ಹಾಕಿದ್ದರು. ೧೯೯೬ ರಲ್ಲಿ ಖೇನ್ಯ್ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ ಅನ್ನು ಸಂಘಟಿಸಿತು ಮತ್ತು ಬೆಂಗಳೂರಿನ ಸುತ್ತಲಿನ ರಿಂಗ್ ರೋಡ್ ನಿರ್ಮಿಸಲು ಸರ್ಕಾರದೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಏಪ್ರಿಲ್ ೧೯೯೭ ರಲ್ಲಿ, ಯೋಜನೆಯ ಅನುಮೋದನೆ ಮತ್ತು ೧೦  ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೊಡುಗೆಗಳು

[ಬದಲಾಯಿಸಿ]

ಇಂಡಿಯನ್ ಕಾರ್ಟೂನ್ ಗ್ಯಾಲರಿಯನ್ನು ಸ್ಥಾಪಿಸಲು ಅವರು ಭಾರತದಲ್ಲಿ ೫೦೦೦ ಚದರ ಅಡಿ ಆವರಣವನ್ನು ಬೆಂಗಳೂರಿನಲ್ಲಿ ಮೀಸಲಿಟ್ಟಿದ್ದರು. ಇದು ಬೆಂಗಳೂರಿನ ವಿವಾದಾತ್ಮಕ ರಿಂಗ್-ರೋಡ್ ನಿರ್ಮಿಸಿದೆ. ಅವರು ಕರ್ನಾಟಕ ಮಕ್ಕಳ ಪಕ್ಷದ ಸ್ಥಾಪಕರಾಗಿದ್ದಾರೆ, ಈಗ ಇದು ಕಾಂಗ್ರೆಸ ಜೊತೆ ಸೇರಿಕೊಂಡಿದೆ.

ರಾಜಕೀಯ ವೃತ್ತಿ ಜೀವನ

[ಬದಲಾಯಿಸಿ]

ಖೇನ್ಯ ಅವರು ವಿರೋಧಾಭಾಸವಾಗಿ ರಸ್ತೆಯ ಯೋಜನೆಗೆ ಸಂಬಂಧಿಸಿದಂತೆ ಖೋಟಾ, ಭೂ ಕಳ್ಳತನ ಮತ್ತು ಕೊಲೆಯ ಆರೋಪವನ್ನು ಸಿದ್ದರಾಮಯ್ಯರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವು ತನಿಖೆ ನಡೆಸುತ್ತಿದೆ.[]೨೦೧೪ ರಲ್ಲಿ ಖೇನ್ಯ ಅವರ ವಿರುದ್ಧ ಅಕ್ರಮಗಳ ಆರೋಪಗಳನ್ನು ತನಿಖೆ ಮಾಡಲು ಜಂಟಿ ಶಾಸಕಾಂಗ ಸಮಿತಿ ರಚನೆಯಾಗಿತ್ತು. ೨೦೧೭ ರಲ್ಲಿ ಸಮಿತಿಯು ಖೇನ್ಯ ರ ವಿರುದ್ಧ ಕ್ರಿಮಿನಲ್ ಕ್ರಮವನ್ನು ಶಿಫಾರಸು ಮಾಡಿದೆ.[] ಹಲವಾರು ಕಾಂಗ್ರೆಸ್ ಮೂಲಗಳ ಪ್ರಕಾರ, ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಖೇನ್ಯರ ಪ್ರವೇಶಕ್ಕಾಗಿ ಒತ್ತಾಯಿಸಿದರು ಮತ್ತು ಮುಖ್ಯಮಂತ್ರಿಯು ಒಪ್ಪಿಕೊಂಡರು.ಬೀದರ್ನಲ್ಲಿ ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳನ್ನು ಸಂಗ್ರಹಿಸಲು ಆಶೋಕ್ ಖೇನ್ಯ ಅವರನ್ನು ಪಕ್ಷದೊಳಗೆ ಸೇರಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಪಕ್ಷದ ನಾಯಕರು ಎಸ್.ಟಿ. ಸೋಮಶೇಖರ್, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಾ ಮತ್ತು ಕೆ.ಆರ್. ಪುರಮ್ ಎಮ್.ಎಲ್.ಎ ಬೈರಾತಿ ಬಸವರಾಜ್ ಮತ್ತು ಬೀದರ್ನ ಬಹುತೇಕ ನಾಯಕರು ಖೇನ್ಯರ ಪ್ರವೇಶವನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ ಮತ್ತು ಈಗ ಎಲ್ಲಾರು ಇಂಡಿಯನ್ ಕಾಂಗ್ರೆಸ್ ಸಮಿತಿಗೆ ಬರೆಯಲು ಯೋಜಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಖೇನ್ಯರನ್ನು ಸೇರ್ಪಡೆಗೊಳ್ಳುವ ಮೊದಲು ಪಕ್ಷ ನಾಯಕತ್ವ ಎಲ್ಲ ಪಕ್ಷದ ನಾಯಕರ ಅಭಿಪ್ರಾಯವನ್ನು ಬೀದರ್ನಲ್ಲಿ ತೆಗೆದುಕೊಂಡಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಕಾಂಗ್ರೆಸ್ ನ ಖೇನ್ಯರ ಚಳುವಳಿಯು ಬಿಜೆಪಿಯಿಂದ ಗಂಭೀರವಾದ ಚಕಮಕಿಯನ್ನು ಎತ್ತಿ ಹಿಡಿದಿದೆ. ಆರ್ ಅಶೋಕ, ಸಿ.ಟಿ.ರವಿ ಮತ್ತು ಸುರೇಶ್ ಕುಮಾರ್ ಸೇರಿದಂತೆ ನಾಯಕರನ್ನು ಭ್ರಷ್ಟಾಚಾರದ ಖೇನ್ಯ ಎಂದು ಆರೋಪಿಸಿದ್ದಾರೆ. ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ರಸ್ತೆ ವಿವಾದ ೨೦೧೨ ರಲ್ಲಿ ಮುರಿದಾಗ, ಆಗಿನ ಬಿಜೆಪಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬೆಂಬಲವನ್ನು ಖೇನ್ಯ ಅವರು ಹೊಂದಿದರು. ಟಿಜೆ ಅಬ್ರಹಾಂ, ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತ, ಕರ್ನಾಟಕ ಹೈಕೋರ್ಟ್ನಲ್ಲಿ ಖೇನ್ಯರ ವಿರುದ್ಧ ಹಲವಾರು ಪ್ರಕರಣಗಳನ್ನು ಸಲ್ಲಿಸಿದ್ದರು. ಬಿಎಂಐಸಿ ಯೋಜನೆಯ ಭೂ ಸ್ವಾಧೀನದ ಬಗ್ಗೆ ಮಾಜಿ ಪ್ರಧಾನ ಮಂತ್ರಿಯ ಎಚ್.ಡಿ.ದೇವ್ ಗೌಡ ಅವರೊಂದಿಗೆ ಖೇನಿ ಅವರು ಸುದ್ದಿಯಲ್ಲಿದ್ದರು.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2018-07-13. Retrieved 2018-10-27.
  2. http://www.nicelimited.com/
  3. "ಆರ್ಕೈವ್ ನಕಲು". Archived from the original on 2011-06-22. Retrieved 2018-10-27.
  4. https://timesofindia.indiatimes.com/?referral=PM
  5. "ಆರ್ಕೈವ್ ನಕಲು". Archived from the original on 2012-05-01. Retrieved 2018-10-27.
  6. "ಆರ್ಕೈವ್ ನಕಲು". Archived from the original on 2018-10-12. Retrieved 2018-10-27.
  7. ೭.೦ ೭.೧ https://www.thenewsminute.com/article/congress-divided-millionaire-mla-ashok-kheny-enters-party-not-everyone-thrilled-77440
  8. https://timesofindia.indiatimes.com/city/bangalore/It-was-a-hurdle-race-for-Kheny/articleshow/3859054.cms?referral=PM