ಹಾಲೆ ಮರ

ವಿಕಿಪೀಡಿಯ ಇಂದ
Jump to navigation Jump to search
ಹಾಲೆ ಮರ
ಹೂ ಬಿಟ್ಟ ಹಾಲೆ ಮರ

ಗಿಡದ ಯಾವ ಭಾಗವನ್ನು ಕತ್ತರಿಸಿದರೂ ಹಾಲು ಹೊಮ್ಮುವುದರಿಂದ ಇದನ್ನು ಹಾಲೆ ಮರ ಎಂದು ಕರೆಯುತ್ತಾರೆ. ಈ ಗಿಡವು ಭಾರತಾದ್ಯಂತ ೧೨೦೦ ಮೀ. ಎತ್ತರದಲ್ಲಿ ಕಾಣ ಸಿಗುತ್ತದೆ. ಮಧ್ಯ ಪ್ರದೇಶ ಮತ್ತು ಮಹರಾಷ್ಟ್ರ ಪ್ರದೇಶದ ಕಾಡಿನ ಅಂಚಿನಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.[೧].

ಭಿನ್ನ ಭಾಷೆಗಳಲ್ಲಿ ಹಾಲೆ ಮರದ ಹೆಸರು[ಬದಲಾಯಿಸಿ]

 • ಕನ್ನಡ - ಹಾಳೆಮರ, ಏಳೆಲೆ ಹೊನ್ನೆ
 • ಇಂಗ್ಲಿಷ್ - devil tree
 • ಸಂಸ್ಕೃತ - ಸಪ್ತವರ್ಣ
 • ಕೊಂಕಣಿ - ಸ್ನಾಂತ್ ರೂಕ್
 • ಮಲೆಯಾಳಂ - ಏರಿಪಾಲಂ

ಸಸ್ಯ ವರ್ಣನೆ[ಬದಲಾಯಿಸಿ]

ಹಾಲೆ ಮರವು ೧೦ ಮೀ. ಎತ್ತರ ಬೆಳೆಯುವ ಪೊದೆ ಅಥವಾ ಸಣ್ಣ ಗಿಡವಾಗಿದೆ. ಎಲೆಗಳು ೧೦.೩೦ ಸೆ. ಮೀ. ಉದ್ದವಾಗಿದ್ದು, ಅಂಡಾಕಾರ ಮತ್ತು ಎಲೆಯ ನರಗಳು ಪ್ರಾಮುಖ್ಯವಾಗಿ ಕಾಣಿಸುತ್ತವೆ. ಸಣ್ಣದಾದ ತೊಟ್ಟನ್ನು ಹೊಂದಿರುತ್ತದೆ. ಹೂವುಗಳು ಸುಹಾಸನೆ ಹೊಂದಿದ ಬಿಳಿಯ ಬಣ್ಣದಿಂದ ಕೂಡಿರುತ್ತದೆ ಮತ್ತು ೧ ರಿಂದ ೧.೫ ಸೆ. ಮೀ. ಅಡ್ಡಳತೆ ಹೊಂದಿರುತ್ತದೆ. ತುದಿಯಲ್ಲಿ ಗೊಚಲಿನಂತಿರುತ್ತದೆ. ಕಾಯಿಗಳು ೨೦ ರಿಂದ ೪೫ ಸೆ. ಮೀ. ಉದ್ದವಿದ್ದು, ೬ ರಿಂದ ೮ ಮಿ. ಮೀ. ದಪ್ಪದ ಕೊಳವೆಯಾಕಾರವಾಗಿ ಬಿಳಿ ಚುಕ್ಕೆಗಳಿಂದ ಕೂಡಿದ್ದ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಬೀಜಗಳು ೧ ಸೆ. ಮೀ. ಉದ್ದ, ಹಿಂದೆಡೆ ಕುಚ್ಚಿನಂತಹ ಕಂದುರೋಮಗಳನ್ನು ಹೊಂದಿರುತ್ತದೆ.[೨]

ಔಷಧೀಯ ಗುಣಗಳು[ಬದಲಾಯಿಸಿ]

 • ಇದರ ಒಣಗಿಸಿದ ತೊಗಟೆಯು ಔಷಧ ದ್ರವ್ಯವಾಗಿದೆ.
 • ಅಮೀಬ್ ದಿಂದ ಬರುವ ಆಮಶಂಕೆಗೆ ಉಪಯುಕ್ತವಾಗಿದೆ.
 • ಇದು ಬಲ್ಯ, ವಿಷಮಘ್ನ ಮತ್ತು ಜ್ವರಘ್ನ ಗುಣವುಳ್ಳದ್ದಾಗಿದೆ.
 • ಈ ತೊಗಟೆಯಲ್ಲಿರುವ ಕೋನೆಸಿನ್ ಎಂಬ ಆಲ್ಕಲಾಯಿಡ್(ಸಸಾರಜನಕ ದ್ರವ್ಯ) ಕ್ಷಯರೋಗದ ಕ್ರಿಮಿಯನ್ನು ನಾಶಪಡಿಸುತ್ತದೆ.[೩]

ಇತರ ಉಪಯೋಗಗಳು[ಬದಲಾಯಿಸಿ]

ಈ ಗಿಡದ ನಿಸ್ಸಾರ ಭೂಮಿಯನ್ನು, ಅರಣ್ಯ ಭೂಮಿಯನ್ನಾಗಿಸಲು ಮತ್ತು ಹೊಸ ಕಾಡುಗಳನ್ನು ಬೆಳೆಸಲು ಯೋಗ್ಯವಾಗಿದೆ. ಈ ಮರವು ಆಟದ ಸಾಮಾನುಗಳು, ಚಿಕ್ಕ ಪೆಟ್ಟಿಗೆಗಳು, ಲೇಖಣಿಯ ಹಿಡಿ, ಬಾಚಣಿಗೆ, ಮುದ್ರಣದ ಚಿತ್ರದ ಅಡಿಮರ, ಹೊಗೆ ಸೊಪ್ಪಿನ ಚೀಲಗಳು, ಚಿತ್ರಪಟದ ಕಟ್ಟುಗಳು ಮುಂತಾದ ವಸ್ತುಗಳನ್ನು ತಯಾರಿಸುವುದರಲ್ಲಿ ಉಪಯುಕ್ತವಾಗಿದೆ.[೪]

ಉಲ್ಲೇಖ[ಬದಲಾಯಿಸಿ]

 1. http://www.icarelive.com/bedra/index.php?action=coverage&type=182
 2. ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆಅರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಬೆಂಗಳೂರು. ೧೯೯೮
 3. https://www.kannadigaworld.com/kannada/karavali-kn/273741.html
 4. https://recordingnature.wordpress.com/2010/11/06/devils-tree/
"https://kn.wikipedia.org/w/index.php?title=ಹಾಲೆ_ಮರ&oldid=801232" ಇಂದ ಪಡೆಯಲ್ಪಟ್ಟಿದೆ