ವಿಷಯಕ್ಕೆ ಹೋಗು

ಶಿವಕುಮಾರ್ ಶರ್ಮಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಡಿತ್. ಶಿವಕುಮಾರ್ ಶರ್ಮ.
ಶರ್ಮ ೨೦೧೬ ರಲ್ಲಿ
ಹಿನ್ನೆಲೆ ಮಾಹಿತಿ
ಜನನ(೧೯೩೮-೦೧-೧೩)೧೩ ಜನವರಿ ೧೯೩೮
Jammu, Jammu and Kashmir, British Raj
ಮರಣ10 May 2022(2022-05-10) (aged 84)[]
ಮುಂಬಯಿ, ಮಹಾರಾಷ್ಟ್ರ, ಭಾರತ
ಸಂಗೀತ ಶೈಲಿಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ
ವೃತ್ತಿಧ್ವನಿ ರಚನಾಕಾರರು. , ಸಂಗೀತಕಾರರು
ವಾದ್ಯಗಳುಸಂತೂರ್, ತಬಲ
ಸಕ್ರಿಯ ವರ್ಷಗಳು೧೯೫೫-೨೦೨೨
Associated actsರಾಹುಲ್ ಶರ್ಮ
ಹರಿಪ್ರಸಾದ್ ಚೌರಸಿಯ
ಅಧೀಕೃತ ಜಾಲತಾಣsantoor.com

ಪಂಡಿತ್ ಶಿವಕುಮಾರ್ ಶರ್ಮಾ(ಜನನ:ಜನವರಿ ೧೩,೧೯೩೮, ಮರಣ :ಮೇ ೧೦,೨೦೨೨) ಇವರು ಹಿಂದುಸ್ತಾನಿ ಸಂಗೀತ ಶೈಲಿಯ ಸಂತೂರ್ ವಾದ್ಯದ ವಾದಕರು. ಸಂತೂರ್ ಇದು ಕಾಶ್ಮೀರ ಕೊಳ್ಳದ ಒಂದು ಜಾನಪದ ವಾದ್ಯ, ಇದನ್ನು ಕೆತ್ತಿದ ಕಟ್ಟಿಗೆಯ ತುಂಡುಗಳಿಂದ ನುಡಿಸಲಾಗುತ್ತದೆ.

ಜೀವನ ಮತ್ತು ಸಂಗೀತ ಸಾಧನೆ

[ಬದಲಾಯಿಸಿ]

ಪ್ರಮುಖ ಮೈಲಿಗಲ್ಲುಗಳು

[ಬದಲಾಯಿಸಿ]
  • ೧೯೩೮ ಜನವರಿ ೧೩ರಂದು ಜಮ್ಮುವಿನಲ್ಲಿ ಜನನ.
  • ೧೯೪೩ ತಂದೆಯವರಾದ ಪಂಡಿತ್ ಉಮಾ ದತ್ ಶರ್ಮರ ಬಳಿ ಗಾಯನ, ತಬಲಾ ಶಿಕ್ಷಣ ಪ್ರಾರಂಭ.
  • ೧೯೫೦ ತಂದೆಯ ಬಳಿ ಸಂತೂರ್ ಶಿಕ್ಷಣ ಪ್ರಾರಂಭ.
  • ೧೯೫೫ ಡಾ. ಕರಣ್ ಸಿಂಘರ ಒತ್ತಯದ ಬಳಿಕ ಸುರ್ ಸಿಂಗಾರ್ ಸಂಸದ್ನ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಸಂತೂರ ವಾದನ ಪ್ರಸ್ತುತಿ.
  • ಮುಂದಿನ ೧೦ ವರ್ಷಗಳ ಕಾಲ ಸಂತೂರ ಪರಿಷ್ಕರಣೆ, ಮುಖ್ಯ ವಾದ್ಯವಾಗಿ ಪರಿವರ್ತನೆ
  • ಸಂಗೀತ ನಿರ್ದೇಶಕ ವಸಂತ್ ದೇಶಯಿಯವರ ಜೊತೆಗೆ ಕೆಲಸ, ವಣಕುದುರೆ ಶಾಂತಾರಾಮರ 'ಝನಕ್ ಝನಕ್ ಪಾಯಲ್ ಬಾಜೇ' ಚಿತ್ರಕ್ಕೆ ಅನೇಕ ಚಿಕ್ಕ ಸಂಗೀತ ಕೃತಿಗಳ ಕಾಣಿಕೆ.
  • ಎಚ್.ಎಮ್.ವಿ ಮೂಲಕ ಪ್ರಥಮ ಧ್ವನಿ ಮುದ್ರಿಕೆ.
  • ಪಂ. ಹರಿಪ್ರಸಾದ್ ಚೌರಾಸಿಯ ಮತ್ತು ಪಂ. ಬ್ರಿಜ್ ಭೂಷಣ್ ಕಾಬ್ರಾ ಜೊತೆಗೂಡಿ 'ಕಾಲ್ ಅಫ್ ದಿ ವ್ಯಾಲಿ' ಧ್ವನಿಮುದ್ರಿಕೆ ರಚನೆ, ಇದು ಅತೀ ಹೆಚ್ಚು ಮಾರಾಟವಾದ ಹಿಂದುಸ್ತಾನಿ ಶೈಲಿಯ ಧ್ವನಿಮುದ್ರಿಕೆಯಾಯಿತು.
  • ೧೯೮೦ ಪಂ. ಹರಿಪ್ರಸಾದ್ ಚೌರಾಸಿಯ ಜೊತೆಗೂಡಿ ಶಿವ-ಹರಿ ಜೋಡಿ ಸಂಗೀತ ನಿರ್ದೇಶಕ, ಯಶ್ ಛೋಪ್ರಾರ 'ಸಿಲ್ಸಿಲೇ' ಚಿತ್ರಕ್ಕೆ ಸಂಗೀತ ನಿರ್ದೇಶನ.
  • ೧೯೮೫ ಅಮೇರಿಕೆಯ ಬಾಲ್ಟಿಮೋರ್ ನಗರದ ಗೌರವ ಪ್ರಜೆಯಾಗಿ ಸನ್ಮಾನ.
  • ೧೯೮೬ ಕೇಂದ್ರ ಸಂಗೀತ ಕಲಾ ಅಕ್ಯಾಡೆಮಿಯ ಪ್ರಶಸ್ತಿ.
  • ೧೯೮೭ ಅಮೇರಿಕೆಯ ಅಮೀರ್ ಖುಸ್ರೋ ಸೊಸೈಟಿಯ 'ನಝ್ರ್ ಎ ಖುಸ್ರೋ' ಪ್ರಶಸ್ತಿ.
  • ೧೯೯೦ ಮಹಾರಾಷ್ಟ್ರ ಗೌರವ್ ಪುರಸ್ಕಾರ.
  • ೧೯೯೦ ಶತತಂತ್ರಿ ಶಿರೋಮಣಿ ಬಿರುದು(ಜೋಧಪುರ)
  • ೧೯೯೧ ಪದ್ಮಶ್ರೀ ಪ್ರಶಸ್ತಿ.
  • ೧೯೯೪ ಜಮ್ಮು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
  • ೧೯೯೬ ಉಸ್ತಾದ ಹಾಫೀಜ್ ಅಲಿ ಖಾನ್ ಪ್ರಶಸ್ತಿ.
  • ೧೯೯೭ ಮಗ ರಾಹುಲ್ ಶರ್ಮಾ ಸಂಗೀತ ರಂಗಕ್ಕೆ ಪಾದಾರ್ಪಣೆ.
  • ೨೦೦೧ ಪದ್ಮವಿಭೂಷಣ ಪ್ರಶಸ್ತಿ.

ಪಂಡಿತ್ ಶಿವಕುಮಾರ ಶರ್ಮರವರು (೮೪) ಸ್ವಲ್ಪ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ೧೦, ಮೇ, ೨೦೨೨ ರಂದು ಮುಂಬಯಿನಲ್ಲಿ ನಿಧನರಾದರು.[]

ಧ್ವನಿಮುದ್ರಣ ಪ್ರಶಸ್ತಿಗಳು

[ಬದಲಾಯಿಸಿ]
  • 'ಕಾಲ್ ಅಫ್ ದಿ ವ್ಯಾಲಿ'ಗೆ ಪ್ಲ್ಯಾಟಿನಮ್ ಡಿಸ್ಕ್
  • 'ಸಿಲ್ಸಿಲಾ' ಚಿತ್ರದ ಧ್ವನಿ ಮುದ್ರಣಕ್ಕೆ ಪ್ಲ್ಯಾಟಿನಮ್ ಡಿಸ್ಕ್

ಉಲ್ಲೇಖಗಳು

[ಬದಲಾಯಿಸಿ]
  1. "Santoor maestro Pandit Shivkumar Sharma passes away". The Indian Express. 10 May 2022. Archived from the original on 11 May 2022. Retrieved 10 May 2022.
  2. Santoor maestro Shivkumar Sharma passes away, The Hindu Bureau

ಹೊರಗಿನ ಸಂಪರ್ಕ

[ಬದಲಾಯಿಸಿ]

ಸಂತೂರ್ ಪುಟ