ವಿಶ್ವಮೋಹನ ಭಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಂ.ವಿಶ್ವಮೋಹನ ಭಟ್

ಪಂಡಿತ್ ವಿಶ್ವಮೋಹನ ಭಟ್ ಪ್ರಸಿದ್ಧ ಹಿಂದೂಸ್ಥಾನಿ ಸಂಗೀತಗಾರರು.ಸಂಗೀತಕಾರರ ಕುಟುಂಬದಲ್ಲಿ ಜುಲೈ,೧೯೫೨ ರಲ್ಲಿ ಜೈಪುರ ದಲ್ಲಿ ಜನಿಸಿದರು.ಪ್ರಾರಂಭದ ಸಂಗೀತ ಶಿಕ್ಷಣ ತಂದೆಯವರಿಂದಲೇ ದೊರೆಯಿತು.ಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ರವರ ಶಿಷ್ಯರಾದ ಬಳಿಕ ಇವರ ಪ್ರತಿಭೆ ಹೆಚ್ಚು ಬೆಳಕಿಗೆ ಬಂದಿತು.ಇವರು ಸ್ಪಾನಿಷ್ ಗಿಟಾರ್ ಹಾಗೂ ವೀಣೆಯ ಅಂಶಗಳನ್ನು ಸೇರಿಸಿ ಮೋಹನವೀಣೆ ಎಂಬ ಹೊಸವಾದ್ಯವನ್ನು ಸೃಷ್ಟಿಸಿದರು.ಸದ್ಯ ಮೋಹನವೀಣೆಯನ್ನು ಪ್ರಚುರ ಪಡಿಸಿಕೊಂಡು ಕಲಾಸೇವೆ ಮಾಡುತ್ತಿದ್ದಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]