ಪ್ರೇಮ್ ಕುಮಾರ್ (ನಟ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೇಮ್ ಕುಮಾರ್
ಜನನ18 ಏಪ್ರಿಲ್ 1976
ಇತರೆ ಹೆಸರುಗಳುನೆನಪಿರಲಿ ಪ್ರೇಮ್, ಲವ್ಲಿ ಸ್ಟಾರ್
ರಾಷ್ಟ್ರೀಯತೆಭಾರತೀಯ
ಉದ್ಯೋಗನಟ
ಸಕ್ರಿಯ ವರ್ಷಗಳು2004 -
ಜೀವನ ಸಂಗಾತಿಜ್ಯೋತಿ
ಮಕ್ಕಳು2


ಪ್ರೇಮ್ ಕುಮಾರ್ (ಜನನ 18 ಏಪ್ರಿಲ್ 1976), ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ ಮತ್ತು ನಿರ್ಮಾಪಕ ಆಗಿದ್ದಾರೆ. ಅವರು ಪ್ರಾಣ (2004) ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಆದಾಗ್ಯೂ, ಅವರ ಪ್ರಮುಖ ಯಶಸ್ಸು, ನೆನಪಿರಲಿ (2005) ಚಿತ್ರದ ಮೂಲಕ ಸಿಕ್ಕಿತು. ಇದಕ್ಕಾಗಿ ಅವರು ತಮ್ಮ ಮೊದಲ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದರು. ಅಂದಿನಿಂದ, ಪ್ರೇಮ್ ಗೆ ಹೆಚ್ಚಾಗಿ ರೊಮ್ಯಾಂಟಿಕ್ ಥೀಮ್ ಇರುವ ಚಲನಚಿತ್ರಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಕನ್ನಡ ಚಿತ್ರರಂಗದಲ್ಲಿ ಲವ್ಲಿ ಸ್ಟಾರ್ ಎಂಬ ಬಿರುದನ್ನು ಗಳಿಸಿದ್ದಾರೆ. ಪ್ರೇಮ್ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಪಲ್ಲಕ್ಕಿ (2007) ಚಿತ್ರವನ್ನು ಸಹ ನಿರ್ಮಿಸಿದರು. ಇವರು ನೆನಪಿರಲಿ ಪ್ರೇಮ್, ಲವ್ಲಿ ಸ್ಟಾರ್ ಪ್ರೇಮ್‌ ಎಂದು ಪ್ರಸಿದ್ದಿಯಾಗಿದ್ದಾರೆ.

ಚಲನಚಿತ್ರಗಳು[ಬದಲಾಯಿಸಿ]

ಪ್ರೇಮ್ ಕುಮಾರ್‌ರವರ ನಟಿಸಿರುವ ಚಲನಚಿತ್ರಗಳ ಪಟ್ಟಿ ಇಂತಿದೆ.

ವರ್ಷ ಸಂಖ್ಯೆ ಚಲನಚಿತ್ರ ಪಾತ್ರ ಇತರೆ ಟಿಪ್ಪಣಿಗಳು
2004 01 ಪ್ರಾಣ ಜೀವಾ
2005 02 ನೆನಪಿರಲಿ ಕಿಶೋರ್
2006 03 ಜೊತೆ ಜೊತೆಯಲಿ ಪ್ರೇಮ್
2007 04 ಪಲ್ಲಕಿ ಲಕ್ಷ್ಮೀಕಾಂತ
05 ಗುಣವಂತ ಗುಣಶೇಖರ್
2008 06 ಹೊಂಗನಸು ಸಾಗರ್
2009 07 ಗೌತಮ್ ಗೌತಮ್
2010 08 ಸವಿ ಸವಿ ನೆನಪು ಪ್ರೇಮ್
09 ಜೊತೆಗಾರ ವಿಶ್ವಾಸ್
10 ಚೆಲುವೆಯೆ ನಿನ್ನ ನೋಡಲು ಪ್ರೇಮ್
2011 11 ಎರಡನೇ ಮದುವೆ ವಿವೇಕ್
12 ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಶ್ಯಾಮ್
13 ದನ್ ದನಾ ದನ್ ಪ್ರೇಮ್
2012 14 ಚಾರಮಿನಾರ್ ಮೋಹನ್
15 ಚಂದ್ರ ಚಂದ್ರಹಾಸ ದ್ವಿಭಾಷಾ ಚಿತ್ರ (ತಮಿಳು & ಕನ್ನಡ)
16 ಶತ್ರು ವಿಜಯ ಸೂರ್ಯ
2014 17 ಅತೀ ಅಪರೂಪ ಭರತ್
18 ಫೇರ ಆಂಡ್ ಲವ್ಲಿ ಮನೋಜ(ಮನು)
2015 19 ಮಳೆ ವರುಣ್
--- ರಿಂಗ ರೋಡ್
2016 20 ಮಸ್ತ್ ಮೊಹಬತ್ ಸಿರಿ
2017 21 ಚೌಕ ಹಕ್ಕಿ ಗೋಪಾಲ
2018 22 ದಳಪತಿ ರಾಮ್
23 ಲೈಫ್ ಜೊತೆ ಒಂದ್ ಸೆಲ್ಫಿ ನಕುಲ್

ದೂರದರ್ಶನ[ಬದಲಾಯಿಸಿ]

ರಿಯಾಲಿಟಿ ಶೋ[ಬದಲಾಯಿಸಿ]

ವರ್ಷ ಹೆಸರು ಪಾತ್ರ ವಾಹಿನಿ ಇತರೆ ಟಿಪ್ಪಣಿಗಳು
2022 ಜೋಡಿ ನಂ.1 (ಸೀಸನ್ 1) ತೀರ್ಪುಗಾರ ಝೀ ಕನ್ನಡ
2023 ವೀಕೆಂಡ್ ವಿಥ್ ರಮೇಶ್ (ಸೀಸನ್ 5) ಅತಿಥಿ ಝೀ ಕನ್ನಡ
2023 ಜೋಡಿ ನಂ.1 (ಸೀಸನ್ 2) ತೀರ್ಪುಗಾರ ಝೀ ಕನ್ನಡ

ಪ್ರಶಸ್ತಿ ಪುರಸ್ಕಾರಗಳು[ಬದಲಾಯಿಸಿ]

ವರ್ಷ ಚಲನಚಿತ್ರ ಪ್ರಶಸ್ತಿ ವರ್ಗ ಫಲಿತಾಂಶ ಇತರೆ ಟಿಪ್ಪಣಿಗಳು
2005 ನೆನಪಿರಲಿ ಫಿಲ್ಮ್ ಫೇರ್ ಪ್ರಶಸ್ತಿ ನಟ ಅತ್ಯುತ್ತಮ ನಟ ಗೆಲುವು
2013 ಚಾರ್‌ಮಿನಾರ್ ಫಿಲ್ಮ್ ಫೇರ್ ಪ್ರಶಸ್ತಿ ನಟ ಅತ್ಯುತ್ತಮ ನಟ ಗೆಲುವು

ಉಲ್ಲೇಖಗಳು[ಬದಲಾಯಿಸಿ]