ವಿಷಯಕ್ಕೆ ಹೋಗು

ಫಿಲ್ಮ್‌ಫೇರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Filmfare
ಆವರ್ತನBi-weekly
ಪ್ರಸಾರ1.4 lakhs
ಪ್ರಥಮ ಸಂಚಿಕೆ1952[೧]
ಕಂಪನಿWorldwide Media
ಮೂಲಸ್ಥಳMumbai
ಭಾಷೆEnglish
ಜಾಲತಾಣwww.filmfare.com

ಫಿಲ್ಮ್‌ಫೇರ್ ಭಾರತೀಯ ಚಲನಚಿತ್ರದ ಬಗೆಗಿನ ಸವಿವರ ಮಾಹಿತಿ ನೀಡುವ ಇಂಗ್ಲಿಷ್-ಭಾಷಾ ಟ್ಯಾಬ್ಲಾಯ್ಡ್-ಗಾತ್ರದ(ಪುಟಾಣಿ) ನಿಯತಕಾಲಿಕೆಯಾಗಿದೆ. ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸೇವಾ ಸಂಘಟಿತ-ಸಂಸ್ಥೆ ಎನಿಸಿದ ದಿ ಹಿಂದು ಗ್ರೂಪ್‌ನಿಂದ ಪ್ರಕಟಿಸಲ್ಪಡುವ ಇದು ಮುಂಬಯಿಯಲ್ಲಿದೆ. ಇದು ಬಾಲಿವುಡ್ ಚಲನಚಿತ್ರೋದ್ಯಮದ ಪ್ರಮುಖ ಅಂಶಗಳನ್ನು ತನ್ನ ಪ್ರಕಟಣೆಗಳಲ್ಲಿ ಎತ್ತಿ ತೋರಿಸುತ್ತದೆ. ಭಾರತದಲ್ಲೇ ಅತ್ಯಂತ ಹೆಚ್ಚು ಜನಪ್ರಿಯ ಮನರಂಜನಾ ನಿಯತಕಾಲಿಕೆಯಾದ ಫಿಲ್ಮ್‌ಫೇರನ್ನು ಪರದೇಶದಲ್ಲಿರುವ ಭಾರತೀಯರೂ ಓದುತ್ತಾರೆ.

ಇದು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ದಕ್ಷಿಣದ ಫಿಲ್ಮ್‌ಫೇರ್ ಪ್ರಶಸ್ತಿಗಳು ಮೊದಲಾದ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಮತ್ತು ಪ್ರಾಯೋಜಿಸುತ್ತದೆ.

ನಿಯತಕಾಲಿಕ[ಬದಲಾಯಿಸಿ]

ಫಿಲ್ಮ್‌ಫೇರ್ ಭಾರತದಲ್ಲೇ ಅತ್ಯಂತ ಹಳೆಯ ಚಲನಚಿತ್ರ-ನಿಯತಕಾಲಿಕೆ.

ಇದು ಆರಂಭದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಮಾಧ್ಯಮ ಸೇವಾ ಸಂಘಟಿತ ಸಂಸ್ಥೆಯಾದ ಹಾಗೂ ದಿ ಟೈಮ್ಸ್ ಆಫ್ ಇಂಡಿಯಾ, ದಿ ಇಕಾನಮಿಕ್ ಟೈಮ್ಸ್, ನವ್‌ಭಾರತ್ ಟೈಮ್ಸ್ ಮತ್ತು ಮಹಾರಾಷ್ಟ್ರ ಟೈಮ್ಸ್ ಮೊದಲಾದವನ್ನು ಪ್ರಕಟಿಸುವ ದಿ ಟೈಮ್ಸ್ ಗ್ರೂಪ್‌‌ನ ಒಂದು ಭಾಗವಾಗಿತ್ತು. 2005ರಲ್ಲಿ ಫಿಲ್ಮ್‌ಫೇರ್ ಮತ್ತು ಕೆಲವು ಇತರ ಪತ್ರಿಕೆಗಳು,ಅದರಲ್ಲೂ ಹೆಚ್ಚು ಗಮನಾರ್ಹವಾಗಿ ಫೆಮಿನಾ ಪತ್ರಿಕೆ ಸಂಘಟನೆಯಿಂದ ಬೇರ್ಪಟ್ಟು ಅಂಗಸಂಸ್ಥೆಯಾದವು. ನಂತರ 'ವರ್ಲ್ಡ್‌ವೈಡ್ ಮೀಡಿಯಾ', ದಿ ಟೈಮ್ಸ್ ಗ್ರೂಪ್‌ ಮತ್ತು BBC ವರ್ಲ್ಡ್‌ವೈಡ್‍‌ನ ಪ್ರಕಟಣಾ ವಿಭಾಗವಾದ BBC ಮ್ಯಾಗಜಿನ್ಸ್‌ನ ನಡುವಿನ 50:50 ಜಂಟಿ ಉದ್ಯಮವಾಯಿತು.

2008ರ ಆರಂಭದಲ್ಲಿ ಈ ನಿಯತಕಾಲಿಕೆಯು ಅದರ ವಿನ್ಯಾಸ ಮತ್ತು ಪ್ರಕಟಿಸುವ ಕಾಲಾವಧಿ ಎರಡನ್ನೂ ನವೀಕರಿಸಿತು. ಒಂದು ತಿಂಗಳಲ್ಲಿ 15 ದಿನಗಳಿಗೊಮ್ಮೆ ಪ್ರಕಟವಾಗುವ ಮೂಲಕ ಫಿಲ್ಮ್‌ಫೇರ್ ಜಿತೇಶ್ ಪಿಳ್ಳೈನ ಸಂಪಾದಕತ್ವದಡಿಯಲ್ಲಿ ಅದರ ನಿಯತ ವಿಭಾಗಗಳನ್ನು ಮತ್ತು ಸಂಪೂರ್ಣ ವಿನ್ಯಾಸವನ್ನು ಪರಿಷ್ಕರಿಸಿತು. ಇದು ವ್ಯಾಪಕವಾದ ಛಾಯಾಚಿತ್ರಗಳ ಒಳಗೊಳ್ಳುವಿಕೆಯನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದೆ. ಇದರ ಸಂಪಾದಕೀಯ ವರ್ಗವು ಅನುರಾಧ ಚೌಧರಿ, ಸಂಗೀತ ಆಂಗೆಲ ಕುಮಾರ್ ಮತ್ತು ಫಹೀಮ್ ರುಹಾನಿ ಮೊದಲಾದವರನ್ನು ಒಳಗೊಳ್ಳುತ್ತದೆ.

ಫಿಲ್ಮ್‌ಫೇರ್ ಎರಡು ಅಭಿಮಾನಿ-ಆಧಾರಿತ ಚಲನಚಿತ್ರ ಪ್ರಶಸ್ತಿಗಳನ್ನು ಆರಂಭಿಸಿದೆ: ಹಿಂದಿ ಭಾಷಾ ಚಲನಚಿತ್ರಗಳಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗಳು, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷಾ ಚಲನಚಿತ್ರಗಳಿಗಾಗಿ ದಕ್ಷಿಣದ ಫಿಲ್ಮ್‌ಫೇರ್ ಪ್ರಶಸ್ತಿಗಳು.

ನಿಯತ ಭಾಗಗಳು[ಬದಲಾಯಿಸಿ]

ಚಿತ್ರ:Powerlist.jpg
ಫಿಲ್ಮ್‌ಫೇರ್ ನಿಯತಕಾಲಿಕ, 2006ರ ಫೆಬ್ರವರಿಯ ಆವೃತ್ತಿ
  • I ಸ್ಪೈ - ಈ ಭಾಗವು ಹಿಂದಿ ಚಲನಚಿತ್ರೋದ್ಯಮದ (ಹೈಫೈ) ಇತ್ತೀಚಿನ ಆಗುಹೋಗುಗಳು, ನಟರ ನಡುವಿನ ಇತ್ತೀಚಿನ ಜಗಳಗಳು, ಪ್ರಸ್ತುತ ವದಂತಿಗಳು ಮೊದಲಾದವನ್ನು ಎತ್ತಿ ತೋರಿಸುವ ಸುದ್ದಿ-ತುಣುಕುಗಳನ್ನು ಒಳಗೊಳ್ಳುತ್ತದೆ.
  • ಬಿಗ್ ಟಿಕೆಟ್ - ಮುಂಬರುವ ಚಲನಚಿತ್ರಗಳ ಬಗೆಗಿನ ರಹಸ್ಯ ಮುನ್ನೋಟಗಳು ಮತ್ತು ಬಿಡುಗಡೆಯಾದ ಚಿತ್ರಗಳ ವಿಮರ್ಶೆಗಳೊಂದಿಗೆ ಈ ಭಾಗವು ಚಲನಚಿತ್ರ ಉತ್ಸಾಹಿಗಳನ್ನು ಹೆಚ್ಚು ಆಕರ್ಷಿಸುತ್ತದೆ. ಹಾಗೆಯೇ ಚಿತ್ರ-ನಿರ್ಮಾಪಕರೂ ಈ ಪ್ರಬಲ ನಿಯತಕಾಲಿಕೆ ಅವರ ಚಿತ್ರಗಳ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ತಿಳಿಯಲು ಆಸಕ್ತರಾಗಿರುತ್ತಾರೆ. ಶೈಲಿಗೆ ಹೆಸರುವಾಸಿಯಾದ ಫಿಲ್ಮ್‌ಫೇರ್ ‌ನ ಮುನ್ನೋಟಗಳು ಮತ್ತು ವಿಮರ್ಶೆಗಳು ಸಣ್ಣದಾಗಿದ್ದರೂ, ಆಕರ್ಷಕವಾಗಿರುತ್ತವೆ, ಅಲ್ಲದೇ ಅವುಗಳ ಚಿತ್ರಗಳೇ ಎಲ್ಲವನ್ನು ಹೇಳುವ ರೀತಿಯಲ್ಲಿ ಇರುತ್ತವೆ.
  • ಫ್ಯಾಶನ್ ಪ್ಲೇ - ಫಿಲ್ಮ್‌ಫೇರ್‍ನ ಮೂಲಪ್ರತಿ-ತಿದ್ದುವ ಸಂಪಾದಕಿ ಸಂಗೀತ ಆಂಗೆಲ ಕುಮಾರ್, ಈ ವಿಭಾಗವು ಹೈಫೈ ಉದ್ಯಮದ ಫ್ಯಾಷನ್ ಸಾಮಾನ್ಯಾಭಿಮತದ ಇತ್ತೀಚಿನ ನಿರ್ಧಾರಗಳಿಗೆ ಹೆಚ್ಚು ಒತ್ತು ನೀಡುವುದರಿಂದ ಚಲನಚಿತ್ರೋದ್ಯಮದಲ್ಲಿನ ಎಲ್ಲಾ ನಟರು ಇದನ್ನು ಓದುತ್ತಾರೆ, ಎಂದು ಹೇಳುತ್ತಾಳೆ. ನಟರಿಗೆ ಪ್ರಮುಖವಾಗಿ ಅವರ ವೃತ್ತಿ ಪ್ರವೃತ್ತಿಯ ಫ್ಯಾಷನ್ ಪರಿಮಾಣದ ಆಧಾರದಲ್ಲಿ 'ಮಾದಕ ವ್ಯಕ್ತಿತ್ವ ' ಅಥವಾ 'ಅಲ್ಲ' ಎಂದು ಗುರುತಿಸಲಾಗುತ್ತದೆ.
  • ಫೋಟೊ ಶಾಟ್ಸ್ - ಫಿಲ್ಮ್‌ಫೇರ್ ‍‌ನ ಛಾಯಾಚಿತ್ರ ಸಂಗ್ರಹವು ಪುರಾಣಪ್ರಸಿದ್ಧವಾಗಿದೆ. ಮುನ್ನಾ , ಡಬ್ಬೂ ರತ್ನಾನಿ ಮತ್ತು ಅತುಲ್ ಕಾಸ್ಬೆಕರ್ ಮೊದಲಾದ ತಾರೆಯರ ವರ್ಗದ ಛಾಯಾಗ್ರಾಹಕರನ್ನು ಹೊಂದಿರುವ ಫಿಲ್ಮ್‌ಫೇರ್ ‌ನ ಛಾಯಾಚಿತ್ರಗಳು ಹೆಚ್ಚಾಗಿ ವಿಷಯಾಧಾರಿತವಾಗಿರುತ್ತವೆ, ಉದಾ. "ದಿ 60ಸ್ ಲುಕ್".
  • ಫ್ಯೂಚರ್ ಸ್ಟಾಕ್ - ಈ ವಿಭಾಗವು ಚಲನಚಿತ್ರೋದ್ಯಮದಲ್ಲಿನ ಹೊಸದಾಗಿ ಜನಿಸಿದ ಮಕ್ಕಳು ಮತ್ತು ಮುಂಬರುವ ಪ್ರಮುಖ ವ್ಯಕ್ತಿಗಳು, ನಟರಾಗುತ್ತಾರೆಯೇ, ಸಂಗೀತಕಾರರಾಗುತ್ತಾರೆಯೇ ಅಥವಾ ನಿರ್ದೇಶಕರಾಗುತ್ತಾರೆಯೇ ಎಂಬ ಭವಿಷ್ಯವಾಣಿಯನ್ನು ಒಳಗೊಳ್ಳುತ್ತದೆ.
  • ಜನ್ ನೆಕ್ಸ್ಟ್ - ಜನರೇಶನ್ ನೆಕ್ಸ್ಟ್ ಕಿರಿಯ ತಾರೆಯರ ಬಗೆಗಿನ ಗೊತ್ತುಗುರಿಯಿಲ್ಲದ ಮಾಹಿತಿಗಳ ಸಂಗ್ರವಾಗಿದೆ.

ಇದನ್ನು ಸಹ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. Press in India, Issue 33. Office of the Registrar of Newspapers. 1989. p. 75.

ಹೊರಗಿನ ಕೊಂಡಿಗಳು[ಬದಲಾಯಿಸಿ]