ವಿಷಯಕ್ಕೆ ಹೋಗು

ಪಂ. ವಿ. ಜಿ. ಜೊಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೯೨೧-೩೧, ಜನವರಿ, ೨೦೦೪)

ಶಾಸ್ತ್ರೀಯ ಸಂಗೀತ ರಸಿಕರಿಗೆಲ್ಲರಿಗೂ 'ವಿ. ಜಿ. ಜೊಗ್' ಎಂದೇ ಚಿರಪರಿಚಿತರಾದ, ವಿಷ್ಣು ಗೋವಿಂದ್ ಜೊಗ್ ಜನಿಸಿದ್ದು, ೩೧ ಜನವರಿ ೧೯೨೧ (ಅಥವಾ ೧೯೨೨) ರಲ್ಲಿ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯಲ್ಲಿ. ದ. ಕಲ್ಕತ್ತಾದಲ್ಲಿ. 'ಭಾರತೀಯ ವಯೊಲಿನ್ ವಾದಕ' ರಾಗಿ ಹೆಸರು ಮಾಡಿದ್ದರು. 'ವಯೊಲಿನ್ ವಾದ್ಯದಲ್ಲಿ ಅತಿ ಮೇರು ಸಾಧಕರು'. ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲಿ, ಪಶ್ಚಿಮದ ವಯೊಲಿನ್ ವಾದ್ಯವನ್ನು ಸಶಕ್ತವಾಗಿ ದುಡಿಸಿಕೊಂಡವರಲ್ಲಿ ಮೊದಲಿಗರು. ೨೦ ನೆಯ ಶತಮಾನದ 'ಹಿಂದೂಸ್ಥಾನಿ ಸಂಗೀತಪ್ರಕಾರ'ಕ್ಕೆ ವಯೊಲಿನ್ ವಾದ್ಯವನ್ನು ನಿಖರವಾಗಿ ಪರಿಚಯಿಸಿದ ಕೀರ್ತಿ ಅವರದು. 'ವಯೊನಿನ್ ವಾದ್ಯ'ವನ್ನು 'ದಕ್ಷಿಣಾದಿ ಸಂಗೀತದ ಮಹಾಸಂಗೀತಕಾರರು' ಕೆಲವಾರು ಬದಲಾವಣೆಗಳೊಂದಿಗೆ, ತಮ್ಮ 'ವಶೀಕರಣ'ಮಾಡಿಕೊಂಡಿದ್ದರು.

ಸಂಗೀತದ ಗುರುಗಳು

[ಬದಲಾಯಿಸಿ]

ಜೊಗ್ ರವರ ಗುರುಗಳು ಬಾಬಾ ಅಲ್ಲಾಉದ್ದೀನ್ ಖಾನ್ರವರು. ೨೦ ನೆಯ ಶತಮಾನದ ಅಗ್ರಗಣ್ಯ ಸಂಗೀತಗಾರಜೊತೆ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿದ್ದಾರೆ. ಅವೆಲ್ಲಾ ಧ್ವನಿಮುದ್ರಿತವಾಗಿವೆ. ಬಿಸ್ಮಿಲ್ಲಾ ಖಾನ್ ಸಹಿತ. ವಿದೇಶಗಳಲ್ಲೂ ಅವರ ಕಾರ್ಯಕ್ರಮಗಳು ನಡೆಸಲ್ಪಟ್ಟಿವೆ. ಕಲ್ಕತ್ತಾದ ಆಕಾಶವಾಣಿಭವನದಲ್ಲಿ ಹಲವಾರು ಸಂಗೀತಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರ‍ೆ.

ವೃತ್ತಿಜೀವನ

[ಬದಲಾಯಿಸಿ]

೧೯೪೪ ರಲ್ಲಿ ಅವರು, ಲಕ್ನೋ ನಗರದ ಭಟ್ಖಂಡೆ ಕಾಲೇಜ್ ಆಫ್ ಹಿಂದೂಸ್ಥಾನಿ ಮ್ಯೂಸಿಕ್‌ನಿಂದ ಪಡೆದರು. ಅಲ್ಲೇ ಸಂಗೀತ ಪ್ರಾಧ್ಯಾಪಕರಾಗಿ ನಿಯುಕ್ತರಾದರು. ಅಷ್ಟೇ ಅಲ್ಲದೆ ಮತ್ತೊಂದು ಕಾಲೇಜ್, ಆಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಕ್ ನಲ್ಲೂ ಬೋಧಿಸುತ್ತಿದ್ದರು. ಪಂ. ವಿಷ್ಣು ಗೋವಿಂದ್ ಜೊಗ್, ವಯೊಲಿನ್ ವಾದ್ಯಕ್ಕೆ ಮತ್ತೊಂದು ಹೆಸರೆಂದು ಜನ ನಂಬಿದ್ದರು. ಶಾಸ್ತ್ರೀಯ ಸಂಗೀತಗಾರರ ವಂಶದಲ್ಲಿ ನಡೆದುಬಂದ ಹೆಗ್ಗಳಿಕೆ ಅವರದು. ಸುಮಾರು ೩ ತಲೆಮಾರಿನ ಕಲಾವಿದರ, ಸುಮಾರು ೫ ಸತಮಾನಗಳ ಒಂದೇ ಸಮನಾದ ಯಶಸ್ಸನ್ನು ಹಾಸಿಲ್ ಮಾಡಿದ್ದರು.

ಬಾಲ್ಯ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

ವಿ. ಜಿ. ಜೊಗ್, ಜನಿಸಿದ್ದು ಬೊಂಬಾಯಿನಲ್ಲಿ, ೧೯೨೧ ರಲ್ಲಿ. ಎಸ್.ಸಿ.ಅಥವಳೆಯವರಿಂದ ಮತ್ತು ಗಣಪತ್ ರಾವ್ ಪುರೋಹಿತ್ ರವರ ಗರಡಿಯಲ್ಲಿ ತಾಲೀಮ್ ಮಾಡಿದರು. ತದನಂತರ ವಿಶ್ವೇಶ್ವರ್ ಶಾಸ್ತ್ರಿಗಳ ಬಳಿ ಪ್ರಶಿಕ್ಷಣದೊರೆಯಿತು. ಪ್ರಖ್ಯಾತ ಸಂಗೀತಕಾರ, ಮತ್ತು ರಚನಾಕಾರ, ಡಾ. ಎಸ್. ಎನ್. ರತನ್ ಜಾರ್ಕರ್, ಬಳಿ, ಉಸ್ತಾದ್ ಅಲ್ಲಾಉದ್ದೀನ್ ಖಾನ್ ರ ಬಳಿ ಸ್ವಲ್ಪಕಾಲ ಕಳೆದರು. ಗ್ವಾಲಿಯರ್, ಆಗ್ರ, ಮತ್ತು ಬಖ್ಲೆ ಶೈಲಿಗಳಲ್ಲಿ ಶ್ರದ್ಧೆ ಮತ್ತು ರಾಗಗಳನ್ನು ಹಿಡಿತ, ಅದರ ರಸಭಾವಗಳನ್ನು ಹಾಡುವಾಗ ಬಳಸುವ ಪರಿ, ಅವರದೇ ವಿಶೇಷ ಖಳೆಕಟ್ಟಿತ್ತು. ೧೯೩೦ ರಲ್ಲಿ,ಚಿಕ್ಕ ಪ್ರಾಯದಲ್ಲೇ ಅತಿ ದೊಡ್ಡ ಕಲಾಕಾರರ ಸಾಂಗತ್ಯದಲ್ಲಿ ಭಟ್ಖಂಡೆ ಕಾಲೇಜ್ ನಲ್ಲಿ ವ್ಯಾಸಂಗಮಾಡುವಾಗಲೇ ಪೂರ್ವ ಆಫ್ರಿಕ, ನೇಪಾಲ್ ಶ್ರಿ ಲಂಕ, ಯುನೈಟೆಡ್ ಕಿಂಗ್ಡಮ್, ಫ್ರಾನ್ಸ್, ಮತ್ತು ಅಮೆರಿಕ, ಮತ್ತು ಪ. ಜರ್ಮನಿ ಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ೧೯೮೫ ರಲ್ಲಿ ಅಮೆರಿಕದಲ್ಲಿ, ಭಾರತೀಯ ಉತ್ಸವ ದ ಸಂದರ್ಭದಲ್ಲಿ, ತಮ್ಮ ಪ್ರತಿಭಾ-ಪ್ರದರ್ಶನವನ್ನು ಮಾಡಿದರು.

'ಪಂ.ಜೊಗ್' ರವರ ಕೆಲವು ಪ್ರಖ್ಯಾತ ಶಿಷ್ಯರು

[ಬದಲಾಯಿಸಿ]

ಶ್ರೀ.ಪಲ್ಲಬ್ ಬಂಡೋಪಾಧ್ಯಾಯ್

ಶ್ರೀ ಉತ್ಪಲ್ ಚಕ್ರಬೊರ್ತಿ

ಶ್ರೀ.ಸುಬಲ್ ಬಿಸ್ವಾಸ್

ಬರೆದ ಉತ್ತರಾದಿ-ಸಂಗೀತದ ಪರಿಚಯದ ಪುಸ್ತಕ

[ಬದಲಾಯಿಸಿ]

೧೯೪೪,ರಲ್ಲಿ,’ಬೆಹಲ ಶಿಕ್ಷ,’ವೆಂಬ ಪುಸ್ತಕ ಪ್ರಕಟಿತವಾಯಿತು. ಸಂಗೀತ-ಕಲಿಯುವವರಿಗೆ, ಅದೊಂದು ಅತ್ಯುತ್ತಮ ಹೊತ್ತಿಗೆಯೆಂದು ಪರಿಗಣಿಸಲ್ಪಟ್ಟಿದೆ. ೧೯೫೩ ರಲ್ಲಿ ಆಲ್ ಇಂಡಿಯ ರೆಡಿಯೊ ಸೇರಿದರು. ಸಂಗೀತ ಕಾರ್ಯಕ್ರಮಗಳನ್ನು ಸಂಕಲನಮಾಡಿದರು. ವೃತ್ತಿಜೀವನದ ಕೊನೆಯಲ್ಲಿ 'ಡೆಪ್ಯುಟಿ ಚೀಫ್ ಪ್ರಡ್ಯೂಸರ್' ಆಗಿ ನಿವೃತ್ತರಾದರು.

ಪ್ರಶಸ್ತಿಗಳು

[ಬದಲಾಯಿಸಿ]
  • '೧೯೮೨ ರಲ್ಲಿ ಪದ್ಮ ಭೂಷಣ ಪ್ರಶಸ್ತಿ'
  • 'Sangeet Natak Academyaward in ೧೯೮೩'
  • 'Padma Bhushan in ೧೯೮೫ by the president of India'.
  • 'LP/EP gramophone records of solo and jugalbandi with sangeet maestros at his edit'.
  • ೨೦೦೩-೨೦೦೪ರ ಸಾಲಿನ ಕಾಳಿದಾಸ ಸಮ್ಮಾನ್ಪ್ರಶಸ್ತಿ.

ಇಳಿವಯಸ್ಸಿನಲ್ಲಿ ಹಣದ ತೊಂದರೆಯನ್ನು ಅನುಭವಿಸಬೇಕಾಯಿತು

[ಬದಲಾಯಿಸಿ]

ಮಹಾರಾಷ್ಟ್ರದಲ್ಲಿ ಜನಿಸಿದ 'ಪಂ. ಜೊಗ್',ರವರಿಗೆ ತಮ್ಮ ೧೨ ನೇ ವಯಸ್ಸಿನಲ್ಲೇ ಸಂಗೀತದ ಗೀಳಿತ್ತು. 'ವಯೊಲಿನ್ ಸಾಮ್ರಾಟ್ ಎಂಬ ಖ್ಯಾತಿಗೆ ಪಾತ್ರರಾದರು. 'Violin Samrat' for all time to come. ಹಣದ ಅಭಾವವೂ ಆಗಿ ತೊಂದರೆ ಅನುಭವಿಸಿದರು. ತಮ್ಮ ವೈದರಿಗೆ ಹಣಕೊಡಲೂ ಅವರಬಳಿ ಹಣವಿರಲಿಲ್ಲ. ಅವರ ಮಗನ ಅಕಾಲ-ಮರಣದಿಂದ ಅವರು, ಹತಾಶರಾದರು. ಹಲವು ಸಂಸ್ಥೆಗಳು ಮುಂದೆ ಬಂದು ಅವರಿಗೆ ಬಿನೆಫಿಟ್ ಶೋ ಗಳನ್ನು ನಡೆಸಿಕೊಟ್ಟು ಹಣಸಂಗ್ರಹಮಾಡಿ ಸಹಕರಿಸಿದರು.

೧೯೯೯ ರ ಶುರುವಿನಲ್ಲಿ ಅವರಿಗೆ 'ಪಾರ್ಕಿನ್ಸನ್ ರೋಗ' ಅಂಟಿಕೊಂಡಿತು.'ಪಂಡಿತ್ ವಿ.ಜಿ.ಜೊಗ್', ಬಹಳದಿನ ಹಾಸಿಗೆ ಹಿಡಿದು ಮಲಗಿದ್ದರು. ಉಸಿರಾಟದ ತೊಂದರೆಯೂ ಅಧಿಕವಾಗಿತ್ತು. ಜನವರಿ, ೩೧, ೨೦೦೪ ರಲ್ಲಿ ಮೃತರಾದರು.