ಸತಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇದರ ಮಾಥ್/ಪತಂಗ ಪ್ರಾಕಾರ ವರ್ಗಕ್ಕಾಗಿ , ನೋಡಿ ಸತಾರ (ಮಾತ್ ).
ಸತಾರ
Satara
City
Government
 • MayorMrs. Sujata Bhosale
Population
 (2001)
 • Total೧,೦೮,೦೪೩
Websitewww.satara.nic.in

ಸತಾರ pronunciation  (ಮರಾಠಿ : सातारा) ನಗರವು , ಭಾರತ ದೇಶದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯಲ್ಲಿ ಇದೆ. ಈ ಹೆಸರು, ಏಳು (ಸಾತ್ ) ಬೆಟ್ಟಗಳಿಂದ (ತಾರಾ ) ಸುತ್ತುವರಿದ ನಗರದಿಂದ ಬಂದುದಾಗಿದೆ. ಈ ನಗರವು ಸಮುದ್ರ ಮಟ್ಟದಿಂದ 2320 ಅಡಿ ಎತ್ತರದಲ್ಲಿ ಇದೆ. ಕೃಷ್ಣ ನದಿಯ (ಮರಾಠಿ :कृष्णा)ಸಂಕೀರ್ಣದಲ್ಲಿದ್ದು, ಮತ್ತು ಅದರ ಉಪನದಿ ವೆನ್ನ (ಮರಾಠಿ :वेण्णा), 67 ಮಿ (ಸುಮಾರು 110 ಕಿ ಮಿ ) ಪುಣೆಯ ದಕ್ಷಿಣಕ್ಕಿದೆ.

ಇತಿಹಾಸ/ಚರಿತ್ರೆ[ಬದಲಾಯಿಸಿ]

ಚಾರಿತ್ರಿಕ ಪುರಾವೆಗಳನ್ವಯ 200 ಬಿಸಿಇ ಗಳಷ್ಟು ಹಳೆಯದಾಗಿದ್ದು,ಸತಾರ ಜಿಲ್ಲೆಯ ಅತ್ಯಂತ ಹಳೆಯ ಸ್ಥಳ 'ಕರಾದ್'( ಕರ್ಹಕಡ ಎಂದು ಸೂಚಿಸಲಾಗಿದೆ )ಆಗಿದೆ. ಪಾಂಡವರು ವೈ /ವಾಯಿ ಸ್ಥಳದಲ್ಲಿದ್ದರೆಂದು ನಂಬಲಾಗಿದೆ. ನಂತರ 13ನೇ ವರ್ಷದ ಕೊನೆಯಲ್ಲಿ ,ಆಗಿನ ಕಾಲದ 'ವಿರಾಟನಗರ'ವೂ ಇದಾಗಿತ್ತು.

ಚಂದ್ರಗುಪ್ತ II, ಅಂದರೆ ಮಹೇಂದ್ರ ಆದಿತ್ಯ ಕುಮಾರಗುಪ್ತ I ಎಂದು ಕರೆಯಲ್ಪಡುವ ಈತನು ಡೆಕ್ಕನ್ ಪ್ರದೇಶದಲ್ಲಿ 'ಸತಾರ'ವನ್ನು ವಿಸ್ತರಿಸಿ 451 AD ಯಿಂದ 455 AD ವರೆಗೆ ರಾಜ್ಯಭಾರ ಮಾಡಿದನು. ಡೆಕ್ಕನ್‌ ^^ನ ಗುಪ್ತ ಸಾಮ್ರಾಜ್ಯವು "ಸಾತವಾಹನರ " ಆಡಳಿತದಲ್ಲಿ ಸುಮಾರು ಎರಡು ಶತಮಾನಗಳ ಕಾಲ ,ಅಂದರೆ 550 A.D. ಯಿಂದ 750 AD ನಡುವೆ ರಾಜ್ಯವಾಳಿತು.

1296 ರಲ್ಲಿ ಮೊದಲ ಮುಘಲರ ದಂಡೆಯಾತ್ರೆ ಡೆಕ್ಕನ್ ಪ್ರದೇಶದಲ್ಲಿ ನಡೆಯಿತು. 1636 ರಲ್ಲಿ ನಿಜಾಮ್ ಶಾಹಿ ಸಾಮ್ರಾಜ್ಯವು ಕೊನೆಯಾಯಿತು. 1663 ರಲ್ಲಿ ಶಿವಾಜಿಯು ಪರಲಿ ಮತ್ತು ಸತಾರ ಕೋಟೆಗಳನ್ನು ಆಕ್ರಮಿಸಿಕೊಂಡನು. ಶಿವಾಜಿಯ ನಿಧನಾನಂತರ , ಆದರೆ ಅಜಂಶಾಹ್^^ರನ್ನು ಕೋಟೆಯೊಳಗೆ ಬಿಟ್ಟುಕೊಳ್ಳಲು ಪ್ರೇರೇಪಣೆ ಸಿಗದೆ,ಶರಣಾಗತಿ ಆಗಲು ,ಅವನ ಮೂಲಕ ಕೇಳಲಾಗಿ ಹಾಗು ಆಕ್ರಮಣದ ಗೌರವವನ್ನು ,ಅವನಿಗೆ ಅರ್ಹತೆಯಿಲ್ಲದಿದ್ದರೂ ಅವನಿಗೆ ವಹಿಸಿಕೊಡಲಾಗಿ,ಆದರೆ ಆ ಸ್ಥಳವೂ ಅವನ ಹೆಸರನ್ನು ಪಡೆದು, ಚಕ್ರಾಧಿಪತಿ 'ಅಜಂ ತಾರಾ'ಹೆಸರಿನಲ್ಲಿನ ಸಾಮ್ರಾಜ್ಯವಾಯಿತು. 21ನೇ ಏಪ್ರಿಲ್ 1700 ರಲ್ಲಿ ಸತಾರ ಶರಣಾಯಿತು. ಸತಾರ ಪತನವಾದ ನಂತರದಲ್ಲೇ , 'ಪರಲಿ'ಯು ಬಂಡವಾಳವಾಯಿತು. ಜೂನ್ ಪ್ರಾರಂಭದವರೆಗೂ ಮುತ್ತಿಗೆ ಮುಂದುವರೆದಿದ್ದು,ನಂತರ ಒಳ್ಳೆಯ ರಕ್ಷಣೆಯೊಡನೆ ,'ಗರ್ರಿಸೋನ್' ಕೋಟೆಯನ್ನು ಬಿಟ್ಟನು. ಕೋಟೆಯನ್ನು ರಾಜ 'ನೌರಸ್ ತಾರಾ' ಹೆಸರಿನಲ್ಲಿ ಕರೆಯಲಾಯಿತು. ದಕ್ಷಿಣ -ಪಶ್ಚಿಮ ಮಳೆಗಾಲ ಹೆಚ್ಚು ಭರದಿಂದ ಬೀಳತೊಡಗಿದಂತೆ,ಮೊಘಲರ ಸೈನ್ಯ , ತಯಾರಿಯಲ್ಲಿಲ್ಲದೇ ಇದ್ದುದರಿಂದ ಹೆಚ್ಚಿನ ರೀತಿಯಲ್ಲಿ ಕಷ್ಟ-ನಷ್ಟಗಳನ್ನು ಬೆಟ್ಟದಿಂದ ಕಾಲ್ತೆಗೆಯುವುದರೊಳಗೆ ಅನುಭವಿಸಬೇಕಾಯಿತು. ಜೀವಹಾನಿ ಮತ್ತು ಶಸ್ತ್ರಹಾನಿಯನ್ನು ಹೆಚ್ಚಾಗಿ ಅನುಭವಿಸಿ ,ಸೈನ್ಯವು ಸತಾರದಲ್ಲಿನ 'ಮಾನ್ ' ನದಿಯ ದಡದ ಮೇಲಿನ ಖಾವಸಪುರವನ್ನು ತಲುಪಿತು.ಮಳೆಯಲ್ಲಿ ಔರಂಗಜೇಬನು ಸತಾರ ಕೋಟೆಯನ್ನು ಆಕ್ರಮಿಸಿದನು. ತದನಂತರ ಕೋಟೆಯನ್ನು ಪರಶುರಾಮ ಪ್ರತಿನಿಧಿಯು 1706 ರಲ್ಲಿ ಆಕ್ರಮಿಸಿದನು. 1708 ರಲ್ಲಿ ಛತ್ರಪತಿ ಸಾಹು ರಾಜನಾಗಿ, ಸತಾರ ಕೋಟೆಯಲ್ಲಿ ನೆಲೆ ನಿಂತನು. ಮರಾಠರ ಮಹಾರಾಜ ಛತ್ರಪತಿ ಶಿವಾಜಿ ನೆನಪಾಗಿ ಸತಾರ ಕೋಟೆಯನ್ನು ಆಳಲು ಪ್ರಾರಂಭಿಸಿದನು. ಇತ್ತೀಚಿನ ಸತಾರಾದ ದೊರೆ , ಛತ್ರಪತಿ ಉದಯನ್ ರಾಜೇ ಭೋಂಸ್ಲೆ, ಶಿವಾಜಿ ಮಹಾರಾಜನ ನಂತರದ 13ನೇ ತಲೆಮಾರಿನವನು.

1818 ರಲ್ಲಿನ ಮೂರನೇ ಅಂಗ್ಲೋ -ಮರಾಠ ಯುದ್ಧದ ಗೆಲುವಿನ ನಂತರ , ಬ್ರಿಟಿಶ್ ಸಾಮ್ರಾಜ್ಯ ಮರಾಠರ ಪ್ರಾಂತ್ಯಗಳನ್ನು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿ, ತಿತುಲರ್ ರಾಜ ಪ್ರತಾಪ್ ಸಿಂಗ್^^ನನ್ನು ಅಧಿಕಾರದಲ್ಲಿ ಕೂರಿಸಿದನು. ಹಾಗು ಸತಾರದ ಆಡಳಿತ ನಡೆಸಲು ಬಿಟ್ಟುಕೊಟ್ಟನು.ಅದು ಈಗಿನ ಜಿಲ್ಲೆಗಿಂತ ದೊಡ್ಡದಾದ ಪ್ರದೇಶವಾಗಿತ್ತು. ರಾಜಕೀಯದ ಮಧ್ಯಪ್ರವೇಶದ ಪರಿಣಾಮವಾಗಿ,ಅವನು 1839 ರಲ್ಲಿ ಇಳಿಯಲ್ಪಟ್ಟು ,ಅವನ ಸಹೋದರ 'ಶಹಜಿ ರಾಜ'ನನ್ನು ಅಧಿಕಾರದಲ್ಲಿ ಕೂರಿಸಲಾಯಿತು. 1848 ರಲ್ಲಿ ಯಾವುದೇ ಗಂಡು ಮಗನಿಲ್ಲದೆ ಸತ್ತುಹೋದ ಪ್ರಯುಕ್ತ ಸತಾರವನ್ನು ಬ್ರಿಟಿಶ್ ಸರ್ಕಾರವು ಬಾಂಬೆ ಪ್ರೆಸಿಡೆನ್ಸಿಗೆ ಸೇರಿಸಿತು.

ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ಸತಾರವು 'ಪ್ರತಿ ಸರ್ಕಾರಕ್ಕೆ' (ಸಮಾನಾಂತರ ಸರ್ಕಾರ) ಹೆಸರಾಯಿತು. [['ಭಾರತ ಬಿಟ್ಟು ತೊಲಗಿ {'/0}]]ಚಳುವಳಿಯ ಸಮಯದಲ್ಲಿ ಈ ಸಮಾನಾಂತರ ಸರ್ಕಾರವನ್ನು, ಬ್ರಿಟಿಷರು ಹಳ್ಳಿ ಪ್ರದೇಶಗಳಲ್ಲಿ 4.5 ವರ್ಷಗಳವರೆಗೆ ,ಅಂದರೆ ಆಗಸ್ಟ್ 1943 ರಿಂದ ಮೇ 1946 ರವರೆಗೆ ಬದಲಾಯಿಸಲು ಸಾಧ್ಯವಾಯಿತು. ಈ ರೀತಿಯ ಸಮಾನಾಂತರ ಸರ್ಕಾರವನ್ನು ಮಿಡ್ನಾಪುರ ,ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ 'ಬಾಲಿಯ'ದಲ್ಲಿ ಕಾಣಬಹುದಾಗಿತ್ತು. ಕ್ರಾಂತಿಸಿನ್ಹ್ ನಾನಾ ಪಾಟೀಲರು ಈ ಸರ್ಕಾರವನ್ನು ನಡೆಸಲು ನಾಯಕತ್ವ ವಹಿಸಿದ್ದರು.

ಭೂಗೋಳ[ಬದಲಾಯಿಸಿ]

ಸತಾರವು ಸ್ಥಾಪಿತವಾಗಿರುವುದು, 17°41′N 73°59′E / 17.68°N 73.98°E / 17.68; 73.98.[೧] ಅದು ಸರಾಸರಿ 742 ಮೀಟರ್(2434 ಅಡಿಗಳು )^^ನಷ್ಟು ಸರಾಸರಿ ಎತ್ತರವನ್ನು ಹೊಂದಿದೆ.

ಮಹಾರಾಷ್ಟ್ರ ದ ಪಶ್ಚಿಮ ಭಾಗದಲ್ಲಿ ಸತಾರವು ನೆಲೆಯಾಗಿದೆ. ಡೆಕ್ಕನ್ ಪ್ರದೇಶದಲ್ಲಿ ಇಡೀ ಸತಾರ ಜಿಲ್ಲೆಯು ಹರಡಿಕೊಂಡಿದೆ. ಉತ್ತರದಲ್ಲಿ ಪುಣೆ ಜಿಲ್ಲೆಯು ,ಪೂರ್ವದಲ್ಲಿ ಸೋಲಾಪುರ ಜಿಲ್ಲೆ ,ದಕ್ಷಿಣದಲ್ಲಿ ಸಾಂಗ್ಲಿ ಜಿಲ್ಲೆ ಮತ್ತು ಪಶ್ಚಿಮದಲ್ಲಿ ರತ್ನಗಿರಿ ಜಿಲ್ಲೆಗಳು ಹರಡಿಕೊಂಡಿವೆ.ಉತ್ತರ-ಪಶ್ಚಿಮ ದಿಕ್ಕಿನಲ್ಲಿ ರಾಯಗಡ ಜಿಲ್ಲೆಯಿದೆ. ಸತಾರ ಜಿಲ್ಲೆಯ ವಿಸ್ತೀರ್ಣ 10,480 ಕಿ ಮಿ², ಮತ್ತು ಜನಸಾಂದ್ರತೆಯು 2,796,906 (2001)ಇದೆ.

ಈ ಜಿಲ್ಲೆಯನ್ನು ಪಶ್ಚಿಮಭಾಗದ ರತ್ನಗಿರಿ ಕಡೆಯಿಂದ ಸಹ್ಯಾದ್ರಿ ಪರ್ವತ ಶ್ರೇಣಿಗಳು ಬೇರ್ಪಡಿಸುತ್ತವೆ. ಮಹಾದೇವೋ ಶ್ರೇಣಿಯ ಕಪ್ಪುಕಲ್ಲಿನ ಪರ್ವತಗಳು ಸುಮಾರು 10 ಮಿ .ಉತ್ತರದ ಮಹಾಬಲೇಶ್ವರದಿಂದ ಆರಂಭವಾಗಿ ಪೂರ್ವ ಮತ್ತು ದಕ್ಷಿಣ-ಪೂರ್ವದವರೆಗೆ ಇಡೀ ಜಿಲ್ಲೆಯಾದ್ಯಂತ ವಿಸ್ತರಿಸಲ್ಪಟ್ಟಿದೆ.

ಸತಾರ ಜಿಲ್ಲೆಯ ಮುಖ್ಯ ನದಿಗಳು ಕೊಯ್ನ ಮತ್ತು ಕೃಷ್ಣ . ದಕ್ಷಿಣ ಭಾರತದ ಮೂರು ದೊಡ್ಡ ಪವಿತ್ರ ನದಿಗಳಲ್ಲಿ ಕೃಷ್ಣ ನದಿಯೂ ಒಂದು. ಜಿಲ್ಲೆಯ ಒಳಗೆ ಅಂದಾಜು 172 ಕಿ.ಮಿ.ನಷ್ಟು ಕೃಷ್ಣ ಆವರಿಸಿದೆ. ಕೃಷ್ಣ ನದಿಯು ಮಹಾಬಲೇಶ್ವರ ತಪ್ಪಲಿನ ಪೂರ್ವ ಪ್ರಾಂತ್ಯದಿಂದ ,ಕೃಷ್ಣ ಪ್ರಾರಂಭವಾಗಿ ಸುಮಾರು ಸಮುದ್ರ ಮಟ್ಟದಿಂದ 4500 ಅಡಿಯಿಂದ ಧುಮ್ಮಿಕ್ಕುತ್ತಿದೆ. ಕುಡಲಿ , ಉರ್ಮೊಡಿ , ವೆನ್ನ ಮತ್ತು ತರಲಿ -ಇವುಗಳು ಕೃಷ್ಣ ನದಿಯ ಸಣ್ಣ,ಸಣ್ಣ,ಹರಿವುಗಳಾಗಿದೆ.( ಉಪನದಿಗಳು.) ಕೃಷ್ಣ ನದಿಯ ಅತಿ ದೊಡ್ಡ ಉಪನದಿಯಾದ ಕೊಯ್ನ ಈ ಜಿಲ್ಲೆಯಲ್ಲಿದೆ. ಭೀಮ ನದಿಯ ಎರಡು ಉಪನದಿಗಳಾದ ನೀರ ಮತ್ತು ಮನಗಂಗ ನದಿಗಳು ಕ್ರಮವಾಗಿ ಉತ್ತರದಲ್ಲಿ ಮತ್ತು ಉತ್ತರ-ಪೂರ್ವ ಭಾಗದಲ್ಲಿ ಈ ಜಿಲ್ಲೆಯಲ್ಲಿ ಹರಡಿಕೊಂಡಿವೆ.

ಸತಾರದ ಪಶ್ಚಿಮ ಭಾಗ
ಸತಾರದ ಪಶ್ಚಿಮ ಮಧ್ಯ ಭಾಗ

ಸತಾರ ನಗರವನ್ನು ನಾಲ್ಕು ಭಾಗಗಳಾಗಿ ವಿಭಜಿಸಲಾಗಿದೆ.ಬೇರೆ ಇತರ ನಗರಗಳಂತೆ  : ನಗರ (ಸ್ಹಾಹಾರ ), ಉಪ-ನಗರ (ಉಪನಗರ್ ), ಎಂಐಡಿಸಿ (ಔದ್ಯೋಗಿಕ ವಸಾಹತು ) ಮತ್ತು ಗ್ರಾಮಾಂತರ (ಗ್ರಾಮೀಣ ).

ಸತಾರ ನಗರದಲ್ಲಿನ(ವಿಸ್ತೀರ್ಣ) ಪ್ರದೇಶಗಳು  : ಮಂಗಳ್ವಾರ್ ಪೇಟ್ , ರಾಜ್ವಾಡ , ಕಮಾನಿ ಹೌದ್ , ಪ್ರತಾಪ್ ಗಂಜ್ ಪೇಟ್ , ಶಿವಾಜಿ ಸರ್ಕಲ್ , ಪೊವಾಯಿ ನಾಕ , ದೇವಿ ಚೌಕ , ಮೋತಿ ಚೌಕ , ಖಾನ್ ಅಲಿ , ವಿಶ್ವ ಪಾರ್ಕ್ , ಯಾದೋಗೋಪಾಲ ಪೇಟ್ , ವ್ಯಂಕಟಪುರ ಪೇಟ್ , ಚಿಮನಪುರ ಪೇಟ್ ಮುಂತಾದವು.

ಸತಾರ ಉಪ-ನಗರದ(ವಿಸ್ತೀರ್ಣ) ಪ್ರದೇಶಗಳೆಂದರೆ : ಕೃಷನಗರ , ವಿಸ್ವ ಕಂಪ್ , ಸಂಗಮನಗರ್ , ಗೆಂದ ಮಾಲ್ , ಐ.ಟಿ.ಐ. ಮುಂತಾದವು.

ಎಂಐಡಿಸಿ ಸತಾರದ (ವಿಸ್ತೀರ್ಣ)ಪ್ರದೇಶಗಳೆಂದರೆ : ಹಳೆಯ ಎಂಐಡಿಸಿ, ಹೊಸ ಎಂಐಡಿಸಿ ಮತ್ತು ಡೆಗೊನ್ ಎಂಐಡಿಸಿ

ಸತಾರ ಗ್ರಾಮಾಂತರದ (ವಿಸ್ತೀರ್ಣ)ಪ್ರದೇಶಗಳೆಂದರೆ : ಖಿಂದ್ವಾಡಿ , ಲಿಮ್ಬ್ ಖಿಂದ್ , ಶಾಹುಪುರಿ , ಗೋದೋಲಿ , ಪಿರ್ವಾಡಿಯಾ ಕೆಲವು ಭಾಗ , ಖೇಡ್ ಮತ್ತು ಕನ್ಹೇರ್ ನ ಹಳ್ಳಿಗಳು.

ಜನಸಂಖ್ಯಾಶಾಸ್ತ್ರ/ಅಂಕಿಸಂಖ್ಯೆ[ಬದಲಾಯಿಸಿ]

As of 2009ಭಾರತದ ಜನಗಣತಿ,[೨] ಯ ಪ್ರಕಾರ , ಸತಾರದ ಜನಸಂಖ್ಯೆ 108,043 ಆಗಿದೆ. ಈ ಜನಸಂಖ್ಯೆಯಲ್ಲಿ ಶೇಕಡಾ 52 ರಷ್ಟು ಪುರುಷರು ಮತ್ತು ಶೇಕಡಾ 48 ರಷ್ಟು ಸ್ತ್ರೀಯರು ಇದ್ದಾರೆ. ಸತಾರದ ಸರಾಸರಿ ಅಕ್ಷರಸ್ಥರ ಪ್ರಮಾಣ ಶೇಕಡಾ 80 ರಷ್ಟಿದ್ದು,ರಾಷ್ಟ್ರೀಯ ಸರಾಸರಿ ಅಕ್ಷರಸ್ಥರ ಪ್ರಮಾಣ ಶೇಕಡಾ 59.5 ಕ್ಕಿಂತ ಹೆಚ್ಚಾಗಿದೆ: ಗಂಡಸರ ಅಕ್ಷರತೆ ಶೇಕಡಾ 84 ರಷ್ಟಿದ್ದರೆ , ಹೆಂಗಸರ ಅಕ್ಷರತೆ ಶೇಕಡಾ 76 ರಷ್ಟಿದೆ. ಸತಾರದಲ್ಲಿನ ಜನಸಂಖ್ಯೆಯಲ್ಲಿ ಶೇಕಡಾ 10 ರಷ್ಟು ಜನರು ಆರು ವರ್ಷಕ್ಕಿಂತ ಕೆಳವಯಸ್ಸಿನವರಾಗಿದ್ದಾರೆ.

ಸತಾರ ನಗರದ ಒಳಗಿನ ಮತ್ತು ಸುತ್ತ-ಮುತ್ತಲಿನ ಪ್ರೇಕ್ಷಣೀಯ/ಪ್ರವಾಸೀ ಸ್ಥಳಗಳು.[ಬದಲಾಯಿಸಿ]

ಸತಾರ ಜಿಲ್ಲೆಯ ಯಮಾಯಿ ಬೆಟ್ಟದ ಮೇಲೆ ಶ್ರೀ ಭವಾನಿ ಮ್ಯೂಸಿಯಂ ಮತ್ತು ಗ್ರಂಥಾಲಯ ಹಾಗು ಔಂದ್ ಸಹ ಇದೆ. ಬಾಂಬೆ ಪ್ರೆಸಿಡೆನ್ಸಿಯ ಡೆಕ್ಕನ್ ರಾಜ್ಯದ ಏಜನ್ಸಿ ವಿಭಾಗಗಳ ಪ್ರಕಾರ,' ಔಂದ್' ಒಂದು ಬ್ರಿಟಿಷ್ ಭಾರತದ ರಾಜರುಗಳ ರಾಜ್ಯವಾಗಿತ್ತು. ಇದು ಸತಾರದ ಒಂದು ಜಾಗೀರ್ ಆಗಿದ್ದು, 1699ನೇ ಇಸವಿಯಲ್ಲಿ ತ್ರಿಂಬಕ್ ಪಂತ್ ಪ್ರತಿನಿಧಿಯು ಇದನ್ನು ಸ್ಥಾಪಿಸಿದನು.ಈತನು ಸಂಭಾಜಿ ರಾಜೇ ಮತ್ತು ರಾಜಾರಾಂ ಮಹಾರಾಜರ ಕಾಲದಲ್ಲಿ ವೀರಯೋಧನಾಗಿದ್ದನು. ಔಂದ್^^ನ ರಾಜ , ದಿವಂಗತ ಭಾವನರಾವ್ ಪಂತ್ ಪ್ರತಿನಿಧಿ, 1938 ರಲ್ಲಿ ಈ ಮ್ಯೂಸಿಯಂನ್ನು ನಿರ್ಮಿಸಿದನು. ಈ ಮ್ಯೂಸಿಯಂ(ವಿವಿಧ ವಸ್ತು ಸಂಗ್ರಹ ಶಾಲೆ) ಮತ್ತು ಗ್ರಂಥಾಲಯದಲ್ಲಿ 5,000 ಕ್ಕಿಂತ ಹೆಚ್ಚಿನ ವಸ್ತುಗಳಿವೆ. ಸತಾರ ಜಿಲ್ಲೆಯ ಖತಾವ್ ತೆಹ್ಸಿಲ್^^ನ ಔಂದ್ ಹಳ್ಳಿಯ ಹತ್ತಿರವಿರುವ ಯಮಾಯಿ ಬೆಟ್ಟದ ಮೇಲೆ ಇದನ್ನು ಸ್ಥಾಪಿಸಲಾಗಿದೆ. ಮುಖ್ಯ ಕಟ್ಟಡದ ಪಕ್ಕದಲ್ಲಿಯೇ ಇನ್ನೊಂದು ಕಟ್ಟಡದಲ್ಲಿ 25,000 ಕ್ಕೂ ಹೆಚ್ಚು ಚಿತ್ರಕಲೆಯ ಆಧಾರಿತ ಪುಸ್ತಕಗಳು ಇವೆ.

ಈ ಪ್ರಾಂತ್ಯವು 'ಯಮಾಯಿ ದೇವಿ' ದೇವಸ್ಥಾನವನ್ನೂ ಒಳಗೊಂಡಿದೆ. ಹೇಮದ್ ಪಂತಿ ಮಾದರಿಯಲ್ಲಿ ಇದನ್ನು ಕಟ್ಟಲಾಗಿದ್ದು, ಇಲ್ಲಿ ಜೀವ-ಆಕಾರದ ಮಾರ್ಬಲ್ ಪ್ರತಿಮೆಗಳು , ಭಗವಾನ್ ವಿಷ್ಣುವಿನ ಪ್ರತಿಮೆ ಹಾಗು ಚಿತ್ರಕಲೆಯ ಗ್ಯಾಲರಿ,ಮತ್ತು 200 ಅಡಿ ಎತ್ತರದ ದೀಪಮಾಲ ಇದ್ದು, ರಾಜ್ಯದಲ್ಲಿಯೇ ಅತಿ ದೊಡ್ಡ ದೀಪಮಾಲ ಇದಾಗಿದೆ ಎಂದು ನಂಬಲಾಗಿದೆ.

'ಪಂಚಗನಿ '

ಭಾರತದಲ್ಲಿನ ಮಹಾರಾಷ್ಟ್ರ ದಲ್ಲಿ ಪಂಚಗನಿ ಎಂಬುದು ಒಂದು ಸಣ್ಣ ಪರ್ವತ ಪ್ರದೇಶ. ಇದು 5 ಸಣ್ಣ ಬೆಟ್ಟಗಳ ನಡುವೆ ಇದೆ. ಈ ಕಾರಣದಿಂದಾಗಿ ಇದಕ್ಕೆ 'ಪಂಚಗನಿ' ಎಂಬ ಹೆಸರು ಬಂದಿದೆ.( ಮರಾಠಿಯಲ್ಲಿ ಪಂಚ ಎಂದರೆ ಐದು ಎಂದರ್ಥ.) ಈ ಎಲ್ಲಾ 5 ಬೆಟ್ಟಗಳು ಜ್ವಾಲಾಮುಖಿ ತಪ್ಪಲನ್ನು ಹೊಂದಿದ್ದು ,ಏಷಿಯಾದಲ್ಲಿಯೇ ಟಿಬೇಟಿಯನ್ ತಪ್ಪಲಿನ ನಂತರದ ಎರಡನೇ ದೊಡ್ಡ ತಪ್ಪಲು ಪ್ರದೇಶ ಇದಾಗಿದೆ. ಈ ತಪ್ಪಲು ಪ್ರದೇಶವನ್ನು ಸ್ಥಳೀಯ ಶಬ್ದದಲ್ಲಿ "ಟೇಬಲ್ ಲ್ಯಾಂಡ್ "ಎಂದು ತಿಳಿಯಲಾಗಿದೆ. ಈ ತಪ್ಪಲು ಪ್ರದೇಶಗಳು ಡೆಕ್ಕನ್ ತಪ್ಪಲು ಪ್ರದೇಶದ ಭಾಗವಾಗಿದೆ.ಭೂಮಿಯ ಒತ್ತಡದಿಂದಾಗಿ ಇದು ಎತ್ತರಕ್ಕೆ ಏರಿದೆ. ಈ ಕಾರಣದಿಂದಾಗಿ ,ಕೊಯ್ನನಗರ ದ ಬಳಿ ಇರುವ ಇದು ಭೂಕಂಪನ ಹೊಂದುವ ಕೇಂದ್ರವಾಗಿದೆ.ಹಾಗು ಕೊಯ್ನನಗರ ಆಣೆಕಟ್ಟು ಮತ್ತು ಹೈಡ್ರೋ ವಿದ್ಯುತ್ ಶಕ್ತಿ ಕೇಂದ್ರಕ್ಕೆ ಹೆಸರಾಗಿದೆ. ಮುಂಬಯಿ ನಿಂದ ಸುಮಾರು 265 ಕಿ.ಮಿ.ದೂರದಲ್ಲಿರುವ ಇದು ರುದ್ರರಮಣೀಯ ಕಣಿವೆ,ಭಯ ಹುಟ್ಟಿಸುವ ನದಿಗಳ ಪ್ರಪಾತ,ಸುಂದರ ಪರ್ವತಗಳ ಸಾಲು ವಿಸ್ತಾರವಾಗಿ ಹರಡಿಕೊಂಡಿರುವ ಕೊಪ್ಪಲು ಪ್ರದೇಶವನ್ನು ಹೊಂದಿದೆ. ವರ್ಷವಿಡೀ ಅನೇಕ ಪ್ರವಾಸಿಗರನ್ನು ಇದು ಆಕರ್ಷಿಸುತ್ತದೆ. ಮತ್ತು ಅನೇಕ ಮುಂಬಯಿ ವಾಲಾಗಳು(ವಾಸಿಗರು) ಪ್ರತೀವಾರದ ಮನರಂಜನೆಗೆ ಇಲ್ಲಿಗೆ ಬಂದು ಹೋಗುತ್ತಾರೆ. ಇನ್ನು ಕೆಲವರು ಇನ್ನೂ ಮುಂದೆ ಹೋಗಿ , 'ರೆಸಾರ್ಟ್ಸ್' ಗಳನ್ನೂ ಸ್ಥಾಪಿಸಿ ಅದರ ಮಾಲೀಕರೂ ಆಗಿದ್ದಾರೆ.ಆದರೆ ಕೆಲವೊಂದು ಋತುಗಳಲ್ಲಿ ಬಾಡಿಗೆಗೂ ಕೊಡುತ್ತಾರೆ. ಇದಕ್ಕೆ ಹತ್ತಿರದಲ್ಲಿರುವ ವಾಯಿಯಲ್ಲಿ ಗಣೇಶನ ದೇವಸ್ಥಾನವಿದೆ. ಮಳೆಗಾಲದಲ್ಲಿ ಪಂಚಗನಿಯ ದಿನದ ಉಷ್ಣತೆ ಸುಮಾರು 16 ಡಿಗ್ರಿ ಸೆಲ್ಸಿಯಸ್ ಇದ್ದು, ಬೇಸಿಗೆ ಕಾಲದಲ್ಲಿ 35 ಡಿಗ್ರಿ ಸೆಲ್ಸಿಯಸ್^^ವರೆಗೂ ಏರಿರುತ್ತದೆ. ಪಂಚಗನಿಯಲ್ಲಿ ಹಲವಾರು ಉನ್ನತ ರೀತಿಯ ಖಾಸಗಿ 'ವಸತಿ-ಭೋಜನಶಾಲೆ' ಗಳಿದ್ದು,ಅನೇಕ ಬಾಲಿವುಡ್ ಚಿತ್ರಗಳಲ್ಲಿ ಇದನ್ನು ಬಳಸಿಕೊಳ್ಳಲಾಗಿದೆ. ಪಂಚಗನಿಯಲ್ಲಿ ಹಲವಾರು 'ಸಿಲ್ವರ್ ಓಕ್ 'ಮರಗಳಿರುವುದರಿಂದ,ಇಲ್ಲಿ ಬ್ರಿಟಿಷರು ಹಲವಾರು ಕ್ಷಯರೋಗ ಆಸ್ಪತ್ರೆಗಳನ್ನು ,ಚಿಕಿತ್ಸೆಯ (ಔಷಧೀಯ)ಕಾರಣದಿಂದಾಗಿ ನಿರ್ಮಿಸಿದ್ದಾರೆ . ಇಲ್ಲಿನ ಮುಖ್ಯ ಆಕರ್ಷಣೆ : ಟೇಬಲ್ ಲ್ಯಾಂಡ್ , ಪಾರ್ಸಿ ಪಾಯಿಂಟ್ , ಸಿಡ್ನಿ ಪಾಯಿಂಟ್ ಮುಂತಾದವು. ಪಂಚಗನಿಯ ವಾಣಿಜ್ಯಾತ್ಮದ ಅತಿಯಾದ ಚಟುವಟಿಕೆಯಿಂದಾಗಿ ಇಲ್ಲಿನ ವಾತಾವರಣವು ಸಹ ಕಲುಷಿತ ಆಗಲು ಆರಂಭಿಸಿದೆ.ಅನಧಿಕೃತ ಹೋಟೇಲುಗಳ ನಿರ್ಮಾಣವೂ ಆಗಿದೆ. ವಾಹನಗಳಿಂದಾಗಿ ಉಷ್ಣಾಂಶದ ವೈಪರೀತ್ಯ ( ಕಡಿಮೆ ತೇವಾಂಶದ ಕಾರಣ )ಉಂಟಾಗಿದೆ.ಹಲವು ಅಣೆಕಟ್ಟುಗಳ ನಿರ್ಮಾಣದಿಂದ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ನೀರನ್ನು ಸಂಗ್ರಹಿಸಲಾಗುತ್ತಿದೆ. ಫ್ರೆಡ್ಡಿ ಮೆರ್ಕ್ಯುರಿ,ಪಂಚಗನಿಯಲ್ಲಿರುವ 'ಸೈಂಟ್ ಪೀಟರ್ಸ್ ಸ್ಕೂಲ್ '^^ನಲ್ಲಿ ತನ್ನ ಮೊದಲ ಬ್ಯಾಂಡ್ ಅನ್ನು ರಚಿಸಿದನು. ಪರಿಸರದ ಮೇಲೆಯೂ ಒತ್ತಡ ಹೆಚ್ಚಾಗಿದೆ.(1958-1962.)

ಮಹಾಬಲೇಶ್ವರ (ಮರಾಠಿ:महाबळेश्वर)

ಚಿತ್ರ:Pratapgad2.jpg
[7]

ಭಾರತದ ಮಹಾರಾಷ್ಟ್ರದಲ್ಲಿ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಸತಾರ ಜಿಲ್ಲೆಯಲ್ಲಿ ಮಹಾಬಲೇಶ್ವರ ಪರ್ವತ ಪ್ರದೇಶವಿದೆ. ಪುಣೆಯಿಂದ ಸುಮಾರು 120 ಕಿ.ಮೀ ಮತ್ತು ಮುಂಬಯಿನಿಂದ 285 ಕಿ.ಮೀ.ದೂರದಲ್ಲಿ ಇದು ಇದೆ. ಮಹಾಬಲೇಶ್ವರ ವು ಒಂದು ದೊಡ್ಡ ಪ್ರಸ್ಥಭೂಮಿಯಾಗಿದ್ದು, 150 ಕಿ.ಮಿ² ನಷ್ಟು ವಿಸ್ತೀರ್ಣ ಹೊಂದಿದ್ದು,ಎಲ್ಲಾ ಕಡೆಗಳಿಂದ ಕಣಿವೆಯನ್ನು ಹೊಂದಿದೆ. ಇಲ್ಲಿಗೆ ಬಂದ ಪ್ರವಾಸಿಗರೆಲ್ಲರೂ ಹತ್ತಿರದ ಪಂಚಗನಿಗೆ ಭೇಟಿ ನೀಡುತ್ತಾರೆ. ಹೊಸದಾದ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಆದನಂತರದಿಂದ ಮುಂಬಯಿನಿಂದ ಇಲ್ಲಿಗೆ 5 ಗಂಟೆಗಳ ಪ್ರಯಾಣ ಆಗಿದೆ. ಸಮುದ್ರ ಮಟ್ಟದಿಂದ 1438 ಮೀಟರ್ (4710 ಅಡಿ )ಎತ್ತರದಲ್ಲಿ ಈ ಬೆಟ್ಟವಿದೆ.ಇದರ ತುದಿಯನ್ನು ವಿಲ್ಸನ್ /ಸೂರ್ಯೋದಯ ಕೇಂದ್ರ ಎಂದು ಕರೆಯಲಾಗಿದೆ. ಮಹಾಬಲೇಶ್ವರ ವು "ಎಲ್ಲಾ ಬೆಟ್ಟ ಪ್ರದೇಶಗಳ ರಾಣಿ "ಎಂದು ಕರೆಯಲ್ಪಟ್ಟಿದೆ. ಬ್ರಿಟಿಷ್ ರಾಜರ ಆಡಳಿತದ ಸಮಯದಲ್ಲಿ, ಬಾಂಬೆ ಪ್ರಾಂತ್ಯವು 'ಬೇಸಿಗೆಯ ರಾಜಧಾನಿ'ಯಾಗಿ ಸೇವೆ ಸಲ್ಲಿಸಿದೆ. ಇಂದು ಇದು ಜನಪ್ರಿಯ 'ವಿರಾಮದ ರೆಸಾರ್ಟ್' ಮತ್ತು ನವಪ್ರೇಮಿಗಳಿಗೆ 'ಮಧುಚಂದ್ರ' ದ ತಾಣವಾಗಿದೆ. ಮತ್ತು ಮಹಾಬಲೇಶ್ವರ ದೇವಸ್ಥಾನ ಇಲ್ಲಿರುವ ಕಾರಣದಿಂದ , ಹಿಂದುಗಳಿಗೆ ಇದು ಪವಿತ್ರ ಪುಣ್ಯ ಕ್ಷೇತ್ರವೇ ಆಗಿದೆ. ಮಹಾಬಲೇಶ್ವರದಲ್ಲಿ ಮೂರು ಹಳ್ಳಿಗಳಿದ್ದು, ಮಲ್ಕಾಲಂ ಪೇಟ್ , ಹಳೆ "ಕ್ಷೇತ್ರ "ಮಹಾಬಲೇಶ್ವರ ಮತ್ತು ಶಿಂದೋಳ ಹಳ್ಳಿಯ ಕೆಲವು ಭಾಗಗಳು. ಮಹಾಬಲೇಶ್ವರನ ಚಾರಿತ್ರಿಕ ದಿನಗಳು 1215 ರಲ್ಲಿ ದೇವೊಗಿರಿಯ ರಾಜ ಸಿಂಘನನು ಹಳೆ ಮಹಾಬಲೇಶ್ವರ ದೇವಸ್ಥಾನಕ್ಕೆ ಭೇಟಿ ಮಾಡಿದ್ದಾನೆ. ಇತ್ತೀಚಿನ ಮಹಾಬಲೇಶ್ವರ 1829-30 ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದು, ಹಳೆಯ ದಾಖಲೆಗಳಲ್ಲಿ ಮಲ್ಕಾಲಂ ಪೇಟ್ ಎಂದು ಹೇಳಲಾಗಿದೆ, ಆದರೆ ಇಂದಿನ ದಿನಗಳಲ್ಲಿ ಮಹಾಬಲೇಶ್ವರ ಎಂದು ಕರೆಯಲಾಗುತ್ತಿದೆ.

ಈ ನಗರದಲ್ಲಿ ಮತ್ತೊಂದು ಹೆಸರುವಾಸಿಯಾದ ಸ್ಥಳವು ಪಟೇಶ್ವರ (ಮರಾಠಿ:पाटेश्वर), ಅಜಿಂಕ್ಯತಾರ (ಮರಾಠಿ:अजिंक्यतारा),

ಯವತೇಶ್ವರ (ಮರಾಠಿ:यवतेश्वर), ಕಾಸ್ ಲೇಕ್ (ಮರಾಠಿ:कास तलाव), ಬಮ್ನೋಲಿ (ಮರಾಠಿ:बामणोळी),

ಸಜ್ಜನಗಡ (ಮರಾಠಿ:सज्जनगड),

ತೋಸೆಘರ ಜಲಪಾತ (ಮರಾಠಿ:ठोसेघर धबधबा),

ತ್ಹೊಸೆಘರ್ ಮುಖ್ಯ ನೀರಿನ ಕಾರಂಜಿ.

ಚಲ್ಕೆವಾಡಿ (ಮರಾಠಿ:चाळकेवाडी),

ಚಲ್ಕೆವಡಿ - ವಿಂಡ್ ಮಿಲ್ಸ್ ಮತ್ತು ಸೂರ್ಯಾಸ್ತಮಯ./ಸೂರ್ಯಾಸ್ತಂಗತ

ಭೈರೋಬ , ನಟರಾಜ ಮಂದಿರ ಮುಂತಾದವು .

ಗೋವೆ : ಈ ಒಂದು ಸಣ್ಣ ಕೊಪ್ಪಲು ಕೃಷ್ಣ ನದಿಯ ದಡದ ಮೇಲಿದ್ದು, ಕೋಟೇಶ್ವರ ಮಂದಿರಕ್ಕೆ ಹೆಸರುವಾಸಿಯಾಗಿದೆ. ಇದು 16ನೇ ಶತಮಾನದ ದೇವಸ್ಥಾನ ಮಹಾಶಿವನಿಗೆ ಅರ್ಪಿತವಾಗಿದೆ. ಸತಾರ ನಗರದಿಂದ ಉತ್ತರಕ್ಕೆ 16 ಕಿ.ಮೀ.ದೂರದಲ್ಲಿದೆ.

ಕಲ್ಯಾಣಗಡ ಅಥವಾ ನಂದಗಿರಿ

(ಕೋರೆಗನ್ವ ಟಿ; 18° ಎನ್ , 74° ಇ ; ಆರ್ ಎಸ್ , ಸತಾರ ರಸ್ತೆ , 2 ಎಂ. ಡಬ್ಲ್ಯು ;) ಸಮುದ್ರ ಮಟ್ಟದಿಂದ 3,537 ಅಡಿ ಎತ್ತರದಲ್ಲಿದೆ. ಮಹಾದೇವ ಪರ್ವತ ಶ್ರೇಣಿಯ ಕೊನೆಯ 'ಸ್ಪೂರ್'ನಲ್ಲಿ ದಕ್ಷಿಣ-ಪಶ್ಚಿಮದ ಉದ್ದಕ್ಕೂ ವಿಖಲೆ ಮತ್ತು ಭದ್ಲೇ ಹಳ್ಳಿಯ ಪ್ರದೇಶದಲ್ಲಿ , ಕೋರೆಗನ್ವದಿಂದ ಉತ್ತರಕ್ಕೆ 8 ಮೈಲಿ ದೂರದಲ್ಲಿ ಸತಾರದ ಉತ್ತರ-ಪೂರ್ವದ ದಿಕ್ಕಿನಿಂದ 14 ಮೈಲಿಗಳ ದೂರದಲ್ಲಿದೆ. ಸ್ಪೂರ್^^ನ ಇತರ ಭಾಗದಿಂದ ಇದು ಸಣ್ಣ ಗಾರ್ಗ್ ಅಥವಾ ಖಿಂದ್^^ನಿಂದ ಬೇರೆಯಾಗಿದ್ದು, ಕೆಳಗಿನ ಬೆಟ್ಟ ಪ್ರದೇಶದಲ್ಲಿದ್ದು,ಉತ್ತರ-ಪಶ್ಚಿಮ ದಿಕ್ಕಿನಲ್ಲಿ ಕಂದನ - ವಂದನ ಪರ್ವತ ಶ್ರೇಣಿಗಳು ಹತ್ತಿರದಲ್ಲಿವೆ. ಕಣ್ಣಿಗೆ ಕಡಿಮೆ ರೀತಿಯಲ್ಲಿ ಎದ್ದುಕಾಣುವ ವಸ್ತು ಸತಾರದಲ್ಲಿದ್ದು, ಕಂದನ - ವಂದನ ಜೋಡಿಗಿಂತ, ಮತ್ತು ದಕ್ಷಿಣದಿಂದ ನೋಟಕ್ಕೆ ಪ್ರಧಾನವಾಗಿ ಇದು ಸ್ಪೂರ್^^ನ ಕೊನೆಯಾಗಿ ವಂಗ್ನ ಮತ್ತು ವಸ್ನ ಕಣಿವೆಗಳನ್ನು ವಿಭಜಿಸಿವೆ. ನಿನಪಾದಲಿಯ ದಹನೇಬುವನಿಂದ ಮಾರುತಿ ದೇವಸ್ಥಾನವು ಜೀರ್ಣೋದ್ಧಾರಗೊಂಡಿತು. ಅಬ್ದುಲ್ ಕರೀಂ , ಮುಸಲ್ಮಾನ ಸಂತನ ಸಮಾಧಿ ಇಲ್ಲಿದೆ. ಈ ಕೋಟೆಯನ್ನು ಪನ್ಹಲದ ಸಿಲಾಹಾರ ದೊರೆ ಭೋಜ II -ಕಟ್ಟಿಸಿದ್ದಾನೆ.[೩]. 1673 ರಲ್ಲಿ ಸತಾರದ ಇತರ ಕೋಟೆಗಳನ್ನು ಶಿವಾಜಿಗೆ ಒಪ್ಪಿಸಲಾಗಿದೆ.[೪]. ಪ್ರತಿನಿಧಿಯು, ಬಾಜಿರಾವ್^^ನ ಜೊತೆ ಹೋರಾಡುವವರೆವಿಗೂ ಆಡಳಿತವನ್ನು ನಡೆಸಿದ್ದು, ಎರಡನೇ ಪೇಶ್ವ (1720-1740)ಆಗಿದ್ದಾನೆ. 1791ರಲ್ಲಿ ಹೆಚ್ಚಿನ ಬೆಲೆ ವಿವರಿಸುವುದೆಂದರೆ , ಒಂದು ಹಡಗಿನ ಸ್ಥೂಲ ಭಾಗ ಯುದ್ಧದಲ್ಲಿ ತದ್ವಿರುದ್ಧವಾಗಿ ,ಮತ್ತೊಂದು ಬೆಟ್ಟದ ತುದಿ ಪ್ರಾರ್ಥನೆ ಮಾಡಲು ಇರುವ ಸ್ಥಳವಾಗಿದೆ. [ಕ್ಷೇತ್ರ ಅಧಿಕಾರಿಯ ನೆನಪುಗಳು , 261.]. ಏಪ್ರಿಲ್ 1818 ರಲ್ಲಿ, ಮರಾಠರ ಕೊನೆಯ ಯುದ್ಧದಲ್ಲಿ 'ಜನರಲ್ ಪ್ರಿಟ್ಜ್ಲರ್' ಸೈನ್ಯಕ್ಕೆ ಸೋಲಾಯಿತು. 1862ರ ವಿವರಣೆಯಂತೆ, ಒಡೆದು ಹೋದ ಮತ್ತು ನೆಲೆಸಲಾಗದ ರೀತಿಯಲ್ಲಿ ಕೋಟೆಯು ಕಡಿದಾದ ಅನುಸಂಧಾನದ, ಗಟ್ಟಿಯಾದ/ಶಕ್ತಿಯುತವಾದ ಹೆಬ್ಬಾಗಿಲು ಹೊಂದಿದ್ದರೂ , ನೀರಿಲ್ಲ ಮತ್ತು ಸರಬರಾಜಿಲ್ಲದಂತೆ ಮಾಡಿದರು.[ಸಿವಿಲ್ ಫೋರ್ಟ್^^ನ ಸರಕಾರೀ ಪಟ್ಟಿ,1862.]

ಹತ್ತಿರದ ನಗರಗಳು .[ಬದಲಾಯಿಸಿ]

ಸತಾರವನ್ನು ತಲುಪುವುದು ಹೇಗೆ?[ಬದಲಾಯಿಸಿ]

  • ರಸ್ತೆ ಮಾರ್ಗ - ಎನ್ ಹೆಚ್ 4 ಹೆದ್ದಾರಿ

ಎಂ ಎಸ್ ಆರ್ ಟಿ ಸಿ ಯು, ಮುಂಬಯಿ , ಪುಣೆ , ಸಾಂಗ್ಲಿ -ಮೀರಜ್ ಮತ್ತು ಕೊಲ್ಹಪುರದಿಂದ ಸತಾರದವರೆಗೆ -ನಗರದೊಳಗಿನ ಬಸ್^^ಸೇವೆಗಳನ್ನು ಒದಗಿಸುತ್ತದೆ.

  • ರೈಲು ಮಾರ್ಗ - ಸತಾರ ರೈಲ್ವೇ ನಿಲ್ದಾಣ

ಸತಾರವು ತನ್ನ ಅತಿ ವೇಗದ ರೈಲುಗಳಿಂದ ಅಹಮದಾಬಾದ್ , ಬೆಂಗಳೂರು , ಮೈಸೂರು , ಬರೋಡ , ಸೂರತ್ , ಡೆಲ್ಲಿ , ಮುಂಬಯಿ , ಪುಣೆ , ನಾಗಪುರ್ , ಸಾಂಗ್ಲಿ -ಮೀರಜ್ ಮತ್ತು ಗೋವಾ ಮುಂತಾದ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಹತ್ತಿರದ ರೈಲ್ವೆ ಜಂಕ್ಷನ್^^ಗಳು[ಬದಲಾಯಿಸಿ]

ಪುಣೆ ಮತ್ತು ಮೀರಜ್ ಎರಡೂ ಜಂಕ್ಷನ್^^ಗಳು ಸತಾರ ನಗರದಿಂದ ಸಮದೂರದಲ್ಲಿವೆ. ಅನೇಕ ರೈಲುಗಳು ಉತ್ತರ ಭಾರದಿಂದ ಬರುತ್ತಿದ್ದು, ಪುಣೆಯಲ್ಲಿ ಅಂತ್ಯಗೊಳ್ಳುತ್ತದೆ. ಆದುದರಿಂದ , ನೀವು ಪುಣೆಯಿಂದ ರೈಲುಗಳನ್ನು ಬದಲಾಯಿಸಬೇಕಾಗಬಹುದು ಮತ್ತು ಸತಾರಾಗೆ ಹೋಗಲು ಮತ್ತೊಂದು ರೈಲನ್ನು ಹಿಡಿಯಬೇಕಾಗುತ್ತದೆ. ದಕ್ಷಿಣದಿಂದ ಬರುವ ಅನೇಕ ರೈಲುಗಳು ಮೀರಜ್^^ನಲ್ಲಿ ಕೊನೆಗೊಳ್ಳುತ್ತವೆ. ಆದುದರಿಂದ , ಮೀರಜ್^^ನಲ್ಲಿ ನೀವು ರೈಲನ್ನು ಬದಲಾಯಿಸಬೇಕಾಗುತ್ತದೆ.

ಹತ್ತಿರದ ವಿಮಾನನಿಲ್ದಾಣ[ಬದಲಾಯಿಸಿ]

ಗುಣ-ವಿಶೇಷಣವಿರುವ ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

  • ರಾಮಶಾಸ್ತ್ರಿ ಪ್ರಭುನೆ ( ಸತಾರ ಜಿಲ್ಲೆಯ ಮಹುಲಿಯಲ್ಲಿ ಜನನ. ಪೆಶವೈ ನಲ್ಲಿ ಅವರು ಮುಖ್ಯ ನ್ಯಾಯಾಧಿಪತಿ ಆಗಿದ್ದರು. )
  • ಝಾನ್ಸಿರಾಣಿ ಲಕ್ಷ್ಮಿಬಾಯಿ ( ಧವದಶಿಯಲ್ಲಿ ಜನನ . ಜಿಲ್ಲೆ ಸತಾರ )
  • ಕರ್ಮವೀರ ಭುರಾವ್ ಪಯ್ಗೊಂಡ ಪಾಟೀಲ್ (ಕುಬ್ಹೊಜ್^^ನಲ್ಲಿ ಜನನ , ಜಿಲ್ಲೆ . ಕೊಲ್ಹಾಪುರ್ ಮತ್ತು ಅವನು ಸತಾರದಲ್ಲಿ 4/10/1919 ರಲ್ಲಿ ರಾಯತ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದನು. )
  • ಕ್ರಾಂತಿಸಿನ್ಹ್ ನಾನಾ ಪಾಟೀಲ್ ( 1942 ರಲ್ಲಿ ಪತ್ರಿಸರ್ಕರ್^^ ಅನ್ನು ಸ್ಥಾಪಿಸಿದನು.)
  • ಸಾವಿತ್ರಿಬಾಯಿ ಫುಲೆ ( ನೈಗೊನ್^^ನಲ್ಲಿ ಜನನ , ತಾಲ್ . ಖಂಡಾಲ , ಜಿಲ್ಲೆ . ಸತಾರ ).
  • ಯಶವಂತರಾವ್ ಚವಾಣ್ ( ಮಹಾರಾಷ್ಟ್ರದ ಒಂದನೇ ಮುಖ್ಯ ಮಂತ್ರಿ .)
  • (ಕವಿ ಯಶವಂತ ) ವೈ .ಡಿ .ಪೆಂಧರ್ಕರ್ ( ಚಪ್ಹಲ್^^ ನಲ್ಲಿ ಜನನ , ತಾಲ್ . ಪಟಾನ್ , ಜಿಲ್ಲೆ ಸತಾರ. ಮತ್ತು ಅವನು ಬಡೋದ ಸಂಸ್ಥಾನದ ಮುಖ್ಯ ಕವಿಯಾಗಿದ್ದನು .)
  • ವಸಂತ್ ಶಂಕರ್ ಕನೆತ್ಕರ್ ( ರಹಿಮತ್ ಪುರದಲ್ಲಿ ಜನನ , ತಾಲ್ . ಕೊರೆಗೊನ್ , ಸತಾರ ಜಿಲ್ಲೆ .ಅವನು ಪ್ರಸಿದ್ಧ ನಾಟಕ ರಾಯ್ಗಡ ಲ ಜೆವ್ಹ ಜಗ ಯೆತೆ )ಯನ್ನು ಬರೆದಿದ್ದಾನೆ.
  • ಖಶಬ ಜಾಧವ್ ( ತಾಲ್^^ ನಲ್ಲಿ ಜನನ . ಕರಡ , ಜಿಲ್ಲೆ . ಸತಾರ ಮತ್ತು ಅವನು 1952 ರಲ್ಲಿ 'ಹೆಲ್ಸಿಂಕಿ' ಆಟಗಳ, ಕುಸ್ತಿಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾನೆ.)
  • ಗೋಪಾಲ್ ಗಣೇಶ್ ಆಗರ್ಕರ್

ಶಿಕ್ಷಣ/ವಿದ್ಯಾಭ್ಯಾಸ[ಬದಲಾಯಿಸಿ]

  • ಮೋನ ಸ್ಕೂಲ್ ,ಸತಾರ Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ.
  • ರಾಯತ್ ಶಿಕ್ಷಣ ಸಂಸ್ಥೆ, ಸತಾರ.
  • ಆಬ ಸಾಹೇಬ್ ಚಿರ್ಮುಲೇ ವಿದ್ಯಾ ಮಂದಿರ , ಸತಾರ (ಪ್ರಾಥಮಿಕ ಶಾಲೆ )
  • ಡಾ.ಜೆ. ಡಬ್ಲ್ಯು. ಐರಾನ್ ಅಕಾಡೆಮಿ , ಸತಾರ
  • ರಘುಕುಲ್ ಎಜುಕೇಶನ್ ಸೊಸೈಟಿಯ ಇಂಗ್ಲಿಷ್ ಮೀಡಿಯಂ ಸ್ಕೂಲ್ , ಸತಾರ
  • ಹುತಾತ್ಮ ಪರಶುರಾಮ ವಿದ್ಯಾಲಯ , ವಾಡುಜ್
  • ಶಿವಾಜಿ ಹೈಸ್ಕೂಲ್ , ವಾಡುಜ್
  • ಮುಂಬಯಿ ಕಾಲೇಜ್ [೧][ಶಾಶ್ವತವಾಗಿ ಮಡಿದ ಕೊಂಡಿ] ಆಫ್ ಹೋಟೆಲ್ ಮ್ಯಾನೇಜ್ ಮೆಂಟ್
  • ಅನಂತ್ ಇಂಗ್ಲಿಷ್ ಸ್ಕೂಲ್ , ಸತಾರ
  • ನ್ಯೂ ಇಂಗ್ಲಿಷ್ ಸ್ಕೂಲ್ , ಸತಾರ ( 1899 ರಿಂದ )
  • ಕನ್ಯಾಶಾಲಾ , ಸತಾರ ( ಗರ್ಲ್ಸ್ ಹೈಸ್ಕೂಲ್ )
  • ಕೆ ಎಸ್ ಡಿ ಶಾನಭಾಗ್ ವಿದ್ಯಾಲಯ , ದೌಲತ್ ನಗರ , ಸತಾರ
  • ಸೈಂಟ್. ಪಾಲ್ಸ್ ಹೈಸ್ಕೂಲ್
  • ಶ್ರೀ . ಭವಾನಿ ವಿದ್ಯಾ ಮಂದಿರ . ಸತಾರ
  • ನಿರ್ಮಲ ಕಾನ್ವೆಂಟ್ ಹೈಸ್ಕೂಲ್ , ಸತಾರ
  • ಕರ್ಮವೀರ ಭುರಾವ್ ಪಾಟೀಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಪಾಲಿಟೆಕ್ನಿಕ್ , ಸತಾರ
  • ಶ್ರೀ ಮುಧಿದೇವಿ ಶಿಕ್ಷಣ ಸಂಸ್ಥೆ , ದಯುರ್ [೨] Archived 2016-01-09 ವೇಬ್ಯಾಕ್ ಮೆಷಿನ್ ನಲ್ಲಿ.
  • ಶಿವಾಜಿ ಕಾಲೇಜ್ ಸತಾರ ,
  • ವೆನುತೈ ಮಹಿಳಾ ಕಾಲೇಜ್ ಆಫ್ ಎಜುಕೇಶನ್ ,ರವಿವರ್ ಪೆತ್ ,ಸತಾರ .[೩][ಶಾಶ್ವತವಾಗಿ ಮಡಿದ ಕೊಂಡಿ]
  • ಎಲ್ .ಬಿ .ಎಸ್ .ಕಾಲೇಜ್ ಸತಾರ ,
  • ವೈ .ಸಿ . ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜ್. ಸತಾರ
  • ಕೆ .ಬಿ .ಪಿ .ಇಂಜಿನಿಯರಿಂಗ್ ಕಾಲೇಜ್ ಸತಾರ
  • ಎಸ್ .ಪಿ .ಎಸ್ . ಸತಾರ ಪಾಲಿಟೆಕ್ನಿಕ್ ಕಾಲೇಜ್ ಸತಾರ
  • ಗೌರಿ ಶಂಕರ್ ಇನ್ಸ್ಟಿಟ್ಯೂಟ್ ಆಫ್ ಬಿ ಸಿ ಎ , ಎಂ ಬಿ ಎ ,ಡಿ ಇ ಡಿ , ಡೆಗೊನೆ , ಸತಾರ
  • ಗೌರಿಶಂಕರ್ ನಾಲೆಡ್ಜ್ ಸಿಟಿ , ಸತಾರ
  • ಗೌರಿ ಶಂಕರ್ ಎಜುಕೇಶನಲ್ ಅಂಡ್ ಚಾರಿಟಬಲ್ ಟ್ರಸ್ಟ್ ಲಿಂಬ್ ,ಸತಾರ .
  • ಗೌರಿ ಶಂಕರ್ ಎಜುಕೇಶನ್ ಸೊಸೈಟಿ ,ಸತಾರ .

ಮನರಂಜನೆ[ಬದಲಾಯಿಸಿ]

'ಶಾಹು ಕಲಾಮಂದಿರ'ವು ಸ್ಥಳೀಯ ಶ್ರೋತೃಮಂದಿರವಾಗಿದ್ದು,ಇಲ್ಲಿ ಮರಾಠಿ ನಾಟಕಗಳು ಮತ್ತು ಸಂಗೀತ ಕಚೇರಿಗಳನ್ನು ಹಮ್ಮಿಕೊಳ್ಳಲಾಗುತದೆ. ಮಹಾರಾಜ ಬಿಲ್ಡರ್ಸ್^^ರವರ 7 ಸ್ಟಾರ್ ಮಲ್ಟಿಪ್ಲೆಕ್ಸ್ ಭವಿಷ್ಯದ ಮಲ್ಟಿಪ್ಲೆಕ್ಸ್ ಯೋಜನೆಯಾಗಿದ್ದು, ಮತ್ತು ಇತರ ಥಿಯೇಟರ್^^ಗಳು ಸತಾರದಲ್ಲಿವೆ.ಅವುಗಳೆಂದರೆ

  • ಸಮರ್ಥ ಟಾಕೀಸ್
  • ರಾಧಿಕಾ ಥಿಯೇಟರ್
  • ರಾಜಲಕ್ಷ್ಮಿ ಥಿಯೇಟರ್

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

  • .ಚಾರಿತ್ರಿಕ ದಾಖಲೆಯಂತೆ ವಂಶವಾಹಿನಿಯಾಗಿ ಬರೋಡಾದ ಮಂತ್ರಿಗಳನ್ನು ಆರಿಸಲಾಗುತ್ತದೆ. ಬಾಂಬೆ , ಬರೋಡ , ಪೂನ ಮತ್ತು ಸತಾರ ಸರ್ಕಾರಗಳಿಂದ ಪತ್ರಗಳನ್ನು ಒಳಗೊಂಡಿದೆ. ಸಂಗ್ರಹ ಬಿ .ಎ . ಗುಪ್ತೆ . ಕಲ್ಕತ್ತ 1922.
  • ಮಲಿಕ್, ಎಸ್ .ಸಿ .'ಸ್ಟೋನ್ ಏಜ್ ಇಂಡಸ್ಟ್ರೀಸ್ ಆಫ್ ದಿ ಬಾಂಬೆ ಅಂಡ್ ಸತಾರ ಡಿಸ್ಟ್ರಿಕ್ಟ್ಸ್' , ಎಂ. ಸಯಾಜಿರಾವ್ ಯುನಿವರ್ಸಿಟಿ ಬರೋಡ 1959.
  • ಇರಾವತಿ ಕರ್ವೆ , ಜಯಂತ್ ಸದಾಶಿವ್ ರನ್ದಡಿವೆ - 'ದಿ ಸೋಶಿಯಲ್ ಡೈನಾಮಿಕ್ಸ್ ಆಫ್ ಎ ಗ್ರೋಯಿಂಗ್ ಟೌನ್ ಅಂಡ್ ಇಟ್ಸ್ ಸರ್ರೌನ್ಡಿಂಗ್ ಏರಿಯ'. . ಡೆಕ್ಕನ್ ಕಾಲೇಜ್ ,1965, ಪೂನ . ಐ ಎಸ್ ಬಿ ಎನ್ ಬಿ 0000 ಸಿ ಕ್ಯು ಡಬ್ಲ್ಯು3 ಜೆ
  • ವಲುನಜ್ಕರ್ , ಟಿ.ಎನ್ .ಸೋಶಿಯಲ್ ಆರ್ಗನೈಸೇಶನ್ , ಮೈಗ್ರೇಶನ್ ಅಂಡ್ ಚೇಂಜ್ ಇನ್ ಎ ವಿಲೇಜ್ ಕಮ್ಯುನಿಟಿ , ಡೆಕ್ಕನ್ ಕಾಲೇಜ್ ಪೂನ 1966.

ಆಕರಗಳು[ಬದಲಾಯಿಸಿ]

  1. ಫಾಲ್ಲಿಂಗ್ ರೈನ್ ಜೆನಾಮಿಕ್ಸ್ , - ಸತಾರವೂ ಸೇರಿದಂತೆ
  2. GRIndia
  3. ಜೇಮ್ಸ್ ಗ್ರಾಂಟ್ ಡುಫ್ಫ್ಸ್ ಮರಾಠರು , ಪರಿಮಾಣ . I, 27. ಮರಾಠರ ಇತಿಹಾಸ 3 ಪರಿಮಾಣಗಳು . ಲಂಡನ್ , ಲೊಂಗ್ಮಂಸ್ , ರೀಸ್ , ಒರ್ಮೆ , ಬ್ರೌನ್ , ಮತ್ತು ಗ್ರೀನ್ (1826); ಇತ್ತೀಚಿನ ಹೆಚ್ಚು ಆವೃತ್ತಿಗಳು , ಐ ಎಸ್ ಬಿ ಎನ್ 8170209560 ಐ ಎಸ್ ಬಿ ಎನ್ 1421221373; ಪರಿಮಾಣ . II ಆನ್ - ಲೈನ್ ನಲ್ಲಿ ಮಾತ್ರ . ಹಾಗು , ಪರಿಷ್ಕರಿಸಿದ ಆವೃತ್ತಿ ., ಎಸ್ . ಎಂ . ಎಡ್ವರ್ಡ್ಸ್ , ಲಂಡನ್ , ಮುಂತಾದವು ., ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ (1921) ಆವೃತ್ತಿ . II ಆನ್ - ಲೈನ್ ನಲ್ಲಿ ಮಾತ್ರ .
  4. ಗ್ರಾಂಟ್ ಡುಫ್ಫ್ಸ್ ಮರಥಸ್ ,ತೋರಿಸಿದಂತೆ/ಆಧರಿಸಿದಂತೆ ಆವೃತ್ತಿ . I, 202.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

Public Domain This article incorporates text from a publication now in the public domainChisholm, Hugh, ed. (1911). Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help); Missing or empty |title= (help)


"https://kn.wikipedia.org/w/index.php?title=ಸತಾರ&oldid=1175392" ಇಂದ ಪಡೆಯಲ್ಪಟ್ಟಿದೆ