ವಿಷಯಕ್ಕೆ ಹೋಗು

ನಿಯಮ(ಯೋಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
योगशास्त्रस्य प्रणयिता पतञ्जलिः

शौच - सन्तोष - तपः – स्वाध्याय ईश्चरप्रणिधानानि नियमाः|| ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನಗಳು ಐದು ನಿಯಮಗಳು. ಶೌಚ ಎರಡು ಬಗೆ -ಬಾಹ್ಯಶೌಚ ಮತ್ತು ಆಭ್ಯಂತರ ಶೌಚ. ಗೋಮೂತ್ರ ಗೋಮಯಾದಿಗಳ ಪ್ರಾಶನದಿಂದ, ಮೃತ್ತಿಕಾದಿಗಳನ್ನು ಬಳಸಿ ಮಾರ್ಜನ ಮಾಡುವುದರಿಂದ, ಸ್ನಾನಾದಿಗಳಿಂದ ಶುದ್ಧನಾಗುವುದು ಬಾಹ್ಯ ಶೌಚ. ಮೈತ್ರಿ, ಕರುಣೆ ಮುಂತಾದ ಭಾವನೆಗಳಿಂದ ಆಭ್ಯಂತರ ಶುದ್ಧಿಯಾಗುತ್ತದೆ. ಸುಖದಲ್ಲಾಗಲೀ, ದುಃಖದಲ್ಲಾಗಲೀ ಸದಾ ಪ್ರಸನ್ನತೆಯನ್ನು ಉಳಿಸಿಕೊಳ್ಳುವುದೇ ಸಂತೋಷ. ಸಂತೋಷದಿಂದ ಸುಖ ಪ್ರಾಪ್ತವಾಗುತ್ತದೆ.ಭಗವಂತನ ನಾಮಸ್ಮರಣೆ, ಜಪ, ವೇದಾಧ್ಯಯನ, ಕೃಚ್ಛ್ರ-ಚಾಂದ್ರಾಯಣಾದಿ ವ್ರತಗಳನ್ನು ಆಚರಿಸುವುದು ಸ್ವಾಧ್ಯಾಯವೆನಿಸುತ್ತದೆ. ಇಷ್ಟದೇವತೆಯ ಸಾಕ್ಷಾತ್ಕಾರವೇ ಸ್ವಾಧ್ಯಾಯದ ಫಲ. ಅಂತರ್ಬಹಿರಿಂದ್ರಿಯಗಳಿಂದ ಫಲಗಳನ್ನು ನಿರೀಕ್ಷಿಸದೇ ಭಗವಂತನಿಗೆ ಶರಣಾಗಿರುವುದೇ ಈಶ್ವರಪ್ರಣಿಧಾನ. ಇದರಿಂದಾಗಿ ಸಮಾಧಿಯನ್ನು ಪಡೆಯಬಹುದು.

अनुरक्तिः परे तत्त्वे सततं नियमः स्मृतः। त्रिशिखाब्राह्मणोपनिषत् २९)

ಪರಬ್ರಹ್ಮನಲ್ಲಿ ಸತತವಾಗಿ ಆಸಕ್ತನಾಗಿರುವುದೇ ನಿಯಮವೆಂದು ತ್ರಿಶಿಖಾ ಬ್ರಾಹ್ಮಣೋಪನಿಷತ್ತಿನಲ್ಲಿ ಹೇಳಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]