ವಿಷಯಕ್ಕೆ ಹೋಗು

ನಿಕೋಲಾ ಟೆಸ್ಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nikola Tesla
circa 1893.
ಜನನ(೧೮೫೬-೦೭-೧೦)೧೦ ಜುಲೈ ೧೮೫೬
Smiljan, Austrian Empirea
(Croatian Military Frontier)
ಮರಣ7 January 1943(1943-01-07) (aged 86)
New York City, New York, USA
ವಾಸಸ್ಥಳAustria-Hungarya
ಫ್ರಾನ್ಸ್
United States of America
ಪೌರತ್ವAustro-Hungariana (೧೮೫೬-೧೮೯೧)
American (೧೮೯೧-೧೯೪೩)
ರಾಷ್ಟ್ರೀಯತೆYugoslav American
ಕಾರ್ಯಕ್ಷೇತ್ರMechanical and electrical engineering
ಸಂಸ್ಥೆಗಳುEdison Machine Works
Tesla Electric Light & Manufacturing
Westinghouse Electric & Manufacturing Co.
ಪ್ರಸಿದ್ಧಿಗೆ ಕಾರಣ
ಪ್ರಭಾವಗಳುErnst Mach
ಪ್ರಭಾವಿತರುGano Dunn
ಗಮನಾರ್ಹ ಪ್ರಶಸ್ತಿಗಳುEdison Medal (೧೯೧೬)
Elliott Cresson Medal (೧೮೯೩)
John Scott Medal (೧೯೩೪)
ಹಸ್ತಾಕ್ಷರ
ಟಿಪ್ಪಣಿಗಳು
a Austrian Empire (೧೮೦೪–೧೮೬೭) reorganized and renamed into the Austro-Hungarian Monarchy (೧೮೬೭-೧೯೧೮) in ೧೮೬೭.

ನಿಕೋಲಾ ಟೆಸ್ಲಾ ರವರು (Serbian: Никола Тесла; ೧೦ ಜುಲೈ ೧೮೫೬ – ೭ ಜನವರಿ ೧೯೪೩) ಓರ್ವ ಆವಿಷ್ಕಾರಕ, ಯಾಂತ್ರಿಕ ಅಭಿಯಂತರ ಮತ್ತು ವಿದ್ಯುತ್‌‌ ಅಭಿಯಂತರರಾಗಿದ್ದರು. ೧೯ನೇ ಶತಮಾನದ ಕೊನೆಗೆ ಹಾಗೂ ೨೦ನೇ ಶತಮಾನದ ಆದಿಯ ಅವಧಿಯಲ್ಲಿ ಆದ ವಿದ್ಯುತ್‌ಕಾಂತತೆ ಕ್ಷೇತ್ರದ ಅನೇಕ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣಕರ್ತರಾಗಿರುವುದಕ್ಕೆ ಅವರು ಪ್ರಸಿದ್ಧರಾಗಿರುವರಲ್ಲದೇ, ವಾಣಿಜ್ಯ ವಿದ್ಯುಚ್ಛಕ್ತಿಯ ಜನನಕ್ಕೆ ಪ್ರಮುಖ ಕೊಡುಗೆದಾತರಾಗಿದ್ದಾರೆ. ವಿದ್ಯುತ್ತಿನ ವಿತರಣೆಯ ಬಹುಫೇಸ್‌ ವ್ಯವಸ್ಥೆ ಮತ್ತು AC ಮೋಟಾರ್‌ಗಳದ್ದೂ ಸೇರಿದಂತೆ ಆಧುನಿಕ ಪರ್ಯಾಯ ವಿದ್ಯುತ್ಪ್ರವಾಹ (AC) ಆಧಾರಿತ ವಿದ್ಯುಚ್ಛಕ್ತಿ ವ್ಯವಸ್ಥೆಗಳಿಗೆ ಟೆಸ್ಲಾ'ರ ಹಕ್ಕುಸ್ವಾಮ್ಯಗಳು ಮತ್ತು ಸೈದ್ಧಾಂತಿಕ ಸಾಧನೆಗಳು ಆಧಾರವಾಗಿದೆ. ಈ ಸಾಧನೆಗಳು ಎರಡನೇ ಕೈಗಾರಿಕಾ ಕ್ರಾಂತಿಯ ಶುಭಾರಂಭವನ್ನು ಸಾರುವಲ್ಲಿ ಸಹಾಯ ಮಾಡಿದವು.

ಆಸ್ಟ್ರಿಯನ್‌ ಸಾಮ್ರಾಜ್ಯದಲ್ಲಿನ (ಇಂದಿನ ಕ್ರೊಯೇಷಿಯಾ) ಕ್ರೊಯೇಷಿಯಾದ ಸೇನಾ ಗಡಿನಾಡಿನ ಪ್ರದೇಶದಲ್ಲಿರುವ ಸ್ಮಿಲ್ಜನ್‌ ಹಳ್ಳಿಯ ಜನಾಂಗೀಯ/ಕ್ರೈಸ್ತೇತರ/ಯಹೂದ್ಯೇತರ ಸರ್ಬಿಯಾದ ವ್ಯಕ್ತಿಯಾಗಿದ್ದ ಟೆಸ್ಲಾರವರು ಜನ್ಮಸ್ಥಳಕಾರಣವಾಗಿ ಆಸ್ಟ್ರಿಯನ್‌ ಸಾಮ್ರಾಜ್ಯದ ಪ್ರಜೆಯಾಗಿದ್ದು ನಂತರ ಓರ್ವ ಅಮೇರಿಕನ್‌‌ ಪ್ರಜೆಯಾದರು.[] ರೇಡಿಯೋ ತರಂಗಗಳ ಮೂಲಕ ನಿಸ್ತಂತು ಸಂಪರ್ಕ/ಸಂವಹನ ಸಾಧಿಸಬಹುದೆಂಬ ಬಗ್ಗೆ ೧೮೯೪ರಲ್ಲಿ ಅವರು ನೀಡಿದ ಪ್ರದರ್ಶನದಿಂದಾಗಿ ಹಾಗೂ "ವಾರ್‌ ಆಫ್‌ ಕರೆಂಟ್ಸ್‌/ವಿದ್ಯುತ್‌ಪ್ರವಾಹಗಳ ಯುದ್ಧ"ದಲ್ಲಿ ಅಂತಿಮವಾಗಿ ಗಳಿಸಿದ ವಿಜಯದಿಂದಾಗಿ ಅಮೇರಿಕಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೇಷ್ಠ ವಿದ್ಯುತ್‌‌ ಅಭಿಯಂತರರುಗಳಲ್ಲಿ ಒಬ್ಬರಾಗಿ ಅವರನ್ನು ವ್ಯಾಪಕವಾಗಿ ಗೌರವಿಸಲಾಗಿದೆ.[] ಆಧುನಿಕ ವಿದ್ಯುತ್‌‌‌‌ ಶಿಲ್ಪಶಾಸ್ತ್ರದ ಪ್ರವರ್ತಕರಾಗಿದ್ದ ಅವರ ಅನೇಕ ಆವಿಷ್ಕಾರಗಳು ಅಭೂತಪೂರ್ವ ಮಹತ್ವದ್ದಾಗಿದ್ದವು. ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿನ ಟೆಸ್ಲಾ'ರ ಪ್ರಸಿದ್ಧಿಯು ಇದೇ ಅವಧಿಯಲ್ಲಿ ಜನಪ್ರಿಯ ಸಂಸ್ಕೃತಿಯಲ್ಲಿನ[] ಅಥವಾ ಇತಿಹಾಸದಲ್ಲಿನ ಇತರ ಯಾವುದೇ ಆವಿಷ್ಕಾರಕ ಅಥವಾ ವಿಜ್ಞಾನಿಯನ್ನು ಮೀರಿಸಿತ್ತು. ದುರಾದೃಷ್ಟವಶಾತ್‌ ಅವರ ವಿಲಕ್ಷಣವಾದ ವ್ಯಕ್ತಿತ್ವದಿಂದಾಗಿ ಹಾಗೂ ನಂಬಲನರ್ಹವೆಂದೆನಿಸುತ್ತಿದ್ದ ಹಾಗೂ ಸಾಧ್ಯವಾಗಬಹುದಾದ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚಿತ್ರವಿಚಿತ್ರ ಪ್ರತಿಪಾದನೆಗಳಿಂದಾಗಿ, ಅಂತಿಮವಾಗಿ ಜೀವನದ ನಂತರದ ಅವಧಿಯಲ್ಲಿ ಟೆಸ್ಲಾರನ್ನು ಬಹಿಷ್ಕರಿಸಲಾಯಿತಲ್ಲದೇ ಕೆಲವರು ಅವರನ್ನು ಹುಚ್ಚ ವಿಜ್ಞಾನಿಯೆಂದು ಭಾವಿಸಿದ್ದರು.[][] ತಮ್ಮ ಆರ್ಥಿಕ ಪರಿಸ್ಥಿತಿಯ ಕಡೆಗೆ ಎಂದೂ ಗಮನ ಹರಿಸದ ಕಾರಣ ಟೆಸ್ಲಾರು ದಾರಿದ್ರ್ಯಾವಸ್ಥೆಗೊಳಗಾಗಿ ತಮ್ಮ ೮೬ನೆಯ ವಯಸ್ಸಿನಲ್ಲಿ ನ್ಯೂಯಾರ್ಕ್‌‌ ಮಹಾನಗರದಲ್ಲಿ ತಾವು ವಾಸಿಸುತ್ತಿದ್ದ ಹೋಟೆಲ್‌‌ ಕೋಣೆಯಲ್ಲಿ ಏಕಾಂಗಿಯಾಗಿ ಸಾವು ಕಂಡರು.[]

ಅಯಸ್ಕಾಂತೀಯ ಕ್ಷೇತ್ರ B ಯನ್ನು ಅಳೆಯುವ (ಅಯಸ್ಕಾಂತೀಯ ಹರಿವಿನ ಸಾಂದ್ರತೆ ಹಾಗೂ ಅಯಸ್ಕಾಂತೀಯ ಚೋದನೆ ಎಂದೂ ಕರೆಯಲ್ಪಡುವ) ಇಂಟರ್‌‌ನ್ಯಾಷನಲ್‌ ಸಿಸ್ಟಮ್‌ ಆಫ್‌ ಯೂನಿಟ್ಸ್‌‌/ಅಂತರರಾಷ್ಟ್ರೀಯ ಮಾನಕ ವ್ಯವಸ್ಥೆಯ ಏಕಮಾನ ಅಳತೆ ಟೆಸ್ಲಾ ಗೆ ಗೌರವಪೂರ್ವಕವಾಗಿ ಅವರ ಹೆಸರನ್ನಿಡಲಾಗಿದೆಯಲ್ಲದೇ (೧೯೬೦ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಕಾನ್‌ಫರೆನ್ಸ್‌‌ ಗನರಲೇ ಡೆಸ್‌‌ ಪಾಯ್ಡ್‌ಸ್‌ ಎಟ್‌‌‌ ಮೆಷ್ಯೂರೆಸ್ ‌‌ ಸಮ್ಮೇಳನದಲ್ಲಿ), ನಿಸ್ತಂತು ಚಾಲಿತ ವಿದ್ಯುನ್ಮಾನ ಸಾಧನಗಳಿಗೆ ನಿಸ್ತಂತು ಚೈತನ್ಯ ವರ್ಗಾವಣೆಯ ಟೆಸ್ಲಾ ಪರಿಣಾಮ ಕ್ಕೆ ಕೂಡಾ ಅವರ ಹೆಸರಿಡಲಾಗಿದೆ (೧೮೯೩ರಷ್ಟು ಮುಂಚಿತವಾಗಿಯೇ ತಮ್ಮ ಅಪೂರ್ಣ ವಾರ್ಡನ್‌‌ಕ್ಲಿಫ್ಫೆ ಗೋಪುರ/ಟವರ್‌ ಯೋಜನೆಯಲ್ಲಿ ಕೈಗಾರಿಕಾ ವಿದ್ಯುತ್‌‌ಪ್ರವಾಹದ ಅಂತರಖಂಡೀಯ ಪ್ರಸರಣ/ಸಂವಹನಗಳಲ್ಲಿನ ಬಳಕೆಗಾಗೆಂದು ಉದ್ದೇಶಿಸಿ ಸಣ್ಣ ಪ್ರಮಾಣದಲ್ಲಿ ತಾಪಜ್ವಲನ ವಿದ್ಯುದ್ದೀಪಗಳೊಂದಿಗೆ ಟೆಸ್ಲಾ ನಿದರ್ಶನಾತ್ಮಕವಾಗಿ ಪ್ರಮಾಣೀಕರಿಸಿದ್ದರು).

ಟೆಸ್ಲಾರವರು ರೋಬೋಟಿಕ್ಸ್‌‌/ರೋಬೋಟ್‌ ಶಾಸ್ತ್ರ, ರಿಮೋಟ್‌ ಕಂಟ್ರೋಲ್‌ ಉಪಕರಣ, ರಾಡಾರ್‌/ಸರ್ವದರ್ಶಿನಿ ಮತ್ತು ಗಣಕ ವಿಜ್ಞಾನ ಕ್ಷೇತ್ರಗಳ ಸ್ಥಾಪನೆಗೆ ಹಾಗೂ ಕ್ಷಿಪಣಿಶಾಸ್ತ್ರ/ವಿಜ್ಞಾನ, ಪರಮಾಣು ಭೌತಶಾಸ್ತ್ರ[] ಮತ್ತು ಸೈದ್ಧಾಂತಿಕ ಭೌತಶಾಸ್ತ್ರಗಳ ವಿಸ್ತರಣೆಗಾಗಿ ವಿವಿಧ ಮಟ್ಟಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ವಿದ್ಯುತ್‌ಕಾಂತತೆ ಮತ್ತು ವಿದ್ಯುತ್‌‌‌‌ಯಂತ್ರ ಶಿಲ್ಪಶಾಸ್ತ್ರಗಳ ಮೇಲಿನ ತಮ್ಮ ಅಧ್ಯಯನಗಳ ಜೊತೆಗೆ ಸಲ್ಲಿಸಿದ್ದಾರೆ.

ಆರಂಭಿಕ ವರ್ಷಗಳು

[ಬದಲಾಯಿಸಿ]
ನಿಕೋಲಾ ಟೆಸ್ಲಾ'ರು ಹುಟ್ಟಿದ ಮನೆ ಮತ್ತು ಕ್ರೊಯೇಷಿಯಾದಲ್ಲಿನ ಸ್ಮಿಲ್ಜನ್‌ ಹಳ್ಳಿಯಲ್ಲಿರುವ ಪ್ರತಿಮೆ
c.1879 23ನೆಯ ವಯಸ್ಸಿನಲ್ಲಿ
ಮೂರು-ಫೇಸ್‌ಗಳ ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರ

ಆಸ್ಟ್ರಿಯನ್‌ ಸಾಮ್ರಾಜ್ಯದಲ್ಲಿ ಆಧುನಿಕ-ದಿನಮಾನದ ಕ್ರೊಯೇಷಿಯಾಕ್ಕೆ ಒಳಪಡುವ ಪ್ರಾಂತ್ಯದ ಗಾಸ್ಪಿಕ್‌‌ ಪಟ್ಟಣದ ಸಮೀಪವಿರುವ ಸ್ಮಿಲ್ಜನ್‌ ಎಂಬ ಹಳ್ಳಿಯಲ್ಲಿ ಸರ್ಬಿಯಾದ ಪೋಷಕರಿಗೆ ಟೆಸ್ಲಾ ಜನಿಸಿದರು. ಅವರ ಜ್ಞಾನಸ್ನಾನದ ದೃಢೀಕರಣಪತ್ರವು ಆತನು ೨೮ ಜೂನ್‌ (N.S. ೧೦ ಜುಲೈ), ೧೮೫೬ರಂದು, ಸ್ರೆಮ್ಸ್‌ಕಿ ಕಾರ್ಲೋವ್ಚಿ/ವ್ಕಿ ಪ್ರಧಾನ ಬಿಷಪ್ಪನ ಪ್ರಾಂತ್ಯದ ಓರ್ವ ಸರ್ಬಿಯಾದ ಸಂಪ್ರದಾಯವಾದಿ ಇಗರ್ಜಿ/ಚರ್ಚಿನ ಪಾದ್ರಿಯಾದ ಫಾದರ್‌ ಮಿಲುಟಿನ್‌ ಟೆಸ್ಲಾ ಮತ್ತು ಡ್ಯೂಕಾ ಮ್ಯಾಂಡಿಕ್‌‌ರ ಪುತ್ರನಾಗಿ ಜನಿಸಿದನು ಎಂದು ತಿಳಿಸುತ್ತದೆ. ಆತನ ತಂದೆಯ ಮೂಲವು ಟಾ/ತಾರಾ ಕಣಿವೆಯ ಸರ್ಬಿಯಾದ ಸ್ಥಳೀಯ ಕುಲಗಳಲ್ಲಿ ಒಂದಕ್ಕೆ ಸೇರಿದ್ದಿರಬಹುದು ಅಥವಾ ಹರ್ಜೆಗೋವಿನಿಯನ್‌‌ ಪ್ರಾಂತ್ಯದ ಪ್ರಮುಖ ಕುಲವಾದ ಪಾವ್ಲೆ ಒರ್ಲೋವಿಕ್‌‌ ಮೂಲದವರಾಗಿದ್ದಿರಬಹುದು.[] ಸರ್ಬಿಯಾದ ಸಂಪ್ರದಾಯವಾದಿ ಇಗರ್ಜಿಯ/ಚರ್ಚಿನ ಪಾದ್ರಿಯ ಮಗಳಾಗಿದ್ದ ಆತನ ತಾಯಿ ಡ್ಯೂಕಾಳು ಕೊಸೋವೋದಲ್ಲಿ ಆಳವಾದ ಬೇರುಗಳನ್ನು ಹೊಂದಿದ್ದರೂ ಲಿಕಾ ಮತ್ತು ಬನಿಜಾಗಳಲ್ಲಿ ನೆಲೆಸಿದ್ದ ಕುಟುಂಬದಿಂದ ಬಂದಿದ್ದರು. ಆಕೆಯು ಅನೇಕ ಸರ್ಬಿಯಾದ ಮಹಾಕಾವ್ಯಗಳನ್ನು ಕಂಠಪಾಠ ಮಾಡಿದ್ದರೂ, ಮನೆಯಲ್ಲಿ ಮಾಡುವ ಕರಕುಶಲವಸ್ತುಗಳ ಉಪಕರಣಗಳ ಮಾಡುವಿಕೆಯಲ್ಲಿ ಪರಿಣತಿ ಪಡೆದಿದ್ದರೂ ಆಕೆಗೆ ಓದಲು ಬರುತ್ತಿರಲಿಲ್ಲ.[]

ಐವರು ಮಕ್ಕಳಲ್ಲಿ ನಿಕೋಲಾ ನಾಲ್ಕನೆಯವನಾಗಿದ್ದು, ಆತನಿಗೆ ಓರ್ವ ಹಿರಿಯ ಸಹೋದರ (ನಿಕೋಲಾ ಐದು ವರ್ಷದವನಿದ್ದಾಗ ಕುದುರೆ ಸವಾರಿಯ ಆಕಸ್ಮಿಕವೊಂದರಲ್ಲಿ ಮರಣಿಸಿದ ಆತನ ಹೆಸರು ಡೇನ್‌‌) ಮತ್ತು ಮೂವರು ಸಹೋದರಿಯರಿದ್ದರು (ಮಿಲ್ಕಾ, ಏಂಜಲೀನಾ ಮತ್ತು ಮಾರಿಕಾ).[೧೦]: 3  ೧೮೬೨ರಲ್ಲಿ ಆತನ ಕುಟುಂಬವು ಗಾಸ್ಪಿಕ್‌‌ಗೆ ಸ್ಥಳಾಂತರಗೊಂಡಿತು. ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು.[೧೧] ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು-ವರ್ಷಗಳ ಓದನ್ನು ಅವರು ಪೂರೈಸಿದರು.[೧೨]

ನಂತರ ಗ್ರಾಜ್‌ನಲ್ಲಿನ‌ ಆಸ್ಟ್ರಿಯನ್‌ ಪಾಲಿಟೆಕ್ನಿಕ್‌ನಲ್ಲಿ (೧೮೭೫) ಟೆಸ್ಲಾರವರು ವಿದ್ಯುತ್‌‌‌‌ ಶಿಲ್ಪಶಾಸ್ತ್ರದಲ್ಲಿ ಅಧ್ಯಯನವನ್ನು ಪೂರೈಸಿದರು. ಅಲ್ಲಿ ಓದುತ್ತಿರುವಾಗ ಪರ್ಯಾಯ ವಿದ್ಯುತ್ಪ್ರವಾಹದ ಬಳಕೆಗಳ ಕುರಿತ ಅಧ್ಯಯನವನ್ನು ನಡೆಸಿದರು. ಗ್ರಾಜ್‌‌ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕ ಪದವಿಗಳನ್ನು ಪಡೆದರೆಂದು ಕೆಲ ಮೂಲಗಳು ತಿಳಿಸುತ್ತವೆ.[೧೩][೧೪][೧೫] ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ ತಮ್ಮ ಅಧ್ಯಯನದ ಮೂರನೇ ವರ್ಷ ಪ್ರಥಮ ಸೆಮಿಸ್ಟರ್‌ನ ನಂತರ, ಅವರು ಓದನ್ನು ಮುಂದುವರೆಸಲಿಲ್ಲವೆಂದೂ, ಅದೇ ಕಾರಣಕ್ಕಾಗಿಯೇ ಪದವಿಯನ್ನು ಪಡೆಯಲಿಲ್ಲವೆಂದು ವಿಶ್ವವಿದ್ಯಾಲಯವು ಹೇಳುತ್ತದೆ.[೧೬][೧೭][೧೮][೧೯] ಡಿಸೆಂಬರ್‌ ೧೮೭೮ರಲ್ಲಿ ಗ್ರಾಜ್‌‌ವನ್ನು ತೊರೆದ ಅವರು ತಮ್ಮ ಕುಟುಂಬದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡರು. ಮುರಾ ನದಿಯಲ್ಲಿ ಅವರು ಮುಳುಗಿ ಹೋಗಿದ್ದಾರೆಂದು ಅವರ ಸ್ನೇಹಿತರು ಭಾವಿಸಿದ್ದರು. ಮಾರಿಬಾರ್‌ಗೆ ತೆರಳಿದ (ಇಂದಿನ ಸ್ಲೊವೇನಿಯಾ) ಅವರು ಒಂದು ವರ್ಷದ ಕಾಲ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ಅವರು ನರದೌರ್ಬಲ್ಯಕ್ಕೆ ತುತ್ತಾಗಿದ್ದರು. ನಂತರ ಅವರ ತಂದೆಯವರು ಟೆಸ್ಲಾರವರ ಮನವೊಲಿಸಿ ಪ್ರೇಗ್‌‌‌ನಲ್ಲಿರುವ ಚಾರ್ಲ್ಸ್‌‌-ಫರ್ಡಿನೆಂಡ್‌‌ ವಿಶ್ವವಿದ್ಯಾಲಯಕ್ಕೆ ಸೇರಿಸಿದಾಗ ಅವರು ೧೮೮೦ರ ಬೇಸಿಗೆ ಅವಧಿಯಲ್ಲಿ ತರಗತಿಗಳಿಗೆ ಹಾಜರಾದರು. ಅಲ್ಲಿ ಅವರು ಅರ್ನೆಸ್ಟ್‌ ಮ್ಯಾಕ್‌/ಚ್‌‌ರ ಪ್ರಭಾವಕ್ಕೆ ಒಳಗಾದರು. ತಮ್ಮ ತಂದೆಯ ಮರಣದ ನಂತರ ಕೇವಲ ಒಂದೇ ಅವಧಿಯನ್ನು ಮಾತ್ರವೇ ಮುಗಿಸಿದ್ದರೂ, ವಿಶ್ವವಿದ್ಯಾಲಯವನ್ನು ಅವರು ತೊರೆದರು.[೨೦]

ಇಡೀ ಪುಸ್ತಕಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾ ಸಾಮಾನ್ಯವಾಗಿ ಭಾವಿಸಿರುವಂತೆ ಛಾಯಾಚಿತ್ರದಂತೆ ಸ್ಫುಟವಾದ ಜ್ಞಾಪಕಶಕ್ತಿ ಹೊಂದಿದ್ದ ಟೆಸ್ಲಾರು ಅನೇಕ ಕೃತಿಗಳನ್ನು ಓದುವುದರಲ್ಲಿ ತೊಡಗಿದರು.[೨೧] ತಮ್ಮ ಆತ್ಮಚರಿತ್ರೆಯಲ್ಲಿ ಈ ಕುರಿತಂತೆ ಪ್ರಸ್ತಾಪಿಸಿರುವ ಟೆಸ್ಲಾರು ಈ ಅವಧಿಯಲ್ಲಿ ತಾನು ದೀರ್ಘಕಾಲೀನ ಪ್ರೇರಣೆಗಳಿಗೆ ಒಳಪಟ್ಟೆ ಎಂದಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ, ಟೆಸ್ಲಾರವರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದರು. ಅನೇಕವೇಳೆ ದೃಶ್ಯಾಕೃತಿಗಳೊಡನೆ ಕಣ್ಣುಕೋರೈಸುವಂತೆ ಹೊಳಪಿನ ಬೆಳಕು ಕಂಡುಬರುತ್ತಿದ್ದ ವಿಚಿತ್ರ ಸಂಕಟವನ್ನು ಅವರು ಎದುರಿಸುತ್ತಿದ್ದರು. ಬಹುತೇಕ ಸಮಯಗಳಲ್ಲಿ ಆಯಾ ದೃಶ್ಯಗಳು ಅವರ ಗಮನಕ್ಕೆ ಬಂದಿದ್ದಂತಹಾ ಪದಗಳು ಅಥವಾ ಕಲ್ಪನೆಗೆ ಸಂಬಂಧಪಟ್ಟಿದ್ದಾಗಿರುತ್ತಿದ್ದರೆ, ಇನ್ನು ಕೆಲವು ವೇಳೆ ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರವನ್ನು ತೋರುತ್ತಿದ್ದುದಾಗಿರುತ್ತಿತ್ತು ; ವಸ್ತುವೊಂದರ ಹೆಸರನ್ನು ಕೇಳುತ್ತಿದ್ದ ಹಾಗೆಯೇ ಅವರು ಅದನ್ನು ವಾಸ್ತವ ವಿವರಗಳೊಡನೆ ಕಲ್ಪಿಸಿಕೊಳ್ಳಬಲ್ಲರಾಗಿದ್ದರು. ಆಧುನಿಕ-ದಿನಮಾನದ ಸಹಸಂವೇದಿಗಳು ಇದೇ ತರಹದ ಲಕ್ಷಣಗಳನ್ನು ತೋರುತ್ತಾರೆ. ಕೆಲವೊಮ್ಮೆ ಚಿತ್ರರೂಪಿ ಚಿಂತನೆ ಎಂದು ಕರೆಸಿಕೊಳ್ಳುವ ನಿರ್ಮಾಣ ಹಂತಕ್ಕೆ ಹೋಗುವ ಮೊದಲೇ ತಮ್ಮ ಆವಿಷ್ಕಾರವೊಂದನ್ನು ತಮ್ಮ ಮನಸ್ಸಿನಲ್ಲಿ ಸಂಪೂರ್ಣ ನಿಷ್ಕೃಷ್ಟತೆಯೊಂದಿಗೆ ಎಲ್ಲಾ ಪರಿಮಾಣ/ಆಯಾಮಗಳ ವಿವರಗಳನ್ನೂ ಕಲ್ಪಿಸಿಕೊಳ್ಳ ಸಾಮರ್ಥ್ಯವನ್ನು ಟೆಸ್ಲಾರವರು ಹೊಂದಿದ್ದರು. ಸಾಧಾರಣವಾಗಿ ತಮ್ಮ ಎಲ್ಲಾ ಚಿಂತನೆಗಳನ್ನು ಮನಸ್ಸಿನಲ್ಲಿಯೇ ರೂಪಿಸಿಕೊಳ್ಳುತ್ತಿದ್ದ ಅವರು ಎಂದಿಗೂ ಕೈಯಿಂದ ಚಿತ್ರ/ರೂಪರೇಖೆಗಳನ್ನು ಚಿತ್ರಿಸುತ್ತಿರಲಿಲ್ಲ. ಅವರ ಬಾಲ್ಯದಿಂದಲೇ ಆರಂಭವಾಗಿದ್ದ ಮತ್ತೊಂದು ವಿಚಿತ್ರವೆಂದರೆ ಟೆಸ್ಲಾರ ಜೀವನದಲ್ಲಿ ಹಿಂದೆ ನಡೆದಿದ್ದ ಘಟನೆಗಳ ದೃಶ್ಯಗಳು ಅವರ ಕಣ್ಣಮುಂದೆ ಪುನರಾವರ್ತಿತವಾಗುತ್ತಿದ್ದುದು.[೨೧]

ಟಿವಾದಾರ್‌‌ ಪುಸ್ಕಾಸ್‌‌ರಡಿಯಲ್ಲಿ ಕೆಲಸ ಮಾಡಲು ಅವರು ಬುಡಾಪೆಸ್ಟ್‌‌‌ಗೆ ತಂತಿಸಮಾಚಾರ ಕಂಪೆನಿಯಾದ,[೨೨] ನ್ಯಾಷನಲ್‌‌ ಟೆಲಿಫೋನ್‌‌ ಕಂಪೆನಿಗೆ ೧೮೮೦ನೇ ಇಸವಿಯಲ್ಲಿ ತೆರಳಿದರು. ಆಸ್ಟ್ರಿಯಾದಲ್ಲಿ ನೆಲೆಸಿದ್ದ ಸರ್ಬಿಯಾದ ಓರ್ವ ಯುವ ಆವಿಷ್ಕಾರಕ ನೆಬೋಜ್ಸಾ ಪೆಟ್ರೋವಿಕ್‌‌ರನ್ನು ಅಲ್ಲಿ ಆತ ಭೇಟಿ ಮಾಡಿದರು. ಅವರುಗಳು ಜೊತೆಗೆ ಕೆಲಸ ಮಾಡಿದ ಅವಧಿಯು ಕಡಿಮೆಯೇ ಆಗಿದ್ದರೂ, ಜೋಡಿ ವಿದ್ದ್ಯುಜ್ಜಲಚಕ್ರಗಳನ್ನು ಬಳಸಿ ಸತತ ವಿದ್ಯುತ್ತನ್ನು ಉತ್ಪಾದಿಸುವ ಯೋಜನೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ೧೮೮೧ರಲ್ಲಿ, ಬುಡಾಪೆಸ್ಟ್‌‌‌ನಲ್ಲಿ ದೂರವಾಣಿ ಕೇಂದ್ರವು ಆರಂಭಗೊಂಡಾಗ ಟೆಸ್ಲಾರವರು ಕಂಪೆನಿಯ ಪ್ರಧಾನ ವಿದ್ಯುತ್‌ತಜ್ಞರಾದರು, ನಂತರ ರಾಷ್ಟ್ರದ ಪ್ರಪ್ರಥಮ ದೂರವಾಣಿ ವ್ಯವಸ್ಥೆಯ ಅಭಿಯಂತರರಾಗಿ ನಿಯುಕ್ತಗೊಂಡರು. ದೂರವಾಣಿ ಪುನಃಪ್ರೇಷಕ ಅಥವಾ ವರ್ಧಕವೆಂದು ಕೆಲವರು ಭಾವಿಸಿದ್ದ ಹಾಗೂ ಇತರರ ಪ್ರಕಾರ ಪ್ರಪ್ರಥಮ ಧ್ವನಿವರ್ಧಕವಾಗಿರಬಹುದಿದ್ದ ಸಾಧನವೊಂದನ್ನು ಕೂಡಾ ಅವರು ನಂತರ ಅಭಿವೃದ್ಧಿಪಡಿಸಿದ್ದರು.[೨೩]

ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌‌ ಸಂಶೋಧನೆಯ ಮೂಲತತ್ವವನ್ನು ವಿಷದಪಡಿಸುವ U.S. ಹಕ್ಕುಸ್ವಾಮ್ಯ 381968ದಿಂದ ಒಂದು ರೇಖಾಚಿತ್ರ

ಫ್ರಾನ್ಸ್‌‌‌ ಮತ್ತು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿನ ವಾಸ

[ಬದಲಾಯಿಸಿ]

ಕಾಂಟಿನೆಂಟಲ್‌‌ ಎಡಿಸನ್‌‌ ಕಂಪೆನಿ ಯಲ್ಲಿ ಸಾಗರೋತ್ತರ ರಾಷ್ಟ್ರಗಳಿಂದ ಬಂದ ವಿದ್ಯುತ್‌‌ ಉಪಕರಣಗಳಿಗೆ ಎಡಿಸನ್‌ ಸಂಸ್ಥೆಯ ಕಲ್ಪನೆಗಳ ಅನುಸಾರವಾಗಿ ಸುಧಾರಣೆಗಳನ್ನು ವಿನ್ಯಾಸ ಮಾಡುವ ಅಭಿಯಂತರರಾಗಿ ಕೆಲಸ ಮಾಡಲು ೧೮೮೨ರಲ್ಲಿ ಪ್ಯಾರಿಸ್‌‌ಗೆ ಸ್ಥಳಾಂತರಗೊಂಡರು. ೧೮೮೮ರಲ್ಲಿ ಹಕ್ಕುಸ್ವಾಮ್ಯಗಳನ್ನು ಪಡೆದ ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರಗಳ ಸಹಾಯದಿಂದ ಕಾರ್ಯನಿರ್ವಹಿಸುವ ಅನೇಕ ಸಾಧನಗಳನ್ನು ಆತ ಅಭಿವೃದ್ಧಿಪಡಿಸಲು ಆರಂಭಿಸಿದ್ದರಲ್ಲದೇ ಆತನ ಆತ್ಮಚರಿತ್ರೆಯ ಪ್ರಕಾರ ಅದೇ ವರ್ಷ ಚೋದನೆ ಮೋಟಾರ್‌ಅನ್ನು ರೂಪಿಸಿದ್ದರು.

ಇದಾದ ಕೆಲಸಮಯದ ನಂತರ, ತಮ್ಮ ತಾಯಿಯು ಮರಣಿಸಿದಂತೆ ಕಂಡ ಕನಸಿನಿಂದಾಗಿ ಬೆಚ್ಚಿದ ಟೆಸ್ಲಾ ಎಚ್ಚರಗೊಂಡಿದ್ದರು, ಈ ಬಗ್ಗೆ ಅವರು "ನನಗೆ ಅದು ನಿಜಕ್ಕೂ ನಡೆದಿರುತ್ತದೆ ಎಂಬುದು ತಿಳಿದಿತ್ತು" ಎಂದಿದ್ದರು.[೨೪] ಆಕೆಯ ಸಾವಿನ ನಂತರ ಟೆಸ್ಲಾರು ಅನಾರೋಗ್ಯಕ್ಕೆ ತುತ್ತಾದರು. ತಮ್ಮ ತಾಯಿಯ ತವರಾಗಿದ್ದ ಗ್ರಾಕಾಕ್‌ ಬಳಿಯ ಟೋಮಿಂಗಜ್ ‌‌ ಹಳ್ಳಿ ಮತ್ತು ಗಾಸ್ಪಿಕ್‌‌ನಲ್ಲಿ ಎರಡರಿಂದ ಮೂರು ವಾರಗಳ ಕಾಲ ಅವರು ವಿಶ್ರಾಂತಿ ಪಡೆದು ಚೇತರಿಸಿಕೊಂಡರು.

ಯುನೈಟೆಡ್‌‌ ಸ್ಟೇಟ್ಸ್‌ನ ನ್ಯೂಯಾರ್ಕ್‌‌ ಮಹಾನಗರಕ್ಕೆ[೨೫] ೬ ಜೂನ್‌ ೧೮೮೪ರಂದು ಆಗಮಿಸಿದ ಟೆಸ್ಲಾರು ಓರ್ವ ಮಾಜಿ ಉದ್ಯೋಗದಾತ ಚಾರ್ಲ್ಸ್‌‌ ಬ್ಯಾಚೆಲರ್‌‌ರಿಂದ ತಂದ ಶಿಫಾರಸು ಪತ್ರದ ಹೊರತಾಗಿ ಹೆಚ್ಚೇನನ್ನೂ ಹೊಂದಿರಲಿಲ್ಲ. ಥಾಮಸ್‌ ಎಡಿಸನ್‌ರವರನ್ನು ಉದ್ದೇಶಿಸಿ ಬರೆದ ಶಿಫಾರಸು ಪತ್ರದಲ್ಲಿ ಬ್ಯಾಚೆಲರ್‌ರು ಹೀಗೆ ಬರೆದಿದ್ದರು, "ನಾನು ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ಬಲ್ಲೆ, ಅವರಲ್ಲಿ ಒಬ್ಬರು ತಾವು ; ಮತ್ತೋರ್ವರೆಂದರೆ ಈ ಯುವಕ." ಎಡಿಸನ್‌ ಮೆಷೀನ್‌ ವರ್ಕ್ಸ್‌ ಸಂಸ್ಥೆ ಯಲ್ಲಿ ಕೆಲಸ ಮಾಡಲು ಟೆಸ್ಲಾರನ್ನು ಎಡಿಸನ್‌ ನೇಮಿಸಿಕೊಂಡರು. ಸರಳ ವಿದ್ಯುತ್‌‌‌‌ ಶಿಲ್ಪಶಾಸ್ತ್ರದೊಂದಿಗೆ ಎಡಿಸನ್‌ ಸಂಸ್ಥೆಯಲ್ಲಿ ಟೆಸ್ಲಾ'ರ ಕಾರ್ಯವು ಆರಂಭವಾಯಿತಾದರೂ ಶೀಘ್ರದಲ್ಲೇ ಕಂಪೆನಿ'ಯ ತೀವ್ರ ಕಷ್ಟಕರ ಸಮಸ್ಯೆಗಳನ್ನು ನಿವಾರಿಸುವಷ್ಟು ಮುಂದುವರೆದರು. ಎಡಿಸನ್‌ ಕಂಪೆನಿ'ಯ ಏಕಮುಖ ವಿದ್ಯುತ್‌ ವಿದ್ಯುಜ್ಜನಕಗಳ ಸಂಪೂರ್ಣ ಮರುವಿನ್ಯಾಸದ ಕಾರ್ಯವನ್ನೂ ಸಹಾ ಟೆಸ್ಲಾರಿಗೆ ನೀಡಲಾಯಿತು.[೨೬]

ಎಡಿಸನ್‌' ಸಂಸ್ಥೆಯ ಅಸಮರ್ಥ ಮೋಟಾರ್‌ಗಳು ಮತ್ತು ವಿದ್ಯುಜ್ಜನಕಗಳನ್ನು ಮರುವಿನ್ಯಾಸ ಮಾಡಿ ಅದರ ಸೇವಾಸಾಮರ್ಥ್ಯ ಹಾಗೂ ವೆಚ್ಚಗಳಲ್ಲಿ ಸುಧಾರಣೆ ತಂದರೆ ತಮಗೆ US$೫೦,೦೦೦ರಷ್ಟು ಮೊತ್ತವನ್ನು (ಹಣದುಬ್ಬರಕ್ಕೆ ಹೊಂದಿಸಿದ ನಂತರ ೨೦೦೭ರ ಸಾಲಿನ ~ US$೧.೧ ದಶಲಕ್ಷಕ್ಕೆ ಸಮಾನ)[೨೭] ನೀಡುವೆವೆಂದು ಪ್ರಸ್ತಾಪವಿದ್ದುದಾಗಿ ಟೆಸ್ಲಾರು ಹೇಳಿಕೊಂಡಿದ್ದರು.[೨೧]: 54–57  ಹೇಳಿದಂತೆ ಕಾರ್ಯ ನಿರ್ವಹಿಸಿದುದಕ್ಕೆ ಮೊತ್ತವನ್ನು ಪಾವತಿಸುವಂತೆ ೧೮೮೫ರಲ್ಲಿ ಟೆಸ್ಲಾರು ಕೇಳಿದಾಗ "ಟೆಸ್ಲಾ, ನೀವು ನಮ್ಮ ಅಮೇರಿಕನ್‌‌ ಶೈಲಿಯ ತಮಾಷೆಯನ್ನು ಅರ್ಥ ಮಾಡಿಕೊಳ್ಳಲಿಲ್ಲವೆನಿಸುತ್ತೆ," ಎಂದು ಪ್ರತ್ಯುತ್ತರಿಸುವ ಮೂಲಕ ಎಡಿಸನ್‌ ತಮ್ಮ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದರು.[೨೮][೨೯] ಹಿಂದೆ ಕೊಟ್ಟ ಮಾತಿನಷ್ಟು ಮೊತ್ತವನ್ನು ಪಡೆಯಲು ಪ್ರತಿ ವಾರಕ್ಕೆ US$೧೮ರಂತೆ ದುಡಿಯುತ್ತಿದ್ದ ಟೆಸ್ಲಾರು ೫೩ ವರ್ಷಗಳ ಕಾಲ ದುಡಿಯಬೇಕಿತ್ತು. ಆ ಮೊತ್ತವು ಕಂಪೆನಿಯ ಆರಂಭಿಕ ಬಂಡವಾಳಕ್ಕೆ ಸಮನಾಗಿತ್ತು. ವೇತನವನ್ನು ಏರಿಸಿ ಪ್ರತಿ ವಾರಕ್ಕೆ US$೨೫ರಷ್ಟು ನಿಗದಿಪಡಿಸುವ ತಮ್ಮ ಕೋರಿಕೆಯನ್ನು ಒಪ್ಪದ ಮರುಕ್ಷಣವೇ ಟೆಸ್ಲಾರು ಸಂಸ್ಥೆಗೆ ರಾಜಿನಾಮೆ ನೀಡಿದರು.[೩೦]

ಕೆಲಸದ ಅಗತ್ಯವಿದ್ದ ಟೆಸ್ಲಾರು ಅಂತಿಮವಾಗಿ, ಎಡಿಸನ್‌ ಕಂಪೆನಿಗಾಗಿಯೇ ಅಲ್ಪ ಕಾಲ ಕಂದಕಗಳನ್ನು ಅಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಯಿತು. ಅವರು ಈ ಅವಧಿಯನ್ನು ತಮ್ಮ AC ಬಹುಫೇಸ್‌ ವ್ಯವಸ್ಥೆಯ ಬಗ್ಗೆ ಗಮನ ಕೇಂದ್ರೀಕರಿಸಲು ಬಳಸಿಕೊಂಡರು.[೨೧]

ನಿಕೋಲಾ ಟೆಸ್ಲಾರು ಅಭಿವೃದ್ಧಿಪಡಿಸಿದ್ದ ವಿದ್ಯುದ್ಯಾಂತ್ರಿಕ ಸಾಧನಗಳು ಹಾಗೂ ಮೂಲತತ್ವಗಳು :----
  • ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರಗಳನ್ನು ಬಳಸುವ ಅನೇಕ ಸಾಧನಗಳು (1882)
  • ಚೋದಿತ ಮೋಟಾರ್‌‌, ರೋಟರಿ ಪರಿವರ್ತಕ/ಟ್ರಾನ್ಸ್‌‌ಫಾರ್ಮರ್‌‌ಗಳು, ಮತ್ತು "ಅತ್ಯಧಿಕ" ತರಂಗಾಂತರಗಳ ಆವರ್ತಕ/ಪರ್ಯಾಯಕಗಳು
  • ಅವರು ಕಂಡುಹಿಡಿದ ವರ್ಧಿತ ಸಂವಾಹಕ ಟೆಸ್ಲಾ ಸುರುಳಿ ,[೩೧], ವಿದ್ಯುತ್ತಿನ ಆಂದೋಲನಗಳ ತೀವ್ರತೆಯನ್ನು ಏರಿಸುವ ಇತರೆ ಪರಿಕರಗಳು (ಸಂಚಾಯಕ ನಿರಾವೇಶಕ ರೂಪಾಂತರಗಳು ಮತ್ತು ಟೆಸ್ಲಾ ಆಂದೋಲಕಗಳು [೩೨][೩೩] ಸೇರಿದಂತೆ)
  • ಪರ್ಯಾಯ ವಿದ್ಯುತ್ಪ್ರವಾಹದ ದೀರ್ಘ-ಅಂತರದ ವಿದ್ಯುತ್‌‌ ಸಂವಹನಾ ವ್ಯವಸ್ಥೆ [೩೪] (೧೮೮೮) ಮತ್ತು ವಿದ್ಯುಚ್ಛಕ್ತಿ ಸಂವಹನದ ಇತರೆ ವಿಧಾನಗಳು ಮತ್ತು ಸಾಧನಗಳು
  • ನಿಸ್ತಂತು ಸಂಪರ್ಕ/ಸಂವಹನ (ರೇಡಿಯೋ ಅಲೆಗಳ ಆವಿಷ್ಕಾರಕ್ಕೆ ಮುಂಚಿನ ವಿಧಾನ/ಕಲೆ) ಮತ್ತು ರೇಡಿಯೋ ತರಂಗಗಳ ಆವರ್ತಕಗಳ ವ್ಯವಸ್ಥೆಗಳು[೩೫]
  • ರೋಬೋಟಿಕ್ಸ್‌‌/ರೋಬೋಟ್‌ ಶಾಸ್ತ್ರ ಮತ್ತು ವಿದ್ಯುನ್ಮಾನ ಲಾಜಿಕ್‌ ಗೇಟ್‌ಗಳು[೩೬]
  • ವಿದ್ಯುತ್‌ಚಿಕಿತ್ಸೆ ಟೆಸ್ಲಾ ವಿದ್ಯುತ್‌ ಹೊಯಿಲುಗಳು [೩೭][೩೮][೩೯]
  • ವಿದ್ಯುಚ್ಛಕ್ತಿಯ ನಿಸ್ತಂತು ರವಾನೆ ಮತ್ತು ಟೆಸ್ಲಾ ಪರಿಣಾಮ [೪೦][೪೧]
  • ಟೆಸ್ಲಾ ಪ್ರತಿಬಾಧೆ ವಿದ್ಯಮಾನಗಳು [೪೨]
  • ಟೆಸ್ಲಾ ಸ್ಥಾಯಿ-ವಿದ್ಯುತ್‌‌ ಕ್ಷೇತ್ರ
  • ಟೆಸ್ಲಾ ಮೂಲತತ್ವ
  • ದ್ವಿತಂತು ಸುರುಳಿ
  • ದೂರಭೌಮಿಕಬಲವಿಜ್ಞಾನ
  • ಟೆಸ್ಲಾ ನಿರೋಧನ
  • ಟೆಸ್ಲಾ ಪ್ರಚೋದನೆಗಳು [೪೩]
  • ಟೆಸ್ಲಾ ತರಂಗಗಳು [೩೧]
  • ಟೆಸ್ಲಾ ವಿಸರ್ಜನೆ [೩೧]
  • ವಿದ್ಯುತ್‌ದಿಕ್ಪರಿವರ್ತಕಗಳ ವಿವಿಧ ರೂಪಗಳು ಮತ್ತು ಮೂರನೇ ವಿದ್ಯುತ್‌‌ಕೂರ್ಚಗಳನ್ನು ನಿಯಂತ್ರಿಸುವ ವಿಧಾನಗಳು
  • ನೀರು, ಹಬೆ ಮತ್ತು ಅನಿಲಗಳ ಟೆಸ್ಲಾ ಚಕ್ರಯಂತ್ರಗಳು (e.g., ರೆಕ್ಕೆಗಳಿರದ ವಿದ್ಯುತ್‌ಜಲಚಕ್ರಗಳು) ಮತ್ತು ಟೆಸ್ಲಾ ಪಂಪ್‌‌ಗಳು
  • ಟೆಸ್ಲಾ ಜಾಲಕ/ದಾಹಕ
  • ವಿದ್ಯುತ್‌‌ಕೊರೋನಾ ವಿಸರ್ಜಕ ಓಜೋನ್‌ ಜನಕ
  • ಟೆಸ್ಲಾ ಸಂಪೀಡಕ
  • ಬ್ರೆಮ್ಸ್‌‌ಟ್ರಾಹ್ಲಂಗ್‌ ಪ್ರಕ್ರಿಯೆಯ ಮೂಲಕ ನಿರ್ಮಿತ X-ರೇ/ಕ್ಷ-ಕಿರಣಗಳ ಕೊಳವೆಗಳು
  • ಐಯಾನೀಕೃತ ಅನಿಲಗಳ ಸಾಧನಗಳು ಮತ್ತು "ಹಾಟ್‌ ಸೈಂಟ್‌ ಎಲ್ಮೋಸ್‌ ಫೈರ್ ‌‌".[೪೪]
  • ಅಧಿಕ ಕ್ಷೇತ್ರ ವಿಸರ್ಜಕದ ಸಾಧನಗಳು
  • ವಿದ್ಯುದಾವೇಶಪೂರಿತ ಕಣಗಳ ಪ್ರಭೆಯ ಸಾಧನಗಳು
  • ಬಿಂಬ ಹರಿವಿನ ಸಾಧನಗಳು[೪೫]
  • ಆರ್ಕ್‌ ದೀಪ ವ್ಯವಸ್ಥೆಗಳು
  • ವಿದ್ಯುತ್‌ ಪ್ರವಾಹಕ್ಕೆ ತೀರ ಕನಿಷ್ಟ ಪ್ರಮಾಣದ ರೋಧವನ್ನು ಒಡ್ಡುವಂತ ವಿಧಾನಗಳು (ಅಧಿವಾಹಕತೆಯ ಪೂರ್ವವರ್ತಿಯಾದುದು)
  • ವಿಭವಾಂತರ ವರ್ಧನಾತ್ಮಕ ವಿದ್ಯುನ್ಮಂಡಲ
  • ಭಾರೀ ವಿಭವಾಂತರದ ವಿಸರ್ಜಕ ಸಾಧನಗಳು
  • ಮಿಂಚಿನಿಂದ ರಕ್ಷಣೆ ಪಡೆಯುವ ಸಾಧನಗಳು
  • VTOL ವಿಮಾನ
  • ಗುರುತ್ವಾಕರ್ಷಣೆಯ ಬಲಪ್ರವರ್ತನದ ಸಿದ್ಧಾಂತ
  • ವಿದ್ಯುತ್‌ ವಾಹನದ ಕಲ್ಪನೆಗಳು
  • ಬಹುಫೇಸ್‌‌ ವ್ಯವಸ್ಥೆಗಳು

ಮಧ್ಯದ ವರ್ಷಗಳು

[ಬದಲಾಯಿಸಿ]

ಟೆಸ್ಲಾ ಎಲೆಕ್ಟ್ರಿಕ್‌ ಲೈಟ್‌ & ಮ್ಯಾನುಫ್ಯಾಕ್ಚರಿಂಗ್‌ ಎಂಬ ಹೆಸರಿನ ತಮ್ಮದೇ ಸ್ವಂತ ಕಂಪೆನಿಯನ್ನು ಟೆಸ್ಲಾರು ೧೮೮೬ರಲ್ಲಿ ಸ್ಥಾಪಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ಮೋಟಾರ್‌ ನಿರ್ಮಾಣದ ಬಗೆಗಿನ ಟೆಸ್ಲಾರ ಯೋಜನೆಗಳ ಅಪಸ್ವರವೆತ್ತಿದ ಆರಂಭಿಕ ಹಣಕಾಸಿನ ಹೂಡಿಕೆದಾರರು ಅಂತಿಮವಾಗಿ ಅವರನ್ನು ಕಂಪೆನಿಯ ಜವಾಬ್ದಾರಿಗಳಿಂದ ಬಿಡುಗಡೆ ಮಾಡಿದರು. ತಮ್ಮ ಜೀವನ ನಡೆಸಲು ಹಾಗೂ ಮುಂದಿನ ಯೋಜನೆಗಳಿಗೆ ಹಣ ಹೊಂದಿಸಿಕೊಳ್ಳಲು ಟೆಸ್ಲಾರು ೧೮೮೬ರಿಂದ ೧೮೮೭ರವರೆಗೆ ನ್ಯೂಯಾರ್ಕ್‌‌ನಲ್ಲಿ ಮತ್ತೆ ಕಾರ್ಮಿಕರಾಗಿ ದುಡಿಯಲು ತೊಡಗಿದರು. ೧೮೮೭ರಲ್ಲಿ, ಮೊದಲಿನ ವಿದ್ಯುತ್‌ಕೂರ್ಚರಹಿತ ಪರ್ಯಾಯ ವಿದ್ಯುತ್ಪ್ರವಾಹ ಚೋದಕ ಮೋಟಾರ್‌ಅನ್ನು ನಿರ್ಮಿಸಿದ್ದ, ಅವರು ೧೮೮೮ರಲ್ಲಿ ಅಮೇರಿಕನ್‌‌ ಇನ್‌‌ಸ್ಟಿಟ್ಯೂಟ್‌‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್ ‌‌ (ಈಗ IEEE) ಸಂಸ್ಥೆಯಲ್ಲಿ ನಿದರ್ಶಿಸಿ ತೋರಿಸಿದ್ದರು. ಅದೇ ವರ್ಷ, ಅವರು ತಮ್ಮ ಟೆಸ್ಲಾ ಸುರುಳಿಯ ಮೂಲತತ್ವಗಳನ್ನು ಅಭಿವೃದ್ಧಿಪಡಿಸಿದರಲ್ಲದೇ ವೆಸ್ಟಿಂಗ್‌‌ಹೌಸ್‌‌ ಎಲೆಕ್ಟ್ರಿಕ್‌‌‌‌ & ಮ್ಯಾನುಫ್ಯಾಕ್ಚರಿಂಗ್‌‌ ಕಂಪೆನಿ'ಯ ಪಿಟ್ಸ್‌‌‌ಬರ್ಗ್‌‌ ಪ್ರಯೋಗಾಲಯದಲ್ಲಿ ಜಾರ್ಜ್‌‌‌ ವೆಸ್ಟಿಂಗ್‌‌ಹೌಸ್‌‌ರೊಡನೆ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ಪರ್ಯಾಯ ವಿದ್ಯುತ್ಪ್ರವಾಹ ವಿದ್ಯುಚ್ಛಕ್ತಿಯ ದೀರ್ಘ ಅಂತರದ ಸಂವಹನವನ್ನು ಕಾರ್ಯಸಾಧ್ಯಗೊಳಿಸುವ ಬಹುಫೇಸ್‌ ವ್ಯವಸ್ಥೆಗಳ ಬಗ್ಗೆ ಅವರ ಕಲ್ಪನೆಯನ್ನು ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಯು ಸ್ವೀಕರಿಸಿತು.

ತಮ್ಮದೇ ಸ್ವಂತ ಏಕ ಸಾಧನ ನಿರ್ವಾತ ಕೊಳವೆಗಳನ್ನು (ಅವರ ಹಕ್ಕುಸ್ವಾಮ್ಯಕ್ಕೆ #514,170 ಸದೃಶವಾದದ್ದು) ಬಳಸಿಕೊಂಡು ನಂತರ X-ರೇ/ಕ್ಷ-ಕಿರಣಗಳು ಎಂದು ಕರೆಯಲಾದುದನ್ನು ಏಪ್ರಿಲ್‌ ೧೮೮೭ರಲ್ಲಿ, ಟೆಸ್ಲಾರು ಪರಿಶೋಧಿಸಲು ಆರಂಭಿಸಿದ್ದರು. ಇತರೆ ಮುಂಚಿನ X-ರೇ/ಕ್ಷ-ಕಿರಣ ಕೊಳವೆಗಳಿಗೆ ಹೋಲಿಸಿದರೆ ಈ ಸಾಧನದಲ್ಲಿದ್ದ ವ್ಯತ್ಯಾಸವೇನೆಂದರೆ ಇದರಲ್ಲಿ ಗುರಿಯಾಗಿ ಯಾವುದೇ ವಿದ್ಯುದ್ಧೃವವನ್ನು ಬಳಸಿರಲಿಲ್ಲ. ಈ ಸಾಧನದಿಂದ ನಡೆಯುವ ವಿದ್ಯಮಾನಕ್ಕೆ ಆಧುನಿಕ ದಿನಮಾನದ ಹೆಸರು ಬ್ರೆಮ್ಸ್‌ಷ್ಟ್ರಾಲಂಗ್‌ ವಿಕಿರಣ (ಅಥವಾ ಬ್ರೇಕಿಂಗ್‌ ವಿಕಿರಣ ) ಎಂಬುದಾಗಿದೆ. ನಮಗೆ ಈಗಾಗಲೇ ತಿಳಿದಿರುವ ಪ್ರಕಾರ ಕ್ಷೇತ್ರ ಎಲೆಕ್ಟ್ರಾನ್‌ ಉತ್ಸರ್ಜನ/ಹೊರಸೂಸುವಿಕೆ ಮತ್ತು ಉಷ್ಣಯಾನಿಕ ಉತ್ಸರ್ಜನ/ಹೊರಸೂಸುವಿಕೆಗಳ ಸಂಯೋಜನೆಯ ಮೂಲಕ ವಿದ್ಯುದ್ಧೃವವೊಂದರಿಂದ ಎಲೆಕ್ಟ್ರಾನ್‌ಗಳನ್ನು ಹೊರಸೂಸುವುದರ ಮೂಲಕ ಈ ಸಾಧನವನ್ನು ಬಳಸಲಾಗುತ್ತದೆ. ಒಮ್ಮೆ ಬಿಡುಗಡೆಯಾದ ನಂತರ, ಟೆಸ್ಲಾ ಸುರುಳಿಯ ಆಂದೋಲಿಸುತ್ತಿರುವ HV ಹೊರಹೊಯಿಲು ಋಣ ವಿಭವಾಂತರದ ಅತ್ಯುಚ್ಚ ಮಟ್ಟದಲ್ಲಿದ್ದಾಗ ವಿದ್ಯುದ್ಧೃವದ ಸಮೀಪದ ತೀವ್ರ ವಿದ್ಯುತ್‌ ಕ್ಷೇತ್ರದಿಂದ ಎಲೆಕ್ಟ್ರಾನ್‌ಗಳು ಹಿಮ್ಮೆಟ್ಟುವುದರಿಂದ ಗಾಜಿನ ಆಚ್ಛಾದನದೊಂದಿಗೆ ಘರ್ಷಣೆಗೆ ತುತ್ತಾಗುವುದರಿಂದ X ರೇ/ಕ್ಷ-ಕಿರಣಗಳು ಉತ್ಪನ್ನವಾಗುತ್ತವೆ. ಅವರು ಗೀಸ್ಲರ್‌‌ ಕೊಳವೆಗಳನ್ನು ಕೂಡಾ ಬಳಸಿದ್ದರು. X ರೇ/ಕ್ಷ-ಕಿರಣಗಳ ಪರಿಣಾಮದಿಂದುಂಟಾಗುವುದೆಂದು ನಂತರ ವಿಲ್‌ಹೆಲ್ಮ್‌‌‌‌ ರಾಂಟ್‌‌ಜೆನ್‌‌ ಗುರುತಿಸಿದ್ದ ಚರ್ಮಕ್ಕಾಗುವ ಹಾನಿಯ ಬಗ್ಗೆ ಅರಿವನ್ನು ೧೮೯೨ರ ವೇಳೆಗೆ ಟೆಸ್ಲಾ ಪಡೆದುಕೊಂಡಿದ್ದರು.

ಸಂಶೋಧನೆಯ ಮೊದಲಲ್ಲಿ, X-ರೇಗಳು/ಕ್ಷ-ಕಿರಣಗಳನ್ನು ಉತ್ಪಾದಿ/ಸೃಷ್ಟಿಸಲು ಅನೇಕ ಪ್ರಾಯೋಗಿಕ ವ್ಯವಸ್ಥೆಗಳನ್ನು ಟೆಸ್ಲಾರು ಏರ್ಪಡಿಸಿಕೊಂಡಿದ್ದರು. ಟೆಸ್ಲಾರು ತಮ್ಮ ವಿದ್ಯುನ್ಮಂಡಲಗಳ ಮೂಲಕ, "ಈ ಉಪಕರಣವು [... ಓರ್ವ ವ್ಯಕ್ತಿಯು] ಸಾಧಾರಣ ಉಪಕರಣಗಳ ಮೂಲಕ ಪಡೆಯಬಲ್ಲದಾಗಿರುವುದಕ್ಕಿಂತ ಅಧಿಕ ಸಾಮರ್ಥ್ಯದ ರಾಂಟ್‌‌ಜೆನ್‌‌ ಕಿರಣಗಳನ್ನು ಉತ್ಪಾದಿಸಲು ಅನುವು ಮಾಡಿಕೊಡುತ್ತದೆ" ಎಂಬುದನ್ನು ಅಭಿಪ್ರಾಯಪಟ್ಟಿದ್ದರು.[೪೬]

ತಮ್ಮ ವಿದ್ಯುನ್ಮಂಡಲ ಮತ್ತು ಏಕ-ಘಟಕ X-ರೇ/ಕ್ಷ-ಕಿರಣ ಉತ್ಪಾದನಾ ಸಾಧನಗಳೊಂದಿಗೆ ಕಾರ್ಯನಿರ್ವಹಿಸುವಲ್ಲಿ ಆಗಬಹುದಾದ ಅಪಾಯಗಳ ಬಗ್ಗೆ ಕೂಡಾ ಅವರು ತಿಳಿಸಿದ್ದರು. ಈ ವಿದ್ಯಮಾನದ ಬಗ್ಗೆ ಹಿಂದೆ ನಡೆಸಿದ ಪರಿಶೋಧನೆಗಳ ಬಗೆಗಿನ ತಮ್ಮ ಅನೇಕ ಟಿಪ್ಪಣಿಗಳಲ್ಲಿ, ಚರ್ಮಕ್ಕೆ ಆಗಬಹುದಾದ ಅಪಾಯಗಳನ್ನು ವಿವಿಧ ಕಾರಣಗಳಿಂದ ಆಗಬಹುದು ಎಂದಿದ್ದರು. ಚರ್ಮಕ್ಕೆ ಆಗುವ ಹಾನಿಯು ರಾಂಟ್‌‌ಜೆನ್‌‌ ಕಿರಣಗಳಿಂದ ಅಲ್ಲ, ಬದಲಿಗೆ ಉತ್ಪಾದನೆಯಾದ ಓಜೋನ್‌‌ ಚರ್ಮಕ್ಕೆ ಸಂಪರ್ಕಿಸುವುದರಿಂದಾಗಿ ಹಾಗೂ ಸ್ವಲ್ಪ ಮಟ್ಟಿಗೆ ನೈಟ್ರಸ್‌‌ ಆಮ್ಲದ ಕಾರಣವಾಗಿ ಎಂದು ಮುಂಚೆ ಅವರು ಭಾವಿಸಿದ್ದರು. ಪ್ಲಾಸ್ಮಾದಲ್ಲಿನ ಅಲೆಗಳ ವಿಚಾರದಲ್ಲಿ ಉಂಟಾಗುವ ಹಾಗೆ X-ರೇಗಳು/ಕ್ಷ-ಕಿರಣಗಳು ಕೂಡಾ ಅನುಲಂಬ ಅಲೆಗಳಾಗಿರುತ್ತವೆ ಎಂದು ಟೆಸ್ಲಾರು ತಪ್ಪಾಗಿ ಭಾವಿಸಿದ್ದರು. ಈ ಬಗ್ಗೆ ಸಾಕಷ್ಟು ಉದಾಹರಣೆಗಳು ಲಭ್ಯವಿರುವುದಲ್ಲದೇ ಒತ್ತಡ-ಮುಕ್ತ ಅಯಸ್ಕಾಂತೀಯ ಕ್ಷೇತ್ರಗಳ ಸಂದರ್ಭದಲ್ಲಿ ಪ್ಲಾಸ್ಮಾ ಅಲೆಗಳು ಉಂಟಾಗಬಹುದಿರುತ್ತವೆ.[೪೭][೪೮] ಆತನ ಊಹಾ ಕಲ್ಪನೆಗಳು ಮತ್ತು ಪ್ರಯೋಗಗಳನ್ನು ಇತರರು ಪ್ರಯತ್ನಿಸಿ ಸ್ಥಿರೀಕರಿಸಿದರು.[೪೯]

ಅದೇ ಕ್ಷೇತ್ರದಲ್ಲಿಯೇ ಟೆಸ್ಲಾರು ಸಂಶೋಧನೆಯನ್ನು ಮುಂದುವರೆಸಿದರು. ರಾಂಟ್‌‌ಜೆನ್‌‌'ರ ಆವಿಷ್ಕಾರಕ್ಕೆ ಮುಂಚೆಯೇ ಅನೇಕ ಪ್ರಯೋಗಗಳನ್ನು ಮಾಡಿದ್ದರೂ (ನಂತರ ರಾಂಟ್‌‌ಜೆನ್‌‌ರಿಗೆ ಕಳುಹಿಸಿದ ತನ್ನ ಕೈಗಳ ಮೂಳೆಗಳ ಛಾಯಾಚಿತ್ರಗಳನ್ನು ಮೂಡಿಸುವುದೂ ಸೇರಿದಂತೆ) ತನ್ನ ಶೋಧನೆಗಳ ಕುರಿತು ವ್ಯಾಪಕ ಪ್ರಚಾರವನ್ನು ಕಂಡುಕೊಂಡಿರಲಿಲ್ಲ; ಅವರ ಸಂಶೋಧನೆಗಳಲ್ಲಿ ಬಹುತೇಕವು ಮಾರ್ಚ್‌ ೧೮೯೫ರಲ್ಲಿ ನಡೆದ ೫ತ್‌‌ ಅವೆನ್ಯೂ ರಸ್ತೆಯ ಪ್ರಯೋಗಾಲಯದ ಅಗ್ನಿ ಆಕಸ್ಮಿಕದಲ್ಲಿ ಸುಟ್ಟುಹೋಗಿದ್ದವು.

ಗಾಳಿಯ ದ್ರವೀಕರಣಕ್ಕೆ ಸಂಬಂಧಿಸಿದಂತೆ ಅವರ ಸಂಶೋಧನೆಗಳ ಜೊತೆಗೆ ಟೆಸ್ಲಾ ವಿದ್ಯುಜ್ಜನಕವನ್ನು ಕೂಡಾ ಟೆಸ್ಲಾರು ೧೮೯೫ರಲ್ಲಿ ಅಭಿವೃದ್ಧಿಪಡಿಸಿದರು. ಲಾರ್ಡ್‌‌ ಕೆಲ್ವಿನ್‌‌'ರ ಸಂಶೋಧನೆಗಳಿಂದ, ಮರು-ಅನಿಲೀಕರಣಕ್ಕೆ ಒಳಪಡಿಸಿ ಏನನ್ನಾದರೂ ಚಾಲಿಸಲು ಬಳಸಿದಾಗ ದ್ರವೀಕೃತ ಗಾಳಿಯು ಸಿದ್ಧಾಂತೀಯವಾಗಿ ಸಿದ್ಧಪಟ್ಟಿರುವುದಕ್ಕಿಂತ ಹೆಚ್ಚು ತಾಪವನ್ನು ಹೀರಿಕೊಳ್ಳಬಲ್ಲದು ಎಂಬುದನ್ನು ಟೆಸ್ಲಾರು ಅರಿತಿದ್ದರು; ಬೇರೆ ರೀತಿಯಲ್ಲಿ ಹೇಳುವುದಾದರೆ ಕೆಲಮಟ್ಟಿಗೆ ವಿಸಂಗತವಾಗಿರುತ್ತದೆ ಅಥವಾ 'ಅಧಿಕ ಅಖಂಡತೆ'ಯನ್ನು ಹೊಂದಿರುತ್ತದೆ[೫೦]. ಟೆಸ್ಲಾ'ರ ಈ ಸಂಶೋಧನೆಯು ಮುಗಿದು ಹಕ್ಕುಸ್ವಾಮ್ಯ ಅರ್ಜಿಯನ್ನು ದಾಖಲಿಸುವ ಸ್ವಲ್ಪವೇ ಮುನ್ನ, ಟೆಸ್ಲಾ'ರ ಪ್ರಯೋಗಾಲಯವು ಸುಟ್ಟು ಹೋಗಿ ಅವರ ಎಲ್ಲಾ ಉಪಕರಣಗಳು, ಮಾದರಿಗಳು ಮತ್ತು ಆವಿಷ್ಕಾರಗಳು ನಾಶವಾಗಿದ್ದವು. ಅಗ್ನಿ ಆಕಸ್ಮಿಕದ ಕೆಲವೇ ದಿನಗಳ ನಂತರ ಜರ್ಮನಿಯ ಲಿಂಡೆಯವರು ಇದೇ ಪ್ರಕ್ರಿಯೆಯ ಹಕ್ಕುಸ್ವಾಮ್ಯಕ್ಕಾಗಿ ಅರ್ಜಿಯನ್ನು ದಾಖಲಿಸಿದರು.[೫೧]

ಸಾಧನಗಳಿಗೆ ವಿದ್ಯುತ್ತನ್ನು ಒದಗಿಸಲು ಎರಡು ಬಿಂದುಗಳ ನಡುವೆ ವಿದ್ಯುತ್‌ ವಾಹಕವಾಗಿ ವರ್ತಿಸುವ ವಿವಿಧ ನೈಸರ್ಗಿಕ ಮಾಧ್ಯಮಗಳಲ್ಲಿನ ಸಂವಹನವನ್ನು ಬಳಸುವ ಭೂಮಿಯ ವಿದ್ಯುತ್‌‌ ವಾಹಕತ್ವದ ಮೇಲೆ ಆಧಾರಿತವಾದ "ತಂತಿರಹಿತ ವಿದ್ಯುಚ್ಛಕ್ತಿ ಸಂವಹನ"ದ "ವಿಶ್ವ ವ್ಯವಸ್ಥೆ"ಯೊಂದನ್ನು ಪ್ರಸ್ತಾಪಿಸಲಾಗಿತ್ತು. ಈ ಸಿದ್ದಾಂತವನ್ನು ಬಳಸುವ ಪ್ರಾಯೋಗಿಕ ನಿಸ್ತಂತು ಶಕ್ತಿ ಸಂವಹನ ವ್ಯವಸ್ಥೆಯಲ್ಲಿ ಅಧಿಕ-ಶಕ್ತಿಯ ನೇರಳಾತೀತ ರಶ್ಮಿದಂಡವನ್ನು ಗಾಳಿಯಲ್ಲಿ ಲಂಬವಾದ ಅಯಾನೀಕೃತ ವಾಹಿನಿಯೊಂದನ್ನು ನೇರವಾಗಿ ಪ್ರೇಷಕ-ಗ್ರಾಹಕ ಕೇಂದ್ರಗಳ ಮೇಲೆ ರೂಪುಗೊಳ್ಳುವಂತೆ ಮಾಡಬಹುದಾಗಿದೆ. ಇದೇ ಕಲ್ಪನೆಯನ್ನು ಅವಾಸ್ತವ ಮಿಂಚಿನ ಸರಳುಗಳು ಎಂಬ ವಿದ್ಯುತ್‌ಲೇಸರ್‌ ವಿದ್ಯುದಾಘಾತ ಶಸ್ತ್ರವನ್ನು,[೫೨] ರೂಪಿಸಲು ಹಾಗೂ ವಾಹನಗಳನ್ನು ನಿರ್ಬಂಧಿಸಲು ಪ್ರಸ್ತಾಪಗಳನ್ನು ನೀಡಲಾಗಿದೆ.[೫೩][೫೪]

"ತಂತಿರಹಿತ ವಿದ್ಯುಚ್ಛಕ್ತಿ ಸಂವಹನ"ವನ್ನು ೧೮೯೧ರಷ್ಟು ಮುಂಚೆಯೇ ಟೆಸ್ಲಾರು ನಿದರ್ಶನ ನೀಡಿ ತೋರಿಸಿದ್ದರು. ಟೆಸ್ಲಾ ಪರಿಣಾಮ (ಟೆಸ್ಲಾರ ಗೌರವಾರ್ಥವಾಗಿ ಇಟ್ಟ ಹೆಸರು) ಎಂಬುದು ಈ ರೀತಿಯ ವಿದ್ಯುತ್ತಿನ ವಹನದ ಅನ್ವಯಿಕೆಗೆ (ಎಂದರೆ ವಾಹಕದ ಮುಖಾಂತರ ವಿಭವಾಂತರವನ್ನು ಉತ್ಪಾದಿಸುವುದು ಮಾತ್ರವಲ್ಲ, ವಿದ್ಯುಚ್ಛಕ್ತಿಯನ್ನು ಅವಕಾಶ ಮತ್ತು ದ್ರವ್ಯಗಳ ಮುಖಾಂತರ ಚಲನೆಗೆ ಕೂಡ) ಇಟ್ಟ ಹೆಸರಾಗಿದೆ.[೨೧]: 174 [೫೫]

1891ರಲ್ಲಿ ಅವರು ನೀಡಿದ್ದ ಉನ್ನತ ತರಂಗಾಂತರ ಮತ್ತು ವಿಭವಾಂತರದ ಉಪನ್ಯಾಸದಲ್ಲಿ ನೀಡಿದ್ದ ವಿದ್ಯುಚ್ಛಕ್ತಿ ಮತ್ತು ಚೈತನ್ಯ/ವಿದ್ಯುಚ್ಛಕ್ತಿಗಳ ನಿಸ್ತಂತು ಸಂವಹನದ ಪ್ರಾತ್ಯಕ್ಷಿಕೆ

ಅಮೇರಿಕನ್‌‌ ಪೌರತ್ವ

[ಬದಲಾಯಿಸಿ]

ತಮ್ಮ ೩೫ರ ವಯಸ್ಸಿನಲ್ಲಿ ೩೦ ಜುಲೈ ೧೮೯೧ರಂದು, ಅವರು ಯುನೈಟೆಡ್‌‌ ಸ್ಟೇಟ್ಸ್‌‌ನ ದೇಶೀಕರಿಸಿದ ಪೌರರಾದರು. ಅದೇ ವರ್ಷವೇ ಟೆಸ್ಲಾರು ತಮ್ಮ ೩೫ ಸೌತ್‌ ಫಿಫ್ತ್‌ ಅವೆನ್ಯೂ ವಿಳಾಸದಲ್ಲಿನ ಪ್ರಯೋಗಾಲಯವನ್ನು ನ್ಯೂಯಾರ್ಕ್‌‌ನಲ್ಲಿ ಸ್ಥಾಪಿಸಿದರು. ನಂತರ ನ್ಯೂಯಾರ್ಕ್‌‌ನ ೪೬ E. ಹೌಸ್ಟನ್‌‌ ಬೀದಿ/ರಸ್ತೆ ಎಂಬ ವಿಳಾಸದಲ್ಲಿ ತಮ್ಮ ಹೌಸ್ಟನ್‌‌ ಬೀದಿ/ರಸ್ತೆ ಪ್ರಯೋಗಾಲಯವನ್ನು ಟೆಸ್ಲಾರು ಸ್ಥಾಪಿಸಿದರು. ನಿಸ್ತಂತು ವಿದ್ಯುಚ್ಛಕ್ತಿ ಸಂವಹನದ ಸಾಧ್ಯತೆ ಬಗ್ಗೆ ಪುರಾವೆಯನ್ನು ನೀಡುವಂತೆ, ಅವರು ತಮ್ಮ ನ್ಯೂಯಾರ್ಕ್‌‌ನ ಎರಡೂ ಪ್ರಯೋಗಾಲಯಗಳಲ್ಲಿ ವಿದ್ಯುದ್ದೀಪಗಳನ್ನು ತಂತಿರಹಿತವಾಗಿ ಬೆಳಗುವಂತೆ ಮಾಡಿದ್ದರು.[೫೬]

ಟೆಸ್ಲಾ'ರ ತೀರ ಸಮೀಪವರ್ತಿ ಸ್ನೇಹಿತರಲ್ಲಿ ಕೆಲವರು ಕಲಾವಿದರಾಗಿದ್ದರು. ಜೋವಾನ್‌ ಜೊವಾನೊವಿಕ್‌‌ ಜ್ಮಾಜ್‌‌ರ ಅನೇಕ ಸರ್ಬಿಯಾದ ಕವಿತೆಗಳನ್ನು (ಇವುಗಳನ್ನು ಟೆಸ್ಲಾ ತರ್ಜುಮೆ ಮಾಡಿದ್ದರು) ಮಾರ್ಪಡಿಸಿದ್ದ ಸೆಂಚುರಿ ಮ್ಯಾಗಜೀನ್‌/ನಿಯತಕಾಲಿಕೆ ಯ ಸಂಪಾದಕರಾಗಿದ್ದ ರಾಬರ್ಟ್‌‌ ಅಂಡರ್‌ವುಡ್‌‌ ಜಾನ್ಸನ್‌‌ರೊಂದಿಗೆ ಅವರು ಸ್ನೇಹವನ್ನು ಬೆಳೆಸಿದ್ದರು. ಇದೇ ಸಮಯದಲ್ಲಿ ಟೆಸ್ಲಾರು ಸ್ವಾಮಿ ವಿವೇಕಾನಂದರು ಬೋಧಿಸಿದ್ದ ವೈದಿಕ ತತ್ವಶಾಸ್ತ್ರ/ಸಿದ್ಧಾಂತಗಳ (i.e. , ಹಿಂದೂಧರ್ಮ) ಪ್ರಭಾವಕ್ಕೊಳಗಾಗಿದ್ದರು; ಎಷ್ಟರಮಟ್ಟಿಗೆಂದರೆ, ಹಿಂದೂ-ವೈದಿಕ ಚಿಂತನೆಗೆ ತಮ್ಮನ್ನು ಒಡ್ಡಿಕೊಂಡ ನಂತರ, ದ್ರವ್ಯ ಮತ್ತು ಶಕ್ತಿಗಳ ಬಗೆಗಿನ ತಮ್ಮ ಮೂಲಭೂತ ಸಿದ್ಧಾಂತಗಳಲ್ಲಿ ಕೆಲವನ್ನು ಹೆಸರಿಸಲು ಟೆಸ್ಲಾರು ಸಂಸ್ಕೃತ ಪದಗಳನ್ನು ಬಳಸಲು ಆರಂಭಿಸಿದ್ದರು.[೫೭]

ಭಾರೀ ಅಂತರಗಳಲ್ಲಿ ವಿದ್ಯುಚ್ಛಕ್ತಿಯನ್ನು ಸಾಗಿಸುವ ಸಂದರ್ಭದಲ್ಲಿ ಬಳಸಲಿಕ್ಕೆಂದು AC ವಿದ್ಯುತ್ತನ್ನು ಉತ್ಪಾದಿಸಲು ಬಳಸಲಾಗುತ್ತಿದ್ದ ನಿಕೋಲಾ ಟೆಸ್ಲಾ'ರ AC ಡೈನಮೋ. ಇದು [93]ರೊಳಗೆ ಅಡಕವಾಗಿದೆ.

ಬಹುಫೇಸ್‌‌ ವಿದ್ಯುಚ್ಛಕ್ತಿ ವ್ಯವಸ್ಥೆಯ ಬಗೆಗಿನ ಪ್ರಥಮ ಹಕ್ಕುಸ್ವಾಮ್ಯವನ್ನು ಅವರಿಗೆ ನೀಡಲ್ಪಟ್ಟಾಗ ಟೆಸ್ಲಾರವರು ೩೬ ವರ್ಷದವರಾಗಿದ್ದರು. ಆ ವ್ಯವಸ್ಥೆಯ ಮತ್ತು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರದ ಮೂಲತತ್ವಗಳ ಬಗೆಗಿನ ಸಂಶೋಧನೆಯನ್ನು ಅವರು ಮುಂದುವರೆಸಿದರು. ಆಧುನಿಕ-ದಿನಮಾನದ IEEE ಸಂಸ್ಥೆಯ ಪೂರ್ವವರ್ತಿ ಸಂಸ್ಥೆಯಾದ ಅಮೇರಿಕನ್‌‌ ಇನ್‌‌ಸ್ಟಿಟ್ಯೂಟ್‌ ಆಫ್‌‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌‌ ಸಂಸ್ಥೆಯ ಉಪಾಧ್ಯಕ್ಷರಾಗಿ ಟೆಸ್ಲಾರು ೧೮೯೨ರಿಂದ ೧೮೯೪ರ ಅವಧಿಯಲ್ಲಿ (ಇನ್‌‌ಸ್ಟಿಟ್ಯೂಟ್‌ ಆಫ್‌‌ ರೇಡಿಯೋ ಎಂಜಿನಿಯರ್ಸ್‌‌ ಸಂಸ್ಥೆಯೊಂದಿಗೆ) ಕಾರ್ಯನಿರ್ವಹಿಸಿದ್ದರು. ೧೮೯೩ರಿಂದ ೧೮೯೫ರವರೆಗಿನ ಅವಧಿಯಲ್ಲಿ ಅವರು ಉನ್ನತ ತರಂಗಾಂತರ ಪರ್ಯಾಯ ವಿದ್ಯುತ್ಪ್ರವಾಹಗಳ ಬಗ್ಗೆ ಪರಿಶೋಧನೆಯನ್ನು ಕೈಗೊಂಡರು. ಶಂಕುವಿನಾಕಾರದ ಟೆಸ್ಲಾ ಸುರುಳಿಯೊಂದನ್ನು ಬಳಸಿ ಒಂದು ದಶಲಕ್ಷ ವೋಲ್ಟ್‌ಗಳ AC ವಿದ್ಯುತ್ತನ್ನು ಉತ್ಪಾದಿಸಿದರಲ್ಲದೇ ವಾಹಕಗಳಲ್ಲಿನ ಸ್ಕಿನ್‌ ಪರಿಣಾಮ ದ ಪರಿಶೋಧನೆ, ಕ್ರಮಪಡಿಸಿದ ವಿದ್ಯುನ್ಮಂಡಲಗಳನ್ನು ವಿನ್ಯಾಸ ಮಾಡುವಿಕೆ, ನಿದ್ದೆ ಬರಿಸುವ ಯಂತ್ರವನ್ನು ಆವಿಷ್ಕರಿಸುವಿಕೆ, ತಂತಿರಹಿತ ಅನಿಲ ವಿಸರ್ಜನಾ ದೀಪಗಳು, ಮತ್ತು ಪ್ರಪ್ರಥಮ ರೇಡಿಯೋ ಪ್ರೇಷಕವನ್ನು ರೂಪಿಸುತ್ತಾ ವಿದ್ಯುತ್ಕಾಂತೀಯ ಶಕ್ತಿಯನ್ನು ತಂತಿರಹಿತವಾಗಿ ಅವರು ಪ್ರಸಾರಿಸಿದ್ದರು. ೧೮೯೩ರಲ್ಲಿ ಮಿಸ್ಸೋರಿ/ಮಿಸ್ಸೌರಿಯ St. ಲೂಯಿಸ್‌‌ನಲ್ಲಿ ಟೆಸ್ಲಾರು ರೇಡಿಯೋ ಸಂಪರ್ಕ/ಸಂವಹನಕ್ಕೆ ಸಂಬಂಧಿಸಿದ ನಿ/ಪ್ರದರ್ಶನವನ್ನು ನೀಡಿದರು. ಪೆನ್ಸಿಲ್‌ವೇನಿಯಾದ ಫಿಲಡೆಲ್ಫಿಯಾದಲ್ಲಿನ ಫ್ರಾಂಕ್ಲಿನ್‌‌ ಇನ್‌‌ಸ್ಟಿಟ್ಯೂಟ್‌ ಸಂಸ್ಥೆ ಮತ್ತು ನ್ಯಾಷನಲ್‌‌ ಎಲೆಕ್ಟ್ರಿಕ್‌ ಲೈಟ್‌‌ ಅಸೋಸಿಯೇಷನ್‌ಗಳನ್ನುದ್ದೇಶಿಸಿ ಮಾತನಾಡಿದ ಅವರು ಅದರ ಪ್ರಕ್ರಿಯೆಯನ್ನು ಹಾಗೂ ಮೂಲತತ್ವಗಳನ್ನು ವಿವರವಾಗಿ ವರ್ಣಿಸಿದರು. ವಿವಿಧ ಮಾಧ್ಯಮಗಳಲ್ಲಿ ಟೆಸ್ಲಾ'ರ ನಿ/ಪ್ರದರ್ಶನಗಳ ಬಗ್ಗೆ ವ್ಯಾಪಕವಾಗಿ ಚರ್ಚೆಯು ಕಂಡುಬಂದಿತು. ಆಕಾಶದುದ್ದಕ್ಕೂ ಲಭ್ಯವಿರುವ ಶಕ್ತಿಯನ್ನು ಬಳಸಿಕೊಳ್ಳುವತ್ತಲೂ ಟೆಸ್ಲಾರು ಪರಿಶೋಧನೆ ನಡೆಸಿದರು. "ಅನೇಕ ತಲೆಮಾರುಗಳು ಸರಿದುಹೋಗುವ ಮುನ್ನ, ನಮ್ಮ ಯಂತ್ರಗಳು ಬ್ರಹ್ಮಾಂಡದ ಯಾವುದೇ ಮೂಲೆಯಿಂದಲೂ ತಮಗೆ ಬೇಕಾದ ಶಕ್ತಿಯನ್ನು ಪಡೆಯಬಲ್ಲವಾಗಿರುತ್ತವೆ" ಎಂದು ಹೇಳುತ್ತಿದ್ದ ಅವರದು ಮಾನವನು ತಾನು ಬಳಸುವ ಯಂತ್ರಗಳನ್ನು ನಿಸರ್ಗದ ಪರಿಚಲನೆಗೆ ಸಂಯೋಜಿಸುವಲ್ಲಿ ಸಫಲವಾಗುವುದು ಸುನಿಶ್ಚಿತ ಆದರೆ ಅದಕ್ಕೆ ಸಮಯ ಬೇಕಷ್ಟೆ ಎಂಬ ಪ್ರತಿಪಾದನೆಯಾಗಿತ್ತು."[೫೮]

ಷಿಕಾಗೋದಲ್ಲಿ ನಡೆದ ಅಂತರರಾಷ್ಟ್ರೀಯ ವಸ್ತುಪ್ರದರ್ಶನದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್‌-ಸಂಬಂಧಿ ಪ್ರದರ್ಶನಗಳಿಗೆ ಇಡೀ ಕಟ್ಟಡವನ್ನೇ ಮೀಸಲಿರಿಸಿದ್ದ ವರ್ಲ್ಡ್‌‌ಸ್‌ ಎಕ್ಸ್‌‌‌‌ಪೊಸಿಷನ್‌ ಎಂದು ಕರೆಯಲ್ಪಟ್ಟ ವರ್ಲ್ಡ್‌‌ಸ್‌ ಕೊಲಂಬಿಯನ್‌ ಎಕ್ಸ್‌‌‌‌ಪೊಸಿಷನ್‌ ವಸ್ತುಪ್ರದರ್ಶನವು ೧೮೯೩ರಲ್ಲಿ ನಡೆಯಿತು. ಟೆಸ್ಲಾ ಮತ್ತು ಜಾರ್ಜ್‌‌‌ ವೆಸ್ಟಿಂಗ್‌‌ಹೌಸ್‌‌ರವರುಗಳು ವಸ್ತುಪ್ರದರ್ಶನವನ್ನು ಬೆಳಗಲು AC ವಿದ್ಯುತ್ತನ್ನು ಬಳಸಿ ತನ್ಮೂಲಕ ಸಂದರ್ಶಕರಿಗೆ ಅದನ್ನು ಪರಿಚಯಿಸಿದ್ದುದರಿಂದ ಅದೊಂದು ಐತಿಹಾಸಿಕ ಘಟನೆಯಾಗಿತ್ತು. ಇಲ್ಲಿ ಪ್ರದರ್ಶಿಸಲಾಗಿದ್ದ ಕೆಲ ವಸ್ತುಗಳಲ್ಲಿ ಟೆಸ್ಲಾ'ರ ಪ್ರತಿದೀಪ್ತಿ ದೀಪಗಳು ಮತ್ತು ಏಕ ಘಟಕ ಬಲ್ಬ್‌ದೀಪಗಳು ಸೇರಿದ್ದವು. ಓರ್ವ ವೀಕ್ಷಕ ಹೀಗೆಂದು ಟಿಪ್ಪಣಿ ಬರೆದಿದ್ದರು:

Within the room was suspended two hard-rubber plates covered with tin foil. These were about fifteen feet apart, and served as terminals of the wires leading from the transformers. When the current was turned on, the lamps or tubes, which had no wires connected to them, but lay on a table between the suspended plates, or which might be held in the hand in almost any part of the room, were made luminous. These were the same experiments and the same apparatus shown by Tesla in London about two years previous, "where they produced so much wonder and astonishment".[೫೯]

"ಕೊಲಂಬಸ್‌ನ ಮೊಟ್ಟೆ/ಎಗ್‌ ಆಫ್‌ ಕೊಲಂಬಸ್ ‌" ಎಂದು ಕರೆಸಿಕೊಳ್ಳುತ್ತಿದ್ದ ಅವರು ತಯಾರಿಸಿದ್ದ ತಾಮ್ರದಿಂದ ತಯಾರಿಸಿದ ಮೊಟ್ಟೆಯನ್ನು ನಿಲ್ಲುವಂತೆ ಮಾಡಿ ತೋರಿಸುವ ಮೂಲಕ ಟೆಸ್ಲಾರವರು ಸುತ್ತುತ್ತಿರುವ ಅಯಸ್ಕಾಂತೀಯ ಕ್ಷೇತ್ರ ಮತ್ತು ಚೋದಿತ ಮೋಟಾರ್‌ಗಳ ಮೂಲತತ್ವಗಳನ್ನು ಕೂಡಾ ವಿವರವಾಗಿ ವರ್ಣಿಸಿದ್ದರು.

ಎಡಿಸನ್‌

[ಬದಲಾಯಿಸಿ]

ಟೆಸ್ಲಾ ಮತ್ತು ವೆಸ್ಟಿಂಗ್‌‌ಹೌಸ್‌‌ರವರುಗಳು ಪ್ರತಿಪಾದಿಸಿದ್ದ ಪರ್ಯಾಯ ವಿದ್ಯುತ್ಪ್ರವಾಹಕ್ಕೆ ಬದಲಾಗಿ ಮತ್ತಷ್ಟು ಸಮರ್ಥವಾದ ವಿಧಾನದ ಮೂಲಕ ಏಕಮುಖ ವಿದ್ಯುತ್ತನ್ನು (DC) ವಿದ್ಯುಚ್ಛಕ್ತಿ ವಿತರಣೆಗೆ ಬಳಸುವುದರ ಬಗ್ಗೆ ಮಾಡಿದ ಎಡಿಸನ್‌'ರ ಪ್ರಚಾರಾಭಿಯಾನದಿಂದಾಗಿ ೧೮೮೦ರ ದಶಕದ ಕೊನೆಗೆ ಭಾಗಶಃ, ಟೆಸ್ಲಾ ಮತ್ತು ಎಡಿಸನ್‌ರವರುಗಳು ಎದುರಾಳಿಗಳಾಗಿ ಮಾರ್ಪಟ್ಟರು. ಟೆಸ್ಲಾರು ಚೋದನ/ಚೋದಿತ ಮೋಟಾರ್‌‌ಅನ್ನು ಆವಿಷ್ಕರಿಸುವವರೆಗೆ, AC' ವಿದ್ಯುತ್ತಿನ ದೀರ್ಘ ಅಂತರಗಳಲ್ಲಿ ಉನ್ನತ ವಿಭವಾಂತರ ಸಂವಹನದ ಅನುಕೂಲಗಳನ್ನು AC ವಿದ್ಯುತ್ತಿನಲ್ಲಿ ಮೋಟಾರ್‌‌ಗಳನ್ನು ಓಡಿಸಲು ಸಾಧ್ಯವಾಗದಿರುವಿಕೆಯು ಮರೆಸಿಹಾಕಿರುತ್ತಿತ್ತು. "ವಾರ್‌ ಆಫ್‌ ಕರೆಂಟ್ಸ್‌/ವಿದ್ಯುತ್‌ ಹೊಯಿಲುಗಳ ಯುದ್ಧ"ದ ಪರಿಣಾಮವಾಗಿ, ಎಡಿಸನ್‌ ಮತ್ತು ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಗಳು ಬಹುತೇಕ ದಿವಾಳಿಯಂಚಿಗೆ ತಲುಪಿದ ಕಾರಣ, ೧೮೯೭ರಲ್ಲಿ ಟೆಸ್ಲಾರು ಒಪ್ಪಂದದಿಂದ ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಯನ್ನು ಬಿಡುಗಡೆಗೊಳಿಸಿ ಟೆಸ್ಲಾ'ರ ಹಕ್ಕುಸ್ವಾಮ್ಯದ ಗೌರವಧನಗಳಿಂದ ವೆಸ್ಟಿಂಗ್‌‌ಹೌಸ್‌‌ ಸಂಸ್ಥೆಗೆ ಬಿಡುಗಡೆ ನೀಡಿದರು. ೧೮೯೭ರಲ್ಲಿಯೇ, ಟೆಸ್ಲಾರು ವಿಕಿರಣಗಳ ಬಗ್ಗೆ ಕೂಡಾ ಸಂಶೋಧನೆ ನಡೆಸಿದ್ದುದು ವಿಶ್ವಕಿರಣಗಳ ಬಗೆಗಿನ ಮೂಲಭೂತ ಪ್ರತಿಪಾದನೆಯನ್ನು ಸಿದ್ಧಪಡಿಸಲು ಸಹಾಯವಾಯಿತು.[೬೦]

ಟೆಸ್ಲಾರವರು ೪೧ ವರ್ಷದವರಾಗಿದ್ದಾಗ, ಅವರು ಮೊತ್ತಮೊದಲ ರೇಡಿಯೋ ಹಕ್ಕುಸ್ವಾಮ್ಯಕ್ಕೆ(ಯು.ಎಸ್ ಪೇಟೆಂಟ್ ೬೪೫,೫೭೬) ಅರ್ಜಿ ದಾಖಲಿಸಿದರು. ಸೇನಾಪಡೆಯು ರೇಡಿಯೋ-ನಿಯಂತ್ರಿತ ಟಾರ್ಪಿಡೋ/ನೌಕಾಸ್ಫೋಟಕಗಳಂತಹಾ ಸಾಧನಗಳ ಅಗತ್ಯವನ್ನು ಹೊಂದಿರುತ್ತದೆ ಎಂದು ಭಾವಿಸಿ ವರ್ಷವೊಂದರ ನಂತರ ರೇಡಿಯೋ-ನಿಯಂತ್ರಿತ ದೋಣಿಯ ಪ್ರಾತ್ಯಕ್ಷಿಕೆಯನ್ನು US ಸೇನಾಪಡೆಯ ಮುಂದೆ ನೀಡಿದರು. ರೋಬೋಟಿಕ್ಸ್‌‌/ರೋಬೋಟ್‌ ಶಾಸ್ತ್ರದ ಒಂದು ರೂಪವಾದ "ಟೆಲ್‌ಆಟೋಮ್ಯಾಟಿಕ್ಸ್‌‌ ಕಲೆ "ಯನ್ನು ಹಾಗೂ ರಿಮೋಟ್‌ ಕಂಟ್ರೋಲ್‌/ದೂರನಿಯಂತ್ರಕದ ತಂತ್ರಜ್ಞಾನವನ್ನು ಕೂಡಾ ಟೆಸ್ಲಾರು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತದೆ.[೬೧] ಮ್ಯಾಡಿಸನ್‌ ಸ್ಕ್ವೇರ್‌‌ ಗಾರ್ಡನ್‌ ಉದ್ಯಾನದಲ್ಲಿ ನಡೆದ ವಿದ್ಯುನ್ಮಾನ ವಸ್ತುಪ್ರದರ್ಶನದಲ್ಲಿ ಸಾರ್ವಜನಿಕರ ಮುಂದೆ ರೇಡಿಯೋ-ನಿಯಂತ್ರಿತ ದೋಣಿಯ ಪ್ರಾತ್ಯಕ್ಷಿಕೆಯನ್ನು ೧೮೯೮ರಲ್ಲಿ ನೀಡಿದರು. ತಮ್ಮ ದೋಣಿಯನ್ನು ಟೆಸ್ಲಾರು "ಟೆಲಿಆಟೋಮೇಟನ್‌ " ಎಂದು ಕರೆದರು.[೬೨] ರೇಡಿಯೋ ದೂರನಿಯಂತ್ರಕ/ರಿಮೋಟ್‌ ಕಂಟ್ರೋಲ್‌ ಸಾಧನವು ೧೯೬೦ರ ದಶಕದವರೆಗೆ ನಾವೀನ್ಯತೆಯ ಸಾಧನೆಯಾಗಿಯೇ ಉಳಿಯಿತು. ಅದೇ ವರ್ಷ, ಟೆಸ್ಲಾರು "ವಿದ್ಯುತ್ತಿನ ದಹಕ/ಜ್ವಾಲಕ" ಅಥವಾ ಕಿಡಿ ಬಿರಟೆ/ಸ್ಪಾರ್ಕ್‌ ಪ್ಲಗ್‌ಅನ್ನು ಆಂತರಿಕ ದಹನ ಗ್ಯಾಸೋಲಿನ್‌/ಪೆಟ್ರೋಲ್‌ ಎಂಜಿನ್‌‌ಗಳಲ್ಲಿನ ಬಳಕೆಗಾಗಿ ರೂಪಿಸಿದರು. ಅವರು ಯು.ಎಸ್ ಪೇಟೆಂಟ್ ೬೦೯,೨೫೦ಅನ್ನು, "ಎಲೆಕ್ಟ್ರಿಕಲ್‌ ಇಗ್ನೈಟರ್‌‌‌ ಫಾರ್‌ ಗ್ಯಾಸ್‌‌ ಎಂಜಿನ್ಸ್‌‌" ಎಂಬ ಈ ಯಾಂತ್ರಿಕ ದಹನ ವ್ಯವಸ್ಥೆಗೆ ಪಡೆದುಕೊಂಡರು. ರೇಡಿಯೋ ಅಲೆಗಳ ಬಗೆಗಿನ ಪ್ರಯೋಗಗಳನ್ನು ಅವರು ಕೈಗೊಂಡಿದ್ದ (ಬ್ರಾಡ್‌ವೇ ಮತ್ತು ಸಿಕ್ಸ್‌ತ್‌ ಅವೆನ್ಯೂಗಳ ನಡುವೆ) ಕೆಳ ಮನ್‌ಹಾಟ್ಟನ್‌‌ ಪ್ರದೇಶದ ೪೯ W ೨೭ನೇ St.ನಲ್ಲಿರುವ ದ ರೇಡಿಯೋ ವೇವ್‌‌ ಎಂದು ಮರುನಾಮಕರಣ ಮಾಡಲಾದ ಹಿಂದೆ ಗೆರ್‌ಲ್ಯಾಚ್‌ ಹೋಟೆಲ್‌ ಆಗಿದ್ದ ಕಟ್ಟಡದಲ್ಲಿ ಟೆಸ್ಲಾರು ಶತಮಾನದ ಕೊನೆಗೆ ಸ್ವಲ್ಪವೇ ಮುಂಚೆ ವಾಸವಿದ್ದರು. ೧೯೭೭ರಲ್ಲಿ ಈ ಕಟ್ಟಡದ ಮೇಲೆ ಸ್ಮಾರಕ ಫಲಕವನ್ನು ಅಳವಡಿಸುವ ಮೂಲಕ ಆತನ ಸಾಧನೆಯನ್ನು ಗೌರವಿಸಲಾಯಿತು.[೬೩]

ಕೊಲೊರಾಡೋ ಸ್ಪ್ರಿಂಗ್ಸ್‌

[ಬದಲಾಯಿಸಿ]
ದಶಲಕ್ಷ ವೋಲ್ಟ್‌ಗಳನ್ನು ಉತ್ಪಾದಿಸಬಲ್ಲ ಅವರ "ವರ್ಧಿಸುವ ಪ್ರೇಷಕ"ದೊಂದಿಗೆ ಕೊಲೊರಾಡೋ ಸ್ಪ್ರಿಂಗ್ಸ್‌‌‌ದಲ್ಲಿನ ಅವರ ಪ್ರಯೋಗಾಲಯದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬ ಕುಳಿತಿರುವ ಪ್ರಚಾರದ ಚಿತ್ರ.ವೃತ್ತಖಂಡಗಳು ಸುಮಾರು 7 ಮೀಟರ್‌ಗಳಷ್ಟು ಉದ್ದವಿದ್ದವು (23 ft).(ಟೆಸ್ಲಾ'ರ ಟಿಪ್ಪಣಿಯ ಪ್ರಕಾರ ಇದೊಂದು ಬಹು ಒಡ್ಡಿಕೆಯ ಛಾಯಾಚಿತ್ರ.)
ಕೊಲೊರಾಡೋ ಸ್ಪ್ರಿಂಗ್ಸ್‌‌‌ನಲ್ಲಿ ನಡೆದ ಒಂದು ಪ್ರಯೋಗ. ಈ ದೀಪಗಳ ಪಟ್ಟಿಯು ದೂರದಲ್ಲಿರುವ ಪ್ರೇಷಕದಿಂದ ವಿದ್ಯುತ್ತನ್ನು ಪಡೆಯುತ್ತಿದೆ
ಕೊಲೊರಾಡೋ ಸ್ಪ್ರಿಂಗ್ಸ್‌‌‌‌ನಲ್ಲಿನ ಒಂದು ಪ್ರಯೋಗ : ಇಲ್ಲಿ ದೂರದಲ್ಲಿರುವ ಪ್ರೇಷಕದೊಂದಿಗೆ ಅನುರಣನದಲ್ಲಿರುವ ಒಂದು ಸ್ಥಿರವಾಗಿರಿಸಿದ ಕ್ರಮಪಡಿಸಿದ ಸುರುಳಿಯು ಚಿತ್ರದಲ್ಲಿ ಕೆಳಗಿರುವ ದೀಪವನ್ನು ಹತ್ತಿಸುತ್ತದೆ.

೧೮೯೯ರಲ್ಲಿ, ಟೆಸ್ಲಾರು ಸ್ಥಳಾಂತರ ಮಾಡಲು ನಿರ್ಧರಿಸಿ ಕೊಲೊರಾಡೋ ನಗರದ ಕೊಲೊರಾಡೋ ಸ್ಪ್ರಿಂಗ್ಸ್‌‌‌ ‌ಎಂಬಲ್ಲಿ ತಮ್ಮ ಉನ್ನತ-ವಿಭವಾಂತರ, ಉನ್ನತ-ತರಂಗಾಂತರ ಪ್ರಯೋಗಗಳಿಗೆ ಅನುಕೂಲವಾಗುವಷ್ಟು ಸ್ಥಳಾವಕಾಶವನ್ನು ಹೊಂದಿದ್ದ ಫೂಟೆ Ave. ರಸ್ತೆ ಮತ್ತು ಕಿಯೋವಾ St.[೬೪] ರಸ್ತೆಗಳ ಸಮೀಪವಿದ್ದ ಪ್ರಯೋಗಾಲಯದಲ್ಲಿ ಸಂಶೋಧನೆಯನ್ನು ಆರಂಭಿಸುತ್ತಾರೆ. ತಾವು ಅಲ್ಲಿಗೆ ಆಗಮಿಸಿದಾಗ ಅವರು ವರದಿಗಾರರಿಗೆ ತಾನು ಪೈಕ್ಸ್‌ ಶೃಂಗದಿಂದ ಪ್ಯಾರಿಸ್‌‌ಗೆ ಸಂಕೇತಗಳನ್ನು ಕಳುಹಿಸುವ ನಿಸ್ತಂತು ತಂತಿಸಂವಹನದ ಮೇಲೆ ಪ್ರಯೋಗಗಳನ್ನು ಮಾಡುತ್ತಿದ್ದೇನೆ ಎಂದು ಹೇಳುತ್ತಾರೆ. ಅಯಾನುಗೋಳಕ್ಕೆ ಸಂಬಂಧಿಸಿದ ಮತ್ತು ಛೇದಕ ಅಲೆಗಳು ಮತ್ತು ಅನುಲಂಬ ಅಲೆಗಳ ಮೂಲಕ ನೆಲದ ಭೂಗ್ರಹೀಯ ಹರಿವಿನ ತಮ್ಮ ಪ್ರಯೋಗಗಳ ಬಗ್ಗೆ ಟೆಸ್ಲಾ'ರ ದಿನಚರಿ ಪುಸ್ತಕವು ವಿವರಣೆಗಳನ್ನು ಹೊಂದಿದೆ.[೬೫] ತಮ್ಮ ಪ್ರಯೋಗಾಲಯದಲ್ಲಿ, ಭೂಮಿಯು ಒಂದು ವಾಹಕವೆಂದು ರುಜುವಾತುಪಡಿಸಿ ತೋರಿಸಿದ ಟೆಸ್ಲಾರು ಕೃತಕ ಮಿಂಚನ್ನು ಕೂಡಾ ಉತ್ಪಾದಿಸಿದ್ದರು (೧೩೫ ಅಡಿಗಳವರೆಗಿನ ವ್ಯಾಪ್ತಿಯ ದಶಲಕ್ಷ ವೋಲ್ಟ್‌ಗಳಷ್ಟು ಪ್ರಮಾಣದ ವಿಸರ್ಜನವನ್ನು ಅದು ಹೊಂದಿತ್ತು).[೬೬] ತಮ್ಮ ಗ್ರಾಹಕಗಳ ಮೂಲಕ ಮಿಂಚಿನ ಸಂಕೇತಗಳನ್ನು ಅವಲೋಕಿಸುವ ಮೂಲಕ ಟೆಸ್ಲಾರು ವಾಯುಮಂಡಲದ ವಿದ್ಯುಚ್ಛಕ್ತಿಯನ್ನು ಕೂಡಾ ಪರಿಶೋಧಿಸಿದರು. ಟೆಸ್ಲಾ'ರ ಗ್ರಾಹಕಗಳು ಮತ್ತು ಸಂಸಂಜಕ ವಿದ್ಯುನ್ಮಂಡಲಗಳ ಪುನರ್ನಿರ್ಮಾಣವು ಅನಿರೀಕ್ಷಿತ ಮಟ್ಟದ ಸಂಕೀರ್ಣತೆಯನ್ನು ತಂದೊಡ್ಡಿತು (e.g., ಚೆದುರಿದ ಉನ್ನತ-Q ಸುರುಳಿಯಾಕಾರದ ಅನುನಾದಕಗಳು, ರೇಡಿಯೋ ತರಂಗಾಂತರ ಪ್ರತ್ಯಾದಾನ, ಮೂಲರೂಪದ ಭಿನ್ನಾವರ್ತನೀಯ ಪರಿಣಾಮಗಳು ಮತ್ತು ಪುನರುತ್ಪಾದನಾ ತಂತ್ರಗಳು).[೬೭] ಈ ಅವಧಿಯಲ್ಲಿ ತಾವು ಸ್ಥಾಯಿ/ನಿಶ್ಚಲ ಅಲೆಗಳನ್ನು ಗಮನಿಸಿದುದಾಗಿ ಟೆಸ್ಲಾ ಹೇಳಿಕೆ ನೀಡಿದ್ದರು.[೬೮]

ವಿದ್ಯುಚ್ಛಕ್ತಿ ಮತ್ತು ಚೈತನ್ಯವನ್ನು ತಂತಿರಹಿತವಾಗಿ ದೀರ್ಘ ಅಂತರಗಳ ನಡುವೆ (ಸ್ವಲ್ಪ ಮಟ್ಟಿಗೆ ಛೇದಕ ಅಲೆಗಳ ಮೂಲಕವಾದರೆ ಬಹುಮಟ್ಟಿಗೆ ಅನುಲಂಬ ಅಲೆಗಳ ಮೂಲಕ) ಸಾಗಿಸುವ ವಿಧಾನಗಳ ಬಗ್ಗೆ ಟೆಸ್ಲಾರು ಸಂಶೋಧನೆಗಳನ್ನು ನಡೆಸಿದರು. ಅವರು ತೀರ ಕಡಿಮೆ ತರಂಗಾಂತರದ ಅಲೆಗಳನ್ನು ನೆಲದ ಮೂಲಕ ಹಾಗೂ ಭೂಮಿಯ ಮೇಲ್ಮೈಯಿಂದ ಕೆನ್ನೆಲ್ಲಿ-ಹೆವಿಸೈಡ್‌ ಪದರಗಳ ನಡುವಿನ ಪ್ರದೇಶದಲ್ಲಿ ಪ್ರಸರಿಸಿದರು. ಈ ವಿಧಾನದಿಂದ ಸ್ಥಾಯಿ ತರಂಗವನ್ನು ಉತ್ಪಾದಿಸುವ ನಿಸ್ತಂತು ಗ್ರಾಹಕಗಳ ಮೇಲೆ ಹಕ್ಕುಸ್ವಾಮ್ಯವನ್ನು ಅವರು ಪಡೆದುಕೊಂಡರು. ತಮ್ಮ ಪ್ರಯೋಗಗಳಲ್ಲಿ, ಅವರು ಗಣಿತೀಯ ಲೆಕ್ಕಾಚಾರಗಳನ್ನು ಮತ್ತು ಗಣನೆಗಳನ್ನು ತಮ್ಮ ಪ್ರಯೋಗಗಳ ಮೇಲೆ ಆಧಾರಿತವಾಗಿ ಮಾಡುತ್ತಿದ್ದರಲ್ಲದೇ ಭೂಮಿಯ ಪ್ರತಿಧ್ವನಿತ ತರಂಗಾಂತರವು ಸುಮಾರು ೮ ಹರ್ಟ್ಸ್‌‌ (Hz) ಎಂಬುದನ್ನು ಪತ್ತೆಹಚ್ಚಿದರು. ಸಂಶೋಧಕರು ಭೂಮಿ'ಯ ಅಯಾನುಗೋಳೀಯ ಕುಹರದ ಪ್ರತಿಧ್ವನಿತ ತರಂಗಾಂತರವು ಈ ವ್ಯಾಪ್ತಿಯಲ್ಲಿರುತ್ತದೆ ಎಂಬುದನ್ನು ೧೯೫೦ರ ದಶಕದಲ್ಲಿ ಸ್ಥಿರಪಡಿಸಿದರು (ನಂತರ ಇದನ್ನು ಷೂಮನ್‌ ಅನುರಣನ ಎಂದು ಕರೆಯಲಾಯಿತು).

ಕೊಲೊರಾಡೋದಲ್ಲಿ, ಟೆಸ್ಲಾರು ವಿವಿಧ ದೀರ್ಘ ಅಂತರದ ವಿದ್ಯುಚ್ಛಕ್ತಿ ಸಂವಹನ ಪ್ರಯೋಗಗಳನ್ನು ಕೈಗೊಂಡರು. ಟೆಸ್ಲಾ ಪರಿಣಾಮ ವು ವಿದ್ಯುತ್‌‌ ವಹನ/ವಾಹಕತ್ವದ ವಿಧದ ಅನ್ವಯಿಕೆಯಾಗಿರುತ್ತದೆ (ಎಂದರೆ ವಾಹಕದ ಮೂಲಕ ವಿಭವಾಂತರದ ಉತ್ಪಾದನೆ ಮಾತ್ರವಲ್ಲದೇ ಅವಕಾಶ/ಸ್ಥಳಾವಕಾಶ ಮತ್ತು ದ್ರವ್ಯಗಳ ಮೂಲಕ ಚೈತನ್ಯ/ವಿದ್ಯುಚ್ಛಕ್ತಿಯ ಚಲನೆ ಕೂಡಾ). ಟೆಸ್ಲಾರು ಚೈತನ್ಯವ/ಶಕ್ತಿಯನ್ನು ಗ್ರಾಹಕ ಸಾಧನಗಳಿಗೆ ಅನುಲಂಬ ಅಲೆಗಳ ಮೂಲಕ ವರ್ಗಾಯಿಸಿದ್ದರು. ಸ್ಥಾಯಿವಿದ್ಯುತ್ತನ್ನು ನೈಸರ್ಗಿಕ ಮಾಧ್ಯಮಗಳ ಮೂಲಕ ಬದಲಾಗುತ್ತಿರುವ ಅಯಸ್ಕಾಂತೀಯ ಪ್ರವಾಹದ ಬಳಿಯಿರುವ ವಾಹಕದೆಡೆಗೆ ಕಳಿಸಿದ ಅವರು ವಿದ್ಯುಚ್ಛಕ್ತಿಯನ್ನು ವಾಹಕ ಗ್ರಾಹಕ ಸಾಧನಕ್ಕೆ ಹರಿಸಿದ್ದರು (ಟೆಸ್ಲಾ'ರ ನಿಸ್ತಂತು ಬಲ್ಬ್‌ದೀಪಗಳಂತಹವು).

ಕೊಲೊರಾಡೋ ಸ್ಪ್ರಿಂಗ್ಸ್‌‌‌ನಲ್ಲಿನ ಪ್ರಯೋಗಾಲಯದಲ್ಲಿ, ಅಸಾಧಾರಣ ಸಂಕೇತಗಳನ್ನು ಗಮನಿಸಿದ್ದ ಟೆಸ್ಲಾರು ನಂತರ ಶುಕ್ರ ಅಥವಾ ಬುಧ ಗ್ರಹಗಳಿಂದ ಬಂದಿರಬಹುದಾದ ಭೂಮ್ಯಾತೀತ ರೇಡಿಯೋ ಸಂಪರ್ಕ/ಸಂವಹನಗಳಿಗೆ ಪುರಾವೆಗಳಿರಬಹುದು ಎಂದು ಭಾವಿಸಿದ್ದರು.[೬೯] ಚಂಡಮಾರುತ ಹಾಗೂ ಭೌಮಿಕ ಚಲನವಲನಗಳಿಂದ ಉತ್ಪನ್ನವಾಗುತ್ತಿದ್ದ ಸಂಕೇತಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದ್ದ ಸಂಕೇತಗಳನ್ನು ತಮ್ಮ ಗ್ರಾಹಕಗಳು ಪದೇಪದೇ ಗ್ರಹಿಸುತ್ತಿರುವುದನ್ನು ಅವರು ಗಮನಿಸಿದರು. ನಿರ್ದಿಷ್ಟವಾಗಿ ಅವರು ನಂತರ ನೆನಪಿಸಿಕೊಂಡ ಹಾಗೆ ಒಂದು, ಎರಡು, ಮೂರು ಮತ್ತು ನಾಲ್ಕು ಕ್ಲಿಕ್‌ಗಳ ಗುಂಪಾಗಿ ಸಂಕೇತಗಳು ಕಂಡುಬರುತ್ತಿದ್ದವು. ತಮ್ಮ ಈ ಸಂಶೋಧನೆಗಳನ್ನು ಬಳಸಿಕೊಂಡು ಮುಂದೆ ಇತರೆ ಗ್ರಹಗಳೊಂದಿಗೆ ಸಂವಹಿಸಲು ಸಾಧ್ಯವಾಗಬಹುದು ಎಂದು ಭಾವಿಸಿಕೊಂಡಿದ್ದನ್ನು ಟೆಸ್ಲಾರು ಉಲ್ಲೇಖಿಸಿದ್ದಾರೆ. ಅಂತಹಾ ಉದ್ದೇಶಕ್ಕೆಂದೇ "ಟೆಸ್ಲಾಸ್ಕೋಪ್‌/ಟೆಸ್ಲಾದರ್ಶಕ " ಎಂಬ ಉಪಕರಣವನ್ನು ಅವರು ಆವಿಷ್ಕರಿಸಿದ್ದರು ಎಂಬ ವಾದಗಳೂ ಇವೆ. ಟೆಸ್ಲಾರು ಪಡೆದಿದ್ದ ಸಂಕೇತಗಳು ಯಾವ ತರಹದ್ದಾಗಿರಬಹುದು ಅಥವಾ ಅವರು ನಿಜಕ್ಕೂ ಆ ರೀತಿ ಏನನ್ನಾದರೂ ಪಡೆದಿದ್ದರೆ ಎಂಬ ವಿಚಾರಗಳು ಚರ್ಚಾರ್ಹವಾಗಿವೆ. ತಾನು ಕಾರ್ಯನಿರ್ವಹಿಸುತ್ತಿದ್ದ ನವೀನ ತಂತ್ರಜ್ಞಾನವನ್ನು,[೭೦] ಟೆಸ್ಲಾರು ತಪ್ಪಾಗಿ ಅರ್ಥೈಸಿಕೊಂಡಿರಬಹುದು ಅಥವಾ ಟೆಸ್ಲಾರು ಗಮನಿಸಿದ್ದ ಸಂಕೇತಗಳು ಜೋವಿಯನ್‌ ಪ್ಲಾಸ್ಮಾ ಟೋರಸ್‌ ಸಂಕೇತಗಳಂತಹಾ ಭೌಮಿಕವಲ್ಲದ ನೈಸರ್ಗಿಕ ರೇಡಿಯೋ ಸ್ರೋತಗಳಿಂದ ಹೊರಹೊಮ್ಮಿದ್ದವಾಗಿರಬಹುದು ಎಂದು ಸಂಶೋಧನೆಗಳು ಸೂಚಿಸಿವೆ.[೭೧]

೭ ಜನವರಿ ೧೯೦೦ರಂದು ಟೆಸ್ಲಾರು ಕೊಲೊರಾಡೋ ಸ್ಪ್ರಿಂಗ್ಸ್‌‌‌ನಿಂದ ಹೊರನಡೆದರು. ಪ್ರಯೋಗಾಲಯದ ಕಟ್ಟಡವನ್ನು ಕೆಡವಲಾಯಿತಲ್ಲದೇ ಸಾಲಗಳನ್ನು ತೀರಿಸಲು ಅಲ್ಲಿನ ವಸ್ತುಗಳನ್ನು ಮಾರಲಾಯಿತು. ಟೆಸ್ಲಾರಿಗೆ ಅವರ ಮುಂದಿನ ಯೋಜನೆಯಾದ ವಾರ್ಡನ್‌‌ಕ್ಲಿಫ್ಫೆ ಎಂದು ಮುಂದೆ ಹೆಸರಾದ ನಿಸ್ತಂತು ವಿದ್ಯುಚ್ಛಕ್ತಿ ಸಂವಹನ ಸೌಲಭ್ಯದ ಸ್ಥಾಪನೆಗೆ ಬೇಕಾದ ತಯಾರಿಯನ್ನು ಕೊಲೊರಾಡೋ ಪ್ರಯೋಗಗಳು ನೀಡಿದ್ದವು. ವಿದ್ಯುನ್ಮಂಡಲದ ಆಂದೋಲನಗಳ ತೀಕ್ಷ್ಣತೆಯನ್ನು ಹೆಚ್ಚಿಸುವ ವಿಧಾನವನ್ನು ಕಂಡುಹಿಡಿಯಲು ಟೆಸ್ಲಾರಿಗೆ ಯು.ಎಸ್ ಪೇಟೆಂಟ್ ೬೮೫,೦೧೨ಅನ್ನು ನೀಡಲಾಗಿತ್ತು. ಯುನೈಟೆಡ್‌‌ ಸ್ಟೇಟ್ಸ್‌‌ ಹಕ್ಕುಸ್ವಾಮ್ಯ ಕಛೇರಿಯ ವಿಂಗಡಣಾ ವ್ಯವಸ್ಥೆಯು ಪ್ರಸ್ತುತವಾಗಿ ಈ ಹಕ್ಕುಸ್ವಾಮ್ಯವನ್ನು ಪ್ರಧಾನ ೧೭೮/೪೩ ವರ್ಗಕ್ಕೆ ನೀಡುತ್ತದೆಯಾದರೂ ("ದೂರಲೇಖನ/ಅವಕಾಶ ಚೋದನ"), ಇತರೆ ಅನ್ವಯವಾಗಬಲ್ಲ ವರ್ಗಗಳಲ್ಲಿ ೫೦೫/೮೨೫ ("ಕೆಳಮಟ್ಟದ ತಾಪಮಾನದ ಅಧಿವಾಹಕತೆಗೆ-ಸಂಬಂಧಿಸಿದ ಉಪಕರಣಗಳು") ಸೇರಿವೆ.

ವಾರ್ಡನ್‌‌ಕ್ಲಿಫ್ಫೆ ವರ್ಷಗಳು

[ಬದಲಾಯಿಸಿ]

US$೧೫೦,೦೦೦ರಷ್ಟು (J. ಪಿಯೆರ್‌ಪಾಂಟ್‌ ಮೋರ್ಗನ್‌ರಿಂದ/ಸಂಸ್ಥೆಯಿಂದ ೫೧ % ಹೂಡಿಕೆ), ಬಂಡವಾಳದೊಂದಿಗೆ ೧೯೦೦ನೇ ಇಸವಿಯಲ್ಲಿ ಟೆಸ್ಲಾರು ವಾರ್ಡನ್‌‌ಕ್ಲಿಫ್ಫೆ ಗೋಪುರ ಸೌಕರ್ಯವನ್ನು ನಿರ್ಮಿಸಲು ಯೋಜನೆಯನ್ನು ತಯಾರಿಸಿದರು. ಟೆಸ್ಲಾ'ರ ಪ್ರಯೋಗಾಲಯ ಚಟುವಟಿಕೆಗಳನ್ನು ಹೌಸ್ಟನ್‌‌ ಬೀದಿ/ರಸ್ತೆಯಿಂದ ವಾರ್ಡನ್‌‌ಕ್ಲಿಫ್ಫೆಗೆ ಜೂನ್‌ ೧೯೦೨ರಲ್ಲಿ ಸ್ಥಳಾಂತರಿಸಲಾಯಿತು. ವಿಶ್ವ ಸಮರ Iರ ಸಮಯದಲ್ಲಿ ಗೋಪುರವನ್ನು ಕಳಚಿ ಮುರುಕು ತುಂಡುಗಳನ್ನಾಗಿ ಮಾಡಲಾಯಿತು.[೭೨] ವಾರ್ಡನ್‌‌ಕ್ಲಿಫ್ಫೆ ಯತ್ನಕ್ಕೆ "ಟೆಸ್ಲಾ'ರ ದಶಲಕ್ಷ-ಡಾಲರ್‌ಗಳ‌ ಮೂರ್ಖತನ"ವೆಂಬ ಹಣೆಪಟ್ಟಿಯನ್ನು ಆಗಿನ ಕಾಲದ ವಾರ್ತಾಪತ್ರಿಕೆಗಳು ಹಚ್ಚಿದ್ದವು. US ಹಕ್ಕುಸ್ವಾಮ್ಯ ಕಛೇರಿಯು ತನ್ನ ನಿರ್ಧಾರವನ್ನು ಬದಲಿಸಿ ಗುಗ್ಲೀಯೆಲ್ಮೋ ಮಾರ್ಕೋನಿಯವರಿಗೆ ರೇಡಿಯೋನ ಹಕ್ಕುಸ್ವಾಮ್ಯವನ್ನು ೧೯೦೪ರಲ್ಲಿ ನೀಡಿದಾಗ, ಟೆಸ್ಲಾರು ರೇಡಿಯೋ ಹಕ್ಕುಸ್ವಾಮ್ಯವನ್ನು ಮತ್ತೆ ಪಡೆದುಕೊಳ್ಳಲು ತಮ್ಮ ಹೋರಾಟ ಆರಂಭಿಸಿದರು. ೧೯೦೬ರಲ್ಲಿ ತಮ್ಮ ೫೦ನೆಯ ಜನ್ಮದಿನದಂದು, ಟೆಸ್ಲಾರು ತಮ್ಮ ೨೦೦ hp (೧೫೦ kW) ೧೬,೦೦೦ rpm ಸಾಮರ್ಥ್ಯದ ರೆಕ್ಕೆರಹಿತ ಜಲಚಕ್ರದ ಪ್ರಾತ್ಯಕ್ಷಿಕೆಯನ್ನು ನೀಡಿದರು. ನ್ಯೂಯಾರ್ಕ್‌‌ನಲ್ಲಿನ ವಾಟರ್‌ಸೈಡ್‌ ವಿದ್ಯುಚ್ಛಕ್ತಿ ಕೇಂದ್ರದಲ್ಲಿ ೧೦೦–೫೦೦೦ hpವರೆಗಿನ ಕ್ಷಮತೆಗಳಲ್ಲಿ ಅವರ ಅನೇಕ ರೆಕ್ಕೆರಹಿತ ಜಲಚಕ್ರ ಎಂಜಿನ್‌ಗಳನ್ನು ೧೯೧೦–೧೯೧೧ರ ಅವಧಿಯಲ್ಲಿ ಪರೀಕ್ಷಿಸಲಾಯಿತು.

ನೊಬೆಲ್‌ ಪ್ರಶಸ್ತಿ ಮತ್ತು ಟೆಸ್ಲಾ

[ಬದಲಾಯಿಸಿ]

೧೯೦೯ರಲ್ಲಿಯೇ ಮಾರ್ಕೋನಿಯವರಿಗೆ ರೇಡಿಯೋ ಆವಿಷ್ಕಾರಕ್ಕೆಂದು ಭೌತಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ನೀಡಿದ್ದ ಕಾರಣ, ಪತ್ರಿಕಾ ಹೇಳಿಕೆಗಳಲ್ಲಿ ಥಾಮಸ್‌ ಎಡಿಸನ್‌ ಮತ್ತು ಟೆಸ್ಲಾರನ್ನು 1915ರ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಳ್ಳುವ ಸಂಭಾವ್ಯ ಪ್ರಶಸ್ತಿವಿಜೇತರನ್ನಾಗಿ ತಿಳಿಯಪಡಿಸಿದ್ದು ಅನೇಕ ನೊಬೆಲ್‌ ಪ್ರಶಸ್ತಿ ವಿವಾದಗಳಲ್ಲೊಂದರ ಭುಗಿಲೇಳುವಿಕೆಗೆ ಕಾರಣವಾಯಿತು. ಅವರುಗಳ ವೈಜ್ಞಾನಿಕ ಕೊಡುಗೆಗಳ ಹೊರತಾಗಿಯೂ ಕೆಲ ಮೂಲಗಳ ಹೇಳಿಕೆಗಳ ಪ್ರಕಾರ ಅವರಿಬ್ಬರ ನಡುವಿದ್ದ ಮನಸ್ತಾಪದ ಕಾರಣ ಇಬ್ಬರಲ್ಲಿ ಯಾರಿಗೂ ಪ್ರಶಸ್ತಿಯನ್ನು ನೀಡಲಾಗಿರಲಿಲ್ಲ ಮಾತ್ರವಲ್ಲದೇ ಇಬ್ಬರೂ ಪರಸ್ಪರರ ಸಾಧನೆಗಳನ್ನು ಕಡಿಮೆಯೆನ್ನುವಂತೆ ಬಿಂಬಿಸುವ ಹಾಗೂ ಪ್ರಶಸ್ತಿಯನ್ನು ಪಡೆದುಕೊಳ್ಳುವ ಹಕ್ಕಿಲ್ಲವೆಂದು ಪ್ರತಿಪಾದಿಸುವಲ್ಲಿ ತೊಡಗಿದ್ದರಲ್ಲದೇ, ಮತ್ತೊಬ್ಬರಿಗೆ ಪ್ರಶಸ್ತಿಯನ್ನು ಮೊದಲು ನೀಡಿದ್ದರೆ ತಾವು ಪ್ರಶಸ್ತಿಯನ್ನು ಸ್ವೀಕರಿಸಲಾರೆವು ಎಂಬುದಾಗಿ ಮಾತ್ರವಲ್ಲ ಅದನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನೇ ತಿರಸ್ಕರಿಸಿದ್ದರು.[೭೩]

ವದಂತಿಗಳ ನಂತರ ನಡೆದ ಘಟನೆಗಳಲ್ಲಿ, ಟೆಸ್ಲಾ ಅಥವಾ ಎಡಿಸನ್‌ರವರುಗಳಲ್ಲಿ ಯಾರೂ ಪ್ರಶಸ್ತಿಯನ್ನು ಪಡೆದಿರಲಿಲ್ಲ (೧೯೧೫ರಲ್ಲಿ ೩೮ ಸಂಭವನೀಯ ಸೂಚನೆಗಳಲ್ಲಿ ಒಂದನ್ನು ಎಡಿಸನ್‌ರು ಹಾಗೂ ೧೯೩೭ರಲ್ಲಿ ೩೮ ಸಂಭವನೀಯ ಸೂಚನೆಗಳಲ್ಲಿ ಒಂದನ್ನು ಟೆಸ್ಲಾರು ಪಡೆದಿದ್ದರೂ ನೀಡಲಾಗಿರಲಿಲ್ಲ).[೭೪] ಮುಂಚೆ, ಕೇವಲ ಟೆಸ್ಲಾರು ಮಾತ್ರವೇ 1912ರ ನೊಬೆಲ್‌ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದಾರೆಂಬ ವದಂತಿಯು ಹರಡಿತ್ತು. ವದಂತಿಯ ಪ್ರಕಾರ ನಾಮಾಂಕಿತಗೊಳ್ಳುವಿಕೆಯು ಪ್ರಧಾನವಾಗಿ ಅವರ ಉನ್ನತ-ವಿಭವಾಂತರ ಉನ್ನತ-ತರಂಗಾಂತರ ಪ್ರತಿಧ್ವನಿತ ವಿದ್ಯುತ್‌‌ಪರಿವರ್ತಕಗಳನ್ನು ಬಳಸಿ ರೂಪಿಸಿದ್ದ ಕ್ರಮಪಡಿಸಿದ ವಿದ್ಯುನ್ಮಂಡಲಗಳೊಂದಿಗಿನ ಪ್ರಯೋಗಗಳ ಸಾಧನೆಗಾಗಿದ್ದಾಗಿತ್ತು.

ನಂತರದ ವರ್ಷಗಳು

[ಬದಲಾಯಿಸಿ]

ಮಾರ್ಕೋನಿಯವರ ಹಕ್ಕಿನ ವಾದಗಳನ್ನು ಪ್ರಶ್ನಿಸಿ ನ್ಯಾಯಾಲಯದಿಂದ ತಡೆಯನ್ನು ತರಲು ಪ್ರಯತ್ನಿಸಿ ೧೯೧೫ರಲ್ಲಿ, ಟೆಸ್ಲಾರು ಮೊಕದ್ದಮೆಯೊಂದನ್ನು ಹೂಡಿದ್ದರೂ ಮಾರ್ಕೋನಿಯವರ ವಿರುದ್ಧ ಯಶಸ್ವಿಯಾಗಲಿಲ್ಲ. ವಾರ್ಡನ್‌‌ಕ್ಲಿಫ್ಫೆನ ನಂತರ, ಲಾಂಗ್‌‌ ಐಲೆಂಡ್‌‌ನ ಸೇವಿಲ್ಲೆನಲ್ಲಿ ಟೆಲಿಫಂಕೆನ್‌‌ ನಿಸ್ತಂತು ಕೇಂದ್ರವನ್ನು ಟೆಸ್ಲಾರವರು ನಿರ್ಮಿಸಿದರು. ವಾರ್ಡನ್‌‌ಕ್ಲಿಫ್ಫೆನಲ್ಲಿ ಅವರು ಸಾಧಿಸಿ ತೋರಿಸಬೇಕೆಂದಿದ್ದ ಕೆಲವನ್ನು ಟೆಲಿಫಂಕೆನ್‌‌ ನಿಸ್ತಂತು ಕೇಂದ್ರದಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಕೇಂದ್ರವನ್ನು ನೌಕಾದಳವು ಜರ್ಮನ್‌ ಬೇಹುಗಾರರು ಇದನ್ನು ಬಳಸಿಕೊಳ್ಳಬಹುದು ಎಂಬ ಸಂಶಯದಿಂದಾಗಿ ೧೯೧೭ರಲ್ಲಿ, ಕೆಡವಿಹಾಕಿತು.

ವಾರ್ಡನ್‌‌ಕ್ಲಿಫ್ಫೆ ಗೋಪುರ ಕಛೇರಿ

ತಮ್ಮ ಸಂಶೋಧನೆಗೆ ಬೇಕಾದ ಧನಸಹಾಯಗಳಿಗಾಗಿ ವಿಶ್ವ ಸಮರ Iಕ್ಕೆ ಮುನ್ನ, ಸಾಗರೋತ್ತರ ಹೂಡಿಕೆದಾರರೆಡೆ ಟೆಸ್ಲಾರು ಮುಖ ಮಾಡಿದ್ದರು. ಯುದ್ಧ ಆರಂಭವಾದಾಗ, ಟೆಸ್ಲಾರಿಗೆ ಐರೋಪ್ಯ ರಾಷ್ಟ್ರಗಳಿಂದ ತನ್ನ ಹಕ್ಕುಸ್ವಾಮ್ಯಗಳಿಂದ ಬರುತ್ತಿದ್ದ ಹಣವು ಕೂಡಾ ನಿಂತುಹೋಯಿತು. ಯುದ್ಧ ಕೊನೆಗೊಂಡ ನಂತರ ವಿಶ್ವ ಸಮರ Iರ ನಂತರದ ಪರಿಸರದ ಪ್ರಾಸ್ತಾವಿಕ ಸಮಸ್ಯೆಗಳ ಸಂಭಾವ್ಯತೆ ಬಗ್ಗೆ ಮುದ್ರಿತ (೨೦ ಡಿಸೆಂಬರ್‌ ೧೯೧೪) ಲೇಖನವೊಂದರಲ್ಲಿ ಟೆಸ್ಲಾರು ಬರೆದಿದ್ದರು. ಆಗಿನ ಕಾಲಾವಧಿ ಹಾಗೂ ಸಮಸ್ಯೆಗಳಿಗೆ ಲೀಗ್‌ ಆಫ್‌ ನೇಷನ್ಸ್‌ ಒಂದು ಪರಿಹಾರವಾಗಲಾರದು ಎಂಬುದು ಟೆಸ್ಲಾರ ಅಭಿಪ್ರಾಯವಾಗಿತ್ತು. ತರುವಾಯದ ವರ್ಷಗಳಲ್ಲಿ ಟೆಸ್ಲಾರು ಆಂತರಿಕ ನಿರ್ಬಂಧ ಮನೋವ್ಯಾಧಿಯ ಲಕ್ಷಣಗಳನ್ನು ತೋರತೊಡಗಿದರು. ಅವರಿಗೆ ಮೂರು ಸಂಖ್ಯೆಯ ಗೀಳು ಹಿಡಿದಿತ್ತು ; ಕಟ್ಟಡವೊಂದನ್ನು ಪ್ರವೇಶಿಸುವ ಮುನ್ನಾ ಆ ಕಟ್ಟಡದ ಸುತ್ತಾ ಮೂರುಬಾರಿ ಸುತ್ತಬೇಕೆಂದು/ಪ್ರದಕ್ಷಿಣೆ ಮಾಡಬೇಕೆಂದು ಆಗ್ಗಾಗ್ಗೆ ಅವರಿಗೆ ಅನಿಸುತ್ತಿತ್ತು, ಊಟಕ್ಕೆ ಪ್ರತಿಬಾರಿ ಕುಳಿತಾಗಲೂ ತಟ್ಟೆಯ ಪಕ್ಕದಲ್ಲಿ ಮೂರುಬಾರಿ ಮಡಿಸಿದ ಕೈಚೌಕವನ್ನೇ ಇಡುವಂತೆ ಬೇಡಿಕೆಯಿಡುತ್ತಿದ್ದರು, etc. OCD ವ್ಯಾಧಿಯ ಲಕ್ಷಣಗಳ ಬಗ್ಗೆ ಆ ಕಾಲದಲ್ಲಿ ಹೆಚ್ಚು ತಿಳಿದಿರದೇ ಯಾವುದೇ ಚಿಕಿತ್ಸೆಗಳು ಲಭ್ಯವಿರದ ಕಾರಣ, ಅವರ ಈ ವಿಚಿತ್ರ ಸ್ವಭಾವವನ್ನು ಕೆಲವರು ಭಾಗಶಃ ಉನ್ಮಾದದ ಲಕ್ಷಣವೆಂದು ಭಾವಿಸಿದ್ದರಿಂದ ಅವರ ಬಗ್ಗೆ ಉಳಿದಿದ್ದ ಖ್ಯಾತಿಗೂ ಭಂಗ ಬರುವಂತಾಯಿತು.

ಈ ಸಮಯದಲ್ಲಿ ಅವರು ದ ವಾಲ್ಡ್ರಾಫ್‌-ಆಸ್ಟೋರಿಯಾ ಹೋಟೆಲ್‌ನಲ್ಲಿ ತಡಪಾವತಿ ಬಾಡಿಗೆಯ ವ್ಯವಸ್ಥೆಯಲ್ಲಿ ವಾಸವಿದ್ದರು. US$೨೦,೦೦೦ ಮೊತ್ತದ ಸಾಲವನ್ನು ಪಾವತಿಸಲು ಅಂತಿಮವಾಗಿ, ವಾರ್ಡನ್‌‌ಕ್ಲಿಫ್ಫೆ ದಸ್ತೈವಜುವನ್ನು ವಾಲ್ಡ್ರಾಫ್‌-ಆಸ್ಟೋರಿಯಾದ ಮಾಲಿಕ ಜಾರ್ಜ್‌‌‌ ಬೋಲ್ಡ್‌ಟ್‌ರ ಹೆಸರಿಗೆ ಮಾಡಲಾಯಿತು. ಹೆಚ್ಚು ಬೆಲೆಬಾಳಬಲ್ಲ ಸ್ಥಿರಾಸ್ತಿಯನ್ನಾಗಿ ಮಾಡಲು ವಾರ್ಡನ್‌‌ಕ್ಲಿಫ್ಫೆ ಗೋಪುರವನ್ನು ಬೋಲ್ಡ್‌ಟ್‌ರು ಕೆಡವಿ ಹಾಕುತ್ತಿದ್ದ ೧೯೧೭ರ ಸಮಯದಲ್ಲಿಯೇ, ಟೆಸ್ಲಾರು AIEE'ನ ಅತ್ಯುನ್ನತ ಗೌರವ, ಎಡಿಸನ್‌ ಪದಕ/ಮೆಡಲ್‌ಅನ್ನು ಪಡೆದರು.

ಮೊದಲ ಆದಿಘಟ್ಟದ ರಾಡಾರ್‌ ಘಟಕಗಳ ತರಂಗಾಂತರ ಮತ್ತು ವಿದ್ಯುಚ್ಛಕ್ತಿ ಮಟ್ಟಗಳ ಬಗ್ಗೆ ಮೂಲತತ್ವಗಳನ್ನು ಆಗಸ್ಟ್‌ ೧೯೧೭ರಲ್ಲಿ ಟೆಸ್ಲಾರು ನಿರ್ದಿಷ್ಟಪಡಿಸಿದರು.[೭೫]

ಪ್ರಥಮ ಫ್ರೆಂಚ್‌‌‌ ರಾಡಾರ್‌ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಾ ೧೯೩೪ರಲ್ಲಿ, ಎಮೈಲ್‌ ಗಿರಾರ್ಡೆಯುರವರು "ಟೆಸ್ಲಾರು ರೂಪಿಸಿದ್ದ ಮೂಲತತ್ವಗಳ ಮೇಲೆ ಆಧಾರಿತವಾಗಿ" ಅವುಗಳನ್ನು ನಿರ್ಮಿಸಿದುದಾಗಿ ಹೇಳಿದ್ದರು. ಟೆಸ್ಲಾರು ಯುನೈಟೆಡ್‌ ಕಿಂಗ್‌ಡಮ್‌ ಸರ್ಕಾರದೊಂದಿಗೆ ಕಿರಣ ವ್ಯವಸ್ಥೆಯೊಂದರ ಬಗ್ಗೆ ೧೯೨೦ರ ದಶಕದ ಹೊತ್ತಿಗೆ, ಚರ್ಚೆಗಳನ್ನು ನಡೆಸುತ್ತಿದ್ದರೆಂದು ವರದಿಯಾಗಿತ್ತು. "ಡೆತ್‌ ರೇ/ಸಾವಿನ ಕಿರಣ" ಎಂದು ಕರೆಯಲಾಗುತ್ತಿದ್ದ ಆ ತಂತ್ರಜ್ಞಾನವನ್ನು ಕಳವು ಮಾಡಲು ಯತ್ನಗಳು ನಡೆದಿದ್ದವು ಎಂದೂ ಟೆಸ್ಲಾರು ಹೇಳಿಕೆ ನೀಡಿದ್ದರು. ಚೇಂಬರ್‌ಲೇನ್‌‌ ಸರ್ಕಾರದ ವಜಾಗೊಳ್ಳುವಿಕೆಯು ಈ ಚರ್ಚೆಗಳನ್ನು ಕೊನೆಗೊಳಿಸಿತು ಎಂದು ಭಾವಿಸಲಾಗಿದೆ.

೧೯೩೧ನೇ ಇಸವಿಯಲ್ಲಿ ಟೆಸ್ಲಾ'ರ ೭೫ನೇ ಹುಟ್ಟಿದಹಬ್ಬದಂದು ಟೈಮ್‌ ನಿಯತಕಾಲಿಕೆಯು ತನ್ನ ಮುಖಪುಟದ ಮೇಲೆ ಅವರ ಭಾವಚಿತ್ರವನ್ನು ಮುದ್ರಿಸಿತ್ತು. ವಿದ್ಯುಚ್ಛಕ್ತಿ ಉತ್ಪಾದನೆಗೆ ಸಂಬಂಧಿಸಿದ ಅವರ ಕೊಡುಗೆಯನ್ನು ಮುಖಪುಟದ ಮೇಲಿನ ಶಿರೋನಾಮೆಯು ದಾಖಲಿಸಿತ್ತು. VTOL ವಿಮಾನದ ಪ್ರಥಮ ಮಾದರಿಯಾದ ವಾಯು ಸಾಗಣೆಯ ಉಪಕರಣದ ವಿಚಾರಕ್ಕೆ ೧೯೨೮ರಲ್ಲಿ ತಮ್ಮ ಕೊನೆಯ ಹಕ್ಕುಸ್ವಾಮ್ಯವನ್ನು ಟೆಸ್ಲಾರು ಪಡೆದಿದ್ದರು. ೧೯೩೧ರ ಕೊನೆಯ ಹೊತ್ತಿಗೆ, ಟೆಸ್ಲಾರು "ಆನ್‌ ಫ್ಯೂಚರ್‌ ಮೋಟಿವ್‌‌ ಪವರ್‌ " ಸಾಗರ ಉಷ್ಣ ಚೈತನ್ಯ/ವಿದ್ಯುಚ್ಛಕ್ತಿ ಪರಿವರ್ತಕ ವ್ಯವಸ್ಥೆಯನ್ನು ಪ್ರಕಟಿಸಿದ್ದರು. ಟೆಸ್ಲಾರು ತನ್ನ ತವರುನಾಡಿನ ನಿಯೋಗಿ ಜಾಂಕೋವಿಕ್‌ರಿಗೆ ೧೯೩೪ರಲ್ಲಿ ಪತ್ರವೊಂದನ್ನು ಬರೆದಿದ್ದರು. ಅಮೇರಿಕನ್‌‌ ಕಂಪೆನಿಗಳು ಟೆಸ್ಲಾರನ್ನು ಆರ್ಥಿಕವಾಗಿ ಬೆಂಬಲಿಸುವಂತೆ ಮಾಡಿದ ದೇಣಿಗೆ ವ್ಯವಸ್ಥೆಯನ್ನು ಆರಂಭಿಸಿದ್ದ ಮಿಹಾಜ್ಲೋ ಪ್ಯುಪಿನ್‌ರಿಗೆ ಈ ಪತ್ರದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು. ಅವರ ಸಂಶೋಧನೆಯನ್ನು ಮುಂದುವರೆಸಲು ಯುಗೋಸ್ಲಾವಿಯಾದಿಂದ ಪಡೆಯುತ್ತಿದ್ದ ಸಾಧಾರಣ ವಿಶ್ರಾಂತಿವೇತನವನ್ನು ಮಾತ್ರ ಪಡೆಯುವುದಾಗಿ ಟೆಸ್ಲಾರು ಈ ಧನಸಹಾಯವನ್ನು ನಿರಾಕರಿಸಿದ್ದರು.

ವ್ಲಾಡ್ಕೋ ಮ್ಯಾಚೆಕ್‌ರಿಗೆ ೧೯೩೬ರಲ್ಲಿ ಕಳಿಸಿದ್ದ ತಂತಿಸಂದೇಶದಲ್ಲಿ ಟೆಸ್ಲಾರು : "ನನ್ನ ಸರ್ಬಿಯಾದ ಮೂಲ ಹಾಗೂ ಕ್ರೊಯೇಷಿಯಾದ ತವರುನಾಡುಗಳ ಬಗ್ಗೆ ಸಮಾನವಾಗಿ ಹೆಮ್ಮೆಯನ್ನು ಹೊಂದಿದ್ದೇನೆ. ಎಲ್ಲಾ ಯುಗೋಸ್ಲ್ಯಾವಿಯನ್ನರು ಚಿರಾಯುಗಳಾಗಲಿ" ಎಂದಿತ್ತು.[೭೬]

ಕ್ಷೇತ್ರ ಸಿದ್ಧಾಂತಗಳು

[ಬದಲಾಯಿಸಿ]

ಟೆಸ್ಲಾರು ತಾವು "ಗುರುತ್ವಾಕರ್ಷಣೆಯ ಕ್ರಿಯಾತ್ಮಕ ಸಿದ್ಧಾಂತ"ದ ರೂಪಿಸುವಿಕೆಯನ್ನು ಪೂರೈಸಿದ್ದೇನೆ ಎಂಬ ಹೇಳಿಕೆಯನ್ನು ಅವರಿಗೆ ೮೧ ವರ್ಷವಾಗಿದ್ದಾಗ ನೀಡಿದ್ದರು. "ಸಂಪೂರ್ಣ ಸಾಧ್ಯತೆ ಹಾಗೂ ವಿವರಗಳೊಂದಿಗೆ ಅದನ್ನು ಅಭ್ಯಸಿಸಿರುವುದಾಗಿ" ಅವರು ಹೇಳಿಕೆ ನೀಡಿದ್ದರಲ್ಲದೇ ಅದನ್ನು ಶೀಘ್ರವೇ ವಿಶ್ವಕ್ಕೆ ತಿಳಿಯಪಡಿಸುವುದಾಗಿ ಆಶಯ ವ್ಯಕ್ತಪಡಿಸಿದ್ದರು.[೭೭] ಈ ಸಿದ್ದಾಂತವು ಎಂದಿಗೂ ಪ್ರಕಟವಾಗಿರಲಿಲ್ಲ.

ಉನ್ನತ ತರಂಗಾಂತರ ಮತ್ತು ಉನ್ನತ ವಿಭವಾಂತರ ವಿದ್ಯುತ್‌ಕಾಂತತೆಗಳ ಬಗ್ಗೆ ಪ್ರಯೋಗಗಳನ್ನು ಮಾಡುತ್ತಿದ್ದ ಮತ್ತು ಆಯಾ ಸಿದ್ಧಾಂತಗಳನ್ನು ಬಳಸುವ ಸಾಧನಗಳ ಹಕ್ಕುಸ್ವಾಮ್ಯದ ಬಗ್ಗೆ ಕಾರ್ಯಪ್ರವೃತ್ತರಾಗಿದ್ದ ೧೮೯೨ರಿಂದ ೧೮೯೪ರ ನಡುವಿನ ಅವಧಿಯಲ್ಲಿ ಈ ಸಿದ್ಧಾಂತದ ಬಹುತೇಕ ಭಾಗವನ್ನು ಅಭಿವೃದ್ಧಿಪಡಿಸಲಾಗಿತ್ತು. ಟೆಸ್ಲಾರು ೧೯೨೫ರಲ್ಲಿ ಮ್ಯಾಕ್‌ರ ಮೂಲತತ್ವಗಳನ್ನು ನೆನಪಿಗೆ ತರುವಂತಹಾ ಸಿದ್ಧಾಂತವನ್ನು, ಹೀಗೆ ಪ್ರತಿಪಾದಿಸಿದ್ದರು:

ರೂಡರ್‌ ಬಾಸ್ಕೋವಿಕ್‌‌ರ ಪುಸ್ತಕ ಥಿಯೋರಿಯಾ ಫಿಲಾಸಾಫಿಯೆ ನ್ಯಾಚುರಲಿಸ್‌ಅನ್ನು ಹಿಡಿದುಕೊಂಡು ನ್ಯೂಯಾರ್ಕ್‌‌ನ ಪೂರ್ವ ಹೌಸ್ಟನ್‌‌ ಬೀದಿ/ರಸ್ತೆಯಲ್ಲಿರುವ ತಮ್ಮ ಉನ್ನತ-ತರಂಗಾಂತರ ಪರಿವರ್ತಕದ ಸಿಂಬೆ ಸುತ್ತಿರುವ ಸುರುಳಿಯ ಮುಂದೆ ನಿಕೋಲಾ ಟೆಸ್ಲಾ ಕುಳಿತಿದ್ದಾರೆ.

There is no thing endowed with life—from man, who is enslaving the elements, to the nimblest creature—in all this world that does not sway in its turn. Whenever action is born from force, though it be infinitesimal, the cosmic balance is upset and the universal motion results.

ಐನ್‌ಸ್ಟೀನ್‌ರ ಸಾಪೇಕ್ಷತೆಯ ಸಿದ್ಧಾಂತಗಳ ಬಗ್ಗೆ ಟೀಕೆಯನ್ನು ಮಾಡುತ್ತಿದ್ದ ಟೆಸ್ಲಾರು ಅದನ್ನು ಕೆಳಕಂಡಂತೆ ಕರೆಯುತ್ತಿದ್ದರು :

...[a] magnificent mathematical garb which fascinates, dazzles and makes people blind to the underlying errors. The theory is like a beggar clothed in purple whom ignorant people take for a king ... its exponents are brilliant men but they are metaphysicists rather than scientists ...[೭೮]

ಟೆಸ್ಲಾ ಹೀಗೆಂದೂ ಪ್ರತಿಪಾದಿಸಿದ್ದರು:

I hold that space cannot be curved, for the simple reason that it can have no properties. It might as well be said that God has properties. He has not, but only attributes and these are of our own making. Of properties we can only speak when dealing with matter filling the space. To say that in the presence of large bodies space becomes curved is equivalent to stating that something can act upon nothing. I, for one, refuse to subscribe to such a view.[೭೯]

ಅಪ್ರಕಟಿತವಾದ ಸಂದರ್ಶನವೊಂದರಲ್ಲಿ ಅವರೇ ಹೇಳಿದಂತೆ

ಅಪ್ರಕಟಿತವಾದ ಸಂದರ್ಶನವೊಂದರಲ್ಲಿ ಅವರೇ ಹೇಳಿದಂತೆ ಆಲ್ಬರ್ಟ್‌ ಐನ್‌ಸ್ಟೀನ್‌ರ ಸಾಪೇಕ್ಷತಾ ಸಿದ್ಧಾಂತದ ಬಗೆಗಿನ ಬಹುತೇಕ ಅಧ್ಯಯನಗಳನ್ನು ರೂಡರ್‌ ಬಾಸ್ಕೋವಿಕ್‌‌ರು ಮುಂಚೆಯೇ ಪ್ರತಿಪಾದಿಸಿದ್ದರು ಎಂದೇ ಟೆಸ್ಲಾ ಭಾವಿಸಿದ್ದರು:

...the relativity theory, by the way, is much older than its present proponents. It was advanced over 200 years ago by my illustrious countryman Ruđer Bošković, the great philosopher, who, not withstanding other and multifold obligations, wrote a thousand volumes of excellent literature on a vast variety of subjects. Bošković dealt with relativity, including the so-called time-space continuum ...'.[೮೦]

ನಿರ್ದೇಶಿತ-ಚೈತನ್ಯ/ವಿದ್ಯುಚ್ಛಕ್ತಿ ಶಸ್ತ್ರ

[ಬದಲಾಯಿಸಿ]

ನಂತರದ ಜೀವನದಲ್ಲಿ, ಟೆಸ್ಲಾರು "ದೂರ-ಶಕ್ತಿ" ಶಸ್ತ್ರವೊಂದರ ಬಗ್ಗೆ ಗಮನಾರ್ಹವಾದ ಪ್ರತಿಪಾದನೆಯೊಂದನ್ನು ಮಾಡಿದ್ದರು.[೮೧] ಪತ್ರಿಕಾರಂಗವು ಇದನ್ನು "ಶಾಂತಿ ಕಿರಣ" ಅಥವಾ ಸಾವಿನ ಕಿರಣವೆಂದು ಕರೆದಿತ್ತು.[೮೨][೮೩] ಒಟ್ಟಾರೆಯಾಗಿ ಇದಕ್ಕೆ ಸಂಬಂಧಿಸಿದ ಘಟಕಗಳು ಮತ್ತು ವಿಧಾನಗಳಲ್ಲಿ ಕೆಳಕಂಡವು ಸೇರಿದ್ದವು :[೮೪][೮೫]

  • ಹಿಂದೆ ಭಾರಿ ನಿರ್ವಾತದಲ್ಲಿ ಮಾತ್ರ ಸಾಧ್ಯವಿದ್ದ ಚೈತನ್ಯ/ವಿದ್ಯುಚ್ಛಕ್ತಿಗಳ ಪ್ರಕಟನೆಯನ್ನು ಮುಕ್ತಗಾಳಿಯಲ್ಲಿ ಸಾಧ್ಯವಾಗಿಸುವಂತಹಾ ಉಪಕರಣ. ಟೆಸ್ಲಾರ ಪ್ರಕಾರ ಇದನ್ನು ೧೯೩೪ರಲ್ಲಿ ಸಾಧಿಸಲಾಗಿತ್ತು.
  • ಪ್ರಚಂಡ ವಿದ್ಯುತ್ತಿನ ಬಲವನ್ನು ಉತ್ಪಾದಿಸುವ/ವಿದ್ಯುನ್ಮಂಡಲದ ಯಾಂತ್ರಿಕ ವ್ಯವಸ್ಥೆ. ಟೆಸ್ಲಾರ ಪ್ರಕಾರ ಇದನ್ನೂ ಸಾಧಿಸಲಾಗಿತ್ತು.
  • ಎರಡನೇ ಯಾಂತ್ರಿಕ ವ್ಯವಸ್ಥೆಯ ಮೂಲಕ ಉತ್ಪಾದಿಸಲ್ಪಟ್ಟ ವಿದ್ಯುಚ್ಛಕ್ತಿಯನ್ನು ತೀಕ್ಷ್ನಗೊಳಿಸುವಿಕೆ ಹಾಗೂ ವರ್ಧಿಸುವಿಕೆ.
  • ವಿದ್ಯುತ್ತಿನ ಪ್ರಚಂಡ ಹಿಮ್ಮೆಟ್ಟಿಸುವ ಬಲವನ್ನು ಉತ್ಪಾದಿಸುವ ನವೀನ ವಿಧಾನ. ಇದು ಆವಿಷ್ಕರಿಸುವಿಕೆಯ ಪ್ರಕಾರ ಪ್ರಕ್ಷೇಪಕ ಅಥವಾ ಬಂದೂಕು ಆಗಬಹುದಾಗಿತ್ತು.

೧೯೦೦ರ ದಶಕದ ಆದಿಯಿಂದ ತಮ್ಮ ಸಾವಿನವರೆಗೂ ನಿರ್ದೇಶಿತ-ಚೈತನ್ಯ/ವಿದ್ಯುಚ್ಛಕ್ತಿ ಶಸ್ತ್ರವನ್ನು ನಿರ್ಮಿಸುವ ಯೋಜನೆಗಳಲ್ಲಿ ಟೆಸ್ಲಾರು ಮಗ್ನರಾಗಿದ್ದರು. ವಿದ್ಯುದಾವೇಶವನ್ನು ಹೊಂದಿರುವ ಕಣಗಳ ಪ್ರಭೆಯ ಮೇಲೆ ಕೇಂದ್ರೀಕೃತವಾಗಿದ್ದ "ದ ಆರ್ಟ್‌ ಆಫ್‌‌ ಪ್ರೊಜೆಕ್ಟಿಂಗ್‌ ಕಾನ್ಸೆಂಟ್ರೇಟೆಡ್‌ ನಾನ್‌-ಡಿಸ್ಪರ್ಸೀವ್‌ ಎನರ್ಜಿ ಥ್ರೂ ದ ನ್ಯಾಚುರಲ್‌ ಮೀಡಿಯಾ " ಎಂಬ ಶೀರ್ಷಿಕೆಯ ಗ್ರಂಥವನ್ನು ೧೯೩೭ರಲ್ಲಿ ಟೆಸ್ಲಾರು ಬರೆದರು.[೮೬] "ಎಲ್ಲಾ ಯುದ್ಧಗಳನ್ನು ಕೊನೆಗೊಳಿಸುವಂತಹಾ ಮಹತ್‌ಶಸ್ತ್ರ"ದ ತಾಂತ್ರಿಕ ವಿವರಣೆಯನ್ನು ನಿರೂಪಿಸುವ ಉದ್ದೇಶದಿಂದ ಈ ಗ್ರಂಥವನ್ನು ಟೆಸ್ಲಾರು ಪ್ರಕಟಿಸಿದ್ದರು. ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದ ಸಾರ್ವಜನಿಕ ಅಭಿಲೇಖಾಗಾರದಲ್ಲಿ ಕಣಗಳ ಪ್ರಭೆಯನ್ನು ವಿವರಿಸಿರುವ ಈ ಗ್ರಂಥವಿದೆ. ಕಣಗಳನ್ನು ಹೊರಬಿಡುವಂತೆ ವಿನ್ಯಾಸಗೊಳಿಸಲಾಗಿದ್ದ ಅನಿಲ ಬುಗ್ಗೆಯ ಬಿರಡೆಗಳನ್ನು ಹೊಂದಿರುವ ಮುಕ್ತ ತುದಿಗಳಿರುವ ನಿರ್ವಾತ ಕೊಳವೆ, ಕಣಗಳನ್ನು ದಶಲಕ್ಷ ವೋಲ್ಟ್‌ಗಳಷ್ಟು ವಿದ್ಯುದಾವೇಶಕ್ಕೆ ಒಳಗಾಗಿಸುವಂತೆ ಮಾಡುವ ಹಾಗೂ ಚೆದುರದ ಕಣಗಳ ಕಣದಂಡಗಳನ್ನು ನಿರ್ದೇಶಿಸುವ ವಿಧಾನಗಳನ್ನು ಈ ಗ್ರಂಥವು ವಿವರಿಸಿತ್ತು (ಸ್ಥಾಯಿವಿದ್ಯುತ್ತಿನ ವಿಕರ್ಷಣೆಯ ಮೂಲಕ).[೮೭]

ಅವರ ದಾಖಲೆಗಳು ಸೂಚಿಸುವ ಪ್ರಕಾರ (ಅವರ ವರ್ಧನಾ ಪರಿವರ್ತಕದ ವಿಧಾನವನ್ನು ಹೋಲುವಂತಹಾ) ಇದು ಉನ್ನತ ವಿಭವಾಂತರದ ಮೂಲಕ ವೇಗೋತ್ಕರ್ಷಕ್ಕೆ ಒಳಪಡಿಸಿದ ದ್ರವೀಕೃತ ಪಾದರಸ ಅಥವಾ ಟಂಗ್‌ಸ್ಟನ್‌ನ ಅಣುಗಳ ಗೊಂಚಲುಗಳ ಕಿರಿದಾದ ರಶ್ಮಿದಂಡದ ಮೇಲೆ ಆಧಾರಿತವಾಗಿತ್ತು. ಕಣಗಳ ಬಂದೂಕಿನ ಕಾರ್ಯವೈಖರಿ ಯ ಬಗ್ಗೆ ಟೆಸ್ಲಾರು ಕೆಳಕಂಡಂತೆ ವಿವರಣೆಯನ್ನು ಕೊಟ್ಟಿದ್ದರು:

[The nozzle would] send concentrated beams of particles through the free air, of such tremendous energy that they will bring down a fleet of 10,000 enemy airplanes at a distance of 200 miles from a defending nation's border and will cause armies to drop dead in their tracks.[೮೮]

ಈ ಶಸ್ತ್ರವನ್ನು ಕಾಲಾಳುದಳ ಮೇಲೆ ಅಥವಾ ವಿಮಾನನಿರೋಧಕ ಉದ್ದೇಶಗಳಿಗಾಗಿ ಬಳಸಬಹುದಾಗಿದೆ.[೮೯] US ರಕ್ಷಣಾ ಇಲಾಖೆಗೆ ಈ ಸಾಧನದ ಬಗ್ಗೆ ಆಸಕ್ತಿಯನ್ನು ಉದ್ದೀಪಿಸಲು ಟೆಸ್ಲಾರು ಪ್ರಯತ್ನಿಸಿದ್ದರು.[೯೦] ಐರೋಪ್ಯ ರಾಷ್ಟ್ರಗಳ ಮುಂದೆಯೂ ಅವರು ತಮ್ಮ ಆವಿಷ್ಕಾರದ ಪ್ರಸ್ತಾಪವನ್ನು ಇಟ್ಟಿದ್ದರು.[೯೧] ಇವುಗಳಲ್ಲಿ ಯಾವುದೇ ಸರಕಾರವು ಈ ಸಾಧನವನ್ನು ಅಭಿವೃದ್ಧಿಪಡಿಸುವ ಗುತ್ತಿಗೆಯನ್ನು ಖರೀದಿಸಲು/ಕೊಡಲು ಒಪ್ಪಲಿಲ್ಲ. ತಮ್ಮ ಯೋಜನೆಗಳ ಪ್ರಕಾರ ಅವರಿಗೆ ಮುಂದುವರೆಯಲು ಸಾಧ್ಯವಾಗಲಿಲ್ಲ.[೯೨]

ಸೈದ್ಧಾಂತಿಕ ಆವಿಷ್ಕಾರಗಳು

[ಬದಲಾಯಿಸಿ]

ಟೆಸ್ಲಾ'ರ ಸಿದ್ಧಾಂತೀಕರಿಸಿದ ಆವಿಷ್ಕಾರಗಳಲ್ಲಿ ಮತ್ತೊಂದು ಆವಿಷ್ಕಾರವೆಂದರೆ ಐಯಾನ್‌-ಪ್ರೊಪೆಲ್ಲ್‌ಡ್‌‌ ವಿಮಾನವನ್ನು ಹೋಲುತ್ತಿದ್ದ ಟೆಸ್ಲಾ'ರ ಹಾರುವ ಯಂತ್ರ ಎಂದು ಕರೆಯಲ್ಪಡುವ ಯಂತ್ರವಾಗಿದೆ.[೯೩] ವಿಮಾನದ ಎಂಜಿನ್‌, ರೆಕ್ಕೆಗಳು, ಮಡಿಚುರೆಕ್ಕೆಗಳು, ನೋದಕಗಳು ಅಥವಾ ವಿಮಾನದಲ್ಲಿಯೇ ಲಭ್ಯವಿರುವ ಇಂಧನ ಮೂಲಗಳಿಲ್ಲದೇ ಹಾರಬಲ್ಲ ಹಾರುವ ಯಂತ್ರವನ್ನು ಕಂಡುಹಿಡಿಯುವುದು ತನ್ನ ಜೀವನದ ಗುರಿಗಳಲ್ಲಿ ಒಂದೆಂಬುದಾಗಿ ಟೆಸ್ಲಾರು ಪ್ರತಿಪಾದಿಸಿದ್ದರು. ಮೊದಲಿಗೆ, ಟೆಸ್ಲಾರು ಭೂನೆಲೆಗಳು ನೀಡುವ ವಿದ್ಯುತ್‌‌ ಮೋಟಾರ್‌‌ ವಿದ್ಯುಚ್ಛಕ್ತಿಯನ್ನು ಬಳಸಿಕೊಂಡು ಹಾರಬಲ್ಲ ವಿಮಾನದ ಕಲ್ಪನೆಯ ಬಗ್ಗೆ ಚಿಂತಿಸಿದ್ದರು. ಕಾಲ ಕಳೆದಂತೆ, ಟೆಸ್ಲಾರು ಬಹುಶಃ ಅಂತಹಾ ಒಂದು ವಿಮಾನವು ಸಂಪೂರ್ಣವಾಗಿ ವಿದ್ಯುದ್ಯಾಂತ್ರಿಕವಾಗಿ ಚಾಲನೆಯಾಗುವಂತಹುದಾಗಿರುತ್ತದೆ ಎಂದು ಭಾವಿಸಿದ್ದರು. ಹೀಗೆ ಸಿದ್ಧಾಂತೀಕರಿಸಿದ ಯಂತ್ರವು ಸಿಗಾರ್‌/ಚುಟ್ಟಾ ಅಥವಾ ಬಟ್ಟಲರೂಪವನ್ನು ಹೊಂದಿರುತ್ತದೆ.[೯೪]

ವೈಯಕ್ತಿಕ ಜೀವನ

[ಬದಲಾಯಿಸಿ]
ಟೆಸ್ಲಾ'ರ ತಂದೆ ಮಿಲುಟಿನ್‌ ಟೆಸ್ಲಾ

ಅನೇಕ ಭಾಷೆಗಳಲ್ಲಿ ಟೆಸ್ಲಾರವರು ನಿರರ್ಗಳವಾಗಿ ಸಂಭಾಷಿಸಬಲ್ಲವರಾಗಿದ್ದರು. ಸರ್ಬಿಯನ್‌ ಭಾಷೆಯ ಜೊತೆಗೆ ಅವರು : ಝೆಕ್‌, ಆಂಗ್ಲ, ಫ್ರೆಂಚ್‌‌, ಜರ್ಮನ್‌, ಹಂಗೇರಿಯನ್‌, ಇಟಾಲಿಯನ್‌ ಮತ್ತು ಲ್ಯಾಟಿನ್‌ ಎಂಬ ಏಳು ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು.

ಆಂತರಿಕ ನಿರ್ಬಂಧ ಮನೋವ್ಯಾಧಿಯನ್ನು,[೯೫] ಹೊಂದಿರಬಹುದವರಾಗಿದ್ದ ಟೆಸ್ಲಾರು ಅನೇಕ ಅಸಾಧಾರಣ ವರ್ತನೆಗಳು ಮತ್ತು ಭೀತಿವ್ಯಾಧಿಯ ಲಕ್ಷಣಗಳನ್ನು ತೋರ್ಪಡಿಸಿರುತ್ತಿದ್ದರು. ಅವರು ಮೂರಕ್ಕೆ ಸಂಬಂಧಪಟ್ಟ ಹಾಗೆ ತಮ್ಮೆಲ್ಲಾ ಚಲನವಲನಗಳನ್ನು ಹೊಂದಿಸಿಕೊಳ್ಳುತ್ತಿದ್ದರಲ್ಲದೇ ಹೋಟೆಲುಗಳಲ್ಲಿ ಮೂರರಿಂದ ಭಾಗವಾಗಬಲ್ಲ ಸಂಖ್ಯೆಯ ಕೋಣೆಯೇ ಬೇಕೆಂದು ಪಟ್ಟುಹಿಡಿಯುತ್ತಿದ್ದರು. ಆಭರಣಗಳನ್ನು ಕಂಡರೆ ಅಸಹ್ಯಪಟ್ಟು ದೈಹಿಕವಾಗಿ ಕೂಡ ದೂರವಿರುತ್ತಿದ್ದ ಟೆಸ್ಲಾರು ಗಮನಾರ್ಹವಾಗಿ ಮುತ್ತುಗಳ ಕಿವಿಲೋಲಾಕುಗಳ ಬಗ್ಗೆ ಜಿಗುಪ್ಸೆ ಹೊಂದಿದ್ದರು.[೯೬] ಸ್ವಚ್ಛತೆ ಹಾಗೂ ನೈರ್ಮಲ್ಯಗಳ ಬಗ್ಗೆ ತುಂಬ ಅತಿ ನಾಜೂಕಿನವರಾಗಿರುತ್ತಿದ್ದ ಅವರು ಯಾವರೀತಿಯಲ್ಲಿ ನೋಡಿದರೂ ಹೊಲಸುಭೀತಿಯಿಂದ ಪೀಡಿತರಾಗಿದ್ದರು.

ಪಾರಿವಾಳಗಳ ಬಗ್ಗೆ ಭಾರೀ ಒಲವನ್ನು ಹೊಂದಿದ್ದ ಟೆಸ್ಲಾರು, ಸೆಂಟ್ರಲ್‌ ಪಾರ್ಕ್ ‌ಉದ್ಯಾನದಲ್ಲಿ ಪಾರಿವಾಳಗಳಿಗೆ ತಾವು ತಿನ್ನಿಸಲು ವಿಶೇಷ ಬೀಜಗಳನ್ನು ತರಿಸುತ್ತಿದ್ದರಲ್ಲದೇ ತಮ್ಮೊಂದಿಗೆ ಅವುಗಳಲ್ಲಿ ಕೆಲವನ್ನು ಹೋಟೆಲ್‌ ಕೋಣೆಗೆ ಕರೆದೊಯ್ಯುತ್ತಿದ್ದರು. ಪ್ರಾಣಿ-ಪ್ರೇಮಿಗಳಾಗಿದ್ದ ಟೆಸ್ಲಾರು, "ದ ಮ್ಯಾಗ್ನಿಫಿಷಿಯೆಂಟ್‌ ಮಕಾಕ್‌" ಎಂದು ತಾವು ಕರೆಯುತ್ತಿದ್ದ ಬಾಲ್ಯದ ಬೆಕ್ಕೊಂದರ ಬಗ್ಗೆ ತಮಗಿದ್ದ ಒಲವನ್ನು ಆಗಾಗ ವ್ಯಕ್ತಪಡಿಸುತ್ತಿದ್ದರು. ಟೆಸ್ಲಾರು ಮದುವೆಯನ್ನೇ ಮಾಡಿಕೊಂಡಿರಲಿಲ್ಲ. ಅವರೋರ್ವ ಬ್ರಹ್ಮಚಾರಿಯಾಗಿದ್ದರಲ್ಲದೇ ತಮ್ಮ ವೈಜ್ಞಾನಿಕ ಸಾಮರ್ಥ್ಯಗಳಿಗೆ ತಮ್ಮ ನೈತಿಕ ಪರಿಶುದ್ಧತೆಯು ಬಹಳ ಸಹಾಯವನ್ನು ಮಾಡಿದೆ ಎಂದು ಪ್ರತಿಪಾದಿಸುತ್ತಿದ್ದರು.[೨೧] ಅದೇನೇ ಆದರೂ ಟೆಸ್ಲಾ'ರ ಅನುರಾಗವನ್ನು ಪಡೆಯಲು ಅನೇಕ ಮಹಿಳೆಯರು ಸ್ಪರ್ಧಿಸುತ್ತಿದ್ದರಲ್ಲದೇ, ಅವರಲ್ಲಿ ಕೆಲವರು ಆತನನ್ನು ಅತಿಯಾಗಿ ಪ್ರೇಮಿಸುತ್ತಿದ್ದರು. ಸಭ್ಯರೇ ಆಗಿದ್ದರೂ ಟೆಸ್ಲಾರು, ಪ್ರಣಯ ಭಾವಕ್ಕೆ ಸಂಬಂಧಿಸಿದಂತೆ ಈ ಮಹಿಳೆಯರೊಡನೆ ಉಭಯಭಾವದೊಂದಿಗೆ ನಡೆದುಕೊಳ್ಳುತ್ತಿದ್ದರು.

ಸಾಮಾನ್ಯವಾಗಿ ತಮ್ಮದೇ ಪ್ರಪಂಚದಲ್ಲಿರುತ್ತಿದ್ದ ಟೆಸ್ಲಾರು ಸಾಧಾರಣವಾಗಿ ಮೃದುಭಾಷಿಯಾಗಿದ್ದರು. ಅವರು ಸಾಮಾಜಿಕ ಜೀವನದಲ್ಲಿ ತೊಡಗಿಕೊಂಡಾಗ, ಅನೇಕರು ಅವರ ಬಗ್ಗೆ ಧನಾತ್ಮಕವಾಗಿ ಹಾಗೂ ಮೆಚ್ಚುಗೆಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. "ಪ್ರತ್ಯೇಕಿಸಿದ ಸುಮಧುರತೆ, ನಿಷ್ಕಾಪಟ್ಯ, ವಿನಯ, ಸಜ್ಜನಿಕೆ, ಉದಾರತೆ ಮತ್ತು ಬಲಾಢ್ಯತೆ"ಗಳನ್ನು ಹೊಂದಿರುವ ವ್ಯಕ್ತಿಯೆಂದು ರಾಬರ್ಟ್‌‌ ಅಂಡರ್‌ವುಡ್‌‌ ಜಾನ್ಸನ್‌‌ರು ಅವರನ್ನು ವರ್ಣಿಸಿದ್ದರು. ಅವರ ನಿಷ್ಠ ಕಾರ್ಯದರ್ಶಿ, ಡೊರೊತಿ ಸ್ಕೆರ್ರೆಟ್‌ರವರು : "ಅವರ ಸ್ನೇಹಪರ ಮುಗುಳ್ನಗೆ ಮತ್ತು ಉತ್ತಮ ನಡತೆಗಳು ಅವರ ಆತ್ಮದಲ್ಲಿಯೇ ಹುದುಗಿರುವ ಸಜ್ಜನಿಕೆಯ ಗುಣಲಕ್ಷಣಗಳನ್ನು ಯಾವಾಗಲೂ ಸೂಚಿಸುತ್ತಿರುತ್ತಿದ್ದವು" ಎಂದು ಹೇಳಿದ್ದರು. "ಕವಿ, ತತ್ವಶಾಸ್ತ್ರಜ್ಞ, ಉತ್ತಮ ಸಂಗೀತದ ಗುಣಗ್ರಾಹಿ, ಓರ್ವ ಬಹುಭಾಷಾಭಿಜ್ಞ, ಮತ್ತು ಆಹಾರ ಮತ್ತು ಪಾನೀಯಗಳ ರಸಜ್ಞರೂ ಆಗಿರುವ ವಿಜ್ಞಾನಿ ಅಥವಾ ಅಭಿಯಂತರರನ್ನು ಅಪರೂಪಕ್ಕೊಮ್ಮೆ ಮಾತ್ರವೇ ಕಾಣಲು ಸಾಧ್ಯ" ಎಂದು ಟೆಸ್ಲಾ'ರ ಸ್ನೇಹಿತ ಹಾಥೋರ್ನ್‌ರು ಬರೆದಿದ್ದರು.

ಅದೇನೇ ಆಗಲಿ, ಟೆಸ್ಲಾ ಕೆಲವೊಮ್ಮೆ ಕ್ಷಣಕಾಲದ ಕ್ರೂರತೆಯನ್ನೂ ತೋರುತ್ತಿದ್ದರು; ಭಾರೀತೂಕದ ವ್ಯಕ್ತಿಗಳ ಕುರಿತ ತಮ್ಮ ಅಸಮಾಧಾನವನ್ನು ಮುಕ್ತವಾಗಿಯೇ ವ್ಯಕ್ತಪಡಿಸುತ್ತಿದ್ದ ಅವರು, ಒಮ್ಮೆ ಓರ್ವ ಕಾರ್ಯದರ್ಶಿಯನ್ನು ಆಕೆಯ ಭಾರೀತೂಕದ ಕಾರಣದಿಂದಾಗಿಯೇ ಕೆಲಸದಿಂದ ತೆಗೆದಿದ್ದರು.[೨೧]: 110  ಇತರರ ವಸ್ತ್ರಶೈಲಿಯ ಬಗ್ಗೆಯೂ ತ್ವರಿತವಾಗಿ ಟೀಕೆಯನ್ನು ಮಾಡುತ್ತಿದ್ದ ಅವರು, ಅನೇಕ ಸಂದರ್ಭಗಳಲ್ಲಿ ತಮ್ಮ ಅಧೀನ ಉದ್ಯೋಗಿಯನ್ನು ಮನೆಗೆ ಹೋಗಿ ಬಟ್ಟೆ ಬದಲಿಸಿ ಬರಲು ಒತ್ತಾಯಿಸುತ್ತಿದ್ದರು.[೨೧]

ತಮ್ಮ ಭಾರೀ ಪ್ರದರ್ಶನಪ್ರಿಯತೆಗಾಗಿಯೂ ವ್ಯಾಪಕವಾಗಿ ಹೆಸರಾಗಿದ್ದ ಟೆಸ್ಲಾರು ಬಹುತೇಕ ಜಾದೂಗಾರರು ತಮ್ಮ ಕಲೆಗಳನ್ನು ಪ್ರದರ್ಶಿಸುವ ರೀತಿಯಲ್ಲೇ ತಮ್ಮ ನವೀನ ಶೋಧನೆಗಳನ್ನು ಹಾಗೂ ಪ್ರಾತ್ಯಕ್ಷಿಕೆಗಳನ್ನು ಸಾರ್ವಜನಿಕರ ಮುಂದೆ ಪ್ರದರ್ಶಿಸುತ್ತಿದ್ದರು. ಇದು ಅವರ ಏಕಾಂತಪ್ರಿಯತೆಯ ಸ್ವಭಾವಕ್ಕೆ ವಿರುದ್ಧವಾಗಿರುವುದರಿಂದ, ಟೆಸ್ಲಾರವರು ಓರ್ವ ಸಂಕೀರ್ಣ ವ್ಯಕ್ತಿಯೆನಿಸಿಕೊಂಡಿದ್ದರು. ಎಲ್ಲವೂ ಸುರಕ್ಷಿತವೆಂದು ಅವರು ಖಾತ್ರಿಪಡಿಸಿದ್ದರೂ ಬಹುತೇಕ ವೇಳೆ ಸಭಿಕರು ಭಯಭೀತರಾಗಿರುತ್ತಿದ್ದರೂ ಕೋಣೆಯುದ್ದಕ್ಕೂ ತಮ್ಮ ಟೆಸ್ಲಾ ಸುರುಳಿಯು ವಿದ್ಯುಚ್ಛಕ್ತಿಯನ್ನು ಹೊರಚೆಲ್ಲುವ/ಸ್ಫೋಟಿಸುವ ಪ್ರಕ್ರಿಯೆಯಿಲ್ಲದೆಯೇ ತಮ್ಮ ಸಭೆಗಳನ್ನು ಆರಂಭಿಸಲು ನಿರಾಕರಿಸುತ್ತಿದ್ದರು.

ಟೆಸ್ಲಾ'ರ ಪ್ರಯೋಗಾಲಯದಲ್ಲಿ ಮಾರ್ಕ್‌ ಟ್ವೈನ್‌, 1894ರ ಆದಿಯ ಅವಧಿಯಲ್ಲಿ

ಮಾರ್ಕ್‌ ಟ್ವೈನ್‌ರೊಡನೆ ಇದ್ದ ಸ್ನೇಹವು ಟೆಸ್ಲಾರು ಮಧ್ಯವಯಸ್ಸಿನಲ್ಲಿರುವಾಗ ಮತ್ತಷ್ಟು ಗಾಢವಾಯಿತು. ಆತನ ಪ್ರಯೋಗಾಲಯ ಮತ್ತು ಇತರೆಡೆಗಳಲ್ಲಿ ಅವರು ಸಾಕಷ್ಟು ಸಮಯ ಒಟ್ಟಿಗೆ ಕಳೆಯುತ್ತಿದ್ದರು.

ಎಡಿಸನ್‌ರೊಂದಿಗಿನ ತಮ್ಮ ಭಿನ್ನಾಭಿಪ್ರಾಯದ ಘಟನೆಗಳ ನಂತರ ಟೆಸ್ಲಾರು ಕಹಿಮನಃಸತ್ವದವರಾಗಿಯೇ ಉಳಿದರು. ಎಡಿಸನ್‌ ಮಡಿದ ಮರುದಿನ ನ್ಯೂಯಾರ್ಕ್‌‌ ಟೈಮ್ಸ್‌ ಪತ್ರಿಕೆ ಯು ಎಡಿಸನ್‌'ರ ಜೀವನದ ಬಗ್ಗೆ ಸವಿಸ್ತಾರ ಲೇಖನವನ್ನು ಪ್ರಕಟಿಸಿತು, ಅದರಲ್ಲಿ ಋಣಾತ್ಮಕ ಭಾವವಿದ್ದುದು ಟೆಸ್ಲಾರು ನೀಡಿದ್ದ ಪ್ರತಿಕ್ರಿಯೆಯಲ್ಲಿ ಮಾತ್ರ, ಅವರು ಹೀಗೆಂದಿದ್ದರು:

He had no hobby, cared for no sort of amusement of any kind and lived in utter disregard of the most elementary rules of hygiene  ... His method was inefficient in the extreme, for an immense ground had to be covered to get anything at all unless blind chance intervened and, at first, I was almost a sorry witness of his doings, knowing that just a little theory and calculation would have saved him 90 percent of the labor. But he had a veritable contempt for book learning and mathematical knowledge, trusting himself entirely to his inventor's instinct and practical American sense.[ಸೂಕ್ತ ಉಲ್ಲೇಖನ ಬೇಕು]

ತಾವು ಮಡಿಯುವುದಕ್ಕೆ ಸ್ವಲ್ಪ ಕಾಲ ಮುಂಚೆ ಎಡಿಸನ್‌ರು ಟೆಸ್ಲಾರು ತಮ್ಮ ಜ್ಞಾನಸಾಮರ್ಥ್ಯದಿಂದ ಅಭಿವೃದ್ಧಿಪಡಿಸಿದ ಉತ್ಕೃಷ್ಠ ಪರ್ಯಾಯ ವಿದ್ಯುತ್ಪ್ರವಾಹ ವ್ಯವಸ್ಥೆಯ ಬದಲಿಗೆ ಏಕಮುಖ ವಿದ್ಯುತ್ತನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದ್ದೇ ತಾವು ಮಾಡಿದ ಬಹು ದೊಡ್ಡ ಪ್ರಮಾದವೆಂದು ಹೇಳಿಕೆ ನೀಡಿದ್ದರು.[೧೦]: 19 

ರಾಬರ್ಟ್‌‌ ಅಂಡರ್‌ವುಡ್‌‌ ಜಾನ್ಸನ್‌‌ರೊಡನೆ ಉತ್ತಮ ಸ್ನೇಹವನ್ನು ಟೆಸ್ಲಾರು ಹೊಂದಿದ್ದರು. ಫ್ರಾನ್ಸಿಸ್‌ ಮಾರಿಯನ್‌ ಕ್ರಾಫರ್ಡ್‌‌, ಸ್ಟ್ಯಾನ್‌‌ಫರ್ಡ್‌ ವೈಟ್‌‌, ಫ್ರಿಟ್ಜ್‌ ಲೋವೆನ್‌ಸ್ಟೇಯನ್‌, ಜಾರ್ಜ್‌‌‌ ಷೆರ್ಫ್‌ ಮತ್ತು ಕೆನ್ನೆತ್‌ ಸ್ವೆಜೆಯವರುಗಳೊಂದಿಗೆ ಸೌಹಾರ್ದಯುತವಾದ ಸಂಬಂಧವನ್ನು ಅವರು ಹೊಂದಿದ್ದರು. ತಮ್ಮನ್ನು ವಿಶ್ವದ ಪ್ರಥಮ ಬಿಲಿಯಾಧೀಶರನ್ನಾಗಿಸಬಹುದಾಗಿದ್ದ ವೆಸ್ಟಿಂಗ್‌‌ಹೌಸ್‌‌ ಗುತ್ತಿಗೆಯನ್ನು ಅವರು ಹಠಾತ್‌ ರದ್ದುಪಡಿಸಲಿಕ್ಕೆ ಭಾಗಶಃ ಕಾರಣ ಅವರ ಭವಿಷ್ಯದ ಉಚಿತ ವಿದ್ಯುಚ್ಛಕ್ತಿ ಯೋಜನೆಯ ಮೇಲೆ ಬೀರಬಹುದಾಗಿದ್ದ ಪರಿಣಾಮಗಳಾಗಿದ್ದರೆ, ಉಳಿದ ಭಾಗ ಅದರಿಂದಾಗಿ ವೆಸ್ಟಿಂಗ್‌‌ಹೌಸ್‌‌ನ ವ್ಯವಹಾರ ನೆಲಕಚ್ಚುತ್ತಿತ್ತು ಎಂಬುದಾಗಿತ್ತು, ಅಷ್ಟೇ ಅಲ್ಲದೇ ಟೆಸ್ಲಾರಿಗೆ ಸಾಲದಾತರೊಂದಿಗೆ ವ್ಯವಹರಿಸುವ ಯಾವುದೇ ಇಚ್ಛೆಯನ್ನು ಹೊಂದಿರಲಿಲ್ಲ.

ತಮ್ಮ ಜೀವನದ ಕೊನೆಯ ಹತ್ತು ವರ್ಷಗಳನ್ನು ಟೆಸ್ಲಾರು ಹೋಟೆಲ್‌ ನ್ಯೂಯಾರ್ಕರ್‌ನ‌ ೩೩೨೭ ಸಂಖ್ಯೆಯ ೩೩ನೇ ಅಂತಸ್ತಿನಲ್ಲಿದ್ದ ಎರಡು ಕೋಣೆಗಳುಳ್ಳ ಕೊಠಡಿಯಲ್ಲಿ ಕಳೆದಿದ್ದರು. ಪ್ರತಿದಿನ ನಿರ್ದಿಷ್ಟ ಬಿಳಿಯ ಬಣ್ಣದ ಪಾರಿವಾಳವು ತನ್ನನ್ನು ಭೇಟಿ ಮಾಡುತ್ತಿದೆಯೆಂದು ಪ್ರತಿಪಾದಿಸುತ್ತಾ ಮಾನಸಿಕ ವ್ಯಾಧಿಯು ತಮ್ಮನ್ನು ಆಕ್ರಮಿಸುತ್ತಿರುವ ಲಕ್ಷಣಗಳನ್ನು ತಮ್ಮ ಜೀವನದ ಅಂತಿಮ ಹಂತದಲ್ಲಿದ್ದ ಟೆಸ್ಲಾರು ತೋರುತ್ತಿದ್ದರು. ಅವರ ಅನೇಕ ಜೀವನಚರಿತ್ರೆಕಾರರು ಆ ಪಾರಿವಾಳದ ಸಾವನ್ನು ತಮ್ಮ ಹಾಗೂ ತಮ್ಮ ಸಾಧನೆಗಳ "ಅಂತಿಮ ಸೂಚಕ "ವನ್ನಾಗಿ ಟೆಸ್ಲಾರು ಭಾವಿಸಿದ್ದರು ಎಂದು ಪ್ರಸ್ತಾಪಿಸಿದ್ದಾರೆ.

ಯುದ್ಧದ ಮರುಕಳಿಸುವಿಕೆಗೆ ಕಾರಣವನ್ನು ತೊಡೆದುಹಾಕದಿದ್ದರೆ ಯುದ್ಧಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ನಂಬಿದ್ದ ಟೆಸ್ಲಾರು ಸಾಮಾನ್ಯವಾಗಿ ಯುದ್ಧಗಳ ವಿರೋಧಿಯಾಗಿದ್ದರು.[೯೭] ಚೈತನ್ಯ/ವಿದ್ಯುಚ್ಛಕ್ತಿಯ ಬಗ್ಗೆ ಉತ್ತಮ ತಿಳುವಳಿಕೆ, ಅದರ ಸಾಗಣೆ ಮತ್ತು ಸಂವಹನಗಳನ್ನು ಸುಧಾರಿಸುವ ಮೂಲಕ ಸ್ನೇಹಪೂರ್ವಕ ಅಂತರರಾಷ್ಟ್ರೀಯ ಸಂಬಂಧಗಳನ್ನು ಉಳಿಸಿಕೊಳ್ಳಲು ಅನುವಾಗುವಂತೆ ಸಂಪರ್ಕ/ಸಂವಹನಗಳಲ್ಲಿಯಂತೆ ದೂರವನ್ನು ಕಡಿಮೆ ಮಾಡಲು ಅವರು ಯತ್ನಿಸಿದ್ದರು.[೯೮]

ತಮ್ಮ ಯುಗದ ಇತರ ಅನೇಕರಂತೆ, ಟೆಸ್ಲಾರು ಕೂಡಾ ಜೀವನದುದ್ದಕ್ಕೂ ಬ್ರಹ್ಮಚಾರಿಗಳಾಗಿದ್ದು, ಜನಾಂಗಶಾಸ್ತ್ರೀಯ ವ್ಯವಸ್ಥೆಯ ಆಯ್ದ ಪ್ರಜನನದ ಆವೃತ್ತಿಯ ಪ್ರತಿಪಾದಕರಾಗಿ ಸ್ವಯಂ-ನಿರ್ಬಂಧಿತ ಜೀವನ ನಡೆಸಿದರು. ೧೯೩೭ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿದ್ದರು:

... man's new sense of pity began to interfere with the ruthless workings of nature. The only method compatible with our notions of civilization and the race is to prevent the breeding of the unfit by sterilization and the deliberate guidance of the mating instinct .... The trend of opinion among eugenists is that we must make marriage more difficult. Certainly no one who is not a desirable parent should be permitted to produce progeny. A century from now it will no more occur to a normal person to mate with a person eugenically unfit than to marry a habitual criminal.[೯೯]

ಸಾಮಾಜಿಕವಾಗಿ ಮಹಿಳೆಯರ ದಾಸ್ಯ ಮನೋಭಾವದ ದುಷ್ಪ್ರಭಾವಗಳ ಬಗ್ಗೆ ಮತ್ತು ಲಿಂಗ ಸಮಾನತೆಯ ಬಗ್ಗೆ ಮಹಿಳೆಯರ ಹೋರಾಟದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದ ಟೆಸ್ಲಾರು ೧೯೨೬ರಲ್ಲಿ ಮನುಕುಲದ ಭವಿಷ್ಯವು "ರಾಣಿ ಜೇನುಗಳಿಂದ" ನಿರ್ಧರಿಸಲ್ಪಡುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭವಿಷ್ಯದಲ್ಲಿ ಮಹಿಳೆಯರು ಪ್ರಬಲ ಲಿಂಗವಾಗಿರುತ್ತಾರೆ ಎಂಬುದು ಅವರ ನಂಬಿಕೆಯಾಗಿತ್ತು.[೧೦೦]

ತಮ್ಮ ಜೀವನದ ತರುವಾಯದ ವರ್ಷಗಳಲ್ಲಿ ಟೆಸ್ಲಾರು ಸಸ್ಯಾಹಾರಿಯಾಗಿ ಮಾರ್ಪಟ್ಟರು. ಸೆಂಚುರಿ ಇಲ್ಲಸ್ಟ್ರೇಟೆಡ್‌ ಮ್ಯಾಗಜೀನ್‌ ನಿಯತಕಾಲಿಕೆ ಯ ಲೇಖನವೊಂದರಲ್ಲಿ ಅವರು ಹೀಗೆ ಬರೆದಿದ್ದರು : "ತರಕಾರಿಗಳನ್ನು ಬೆಳೆಯುವುದು ಖಂಡಿತವಾಗಿಯೂ ಸೂಕ್ತವಾದ ನಿರ್ಧಾರವಾಗಿದೆ, ಅದೇ ಕಾರಣದಿಂದ ನಾನು ಸ್ಥಾಪಿತ ಬರ್ಬರ ಹವ್ಯಾಸದಿಂದ ಹೊರಬರುವ ಶ್ಲಾಘನೀಯ ವಿಧಾನವೆಂದು ಸಸ್ಯಾಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದು ಭಾವಿಸಿದ್ದೇನೆ." ಬಹು ಸಂಖ್ಯೆಯ ಜನರು ಹಸಿವಿನಿಂದ ಬಳಲುತ್ತಿರುವಾಗ ಮಿತವ್ಯಯಿಯಲ್ಲದ ಮಾಂಸಾಹಾರ ಸೇವನೆಯು ತಪ್ಪು ಎಂದು ಟೆಸ್ಲಾ ಪ್ರತಿಪಾದಿಸಿದ್ದರು ; ಸಸ್ಯಾಹಾರವು "ಯಾಂತ್ರಿಕ/ದೈಹಿಕ ಮತ್ತು ಮಾನಸಿಕ ಉತ್ತಮ ಸಾಧನೆಗಳೆರಡಕ್ಕೂ [ಮಾಂಸ]ಕ್ಕಿಂತ ಶ್ರೇಷ್ಠವಾದುದು" ಎಂದೂ ಅವರು ನಂಬಿದ್ದರು. ಪ್ರಾಣಿ ಸಂಹಾರವು "ಸ್ವೇಚ್ಛಾಚಾರ ಹಾಗೂ ಕ್ರೂರತೆ"ಗಳ ಪ್ರತೀಕವಾಗಿದೆ ಎಂದೂ ಪ್ರತಿಪಾದಿಸಿದ್ದರು.[೧೦೧]

ತಮ್ಮ ಅಂತಿಮ ವರ್ಷಗಳಲ್ಲಿ ಅವರು ಬೆಳಕು, ಶಬ್ದ ಹಾಗೂ ಇತರ ಪ್ರಭಾವಗಳಿಗೆ ತೀವ್ರ ಸಂವೇದನೆಯಿಂದ ಬಳಲುತ್ತಿದ್ದರು.[೧೦೨]

ನ್ಯೂಯಾರ್ಕರ್‌‌‌ ಹೋಟೆಲ್‌ನ ೩೩೨೭ನೇ ಸಂಖ್ಯೆಯ ಕೊಠಡಿಯಲ್ಲಿ ೭ ಜನವರಿ ೧೯೪೩ರಂದು ಟೆಸ್ಲಾರು ಏಕಾಂಗಿಯಾಗಿದ್ದಾಗ ಹೃದಯಸ್ತಂಭನದಿಂದ ಮರಣಿಸಿದ್ದರು.[೧೦೩] ತಮ್ಮ AC ವಿದ್ಯುಚ್ಛಕ್ತಿಯ ಹಕ್ಕುಸ್ವಾಮ್ಯಗಳನ್ನು ಮಾರಿದ್ದರೂ, ಗಮನಾರ್ಹ ಪ್ರಮಾಣದ ಸಾಲದೊಂದಿಗೆ ಟೆಸ್ಲಾರು ಮರಣಿಸಿದ್ದರು. ಅದೇ ವರ್ಷದಲ್ಲಿ ಕೆಲ ಸಮಯದ ನಂತರ USನ ಸರ್ವೋಚ್ಚ ನ್ಯಾಯಾಲಯವು ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿ ರೇಡಿಯೋ ತಂತ್ರಜ್ಞಾನದ ಹಕ್ಕುಸ್ವಾಮ್ಯದ ಆಧಾರಭೂತವಾಗಿ ಹೊಂದುವ ಟೆಸ್ಲಾ'ರ ಹಕ್ಕುಸ್ವಾಮ್ಯ ಸಂಖ್ಯೆ ೬೪೫೫೭೬ಅನ್ನು ಎತ್ತಿಹಿಡಿಯಿತು.[೧೦೪]

ನ್ಯೂಯಾರ್ಕ್‌‌ ಮಹಾನಗರದ ಮನ್‌ಹಾಟ್ಟನ್‌ ಪ್ರದೇಶದಲ್ಲಿನ ಕ್ಯಾಥೆಡ್ರಲ್‌ ಆಫ್‌ ಸೇಂಟ್‌ ಜಾನ್‌ ದ ಡಿವೈನ್‌ ಎಂಬ ಇಗರ್ಜಿಯಲ್ಲಿ ೧೨ ಜನವರಿ ೧೯೪೩ರಂದು ಟೆಸ್ಲಾ'ರ ಶವಸಂಸ್ಕಾರವು ನಡೆಯಿತು. ಅವರ ದೇಹಕ್ಕೆ ದಹನಸಂಸ್ಕಾರವನ್ನು ನಡೆಸಿ ಅವರ ಬೂದಿಯನ್ನು ೧೯೫೭ರಲ್ಲಿ ಆಗಿನ-ಯುಗೋಸ್ಲಾವಿಯಾ ಆಗಿದ್ದ ಸರ್ಬಿಯಾದ ಬೆಲ್‌ಗ್ರೇಡ್‌ಗೆ ಕೊಂಡೊಯ್ಯಲಾಯಿತು. ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದಲ್ಲಿ ಶವಭಸ್ಮದ ಕರಂಡಕವನ್ನು ಇಡಲಾಗಿದೆ.

ಅವರ ಮರಣದ ಸ್ವಲ್ಪ ಸಮಯದ ನಂತರ ಅವರ ಸೋದರಳಿಯ ಸಾವಾ ಕೊಸಾನೋವಿಕ್‌ರು ಟೆಸ್ಲಾ'ರ ಸಂದೂಕವನ್ನು ತೆರೆದರು. ಇದಾದ ಕೆಲವೇ ದಿನಗಳಲ್ಲಿ ಟೆಸ್ಲಾ'ರ ದಾಖಲೆಗಳು ಮತ್ತು ಇತರೆ ಆಸ್ತಿಗಳನ್ನು ಅವರು ದೇಶೀಕರಿಸಿದ್ದ ಪೌರರಾಗಿದ್ದರೂ ಯುನೈಟೆಡ್‌‌ ಸ್ಟೇಟ್ಸ್‌‌'ನ ವಿದೇಶಿಯರ ಆಸ್ತಿಯ ಪಾಲನಾ ಕಛೇರಿಯು ಮುಟ್ಟುಗೋಲು ಹಾಕಿಕೊಂಡಿತಲ್ಲದೇ ಮನ್‌ಹಾಟ್ಟನ್‌ ಗೋದಾಮಿನಲ್ಲಿನ ಟೆಸ್ಲಾ'ರ ಪೌಳಿಯಲ್ಲಿಟ್ಟಿದೆ.

Dr. ಜಾನ್‌‌ G. ಟ್ರಂಪ್‌ರವರು ೧೯೪೩ರಲ್ಲಿನ ಟೆಸ್ಲಾ'ರ ಸಾವಿನ ನಂತರ ಅವರ ರಹಸ್ಯ ದಾಖಲೆಗಳನ್ನು ಪರಿಶೀಲಿಸಿದ್ದ ಪ್ರಧಾನ ಸರ್ಕಾರಿ ಅಧಿಕಾರಿಯಾಗಿದ್ದರು. ಆ ಸಮಯದಲ್ಲಿ NTRCಯ Div. ೧೪ ಭಾಗದ ಟೆಕ್ನಿಕಲ್‌‌ ಏಯ್‌ಡ್ಸ್‌, (CIA'ನ ಆಫೀಸ್‌ ಆಫ್‌ ಸೈಂಟಿಫಿಕ್‌ ಇಂಟೆಲಿಜೆನ್ಸ್‌ನ ಪೂರ್ವವರ್ತಿ ಸಂಸ್ಥೆ) ಆಫೀಸ್‌ ಆಫ್‌ ಸೈಂಟಿಫಿಕ್‌ ರಿಸರ್ಚ್‌ & ಡೆವೆಲಪ್‌ಮೆಂಟ್ ಕಛೇರಿಯ ನ್ಯಾಷನಲ್‌ ಡಿಫೆನ್ಸ್‌‌ ರಿಸರ್ಚ್‌ ಕಮಿಟಿ ಸಮಿತಿಯ ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಾ ಟ್ರಂಪ್‌ರವರು ಪ್ರಸಿದ್ಧ ವಿದ್ಯುತ್‌‌ ಅಭಿಯಂತರರಾಗಿದ್ದರು. M.I.T.ಯಲ್ಲಿ ಪ್ರಾಧ್ಯಾಪಕರೂ ಆಗಿದ್ದ ಟ್ರಂಪ್‌ರು, ಮೂವತ್ತು ಅಡಿಗಳ ಎರಡು ಗೋಪುರಗಳು ಮತ್ತು ರೈಲುಹಾದಿಯ ಪಟ್ಟಿಗಳ ಮೇಲೆ ಕೂರಿಸಿದ್ದ ೧೫-ಅಡಿಗಳ ವ್ಯಾಸದ ಎರಡು ಗೋಲ/ಚೆಂಡುಗಳನ್ನು ಹೊಂದಿದ್ದ M.I.T.'ಯ ಬೃಹತ್‌ ವಾನ್‌ ಡೆ ಗ್ರಾಫ್‌ ವಿದ್ಯುಜ್ಜನಕದ ಬಗ್ಗೆ ೧೯೩೮ರಲ್ಲಿ ಟೆಸ್ಲಾ'ರು ನೀಡಿದ ವಿಮರ್ಶೆ ಹಾಗೂ ಅದರಲ್ಲಿ ವಿಭವಾಂತರ ಮತ್ತು ವಿದ್ಯುಚ್ಛಕ್ತಿ/ಹೊಯಿಲುಗಳು ಎರಡರಲ್ಲಿಯೂ ತಮ್ಮ ಅವುಗಳಿಗೆ ಹೋಲಿಸಿದರೆ ಸಣ್ಣದಾದ ಎರಡಡಿ ಎತ್ತರದ ಸುರುಳಿಗಳು ಹೆಚ್ಚಿನ ಕ್ಷಮತೆಯನ್ನು ತೋರಬಲ್ಲವು ಎಂದು ಟೆಸ್ಲಾರು ಮಾಡಿದ್ದ ಟೀಕೆಗೆ ಮನನೊಂದಿದ್ದರು.[೧೦೫] ಮನ್‌ಹಾಟ್ಟನ್‌ ವೇರ್‌ಹೌಸ್‌ & ಸ್ಟೋರೇಜ್‌ Co.ನಲ್ಲಿದ್ದ ಟೆಸ್ಲಾ'ರ ದಾಖಲೆಗಳ ಪರಿಶೀಲನೆಯಲ್ಲಿ ಭಾಗವಹಿಸಲು ಟ್ರಂಪ್‌ರಿಗೆ ಹೇಳಲಾಯಿತು, ಈ ಬಗ್ಗೆ ಸಾಕಷ್ಟು ಸಮಯದ ನಂತರ ಹೇಳಿಕೆ ನೀಡಿದ ಟ್ರಂಪ್‌ರು ಟೆಸ್ಲಾ'ರ ಸಾವಿನ ಹತ್ತು ವರ್ಷಗಳ ಮುನ್ನ ನ್ಯೂಯಾರ್ಕರ್‌‌ ಹೋಟೆಲ್‌ನ ನೆಲಮಹಡಿಯಲ್ಲಿದ್ದ ಟೆಸ್ಲಾ'ರ ವಿಪುಲ ಆಸ್ತಿಯ ಅಥವಾ ಅವರ ಯಾವುದೇ ದಾಖಲೆಗಳ ಪರಿಶೀಲನೆಯನ್ನು ಮಾಡಲಾಗಿಲ್ಲ, ಪರಿಶೀಲನೆಯಾಗಿರುವುದು ಕೇವಲ ಅವರ ಸಾವಿನ ಸಮಯದಲ್ಲಿ ಅವರ ಬಳಿ ತಕ್ಷಣ ಸಿಗುವಂತೆ ಇದ್ದ ವಸ್ತುಗಳು ಮಾತ್ರವೇ ಎಂದಿದ್ದರು. ತಮ್ಮ ವರದಿಯಲ್ಲಿ ಹಾಗೆ ಪರಿಶೀಲನೆ ಮಾಡಿದ್ದ ದಾಖಲೆಗಳಲ್ಲಿ ಸ್ನೇಹಭಾವವಿರದ ವ್ಯಕ್ತಿಯ ಕೈಗೆ ಸಿಕ್ಕರೆ ಅಪಾಯವಾಗುವಂತಹಾ ಯಾವುದೇ ವಸ್ತುಗಳೂ ಇರಲಿಲ್ಲ ಎಂದು ಬರೆದಿದ್ದರು.[೧೦೬]

ತಮ್ಮ ಸಾವಿನ ಸಮಯದಲ್ಲಿ, ಟೆಸ್ಲಾರು US ರಕ್ಷಣಾ ಇಲಾಖೆಗೆ ಕೊಳ್ಳುವಂತೆ ಮಾಡಲು ಪ್ರಯತ್ನಿಸಿ ವಿಫಲವಾಗಿದ್ದ ದೂರಶಕ್ತಿ ಶಸ್ತ್ರ, ಅಥವಾ 'ಸಾವಿನ ಕಿರಣ'ದ ಬಗ್ಗೆ ಕೆಲಸ ಮಾಡುತ್ತಿದ್ದರು. ದೂರಶಕ್ತಿ ಶಸ್ತ್ರವು ಬಾಲ್‌ ಲೈಟ್ನಿಂಗ್‌ ಮತ್ತು ಪ್ಲಾಸ್ಮಾಗಳ ಕುರಿತಾದ ಅವರ ಸಂಶೋಧನೆಗೆ ಸಂಬಂಧಪಟ್ಟಿದ್ದಾಗಿರಬಹುದು ಹಾಗೂ ಅದನ್ನು ಕಣಪ್ರಭೆ ದಂಡದ ಶಸ್ತ್ರ ಎಂದು ಪರಿಕಲ್ಪಿಸಲಾಗಿತ್ತು. US ಸರ್ಕಾರಕ್ಕೆ ಈ ಸಾಧನದ ಮಾದರಿಯು ಅವರ ಸಂದೂಕದಲ್ಲಿ ದೊರಕಿರಲಿಲ್ಲ.

ರಕ್ಷಣಾ ಇಲಾಖೆಯು FBI ಸಂಸ್ಥೆಯನ್ನು ಸಂಪರ್ಕಿಸಿದ ನಂತರ, ಅವರ ದಾಖಲೆಗಳೆಲ್ಲವನ್ನೂ ಉನ್ನತ ರಹಸ್ಯ ದಾಖಲೆಗಳೆಂದು ಘೋಷಿಸಲಾಯಿತು. ಅಧ್ಯಕ್ಷೀಯ ಕಛೇರಿಯ ಸಲಹೆಯ ಪ್ರಕಾರ ಇದರ ಖಾಸಗಿ ಪರಿಣಾಮಗಳನ್ನು ಪ್ರತ್ಯೇಕಿಸಿಟ್ಟಿರಲಾಯಿತು; J. ಎಡ್ಗರ್‌ ಹೂವರ್‌ರು ಟೆಸ್ಲಾ'ರ ಸಂಶೋಧನೆಗಳು ಮತ್ತು ಹಕ್ಕುಸ್ವಾಮ್ಯಗಳ ಪ್ರವೃತ್ತಿಯಿಂದಾಗಿ ಈ ಸಂಗತಿಯನ್ನು ಅತ್ಯುಚ್ಚ ರಹಸ್ಯವೆಂದು ಘೋಷಿಸಿದ್ದರು.[೧೦೭] ದಾಖಲೆಯೊಂದು ತಿಳಿಯಪಡಿಸುವ ಹಾಗೆ "[ಅವರು] ವಿವಿಧ ಸ್ಥಳಗಳಲ್ಲಿ ತಮ್ಮ ಪ್ರಯೋಗಗಳಿಗೆ ಸಂಬಂಧಪಟ್ಟಿರುವ ಹಸ್ತಪ್ರತಿಗಳು ಮತ್ತು ಯೋಜನಾಪ್ರತಿಗಳಿರುವ ಸುಮಾರು ೮೦ ಪೆಟ್ಟಿಗೆ/ಸಂದೂಕಗಳನ್ನು ಇಟ್ಟಿದ್ದರೆಂದು ಭಾವಿಸಲಾಗಿದೆ [...]". ಒಟ್ಟಾರೆಯಾಗಿ ಟೆಸ್ಲಾ'ರ ಆಸ್ತಿಗಳಲ್ಲಿ ಅವರ ಸಂದೂಕದಲ್ಲಿದ್ದ ವಸ್ತುಗಳು, ಅವರ ಹೋಟೆಲ್‌ ಕೋಣೆಯಿಂದ ವಶಪಡಿಸಿಕೊಂಡ ಎರಡು ಟ್ರಕ್‌ಲೋಡ್‌ಗಳಷ್ಟು ದಾಖಲೆಗಳು ಮತ್ತು ಉಪಕರಣಗಳು, ದಾಸ್ತಾನು ಕೋಠಿಯಲ್ಲಿದ್ದ ಇನ್ನೊಂದಿಷ್ಟು ೭೫ ಪ್ಯಾಕಿಂಗ್‌ ಪೆಟಾರಿಗೂಡುಗಳು ಮತ್ತು ಸಂದೂಕಗಳು ಹಾಗೂ ಮತ್ತೊಂದು ದಾಸ್ತಾನು ಕೋಠಿಯಲ್ಲಿದ್ದ ೮೦ ದೊಡ್ಡ ಶೇಖರಣಾ ಸಂದೂಕಗಳಿದ್ದವು. ೧೯೪೩ರಲ್ಲಿ ನೌಕಾಪಡೆಯ ಹಾಗೂ ಇನ್ನಿತರ ಅನೇಕ "ಒಕ್ಕೂಟ ಸರ್ಕಾರದ ಅಧಿಕಾರಿಗಳು" ವಿದೇಶಿಯರ ಆಸ್ತಿ ಸಂರಕ್ಷಣಾ ಕೋಠಿಯಲ್ಲಿ ಎರಡು ದಿನಗಳ ಕಾಲ ಕಳೆದು ಅವುಗಳಲ್ಲಿ ಕೆಲ ದಾಖಲೆಗಳನ್ನು ಮೈಕ್ರೋಫಿಲ್ಮ್‌‌ನಲ್ಲಿ ಸಂಗ್ರಹಿಸಿದ್ದರು Oct., ೧೯೪೫ರವರೆಗೆ ಇದಷ್ಟೇ ಲಭ್ಯವಾಗಿತ್ತು.[೧೦೮]

ಸಾವಿನ ನಂತರ ಅವರ ಕೆಲವು ಸಂಶೋಧನೆಗಳ ಸಂಭಾವ್ಯ ಪ್ರಾಮುಖ್ಯತೆಗಳಿಂದಾಗಿ ಅವುಗಳನ್ನು ಪಡೆದುಕೊಳ್ಳಲು ಟೆಸ್ಲಾ'ರ ಕುಟುಂಬ ಮತ್ತು ಯುಗೋಸ್ಲಾವಿಯಾದ ದೂತಾವಾಸವು ಅಮೇರಿಕನ್‌‌ ಅಧಿಕಾರವರ್ಗದೊಡನೆ ಹೋರಾಡಬೇಕಾಯಿತು. ಅಂತಿಮವಾಗಿ Mr. ಕೊಸಾನೋವಿಕ್‌ರು ಈ ವಸ್ತುಗಳ ಸ್ವಾಧೀನತೆಯನ್ನು ಪಡೆದುಕೊಳ್ಳಲು ಯಶಸ್ವಿಯಾದರು, ಇವುಗಳನ್ನು ಈಗ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದಲ್ಲಿಡಲಾಗಿದೆ.[೧೦೯]

ಕೀರ್ತಿಪರಂಪರೆ ಹಾಗೂ ಮನ್ನಣೆಗಳು

[ಬದಲಾಯಿಸಿ]
ಝಾಗ್ರೆಬ್‌ನಲ್ಲಿ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿಟ್ಟಿರುವ ಫಲಕ.
ನ್ಯೂಯಾರ್ಕ್‌‌ ಮಹಾನಗರದ ನ್ಯೂಯಾರ್ಕರ್‌‌ ಹೋಟೆಲ್‌ನಲ್ಲಿ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿಟ್ಟಿರುವ ಫಲಕ.

ಭಾವಚಿತ್ರಗಳಿಗೆ ಕಾಣಿಸಿಕೊಳ್ಳುವ ಭಂಗಿಗಳನ್ನು ತೋರಿಸುವುದು ಅವರಿಗೆ ಇಷ್ಟವಿರಲಿಲ್ಲ, ಅವರು ಹಾಗೆ ಕೇವಲ ಒಮ್ಮೆ ಮಾತ್ರ ರಾಜಕುಮಾರಿ ವಿಲ್ಮಾ ಲ್ವಾಫ್‌-ಪಾರ್ಲಾಘಿಯವರೊಂದಿಗೆ ಭಾವಚಿತ್ರಕ್ಕೆ ಭಂಗಿ ಪ್ರದರ್ಶಿಸಿದ್ದರು.[೧೧೦] ತಮ್ಮ ಸ್ನೇಹಿತ ಕ್ರೊಯೇಷಿಯಾದ ಶಿಲ್ಪಿ ಇವಾನ್‌ ಮೆಸ್ಟ್ರೋವಿಕ್‌ರಿಂದ ತಮ್ಮ ಮೂರ್ತಿಯನ್ನು ತಯಾರಿಸಿಕೊಳ್ಳುವುದು ಅವರ ಇಚ್ಛೆಯಾಗಿತ್ತು, ಆದರೆ ಅವರು ಆಗ ಯುನೈಟೆಡ್‌‌ ಸ್ಟೇಟ್ಸ್‌‌ನಲ್ಲಿದ್ದರು, ಅದನ್ನು ನೋಡುವ ಅವಕಾಶ ಸಿಗುವ ಮುಂಚೆಯೇ ಮರಣಿಸಿದ್ದರು. ಮೆಸ್ಟ್ರೋವಿಕ್‌ರು ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯದಲ್ಲಿರುವ ಕಂಚಿನ ಎದೆಮಟ್ಟದ ವಿಗ್ರಹವೊಂದನ್ನು (೧೯೫೨) ಹಾಗೂ ಝಾಗ್ರೆಬ್‌ನಲ್ಲಿರುವ ರೂಡರ್‌ ಬಾಸ್ಕೋವಿಕ್‌ ಇನ್‌ಸ್ಟಿಟ್ಯೂಟ್‌ನಲ್ಲಿಡಲಾಗಿರುವ ಪುತ್ಥಳಿಯನ್ನು (೧೯೫೫/೫೬) ನಿರ್ಮಿಸಿದ್ದರು. ಟೆಸ್ಲಾ'ರ ಹುಟ್ಟುಹಬ್ಬದ ೧೫೦ನೇ ವಾರ್ಷಿಕೋತ್ಸವದ ಅಂಗವಾಗಿ ಝಾಗ್ರೇಬ್‌ ನಗರಕೇಂದ್ರದಲ್ಲಿರುವ ನಿಕೋಲಾ ಟೆಸ್ಲಾ ಬೀದಿಗೆ ಈ ಪ್ರತಿಮೆಯನ್ನು ಸಾಗಿಸಲಾಯಿತಲ್ಲದೇ ರೂಡರ್‌ ಬಾಸ್ಕೋವಿಕ್‌ ಇನ್‌ಸ್ಟಿಟ್ಯೂಟ್‌ಗೆ ಅದರ ಯಥಾಪ್ರತಿಯೊಂದನ್ನು ನೀಡಲಾಯಿತು. ೧೯೭೬ರಲ್ಲಿ, ಟೆಸ್ಲಾರ ಕಂಚಿನ ಪ್ರತಿಮೆಯೊಂದನ್ನು ನ್ಯೂಯಾರ್ಕ್‌‌ನಲ್ಲಿರುವ ನಯಾಗರಾ ಜಲಪಾತದ ಸಮೀಪದಲ್ಲಿ ಸ್ಥಾಪಿಸಲಾಯಿತು. ೧೯೮೬ರಲ್ಲಿ ಅಂತಹುದೇ ಪ್ರತಿಮೆಯೊಂದನ್ನು ಅವರ ತವರುನಗರ ಗಾಸ್ಪಿಕ್‌‌ನಲ್ಲಿ ಕೂಡಾ ಸ್ಥಾಪಿಸಲಾಯಿತು. thumb|left|ಸಮಕಾಲೀನ 100 ಸರ್ಬಿಯನ್‌ ದಿನಾರ್‌ ಮೌಲ್ಯದ ನೋಟಿನ ಮೇಲೆ ನಿಕೋಲಾ ಟೆಸ್ಲಾರ ಚಿತ್ರ. ಪ್ಯಾರಿಸ್‌‌ನಲ್ಲಿ ೧೯೬೦ರಲ್ಲಿ ನಡೆದ ಕಾನ್‌ಫರೆನ್ಸ್‌‌ ಗನರಲೇ ಡೆಸ್‌‌ ಪಾಯ್ಡ್‌ಸ್‌ ಎಟ್‌‌‌ ಮೆಷ್ಯೂರೆಸ್‌‌ ಸಮ್ಮೇಳನ ದಲ್ಲಿ ಟೆಸ್ಲಾ’ರ ಗೌರವಾರ್ಥವಾಗಿ ಅಯಸ್ಕಾಂತೀಯ ಕ್ಷೇತ್ರ B ಯನ್ನು ಅಳೆಯುವ (ಅಯಸ್ಕಾಂತೀಯ ಹರಿವು ಸಾಂದ್ರತೆ ಮತ್ತು ಅಯಸ್ಕಾಂತೀಯ ಚೋದನೆ ಎಂದೂ ಕರೆಯಲಾಗುತ್ತದೆ) SI ಏಕಮಾನ ಟೆಸ್ಲಾವನ್ನು (T) ಅವರ ಹೆಸರಿನಿಂದ ಕರೆಯಲಾಯಿತು. ಟೆಸ್ಲಾರು ಉಪಾಧ್ಯಕ್ಷರಾಗಿದ್ದ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌‌ ಎಂಜಿನಿಯರ್ಸ್‌ (IEEE) ಸಂಸ್ಥೆಯು ಟೆಸ್ಲಾರ ಸಾಧನೆಯನ್ನು ಗುರುತಿಸುವ ಸಲುವಾಗಿ ಪ್ರಶಸ್ತಿಯನ್ನು ರಚಿಸಿತು. IEEE ನಿಕೋಲಾ ಟೆಸ್ಲಾ ಪ್ರಶಸ್ತಿ ಎಂದು ಕರೆಯಲ್ಪಡುವ ಇದು ವಿದ್ಯುತ್ತಿನ/ವಿದ್ಯುಚ್ಛಕ್ತಿಯ ಉತ್ಪಾದನೆ ಅಥವಾ ಬಳಕೆಗೆ ಸಂಬಂಧಿಸಿದಂತೆ ಉದ್ದಾಮ ಕೊಡುಗೆಗಳನ್ನು ನೀಡಿದ ವ್ಯಕ್ತಿ ಅಥವಾ ತಂಡಗಳಿಗೆ ನೀಡಲ್ಪಡುವ, ವಿದ್ಯುತ್ತಿನ/ವಿದ್ಯುಚ್ಛಕ್ತಿಯ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲ್ಪಡುತ್ತದೆ.[೧೧೧] ಚಂದ್ರನ ದೂರದ ತುದಿಯಲ್ಲಿರುವ ಟೆಸ್ಲಾ ಕುಳಿ ಮತ್ತು ಕಿರುಗ್ರಹ ೨೨೪೪ ಟೆಸ್ಲಾಗಳಿಗೆ ಅವರ ಹೆಸರನ್ನಿಡಲಾಗಿದೆ.

ಯುಗೋಸ್ಲಾವಿಯಾದ- ಮತ್ತು ಸರ್ಬಿಯಾದ ದಿನಾರ್‌ ನೋಟುಗಳು ಮತ್ತು ನಾಣ್ಯಗಳ ಮೇಲೆ ಟೆಸ್ಲಾರನ್ನು ಚಿತ್ರಿಸಲಾಗಿದೆ. ಸರ್ಬಿಯಾದ ಬೃಹತ್‌ ವಿದ್ಯುಚ್ಛಕ್ತಿ ಸ್ಥಾವರ ಸಂಕೀರ್ಣವಾದ TPP ನಿಕೋಲಾ ಟೆಸ್ಲಾಗೆ ಗೌರವಾರ್ಥವಾಗಿ ಅವರ ಹೆಸರನ್ನು ಇಡಲಾಗಿದೆ.

ಟೆಸ್ಲಾ ಎಂಬ ಈ ಕಂಪೆನಿಯು ಹಿಂದಿನ ಝೆಕೋಸ್ಲೋವಾಕಿಯಾದಲ್ಲಿ ಒಂದು ಬೃಹತ್‌ ಸರ್ಕಾರಿ-ಸ್ವಾಮ್ಯದ ವಿದ್ಯುತಾಂತ್ರಿಕ ವಾಣಿಜ್ಯ ಒಕ್ಕೂಟವಾಗಿತ್ತು. ಟೆಸ್ಲಾ'ರ ಗೌರವಾರ್ಥವಾಗಿ ಇದಕ್ಕೆ ಹಿಂದಿದ್ದ ಎಲೆಕ್ಟ್ರಾ ಎಂಬ ಹೆಸರನ್ನು ಬದಲಿಸಿ ಅವರ ಹೆಸರನ್ನು ೭ ಮಾರ್ಚ್‌ ೧೯೪೬ರಂದು ಇಡಲಾಯಿತು. ಅದರ ಅಂಗಸಂಸ್ಥೆಗಳಲ್ಲಿ ಕೆಲವು ಈಗಲೂ ಝೆಕ್‌ ಗಣರಾಜ್ಯದಲ್ಲಿ ವ್ಯಾಪಾರವನ್ನು ನಡೆಸುತ್ತಿವೆ.

ಟೆಸ್ಲಾ ಮೋಟಾರ್ಸ್‌ ಎಂಬ ಒಂದು ವಿದ್ಯುಚ್ಛಕ್ತಿ ಚಾಲಿತ ಕಾರುಗಳ ಕಂಪೆನಿಗೆ ಟೆಸ್ಲಾರ ಗೌರವಾರ್ಥವಾಗಿ ತಮ್ಮ ಕಂಪೆನಿಗೆ ಅವರ ಹೆಸರನ್ನಿಟ್ಟುಕೊಂಡಿದೆ. ಅವರ ಜಾಲತಾಣವು ಹೀಗೆಂದು ಹೇಳುತ್ತದೆ: ಟೆಸ್ಲಾ ರೋಡ್‌ಸ್ಟರ್‌ ಎಂಬ ನಮ್ಮ ಕಾರಿನ ಸಮಾನನಾಮಕರೆಂದರೆ ಮೇಧಾವಿ ನಿಕೋಲಾ ಟೆಸ್ಲಾರವರು ಮಾತ್ರ [...] ನಿಕೋಲಾ ಟೆಸ್ಲಾರು ಇಂದು ಬದುಕಿದ್ದರೆ ನಮ್ಮ ಕಾರನ್ನು ನೋಡಿ ಅದರ ತಂತ್ರಜ್ಞಾನವನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹಾಗೂ ಅಂಗೀಕಾರಾರ್ಥವಾಗಿ ಕೂಡಾ ತಮ್ಮ ತಲೆಯಾಡಿಸುತ್ತಿದ್ದರು ಎಂಬ ನಂಬಿಕೆ ನಮಗಿದೆ. [೧೧೨]

ಟೆಸ್ಲಾ'ರ ನಿಸ್ತಂತು ಸಂಪರ್ಕ/ಸಂವಹನದಲ್ಲಿ ಪ್ರವರ್ತನಾತ್ಮಕ ಸಾಧನೆಯ ಗೌರವಾರ್ಥವಾಗಿ ಎರಿಕ್‌ಸನ್‌ನ ಕ್ರೊಯೇಷಿಯಾದ ಅಂಗಸಂಸ್ಥೆಗೆ ಕೂಡಾ 'ಎರಿಕ್‌ಸನ್‌ ನಿಕೋಲಾ ಟೆಸ್ಲಾ d.d'. (ಝಾಗ್ರೆಬ್‌ನಲ್ಲಿನ ಈ ಕಂಪೆನಿಯನ್ನು ೧೯೯೦ರ ದಶಕದಲ್ಲಿ ಎರಿಕ್‌ಸನ್‌ ಕೊಳ್ಳುವ ಮುನ್ನಾ 'ನಿಕೋಲಾ ಟೆಸ್ಲಾ' ಕಂಪೆನಿಯು ಒಂದು ದೂರವಾಣಿ ಯಂತ್ರಾಂಗ ಕಂಪೆನಿಯಾಗಿತ್ತು) ಎಂಬ ಹೆಸರನ್ನಿಡಲಾಗಿದೆ.

೨೦೦೬ರಲ್ಲಿ ವಿಜ್ಞಾನಿ ನಿಕೋಲಾ ಟೆಸ್ಲಾರ ಹುಟ್ಟುಹಬ್ಬದ ೧೫೦ನೇ ವಾರ್ಷಿಕೋತ್ಸವ ವನ್ನು UNESCO ಆಚರಿಸಿತು; ಕ್ರೊಯೇಷಿಯಾ ಮತ್ತು ಸರ್ಬಿಯಾದ ಸರ್ಕಾರಗಳು ಆ ವರ್ಷವನ್ನು ಟೆಸ್ಲಾರ ವರ್ಷ ವೆಂದು ಕೂಡಾ ಘೋಷಿಸಿದ್ದವು. ೧೦ ಜುಲೈ ೨೦೦೬ರಂದು ಆತನ ಹುಟ್ಟುಹಬ್ಬದ ವಾರ್ಷಿಕೋತ್ಸವದಂದು, ಟೆಸ್ಲಾರ ಜೀವನ ಹಾಗೂ ಸಾಧನೆಗಳಿಗೆ ಮುಡಿಪಾಗಿಟ್ಟ ಬಹುಮಾಧ್ಯಮ ಕೇಂದ್ರವೊಂದನ್ನು ಹಾಗೂ ಟೆಸ್ಲಾ'ರ ಮನೆಯೂ (ಸ್ಮಾರಕ ವಸ್ತುಸಂಗ್ರಹಾಲಯವಾಗಿ) ಸೇರಿದಂತೆ (೧೯೯೦ರ ದಶಕದ ಯುದ್ಧಗಳಿಂದ ನಾಶವಾಗಿ ಹೋಗಿದ್ದ) ಪುನರುಜ್ಜೀವಿತ ಸ್ಮಿಲ್ಜನ್‌ ಹಳ್ಳಿಯನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಯಿತು. ಟೆಸ್ಲಾ'ರ ತಂದೆಯು ಕಾರ್ಯನಿರ್ವಹಿಸಿದ್ದ St. ಪೀಟರ್‌ ಮತ್ತು ಪಾಲ್‌ರ ಪ್ರಾಂತೀಯ ಇಗರ್ಜಿಯನ್ನೂ ಕೂಡಾ ಪುನರುಜ್ಜೀವಿತಗೊಳಿಸಲಾಗಿದೆ. ವಸ್ತುಸಂಗ್ರಹಾಲಯ ಮತ್ತು ಬಹುಮಾಧ್ಯಮ ಕೇಂದ್ರಗಳು ಪೂರ್ತಿ ಟೆಸ್ಲಾ'ರ ಸಾಧನೆಗಳ ಪ್ರತಿಕೃತಿಗಳಿಂದ ತುಂಬಿಹೋಗಿವೆ. ವಸ್ತುಸಂಗ್ರಹಾಲಯವು ಬಹುತೇಕ ಟೆಸ್ಲಾರಿಂದ ಹಾಗೂ ಅವರ ಬಗ್ಗೆ ಪ್ರಕಟಿತವಾದ ಬಹುತೇಕ ಎಲ್ಲಾ ಪ್ರಕಟನೆಗಳನ್ನು ಸಂಗ್ರಹಿಸಿದೆ; ಇವುಗಳಲ್ಲಿ ಬಹುತೇಕವು ನ್ಯೂಯಾರ್ಕ್‌‌ನಲ್ಲಿರುವ ಟೆಸ್ಲಾ ಮೆಮೋರಿಯಲ್‌ ಸೊಸೈಟಿ ಸಂಸ್ಥೆಯ ಎಲ್‌ಜೂಬೋ ವುಜೋವಿಕ್‌ರು ನೀಡಿದ್ದಾಗಿವೆ. ಟೆಸ್ಲಾ'ರ ಮನೆಯ ಪಕ್ಕದಲ್ಲಿ, ಮೈಲ್‌ ಬ್ಲಾಜೆವಿಕ್‌ ಎಂಬ ಶಿಲ್ಪಿಯು ನಿರ್ಮಿಸಿದ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಸನಿಹದ ಗಾಸ್ಪಿಕ್‌‌ ನಗರದಲ್ಲಿ ಪುನರುಜ್ಜೀವಿತ ಹಳ್ಳಿ ಮತ್ತು ವಸ್ತುಸಂಗ್ರಹಾಲಯಗಳನ್ನು ಪ್ರವೇಶಕ್ಕೆ ಮುಕ್ತಗೊಳಿಸಿದ ದಿನದಂದೇ ನಿಕೋಲಾ ಟೆಸ್ಲಾರ ಹೆಸರಿನ ಉನ್ನತ ಶಿಕ್ಷಣದ ವಿದ್ಯಾಲಯವನ್ನು ತೆರೆಯಲಾಯಿತಲ್ಲದೇ ಫ್ರಾನೋ ಕ್ರಿಸಿನಿಕ್‌‌ರು ತಯಾರಿಸಿದ್ದ ಟೆಸ್ಲಾರ ಪ್ರತಿಮೆಯ (ಬೆಲ್‌ಗ್ರೇಡ್‌ನಲ್ಲಿ ಇದರ ಮೂಲಪುತ್ಥಳಿ ಇದೆ) ಪ್ರತಿಕೃತಿಯನ್ನು ಅದಕ್ಕೆ ನೀಡಲಾಯಿತು.

Google ಸಂಸ್ಥೆಯು ತನ್ನ ಹುಡುಕು ತಾಣದ ನೆಲೆಪುಟದ ತನ್ನ ಹೆಸರಿನಲ್ಲಿನ G ಅಕ್ಷರವನ್ನು ಟೆಸ್ಲಾ ಸುರುಳಿಯ ರೂಪದಲ್ಲಿ ಚಿತ್ರಿಸಿದ್ದ ಡೂಡಲ್‌ ಚಿತ್ರಣಗಳನ್ನು ಪ್ರದರ್ಶಿಸಿ ೧೦ ಜುಲೈ ೨೦೦೯ರ ಅವರ ಹುಟ್ಟಿದದಿನದಂದು ಟೆಸ್ಲಾರನ್ನು ಗೌರವಿಸಿತು.

ಹೆವಿ ಮೆಟಲ್‌ ಸಂಗೀತತಂಡ ಟೆಸ್ಲಾ ಕೂಡ ನಿಕೋಲಾ ಟೆಸ್ಲಾರ ಗೌರವಾರ್ಥವಾಗಿ ಆ ಹೆಸರನ್ನು ಇಟ್ಟುಕೊಂಡಿದೆ.

ಅವರ ಸಾವಿನ ನಂತರದ ವರ್ಷಗಳಲ್ಲಿ, ಅವರ ಶೋಧನೆಗಳು, ಸಿದ್ಧಾಂತಗಳು ಮತ್ತು ಪ್ರತಿಪಾದನೆಗಳನ್ನು ಬಳಸಿಕೊಳ್ಳಲಾಗಿದ್ದು, ಅವೈಜ್ಞಾನಿಕವೆಂದು ಪರಿಗಣಿಸಲಾಗಿದ್ದ ಅನೇಕ ಅಪ್ರಧಾನ ಸಿದ್ಧಾಂತಗಳನ್ನು ಬೆಂಬಲಿಸುವ ಉದ್ದೇಶದಿಂದ ಕೆಲವೊಮ್ಮೆ ಸೂಕ್ತವಲ್ಲದಿರುವ ಕಡೆ ಹಾಗೂ ವಿವಾದಾಸ್ಪದವಾಗಿ ಬಳಸಲಾಗಿದೆ. ಟೆಸ್ಲಾ'ರ ಸ್ವಂತ ಅಧ್ಯಯನಗಳು ಬಹುತೇಕವಾಗಿ ವಿಜ್ಞಾನವು ಒಪ್ಪುವ ಮೂಲತತ್ವಗಳು ಮತ್ತು ವಿಧಾನಗಳಿಗೆ ಒಳಪಟ್ಟಿದ್ದಿತ್ತಾದರೂ, ಅವರ ವೈಪರೀತ್ಯದ ವ್ಯಕ್ತಿತ್ವ ಹಾಗೂ ಕೆಲವೊಮ್ಮೆ ಯಥಾರ್ಥವಾಗಿರದಂತಹಾ ಪ್ರತಿಪಾದನೆಗಳು ಅವರ ಪ್ರಶ್ನಾತೀತವಾದ ಮೇಧಾಶಕ್ತಿಗಳೊಂದಿಗೆ ಸೇರಿ ಅವರನ್ನು ಅಪ್ರಧಾನ ಸಿದ್ಧಾಂತಿಗಳು ಹಾಗೂ "ಅಗೋಚರ ಜ್ಞಾನ"ದ ಗುಪ್ತಕೂಟಗಳ ಅನುಯಾಯಿಗಳಲ್ಲಿ ಪ್ರಖ್ಯಾತ ವ್ಯಕ್ತಿಯನ್ನಾಗಿ ಮಾಡಿವೆ. ಟೆಸ್ಲಾ'ರ ಜೀವಿತಾವಧಿಯಲ್ಲೇ, ಕೆಲವರು ಆತನನ್ನು ಶುಕ್ರಗ್ರಹದಿಂದ ಮನುಕುಲಕ್ಕೆ ವೈಜ್ಞಾನಿಕ ಜ್ಞಾನವನ್ನು ಧಾರೆಯೆರೆಯಲು ಭೂಮಿಗೆ ಬಂದ ದೈವಿಕ ಪ್ರಭೃತಿ ಎಂದೇ ಭಾವಿಸಿದ್ದರು.[೨೧] ಪ್ರಸ್ತುತ ಕಾಲಮಾನದಲ್ಲೂ ನುವಾಬಿಯಾನಿಸಮ್‌/ಡ್ವೈಟ್‌ ಯಾರ್ಕ್‌ರ ಸಿದ್ಧಾಂತದ ಅನುಯಾಯಿಗಳು ಈಗಲೂ ಈ ನಂಬಿಕೆಯನ್ನು ಹೊಂದಿದ್ದಾರೆ.

ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿರುವ ನಿಕೋಲಾ ಟೆಸ್ಲಾ ವಸ್ತುಸಂಗ್ರಹಾಲಯ

ಸ್ಮಾರಕಗಳು

[ಬದಲಾಯಿಸಿ]

ನ್ಯೂಯಾರ್ಕ್‌‌ನಲ್ಲಿರುವ ನಯಾಗರಾ ಜಲಪಾತದ ಬಳಿ ಟೆಸ್ಲಾರ ಸ್ಮಾರಕವೊಂದನ್ನು ಸ್ಥಾಪಿಸಲಾಗಿದೆ. ಟೆಸ್ಲಾರು ಟಿಪ್ಪಣಿಗಳ ಕಟ್ಟೊಂದನ್ನು ಓದುತ್ತಿರುವ ಭಂಗಿಯಲ್ಲಿರುವ ಈ ಸ್ಮಾರಕವು ಬೆಲ್‌ಗ್ರೇಡ್‌ ವಿಶ್ವವಿದ್ಯಾಲಯದ ವಿದ್ಯುತ್‌‌‌‌ ಶಿಲ್ಪಶಾಸ್ತ್ರ ವಿಭಾಗದ ಮುಂದಿರುವ ಸ್ಮಾರಕದ ಪ್ರತಿಕೃತಿಯಾಗಿದೆ. ಕೆನಡಾದ ಒಂಟಾರಿಯೋದಲ್ಲಿರುವ ನಯಾಗರಾ ಜಲಪಾತದ ಸಮೀಪವಿರುವ ಕ್ವೀನ್‌ ವಿಕ್ಟೋರಿಯಾ ಉದ್ಯಾನದಲ್ಲಿ ಆವರ್ತಕ/ಪರ್ಯಾಯಕದ ಭಾಗವೊಂದರ ಮೇಲೆ ನಿಂತಿರುವ ಭಂಗಿಯಲ್ಲಿರುವ ಟೆಸ್ಲಾರ ಮತ್ತೊಂದು ಸ್ಮಾರಕವನ್ನು ಸ್ಥಾಪಿಸಲಾಗಿದೆ.[೧೧೩] ಈ ಸ್ಮಾರಕವನ್ನು ಅಧಿಕೃತವಾಗಿ ೯ ಜುಲೈ ೨೦೦೬ರಂದು ಟೆಸ್ಲಾ'ರ ಹುಟ್ಟುಹಬ್ಬದ ೧೫೦ನೇ ವಾರ್ಷಿಕೋತ್ಸವದಂದು ಅನಾವರಣಗೊಳಿಸಲಾಯಿತು. ನಯಾಗರಾ ಜಲಪಾತ ಪ್ರದೇಶದ St. ಜಾರ್ಜ್‌‌‌ ಸರ್ಬಿಯನ್‌ ಇಗರ್ಜಿಯಿಂದ ಪ್ರಾಯೋಜಿತವಾದ ಈ ಸ್ಮಾರಕವನ್ನು ಒಂಟಾರಿಯೋದ ಹ್ಯಾಮಿಲ್ಟನ್‌ ನಗರದ ಲೆಸ್‌ ಡ್ರಿಸ್‌ಡೇಲ್‌ ಎಂಬುವವರು ವಿನ್ಯಾಸ ಮಾಡಿದ್ದರು. ಅಂತರರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಡ್ರಿಸ್‌ಡೇಲ್‌ರ ವಿನ್ಯಾಸವು ಆಯ್ಕೆಯಾದ ವಿಜೇತ ವಿನ್ಯಾಸವಾಗಿತ್ತು. ಬೆಲ್‌ಗ್ರೇಡ್‌ನ ಅಂತರರರಾಷ್ಟ್ರೀಯ ವಿಮಾನನಿಲ್ದಾಣವನ್ನು "ಬೆಲ್‌ಗ್ರೇಡ್‌ ನಿಕೋಲಾ ಟೆಸ್ಲಾ ವಿಮಾನನಿಲ್ದಾಣ" ಎಂದು ಕರೆಯಲಾಗುತ್ತದೆ.[೧೧೪]

ಜನಪ್ರಿಯ ಸಂಸ್ಕೃತಿಯಲ್ಲಿನ ಚಿತ್ರಣಗಳು

[ಬದಲಾಯಿಸಿ]

ಜನಪ್ರಿಯ ಸಂಸ್ಕೃತಿಯಲ್ಲಿ ಪುಸ್ತಕಗಳು, ಚಲನಚಿತ್ರಗಳು, ರೇಡಿಯೋ, TV, ಸಂಗೀತ, ಲೈವ್‌ ರಂಗಮಂದಿರ, ಸಚಿತ್ರಹಾಸ್ಯಪತ್ರಿಕೆ ಮತ್ತು ವಿಡಿಯೋಆಟಗಳಲ್ಲಿನ ಪಾತ್ರವಾಗಿ ನಿಕೋಲಾ ಟೆಸ್ಲಾರು ಕಾಣಿಸಿಕೊಂಡಿದ್ದಾರೆ. ತಮ್ಮ ಜೀವಿತಾವಧಿಯಲ್ಲಿ ಟೆಸ್ಲಾರು ಪಡೆಯದ ಮಾನ್ಯತೆಯು ಅವರನ್ನು ನಾಟಕೀಯ ರೂಪಕಗಳಿಗೆ ಸೂಕ್ತವಾದ ದುರಂತ ಹಾಗೂ ಪ್ರಭಾವೀ ಪಾತ್ರವನ್ನಾಗಿಸಿದೆ. ಟೆಸ್ಲಾರು ಸಂಶೋಧಿಸಿದ ತಂತ್ರಜ್ಞಾನಗಳ ಪ್ರಭಾವವು ವಿವಿಧ ರೀತಿಯ ವೈಜ್ಞಾನಿಕ ಕಾದಂಬರಿಗಳಲ್ಲಿ ಪುನರಾವರ್ತನೆಯಾಗುವ ಕಥಾಅಂಶವಾಗಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಟೆಸ್ಲಾರ ಹಕ್ಕುಸ್ವಾಮ್ಯಗಳ ಪಟ್ಟಿ
  • ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌ ಪತ್ರಿಕೆ
  • ಕಡಿಮೆ-ತಾಪಮಾನದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಘಟನಾವಳಿಗಳು

ಉಲ್ಲೇಖಗಳು

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. "Electrical pioneer Tesla honoured". BBC News. 2006-07-10. Retrieved 2009-08-15.
  2. "Nikola Tesla - electrical engineer and inventor". Serbian Unity Congress. Archived from the original on 2008-02-19. Retrieved ೨೦೦೯-೦೮-೧೫. {{cite web}}: Check date values in: |accessdate= (help)
  3. Valone, T. Harnessing the Wheelwork of Nature: Tesla's Science of Energy. Adventures Unlimited Press. pp. 102. ISBN ೧೯೩೧೮೮೨೦೪೫. {{cite book}}: Check |isbn= value: invalid character (help)
  4. Childress, David Hatcher (ed.) (೨೦೦೦). The Tesla Papers: Nikola Tesla on Free Energy & Wireless Transmission of Power. Kempton, IL: Adventures Unlimited Press. ISBN ೦೯೩೨೮೧೩೮೬೦. {{cite book}}: |first= has generic name (help); Check |isbn= value: invalid character (help)
  5. Robert Lomas (1999-08-21). "Spark of genius". Independent Magazine. Retrieved 2008-07-29.
  6. White MJ (೨೦೦೧). Rivals: conflict as the fuel of science. London: Secker & Warburg. p. ೧೭೪. ISBN ೦-೪೩೬-೨೦೪೬೩-೦. {{cite book}}: Check |isbn= value: invalid character (help)
  7. Cheney M (2001). Tesla : Man Out of Time. New York, NY: Touchstone. ISBN 0-7432-1536-2.
  8. Obrad Mićov Samardžić, "Porijeklo Samardžića i ostalih bratstava roda Orlovića", Mostar 1992.ISBN 86-82271-53-2. {{cite book}}: Missing or empty |title= (help)CS1 maint: multiple names: authors list (link) CS1 maint: numeric names: authors list (link)
  9. ಸೀಫೆರ್‌, "ವಿಝಾರ್ಡ್‌" p. ೭
  10. ೧೦.೦ ೧೦.೧ ಮಾರ್ಗರೇಟ್ ಚೆನೆ, ರಾಬರ್ಟ್‌ ಯುತ್‌/ಉತ್‌ ಮತ್ತು ಜಿಮ್‌‌ ಗ್ಲೆನ್‌‌, "ಟೆಸ್ಲಾ, ಮಾಸ್ಟರ್‌ ಆಫ್‌ ಲೈಟ್ನಿಂಗ್‌". ಬಾರ್ನೆಸ್‌ & ನೋಬಲ್‌ ಪಬ್ಲಿಷಿಂಗ್‌, ೧೯೯೯. ISBN ೦-೭೬೦೭-೧೦೦೫-೮
  11. ಓನೀಲ್‌/O'ನೀಲ್‌, ಜಾನ್‌‌, J. (೧೯೪೪), p, ೩೨.
  12. ವಾಕರ್‌‌, E. H. (೧೯೦೦). ಮನುಕುಲವನ್ನು ತಾಂತ್ರಿಕವಾಗಿ ಮುನ್ನಡೆಸಲು ಪ್ರಸ್ತುತ ಹಾಗೂ ಭಾವೀ ತಲೆಮಾರುಗಳಿಗೆ ಮಾರ್ಗದರ್ಶನ ನೀಡುವ ಬಗ್ಗೆ ವಿಷದವಾಗಿ ತಮ್ಮದೇ ಆದ ವಿಶಿಷ್ಟ ಗುಣಗಳಿಗಾಗಿ ಪರಿಚಿತರಾದ ಹಿಂದಿನವರುಗಳೊಂದಿಗೆ ೧೯ನೇ ಶತಮಾನದ ನಾಯಕರ, ಪ್ರಯತ್ನಗಳು, ಸಾಧನೆಗಳು. ಷಿಕಾಗೋ: A.B. ಕುಹ್ಲ್‌ಮಾನ್‌ Co., p, ೪೭೪.
  13. Wysock, W.C. (22 October 2001). "Who Was The Real Dr. Nikola Tesla? (A Look At His Professional Credentials)" (PDF). Antenna Measurement Techniques Association, posterpape. {{cite journal}}: Unknown parameter |coauthors= ignored (|author= suggested) (help)
  14. "ದ ಬುಕ್‌ ಆಫ್‌‌ ನ್ಯೂಯಾರ್ಕ್‌ : ಫಾರ್ಟಿ ಇಯರ್ಸ್‌ ರಿಕಲೆಕ್ಷನ್ಸ್‌ ಆಫ್‌ ದ ಅಮೇರಿಕನ್‌ ಮೆಟ್ರೋಪೊಲಿಸ್‌" ಪುಸ್ತಕವು ಹೇಳುವ ಪ್ರಕಾರ ಅವರು ೪ ಪದವಿಗಳನ್ನು ಪಡೆದಿದ್ದರು (ಭೌತಶಾಸ್ತ್ರ, ಗಣಿತಶಾಸ್ತ್ರ, ಯಾಂತ್ರಿಕ ಶಿಲ್ಪಶಾಸ್ತ್ರ ಮತ್ತು ವಿದ್ಯುತ್‌ ಶಿಲ್ಪಶಾಸ್ತ್ರ)
  15. ಹಾರ್ಪರ್ಸ್‌ ಎನ್‌ಸೈಕ್ಲೋಪೀಡಿಯಾ ಆಫ್‌ ಯುನೈಟೆಡ್‌ ಸ್ಟೇಟ್ಸ್‌ ಹಿಸ್ಟರಿ ಫ್ರಮ್‌ ೪೫೮ A.D. ಟು ೧೯೦೬. ಹಾರ್ಪರ್‌ & ಬ್ರದರ್ಸ್‌ ೧೯೦೫. ಪುಟ ೫೨.
  16. ನಿಕೋಲಾ ಟೆಸ್ಲಾ : ದ ಯುರೋಪಿಯನ್‌ ಇಯರ್ಸ್‌ Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ., D. ಮ್ರಿಕಿಚ್‌
  17. Wohinz, Josef W. (16 May 2006). "Nikola Tesla und Graz" (in German). Technischen Universität Graz. Retrieved 2006-01-29.{{cite web}}: CS1 maint: unrecognized language (link)
  18. Wohinz, Josef W. (Ed,) (2006). Nikola Tesla und die Technik in Graz. Graz, Austria: Verlag der Technischen Universität Graz. p.  16. ISBN 3902465395.{{cite book}}: CS1 maint: multiple names: authors list (link)
  19. Kulishich, Kosta (27 August 1931). "Tesla Nearly Missed His Career as Inventor: College Roommate Tells". Newark News.. ಸೀಫೆರ್, ಮಾರ್ಕ್‌ರ, ದ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾನಲ್ಲಿ ಉದಾಹರಿಸಲಾಗಿದೆ, ೧೯೯೬
  20. Seifer, Marc (1996). Wizard: The Life and Times of Nikola Tesla; Biography of a Genius. Secaucus, NJ: Carol Publishing Group. ISBN.
  21. ೨೧.೦ ೨೧.೧ ೨೧.೨ ೨೧.೩ ೨೧.೪ ೨೧.೫ ೨೧.೬ ೨೧.೭ ೨೧.೮ Cheney, Margaret (2001) [1979]. Tesla: Man Out of Time. Simon and Schuster. ISBN ೦೭೪೩೨೧೫೩೬೨. Retrieved 2007-06-17. {{cite book}}: Check |isbn= value: invalid character (help)
  22. ಜೇಮ್ಸ್‌‌ ಗ್ರಾಂಟ್‌ ವಿಲ್ಸನ್‌, ಜಾನ್‌ ಫಿಸ್ಕೆ, ಆಪಲ್‌ಟನ್‌ಸ್‌ ಸೈಕ್ಲೋಪೀಡಿಯಾ ಆಫ್‌ ಅಮೇರಿಕನ್‌ ಬಯೋಗ್ರಫಿ . P. ೨೬೧.
  23. "ಡಿಡ್‌ ಟೆಸ್ಲಾ ರಿಯಲಿ ಇನ್‌ವೆಂಟ್‌ ದ ಲೌಡ್‌ಸ್ಪೀಕರ್‌? ". ೨೧ಸ್ಟ್‌ ಸೆಂಚುರಿ ಬುಕ್ಸ್‌, ಬ್ರೆಕೆನ್‌ರಿಡ್ಜ್, CO.
  24. Marc J. Seifer (1998). Wizard. Citadel Press. ISBN 0806519606.
  25. "ಮಾಸ್ಟರ್‌ ಆಫ್‌ ಲೈಟ್ನಿಂಗ್‌ " ಪಬ್ಲಿಕ್‌ ಬ್ರಾಡ್‌ಕ್ಯಾಸ್ಟಿಂಗ್‌ ಸರ್ವೀಸ್‌ ಸೇವೆಯಿಂದ. ಜಾಲತಾಣ
  26. "Tesla Says Edison was an Empiricist. Electrical Technician Declares Persistent Trials Attested Inventor's Vigor. 'His Method Inefficient' A Little Theory Would Have Saved Him 90% of Labor, Ex-Aide Asserts. Praises His Great Genius". New York Times. 19 October 1931. Nikola Tesla, one of the world's outstanding electrical technicians, who came to America in 1884 to work with Thomas A. Edison, specifically in the designing of motors and generators, recounted yesterday some of ... {{cite news}}: |access-date= requires |url= (help); Cite has empty unknown parameter: |coauthors= (help)
  27. "Adjusting the reported given amount of money for inflation, the US$50,000 in 1885 would equal US$1,140,112.60 in 2007". Westegg.com. Retrieved 2010-08-01.
  28. ಕ್ಲಿಫರ್ಡ್‌ A. ಪಿಕ್‌ಓವರ್‌, ಸ್ಟ್ರೇಂಜ್‌ ಬ್ರೈನ್ಸ್‌ ಅಂಡ್‌ ಜೀನಿಯಸ್‌ : ದ ಸೀಕ್ರೆಟ್‌ ಲೈವ್ಸ್‌ ಆಫ್‌ ಎಕ್‌ಸೆಂಟ್ರಿಕ್‌ ಸೈಂಟಿ್ಸ್ಟ್‌ಸ್‌ ಅಂಡ್‌ ಮ್ಯಾಡ್‌ಮೆನ್‌ . ಹಾರ್ಪರ್‌ಕಾಲಿನ್ಸ್, ೧೯೯೯. ೩೫೨ ಪುಟಗಳು. P. ೧೪ ISBN ೦-೬೮೮-೧೬೮೯೪-೯
  29. "ಮೈ ಇನ್‌ವೆನ್ಷನ್ಸ್‌ " ಲೇಖಕ ನಿಕೋಲಾ ಟೆಸ್ಲಾ, ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌, ಫೆಬ್ರವರಿ-ಜೂನ್‌, ೧೯೧೯ಗಳಲ್ಲಿ ಮುದ್ರಿತವಾಗಿತ್ತು. ಬೆನ್‌ ಜಾನ್ಸನ್‌‌ರಿಂದ ಸಂಪಾದನೆ, ಮರುಮುದ್ರಣ, ನ್ಯೂಯಾರ್ಕ್‌ : ಬಾರ್ನೆಸ್‌ & ನೋಬಲ್‌, ೧೯೮೨. ISBN
  30. ಜಾನ್ನೆಸ್‌, "ಎಂಪೈರ್‌ ಆಫ್‌ ಲೈಟ್‌" p. ೧೧೦
  31. ೩೧.೦ ೩೧.೧ ೩೧.೨ ಹೌಸ್ಟನ್‌, E. J. (1889). A ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ವರ್ಡ್ಸ್‌, ಟರ್ಮ್ಸ್‌‌ ಅಂಡ್‌ ಫ್ರೇಸಸ್‌‌ . ನ್ಯೂಯಾರ್ಕ್‌: W.J. ಜಾನ್ಸ್‌‌ಟನ್‌‌. ಪುಟ 956.
  32. ರೂಟ್‌ಲೆಡ್ಜ್‌, R., & ಪೆಪ್ಪರ್‌, J. H. (1876). ಡಿಸ್ಕವರೀಸ್‌ ಅಂಡ್‌ ಇನ್‌ವೆನ್ಷನ್ಸ್‌ ಆಫ್‌‌ ದ ನೈನ್‌ಟೀಂತ್‌ ಸೆಂಚುರಿ. ಲಂಡನ್‌‌: G. ರೂಟ್‌ಲೆಡ್ಜ್‌ ಅಂಡ್‌ ಸನ್ಸ್. ಪುಟ 545.
  33. ಆರ್ಚೀ ಫ್ರೆಡೆರಿಕ್‌ ಕಾಲಿನ್ಸ್, ವೈರ್‌ಲೆಸ್‌ ಟೆಲಿಗ್ರಾಫಿ: ಇಟ್ಸ್‌ ಹಿಸ್ಟರಿ, ಥಿಯರಿ ಅಂಡ್‌ ಪ್ರಾಕ್ಟೀಸ್‌ . ಮೆಕ್‌ಗ್ರಾ ಪಬ್ಲಿಷಿಂಗ್‌ ಕಂಪೆನಿ, ೧೯೦೫. ಪುಟ 131.
  34. ಟೆಸ್ಲಾ, ನಿಕೋಲಾ, "A ನ್ಯೂ ಸಿಸ್ಟಮ್‌ ಆಫ್‌ ಆಲ್ಟರ್ನೇಟಿಂಗ್‌ ಕರೆಂಟ್‌ ಮೋಟಾರ್ಸ್‌ ಅಂಡ್‌ ಟ್ರಾನ್ಸ್‌ಫಾರ್ಮರ್ಸ್‌‌". ಅಮೇರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಎಂಜಿನಿಯರ್ಸ್‌, ಮೇ ೧೮೮೮.
  35. ರಾಬರ್ಟ್‌ ರೂಟ್‌ಲೆಡ್ಜ್‌, ಡಿಸ್ಕವರೀಸ್‌ ಅಂಡ್‌ ಇನ್‌ವೆನ್ಷನ್ಸ್‌ ಆಫ್‌ ನೈನ್‌ಟೀಂತ್‌ ಸೆಂಚುರಿ . G. ರೂಟ್‌ಲೆಡ್ಜ್‌ ಅಂಡ್‌ ಸನ್ಸ್, ೧೯೦೩. ಪುಟ 542.
  36. "ಟೆಸ್ಲಾಸ್‌ ಇನ್‌ವೆನ್ಷನ್‌ ಆಫ್‌ ದ ಎಲೆಕ್ಟ್ರಾನಿಕ್‌ AND ಗೇಟ್‌ ". ೨೧ಸ್ಟ್‌ ಸೆಂಚುರಿ ಬುಕ್ಸ್‌, ಬ್ರೆಕೆನ್‌ರಿಡ್ಜ್, CO. (ed ., ಇದು ಪ್ರಧಾನವಾಗಿ ವಿದ್ಯುನ್ಮಾನ ಲಾಜಿಕ್‌ ಗೇಟ್‌ಗಳಿಗೆ ಸಂಬಂಧಿಸಿದ್ದಾಗಿದೆ; ಯು.ಎಸ್ ಪೇಟೆಂಟ್ ೭೨೩,೧೮೮ ಮತ್ತು ಯು.ಎಸ್ ಪೇಟೆಂಟ್ ೭೨೫,೬೦೫)
  37. , ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್ಸ್‌, "ದ IEEE ಸ್ಟ್ಯಾಂಡರ್ಡ್‌‌ ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಟರ್ಮ್ಸ್‌ ". ೬th ed. ನ್ಯೂಯಾರ್ಕ್‌, N.Y., ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರ್ಸ್‌, c೧೯೯೭. IEEE Std ೧೦೦-೧೯೯೬. ISBN ೧-೫೫೯೩೭-೮೩೩-೬ [ed . ಸ್ಟ್ಯಾಂಡರ್ಡ್ಸ್‌ ಕೋಆರ್ಡಿನೇಟಿಂಗ್‌ ಕಮಿಟಿ 10, ಟಮ್ಸ್‌ ಅಂಡ್ ಡೆಫನೇಷನ್ಸ್‌ ; ಜೇನ್‌ ರಾಡಾಟ್ಜ್‌‌, (ಅಧ್ಯಕ್ಷ)]
  38. ಡ್ಯೂಗನ್‌, ವಿಲಿಯಮ್‌ ಜೇಮ್ಸ್, "ಹ್ಯಾಂಡ್‌-ಬುಕ್‌ ಆಫ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್ಸ್‌". F.A.ಡೇವಿಸ್‌ ಕಂಪೆನಿ, ೧೯೧೦. ಪುಟ ೧೨೩. "[...] ಸ್ಪೀಕ್‌ ಆಫ್‌ "ಟೆಸ್ಲಾ ಕರೆಂಟ್ಸ್‌ " ವೆನ್‌ ವೀ ರಿಯಲಿ ಮೀನ್‌ ದ ಹೈ ಫ್ರೀಕ್ವೆನ್ಸಿ ಕರೆಂಟ್ಸ್‌."
  39. ಸ್ನೋ, ವಿಲಿಯಮ್‌ ಬೆನ್‌ಹ್ಯಾಮ್‌, "ಕರೆಂಟ್ಸ್‌ ಆಫ್‌ ಹೈ ಪೊಟೆನ್ಷಿಯಲ್‌‌ ಆಫ್‌ ಹೈ ಅಂಡ್‌ ಅದರ್‌ ಫ್ರೀಕ್ವೆನ್ಸೀಸ್‌". ಸೈಂಟಿಫಿಕ್‌ ಆಥರ್ಸ್‌ ಪಬ್ಲಿಷಿಂಗ್‌ Co., ೧೯೧೮. ಪುಟ ೧೨೧.
  40. ನಾರ್ರೀ, H. S., "ಇಂಡಕ್ಷನ್‌ ಕಾಯಿಲ್ಸ್‌ : ಹೌ ಟು ಮೇಕ್‌, ಯೂಸ್‌, ಅಂಡ್‌ ರಿಪೇರ್‌ ದೆಮ್‌ ".ನಾರ್ಮನ್‌ H. ಷ್ನೀಡರ್‌, ೧೯೦೭, ನ್ಯೂಯಾರ್ಕ್‌. ೪ನೇ ಆವೃತ್ತಿ.
  41. ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌, ಜನವರಿ ೧೯೧೯. ಪುಟ ೬೧೫.
  42. ದ ಎಲೆಕ್ಟ್ರಿಕಲ್‌ ಎಂಜಿನಿಯರ್. (೧೮೮೪). ಲಂಡನ್‌ : ಬಿಗ್ಸ್‌ & Co. ಪುಟ 19
  43. ಬೆಂಗ್ಟ್‌ ಆಂಡರ್ಸ್ ಬೆನ್ಸನ್‌, ಪರ್ಸೆಪ್ಷನ್‌ ಆಪರೇಟಸ್‌‌ ಫಾರ್‌‌ ದ ಬ್ಲೈಂಡ್‌ , ಯು.ಎಸ್ ಪೇಟೆಂಟ್ ೩೨,೫೦,೦೨೩
  44. ಹೌಸ್ಟನ್‌, E. J. (1889). A ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ವರ್ಡ್ಸ್‌, ಟರ್ಮ್ಸ್‌‌ ಅಂಡ್‌ ಫ್ರೇಸಸ್‌‌ . ನ್ಯೂಯಾರ್ಕ್‌: W.J. ಜಾನ್ಸ್‌‌ಟನ್‌‌. ಪುಟ 801.
  45. ಹೌಸ್ಟನ್‌, E. J. (1889). A ಡಿಕ್ಷನರಿ ಆಫ್‌ ಎಲೆಕ್ಟ್ರಿಕಲ್‌ ವರ್ಡ್ಸ್‌, ಟರ್ಮ್ಸ್‌‌ ಅಂಡ್‌ ಫ್ರೇಸಸ್‌‌ . ನ್ಯೂಯಾರ್ಕ್‌: W.J. ಜಾನ್ಸ್‌‌ಟನ್‌‌. ಪುಟ 878.
  46. N. ಟೆಸ್ಲಾ, HIGH FREQUENCY OSCILLATORS FOR ELECTRO-THERAPEUTIC AND OTHER PURPOSES. ಪ್ರೊಸೀಡಿಂಗ್ಸ್‌ ಆಫ್‌ ದ ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌ , ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌. ಪುಟ ೨೫.
  47. ಗ್ರಿಫಿತ್ಸ್, ಡೇವಿಡ್‌ J. ಇಂಟ್ರೊಡಕ್ಷನ್‌ ಟು ಎಲೆಕ್ಟ್ರೋಡೈನಾಮಿಕ್ಸ್ ‌, ISBN ೦-೧೩-೮೦೫೩೨೬-X ಮತ್ತು ಜ್ಯಾಕ್ಸನ್‌, ಜಾನ್‌‌ D. ಕ್ಲಾಸಿಕಲ್‌ ಎಲೆಕ್ಟ್ರೋಡೈನಾಮಿಕ್ಸ್ , ISBN ೦-೪೭೧-೩೦೯೩೨-X.
  48. ಪ್ರೊಸೀಡಿಂಗ್ಸ್‌ ಆಫ್‌ ದ ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌ , ಅಮೇರಿಕನ್‌ ಎಲೆಕ್ಟ್ರೋ-ಥೆರಾಪ್ಯೂಟಿಕ್‌ ಅಸೋಸಿಯೇಷನ್‌. ಪುಟ ೧೬.
  49. ಜಾರ್ಜ್‌ ಫ್ರೆಡೆರಿಕ್‌ ಷ್ರೇಡಿ, ಥಾಮಸ್‌ ಲಾಥ್ರಾಪ್‌ ಸ್ಟೆಡ್‌‌ಮ್ಯಾನ್‌‌, ಮೆಡಿಕಲ್‌ ರೆಕಾರ್ಡ್ , ೧೮೯೭. ಪುಟ 287.
  50. ನಿಕೋಲಾ ಟೆಸ್ಲಾ, ಸ್ಟಾರ್ಟ್‌‌ಲಿಂಗ್‌ ಪ್ರೆಡಿಕ್ಷನ್‌ ಆಫ್‌ ದ ವರ್ಲ್ಡ್‌‌ಸ್‌‌ ಗ್ರೇಟೆಸ್ಟ್‌‌ ಲಿವಿಂಗ್‌ ಸೈಂಟಿಸ್ಟ್‌ (ಲೇಖನ, ದ ನಾರ್ತ್‌ ಅಮೇರಿಕನ್‌, ೧೮ ಮೇ ೧೯೦೨).
  51. ಪುಟಗಳು ೨೮೪-೨೮೫, ವಿಲಿಯಮ್‌ R. ಲೈನೆ, ಪೆಂಟಾಗನ್‌ ಅಲೈಯೆನ್ಸ್‌, ೧೯೯೩.
  52. A ಸರ್ವೇ ಆಫ್‌ ಲೇಸರ್‌ ಲೈಟ್ನಿಂ‌ಗ್‌ ರಾಡ್‌‌ ಟೆಕ್ನಿಕ್ಸ್‌. Archived 2008-03-27 ವೇಬ್ಯಾಕ್ ಮೆಷಿನ್ ನಲ್ಲಿ. ಬಾರ್ನೆಸ್‌, ಅರ್ನಾಲ್ಡ್‌‌ A., Jr.; ಬರ್ಥೆಲ್‌, ರಾಬರ್ಟ್‌ O.
  53. ಫ್ರೀಕ್ವೆಂಟ್ಲಿ ಆಸ್ಕ್‌ಡ್‌ ಕ್ವಶ್ಚನ್ಸ್. Archived 2008-12-07 ವೇಬ್ಯಾಕ್ ಮೆಷಿನ್ ನಲ್ಲಿ. HSV ಟೆಕ್ನಾಲಜೀಸ್
  54. ವೆಹಿಕಲ್‌ ಡಿಸೇಬಲಿಂಗ್‌ ವೆಪನ್‌ Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ. ಪೀಟರ್‌ A. ಷ್ಲೆಸಿಂಗರ್‌‌ರಿಂದ, ಅಧ್ಯಕ್ಷ, HSV ಟೆಕ್ನಾಲಜೀಸ್, Inc. NDIA ನಾನ್‌-ಲೀಥಲ್‌ ಡಿಫೆನ್ಸ್‌ IV Archived 2011-06-03 ವೇಬ್ಯಾಕ್ ಮೆಷಿನ್ ನಲ್ಲಿ. ೨೦–೨೨ ಮಾರ್ಚ್‌ ೨೦೦೦
  55. ನಾರ್ರೀ, H. S., "ಇಂಡಕ್ಷನ್‌ ಕಾಯಿಲ್ಸ್‌ : ಹೌ ಟು ಮೇಕ್‌, ಯೂಸ್‌, ಅಂಡ್‌ ರಿಪೇರ್‌ ದೆಮ್‌". ನಾರ್ಮನ್‌ H. ಷ್ನೀಡರ್‌, ೧೯೦೭, ನ್ಯೂಯಾರ್ಕ್‌. ೪ನೇ ಆವೃತ್ತಿ.
  56. ಕ್ರುಮ್ಮೆ, ಕ್ಯಾಥೆರೀನ್‌, ಮಾರ್ಕ್‌ ಟ್ವೈನ್‌ ಮತ್ತು ನಿಕೋಲಾ ಟೆಸ್ಲಾ : ಥಂಡರ್‌ ಅಂಡ್‌ ಲೈಟ್ನಿಂಗ್‌. ೪ ಡಿಸೆಂಬರ್‌‌ ೨೦೦೦ (PDF)
  57. ಗ್ರಾಟ್ಜ್‌, ಟೊಬಿ, "ದ ಇನ್‌ಫ್ಲ್ಯೂಯೆನ್ಸ್‌ ಆಫ್‌ ವೇದಿಕ್‌ ಫಿಲಾಸಫಿ ಆನ್‌ ನಿಕೋಲಾ ಟೆಸ್ಲಾ 'ಸ್‌ ಅಂಡರ್‌‌ಸ್ಟ್ಯಾಂಡಿಂಗ್‌ ಆಫ್‌ ಫ್ರೀ ಎನರ್ಜಿ ".
  58. "ಎಕ್ಸ್‌ಪೆರಿಮೆಂಟ್ಸ್‌ ವಿತ್‌ ಆಲ್ಟರ್‌ನೇಟ್‌ ಕರೆಂಟ್ಸ್‌ ಆಫ್‌ ಹೈ ಪೊಟೆನ್ಷಿಯಲ್‌ ಅಂಡ್‌ ಹೈ ಫ್ರೀಕ್ವೆನ್ಸಿ" (ಫೆಬ್ರವರಿ ೧೮೯೨))
  59. John Patrick Barrett, Electricity at the Columbian Exposition. R.R. Donnelley 1894 (World's Columbian Exposition, 1893, Chicago, Ill.) Page 168–169
  60. ವೇಸರ್‌, ಆಂಡ್ರೆ, "ನಿಕೋಲಾ ಟೆಸ್ಲಾ ’ಸ್‌ ರೇಡಿಯೇಷನ್ಸ್‌ ಅಂಡ್‌ ದ ಕಾಸ್ಮಿಕ್‌ ರೇಸ್‌ ".
  61. ಟೆಸ್ಲಾ, ನಿಕೋಲಾ, "ಮೈ ಇನ್‌ವೆನ್ಷನ್ಸ್‌ Archived 2011-07-16 ವೇಬ್ಯಾಕ್ ಮೆಷಿನ್ ನಲ್ಲಿ. ", ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌ ಮ್ಯಾಗಜೀನ್‌ ನಿಯತಕಾಲಿಕೆ, Feb, ಜೂನ್‌, ಮತ್ತು Oct, ೧೯೧೯. ISBN ("ದ ಸ್ಟ್ರೇಂಜ್‌ ಲೈಫ್‌ ಆಫ್‌‌ ನಿಕೋಲಾ ಟೆಸ್ಲಾ" rastko.org Archived 2013-03-21 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ಕೂಡಾ ಲಭ್ಯವಿದೆ)
  62. ಜೋನ್ನೆಸ್‌, ಜಿಲ್‌‌. ಎಂಪೈರ್ಸ್‌ ಆಫ್‌ ಲೈಟ್‌ ISBN ೦-೩೭೫-೭೫೮೮೪-೪. ಪುಟ ೩೫೫, ಓನೀಲ್‌/O'ನೀಲ್, ಜಾನ್‌ J., ಪ್ರೊಡಿಗಲ್‌ ಜೀನಿಯಸ್‌ : ದ ಲೈಫ್‌ ಆಫ್‌ ನಿಕೋಲಾ ಟೆಸ್ಲಾ (ನ್ಯೂಯಾರ್ಕ್‌ : ಡೇವಿಡ್‌ ಮೆಕ್‌ಕೇ, ೧೯೪೪)ದಿಂದ ಆಕರಿಸಿದ್ದು, p. ೧೬೭.
  63. "Tesla Memorial Society of New York". Teslasociety.com. Retrieved 2010-08-01.
  64. ಪೈಕ್ಸ್‌ ಪೀಕ್‌ Ave. ಬಳಿಯಿರುವ ಸ್ಮಾರಕ ಉದ್ಯಾನದಲ್ಲಿರುವ ಟೆಸ್ಲಾ ಸ್ಮಾರಕ ಗುರುತಿನ ಪ್ರಕಾರ
  65. ಟೆಸ್ಲಾ, ನಿಕೋಲಾ, "ದ ಟ್ರೂ ವೈರ್‌ಲೆಸ್‌ ". ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌ , ಮೇ ೧೯೧೯. (pbs.orgನಲ್ಲಿ ಕೂಡಾ)
  66. ಗಿಲ್ಲಿಸ್ಪೀ, ಚಾರ್ಲ್ಸ್‌ ಕೌಲ್ಸ್‌ಟನ್, "ಡಿಕ್ಷನರಿ ಆಫ್‌ ಸೈಂಟಿಫಿಕ್‌ ಬಯೋಗ್ರಾಫಿ "; ಟೆಸ್ಲಾ, ನಿಕೋಲಾ . ಚಾರ್ಲ್ಸ್‌ ಸ್ಕ್ರಿಬ್ನರ್ಸ್‌ ಸನ್ಸ್‌ , ನ್ಯೂಯಾರ್ಕ್‌. ISBN
  67. ಕೋರಮ್‌, K. L., J. F. ಕೋರಮ್, ಮತ್ತು A. H. ಐದಿನೆಜಾದ್‌, "ಅಟ್‌ಮಾಸ್ಫಿಯರಿಕ್‌ ಫೀಲ್ಡ್ಸ್‌‌, ಟೆಸ್ಲಾ'ಸ್‌ ರಿಸೀವರ್ಸ್‌ ಅಂಡ್‌ ರೀಜನರೇಟಿವ್‌ ಡಿಟೆಕ್ಟರ್ಸ್ ". ೧೯೯೪.
  68. ಕೋರಮ್‌, K. L., J. F. ಕೋರಮ್, "ನಿಕೋಲಾ ಟೆಸ್ಲಾ, ಲೈಟ್ನಿಂಗ್‌ ಆಬ್ಸವೇಷನ್ಸ್‌, ಅಂಡ್‌ ಸ್ಟೇಷನರಿ ವೇವ್ಸ್‌ ". ೧೯೯೪.
  69. ಟೆಸ್ಲಾ, ನಿಕೋಲಾ, "ಟಾಕಿಂಗ್‌ ವಿತ್‌ ಪ್ಲಾನೆಟ್ಸ್‌ ". ಕಾಲ್ಲಿಯೆರ್ಸ್‌ ವೀಕ್ಲಿ, ೧೯ ಫೆಬ್ರವರಿ ೧೯೦೧. EarlyRadioHistory.us.
  70. Spencer, John (೧೯೯೧). The UFO Encyclopedia. New York: Avon Books. ISBN ೯೭೮-೦-೩೮-೦೭೬೮೮೭-೫. {{cite book}}: Check |isbn= value: invalid character (help)
  71. Corum, Kenneth L. (1996). Nikola Tesla and the electrical signals of planetary origin. p. 14. OCLC 68193760. {{cite book}}: Unknown parameter |coauthors= ignored (|author= suggested) (help)
  72. Broad, William J. (೪ May ೨೦೦೯). "A Battle to Preserve a Visionary's Bold Failure". New York Times. Retrieved ೨೦೦೯-೦೫-೦೫. He eventually sold Wardenclyffe to satisfy $20,000 (today about $400,000) in bills at the Waldorf. In 1917, the new owners had the giant tower blown up and sold for scrap. {{cite news}}: Check date values in: |accessdate= and |date= (help); Cite has empty unknown parameter: |coauthors= (help)
  73. ಓನೀಲ್‌/O'ನೀಲ್‌, "ಪ್ರೋಡಿಗಾಲ್‌ ಜೀನಿಯೆಸ್‌" pp ೨೨೮–೨೨೯
  74. ಸೀಫರ್‌, "ವಿಝಾರ್ಡ್" pp ೩೭೮–೩೮೦
  75. ಪೇಗ್‌/ಜ್‌‌, R.M., "ದ ಅರ್ಲಿ ಹಿಸ್ಟರಿ ಆಫ್‌ RADAR ", ಪ್ರೊಸೀಡಿಂಗ್ಸ್‌ ಆಫ್‌ ದ IRE, ಸಂಪುಟ ೫೦, ಸಂಚಿಕೆ ೫, ಮೇ ೧೯೬೨, (ವಿಶೇಷ ೫೦ನೇ ವಾರ್ಷಿಕೋತ್ಸವ ಸಂಚಿಕೆ).
  76. "''Tesla'' telegram to Vladko Maček". Teslasociety.com. Retrieved 2010-08-01.
  77. ಪ್ರಿಪೇರ್‌ಡ್‌ ಸ್ಟೇಟ್‌ಮೆಂಟ್‌ ಬೈ ನಿಕೋಲಾ ಟೆಸ್ಲಾ Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ. www.tesla.hu ಜಾಲತಾಣದಿಂದ ಇಳಿಸಿಕೊಳ್ಳಬಹುದಾಗಿದೆ
  78. New York Times, 11 July 1935, p 23, c.8
  79. New York Herald Tribune, ೧೧ September ೧೯೩೨
  80. 1936 unpublished interview, quoted in Anderson, L, ed. Nikola Tesla: Lecture Before the New York Academy of Sciences. 6 April 1897 : The Streams of Lenard and Roentgen and Novel Apparatus for Their Production, reconstructed 1994
  81. "ಟೆಸ್ಲಾ'ಸ್‌‌ ರೇ". ಟೈಮ್, ೨೩ ಜುಲೈ ೧೯೩೪.
  82. "ಟೆಸ್ಲಾ , ಅಟ್‌‌ ೭೮, ಬೇರ್ಸ್‌ ನ್ಯೂ 'ಡೆತ್‌-ಬೀಮ್‌‌"', ನ್ಯೂಯಾರ್ಕ್‌ ಟೈಮ್ಸ್‌, ೧೧ ಜುಲೈ ೧೯೩೪.
  83. "ಟೆಸ್ಲಾ ಇನ್‌ವೆಂಟ್ಸ್‌ ಪೀಸ್‌ ರೇ". ನ್ಯೂಯಾರ್ಕ್‌ ಸನ್‌‌, ೧೦ ಜುಲೈ ೧೯೩೪.
  84. "ಡೆತ್‌-ರೇ ಮೆಷೀನ್‌ ಡಿಸ್ಕ್ರೈಬ್‌ಡ್‌ ", ನ್ಯೂಯಾರ್ಕ್‌ ಸನ್, ೧೧ ಜುಲೈ ೧೯೩೪.
  85. "A ಮೆಷೀನ್‌ ಟು ಎಂಡ್‌ ವಾರ್‌". Feb., ೧೯೩೫
  86. ಸೀಫರ್‌, ಮಾರ್ಕ್‌ J., "ವಿಝಾರ್ಡ್‌‌ : ದ ಲೈಫ್‌ ಅಂಡ್‌‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾ". ISBN (HC) p. ೪೫೪
  87. ಸೀಫರ್, "ವಿಝಾರ್ಡ್" p. ೪೫೪
  88. "Beam to Kill Army at 200 Miles, Tesla's Claim on 78th Birthday". New York Times, 11 July 1934.
  89. "'ಡೆತ್‌ ರೇ' ಫಾರ್‌ ಪ್ಲೇನ್ಸ್‌". ನ್ಯೂಯಾರ್ಕ್‌ ಟೈಮ್ಸ್, ೨೨ ಸೆಪ್ಟೆಂಬರ್‌ ೧೯೪೦.
  90. "ಏರಿಯೆಲ್‌ ಡಿಫೆನ್ಸ್‌ 'ಡೆತ್‌-ಬೀಮ್' ಆಫರ್ಡ್‌ ಟು U. S. ಬೈ ಟೆಸ್ಲಾ" ೧೨ ಜುಲೈ ೧೯೪೦
  91. ಓನೀಲ್‌/O'ನೀಲ್‌, ಜಾನ್‌ J., "ಟೆಸ್ಲಾ ಟ್ರೈಸ್‌ ಟು ಪ್ರಿವೆಂಟ್‌ ವರ್ಲ್ಡ್‌ ವಾರ್‌ II". (ಪ್ರೋಡಿಗಾಲ್‌ ಜೀನಿಯಸ್‌ನ ಅಪ್ರಕಟಿತ ೩೪ನೇ ಅಧ್ಯಾಯ) (PBS)
  92. ವೆಲಾಕ್ಸ್ಸ್‌‌, ಪಾರ್ಟಿಕಲ್‌ ಬೀಮ್‌ ವೆಪನ್. everything೨.com
  93. ದ ಫೆಂಟಾಸ್ಟಿಕ್‌ ಇನ್‌ವೆನ್ಷನ್ಸ್‌ ಆಫ್‌‌ ನಿಕೋಲಾ ಟೆಸ್ಲಾ ಬೈ ನಿಕೋಲಾ ಟೆಸ್ಲಾ, ಡೇವಿಡ್ ಹ್ಯಾಚರ್‌ ಚೈಲ್ಡ್ರೆಸ್‌. p. ೨೫೬.
  94. ದ ಲಾಸ್ಟ್‌ ಜರ್ನಲ್ಸ್‌ ಆಫ್‌ ನಿಕೋಲಾ ಟೆಸ್ಲಾ. ಟಿಮ್‌ ಸ್ವಾರ್ಟ್ಜ್‌ರಿಂದ. ಇನ್ನರ್‌ ಲೈಟ್‌ – ಗ್ಲೋಬಲ್‌ ಕಮ್ಯೂನಿಕೇಷನ್ಸ್‌ (೧೫ ಅಕ್ಟೋಬರ್‌ ೨೦೦೦). bibliotecapleyades.net ಅನ್ನೂ ನೋಡಿ
  95. "Kerryr.net". Kerryr.net. Retrieved 2010-08-01.
  96. http://www.magnet.fsu.edu/mediacenter/publications/flux/vol೧issue೧/documents/magnetmilestones.pdf
  97. ಸೆಕಾರ್‌, H. ವಿನ್‌ಫೀಲ್ಡ್‌‌ , "ಟೆಸ್ಲಾ'ಸ್‌ ವ್ಯೂಸ್‌ ಆನ್‌ ಎಲೆಕ್ಟ್ರಿಸಿಟಿ ಅಂಡ್‌ ದ ವಾರ್ ", ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌‌, ಸಂಪುಟ ೫, ಸಂಚಿಕೆ ೪, ಆಗಸ್ಟ್‌, ೧೯೧೭.
  98. "ಜಯಂಟ್‌ ಐ ಟು ಸೀ ರೌಂಡ್‌ ದ ವರ್ಲ್ಡ್ Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ. " ಆಲ್ಬೆನಿ ಟೆಲಿಗ್ರಾಮ್‌‌, ೨೫ ಫೆಬ್ರವರಿ ೧೯೨೩ (doc).
  99. Viereck, George Sylvester, and Nikola Tesla, "A Machine to End War. A Famous Inventor, Picturing Life 100 Years from Now, Reveals an Astounding Scientific Venture Which He Believes Will Change the Course of History". Liberty, February 1937.
  100. ಕೆನಡಿ, ಜಾನ್‌ B., "ವೆನ್‌ ವುಮನ್‌ ಈಸ್‌ ಬಾಸ್‌, ಆನ್‌ ಇಂಟರ್‌ವ್ಯೂ ವಿತ್‌ ನಿಕೋಲಾ ಟೆಸ್ಲಾ ". ಕಾಲಿಯೆರ್ಸ್‌, ೩೦ ಜನವರಿ ೧೯೨೬.
  101. ನಿಕೋಲಾ ಟೆಸ್ಲಾ, "ದ ಪ್ರಾಬ್ಲಮ್‌ ಆಫ್‌ ಇನ್‌ಕ್ರೀಸಿಂಗ್‌ ಹ್ಯೂಮನ್‌ ಎನರ್ಜಿ ". ಸೆಂಚುರಿ ಇಲ್ಲಸ್ಟ್ರೇಟೆಡ್‌ ಮ್ಯಾಗಜೀನ್‌ ನಿಯತಕಾಲಿಕೆ, ಜೂನ್‌‌ ೧೯೦೦.
  102. ಪ್ರೋಡಿಗಾಲ್‌ ಜೀನಿಯಸ್‌ : ದ ಲೈಫ್‌ ಆಫ್‌ ನಿಕೋಲಾ ಟೆಸ್ಲಾ ಜಾನ್‌ ಜಾಕೊಬ್‌ ಓನೀಲ್‌/O'ನೀಲ್‌ರಿಂದ ISBN ೯೭೮-೦-೯೧೪೭೩೨-೩೩-೪
  103. "Nikola Tesla Dies. Prolific Inventor. Alternating Power Current's Developer Found Dead in Hotel Suite Here. Claimed a 'Death Beam'. He Insisted the Invention Could Annihilate an Army of 1,000,000 at Once". New York Times. 8 January 1943, Friday. {{cite news}}: |access-date= requires |url= (help); Check date values in: |date= (help); Cite has empty unknown parameter: |coauthors= (help)
  104. ಯು.ಎಸ್ ಪೇಟೆಂಟ್ ೬೪೫,೫೭೬
  105. ಪುಟ ೨೭೮, ವಿಲಿಯಮ್‌‌ R. ಲೈನೆ, ಪೆಂಟಾಗನ್‌ ಅಲೈಯೆನ್ಸ್‌, ೧೯೯೩
  106. http://www.cyberspaceorbit.com/atomelec.htm
  107. ಹೂವರ್‌, ಜಾನ್‌ ಎಡ್ಗರ್, et al.
  108. ಪುಟಗಳು ೨೭೮-೨೭೯, ವಿಲಿಯಮ್‌ R. ಲೈನೆ, ಪೆಂಟಾಗನ್‌ ಅಲೈಯೆನ್ಸ್, ೧೯೯೩
  109. "Nikola Tesla Museum". Tesla-museum.org. Retrieved 2010-08-01.
  110. ಬ್ರೂಕ್ಲಿನ್‌ನ ಲುಡ್‌ವಿಗ್‌ ನಿಸ್ಸೆನ್‌‌ರ ಸಂಗ್ರಹದಲ್ಲಿ ಉಳಿದುಕೊಂಡಿರುವ ಭಾವಚಿತ್ರ, ನೋಡಿ: Klaus Lengsfeld: Sammlung Ludwig Nissen : Husum ೧೮೫೫–೧೯೨೪ ನ್ಯೂಯಾರ್ಕ್‌; Dokumentation d. Kunstsammlung Ludwig Nissens anlässl. d. Ausstellung zu seinem ೧೨೫. Geburtstag im Nissenhaus zu Husum, ೧೯೮೦, ೧೬೯ ಪುಟಗಳು. (= Schriften des Nordfriesischen Museums Ludwig-Nissen-Haus, Nr. ೧೬)
  111. IEEE, "IEEE ನಿಕೋಲಾ ಟೆಸ್ಲಾ ಅವಾರ್ಡ್ . ೧ ಏಪ್ರಿಲ್ ೨೦೦೫.
  112. ವೈ ದ ನೇಮ್‌ "ಟೆಸ್ಲಾ"? Archived 2007-10-16 ವೇಬ್ಯಾಕ್ ಮೆಷಿನ್ ನಲ್ಲಿ., ಟೆಸ್ಲಾ ಮೋಟಾರ್ಸ್‌, Inc., ೨೦೦೬
  113. "Tesla Memorial Society of New York | Tesla Monument in Canada". Teslasociety.com. Retrieved 2010-08-01.
  114. "Aerodrom Nikola Tesla Beograd". Retrieved 2009-07-09.


ಮೂಲಗಳು

[ಬದಲಾಯಿಸಿ]
  • ಮಾರ್ಗರೇಟ್‌ ಚೆನೆ, ರಾಬರ್ಟ್‌ ಯುತ್‌ ಮತ್ತು ಜಿಮ್‌ ಗ್ಲೆನ್‌, ಟೆಸ್ಲಾ, ಮಾಸ್ಟರ್‌ ಆಫ್‌ ಲೈಟ್ನಿಂಗ್‌ , ಬಾರ್ನೆಸ್‌ & ನೋಬಲ್‌ರಿಂದ ಪ್ರಕಾಶಿತ, ೧೯೯೯. ISBN ೦-೭೬೦೭-೧೦೦೫-೮.
  • ಜರ್ಮಾನೋ, ಫ್ರಾಂಕ್‌, Dr. ನಿಕೋಲಾ ಟೆಸ್ಲಾ Archived 2007-10-18 ವೇಬ್ಯಾಕ್ ಮೆಷಿನ್ ನಲ್ಲಿ. . ಫ್ರಾಂಕ್‌. Germano.com.
  • ಲೋಮಸ್‌‌, ರಾಬರ್ಟ್‌, ದ ಮ್ಯಾನ್‌ ಹೂ ಇನ್‌‌ವೆಂಟೆಡ್‌ ದ ಟ್ವೆಂಟಿಯತ್‌ ಸೆಂಚುರಿ . ಇನ್‌ಸ್ಟಿಟ್ಯೂಟ್‌ ಆಫ್‌ ಫಿಸಿಕ್ಸ್‌ನ ನೈಋತ್ಯಶಾಖೆಗೆ ನೀಡಿದ ಉಪನ್ಯಾಸ.
  • ಮಾರ್ಟಿನ್‌, ಥಾಮಸ್‌ ಕಾಮರ್‌ಫರ್ಡ್‌, ದ ಇನ್‌ವೆನ್ಷನ್ಸ್‌‌, ರಿಸರ್ಚಸ್‌ ಅಂಡ್‌ ರೈಟಿಂಗ್ಸ್‌ ಆಫ್‌ ನಿಕೋಲಾ ಟೆಸ್ಲಾ , ನ್ಯೂಯಾರ್ಕ್‌‌ : ದ ಎಲೆಕ್ಟ್ರಿಕಲ್‌ ಎಂಜಿನಿಯರ್‌, ೧೮೯೪ (೩rd Ed.); ಬಾರ್ನೆಸ್‌ & ನೋಬಲ್‌ರಿಂದ ಮರುಮುದ್ರಿತ, ೧೯೯೫ ISBN X
  • ಓನೀಲ್‌/O'ನೀಲ್‌, ಜಾನ್‌‌ J., ಪ್ರೋಡಿಗಾಲ್‌ ಜೀನಿಯೆಸ್‌ : ದ ಲೈಫ್‌ ಆಫ್‌ ನಿಕೋಲಾ , ೧೯೪೪. ("ಯಾವುದೇ ಜೀವಿತ ವ್ಯಕ್ತಿಗಿಂತ ನೀವು ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ " ಎಂದು ಈ ಜೀವನಚರಿತ್ರಕಾರರಿಗೆ ಟೆಸ್ಲಾರು ಹೇಳಿದರೆಂಬ ವರದಿಯಿದೆ; ಅಂಕಲ್‌ಟಾಜ್‌ ಜಾಲತಾಣದ ಇತರೆ ಮಾಹಿತಿಗಳ ಜೊತೆಗೆ ಈ ಆವೃತ್ತಿಯೂ uncletaz.comನಲ್ಲಿ ಇದೆ)
  • ಪೆನ್ನರ್‌, ಜಾನ್‌ R.H. ದ ಸ್ಟ್ರೇಂಜ್‌ ಲೈಫ್‌ ಆಫ್‌ ನಿಕೋಲಾ ಟೆಸ್ಲಾ , "ಮೈ ಇನ್‌‌ವೆನ್ಷನ್ಸ್‌"ನ ದೋಷಯುಕ್ತ ಆವೃತ್ತಿ.
  • ಪ್ರಾಟ್‌, H., ನಿಕೋಲಾ ಟೆಸ್ಲಾ ೧೮೫೬–೧೯೪೩ , ಪ್ರೊಸೀಡಿಂಗ್ಸ್‌ ಆಫ್‌ ದ IRE, Vol. ೪೪, ಸೆಪ್ಟೆಂಬರ್‌, ೧೯೫೬.
  • ಸೀಫರ್‌, ಮಾರ್ಕ್‌ J. ವಿಝಾರ್ಡ್‌‌ : ದ ಲೈಫ್‌ ಅಂಡ್‌‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾ ; ಬಯೋಗ್ರಫಿ ಆಫ್‌ ಎ ಜೀನಿಯಸ್ ‌, ಸೆಕಾಕಸ್‌, NJ: ಕೆರೋಲ್‌ ಪಬ್ಲಿಷಿಂಗ್‌ ಗ್ರೂಪ್‌, ೧೯೯೬. ISBN
  • ವೈಯ್ಸ್‌ಸ್ಟೇನ್‌‌, ಎರಿಕ್‌ W., ಟೆಸ್ಲಾ, ನಿಕೋಲಾ (1856–1943) . ಎರಿಕ್‌ ವೈಯ್ಸ್‌ಸ್ಟೇನ್ಸ್‌ ವರ್ಲ್ಡ್‌‌ ಆಫ್‌ ಸೈನ್ಸ್‌.
  • ಡಿಮಿಟ್ರಿಜೆವಿಕ್‌, ಮಿಲನ್‌ S., ಬೆಲ್‌ಗ್ರೇಡ್‌ ಆಸ್ಟ್ರಾನಾಮಿಕಲ್ ಆಬ್ಸರ್ವೇಟರಿ ಹಿಸ್ಟಾರಿಕಲ್‌ ರಿವ್ಯೂ . Publ. ಆಸ್ಟ್ರಾನ್. Obs. ಬೆಲ್‌ಗ್ರೇಡ್‌,), ೧೬೨–೧೭೦. ಇದೂ ಕೂಡಾ, ಸೃಪ್ಸ್‌ಕಿ ಆಸ್ಟೆರಾಯ್ಡಿ, ಟೆಸ್ಲಾ . ಆಸ್ಟ್ರೋನಾಮ್ಸ್‌ಕಿ ನಿಯತಕಾಲಿಕೆ.
  • ಹೂವರ್‌, ಜಾನ್‌ ಎಡ್ಗರ್‌, et al., FOIA FBI ಫೈಲ್ಸ್‌, ೧೯೪೩.
  • ಪ್ರಾಟ್‌, H., ನಿಕೋಲಾ ಟೆಸ್ಲಾ ೧೮೫೬–೧೯೪೩ , ಪ್ರೊಸೀಡಿಂಗ್ಸ್‌ ಆಫ್‌ ದ IRE, Vol. ೪೪, ಸೆಪ್ಟೆಂಬರ್‌, ೧೯೫೬.
  • W.C. ವೈಸಾಕ್‌, J.F. ಕೋರಮ್‌, J.M. ಹಾರ್ಡೆಸ್ಟಿ ಮತ್ತು K.L. ಕೋರಮ್‌, ಹೂ ವಾಸ್‌ ದ ರಿಯಲ್‌ Dr. ನಿಕೋಲಾ ಟೆಸ್ಲಾ? (A ಲುಕ್‌ ಅಟ್‌ ಹಿಸ್‌ ಪ್ರೊಫೆಷನಲ್‌ ಕ್ರೆಡೆನ್ಷಯಲ್ಸ್‌). ಆಂಟೆನಾ ಮೆಷರ್‌ಮೆಂಟ್‌ ಟೆಕ್ನಿಕ್ಸ್‌ ಅಸೋಸಿಯೇಷನ್, ಪೋಸ್ಟರ್‌ ಪತ್ರಿಕೆ, ಅಕ್ಟೋಬರ್‌ ೨೨–೨೫, ೨೦೦೧ (PDF)
  • ರೋಗ್ವಿನ್‌, ಏರಿಯೆಲ್‌, ಹಿಸ್ಟಾರಿಕಲ್‌ ನೋಟ್‌ : ನಿಕೋಲಾ ಟೆಸ್ಲಾ : ದ ಮ್ಯಾನ್‌ ಬಿಹೈಂಡ್‌ ದ ಮ್ಯಾಗ್ನೆಟಿಕ್‌‌ ಫೀಲ್ಡ್‌ ಯೂನಿಟ್‌ . J. Magn. Reson. ಇಮೇಜಿಂಗ್‌‌ ೨೦೦೪;೧೯:೩೬೯–೩೭೪. © ೨೦೦೪ ವಿಲೇ-ಲಿಸ್, Inc.
  • ಸೆಲ್ಲಾನ್‌, J. L., ದ ಇಂಪ್ಯಾಕ್ಟ್‌ ಆಫ್‌ ನಿಕೋಲಾ ಟೆಸ್ಲಾ ಆನ್‌ ದ ಸಿಮೆಂಟ್‌ ಇಂಡಸ್ಟ್ರಿ . ಬೆಹ್ರೆಂಟ್‌ Eng. Co., ವೀಟ್‌ ರಿಡ್ಜ್‌, CO. ಸಿಮೆಂಟ್‌ ಇಂಡಸ್ಟ್ರಿ ಟೆಕ್ನಿಕಲ್‌ ಕಾನ್‌ಫರೆನ್ಸ್‌. ೧೯೯೭. XXXIX ಕಾನ್‌ಫರೆನ್ಸ್‌ ರೆಕಾರ್ಡ್‌., ೧೯೯೭ IEEE/PC. ಪುಟ(ಗಳು) ೧೨೫–೧೩೩. ISBN
  • ವ್ಯಾಲೆಂಟಿನುಜ್ಜಿ, M.E., ನಿಕೋಲಾ ಟೆಸ್ಲಾ : ವೈ ವಾಸ್‌ ಹೀ ಸೋ ಮಚ್‌ ರೆಸಿಸ್ಟೆಡ್‌ ಅಂಡ್‌ ಫಾರ್‌ಗಾಟನ್‌? Inst. de ಬಯೋಇನ್‌ಜೆನಿಯೆರಿಯಾ, Univ. ನ್ಯಾಷನಲ್‌ ಡೆ ಟುಕುಮನ್‌; ಎಂಜಿನಿಯರಿಂಗ್‌ ಇನ್‌ ಮೆಡಿಸಿನ್‌ ಅಂಡ್‌ ಬಯಾಲಜಿ ಮ್ಯಾಗಜೀನ್‌, IEEE. ಜುಲೈ/ಆಗಸ್ಟ್‌ ೧೯೯೮, ೧೭:೪, pp. ೭೪–೭೫. ISSN
  • ವೇಸರ್‌, ಆಂಡ್ರೆ, ನಿಕೋಲಾ ಟೆಸ್ಲಾ’ಸ್‌ ರೇಡಿಯೇಷನ್ಸ್‌ ಅಂಡ್‌ ದ ಕಾಸ್ಮಿಕ್‌ ರೇಸ್‌ . (PDF).
  • ಸೆಕಾರ್‌, H. ವಿನ್‌ಫೀಲ್ಡ್‌‌, ಟೆಸ್ಲಾ'ಸ್‌ ವ್ಯೂಸ್‌ ಆನ್‌ ಎಲೆಕ್ಟ್ರಿಸಿಟಿ ಅಂಡ್‌ ದ ವಾರ್ ‌, ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌, ಸಂಪುಟ ೫, ಸಂಚಿಕೆ ೪, ಆಗಸ್ಟ್‌, ೧೯೧೭.
  • ಪ್ಲೋರೆ, ಗ್ಲೆನ್‌, ಟೆಸ್ಲಾ ಅಂಡ್‌ ದ ಮಿಲಿಟರಿ . ಎಂಜಿನಿಯರಿಂಗ್‌ ೨೪, ೫ ಡಿಸೆಂಬರ್‌ ೨೦೦೦.
  • ಕೋರಮ್‌, K. L., J. F. ಕೋರಮ್, ನಿಕೋಲಾ ಟೆಸ್ಲಾ, ಲೈಟ್ನಿಂಗ್‌ ಆಬ್ಸರ್ವೇಷನ್ಸ್‌, ಅಂಡ್‌ ಸ್ಟೇಷನರಿ ವೇವ್ಸ್‌ . ೧೯೯೪.
  • ಕೋರಮ್‌, K. L., J. F. ಕೋರಮ್, ಮತ್ತು A. H. ಐದಿನೆಜಾದ್‌, ಅಟ್‌ಮಾಸ್ಫಿಯರಿಕ್‌ ಫೀಲ್ಡ್ಸ್‌‌ , ಟೆಸ್ಲಾ'ಸ್‌ ರಿಸೀವರ್ಸ್‌ ಅಂಡ್‌ ರೀಜನರೇಟಿವ್‌ ಡಿಟೆಕ್ಟರ್ಸ್ . ೧೯೯೪.
  • ಮೇಯ್ಲ್‌, ಕಾನ್‌ಸ್ಟಾಂಟಿನ್‌, H. ವೇಯ್ಡ್‌ನರ್‌, E. ಝೆಂಟ್‌ಗ್ರಾಫ್‌, T. ಸೆಂಕೆಲ್‌, T. ಜಂಕರ್‌ ಮತ್ತು P. ವಿಂಕೆಲ್ಸ್‌, ಎಕ್ಸ್‌ಪೆರಿಮೆಂಟ್ಸ್‌ ಟು ಪ್ರೂಫ್‌ ದ ಎವಿಡೆನ್ಸ್‌ ಆಫ್‌ ಸ್ಕೇಲಾರ್‌ ವೇವ್ಸ್‌ ಟೆಸ್ಟ್‌ಸ್‌ ವಿತ್‌ ಎ ಟೆಸ್ಲಾ ರೀಪ್ರೊಡಕ್ಷನ್ . ಇನ್‌ಸ್ಟಿಟ್ಯೂಟ್‌ ಫರ್‌ ಗ್ರಾವಿಟೇಷನ್‌ಫೋರ್ಸ್‌ಷುಂಗ್‌ (IGF), ಆಮ್‌ ಹೀರ್‌ಬಾಚ್‌/ಷ್‌ ೫, D-೬೩೮೫೭ ವಾಲ್ಡಸ್‌ಷಾಫ್‌.
  • ಆಂಡರ್‌ಸನ್‌, L. I., ಜಾನ್‌ ಸ್ಟೋನ್‌ ಸ್ಟೋನ್‌ ಆನ್‌ ನಿಕೋಲಾ ಟೆಸ್ಲಾ’ಸ್‌ ಪ್ರಿಯಾರಿಟಿ ಇನ್‌ ರೇಡಿಯೋ ಅಂಡ್‌ ಕಂಟಿನ್ಯೂಯಸ್‌ ವೇವ್‌ ರೇಡಿಯೋ ಫ್ರೀಕ್ವೆನ್ಸಿ ಆಪರೇಟಸ್‌ . ದ ಆಂಟಿಕ್‌ ವೈರ್‌ಲೆಸ್‌ ಅಸೋಸಿಯೇಷನ್‌ ರಿವ್ಯೂ, Vol. ೧, ೧೯೮೬, pp. ೧೮–೪೧.
  • ಆಂಡರ್‌ಸನ್‌, L. I., ಪ್ರಿಯಾರಿಟಿ ಇನ್‌ ಇನ್‌ವೆನ್ಷನ್‌ ಆಫ್‌ ರೇಡಿಯೋ, ಟೆಸ್ಲಾ v. ಮಾರ್ಕೋನಿ . ಆಂಟಿಕ್‌ ವೈರ್‌ಲೆಸ್‌ ಅಸೋಸಿಯೇಷನ್‌ ಮಾನೋಗ್ರಾಫ್‌, ಮಾರ್ಚ್‌ ೧೯೮೦.
  • ಮಾರ್ನಿಸಿಕ್‌, A., ಮತ್ತು D. ಬುಡಿಮಿರ್‌‌, ಟೆಸ್ಲಾ'ಸ್‌ ಕಾಂಟ್ರಿಬ್ಯೂಷನ್‌ ಟು ರೇಡಿಯೋ ವೇವ್‌ ಪ್ರಾಪಗೇಷನ್ ‌. Dept. ಆಫ್‌ ಎಲೆಕ್ಟ್ರಾನ್‌. Eng., ಬೆಲ್‌ಗ್ರೇಡ್‌ Univ. (೫ತ್‌ ಇಂಟರ್‌ನ್ಯಾಷನಲ್‌ ಕಾನ್‌ಫರೆನ್ಸ್ ಆನ್ ಟೆಲಿಕಮ್ಯೂನಿಕೇಷನ್ಸ್‌‌ ಇನ್‌ ಮಾಡರ್ನ್‌ ಸ್ಯಾಟೆಲೈಟ್‌, ಕೇಬಲ್‌ ಅಂಡ್‌ ಬ್ರಾಡ್‌ಕ್ಯಾಸ್ಟಿಂಗ್‌ ಸರ್ವೀಸ್‌, ೨೦೦೧. TELSIKS ೨೦೦೧. pp. ೩೨೭–೩೩೧ vol.೧) ISBN X
  • ಪೇಗ್‌/ಜ್‌‌, R.M., ದ ಅರ್ಲಿ ಹಿಸ್ಟರಿ ಆಫ್‌ ರಾಡಾರ್‌ , ಪ್ರೊಸೀಡಿಂಗ್ಸ್‌ ಆಫ್‌ ದ IRE, ಸಂಪುಟ ೫೦, ಸಂಚಿಕೆ ೫, ಮೇ, ೧೯೬೨, (ವಿಶೇಷ ೫೦ನೇ ವಾರ್ಷಿಕೋತ್ಸವ ಸಂಚಿಕೆ).
  • C ಮ್ಯಾಕೆಚೆನ್ನೀ ಜಾರ್ವಿಸ್‌ ನಿಕೋಲಾ ಟೆಸ್ಲಾ ಅಂಡ್‌ ದ ಇಂಡಕ್ಷನ್‌ ಮೋಟಾರ್‌‌ . ೧೯೭೦ Phys. Educ. ೫ ೨೮೦–೨೮೭.
  • ಜಯಂಟ್‌ ಐ ಟು ಸೀ ರೌಂಡ್‌ ದ ವರ್ಲ್ಡ್‌ Archived 2011-07-24 ವೇಬ್ಯಾಕ್ ಮೆಷಿನ್ ನಲ್ಲಿ. (DOC)
  • ನಿಕೆಲ್‌ಸನ್‌, ಆಲಿವರ್‌, ನಿಕೋಲಾ ಟೆಸ್ಲಾ'ಸ್‌ ಲ್ಯಾಟರ್‌ ಎನರ್ಜಿ ಜನರೇಷನ್‌ ಡಿಸೈನ್ಸ್‌ , "ಇಂಧನವನ್ನು ಬಳಸದ" ಟೆಸ್ಲಾ'ರ ಚೈತನ್ಯ ಉತ್ಪಾದಕದ ವಿವರಣೆ. ೨೬ತ್‌ IECEC ಪ್ರೊಸೀಡಿಂಗ್ಸ್‌, ೧೯೯೧, ಬಾಸ್ಟನ್, MA (ಅಮೇರಿಕನ್‌‌ ನ್ಯೂಕ್ಲಿಯರ್‌ ಸೊಸೈಟಿ) Vol. ೪, pp. ೪೩೩–೪೩೮.
  • ನಿಕೆಲ್‌ಸನ್‌, ಆಲಿವರ್‌, ದ ಥರ್ಮೋಡೈನಾಮಿಕ್ಸ್‌ ಆಫ್‌ ಟೆಸ್ಲಾ'ಸ್‌ ಫ್ಯೂಯೆಲ್‌ಲೆಸ್‌ ಎಲೆಕ್ಟ್ರಿಕಲ್‌ ಜನರೇಟರ್‌‌ . ಟೆಸ್ಲಾರ ನವೀನ ಚೈತನ್ಯ/ವಿದ್ಯುಚ್ಛಕ್ತಿ ಜನಕದ ಭೌತಶಾಸ್ತ್ರೀಯ ಸಿದ್ಧಾಂತ. (ಅಮೇರಿಕನ್‌‌ ಕೆಮಿಕಲ್‌ ಸೊಸೈಟಿ, ೧೯೯೩. ೨೭೨೨-೫/೯೩/೦೦೨೮-೬೩)
  • ಟೋಬಿ, ಗ್ರಾಟ್ಜ್‌, ದ ಇನ್‌ಫ್ಲ್ಯೂಯೆನ್ಸ್‌ ಆಫ್‌ ವೇದಿಕ್‌ ಫಿಲಾಸಫಿ ಆನ್‌ ನಿಕೋಲಾ ಟೆಸ್ಲಾ'ಸ್‌ ಅಂಡರ್‌ಸ್ಟ್ಯಾಂಡಿಂಗ್‌ ಆಫ್‌ ಫ್ರೀ ಎನರ್ಜಿ .

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಪ್ರಕಟಣೆಗಳು

[ಬದಲಾಯಿಸಿ]

ಪುಸ್ತಕಗಳು

[ಬದಲಾಯಿಸಿ]
  • ಟೆಸ್ಲಾ, ನಿಕೋಲಾ, "ಮೈ ಇನ್‌‌ವೆನ್ಷನ್ಸ್‌" ೧೯೧೯ರ ಫೆಬ್ರವರಿಯಿಂದ ಜೂನ್‌ವರೆಗೆ ಭಾಗ Iರಿಂದ Vರವರೆಗಿನವುಗಳನ್ನು ಎಲೆಕ್ಟ್ರಿಕಲ್‌ ಎಕ್ಸ್‌ಪೆರಿಮೆಂಟರ್‌ ಮಾಸಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿತ್ತು. ಭಾಗ VIಅನ್ನು ೧೯೧೯ರ ಅಕ್ಟೋಬರ್‌‌ನಲ್ಲಿ ಪ್ರಕಟಿಸಲಾಗಿತ್ತು. ನ್ಯೂಯಾರ್ಕ್‌‌ನ ಬೆನ್‌ ಜಾನ್ಸನ್‌ರ ಮುನ್ನುಡಿಯೊಡನೆ ಮರುಮದ್ರಣದ ಆವೃತ್ತಿ : ಬಾರ್ನೆಸ್‌ ಅಂಡ್‌ ನೋಬಲ್‌, ೧೯೮೨, ISBN; ಲ್ಯೂಸಿಡ್‌ ಕೆಫೆ Archived 2016-02-02 ವೇಬ್ಯಾಕ್ ಮೆಷಿನ್ ನಲ್ಲಿ., et cetera ಯಲ್ಲಿ ಆನ್‌ಲೈನ್‌ನಲ್ಲಿಯೂ My Inventions: The Autobiography of Nikola Tesla ಆಗಿ ಲಭ್ಯವಿದೆ , ೧೯೧೯. ISBN
  • ಮಾರ್ಟಿನ್, ಥಾಮಸ್‌ C., ದ ಇನ್‌ವೆನ್ಷನ್ಸ್‌, ರಿಸರ್ಚಸ್‌ ಅಂಡ್‌ ರೈಟಿಂಗ್ಸ್‌ ಆಫ್‌ ನಿಕೋಲಾ ಟೆಸ್ಲಾ, ೧೮೯೪ . ISBN X
  • ಟೆಸ್ಲಾ, ನಿಕೋಲಾ, ಕೊಲೊರಾಡೋ ಸ್ಪ್ರಿಂಗ್ಸ್‌‌‌ ನೋಟ್ಸ್‌, ೧೮೯೯–೧೯೦೦ , ISBN X
  • ಆಂಡರ್‌ಸನ್‌ , ಲೆಲ್ಯಾಂಡ್‌ I., Dr. ನಿಕೋಲಾ ಟೆಸ್ಲಾ (೧೮೫೬–೧೯೪೩) , ೨d enl. ed., ಮಿನ್ನೆಯಾಪೊಲಿಸ್‌, ಟೆಸ್ಲಾ ಸೊಸೈಟಿ. ೧೯೫೬.
  • ರಾಟ್ಜ್‌ಲಾಫ್‌, ಜಾನ್‌ ಮತ್ತು ಲೆಲ್ಯಾಂಡ್‌ ಆಂಡರ್‌ಸನ್‌, Dr. ನಿಕೋಲಾ ಟೆಸ್ಲಾ ಬಿಬ್ಲಿಯೋಗ್ರಫಿ , ರಾಗುಸನ್‌ ಪ್ರೆಸ್‌, ಪಾಲೋ ಆಲ್ಟೋ, ಕ್ಯಾಲಿಫೋರ್ನಿಯಾ, ೧೯೭೯, ೨೩೭ ಪುಟಗಳು. ನಿಕೋಲಾ ಟೆಸ್ಲಾರ ಬಗ್ಗೆ ಹಾಗೂ ಅವರಿಂದ ರಚಿತವಾದ ಲೇಖನಗಳ ವಿಶಾಲವಾದ ಸಂಗ್ರಹ.
  • ಓನೀಲ್‌/O'ನೀಲ್‌, ಜಾನ್‌‌ ಜಾಕೊಬ್‌, ಪ್ರೋಡಿಗಾಲ್‌ ಜೀನಿಯಸ್‌ , ೧೯೪೪. ಕಾಗದಕವಚದ ಮರುಮುದ್ರಣ ೧೯೯೪, ISBN ೯೭೮-೦-೯೧೪೭೩೨-೩೩-೪. (ed . ಪ್ರೋಡಿಗಾಲ್‌ ಜೀನಿಯಸ್‌ ಆನ್‌ಲೈನ್‌ನಲ್ಲೂ ಲಭ್ಯವಿದೆ)
  • ಚೆನೆ, ಮಾರ್ಗರೇಟ್, Tesla: Man Out of Time , ೧೯೮೧. ISBN ೦-೭೯೧೦-೬೭೭೨-೬
  • ಸೀಫರ್‌, ಮಾರ್ಕ್‌‌ J., ವಿಝಾರ್ಡ್‌, ದ ಲೈಫ್‌ ಅಂಡ್‌‌ ಟೈಮ್ಸ್‌ ಆಫ್‌ ನಿಕೋಲಾ ಟೆಸ್ಲಾ , ೧೯೯೮. ISBN (HC), ISBN (SC)
  • ಜಾನ್ನೆಸ್‌, ಜಿಲ್‌ Empires of Light: Edison, Tesla, Westinghouse, and the Race to Electrify the World . ನ್ಯೂಯಾರ್ಕ್: ರಾಂಡಮ್ ಹೌಸ್, ೨೦೦೩. ISBN
  • ಆಸ್ಟರ್‌, ಪಾಲ್, ಮೂನ್‌ ಪ್ಯಾಲೇಸ್‌ , ೧೯೮೯. ಯುನೈಟೆಡ್‌‌ ಸ್ಟೇಟ್ಸ್‌‌ನೊಳಗಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಟೆಸ್ಲಾ'ರ ಕಥೆಯನ್ನು ಹೇಳುತ್ತದೆ.
  • ಲೋಮಸ್‌‌, ರಾಬರ್ಟ್‌, ದ ಮ್ಯಾನ್‌ ಹೂ ಇನ್‌‌ವೆಂಟೆಡ್‌ ದ ಟ್ವೆಂಟಿಯತ್‌ ಸೆಂಚುರಿ : ನಿಕೋಲಾ ಟೆಸ್ಲಾ , ಫಾರ್‌ಗಾಟನ್‌ ಜೀನಿಯಸ್‌ ಆಫ್‌ ಎಲೆಕ್ಟ್ರಿಸಿಟಿ, ೧೯೯೯. ISBN
  • ಚೈಲ್ಡ್ರೆಸ್‌, ಡೇವಿಡ್‌ H., ದ ಫೆಂಟಾಸ್ಟಿಕ್‌ ಇನ್‌ವೆನ್ಷನ್ಸ್‌ ಆಫ್‌ ನಿಕೋಲಾ ಟೆಸ್ಲಾ , ೧೯೯೩. ISBN
  • ಗ್ಲೆನ್‌, ಜಿಮ್‌, ದ ಕಂಪ್ಲೀಟ್‌ ಪೇಟೆಂಟ್ಸ್‌ ಆಫ್‌ ನಿಕೋಲಾ ಟೆಸ್ಲಾ , ೧೯೯೪. ISBN
  • ಟ್ರಿಂಕಾಸ್‌, ಜಾರ್ಜ್‌‌‌ TESLA: ದ ಲಾಸ್ಟ್‌ ಇನ್‌ವೆನ್ಷನ್ಸ್‌ , ಹೈ ವೋಲ್ಟೇಜ್‌ ಪ್ರೆಸ್, ೨೦೦೨. ISBN ೧-೫೫೪೩೯-೦೦೬-೦.
  • ವಾಲೊನ್‌, ಥಾಮಸ್‌, Harnessing the Wheelwork of Nature: Tesla's Science of Energy , ೨೦೦೨. ISBN

ನಿಯತಕಾಲಿಕೆಗಳು

[ಬದಲಾಯಿಸಿ]
  • ಕಾರ್ಲ್‌ಸನ್‌, W. ಬರ್ನಾರ್ಡ್‌, "ಇನ್‌ವೆಂಟರ್‌ ಆಫ್‌ ಡ್ರೀಮ್ಸ್‌ ". ಸೈಂಟಿಫಿಕ್‌ ಅಮೇರಿಕನ್‌‌ , ಮಾರ್ಚ್‌ ೨೦೦೫ Vol. ೨೯೨ ಸಂಚಿಕೆ ೩ p. ೭೮(೭).
  • ಜಾಟ್ರಾಸ್‌, ಸ್ಟೆಲ್ಲಾ L., "ದ ಜೀನಿಯಸ್‌ ಆಫ್‌ ನಿಕೋಲಾ ಟೆಸ್ಲಾ. ದ ನ್ಯೂ ಅಮೇರಿಕನ್‌ , ೨೮ ಜುಲೈ ೨೦೦೩ Vol. ೧೯ ಸಂಚಿಕೆ ೧೫ p. ೯(೧)
  • ರೈಬಾಕ್‌, ಜೇಮ್ಸ್‌ P., "ನಿಕೋಲಾ ಟೆಸ್ಲಾ : ಸೈಂಟಿಫಿಕ್‌ ಸಾವಂಟ್‌". ಪಾಪ್ಯುಲರ್‌ ಎಲೆಕ್ಟ್ರಾನಿಕ್ಸ್‌ , ೧೦೪೨೧೭೦X, ನವೆಂಬರ್‌ ೧೯೯೯, Vol. ೧೬, ಸಂಚಿಕೆ ೧೧.
  • ಲಾರೆನ್‌, B., "ರೀಡಿಸ್ಕವರಿಂಗ್‌ ಟೆಸ್ಲಾ". ಆಮ್ನಿ , ಮಾರ್ಚ್‌‌ ೧೯೮೮, Vol. ೧೦ ಸಂಚಿಕೆ ೬.

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
  • ಟೆಸ್ಲಾ'ರ ಜೀವನವನ್ನು ವರ್ಣಿಸುವ ಕನಿಷ್ಟ ಎರಡು ಚಲನಚಿತ್ರಗಳಿವೆ. ೧೯೭೭ರಲ್ಲಿ ಚಿತ್ರಿಸಲ್ಪಟ್ಟು, TVಗೆಂದು ರೂಪಿಸಿದ್ದ ಪ್ರಥಮ ಚಿತ್ರದಲ್ಲಿ, ರೇಡ್‌ ಸರ್ಬೆಡ್ಜಿಜಾ ಟೆಸ್ಲಾರ ಪಾತ್ರವನ್ನು ವಹಿಸಿದ್ದರು. ಟಜ್ನಾ ನಿಕೋಲೆ ಟೆಸ್ಲೆ (ನಿಕೋಲಾ ಟೆಸ್ಲಾರ ರಹಸ್ಯ) ಎಂಬ ೧೯೮೦ರಲ್ಲಿ ಆರ್ಸನ್‌ ವೆಲ್ಲೆಸ್‌ರವರು ನಿರ್ಮಿಸಿದ್ದ ಯುಗೋಸ್ಲಾವಿಯಾದ ಚಿತ್ರದಲ್ಲಿ ಟೆಸ್ಲಾ'ರ ಪೋಷಕ, J.P. ಮೋರ್ಗನ್‌ರ ಪಾತ್ರವನ್ನು ಸ್ವತಃ ವೆಲ್ಲೆಸ್‌ರೇ ವಹಿಸಿದ್ದರು. ಕ್ರಿಸ್ಟೀ ಪೇಪಿಕ್‌ರು ನಿರ್ದೇಶಿಸಿದ ಈ ಚಿತ್ರದಲ್ಲಿ ಪೆಟರ್‌ ಬೊಝೋವಿಕ್‌ರು ನಿಕೋಲಾ ಟೆಸ್ಲಾರ ಪಾತ್ರವನ್ನು ವಹಿಸಿದ್ದರು.
  • "ಟೆಸ್ಲಾ: ಮಾಸ್ಟರ್‌ ಆಫ್‌ ಲೈಟ್ನಿಂಗ್‌ ". ೧೯೯೯. ISBN (ಪುಸ್ತಕ) ISBN (PBS ವಿಡಿಯೋ)
  • ಲಾಸ್ಟ್‌ ಲೈಟ್ನಿಂಗ್‌ : ದ ಮಿಸ್ಸಿಂಗ್‌ ಸೀಕ್ರೆಟ್ಸ್‌ ಆಫ್‌ ನಿಕೋಲಾ ಟೆಸ್ಲಾ Archived 2008-12-19 ವೇಬ್ಯಾಕ್ ಮೆಷಿನ್ ನಲ್ಲಿ. (Google ವಿಡಿಯೋದಲ್ಲಿ.) ಇದರಲ್ಲಿ ಮುಕ್ತ ಚೈತನ್ಯ ಮತ್ತು ರಕ್ಷಣಾ ಶಸ್ತ್ರವ್ಯವಸ್ಥೆಗಳ ಟೆಸ್ಲಾ'ರ ವಿನ್ಯಾಸಗಳ ಬಗೆಗಿನ ಚಿತ್ರ.
  • ೨೦೦೬ರ ಚಿತ್ರ ದ ಪ್ರೆಸ್ಟೀಜ್‌ ನಲ್ಲಿ ಡೇವಿಡ್‌ ಬೌವೀಯವರು ಟೆಸ್ಲಾರ ಪಾತ್ರವನ್ನು ವಹಿಸಿದ್ದರು. ಟೆಸ್ಲಾ'ರ ವಿದ್ಯುತ್ತಿನ ಪ್ರಯೋಗಗಳ ಸ್ಫೋಟಕ ಶಕ್ತಿಗಳ ಬಗ್ಗೆ ಊಹನೆಯನ್ನು ಹೊಂದಿರುವ ಚಿತ್ರವು ಕೊಲೊರಾಡೋ ಸ್ಪ್ರಿಂಗ್ಸ್‌‌‌ನಲ್ಲಿ ಟೆಸ್ಲಾ'ರು ಕಳೆದ ಸಮಯದ ಬಗ್ಗೆ ಅನೇಕ ದೃಶ್ಯಗಳನ್ನು ಕೇಂದ್ರೀಕರಿಸಿದೆ.
  • ಟೆಸ್ಲಾ: ಮಾಸ್ಟರ್‌ ಆಫ್‌ ಲೈಟ್ನಿಂಗ್‌ , ನ್ಯೂ ವಾಯೇಜ್‌ ಕಮ್ಯೂನಿಕೇಷನ್ಸ್ ಸಂಸ್ಥೆಯ ಪರವಾಗಿ ೨೦೦೩ರಲ್ಲಿ ರಾಬರ್ಟ್‌ ಯುತ್‌ರಿಂದ ನಿರ್ಮಿತವಾದ ಚಿತ್ರದಲ್ಲಿ ಟೆಸ್ಲಾರ ದನಿಯನ್ನು ನೀಡಲು ಸ್ಟೇಸಿ ಕೀಚ್‌ರ ಸಹಾಯ ಪಡೆಯಲಾಗಿತ್ತು.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

[[ವರ್ಗ:ಇನ್‌ಸ್ಟಿಟ್ಯೂಟ್‌ ಆಫ್‌ ಎಲೆಕ್ಟ್ರಿಕಲ್‌‌ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನೀಯರ್ಸ್‌ ಸಂಸ್ಥೆಯ ಫೆಲೋ ಸದಸ್ಯರು]]