ಪ್ಲಾಸ್ಮ (ಭೌತಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ತಂತುಗಳಂಥ ಜಟಿಲವಾದ ಪ್ಲಾಸ್ಮ ಪ್ರಕ್ರಿಯೆಗಳನ್ನು ತೋರುತ್ತಿರುವ ಒಂದು ಪ್ಲಾಸ್ಮ ದೀಪ. ಎಲೆಕ್ಟ್ರಾನ್‌ಗಳು ಅಯಾನುಗಳೊಂದಿಗೆ ಮರುಸೇರಿದಮೇಲೆ ಮೇಲಿನ ಕಕ್ಷೆಯಿಂದ ಕೆಳಗಿನ ಕಕ್ಷೆಗೆ ನೆಗೆಯುವ ಪರಿಣಾಮವಾಗಿ ಈ ಬಣ್ಣಗಳು ಉದ್ಭವವಾಗುತ್ತವೆ. ಈ ಪ್ರಕ್ರಿಯೆಗಳು ಒಂದು ಅನಿಲಕ್ಕೆ ವಿಶಿಷ್ಟವಾದ ರೋಹಿತದಲ್ಲಿ ಬೆಳಕನ್ನು ಹೊರಸೂಸುತ್ತವೆ.

ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ಅಯಾನೀಕೃತ ಅನಿಲವನ್ನು ಪ್ಲಾಸ್ಮ ಎಂದು ಕರೆಯಲಾಗುತ್ತದೆ. ತನ್ನ ಅಪೂರ್ವವಾದ ಗುಣಲಕ್ಷಣಗಳ ಕಾರಣದಿಂದ, ಪ್ಲಾಸ್ಮಗಳನ್ನು ಅನಿಲಗಳೆಂದಲ್ಲದೆ, ಬೇರೆಯದೇ ಆದ ವಿಶಿಷ್ಟವಾದ ಒಂದು ದ್ರವ್ಯ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಅಯಾನೀಕೃತ ಎಂದರೆ - ಪರಮಾಣು ಅಥವಾ ಅಣುವಿಗೆ ಸೀಮಿತವಾಗಿಲ್ಲದ ಸ್ವತಂತ್ರ ಎಲೆಕ್ಟ್ರಾನ್ಗಳ ಅಸ್ತಿತ್ವ. ಈ ಸ್ವತಂತ್ರ ಎಲೆಕ್ಟ್ರಾನ್‌ಗಳ ಕಾರಣದಿಂದ, ಪ್ಲಾಸ್ಮ ವಿದ್ಯುತ್ ವಾಹಕವಾಗಿದ್ದು, ವಿದ್ಯುತ್‌ಕಾಂತೀಯ ಕ್ಷೇತ್ರಗಳಿಗೆ ಪ್ರಬಲವಾಗಿ ಪ್ರತಿಕ್ರಿಯಿಸುತ್ತವೆ.