ಚಿನ್ನದ ಚತುಷ್ಪಥ (ಚತುರ್ಭುಜಾಕೃತಿ )

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾರತ Golden Quadrilateral
Highway map of India with the Golden Quadrilateral highlighted in solid blue color
Total Length5,846 kilometres (3,633 mi)
Development costRs. 60,000 crores
Delhi - ಕೊಲ್ಕತ್ತ
Length1,453 kilometres (903 mi)
RouteNH 2
Delhi - ಮುಂಬೈ
Length1,419 kilometres (882 mi)
RouteNH 8, NH 79A, NH 79, NH 76
ಮುಂಬೈ - Chennai
Length1,290 kilometres (800 mi)
RouteNH 4, NH 7, NH 46
ಕೊಲ್ಕತ್ತ - Chennai
Length1,684 kilometres (1,046 mi)
RouteNH 6, NH 60, NH 5
NH - List - NHAI - NHDP - MORTH
ಚಿನ್ನದ ಚತುಷ್ಪಥದ ಹೆದ್ದಾರಿಯ ಗುಂಪು ಚೆನ್ನೈ - ಮುಂಬಯಿ ಹಂತದವರಗೆ.

ಗೋಲ್ಡನ್ ಕ್ವಾದ್ರಿಲತೆರಲ್ ವು ಭಾರತ ದಲ್ಲಿನ ಹೆದ್ದಾರಿಗಳ ಜಾಲವಾಗಿದ್ದು ಇದು ದೆಹಲಿ , ಮುಂಬಯಿ , ಕೋಲ್ಕತ್ತಾ ಮತ್ತು ಚೆನ್ನೈ ಗಳನ್ನು ಸೇರಿಸುತ್ತದೆ, ಹಾಗು ಇದು ಚತುಷ್ಪಥ ಮಾದರಿಯ ರಸ್ತೆಯ ವರ್ಗಗಳನ್ನಾಗಿ ಮಾಡಿವೆ. ಭಾರತ ದಲ್ಲಿ ಅತಿ ಉದ್ದದ ಹೆದ್ದಾರಿ ಯೋಜನೆಯನ್ನು ಅಟಲ್ ಬಿಹಾರಿ ವಾಜಪೇಯೀ ಆರಂಭಿಸಿದರು , ಇದು ಮೊದಲನೇ ಹಂತದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ (ನ್ಯಾಷನಲ್ ಹೈ ವೇ ಡೆವಲಪ್ಮೆಂಟ್ ಪ್ರಾಜೆಕ್ಟ್ - NHDP) ಆಗಿದ್ದು, ಮತ್ತು ೫,೮೪೬ ಕಿಲೋಮೀಟರ್ ಗಳ ನಾಲ್ಕು/ಆರು ಮಾರ್ಗಗಳ ಅತಿ ವೇಗದ ಹೆದ್ದಾರಿಯ ವೆಚ್ಚ ೬೦,೦೦೦ ಕೋಟಿ ರೂಪಾಯಿಗಳಷ್ಟು ನಿರ್ಮಾಣವನ್ನು ಒಳಗೊಂಡಿದೆ. (೧೯೯೯ರ ಬೆಳೆಗಳ ಪ್ರಕಾರ US$ ೧೨.೩೧೭ ಬಿಲಿಯನ್). , ಚಿನ್ನದ ಚತುಷ್ಪಥವು, ಭಾರತದ ರಸ್ತೆ ಜಾಲಗಳಲ್ಲಿನ ಶೇಕಡಾ ೨ ರಷ್ಟನ್ನು ಪೂರೈಸಿದರೆ, ರಾಷ್ಟ್ರದ ಟ್ರಾಫಿಕ್ ಗಳಲ್ಲಿನ ಸುಮಾರು ಶೇಕಡಾ ೪೦ ಅನ್ನು ಕೊಂಡೊಯ್ಯುತ್ತದೆ ಮತ್ತು ರಸ್ತೆ ಸಾವುಗಳಲ್ಲಿನ [೧] ಮೂರನೇ ಒಂದು ಭಾಗವನ್ನು ಲೆಕ್ಕಕ್ಕೆ ಸೇರಿಸಿದಂತಾಗುತ್ತದೆ.

ವಿಶಾಲ ಹಾಗೂ ಪ್ರಮುಖವಾದ ಚಿನ್ನದ ಚತುಷ್ಪಥವು (ಜಿ.ಕ್ಯು) ಹತೋಟಿಯ ಮಾರ್ಗ ಅಲ್ಲ , ಆದಾಗ್ಯೂ ಕ್ಷೇಮಕರ (ರಕ್ಷಣಾ)ಲಕ್ಷಣಗಳಾದ ರಸ್ತೆಯಾ ಇಕ್ಕೆಲಗಳಲ್ಲಿರುವ ಹಳಿಯ ರಕ್ಷಕಗಳು, ರಸ್ತೆಯ ಭುಜಗಳು, ಮತ್ತು ಎತ್ತರಕ್ಕೆ ಕಾಣುವ ಚಿನ್ಹೆಗಳನ್ನು ಉಪಯೋಗಿಸಲಾಗಿದೆ. ೨೦೦೭ ಸೆಪ್ಟಂಬರ್ ವರೆಗೆ ಸಂಪೂರ್ಣ ಕೆಲಸದಲ್ಲಿನ ಶೇಕಡಾ ೯೬ ಭಾಗವನ್ನು ಮುಗಿಸಲಾಗಿದೆ.[೨] ಆದರೆ ೨೦೦೯ ಸೆಪ್ಟಂಬರ್ ನಲ್ಲಿ, ಪ್ರಚಲಿತದಲ್ಲಿರುವ ನಾಲ್ಕು-ಲೇನ್ ಗಳ ಹೆದ್ದಾರಿಯನ್ನು ಆರು-ಲೇನ್ ಗಳ ಹೆದ್ದಾರಿಯನ್ನಾಗಿ ಬದಲಾಯಿಸಲಾಗುವುದೆಂದು ಪ್ರಕಟಿಸಲಾಗಿದೆ.[೩] ವರದಿಯಂತೆ, ಈ ಯೋಜನೆಯು ವಿವಿಧ ಹಂತಗಳಲ್ಲಿ ತಪ್ಸೀಲಿನಿಂದ ಹಿಂದುಳಿದ್ದಿದ್ದು, ಪ್ರಮುಖವಾಗಿ ಭೂ ಕಬಳಿಕೆಯ ಅದಚಣೆಗಳಿಂದಾಗಿ ಮತ್ತು ಕಂಟ್ರಾಕ್ಟರ್ ಗಳ ಜೊತೆಯ ಜಗಳದಿಂದಾಗಿ ಮತ್ತೆ ಮಾತುಕತೆ ನಡೆಸಬೇಕಾಗಿದೆ.[೪][೫]

ಜಿ.ಕ್ಯು ಯೋಜನೆಯನ್ನು ಭಾರತದ ಅಧಿಕೃತ ರಾಷ್ಟ್ರೀಯ ಹೆದ್ದಾರಿ ಯು ನಿರ್ವಹಿಸುತ್ತಿದ್ದು , (ಎನ್ ಹೆಚ್ ಎ ಐ) ಇದು ರಸ್ತೆ, ಸಾರಿಗೆ ಸಂಪರ್ಕ ಮತ್ತು ಹೆದ್ದಾರಿಗಳ ಕಾರ್ಯಾಲಯ ದ ಕೆಳಗಿದೆ. ಭಾರತದಲ್ಲಿ ಮುಂಬಯಿ-ಪುಣೆ ಎಕ್ಸ್ ಪ್ರೆಸ್ ವೇ,ಅನ್ನು ಮೊದಲು ಸುಂಕದ ರಸ್ತೆಯ ಮೇಲ್ವಿಚಾರಕ ಮಾರ್ಗ ವನ್ನಾಗಿ ಕಟ್ಟಬೇಕಾಗಿದ್ದು, ಇದು ಚತುಷ್ಪಥ ಯೋಜನೆಯ ಭಾಗವಾಗಿದ್ದರೂ ಎನ್ ಹೆಚ್ ಎ ಐ ನಿಂದ ದೇಣಿಗೆ ಕೊಟ್ಟಿಲ್ಲ ಮತ್ತು ಪ್ರಮುಖ ಹೆದ್ದಾರಿಯಿಂದ ಬೇರೆಯಾಗಿದೆ. ಚಿನ್ನದ ಚತುಷ್ಪಥದ ಯೋಜನೆಯಲ್ಲಿನ ಇನ್ಫ್ರಾ ಸ್ಟ್ರಕ್ಚರಲ್ ಅಭಿವೃದ್ಧಿಯ ಚಟುವಟಿಕೆಗಳಿಗೆ ಇರುವ ಪ್ರಮುಖ ಕೊಡುಗೆದಾರರಲ್ಲಿ ಇನ್ಫ್ರಾ ಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಸಯಲ್ ಸೇರ್ವಿಸೆಸ್ (ಐ ಎಲ್ & ಎಫ್ ಎಸ್)ಕೂಡ ಒಂದಾಗಿದೆ.

ಆರ್ಥಿಕ ಲಾಭಗಳು[ಬದಲಾಯಿಸಿ]

ಚಿನ್ನದ ಚತುಷ್ಪಥ ಯೋಜನೆಯು, ಅನೇಕ ಪ್ರಮುಖ ನಗರಗಳು ಮತ್ತು ರೇವು ಪಟ್ಟಣಗಳ (ಬಂದರು) ಮದ್ಯೆ ಉತ್ತಮವಾದ ಮತ್ತು ಅತಿ ವೇಗದ ಸಾರಿಗೆ ಸಂಪರ್ಕದ ಜಾಲಗಳನ್ನು ಸ್ಥಾಪಿಸಿದೆ. ಇದು, ಭಾರತದಲ್ಲಿರುವ ಜನರು ಮತ್ತು ಉತ್ಪಾದನೆಗಳನ್ನು ಸುಲಭ ಹಾಗೂ ಸರಾಗವಾಗಿ ಸಾಗಿಸಲು ಹುರುಪನ್ನು ಒದಗಿಸುತ್ತದೆ. ಇದು ಸಣ್ಣ ಪಟ್ಟಣಗಳಿಗೆ ಮಾರುಕಟ್ಟೆಗಳ ಪ್ರವೇಶನದ ಮುಖಾಂತರ ಕೈಗಾರಿಕೆ ಮತ್ತು ಉದ್ಯೋಗದ ಬೆಳವಣಿಗೆಯನ್ನು ಬಲಪಡಿಸುತ್ತದೆ. ರೈತರಿಗೆ ಉತ್ತಮ ಸಾರಿಗೆ ಸಂಪರ್ಕದ ಮೂಲಕ ತಮ್ಮ ಬೇಸಾಯದ ಹಿನ್ನಾಡಿನ ಉತ್ಪನ್ನಗಳನ್ನು, ನಷ್ಟ ಮತ್ತು ಹಾಳಾಗುವುದನ್ನು ಕಡಿಮೆಗೊಳಿಸುವ ಹಾದಿಯಲ್ಲಿ, ಪ್ರಮುಖ ನಗರಗಳು ಮತ್ತು ಬಂದರುಗಳಿಗೆ ರಫ್ತು ಮಾಡಲು ಅವಕಾಶಗಳನ್ನು ಒದಗಿಸುತ್ತದೆ. ಕೊನೆಯದಾಗಿ, ಇದು ಕಟ್ಟಡ ನಿರ್ಮಾಣದ ಮುಖಾಂತರ ನೇರವಾಗಿ ಹಾಗೆಯೇ ಅಪರೋಕ್ಷವಾಗಿ ಸಿಮೆಂಟ್, ಉಕ್ಕು ಮತ್ತು ಇತರ ಕಟ್ಟಡ ರಚನೆಯ ಸರಕು ಸಾಮಗ್ರಿಗಳ ಬೇಡಿಕೆಯು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ.

ಮಾರ್ಗ[ಬದಲಾಯಿಸಿ]

ರಾಷ್ಟ್ರೀಯ ಹೆದ್ದಾರಿಗಳ ನ್ನು ಮಾತ್ರ ಚಿನ್ನದ ಚತುಷ್ಪಥದಲ್ಲಿ ಉಪಯೋಗಿಸಿಕೊಳ್ಳಲಾಗಿದೆ. ಈ ಚತುಷ್ಫಥದ ನಾಲ್ಕು ಕಾಲುಗಳು, ಈ ಕೆಳಗಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ:

ಮುಖ್ಯ ನಗರಗಳು[ಬದಲಾಯಿಸಿ]

ದೆಹಲಿ - ಕೋಲ್ಕತ್ತಾ ದೆಹಲಿ - ಮುಂಬಯಿ ಚೆನ್ನೈ, ಮುಂಬಯಿ ಕೋಲ್ಕತ್ತಾ - ಚೆನ್ನೈ
ವಲಿಗ್ನ್ ="ಟಾಪ್ " ಂ ವಲಿಗ್ನ್ ="ಟಾಪ್ " ಂ ವಲಿಗ್ನ್ ="ಟಾಪ್ " ಂ ವಲಿಗ್ನ್ ="ಟಾಪ್ " ಂ

ಪ್ರಚಲಿತ ಸ್ಥಿತಿ[ಬದಲಾಯಿಸಿ]

ವಿಭಾಗೀಕರಣ ಮುಗಿದಿರುವ ಉದ್ದ (ಕಿಮಿ) ಒಟ್ಟು ಉದ್ದ (ಕಿಮಿ) ಶೇಕಡಾವಾರು ಮುಗಿದಿದೆ (ದಿನಾಂಕ)ದ ವರೆಗೆ ಮೂಲ:
1. ದೆಹಲಿ -ಕೋಲ್ಕತ್ತಾ 1451 1453 99.86 31 ಜನವರಿ 2010 [೧] Archived 2009-08-01 ವೇಬ್ಯಾಕ್ ಮೆಷಿನ್ ನಲ್ಲಿ.
೨. ಚೆನ್ನೈ, ಮುಂಬಯಿ ೧೨೭೦ ೧೨೯೦ ೯೮.೬೮ ೩೧ ಜನವರಿ ೨೦೧೦ [೨] Archived 2009-08-04 ವೇಬ್ಯಾಕ್ ಮೆಷಿನ್ ನಲ್ಲಿ.
ಕೋಲ್ಕತ್ತಾ -ಚೆನ್ನೈ ೧೬೦೯ ೧೬೮೪ ೯೫.೭೮ ೩೧ ಜನವರಿ ೨೦೧೦ [೩] Archived 2009-07-23 ವೇಬ್ಯಾಕ್ ಮೆಷಿನ್ ನಲ್ಲಿ.
೪. ಮುಂಬಯಿ -ದೆಹಲಿ ೧೪೧೯ ೧೪೧೯ ೧೦೦ ನವಂಬರ್ ೨೦೦೬ [೪] Archived 2009-06-28 ವೇಬ್ಯಾಕ್ ಮೆಷಿನ್ ನಲ್ಲಿ.
ಒಟ್ಟು ೫೭೪೯ ೫೮೪೬ ೯೮.೩೪ ೩೧ ಡಿಸಂಬರ್ ೨೦೦೯ [೫] Archived 2009-11-29 ವೇಬ್ಯಾಕ್ ಮೆಷಿನ್ ನಲ್ಲಿ.

ಪ್ರತೀ ರಾಜ್ಯದಲ್ಲಿರುವ ಚಿನ್ನದ ಚತುಷ್ಪಥದ ಉದ್ದ[ಬದಲಾಯಿಸಿ]

ಮುಗಿದಿರುವ ಚಿನ್ನದ ಚತುಷ್ಪಥಗಳು ಭಾರತದ ೧೩ ರಾಜ್ಯಗಳ ಮುಖಾಂತರ ಹಾದು ಹೋಗುತ್ತವೆ.

ಮುಂದಿನ ಯೋಜನೆಗಳು[ಬದಲಾಯಿಸಿ]

ಪರಿಚ್ಛೇಧ ಎನ್ ಹೆಚ್ -೨, ಎನ್ ಹೆಚ್ -೫ ಮತ್ತು ಎನ್ ಹೆಚ್ -೮ ರಸ್ತೆಗಳನ್ನು ಡಿಬಿಎಫ್ಓ (ಚಿತ್ರ , ರಚನೆ , ಹಣಕಾಸು , ಕಾರ್ಯ ನಡೆಸು ) ಮಾದರಿಯಡಿಯಲ್ಲಿ ಆರು-ಲೇನ್ ಗಳಿಗಾಗಿ ಮತ್ತೆ ವಿಶಾಲಗೊಳಿಸಲು ಪ್ರಾಮುಖ್ಯತೆಯನ್ನು ಕೊಡಲಾಗಿದೆ ಮತ್ತು ಇನ್ನು ಹೆಚ್ಚು ಪರಿಚ್ಛೇಧಗಳನ್ನು ಸಧ್ಯದಲ್ಲೇ ಆರು-ಲೇನ್ ಗಳಾಗಿ ಪರಿವರ್ತಿಸುವ ಸಾಧ್ಯತೆ ಇದೆ. ವಡೋದರದಿಂದ ಸೂರತ್ ವರೆಗೆ ಎನ್ ಹೆಚ್-೮ ರ ಆರು ಲೇನ್ ಗಳ ಕೆಲಸ ಮುಗಿದಿದೆ ಮತ್ತು ಈಗ ಇದು ಆರು-ಲೇನ್ ಗಳ ಹೆದ್ದಾರಿಯಾಗಿದೆ.

ಭ್ರಷ್ಟತೆಯ ಆಪಾದನೆ[ಬದಲಾಯಿಸಿ]

೨೦೦೩ ಆಗಸ್ಟ್ ರಲ್ಲಿ ಝಾರ್ಖಂಡ್-ಮೂಲದ ಯೋಜನೆಯ ನಿರ್ದೇಶಕ ಸತ್ಯೇಂದ್ರ ದುಬೇ, ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ , ಬಿಹಾರ್‌ನಲ್ಲಿರುವ ಹೆದ್ದಾರಿಯ ಪರಿಚ್ಚೇಧದಲ್ಲಿ ನಡೆಯುತ್ತಿರುವ ಭ್ರಷ್ಟತೆಯನ್ನು ವಿವರಿಸಿದ್ಧಾನೆ. ದುಬೇಯ್ ನ ಪ್ರತಿಪಾದನೆಯಲ್ಲಿ, ದೊಡ್ಡ ಕಟ್ಟಡ ನಿರ್ಮಾಣಗಾರರು ಎನ್ಹೆಚ್ಎಐ ನ ಆಡಳಿತಾಧಿಕಾರಿಗಳಿಂದ ಒಳಗಿನ ವಿಚಾರಗಳನ್ನು ಹೊಂದಿದ್ದಾರೆಂದೂ ಸೇರಿಸಲಾಗಿದೆ [೬], ಕಂಟ್ರಾಕ್ಟರ್ ಗಳು ತಮಗೆ ವಹಿಸಿರುವ ನಿಗದಿತ ಉದ್ದದದಲ್ಲಿ ಕಾರ್ಯಗೊಳಿಸುತ್ತಿಲ್ಲ (ಒಪ್ಪಂದದಲ್ಲಿ ಕರಾರು ಮಾಡಿದಂತೆ), ಆದರೆ ಕೆಲಸವನ್ನು ತಾಂತ್ರಿಕ ತಜ್ಞ[೬] ದ ಕೊರತೆಯಿರುವ ಸಣ್ಣ ಬಿಲ್ಡರ್ ಗಳಿಗೆ ಒಪ್ಪಿಸಿ ಮತ್ತು ಮುಂಗಡವಾಗಿ ಹಣವನ್ನು[೬] ಕೊಟ್ಟ ನಂತರ ಅವರ ಕೆಲಸವನ್ನು ಗಮನಿಸದೇ ಇರುವುದು ಎಂದು ಹೇಳಿದ್ದನು. ದುಬೇ ನ ಹೆಸರು ಪಿಎಂಓ ನಿಂದ ಎನ್ಹೆಚ್ಎಐ[೬] ಗೆ ತಿಳಿದಿದ್ದುದರಿಂದ, ಮತ್ತು ಅವನ ಇಚ್ಚೆಗೆ ವಿರುದ್ಧವಾಗಿ ಅವನನ್ನು ಗಯಾ, ಬಿಹಾರ್ ಗೆ ಸ್ಥಳಾಂತರಿಸಿ, ನವಂಬರ್ ೨೭[೬] ರಲ್ಲಿ ಅವನನ್ನು ಕೊಲೆ ಮಾಡಲಾಯಿತು.

ದುಬೇ ನ ಆಪಾದನೆಗಳ ಧೃಡೀಕರಣೆ ನಂತರ, ಎನ್ಹೆಚ್ಎಐ ಅವನ ಆಪಾದನೆಗಳನ್ನು ಒಪ್ಪಿಕೊಂಡು, ಕಂಟ್ರಾಕ್ಟರ್ ಗಳ ಆಯ್ಕೆಗಳು ಮತ್ತು ನಿಯಮಾವಳಿಗಳಲ್ಲಿ[೭] "ಆಮೂಲಾಗ್ರ ಸುಧಾರಣೆ"ಯನ್ನು ಮಾಡಿದು. ಸುಧೀರ್ಘ ಸಿ ಬಿ ಐ ತನಿಖೆಯ ನಂತರ, ಮಂತು ಕುಮಾರ್ ಮತ್ತು ಅವರ ಮೂವರು ಜೊತೆಗಾರರು ಕೊಲೆಯ ಮೇಲಿನ ಆಪಾದನೆಗಾಗಿ ದಾವೆ ಹಾಕಿ ಬಂಧಿಸಲಾಯಿತು; ಆದಾಗ್ಯೂ ಮಂತು, ೨೦೦೫ ಸಪ್ಟೆಂಬರ್ ೧೯ ರಲ್ಲಿ ಕೋರ್ಟ್ ನಿಂದ ತಪ್ಪಿಸಿಕೊಂಡನು ಮತ್ತು ಇನ್ನೂ ಓಡುತ್ತಲೇ[೮] ಇದ್ದಾನೆ.

ಅಫಘಾತಗಳು[ಬದಲಾಯಿಸಿ]

೨೦೦೬ ಫೆಬ್ರವರಿಯಲ್ಲಿ, ಕೋಲ್ಕತ್ತಾ ದಿಂದ ಚೆನ್ನೈ ಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ, ೬೦೦ ಮೀಟರ್ ಉದ್ದದಷ್ಟು ರಸ್ತೆಯು ಭೂಮಿಯೊಳಗೆ ತಗ್ಗಿ ಹೋಯಿತು, ಮತ್ತೆ ಪಶ್ಚಿಮ ಬಂಗಾಲ[೯]ಬ್ಯಾಲ್ಲಿಯಲ್ಲಿ ಈ ಹಳ್ಳದಿಂದ ಹತ್ತು ಮೀಟರ್ ನಷ್ಟು ದೊಡ್ಡದಾದ ಕಂದರವನ್ನು ಮಾಡಿದೆ. ಈ ಉದ್ದವು ಈಗ ಒಂದು ವರ್ಷಗಳ ಹಿಂದೆ, ಗ್ಲೋಬಲ್ ಟೆನ್ಡರಿಂಗ್[ಸೂಕ್ತ ಉಲ್ಲೇಖನ ಬೇಕು]ನಲ್ಲಿ ಆಯ್ಕೆಯಾದ ಮಲೇಷಿಯನ್ ಮಲ್ಟಿ ನ್ಯಾಷನಲ್ ಫರ್ಮ್ ನಿಂದ ಪೂರ್ಣಗೊಂಡಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]

  1. ಉಲ್ ರಿಚ್ , ಕ್ರ್ರಿಸ್ತಿ . "ಇಂಡಿಯಾಸ್ ಗೋಲ್ಡನ್ ಕ್ವಾದ್ರಿಲೇತರಲ್ ", ನ್ಯಾಷನಲ್ ಜಿಯಾಗ್ರಫಿಕ್ , ಸೆಪ್ಟಂಬರ್ ೧೫, ೨೦೦೮. ಚಿನ್ನದ ಚತುಷ್ಪಥವು, ಭಾರತದ ರಸ್ತೆ ಜಾಲಗಳಲ್ಲಿನ ಶೇಕಡಾ ೨ ರಷ್ಟನ್ನು ಪೂರೈಸಿದರೆ, ರಾಷ್ಟ್ರದ ಟ್ರಾಫಿಕ್ ಗಳಲ್ಲಿನ ಸುಮಾರು ಶೇಕಡಾ ೪೦ ಅನ್ನು ಕೊಂಡೊಯ್ಯುತ್ತದೆ ಮತ್ತು ರಸ್ತೆ ಸಾವುಗಳಲ್ಲಿನ ಮೂರನೇ ಒಂದು ಭಾಗವನ್ನು ಲೆಕ್ಕಕ್ಕೆ ಸೇರಿಸಿದಂತಾಗುತ್ತದೆ.
  2. "National Highways Development Project Map". National Highways Institute of India. Archived from the original on 2016-03-04. Retrieved 2010-04-05.
  3. Megha Bahree. "Ambassador: Indian Economy Will Grow". Forbes. Archived from the original on 2013-01-23. Retrieved 2010-04-05.
  4. "Golden Quadrilateral still has miles to go". Financial Express.
  5. R.N. Bhaskar. "Crossing the chasm". Forbes India. Archived from the original on 2009-09-25. Retrieved 2010-04-05.
  6. ೬.೦ ೬.೧ ೬.೨ ೬.೩ ೬.೪ http://www.rediff.com/news/2003/dec/05bihar1.htm
  7. http://www.indianexpress.com/res/web/pIe/full_story.php?content_id=78880
  8. http://www.rediff.com/news/2005/sep/13dubey.htm
  9. 2

ಹೊರಗಿನ ಕೊಂಡಿಗಳು[ಬದಲಾಯಿಸಿ]