ವೆಲ್ಲೋರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೆಲ್ಲೋರ್ ಕೋಟೆ

ವೆಲ್ಲೋರ್ ದಕ್ಷಿಣ ಭಾರತದ ತಮಿಳುನಾಡು ರಾಜ್ಯದಲ್ಲಿರುವ ವೆಲ್ಲೋರ್ ಜಿಲ್ಲೆಯ ಆಡಳಿತ ಕೇಂದ್ರ. ಪಾಲಾರ್ ನದಿಯ ದಂಡೆಯ ಮೇಲೆ ನೆಲೆಗೊಂಡಿರುವ ಇದು, ವಿವಿಧ ಕಾಲಗಳಲ್ಲಿ ಪಲ್ಲವರು, ಮಧ್ಯಯುಗೀಯ ಚೋಳರು, ನಂತರದ ಚೋಳರು, ವಿಜಯನಗರ ಸಾಮ್ರಾಜ್ಯ, ರಾಷ್ಟ್ರಕೂಟರು, ಕರ್ನಾಟಕ ಆಧಿಪತ್ಯ ಮತ್ತು ಬ್ರಿಟಿಷರ ಆಳ್ವಿಕೆಗೊಳಪಟ್ಟಿದೆ. ಇದು ರಾಜ್ಯದ ರಾಜಧಾನಿ ಚೆನ್ನೈನಿಂದ ಪಶ್ಚಿಮಕ್ಕೆ ಸುಮಾರು ೧೪೫ ಕಿಮಿ ದೂರದಲ್ಲಿ ಮತ್ತು ತಿರುವಣ್ಣಾಮಲೈನಿಂದ ಪೂರ್ವಕ್ಕೆ ಸುಮಾರು ೮೨ ಕಿಮಿ ದೂರದಲ್ಲಿ ಸ್ಥಿತವಾಗಿದೆ.