ಗುರುಪುರ
ಗುರುಪುರ | |
---|---|
town | |
Coordinates: 12°56′20″N 74°55′52″E / 12.938828°N 74.931107°E | |
Country | ಭಾರತ |
State | ಕರ್ನಾಟಕ |
District | ದಕ್ಷಿಣ ಕನ್ನಡ |
Government | |
• Body | ಮೂಳೂರು ಗ್ರಾಮ ಪಂಚಾಯತ್ |
Population (೨೦೧೧) | |
• Total | ೫೪೬೫ |
ಭಾಷೆಗಳು | |
• Official | ತುಳು |
Time zone | UTC+5:30 (IST) |
PIN | ೫೭೪೧೪೫[೧] |
Nearest city | ಮಂಗಳೂರು |
Lok Sabha constituency | ಮಂಗಳೂರು |
Vidhan Sabha constituency | ಮಂಗಳೂರು ಉತ್ತರ |
Civic agency | ಮೂಳೂರು ಗ್ರಾಮ ಪಂಚಾಯತ್ |
ಗುರುಪುರವು ಫಾಲ್ಗುಣಿ ಅಥವಾ ಗುರುಪುರ ನದಿಯಲ್ಲಿರುವ ಒಂದು ಸಣ್ಣ ಪಟ್ಟಣ .[೨] ಇದು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು ೩೪೫ ಕಿಲೋಮೀಟರ್ (೨೧೪ ಮೈಲು) ಮತ್ತು ಕರ್ನಾಟಕದ ಮುಖ್ಯ ಬಂದರು ನಗರವಾದ ಮಂಗಳೂರಿನಿಂದ ಪೂರ್ವ ದಿಕ್ಕಿಗೆ ಸುಮಾರು ೧೩ ಕಿಲೋಮೀಟರ್ (೮ ಮೈಲು) ದೂರದಲ್ಲಿದೆ .[೩]
ಅಲ್ಲಿನ ನಿವಾಸಿಗಳು ವಿವಿಧ ಸಾಂಸ್ಕೃತಿಕ ಹಿನ್ನೆಲೆಯುಳ್ಳವರು . ಅದರಲ್ಲಿ ಬಿಲ್ಲವ , ಬಂಟ್ಸ್ , ಗೌಡ , ಮತ್ತು ಸರಸತ್ವ ಬ್ರಾಹ್ಮಣರು ಸೇರಿದ್ದಾರೆ . ಸಾಮಾನ್ಯ ಸಂವಹನಕ್ಕಾಗಿ ತುಳು ಪ್ರಾಥಮಿಕ ಭಾಷೆಯಾಗಿದೆ . ಆದರೆ ಕೊಂಕಣಿ , ಬ್ಯಾರಿ ಮತ್ತು ಕನ್ನಡ ಭಾಷೆ ಗಳಲ್ಲೂ ಜನರು ಮಾತನಾಡುತ್ತಾರೆ .[೪]
ಪರಿಚಯ
[ಬದಲಾಯಿಸಿ]ಗುರುಪುರ ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿರುವ ಒಂದು ಸಣ್ಣ ಗ್ರಾಮ / ಕುಗ್ರಾಮ . ಇದು ಗುರುಪುರ ಪಂಚಾಯತ್ ಅಡಿಯಲ್ಲಿ ಬರುತ್ತದೆ. ಇದು ಮೈಸೂರು ವಿಭಾಗಕ್ಕೆ ಸೇರಿದೆ ಹಾಗೂ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಉತ್ತರಕ್ಕೆ ೪೧ ಕಿ.ಮೀ ದೂರದಲ್ಲಿದೆ. ತರೀಕೆರೆಯಿಂದ ೧೮ ಕಿ.ಮೀ. ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೨೫೨ ಕಿ.ಮೀ. ದೂರದಲ್ಲಿದೆ .
ಇತಿಹಾಸ
[ಬದಲಾಯಿಸಿ]ಸ್ಥಳೀಯ ದೇವಾಲಯಗಳ ದಾಖಲೆಗಳ ಪ್ರಕಾರ , ಗುರುಪುರ ಪಟ್ಟಣವನ್ನು ಹಿಂದೆ ಗುಲಿಪುರ ಎಂದು ಕರೆಯುತ್ತಿದ್ದರು . ಫಾಲ್ಗುಣಿ ನದಿಯ ದಡದಲ್ಲಿ ನೆಲೆಗೊಂಡಿರುವ ಗುಲಿಪುರ ವಾಣಿಜ್ಯ ಪಟ್ಟಣವಾಗಿದ್ದು , ನದಿಯ ಇತರ ಭಾಗಗಳಿಗೆ ಅದರ ಸಂಪರ್ಕ ಹೊಂದಿದೆ .[೫] ಬಂಡಸಾಲೆ ಎಂಬುದು ಅಲ್ಲಿನ ಒಂದು ಸ್ಥಳ [೬], ಅಲ್ಲಿನ ಸಿಗುವ ಸರುಕುಗಳನ್ನು ಸಂಗ್ರಹಿಸಿ ಅನೇಕ ಸ್ಥಳಗಳಿಗೆ ವಿತರಿಸಲಾಗುತ್ತದೆ . ಕುಡಿಯುವ ನೀರಿನ ಸರಬರಾಜು ಗಾಗಿ ನಿರ್ಮಿಸಲಾದ ಅಣೆಕಟ್ಟಿನಂತಹ ರಚನೆಯುಳ್ಳ 'ಬಾಂಗ್ಲಾ ಗುಡ್ಡೆ' ಯನ್ನು ಗುರುಪುರದಲ್ಲಿ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ್ದಾರೆ.[೭] [೮]
ಹತ್ತಿರದ ಸ್ಥಳಗಳು
[ಬದಲಾಯಿಸಿ]ಗುರುಪುರವು ಮಂಗಳೂರು ನಗರದಿಂದ - ೧೨ ಕಿ.ಮಿ(೭.೫ ಮೈಲು) .[೯][೧೦] ; ಕೈಕಂಬದಿಂದ - ೦೫ ಕಿ.ಮೀ. (೩.೧ ಮೈಲು) .[೧೧]; ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಕರ್ನಾಟಕದಿಂದ - ೨೮ ಕಿ.ಮೀ(೧೭ ಮೈಲು) .[೧೨]; ಸುರತ್ಕಲ್ ನಿಂದ - ೨೯ ಕಿ.ಮೀ(೧೮ ಮೈಲು) .[೧೩]; ಫಾಲ್ಗುಣಿ ನದಿತಿಂದ - ೦೦ ಕಿ.ಮೀ(೦ ಮೈಲು); ಉಡುಪಿಯಿಂದ - ೬೬ ಕಿ.ಮೀ(೪೧ ಮೈಲು) .[೧೪] ದೂರದಲ್ಲಿದೆ .
ಗುರುಪುರ ತಲುಪಲು ದಾರಿ
[ಬದಲಾಯಿಸಿ]ರಸ್ತೆ ಮೂಲಕ
[ಬದಲಾಯಿಸಿ]ತರೀಕೆರೆ ಗುರುಪುರಕ್ಕೆ ಹತ್ತಿರದ ಪಟ್ಟಣ. ತರೀಕೆರೆ ಗುರುಪುರದಿಂದ ೨೩ ಕಿ.ಮೀ ದೂರದಲ್ಲಿದೆ. ತರೀಕೆರೆದಿಂದ ಗುರುಪುರದವರೆಗೆ ರಸ್ತೆ ಸಂಪರ್ಕವಿದೆ.
ರೈಲು ದಾರಿ
[ಬದಲಾಯಿಸಿ]ಗುರುಪುರ ಬಳಿ ೧೦ ಕಿ.ಮೀ.ಗಿಂತ ಕಡಿಮೆ ದೂರದಲ್ಲಿ ಯಾವುದೇ ರೈಲು ನಿಲ್ದಾಣವಿಲ್ಲ. ಪಟ್ಟಣದ ತರೀಕೆರೆ ಹತ್ತಿರದಲ್ಲಿ ರೈಲ್ವೆ ನಿಲ್ದಾಣಗಳಿವೆ . ಅಲ್ಲಿಂದ ಗುರುಪುರಕ್ಕೆ ತಲುಪಬಹುದು.[೧೫]
ಧಾರ್ಮಿಕ ತಾಣಗಳು
[ಬದಲಾಯಿಸಿ]ಗುರುಪುರವು ಧಾರ್ಮಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಮತ್ತು ಈ ಪಟ್ಟಣದ ನಂತರ ಫಾಲ್ಗುಣಿ ನದಿಯನ್ನು ಗುರುಪುರ ಎಂದು ಹೆಸರಿಸಲಾಗಿದೆ . ಇದು ವಾಮಂಜೂರು ಮತ್ತು ಕಾಳಿಕಾಂಬ ಸ್ಥಳಕ್ಕೂ ಹತ್ತಿರದಲ್ಲಿದೆ .[೧೬] ದಕ್ಷಿಣ ಕನ್ನಡ ಜಿಲ್ಲೆಯ ತ್ವರಿತ ನಗರೀಕರಣದೊಂದಿಗೆ ಈ ಗ್ರಾಮವು ಒಂದು ಸಣ್ಣ ಪಟ್ಟಣವಾಗಿ ಮಾರ್ಪಟ್ಟಿದೆ. ಹಿಂದೂ ದೇವತೆಗಳಾದ ವರದ್ರಾಜ , ವೆಂಕಟರಮಣ ಮತ್ತು ಶ್ರೀ ಸತ್ಯದೇವತೆ ಧರ್ಮದೇವತೆ[೧೭] ಯ ದೇವಾಲಯಗಳು ಇಲ್ಲಿ ಕಂಡುಬರುತ್ತವೆ.[೧೮] ಹಬ್ಬಗಳು ವರ್ಷದ ಬಹುಪಾಲು ಇಲ್ಲಿ ನಡೆಯುತ್ತವೆ, ಆದರೆ ಮುಖ್ಯ ಹಬ್ಬವು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುತ್ತದೆ . ಭಾರತೀಯ ಕ್ಯಾಲೆಂಡರ್ ತಿಂಗಳಲ್ಲಿ ಗುರುಪುರ ತೆರು[೧೯] , ಓಕುಲ್, ಒಡು ತೆರು ಎಂದು ಹೆಸರಿಸಲಾಗುತ್ತದೆ . ಶ್ರೀ ಸತ್ಯದೇವತಾ ಧರ್ಮದೇವತಾ ದೇವಸ್ಥಾನದ ಸ್ವಲ್ಪ ದೂರದಲ್ಲಿ ದೊಡ್ಡ ಮಸೀದಿ ಇದೆ .
ಉಲ್ಲೇಖಗಳು
[ಬದಲಾಯಿಸಿ]- ↑ ಪಿನ್ ಕೋಡ್
- ↑ ಗುರುಪುರ ನದಿ
- ↑ "Indian express". Archived from the original on 2022-07-17. Retrieved 2019-06-20.
- ↑ Explore India
- ↑ [೧]
- ↑ ಬಂಡಸಲೆ[ಶಾಶ್ವತವಾಗಿ ಮಡಿದ ಕೊಂಡಿ]
- ↑ Megamedia news[ಶಾಶ್ವತವಾಗಿ ಮಡಿದ ಕೊಂಡಿ]
- ↑ ಟಿಪ್ಪು ಸುಲ್ತಾನ್ ರವರು ನಿರ್ಮಿಸಿದ ಬಾಂಗ್ಲಾ ಗುಡ್ಡೆ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಗುರುಪುರ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಮಂಗಳೂರಿನಿಂದ ಗುರುಪುರಕ್ಕೆ
- ↑ ಗುರುಪುರದಿಂದ ಕೈಕಂಬಕ್ಕಿರುವ ಅಂತರ
- ↑ ಎನ್ಐಟಿಕೆ ಯಿಂದ ಗುರುಪುರಕ್ಕಿರುವ ಅಂತರ
- ↑ ಗುರುಪುರದಿಂದ ಸುರತ್ಕಲ್ ಗೆ ಇರುವ ಅಂತರ
- ↑ ಉಡುಪಿಯಿಂದ ಗುರುಪುರಕ್ಕಿರುವ ಅಂತರ
- ↑ https://www.onefivenine.com/india/villages/Chikmagalur/Tarikere/Gurupura
- ↑ ಗುರುಪುರ ಮತ್ತು ವಾಮಂಜೂರಿಗೆ ಇರುವ ಅಂತರ
- ↑ ಶ್ರೀ ಸತ್ಯದೇವತೆ ಮಂದಿರ
- ↑ "ಗುರುಪುರದಲ್ಲಿನ ದೇವಾಲಯ". Archived from the original on 2021-12-24. Retrieved 2019-06-20.
- ↑ ಗುರುಪುರ ತೆರು
- Pages with non-numeric formatnum arguments
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2022
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಮೇ 2024
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಅಕ್ಟೋಬರ್ 2023
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Short description is different from Wikidata
- Coordinates on Wikidata
- ಕರ್ನಾಟಕದ ಪ್ರಮುಖ ಸ್ಥಳಗಳು
- ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ
- ದಕ್ಷಿಣ ಕನ್ನಡ ಜಿಲ್ಲೆಯ ನಗರಗಳು ಮತ್ತು ಪಟ್ಟಣಗಳು