ಕೈಕಂಬ
ಕೈಕಂಬ ಹಿಂದಿನಕಾಲದಲ್ಲಿ ಕಂದಾವರ ಎಂಬ ಹೆಸರಿನಿಂದ ಕರೆಯಲ್ಪಡುವ ಮಂಗಳೂರು ತಾಲೂಕಿನ ಒಂದು ನಗರ ಪಟ್ಟಣ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ಮತ್ತು ಮಂಗಳೂರು ನಗರದ ನಡುವೆ ನೆಲೆಗೊಂಡಿದೆ. ಈ ಪಟ್ಟಣವು ಮಂಗಳೂರು - ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ ೧೬೯ ನಲ್ಲಿ ಬರುತ್ತದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬಜಪೆಯಿಂದ ೮ ಕಿಮೀ ದೂರದಲ್ಲಿದೆ. ೨೦೦೯ ರ ಜನಗಣತಿಯ ಪ್ರಕಾರ ಕೈಕಂಬದ ಜನಸಂಖ್ಯೆ ಸುಮಾರು ೧೫೩೨೫ ಆಗಿದೆ. ಕೈಕಂಬದ ಭಾಗಗಳನ್ನು ಕಂದಾವರ ಪಂಚಾಯತ್ ಮತ್ತು ಗುರುಪುರ ಪಂಚಾಯತ್ ನಿಯಂತ್ರಿಸುತ್ತಿದೆ.ವಿಮಾನ ನಿಲ್ದಾಣ, ನಗರ ಮತ್ತು ಕೈಗಾರಿಕಾ ಪ್ರದೇಶಕ್ಕೆ ಸಮೀಪವಿರುವ ಭೌಗೋಳಿಕ ಸ್ಥಳದಿಂದಾಗಿ ಭೂಮಿ ಬೆಲೆಗಳು ಏರಿದೆ. ಕೈಕಂಬದಲ್ಲಿರುವ ಗೈಡ್-ಪೋಲ್ನ ಭೌಗೋಳಿಕ ಸ್ಥಳ ನಿಖರವಾಗಿ ೧೨.೯೬೦೭° ಉತ್ತರ ಮತ್ತು ೭೪.೯೩೩೨° ಪೂರ್ವ ಮತ್ತು ಸಮುದ್ರ ಮಟ್ಟದಿಂದ ಸುಮಾರು ೧೦೦ ಮೀಟರ್‌ಗಳಾಷ್ಟು ದೂರದಲ್ಲಿದೆ.
ವ್ಯುತ್ಪತ್ತಿ
[ಬದಲಾಯಿಸಿ]ಕೈಕಂಬ ಪದವು ತುಳು ಭಾಷೆಯಲ್ಲಿ ಕೈ-ಪೋಸ್ಟ್ ಮತ್ತು ಕನ್ನಡ ಭಾಷೆಯಲ್ಲಿ ಮಾರ್ಗದರ್ಶಿ-ಪೋಲ್ ಎಂದರ್ಥ. ಈ ಪದವನ್ನು ತುಳುನಾಡಿನಲ್ಲಿರುವ ರಸ್ತೆಗಳ ಜಂಕ್ಷನ್‌ಗಳಲ್ಲಿ ಹಳೆಯ ದಿನಗಳಲ್ಲಿ ಬಳಸಲಾಗುತ್ತಿತ್ತು, ಮರದ ಕಂಬಗಳು ಜಂಕ್ಷನ್ ಮಧ್ಯದಲ್ಲಿ ಸ್ಥಳಗಳ ದಿಕ್ಕನ್ನು ಸೂಚಿಸುತ್ತದೆ. ಈ ಪಟ್ಟಣದ ಚಿಕ್ಕ ಜಂಕ್ಷನ್ ಮಂಗಳೂರು ಮತ್ತು ಬಜ್ಪೆ, ಮೂಡಬಿದ್ರಿಗಳಿಗೆ ದಾರಿ ಮಾಡುವ ಮೂರು-ಮಾರ್ಗದ ರಸ್ತೆ ಸಂಪರ್ಕವನ್ನು ಹೊಂದಿದೆ.ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಿ-ಪೋಲ್ ಹೊಂದಿದೆ.
ವಾಣಿಜ್ಯ ಮತ್ತು ಕೈಗಾರಿಕೆಗಳು
[ಬದಲಾಯಿಸಿ]ಮಂಗಳೂರು ಟೈಲ್ ಕಾರ್ಖಾನೆಗಳು ಕಡಿಮೆ ಸಂಖ್ಯೆಯಲ್ಲಿವೆ. ಗೋಡಂಬಿ , ರೈಸ್ ಸಂಸ್ಕರಣೆ ಮತ್ತು ಅಡಿಕೆ ಸಂಸ್ಕರಣೆ ಕೈಗಾರಿಕೆಗಳು ಕೈಂಕಬ ವನ್ನು ಉನ್ನತಿಕರಿಸುತ್ತಿದೆ. ಕೋಳಿ ಸಾಕಣೆ , ಗೋಡಂಬಿ ತೋಟ, ಭತ್ತದ ಕೃಷಿಯನ್ನು ನಾವು ಕಾಣಬಹುದು. ರಿಯಲ್ ಎಸ್ಟೇಟ್ ವ್ಯವಹಾರವು ಮತ್ತೊಂದು ಪ್ರಮುಖ ವಾಣಿಜ್ಯ ಪ್ರದೇಶವಾಗಿದೆ.
ಜನರು ಮತ್ತು ಸಂಸ್ಕೃತಿ
[ಬದಲಾಯಿಸಿ]ಎಲ್ಲಾ ಜನರು ಸಾಕ್ಷರರಾಗಿದ್ದಾರೆ. ಈ ಪಟ್ಟಣದ ವಿಶೇಷತೆ ಪ್ರತಿ ಕುಟುಂಬವೂ ಕನಿಷ್ಟ ಒಂದು ವ್ಯಕ್ತಿ ವಿದೇಶದಲ್ಲಿ / ವಿದೇಶಿಯಾಗಿರುತ್ತಾನೆ. ಮುಖ್ಯವಾಗಿ ತುಳು, ಕೊಂಕಣಿ ಮತ್ತು ಉರ್ದು ಭಾಷೆ ಮಾತನಾಡುವವರು ಈ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಕನ್ನಡ ,ಹಿಂದಿ ಮತ್ತು ಇಂಗ್ಲಿಷ್ ಜ್ಞಾನವನ್ನು ಹೊಂದಿದ್ದಾರೆ. ದೀಪಾವಳಿ, ಈದ್ ಉಲ್-ಫಿತ್ರ್, ವಿಜಯದಶಮಿ (ದಸರಾ), ಗಣೇಶ ಚೌತಿ, ಕ್ರಿಸ್ಮಸ್ ಹಬ್ಬಗಳನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. ಜನರು ಶಾಂತಿಯಲ್ಲಿ ವಾಸಿಸುತ್ತಾರೆ. ಮಂಗಳೂರಿನ ಇತರ ಉಪನಗರಗಳಿಗೆ ಹೋಲಿಸಿದರೆ ಈ ಧರ್ಮಗಳ ನಡುವೆ ಬಹಳ ಕಡಿಮೆ ಸಂಘರ್ಷಗಳಿವೆ.[೧]
ಸಮೀಪದ ಸ್ಥಳಗಳು
[ಬದಲಾಯಿಸಿ]ಸಮೀಪದ ಸ್ಥಳಗಳೆಂದರೆ ಗುರುಪುರ, ಮಂಗಳೂರು, ಪೊಳಲಿ, ಅಡ್ಡೂರು, ಬಜ್ಪೆ, ಬಂಟ್ವಾಳ ಸುರಲ್ಪಾಡಿ ಮತ್ತು ಮೂಡಬಿದ್ರಿ, ಗಂಜಿನಮಠ, ಕಿನ್ನಿಕಂಬಳ, ಮಳಲಿ, ನಾರಳ
ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳು
[ಬದಲಾಯಿಸಿ]- ಜಾಮಿಯಾ ಮಸೀದಿ (ಕೈಕಂಬ ನಗರ)
- ಶ್ರೀ ಡೂಮಾವತಿ ದೈವಸ್ಥಾನ, ಬೈಲು
- ರಾಜರಾಜೇಶ್ವರಿ ದೇವಾಲಯ ,ಪೊಳಲಿ
- ಲೇಡಿ ಆಫ್ ಪೊಂಪೈ ಚರ್ಚ್ ,ಕವ್ದೂರ್
- ನೂರುಲ್ ಉಲೂಮ್ ,ಸುರಲ್ಪಾಡಿ
- ಶ್ರೀ ಮಹಾಗಣಪತಿ ದೇವಸ್ಥಾನ, ಗಂಜಿಮಠ
- ಬ್ರಹ್ಮ ಬಾಲಾಂಡಿ ದೇವಸ್ಥಾನ, ಮೂಡುಪೆರಾರ
- ಜಾಮಿಯಾ ಮಸೀದಿ ,ಗಂಜಿಮಠ
- ಹಜರತ್ ಅಸ್ರುರುದ್ದೀನ್ ಅಲ್ಲ್ಯ ಅಲ್ಲಾ ದರ್ಗಾ ಮತ್ತು ಮಸೀದಿ
- ಹಜರತ್ ಅಸ್ರರುದ್ದೀನ್ ಜಾಮಿಯಾ ಮಸೀದಿ
- ಶ್ರೀ ರಾಮ್ ಭಜನಾ ಮಂದಿರ, ನಾರಳ
- ಶ್ರೀ ರಾಧಾ ಕೃಷ್ಣ ಭಜನಾ ಮಂದಿರ, ಕಿನ್ನಿಕಂಬಳ
- ಜಾಮಿಯಾ ಮಸೀದಿ, ಕಂದಾವರ
- ಬದ್ರಿಯಾ ಮದರಾಸ ,ಕಂದಾವರ
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು
[ಬದಲಾಯಿಸಿ]- ವಿಜಯಾ ಬ್ಯಾಂಕ್
- ಸಿಂಡಿಕೇಟ್ ಬ್ಯಾಂಕ್
- ಕೆನರಾ ಬ್ಯಾಂಕ್
- ಕರಾವಳಿ ಕ್ರೆಡಿಟ್ ಕಾರ್ಪೊರೇಟಿವ್ ಸೊಸೈಟಿ
- ನೇತ್ರಾವತಿ ಗ್ರಾಮೀಣ ಬ್ಯಾಂಕ್
- ಶ್ರೀ ಭಗವತಿ ಸಹಕಾರಿ ಬ್ಯಾಂಕ್
- ಎಸ್ಸಿಡಿಸಿ ಬ್ಯಾಂಕ್
- ಕುಂಬರ ಗುಡಿ ಕೈಗರಿಕ ಬ್ಯಾಂಕ್, ಮಳಲಿ
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
- ಆಕ್ಸಿಸ್ ಬ್ಯಾಂಕ್ ಎಟಿಎಂ
- ಸಿಂಡಿಕೇಟ್ ಬ್ಯಾಂಕ್ ಎಟಿಎಂ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ
ಉಲ್ಲೇಖಗಳು
[ಬದಲಾಯಿಸಿ]