ವಾಮಂಜೂರು ಒಂದು ವಸತಿ ಪ್ರದೇಶವಾಗಿದ್ದು, ಕರ್ನಾಟಕದ ಮಂಗಳೂರಿನ ನಗರ ನಿಗಮದ ವ್ಯಾಪ್ತಿಯೊಳಗೆ ಬರುತ್ತದೆ. ಇದು ಮಂಗಳೂರಿನಿಂದ ನಂತೂರು- ಕುಲಶೇಖರ ದಾಟಿ ಮೂಡಬಿದ್ರೆ - ಕಾರ್ಕಳಕ್ಕೆ ಹೋಗುವಾಗ (ರಾಷ್ರೀಯ ಹೆದ್ದಾರಿ ೧೬೯ )ಕಾಣಬರುವ ಸಣ್ಣ ಊರು.[೧] ಇಲ್ಲಿನ ಜನರು ಸಾಮಾನ್ಯವಾಗಿ ತುಳು ಮಾತನಾಡುತ್ತಾರೆ. ಕನ್ನಡ, ಕೊಂಕಣಿ, ಬ್ಯಾರಿ ಭಾಷೆಯು ಬಳಕೆಯಲ್ಲಿದೆ.[೨]
ವಾಮಂಜೂರು ಕರ್ನಾಟಕದ ಕರಾವಳಿ ನಗರವಾದ ಮಂಗಳೂರಿನ ಪ್ರವಾಸಿ ಮತ್ತು ವಸತಿ ಪ್ರದೇಶವಾಗಿದೆ. ಇದು ಕುಡುಪು ಮತ್ತು ಗುರುಪುರಕ್ಕೆ ಹತ್ತಿರದಲ್ಲಿದೆ. ವಾಮಂಜೂರು ಅನೇಕ ಐತಿಹಾಸಿಕ ಮತ್ತು ಭೌಗೋಳಿಕ ಕಾರಣಗಳಿಗಾಗಿ ಪ್ರಸಿದ್ಧವಾಗಿದೆ. ಇಲ್ಲಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಕರ್ನಾಟಕದ ಏಕೈಕ ಕ್ಯಾಥೊಲಿಕ್ ಎಂಜಿನಿಯರಿಂಗ್ ಸಂಸ್ಥೆಯಾಗಿದೆ. ಪಿಲಿಕುಳ ನಿಸರ್ಗಧಾಮ,[೩] ಸ್ವಾಮಿ ವಿವೇಕಾನಂದ ತಾರಾಲಯ ಮತ್ತು ಮಾನಸ ವಾಟರ್ ಪಾರ್ಕ್ ವಾಮಂಜೂರಿನ ಪ್ರವಾಸಿ ತಾಣಗಳು. ಮಂಗಳೂರಿಗೆ ದೂರದರ್ಶನ ಪ್ರಸಾರ ಸೌಲಭ್ಯವು ವಾಮಂಜೂರಿನಲ್ಲಿದೆ.