ಕ್ರಿಸ್ಟಿಯಾನ್ ಹೈಜೆನ್ಸ್
ಕ್ರಿಸ್ಟಿಯಾನ್ ಹೈಜೆನ್ಸ್ | |
---|---|
![]() | |
ಜನನ | The Hague, Dutch Republic | ೧೪ ಏಪ್ರಿಲ್ ೧೬೨೯
ಮರಣ | 8 July 1695 The Hague, Dutch Republic | (aged 66)
ವಾಸಸ್ಥಳ | Netherlands, France |
ರಾಷ್ಟ್ರೀಯತೆ | Dutch |
ಕಾರ್ಯಕ್ಷೇತ್ರ | Physics Mathematics Astronomy Horology |
ಸಂಸ್ಥೆಗಳು | Royal Society of London French Academy of Sciences |
ಅಭ್ಯಸಿಸಿದ ವಿದ್ಯಾಪೀಠ | University of Leiden University of Angers |
ಪ್ರಸಿದ್ಧಿಗೆ ಕಾರಣ | Titan Explanation of Saturn's rings Centrifugal force Collision formulae Pendulum clock Huygens–Fresnel principle Wave theory Birefringence Evolute Huygenian eyepiece 31 equal temperament musical tuning Huygens–Steiner theorem |
ಪ್ರಭಾವಗಳು | Galileo Galilei René Descartes Frans van Schooten |
ಪ್ರಭಾವಿತರು | Gottfried Wilhelm Leibniz Isaac Newton[೧][೨] |
ಕ್ರಿಸ್ಟಿಯಾನ್ ಹೈಜೆನ್ಸ್ ಲಂಡನ್ನಿನ ರಾಯಲ್ ಸೊಸೈಟಿಯ "ಫೆಲೋ" ಪುರಸ್ಕಾರಕ್ಕೆ ಪಾತ್ರನಾಗಿದ್ದ ಹದಿನೇಳನೇ ಶತಮಾನದ ವಿಜ್ಞಾನಿ. ನೆದರ್ಲಾಂಡ್ಸ್ ದೇಶದವನು. ಖಗೋಳ ವಿಜ್ಞಾನ ಮತ್ತು ಭೌತಶಾಸ್ತ್ರ ಇವನ ಮುಖ್ಯ ಕ್ಷೇತ್ರಗಳು. ಇದಲ್ಲದೆ ಗಣಿತಕ್ಷೇತ್ರದಲ್ಲಿ ಸಂಭವನೀಯತೆ (ಪ್ರಾಬಬಿಲಿಟಿ) ಕುರಿತಾಗಿ ಸಂಶೋಧನೆ ನಡೆಸಿದ್ದಾನೆ. ಸಮಯದ ಮಾಪನ ಕೂಡಾ ಇವನ ಆಸಕ್ತಿಯಾಗಿತ್ತು.
- ಜನನದ ತಾರೀಕು : ಏಪ್ರಿಲ್ 14, 1629
- ಜನನ ಸ್ಥಾನ: ಹೇಗ್, ಡಚ್ ಗಣತಂತ್ರ
- ಮರಣದ ತಾರೀಕು ಮತ್ತು ವಯಸ್ಸು : ಜುಲೈ 8, 1695 (56 ವರ್ಷ)
- ಮರಣ ಸ್ಥಾನ: ಹೇಗ್, ಡಚ್ ಗಣತಂತ್ರ
- ಬದುಕಿದ್ದ ಸ್ಥಳಗಳು : ನೆದರ್ಲ್ಯಾಂಡ್ಸ್ ಮತ್ತು ಫ್ರಾನ್ಸ್
- ರಾಷ್ಟ್ರೀಯತೆ : ಡಚ್
- ಮುಖ್ಯ ಸಾಧನೆಗಳು
- ಶನಿಗ್ರಹದ ಟೈಟನ್ ಚಂದ್ರನನ್ನು ಗುರುತಿಸಿದ್ದು
- ಶನಿಗ್ರಹದ ಉಂಗುರಗಳು ಹೇಗೆ ಉಂಟಾದವೆಂಬ ವಿವರಣೆ
- ಅಪಕೇಂದ್ರೀಯ ಶಕ್ತಿ
- ವಸ್ತುಗಳ ನಡುವೆ ಉಂಟಾಗುವ ಘರ್ಷಣೆಯನ್ನು ಕುರಿತಾದ ಫಾರ್ಮುಲಾಗಳು
- ಪೆಂಡುಲಮ್ ಗಡಿಯಾರ
- ಹೈಜೆನ್ಸ್–ಫ್ರೆಸ್ನೆ ಸಿದ್ಧಾಂತ
- ತರಂಗ ಸಿದ್ಧಾಂತ
- ಹೈಜೆನ್ ಕನ್ನಡಕ
- 31 ಸಮಾನ ಭಾವಗಳು
- ಸಂಗೀತದ ಶ್ರುತಿ ಜೋಡಣೆ
- ಹೈಜೆನ್ಸ್-ಸ್ಟ್ರೇನರ್ ಪ್ರಮೇಯ
- ಪ್ರಭಾವ : ಗೇಲಿಲಿಯೋ ಗೆಲಿಲಿ, ರೆನಿ ಡೆಕಾರ್ಟೆ, ಫ್ರಾನ್ಸ್ ವಾನ್ ಷೂಟೆನ್
- ಇವನಿಂದ ಪ್ರಭಾವಿತರಾದವರು – ಗಾಟ್ಫ್ರೀಡ್ ವಿಲ್ಹೆಲ್ಮ್ ಲೆಬ್ನಿಜ್, ಐಸಾಕ್ ನ್ಯೂಟನ್,
- ಅನುಸರಿಸಿದ ಧರ್ಮ – ಕ್ರೈಸ್ತ ಧರ್ಮ
ಹೈಜೆನ್ಸ್ ತನ್ನ ಕಾಲಮಾನದಲ್ಲಿ ಮುಂಚೂಣಿಯ ವಿಜ್ಞಾನಿಯಾಗಿದ್ದ. ದೂರದರ್ಶಕ ಮೂಲಕ ಶನಿಗ್ರಹದ ಸುತ್ತಲೂ ಇರುವ ಉಂಗುರಗಳನ್ನು ಅಧ್ಯಯನ ಮಾಡಿ ಶನಿಗ್ರಹದ “ಟೈಟನ್” ಚಂದ್ರನನ್ನು ಗುರುತಿಸಿದವನು ಇವನೇ. ಇಂದು ಸಾಮಾನ್ಯವಾಗಿರುವ ಪೆಂಡುಲಮ್ ಗಡಿಯಾರವನ್ನು ಕಂಡುಹಿಡಿದದ್ದು ಈತನೇ. ಇಂದಿನ ಮಕ್ಕಳು ಶಾಲೆಯಲ್ಲಿ ಕಲಿಯುವ ಮೆಕಾನಿಕ್ಸ್, ಆಪ್ಟಿಕ್ಸ್ ಮತ್ತು ಸಂಭವನೀಯತೆಯ ಕೆಲವು ಮುಖ್ಯ ಶೋಧನೆಗಳನ್ನು ಹೈಜೆನ್ಸ್ ನಡೆಸಿದ್ದಾನೆ.
ಪ್ರಾರಂಭಿಕ ಜೀವನ[ಬದಲಾಯಿಸಿ]


ಕ್ರಿಸ್ಟಿಯಾನ್ ಹೈಗೆನ್ಸ್ ನೆದರ್ಲೆಂಡ್ಸ್ ದೇಶದ “ಹೇಗ್” ನಗರದಲ್ಲಿ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ.[೩][೪]. ತಂದೆ ಕಾನ್ಸ್ಟಾಂಟಿನ್ ಹೈಗೆನ್ಸ್ ಒಬ್ಬ ರಾಜಕೀಯ ಮುತ್ಸದ್ದಿ. ಜೊತೆಗೇ ಕವಿ ಮತ್ತು ಸಂಗೀತಗಾರನಾಗಿದ್ದ. ಆತನಿಗೆ ಪ್ರಸಿದ್ಧ ವಿಜ್ಞಾನಿಗಳಾದ ಗೆಲಿಲಿಯೋ ಗೆಲಿಲಿ, ರೆನಿ ಡೆಕಾರ್ಟೆ ಮೊದಲಾದವರ ಒಡನಾಟವಿತ್ತು. ಕ್ರಿಸ್ಟಿಯಾನ್ 15 ವರ್ಷದ ಹುಡುಗನಾಗಿದ್ದಾಗ ಅವನಿಗೆ ಗಣಿತದ ಮನೆಮೇಷ್ಟ್ರು ಸ್ಟಾಂಪಿಯನ್ ಎಂಬಾತ ಅವನಿಗೆ ಅನೇಕ ಸಮಕಾಲೀನ ವೈಜ್ಞಾನಿಕ ಗ್ರಂಥಗಳನ್ನು ಓದಲು ನೀಡಿದನಂತೆ.
ವಿದ್ಯಾರ್ಥಿ ಜೀವನ[ಬದಲಾಯಿಸಿ]
ಕ್ರಿಸ್ಟಿಯಾನ್ ತಂದೆಯು ಅವನನ್ನು ಓದಲು ಲೇಡನ್ ವಿಶ್ವವಿದ್ಯಾಲಯಕ್ಕೆ ಕಳಿಸಿದ (1645-1647). ಅಲ್ಲಿ ವಾನ್ ಷೂಟೆನ್ ಎಂಬ ಗುರುವಿನ ಮೇಲ್ವಿಚಾರಣೆಯಲ್ಲಿ ಅವನು ಓದಿದ. ಷೂಟೆನ್ ಅವನಿಗೆ ಸಮಕಾಲೀನ ಗಣಿತದ ವಿಷಯಗಳನ್ನು ಪರಿಚಯಿಸಿದ. ಇವುಗಳಲ್ಲಿ ಗಣಿತಜ್ಞ ಫರ್ಮಾನ ಸಂಶೋಧನೆಯೂ ಸೇರಿತ್ತು. ನಂತರ ಕಾಲೇಜ್ ಆಫ್ ಆರೆಂಜ್ ಎಂಬ ಕಾಲೇಜಿಗೆ ಶಿಕ್ಷಣ ಪಡೆಯಲು ಹೋದ. ತನ್ನ ಮಗನೂ ತನ್ನಂತೆ ರಾಜಕೀಯ ಮುತ್ಸದ್ದಿಯಾಗಬೇಕೆಂದು ಕ್ರಿಸ್ಟಿಯಾನನ ತಂದೆ ಬಯಸಿದ್ದ. ಆದರೆ ಮಗನ ಅಭಿರುಚಿ ಗಣಿತ ಮತ್ತು ವಿಜ್ಞಾನದಲ್ಲಿದೆ ಎಂದು ತಂದೆಗೆ ಮನವರಿಕೆಯಾಯಿತು.
ಪ್ರಾರಂಭಿಕ ಪ್ರಕಟಣೆಗಳು[ಬದಲಾಯಿಸಿ]

ಹೈಜೆನ್ಸ್ ಬರೆದಿದ್ದು ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ. ಹದಿನೆಂಟು ವರ್ಷದ ತರುಣನಾಗಿದ್ದಾಗಲೇ ಅವನು ಗಣಿತದ ವಿಷಯಗಳನ್ನು ಕುರಿತು ಮಾರ್ಸೀನ್ ಎಂಬ ಗಣಿತಜ್ಞನ ಜೊತೆ ಪತ್ರವ್ಯವಹಾರ ನಡೆಸಿದ. ತೂಗುವ ಸೇತುವೆಯ ಆಕಾರ ಪ್ಯಾರಾಬೋಲಾ ಅಲ್ಲವೆಂದು ವಾದಿಸಿದ. ಮಾರ್ಸೀನ್ ತರುಣನ ಪ್ರತಿಭೆಯಿಂದ ಪ್ರಭಾವಿತನಾಗಿ ಆತನ ತಂದೆಗೆ ಪತ್ರ ಬರೆದು ಬಾಯ್ತುಂಬಾ ಹೊಗಳಿದ. ಮಾರ್ಸೀನ್ ಬರೆದ ಪ್ರಬಂಧಗಳನ್ನು ಕ್ರಿಸ್ಟಿಯಾನ್ ಗಂಭೀರವಾಗಿ ಓದಿದ. ಸಂಗೀತವಾದ್ಯಗಳಿಂದ ಹೊರಹೊಮ್ಮುವ ನಾದಗಳನ್ನು ಕುರಿತು ಅಭ್ಯಾಸ ನಡೆಸಿದ. 25 ವರ್ಷಗಳು ತುಂಬಿದಾಗ ಕ್ರಿಸ್ಟಿಯಾನ್ ತಂದೆಯ ಮನೆಗೆ ಹಿಂತಿರುಗಿದ. ಅಲ್ಲಿ ಪೂರ್ಣಕಾಲ ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಅವನಿಗೆ ಸಾಧ್ಯವಾಯಿತು.

1655ರಲ್ಲಿ ಕ್ರಿಸ್ಟಿಯಾನ್ ಪ್ಯಾರಿಸ್ ನಗರಕ್ಕೆ ಭೇಟಿ ನೀಡಿ ಅಲ್ಲಿ ಐದು ವರ್ಷ ಕಳೆದ. ಇಲ್ಲಿಯ ವಿದ್ವತ್ಪೂರ್ಣ ವಾತಾವರಣದಲ್ಲಿ ಅವನ ಪ್ರತಿಭೆ ಅರಳಿತು. ತಾನು ಆರಾಧಿಸುತ್ತಿದ್ದ ಗಣಿತಜ್ಞ ಪಿಯರೆ ಡಿ ಫರ್ಮಾ ಜೊತೆಗೂ ಅವನು ಪತ್ರವ್ಯವಹಾರ ನಡೆಸಿದ. ಆದರೆ ಈಗ ಫರ್ಮಾಗೆ ಗಣಿತದಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದು ತಿಳಿದು ನಿರಾಶನಾದ.
ವೈಜ್ಞಾನಿಕ ಪ್ರಕಟಣೆಗಳು[ಬದಲಾಯಿಸಿ]
ತನ್ನ ಶೋಧನೆಯ ಪರಿಣಾಮಗಳನ್ನು ಪ್ರಕಟಿಸಲು ಹೈಜೆನ್ಸ್ ತುಂಬಾ ಕಾಲ ತೆಗೆದುಕೊಳ್ಳುತ್ತಿದ್ದ. ಅವನ ಗುರುವಾಗಿದ್ದ ವಾನ್ ಷೂಟೆನ್ ಇದಕ್ಕೆ ಕಾರಣನಾಗಿರಬಹುದು. ವಾನ್ ಷೂಟೆನ್ ಆಗ ಪ್ರಸಿದ್ಧ ಗಣಿತಜ್ಞನಾಗಿದ್ದ . ತನ್ನ ಪ್ರಸಿದ್ಧಿಗೆ ಕುಂದು ಬಂದೀತೆಂದು ಆತ ಯಾವುದನ್ನೇ ಪ್ರಕಟಿಸುವ ಮುಂಚೆ ತುಂಬಾ ಮೀನ-ಮೇಷ ಎಣಿಸುತ್ತಿದ್ದ. ಇದೇ ಜಾಯಮಾನವು ಕ್ರಿಸ್ಟಿಯಾನನಿಗೂ ಬಳುವಳಿಯಾಗಿ ಬಂತು. “ಕ್ವಾಡ್ರೇಚರ್ ಕುರಿತಾದ ಪ್ರಮೇಯಗಳು” ಎಂಬುದು ಅವನ ಮೊದಲ ಪ್ರಕಟಿತ ಬರಹ (1651). ಇದಕ್ಕೆ ಹಿಂದೆ ಕ್ವಾಡ್ರೇಚರ್ ಕುರಿತು ಪ್ರಕಟವಾದ ಸಂಶೋಧನೆಗಳಲ್ಲಿ ತಪ್ಪುಗಳನ್ನು ಕ್ರಿಸ್ಟಿಯಾನ್ ತೋರಿಸಿದ. ಇದರಿಂದ ಅವನಿಗೆ ಸಾಕಷ್ಟು ಪ್ರಸಿದ್ಧಿ ದೊರೆಯಿತು.

ದೂರದರ್ಶಕಗಳನ್ನು ಅಧ್ಯಯನ ಮಾಡುವ ಪ್ರಯತ್ನದಲ್ಲಿ ಕ್ರಿಸ್ಟಿಯಾನ್ ಮಸೂರಗಳನ್ನು ಕುರಿತು ಸಂಶೋಧನೆ ನಡೆಸಿದ. ತನ್ನ ಸೋದರನ ಸಹಾಯದಿಂದ ತಾನೇ ಗಾಜನ್ನು ಅರೆದು ಮಸೂರಗಳನ್ನು ಸಿದ್ಧ ಪಡಿಸಲು ಕಲಿತ. 1662ರಲ್ಲಿ ಅವನು ಒಂದು ವಿಶೇಷ ಬಗೆಯ ಮಸೂರವನ್ನು ಸಿದ್ಧಪಡಿಸಿದ. ಇಂದು ಅದಕ್ಕೆ ಹೈಜೆನಿಯನ್ ಐಪೀಸ್ ಎನ್ನುತ್ತಾರೆ. ದೂರದರ್ಶಕದಲ್ಲಿ ನೋಡಲು ಇದೊಂದು ಎರಡು ಮಸೂರಗಳ ವ್ಯವಸ್ಥೆ. ಮಸೂರಗಳನ್ನು ಕುರಿತು ಆಗ ತುಂಬಾ ಕುತೂಹಲವಿತ್ತು. ಈ ಸಂಬಂಧದಲ್ಲಿ ಕ್ರಿಸ್ಟಿಯಾನ್ ಅಂದಿನ ಪ್ರಸಿದ್ಧ ವಿಜ್ಞಾನಿ ಸ್ಪಿನೋಜಾ ಎಂಬುವನನ್ನು ಭೇಟಿ ಮಾಡಿದ. ಆದರೆ ವಿಜ್ಞಾನವನ್ನು ಕುರಿತು ಇವರ ದೃಷ್ಟಿಕೋನಗಳು ವಿಭಿನ್ನವಾಗಿದ್ದವು.
“ಆಕಸ್ಮಿಕವನ್ನು ಅವಲಂಬಿಸಿದ ಆಟಗಳಲ್ಲಿ ತರ್ಕ” ಎಂಬುದು ಕ್ರಿಸ್ಟಿಯಾನ್ ಪ್ರಕಟಿಸಿದ ಒಂದು ಪ್ರಬಂಧ (1657). ಈ ಪ್ರಬಂಧವು ಡಚ್ ಭಾಷೆಯಲ್ಲಿತ್ತು. ಸಂಭವನೀಯತೆಯನ್ನು ಕುರಿತು ಪಿಯರೆ ಫರ್ಮಾ ಮತ್ತು ಬ್ಲೇಸ್ ಪ್ಯಾಸ್ಕಲ್ ಪ್ರಕಟಿಸಿದ ಸಂಶೋಧನೆಯನ್ನು ಕುರಿತು ಅವನು ಪ್ಯಾರಿಸ್ ನಲ್ಲಿದ್ದಾಗ ಕೇಳಿದ್ದ. ಕ್ರಿಸ್ಟಿಯಾನ್ ಡಚ್ ಭಾಷೆಯಲ್ಲಿ ಬರೆದ ಪ್ರಬಂಧವನ್ನು ವಾನ್ ಷೂಟೆನ್ ಲ್ಯಾಟಿನ್ ಭಾಷೆಗೆ ಅನುವಾದಿಸಿದ. ಖಗೋಳಶಾಸ್ತ್ರದಲ್ಲೂ ಅವನಿಗೆ ಆಸಕ್ತಿಯಿತ್ತು. ಅಂದಿನ ಕಾಲದ ಅತ್ಯುತ್ತಮ ದೂರದರ್ಶಕದ ಮೂಲಕ ಕ್ರಿಸ್ಟಿಯಾನ್ ಮೇ 1661ರಲ್ಲಿ ಬುಧಗ್ರಹವು ಸೂರ್ಯನ ಮೇಲೆ ಹೋಗುವುದನ್ನು ಗಮನಿಸಿದ. ಇದೇ ರೀತಿ ಶುಕ್ರಗ್ರಹವು ಸೂರ್ಯನ ಮೇಲೆ ಹಾದುಹೋಗುವುದನ್ನು ಕೂಡಾ ಗಮನಿಸಿ ಅದನ್ನು ಕುರಿತು ಪ್ರಬಂಧ ಬರೆದ (1662). ಅದೇ ವರ್ಷ ಅವನಿಗೆ ಸಂಗೀತದಲ್ಲಿ ಗಾಢ ಆಸಕ್ತಿ ಹುಟ್ಟಿತು. ಸ್ವಂತ ಸಂಗೀತ ನುಡಿಸುತ್ತಿದ್ದ ಅವನು “ಕಾನೋಸೆನ್ಸ್” ಎಂಬ ಕುರಿತು ಸಂಶೋಧನೆ ನಡೆಸಿದರೂ ಪ್ರಕಟಿಸಲು ಉತ್ಸುಕತೆ ತೋರಲಿಲ್ಲ. 1663ರಲ್ಲಿ ಲಂಡನ್ನಿನ ರಾಯಲ್ ಸೊಸೈಟಿ ಈತನಿಗೆ ಫೆಲೋ ಗೌರವ ನೀಡಿತು.
ಫ್ರಾನ್ಸ್ ದೇಶದಲ್ಲಿ[ಬದಲಾಯಿಸಿ]
ಪ್ಯಾರಿಸ್ ನಗರದಲ್ಲಿ ಮಾರ್ಸೀನ್ ಕಟ್ಟಿದ ಒಂದು ವಿಜ್ಞಾನಿಗಳ ಗುಂಪಿತ್ತು. ಇವರು ಸಭೆ ಸೇರಿ ವಿಜ್ಞಾನ ಕುರಿತಾದ ವಿಷಯಗಳ ಮೇಲೆ ಚರ್ಚೆ ನಡೆಸುತ್ತಿದ್ದರು. ಈ ಕೂಟಗಳಲ್ಲಿ ಕ್ರಿಸ್ಟಿಯಾನ್ ಭಾಗವಹಿಸಿದ. ಕೇವಲ ಒಣ ಚರ್ಚೆಯ ಬದಲು ಪ್ರಯೋಗ ಮಾಡಿ ತೋರಿಸುವುದು ಮೇಲೆಂಬ ಬಣವನ್ನು ಅವನು ಪುಷ್ಟೀಕರಿಸಿದ. 1666ರಲ್ಲಿ ಈತ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿ ಪ್ಯಾರಿಸ್ ನಗರದಲ್ಲಿ ಬಂದು ನೆಲೆಸಿದ. ಪ್ಯಾರಿಸ್ ನಗರದಲ್ಲಿ ಆತನಿಗೆ ಜೀನ್ ಬ್ಯಾಪ್ಟಿಸ್ಟ್ ಕೋಲ್ಬರ್ಟ್ ಎಂಬ ವಿಜ್ಞಾನಿಯ ನೆರವು ದೊರೆಯಿತು. ಫ್ರೆಂಚ್ ಅಕಾಡೆಮಿಯೊಂದಿಗೆ ಅವನ ಸಂಬಂಧ ಚೆನ್ನಾಗಿರಲಿಲ್ಲ. ಒಮ್ಮೆ ಜಡ್ಡು ಬಿದ್ದಾಗ “ನಾನು ಸತ್ತರೆ ನನ್ನ ಸಂಶೋಧನಾ ಕಾಗದಪತ್ರಗಳನ್ನು ರಾಯಲ್ ಸೊಸೈಟಿ ಆಫ್ ಲಂಡನ್ ಸಂಸ್ಥೆಗೆ ದಾನ ಮಾಡಿ” ಎಂದು ಕೋರಿದ. ಆದರೆ ಮುಂದೆ ನಡೆದ ಫ್ರೆಂಚ್ ಮತ್ತು ಡಚ್ ಕದನದಲ್ಲಿ ಬ್ರಿಟನ್ನಿನ ಪಾತ್ರದ ಕಾರಣ ಅವನ ಮತ್ತು ರಾಯಲ್ ಸೊಸೈಟಿಯ ನಡುವಣ ಸಂಬಂಧ ಕೆಟ್ಟಿತು. ಆಗ ಸೊಸೈಟಿಯ ಮುಖ್ಯಸ್ಥನಾಗಿದ್ದ ರಾಬರ್ಟ್ ಹುಕ್ ಈ ನಾಜೂಕು ಸಂದರ್ಭವನ್ನು ನಿಭಾಯಿಸಲು ಅಸಮರ್ಥನಾದ.
1672ರಲ್ಲಿ ಕ್ರಿಸ್ಟಿಯಾನ್ ಒಬ್ಬ ತರುಣ ಗಣಿತಜ್ಞನನ್ನು ಭೇಟಿಯಾದ. ಈತನೇ ಮುಂದೆ ಜಗತ್ಪ್ರಸಿದ್ಧನಾದ ಲೇಬ್ನಿಜ್. ಲೇಬ್ನಿಜ್ ಕ್ರಿಸ್ಟಿಯಾನನ ಕೈಕೆಳಗೆ ಕೆಲಸ ಮಾಡಿದ. ಕ್ರಿಸ್ಟಿಯಾನ್ ಈತನಿಗೆ ಜಾಮಿತಿ ಬೋಧಿಸಿದ. ಲೇಬ್ನಿಜ್ ಪ್ರತಿಪಾದಿಸುತ್ತಿದ್ದ ಕ್ಯಾಲ್ಕ್ಯುಲಸ್ ವಿಷಯ ಕ್ರಿಸ್ಟಿಯಾನನಿಗೆ ಅಷ್ಟು ಪಥ್ಯವಾಗಲಿಲ್ಲ.
ಕೊನೆಯ ದಿನಗಳು[ಬದಲಾಯಿಸಿ]
1681ರಲ್ಲಿ ಕ್ರಿಸ್ಟಿಯಾನ್ ಹೇಗ್ ನಗರಕ್ಕೆ ಮರಳಿದ. ಇದಕ್ಕೆ ಕಾರಣ ಅವನು ತೀವ್ರವಾದ ಖಿನ್ನತೆಯಿಂದ ಬಳಲುತ್ತಿದ್ದುದು. ಆದರೂ 1684ರಲ್ಲಿ ಕೊಳವೆಯಿಲ್ಲದ ದೂರದರ್ಶಕದ ಕುರಿತು ಅವನು ಒಂದು ಪ್ರಬಂಧವನ್ನು ಪ್ರಕಟಿಸಿದ. 1685ರಲ್ಲಿ ಅವನು ಫ್ರಾನ್ಸ್ ದೇಶಕ್ಕೆ ಮರಳಲು ಪ್ರಯತ್ನಿಸಿದರೂ ರಾಜಕೀಯ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. 1687ರಲ್ಲಿ ಅವನು ತನ್ನ ತಂದೆಯನ್ನು ಕಳೆದುಕೊಂಡ. ಹಾಫ್ಕಿಕ್ ಮನೆ ಅವನಿಗೆ ಆಸ್ತಿಯಾಗಿ ಬಂತು. ಅಲ್ಲಿ ಅವನು ತನ್ನ ಕೊನೆಯ ದಿನಗಳನ್ನು ಕಳೆದ.
ಇಂಗ್ಲೆಂಡಿಗೆ ಮೂರನೆಯ ಬಾರಿ ಭೇಟಿ ಕೊಟ್ಟಾಗ ಐಸಾಕ್ ನ್ಯೂಟನ್ ಎಂಬ ತರುಣ ವಿಜ್ಞಾನಿಯನ್ನು ಹೈಜೆನ್ಸ್ ಕಂಡ. ಅವರ ನಡುವೆ ಸಾಕಷ್ಟು ವೈಜ್ಞಾನಿಕ ಚರ್ಚೆಗಳು ನಡೆದವು. ಮುಂದೆ ಜಾನ್ ಲಾಕ್ ಎಂಬ ವಿಜ್ಞಾನಿಗೆ ಪತ್ರ ಬರೆದು ನ್ಯೂಟನ್ನನ ಗಣಿತದ ಶೋಧನೆಗಳು ಭದ್ರವಾದ ಬುನಾದಿ ಹೊಂದಿವೆ ಎಂದು ಹೊಗಳಿದ. ನ್ಯೂಟನ್ನನನ್ನು ಜಾನ್ ಲಾಕ್ ಗಂಭೀರವಾಗಿ ಸ್ವೀಕರಿಸಲು ಇದು ಸಹಕಾರಿಯಾಯಿತು. 1695ರಲ್ಲಿ ಕ್ರಿಸ್ಟಿಯಾನ್ ಕಾಲವಶನಾದ. ಅವನ ಸಮಾಧಿ ಹೇಗ್ ನಗರದಲ್ಲಿದೆ.
ಸಂಶೋಧನೆಗಳು[ಬದಲಾಯಿಸಿ]
ವಸ್ತುಗಳ ಚಲನೆ ಮತ್ತು ವಸ್ತುಗಳ ನಡುವಣ ಘರ್ಷಣೆ[ಬದಲಾಯಿಸಿ]
ಡೆ ಕಾರ್ಟೆ ಮತ್ತು ನ್ಯೂಟನ್ ನಡುವಣ ಕಾಲಮಾನದಲ್ಲಿ ಹೈಜೆನ್ಸ್ ಅತ್ಯಂತ ಮಹತ್ತರ ಪ್ರಕೃತಿ ವಿಜ್ಞಾನಿ ಎಂದು ನಂಬುತ್ತಾರೆ. ಡೆ ಕಾರ್ಟೆಯು ಪ್ರತಿಪಾಸಿದ ವಸ್ತುಗಳ “ಎಲಾಸ್ಟಿಕ್” ಘರ್ಷಣೆಯ ಸಿದ್ಧಾಂತವು ದೋಷಪೂರ್ಣವೆಂದು ಹೈಜೆನ್ಸ್ ನಂಬಿದ್ದ. ಈ ಸಿದ್ಧಾಂತವನ್ನು ಅವನು ಮತ್ತೆ ಪರಿಶೀಲಿಸಿ ಎರಡು ವಸ್ತುಗಳ ಘರ್ಷಣೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಹೊಸ ಫಾರ್ಮುಲಾಗಳನ್ನು ಸಿದ್ಧಪಡಿಸಿದ. ಇಂದು ನಾವು ಯಾವುದನ್ನು ನ್ಯೂಟನ್ನನು ನೀಡಿದ ಚಲನೆಯ ದ್ವಿತೀಯ ನಿಯಮವೆಂದು ಪರಿಗಣಿಸುತ್ತೇವೋ ಅದನ್ನು ಹೈಜೆನ್ಸ್ ಭಿನ್ನರೂಪದಲ್ಲಿ ಸಿದ್ಧಪಡಿಸಿದ್ದ. ರಾಶಿಯುಳ್ಳ ವಸ್ತು ತ್ರಿಜ್ಯ(ವ್ಯಾಸ×)ವುಳ್ಳ ವೃತ್ತಾಕಾರದ ಪರಿಧಿಯಲ್ಲಿ ವೇಗದಲ್ಲಿ ಚಲಿಸಿದರೆ ಅದು ಅನುಭವಿಸುವ ಕೇಂದ್ರಾಕರ್ಷಣ ಶಕ್ತಿಯ ಮೌಲ್ಯವನ್ನು ಹೈಜೆನ್ಸ್ ಲೆಕ್ಕ ಹಾಕಿದ್ದಾನೆ. (In modern notation:with m the mass of the object, v the velocity and r the radius.)
ಖಗೋಳಶಾಸ್ತ್ರದ ಮುನ್ನಡೆಯಲ್ಲಿ ಈ ಫಾರ್ಮುಲಾ ತುಂಬಾ ಮಹತ್ವಪೂರ್ಣವಾಯಿತು.
ದ್ಯುತಿವಿಜ್ಞಾನ[ಬದಲಾಯಿಸಿ]
ದ್ಯುತಿವಿಜ್ಞಾನದಲ್ಲಿ ಹೈಜೆನ್ಸ್ ನೀಡಿದ ಕೊಡುಗೆ ಅಪೂರ್ವವಾದದ್ದು. ಬೆಳಕನ್ನು ಒಂದು ತರಂಗದ ಸ್ವರೂಪದಲ್ಲಿ ನೋಡುವುದನ್ನು ಹೈಜೆನ್ಸ್ ನಮಗೆ ತಿಳಿಸಿದ. ಬೆಳಕಿನ ವೇಗಕ್ಕೆ ಒಂದು ಮಿತಿ ಇದೆ ಎಂಬುದನ್ನು ಹೈಜೆನ್ಸ್ ಪ್ರತಿಪಾದಿಸಿದ. ಇದಕ್ಕೆ ಮುಂಚೆ ಈ ಕುರಿತು ವಾದವಿವಾದಗಳಿದ್ದವು. ಬೆಳಕು ಎರಡು ಬಾರಿ ಡೊಂಕಾಗುವ ಪ್ರಕ್ರಿಯೆಯನ್ನು (ಬೈಫ್ರಿಂಜೆನ್ಸ್) ಹೈಜೆನ್ಸ್ 1672ರಲ್ಲಿ ಅಭ್ಯಾಸ ಮಾಡಿದ. ಕ್ಯಾಲ್ಸೈಟ್ ಎಂಬ ವಸ್ತುವಿನಲ್ಲಿ ಈ ಪ್ರಕ್ರಿಯೆ ಕಂಡು ಬಂದಿತ್ತು. ಬೆಳಕು ಅನೇಕ ಸಣ್ಣ ಹುಡಿಗಳಿಂದ ಕೂಡಿದೆ ಎಂದು ನ್ಯೂಟನ್ ಪ್ರತಿಪಾದಿಸಿದ (1704). ಎರಡು ಸಲ ಬಾಗುವ ಬೆಳಕಿನ ಪ್ರವೃತ್ತಿಯನ್ನು ಹೈಜೆನ್ಸನ ತರಂಗ ಸಿದ್ಧಾಂತದ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ ಅದಕ್ಕೆ ಸ್ವಲ್ಪ ಕಾಲ ಸೋಲಾಯಿತು. ಆದರೆ ಥಾಮಸ್ ಯಂಗ್ ಎಂಬ ವಿಜ್ಞಾನಿಯ “ಇಂಟರ್ಫೆರೆನ್ಸ್” ಪ್ರಯೋಗವು ಪ್ರಕಟವಾದ ನಂತರ ತರಂಗ ಸಿದ್ಧಾಂತಕ್ಕೆ ಮರುವುಟ್ಟು ಸಿಕ್ಕಿತು. ಬೆಳಕು ಹುಡಿರೂಪದಲ್ಲಿದೆ ಎಂಬ ಸಿದ್ಧಾಂತದ ಮೂಲಕ ಯಂಗ್ ಪ್ರಯೋಗದ ಪರಿಣಾಮವನ್ನು ವಿವರಿಸುವುದು ಅಸಾಧ್ಯವಾಗಿತ್ತು.
ಹೈಜೆನ್ಸ್ ಗೆ ಮಸೂರಗಳನ್ನು ಕುರಿತು ಅಪಾರ ಆಸಕ್ತಿ ಇತ್ತು. ಅವನು ಪ್ರೊಜೆಕ್ಟರುಗಳಲ್ಲಿ ಮಸೂರಗಳ ಪಾತ್ರವನ್ನು ಅಧ್ಯಯನ ಮಾಡಿದ. ಮ್ಯಾಜಿಕ್ ಲಾಂಟರ್ನ್ ಎಂಬ ಉಪಕರಣದ ಆವಿಷ್ಕಾರದ ಕೀರ್ತಿ ಅವನಿಗೆ ಸಲ್ಲುತ್ತದೆ.
ಹೋರಾಲಜಿ ಅಥವಾ ಸಮಯಮಾಪನ[ಬದಲಾಯಿಸಿ]
ಹೋರಾಲಜಿ ಅಥವಾ ಸಮಯದ ಮಾಪನಶಾಸ್ತ್ರದಲ್ಲಿ ಹೈಜೆನ್ಸ್ ಕೊಡುಗೆ ದೊಡ್ಡದು. ತನ್ನ ಕಾಲದ ಅತ್ಯಂತ ನಿಖರ ಸಮಯಮಾಪಕವನ್ನು ಹೈಜೆನ್ಸ್ ನಿರ್ಮಿಸಿದ. ಅದೇ ಪೆಂಡುಲಮ್ ಗಡಿಯಾರ. 1656ರಲ್ಲಿ ಇಂಥ ಗಡಿಯಾರವನ್ನು ನಿರ್ಮಿಸಿ ಸಾಲೊಮನ್ ಕೋಸ್ಟರ್ ಎಂಬ ಸಂಸ್ಥೆಗೆ ಅದರ ನಿರ್ಮಿತಿಯ ಹಕ್ಕನ್ನು ನೀಡಿದ. ಹೇಗ್ ನಗರದಲ್ಲಿ ಈ ಆವಿಷ್ಕಾರಕ್ಕೆ ಅವನಿಗೆ “ಪೇಟೆಂಟ್” ನೀಡಲಾಯಿತು. ಆದರೆ ಫ್ರಾನ್ಸ್ ಮುಂತಾದ ಕಡೆ ಅವನಿಗೆ ಪೇಟೆಂಟ್ ದೊರೆಯಲಿಲ್ಲ. ಅವನ ಆವಿಷ್ಕಾರವನ್ನು ಅನೇಕರು ನಕಲು ಮಾಡಿದರು. ದೂರದ ಸಮುದ್ರಯಾನಗಳಲ್ಲಿ ಇಂಥ ಗಡಿಯಾರದ ಉಪಯೋಗವಾಗಬಹುದು ಎಂದು ಹೈಜೆನ್ಸ್ ನಂಬಿದ್ದ. ಆದರೆ ಈತನ ಸೋದರ ಒಮ್ಮೆ ಸಮುದ್ರಯಾನದಲ್ಲಿ ಪ್ರಯೋಗಿಸಿ ಜೋರಾದ ಗಾಳಿ ಬೀಸಿದಾಗ ಗಡಿಯಾರವು ಅನುಪಯುಕ್ತ ಎಂದು ಘೋಷಿಸಿದ. ಮುಂದೆ ಇನ್ನಿತರ ಕೆಲವರು ಗಡಿಯಾರದ ಕ್ಷೇತ್ರಕ್ಕೆ ಕಾಲಿಟ್ಟರು. ತನಗೆ ಅನ್ಯಾಯವಾಯಿತೆಂದು ಹೈಜೆನ್ಸ್ ರಾಯಲ್ ಸೊಸೈಟಿಗೆ ಮೊರೆ ಹೋದ. ಕೋರ್ಟ್ ಕಚೇರಿಯಲ್ಲಿ ವಾದವಿವಾದಗಳು ನಡೆದವು. ಇತ್ತ ಪೆಂಡುಲಮ್ ಗಡಿಯಾರ ಕೆಲವೊಮ್ಮೆ ಸಮಯವನ್ನು ಕಳೆದುಕೊಳ್ಳುವುದು ಮತ್ತು ಕೆಲವೊಮ್ಮೆ ಸಮಯವನ್ನು ಗಳಿಸುವುದು ಎಂಬ ದೂರು ಕೇಳಿಬಂತು. ಈ ಸಮಸ್ಯೆಗೆ ಹೈಜೆನ್ಸ್ ಪರಿಹಾರ ನೀಡಿದ.

,[೫] ಜೊತೆಗೆ ಹೈಜೆನ್ಸ್ ರಚಿಸಿದ "ಹೊರೋಲ್ಜಿಯಮ್ ಆಸಿಲೊಟೇರಿಯಮ್" ಪುಸ್ತಕದ ಪ್ರತಿಯನ್ನೂ ನೋಡಬಹುದು.[೬] Museum Boerhaave, Leiden
ಪೆಂಡುಲಮ್ ಉದ್ದವು ಆಗಿದ್ದು, ಗುರುತ್ವಾಕರ್ಷಣದ ಕಾರಣದ ವೇಗವರ್ಧನೆಯು ಆಗಿದ್ದಲ್ಲಿ ಪೆಂಡುಲಮ್ ಒಂದು ಸುತ್ತು ಹಾಕಲು ತೆಗೆದು ಕೊಳ್ಳುವ ಸಮಯ ಎಷ್ಟೆಂಬ ಲೆಕ್ಕವನ್ನೂ ಹೈಜೆನ್ಸ್ ನೀಡಿದ್ದಾನೆ.
ಎರಡು ಪೆಂಡುಲಮ್ ಗಡಿಯಾರಗಳನ್ನು ಪಕ್ಕಪಕ್ಕದಲ್ಲಿಟ್ಟರೆ ಅವುಗಳ ಚಲನೆಯು ಪರಸ್ಪರ ಹೊಂದಾಣಿಕೆ ಪಡೆದುಕೊಳ್ಳುವುದನ್ನು ಕೂಡಾ ಹೈಜೆನ್ಸ್ ಗಮನಿಸಿದ್ದ. ಅದನ್ನು ಅವನು ರಾಯಲ್ ಸೊಸೈಟಿಗೆ ಬರೆದು ತಿಳಿಸಿದ್ದು ಕೂಡಾ ದಾಖಲಾಗಿದೆ.
ಮುಂದೆ ಹೈಜೆನ್ಸ್ ಬ್ಯಾಲೆನ್ಸ್ ಸ್ಪ್ರಿಂಗ್ ವಾಚ್ ಎಂಬ ಗಡಿಯಾರದ ಮಾದರಿಯನ್ನು ಕೂಡಾ ರೂಪಿಸಿದ. ಇಂಥದೇ ಆವಿಷ್ಕಾರವನ್ನು ರಾಬರ್ಟ್ ಹುಕ್ ಕೂಡಾ ನಡೆಸಿದ್ದರಿಂದ ಇವರಲ್ಲಿ ಯಾರಿಗೆ ಕೀರ್ತಿ ಸಲ್ಲಬೇಕೆಂಬ ಕುರಿತು ವಾಗ್ವಾದಗಳು ನಡೆದವು. ಹೈಜೆನ್ಸ್ ಗಡಿಯಾರದಲ್ಲಿ ಸುಳಿ ಆಕಾರದಲ್ಲಿ ಸುತ್ತಿದ ಸ್ಪ್ರಿಂಗ್ ಬಳಸಲಾಗಿತ್ತು. ಅವನು ಸ್ಪ್ರಿಂಗ್ ಗಡಿಯಾರಗಳ ಅನೇಕ ಮಾದರಿಗಳನ್ನು ಸೃಷ್ಟಿಸಿದ. ಇವುಗಳನ್ನು ಪ್ಯಾರಿಸ್ ನಗರದ ಥುರೇ ಕಂಪನಿ ತಯಾರಿಸಿತು. ಇಸವಿ 2006ದಲ್ಲಿ ದೊರೆತ ರಾಬರ್ಟ್ ಹುಕ್ ಕೈಬರಹದಲ್ಲಿದ್ದ ಟಿಪ್ಪಣಿಗಳ ಆಧಾರದ ಮೇಲೆ ಮೊದಲು ಸ್ಪ್ರಿಂಗ್ ಗಡಿಯಾರ ರಚಿಸಿದ ಕೀರ್ತಿ ಈಗ ಹುಕ್ ಗೆ ನೀಡಲಾಗುತ್ತದೆ. 1675ರಲ್ಲಿ ಹೈಜೆನ್ಸ್ ಪಾಕೆಟ್ ಗಡಿಯಾರಕ್ಕೆ ಪೇಟೆಂಟ್ ಅರ್ಜಿ ಸಲ್ಲಿಸಿದ. ಮುಂದೆ ಪ್ಯಾರಿಸ್ ನಗರದಲ್ಲಿ ಈ ಬಗೆಯ ಗಡಿಯಾರಗಳು ಜನಪ್ರಿಯವಾದವು.

ಖಗೋಳಶಾಸ್ತ್ರ[ಬದಲಾಯಿಸಿ]

1655ರಲ್ಲಿ ಹೈಜೆನ್ಸ್ ಒಂದು ಲೇಖನವನ್ನು ಪ್ರಕಟಿಸಿ ಅದರಲ್ಲಿ ಶನಿಗ್ರಹದ ಸುತ್ತ ಅದನ್ನು ಸ್ಪರ್ಶಿಸದ ಒಂದು ಎಲಿಪ್ಟಿಕ್ ಆಕಾರದ ತೆಳ್ಳನೆಯ ಚಪ್ಪಟೆಯಾದ ಉಂಗುರವಿದೆ ಎಂದು ಪ್ರತಿಪಾದಿಸಿದ. ತಾನೇ ಸಿದ್ಧಪಡಿಸಿದ, ದೂರದ ವಸ್ತುವನ್ನು 50 ಪಟ್ಟು ದೊಡ್ಡದಾಗಿ ತೋರಿಸಬಲ್ಲ ಟೆಲಿಸ್ಕೋಪನ್ನು ಬಳಸಿ ಶನಿಗ್ರಹದ (ಪ್ರಥಮ) ಚಂದ್ರನನ್ನು ಗುರುತಿಸಿದ. ಈ ಚಂದ್ರನಿಗೆ ಟೈಟನ್ ಎಂಬ ಹೆಸರಿದೆ. ನೆಬುಲಾವನ್ನು ದೂರದರ್ಶಕ ಮುಖಾಂತರ ನೋಡಿ ವಿವಿಧ ತಾರೆಗಳಾಗಿ ವಿಂಗಡಿಸಿದ ಕೀರ್ತಿಯೂ ಇವನಿಗೆ ಸಲ್ಲುತ್ತದೆ. ಇವನ ಗೌರವಾರ್ಥ ನೆಬುಲಾದ ಒಳಮೈಗೆ “ಹೈಜನಿಯನ್ ರೀಜನ್” ಎನ್ನುತ್ತಾರೆ. ತನ್ನ ಮರಣಕ್ಕೆ ಮುನ್ನ 1695ರಲ್ಲಿ ಕಾಸ್ಮೋಥಿಯರಾಸ್ ಎಂಬ ಗ್ರಂಥವನ್ನು ಬರೆದ. ಇದು ಅವನ ಮರಣದ ನಂತರ 1698ರಲ್ಲಿ ಪ್ರಕಟವಾಯಿತು. ಈ ಪುಸ್ತಕದಲ್ಲಿ ಅವನು ಬೇರೆ ಗ್ರಹಗಳಲ್ಲೂ ಜೀವಿಗಳಿವೆ ಎಂದು ಪ್ರತಿಪಾದಿಸಿದ್ದಾನೆ. ಉಳಿದ ಗ್ರಹಗಳಲ್ಲೂ ಭೂಮಿಯ ವಾತಾವರಣವೇ ಇದೆ ಎಂದು ಅವನು ನಂಬಿದ್ದ. ಜೀವಿಗಳ ಉಳಿವಿಗೆ ನೀರು ಅತ್ಯಗತ್ಯವೆಂದು ಅವನಿಗೆ ತಿಳಿದಿತ್ತು. ಮಂಗಳ ಮತ್ತು ಗುರು ಗ್ರಹಗಳ ಮೇಲೆ ಕಂಡ ಕಪ್ಪು ಛಾಯೆಯನ್ನು ಮಂಜಿನ ಗಡ್ಡೆ ಎಂದು ಅವನು ಭಾವಿಸಿದ್ದ. ಗ್ರಹಗಳು ಒಂದಕ್ಕೊಂದು ಅಷ್ಟೊಂದು ದೂರವಿರುವುದು ದೇವರಿಗೆ ಈ ಗ್ರಹಗಳ ಜೀವಿಗಳು ಪರಸ್ಪರ ಸಂಪರ್ಕದಲ್ಲಿರುವುದು ಇಷ್ಟವಿರಲಿಲ್ಲ ಎಂಬುದನ್ನೇ ತೋರಿಸುತ್ತವೆ ಎಂದು ಅವನು ಬರೆದಿದ್ದಾನೆ. ಇದೇ ಪುಸ್ತಕದಲ್ಲಿ ಒಂದು ಖಗೋಳಕ್ಕೂ ಇನ್ನೊಂದಕ್ಕೂ ನಡುವಣ ದೂರವನ್ನು ಮಾಪನ ಮಾಡುವುದು ಹೇಗೆಂದು ಅವನು ವಿವರಿಸಿದ್ದಾನೆ. ಒಂದು ತೆರೆಯ ಮೇಲೆ ಸಣ್ಣ ರಂಧ್ರಗಳನ್ನು ಮಾಡಿ ಅದನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ ಒಳಬರುವ ರಶ್ಮಿಗಳ ಪ್ರಖರತೆ ಸಿರಿಯಸ್ ಎಂಬ ತಾರೆಯ ಬೆಳಕಿನಷ್ಟೇ ಪ್ರಖರತೆಯುಳ್ಳ ಹಾಗೆ ಮಾಡಬೇಕು – ಇದಕ್ಕೆ ತೆರೆಯ ಕೋನವನ್ನು ಮತ್ತು ರಂಧ್ರದ ಸುತ್ತಾಕಾರವನ್ನು ಬದಲಾಯಿಸಬೇಕಾಗಬಹುದು. ಹೀಗಾದಾಗ ರಂಧ್ರದ ವ್ಯಾಸವು ಸೂರ್ಯನ ವ್ಯಾಸಕ್ಕೆ ಹೋಲಿಸಿದರೆ ನಷ್ಟಿರುತ್ತದೆ ಎಂದು ಅವನ ತರ್ಕವಾಗಿತ್ತು. ಆದರೆ ಸಿರಿಯಸ್ ಮತ್ತು ಸೂರ್ಯನ ಪ್ರಖರತೆ ಒಂದೇ ಎಂಬ ಪೂರ್ವಸಿದ್ಧಾಂತಕ್ಕೆ ಪುಷ್ಟಿ ಇರಲಿಲ್ಲ. ಹೀಗಿದ್ದರೂ ಬೆಳಕಿನ ಪ್ರಖರತೆ ಅಳೆಯುವ ಮೂಲಕ ಖಗೋಳಗಳ ನಡುವಿನ ಅಂತರವನ್ನು ಅಳೆಯಬಹುದೆಂದು ತೋರಿಸಿದ ಕೀರ್ತಿ ಹೈಜೆನ್ಸಿಗೆ ಸಲ್ಲುತ್ತದೆ.
ಆಕರಗಳು/ಉಲ್ಲೇಖಗಳು[ಬದಲಾಯಿಸಿ]
- ↑ I. Bernard Cohen; George E. Smith (25 April 2002). The Cambridge Companion to Newton. Cambridge University Press. p. 69. ISBN 978-0-521-65696-2. Retrieved 15 May 2013.
- ↑ Niccolò Guicciarfdini (2009). Isaac Newton on mathematical certainty and method. MIT Press. p. 344. ISBN 978-0-262-01317-8. Retrieved 15 May 2013.
- ↑ "Christiaan Huygens." Encyclopedia of World Biography. 2004. Encyclopedia.com. (14 December 2012). http://www.encyclopedia.com/doc/1G2-3404703173.html
- ↑ "ಆರ್ಕೈವ್ ನಕಲು". Archived from the original on 2017-06-13. Retrieved 2016-04-10.
{{cite web}}
:|archive-date=
/|archive-url=
timestamp mismatch (help) - ↑ "Boerhaave Museum Top Collection: Hague clock (Pendulum clock) (Room 3/Showcase V20)". Museumboerhaave.nl. Archived from the original on 19 ಫೆಬ್ರವರಿ 2011. Retrieved 13 June 2010.
- ↑ "Boerhaave Museum Top Collection: Horologium oscillatorium, siue, de motu pendulorum ad horologia aptato demonstrationes geometricae (Room 3/Showcase V20)". Museumboerhaave.nl. Archived from the original on 20 ಫೆಬ್ರವರಿ 2011. Retrieved 13 June 2010.
- CS1 errors: archive-url
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with VcBA identifiers
- Articles with CINII identifiers
- Articles with MATHSN identifiers
- Articles with MGP identifiers
- Articles with ZBMATH identifiers
- Articles with RKDartists identifiers
- Articles with ULAN identifiers
- Articles with BPN identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- 1629 ಜನನಗಳು
- 1695 ಮರಣಗಳು
- 17ನೇ ಶತಮಾನದ ಖಗೋಳವಿಜ್ಞಾನಿಗಳು
- ಹದಿನೇಳನೇ ಶತಮಾನದ ಗಣಿತಶಾಸ್ತ್ರಜ್ಞರು
- ಡಚ್ ಗಣಿತಶಾಸ್ತ್ರಜ್ಞರು
- ಡಚ್ ಭೌತಶಾಸ್ತ್ರಜ್ಞರು
- ದ್ಯುತಿವಿಜ್ಞಾನಿಗಳು
- ಗಣಿತಜ್ಞರು