ವ್ಯಾಸ (ಜ್ಯಾಮಿತಿ)
ಗೋಚರ
ರೇಖಾಗಣಿತದಲ್ಲಿ, ಒಂದು ವೃತ್ತದ ವ್ಯಾಸ ಎಂದರೆ ವೃತ್ತದ ಕೇಂದ್ರಬಿಂದುವಿನ ಮೂಲಕ ಸಾಗುವ ಮತ್ತು ಅದರ ಅಂತ್ಯಬಿಂದುಗಳು ವೃತ್ತದ ಮೇಲೆ ನೆಲೆಸಿರುವ ಯಾವುದೇ ನೇರ ರೇಖಾ ಖಂಡವಾಗಿದೆ.[೧] ಇದನ್ನು ವೃತ್ತದ ಅತ್ಯಂತ ಉದ್ದನೆಯ ಚಾಪಕರ್ಣ ಎಂದೂ ವ್ಯಾಖ್ಯಾನಿಸಬಹುದು. ಈ ಎರಡೂ ವ್ಯಾಖ್ಯಾನಗಳು ಗೋಳದ ವ್ಯಾಸಕ್ಕೂ ಸಮಂಜಸವಾಗಿವೆ.
ಹೆಚ್ಚು ಆಧುನಿಕ ಬಳಕೆಯಲ್ಲಿ, ವ್ಯಾಸದ ಉದ್ದವನ್ನು ಕೂಡ ವ್ಯಾಸವೆಂದೇ ಕರೆಯಲಾಗುತ್ತದೆ. ಈ ಅರ್ಥದಲ್ಲಿ ಒಬ್ಬರು ವ್ಯಾಸದ ಬಗ್ಗೆ ಮಾತನಾಡುತ್ತಿರುತ್ತಾರೆ, ಒಂದು ವ್ಯಾಸದ (ಸ್ವತಃ ರೇಖೆಯನ್ನು ಸೂಚಿಸುವ ಪದ) ಬಗ್ಗೆ ಅಲ್ಲ, ಏಕೆಂದರೆ ವೃತ್ತ ಅಥವಾ ಗೋಳದ ಎಲ್ಲ ವ್ಯಾಸಗಳು ಸಮಾನ ಉದ್ದವನ್ನು ಹೊಂದಿರುತ್ತವೆ, ಮತ್ತು ಇದು ತ್ರಿಜ್ಯದ (r) ಎರಡರಷ್ಟಿರುತ್ತದೆ.
ದೀರ್ಘವೃತ್ತಕ್ಕೆ, ಸಾಮಾನ್ಯ ಪರಿಭಾಷೆಯು ಭಿನ್ನವಾಗಿದೆ. ದೀರ್ಘವೃತ್ತದ ವ್ಯಾಸವು ದೀರ್ಘವೃತ್ತದ ಕೇಂದ್ರಬಿಂದುವಿನ ಮೂಲಕ ಸಾಗುವ ಯಾವುದೇ ಚಾಪಕರ್ಣವಾಗಿರುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ Definition of diameter
- ↑ Bogomolny, Alexander. "Conjugate Diameters in Ellipse". www.cut-the-knot.org.