ವಿಷಯಕ್ಕೆ ಹೋಗು

ಪರಿಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ವೃತ್ತದ ಪರಿಧಿ (ಕಪ್ಪು ಅಕ್ಷರದಲ್ಲಿ C).

ರೇಖಾಗಣಿತದಲ್ಲಿ, ವೃತ್ತಪರಿಧಿ ಎಂದರೆ ಅದರ ಸುತ್ತಲಿನ (ರೇಖೀಯ) ದೂರ.[೧] ಅಂದರೆ ಪರಿಧಿಯು ವೃತ್ತವನ್ನು ತೆರೆದು ರೇಖಾ ಖಂಡವಾಗಿ ನೇರಗೊಳಿಸಿದಾಗ ಅದರ ಉದ್ದವಾಗಿರುತ್ತದೆ. ವೃತ್ತವು ಬಿಲ್ಲೆಯ ಅಂಚಾಗಿರುವುದರಿಂದ (ಗಡಿರೇಖೆ), ಪರಿಧಿಯು ಸುತ್ತಳತೆಯ ವಿಶೇಷ ನಿದರ್ಶನವಾಗಿದೆ. ಸುತ್ತಳತೆಯು ಯಾವುದೇ ಸಂವೃತ ಆಕಾರದ ಸುತ್ತಲಿನ ಉದ್ದವಾಗಿರುತ್ತದೆ. ಈ ಪದವನ್ನು ಬಹುತೇಕ ಆಕೃತಿಗಳಿಗೆ ಬಳಸಲಾಗುತ್ತದೆ, ಆದರೆ ವೃತ್ತ ಮತ್ತು ದೀರ್ಘವೃತ್ತದಂತಹ ಕೆಲವು ವೃತ್ತದಂತಹ ಆಕೃತಿಗಳನ್ನು ಹೊರತುಪಡಿಸಿ. ಅನೌಪಚಾರಿಕವಾಗಿ, "ಪರಿಧಿ" ಪದವು ಅಂಚಿನ ಉದ್ದದ ಬದಲು ಅಂಚನ್ನು ಕೂಡ ಸೂಚಿಸಬಹುದು.

π ನೊಂದಿಗಿನ ಸಂಬಂಧ[ಬದಲಾಯಿಸಿ]

ವೃತ್ತದ ಪರಿಧಿಯು ಅತ್ಯಂತ ಮುಖ್ಯವಾದ ಗಣಿತದ ಸ್ಥಿರಾಂಕಗಳಲ್ಲಿ ಒಂದಕ್ಕೆ ಸಂಬಂಧಿಸಿದೆ. ಈ ಸ್ಥಿರಾಂಕ ಪೈ ಅನ್ನು ಗ್ರೀಕ್ ಅಕ್ಷರ π ಇಂದ ಚಿತ್ರಿಸಲಾಗುತ್ತದೆ. π ಯ ಸಂಖ್ಯಾತ್ಮಕ ಮೌಲ್ಯದ ಮೊದಲ ಕೆಲವು ದಶಮಾನ ಅಂಕಿಗಳೆಂದರೆ 3.141592653589793 ... ಪೈ ಯನ್ನು ವೃತ್ತದ ಪರಿಧಿ C ಮತ್ತು ಅದರ ವ್ಯಾಸ d ಯ ಅನುಪಾತ ಎಂದು ವ್ಯಾಖ್ಯಾನಿಸಲಾಗುತ್ತದೆ:

ಉಲ್ಲೇಖಗಳು[ಬದಲಾಯಿಸಿ]

  1. San Diego State University (2004). "Perimeter, Area and Circumference" (PDF). Addison-Wesley. Archived from the original (PDF) on 6 October 2014.
"https://kn.wikipedia.org/w/index.php?title=ಪರಿಧಿ&oldid=957918" ಇಂದ ಪಡೆಯಲ್ಪಟ್ಟಿದೆ