ಇಂಗ್ಲಿಷ್ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆಫ್ರಿ ಚಾಸರ್ (17ನೇ ಶತಮಾನ)
ಷೇಕ್ಸ್‍ಪಿಯರ್-(1564-1616)

ಪೀಠಿಕೆ[ಬದಲಾಯಿಸಿ]

ಇಂಗ್ಲೀಷ್ ಸಾಹಿತ್ಯದ ಇತಿಹಾಸವು ಪ್ರತಿಯೊಬ್ಬ ಲೇಖಕನ ಕೊಡುಗೆಯ ಮೌಲ್ಯವನ್ನು ಸೂಚಿಸುವುದು. ಸಾಹಿತ್ಯವು ಕಾಲ ಕಾಲಕ್ಕೆ ಬದಲಾವಣೆ ಹೊಂದುತ್ತಾ ಒಟ್ಟಾರೆ ತಲೆಮಾರಿನಿಂದ ತಲೆಮಾರಿಗೆ ಬೆಳವಣಿಗೆ ಹೊಂದುತ್ತದೆ. ಯಾವುದಾದರೂ ಕೃತಿ ಜನಪ್ರಿಯವಾದಲ್ಲಿ ಸ್ವಾಭಾವಿಕವಾಗಿ ಅದರ ಅನುಕರಣೆ ಕೆಲವು ಕಾಲ ಪದೇ ಪದೇ ನಡೆಯುತ್ತಿರುತ್ತದೆ. ಹೀಗೆ ಸಾಹಿತ್ಯದ ಕಾಲ ಅಥವಾ ಪರಂಪರೆ (ಸ್ಕೂಲ್ಸ್) ಮತ್ತು ಸಾಹಿತ್ಯದ ಚಳುವಳಿ ಹುಟ್ಟಿಕೊಳ್ಳುತ್ತದೆ, ಹೊಸದು ಬಂದಾಗ ಮೊದಲಿನದು ಹಿಂದೆ ಸರಿಯುತ್ತದೆ ಅಥವಾ ಜೊತೆ ಜೊತೆ ಸಾಗುವುದೂ ಇದೆ. ಯಾವುದಾದರೂ ಲೇಖಕ ಅಥವಾ ಕವಿ ಆ ಕಾಲದಲ್ಲಿ ಪ್ರಮುಖನಾದಲ್ಲಿ ಅವನ ಪ್ರಭಾವ ಹಳೆಯದರ ಜೊತೆ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ಕವಿ ಅಥವಾ ಲೇಖಕನ ಕೊಡಿಗೆಯು ಪೂರ್ಣ ಹೊಸತಾಗಿದ್ದು ಸ್ವಂತ ಫ್ರತಿಬೆಯ ಹೊಳಪಿದ್ದಲ್ಲಿ ಅದು ಓದುಗರ -ಜನರ ಬಯಕೆ ಮತ್ತು ಅಭಿರುಚಿಗೆ ಅವನ ಕೃತಿ ತೆರೆದುಕೊಂಡಿದೆಯೆಂದು ಭಾವಿಸಬಹುದು. ಹೀಗೆ ಸಾಹಿತ್ಯ ಚರಿತ್ರೆಯು, ವಿಶೇಷವಾಗಿ ಇಂಗ್ಲಿಷ್ ಸಾಹಿತ್ಯದ ಇತಿಹಾಸವು ಒಂದು ಕಾಲ ಘಟ್ಟದಿಂದ ಇನ್ನೊಂದು ಕಾಲಘಟ್ಟಕ್ಕೆ ಬದಲಾವಣೆ ಹೊಂದುತ್ತಾ ಬೆಳೆದುಬಂದ ಬಗೆಯಾಗಿದೆ. ಈ ಬೆಳವಣಿಗೆಯು ಮತ್ತು ಹಂತ ಹಂತದ ಬದಲಾವಣೆಯು ಸಾಹಿತ್ಯದ ವಿಷಯ, ರೂಪ-ಸ್ವಭಾವ ಮತ್ತು ಅಂತಃ ಶಕ್ತಿಯ ವಿವರಣೆಯನ್ನು ಒಳಗೊಂಡಿರುತ್ತದೆ.

ಇಂಗ್ಲಿಷ್ ಸಾಹಿತ್ಯ-ಉಪೋದ್ಘಾತ[ಬದಲಾಯಿಸಿ]

ಮೂಲ ಸ್ಕ್ಯಾಂಡಿನೇವಿಯ ಪ್ರದೇಶ ಕೆಂಪು ಬಣ್ಣದಲ್ಲಿವೆ. ಅದು ಇಂಗ್ಲಿಷರ ಮತ್ತು ಇಂಗ್ಲಿಷ್ ಭಾಷೆ ಉಗಮ ಸ್ಥಾನವೆಂದು ಭಾವಿಸಲಾಗಿದೆ. ಕಿತ್ತಾಳೆ ಬಣ್ಣದಲ್ಲಿನ ಪ್ರದೇಶವನ್ನು ಕೆಲವೊಮ್ಮೆ ಸೇರಿಸಲಾಗುತ್ತದೆ. ಹಳದಿ ಬಣ್ಣದ ಪ್ರದೇಶ ಸೇರಿದರೆ ಇದನ್ನು ನಾರ್ಡಿಕ್ ಪ್ರದೇಶ ಆಗುತ್ತದೆ.
ಇಂಗ್ಲೆಂಡ್
ಇಂಗ್ಲೀಷ್ ಸಾಹಿತ್ಯದಲ್ಲಿ ಸಾಮಾನ್ಯವಾಗಿ 8-11 ನೇ ಶತಮಾನದ ನಡುವಣ ಕಾಲದ ಬೇವುಲ್ಫ್ ಆರಂಭದ ಪುರಾಣ/ಎಪಿಕ್ ಕಾವ್ಯ . ಅದು ಸ್ಕ್ಯಾಂಡಿನೇವಿಯದಲ್ಲಿ ರಚಿಸಿದ್ದರೂ ಕೂಡಾ ಇಂಗ್ಲೆಂಡ್ನಲ್ಲಿ ರಾಷ್ಟ್ರೀಯ ಪುರಾಣ ಸ್ಥಾನಮಾನವನ್ನು ಪಡೆಯಿತು. ಇದು ಪ್ರಾಚೀನ ಇಂಗ್ಲೀಷ್, ಮುಂದಿನ ಪ್ರಮುಖ ಹೆಗ್ಗುರುತು- ಕವಿ ಜೆಫ್ರಿ ಚಾಸರ್ (ಸಿ. 1343-1400), ಅವನ ಅತ್ಯಂತ ಪ್ರಸಿದ್ಧ ಕೃತಿ ಕ್ಯಾಂಟರ್ಬರಿ ಟೇಲ್ಸ್. . ನಂತರ ಪುನರುಜ್ಜೀವನ ಸಮಯದಲ್ಲಿ ವಿಶೇಷವಾಗಿ 16 ನೇ ಮತ್ತು 17 ನೇ ಶತಮಾನಗಳಲ್ಲಿ , ಪ್ರಮುಖ ನಾಟಕ ಮತ್ತು ಕವನಗಳನ್ನು ವಿಲಿಯಂ ಷೇಕ್ಸ್ಪಿಯರ್, ಬೆನ್ ಜಾನ್ಸನ್, ಜಾನ್ ಡೋನ್ ಮತ್ತು ಅನೇಕರು ಬರೆದಿದ್ದಾರೆ. ನಂತರದಲ್ಲಿ, 17 ನೇ ಶತಮಾನದ ಮತ್ತೊಂದು ದೊಡ್ಡ ಕವಿ, ಲೇಖಕ, ಜಾನ್ ಮಿಲ್ಟನ್ (1608-74). ಅವನ ಕೃತಿ ಪೌರಾಣಿಕ ಕಾವ್ಯ - ಪ್ಯಾರಡೈಸ್ ಲಾಸ್ಟ್ (1667) 17 ನೇ ಮತ್ತು 18 ನೇ ಶತಮಾನದ ಆರಂಭದಲ್ಲಿ ವಿಶೇಷವಾಗಿ ವಿಶೇಷವಾಗಿ ಜಾನ್ ಡ್ರೈಡನ್ ಮತ್ತು ಅಲೆಕ್ಸಾಂಡರ್ ಪೋಪ್, ಕಾವ್ಯಗಳಲ್ಲಿ ವಿಶೇóಷವಾಗಿ ವಿಡಂಬನೆಯನ್ನು ಹೊಂದಿವೆ. ಮತ್ತು ಗದ್ಯದ ಸಾಹಿತ್ಯಲ್ಲಿ ಜೋನಾಥನ್ ಸ್ವಿಫ್ಟ್ ಕೃತಿಗಳು ಪ್ರಮುಖವಾದವು. 18 ನೇ ಶತಮಾನದ ಆರಂಭದಲ್ಲಿ ಮೊದಲ ಬ್ರಿಟಿಷ್ ಕಾದಂಬರಿಗಳು ಡೇನಿಯಲ್ ಡೆಫೊ, ಸ್ಯಾಮ್ಯುಯೆಲ್ ರಿಚರ್ಡ್ಸನ್, ಹೆನ್ರಿ ಫೀಲ್ಡಿಂಗ್ ಅವರ ಕೃತಿಗಳಲ್ಲಿ ಕಂಡಿತು. 18 ನೇ ಶತಮಾನ ಮತ್ತು 19 ನೇ ಶತಮಾನದ ಅವಧಿಯು ರೋಮ್ಯಾಂಟಿಕ್ ಕವಿಗಳಾದ ವರ್ಡ್ಸ್ವರ್ತ್, ಕೋಲ್ರಿಡ್ಜ್, ಶೆಲ್ಲಿ ಮತ್ತು ಕೀಟ್ಸ್ ಇವರ ಕಾಲ.
ವಿಕ್ಟೋರಿಯನ್ ಯುಗದ (1837-1901) ದಲ್ಲಿ ಕಾದಂಬರಿಯು ಇಂಗ್ಲೀಷ್ ಸಾಹಿತ್ಯದ ಪ್ರಮುಖ ಪ್ರಕಾರ ಆಯಿತು, ಇದರಲ್ಲಿ ವಿಶೇಷವಾಗಿ ಪ್ರಾಬಲ್ಯ ಪಡೆದವನು ಚಾರ್ಲ್ಸ್ ಡಿಕೆನ್ಸ್; ಆದರೆ ಬ್ರಾಂಟೆ ಸಹೋದರಿಯರು, ಥಾಮಸ್ ಹಾರ್ಡಿ, ಸೇರಿದಂತೆ ಇತರ ಅನೇಕ ಗಮನಾರ್ಹ ಬರಹಗಾರರು ಇದ್ದರು. ನಂತರ 19 ನೇ ಶತಮಾನದ ಕೊನೆಯ ದಶಕಗಳಲ್ಲಿ, ಅಮೆರಿಕನ್ನರು ಇಂಗ್ಲೀಷ್ ಸಾಹಿತ್ಯಕ್ಕೆ ಹೆಚ್ಚಿನ ಕೊಡಿಗೆ ನೀಡಿದರು.
ಕಾದಂಬರಿಕಾರ ಹರ್ಮನ್ ಮೆಲ್ವಿಲ್, ಮೊಬಿ ಡಿಕ್ (1851) ಲೇಖಕ ಮತ್ತು ಕವಿಗಳು ವಾಲ್ಟ್ ವಿಟ್ಮನ್ ಮತ್ತು ಎಮಿಲಿ ಡಿಕಿನ್ಸನ್ ಸೇರಿದಂತೆ 19 ನೇ ಶತಮಾನದಲ್ಲಿ ಪ್ರಮುಖ ಬರಹಗಾರರು ಸಾಹಿತ್ಯ ರಚನೆ ಆರಂಭಿಸಿದರು.ಈ ಸಂದರ್ಭದಲ್ಲಿ ಮತ್ತೊಬ್ಬ ಅಮೆರಿಕನ್ ಹೆನ್ರಿ ಜೇಮ್ಸ್, 19 ನೇ ಶತಮಾನದ ಅಂತ್ಯದಲ್ಲಿ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಪ್ರಮುಖ ಕಾದಂಬರಿಕಾರ ಆಗಿರುವನು.
20 ನೇ ಶತಮಾನದ ಮೊದಲ ಎರಡು ದಶಕಗಳಲ್ಲಿ ಪೋಲಿಷ್ ಮೂಲದ ಜೋಸೆಫ್ ಕಾನ್ರಾಡ್ ಬಹುಶಃ ಅತ್ಯಂತ ಪ್ರಮುಖ ಬ್ರಿಟಿಷ್ ಕಾದಂಬರಿಕಾರ.
ಐರಿಷ್ ಬರಹಗಾರರು ಜೇಮ್ಸ್ ಜಾಯ್ಸ್, ಮತ್ತು ನಂತರ ಸ್ಯಾಮ್ಯುಯೆಲ್ ಬೆಕೆಟ್, ಸೇರಿದಂತೆ ಎರಡೂ ಜನ ಆಧುನಿಕ/ ನವ್ಯ ಚಳವಳಿಯಲ್ಲಿ [both central figures in the Modernist movement.] ಕೇಂದ್ರ ವ್ಯಕ್ತಿಗಳಾಗಿ, 20 ನೇ ಶತಮಾನದಲ್ಲಿ ಮುಖ್ಯರಾಗುತ್ತಾರೆ. ಅದೇ ಕಾಲದಲ್ಲಿ ಅಮೆರಿಕನ್ನರು, - ಕವಿಗಳು ಟಿ.ಎಸ್.ಎಲಿಯಟ್ ಮತ್ತು ಎಜ್ರಾ ಪೌಂಡ್ ಮತ್ತು ಕಾದಂಬರಿಕಾರ ವಿಲಿಯಂ ಫಾಲ್ಕ್ನರ್ ಇತರ ಆಧುನಿಕತಾವಾದಿಗಳು ಪ್ರಮುಖರು. 20 ನೇ ಶತಮಾನದ ಮಧ್ಯಭಾಗದ ಪ್ರಮುಖ ಬರಹಗಾರರು ಯುನೈಟೆಡ್ ಕಿಂಗ್ಡಮ್ ಹೊರಗಿನಿಂದ ಬಂದಿದ್ದಾರೆ. ಬ್ರಿಟಿಷ್ ಕಾಮನ್ವೆಲ್ತ್ ನ ವಿವಿಧ ದೇಶಗಳಲ್ಲಿ ನೊಬೆಲ್-ಪುರಸ್ಕೃತರಾದ ಹಲವಾರು ಬರಹಗಾರರು ಕಾಣಿಸಿಕೊಂಡರು. 20 ನೇ ಹಾಗೂ 21 ನೇ ಶತಮಾನದಲ್ಲಿ ಇಂಗ್ಲೀಷ್ ರಲ್ಲಿ ಅನೇಕ ಪ್ರಮುಖ ಬರಹಗಾರರು. ಪರಾ-ಆಧುನಿಕತೆಯ (ಆಧುನಿಕತೆಯ ನಂತರದ ;ಆಧುನಿಕೋತ್ತರ-The term Postmodern ) ಸಾಹಿತ್ಯದಲ್ಲಿ,-ಎರಡನೇ ಮಹಾಯುದ್ಧದ ಕೆಲವು ಪ್ರವೃತ್ತಿಗಳನ್ನು ವಿವರಿಸಲು ಬಳಸಲಾಗುತ್ತದೆ. ಇದು ಸಾಹಿತ್ಯದಲ್ಲಿ ಆಧುನಿಕ ಕಾಲದ ಬರಹಗಾರರ ಮುಂದುವರಿದ ಪ್ರಯೋಗ, ಎರಡೂ ಅಂತರ್ಗತ;ನಿರೂಪಕರ ಪ್ರಶ್ನಾರ್ಹ ಕೃತಿ ಇದ್ದು, ಉದಾಹರಣೆಗೆ, ವಿಘಟನೆ, ವಿರೋಧಾಭಾಸ, ಇತ್ಯಾದಿ,ಇದರ ಮೇಲೆ, ಜ್ಞಾನೋದಯದ ಕಲ್ಪನೆಗಳ ವಿರುದ್ಧ ಆಧುನಿಕ ಪಂಥದವರ ಪ್ರತಿಕ್ರಿಯೆ ಎದ್ದು ಕಾಣುವುದು (a reaction against Enlightenment ideas implicit in Modernist literature)[ಇಂಗ್ಲಿಷ್ ತಾಣ/ವಿಭಾಗದಿಂದ).

ಪ್ರಾಚೀನ ಇಂಗ್ಲಿಷ್[ಬದಲಾಯಿಸಿ]

ಬಿವುಲ್ಫ್ ಕಾವ್ಯದ ಮೊದಲ ಪುಟ; ಸುಮಾರು ಕ್ರಿ.ಶ.1000ದಲ್ಲಿ ಬರೆದಿರಬಹುದು ಎಂದು ಊಹಿಸಲಾಗಿದೆ
ಪ್ರಾಚೀನ ಇಂಗ್ಲೀಷ್ ಕಾವ್ಯದಲ್ಲಿ ಎರಡು ಶೈಲಿಗಳನ್ನು ಉಲ್ಲೇಖ ಮಾಡಬಹುದು. ವೀರೋಚಿತ ಜರ್ಮನಿಕ್ ಮತ್ತು ಕ್ರಿಶ್ಚಿಯನ್ (ಧಾರ್ಮಿಕ-ಭಕ್ತಿ). ಆಂಗ್ಲೋ ಸ್ಯಾಕ್ಸನ್ ರು ಇಂಗ್ಲೆಂಡ್ ಗೆ ಆಗಮಿಸಿದ ನಂತರ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತನೆ ಮಾಡಲಾಯಿತು.ಅವರಿಂದ ಈ ಪ್ರಾಚೀನ ಆಂಗ್ಲೋ ಸ್ಯಾಕ್ಸನ್ ಭಾಷೆಯ ಬೆಳವಣಿಗೆ ಆಗಿದೆ. ಆಗಿನ ಅತ್ಯಂತ ಜನಪ್ರಿಯ ಪದ್ಯ ಲಕ್ಷಣಗಳು,- ಆದಿಪ್ರಾಸ, ಶಬ್ದ ಪ್ರಾಸ,ಅನುಪ್ರಾಸ ಯಮಕ , ಸ್ವರಗಳು ಒಂದೇ ರೀತಿಯಲ್ಲಿ ಪುನರುಚ್ಛಾರವಗುವುದು. ಆದಿಪ್ರಾಸದ ಪದ್ಯ ಪ್ರಾಚೀನ ಇಂಗ್ಲೀಷ್ ಕಾವ್ಯದ ಪ್ರಸಿದ್ಧ ಲಕ್ಷಣ. ಇದು ಐದು ಕ್ರಮಪಲ್ಲಟನೆಗಳಲ್ಲಿ ಒಂದು ವಿಧವನ್ನು ಒಳಗೊಂಡಿದೆ; ಈ ಐದು ರೀತಿಯಲ್ಲಿ ಯಾವುದೇ ಒಂದು ಪದ್ಯ ಕ್ರಮ ಬಳಸಬಹುದು. ಈ ಕ್ರಮ ವ್ಯವಸ್ಥೆ ಒಂದಲ್ಲಾ ಒಂದು ಜರ್ಮನ್ ಭಾಷೆಗಳ ಎಲ್ಲಾ ಕಾವ್ಯದಳಲ್ಲಿ ಅಸ್ತಿತ್ವದಲ್ಲಿದೆ. ಆ ಕ್ರಮವನ್ನು ಪ್ರಾಚೀನ ಇಂಗ್ಲೀಷ್ ಕಾವ್ಯಗಳು ಎರವಲು ಪಡೆದುಕೊಂಡಿವೆ.
ಬೀವುಲ್ಫ್ ಸುಮಾರು 8 ನೇ ಶತಮಾನದ ಇಂಗ್ಲಿಷ್-ಸ್ಯಾಕ್ಸನ್ (ಆ್ಯಂಗ್ಲೊ-ಸ್ಯಾಕ್ಸನ್) ಒಂದು ಪುರಾಣ ಕಥೆಯ ಕಾವ್ಯ;ಹಾಡುತ್ತಾ ಬಾಯಿಂದ ಬಾಯಿಗೆ ನೆನಪಿನಲ್ಲಿ ಉಳಿದು ಬಂದ ಕಾವ್ಯ; ಇಂಗ್ಲಿಷ್ ಗೆ ಅನುವಾದಿಸಿದ್ದು .ಇದು ಹಳೆಯ ಬೈಬಲ್‍ನಿಂದ ತೆಗೆದುಕೊಂಡಿದ್ದು.ಇದರ ಕರ್ತೃ/ಕವಿ ಯಾರೆಂಬುದು ತಿಳಿದಿಲ್ಲ. ಗ್ರೆಂಡೆಲ್ ಆರ್ಧ ಮಾನವ ಅರ್ಧ ಪ್ರಾಣಿಯಾದ ಕೂೃರ-ದೈತ್ಯ ಪ್ರಾಣಿಯನ್ನು ಡೇನಿಷ್ ದೊರೆ ಹ್ರೋತ್ಗರ್‍ಗಾಗಿ ಬಿವುಲ್ಫ್ ಕೊಂದ ಕಥೆ. ಅದರ ನಂತರ ಜನರಿಗೆ ತೊಂಗರೆ ಕೊಡುತ್ತಿದ್ದ ಬೆಂಕಿಯುಗುಳುವ ಡ್ರಾಗನ್ ಎಂಬ ಪ್ರಣಿಯನ್ನು ಕೊಂದು ಅದರ ಬೆಂಕಿಯ ಉಸುರಿಗೆ ಸಿಕ್ಕಿ ಸಾಯುತ್ತಾನೆ. ಇದು ದೈಹಾರ್ಪ್ ಎಂಬ ತಂತಿವಾದ್ಯ ಬಾರಿಸುತ್ತಾ ಹಾಡುವ ಕಾವ್ಯ. ಇಂಗ್ಲೆಢನ್ನು ಜರ್ಮನಿಯ ಮೂಲ ನಿವಾಸಿಗಳು ಆಕ್ರಮಿಸಿದಾಗ ಅವರು ಪ್ರಾಚೀನ ಇಂಗ್ಲಿಷನ್ನು ಇಂಗ್ಲೆಂಡಿಗೆ ತಂದರು ಅದು ಆಧುನಿಕ ಇಂಗ್ಲಿಷ್ ಭಾಷೆಗೆ ಆಧಾರವಾದದ್ದು., ಆ ಬೀವೂಲ್ಪ್ ಪದ್ಯದ ಕ್ರಮ ನಂತರ ನಾರ್ಮನ್-ಪ್ರೆಂಚರು ಆ ಪ್ರದೇದವನ್ನು ಆಕ್ರಮಿಸುವ ವರೆಗೆ. ಹಾಗೆಯೇ 13, 14ನೇ ಶತಮಾನದವರೆಗೆ ಮುಂದುವರೆಯಿತು. ಆ ಪದ್ಯದ ಮಟ್ಟು ಮತ್ತು ಗಣಗಳು ಈಗಿನ ಆಧುನಿಕ ಕವನ ಅಥವಾ ಕಾವ್ದ ಸಾಲುಗಳನ್ನು ಹೋಲುತ್ತವೆ. ಆಗಿನ ಕಾಲದ ಗದ್ಯ 9ನೇ ಶತಮಾನದ್ದು , ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ್ದು. ಆಂಗ್ಲ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಕೊಟ್ಟ ಆಂಗ್ಲೋ ಸ್ಯಾಕ್ಸನ್ ದೊರೆ ದಿ.ಗ್ರೇಟ್ ಆಲ್ಫ್ರಡ್ ಕಾಲದಲ್ಲಿ ಅದು ಪ್ರಾಚೀನ ಇಂಗ್ಲಿಷ್`ಗೆ ಅನುವಾದ ಗೊಂಡಿತು.

ವಿಕ್ಟೋರಿಯಾ ಯುಗದಲ್ಲಿ (೧೮೩೭-೧೯೦೧) ಕಾದಂಬರಿ ಆಂಗ್ಲ ಭಾಷೆಯನ್ನು ಕರೆದೊಯ್ಯುವಂತಹ ಸಾಹಿತ್ಯಕ ಶೈಲಿಯಿತ್ತು. ಅದು ವಿಶೇಷವಾಗಿ ಚಾರ್ಲ್ಸ್‌ ಡಿಕನ್ಸ್ ರವರ ಕಾದಂಬರಿಗಳಿಂದ ಮತ್ತು ೧೯ ನೇ ಶತಮಾನದ ಕೊನೆಯಲ್ಲಿ ಒಂಟಿ ಸಹೋದರಿಯರು ಮತ್ತು ಥಾಮಸ್ ಹಾರ್ಡಿ ಅವರ ಸಾಹಿತ್ಯದಿ0ದ.೧೯ನೇ ಶತಮಾನದಲ್ಲಿಯೇ ಅಮೇರಿಕನ್ನರ ಪ್ರಮುಖ ಬರಹಗಾರರಾದ ಹೆಮ‌ನ್ ಮೆಲ್ ವಿಲ್ , ವಿಲ್ಟ್ ಮೆನ್ ಮತ್ತು ಎಮಿಲಿ ಡಿಕಿನ್ಸನ್ ರವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಮತ್ತೊಬ್ಬ ಅಮೇರಿಕನ್ ಹೆನ್ರಿ ಜೆಮ್ಸ್ ರವರು ಅತ್ಯಂತ ಪ್ರಸಿದ್ಧ ಕಾದಂಬರಿಕಾರರಾಗಿದ್ದರು.

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಆಂಗ್ಲ ಸಾಹಿತ್ಯ ಸಾಮಾನ್ಯವಾಗಿ ಬೇವುಲ್ಪ್ ಮಹಾಕಾವ್ಯದಿಂದ ಆರಂಭವಾಗುತ್ತದೆ.ಈ ಮಹಾಕಾವ್ಯ ೮ನೇ ಶತಮಾನ ದಿ೦ದ ೧೧ನೇ ಶತಮಾನದ ನಡುವೆ ರಚಿಸಲಾಗಿತ್ತು. ಹಳೆಯ ಆಂಗ್ಲ ಭಾಷೆಯಲ್ಲಿ ಅತ್ಯಂತ ಪ್ರಸಿದ್ಧ ಮಹಾಕಾವ್ಯ ಅಂತಸ್ತು ಹೊಂದಿರುವ ಏಕೈಕ ಹೆಗ್ಗುರುತೆಂದರೆ ಕವಿ ಜೆಫ್ರಿ ಚಾಸರ್ನ (೧೩೪೩-೧೪೦೦) ಸಾಹಿತ್ಯ ರಚನೆಗಳು. ವಿಶೇಷವಾಗಿ ಅವರ'ದಿ ಕ್ಯಾಂಟರ್ಬರಿ ಟೇಲ್ಸ್'ಸಲ್ಲುತ್ತದೆ. ನಂತರ ನವೋದಯ ಕಾಲದಲ್ಲಿ ವಿಶೇಷವಾಗಿ ತಡ ೧೬ನೇ ಹಾಗೂ ೧೭ನೇ ಶತಮಾನದ ಮೊದಲಿನಲ್ಲಿ ಪ್ರಮುಖ ನಾಟಕ ಹಾಗೂ ಕಾವ್ಯಗಳನ್ನು ವಿಲಿಯಂ ಷೇಕ್ಸ್‌ಪಿಯರ್, ಬೆನ್ ಜಾನಸನ್, ಜಾನ್ ಡನ್ ಮುಂತಾದವರು ರಚಿಸಿದರು.೧೭ ನೇ ಶತಮಾನದ ಮತ್ತೊಂದು ಮಹಾನ್ ಕವಿ ಜಾನ್ ಮಿಲ್ಟನ್ (೧೬೦೮-೧೬೭೪) ಪ್ಯಾರಡೈಸ್ ಲಾಸ್ಟ್ ಎಂಬ ಮಹಾ ಕವಿತೆಯ ಲೇಖಕರು ಆಂಗ್ಲ ಸಾಹಿತ್ಯವನ್ನು ಇನ್ನಷ್ಟು ಸಮ್ರುದ್ದಗೊಳಿಸಿದರು. ೧೭ನೇ ಹಾಗೂ ೧೮ನೇ ಶತಮಾನಗಳಲ್ಲಿ ವಿಶೇಷವಾಗಿ ಸಾಹಿತ್ಯವು ವಿಡಂಬಣೆಗಳಿಗೆ ಸಂಬಂಧಪಟ್ಟಿದ್ದವು, ಈ ಕಾಲದಲ್ಲಿ ಜಾನ್ ಡ್ರೈಡನ್ ಮತ್ತು ಅಲೆಕ್ಸಾಂಡರ್ ಪೋಪ್ ನ ಕಾವ್ಯಗಳು ಜೊನಾಥನ್ ಸ್ವಿಫ್ಟ್ ನ ಗದ್ಯವಚನಗಳು ಹೊಸ ಸಾಹಿತ್ಯ ತಿರುವನ್ನು ನೀಡಿತು. ೧೮ನೇ ಶತಮಾನದಲ್ಲಿ ಮೊದಲ ಬ್ರಿಟಿಷ್ ಕಾದಂಬರಿಗಳನ್ನು ಡೇನಿಯಲ್ ಡೇಪೌ, ಸಾಮ್ಯುಲ್ ರಿಚ್‌ರ್ಡ್ಸನ್ ಮತ್ತು ಹೆನ್ರಿ ಪೀಲ್ಡಿಂಗ್ ರಚಿಸಿದರು. ೧೮ನೇ ಶತಮಾನದ ಕೊನೆ ಹಾಗೂ ೧೯ನೇ ಶತಮಾನದ ಆರಂಭದಲ್ಲಿ ಪ್ರಣಯ ಕವಿಗಳಾದ ವರ್ಡ್ಸ್‌ವರ್ತ್, ಶಲ್ಲೇ ಮತ್ತು ಜಾನ್ ಕೀಟ್ಸ್ ರ ಕಾಲವಾಗಿತ್ತು.

ವಿಕ್ಟೋರಿಯಾ ಯುಗದಲ್ಲಿ (೧೮೩೭-೧೯೦೧) ಕಾದಂಬರಿ ಆಂಗ್ಲ ಭಾಷೆಯನ್ನು ಕರೆದೊಯ್ಯುವಂತಹ ಸಾಹಿತ್ಯಕ ಶೈಲಿಯಿತ್ತು. ಅದು ವಿಶೇಷವಾಗಿ ಚಾರ್ಲ್ಸ್‌ ಡಿಕನ್ಸ್ ರವರ ಕಾದಂಬರಿಗಳಿಂದ ಮತ್ತು ೧೯ ನೇ ಶತಮಾನದ ಕೊನೆಯಲ್ಲಿ ಒಂಟಿ ಸಹೋದರಿಯರು ಮತ್ತು ಥಾಮಸ್ ಹಾರ್ಡಿ ಅವರ ಸಾಹಿತ್ಯದಿ0ದ.೧೯ನೇ ಶತಮಾನದಲ್ಲಿಯೇ ಅಮೇರಿಕನ್ನರ ಪ್ರಮುಖ ಬರಹಗಾರರಾದ ಹೆಮ‌ನ್ ಮೆಲ್ ವಿಲ್ , ವಿಲ್ಟ್ ಮೆನ್ ಮತ್ತು ಎಮಿಲಿ ಡಿಕಿನ್ಸನ್ ರವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಮತ್ತೊಬ್ಬ ಅಮೇರಿಕನ್ ಹೆನ್ರಿ ಜೆಮ್ಸ್ ರವರು ಅತ್ಯಂತ ಪ್ರಸಿದ್ಧ ಕಾದಂಬರಿಕಾರರಾಗಿದ್ದರು.

ಐರಿಶ್ ಬರಹಗಾರರಾದ ಜೇಮ್ಸ್ ಜಾಯ್ಸ್ ಮತ್ತು ಸಾಮ್ಯುಲ್ ಬೆಕೆಟ್ ೨೦ನೇ ಶತಮಾನದಲ್ಲಿ ಪ್ರಮುಖರಾಗಿದ್ದರು. ಆಧುನಿಕ ಚಳುವಳಿಯಲ್ಲಿ ಇವರಿಬ್ಬರೂ ಅತಿಮುಖ್ಯ ಪಾತ್ರದಾರಿಗಳಾಗಿದ್ದರು. ಅಮೇರಿಕನ್ನರಾದ ಕವಿ ಟಿ. ಎಸ್. ಎಲಿಯಟ್ ಮತ್ತು ಎಜ್ರಾ ಪೌಂಡ್, ಕಾದಂಬರಿಕಾರ ವಿಲಿಯಮ್ ಪೌಲ್ಕ್ ನರ್ ರವರು ಮತ್ತು ಇತರ ಆಧುನಿಕ ಚಳುವಳಿಕಾರರು,೨೦ನೇ ಶತಮಾನದ ನಡುವಿನಲ್ಲಿ ಪ್ರಮುಖ ಬರಹಗಾರರಾಗಿ ಬ್ರಿಟಿಷ್ ಆಡಳಿತದಲ್ಲಿದ್ದ ದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು, ಹಲವು ನೊಬೆಲ್ ಪ್ರಶಸ್ತಿ ವಿಜೇತರ ಸಹ ಇದ್ದರು. ೨೦ ಮತ್ತು ೨೧ ನೇ ಶತಮಾನದ ಶ್ರೇಷ್ಠ ಬರಹಗಾರರೆಲ್ಲ ಇಂಗ್ಲೆಂಡ್ ನ ಹೊರಗಿನವರಾಗಿದ್ದರು. ಆಧುನಿಕ ಚಳುವಳಿಯ ನಂತರ ಮತ್ತು ೨ನೇ ವಿಶ್ವಯುದ್ದದ ನಂತರದ ಸಾಹಿತ್ಯ ಪ್ರವ್ರುತ್ತಿಗಳನ್ನು ವರ್ಣಿಸುತ್ತದೆ.ಆಧುನಿಕ ಅವಧಿ ಬರಹಗಾರರ ಮುಂದುವರಿಕೆ ಮತ್ತು ಪ್ರಯೋಗ ಪರೀಕ್ಷೆ ಅತೀವವಾಗಿ ವಿಘಟನೆ, ವಿರೋದಾಬಾಸ, ಪಶಾಹ೯ ಮತ್ತು ಜ್ಞಾನೋದಯ ಆಲೊಚನೆಯ ವಿರುದ್ದ ಆಧುನಿಕ ಸಾಹಿತ್ಯದ ಅವಧಿಯಲ್ಲಿ ಸಾಹಿತಿಗಳು ಹೊಂದಿದ್ದರು.[೧][೨]

ಮಧ್ಯಕಾಲೀನ ಹಳೆ ಇಂಗ್ಲಿಷ್[ಬದಲಾಯಿಸಿ]

ಇದು 11ನೇ ಶತಮಾನದ ಆರಂಭದಿಂದ 15ನೇ ಶತಮಾನದಲ್ಲಿ ಕಂಡುಬರುವುದು. ಗದ್ಯ ಬರವಣಿಗೆಯೆಲ್ಲಾ ಧಾರ್ಮಿಕ ವಿಷಯಕ್ಕೆ ಸಂಬಂಧಪಟ್ಟುದು. ಇದರಲ್ಲಿ ಹೆಚ್ಚು ಫ್ರೆಂಚ್ ಪ್ರಭಾವ ಕಾಣುವುದು. ಇದು ಆಧುನಿಕ ಇಂಗ್ಲಿಷ್‍ಗೆ ಬಹಳ ಹೋಲಿಕೆ ಇದ್ದು ಓದಿ ಅರ್ಥಮಾಡಿಕೊಳ್ಳಬಹುದು. ಇದರಲ್ಲಿ ಫ್ರೆಂಚ್ ಜೊತೆಗೆ ಇಟಲಿ ಭಾಷೆಯ ಪ್ರಭಾವವೂ ಕಾಣುವುದು.
*ಪ್ರಾಚೀನ ಇಂಗ್ಲಿಷ್ :
  • ಇದನ್ನು ಆಂಗ್ಲೋ ಸ್ಯಾಕ್ಸನ್ ಇಂಗ್ಲಿಷ್ ಎಂದೂ ಕರೆಯುವರು. ಇದರ ಕಾಲ ಕ್ರಿ.ಶ.600 ರಿಂದ 1100 ಎಂದು ಅಂದಾಜುಮಾಡಿದ್ದಾರೆ. ಆ ಕಾಲದ ದೊಡ್ಡ ಕಾವ್ಯ ಬೀವೂಲ್ಫ್ (ಬಿವೂಲ್ಫ್-ಃBeowulf). ಅದರ ಕೃತಿಕಾರನಾರೆಂದು ತಿಳಿದಿಲ್ಲ. ಆ ಕಾಲದ ಹೆಚ್ಚು ಪ್ರಮುಖರಾದವರು , ಸಣ್ಣ ಗೀತೆಗಳ ರಚನೆಕಾರ- ಸೀಡ್ಮನ್ ಮತ್ತು ನಾಲ್ಕು ದೀರ್ಘ ಕವನಗಳನ್ನು ಬರೆದ ಸೈನ್ ವೂಲ್ಫ್
.
ವೈಕ್ಲಿಫ್ (1320-1384)
ಮಧ್ಯ ಇಂಗ್ಲೀಷ್ ನಲ್ಲಿ ಬೈಬಲ್ ಅನುವಾದಗಳು, ಮುಖ್ಯವಾಗಿ ವೈಕ್ಲಿಫ್ ಬೈಬಲ್, ಇಂಗ್ಲೀಷ್ ನ ಒಂದು ಸಾಹಿತ್ಯ ಭಾಷೆಯಾಗಿ ಬೆಳೆಯಲು/ನೆಲೆಯೂರಲು ನೆರವಾಯಿತು. ಮಧ್ಯ ಇಂಗ್ಲೀಷ್ ಬೈಬಲ್ ಗಳು ಈಗ, ವೈಕ್ಲಿಫ್ ಬೈಬಲ್ ನಿರ್ದೇಶನದಲ್ಲಿ ಅನುವಾದ ಮಾಡಿದ, ಅಥವಾ ಜಾನ್ ವೈಕ್ಲಿಫ್, ಪ್ರೇರೇಪಣೆಯ ಅನುವಾದಗಳು ಎಂದು ಹೆಸರಾಗಿದೆ.(ವಿವರಕ್ಕೆ ಮಧ್ಯಯುಗ)
ಸಾಹಿತ್ಯದ ಸಮೃದ್ಧಪ್ರತಿಭೆಯ ಜೆಫ್ರಿ ಚಾಸರ್ (ಸಿ 1343-1400) ತನ್ನ ಕೃತಿಗಳನ್ನು /ಪದ್ಯಗಳನ್ನು ಶಾಸ್ತ್ರ ಬದ್ಧವಾಗಿ ರಚಿಸಿದ್ದ. ವೆಸ್ಟ್ಮಿನಿಸ್ಟರ್ ಅಬ್ಬೆಯ ಕವಿ ಕಾರ್ನರ್ ನಲ್ಲಿ ಸಮಾಧಿ ಮಾಡಲ್ಪಟ್ಟ ಮೊದಲ ಕವಿ. ಅವರ ಅನೇಕ ಕೃತಿಗಳಲ್ಲಿ “ಡಚೆಸ್ ಪುಸ್ತಕ”, ‘ಹೌಸ್ ಆಫ್ ಫೇಮ್’, ‘ಲೆಜೆಂಡ್ ಆಪ್ ಗುಡ್ ವಿಮೆನ್,’(The Book of the Duchess, the House of Fame, the Legend of Good Women and Troilus and Criseyde,) ಸೇರಿದಂತೆ,ಅವುಗಳ ಪೈಕಿ,‘ಕ್ಯಾಂಟರ್ಬರಿ ಟೇಲ್ಸ್’ ಚಾಸರ್ ನ ಅತ್ಯುತ್ತಮ ಕೃತಿ ಎಂದು ಪರಿಗಣಿಸಲಾಗಿದೆ.(ಕರೆಯಲಾಗುತ್ತದೆ.)

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಹಳೆಯ ಆಂಗ್ಲ ಸಾಹಿತ್ಯ (೬೫೮-೧೧೦೦):

ಹಳೆಯ ಆಂಗ್ಲ ಸಾಹಿತ್ಯ ಅಥವಾ ಆಂಗ್ಲೊ ಸಾಕ್ಸನ್ ಸಾಹಿತ್ಯ ಹಳೆ ಆಂಗ್ಲ ಭಾಷೆಯಲ್ಲಿ ಬರೆದಿರುವಂತಹ ಸಾಹಿತ್ಯವನ್ನು ಒಳಗೊಳ್ಳುತ್ತದೆ. ಸಾಕ್ಸನ್ ಮತ್ತು ಇತರೆ ಜಮ‍೯ನ್ ಬುಡಕಟ್ಟು ಜನರು ಇಂಗ್ಲೆಂಡ್ ನಲ್ಲಿ ನೆಲೆಯೂರಿಸಿದ ನಂತರ ಆರಂಭವಾದ ಬರವಣಿಗೆ. ಈ ಸಾಹಿತ್ಯದ ಪ್ರಕಾರ ಮಹಾಕಾವ್ಯ, ಸಂತಚರಿತೆ, ನೀತಿ ಭೋದನೆ, ಬೈಬಲ್ ಅನುವಾಧ, ಕಾನೂನಿನ ಕೆಲಸ, ಕಾಲಾನುಕ್ರಮಾದಿ ಇತ್ಯಾದಿ. ಈ ಅವಧಿಗೆ ಸಂಬಂಧಪಟ್ಟಂತೆ ೪೦೦ ಹಸ್ತ ಪತ್ರಿಕೆಗಳು ಉಳಿದಿವೆ. ಹಳೆಯ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ಉಳಿದಿರುವ ಆರಂಭಿಕ ಕಾವ್ಯ 'ಸೀಡ್ ಮನ್ಸ್ ಹಿಮ್' ಬಹುಶಃ ೬೫೮-೬೮೦ ರಲ್ಲಿ ಸಂಯೋಜನೆಗೊಂಡಿರಬಹುದು.

  • ಮಧ್ಯ ಆಂಗ್ಲ ಸಾಹಿತ್ಯ(೧೧೦೦-೧೫೦೦)

ಇಂಗ್ಲೆಂಡ್ ನ ನಾಮ‍೯ನ್ ವಿಜಯದ ನಂತರ ೧೦೬೬ ರಲ್ಲಿ ಆಂಗ್ಲೋ ಸಾಕ್ಸನ್ ಭಾಷೆಯ ಬರವಣಿಗೆಯ ರೂಪ ದರ ಪ್ರಮಾಣದಲ್ಲಿ ಸಾಮಾನ್ಯವಾಯಿತು.ಅರಿಸ್ಟ್ರೋಕಸಿಯ ಅಡಿಯಲ್ಲಿ ಹಾಗೂ ಅದರ ವ್ರಭಾವದಿಂದ ಪ್ರೆಂಚ್ ಭಾಷೆ ನ್ಯಾಯಾಲಯಗಳು, ಸಂಸತ್ತು ಹಾಗೂ ಸುಸಂಸ್ಕೃತ ಸಮಾಜ ಪ್ರಮಾಣಿತ ಭಾಷೆಯಾಯಿತು. ಈ ಅವಧಿಯಲ್ಲಿ ಧಾಮಿ‍೯ಕ ಸಾಹಿತ್ಯ ಜನಪ್ರಿಯವಾಗುವತ್ತ ಮುಂದುವರಿಯಿತು. ಸಂತರ ಜೀವನ ಚರಿತ್ರೆಗಳನ್ನು ಬರೆದು ಅಳವಡಿಸಿಕೊಂಡು ಹಾಗೂ ಅನುವಾದಿಸಿಕೊಳ್ಳುವತ್ತ ನಡೆದರು, ಉದಾಹರಣೆ:- ದಿ ಲೈಪ್ ಆಫ್ ಸೇಂಟ್, ಜೌಡ್ರೆ ಮತ್ತು ಸೌತ್ ಇಂಗ್ಲಿಷ್ ಲೆಜೆಂಡ್ರಿ ಪ್ರಮುಖವು.ಈ ಅವಧಿಯಲ್ಲಿ ಹೊಸ ಶೈಲಿಯ ಆಂಗ್ಲ ಭಾಷೆ ಉದ್ಬವವಾಯಿತು ಅದರ ಹೆಸರೇ ಮಾದ್ಯಮ ಆಂಗ್ಲ.ಈ ವಿಧದ ಆಂಗ್ಲ ಆಧುನಿಕ ಓದಿಗರಿಗೆ ಸುಲಭವಾಗಿರಲಿಲ್ಲ.

  • ಹಳೆಯ ಆಂಗ್ಲ ಸಾಹಿತ್ಯ (೬೫೮-೧೧೦೦)

ಹಳೆಯ ಆಂಗ್ಲ ಸಾಹಿತ್ಯ ಅಥವಾ ಆಂಗ್ಲೊ ಸಾಕ್ಸನ್ ಸಾಹಿತ್ಯ ಹಳೆ ಆಂಗ್ಲ ಭಾಷೆಯಲ್ಲಿ ಬರೆದಿರುವಂತಹ ಸಾಹಿತ್ಯವನ್ನು ಒಳಗೊಳ್ಳುತ್ತದೆ. ಸಾಕ್ಸನ್ ಮತ್ತು ಇತರೆ ಜಮ‍೯ನ್ ಬುಡಕಟ್ಟು ಜನರು ಇಂಗ್ಲೆಂಡ್ ನಲ್ಲಿ ನೆಲೆಯೂರಿಸಿದ ನಂತರ ಆರಂಭವಾದ ಬರವಣಿಗೆ. ಈ ಸಾಹಿತ್ಯದ ಪ್ರಕಾರ ಮಹಾಕಾವ್ಯ, ಸಂತಚರಿತೆ, ನೀತಿ ಭೋದನೆ, ಬೈಬಲ್ ಅನುವಾಧ, ಕಾನೂನಿನ ಕೆಲಸ, ಕಾಲಾನುಕ್ರಮಾದಿ ಇತ್ಯಾದಿ. ಈ ಅವಧಿಗೆ ಸಂಬಂಧಪಟ್ಟಂತೆ ೪೦೦ ಹಸ್ತ ಪತ್ರಿಕೆಗಳು ಉಳಿದಿವೆ. ಹಳೆಯ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ಉಳಿದಿರುವ ಆರಂಭಿಕ ಕಾವ್ಯ 'ಸೀಡ್ ಮನ್ಸ್ ಹಿಮ್' ಬಹುಶಃ ೬೫೮-೬೮೦ ಯಲ್ಲಿ ಸಂಯೋಜನೆಗೊಂಡಿರಬಹುದು.

  • ಮಧ್ಯ ಆಂಗ್ಲ ಸಾಹಿತ್ಯ(೧೧೦೦-೧೫೦೦)

ಇಂಗ್ಲೆಂಡ್ ನ ನಾಮ‍೯ನ್ ವಿಜಯದ ನಂತರ ೧೦೬೬ ರಲ್ಲಿ ಆಂಗ್ಲೋ ಸಾಕ್ಸನ್ ಭಾಷೆಯ ಬರವಣಿಗೆಯ ರೂಪ ದರ ಪ್ರಮಾಣದಲ್ಲಿ ಸಾಮಾನ್ಯವಾಯಿತು.ಅರಿಸ್ಟ್ರೋಕಸಿಯ ಅಡಿಯಲ್ಲಿ ಹಾಗೂ ಅದರ ವ್ರಭಾವದಿಂದ ಪ್ರೆಂಚ್ ಭಾಷೆ ನ್ಯಾಯಾಲಯಗಳು, ಸಂಸತ್ತು ಹಾಗೂ ಸುಸಂಸ್ಕೃತ ಸಮಾಜ ಪ್ರಮಾಣಿತ ಭಾಷೆಯಾಯಿತು. ಈ ಅವಧಿಯಲ್ಲಿ ಧಾಮಿ‍೯ಕ ಸಾಹಿತ್ಯ ಜನಪ್ರಿಯವಾಗುವತ್ತ ಮುಂದುವರಿಯಿತು. ಸಂತರ ಜೀವನ ಚರಿತ್ರೆಗಳನ್ನು ಬರೆದು ಅಳವಡಿಸಿಕೊಂಡು ಹಾಗೂ ಅನುವಾದಿಸಿಕೊಳ್ಳುವತ್ತ ನಡೆದರು, ಉದಾಹರಣೆ:- ದಿ ಲೈಪ್ ಆಫ್ ಸೇಂಟ್, ಜೌಡ್ರೆ ಮತ್ತು ಸೌತ್ ಇಂಗ್ಲಿಷ್ ಲೆಜೆಂಡ್ರಿ ಪ್ರಮುಖವು.ಈ ಅವಧಿಯಲ್ಲಿ ಹೊಸ ಶೈಲಿಯ ಆಂಗ್ಲ ಭಾಷೆ ಉದ್ಬವವಾಯಿತು ಅದರ ಹೆಸರೇ ಮಾದ್ಯಮ ಆಂಗ್ಲ.ಈ ವಿಧದ ಆಂಗ್ಲ ಆಧುನಿಕ ಓದಿಗರಿಗೆ ಸುಲಭವಾಗಿರಲಿಲ್ಲ.[೩][೪][೫][೬]

ಛಾಸರ್‍ನ ಕಾಲ[ಬದಲಾಯಿಸಿ]

Portrait of Chaucer from a manuscript by Thomas Hoccleve, who may have met Chaucer
ಜಿಯೋಪ್ರಿ ಛಾಸರ್ (1340/1387-1400)
ಒಬ್ಬ ಸರ್ಕಾರಿ ನೌಕರನಾಗಿದ್ದ ಜಿಯೋಪ್ರಿ ಛಾಸರ್ (1340/1387-1400)ನ ಸರಳ ದ್ವಿಪದಿಯಲ್ಲಿರುವ ಪದ್ಯ ರೂಪದಲ್ಲಿರುವ “ಕ್ಯಾಂಟರಬರಿ ಟೇಲ್ಸ್” -ಕ್ಯಾಂಟರ್ಬರಿ ಕಥೆಗಳು ಪ್ರಮುಖವಾದುದು. ಸೌತ್ವಾರ್ಕ್‍ನಿಂದ ಸೈಂಟ್ ಥಾಮಸ್ ಬಕೆಟ್ ನ ಸಮಾಧಿಯ ದರ್ಶನಕ್ಕೆ ಹೊರಟ ಯಾತ್ರಾರ್ಥಿಗಳು ಹೇಳಿದ ಕಥೆಗಳು. ಅವರು 29 ಜನರಿದ್ದರೂ 23 ಜನ ಹೇಳಿದ ಕಥೆಗಳಿವೆ ಈ ಕಥೆಗಳಿಗೆ ಛಾಸರನು (ಚಾಸರನು) ಒಂದು ಪೀಠಿಕೆಯಲ್ಲಿ ಯಾತ್ರಿಗಳ ಗುಣ ಸ್ವಭಾವಗಳನ್ನು ವ್ಯಂಗ್ಯ ಮತ್ತು ಕಟಕಿಯ (ಕಟುಹಾಸ್ಯ) ಶೈಲಿಯಲ್ಲಿ ವಿವರಿಸಿ ಅಂದಿನ ಸಮಾಜದ ಜನಪದದ ಸ್ವಭಾವಕ್ಕೆ ಕನ್ನಡಿ ಹಿಡಿಯುತ್ತಾನೆ.
ಛಾಸರ್ ಮೊದಲು ಡ್ಯೂಕನ ಹತ್ತಿರ ಸೇವಕನಾಗಿದ್ದವನು ನಂತರ ಸೈನ್ಯದಲ್ಲಿ ಕೆಲವು ಕಾಲ ಸೇವೆ ಮಾಡಿದನು. ನಂತರ ರಾಜನ ಲೆಕ್ಕಿಗನಾಗಿ ಕೆಲಸ ಮಾಡಿದನು. ಅವನ ಎರಡು ಕೃತಿಗಳು “ಟ್ರೋಯ್ಲಸ್ ಕ್ರಿಸೈಡ್” (Troylus and Criseyde. 1385), ಒಂದು ಆದರ್ಶ ಪ್ರೇಮದ ಕಥೆ. ನಂತರ ಇದನ್ನು ಕ್ಯಾಂಟರ್ಬರಿ ಕಥೆಗಳಲ್ಲಿ ಸೇರಿಸಲಾಯಿತು.. ಕೆಲವು ಫ್ರೆಂಚ ಕೃತಿಗಳನ್ನೂ ಇಂಗ್ಲಿಷ್ ಗೆ ಅನುವಾದ ಮಾಡಿದ್ದಾನೆ.
ಈ ಯಾತ್ರಿಗಳಲ್ಲಿ ಒಬ್ಬು ಸರದಾರ(ನೈಟ್) , ಸ್ಕ್ವಯರ್, ರಾಜರಕ್ಷಾದಳದವ, ಬಾತದ ಸುಂದರಪತ್ನಿ , ಮುಖ್ಯಸನ್ಯಾಸಿನಿ, ಸನ್ಯಾಸಿನಿ, ಮೂವರು ಪಾದ್ರಿಗಳು, ಒಬ್ಬ ಸನ್ಯಾಸಿ , ಮತಪ್ರಚಾರಕ -ಭಿಕ್ಷು (ಫ್ರಯರ್) ವ್ಯಾಪಾರಿ , ಗುಮಾಸ್ತ, ನ್ಯಾಯಪಾಲಕ, ಜಮೀನುದಾರ , ಬಡಗಿ, ನೇಕಾರ, ವ್ಯಾಪಾರಿ-ದರ್ಜಿ, ಬಣ್ಣಗಾರ, ಕುಶಲಕೆಲಸಗಾರ, ಅಡಿಗೆಯವ, ನಾವಿಕ, ವೈದ್ಯ,, ಗ್ರಾಮ ಪಾದ್ರಿ, ರೈತ, ಗಿರಣಿದಾರ, ಕಾವಲುಗಾರ (ಸ್ಟೆವರ್ಡ), ಅಮೀನ, ನ್ಯಾಯದಾನಿ (ಬೈಲಿಫ್), ಕ್ಷಮಾಧಿಕಾರಿ-ನ್ಯಾಯವಾದಿ., ಚಾಸರ್-ಕವಿ-ಕತೆಗಾರ. ಅಲ್ಲದೆ ಒಬ್ಬ ತೀಕ್ಷಣ ಬುದ್ಧಿಯ ಅಥಿತೇಯ-ಯಾತ್ರೆಯ ವ್ಯವಸ್ಥಾಪಕ. ಈ ಆತಿಥ್ಯಗಾರನೇ ಒಬ್ಬೊಬ್ಬರು ಒಂದೊಂದು ಕಥೆ ಹೇಳಬೇಕೆಂದು ಸೂಚಿಸಿದವನು ಎಂದು ಛಾಸರನು ಪೀಠಿಕೆ ಹಾಕಿದ್ದಾನೆ.
ಈ ಕಥಾಕವನ 17000 ಸಾಲು ಹೊಂದಿದೆ. ಅವರವರ ಉದ್ಯೋಗಕ್ಕೆ ತಕ್ಕಂತೆ 23 ಜನ ಕಥೆ ಹೇಳುತ್ತಾರೆ. ಇವರೆಲ್ಲಾ ಮಧ್ಯಮ ವರ್ಗದ ಜನರು. ಚಾಸರನ ಈ ಕತೆಗಳು ನಾಟಕೀಯ ಔಚತ್ಯ , ಧೀರೋದಾತ್ತ ಪಾತ್ರ ವಿಶೇಷ, ಸಾಹಸ ಮನೋಭಾವ, ಮತ್ತು ಶೃಂಗಾರ ಬಾವಗಳಿಂದ (ಧ್ವನಿಯಲ್ಲಿ ಶೃಂಗಾರ) ಕೂಡಿದೆ. ಇದರಲ್ಲಿ ಚಾಸರನು ಸುಧಾರಣಾವಾದಿಯಾಗಿರದೆ ತಟಸ್ಥನಾಗಿದ್ದಾನೆ. ವೈಕ್ಲಿಫನು ಸುಧಾರಣಾವಾದದ ಹರಿಕಾರನಾದರೆ ಚಾಸರನು ಸಾಹಿತ್ಯದ ಪುನರುಜ್ಜೀವನದ /ನವೋದಯದ ಹರಿಕಾರನೆನ್ನಬಹುದು.
*ಮಧ್ಯಕಾಲೀನ ಇಂಗ್ಲಿಷ್ :
  • ಈ ಕಾಲವು ಸುಮಾರು ಕ್ರಿ. ಶ. 1100 ರಿಂದ 1500 ರ ವರೆಗೆ ಎಂದು ತಿಳಿಯಲಾಗುವುದು.
  • ಕಾವ್ಯ ; ಈ ಕಾಲದ ಅತ್ಯಂತ ಪ್ರಮುಖ ಕವಿ ಜಿಯೊಫ್ರಿ ಛಾಸರ್ . ಅವನ ಶ್ರೇಷ್ಠ ಕೊಡಿಗೆ ಕ್ಯಾಂಟರಬರಿ ಕಥೆಗಳು.
  • ನಾಟಕ :ಇವು ಮೂರು ಬಗೆ.
ಮೊದಲ ಬಗೆ
  • ಮಧ್ಯಕಾಲೀನ ನಾಟಕಗಳಲ್ಲಿ ಮುಖ್ಯವಾದವು ಬೈಬಲ್ಲಿನ ಕಥೆಗಳನ್ನು ಆಧರಿಸಿದ ‘ರಹಸ್ಯಾತ್ಮಕ ನಾಟಕಗಳು’.
ಎರಡನೆಯ ಬಗೆ,
  • ಸಂತರ ಜೀವನ ಮತ್ತು ಅವರ ಪವಾಡಗಳನ್ನು ಪ್ರಧಾನವಾಗಿ ಬಿಂಬಿಸುವ ‘ಅದ್ಭುತ ನಾಟಕಗಳು’ ,
ಮೂರನೆಯ ಬಗೆ ‘ನೀತಿ ಪ್ರಧಾನ ನಾಟಕಗಳು’;
  • ಇವು ನೀತಿವಂತನಾದ ಧಾರ್ಮಿಕ ವ್ಯಕ್ತಿ ಅಥವಾ ಕೆಟ್ಟ; ಈ ಬಗೆಯ ಪಾತ್ರಗಳನ್ನು ಹೊಂದಿ ನೀತಿ ಬೋದಕವಾದ ವಸ್ತುಗಳನ್ನು ಹೊಂದಿವೆ
.
ಅವನ ಕಟಕಿ ಭಾಷೆಗೆ ಉದಾಹರಣೆಗಳು
ಉಪೋದ್ಘಾತದಲ್ಲಿ -“ಬಾತದಸುಂದರಿಯು ಶೃಂಗಾರ ಪ್ರಿಯೆ; ಅವಳು ತನ್ನ ಐದನೆಯ ಸಪ್ಪೆ-ಗಂಡನ ಜೊತೆ ಕಾಲಹಾಕಲಾರದೆ ಸದಾ ಪ್ರಯಾಣದಲ್ಲಿರುತ್ತಾಳೆ.”
“ಸ್ಕ್ವಯರನು ಯಾವಾಗಲೂ ತನ್ನ ಕೊಳಲು ಬಾರಿಸುತ್ತಾ ಮೇ ತಿಂಗಳಿನಂತೆ ಗೆಲುವಿನಿಂದ ಮಿಂಚುತ್ತಾನೆ”;
“ಮುಖ್ಯಸನ್ಯಾಸಿನಿ ಒಳ್ಳೆಯ ಮೈಕಟ್ಟಿನ ಸುಂದರಿ ಗಂಭೀರೆ , ಅವಳ ಊಟದ ಶಿಸ್ತು ಆಕóರ್ಷಣೀಯ, ಸುಂದರ ಉಡುಪಿನ ಮೇಲೆ ಚಿನ್ನದ ಪದಕ ಹೊಳೆಯುವುದು”. (ಸಂನ್ಯಾಸಿನಿಯರು ಆಭರಣ ಧರಿಸುವುದು ನಿಶಿದ,್ಧ ಪ್ರಾಪಂಚಿಕ ಆಕರ್ಷಣೆಗಳಿಗೆ ಅವರು ಹೊರತಲ್ಲ !).
“ಡಾನ ಪಿಯರ್ -ಸಂನ್ಯಾಸಿಯೂ ಕೂಡ ಅಭ್ಯಾಸ ನಿರತನಾಗುವ ಬದಲು ಸದಾ ಪ್ರಯಾಣದಲ್ಲಿ ಆಸಕ್ತಿಯುಳ್ಳವನು. ಅವನಿಗೆ ಬೇಟೆಯೆಂದರೆ ಬಹಳ ಆಸಕ್ತಿ, ಒಳ್ಳೆಯ ಬೇಟೆಗಾರ, ಅವನಿಗೆ ದಪ್ಪನೆಯ ದುಬಾರಿ ಬಾತುಕೋಳಿಯ ಊಟ ಬಹಳ ಇಷ್ಟ” ; (ಇದು ಚಾಸರನ ಕಟಕಿ); “ಭಿಕ್ಷುಕ ಸಂನ್ಯಾಸಿಯು(ಪ್ರಯರ್) ಹರ್ಬಟ್ ಅತ್ಯುತ್ತಮ ಬಿಕ್ಷುಕ”ನೆನ್ನುತ್ತಾನೆ. ಅವನಿಗೆ (ದೇವರ ಪರವಾಗಿ) ಕ್ಷಮಾಪಣೆ ಮಾಡುವ ಅಧಿಕಾರವಿದೆ, “ಅವನು ಒಳ್ಳೆಯ ಕೊಡಿಗೆ (ಹಣ) ಅಥವಾ ಊಟ ಕೊಟ್ಟರೆ ಪಾಪಗಳನ್ನು ಕ್ಷಮಿಸುವನು; ಅವನು ಶ್ರೀಮಂತ ಉಡುಪಿನವ”;
ವ್ಯಾಪಾರಿಯು ಬಿಡುವಿದ್ದರೂ ಬಿಡುವಿಲ್ಲದಂತೆ ವರ್ತಿಸುತ್ತಾ ಅಗತ್ಯವಿರುವವರಿಗೆ ಬಡ್ಡಿಗೆ ಸಾಲನೀಡುತ್ತಾ ಕಾನೂನು ಉಲ್ಲಂಘಿಸುವುದರಲ್ಲಿ ್ಲಜಾಣ”
ಅಡುಗೆಭಟ್ಟ ರೋಜರನು (ತನ್ನ ಯಜಮಾನನಿಗಾಗಿ,) “ಅಡುಗೆಯಲ್ಲಿ ಬಹಳ ನಿಪುಣ ಹಳಸಿದ್ದನ್ನೂ ಕೆಟ್ಟಿದ್ದನ್ನೂ ಸೇರಿಸಿ ಬಡಿಸುವುದರಲ್ಲಿ ಜಾಣ”
ಕ್ಷಮಾಧಿಕಾರಿಯನ್ನು ವಂಚಕನೆನ್ನುತ್ತಾನೆ “ಹಂದಿಯ ಮೂಳೆಗಳನ್ನು ಪ್ರಾಚೀನ ಪವಿತ್ರ ಸ್ಮಾರಕ ಕುರುಹು (ಪಳಿಯುಳಿಕೆ)ಯೆಂದು ತೋರಿಸುತ್ತಾ ವಂಚನೆಗಾಗಿ ಮಂತ್ರ ಪಠಣ ಮಾಡುವನು, ಬಹಿರಂಗವಾಗಿ ಅವನು ಹೆಣ್ಣು ದನಿಯಲ್ಲಿ ಪ್ರೇಮಗೀತೆಗಳನ್ನು ಹಾಡುವನು”. ಎಂದಿದ್ದಾನೆ.

ಮಧ್ಯಯುಗ[ಬದಲಾಯಿಸಿ]

(ಪ್ರತಿಯೊಬ್ಬ ಕೃತಿಕಾರನ ಕೃತಿ-ಕೊಡುಗೆ ಮತ್ತು ಅದರ ವೈಶಿಷ್ಟ್ಯಗಳನ್ನು ಆಯಾ ಕೃತಿಕಾರನ ಹೆಸರಿನ ಎದುರು ತುಂಬಬೇಕು -ಮುಕ್ತ ಅವಕಾಶ)

ಕಾವ್ಯ
ಗೋವರ್, (1330-1408);ಚಾಸರ್ ,(1340-1400);ಲಾಂಗ್ ಲ್ಯಾಂಡ್,(1330-1400);ಲಿಡ್ ಗೇಟ್ 1370-1451);
ಬ್ಯಾಲಾಡ್ಸ್
-ಚವ್ವೀ ಛೇಸ್ ;ನಟ್ ಬ್ರೌನ್ ಮೈಡ್, ;
ಗದ್ಯ
ಮ್ಯಾಂಡ್ವಿಲ್ಲಿ (ಮ-1372)
ವೈಕ್ಲಿಫ್ (1320-1384)
ಮಧ್ಯ ಇಂಗ್ಲೀಷ್ ನಲ್ಲಿ ಬೈಬಲ್ ಅನುವಾದಗಳು, ಮುಖ್ಯವಾಗಿ ವೈಕ್ಲಿಫ್ ಬೈಬಲ್, ಇಂಗ್ಲೀಷ್ ನ ಒಂದು ಸಾಹಿತ್ಯ ಭಾಷೆಯಾಗಿ ಬೆಳೆಯಲು/ನೆಲೆಯೂರಲು ನೆರವಾಯಿತು. ಮಧ್ಯ ಇಂಗ್ಲೀಷ್ ಬೈಬಲ್ ಗಳು ಈಗ, ವೈಕ್ಲಿಫ್ ಬೈಬಲ್ ನಿರ್ದೇಶನದಲ್ಲಿ ಅನುವಾದ ಮಾಡಿದ, ಅಥವಾ ಜಾನ್ ವೈಕ್ಲಿಫ್, ಪ್ರೇರೇಪಣೆಯ ಅನುವಾದಗಳು ಎಂದು ಹೆಸರಾಗಿದೆ. ಅವು ಸುಮಾರು 1382 ಮತ್ತು 1395 ನಡುವೆ ಕಂಡುಬರುತ್ತವೆ. ಬೈಬಲ್ ಅನುವಾದಗಳು ಲಾಲರ್ಡ್ ಚಳುವಳಿಯವು,. ರೋಮನ್ ಕ್ಯಾಥೋಲಿಕ್ ಚರ್ಚ್`ನ ವಿಶಿಷ್ಟ ಹಲವಾರು ಬೋಧನೆಗಳನ್ನು ತಿರಸ್ಕರಿಸುವ ಪೂರ್ವ ಸುಧಾರಣಾ ಚಳುವಳಿಯ ಪ್ರಮುಖ ಪ್ರೇರಣೆ ಮತ್ತು ಕಾರಣವಾಗಿ ಅವು ಕಾಣಿಸಿಕೊಂಡವು.. ವೈಕ್ಲಿಫ್ ಕಲ್ಪನೆಯಲ್ಲಿ ಬೈಬಲ್ ನ್ನು, ಭಾಷಾಂತರಿಸಲು "ಇದು ಜನರು ಉತ್ತಮವಾದ ಕ್ರಿಸ್ತನ ವಾಕ್ಯವನ್ನು ತಿಳಿಯಲು ಆ ದೇಶೀಯ ಭಾಷೆಯಲ್ಲಿ ಗಾಸ್ಪೆಲ್ ಅಧ್ಯಯನ ಕ್ರಿಶ್ಚಿಯನ್ ರಿಗೆ ಸಹಾಯ ಮಾಡುತ್ತದೆ. " ಎಂದು ಹೇಳುವುದಾಗಿತ್ತು , ಅದು ಅನಧಿಕೃತ ಆದಾಗ್ಯೂ, ಜನಪ್ರಿಯವಾಗಿತ್ತು. ವೈಕ್ಲಿಫ್ ಬೈಬಲ್ ಗ್ರಂಥಗಳ ಇಂಗ್ಲೀಷ್ ಸಾಹಿತ್ಯದ ಸಾಮಾನ್ಯ ಹಸ್ತಪ್ರತಿ ಮತ್ತು ವೈಕ್ಲಿಫ್ ಬೈಬಲ್ ನ ಮೂಲ ಪ್ರತಿ ಸುಮಾರು 200 ಹಸ್ತಪ್ರತಿಗಳು ಈಗ ಲಭ್ಯ.
"ಲಾಲರ್ಡ್" ಪದ, ಪ್ರಮುಖ ದೇವತಾಶಾಸ್ತ್ರಜ್ಞ ಜಾನ್ ವೈಕ್ಲಿಫ್ ನ ಅನುಯಾಯಿಗಳಿಗೆ ಕರೆಯುವ ಪದ, ಚರ್ಚ್ ನ್ನು ಟೀಕೆ ಮಾಡಿದ್ದಕ್ಕೆ 1381 ರಲ್ಲಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯದದಿಂದ ಅವನನ್ನು ತೆಗೆದು ಹಾಕಿದರು. ಮಧ್ಯ ಯುಗದಲ್ಲಿ ಪಾಶ್ಚಾತ್ಯ ಕ್ರಿಶ್ಚಿಯನ್ ರು ಮೂಲ ರೂಪದಲ್ಲಿ ಬೈಬಲ್ ನ್ನು ಮೌಖಿಕವಾಗಿ -.. ಲ್ಯಾಟಿನ್ ನಲ್ಲಿ ಹೇಳುತ್ತಿದ್ದರು.
(ಸರ್ ಗವೈನ್ ಮತ್ತು ಗ್ರೀನ್ ನೈಟ್, ಗ್ರಂಥಗಳು 14 ನೇ ಶತಮಾನದ ಕೊನೆಯಲ್ಲಿ ಮಧ್ಯ ಇಂಗ್ಲೀಷ್, ಆದಿಪ್ರಾಸದ ಶೃಂಗಾರ ಕಾವ್ಯ .
ಅನಾಮಿಕ ಕವಿಯ ಕಾವ್ಯ ವಿಲಿಯಮ್ ಲಾಂಗಲ್ಯಾಡಿನ ಪಿರ್ಸ್ ಆಫ್ ಪ್ಲೊಮನ್ ಮುಖ್ಯವಾದುದು. ಅದು ವಿಲಿಯಂ ನು ಒಂದು ಕನಸಿನಲ್ಲಿ ಕಂಡಂತೆ ಬರೆದ , ಬಡವರ ಕಷ್ಟವನ್ನು ಕುರಿತ ಕಾವ್ಯ , ಅದಕ್ಕೆ ಪ್ರತಿಭಟನೆಯನ್ನೂ ಕಾಣಬಹುದು. ಕ್ರಿಶ್ಚಿಯನ್ ಧರ್ಮದ ತಿರುಳನ್ನು ಹೊಂದಿದೆ , ಆ ಧರ್ಮದ ಕಾಣ್ಕೆಯನ್ನು ಹೊಂದಿದೆ. ( ಇಟಲಿಯ ಡಾಂಟೆ ಯ “ಲಾ ಡಿವೈನ್” ಕಾಮಿಡಿಯ ಹೋಲಿಕೆ ಮತ್ತು ಪ್ರಭಾವವಿದೆ.
1370ರಲ್ಲಿ ಬರೆದ “ದಿ ಪರ್ಲ್” ಚಿಕ್ಕ ಕಾವ್ಯ ಕೂಡ ಕ್ರಿಶ್ಚಿಯನ್ ಧರ್ಮದ ಪ್ರಚಾರವನ್ನು ಹೊಂದಿದ್ದರೂ ,ಕಲಾತ್ಮಕ ಭಾವ ಹೊಂದಿದೆ. ಚಿಕ್ಕ ಹುಡುಗಿಯ ಸಾವಿನ ಶೋಕ ಗೀತೆ. ಚಿಕ್ಕ ಮಗುವಿನ ಮನಸ್ಸಿನ ನಿರ್ಮಲತೆಯನ್ನು ಹೊಂದಿದ್ದರೆ ಎಲ್ಲರಿಗೂ ಸ್ವರ್ಗದ ಬಾಗಿಲು ತೆರೆದಿರುವುದೆಂದೆಂಬುದು ಅದರ ಸಾರಾಂಶ.
ಅದೇ ಕವಿಯ ಕೃತಿ ಎಂದು ಭಾವಿಸಬಹುದಾದ ಗವೈನ್ ಎಂಡ್ ದಿ ಗ್ರೀನ್ ನೈಟ್, ಒಂದು ಶೌರ್ಯ ಮತ್ತು ಸಾಹಸ ಬಿಂಬಿಸುವ ಕಥೆ.
ಟ್ರೆವಿಸ (1326-1412); ಮಲೋರಿ (ಸು.1470);ಪೀಕಾಕ್ (1395-1460)
ನಾಟಕ
ಎವೆರಿಮನ್ (15ನೇ ಶತಮಾನ)

ಫಲ್ಗೆನ್ಸ್ ಮತ್ತು ಲಾರೆನ್ಸ್

1500-1700 ಮಾನವತಾವಾದದ ಕಾಲ[ಬದಲಾಯಿಸಿ]

ಕಾವ್ಯ
ಸ್ಕೆಲ್ಟನ್ (1460-1529);

ಡನ್ಬರ್ (1465-1530) ವ್ಯಾಟ್ (1503-1542) ಸರ್ರೇ (1517-1547)

ಗದ್ಯ
ಭೆರನರ್ಸ್ (1467-1533)

ಟಿಂಡೇಲ್ (ಮ. 1536) ಲಾಟಿಮೇರ್ (1485-1555) ಕೊವರ್ದೇಲ್ (1488-1568) ಎಲ್ಯೋಟ್ (1499-1546) ಆಶ್ಚಮ್ (1515-1568)

ನಾಟಕ
ಉದಲ್ಲ್ (1505-56)

ನೋರ್ಟನ್ (1532-1584) ಸಾಲ್ ವಿಲ್ಲೆ (1536-1608)

ರಿನೇಸಾನ್ಸ್ -ನವೋದಯಕಾಲ[ಬದಲಾಯಿಸಿ]

ಎಡ್ಮಂಡ್ ಸ್ಪೆನ್ಸರ್ -ತೈಲ ಚಿತ್ರ
ಮುಖಪುಟ ವಿಲಿಯಂ ಶೇಕ್ಸ್'ಫಿಯರ್'ನ ಗ್ರಂಥದ ಮೊದಲ ಪುಟ:1623

ನಾಟಕ-ಷೇಕ್ಸ್‍ಪಿಯರ್, (1564-1616) ಅವನ ಯುಗ:[ಬದಲಾಯಿಸಿ]

  • ಈ ಯುಗ ಇಷ್ಟು ಚೈತನ್ಯಮಯವಾದುದರಿಂದಲೇ ಇದರ ವಿಶಿಷ್ಟ ಸಾಹಿತ್ಯಪ್ರಕಾರ ನಾಟಕವಾದುದು. ಮಧ್ಯಯುಗದಲ್ಲೇ ಚರ್ಚುಗಳಲ್ಲಿ ಧರ್ಮಭೋಧನೆಯ ಸಾಧನವಾಗಿ ಪಾದ್ರಿಗಳಿಂದ ನಡೆಯುತ್ತಿದ್ದ ಬೈಬಲ್ ಕಥೆಗಳ ಪ್ರದರ್ಶನದಿಂದ ಆರಂಭವಾಗಿದ್ದ ನಾಟಕ (ಆ ಕಾಲದ ನಾಟಕಗಳಿಗೆ ಮಿಸ್ಟರಿ ಪ್ಲೇಸ್, ಮಿರಕಲ್ ಪ್ಲೇಸ್, ಮೊರ್ಯಾಲಿಟಿ ಪ್ಲೇಸ್ ಎಂದು ಹೆಸರು) ಹದಿನಾರನೆಯ ಶತಮಾನದಲ್ಲಿ ಉನ್ನತಮಟ್ಟಕ್ಕೇರಿತು. ಇಂಟರ್ ಲ್ಯೂಡ್ ಎಂಬ ಕಿರುನಾಟಕ ಪ್ರಕಾರವೂ ಹಾಸ್ಯನಾಟಕಗಳೂ ಬಂದುವು. ಪ್ರಾರಂಭದಲ್ಲಿ ಪ್ರದರ್ಶನವು ಚರ್ಚ್‍ಗಳ ಆವರಣದಲ್ಲಿ ನಡೆಯುತ್ತಿತ್ತು. ಅನಂತರ ಚಕ್ರಗಳ ಮೇಲು ಚಲಿಸುವ, ಎರಡು ಅಂತಸ್ತುಗಳ ರಂಗವೇದಿಕೆಯು ಕಾಣಿಸಿಕೊಂಡಿತು. ಮುಂದೆ ಲಂಡನ್ನಿನಲ್ಲಿ ಥೇಮ್ಸ್ ನದಿಯಾಚೆ ಕಟ್ಟಿದ ರಂಗಭೂಮಿಯಿಂದ ಇಂಗ್ಲಿಷ್ ನಾಟಕಗಳ ಬೆಳವಣಿಗೆಗೆ ವಿಶೇಷ ನೆರವಾಯಿತು.
  • ಗ್ಯಾಮರ್ ಗರ್ಟನ್ಸ್ ನೀಡ್ಸ್ ಮತ್ತು ರಾಲ್ಪ್ ರಾಯಿಸ್ಟರ್ ಡಾಯಿಸ್ಟರ್ ಇಂಗ್ಲಿಷಿನ ಮೊದಲ ಹಾಸ್ಯನಾಟಕಗಳೆನ್ನಬಹುದು. ಹಾಸ್ಯ ಅಷ್ಟೇನೂ ಸೂಕ್ಷ್ಮರೀತಿಯದಲ್ಲದಿದ್ದರೂ ಸೆನೆಕನ ಲ್ಯಾಟಿನ ದುರಂತ ನಾಟಕಗಳ ಮಾದರಿಯಲ್ಲಿ 1561ರಲ್ಲಿ ಸ್ಯಾಕ್ವಿಲ್ ಮತ್ತು ನಾತ್ಪನ್ ಎಂಬುವರು ಗೋರ್ಪೋಡಕ್ ಎಂಬ ನಾಟಕವನ್ನು ಬರೆದರು. ಇದೇ ಇಂಗ್ಲಿಷಿನ ಮೊಟ್ಟಮೊದಲ ಸರಳೆಗಳೆಯ ನಾಟಕ. ಅನಂತರ ಯೂನಿವರ್ಸಿಟಿ ವಿಟ್ಸ್ ಎಂದು ಹೆಸರು ಪಡೆದಿರುವ ಲಿಲಿ, ಪೀಲ್, ಗ್ರೀನ್, ಮಾರ್ಲೊ ಮತ್ತು ಕಿಡ್ ಒಬ್ಬೊಬ್ಬರೂ ಒಂದೊಂದು ಬಗೆಯ ನಾಟಕಕ್ಷೇತ್ರದಲ್ಲಿ-ಹಾಸ್ಯನಾಟಕ, ರುದ್ರನಾಟಕ ಇತ್ಯಾದಿ-ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ಕಿಡ್ ಬರೆದ ಸ್ಪ್ಯಾನಿಷ್ ಟ್ರಾಜಿಡಿ ಭೀಭತ್ಸಮಯ ದೃಶ್ಯಗಳಿಗೂ ರೋಮಾಂಚಕಾರಕ ಘಟನೆಗಳಿಗೂ ಹತ್ಯೆಗಳಿಗೂ ಪ್ರಸಿದ್ಧವಾಗಿ ಸೆನೆಕನ್ ಟ್ರಾಜಿಡಿ ಎಂಬ ವಿಶಿಷ್ಟವರ್ಗದ ನಾಟಕಗಳಿಗೆ ಮಾದರಿಯಾಯಿತು.
  • ಷೇಕ್ಸ್‍ಪಿಯರನ ಹ್ಯಾಮ್ಲೆಟ್ ನಾಟಕವೂ ಸ್ವಲ್ಪಮಟ್ಟಿಗೆ ಈ ವರ್ಗಕ್ಕೆ ಸೇರಿದ್ದೇ. ವೆಬ್‍ಸ್ಟರ್‍ನ ದಿ ವೈಟ್ ಡೆವಿಲ್ ಮತ್ತು ಡಚೆಸ್ ಆಫ್ ಮ್ಯಾಲ್ಪಿ ಎಂಬ ಪ್ರಖ್ಯಾತ ನಾಟಕಗಳು ಇದೇ ಜಾತಿಯವು. ಯೂನಿವರ್ಸಿಟಿ ವಿಟ್ಸ್‍ಗಳಲ್ಲಿ ಅತ್ಯಂತ ಪ್ರಸಿದ್ಧನೂ ಪ್ರಭಾವಶಾಲಿಯೂ ಆದವನು ಕ್ರಿಸ್ಟೊಫರ್ ಮಾರ್ಲೊ. ಅವನ ಟ್ಯಾಂಬುರ್ಲೇನ್, ದಿ ಜ್ಯೂ ಆಫ್ ಮಾಲ್ಟ. ಡಾಕ್ಟರ್ ಫೌಸ್ಟಸ್, ಎಡ್ವರ್ಡ್ 11-ನಾಟಕಗಳು ತಮ್ಮ ಕಲ್ಪನಾ ವೈಭವಕ್ಕೂ ಪಾತ್ರಪೋಷಣೆ ಸಂವಿಧಾನ ವೈಖರಿಗಳಿಗೂ ಭಾಷೆ ಮತ್ತು ಛಂದಸ್ಸುಗಳ ಅಪೂರ್ವಶಕ್ತಿಗೂ ಹೆಸರಾಂತ ಷೇಕ್ಸ್‍ಪಿಯರನಿಗೇ ದಾರಿಮಾಡಿಕೊಟ್ಟವೆಂದು ಹೇಳಲಾಗಿದೆ. ಈ ಯುಗದ ನಾಟಕಕಾರರಲ್ಲೆಲ್ಲ ಶಿಖರಪ್ರಾಯನಾದವ ಲೋಕ ವಿಖ್ಯಾತನಾದ ಷೇಕ್ಸ್‍ಪಿಯರ್. ರೊಮ್ಯಾಂಟಿಕ್ ಪಂಥಕ್ಕೆ ಸೇರಿದ ಇಂಗ್ಲಿಷ್ ನಾಟಕ ಪ್ರಪಂಚಕ್ಕೆ ಹಿಮಾಲಯ ಸದೃಶನಾದವ ಈ ಕವಿ. ಹಾಸ್ಯನಾಟಕ, ರುದ್ರನಾಟಕ, ಚಾರಿತ್ರಿಕ ನಾಟಕ ಮೊದಲಾದ ನಾನಾ ಕೇತ್ರಗಳಲ್ಲಿ ಒಂದೇ ಸಮನಾದ ಔನ್ನತ್ಯಪಡೆದ ಸಾಧನೆ ಅವನದು.
  • ಸಾಮಾಜಿಕ ನಾಟಕಗಳನ್ನು ಬರೆಯುವುದರಲ್ಲಿ ಷೇಕ್ಸ್‍ಪಿಯರ್ ಆಸಕ್ತನಾಗಿರಲಿಲ್ಲ. ಮನುಷ್ಯ ಹೃದಯದಲ್ಲಿ ಕೆಲಸಮಾಡುವ ಭಾವಗಳ ವಿಶ್ಲೇಷಣೆ ಮತ್ತು ಅನ್ವೇಷಣೆ ಅವನ ಮುಖ್ಯ ಉದ್ದೇಶವಾಗಿತ್ತು. ಮೂವತ್ತೆಂಟು ನಾಟಕಗಳನ್ನೂ ಎರಡು ದೀರ್ಘಕಥನ ಕವನಗಳನ್ನೂ ಸುಮಾರು ನೂರೈವತ್ತುನಾಲ್ಕು ಸಾನೆಟ್ಟ್ತುಗಳನ್ನೂ ಷೇಕ್ಸಪಿಯರ್ ರಚಿಸಿದ್ದಾನೆ. ಸಾನೆಟ್ (ಸುನೀತ)ಕ್ಕೆ ಹೊಸ ರೂಪವನ್ನು ಕೊಟ್ಟ. ಸುನೀತ ಚಿತ್ರದಲ್ಲಿ ಸ್ನೇಹ, ಪ್ರೇಮಗಳ ಸೂಕ್ಷ್ಮ ವಿಶ್ಲೇಷಣೆ ಇದೆ. 'ವೀನಸ್ ಅಂಡ್ ಅಡೊನಿಸ್, ದಿ ರೇಪ್ ಆಫ್s ಲ್ಯುಕ್ರ್ರಿಷಿ ಎಂಬುವು ಆ ಕವನಗಳು. ಅವನ ನಾಟಕಗಳಲ್ಲಿ ಮಚ್ ಆಡೊ ಅಬೌಟ್ ನಥಿಂಗ್, ದಿ ಟೇಮಿಂಗ್ ಆಫ್ ದಿ ಷ್ರ್ಯೂ, ಆಸ್ ಯು ಲ್ಯೆಕ್ ಇಟ್, ಟ್ವೆಲ್ಫ್‍ತ್ ನ್ಯೆಟ್, ಮಿಡ್ ಸಮ್ಮರ್ ನ್ಯೆಟ್ಸ್ ಡ್ರೀಂ, ಮರ್ಚೆಂಟ್ ಆಫ್ ವೆನಿಸ್ ಮೊದಲಾದ ಹಾಸ್ಯನಾಟಕಗಳೂ ರೋಮಿಯೋ ಅಂಡ್ ಜೂಲಿಯಟ್, ಮ್ಯಾಕ್ಬೆತ್, ಹ್ಯಾಮ್ಲೆಟ್, ಒಥೆಲೊ, ಕಿಂಗ್ ಲಿಯರ್ ಮೊದಲಾದ ರುದ್ರ ನಾಟಕಗಳೂ ದಿ ಟೆಂಪೆಸ್ಟ್, ವಿಂಟರ್ಸ್ ಟೇಲ್ ಮತ್ತು ಸಿಂಬೆಲಿನ್ ಎಂಬ (ದುಃಖದಲ್ಲಿ ಆರಂಭವಾಗಿ ಸುಖದಲ್ಲಿ ಕೊನೆಗಾಣುವ) ಟ್ರಾಜಿ-ಕಾಮೆಡಿಗಳೂ ಜ್ಯೂಲಿಯಸ್ ಸೀಸರ್, ಕೋರಿಯೋಲನಸ್, ರಿಚರ್ಡ್ II, ಹೆನ್ರಿ ಗಿ ಮೊದಲಾದ ರೋಮ್ ಮತ್ತು ಇಂಗ್ಲೆಂಡುಗಳ ಚರಿತ್ರೆಗಳಿಗೆ ಸಂಬಂಧಪಟ್ಟ ನಾಟಕಗಳೂ ಸಾಹಿತ್ಯ ಪ್ರಪಂಚದ ಅಮೂಲ್ಯರತ್ನಗಳೆಂದು ಪರಿಗಣಿತವಾಗಿವೆ.
  • ವಸ್ತು ಯಾವುದೇ ಆಗಲಿ, ಷೇಕ್ಸ್‍ಪಿಯರ್ ನಾಟಕಗಳು ಮಾನವನ ಹೃದಯಾಂತರಾಳವನ್ನು ತೆರೆದು ತೋರಿಸುವ ದರ್ಪಣಗಳು. ಹೆಸರಿಗೆ ಇಂಗ್ಲಿಷಿನವರು, ರೋಮಿನವರು ಇತ್ಯಾದಿಯಾದರೂ ಅವನ ಪಾತ್ರಗಳು ಎಲ್ಲ ಕಾಲಗಳ ಎಲ್ಲ ಮಾನವರ ಪ್ರತಿನಿಧಿಗಳು. ಅಂತೆಯೇ ಅವನ ನಾಟಕ ಇಡೀ ಪ್ರಪಂಚದ ಒಂದು ತುಣುಕೆಂದರೆ ಉತ್ಪ್ರೇಕ್ಷೆಯಿರದು.[೭]

ರಾಣಿ ಎಲಿಜೆಬೆತ್ ಕಾಲ(1558-1603)[ಬದಲಾಯಿಸಿ]

ಪದ್ಯ
ಸ್ಪೆನ್ಸರ್ (1552-1599) ; ಸಿಡ್ನಿ (1554-1586); ಡ್ರಾಯಟನ್ (1563-1631)
  • ವಿಲಿಯಂ ಷೇಕ್ಸಪಿಯರ್ (1564-1616);ಡನ್ (1572-1631);ಹೆರಿಕ್ (1561-1674);ಹರ್ಬರ್ಟ್ (1593-1633) ;ಮಿಲ್ಟನ್ (1604-1674);ಸಕ್ಲಿಂಗ್ (1609-1642);ಬಟ್ಲರ್ (1612-1680) ;ಕೌಲೀ (1618-1667)ಮಾರ್ವೆಲ್ (1621-1678)
;ಎಲಿಜೆಬೆತ್ ಕಾಲದ ಕಾವ್ಯ ಮತ್ತು ಗದ್ಯ -
  • ಈ ಕಾಲದ ಸಾಹಿತ್ಯ ರಚನೆ ಗಳು ಸಾಮಾನ್ಯವಾಗಿ ರಾಣಿ ಎಲಿಜೆಬೆತ್ ಕಾಲದಲ್ಲಿ (1558-1603)ಕಾಲದಲ್ಲಿ ರಚಿತವಾದವು.
ಕಾವ್ಯ
ಈಕಾಲದ ಪ್ರಮುಖ ಕವಿಗಳು -
  • ಎಡ್ಮಂಡ್ ಸ್ಪೆನ್ಸರ್ -ಅವನ ಮುಖ್ಯ ಕೃತಿ-‘ಫೈಈರೀ ಕ್ವೀನ್” ; ಡಾಲ್ಟರ್ ರ್ಯಾಲಿ ಮತ್ತು ವಿಲಿಯಂ ಶೇಕ್ಸಪಿಯರ್.
ನಾಟಕ ಸಾಹಿತ್ಯ-
  • ರಾಣಿ ಎಲಿಜೆಬೆತ್ ಕಾಲದಲ್ಲಿ ಅತ್ಯಂತ ಪ್ರಮುಖವಾಗಿ ಬೆಳೆದ ಸಾಹಿತ್ಯವು ನಾಟಕ ಪ್ರಕಾರವು. ವಿಲಿಯಂ ಶೇಕ್ಸಪಿಯರ್.ನು ಸರ್ವಕಾಲಿಕ ಅತ್ಯಂತ ಶ್ರೇಷ್ಠ ನಾಟಕ ರಚನಾಕಾರನೆಂದು ಪರಿಗಣಿಸಲ್ಪಟ್ಟಿದ್ದಾನೆ. ಅವನ ಅತ್ಯುತ್ತಮ ಕೃತಿಗಳು -ಹ್ಯಾಮ್ಲೆಟ್, ಕಿಂಗ್ ಲಿಯರ್, ಮ್ಯಾಕ್ ಬೆತ್, ಒಥೆಲೋ, ಮರ್ಚೆಂಟ್ ಆಫ್ ವೆನ್ನಿಸ್.
  • ಇತರೆ ಪ್ರಮುಖ ನಾಟಕ ಕರ್ತೃಗಳು -ಕೃಸ್ಟೋಫರ್ ಮಾರ್ಲೋ , ಬೆನ್ ಜಾನ್ಸನ್.
.

ಬೆನ್‍ಜಾನ್ಸನ್[ಬದಲಾಯಿಸಿ]

ಬೆಂಜಮಿನ್ ಜಾನ್ಸನ್: (ಅಬ್ರಹಾಂ ವ್ಯಾನ್ ಬ್ಲೈನ್‌ಬರ್ಚ್ ಅವರಿಂದ ತೈಲಚಿತ್ರ)
  • ಷೇಕ್ಸ್‍ಪಿಯರನ ಗೆಳೆಯನೂ ಸಹನಾಟಕಕಾರನೂ ಆದ ಬೆನ್‍ಜಾನ್ಸನ್ ವಿಡಂಬನಾತ್ಮಕ ಸಾಮಾಜಿಕ ನಾಟಕಗಳನ್ನು ಬರೆದ. ಹಾಸ್ಯನಾಟಕಗಳು ಸಮಾಜ ಸುಧಾರಣೆಗೆ, ನೀತಿಬೋಧನೆಗೆ ಸಾಧನಗಳಾಗಬೇಕೆಂಬುದು ಅವನ ಮತ. ಆ ಕೆಲಸಕ್ಕಾಗಿ ಆತ ತನ್ನ ಸಮಕಾಲೀನರ ನ್ಯೂನತೆಗಳನ್ನು ಹೊರಗೆಡಹಬೇಕೆಂದು ಸಾಮಾಜಿಕ ನಾಟಕಗಳನ್ನು ರಚಿಸಿದ. ಅವನ ಕಾಲದಲ್ಲಿ ಪ್ರಚಾರದಲ್ಲಿದ್ದ `ಥಿಯರಿ ಆಫ್ ಹ್ಯೂಮರ್ಸ್ ಎನ್ನುವ ಮನಶ್ಯಾಸ್ತ್ರ ಸಿದ್ಧಾಂತವೊಂದನ್ನು ಆತ ತನ್ನ ಕೆಲಸಕ್ಕಾಗಿ ಬಳಸಿಕೊಂಡ. ಪ್ರತಿ ಮನುಷ್ಯನೂ ಒಂದೊಂದು ಪ್ರಬಲ ಪ್ರವೃತ್ತಿಯ ಪ್ರಭಾವಕ್ಕೆ ಒಳಗಾಗುತ್ತಾನೆ. ಅವನ ಕಾರ್ಯಗಳಿಲ್ಲ ಈ ಪ್ರವೃತ್ತಿಯಿಂದ ಪ್ರೇರಿತವಾಗುತ್ತವೆ. ಹಾಗೆ ಹೊರಬಿದ್ದು ತೃಪ್ತಿ ಹೊಂದಿದ ಅನಂತರ ಆ ಪ್ರವೃತ್ತಿ ತನಗೆ ತಾನೇ ಸರಿಹೋಗಬೇಕು ಎಂಬುದೇ ಆ ಸಿದ್ಧಾಂತ. ಈ ಸಹಜ ಪ್ರವೃತ್ತಿಯನ್ನು ಅಂದಿನವರು ಹ್ಯೂಮರ್ ಎನ್ನುತ್ತಿದ್ದರು.
  • ಬೆನ್ ಜಾನ್‍ಸನ್ನನ ನಾಟಕಗಳ ಪಾತ್ರಗಳು ಒಬ್ಬೊಬ್ಬರೂ ಇಂಥ ಒಂದೊಂದು ಪ್ರವೃತಿಯ ದಾಸರು. ಆದ್ದರಿಂದ ಅವನ ನಾಟಕಗಳಿಗೆ ಕಾಮಿಡಿ ಆಫ್ ಹ್ಯೂಮರ್ಸ್ ಎಂಬ ಹೆಸರೇ ಬಂದಿದೆ. ಎವೆರಿ ಮ್ಯಾನ್ ಇನ್ ಹಿಸ್ ಹ್ಯೂಮರ್, ಎವೆರಿ ಮ್ಯಾನ್ ಔಟ್ ಆಫ್ ಹಿಸ್ ಹ್ಯೂಮರ್, ದಿ ಆಲ್ಕೆಮಿಸ್ಟ್, ವಾಲ್ಪೋನೆ, ದಿ ಸೈಲೆಂಟ್ ವಉಮನ್, ಬಾರ್ತಲೋಮಿಯೋ ಫೇರ್ ಫೇರ್ ಮೊದಲಾದ ಅವನ ನಾಟಕಗಳ ಹೆಸರುಗಳೇ ಅವನ ಉದ್ದೇಶವನ್ನು, ಹ್ಯೂಮರ್ಸ್ ಸಿದ್ಧಾಂತ ಅವನ ನಾಟಕಗಳಲ್ಲಿ ವಹಿಸುವ ಪಾತ್ರವನ್ನು, ಸೂಚಿಸುತ್ತವೆ. ಬೆನ್ ಜಾನ್ಸನ್ ವಾಸ್ತವಿಕ ನಾಟಕಗಳ ರಚನಕಾರ. ಸಮಕಾಲೀನ ಜನರ ನಡೆನುಡಿಗಳು ಅವನ ನಾಟಕಗಳಲ್ಲಿ ಮೂಡಿವೆ. ಇದರ ಫಲವಾಗಿ ಕಾಮೆಡಿ ಆಫ್ ಮ್ಯಾನರ್ಸ್ ಎಂಬ ಸಾಮಾಜಿಕ ನಾಟಕಗಳ ಇನ್ನೊಂದು ವರ್ಗಕ್ಕೂ ಅವನು ಪ್ರವರ್ತಕನಾದ ಷೇಕ್ಸಪಿಯರ್ ಮತ್ತು ಬೆನ್ ಜಾನ್ಸನ್ನರಲ್ಲದೆ ಈ ಯುಗದ ಇತರ ಗಣ್ಯನಾಟಕಕಾರರು ಫೋರ್ಡ್ ಮಿಡ್ಲ್‍ಟನ್, ಹೇವುಡ್, ಡೆಕ್ಕರ್, ಮ್ಯಾಸಿಂಜರ್ ಮತ್ತು ಷರ್ಲೆ. ಫೋರ್ಡನ ದಿ ಬ್ರೋಕನ್ ಹಾರ್ಟ್, ಮಿಡ್ಲಟನ್ನನ ದಿ ಛೇಂಜ್‍ಲಿಂಗ್, ಮ್ಯಾಸಿಂಜರನ ಎ ನ್ಯೂ ವೇ ಟು ಪೆ ಓಲ್ಡ್ ಡೆಟ್ಸ್, ಷರ್ಲೆಯ ಹ್ಯೆಡ್ ಪಾರ್ಕ್, ಹೇವುಡ್‍ನ ಎ ವುಮನ್ ಕಿಲ್ಡ್ ವಿತ್ ಕ್ಯೆಂಡನೆಸ್- ಇವು ಅವರ ನಾಟಕಗಳಲ್ಲಿ ಪ್ರಸಿದ್ಧವಾಗಿವೆ. ಹೇವುಡ್‍ನ ನಾಟಕ ಕುಟುಂಬ ಜೀವನದಲ್ಲಿ ಉದ್ಭವಿಸುವ ದುರಂತ ಸನ್ನಿವೇಶಗಳನ್ನು ಚಿತ್ರಿಸಿರುವ ಡೊಮೆಸ್ಟಿಕ್ ಟ್ರಾಜಿಡಿ ವರ್ಗಕ್ಕೆ ಸೇರಿದ್ದು. ಡೆಕ್ಕರ್‍ನ ದ ಷ್ಯೂ ಮೇಕರ್ಸ್ ಹಾಲಿಡೆ ಸಮಾಜದ ಕೆಳಮಟ್ಟಕ್ಕೆ ಸೇರಿದ ಜನರ ಜೀವನದ ಚಿತ್ರಗಳನ್ನು ಒಳಗೊಂಡಿದೆ. ಮೋಚಿಯೊಬ್ಬ ಪುರಸಭಾಮೇಯರ್ ಆಗುವುದು ಅದರ ಕಥೆ. ಬೋಮಂಟ್ ಮತ್ತು ಫ್ಲೆಚರ್ ಎಂಬ ಇಬ್ಬರು ನಾಟಕಕಾರರು ಒಟ್ಟಿಗೆ ನಾಟಕ ರಚನೆ ಮಾಡುತ್ತಿದ್ದು ಟ್ರಾಜಿ-ಕಾಮೆಡಿ ನಾಟಕವರ್ಗವನ್ನು ಆರಂಭಿಸಿದರು (ಷೇಕ್ಸ್‍ಪಿಯರ್ ತನ್ನ ಕಡೆಯ ನಾಟಕಗಳನ್ನು ಬರೆದಾಗ ಇದರಿಂದ ಪ್ರಭಾವಿತನಾದನೆಂದು ಕೆಲವರು ವಿದ್ವಾಂಸರ ಅಭಿಪ್ರಾಯ). ದುಃಖಪೂರಿತ ಸನ್ನಿವೇಶಗಳಲ್ಲಿ ಆರಂಭವಾಗಿ ಅನಿರೀಕ್ಷಿತವಾದ (ಕೆಲವು ವೇಳೆ ಅತಿಮಾನವವಾದ) ಘಟನೆಗಳ ಪರಿಣಾಮವಾಗಿ ನಾಟಕ ಸುಖಾಂತವಾಗುತ್ತದೆ. ಷೇಕ್ಸ್‍ಪಿಯರ್ ಬರೆದಂಥ ರುದ್ರನಾಟಕಗಳನ್ನು ನೋಡುವುದಕ್ಕೆ ಬೇಕಾದ ಮನಸ್ಸಿನ ದೃಢತೆ ಸಾಕಷ್ಟು ಇಲ್ಲದಿದ್ದ ಪ್ರೇಕ್ಷóಕರ ತೃಪ್ತಿಗಾಗಿ ರಚಿತವಾದ ನಾಟಕಗಳಿವು. ಕೃತಕವೂ ಅಸಹಜವೂ ಆದ ಆಗುಹೋಗುಗಳ ಆಧಾರದ ಮೇಲೆ ನಿಂತಿರುವ ಈ ಬಗೆಯ ನಾಟಕಗಳು ಆ ಕಾಲಕ್ಕೆ ಕೊನೆಯಾದುದರಲ್ಲಿ ಆಶ್ಚರ್ಯವೇನಿಲ್ಲ.

ಮೆಟಫಿಸಿಕಲ್ ಕಾವ್ಯ:[ಬದಲಾಯಿಸಿ]

  • ಹದಿನೇಳನೆಯ ಶತಮಾನ ಇಂಗ್ಲೆಂಡಿನ ಚರಿತ್ರೆಯಲ್ಲಿ ರಾಜಕೀಯ ಮತ್ತು ಧಾರ್ಮಿಕ ಜಿಜ್ಞಾಸೆಯ ಮತ್ತು ಕಲಹಗಳ ಕಾಲ. ಎಲಿಜಬೆತ್ತಳ ಯುಗದಂತೆ ತಾರುಣ್ಯದ ಉತ್ಸಾಹ, ಉದ್ವೇಗ, ಭಾವಾತಿಶಯಗಳು ಪ್ರಧಾನವಾಗಿರದೆ ಆಲೋಚನೆ, ವಿಮರ್ಶೆ ಈ ಕಾಲದಲ್ಲಿ ಪ್ರಾಬಲ್ಯಕ್ಕೆ ಬಂದುವು. ಇದಕ್ಕೆ ಅನುಗುಣವಾಗಿ ಚರ್ಚಾತ್ಮಕವಾದ ಗದ್ಯ ಸಾಹಿತ್ಯ ಈ ಶತಮಾನದಲ್ಲಿ ಬೆಳೆಯಿತು. ಆದರೆ ಕಾವ್ಯಸೃಷ್ಟಿಯೂ ನಡೆಯಿತು. ಇಡೀ ರಾಷ್ಟ್ರಜೀವನವನ್ನು ಪ್ರತಿಬಿಂಬಿಸುವ ಕಾವ್ಯ ಬಂದಿತು. ಪ್ರಾಟೆಸ್ಟಂಟ್ ಮತ ಮತ್ತು ಅದರ ಒಳಪಂಗಡಗಳು. ಕೆಥೊಲಿಕ ಮತ ಮೊದಲಾದುವನ್ನು ಪ್ರತಿನಿಧಿಸುವ ಕವಿಗಳು ಬಂದರು. ಲೌಕಿಕ ಕಾವ್ಯವೂ ಪ್ರಣಯಗೀತೆಗಳ ಮತ್ತು ರಾಜಕೀಯ ವಿಡಂಬನೆಗಳ ರೂಪವನ್ನು ತಳೆದು ಬೆಳೆಯಿತು. ಇಂಥ ಲೌಕಿಕ ಕವಿಗಳಲ್ಲಿ ಮೊದಲು ಹೆಸರಿಸಬೇಕಾದವ ಜಾನ್ ಡನ್ ಮತಸಂಬಂಧವಾದ ಕವಿತೆಗಳನ್ನೂ ಡನ್ ಬರೆದಿದ್ದಾನೆ. ಆದರೆ ಅವನು ತನ್ನ ಯೌವನದಲ್ಲಿ ಬರೆದ ಪ್ರಣಯಗೀತೆಗಳಿಗಿರುವ ಪ್ರಾಶಸ್ತ್ಯ ಅವಕ್ಕಿಲ್ಲ. ಆತ ದಿ ಮೆಟಫಿಜಿಕಲ್ ಸ್ಕೂಲ್ ಎಂಬ ಕಾವ್ಯವರ್ಗವನ್ನು ಆರಂಭಿಸಿದವ ಈ ಗುಂಪಿನ ಕವನಗಳ ಒಂದು ಲಕ್ಷಣ ಅವುಗಳಲ್ಲಿ ಬುದ್ಧಿಚಮತ್ಕಾರದ ಅಂಶವಿರುವುದು. ಕವಿ ಸಮಯಗಳನ್ನು ದೂರವಿರಿಸಿ, ಹೊಸ ಪ್ರತಿಮೆಗಳನ್ನು ಬಳಸಿ, ಬುದ್ಧಿ ಚಮತ್ಕಾರಕ್ಕೂ ಪ್ರಾಧಾನ್ಯವಿರುವ ಕವನಗಳನ್ನು ಬರೆದ. ಅವನ ಕವನಗಳು ತೀವ್ರಭಾವಕ್ಕೂ ಅರ್ಥಸ್ಪಷ್ಟತೆಗೂ ನಿಷ್ಕøಷ್ಟತೆಗೂ ಆಡುಮಾತಿನ ಬಳಕೆಗೂ ಗಮನಾರ್ಹವಾಗಿದೆ; ತತ್ಕಾರಣ ಅವು ಆಧುನಿಕ ಇಂಗ್ಲಿಷ್ ಕವಿಗಳ ಮತ್ತು ವಿಮರ್ಶಕರ ಮನ್ನಣೆ ಪಡೆದಿವೆ. ಡನ್ನನ ಅನಂತರ ಬಂದ ಪ್ರಣಯ ಕವಿಗಳಲ್ಲಿ ಕ್ಯಾರ್ಯೂ, ಹೆರಿಕ್, ಲವ್ಲೇಸ್, ಸಕ್ಲಿಂಗ್, ರಾಛೆಸ್ಟರ್, ಮೊದಲಾದವರ ಭಾವಗೀತೆಗಳು ಪ್ರಣಯದ ವಿವಿಧ ರೂಪದ ಆಭಿವ್ಯಕ್ತಿಯನ್ನು ಅತ್ಯಂತ ಆಕರ್ಷಕವಾದ ರೀತಿಯಲ್ಲಿ ಮಾಡುತ್ತವೆ. ಇವರೆಲ್ಲರಿಗೂ ಕ್ಯವಾಲಿಯರ್ ಪೊಯಟ್ಸ್ ಎಂದು ಹೆಸರು ಬಂದಿದೆ. ಹಗುರವಾದ ಪ್ರಣಯಭಾವದ ನಾನಾ ಛಾಯೆಗಳನ್ನು ಮನಮೋಹಕವಾದ ರೀತಿಯಲ್ಲಿ ವ್ಯಕ್ತಪಡಿಸುವುದರಲ್ಲಿ ಇವರು ಸಿದ್ಧಹಸ್ತರು. ಪ್ರಣಯನಿಷ್ಠೆಯಾಗಲಿ ಏಕಪತ್ನೀವ್ರತವಾಗಲಿ ಇವರಲ್ಲಿ ಅಪರೂಪ. ಹದಿನೇಳನೆಯ ಶತಮಾನದ ಪೂರ್ವಾರ್ಧದಲ್ಲಿ ಎಡ್ಮಂಡ್ ವ್ಯಾಲರ್, ಆಂಡ್ರ್ಯೂ ಮಾರ್ವೆಲ್, ಏಬ್ರಹಾಮ್ ಕೌಲಿ, ಜಾನ್ ಡ್ರ್ಯೆಡನ್-ಇವರೆಲ್ಲ ಉತ್ತಮ ಮಟ್ಟದ ಕೆಲವು ಭಾವಗೀತೆಗಳನ್ನೂ ಹಾಡುಗಳನ್ನೂ ಬರೆದರು. ಕೌಲಿ ಮಹಾಕಾವ್ಯವನ್ನು ಬರೆಯಬೇಕೆಂಬ ಬಯಕೆಯಿಂದ ಡೇವಿಡೇಯಿಸ್ ಎಂಬ ಬಹಳ ದೊಡ್ಡ ಕವನವನ್ನೇ ಬರೆದು ತನ್ನ ಕಾಲದಲ್ಲಿ ಬಹು ಪ್ರಖ್ಯಾತನಾಗಿದ್ದ. ಈಗ ಆ ಕಾವ್ಯವನ್ನು ಕೇಳುವವರೇ ಇಲ್ಲ. ಆ ಶತಮಾನಕ್ಕೆ ಸೇರಿದ ಜಾರ್ಜ್ ಹರ್ಬರ್ಟ್, ರಿಚರ್ಡ್ ಕ್ರಾಷಾ, ಹೆನ್ರಿ ವಾಹನ್, ಮತ್ತು ಥಾಮಸ್ ಟ್ರಹರ್ನ್ ಮೆಟಫಿಸಿಕಲ್ ಸ್ಕೂಲ್‍ಗೆ ಸೇರಿದ ಒಳ್ಳೆಯ ಕವಿಗಳು. ಎಲ್ಲರೂ ಅಲೌಕಿಕ ವಿಚಾರಗಳನ್ನು ಕುರಿತು ಅನುಭಾವಿ ಕವನಗಳನ್ನು ಬರೆದಿರುವರು. ಇವರ ಕವನಗಳು ಹದಿನೇಳನೆಯ ಶತಮಾನದ ಧಾರ್ಮಿಕ ದೃಷ್ಟಿಗೆ ದ್ಯೋತಕವಾಗಿವೆ.

ಮಿಲ್ಟನ್[ಬದಲಾಯಿಸಿ]

  • ಗದ್ಯ: ಡಿಲೋನಿ ( 1543-1600) ;ಸಿಡ್ನಿ (1554-1586) ;ಹೂಕರ್ (1554-1600);ಲೈಲೀ (1554-1606) ;ಬೇಕನ್ ( 1561-1626);ನ್ಯಾಶ್ (ನ್ಯಾಶೆ)(1567-1601);ಬರ್ಟನ್ (1577-1640);ಓವರ್ ಬರೀ (1581-1613) ;ಅರ್ಲ್ (1601-1665);ಬ್ರೌನ್ (1605-1682);ಫುಲ್ಲರ್ (1608-1661);ಮಿಲ್ಟನ್ (1608-1674)
  • ವಿಮರ್ಶೆ :ಸಿಡ್ನಿ (1554-1586);ಜೀವನ ಚರಿತ್ರೆ : ವಾಲ್ಟನ್ (1593-1683)
  • ನಾಟಕ: :ಲೈಲಿ (1554-1606);ಕಿಡ್ (1557-1595);ಪೀಲೆ (1558-1597);ಛಾಪ್‍ಮನ್ (1559-1634);ಮಾರ್ಲೋವ್ (1564-1593);ಷೇಕ್ಸಪಿಯರ್ (1564-1616) ;ಮಿಡಲ್‍ಟನ್ (1570-1627);ಡೆಕ್ಕರ್ (1570-1632);ಜಾನ್‍ಸನ್ (1572-1637);ಫ್ಲಚರ್ (1579-1625)

ವೆಬ್‍ಸ್ಟರ್ (1580-1625);ಮಸಿಂಜರ್ (1583-1640);ಬೀಮೌಂಟ್ 1584-1616);ಹೇವುಡ್ (ಮ.1650);ಫೋರ್ಡ್ (1619)

ಪುನರುಜ್ಜೀವನಕಾಲ (ರೆಸ್ಟೋರೇಶನ್ ಕಾಲ)[ಬದಲಾಯಿಸಿ]

ಕಾವ್ಯ
ಬಟ್ಲರ್ (1612-1680);ಡ್ರೈಡನ್ (1631-1700)
ಮಿಲ್ಟನ್ ತನ್ನ ಮೂರು ಹೆಣ್ಣುಮಕ್ಕಳಿಗೆ "ಪ್ಯಾರಡೈಸ್ ಲಾಸ್ಟ್" ಬರೆದುಕೊಳ್ಳಲು ನಿರ್ದೇಶಿಸುತ್ತಾನೆ" ,ca. 1826, by Eugène Delacroix
  • ನಾಟಕ: ಡೇವಾನಾಂಟ್1606-1668);ಡ್ರೈಡನ್ (1631-1700);ಈತರೀಜ್ (1634-1691);ವೈಚರಲಿ (1640-1716);ಆಟ್ವೇ (1652-1685);ವಾನಬ್ರಗ್ (1664-1726);ಕಾಂಗ್ರೀವ್(1620-1729);ಫಾರ್ಕವರ್ (1628-1707)
  • ಗದ್ಯ :;ಕ್ಲಾರೆಂಡನ್ (1609-1674);ಬುನಿಯನ್ (1628-1688)ಬರ್ನೆಟ್ (1643-1715) ;ವಿಮರ್ಶೆ : ಡ್ರೈಡನ್ :
  • ದಿನಚರಿ :ಎವೆಲಿನ್ (1620-1706)
  • ತತ್ವ ಶಾಸ್ತ್ರ : ಹೊಬ್ಸ್ (1588-1679) ) ಲೋಖೆ(1632-1704)

ಮಿಲ್ಡನ್, ಡ್ರೇಡನ್:[ಬದಲಾಯಿಸಿ]

ಹದಿನೇಳನೆಯ ಶತಮಾನದ ಪ್ರಮುಖ ಕವಿಗಳು ಜಾನ್ ಮಿಲ್ಟನ್ ಮತ್ತು ಜಾನ್ ಡ್ರ್ಯೆಡನ್. ಮಿಲ್ಟನ್ ಇಂಗ್ಲಿಷಿನ ಪ್ರಸಿದ್ಧ ಮಹಾಕಾವ್ಯಗಳಾದ ಪ್ಯಾರಡ್ಯೆಸ್ ಲಾಸ್ಟ್ ಮತ್ತು ಪ್ಯಾರಡ್ಯೆಸ್ ರೀಗೇಯ್ನ್ಡ್ ಕೃತಿಗಳ ಕರ್ತೃ. ಇವಲ್ಲದೆ ಲಿಸಿಡಾಸ್. ಕೋಮಸ್ ಮೊದಲಾದ ಕವನಗಳೂ ಸ್ಯಾಮ್ಸನ್ ಆಗೊನಿಸ್ಟಿಸ್ ಎಂಬ ನಾಟಕವೂ ಅವನವೇ. ಸಾನೆಟ್ ಜಾತಿಯ ಕವಿತೆಗಳಿಗೂ ಮಿಲ್ಟನ್ ಪ್ರಸಿದ್ಧನಾಗಿದ್ದಾನೆ. ಕಾವ್ಯದ ವಿಷಯ, ರೂಪ ಯಾವುದೇ ಆಗಿರಲಿ ಮಿಲ್ಟನ್ ತನ್ನ ಕೃತಿಯಲ್ಲಿ ಔನ್ನತ್ಯ. ಭವ್ಯತೆಗಳನ್ನು ಮೂಡಿಸಿದ್ದಾನೆ. ಅವನ ಹಾಗೆ ಇಂಗ್ಲಿಷ್ ಸರಳ ರಗಳೆಯನ್ನು ಬಳಸಿರುವ ಕವಿ ಬೇರೆ ಯಾರೂ ಇಲ್ಲ. ಅವನ ಕೃತಿಗಳೆಲ್ಲ ಪ್ಯೂರಿಟನ್ ಪಂಥದ ಆದರ್ಶಗಳನ್ನೂ ರೀತಿನೀತಿಗಳನ್ನೂ ವ್ಯಕ್ತಪಡಿಸುತ್ತವೆ. ಡ್ರ್ಯೆಡನ್ ವಿಡಂಬನೆಯ ಕವಿ. ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಹೋರಾಟಗಳಿಗೆ ಸಂಬಂಧಿಸಿದ ಖ್ಯಾತ ವಿಡಂಬನೆಗಳನ್ನು ಬರೆದಿದ್ದಾನೆ. ಅಬ್ಸಲಾಮ್ ಅಂಡ್ ಅಕಿಟೋಫೆಲ್, ದಿ ಮೆಡಲ್, ಮ್ಯಾಕ್ ಫ್ಲೆಕ್ನೊ, ದಿ ಹ್ಯೆಂಡ್ ಅಂಡ್ ದಿ ಪ್ಯಾಂತರ್-ಅವನ ಉತ್ತಮ ವಿಡಂಬನೆಗಳು. ಮೊದಲನೆಯ ಎರಡು ರಾಜಕೀಯ ಪ್ರಸಂಗಗಳಿಗೂ ಮೂರನೆಯದು ಸಾಹಿತ್ಯಕ್ಕೂ ನಾಲ್ಕನೆಯದು ಧಾರ್ಮಿಕ ವಿವಾದಕ್ಕೂ ಸಂಬಂಧಪಟ್ಟಿವೆ. ಒಂದೊಂದು ವರ್ಗದಲ್ಲೂ ಮೇಲ್ಮಟ್ಟದ ವಿಡಂಬನೆ ಹೇಗಿರಬೇಕೆಂದು ಕವಿ ತೋರಿಸಿಕೊಟ್ಟಿದ್ದಾನೆ.

ಆಂಗ್ಲ ನವೋದಯ(೧೫೦೦-೧೬೬೦)[ಬದಲಾಯಿಸಿ]

೧೪೭೬ ರಲ್ಲಿ ವಿಲಿಯಮ್ ಕಾಕ್ಸ್ಟನ್ ರವರು ಮುದ್ರಣ ಯಂತ್ರವನ್ನು ಪರಿಚಯಿಸಿದ ನಂತರ ದೇಶೀಯ ಸಾಹಿತ್ಯ ಬಹಳ ಏಳಿಗೆಯನ್ನು ಕಂಡಿತು. ಆಂಗ್ಲ ನವೋದಯ ಸಾಂಸ್ಕೃತಿಕ ಮತ್ತು ಕಲಾತ್ಮಕ ಚಳುವಳಿಯಾಗಿತ್ತು. ಈ ಚಳುವಳಿ ೧೬ನೇ ಶತಮಾನದಿಂದ ೧೭ನೇ ಶತಮಾನದವರೆಗು ಇಟಲಿಯಲ್ಲಿ ನಡೆದ ಪಾನ್ ಯುರೋಪಿಯನ್ ನವೋದಯ ಅವಧಿಗೆ ಜೊತೆಗೂಡಿತ್ತು. ಉತ್ತರ ಯುರೋಪ್ ನಂತೆಯೇ ಇಂಗ್ಲೆಂಡ್ ಕೂಡ ಅತಿ ಕಡಿಮೆ ಬೆಳವಣಿಗೆಗಳನ್ನು ಶತಮಾನದವರೆಗೂ ಕಂಡಿತು. ನವೋದಯ ಶೈಲಿ ಮತ್ತು ಆಲೋಚನೆ ನಿಧಾನವಾಗಿ ಭೇದಿಸಿಕೊಂಡು ಇಂಗ್ಲೆಂಡ್ ನೊಳಗೆ ಹೋಗುತಿತ್ತು. ಎಲಿಜಿಬೆತ್ ನ ಅವಧಿ ೧೬ನೇ ಶತಮಾನದ ಕೊನೆಯಧ‌೯ದಲ್ಲಿ ಆಂಗ್ಲ ನವೋದಯ ಅತಿ ಎತ್ತರಕ್ಕೆ ಹೋಯಿತು.
  • ಎಲಿಜೆಬೆತನ್ ಮತ್ತು ಜಾಕೊಬೆನ್ ಅವಧಿ(೧೫೫೮-೧೬೨೫)

ಎಲಿಜೆಬೆತ್ ೧ (೧೫೫೮-೧೬೦೩) ಹಾಗೂ ಜೇಮ್ಸ್ (೧೬೦೩-೨೫) ರವರ ಆಳ್ವಿಕೆಯ ಅವಧಿಯಲ್ಲಿ ಲಂಡನ್ ಕೇಂದ್ರಿತ ಸಂಸ್ಕೃತಿ, ಅದು ಆಸ್ಥಾನದ ಹಾಗು ಜನಪ್ರಿಯವಾದುದಂತದು ಬಹಳ ಕಾವ್ಯ ಮತ್ತು ನಾಟಕಗಳನ್ನು ಉತ್ಪಾದಿಸಿತು. ಆಂಗ್ಲ ನಾಟಕಕಾರರು ಮಧ್ಯಯುಗದ ನಾಟಕಗಳನ್ನು ಸಂಯೋಜಿಸಿ ಹಾಗು ಅದರ ಪ್ರಭಾವವನ್ನು ಮಿಶ್ರಿಸಿ ನವೋದಯ ಅವಧಿಯನ್ನು ಪುನಃ ಕಂಡು ಹಿಡಿಯುವುದರಲ್ಲಿ ಸಫಲರಾದರು. ಈ ಅವಧಿಯ ಷೇಕ್ಸ್ ಪಿಯರ್ ಸಾಹಿತ್ಯ ವಲಯದಲ್ಲಿ ಪ್ರಮುಖ ನಾಟಕಕಾರರಾಗಿ ನಿಶ್ಚಲತೆಯಿಂದ ನಿಲ್ಲುತ್ತಾರೆ. ಇವರು ಬಹಳ ವೈವಿಧ್ಯ ರೀತಿಯ ಸಾಹಿತ್ಯಕ ಶೈಲಿಯಲ್ಲಿ ಹಲವಾರು ನಾಟಕಗಳನ್ನು ರಚಿಸಲಾಗಿತ್ತು.

  • ತಡ ನವೋದಯ ಅವಧಿ(೧೬೨೫-೧೬೬೦

ತತ್ವ ವೀಮಾಂಸೆಯ ಕವಿಗಳಾದ ಜಾನ್ ಡನ್ (೧೫೭೨-೧೬೩೧) ಮತ್ತು ಜಾಜ್೯ ಹಬ‍೯ಟ್ ಅವರು ೧೬೨೫ ರ ನಂತರವೂ ತಮ್ಮ ಸಾಹಿತ್ಯ ಕೌಶಲ್ಯದಲ್ಲಿ ಮೆರೆಯುತ್ತಿದ್ದರು. ೧೭ನೇ ಶತಮಾನದಲ್ಲಿ ಎರಡನೇ ಪಿಳಿಗೆಯ ತತ್ವ ಮೀಮಾಂಸೆಯ ಕವಿಗಳಾಗಿ ರಿಚಡ್೯ ಕ್ರಾಷಾ (೧೬೧೩-೪೯) ಆಂಡ್ರಿವ್ ಮೊವೆ೯ಲ್ (೧೬೨೧-೭೮), ತಾಮಸ್ ತ್ರಾಹನೆ೯(೬೩೭-೧೬೭೪) ಮತ್ತು ಹೆನ್ರಿ ವಾಘನ್ (೧೬೨೨-೯೫) ಕಾಯ‍೯ ನಿವ೯ಹಿಸುತ್ತಿದ್ದರು. ರಾವುತ ಕವಿಗಳು ಇದೇ ಅವಧಿಯಲ್ಲಿ ಒಂದು ಪ್ರಮುಖ ಗುಂಪಾಗಿದ್ದರು.ಇವರು ಇದಕ್ಕೆ ಮೊದಲು ರಾಜ ಚಾಲ್ಸ್೯ ೧ ಗೆ ಆಂಗ್ಲ ನಾಗರಿಕ ಯುದ್ದದಲ್ಲಿ ಸಹಾಯಕರಾಗಿದ್ದರು.ರಾವುತ ಕವಿಗಳಾಗಿ ರಾಬಟ್೯ ಹೆರಿಕ್, ರಿಚಡ್೯ ಲವಲೇಸ್, ತಾಮಸ್ ಕಾವ್೯ ಮತ್ತು ಸರ್ ಜಾನ್ ಸಕಲಿಂಗ್ ಪ್ರಮುಖ ಕವಿಗಳಾಗಿದ್ದರು. ಎಲ್ಲಾ ಪ್ರಮುಖ ರಾವುಕ ಕವಿಗಳು ಸುಪ್ರಸಿದ್ಧ ಆಸ್ಥಾನಿಕರಾಗಿದ್ದು.[೮]

1700-1800 ಶಾಸ್ತ್ರೀಯ ಕಾವ್ಯಗಳ ಕಾಲ (ಕ್ಲಾಸಿಕಲ್)[ಬದಲಾಯಿಸಿ]

ರೆಸ್ಟೋರೇಶನ್ -ಪುನರ್ಸ್ಥಾಪನಾಕಾಲ -
ಕಾವ್ಯ
;ರೆಸ್ಟೋರೇಶನ್ -ಪುನರ್ಸ್ಥಾಪನಾಕಾಲ -
  • ಎರಡನೆಯ ಚಾರ್ಲಸನು ದೊರೆಯಾಗಿ ಬಂದ ನಂತರ ಸಾಹಿತ್ಯ ರಂಗದಲ್ಲಿ ದೊಡ್ಡ ಬದಲಾವಣೆ ಉಂಟಾಯಿತು. ಒಮ್ಮೆ ಹಿನ್ನಡೆ ಕಂಡು ಮುಚ್ಚಿದ್ದ ನಾಟಕ ಮಂದಿರಗಳು ಪುನಃ ಬಾಗಿಲು ತೆರೆದು ಆರಂಭಗೊಂಡವು. ಹೊಸ ಬಗೆಯ ನಾಟಕಗಳು ಹೊರಬಂದವು .
  • ಈ ಕಾಲದ ಮುಖ್ಯ ಸಾಹಿತ್ಯದ ರೂಪ ಸಾಹಸ ಪ್ರಧಾನ ನಾಟಕವಾಗಿ ಹೊರ ಬಂದಿತು.
  • ಆ ಬಗೆಯ ನಾಟಕಗಳ ಕರ್ತೃ -ಜಾನ್ ಡ್ರೈಡನ್,;
  • ಸುಖಾಂತ ಮತ್ತು ಹಾಸ್ಯಪ್ರಧಾನ ನಾಟಕಗಳನ್ನು , ರಿಚರ್ಡ್ ಶೆರಿಡಾನ್ ಮತ್ತು ವಿಲಿಯಂ ಕಾಂಗ್ರೀವ್.
.
;ನವೋದಯ ಕಾಲ (ಶಾಸ್ತ್ರೀಯ ನವೋದಯ)
ಶಾಸ್ತ್ರೀಯ ನವೋದಯದ ಪ್ರಮುಖ ಲಕ್ಷಣಗಳು
  • 1.ಕಾವ್ಯವು ತಾರ್ಕಿಕ ವಾಗಿರಬೇಕು (ಸಕಾರಣ ಲಕ್ಷಣವುಳ್ಳದ್ದು-ರೀಸನ್).
  • 2.ಕವಿಯ ಪಾತ್ರವು ಒಬ್ಬ ಬೋದಕನದಾಗಿರಬೇಕು.
  • 3.ಕಾವ್ಯದ ರಚನೆಯು ಕಾವ್ಯದ ಕೆಲವು ನಿಯಮಕ್ಕೆ (ಕಾವ್ಯ ಲಕ್ಷಣ) ಅನುಸಾರ ಬರೆದಿರಬೇಕು.
  • 4.ಕಾವ್ಯವನ್ನು ವಿಶಿಷ್ಟ ಬಾಷೆಯಲ್ಲಿ ಬರೆತಕ್ಕದ್ದು.
  • ಈ ಚಿಂತನೆಯ/ಶಾಸ್ತ್ರೀಯತೆಯ ಮುಖ್ಯ ಹರಿಕಾರರು ಜಾನ್ ಡ್ರೈಡನ್ ಮತ್ತು ಅಲೆಗ್ಜಾಂಡರ್ ಪೋಪ್

ನವ ಶಾಸ್ತ್ರೀಯ ಅವಧಿ(೧೬೬೦-೧೭೯೮)[ಬದಲಾಯಿಸಿ]

ಜಾನ್ ಡ್ರೈಡನ್(13 ಏಪ್ರಿಲ್ 1668 - ಜನವರಿ 1688); ಸರ್ ಗಾಡ್ಫ್ರೇ ಕೆನ್ನೆಲರ್ ಅವರಿಂದ ತೈಲಚಿತ್ರ , Bt
ಸ್ಯಾಮ್ಯುಯೆಲ್ ಜಾನ್ಸನ್:(೧೭೦೯-೧೭೮೪);ಜೋಶುವಾ ರೆನಾಲ್ಡ್ಸ್ ಅವರಿಂದ ತೈಲಚಿತ್ರ
ಪುನಃಸ್ಥಾಪನ ಯುಗ(೧೬೬೦-೧೭೦೦)

ಪುನಃಸ್ಥಾಪನ ಸಾಹಿತ್ಯ ಪ್ಯಾರಡೈಸ್ ಲಾಸ್ಟ್ ಮತ್ತು ಅಲ್೯ ಆಫ್ ರೋಚೆಸ್ಟರ್, ಹೆಚ್ಚು ದೈಯೋ೯ತ್ಸಾಹ ತುಂಬಿದ ಲೈಂಗಿಕ ಹಾಸ್ಯಸ್ಪ ಕೃತಿ, ದಿ ಕಂಟ್ರಿ ವೈಫ್, ನೈತಿಕ ಜ್ಞಾನದ ಕೃತಿ ದಿ ಪಿಲಿಗ್ರಿಮ್ಸ್ ಪ್ರೋಗ್ರಸ್ ಗಳಿಂದ ಕೂಡಿದ್ದವು. ಈ ಯುಗದಲ್ಲಿ ಲಾಕ್ ಸಕಾ‍೯ರದ ಮೇಲೆ ಎರಡು ಗ್ರಂಥಗಳನ್ನು ಪ್ರಕಟಿಸಿದರು. ಒಂದು ರಾಯಲ್ ಸಂಸ್ಥೆಯ ಸ್ಥಾಪನೆ, ಎರಡನೆಯದು 'ದಿ ಎಕ್ಸಪೆರಿಮೆಂಟ್'. ಸಾಹಿತ್ಯ ಸಂಸ್ಕೃತಿಗೆ ಅಧಿಕೃತ ಬಿರುಕು ಕ್ರಾಮ್ ವೆಲ್ಸಪುರಿತನ್ ನ ಆಡಳಿತದಲ್ಲಿ ಮೂಡಿಬಂತು ಹಾಗೂ ಇದರಿಂದ ಹೊಸ ವಿಧದ ಸಾಹಿತ್ಯ ಉದ್ಭವವಾಯಿತು. ಜಾನ್ ಮಿಲ್ಟನ್, ಜಾನ್ ಡ್ರೈಡನ್, ವಿಲಿಯಮ್ ವೈಚಲಿ೯, ಜಾಜ್೯ ಎತ್ ರೀಗೆ, ವಿಲಿಯಮ್ ಕಾಂವ್ ಈ ಯುಗದ ಪ್ರಮುಖ ಬರಹಗಾರರಾಗಿದ್ದರು.

  • ಆಗಸ್ಟನ್ ಸಾಹಿತ್ಯ(೧೭೦೦-೧೭೫೦)

೧೮ನೇ ಶತಮಾನವು ಜ್ಞಾನೋದಯ ಯುಗದ ಪ್ರತಿಫಲವಾಗಿತ್ತು. ಧಮ‍೯, ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಗೆ ವಿಚಾರಶಕ್ತಿ ಹಾಗು ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟಿದ್ದರು. ತತ್ವಜ್ಞಾನಿಗಳು ಹಿಂದಿನ ಶತಮಾನದ ಸಂಶೋಧಕರಾದ ಐಸಾಕ್ ನ್ಯೂಟನ್, ಜಾನ್ ಲಾಕ್ ಮತ್ತು ಪ್ರಾನ್ಸಿಸ್ ಬೇಕನ್ ರವರಿಂದ ಸ್ಪೂತಿ‍೯ಗೊಂಡಿದ್ದರು. ಆಗಸ್ಟನ್ ಸಾಹಿತ್ಯ ಎಂಬ ಪದ ೧೭೨೦ ಮತ್ತು ೧೭೩೦ ರ ಲೇಖಕಕರಿಂದ ಉದ್ಭವಗೊಂಡಿತು. ಈ ಯುಗ ರಾಜಕೀಯ, ಸಮೃದ್ಧಿ, ಆಗಾಧ ಶಕ್ತಿ, ಸೃಜನಶೀಲತೆ, ಘಾತಕಕೃತ್ಯಗಳಿಂದ ಕೂಡಿತ್ತು. ಇದು ಆಂಗ್ಲ, ಸ್ಕಾಟಿಶ್ ಮತ್ತು ಐರಿಷ್ ಜನರ ಆಥಿ‍೯ಕ ಸ್ವರೂಪ ಹಾಗೂ ಔದ್ಯೋಗಿಕ ಕ್ರಾಂತಿಯ ಪ್ರತಿಬಿಂಭವಾಗಿತ್ತು. ಜೇಮ್ಸ್ ತಾಮ್ ಸನ್, ಎಡ್ ವಡ್೯ ಯಂಗ್ ಮತ್ತು ಅಲೆಕ್ಸಾಂಡರ್ ಪೋಪ್ ಪ್ರಮುಖ ಬರಹಗಾರರಾಗಿದ್ದರು.

  • ಸಂವೇದನಾ ಯುಗ (೧೭೫೦-೧೭೯೮)

ಈ ಯುಗವನ್ನು ಜಾನಸನ್ ಯುಗವೆಂದು ಕರೆದರೂ ತಪ್ಪಾಗುವುದಿಲ್ಲ. ಸಾಮ್ಯುಲ್ ಜಾನಸನ್ (೧೭೦೯-೧೭೮೪) ರವರನ್ನು ಅನೇಕವೇಳೆ ಡಾ|| ಜಾನ್ ಸನ್ ಎಂದು ಕರೆಯುತ್ತಾರೆ. ಇವರು ಆಂಗ್ಲ ಬರಹಗಾರರಾಗಿ ಚಿರವಾದ ಕೊಡುಗೆಯನ್ನು ಆಂಗ್ಲ ಸಾಹಿತ್ಯಕ್ಕೆ ನೀಡಿದರು. ಪ್ರಬಂಧಕಾರರಾಗಿ, ಸಾಹಿತ್ಯ ವಿಮಶ‍೯ಕರಾಗಿ, ಸಂಪಾದಕರಾಗಿ, ನಿಘಂಟುಕಾರರಾಗಿ ಆಂಗ್ಲ ಸಾಹಿತ್ಯವನ್ನು ಉತ್ತರಕ್ಕೆ ಕರೆದೊಯ್ದರು. ಇವರನ್ನು ಸಾಮಾನ್ಯವಾಗಿ 'ದಿ ಮ್ಯಾನ್ ಆಫ್ ಲೆಟರ್ಸ್ ಇನ್ ಇಂಗ್ಲಿಷ್ ಹಿಸ್ಟರಿ' ಎಂದು ಕರೆಯುತ್ತಾರೆ. ೧೮ನೇ ಶತಮಾನ ೨ನೇ ಹಂತದಲ್ಲಿ ಆಲಿವರ್ ಗೋಲ್ಡ್ ಸ್ಮಿತ್, ರಿಚಡ್೯ ಬ್ರಿನ್ ಸ್ಲೇ ಮತ್ತು ಲಾರೆನ್ಸ್ ಸ್ಟನ್೯ ಎಂಬ ಪ್ರಮುಖ ಐರಿಶ್ ಸಾಹಿತಿಗಳು ಲಂಡನ್ ನಲ್ಲಿ ನೆಲೆಯೂರಿದರು.[೯]

ಇತರೆ ಸಾಹಿತ್ಯ ಬೆಳವಣಿಗೆ[ಬದಲಾಯಿಸಿ]

  • ಕಾವ್ಯ : :ಯಂಗ್ :1683-1765); ಗೇ (1685)-1732); ಪೋಪ್ 1688-1744); ಥಾಂಸನ್ (1700-1748; ಜಾನ್‍ಸನ್ (1709-1784) ; ಗ್ರೇ 1716-1771); ಕೊಲಿನ್ಸ್ (1721-1759); ಕೌಪರ್ (1731-1800); ಚಟರ್‍ಟನ್1752-1770) ; ಬ್ಲೇಕ್ 1757-1827); ಬನ್ರ್ಸ್ (1759-1796);
  • ನಾಟಕ ::ರೋವ 1674-1718) ; ಗ್ರೇ 1716-1771); ಗೋಲ್ಡ್‍ಸ್ಮಿತ್ (1730-1774); ಶೆರಿಡಾನ್ (1751-1816);
  • ಜೀವನ ಚರಿತ್ರೆ : ಬೊಸ್ವೆಲ್ (1740-1795); ಪತ್ರಗಳು: ಗ್ರೇ -(1716-1771); ವಾಲ್‍ಪೋಲ್ (1717-1797); ಕೌಪರ್ (1731-1800);
  • ಇತಿಹಾಸ, ತತ್ವಶಾಸ್ತ್ರ, ರಾಜ್ಯಶಾಸ್ತ್ರ: :ಬರ್ಕಲಿ (1685-1753); ಹ್ಯೂಮ್ 1711-1776); ವಾರ್ಟನ್ (1728-1790);ಬರ್ಕ್(1729-1797); ಗಿಬ್ಬನ್ (1737-1794); ಪಯನೆ (1737-1809);
  • ಕಾದಂಬರಿ : :ಡಿಫೋ (1660-1731); ಸ್ವಿಫ್ಟ್ (1667-1745); ರಿಚರ್ಡಸನ್ (1689-1761) ;ಫೀಲ್ಡಿಂಗ್ 1707-1754); ಜಾನ್ಸನ್ (1709-1784); ಸ್ಟರ್ನೆ (1713-1768) ; ವಾಲ್ಪೋಲ್ (1717-1797); ಸ್ಮೊಲೆಟ್ 1721-1771) ; ಗೋಲ್ಡಸ್ಮಿತ್ (1730-1774) ಬೆಕ್‍ಫೋರ್ಡ್ (1759-1844) ;ರ್ಯಾಡ್‍ಕ್ಲಿಫ್ (1764-1823) ;
  • 'ವಿಮರ್ಶೆ:'ಸ್ಯಾಮ್ಯುಯಲ್‍ ಜಾನ್‍ಸನ್ (1709-1784)
  • ಪ್ರಬಂಧ : ಅಡಿಸನ್ (1672-1729); ಸ್ಟೀಲ್ (1672-1729) ;

ಗದ್ಯ ನಾಟಕ:[ಬದಲಾಯಿಸಿ]

  • ಮಿಲ್ಟನ್, ಡ್ರ್ಯೆಡನ್ ಇಬ್ಬರೂ ಗದ್ಯ ಲೇಖಕರೂ ಆಗಿದ್ದರು. ತನ್ನ ಕಾಲದ ರಾಜಕೀಯ ಸಾಮಾಜಿಕ ವಿಚಾರಗಳಿಗೆ ಸಂಬಂಧಪಟ್ಟ ಗದ್ಯಕೃತಿಗಳನ್ನು ಮಿಲ್ಟನ್ ಬರೆದ. ಏರಿಯೋಪ್ಯಾಜಿಟಿಕ ಎಂಬ ಅವನ ಪ್ರಸಿದ್ದ ಗದ್ಯ ಪ್ರಬಂಧ ಅಭಿಪ್ರಾಯ ಸ್ವಾತಂತ್ರ್ಯದ ಸಮರ್ಥನೆ. ಅವನ ಕಾವ್ಯಗಳಲ್ಲಿರುವಂತೆ ಗದ್ಯಕೃತಿಗಳಲ್ಲೂ ಒಂದು ಭವ್ಯತೆ, ಶಬ್ದವ್ಯೆಭವ, ಔನ್ನತ್ಯಗಳು ಎದ್ದು ಕಾಣುತ್ತವೆ. ಡ್ರ್ಯೆಡನ್ ಆಧುನಿಕ ಇಂಗ್ಲಿಷ್ ಗದ್ಯದ ಪಿತಾಮಹನೆನ್ನಿಸಿಕೊಂಡಿದ್ದಾನೆ. ಅವನ ಗದ್ಯವೆಲ್ಲ ವಿಮರ್ಶಾತ್ಮಕ ಲೇಖನಗಳ ರೂಪವನ್ನು ತಳೆದಿದೆ. ಅವನ ವಿಮರ್ಶೆ ವಿಶಾಲಮನಸ್ಸಿನಿಂದಲೂ ಕಾವ್ಯಪ್ರಜ್ಞೆಯಿಂದಲೂ ಪ್ರೇರಿತವಾದುದು. ಇಂಗ್ಲಿಷ್ ವಿಮರ್ಶೆಯ ಪಿತಾಮಹನೆಂದೂ ಆತ ಹೆಸರು ಗಳಿಸಿದ್ದಾನೆ. ಅವನ ಶೈಲಿ ಸಂದರ್ಭಾನುಸಾರ ಆಡುಮಾತನ್ನೂ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಿಂದ ಬಂದ ಪದಗಳನ್ನೂ ಉಪಯೋಗಿಸಿಕೊಂಡು ಪರಿಣಾಮಕಾರಕವಾಗಬಲ್ಲದು. ಮಿಡ್ಲ್ ಸ್ಟೈಲ್ ಎಂಬ ಹೆಸರು ಇದಕ್ಕೆ ಸಾರ್ಥಕವಾಗಿದೆ. ಸರಳವಾದ ಭಾಷಾಪ್ರಯೋಗಕ್ಕೆ ಹೆಸರಿಸಬೇಕಾದುದು ಇದೇಕಾಲದ ಜಾನ್ ಬನ್ಯನ್ನನ ಪಿಲಿಗ್ರಿಮ್ಸ್ ಪ್ರೋಗ್ರೆಸ್ ಎಂಬ ರೂಪಕಕಥೆ. ಆದರೆ ಮಿಲ್ಟನ್ ಮತ್ತು ಡ್ರ್ಯೆಡನ್ನರಿಗೆ ಮೊದಲೇ ಹದಿನೇಳನೆಯ ಶತಮಾನದಲ್ಲಿ ಇತರ ಪ್ರಮುಖ ಗದ್ಯಲೇಖಕರು ಕೆಲವರಿದ್ದರು. ಎಲಿಜಬೆತ್ ಯುಗಕ್ಕೆ ಸೇರಿದ ಇತರ ಗದ್ಯ ಲೇಖಕರಲ್ಲಿ ರಿಚರ್ಡ್ ಹೂಕರ್ನ ಎಕ್ಲೆಸಿಯಾಸ್ಟಿಕಲ್ ಪಾಲಿಟಿ ಕ್ರೈಸ್ತಮತದ ಆಡಳಿತ ವ್ಯವಸ್ಥೆಯನ್ನು ಕುರಿತದ್ದು. ಅದು ಗಂಭೀರವಾದ ಗದ್ಯ ಶ್ಯೆಲಿಗೆ ಪ್ರಸಿದ್ಧವಾಗಿದೆ.
  • ಆನಂತರ ಬಂದ ಗದ್ಯಲೇಖಕರಲ್ಲಿ ಫ್ರಾನ್ಸಿಸ್ ಬೇಕನ್ ಗಣ್ಯನಾದವ. ದಿ ಅಡ್ವಾನ್ಸ್ಮೆಂಟ್ ಆಫ್ ಲರ್ನಿಂಗ್ ಮತ್ತು ಎಸ್ಸೇಸ್ ಎಂಬ ಕವನ ಬರಹಗಳು ಖ್ಯಾತಿವೆತ್ತಿವೆ. ಅವನ ಪ್ರಬಂಧಗಳು ಇಂಗ್ಲಿಷ್‍ನಲ್ಲಿ ಆ ಜಾತಿಯ ಮೊಟ್ಟಮೊದಲನೆಯ ಕೃತಿಗಳು. ಎಸ್ಸೆ ಎಂಬ ಪದವನ್ನು ಇಂಗ್ಲಿಷಿಗಿತ್ತವನೂ ಅವನೇ ಲೌಕಿಕವಾಗಿ ಊರ್ಜಿತವಾಗುವುದು ಹೇಗೆ ಎನ್ನುವುದೇ ಬೇಕನ್ನನ ಪ್ರಮುಖ ಆಸಕ್ತಿಯಾಗಿತ್ತು. ಇತರರಿಗೂ ಅವನು ಅದನ್ನೇ ಬೋಧಿಸಿದ. ಅವನ ಗದ್ಯ ಬಿಗಿಯಾದ ಅಡಕವಾದ ವಾಕ್ಯಗಳಿಂದ ಕೂಡಿ ಆಲೋಚನಾ ಭರಿತವಾಗಿದೆ. ಬೇಕನ್ನನ ಗದ್ಯಕೃತಿಗಳು ಹದಿನೇಳನೆಯ ಶತಮಾನದ ಮೊದಲ ದಶಕಕ್ಕೆ ಸೇರಿದ ಬರೆಹಗಳು
  • ಇದೇ ದಶಕದಲ್ಲಿ ಬಂದುದು ಇಂಗ್ಲಿಷ್ ಗದ್ಯ ಕೃತಿಗಳಲ್ಲೆಲ್ಲ ಅತ್ಯಂತ ಪ್ರಭಾವಯುತವಾದ ಬ್ಯೆಬಲಿನ ಭಾಷಾಂತರ-ದಿ ಆಥರೈಸ್ಡ್‍ವರ್ಷನ್, ಸರಳವೂ ಸುಂದರವೂ ಕಾವ್ಯಮಯವೂ ಆದ ಈ ಪುಸ್ತಕಇಂಗ್ಲಿಷ್ ಲೇಖಕರನೇಕರ ಮೇಲೆ ತನ್ನ ಪ್ರಭಾವವನ್ನು ಬೀರಿದ್ದಲ್ಲದೆ ಇಂಗ್ಲಿಷ್ ಭಾಷೆಯನ್ನು ಸ್ಥಿಮಿತಗೊಳಿಸುವುದರಲ್ಲೂ ದೊಡ್ಡ ಉಪಕಾರ ಮಾಡಿದೆ ಹದಿನೇಳನೇಯ ಶತಮಾನದ ಇತರ ಗದ್ಯಲೇಖಕರು ರಾಬರ್ಟ್ ಬರ್ಟನ್, ಥಾಮಸ್ ಫುಲ್ಲರ್, ಜೆರೆಮಿ ಟೆಯ್ಲರ್, ಐಜಾóಕ್ ವಾಲ್ಟನ್, ಸರ್ ಥಾಮಸ್ ಬ್ರೌನ್, ಸ್ಯಾಮ್ಯುಆಲ್ ಪೀಪ್ಸ್, ಥಾಮಸ್ ಹಾಬ್ಸ್ ಮತ್ತು ಜಾನ್ ಲಾಕ್. ಬರ್ಟನ್ನನ ದಿ ಅನಾಟಮಿ ಆಫ್ ಮೆಲಂಕ ಫುಲ್ಲರನ ಇಂಗ್ಲಿಷ್ ವರ್ದೀಸ್. ಟೆಯ್ಲರನ ಹೋಲಿ ಲಿವಿಂಗ್ ಅಂಡ್ ಹೋಲಿ ಡ್ಯೆಯಿಂಗ್, ವಾಲ್ಟನ್ನನ ದಿ ಕಂಪ್ಲೀಟ್ ಆಂಗ್ಲರ್, ಬ್ರೌನನ ರಿಲಿಜಯೋ ಮೆಡಿಚಿ ಮತ್ತು ಆರ್ನ್ ಬರಿಯಲ್, ಪೀಪ್ಸನ ಡಯರಿ, ಹಾಬ್ಸನ ಲೆವಿಯತಾನ್ ಮತ್ತು ಲಾಕ್‍ನ ಎಸ್ಸೆ ಆನ್ ಹ್ಯೂಮನ್ ಅಂಡರ್‍ಸ್ಟ್ಯಾಂಡಿಂಗ್ - ಇವು ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಮೈಲಿಗಲ್ಲುಗಳಂಥ ಗ್ರಂಥಗಳು.

ಪುನಃಸ್ಥಾಪನ ಯುಗ(೧೬೬೦-೧೭೦೦)-ರೆಸ್ಟೊರೇಷನ್ ಏಜ್[ಬದಲಾಯಿಸಿ]

(ಮುಂದುವರಿದ ಭಾಗ)
  • ಡ್ರ್ರ್ಯೆಡನ್, ಪೀಪ್ಸ್, ಹಾಬ್ಸ್, ಲಾಕ್, ಇವರೆಲ್ಲ ಹದಿನೇಳನೆಯ ಶತಮಾನದ ಕೊನೆಯ ನಲವತ್ತು ವರ್ಷಗಳಾದ ರೆಸ್ಟೊರೇಷನ್ ಏಜ್ ಎಂಬ ಅವಧಿಗೆ ಸೇರಿದವರು. ಈ ಯುಗ ಇಂಗ್ಲಿಷ್ ಗದ್ಯದ ಚರಿತ್ರೆಯಲ್ಲಿ ಮಾತ್ರವಲ್ಲದೆ, ನಾಟಕದ ಚರಿತ್ರೆಯಲ್ಲೂ ಪ್ರಸಿದ್ಧವಾಗಿದೆ. ಅಂದು ನಾಟಕ ನೋಡುವುದಕ್ಕೆ ಹೋಗುತ್ತಿದ್ದವರನೇಕರು ಸಮಾಜದ ಮೇಲ್ತರಗತಿಗೆ ಸೇರಿದ್ದವರು ರಾಜ ಎರಡನೆಯ ಚಾರಲ್ಸನ ಸಮೀಪವರ್ತಿಗಳು ಆವನೂ ಅವನ ಅನುಚರರೂ ಅನೀತಿಗೆ ಅತಿಭೋಗಕ್ಕೆ ಹೆಸರಾಗಿದ್ದವರು ಈ ದೋಷಗಳೇ ಪ್ರಧಾನವಾಗಿರುವ ಗದ್ಯನಾಟಕಗಳು ಈ ಅವಧಿಯಲ್ಲಿ ಬಂದುವು ರೆಸ್ಟೋರೇಷನ್ ನಾಟಕವೆಂದರೆ ಅನೀತಿಯುತವಾದುದೆನ್ನುವಷ್ಟರಮಟ್ಟಿಗೆ ಅವುಗಳಲ್ಲಿ ಕೆಲವು ಅಪಖ್ಯಾತಿಯನ್ನು ಪಡೆದಿವೆ ಅವುಗಳಲ್ಲಿ ಕೆಲವು ಸರ ಜಾರ್ಜ್ ಎತಿರೆಜ್, ವಿಲಿಯಂ ವ್ಯೆಚರ್ಲಿ, ಮಿಸೆಸ್ ಆಫ್ರಾಬೆನ್, ಮತ್ತು ವಿಲಿಯಂ ಕಾಂಗ್ರೀವ್‍ರವರ ನಾಟಕಗಳು ಇಂಥವು ವೈಚರ್ಲಿಯ ದಿ ಕಂಟ್ರಿ ಹೌಸ್ ಇದಕ್ಕೆ ಒಳ್ಳೆಯ ಉದಾಹರಣೆ, ಕಾಂಗ್ರೀವ್‍ನ ದಿ ವೆ ಆಫ್ ದಿ ವರ್ಲ್ಯ್ ಇಂಗ್ಲಿಷಿನ ಅತ್ಯಂತ ಪ್ರಸಿದ್ಧವಾದ ನಾಟಕಗಳಲ್ಲೊಂದು. ಇದರ ಗದ್ಯದ ಸೊಬಗು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಟಕಗಳೂ ಹದಿನೇಳನೆಯ ಶತಮಾನದ ಆದಿಯಲ್ಲಿ ಬಂದ ವ್ಸಾನ್ ಬ್ರೂ ಮತ್ತು ಫರ್ಕುಹರ್‍ರ ನಾಟಕಗಳೂ ಗದ್ಯ ನಾಟಕಗಳನ್ನು ಇಂಗ್ಲಿಷಿನಲ್ಲಿ ಸ್ಥಾಪಿಸಿದ್ದಲ್ಲದೆ ಕಾಮೆಡಿ ಆಫ್ ಮ್ಯಾನರ್ಸ್ ವರ್ಗದ ನಾಟಕಕ್ಕೂ ಹಿರಿ ಸ್ಥಾನವನ್ನು ತಂದು ಕೊಟ್ಟವು.

ಪುನರ್ ನವೋದಯ (ರೊಮ್ಯಾಂಟಿಕ್ ರಿವೈವಲ್) ಕಾಲ (1800-1900)[ಬದಲಾಯಿಸಿ]

ರೊಮ್ಯಾಂಟಿಕ್-ರಮ್ಯ ಸಾಹಿತ್ಯ ಕಾಲ ಮತ್ತು ಪುನರ್ ನವೋದಯ (ರೊಮ್ಯಾಂಟಿಕ್ ರಿವೈವಲ್) ಕಾಲ
;ರಮ್ಯ ಕಾವ್ಯಗಳ (ರೊಮ್ಯಾಂಟಿಕ್) ಕಾಲ:
ರಮ್ಯಕಾವ್ಯ - ಕವನಗಳ ಲಕ್ಷಣಗಳು
  • 1.ಕಾವ್ಯವು ಸ್ವಂತ ಅನುಭವ ಮತ್ತು ಸಂವೇದನೆಯ ಪ್ರಕಟಣೆ ,ಮತ್ತು ಅಭಿವ್ಯಕ್ತಿ.
  • 2.ಕಾವ್ಯಕ್ಕೆ ಕಲ್ಪನೆ, ಮುಖ್ಯವಾದ ಜೀವಾಳ, ಆಧಾರ.
  • 3. ರಮ್ಯ ಕಾವ್ಯಕ್ಕೆ ಪ್ರಕೃತಿಯು ಜೀವಶಕ್ತಿ ; ಪ್ರಕೃತಿಯು ಸಜೀವವಾದುದು.
  • ಈ ಕಾಲದ ಮುಖ್ಯ ಕವಿಗಳು -ವಿಲಿಯಮ್ ಬ್ಲೇಕ್ ; ವರ್ಡ್ಸ್‌ವರ್ತ್ ; ಜಾನ್ ಕೀಟ್ಸ್ ;ಲಾರ್ಡ್ ಬೈರನ್, ಜಾರ್ಜ್ ಗೋರ್ಡನ್ ; ಶೆಲೀ ; ಮತ್ತು ಕೊಲೆರಿಡ್ಜ್.

೧೯ನೇ ಶತಮಾನದ ಸಾಹಿತ್ಯ[ಬದಲಾಯಿಸಿ]

ವರ್ಡ್ಸ್ವರ್ತ್ 28 ನೇ ವಯಸ್ಸಿನಲ್ಲಿ ವಿಲಿಯಂ ವರ್ಡ್ಸ್ವರ್ತ್, ಅವರು ದಿ ಪ್ರಿಲ್ಯೂಡ್ ಅನ್ನು ಪ್ರಾರಂಭಿಸಿದ ಸಮಯದ ಬಗ್ಗೆ.(1798 ರಲ್ಲಿ ವಿಲಿಯಂ ಶಟರ್ 2 ಅವರಿಂದ ಚಿತ್ರ)
ಭಾವಪ್ರದಾನತೆ (೧೭೯೮-೧೮೩೭):

ಭಾವಪ್ರದಾನತೆ ಎಂಬುದು ಕಲಾತ್ಮಕ, ಸಾಹಿತ್ಯಕ ಮತ್ತು ಬೌದ್ಧಿಕ ಚಳುವಳಿ ೧೮ನೇ ಶತಮಾನದ ಕೊನೆಯಲ್ಲಿ ಯುರೋಪ್ ನಲ್ಲಿ ಹುಟ್ಟಿಕೊಂಡಿತು. ಈ ಅವಧಿಯ ಆರಂಭಕ್ಕೆ ಆಂಗ್ಲ ಸಾಹಿತ್ಯದಲ್ಲಿ ಬಹಳ ದಿನಾಂಕಗಳು ಇವೆಯಾದರು ಸಾಮಾನ್ಯವಾಗಿ ೧೭೯೮ ರಲ್ಲಿ ಲಿರಿಕಲ್ ಬಲ್ಲಾಡ್ಸ್ , ಪ್ರಕಾಶವನ್ನು ಆರಂಭ ಮತ್ತು ೧೮೩೭ ರಲ್ಲಿ ರಾಣಿ ವಿಕ್ಟೋರಿಯಾರ ಕಾಲದ ಅತ್ಯುತ್ಕೃಷ್ಟವನ್ನು ಅಂತ್ಯ (ಅತಿ ಉನ್ನತದ್ದು)ಎಂದು ಪರಿಗಣಿಸಲಾಗುತ್ತದೆ. ಈ ಯುಗದ ಬರಹಗಾರರು ಎಂದೂ ತಮ್ಮನ್ನು ತಾವು ಭಾವಪ್ರದಾನಕರು ಎಂದು ಭಾವಿಸುತ್ತಿರಲಿಲ್ಲ ಮತ್ತು ಈ ಪದವನ್ನು ಮೊದಲ ಬಾರಿಗೆ ವಿಮಶ‍೯ಕರು ವಿಕ್ಟೋರಿಯಾ ಅವಧಿಯಲ್ಲಿ ಉಪಯೋಗಿಸಿದರು. ವರ್ಡ್ಸ್‌ವರ್ತ್ (೧೭೭೦-೧೮೫೦), ಸಾಮ್ಯುಲ್ ಟೇಲರ್ (೧೭೭೨-೧೮೩೪) ಮತ್ತು ಪತ್ರಕತ‍೯ ತಾಮಸ್ ಪ್ರಮುಖರಾಗಿದ್ದರು.

  • ವಿಕ್ಟೋರಿಯನ್ ಸಾಹಿತ್ಯ (೧೮೩೭-೧೯೦೧)

ಈ ವಿಕ್ಟೋರಿಯನ್ ಯುಗದಲ್ಲಿ ಕಾದಂಬರಿ ಎಂಬ ಸಾಹಿತ್ಯಕ ಶೈಲಿ ಆಂಗ್ಲ ಭಾಷೆಯಲ್ಲಿ ಕರೆದೊಯ್ಯುವಂತಹ ಪ್ರಭಾವವನ್ನು ಬೀರಿತು. ಹೆಂಗಸರು ಬರಹಗಾರರಾಗಿ ಮತ್ತು ಓದುಗರಾಗಿ ಪ್ರಮುಖ ಪಾತ್ರವನ್ನು ನಿವ‍೯ಹಿಸಿದರು. ಚಾರ್ಲ್ಸ್‌ ಡಿಕನ್ಸ್ ರವರು ಪಿಕ್ ವಿಕ್ ಪೇಪರ್ಸ್ ಎಂಬುದನ್ನು ೧೮೩೭ ನವೆಂಬರ್ ನಲ್ಲಿ ಪ್ರಕಟಿಸಿದ್ದರು. ೧೯ನೇ ಶತಮಾನದ ಕೊನೆಯವರೆಗೂ ಮೂರು ಸಂಪುಟಗಳ ಆವೃತ್ತಿಯನ್ನು ಪ್ರಕಟಿಸಿದರು. ಪರಿಚಲನೆಯ ಗ್ರಂಥಾಲಯಗಳಿಂದ ಕಾದಂಬರಿಗಳು ಬಹಳ ಪ್ರಸಿದ್ಧಿಯಾದವು. ಚಾಲ್ಸ್೯ ಡಿಕೆನ್ಸ್, ಟ್ರಾಂಬೆ ಸಹೋದರಿಯರು, ಎಮಿಲಿ ಮತ್ತು ಚಾಲ್೯ ಈ ಯುಗದ ಪ್ರಮುಖ ಬರಹಗಾರರು.

ಇತರೆ[ಬದಲಾಯಿಸಿ]

ಕಾವ್ಯ-ಪದ್ಯ
ವಡ್ರ್ಸವರ್ತ್ (1770-1850); ಕೊಲೆರಿಡ್ಜ್ (1772-1834); ಲಾರ್ಡ್ ಬೈರನ್ (1788-1824); ಶೆಲ್ಲಿ (sಶೆಲೀ) (1792-1822); ಕ್ಲೇರ್ (1793-1864); ಕೀಟ್ಸ್ 1795-1821)
ಕಾದಂಬರಿ
ಎಡ್ಗವರ್ತ್ (1767-1849); ಸ್ಕಾಟ್ (1771-1832); ಆಸ್ಟಿನ್ (1775-1817); ಲಾನಡೊರ್(1775-1864) ; ಪೀಕಾಕ್ (1785- 1866);
ವಿಮರ್ಶೆ
ಕೊಲೆರಿಡ್ಜ್ (1772-1834); ಲ್ಯಾಂಬ್ (1775-1834); ಹ್ಯಾಸಲಿಟ್ (1778-1830);
ಪ್ರಬಂಧ
ಲ್ಯಾಂಬ್(1775-1834); ); ಹ್ಯಾಸಲಿಟ್ (1778-1830); ಹಂಟ್ (1784-1859) ;
ಜೀವನ ಚರಿತ್ರೆ
ಸೌತೀ 1774-1843) ಡಿ ಕ್ವಿನಸೀ (1785-1859) ;
ತತ್ವ ಶಾಸ್ತ್ರ-ರಾಜ್ಯ ಶಾಸ್ತ್ರ
ಬೆನ್ತ್ಯಾಮ್ (1748-1832) ; ಕೋಬೆಟ್ (1762-1835); ಓವೆನ್ (1771-1858);

ನವಭಿಜಾತ ಯುಗ:[ಬದಲಾಯಿಸಿ]

ಮೈಕೆಲ್ ಡಹ್ಲ್ ಅವರ ತೈಲ ಚಿತ್ರ: ಅಲೆಕ್ಸಾಂಡರ್ ಪೋಪ್
ಆಲಿವರ್ ಗೋಲ್ಡ್ ಸ್ಮಿತ್- Oliver Goldsmith sephia
  • ಹದಿನೆಂಟನೆಯ ಶತಮಾನ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ನಿಯೊಕ್ಲಾಸಿಕಲ್ (ನವಅಭಿಜಾತ) ಯುಗ ಸರಳವಾದ, ನೇರವಾದ, ಭಾವ ಮತ್ತು ಭಾಷೆಗಳಲ್ಲಿ ಅತಿರೇಕವಿರದಿದ್ದ ಬರಹ, ವ್ಯೆಚಾರಿಕತೆ, ವಿಡಂಬನೆ, ಮೊದಲಾದವುಗಳ ಪ್ರಾಧಾನ್ಯ. ರೊಮ್ಯಾಂಟಿಕ್ ಪಂಥದ ಪ್ರಮುಖ ಪ್ರವೃತ್ತಿಗಳಾದ ಪ್ರಕೃತಿಪ್ರೇಮ ಮತ್ತು ಕಲ್ಪನಾವಿಲಾಸಗಳ ಆಭಾವ-ಇವು ಈ ಯುಗದ ಕಾವ್ಯದ ಪ್ರಮುಖ ಲಕ್ಷಣಗಳು ಇವಕ್ಕೆ ವಿರುದ್ಧ ಲಕ್ಷ್ಪ್ಷಣಗಳನ್ನೇ ಪದ್ಯ ಪಡೆಯಿತು.
  • ಹದಿನೆಂಟನೆಯ ಶತಮಾನದ ಕವಿಗಳಲ್ಲಿ ಮೊದಲು ಬರುವವ ಅಲೆಕ್ಸಾಂಡರ್ ಪೋಪ್. ಲಂಡನ್ನಿನ ಕವಿಯಾದ ಇವನ ಕೃತಿಗಳು ವಿಡಂಬನೆಗಳು. ಸಮಕಾಲೀನ ಲಂಡನ್ ಸಮಾಜವನ್ನೂ ಸೋದರ ಲೇಖಕರನ್ನೂ ನಿರ್ದಾಕ್ಷಿಣ್ಯವಾಗಿ, ಅನೇಕ ವೇಳೆ ಅನ್ಯಾಯವಾಗಿ, ವೈಯಕ್ತ್ತಿಕ ಕಾರಣಗಳಿಗಾಗಿ, ಕಟುವಿಡಂಬನೆಗೆ ಅವನು ಗುರಿಪಡಿಸಿದ್ದಾನೆ. ದಿ ರೇಪ್ ಆಪ್ ದಿ ಲಾಕ್, ಡನ್ಸಿಯಡ್ ಎಂಬ ಇವನ ವಿಡಂಬನಾತ್ಮಕ ಕವಿತೆಗಳು ಪ್ರಸಿದ್ಧ. ಇವುಗಳ ಮಾಧ್ಯಮವಾದ ಹಿರಾಯಿಕ್ ಕಪ್ಲೆಟ್ ಎಂಬ ಛಂದಸ್ಸಿನ ಮೇಲೆ ಅವನಿಗಿರುವ ಸ್ವಾಮ್ಯ ಅಸದೃಶವಾದುದು. ಎಸ್ಸೆ ಅನ್ ಕ್ರಿಟಿಸಿಸಮ್, ಎಸ್ಸೆ ಅನ್ ಮ್ಯಾನ್ ಎಂಬ ಇವನ ಚರ್ಚಾತ್ಮಕ ಕವನಗಳು ಆ ಕಾಲದ ಪದ್ಯವೂ ಹೇಗೆ ಗದ್ಯದ ಕೆಲಸಕ್ಕೆ ಉಪಯೋಗಿಸಲ್ಪಡುತ್ತಿತ್ತು ಎಂಬುದನ್ನು ತೋರಿಸುತ್ತವೆ. ಗಲಿವರ್ಸ್ ಟ್ರಾವೆಲ್ಸ್ ಎಂಬ ಜಗದ್ವಿಖ್ಯಾತ ವಿಡಂಬನಾತ್ಮಕ ಕಥೆಯ ಕರ್ತೃ ಜೊನಾತನ್ ಸ್ವಿಫ್ಟ್. ಅದು ಆ ಕಾಲದ ರಾಜಕೀಯ ಸ್ಥಿತಿಗತಿಗಳನ್ನೂ ಸ್ವಿಫ್ಟನ ನಿರಾಶಾಯುತ ಜೀವನದೃಷ್ಟಿಯನ್ನೂ ಪ್ರತಿಬಿಂಬಿಸುತ್ತದೆ. ದಿ ಬ್ಯಾಟಲ್ ಆಫ್ ಬುಕ್ಸ್, ಸಾಹಿತ್ಯಕ್ಕೆ ಸಂಬಂಧಪಟ್ಟ ವಿಡಂಬನೆ ದಿ ಟೇಲ್ ಆಫ್ ಎ ಟಬ್ ಅವನ ಇನ್ನೊಂದು ಪ್ರಸಿದ್ಧ ಕೃತಿ. ಇಂಗ್ಲಿಷ್ ವಿಡಂಬನಕಾರರಲ್ಲೂ ಗದ್ಯ ಲೇಖಕರಲ್ಲೂ ಸ್ವಿಫ್ಟನ ಸ್ಥಾನ ಗಣ್ಯವಾದುದು. ಅಷ್ಟೇ ಗಣ್ಯರಾದವರು ಡೇನಿಯಲ್ ಡೀಫೋ. ಆಡಿಸನ್ ಮತ್ತು ಸ್ಟೀಲ್ ಇಂಗ್ಲಿಷಿನ ಪ್ರಬಂಧಗಳ ಶ್ರೇಷ್ಠ ನಿರ್ಮಾಪಕರ ಶ್ರೇಣಿಗೆ ಸೇರಿದವರು. ಅವರ ಟ್ಯಾಟ್ಲರ್ ಮತ್ತು ಸ್ಪೆಕ್ಟೇಟರ್ ಪ್ರಬಂಧಗಳು ಸಮಾಜ ಸುಧಾರಣೆಗಾಗಿ ರಚಿತವಾಗಿದ್ದರೂ ಉತ್ತಮ ಕಲಾಕೃತಿಗಳೂ ಆಗಿವೆ ಇಬ್ಬರೂ ನಾಟಕಗಳನ್ನೂ ಬರೆದಿದ್ದಾರೆ. ಇವರು ತಮ್ಮ ಸ್ಪೆಕ್ಟೇಟರ ಪ್ರಬಂಧಗಳಲ್ಲಿ ಸೃಷ್ಟಿಸಿದ ಸರ್ ರೋಜರ್ ಡಿ ಕವರ್ಲಿ ಇಂಗ್ಲಿಷ್ ಸಾಹಿತ್ಯ ಲೋಕದ ವಿಖ್ಯಾತ ವ್ಯಕ್ತಿಗಳಲೊಬ್ಬನಾಗಿರುವುದಲ್ಲದೆ ಮುಂದೆ ಬಂದ ಇಂಗ್ಲಿಷ್ ಕಾದಂಬರಿಗಳ ಬೆಳವಣಿಗೆಯ ಚರಿತ್ರೆಯಲ್ಲೂ ಹೆಸರಾಗಿದ್ದಾನೆ. ಹದಿನಂಟನೆಯ ಶತಮಾನದ ಇತರ ಗದ್ಯ ಲೇಖಕರಾದ ಚರಿತ್ರಕಾರ ಎಡ್ವರ್ಡ್ ಗಿಬ್ಬನ್ (ದಿ ರೈಸ್ ಅಂಡ್ ಫಾಲ್ ಆಫ್ ದಿ ರೋಮನ್ ಎಂಪೈರ್‍ನ ಕರ್ತೃ ಎಡ್ಮಂಡ್ ಬರ್ಕ್-ಇಬ್ಬರೂ ಇಂಗ್ಲಿಷ್ ಗದ್ಯದ ಸತ್ತ್ವ ಮತ್ತು ಓಜಸ್ಸುಗಳನ್ನು ತಮ್ಮ ಕೃತಿಗಳಲ್ಲಿ ತೋರಿಸಿದ್ದಾರೆ.
  • ಪೋಪನ ಅನಂತರ ಬಂದ ಕವಿಗಳಲ್ಲಿ ಆಲಿವರ್ ಗೋಲ್ಡ್ ಸ್ಮಿತ್ ಮತ್ತು ಸ್ಯಾಮುಅಲ್ ಜಾನ್‍ಸನ್ನರು ಕ್ಲಾಸಿಕಲ್ ಪಂಥದ ಕೃತಿಗಳನ್ನೇ ಬರೆದರು. ಗೋಲ್ಡ್ ಸ್ಮಿತ್ ನ ದಿ ಡೆಸರ್ಟಡ್ ವಿಲೇಜ್ ಮತ್ತು ದ ಟ್ರಾವೆಲರ್ ವಿಚಾರಪೂರ್ಣವಾದ ಸಮಸ್ಯಾ ಪ್ರತಿಪಾದಕವಾದ ಕವನಗಳು. ಜಾನ್‍ಸನ್ನನ ದಿ ವ್ಯಾನಿಟಿ ಆಫ ಹ್ಯೂಮನ್ ವಿಷಸ್ ಜೀವನದ ಆಶೋತ್ತರಗಳ ನಿರರ್ಥಕತೆಯನ್ನು ಪ್ರತಿಪಾದಿಸುವ ಕವನ. ಈ ಕವನಗಳೆಲ್ಲ ತಮ್ಮ ವಿಷಯಗಳಿಗೆ ಅನುಗುಣವಾಗಿ ಹಿರಾಯಿಕ್ ಕಪ್ಲೆಟ್ ಛಂದಸ್ಸಿನಲ್ಲಿವೆ. ಗೋಲ್ಡ್ ಸ್ಮಿತ್ ಕವಿಯಾಗಿದ್ದುದಲ್ಲದೆ ಪ್ರಬಂಧಕಾರನೂ ನಾಟಕಕಾರನೂ ಕಾದಂಬರಿಕಾರನೂ ಆಗಿದ್ದ. ದಿ ಸಿಟಿಜನ್ ಆಫ್ ದಿ ವಲ್ರ್ಡ್ ಎಂಬ ಅಂಕಿತನಾಮವನ್ನಿಟ್ಟುಕೊಂಡು ಆತ ಬರೆದ ಪ್ರಬಂಧಗಳು ಸಮಕಾಲೀನರ ಗುಣದೋಷಗಳ ವಿಮರ್ಶೆಯನ್ನು ಒಳಗೊಂಡಿದೆ. ಅವುಗಳಲ್ಲಿರುವ ತಿಳಿಹಾಸ್ಯ ಮಾನವ ಪ್ರೇಮಗಳು ಆಹ್ಲಾದಕರವಾಗಿವೆ. ಅವನ ದಿ ವಿಕಾರ್ ಆಫ್ ವೇಕ್‍ಫೀಲ್ಡ್ ಜಗತ್ತಿನ ಅತ್ಯಂತ ಪ್ರಸಿದ್ಧ ಕಾದಂಬರಿಗಳಲ್ಲೊಂದು. ಅವನ ನಾಟಕಗಳ ಬೆಳವಣಿಗೆಯನ್ನು ಮುಂದುವರಿಸುವುದರಲ್ಲಿ ಗಣನೀಯ ಪಾತ್ರವಹಿಸಿದವು. ಡಾಕ್ಟರ್ ಜಾನ್ಸನ್ ಕವಿಯಾಗಿದ್ದುದರ ಜೊತೆಗೆ ನಿಘಂಟುಕಾರನೂ ಆಗಿದ್ದ. 1755ರಲ್ಲಿ ಪ್ರಕಟವಾದ ಅವನ ಡಿಕ್ಷ್‍ನರಿ ಇಂಗ್ಲಿಷ್ ಭಾಷೆಯ ನಿಘಂಟುಗಳಲ್ಲಿ ಒಂದು ಘಟ್ಟವನ್ನೇ ಸ್ಥಾಪಿಸಿತು. ಇಂಗ್ಲಿಷ್ ವಿಮರ್ಶಕರ ಶ್ರೇಣಿಯಲ್ಲಿ ಅವನದು ದೊಡ್ಡ ಹೆಸರು. ಅವನ ಲೈವ್ಸ್ ಆಫ್ ಪೊಯಟ್ಸ್ ಮತ್ತು ಪ್ರಿಫೇಸ್ ಟು ಷೇಕ್ಸ್‍ಪಿಯರ್ ಅವನು ವಿಮರ್ಶೆಗೆ ಸಲ್ಲಿಸಿದ ಸೇವೆಯ ಪ್ರತೀಕಗಳಾಗಿ ಇಂದಿಗೂ ವಿದ್ವಾಂಸರಿಗೆ ಆಕರ್ಷಕವಾಗಿವೆ. ಜಾನ್ಸನ್ನನ ವಿಮರ್ಶೆ ಕ್ಲಾಸಿಕಲ್ ಯುಗದ ಕಾವ್ಯ ಮೀಮಾಂಸೆ ಮತ್ತು ಕಾವ್ಯ ಲಕ್ಷಣಗಳಿಗೆ ಕೈಮರದಂತಿದೆ. ಆದರೆ ಈ ಪಂಥಕ್ಕೆ ವಿರುದ್ಧವಾದ ಷೇಕ್ಸ್‍ಪಿಯರ್‍ನ ಔನ್ನತ್ಯವನ್ನು ಗುರುತಿಸಬಲ್ಲ ರಸಜ್ಞೆಯೂ ಅವನಲ್ಲಿತ್ತು.
  • ಹದಿನೆಂಟನೆಯ ಶತಮಾನದ ಉತ್ತರಾರ್ಧ ಇಂಗ್ಲಿಷ್ ಕಾದಂಬರಿಯ ಆರಂಭದ ಕಾಲ. ಸ್ಯಾಮ್ಯುಅಲ್ ರಿಚರ್ಡ್‍ಸನ ಮತ್ತು ಹೆನ್ರಿ ಫೀಲ್ಡಿಂಗ್ ಇಂಗ್ಲಿಷಿನ ಮೊದಲ ಕಾದಂಬರಿಕಾರರು. ರಿಚರ್ಡ್‍ಸನ್ನನ ಪ್ಯಾಮೆಲಾ ಮತ್ತು ಕ್ಲಾರಿಸ ಫೀಲ್ಡಿಂಗನ ಜೋಸೆಫ್ ಅಂಡ್ರ್ಯೂಸ್ ಮತ್ತು ಟಾಮ್ ಜೋನ್ಸ್ ಎಂಬ ಪ್ರಸಿದ್ಧ ಕಾದಂಬರಿಗಳು ಈ ಅವಧಿಯಲ್ಲಿ ರಚಿತವಾದುವು. ತೋಬಿಯಸ್ ಸ್ಮಾಲೆಟ್ನ ರೋಡೆರಿಕ್ ರ್ಯಾಂಡಮ್ ಮತ್ತು ಲಾರೆನ್ಸ್ ಸ್ಟರ್ನನ ಟ್ರಿಸ್ಟ್ರಾಮ್ ಷ್ಯಾಂಡಿ ಮತ್ತು ಸೆಂಟಿಮೆಂಟಲ್ ಜರ್ನಿಗಳು ಇಂಗ್ಲ್ಲಿಷ್ ಕಾದಂಬರಿಗಳ ಹಿರಿಯ ಪರಂಪರೆಯನ್ನೇ ಸ್ಥಾಪಿಸಿದುವು. ಬರಬರುತ್ತ ಇಂಗ್ಲಿಷ್ ಕಾದಂಬರಿ ಸಾಮಾಜಿಕ ಸಾಹಿತ್ಯದ ದೊಡ್ಡ ಮಾಧ್ಯಮವಾಯಿತು.

ರೊಮ್ಯಾಂಟಿಕ್ ಯುಗದ ಹರಿಕಾರರು:[ಬದಲಾಯಿಸಿ]

  • ಆದರೆ ಹದಿನೆಂಟನೆಯ ಶತಮಾನದಲ್ಲೆಲ್ಲ ಕ್ಲಾಸಿಕಲ್ ಸಾಹಿತ್ಯವೊಂದೇ ವಿರಾಜಿಸಲಿಲ್ಲ. ಅಂಥ ಸಾಹಿತ್ಯ ಕೆಲವು ವರ್ಷಗಳು ಎಲ್ಲರ ಗಮನವನ್ನೂ ಸೆಳೆದ ಅನಂತರ ರೊಮ್ಯಾಂಟಿಕ್ ಸಾಹಿತ್ಯಪ್ರೇಮ ಅದಕ್ಕೆ ಪ್ರೇರಕವಾದ ಪ್ರವೃತ್ತಿಗಳು ಮತ್ತೆ ಲೇಖಕರ ಮನಗಳಲ್ಲಿ ಕಾಣಿಸಿಕೊಳ್ಳತೊಡಗಿದವು. ಮಧ್ಯಯುಗದ ಐತಿಹ್ಯಗಳು ಕಾಲ್ಪನಿಕ ಕಥೆಗಳು, ಜಾನಪದ ಸಾಹಿತ್ಯ, ಪ್ರಕೃತಿ, ಗ್ರಾಮಜೀವನ-ಇವುಗಳಲ್ಲೆಲ್ಲ ಹೊಸ ಆಸಕ್ತಿಯೊಂದು ಕಾಣಿಸಿಕೊಳ್ಳಲಾರಂಭಿಸಿತು. ಬಿಷಪ್ ಪರ್ಸಿಯ ರೆಲಿಸ್ ಆಫ್ ಏನ್ಷಂಟ್ ಇಂಗ್ಲಿಷ್ ಪೊಯಟ್ರಿ ಅನೇಕಾನೇಕ ಲಾವಣಿಗಳ ಸಂಗ್ರಹ, ಲಾವಣಿಗಳ ಸರಳತೆ, ಛಂದೋವೈವಿದ್ಯ ಮೊದಲಾದ ಗುಣಗಳು ಇಂಗ್ಲಿಷ್ ಕಾವ್ಯದ ಮೇಲೆ ಮತ್ತೆ ತಮ್ಮ ಪ್ರಭಾವವನ್ನು ಬೀರತೊಡಗಿದವು. ಹಳೆಯ ಕಾಲದ ಕೃತಿಗಳನ್ನು ಹೋಲುತ್ತಿದ್ದ ಮ್ಯಾಕ್‍ಫೆರ್‍ಸನ್‍ನ ಆಸಿಯನ್ ಎಂಬ ಕವನವೂ ಚಾಟರ್‍ಮನ್‍ನ ರೌಲಿ ಪೊಯಮ್ಸ್ ಎಂಬ ಕವನ ಸಂಗ್ರಹವೂ ಈ ಕಾಲದಲ್ಲೇ ಪ್ರಕಟವಾದುದು ಅರ್ಥಪೂರ್ಣವಾದ ಸಂಗತಿ. ಹೊರೇಸ್ ವಾಲ್ಟೋಲ್‍ನ ಕ್ಯಾಸಲ್ ಆಫ್ ಅಟ್ರೌಂಟೊ ಮಧ್ಯಯುಗದ ಗಾಥಿಕ್ ವರ್ಗದ ಕಲ್ಪನಾವೈಭವದಿಂದ ಕೂಡಿದ ಕಥೆ. ವಿಸೆಸ್ ಆನ್ ರ್ಯಾಡ್‍ಕ್ಲಿಫ್‍ಳ ದಿ ಮಿಸ್ಟೆರೀಸ್ ಆಫ್ ಉಡಾಲ್ಫೋ ಕೂಡ ಇಂಥದೇ ಕೃತಿ. ಕತ್ತಲು ತುಂಬಿದ ಕಾಡು, ದೆವ್ವಗಳು, ದುಷ್ಟರು, ಪ್ರಕೃತಿಪ್ರೇಮ, ಭಾವೌತ್ಸುಕ್ಯ-ಇವು ಈ ಗ್ರಂಥಗಳ ಲಕ್ಷಣಗಳು.
  • ಈ ರೊಮ್ಯಾಂಟಿಕ್ ಪ್ರವೃತ್ತಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಮಾತ್ರವಲ್ಲದೆ ಮೊದಲಿನಿಂದಲೂ ಇತ್ತು. ಪೋಪ್ ತನ್ನ ವಿಡಂಬನೆಗಳನ್ನೂ ಚರ್ಚಾತ್ಮಕ ಕಾವ್ಯಗಳನ್ನೂ ಬರೆಯುತ್ತಿದ್ದಾಗಲೇ ಜೇಮ್ಸ್ ಥಾಮ್ಸ್‍ನ ಎಂಬ ಋತುಗಳನ್ನು ಕುರಿತು ದೀರ್ಘ ಕವಿತೆಯನ್ನು ಬರೆದ (1731). ಎಡ್ವರ್ಡ್ ಯಂಗ್‍ನ ನೈಟ್ ಥಾಟ್ಸ್ ಕೆಲವು ವರ್ಷಗಳ ಅನಂತರ ಬಂತು. ಇವರೆಡರಲ್ಲೂ ಹಳ್ಳಿಯ ಜೀವನ. ಹಳ್ಳಿಗಾಡಿನ ದೃಶ್ಯಗಳು, ಪ್ರಕೃತಿವರ್ಣನೆ, ಮಾನವ ಸಹಜವಾದ ಭಾವಗಳು ವ್ಯಕ್ತವಾಗಿವೆ. ಶತಮಾನದ ಮಧ್ಯಭಾಗಕ್ಕೆ ಸೇರಿದ ಥಾಮಸ್ ಗ್ರೆ ಮತ್ತು ವಿಲಿಯಮ್ ಕಾಲಿನ್ಸ್‍ರಲ್ಲೂ ಈ ಗುಣಗಳುಂಟು. ಗ್ರೆ ಕವಿಯ ಎನ್ ಎಲಿಜಿ ರಿಟನ್ ಇನ್ ಎ ಕಂಟ್ರಿ ಚರ್ಚ್‍ಯಾರ್ಡ್ ಪ್ರಸಿದ್ಧ ಕವನ. ಅದು ಹಳ್ಳಿಯ ಜನರ ಕಷ್ಟ ಸುಖಗಳನ್ನೂ ಒಳಗೊಂಡಿದೆ. ಗ್ರೆ ಕವಿಯೇ ಬರೆದ ದಿ ಬಾರ್ಡ್ ಮತ್ತು ಪ್ರೋಗ್ರೆಸ್ ಆಫ್ ಪೊಯಂಸ್ ಕವನಗಳು ಕಲ್ಪನೆಯನ್ನು ಕೆರಳಿಸುವ ರಚನೆಗಳು. ಕಾಲಿನ್ಸನ ಓಡ್ ಟು ಈವನಿಂಗ್ ಕವಿತೆಯ ವಸ್ತು ಗ್ರಾಮಸೀಮೆಯ ಸಂಧ್ಯೆಯ ವರ್ಣನೆ. ಪ್ರಾಸರಹಿತವಾದ ಈ ಕವನ ಹಿರಾಯಿಕ್ ಕಪ್ಲೆಟ್ಟನ ಸಂಕೋಲೆಯಿಂದ ಹೇಗೆ ಕೆಲವರಾದರೂ ಬೇಸತ್ತಿದ್ದರೆಂದು ತೋರಿಸುತ್ತದೆ. ವಿಲಿಯಮ ಕೂಪರ್ ಮತ್ತು ಜಾರ್ಜ್ ಕ್ರ್ಯಾಬ್‍ರೂ ಹಳ್ಳಿಯ ಜೀವನದ ಮತ್ತು ನೋಟಗಳ ಕವಿಗಳು. ಸ್ಕಾಟ್ಲೆಂಡಿನ ಕವಿ ರಾಬರ್ಟ್ ಬನ್ರ್ಸ್ ಹಳ್ಳಿಯವ; ಸ್ವತ: ರೈತ. ಅವನ ಭಾವಗೀತೆಗಳು ಜನಪ್ರಿಯತೆಯನ್ನು ಗಳಿಸಿವೆ. ಪ್ರಣಯ ಕವನಗಳ ರಚನೆಯಲ್ಲಿ ಅವನದು ಎತ್ತಿದ ಕೈ. ಅವನ ಭಾಷೆ ಸ್ಕಾಟ್ಲೆಂಡಿನ ಪಶ್ಚಿಮ ಭಾಗದ ಆಡುಭಾಷೆ.
  • ವಿಲಿಯಂ ಬ್ಲೇಕ್ ಅನುಭಾವೀ ಕವಿ. ಅವನ ಕವನಗಳಲ್ಲಿ ದೈವಚಿಂತನೆಯ ಹುಚ್ಚು ಎದ್ದು ಕಾಣುತ್ತದೆ. ಇವರೆಲ್ಲರೂ ಕಲ್ಪನೆಗೆ, ಸಹಜತೆ ಸರಳತೆಗಳಿಗೆ ಪ್ರಕೃತಿಪ್ರೇಮ ಮಾನವಪ್ರೇಮಗಳಿಗೆ ಕೈತೋರಿಸುತ್ತವೆ; ಬರಲಿರುವ ಬದಲಾವಣೆಯನ್ನು ಸೂಚಿಸುತ್ತವೆ. ಆದುದರಿಂದ ಈ ಕವಿಗಳಿಗೆ ಟ್ರಾನ್ಸಿಷನ್ ಪೊಯಟ್ಸ್ ಎಂದು ಹೆಸರು ಬಂದಿದೆ. ಒಂದು ಬಗೆಯ ಕಾವ್ಯ ಪ್ರಪಂಚದಿಂದ ಇನ್ನೊಂದಕ್ಕೆ ಹೋಗುವವರು ಎಂದು ಆ ಮಾತು ಸೂಚಿಸುತ್ತದೆ. ಇವರು ಕ್ಲಾಸಿಕಲ್ ಸಾಹಿತ್ಯಕ್ಕೂ ರೊಮ್ಯಾಂಟಿಕ್ ಸಾಹಿತ್ಯಕ್ಕೂ ಮಧ್ಯೆ ಸೇತುವೆಯಂತಿದ್ದರು. ಇವರಲ್ಲಿ ಒಬ್ಬೊಬ್ಬರಲ್ಲೂ ಬೇರೆ ಬೇರೆಯಾಗಿ ಕಂಡು ಬಂದ ಲಕ್ಷಣಗಳೇ ಒಟ್ಟಿಗೆ ಸೇರಿ ವಡ್ರ್ಸ್‍ವರ್ತ್ ಮತ್ತು ಕೋಲಿರಿಜ್‍ರಲ್ಲಿ ಕಾಣಿಸಿಕೊಂಡು ರೊಮ್ಯಾಂಟಿಕ್ ಯುಗವನ್ನು ತಂದುವು.

ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ವಿಜ್ಞಾನದ ಯುಗ[ಬದಲಾಯಿಸಿ]

  • ಈ ಯುಗಕ್ಕೇ ಸೇರಬೇಕಾದ ಲೇಖಕರ ಹೆಸರುಗಳು ಇನ್ನೂ ಅನೇಕವಿವೆ. ಒಟ್ಟಿನ ಮೇಲೆ ಈ ಯುಗ ಇಂಗ್ಲಿಷ್ ಸಾಹಿತ್ಯದ ಅತ್ಯಂತ ರಸಮಯವಾದ ವೈವಿಧ್ಯಪೂರ್ಣವಾದ ವೈಭವೋಪೇತವಾದ ಯುಗಗಳಲ್ಲಿ ಒಂದು.
  • ಹತ್ತೊಂಬತ್ತನೆ ಶತಮಾನದ ದ್ವಿತೀಯಾರ್ಧ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ವಿಜ್ಞಾನದ ಯುಗ. ಇದನ್ನು ವಿಕ್ಟೋರಿಯ ಯುಗ ಎಂದು ಕರೆಯುತ್ತಾರೆ. ಈ ಯುಗ ಇಂಗ್ಲಿಷ್ ಪ್ರಜಾಪ್ರಭುತ್ವದ ವಿಸ್ತರಣಕ್ಕೂ ವ್ಯಾಪಾರದ ಉತ್ಕರ್ಷಕ್ಕೂ ವಿಜ್ಞಾನದ ಬೆಳೆವಣಿಗೆಗೂ ಹೆಸರಾದುದು. ಇವೆಲ್ಲವುಗಳ ಪರಿಣಾಮ ಸಾಹಿತ್ಯದ ಮೇಲೆ ಆದುದನ್ನು ಕಾಣಬಹುದು. ಸಾಮಾನ್ಯರ ಪ್ರಾಶಸ್ತ್ಯ ಹೆಚ್ಚಿದ್ದರಿಂದ ಅವರಿಗೆ ತಕ್ಕ ಸಾಹಿತ್ಯದ ಸೃಷ್ಟಿಯಾಗಬೇಕಾಯಿತು. ವಾರ್ತಾಪತ್ರಿಕೆಗಳೂ ಮಾಸಪತ್ರಿಕೆ ಮೊದಲಾದವುಗಳೂ ಈ ಸಾಹಿತ್ಯವನ್ನು ಒದಗಿಸಿದುವು. ಕಥೆ, ಕಾದಂಬರಿ ಮೊದಲಾದವನ್ನು ಪ್ರಕಟಿಸಿ ಕಾದಂಬರಿಗಳ ಯುಗವನ್ನೇ ಸ್ಥಾಪಿಸಿದವು. ಸುದೀರ್ಘವಾದ ಸಮಾಜದ ನಾನಾ ಮುಖಗಳನ್ನು ಪ್ರತಿಬಿಂಬಿಸುವ ಕಾದಂಬರಿಗಳು ಮೇಲಿಂದ ಮೇಲೆ ಬಂದವು. ಚಾರಲ್ಸ್ ಡಿಕೆನ್ಸ್,, ವಿಲಿಯಮ್ ಮೇಕ್‍ಪೀಸ್, ಥ್ಯಾಕರೆ, ಜಾರ್ಜ್ ವಿಲಿಯಟ್, ಜಾರ್ಜ್ ಮೆರಿಡಿತ್, ಚಾರಲ್ಸ್ ರೀಡ್, ರಾಬರ್ಟ್ ಲೂಯಿ ಸ್ಟೀವನ್‍ಸನ್, ಥಾಮಸ್ ಹಾರ್ಡಿ ಮೊದಲಾದ ಉನ್ನತಮಟ್ಟದ ಕಾದಂಬರಿಕಾರರು ತಮ್ಮ ಕೃತಿಗಳಿಂದ ಇಂಗ್ಲಿಷ್ ಕಾದಂಬರಿ ಪ್ರಪಂಚವನ್ನು ಐಶ್ವರ್ಯಯುತವಾಗಿ ಮಾಡಿದರು. ಆ ಕಾಲದ ಜನರ ಮನೋಧರ್ಮ, ಆರ್ಥಿಕ ಜೀವನ, ಸಂಸ್ಕøತಿ ಮೊದಲಾದವನ್ನು ಕುರಿತು ಥಾಮಸ್ ಕಾರ್ಲೈಲ್, ಜಾನ್ ರಸ್ಕಿನ್ ಮತ್ತು ಮ್ಯಾಥ್ಯೂ ಆರ್ನಾಲ್ಡ್ ಮೊದಲಾದವರು ಬರೆದರು, ಥ್ಯಾಕರೆಯ ವ್ಯಾನಿಟಿ ಫೇರ್, ಡಿಕನ್ಸ್‍ನ ಪಿಕ್ವಿಕ್ ಪೇಪರ್ಸ್, ಡೇವಿಡ್ ಕಾಪರ್‍ಫೀಲ್ಡ್, ಆಲಿವರ್ ಟ್ವಿಸ್ಟ್ ಮೊದಲಾದ ಕೃತಿಗಳೂ ಜಾರ್ಜ್ ಎಲಿಯಟ್ಟಳ ರೋಮೋಲಾ, ಸೈಲಾಸ್ ಮಾರ್ನರ್, ಮೆರಿಡಿತ್ತ್‍ನ ದಿ ಈಗೊಯಿಸ್ಟ್ ಮತ್ತು ಇವಾನ್ ಹ್ಯಾರಿಂಗ್ಟನ್, ಸ್ಟೀವನ್ಸನ್ನಿನ ದಿ ಟ್ರಿಷರ್ ಐಲೆಂಡ್ ಮತ್ತು ಕಿಡ್ನ್ಯಾಪ್ಡ್, ಹಾರ್ಡಿಯ ಟೆಸ್ ಆಫ್ ದಿ ಡಿ ಅರ್ಬರ್‍ವಿಲಿಸ್, ದಿ ರಿಟರ್ನ್ ಆಫ್ ದಿ ನೇಟಿವ್ ಮೊದಲಾದ ಕಾದಂಬರಿಗಳೂ ಜಗತ್ತಿನ ಶ್ರೇಷ್ಠ ಕೃತಿಗಳ ಶ್ರೇಣಿಯಲ್ಲಿ ರಾರಾಜಿಸುತ್ತಿವೆ.
  • ವಿಕ್ಟೋರಿಯಾ ಕಾಲದ ಕಾವ್ಯವೂ ಅತ್ಯುನ್ನತ ಮಟ್ಟದ್ದಲ್ಲದಿದ್ದರೂ ಮಹತ್ತರವಾದುದೇ. ಆಲ್ಫ್ರೆಡ್ ಟೆನಿಸನ್, ರಾಬರ್ಟ್ ಬ್ರೌನಿಂಗ್ ಮತ್ತು ಮ್ಯಾಥ್ಯೂ ಆರ್ನಲ್ಡ್ ಈ ಯುಗದ ಮೂರು ಮುಖ್ಯ ಕವಿಗಳು. ಇವರೆಲ್ಲರ ಕಾವ್ಯದಲ್ಲೂ ನೂತನ ವೈಜ್ಞಾನಿಕ ಸಂಶೋಧನೆಗಳಿಂದ (ಅದರಲ್ಲೂ ಡಾರ್ವಿನ್ನನ ವಿಕಾಸವಾದದಿಂದ) ವಿಚಾರಪರರ ಮನಸ್ಸಿನಲ್ಲಿ ಉಂಟಾದ ಜಿಜ್ಞಾಸೆ ಚೆನ್ನಾಗಿ ವ್ಯಕ್ತವಾಗಿದೆ. ತತ್ಫಲವಾಗಿ ಅವರ ಕಾವ್ಯ ಆಲೋಚನಾಮಯವಾಗಿದೆ. ಟೆನಿಸನ್ನಿನ ಕೃತಿಗಳು ಸುಂದರ ಚಿತ್ರಗಳ ವರ್ಣನೆಗೆ ಇಂಪಾದ ಛಂದೋರಚನೆಗೆ ಪ್ರಸಿದ್ಧವಾಗಿವೆ. ಬ್ರೌನಿಂಗ್ ಸಚೇತಕವಾದ ಆಶಾವಾದಿತ್ವಕ್ಕೆ ಹೆರಾಗಿದ್ದಾನೆ. ಅರ್ನಾಲ್ಡ್ ಸೂಕ್ಷ್ಮರುಚಿಯ ಸೂಕ್ಷ್ಮ ಮನಸ್ಸಿನ ಸಂವೇದನಾಶೀಲನಾದ ಕವಿ. ಆ ಕಾಲದ ಜನರ ಮನದಲ್ಲಿದ್ದ ತುಮುಲ ಅವನ ಕಾವ್ಯದಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ. ಅವನು ಪ್ರಸಿದ್ಧ ವಿಮರ್ಶಕನೂ ಆಗಿದ್ದ. ಆಲೋಚನೆಗೆ ಕಾವ್ಯದಲ್ಲಿ ಸ್ಥಾನವಿಲ್ಲ, ಅದು ಗಮನ ಕೊಡಬೇಕಾದುದು ಸೌಂದರ್ಯಕ್ಕೆ ಎಂದು ವಾದಿಸಿ ಈ ಅಭಿಪ್ರಾಯಕ್ಕೆ ಅನುಗುಣವಾಗಿ ಕಾವ್ಯ, ಲೇಖನ ಮಾಡಿದವರು ಪ್ರಿ ರಯಾಫೇಲೈಟ್ಸ್ ಎಂಬ ಗುಂಪಿಗೆ ಸೇರಿದ ವಿಲಿಯಂ ಮಾರಿಸ್, ಡ್ಯಾಂಟೆ ಗೇಬ್ರಿಯಲ್ ರಾಸೆಟಿ, ಮತ್ತು ಛಾರಲ್ಸ್‍ಸ್ವಿನ್‍ಬರ್ನ್, ಮಾರಿಸ್ ಮತ್ತು ರಾಸೆಟಿಯವರ ಕವನಗಳು ಚಿತ್ರಮಯ ವರ್ಣನೆ ಸ್ವಿನ್‍ಬರ್ನನ ಕವನಗಳು ನಾದಮಾಧುರ್ಯಗಳಿಂದಾಗಿ ಗಮನಾರ್ಹವಾಗಿದೆ.
  • ಮಿಸೆಸ್ ಎಲಿಜûಬೆತ್ ಬ್ಯಾರೆಟ್ ಬ್ರೌನಿಂಗ್ ಮತ್ತು ಕ್ರಿಸ್ಟಿನ ರಾಸೆಟಿ ಈ ಕಾಲದ ಗಣ್ಯ ಕವಿಯಿತ್ರಿಯರು. ಎಮಿಲಿ ಬ್ರಾಂಟೆಯೂ ಅಲ್ಪಸ್ವಲ್ಪ ಕವಿತೆಗಳನ್ನು ರಚಿಸಿದಳು. ಅವಳೂ ಅವಳ ಸೋದರಿಯರೂ ಕಾದಂಬರಿಗಳನ್ನೂ ಬರೆದಿದ್ದಾರೆ. ಇವರಲ್ಲದೆ ಈ ಶತಮಾನದ ಕೊನೆಯ ವೇಳೆಗೆ ಆಸ್ಕರ್ ವೈಲ್ಡ್, ರಡ್ಯಾರ್ಡ್ ಕಿಪ್ಲಿಂಗ್, ಜಾರ್ಜ್ ಗಿಸ್ಸಿಂಗ್, ಫ್ರಾನ್ಸಿಸ್ ಥಾಂಪ್‍ಸನ್ ಮೊದಲಾದ ಕವಿಗಳೂ ಬಂದರು. ಹಾರ್ಡಿಯೂ ಕವಿತೆ ಬರೆದ, ಇದರಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಸಾಹಿತ್ಯ ಪ್ರವೃತ್ತಿಗಳಿಗೆ ಪ್ರತಿನಿಧಿಗಳು. ಇಪ್ಪತ್ತನೆ ಶತಮಾನದ ಕಾವ್ಯದ ಗುಣಗಳಲ್ಲಿ ಕೆಲವನ್ನು ಹತ್ತೊಂಬತ್ತನೆ ಶತಮಾನದಲ್ಲೇ ಅನುಷ್ಠಾನಕ್ಕೆ ತಂದ ಜೆರಾರ್ಡ್ ಮ್ಯಾನ್ಲಿ ಹಾಪ್ಕಿನ್ಸ್ ಇದೇ ಕಾಲದವ. ಅವನ ಕವನಗಳು ಅವನ ಜೀವಿತಕಾಲದಲ್ಲೇ ಪ್ರಕಟವಾಗದಿದ್ದ ಕಾರಣ ಆತ ತನ್ನ ಸಮಕಾಲೀನರ ಮೇಲೆ ಪ್ರಭಾವ ಬೀರಲಾಗಲಿಲ್ಲ.

ವಿಕ್ಟೋರಿಯನ್ ಯುಗ[ಬದಲಾಯಿಸಿ]

ವಿಕ್ಟೋರಿಯಾ ರಾಣಿಯ ಕಾಲ
ಈ ಕಾಲವು ಹತ್ತೊಂಭತ್ತನೇ ಶತಮಾನದ ಮಧ್ಯ ದ ವರೆಗೂ ವಿಸ್ತರಿಸುತ್ತದೆ.
;ವಿಕ್ಟೋರಿಯಾ ರಾಣಿಯ ಕಾಲ :
  • ಈ ಕಾಲವು ಹತ್ತೊಂಭತ್ತನೇ ಶತಮಾನದ ಮಧ್ಯದ ವರೆಗೂ ವಿಸ್ತರಿಸುತ್ತದೆ.
  • ಕಾವ್ಯ : ಆಲ್`ಫ್ರೆಡ್ ಟೆನ್ನಿಸನ್ ; ಮತ್ತು ರಾಬರ್ಟ್ ಬ್ರೌನಿಂಗ್ ಈ ಕಾಲದ ಪ್ರಮುಖ ಕವಿಗಳು.
  • ಕಾದಂಬರಿಗಳು : ವಿಕ್ಟೋರಿಯನ್ ಕಾಲದ ಸಾಹಿತ್ಯದ ಬೆಳವಣಿಗೆಯಲ್ಲಿ ಕಾದಂಬರಿ ಪ್ರಕಾರವು ಹೆಚ್ಚು ಸಂಖ್ಯೆಯಲ್ಲಿ ಬೆಳೆಯಿತು.
  • ಇದು ಛಾಲ್ರ್ಸ್ ಡಿಕನ್ಸ್ ; ಜೇನ್ ಆಸ್ಟಿನ್ ; ಎಮಿಲಿ ಬ್ರಾಂಟೆ ; ಜಾರ್ಜ್ ಎಲಿಯಟ್, ಮತ್ತು ಥಾಮಸ್ ಹಾರ್ಡಿ ಇವರ ಕಾಲ
  • ನಾಟಕ : ಈ ಕಾಲದ ಅತ್ಯುತ್ತಮ ನಾಟಕ ಕರ್ತೃ ಆಸ್ಕರ್ ವೀಲ್ಡ್ . ಅವನ ಶೇಷ್ಠ ಕೃತಿ ದಿ ಇಂಪಾರ್ಟೆನ್ಸ್ ಬಿಯಿಂಗ್ ಅರ್ನೆಸ್ಟ್.
ಕಾವ್ಯ-ಪದ್ಯ
ಟೆನ್ನಿಸನ್ (1809-1892); ಬ್ರೌನಿಂಗ್ 1812-1889); ಆರ್ನಾಲ್ಡ್ (1822-88); ಡಿ.ಜಿ.ರೊಸೆಟ್ಟಿ 1828-82) ; ಮೊರಿಸ್ 1834-96) ; ಸ್ವೈನ್‍ಬರ್ನ್ (1837-1909); ಹಾಪ್‍ಕಿನ್ಸ್ 1844-1896); ವೈಲ್ಡ್ (ವೀಲ್ಡ್) 1856-1900);
ಕಾದಂಬರಿ
ಗಾಸ್ಕೆಲ್ (1810-65); ಥ್ಯಾಕರೇ (1811-1863) ಡಿಕನ್ಸ್ (1812-1870); ಯಿ.ಬ್ರಾಂಟೆ (1818-48) ; ಏಲಿಯಟ್ (1819-1880); ಮೆರಿಡಿತ್ (1828- 1909) ; ಬಟ್ಲರ್ (1835-1902) ; ಹಾರ್ಡೀ (1840-1928);
ನಾಟಕ
ಪಿನೇರೋ (1855-1934)ವೈಲಡ್(ವೀಲ್ಡ್) 1856-1900);
ಜೀವನ ಚರಿತ್ರೆ
ಮಕಾಲೇ(1800-1859) ವಿಮರ್ಶೆ : ರಸ್ಕಿನ್ (1819-1900) ಆರ್ನಾಲ್ಡ್ ( 1822-1888) ; ಪ್ಯಾಟರ್ (1839-1994) ; ಪ್ರಬಂಧ : ಆರ್.ಎಲ್.ಸ್ಟಿವನ್‍ಸನ್ (1850-1894); ಇತಿಹಾಸ, ವಿಜ್ಞಾನ, ತತ್ವಶಾಸ್ತ್ರ, ಮತಧರ್ಮ: ಕಾರ್ಲೈಲ್(1795-1881) ; ಮಕಾಲೆ (1800-1859); ನಿವ್‍ಮನ್ (1801-1890); ಮಿಲ್ಲ್ (1806-1873); ಡಾರ್ವಿನ್ (1809-1882) ; ಸ್ಪೆನ್ಸರ್ (1820-1903) ಹಕ್ಸ್‍ಲೀ (1825-1895) ; ಡೋಟಿ(ಡಾಟಿ) 1843- 1926)

ಹದಿನೆಂಟು ಮತ್ತು ಹತ್ತೊಂಭತ್ತನೆಯ ಶತಮಾನ[ಬದಲಾಯಿಸಿ]

ಮೇರಿ ಆನ್ ಇವಾನ್ಸ್ (22 ನವೆಂಬರ್ 1819 - 22 ಡಿಸೆಂಬರ್ 1880; ಪರ್ಯಾಯವಾಗಿ ಮೇರಿ ಆನ್ ಅಥವಾ ಮರಿಯನ್, ಅವಳ ಕಾವ್ಯ ನಾಮ (ಪೆನ್‍ ನೇಮ್) ಜಾರ್ಜ್ ಎಲಿಯಟ್, "ಏಳು ಕಾದಂಬರಿಗಳಲ್ಲಿ, ಆಡಮ್ ಬೇಡೆ (1859), ದಿ ಮಿಲ್ ಆನ್ ದಿ ಫ್ಲೋಸ್ (1860), ಸಿಲಾಸ್ ಮಾರ್ನರ್ (1861) ಜನಪ್ರಯವಾದವು. (François Albert Durade-ಯ ಕೃತಿ
  • ಹದಿನೆಂಟನೆಯ ಶತಮಾನದ ಮಧ್ಯಭಾಗದಿಂದ ಕೈಗಾರಿಕಾ ಕ್ರಾಂತಿಯು ತೀವ್ರಗೊಂಡು, ಹತ್ತೊಂಬತ್ತನೆಯ ಶತಮಾನದಲ್ಲಿ ಕೈಗಾರಿಕೆಗಳು ಬೆಳೆಯುತ್ತ ಹೋದವು. ಬ್ರಿಟಿಷ್ ಸಾಮ್ರಾಜ್ಯವೂ ವಿಸ್ತಾರವಾಯಿತು. ಭದ್ರವಾಯಿತು ದೇಶದ ವ್ಯಾಪಾರವಾಣಿಜ್ಯಗಳು ವೇಗವಾಗಿ ಬೆಳೆದವು. ಕೈಗಾರಿಕೆಗಳ ಮೇಲೂ ನಿಯಂತ್ರಣವಿಲ್ಲದುದ್ದರಿಂದ ಮತ್ತು ಸಂಪತ್ತಿನ ನ್ಯಾಯವಾದ ವಿತರಣೆಗೆ ಗಮನ ನೀಡದಿದ್ದುದರಿಂದ ಹಲವಾರು ಸಮಸ್ಯೆಗಳು ತಲೆದೋರಿದ್ದವು. ಕಾರ್ಮಿಕರ ಸ್ಥಿತಿ ದಯನೀಯವಾಯಿತು. ಸಾಮಾಜಿಕ ಕ್ಷೋಭೆ ತಲೆದೋರಿತು. ಸಾಮಾಜಿಕ ಮತ್ತು ನೈತಿಕ ಬದುಕುಗಳಿಗೆ ಸಂಬಂಧಿಸಿದಂತೆ ತೀಕ್ಷ್ಣ ಸಂದಿಗ್ಧಗಳೂ ಸಮಸ್ಯೆಗಳೂ ಕಾಣಿಸಿಕೊಂಡವು. ಅಸಾಧಾರಣ ಪ್ರತಿಭೆಯ ಕಾದಂಬರಿಕಾರ ಡಿಕನ್ಸ್, ಇವನ ಸಮಕಾಲೀನರಾದ ಜಾರ್ಜ್ ಎಲಿಯೆಟ್ ಮೊದಲಾದವರ ಕಾದಂಬರಿಗಳಿಗೆ ಈ ಹಿನ್ನೆಲೆ ಇದೆ. ಡಿಕನ್ಸ್, ಷೇಕ್ಸ್‍ಪಿಯರನಿಗೆ ಸಮನಲ್ಲದಿದ್ದರೂ, ಅವನಂತೆ ಒಂದು ವೈವಿಧ್ಯಮಯ ಪಾತ್ರಗಳ ಜಗತ್ತನ್ನೇ ಸೃಷ್ಟಿಸಿದ. ದುಷ್ಟತನದ ಸಮಸ್ಯೆಯನ್ನು ಕಣ್ಣಿಗೆ ಮನಸ್ಸನ್ನು ತಲ್ಲಣಗೊಳಿಸುವಂತೆ ನಿರೂಪಿಸಿದ ಡಿಕನ್ಸ್‍ನ ಹಾಸ್ಯಪ್ರಜ್ಞೆ, ವಿಡಂಬನೆ ಇವು ಸಮರ್ಥ ಶಸ್ತ್ರಗಳು `ಜಾರ್ಜ್ ಎಲಿಯೆಟ್ ಎಂಬ ಹೆಸರಿನಲ್ಲಿ ಬರೆದ ಮೇರಿ ಆ್ಯನ್ ಈವನ್ಸ್‍ಳಲ್ಲಿ ನೈತಿಕ ಶ್ರದ್ಧೆ, ಗತಕಾಲ-ವರ್ತಮಾನ ಕಾಲಗಳ ಸಂಬಂಧದ ಶೋಧನೆ ಕಾಣುತ್ತದೆ. ಜಾರ್ಜ್ ಮೆರಿಡಿತ್ ಮಾನಸಿಕ ಪದರಗಳನ್ನು ಶೋಧಿಸುತ್ತಾನೆ. ಈ ವಿಕ್ಟೊರಿಯನ್ ಯುಗದ ಅಂತ್ಯದಲ್ಲಿ ಬರುವ ಈತನೂ ಥಾಮಸ್ ಹಾರ್ಡಿಯೂ ವಿಕ್ಟೋರಿಯನ್ ಯುಗ, ಆಧುನಿಕ ಯುಗಗಳ ನಡುವಣ ಸೇತುವೆ. ಕ್ರೈಸ್ತ ಧರ್ಮವನ್ನು ನಿರಾಕರಿಸಿ ಬರೆದ ಮೊದಲನೆಯ ಕಾದಂಬರಿಕಾರ ಹಾರ್ಡಿ. ಮಾನವ ಜಗತ್ತನ್ನು ಮೀರಿದ ಅದೃಶ್ಯ ಶಕ್ತಿಯುಂಟು, ಅದು ಧರ್ಮ-ನ್ಯಾಯಗಳ ಪರವಲ್ಲ. ಅದರದೇ ವಿಶಿಷ್ಟ ಗುರಿಯತ್ತ ಅದು ಸಾಗುತ್ತದೆ, ಅದರ ಮುನ್ನಡೆಗೆ ಅಡ್ಡಿ ಬರುವವರು ಒಳ್ಳೆಯವರಾಗಲಿ ಕೆಟ್ಟವರಾಗಿರಲಿ ಅವರನ್ನು ತುಳಿಯುತ್ತದೆ ಎಂದು ಆತನ ದೃಷ್ಟಿ. ಶ್ರೇಷ್ಠ ದುರಂತ ಕಾದಂಬರಿಗಳನ್ನು ಇವನು ರಚಿಸಿದ. (ಎಂ.ಆರ್.)[೧೦]

20ನೇ ಶತಮಾನ-ಆಧುನಿಕ ಯುಗ-ನವ್ಯ -ಬಂಡಾಯ-ದಲಿತ[ಬದಲಾಯಿಸಿ]

  • (Modern Literature expresses Stylish experimentation and revolution against all literary traditions.)
;ಇಪ್ಪತ್ತನೇ ಶತಮಾನದ ಬಳವಣಿಗೆ :
  • ಇಪ್ಪತ್ತನೇ ಶತಮಾನದಲ್ಲಿ ರಾಜಕೀಯ ಬದಲಾವಣೆಗಳು, ಹೊಸ ಬೆಳವಣಿಗೆಗಳು, ಎರಡು ಜಾಗತಿಕ ಮಹಾಯುದ್ಧಗಳು ವಿಕ್ಟೋರಿಯನ್ ಕಾಲದಲ್ಲಿದ್ದ ಆತ್ಮ ವಿಶ್ವಾಸ , ನಂಬುಗೆಗಳನ್ನು ಹೊಡೆದು ಹಾಕಿತು. ಅದರ ಬದಲಿಗೆ ನೋವು, ಸಂಕಟ, ಅನಿಶ್ಚಯ,ನಿರಾಶೆ, ಭಾವನೆಗಳು ಸಮಾಜದಲ್ಲಿ ತೋರಿದವು.

.ಅವು ಸಾಹಿತ್ಯದ ಮೇಲೂ ಪರಿಣಾಮ ಬೀರಿದವು., ಹಾಗಾಗಿ ಕವನ ಕಾವ್ಯಗಳಲ್ಲಿ ಹೊಸ ಬಗೆಯ ಚಿಂತನೆಯು ಕಾಣಿಸಿಕೊಂಡಿತು.

  • ಈ ಹೊಸ ವಿಚಾರಕ್ರಾಂತಿಯು ನವೀನ ಬಗೆಯ ಸಾಹಿತ್ಯ ಮಾರ್ಗ ಹುಟ್ಟಲು ಕಾರಣವಾಯಿತು. ಈ ನವೀನ ಬಗೆಯ ಸಾಹಿತ್ಯವು “ನವ್ಯ” (ಮಾಡರ್ನ್) ಸಾಹಿತ್ಯವೆನಿಸಿಕೊಂಡಿತು.
  • ಹಿಂದಿನ ಎಲ್ಲಾ ಸಂಪ್ರದಾಯಿಕ ಸಾಹಿತ್ಯ ಪ್ರಕಾರಗಳಿಗೆ ವಿರುದ್ಧವಾಗಿ ಹೊಸ ಶೈಲಿ ಮತ್ತು ಭಾಷೆಯನ್ನೂ (ಭಾಷಾಪ್ರಯೋಗ) ಪ್ರಯೋಗಶೀಲತೆಯನ್ನೂ ಮೈಗೋಡಿಸಿಕೊಂಡಿದೆ.
  • ಈ ಕಾಲದ ಸಾಹಿತ್ಯದ ಕರ್ತೃಗಳು (ಕವಿಗಳು, ಕೃತಿ-ಕರ್ತರು) ಮುಖ್ಯವಾಗಿ - ಡಬ್ಳು.ಬಿ.ಯೀಟ್ಸ್ , ಟಿ.ಎಸ್. ಎಲಿಯಟ್
  • ಕಾವ್ಯದಲ್ಲಿ- ಡಬ್ಳು. ಎಚ್.ಆಡೆನ್. ;
  • ಕಾದಂಬರಿಗಳಲ್ಲಿ ವರ್ಜೀನಿಯಾ ವೂಲ್ಫ್ ಮತ್ತು ಜೇಮ್ಸ್ ಜಾಯ್ಸ್,
  • ಮತ್ತು ನಾಟಕ ರಚನೆಯಲ್ಲಿ ಸಾಮ್ಯುಯಲ್ ಬಕೆಟ್ ಪ್ರಮುಖರು.

ಆಂಗ್ಲ ಸಾಹಿತ್ಯ ೧೯೦೧ ರ ತರುವಾಯ[ಬದಲಾಯಿಸಿ]

ಆಧುನಿಕತಾವಾದ (೧೯೦೧-೧೯೩೯):-

ಈ ಯುಗದ ಸುಪ್ರಸಿದ್ಧ ಕವಿ ಥಾಮಸ್ ಹಾರ್ಡಿ (೧೮೪೦-೧೯೨೮) ಇವರು ಆಧುನಿಕತಾವಾದ ಕವಿಗಳಾದವರು ವಿಕ್ಟೋರಿಯನ್ ಯುಗ ಮತ್ತು ೨೦ನೇ ಶತಮಾನದ ಮಧ್ಯದಲ್ಲಿ ಜೀವಿಸಿದ ಸಂಕ್ರಮಣಕಾಲ ಕವಿ ಮತ್ತು ೧೯ನೇ ಶತಮಾನದ ಪ್ರಮುಖ ಕವಿ. ಇವರ ಜೊತೆಗೆ ಹೆನ್ರಿಜೇಮ್ಸ್ (೧೮೪೩-೧೯೧೬), ಜೋಸೆಫ್ ಕೊನ್ ರಾಡ್ (೧೮೫೭-೧೯೨೪) ಲಾಡ್೯ ಜಿಮ್ ರವರು ಪ್ರಮುಖ ಕವಿಗಳಾಗಿದ್ದರು.

೧೯೪೦ ರಿಂದ ೨೧ ನೇ ಶತಮಾನದವರೆಗೆ:-

ಕೆಲವರು ೧೯೩೯ನನ್ನು ಆಧುನಿಕತಾವಾದದ ಅಂತಿಮ ಎಂದು ಪರಿಗಣಿಸುತ್ತಾರೆ. ಆದರೆ ೧೯೫೦ ಮತ್ತು ೧೯೬೦ ರವರು ಟಿ. ಎಸ್. ಎಲಿಯಟ್, ವಿಲಿಯಮ್ ಪೌಲ್ಕ್ ನರ್, ಡೊರೊಬೆ ರಿಚಡ್೯ಸನ್ ಮುಂತಾದ ಆಧುನಿಕರು ತಮ್ಮ ಬರವಣಿಗೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಬರಹಗಾರರು ೧೯೪೦ ಮತ್ತು ೧೯೫೦ ರಲ್ಲಿ ಗ್ರಹಂಗ್ರಿಸ್ ಡೈಲನ್ ತಾಮಸ್, ಟಿ. ಎಸ್. ಜೌಡೆನ್ ಮುಂತಾದವರು ಅವರ ಪ್ರಮುಖ ಬರವಣಿಗೆಗಳನ್ನು ಪ್ರಕಟಿಸುವಲ್ಲಿ ಸಫಲರಾಗಿದ್ದರು. ಭಾರತದವರಾದ ಆರ್.ಕೆ.ನಾರಾಯಣ್ ತಮ್ಮ ಸಾಹಿತ್ಯ ವಸ್ತುಗಳನ್ನು ಇಂಗ್ಲೆಂಡ್ ನಲ್ಲಿ ಪ್ರಕಟಿಸಿದರು. ಇದೇ ಸಮಯದಲ್ಲಿ ಇಂಗ್ಲೆಂಡ್ ನ ಕೆಲವು ಭಾಗಗಳಲ್ಲಿ ಕಿಚನ್ ಸಿಂಕ್ ವಾಸ್ತವಿಕತೆ ಎಂಬುದು ಬಹಳ ಪ್ರಸಿದ್ದಿಯಾಯಿತು.ಸಲ್ಮಾನ್ ರಶ್ದಿ ಯವರ ಮಿಡ್ ನೈಟ್ಸ್ ಚಿಲ್ಡ್ರಂನ್ ೧೯೮೧ ರಲ್ಲಿ ಬಹಳ ಪ್ರಸಿದ್ಧಿ ಹೊಂದಿತು. ಇಂಗ್ಲೆಂಡ್ ನ ಹೊರಗಿರುವ ಸಾಹಿತಿಗಳಲ್ಲಿ ಪ್ರಮುಖರಾದವರು ವಿ. ಎಸ್. ನೈಪಾಲ್ ಬಹಳ ದೇಶಗಳಲ್ಲಿ ಆಂಗ್ಲ ಸಾಹಿತ್ಯ ಬೆಳೆಯಲಾರಂಭಿಸಿ ಜಗತ್ತಿನಾದ್ಯಂತ ಬಹಳ ಬರಹಗಾರರಿದ್ದರು.[೧೧]

  • ಕಾವ್ಯ-ಪದ್ಯ:ಹಾರ್ಡಿ (1840-1928); ಬ್ರಿಡ್ಜಸ್ (1844-1930); ಥಾಂಪ್‍ಸನ್ (1859-1907) ; ಎ,ಇ.ಹೌಸ್‍ಮನ್ 1859-1936); ನಿವ್‍ಬೊಲ್ಟ್ (1862-) ಯೀಟ್ಸ್ -ವಿಲಿಯಮ್ ಬಟ್ಲರ್(1865-1939) 1923ರ ನೊಬೆಲ್ ವಿಜೇತ ; ರಸೆಲ್ ಎ.ಯಿ. (1867-1935) ; ಬಿನ್‍ಯೋನ್ (1869-)ಡೇವೀಸ್ W.ಊ. (1871-1940); ಡಿ ಲಾ ಮೇರಿ (1873-); ಮ್ಯಾಸ್‍ಫೀಲ್ಡ್(1878-) ; ಗಿಬ್‍ಸನ್ (1878-) ; ನೋಯಿಸ್ (1880-) ; ಅಬರ್‍ಕ್ರೊಂಬೆ (1881-) ; ಫ್ಲೆಕರ್ (1884-1915) ; ವೂಲ್ಪ್ (1885-) ; ಸಾಸೂನ್ (1886-) ; ವಿಂಡ್ಹಾಮ್ ಡೆವಿಸ್ (1896-) ; ಬ್ರೂಕ್ (1887-1915) ; ಎಡಿತ್‍ಸಿಟ್ವೆಲ್(1887-) ; ಟಿ.ಎಸ್.ಏಲಿಯಟ್ (1888-) ಗ್ರೀವ್ಸ್ (1895-); ಬ್ಲಂಡೆನ್ (1896-) ಡೇ ಲೆವಿಸ್ (1904-) ;ಡಬ್ಲು.ಎಚ್. ಆಡೆನ್ (1907-) ; ಸ್ಪೆಂಡರ್ (1909-)
  • ಕಾದಂಬರಿ:ಡಬ್ಲ್ಯು. ಎಚ್ ಹಡ್ಸನ್ (1841-1922); ಜಾರ್ಜ್, ಮೂರ್ (1852-1933); ಗಿಸ್ಸಿಂಗ್ (1857-1903); ಕೊನಾರ್ಡ್( 1857-1924); ವೆಲ್ಸ್ (1866-); ಬೆನೆಟ್ (1867-1931); ಗಾಲ್ಸವರ್ದಿ (1867-1933);ಡಗ್ಲಾಸ್ (*1868-) ಮಾಗ್ಹಮ್ 91874-) ಟಿ.ಎಫ್.ಪೊವಿಸ್ ( 1875-) ; ಫಾಸ್ರ್ಟರ್ (1879-); ವೂಲ್ಫ್ (1882-) ; ಜೋಯ್ಸ್ (1882-) ; ಮೆಕೆನ್ಜೀ (1883-) ; ವೆಬ್ (1883-1927) ; ವಾಲ್ ಪೋಲ್ (1884-) ; ಡಿ.ಎಚ್.ಲಾರೆನ್ಸ್ (1885-1930) ; ಎಡ್ವರ್ಡ ಥಾಮಮ್ಸನ್ ( 1886-) ; ವಿಂಡ್ಯಾಮ್ ಲೆವಿಸ್ (1886) ; ಸಾಸೂನ್ (1886-) ;ಎ.ಪಿ.ಹರ್ಬರ್ಟ (1890- ) ಡೇವಿಡ್ ಗಾರ್ನೆಟ್ 1892-) ; ಆಲ್ಡಿಂಗ್ಟನ್ (19892-) ಸೇಯರ್ಸ (1893-) ಜೆ.ಬಿ.ಪ್ರೀಸ್ಟ್ಲೀ (1894-) ; ಆಲ್ಡಸ್ ಹಕ್ಸ್ ಲೀ ( 1894-) ; ಗ್ರೇವ್ಸ್ (1895-) ಕ್ರೋನಿನ್ ( 1896-) ಓ’ಫ್ಲಾಹರ್ಟಿ (1897-) ಎಚ್.ಇ.ಬೇಟ್ಸ್ (1905-).
  • ವಿಮರ್ಶೆ:ಲಬ್ಬಾಕ್ (1879-)[೧೨][೧೩][೧೪][೧೫][೧೬]

ಇಪ್ಪತ್ತನೆಯ ಶತಮಾನದ ಸಾಹಿತ್ಯ[ಬದಲಾಯಿಸಿ]

ಥಾಮಸ್ ಸ್ಟೆರ್ನ್ಸ್ ಎಲಿಯಟ್ (1934)ಲೇಡಿ ಒಟ್ಟೊಲಿನ್ ಮೊರೆಲ್ ಅವರಿಂದ
ಡಬ್ಲ್ಯು ಬಿ ಯೇಟ್ಸ್
ಡಿ.ಎಚ್.ಲಾರೆನ್ಸ್
  • ಇಪ್ಪತ್ತನೆಯ ಶತಮಾನದ ಸಾಹಿತ್ಯ ಶ್ರೀಮಂತವಾಗಿದೆ. ವೈವಿಧ್ಯಮಯವಾಗಿದೆ. ಈ ಸಾಹಿತ್ಯವು ಹಲವು ರಾಜಕೀಯ, ಸಾಮಾಜಿಕ ಮತ್ತು ಸಾಹಿತ್ಯಕ ಪ್ರಭಾವಗಳಿಗೆ ಒಳಗಾಯಿತು. ಈ ಶತಮಾನದ ಪೂರ್ವಾರ್ಧವು ಎರಡು ಜಾಗತಿಕ ಸಮರಗಳನ್ನು ಕಂಡಿತು. ಕೈಗಾರಿಕಾ ಕ್ರಾಂತಿಯಿಂದ ಅಭೂತಪೂರ್ವ ಆರ್ಥಿಕ ಕ್ರಾಂತಿಯನ್ನು ಸಮೃದ್ಧಿಯನ್ನು ತಂದಿದ್ದ ವಿಜ್ಞಾನ, ತಂತ್ರಜ್ಞಾನಗಳು ಯುದ್ಧಕ್ಕೆ ಕಾಣಿಕೆ ನೀಡಿ ಹಿಂದೆ ಎಂದೂ ಇಲ್ಲದಷ್ಟು ಯುದ್ಧಗಳು ಕ್ರೂರವೂ ವಿನಾಶಕವೂ ಆಗುವಂತೆ ಮಾಡಿದವು. ವಿಜ್ಞಾನ-ತಂತ್ರಜ್ಞಾನಗಳ ಕ್ರೂರ ಮುಖದ ಅನಾವರಣವಾಯಿತು. ಈ ಅವಧಿಯಲ್ಲೇ ಕಾರ್ಲ್ ಮಾಕ್ರ್ಸ್‍ನ ಸಿದ್ಧಾಂತಗಳು ಹಬ್ಬಿ ಕಾರ್ಮಿಕರ ಚಳವಳಿಗಳು ಬಲವಾದವು. ಕಾರ್ಮಿಕ ಘರ್ಷಣೆಗಳೂ ಪ್ರಾರಂಭವಾದವು. ಫ್ರಾಯ್ಡ್‍ನ ಮನಶ್ಯಾಸ್ತ್ರದಲ್ಲಿ ರೂಪಿಸಿದ ಸಿದ್ಧಾಂತಗಳು ಮನುಷ್ಯರನ್ನು ಬೆಚ್ಚಿ ಬೀಳಿಸಿದವು. ಮನುಷ್ಯನು ಮನುಷ್ಯನನ್ನು ಅರ್ಥಮಾಡಿಕೊಳ್ಳಲು ಹೊಸ ವಿಧಾನಗಳನ್ನು ಅನುಸರಿಸಿದ. ವಿದ್ಯುಚ್ಛಕ್ತಿ, ಚಲನಚಿತ್ರಗಳು ಬದುಕಿನಲ್ಲಿ ಕ್ರಾಂತಿಯನ್ನುಂಟುಮಾಡಿದವು. ಕಾಲ-ದೇಶಗಳ ಮೇಲಿನ ವಿಜಯ ಇನ್ನೂ ವ್ಯಾಪಕವಾಯಿತು. ದೇಶದ ಒಳಗಡೆ ಸ್ವಯಂಚಾಲಿತ ವಾಹನಗಳ ವೇಗ, ಬಳಕೆ ಹೆಚ್ಚಾದವು. ಜನತೆಯ ಶಿಕ್ಷಣವೂ ಸರ್ಕಾರದ ಹೊಣೆ ಎಂಬ ಅರಿವು ಮೂಡಿತು. 1919ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪ್ರಾಪ್ತವಾಯಿತು. ಕಾರ್ಮಿಕನಿಗೂ ಈ ಹಕ್ಕು ಲಭ್ಯವಾಯಿತು. 1928ರಲ್ಲಿ 21 ವರ್ಷವಾದವರಿಗೆಲ್ಲ ಮತದಾನದ ಹಕ್ಕನ್ನು ಕೊಡಲಾಯಿತು. ಇಂಗ್ಲೆಂಡ್ ಮುಕ್ತ ವ್ಯಾಪಾರ (ಫ್ರೀ ಟ್ರೇಡ್) ದಿಂದ ರಕ್ಷಣಾನೀತಿ (ಪ್ರೊಟೆಕ್ಷ್‍ನಿಸ್ಟ್)ಗೆ ವಾಲಿತು. ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಬಲವಾಯಿತು. ದಕ್ಷಿಣ ಆಫ್ರಿಕದಲ್ಲಿ ಬೋಯರ್ ಯುದ್ಧ ನಡೆಯಿತು. ಬ್ರಿಟಿಷ್ ಸಾಮ್ರಾಜ್ಯಷಾಹಿಗೆ ಸವಾಲುಗಳು ಬಂದವು.
  • ಈ ಶತಮಾನದ ಉತ್ತರಾರ್ಧದಲ್ಲಿ ಬಾಂಬ್‍ನ ಭಯಂಕರ ಶಕ್ತಿಯಿಂದ ಜಗತ್ತು ಇನ್ನೂ ತಲ್ಲಣಿಸುತ್ತಿತ್ತು. ಬ್ರಿಟಿಷ್ ಸಾಮ್ರಾಜ್ಯವು ಕರಗಿ ಹೋಗಿ ಅದರ ರಾಜಕೀಯ ಪ್ರಾಬಲ್ಯ ಕುಗ್ಗಿತ್ತು. ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿತು. ವಿಜ್ಞಾನ-ತಂತ್ರಜ್ಞಾನಗಳು ಬೆಳೆದು ಕಾಲ, ದೇಶಗಳ ಮೇಲೆ ಪ್ರಭುತ್ವ ಹೆಚ್ಚಾಯಿತು. ಕಂಪ್ಯೂಟರ್ ಬದುಕನ್ನೇ ಕ್ರಾಂತಿಗೊಳಿಸಿತು. ಜಗತ್ತಿನಲ್ಲಿ ಎರಡು ಬಣಗಳ ಸ್ಪರ್ಧೆ ತೀವ್ರವಾಗಿ ಘರ್ಷಣೆಗಳೂ ಶೀತಲ ಸಮರವೂ ತೀಕ್ಷ್ಣವಾದವು. ಆದರೆ ಇದ್ದಕ್ಕಿದಂತೆ ಸೋವಿಯೆಟ್ ರಷ್ಯ ಕರಗಿ ಹೋಗಿ, ರಾಜಕೀಯ ಸಮೀಕರಣಗಳು ಬದಲಾದವು. ಇಂಗ್ಲೆಂಡ್, ಜಪಾನ್‍ನಂತಹ ದೇಶಗಳಿಂದ ಆರ್ಥಿಕವಾಗಿ ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಯಿತು. ಜಗತ್ತಿನ ಇತರ ಭಾಗಗಳ ಚಿಂತನೆಗಳು ಮತ್ತು ಸಾಹಿತ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾದವು. ಐನ್‍ಸ್ಟೀನನ ಸಾಪೇಕ್ಷ ಸಿದ್ಧಾಂತವೂ ಅನಂತರದ ವೈಜ್ಞಾನಿಕ ಬೆಳವಣಿಗೆಗಳು ಜಗತ್ತಿನ ಚಿಂತನೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದವು.

ಜಾರ್ಜಿಯನ್ ಕವಿಗಳು[ಬದಲಾಯಿಸಿ]

  • ಈ ಶತಮಾನದ ಪ್ರಾರಂಭದ ವರ್ಷಗಳಲ್ಲಿ ಕಾವ್ಯರಚನೆ ಮಾಡಿದ ಕವಿಗಳನ್ನು `ಜಾರ್ಜ್‍ಯನ್ ಕವಿಗಳು ಎಂದು ಕರೆಯುತ್ತಾರೆ. ಇವರಲ್ಲಿ ಬಹು ಜನಪ್ರಿಯತೆಗಳಿಸಿದವನು ರೂಪರ್ಟ್ ಬ್ವುಕ್ (1893-1918). ಈ ಕವಿಗಳು ನೇರವಾಗಿ ಮಹಾಯುದ್ಧದಲ್ಲಿ ಭಾಗವಹಿಸಿದವರು. ಇವರಲ್ಲಿ ಬಹು ಮಂದಿ ಚಿಕ್ಕ ವಯಸ್ಸಿನಲ್ಲಿ ಯುದ್ಧಕ್ಕೆ ಬಲಿಯಾದರು. ಇವರು ಯುದ್ಧದ ನೋವು, ದೇಶಾಭಿಮಾನ ಇವುಗಳಿಗೆ ದನಿಕೊಡುತ್ತಾರೆ. ವಾಲ್ಟರ್ ಡಿ.ಟಿ.ಮೇಕ್, ಡಿ.ಎಚ್.ಲಾರೆನ್ಸ್ ಡಬ್ಲ್ಯು ಬಿ ಯೇಟ್ಸ್, ಟಿ. ಎಸ್. ಎಲಿಯಟ್, ಡಬ್ಲ್ಯು ಬಿ.ಆಡನ್ ಶತಮಾನದ ಪೂರ್ವಾರ್ಧದ ಪ್ರಮುಖ ಕವಿಗಳು. ಯೇಟ್ಸ್‍ನ ಕವನಗಳು ಬದುಕಿನ ಎಲ್ಲ ಅನುಭವಗಳನ್ನು ಸ್ವೀಕರಿಸಿ, ತನ್ನೊಳಗಿನ ತಳಮಳ-ನಿರಾಸೆ-ಭರವಸೆ ಯಾವುದನ್ನು ಮುಚ್ಚಿಡದೆ, ಶಕ್ತವಾದ ವ್ಯಕ್ತಿತ್ವದಿಂದ ಮೂಡಿದ ಕನವಗಳು. ಎಲಿಯೆಟ್, ಮೊದಲ ಮಹಾಯುದ್ಧದ ನಂತರ ಮೂಡಿದ ನಿರಾಸೆ, ಆಧ್ಯಾತ್ಮಿಕ ಶೂನ್ಯ ಇವುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅಭಿವ್ಯಕ್ತಿಯ ರೀತಿ ಹಿಂದಿನ ಕಾವ್ಯಕ್ಕಿಂತ ತೀರ ಭಿನ್ನವಾಗಿದ್ದು ಹೊಸ ಯುಗಕ್ಕೆ ನಾಂದಿಯಾಯಿತು. ಅನಂತರದ ವರ್ಷಗಳಲ್ಲಿ ಸಮಾಧಾನವನ್ನು ಕಂಡುಕೊಂಡ ಎಲಿಯಟ್ ಬರೆದ `ದ ಫೋರ್ ಕ್ಯಾರ್ಟೆಟ್ಸ್ ಶತಮಾನದ ಅತ್ಯಂತ ಮಹತ್ವದ ಚಿಂತನೆಯ ಕಾವ್ಯವಾಯಿತು. ಉತ್ತರಾರ್ಧದಲ್ಲಿ ಫಿಲಿಪ್ ಲಾರ್ಕಿನ್, ಟೆಡ್ ಹ್ಯೂಸ್, ಇವನ ಹೆಂಡತಿ ಸಿಲ್ವಿಯ ಪ್ಲಾವ್, ಪೀಟರ್ ಪೋರ್ಟರ್ ಮೊದಲಾದವರು ಪ್ರಮುಖ ಕವಿಗಳು.

ನಾಟಕ[ಬದಲಾಯಿಸಿ]

  • ರೊಮ್ಯಾಂಟಿಕ್ ಯುಗ ಮತ್ತು ವಿಕ್ಟೋರಿಯನ್ ಯುಗಗಳಲ್ಲಿ ಗಮನಾರ್ಹ ನಾಟಕಕಾರರು ಬರಲಿಲ್ಲ. 20ನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರಾರಂಭದಲ್ಲಿ ನಾಟಕಕ್ಕೆ ಸ್ವಲ್ಪ ಜೀವಕಳೆ ನೀಡಿದವರು ಆರ್ಥರ್ ಹೆನ್ರಿ ಜೋನ್ಸ್ ಮತ್ತು ಆರ್ಥರ್ ವಿಂಗ್ ಪಿನಿಡೊ. ಆದರೆ, ನಾಟಕ ಮಂದಿರಕ್ಕೆ ಹೊಸ ಜೀವ, ಚೈತನ್ಯ ನೀಡಿದವನು ಜಾರ್ಜ್ ಬರ್ನಾರ್ಡ್ ಷಾ. ನಾಟಕಮಂದಿರವನ್ನು ಚಿಂತನೆಯ ಮಂದಿರವನ್ನಾಗಿ, ಸಾಮಾಜಿಕ ಕ್ರಾಂತಿಯ ರಂಗವನ್ನಾಗಿ ಮಾಡಬಯಸಿದ. ಇವನ ಮಾತಿನ ಚಮತ್ಕಾರ ಅದ್ಭುತವಾದದ್ದು. ವಾದ ವಿವಾದಗಳೆಂದರೆ ಉತ್ಸಾಹ. ನಾಟಕಗಳನ್ನು ಪ್ರಕಟಿಸುವಾಗ ಸುದೀರ್ಘ ಮುನ್ನುಡಿಗಳನ್ನು ಬರೆದ. ಮನುಷ್ಯ ಸ್ವಭಾವವನ್ನು ಆಳವಾಗಿ ಗ್ರಹಿಸದಿದ್ದರೂ ರಂಗಮಂದಿರದಲ್ಲಿ ಮಾತಿನ ಮಿಂಚಿನಿಂದ, ಮೋಡಿಯಿಂದ, ಐರನಿಯಿಂದ ಅತ್ಯಂತ ಪರಿಣಾಮಕಾರಿ ನಾಟಕಕಾರನಾದ ಈಗ ಆತನ ನಾಟಕಗಳ ಹೊಳಪು ಮಾಸಿದೆ. ಜಾನ್ ಗಾಲ್ಸ್ ವರ್ದಿ, ಸೀನ್ ಒಡೇಸಿ, ಟೆರೆನ್ಸ್ ರ್ಯಾಟಿಗನ್ ಗಮನಿಸಬೇಕಾದ ಇತರ ನಾಟಕಕಾರರು. ಯೇಟ್ಸ್ ಮತ್ತು ಎಲಿಯೇಟ್ ಕಾವ್ಯರೂಪಕ (ಪೊಯಟಿಕ್ ಡ್ರಾಮ)ಕ್ಕೆ ಮತ್ತೆ ಜೀವ ನೀಡಿದರು. ಕ್ರಿಸ್ಟಫರ್ ಫ್ರೈ, ಜೆ.ಬಿ. ಪ್ರೀಸ್ಟ್‍ಲಿ, ಆಡನ್, ಕ್ರಿಸ್ಟಫರ್ ಇಷರ್‍ವುಡ್ ಇವರು ಇದೇ ಕಾಲದ ನಾಟಕಕಾರರು. ಜೆ.ಎಂ.ಸಿಂಗ್, ಸಾಮರ್‍ಸೆಟ್ ಮಾಮ್, ನೊಯೆಲ್ ಕಾರ್ಡ್ ವೈನೋದಿಕಗಳನ್ನು ಬರೆದರು.
  • 1956ರ ಮೇ 8ರಂದು ಜಾನ್ ಅಸ್‍ಬಾರ್ನ್‍ನ `ಲುಕ್ ಬ್ಯಾಕ್ ಇನ್ ಆಂಗರ್ ಎನ್ನುವ ನಾಟಕವು ಪ್ರದರ್ಶಿತವಾಯಿತು. ಇದರೊಂದಿಗೆ ಇಂಗ್ಲಿಷ್ ನಾಟಕ ಹೊಸ ಯುಗಕ್ಕೆ ಕಾಲಿಟ್ಟಿತು. `ದಿ ಆ್ಯಂಗ್ರಿ ಯಂಗ್ ಮ್ಯಾನ್ ಥಿಯೇಟರ್ ಜನ್ಮತಾಳಿತು. ಎರಡನೆಯ ಮಹಾಯುದ್ಧದ ನಂತರ ತರುಣ ಜನಾಂಗದಲ್ಲಿ ಮೊಳಕೆ ಇಟ್ಟ ಅಸಮಾಧಾನ, ಕ್ರೋಧ ನಿರಾಸೆ ಎಲ್ಲ ಈ ಬಗೆಯ ನಾಟಕಗಳಲ್ಲಿ ಪ್ರಕಟವಾದವು. ಒಂದು ವರ್ಷದ ನಂತರ ಪ್ರದರ್ಶಿತವಾದ ಸ್ಯಾಮ್ಯುಎಟ್ ಬೆಕೆಟನ ನಾಟಕ `ವೆಯ್‍ಟಿಂಗ್ ಫಾರ್ ಗೋಡೋ ಮನುಷ್ಯನನ್ನು ಅವನ ಮೂಲಸ್ಥಿತಿಗೆ, ಅತ್ಯಂತ ನಿಸ್ಸಹಾಯಕ ಮತ್ತು ಅನಿಶ್ಚಯತೆಗಳ ಸ್ಥಿತಿಗೆ ಇಳಿಸಿ, ಯಾವುದೇ ಆಸೆ-ಭರವಸೆಗಳ ಕನ್ನಡಕವಿಲ್ಲದೆ ಬದುಕಿನ ವಾಸ್ತವಿಕತೆಯನ್ನು ಕಾಣುವ ಪ್ರಯತ್ನ. ಇದರೊಂದಿಗೆ `ಅಬ್ಸರ್ಡ್ ಥಿಯೇಟರ್ ಪ್ರಾರಂಭವಾಯಿತು. ಈ ಕಾಲದ ಇತರ ಗಮನಾರ್ಹ ನಾಟಕಕಾರರು ಆರ್ನಲ್ಡ್ ವೆಸ್ಕರ್, ಜಾನ್ ಆರ್ಡನ್, ಎಡ್ವರ್ಡ್ ಬಾಂಡ್ ಮೊದಲಾದವರು, ವೈನೋದಿಕ ಪ್ರಕಾರದಲ್ಲಿ ಹೆರಾಲ್ಡ್ ಪಿಂಟರ್, ಟಾಮ್ ಸ್ಟಾಫರ್ಡ್, (ಶ್ರೀಮತಿ) ಕಾವಿಟ್ ಚರ್ಚಿಲ್ ಮೊದಲಾದವರು.
  • ಈ ಅವಧಿಯಲ್ಲಿ ಇಂಗ್ಲಿಷ್ ನಾಟಕವು ಹಲವು ಆಂದೋಲನಗಳನ್ನು ಕಂಡಿತು. ಇವುಗಳಲ್ಲಿ ಪ್ರಮುಖವಾದವು ವರ್ಕರ್ಸ್ ಥಿಯೇಟರ್ ಮೂವ್‍ಮೆಂಟ್, ಫೆಮಿನಿಸ್ಟ್ ಥಿಯೇಟರ್, ಐರಿಷ್ ಥಿಯೇಟರ್ ಮತ್ತು ಥಿಯೇಟಿಕ್ ಆಫ್ ದಿ ಅಬ್ಸರ್ಡ್

ಕಾದಂಬರಿ ಪ್ರಕಾರದಲ್ಲಿ ಮಧ್ಯಂತರ ಅವಧಿ[ಬದಲಾಯಿಸಿ]

  • ಇಪ್ಪತ್ತನೇ ಶತಮಾನ:
ಥಾಮಸ್ ಹಾರ್ಡಿ
  • ಕಾದಂಬರಿ ಪ್ರಕಾರದಲ್ಲಿ 1900ರಿಂದ 1920ರವರೆಗೆ ಮಧ್ಯಂತರ ಅವಧಿ, ವಿಕ್ಟೋರಿಯ, ಯುಗದಿಂದ ಆಧುನಿಕ ಯುಗಕ್ಕೆ ಸೇತುವೆ. 1920ರ ದಶಕದಲ್ಲಿ ಜೇಮ್ಸ್ ಜಾಯ್ಸ್‍ನ `ಯೂಲಿಸಿಸ್(1922), ವರ್ಜೀನಿಯ ವುಲ್ಫಳ `ಮಿಸೆಸ್ ಡಾಲೊನೆಟ್ (1925) ಮತ್ತು ಡಿ.ಎಚ್. ಲರೆನ್ಸನ ಕಾದಂಬರಿಗಳು ಹೊಸ ಯುಗದ ಉದಯವನ್ನು ಸ್ಪಷ್ಟವಾಗಿ ಸಾರಿದವು. ಹಾರ್ಡಿಂಜ್ ಕಾದಂಬರಿಗಳಲ್ಲಿಯೂ ಕಥಾವಸ್ತುವಿಗೆ ಪ್ರಾಧಾನ್ಯ, ಕಥಾವಸ್ತುವು ಹಲವು ಘಟನಾವಳಿಗಳ ಸರಪಳಿ. ಆದರೆ ಕ್ರಮೇಣ ಕಥಾವಸ್ತುವಿನ ಪ್ರಾಧಾನ್ಯ ಕಡಿಮೆಯಾಯಿತು. `ಓಪನ್ ಎಂಡೆಡ್ ಕಾದಂಬರಿಗಳು (ಪಾತ್ರಗಳ ಪ್ರಾಪಂಚಿಕ ಸ್ಥಿತಿಯನ್ನು ಒಂದು ಸ್ಪಷ್ಟ ಘಟ್ಟಕ್ಕೆ ತಂದು ನಿಲ್ಲಿಸದಿರುವ ಕಾದಂಬರಿಗಳು) ಹೆಚ್ಚಾದವು. ಕಾದಂಬರಿಯಲ್ಲಿ ನೈತಿಕ ನಿಲುವು, ಮನುಷ್ಯನ ಬದುಕಿನ ದರ್ಶನ ಇವು ಮೈದಾಳಿದವು. ಕಾಲ (ಟೈಂ)ದ ಸ್ವರೂಪದಲ್ಲಿ ಆಸಕ್ತಿ ಬೆಳೆಯಿತು. ಭಾಷೆಯ ಸಂವಹನ ಸ್ವರೂಪದಲ್ಲಿ ಆಸಕ್ತಿ ಉಂಟಾಯಿತು
  • ಇಂಗ್ಲಿಷ್ ಕಾದಂಬರಿಯ ಚರಿತ್ರೆಯಲ್ಲಿ ಹೆನ್ರಿ ಜೇಮ್ಸ್‍ನ ಸ್ಥಾನದ ಬಗ್ಗೆ ವಿವಾದ ಉಂಟು. ಅವನು ಹುಟ್ಟಿದುದು ಅಮೆರಿಕದಲ್ಲಿ. 33ನೇ ವರ್ಷದಲ್ಲಿ ಇಂಗ್ಲೆಂಡಿಗೆ ಬಂದು ನೆಲಸಿದ. ಇವನು ಪಾತ್ರಗಳ ಮನಸ್ಸಿನಲ್ಲಿಳಿದು ಅನುಭವವನ್ನು ಅವರ ಪ್ರಜ್ಞೆಯೊಳಗಿಂದ ಕಾಣುತ್ತಾನೆ. ಈತನ ಗುರಿ, `ಸಂಪೂರ್ಣ ಮನುಷ್ಯನನ್ನು ಆತನ ಆವರಣದಲ್ಲಿ ಚಿತ್ರಿಸುವುದು.
  • ಇವನಿಗೆ ಮುಖ್ಯವಾಗಿದ್ದುದು ಒಂದು ದೃಷ್ಟಿಕೋನ. ದೃಷ್ಟಿಕೋನವೇ ಕಾದಂಬರಿಯ ಆಧಾರ. ಮುಖ್ಯ ಪಾತ್ರದ ಮನಸ್ಸಿನೊಳಗೆ ಇಳಿದು ಅದರೊಳಗಿಂದ ಇವನ ಪಾತ್ರಗಳನ್ನು ಕಾಣುತ್ತಾನೆ. ಇವನು ಕಾದಂಬರಿಯ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ. ಜಾನ್ ಗಾಲ್ಸ್‍ವರ್ದಿಯ `ದ ಫಾರ್‍ಸೈಟ್ ಸಾಗಾ; ಶ್ರೀಮಂತವರ್ಗದ ವಿಡಂಬನೆ. ಎಚ್.ಜಿ.ವೆಲ್ಸ್ `ಸೈಂಟಿಫಿಕ್ ಫಿಕ್‍ಷನ್ ಅಥವಾ `ವೈಜ್ಞಾನಿಕ ಕಾಲ್ಪನಿಕ (ಕಾದಂಬರಿ) ರೂಪವನ್ನು ಬಲಗೊಳಿಸಿದವನು. `ದ ಟೈಮ್ ಮೆಷೀನ್ `ದ ವಾರ್ ಆಫ್ ದ ವಲ್ಡ್ರ್ಸ್ ಮುಂತಾದ ಕಾದಂಬರಿಗಳಲ್ಲಿ ವಿಜ್ಞಾನವು ಗೆದ್ದುಕೊಂಡ ಜ್ಞಾನಕ್ಕೆ ಕಲ್ಪನೆಯ ರೆಕ್ಕೆಗಳನ್ನು ಕೊಡುತ್ತಾನೆ.
1902 ರಲ್ಲಿ ವರ್ಜೀನಿಯಾ ವೂಲ್ಫ್ - ಜಾರ್ಜ್ ಚಾರ್ಲ್ಸ್ ಬೆರೆಸ್‌ಫೋರ್ಡ್ -ನಿಂದ ಪುನಃಸ್ಥಾಪನೆ
  • ಥಾಮಸ್ ಹಾರ್ಡಿ ನಿರಾಶಾವಾದಿ. ಕ್ರೈಸ್ತಮತದ ಕರುಣಾಯ ದೇವನ ಪರಿಕಲ್ಪನೆಯನ್ನು ತಿರಸ್ಕರಿಸಿ, ಮನುಷ್ಯನ ಗುಣ, ಯೋಗ್ಯತೆಗಳಿಗೆ ಲಕ್ಷ್ಯಕೊಡದ, ತನ್ನದೇ ಗುರಿ ಇರುವ ಒಂದು ಪ್ರಬಲ ಅದೃಶ್ಯ ಶಕ್ತಿಯನ್ನು ಕಂಡ ಶ್ರೇಷ್ಠ `ಟ್ರ್ಯಾಜಿಕ್ ಕಾದಂಬರಿಗಳನ್ನು ಬರೆದ. ಈ ಕಾದಂಬರಿಗಳಲ್ಲಿ ಮಾನವ ಕುಲವನ್ನು ನಿಗೂಢ ವಿಶ್ವದ ಹಿನ್ನೆಲೆಯಲ್ಲಿ ಕಾಣುತ್ತೇವೆ. ಇವನು ಆಧುನಿಕ ಕಾದಂಬರಿಗೆ ಸಿದ್ಧತೆ ಮಾಡಿದವನು. ಡಿ.ಎಚ್.ಲಾರೆನ್ಸ್, ತನ್ನ ಕಾಲದಲ್ಲಿ ಅಶ್ಲೀಲ ಬರಹಗಾರ ಎನ್ನುವ ಆಪಾದನೆಯನ್ನು ಎದುರಿಸಿದ. ಬದುಕನ್ನು ಒಪ್ಪಿಕೊಳ್ಳಬೇಕು, ಸಹಜವಾಗಿ ಅನುಭವಿಸಬೇಕು ಎನ್ನುವುದು ಆತನ ನಿಲುವು. ಜೋಸೆಫ್ ಕಾನ್ರಾಡ್ `ಮಾಂಟಾಜ್ ಪರಿಣಾಮವನ್ನು ಸಾಧಿಸುತ್ತಾನೆ. ಅನುಭವದ ಸಂಕೀರ್ಣತೆಯನ್ನು ಮನದಟ್ಟು ಮಾಡಿಕೊಡುತ್ತಾನೆ. ಜಾರ್ಜ್ ಆರ್‍ವೆಲ್ (ಎತಿಕ್ ಬ್ಲೇರ್) ಎರಡು ರಾಜಕೀಯ ಕಾದಂಬರಿಗಳನ್ನು ಬರೆದ, ಎರಡೂ (`ಅನಿಮಲ್ ಫಾರ್ಮ್, `ನೈನ್‍ಟೀನ್ ಎಯ್ಟಿಫೋರ್) ವಾಮಪಂಥದ ಸಿದ್ಧ ಪದಬೃಂದಗಳನ್ನು ಬಳಸುತ್ತಲೇ ಅದಕ್ಕೆ ದ್ರೋಹ ಮಾಡುವುದು ಎಷ್ಟು ಸುಲಭ ಎನ್ನುವುದನ್ನೂ ತೋರಿಸುತ್ತವೆ. ಜೇಮ್ಸ್ ಜಾಯ್ಸಿನ ಹಲವು ಕಾದಂಬರಿಗಳಲ್ಲಿ `ಯೂಲಿಸಿಸ್ ಅತ್ಯಂತ ಪ್ರಸಿದ್ಧವಾದದ್ದು. ಈ ಬೃಹತ್ ಕಾದಂಬರಿ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಡೆಯುವ ಕ್ರಿಯೆಯನ್ನು ನಿರೂಪಿಸುತ್ತದೆ. ಕಾದಂಬರಿಯು ಸಂಕೇತಗಳಿಂದ ತುಂಬಿಹೋಗಿದೆ. ಭಾಷೆಗೆ ಅಸಾಧಾರಣ ಗಮನಕೊಟ್ಟು, ಪದಪದಕ್ಕೂ, ವಾಕ್ಯವಾಕ್ಯಕ್ಕೂ ವಾಕ್ಯದ ಲಯಕ್ಕೆ ಗಮನಕೊಟ್ಟು ಜಾಯ್ಸ್ ಬರೆದ. ಇವನು `ಸ್ಟೀಮ್ ಆಫ್ ಕಾನ್‍ಷಸ್‍ನೆಸ್ ತಂತ್ರವನ್ನು ಬಳಸಿದ. ವರ್ಜಿನಿಯ ವುಲ್ಫ್ ಸಹ ಇದೇ ತಂತ್ರವನ್ನು ಬಳಸಿದಳು. ಇ.ಎಂ.ಫಾರ್‍ಸ್ಟರ್, ಐ.ವಿ.ಕಾಂಪ್ಟನ್-ಬರ್ನೆಟ್, ಆಲ್ಡಸ್ ಹಕ್ಸ್‍ಲಿ ಈ ಕಾಲದ ಇತರ ಗಮನಾರ್ಹ ಕಾದಂಬರಿಕಾರರು.
  • ಅನಂತರದ ಅವಧಿಯ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬ ಗ್ರಹಾಂ ಗ್ರೀನ್. ಕಷ್ಟವಾದ ನೈತಿಕ ಆಯ್ಕೆಗಳನ್ನು ಎದುರಿಸುವ ಮನುಷ್ಯ ಇವನ ವಸ್ತು. ಭಗವಂತನ `ಗ್ರೇಸ್ (ಕೃಪೆ)ಗೆ ಇವನು ಮಹತ್ವ ನೀಡುತ್ತಾನೆ. ಆರ್ಥರ್ ಕೊಯ್‍ಸ್ಲರ್‍ನ ಬದುಕೇ ಅಸಾಧಾರಣ ಘಟನೆಗಳಿಂದ, ಅನುಭವಗಳಿಂದ ತುಂಬಿಹೋದದ್ದು. ಸ್ವಾತಂತ್ರ್ಯದ ಬಯಕೆ ಇವನ ಕಾದಂಬರಿಗಳಲ್ಲಿ ತೀವ್ರವಾಗಿದೆ. ವಿಲಿಯಂ ಗೋಲ್ಡಿಂಗನೊ ಸಮಾಜದ ಪರಂಪರೆ ಮತ್ತು ಕಟ್ಟುಪಾಡುಗಳಿಂದ ದೂರವಿರುವ ಮನುಷ್ಯರು ಕಷ್ಟವಾದ ನೈತಿಕ ಆಯ್ಕೆಗಳನ್ನು ಮಾಡುವುದನ್ನು ನಿರೂಪಿಸುತ್ತಾನೆ.
  • ಎರಡನೆಯ ಮಹಾಯುದ್ಧದ ನಂತರದ ಕಾಲ ನಿರಾಸೆ, ಗೊಂದಲಗಳ ಕಾಲ, ಬದುಕಿನ ಸ್ವರೂಪ-ಮೌಲ್ಯಗಳ, ಮತ್ತೊಂದು ಅನ್ವೇಷಣೆಯ ಕಾಲ. ಫಿಲಿಪ್ ಲಾರ್ಕಿನ್, ವಿಲಿಯಂ ಕೂಪರ್, ಜಾನ್ ವೇಯ್ನ್, ಮೊದಲಾದವರ ಕಾದಂಬರಿಗಳಲ್ಲಿ `ಆ್ಯಂಗ್ರಿ ಯಂಗ್ ಮ್ಯಾನ್ (ಕ್ಷುದ್ರ ತರುಣ)ನ ಮನಃಸ್ಥಿತಿಯನ್ನು ಕಾಣುತ್ತೇವೆ. ಡೇವಿಡ್ ಸ್ಕೋಂ ಆಂಗಸ್ ವಿಲ್ಸನ್ ಮೊದಲಾದವರ ಕಾದಂಬರಿಗಳಲ್ಲಿ `ಸೋಷಿಯಲ್ ರಿಯಲಿಸಂ' (ಸಾಮಾಜಿಕ ವಾಸ್ತವತೆ ಕಾಣುತ್ತದೆ. ಎರಡನೆಯ ಮಹಾಯುದ್ಧದ ಅನಂತರದ ಒತ್ತಡಗಳಿಂದ ತಪ್ಪಿಸಿಕೊಳ್ಳುವ `ಫ್ಯಾಂಟಸಿಗಳೂ ಕಾಣಿಸಿಕೊಂಡವು. ಜೇಮ್ಸ್ ಬಾಂಡ್‍ನ ಕಥೆಗಳನ್ನು ಐಯಾನ್‍ಫ್ಲೆಮಿಂಗ್ ಬರೆದ. ಹೆಡ್ಲಿ ಛೇಸ್ ಇಂಥವೇ ಪಲಾಯನ ಕಾದಂಬರಿಗಳನ್ನು ಬರೆದ. ಇವುಗಳಲ್ಲಿ ನೈತಿಕತೆಯ ಸುಳಿವೇ ಇಲ್ಲ. ಪಾಲ್ ಸ್ಕಾಟ್‍ನಂಥವರು ನಷ್ಟವಾದ ಸಾಮ್ರಾಜ್ಯವನ್ನು ವಸ್ತುವಾಗಿ ಆರಿಸಿಕೊಂಡರು. ಈ ಅವಧಿಯಲ್ಲಿ ಜೇನ್‍ರಿಸ್, ಅನಿತ ಬ್ಯುಕ್‍ನರ್ ಹಲವರು ಮಹಿಳೆಯರು ಕಾದಂಬರಿಗಳನ್ನು ಬರೆದರು.
  • ಇಪ್ಪತ್ತನೆಯ ಶತಮಾನದಲ್ಲಿ ಕಾದಂಬರಿಕಾರನು ತತ್ತರಿಸುವ ಅನುಭವಗಳಿಗೆ ಒಳಗಾದ. ಕಾದಂಬರಿಯು ವಸ್ತುಗಳನ್ನು ಆರಿಸಿಕೊಂಡಿತು. ಇದಕ್ಕೆ ಅನುಗುಣವಾಗಿ ರೂಪದಲ್ಲಿ ಪ್ರಯೋಗಗಳಾದವು. ನಿಯತಕಾಲಿಕಗಳ ಮೇಲೆ ಕಾದಂಬರಿಕಾರನ ಅವಲಂಬನೆ ಕಡಿಮೆಯಾದುದರಿಂದ ಹಲವು ರೀತಿಗಳಲ್ಲಿ ಆತನ ಸ್ವಾತಂತ್ರ್ಯ ವಿಸ್ತಾರವಾಯಿತು.

ಗದ್ಯ[ಬದಲಾಯಿಸಿ]

  • ಬದುಕು ಹಲವು ದಿಕ್ಕುಗಳಲ್ಲಿ ಚಾಚಿಕೊಂಡಂತೆ ಗದ್ಯವು ನಿರ್ವಹಿಸಬೇಕಾದ ಹೊಣೆಗಳೂ ಹೆಚ್ಚಿದವು. ಹಲವರು ತಮ್ಮ ಅನುಭವಗಳನ್ನು ನಿರೂಪಿಸಿ ಆತ್ಮವೃತ್ತಗಳನ್ನು ಬರೆದರು. ಹಲವರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ನೈತಿಕ ಸವಾಲುಗಳನ್ನು ಪರಾಮರ್ಶಿಸಿದರು. ವೇಗವಾಗಿ ಬೆಳೆಯುತ್ತಿದ್ದ ವಿಜ್ಞಾನದ ತಿಳವಳಿಕೆಯನ್ನು ಜನ ಸಾಮಾನ್ಯರಿಗೆ ಕೊಂಡೊಯ್ಯಲು ಮತ್ತು ವಿಜ್ಞಾನದ ಆವಿಷ್ಕಾರಗಳು ಬದುಕಿನ ಮೇಲೆ ಮಾಡುವ ಪ್ರಭಾವವನ್ನು ವಿಮರ್ಶಿಸಲು ವಿಜ್ಞಾನಿಗಳು ಪುಸ್ತಕಗಳನ್ನು ಬರೆದರು. ಜಗವು ಕಿರಿದಾದಂತೆ ಪ್ರವಾಸವೂ ಹೆಚ್ಚಿ, ಪ್ರವಾಸ ಸಾಹಿತ್ಯ ಬೆಳೆಯಿತು. ಇವೆಲ್ಲದರ ನಡುವೆ ಲಲಿತ ಪ್ರಬಂಧ ಸ್ಪಲ್ಪಮಟ್ಟಿಗೆ ಹಿಂದಕ್ಕೆ ಸರಿಯಿತು.
  • ವಿನ್ಸ್‍ಟನ್ ಚರ್ಚಿಲ್, ಲಾನ್ಸ್‍ಲಾಟ್ ಹಾಗ್‍ಬೆನ್, ಎಡ್ಮಂಡ್ ಬ್ಲಂಡನ್, ಜೆ.ಬಿ.ಎಸ್.ಹಾಲ್ಡೇನ್, ಎ.ಎಸ್.ಎಡಿಂಗ್‍ಟನ್, ಸಿ.ಇ.ಎಂ.ಜೋಡ್, ಬರ್ನಾರ್ಡ್ ಷಾ, ಬರ್‍ಟ್ರಂಡ್ ರಸೆಲ್, ಆಲ್ಡಸ್ ಹಕ್ಸ್‍ಲಿ ಮೊದಲಾದವರು ಈ ಯುಗದ ಪ್ರಸಿದ್ಧ ಗದ್ಯ ಬರಹಗಾರರು.(ನೋಡಿ- ಇಂಗ್ಲಿಷ್-ಸಾಹಿತ್ಯ-ವಿಮರ್ಶೆ)(ಪರಿಷ್ಕರಣೆ: ಎಲ್.ಎಸ್.ಎಸ್.)[೧೭]

ನೋಡಿ[ಬದಲಾಯಿಸಿ]

ಪೂರಕ ಮಾಹಿತಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

  • ೧.ಅ್ಯನ್ ಔಟಲೈನ್ ಹಿಸ್ಟರಿ ಆಪ್ ಇಂಗ್ಲಿಷ್ ಲಿಟರೇಚರ್: ವಿಲಿಯಂ ಹೆನ್ರಿ ಹಡ್ಸನ್ ;
  • ೨.ಇಂಗ್ಲಿಷ್ ಸಾಹಿತ್ಯ: ಆಂಗ್ಲೋ ಸ್ಯಾಕ್ಸನರ ಯುಗ;
  • ೩.Good English-Home Library Club-the Times of India Associated News Papersof Ceylon Ltd.1932)-ಒಳಗೊಂಡಿದೆ: A Concise Encyclopedia of English Literature compiled by A.C.Cawley M.A.(ಎ ಕಾನ್ಸೈಜ್ ಎನ್ಸೈಕ್ಲೋಪಿಡಿಯಾ ಆಫ್ ಇಂಗ್ಲಿಷ್ ಲಿಟರೇಚರ್ ಬೈ :ಎ.ಸಿ. ಕೌಲೀ ಎಮ್.ಎ.-ಟೈಮ್ಸ ಆಫ್ ಇಂಡಿಯಾ ಪಬ್ಲಿಕೇಶನ್ ಸಿಲೋನ್ 1932 ರ ಪ್ರತಿ ಕಾಪಿ ರೈಟ್ ಇಲ್ಲ.)
  • ೪(ಅಂಕಣಗಳಿಗೆ>)English literature
  • ೫.ಉಲ್ಲೇಖ:ಎನ್ಕಾರ್ಟಾ,

ಉಲ್ಲೇಖ[ಬದಲಾಯಿಸಿ]

  1. Davies 1990,p. 93.
  2. Angus Cameron (1983). "Anglo-Saxon literature" in Dictionary of the Middle Ages, v. 1, pp. 274–88.
  3. Magoun,
  4. Francis P jr, "The Oral-Formulaic Character of Anglo-Saxon Narrative Poetry", Speculum 28: 446–67.
  5. Donald K jr (1968), The Beowulf Poet: A Collection of Critical Essays, Englewood Cliffs: Prentice-Hall, pp. 83–113.
  6. Robinson 2001: ‘Like most Old English poems, Beowulf has no title in the unique manuscript in which it survives (British Library, Cotton Vitellius A.xv, which was copied round the year 1000 AD), but modern scholars agree in naming it after the hero whose life is its subject.’
  7. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಸಾಹಿತ್ಯ
  8. Chamberlain, D. "Judith: a Fragmentary and Political Poem", in Anglo-Saxon Poetry: Essays in Appreciation for John C
  9. Columbia University Studies in English and Comparative Literature (New York: Columbia University, 1937)
  10. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಸಾಹಿತ್ಯ
  11. Columbia University Studies in English and Comparative Literature (New York: Columbia University, 1937)
  12. ಅ್ಯನ್ ಔಟಲೈನ್ ಹಿಸ್ಟರಿ ಆಪ್ ಇಂಗ್ಲಿಷ್ ಲಿಟರೇಚರ್: ವಿಲಿಯಂ ಹೆನ್ರಿ ಹಡ್ಸನ್ ;
  13. ಇಂಗ್ಲಿಷ್ ಸಾಹಿತ್ಯ: ಆಂಗ್ಲೋ ಸ್ಯಾಕ್ಸನರ ಯುಗ
  14. Good English-Home Library Club-the Times of India Associated News Papersof Ceylon Ltd.1932)-ಒಳಗೊಂಡಿದೆ: A Concise Encyclopedia of English Literature compiled by A.C.Cawley M.A.(ಎ ಕಾನ್ಸೈಜ್ ಎನ್ಸೈಕ್ಲೋಪಿಡಿಯಾ ಆಫ್ ಇಂಗ್ಲಿಷ್ ಲಿಟರೇಚರ್ ಬೈ :ಎ.ಸಿ. ಕೌಲೀ ಎಮ್.ಎ.-ಟೈಮ್ಸ ಆಫ್ ಇಂಡಿಯಾ ಪಬ್ಲಿಕೇಶನ್ ಸಿಲೋನ್ 1932; ರ ಪ್ರತಿ ಕಾಪಿ ರೈಟ್ ಇಲ್ಲ.
  15. http://www.slideshare.net/mraiyah/a-brief-outline-of-english-literature ಅಂಕಣಗಳಿಗೆ;
  16. ಎನ್ಕಾರ್ಟಾ,
  17. https://kn.wikisource.org/s/1ph ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಂಗ್ಲಿಷ್ ಸಾಹಿತ್ಯ