ದಿ ಕ್ಯಾಂಟರ್ಬರಿ ಟೇಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A woodcut from William Caxton's second edition of The Canterbury Tales printed in 1483

ದಿ ಕ್ಯಾಂಟರ್ಬರಿ ಟೇಲ್ಸ್ಜೆಫ್ರಿ ಚಾಸರ್ ನ ಪ್ರಮುಖ ಕೃತಿ. ೧೪ನೇ ಶತಮಾನದ ಇಂಗ್ಲೆಂಡಿನ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಬೆಳವಣಿಗೆಯು ಅತೃಪ್ತಿದಾಯಕವಾಗಿತ್ತು. ಚಾಸರ್ ನ ಜೀವನ ಮತ್ತು ಸಾಹಿತ್ಯದ ಬೆಳವಣಿಗೆಯನ್ನು ಈ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವುದಾದರೆ ಅವನ ಬರವಣಿಗೆಗಳು ಇಂಗ್ಲೆಂಡಿನ ಪರಿಸ್ಥಿತಿಯನ್ನು ಚಿತ್ರಿಸುತ್ತವೆ. ಚಾಸರ್ ನ ಬರವಣಿಗೆ ಯಾತ್ರೆಯನ್ನು ಮೂರು ಕಾಲಾನುಕ್ರಮದಲ್ಲಿ ವಿಂಗಡಿಸಬಹುದು. ಅವುಗಳೆಂದರೆ ಫ್ರೆಂಚ್ ಕಾಲವಧಿಯ ಗ್ರಂಥಗಳು ಇಟಲಿ ಕಾಲಾವಧಿಯ ಗ್ರಂಥಗಳು ಹಾಗೂ ಇಂಗ್ಲೀಷ್ ಕಾಲಾವಧಿಯ ಗ್ರಂಥಗಳು. ಕ್ಯಾಂಟರ್ಬರಿ ಟೇಲ್ಸ್ ಇದು ಇಂಗ್ಲೀಷ್ ಕಾಲಾವಧಿಯಲ್ಲಿ ಬರೆಯಲ್ಪಟ್ಟಿದೆ. ಮಾಗ್ಮ್ನಮ್ ಒಪಸ್ ಎಂಬ ಕಥಾಪಾತ್ರ ಮತ್ತು ಪ್ರೊಲಾಗ್ ದೆ ಕ್ಯಾಂಟರ್ಬರಿ ಟೇಲ್ಸ್ ಅನ್ನು ಒಂದು ಅನುಪಮ ಕೃತಿಯೆಂದು ನಿರೂಪಿಸಿವೆ. ದಿ ಪ್ರೊಲಾಗ್ ನಲ್ಲಿ ಕಥಾಪಾತ್ರಗಳನ್ನು ಅತ್ಯುತ್ತಮವಾಗಿ ಚಿತ್ರಿಸಿದ್ದಾರೆ. ಚಾಸರ್ ತನ್ನ ಬರವಣಿಗೆಯಲ್ಲಿ ತೀರ್ಥಯಾತ್ರೆ ಮತ್ತು ಸಾಮಾಜಿಕ ಸ್ಥಿತಿಗತಿ, ವಿಶಿಷ್ಟ ಸಂಪ್ರದಾಯಗಳ ಬಗ್ಗೆ ಹೊಸ ಬೆಳಕು ಚೆಲ್ಲಿದ್ದಾನೆ. ವಸಂತ ಋತು ಮರುಕಳಿಸುವುದನ್ನು ವಿವರಿಸುವ ಮೂಲಕ ದಿ ಜನರಲ್ ಪ್ರೊಲಾಗ್ ಪ್ರಾರಂಭವಾಗುತ್ತದೆ. ಏಪ್ರಿಲ್ ಮಾಸವನ್ನು ವಿವರಾತ್ಮಕವಾಗಿ ಚಿತ್ರಿಸಿದ್ದಾರೆ. ಚಾಸರ್ ನ ಕಾಲಾವಧಿಯಲ್ಲಿ ಜನರಿಗೆ ಸಂತ ಥಾಮಸ್ ಬಕೆಟ್ ರಲ್ಲಿ ನಂಬಿಕೆಯುಟ್ಟಿತ್ತು ಇದು ತೀರ್ಥಯಾತ್ರೆ ಎಂಬ ಪರಿಕಲ್ಪನೆ ಉಗಮವಾಗಲು ಕಾರಣವಾಯಿತು. ಥಾಮಸ್ ಬಕೆಟ್ ಕ್ಯಂಟರ್ಬರಿಯ ಮುಖ್ಯ ಧರ್ಮಗುರುವಾಗಿದ್ದರು ಇವರು ಈಗಲೂ ರೋಮ್ ನ ಕ್ಯಥೋಲಿಕ್ ಕ್ರೈಸ್ತರಿಂದ ಪೂಜಿಸಲ್ಪಟ್ಟಿದ್ದಾರೆ. ಇವರು ಹೆನ್ರಿ ೨ ಯವರೊಡಗೂಡಿ ಇಂಗ್ಲೆಂಡಿನಲ್ಲಿ ಪ್ರಜಾ ಹಕ್ಕು ಮತ್ತು ಅಧಿಕಾರಕ್ಕಗಿ ಘರ್ಷಣೆಯಲ್ಲಿ ತೊಡಗಿದ್ದರು. ಆದ್ದರಿಂದ ಇವರು ಕ್ಯಂಟರ್ಬರಿಯ ಬಿಷಪ್ಪಿನ ಸಿಂಹಾಸನವಿರುವ ಆರಾಧನಾ ಮಂದಿರದಲ್ಲಿ ರಾಜನ ಅನುಯಾಯಿಗಳಿಂದ ಹತ್ಯೆಯಾದರು. ಲೇಖಕರು ಹೇಳುವಂತೆ ಯಾತ್ರಿಕರು ತೀರ್ಥಯಾತ್ರೆಗೂ ಮುನ್ನ ಮಾರ್ಗಮದ್ಯದಲ್ಲಿ ವಿಶ್ರಮಿಸಲು ಛತ್ರಗಳನ್ನು ಕಾದಿರಿಸುತ್ತಿದ್ದರು. ಅದನ್ನು ಟಬರ್ಡ್ ಇನ್ ಎಂದು ಕರೆಯುತ್ತಾರೆ. ೨೯ ಯಾತ್ರಿಕರ ಉತ್ತಮ ಸಮೂಹವು ಕ್ಯಂಟರ್ಬರಿಯ ತೀರ್ಥಯಾತ್ರೆಗೆ ಸಿದ್ದರಾಗಿದ್ದರು ಯ್ಯತ್ರಿಕ ಮುಖ್ಯಸ್ತನು ಮಾರ್ಗದಲ್ಲಿ ಹೋಗುವಾಗ ಉಳಿದ ಸಹ ಯಾತ್ರಿಕರಿಗೆ ತಲಾ ಎರೆಡೆರಡು ಕಥೆಗಳನ್ನು ಕ್ಯಾಂಟರ್ಬರಿಯ ಮಾರ್ಗದುದ್ದಕ್ಕೂ ಹಾಗೂ ಮತ್ತೆ ಮರಳುವಾಗಲೂ ತಲಾ ಎರೆಡೆರಡು ಕಥೆಗಳನ್ನು ಹೇಳುವಂತೆ ಹೇಳಿದನು. ನಂತರ ಉತ್ತಮ ಕಥೆಗಾರನಿಗೆ ಟಬರ್ಡ್ ಇನ್ ನಲ್ಲಿ ಉತ್ತಮ ಬಕ್ಷ್ಯಗಳನ್ನು ನೀಡುತ್ತಿದ್ದರು. ದಿ ಪ್ರೊಲಾ ವಸಂತದ ಉಗಮದಿಂದ ಪ್ರರಂಭವಾಗಿ ಅತೀ ಉದ್ದವಾದದ್ದು ಹಾಗೂ ಸಾಂಪ್ರಾದಾಯಿಕ ಹೋಲಿಕೆಯ ಸಾಮಾನ್ಯ ಕಥೆಯ ಪ್ರಾರಂಭವು ನಿದಿ೯ಷ್ಟ ಸ್ಥಳ ಮತ್ತು ಕಾಲದಲ್ಲಿ ಪ್ರರಂಭವಾಗುತ್ತದೆ. ಆದರೆ ಕಥೆಯ ಪಾತ್ರ ವಿಶ್ವ ಸಾಂದಯ೯ದ ವಸಂತದ ಶ್ರೀಮಂತಿಕೆ ಮತ್ತು ಜೀವನ ಶಕ್ತಿಯ ಆರಾಧನೆಯಲ್ಲಿ ಕಾಲದ ಮಿತಿಯಲ್ಲಿದೆ ಕಲಾತ್ಮಕ ಕಲ್ಪನೆಯಲ್ಲಿ ವಿಹರಿಸುವುದು. ಈ ಜನರಲ್ ಪ್ರೊಲಾಗ್ ೨೪ ಕಥೆಗಳ ಸರಪಳಿಯ ನಡುವೆ ನಡೆಯುವ ಸಂಭಾಷಣೆಯನ್ನು ಒಳಗೊಂಡಿದೆ. ಆ ೨೪ ಕಥೆಗಳಲ್ಲಿ ೩ ಕಥೆಗಳು ಪೂಣ೯ಗೊಂಡಿಲ್ಲ. ಅವು ಕುಕ್ ನ ಕಥೆಯಾದ ಪಕಿ೯ನ್ ಇದರಲ್ಲಿ ಬರುವ ಸೋಮಾರಿಯಾದ ಉದ್ಯೋಗಾಥಿ೯ ಅವನ ಪಾತ್ರವನು ಮನೋರಂಜಕವಾಗಿ ತೋರಿಸಲಾಗಿದೆ. ಚಾಸರ್ ನ ಬರವಣಿಗೆಯ ಗುಣಲಕ್ಷಣವನ್ನು ನೋಡುವುದಾದರೆ, ಚಾಸರ್ ಸಾಮಾಜಿಕ ಸ್ಥಿತಿಗೆ ಅನುಗುಣವಾಗಿ ಯಾತ್ರಿಕ ಸದಸ್ಯರ ಗುಣಲಕ್ಷಣಗಳನ್ನು ವಿವರಿಸುವಲ್ಲಿ ತನ್ನ ಅಮೂಲ್ಯ ಸಮಯವನ್ನು ಶ್ರಮಿಸಿದ್ದಾರೆ. ೧೪ ನೇ ಶತಮಾನದಲ್ಲಿನ ಇಂಗ್ಲಿಷ್ ಸಮಾಜದಲ್ಲಾದ ಹಟ್ಟತ್ತನೆಯ ಬದಲಾವಣೆಯನ್ನು ಯತ್ರಿಕರಲ್ಲಿ ಕಾಣಬಹುದು. ಈ ವಿಂಗಡನೆಯನ್ನು ಎಸ್ಟೇಟ್ಸ್ ಎಂದು ಕರೆಯಲಾಯಿತು. ಅವುಗಳೆಂದರೆ. ದಿ ಮಿಲಿಟರಿ-ಕ್ನೈಟ್, ಸ್ಕೆರ್ , ದಿ ಕ್ಲರ್ಜಿ-ಫ್ರೆಂಕಲಿನ ಮತ್ತು ಲೈಲ್ಟಿ ಎಂದು ವಗಿ೯ಕರಿಸಲಾಯಿತು. ಮೇಲಿನ ವಿವರೆಣೆಯು ಮಧ್ಯಕಾಲೀನ ಸಾಹಿತ್ಯದ ಪ್ರಕಾರವಾದ ಎಸ್ಟೇಟ್ಸ್ ನ ವಿಡಂಬನ ಕಾವ್ಯದ ಪ್ರಭಾವನ್ನು ಮರುಕಳಿಸುತ್ತವೆ. ೨೧ ದೀಘ೯ ಕಥೆಗಳು ಪೂಣ೯ಗೊಂಡಿವೆ. ದಿ ಕ್ನೆಟ್ ಟೈಲ್ ಇದನ್ನು ಮಾಡನ೯ ನವಾಲೆಟ್ ಗೆ ಹೋಲಿಸಬಹುದು. ಈ ಕಥೆಯಲ್ಲಿ ಪಾಲಮನ್ ಮತ್ತು ಅಸೈ೯ಟ್ ಎಂದು ಎರಡು ಯುವ ಕ್ನೈಟ್ಸ್ ಎಮಿಲ್ಲಿಯನ್ನು ಪ್ರೀತಿಸುತ್ತಾರೆ. ಆದರೆ ಎಮಿಲ್ಲಿ ಪಾಲಮನ್ ನ್ನ್ನು ಮದುವೆಯಾಗುವುದರೊಂದಿಗೆ ಈ ಕಥೆ ಸಂಪೂಣ೯ವಾಗುತ್ತದೆ. ದಿ ವೈಫ್ ಆಫ್ ಬಾಥ್ ಈಕೆ ಕ್ರೀಯಾಶೀಲಳು ಹಾಗೂ ವಿವಾದಶೀಲಳು. ಇವಳು ಹೇಳುವ ಕಥೆಯಲ್ಲಿ ಬರುವ ಸುಂದರ ಶ್ರೀಮಂತ ವೀರ ಅವನ ಕ್ರೂರತ್ವದ ಪರಿಣಾಮ "ಹೆಂಗಸರು ಅತಿಹೆಚ್ಚು ಯಾವುದನ್ನು ಆಸೆ ಪಡುತ್ತಾರೆ"? ಎಂಬ ಪ್ರಶ್ನೆಗೆ ಉತ್ತರಿಸುವ ಶಿಕ್ಷೆಗೆ ಗುರಿಯಾಗುತ್ತಾನೆ. ಈ ಪ್ರಶ್ನೆಗೆ ಒರ್ವ ಮುದುಕಿಯಿಂದ ಉತ್ತರ ಪಡೆದು ಆಕೆಯನ್ನು ವಿವಾಹವಾಗುತ್ತಾನೆ. ಉತ್ತರ ಪಡೆದು ಸಾವಿನಿಂದ ಪಾರಾದರು ತನ್ನ ಹೆಂಡತ್ತಿ ಮುದುಕಿಯು, ಕುರುಪಿಯಾಗಿದರಿಂದ ನೊಂದುಕೊಳ್ಳುತ್ತಾನೆ. ನಂತರ ಅವನ ತಪ್ಪಿನ ಅರಿವಾದನಂತರ ಆಕೆ ಸುಂದರ ಯುವತಿಯಾಗಿ ಬದಲಾಗುತ್ತಾಳೆ. ಇದನ್ನು ಅಲೌಖಿಕ ಶಕ್ತ್ತಿಯ ಕಥೆ ಎಂದು ಪರಿಗಣಿಸಬಹುದು.

ಅದೇ ರೀತಿ ಫ್ರೆಂಕಲಿನ ಮಾತ್ರಿಕ ಕಥೆಯ ಭಾಗ. ಪ್ರಿಯರ್ಸ್ ಟೇಲ್ಸ್ ನಲ್ಲಿ ಬರುವ ಯೋಮನ್ ಪಾತ್ರವು ತುಂಬಾ ಮೇಚ್ಚುಗೆಯು ಅಲೌಖಿಕ ಪಾತ್ರವೆಂದು ಸಾಬೀತ್ತಾಗಿದೆ. ದಿ ಕ್ಯನನ್ಸ ಯೋಮನ್ಸ್ ಪ್ರೊಲಾಗ ಟೀಲ್ ನಲ್ಲಿ ನಾವು ಕ್ಯನನ್ಸ ಮತ್ತು ಯೋಮನ್ ಪಾತ್ರಗಳು ಪಂಡಿತರು ಮಾಡುತ್ತಿದ ವಂಚನೆಯನ್ನು ಬಯಲಿಗೆಳೆದು ಜನರಲ್ಲಿ ಹರಿವನ್ನು ಮೂಡಿಸಿ ತ್ತೃಪ್ತಿದಾಯಕ ಕೆಲಸದಲ್ಲಿ ತೊಡಗುತ್ತಾರೆ.

ದಿ ಪ್ರೊಲಾಗ ನಲ್ಲಿ ಚಾಸರ್ ಭ್ರಷ್ಟಚಾರ ಮತ್ತು ಅಸಾಂಪ್ರಾದಾಯದ ಬಗ್ಗೆ ಚಿತ್ರಿಸಿದ್ದಾರೆ. ಉದಾ: ಸುಮೂನರ್ ಮತ್ತು ಪಾರಡನರ್ ಪಾತ್ರಗಳು. ಸುಮೂನರ್ ನೀತಿ ಭ್ರಷ್ಟನಾಗಿದ್ದ ಮತ್ತು ಪಾರಡನರ್ ಒಬ್ಬ ಆಶಾಪೂರಕ ವ್ಯಾಪಾರಸ್ಥನಾಗಿದ್ದ ಅವನು ತನ್ನ ವೃತ್ತಿಭಂಗಿಯಿಂದ ಜನರನ್ನು ವಂಚಿಸುತ್ತಿದ್ದನು. ಇದನ್ನು ಚಾಸರ್ ವ್ಯಂಗ್ಯವಾಗಿ "ಪಾರಡನರ್ ನಂತವನನ್ನು ಇಂಗ್ಲೆಂಡಿನಲ್ಲೆಲ್ಲಾ ಹುಡುಕಿದರು ಸಿಗುವುದಿಲ್ಲ" ಎಂದು ಟೀಕಿಸಿದ್ದಾರೆ. ದಿ ನುನ್ಯ್ಸ್ ಪ್ರಿಸ್ಟ ಕಥೆಯಾದ ದಿ ರುಸ್ಟರ್, ದಿ ಹೆನ್ ಮತ್ತು ದಿ ಫಾಕ್ಸ್ ಕಥೆಯು ಆತೀ ಹೆಚ್ಚು ಪ್ರಚಲಿತವಾಗಿರುವ ಬರಹಗಳಲ್ಲಿ ಒಂದು. ಈ ಕಥೆಯ ಮುಖ್ಯ ಕಾಯ೯ವು ಹಲವಾರು ಯಾತ್ರಾತಿ೯ಗಳ ನಡುವಿನ ಸಂಭಂದವನ್ನು ತೊರಿಸುವುದಾಗಿದೆ. ಅವರೆಲ್ಲರು ಸಹ "ಸ್ನೇಹ" ಎಂಬ ಸಾಮಾನ್ಯ ಸಂಭಂಧದಿಂದ ಓಟ್ಟಿಗೊಂಡಿದ್ದಾರೆ. ಹಲವಾರು ಹಾಸ್ಯ ಚುಟುಕುಗಳಿಂದ ತಮ್ಮ ಯಾತ್ರೆ ಮಾಡುತ್ತಿರುತ್ತಾರೆ. ದಿ ಕ್ಯಂಟಬ೯ರಿ ಟೆಲ್ಸ್ ಪದ್ಯದಲ್ಲಿ ಪದ್ಯ ದಂತೆ, ಗದ್ಯದಲ್ಲಿ ಗದ್ಯ ದಂತೆ ಮೊಡಿಬಂದಿದೆ. ವ್ಯಾಪಕವಾದ ನೈಜ ಕಥೆಗಳನ್ನೊಳಗೊಂಡಿದ್ದು ಆಧುನಿಕ ಸಾಹಿತ್ಯದ ಚೈತನ್ಯವನೊಳಗೋಂಡಿದೆ.