ಆಂಗ್ಲ ಸಾಹಿತ್ಯ

ವಿಕಿಪೀಡಿಯ ಇಂದ
Jump to navigation Jump to search

ಆಂಗ್ಲ ಸಾಹಿತ್ಯ[ಬದಲಾಯಿಸಿ]

ಈ ಲೇಖದನ ಗುರಿ ಹಾಗೂ ಗಮನ ಆಂಗ್ಲ ಭಾಷೆಯಲ್ಲಿರುವ ಸಾಹಿತ್ಯದ ಬಗ್ಗೆ. ಕೇವಲ ಇಂಗ್ಲೆಂಡ್ ಅಲ್ಲದೆ ಸ್ಕಾಟ್ಲೆಂಡ್,ಐರ್ಲೆಂಡ್,ಅಮೇರಿಕ ಹಾಗೂ ಹಳೆಯ ಬ್ರಿಟೀಷ್ನನ ವಸಾಹತುಗಳೂ ಒಳಗೊಂಡಿವೆ.ಆದರೂ ಪ್ರಮುಖವಾಗಿ ೧೯ನೇ ಶತಮಾನದ ಆರಂಭದವರೆಗೂ ಇಂಗ್ಲೆಂಡ್ ಮತ್ತು ಐರ್ಲ್ಯಾಂಡ್ ಆಂಗ್ಲ ಸಾಹಿತ್ಯದ ಬಗ್ಗೆ ವ್ಯವಹರಿಸುತ್ತದೆ.

ಆಂಗ್ಲ ಸಾಹಿತ್ಯ ಸಾಮಾನ್ಯವಾಗಿ ಬೇವುಲ್ಪ್ ಮಹಾಕಾವ್ಯದಿಂದ ಆರಂಭವಾಗುತ್ತದೆ.ಈ ಮಹಾಕಾವ್ಯ ೮ನೇ ಶತಮಾನ ದಿ೦ದ ೧೧ನೇ ಶತಮಾನದ ನಡುವೆ ರಚಿಸಲಾಗಿತ್ತು. ಹಳೆಯ ಆಂಗ್ಲ ಭಾಷೆಯಲ್ಲಿ ಅತ್ಯಂತ ಪ್ರಸಿದ್ಧ ಮಹಾಕಾವ್ಯ ಅಂತಸ್ತು ಹೊಂದಿರುವ ಏಕೈಕ ಹೆಗ್ಗುರುತೆಂದರೆ ಕವಿ ಜೆಫ್ರಿ ಚಾಸರ್ನ (೧೩೪೩-೧೪೦೦) ಸಾಹಿತ್ಯ ರಚನೆಗಳು. ವಿಶೇಷವಾಗಿ ಅವರ'ದಿ ಕ್ಯಾಂಟರ್ಬರಿ ಟೇಲ್ಸ್'ಸಲ್ಲುತ್ತದೆ. ನಂತರ ನವೋದಯ ಕಾಲದಲ್ಲಿ ವಿಶೇಷವಾಗಿ ತಡ ೧೬ನೇ ಹಾಗೂ ೧೭ನೇ ಶತಮಾನದ ಮೊದಲಿನಲ್ಲಿ ಪ್ರಮುಖ ನಾಟಕ ಹಾಗೂ ಕಾವ್ಯಗಳನ್ನು ವಿಲಿಯಂ ಷೇಕ್ಸ್‌ಪಿಯರ್, ಬೆನ್ ಜಾನಸನ್, ಜಾನ್ ಡನ್ ಮುಂತಾದವರು ರಚಿಸಿದರು.೧೭ ನೇ ಶತಮಾನದ ಮತ್ತೊಂದು ಮಹಾನ್ ಕವಿ ಜಾನ್ ಮಿಲ್ಟನ್ (೧೬೦೮-೧೬೭೪) ಪ್ಯಾರಡೈಸ್ ಲಾಸ್ಟ್ ಎಂಬ ಮಹಾ ಕವಿತೆಯ ಲೇಖಕರು ಆಂಗ್ಲ ಸಾಹಿತ್ಯವನ್ನು ಇನ್ನಷ್ಟು ಸಮ್ರುದ್ದಗೊಳಿಸಿದರು. ೧೭ನೇ ಹಾಗೂ ೧೮ನೇ ಶತಮಾನಗಳಲ್ಲಿ ವಿಶೇಷವಾಗಿ ಸಾಹಿತ್ಯವು ವಿಡಂಬಣೆಗಳಿಗೆ ಸಂಬಂಧಪಟ್ಟಿದ್ದವು, ಈ ಕಾಲದಲ್ಲಿ ಜಾನ್ ಡ್ರೈಡನ್ ಮತ್ತು ಅಲೆಕ್ಸಾಂಡರ್ ಪೋಪ್ ನ ಕಾವ್ಯಗಳು ಜೊನಾಥನ್ ಸ್ವಿಫ್ಟ್ ನ ಗದ್ಯವಚನಗಳು ಹೊಸ ಸಾಹಿತ್ಯ ತಿರುವನ್ನು ನೀಡಿತು. ೧೮ನೇ ಶತಮಾನದಲ್ಲಿ ಮೊದಲ ಬ್ರಿಟಿಷ್ ಕಾದಂಬರಿಗಳನ್ನು ಡೇನಿಯಲ್ ಡೇಪೌ, ಸಾಮ್ಯುಲ್ ರಿಚ್‌ರ್ಡ್ಸನ್ ಮತ್ತು ಹೆನ್ರಿ ಪೀಲ್ಡಿಂಗ್ ರಚಿಸಿದರು. ೧೮ನೇ ಶತಮಾನದ ಕೊನೆ ಹಾಗೂ ೧೯ನೇ ಶತಮಾನದ ಆರಂಭದಲ್ಲಿ ಪ್ರಣಯ ಕವಿಗಳಾದ ವರ್ಡ್ಸ್‌ವರ್ತ್, ಶಲ್ಲೇ ಮತ್ತು ಜಾನ್ ಕೀಟ್ಸ್ ರ ಕಾಲವಾಗಿತ್ತು.

ವಿಕ್ಟೋರಿಯಾ ಯುಗದಲ್ಲಿ (೧೮೩೭-೧೯೦೧) ಕಾದಂಬರಿ ಆಂಗ್ಲ ಭಾಷೆಯನ್ನು ಕರೆದೊಯ್ಯುವಂತಹ ಸಾಹಿತ್ಯಕ ಶೈಲಿಯಿತ್ತು. ಅದು ವಿಶೇಷವಾಗಿ ಚಾರ್ಲ್ಸ್‌ ಡಿಕನ್ಸ್ ರವರ ಕಾದಂಬರಿಗಳಿಂದ ಮತ್ತು ೧೯ ನೇ ಶತಮಾನದ ಕೊನೆಯಲ್ಲಿ ಒಂಟಿ ಸಹೋದರಿಯರು ಮತ್ತು ಥಾಮಸ್ ಹಾರ್ಡಿ ಅವರ ಸಾಹಿತ್ಯದಿ0ದ.೧೯ನೇ ಶತಮಾನದಲ್ಲಿಯೇ ಅಮೇರಿಕನ್ನರ ಪ್ರಮುಖ ಬರಹಗಾರರಾದ ಹೆಮ‌ನ್ ಮೆಲ್ ವಿಲ್ , ವಿಲ್ಟ್ ಮೆನ್ ಮತ್ತು ಎಮಿಲಿ ಡಿಕಿನ್ಸನ್ ರವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು. ಮತ್ತೊಬ್ಬ ಅಮೇರಿಕನ್ ಹೆನ್ರಿ ಜೆಮ್ಸ್ ರವರು ಅತ್ಯಂತ ಪ್ರಸಿದ್ಧ ಕಾದಂಬರಿಕಾರರಾಗಿದ್ದರು.

ಐರಿಶ್ ಬರಹಗಾರರಾದ ಜೇಮ್ಸ್ ಜಾಯ್ಸ್ ಮತ್ತು ಸಾಮ್ಯುಲ್ ಬೆಕೆಟ್ ೨೦ನೇ ಶತಮಾನದಲ್ಲಿ ಪ್ರಮುಖರಾಗಿದ್ದರು. ಆಧುನಿಕ ಚಳುವಳಿಯಲ್ಲಿ ಇವರಿಬ್ಬರೂ ಅತಿಮುಖ್ಯ ಪಾತ್ರದಾರಿಗಳಾಗಿದ್ದರು. ಅಮೇರಿಕನ್ನರಾದ ಕವಿ ಟಿ. ಎಸ್. ಎಲಿಯಟ್ ಮತ್ತು ಎಜ್ರಾ ಪೌಂಡ್, ಕಾದಂಬರಿಕಾರ ವಿಲಿಯಮ್ ಪೌಲ್ಕ್ ನರ್ ರವರು ಮತ್ತು ಇತರ ಆಧುನಿಕ ಚಳುವಳಿಕಾರರು,೨೦ನೇ ಶತಮಾನದ ನಡುವಿನಲ್ಲಿ ಪ್ರಮುಖ ಬರಹಗಾರರಾಗಿ ಬ್ರಿಟಿಷ್ ಆಡಳಿತದಲ್ಲಿದ್ದ ದೇಶಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು, ಹಲವು ನೊಬೆಲ್ ಪ್ರಶಸ್ತಿ ವಿಜೇತರ ಸಹ ಇದ್ದರು. ೨೦ ಮತ್ತು ೨೧ ನೇ ಶತಮಾನದ ಶ್ರೇಷ್ಠ ಬರಹಗಾರರೆಲ್ಲ ಇಂಗ್ಲೆಂಡ್ ನ ಹೊರಗಿನವರಾಗಿದ್ದರು. ಆಧುನಿಕ ಚಳುವಳಿಯ ನಂತರ ಮತ್ತು ೨ನೇ ವಿಶ್ವಯುದ್ದದ ನಂತರದ ಸಾಹಿತ್ಯ ಪ್ರವ್ರುತ್ತಿಗಳನ್ನು ವರ್ಣಿಸುತ್ತದೆ.ಆಧುನಿಕ ಅವಧಿ ಬರಹಗಾರರ ಮುಂದುವರಿಕೆ ಮತ್ತು ಪ್ರಯೋಗ ಪರೀಕ್ಷೆ ಅತೀವವಾಗಿ ವಿಘಟನೆ, ವಿರೋದಾಬಾಸ, ಪಶಾಹ೯ ಮತ್ತು ಜ್ಞಾನೋದಯ ಆಲೊಚನೆಯ ವಿರುದ್ದ ಆಧುನಿಕ ಸಾಹಿತ್ಯದ ಅವಧಿಯಲ್ಲಿ ಸಾಹಿತಿಗಲಳು ಹೊಂದಿದ್ದರು.

ಕಾದಂಬರಿ ಆಂಗ್ಲ ಭಾಷೆಯನ್ನು ಕರೆದೊಯ್ಯುವಂತಹ ಸಾಹಿತ್ಯಕ ಶೈಲಿಯಿತ್ತು

ಹಳೆಯ ಆಂಗ್ಲ ಭಾಷೆಯಲ್ಲಿ ಅತ್ಯಂತ ಪ್ರಸಿದ್ಧ ಕೃತಿಗಳ ಬರಹಗಾರ ವಿಲಿಯಂ ಷೇಕ್ಸ್‌ಪಿಯರ್

ಹಳೆಯ ಆಂಗ್ಲ ಸಾಹಿತ್ಯ (೬೫೮-೧೧೦೦)[ಬದಲಾಯಿಸಿ]

ಹಳೆಯ ಆಂಗ್ಲ ಸಾಹಿತ್ಯ ಅಥವಾ ಆಂಗ್ಲೊ ಸಾಕ್ಸನ್ ಸಾಹಿತ್ಯ ಹಳೆ ಆಂಗ್ಲ ಭಾಷೆಯಲ್ಲಿ ಬರೆದಿರುವಂತಹ ಸಾಹಿತ್ಯವನ್ನು ಒಳಗೊಳ್ಳುತ್ತದೆ. ಸಾಕ್ಸನ್ ಮತ್ತು ಇತರೆ ಜಮ‍೯ನ್ ಬುಡಕಟ್ಟು ಜನರು ಇಂಗ್ಲೆಂಡ್ ನಲ್ಲಿ ನೆಲೆಯೂರಿಸಿದ ನಂತರ ಆರಂಭವಾದ ಬರವಣಿಗೆ. ಈ ಸಾಹಿತ್ಯದ ಪ್ರಕಾರ ಮಹಾಕಾವ್ಯ, ಸಂತಚರಿತೆ, ನೀತಿ ಭೋದನೆ, ಬೈಬಲ್ ಅನುವಾಧ, ಕಾನೂನಿನ ಕೆಲಸ, ಕಾಲಾನುಕ್ರಮಾದಿ ಇತ್ಯಾದಿ. ಈ ಅವಧಿಗೆ ಸಂಬಂಧಪಟ್ಟಂತೆ ೪೦೦ ಹಸ್ತ ಪತ್ರಿಕೆಗಳು ಉಳಿದಿವೆ. ಹಳೆಯ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ಉಳಿದಿರುವ ಆರಂಭಿಕ ಕಾವ್ಯ 'ಸೀಡ್ ಮನ್ಸ್ ಹಿಮ್' ಬಹುಶಃ ೬೫೮-೬೮೦ ಯಲ್ಲಿ ಸಂಯೋಜನೆಗೊಂಡಿರಬಹುದು. Chaucer ಜೆಫ್ರಿ ಚಾಸರ್

ಮಧ್ಯ ಆಂಗ್ಲ ಸಾಹಿತ್ಯ(೧೧೦೦-೧೫೦೦)[ಬದಲಾಯಿಸಿ]

ಇಂಗ್ಲೆಂಡ್ ನ ನಾಮ‍೯ನ್ ವಿಜಯದ ನಂತರ ೧೦೬೬ ರಲ್ಲಿ ಆಂಗ್ಲೋ ಸಾಕ್ಸನ್ ಭಾಷೆಯ ಬರವಣಿಗೆಯ ರೂಪ ದರ ಪ್ರಮಾಣದಲ್ಲಿ ಸಾಮಾನ್ಯವಾಯಿತು.ಅರಿಸ್ಟ್ರೋಕಸಿಯ ಅಡಿಯಲ್ಲಿ ಹಾಗೂ ಅದರ ವ್ರಭಾವದಿಂದ ಪ್ರೆಂಚ್ ಭಾಷೆ ನ್ಯಾಯಾಲಯಗಳು, ಸಂಸತ್ತು ಹಾಗೂ ಸುಸಂಸ್ಕೃತ ಸಮಾಜ ಪ್ರಮಾಣಿತ ಭಾಷೆಯಾಯಿತು. ಈ ಅವಧಿಯಲ್ಲಿ ಧಾಮಿ‍೯ಕ ಸಾಹಿತ್ಯ ಜನಪ್ರಿಯವಾಗುವತ್ತ ಮುಂದುವರಿಯಿತು. ಸಂತರ ಜೀವನ ಚರಿತ್ರೆಗಳನ್ನು ಬರೆದು ಅಳವಡಿಸಿಕೊಂಡು ಹಾಗೂ ಅನುವಾದಿಸಿಕೊಳ್ಳುವತ್ತ ನಡೆದರು, ಉದಾಹರಣೆ:- ದಿ ಲೈಪ್ ಆಫ್ ಸೇಂಟ್, ಜೌಡ್ರೆ ಮತ್ತು ಸೌತ್ ಇಂಗ್ಲಿಷ್ ಲೆಜೆಂಡ್ರಿ ಪ್ರಮುಖವು.ಈ ಅವಧಿಯಲ್ಲಿ ಹೊಸ ಶೈಲಿಯ ಆಂಗ್ಲ ಭಾಷೆ ಉದ್ಬವವಾಯಿತು ಅದರ ಹೆಸರೇ ಮಾದ್ಯಮ ಆಂಗ್ಲ.ಈ ವಿಧದ ಆಂಗ್ಲ ಆಧುನಿಕ ಓದಿಗರಿಗೆ ಸುಲಭವಾಗಿರಲಿಲ್ಲ.

ಆಂಗ್ಲ ನವೋದಯ(೧೫೦೦-೧೬೬೦)[ಬದಲಾಯಿಸಿ]

೧೪೭೬ ರಲ್ಲಿ ವಿಲಿಯಮ್ ಕಾಕ್ಸ್ಟನ್ ರವರು ಮುದ್ರಣ ಯಂತ್ರವನ್ನು ಪರಿಚಯಿಸಿದ ನಂತರ ದೇಶೀಯ ಸಾಹಿತ್ಯ ಬಹಳ ಏಳಿಗೆಯನ್ನು ಕಂಡಿತು. ಆಂಗ್ಲ ನವೋದಯ ಸಾಂಸ್ಕೃತಿಕ ಮತ್ತು ಕಲಾತ್ಮಕ ಚಳುವಳಿಯಾಗಿತ್ತು. ಈ ಚಳುವಳಿ ೧೬ನೇ ಶತಮಾನದಿಂದ ೧೭ನೇ ಶತಮಾನದವರೆಗು ಇಟಲಿಯಲ್ಲಿ ನಡೆದ ಪಾನ್ ಯುರೋಪಿಯನ್ ನವೋದಯ ಅವಧಿಗೆ ಜೊತೆಗೂಡಿತ್ತು. ಉತ್ತರ ಯುರೋಪ್ ನಂತೆಯೇ ಇಂಗ್ಲೆಂಡ್ ಕೂಡ ಅತಿ ಕಡಿಮೆ ಬೆಳವಣಿಗೆಗಳನ್ನು ಶತಮಾನದವರೆಗೂ ಕಂಡಿತು. ನವೋದಯ ಶೈಲಿ ಮತ್ತು ಆಲೋಚನೆ ನಿಧಾನವಾಗಿ ಭೇದಿಸಿಕೊಂಡು ಇಂಗ್ಲೆಂಡ್ ನೊಳಗೆ ಹೋಗುತಿತ್ತು. ಎಲಿಜಿಬೆತ್ ನ ಅವಧಿ ೧೬ನೇ ಶತಮಾನದ ಕೊನೆಯಧ‌೯ದಲ್ಲಿ ಆಂಗ್ಲ ನವೋದಯ ಅತಿ ಎತ್ತರಕ್ಕೆ ಹೋಯಿತು.

ಎಲಿಜೆಬೆತನ್ ಮತ್ತು ಜಾಕೊಬೆನ್ ಅವಧಿ(೧೫೫೮-೧೬೨೫)[ಬದಲಾಯಿಸಿ]

ಎಲಿಜೆಬೆತ್ ೧ (೧೫೫೮-೧೬೦೩) ಹಾಗೂ ಜೇಮ್ಸ್ (೧೬೦೩-೨೫) ರವರ ಆಳ್ವಿಕೆಯ ಅವಧಿಯಲ್ಲಿ ಲಂಡನ್ ಕೇಂದ್ರಿತ ಸಂಸ್ಕೃತಿ, ಅದು ಆಸ್ಥಾನದ ಹಾಗು ಜನಪ್ರಿಯವಾದುದಂತದು ಬಹಳ ಕಾವ್ಯ ಮತ್ತು ನಾಟಕಗಳನ್ನು ಉತ್ಪಾದಿಸಿತು. ಆಂಗ್ಲ ನಾಟಕಕಾರರು ಮಧ್ಯಯುಗದ ನಾಟಕಗಳನ್ನು ಸಂಯೋಜಿಸಿ ಹಾಗು ಅದರ ಪ್ರಭಾವವನ್ನು ಮಿಶ್ರಿಸಿ ನವೋದಯ ಅವಧಿಯನ್ನು ಪುನಃ ಕಂಡು ಹಿಡಿಯುವುದರಲ್ಲಿ ಸಫಲರಾದರು. ಈ ಅವಧಿಯ ಷೇಕ್ಸ್ ಪಿಯರ್ ಸಾಹಿತ್ಯ ವಲಯದಲ್ಲಿ ಪ್ರಮುಖ ನಾಟಕಕಾರರಾಗಿ ನಿಶ್ಚಲತೆಯಿಂದ ನಿಲ್ಲುತ್ತಾರೆ. ಇವರು ಬಹಳ ವೈವಿಧ್ಯ ರೀತಿಯ ಸಾಹಿತ್ಯಕ ಶೈಲಿಯಲ್ಲಿ ಹಲವಾರು ನಾಟಕಗಳನ್ನು ರಚಿಸಲಾಗಿತ್ತು.

ತಡ ನವೋದಯ ಅವಧಿ(೧೬೨೫-೧೬೬೦)[ಬದಲಾಯಿಸಿ]

ತತ್ವ ವೀಮಾಂಸೆಯ ಕವಿಗಳಾದ ಜಾನ್ ಡನ್ (೧೫೭೨-೧೬೩೧) ಮತ್ತು ಜಾಜ್೯ ಹಬ‍೯ಟ್ ಅವರು ೧೬೨೫ ರ ನಂತರವೂ ತಮ್ಮ ಸಾಹಿತ್ಯ ಕೌಶಲ್ಯದಲ್ಲಿ ಮೆರೆಯುತ್ತಿದ್ದರು. ೧೭ನೇ ಶತಮಾನದಲ್ಲಿ ಎರಡನೇ ಪಿಳಿಗೆಯ ತತ್ವ ಮೀಮಾಂಸೆಯ ಕವಿಗಳಾಗಿ ರಿಚಡ್೯ ಕ್ರಾಷಾ (೧೬೧೩-೪೯) ಆಂಡ್ರಿವ್ ಮೊವೆ೯ಲ್ (೧೬೨೧-೭೮), ತಾಮಸ್ ತ್ರಾಹನೆ೯(೬೩೭-೧೬೭೪) ಮತ್ತು ಹೆನ್ರಿ ವಾಘನ್ (೧೬೨೨-೯೫) ಕಾಯ‍೯ ನಿವ೯ಹಿಸುತ್ತಿದ್ದರು. ರಾವುತ ಕವಿಗಳು ಇದೇ ಅವಧಿಯಲ್ಲಿ ಒಂದು ಪ್ರಮುಖ ಗುಂಪಾಗಿದ್ದರು.ಇವರು ಇದಕ್ಕೆ ಮೊದಲು ರಾಜ ಚಾಲ್ಸ್೯ ೧ ಗೆ ಆಂಗ್ಲ ನಾಗರಿಕ ಯುದ್ದದಲ್ಲಿ ಸಹಾಯಕರಾಗಿದ್ದರು.ರಾವುತ ಕವಿಗಳಾಗಿ ರಾಬಟ್೯ ಹೆರಿಕ್, ರಿಚಡ್೯ ಲವಲೇಸ್, ತಾಮಸ್ ಕಾವ್೯ ಮತ್ತು ಸರ್ ಜಾನ್ ಸಕಲಿಂಗ್ ಪ್ರಮುಖ ಕವಿಗಳಾಗಿದ್ದರು. ಎಲ್ಲಾ ಪ್ರಮುಖ ರಾವುಕ ಕವಿಗಳು ಸುಪ್ರಸಿದ್ಧ ಆಸ್ಥಾನಿಕರಾಗಿದ್ದು.

ನವ ಶಾಸ್ತ್ರೀಯ ಅವಧಿ(೧೬೬೦-೧೭೯೮)[ಬದಲಾಯಿಸಿ]

ಪುನಃಸ್ಥಾಪನ ಯುಗ(೧೬೬೦-೧೭೦೦)[ಬದಲಾಯಿಸಿ]

ಪುನಃಸ್ಥಾಪನ ಸಾಹಿತ್ಯ ಪ್ಯಾರಡೈಸ್ ಲಾಸ್ಟ್ ಮತ್ತು ಅಲ್೯ ಆಫ್ ರೋಚೆಸ್ಟರ್, ಹೆಚ್ಚು ದೈಯೋ೯ತ್ಸಾಹ ತುಂಬಿದ ಲೈಂಗಿಕ ಹಾಸ್ಯಸ್ಪ ಕೃತಿ, ದಿ ಕಂಟ್ರಿ ವೈಫ್, ನೈತಿಕ ಜ್ಞಾನದ ಕೃತಿ ದಿ ಪಿಲಿಗ್ರಿಮ್ಸ್ ಪ್ರೋಗ್ರಸ್ ಗಳಿಂದ ಕೂಡಿದ್ದವು. ಈ ಯುಗದಲ್ಲಿ ಲಾಕ್ ಸಕಾ‍೯ರದ ಮೇಲೆ ಎರಡು ಗ್ರಂಥಗಳನ್ನು ಪ್ರಕಟಿಸಿದರು. ಒಂದು ರಾಯಲ್ ಸಂಸ್ಥೆಯ ಸ್ಥಾಪನೆ, ಎರಡನೆಯದು 'ದಿ ಎಕ್ಸಪೆರಿಮೆಂಟ್'. ಸಾಹಿತ್ಯ ಸಂಸ್ಕೃತಿಗೆ ಅಧಿಕೃತ ಬಿರುಕು ಕ್ರಾಮ್ ವೆಲ್ಸಪುರಿತನ್ ನ ಆಡಳಿತದಲ್ಲಿ ಮೂಡಿಬಂತು ಹಾಗೂ ಇದರಿಂದ ಹೊಸ ವಿಧದ ಸಾಹಿತ್ಯ ಉದ್ಭವವಾಯಿತು. ಜಾನ್ ಮಿಲ್ಟನ್, ಜಾನ್ ಡ್ರೈಡನ್, ವಿಲಿಯಮ್ ವೈಚಲಿ೯, ಜಾಜ್೯ ಎತ್ ರೀಗೆ, ವಿಲಿಯಮ್ ಕಾಂವ್ ಈ ಯುಗದ ಪ್ರಮುಖ ಬರಹಗಾರರಾಗಿದ್ದರು.

ಆಗಸ್ಟನ್ ಸಾಹಿತ್ಯ(೧೭೦೦-೧೭೫೦)[ಬದಲಾಯಿಸಿ]

೧೮ನೇ ಶತಮಾನವು ಜ್ಞಾನೋದಯ ಯುಗದ ಪ್ರತಿಫಲವಾಗಿತ್ತು. ಧಮ‍೯, ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಗೆ ವಿಚಾರಶಕ್ತಿ ಹಾಗು ವೈಜ್ಞಾನಿಕ ದೃಷ್ಟಿಕೋನವನ್ನಿಟ್ಟಿದ್ದರು. ತತ್ವಜ್ಞಾನಿಗಳು ಹಿಂದಿನ ಶತಮಾನದ ಸಂಶೋಧಕರಾದ ಐಸಾಕ್ ನ್ಯೂಟನ್, ಜಾನ್ ಲಾಕ್ ಮತ್ತು ಪ್ರಾನ್ಸಿಸ್ ಬೇಕನ್ ರವರಿಂದ ಸ್ಪೂತಿ‍೯ಗೊಂಡಿದ್ದರು. ಆಗಸ್ಟನ್ ಸಾಹಿತ್ಯ ಎಂಬ ಪದ ೧೭೨೦ ಮತ್ತು ೧೭೩೦ ರ ಲೇಖಕಕರಿಂದ ಉದ್ಭವಗೊಂಡಿತು. ಈ ಯುಗ ರಾಜಕೀಯ, ಸಮೃದ್ಧಿ, ಆಗಾಧ ಶಕ್ತಿ, ಸೃಜನಶೀಲತೆ, ಘಾತಕಕೃತ್ಯಗಳಿಂದ ಕೂಡಿತ್ತು. ಇದು ಆಂಗ್ಲ, ಸ್ಕಾಟಿಶ್ ಮತ್ತು ಐರಿಷ್ ಜನರ ಆಥಿ‍೯ಕ ಸ್ವರೂಪ ಹಾಗೂ ಔದ್ಯೋಗಿಕ ಕ್ರಾಂತಿಯ ಪ್ರತಿಬಿಂಭವಾಗಿತ್ತು. ಜೇಮ್ಸ್ ತಾಮ್ ಸನ್, ಎಡ್ ವಡ್೯ ಯಂಗ್ ಮತ್ತು ಅಲೆಕ್ಸಾಂಡರ್ ಪೋಪ್ ಪ್ರಮುಖ ಬರಹಗಾರರಾಗಿದ್ದರು.

ಸಂವೇದನಾ ಯುಗ (೧೭೫೦-೧೭೯೮)[ಬದಲಾಯಿಸಿ]

ಈ ಯುಗವನ್ನು ಜಾನಸನ್ ಯುಗವೆಂದು ಕರೆದರೂ ತಪ್ಪಾಗುವುದಿಲ್ಲ. ಸಾಮ್ಯುಲ್ ಜಾನಸನ್ (೧೭೦೯-೧೭೮೪) ರವರನ್ನು ಅನೇಕವೇಳೆ ಡಾ|| ಜಾನ್ ಸನ್ ಎಂದು ಕರೆಯುತ್ತಾರೆ. ಇವರು ಆಂಗ್ಲ ಬರಹಗಾರರಾಗಿ ಚಿರವಾದ ಕೊಡುಗೆಯನ್ನು ಆಂಗ್ಲ ಸಾಹಿತ್ಯಕ್ಕೆ ನೀಡಿದರು. ಪ್ರಬಂಧಕಾರರಾಗಿ, ಸಾಹಿತ್ಯ ವಿಮಶ‍೯ಕರಾಗಿ, ಸಂಪಾದಕರಾಗಿ, ನಿಘಂಟುಕಾರರಾಗಿ ಆಂಗ್ಲ ಸಾಹಿತ್ಯವನ್ನು ಉತ್ತರಕ್ಕೆ ಕರೆದೊಯ್ದರು. ಇವರನ್ನು ಸಾಮಾನ್ಯವಾಗಿ 'ದಿ ಮ್ಯಾನ್ ಆಫ್ ಲೆಟರ್ಸ್ ಇನ್ ಇಂಗ್ಲಿಷ್ ಹಿಸ್ಟರಿ' ಎಂದು ಕರೆಯುತ್ತಾರೆ. ೧೮ನೇ ಶತಮಾನ ೨ನೇ ಹಂತದಲ್ಲಿ ಆಲಿವರ್ ಗೋಲ್ಡ್ ಸ್ಮಿತ್, ರಿಚಡ್೯ ಬ್ರಿನ್ ಸ್ಲೇ ಮತ್ತು ಲಾರೆನ್ಸ್ ಸ್ಟನ್೯ ಎಂಬ ಪ್ರಮುಖ ಐರಿಶ್ ಸಾಹಿತಿಗಳು ಲಂಡನ್ ನಲ್ಲಿ ನೆಲೆಯೂರಿದರು.

೧೯ನೇ ಶತಮಾನದ ಸಾಹಿತ್ಯ[ಬದಲಾಯಿಸಿ]

ಭಾವಪ್ರದಾನತೆ (೧೭೯೮-೧೮೩೭)[ಬದಲಾಯಿಸಿ]

ಭಾವಪ್ರದಾನತೆ ಎಂಬುದು ಕಲಾತ್ಮಕ, ಸಾಹಿತ್ಯಕ ಮತ್ತು ಬೌದ್ಧಿಕ ಚಳುವಳಿ ೧೮ನೇ ಶತಮಾನದ ಕೊನೆಯಲ್ಲಿ ಯುರೋಪ್ ನಲ್ಲಿ ಹುಟ್ಟಿಕೊಂಡಿತು. ಈ ಅವಧಿಯ ಆರಂಭಕ್ಕೆ ಆಂಗ್ಲ ಸಾಹಿತ್ಯದಲ್ಲಿ ಬಹಳ ದಿನಾಂಕಗಳು ಇವೆಯಾದರು ಸಾಮಾನ್ಯವಾಗಿ ೧೭೯೮ ರಲ್ಲಿ ಲಿರಿಕಲ್ ಬಲ್ಲಾಡ್ಸ್ , ಪ್ರಕಾಶವನ್ನು ಆರಂಭ ಮತ್ತು ೧೮೩೭ ರಲ್ಲಿ ರಾಣಿ ವಿಕ್ಟೋರಿಯಾರ ಅತ್ಯುತ್ಕೃಷ್ಟವನ್ನು ಅಂತ್ಯ ಎಂದು ಪರಿಗಣಿಸಲಾಗುತ್ತದೆ. ಈ ಯುಗದ ಬರಹಗಾರರು ಎಂದೂ ತಮ್ಮನ್ನು ತಾವು ಭಾವಪ್ರದಾನಕರು ಎಂದು ಭಾವಿಸುತ್ತಿರಲಿಲ್ಲ ಮತ್ತು ಈ ಪದವನ್ನು ಮೊದಲ ಬಾರಿಗೆ ವಿಮಶ‍೯ಕರು ವಿಕ್ಟೋರಿಯಾ ಅವಧಿಯಲ್ಲಿ ಉಪಯೋಗಿಸಿದರು. ವರ್ಡ್ಸ್‌ವರ್ತ್ (೧೭೭೦-೧೮೫೦), ಸಾಮ್ಯುಲ್ ಟೇಲರ್ (೧೭೭೨-೧೮೩೪) ಮತ್ತು ಪತ್ರಕತ‍೯ ತಾಮಸ್ ಪ್ರಮುಖರಾಗಿದ್ದರು.

ವಿಕ್ಟೋರಿಯನ್ ಸಾಹಿತ್ಯ (೧೮೩೭-೧೯೦೧)[ಬದಲಾಯಿಸಿ]

ಈ ವಿಕ್ಟೋರಿಯನ್ ಯುಗದಲ್ಲಿ ಕಾದಂಬರಿ ಎಂಬ ಸಾಹಿತ್ಯಕ ಶೈಲಿ ಆಂಗ್ಲ ಭಾಷೆಯಲ್ಲಿ ಕರೆದೊಯ್ಯುವಂತಹ ಪ್ರಭಾವವನ್ನು ಬೀರಿತು. ಹೆಂಗಸರು ಬರಹಗಾರರಾಗಿ ಮತ್ತು ಓದುಗರಾಗಿ ಪ್ರಮುಖ ಪಾತ್ರವನ್ನು ನಿವ‍೯ಹಿಸಿದರು. ಚಾರ್ಲ್ಸ್‌ ಡಿಕನ್ಸ್ ರವರು ಪಿಕ್ ವಿಕ್ ಪೇಪರ್ಸ್ ಎಂಬುದನ್ನು ೧೮೩೭ ನವೆಂಬರ್ ನಲ್ಲಿ ಪ್ರಕಟಿಸಿದ್ದರು. ೧೯ನೇ ಶತಮಾನದ ಕೊನೆಯವರೆಗೂ ಮೂರು ಸಂಪುಟಗಳ ಆವೃತ್ತಿಯನ್ನು ಪ್ರಕಟಿಸಿದರು. ಪರಿಚಲನೆಯ ಗ್ರಂಥಾಲಯಗಳಿಂದ ಕಾದಂಬರಿಗಳು ಬಹಳ ಪ್ರಸಿದ್ಧಿಯಾದವು. ಚಾಲ್ಸ್೯ ಡಿಕೆನ್ಸ್, ಟ್ರಾಂಬೆ ಸಹೋದರಿಯರು, ಎಮಿಲಿ ಮತ್ತು ಚಾಲ್೯ ಈ ಯುಗದ ಪ್ರಮುಖ ಬರಹಗಾರರು.

ಆಂಗ್ಲ ಸಾಹಿತ್ಯ ೧೯೦೧ ರ ತರುವಾಯ[ಬದಲಾಯಿಸಿ]

ಆಧುನಿಕತಾವಾದ (೧೯೦೧-೧೯೩೯)[ಬದಲಾಯಿಸಿ]

ಈ ಯುಗದ ಸುಪ್ರಸಿದ್ಧ ಕವಿ ಥಾಮಸ್ ಹಾರ್ಡಿ (೧೮೪೦-೧೯೨೮) ಇವರು ಆಧುನಿಕತಾವಾದ ಕವಿಗಳಾದವರು ವಿಕ್ಟೋರಿಯನ್ ಯುಗ ಮತ್ತು ೨೦ನೇ ಶತಮಾನದ ಮಧ್ಯದಲ್ಲಿ ಜೀವಿಸಿದ ಸಂಕ್ರಮಣಕಾಲ ಕವಿ ಮತ್ತು ೧೯ನೇ ಶತಮಾನದ ಪ್ರಮುಖ ಕವಿ. ಇವರ ಜೊತೆಗೆ ಹೆನ್ರಿಜೇಮ್ಸ್ (೧೮೪೩-೧೯೧೬), ಜೋಸೆಫ್ ಕೊನ್ ರಾಡ್ (೧೮೫೭-೧೯೨೪) ಲಾಡ್೯ ಜಿಮ್ ರವರು ಪ್ರಮುಖ ಕವಿಗಳಾಗಿದ್ದರು.

೧೯೪೦ ರಿಂದ ೨೧ ನೇ ಶತಮಾನದವರೆಗೆ[ಬದಲಾಯಿಸಿ]

ಕೆಲವರು ೧೯೩೯ನನ್ನು ಆಧುನಿಕತಾವಾದದ ಅಂತಿಮ ಎಂದು ಪರಿಗಣಿಸುತ್ತಾರೆ. ಆದರೆ ೧೯೫೦ ಮತ್ತು ೧೯೬೦ ರವರು ಟಿ. ಎಸ್. ಎಲಿಯಟ್, ವಿಲಿಯಮ್ ಪೌಲ್ಕ್ ನರ್, ಡೊರೊಬೆ ರಿಚಡ್೯ಸನ್ ಮುಂತಾದ ಆಧುನಿಕರು ತಮ್ಮ ಬರವಣಿಗೆಯನ್ನು ಪ್ರಕಟಿಸುತ್ತಿದ್ದರು. ಬ್ರಿಟಿಷ್ ಬರಹಗಾರರು ೧೯೪೦ ಮತ್ತು ೧೯೫೦ ರಲ್ಲಿ ಗ್ರಹಂಗ್ರಿಸ್ ಡೈಲನ್ ತಾಮಸ್, ಟಿ. ಎಸ್. ಜೌಡೆನ್ ಮುಂತಾದವರು ಅವರ ಪ್ರಮುಖ ಬರವಣಿಗೆಗಳನ್ನು ಪ್ರಕಟಿಸುವಲ್ಲಿ ಸಫಲರಾಗಿದ್ದರು. ಭಾರತದವರಾದ ಆರ್.ಕೆ.ನಾರಾಯಣ್ ತಮ್ಮ ಸಾಹಿತ್ಯ ವಸ್ತುಗಳನ್ನು ಇಂಗ್ಲೆಂಡ್ ನಲ್ಲಿ ಪ್ರಕಟಿಸಿದರು. ಇದೇ ಸಮಯದಲ್ಲಿ ಇಂಗ್ಲೆಂಡ್ ನ ಕೆಲವು ಭಾಗಗಳಲ್ಲಿ ಕಿಚನ್ ಸಿಂಕ್ ವಾಸ್ತವಿಕತೆ ಎಂಬುದು ಬಹಳ ಪ್ರಸಿದ್ದಿಯಾಯಿತು.ಸಲ್ಮಾನ್ ರಶ್ದಿ ಯವರ ಮಿಡ್ ನೈಟ್ಸ್ ಚಿಲ್ಡ್ರಂನ್ ೧೯೮೧ ರಲ್ಲಿ ಬಹಳ ಪ್ರಸಿದ್ಧಿ ಹೊಂದಿತು. ಇಂಗ್ಲೆಂಡ್ ನ ಹೊರಗಿರುವ ಸಾಹಿತಿಗಳಲ್ಲಿ ಪ್ರಮುಖರಾದವರು ವಿ. ಎಸ್. ನೈಪಾಲ್ ಬಹಳ ದೇಶಗಳಲ್ಲಿ ಆಂಗ್ಲ ಸಾಹಿತ್ಯ ಬೆಳೆಯಲಾರಂಭಿಸಿ ಜಗತ್ತಿನಾದ್ಯಂತ ಬಹಳ ಬರಹಗಾರರಿದ್ದರು.

ಉಲ್ಲೇಖಗಳು[ಬದಲಾಯಿಸಿ]

೧.Davies 1990,p. 93. ೨.Angus Cameron (1983). "Anglo-Saxon literature" in Dictionary of the Middle Ages, v. 1, pp. 274–88. ೩.Magoun, ೪.Francis P jr, "The Oral-Formulaic Character of Anglo-Saxon Narrative Poetry", Speculum 28: 446–67. ೫.Donald K jr (1968), The Beowulf Poet: A Collection of Critical Essays, Englewood Cliffs: Prentice-Hall, pp. 83–113. ೬.Henry Mayr-Harting, The Coming of Christianity to Anglo-Saxon England. (Pennsylvania: University Press Pennsylvania, 1992). ೭.The English Alliterative Tradition, University of Pennsylvania Press, 1991. ೮.a b Robinson 2001: ‘Like most Old English poems, Beowulf has no title in the unique manuscript in which it survives (British Library, Cotton Vitellius A.xv, which was copied round the year 1000 AD), but modern scholars agree in naming it after the hero whose life is its subject.’ ೯.Tolkien 1958, p. 127. ೧೦.Hieatt, A Kent (1983). Beowulf and Other Old English Poems. New York: Bantam Books. p. xi–xiii. ೧೧.Kiernan 1996, pp. xix–xx, 3–4, 23–34, 60, 62, 90, 162, 171, 258, 257, 277–78, footnote 69. ೧೨.Orchard 2003. ೧೩.Chamberlain, D. "Judith: a Fragmentary and Political Poem", in Anglo-Saxon Poetry: Essays in Appreciation for John C ೧೪.McGalliard, ed. LE Nicholson and DW Frese (Notre Dame, IN, 1975), pp. 145–59. ೧೫.Bruce Mitchell, A Guide to Old English. 6th ed (Massachusetts. Blackwell Publishers, 2001). ೧೬.a b Fulk & Cain 2003. ೧೭.EVK Dobbie, "The manuscripts of Cædmon's Hymn and Bede's Death Song with a critical text of the Epistola Cuthberti de obitu Bedae". ೧೮.Columbia University Studies in English and Comparative Literature (New York: Columbia University, 1937), p. 128.

ಗ್ರಂಥಗಳ ವಿವರಣ ಪಟ್ಟಿ[ಬದಲಾಯಿಸಿ]

  • Davies, Marion Wynne, ed. (1990), The Bloomsbury Guide to English Literature, New York: Prentice Hall .
  • Drabble, Margaret, ed. (1996), The Oxford Companion to English Literature, Oxford: Oxford University Press .
  • Fulk, RD; Cain, Christopher M (2003), A History of Old English Literature, Malden: Blackwell .
  • Kiernan, Kevin (1996), Beowulf and the Beowulf Manuscript, Ann Arbor, MI: University of Michigan, ISBN 0-472-08412-7 .
  • Orchard, Andy (2003), A Critical Companion to Beowulf, Cambridge: DS Brewer .
  • Robinson, Fred C (2001), The Cambridge Companion to Beowulf, Cambridge: Cambridge University Press, p. 143 .
  • Tolkien, John Ronald Reuel (1958), Beowulf: The Monsters and the Critics, London: Oxford University Press .
  • Ward, AW; Waller, AR; Trent, WP; Erskine, J; Sherman, SP; Van Doren, C, eds. (1907–21), History of English and American literature (encyclopedia in eighteen volumes), New York: GP Putnam’s Sons University Press .

ಬಾಹ್ಯ ಕೊಂಡಿಗಳು[ಬದಲಾಯಿಸಿ]