ಅಂಬಾಲ
Ambala ਅੰਬਾਲਾ | |
---|---|
city | |
![]() Ambala Cantonment Railway Station | |
ದೇಶ | ![]() |
ರಾಜ್ಯ | ಹರ್ಯಾಣ |
ಜಿಲ್ಲೆ | ಅಂಬಾಲ |
Established | ೧೪ನೆಯ ಶತಮಾನ |
ಸಂಸ್ಥಾಪಕರು | ಅಂಬಾ ರಜಪೂತ್ |
ಹೆಸರು ಬರಲು ಕಾರಣ | ಭವಾನಿ ಅಂಬಾ (Goddess) |
Elevation | ೨೬೪ m (೮೬೬ ft) |
ಜನಸಂಖ್ಯೆ (2011) | |
• ಒಟ್ಟು | ೧,೧೩೬,೭೮೪ |
ಸಮಯ ವಲಯ | ಯುಟಿಸಿ+5:30 (IST) |
PIN | 1330xx,1340xx |
Telephone code | 0171 |
ವಾಹನ ನೋಂದಣಿ | HR01(private), HR37(commercial) |
Sex ratio | 869/1000 |
ಜಾಲತಾಣ | ambala |
ಅಂಬಾಲ ಇದು ಹರ್ಯಾಣ ರಾಜ್ಯದ ಒಂದು ನಗರ. ಇದು ಪಂಜಾಬು ರಾಜ್ಯದ ಗಡಿಯಲ್ಲಿದೆ. ಮೂಲತಃ ಅಂಬಾಲ ಮತ್ತು ಅಂಬಾಲಾ ಕಂಟೋನ್ಮೆಂಟ್ ಅವಳಿನಗರಗಳಾಗಿವೆ. ಇಲ್ಲಿ ಭಾರತದ ಸೇನೆಯ ಹಾಗೂ ವಾಯುದಳದ ನೆಲೆಗಳಿವೆ. ಹರಿಯಾಣ ರಾಜ್ಯದ ಒಂದು ಜಿಲ್ಲೆ ಮತ್ತು ಆಡಳಿತಗಳ ಕೇಂದ್ರ ನಗರ. ಜಿಲ್ಲೆಯ ವಿಸ್ತೀರ್ಣ ಸು. 1,574 ಚ.ಕಿ.ಮೀ. ಜನಸಂಖ್ಯೆ (2001). ಅಂಬಾಲ ಪಟ್ಟಣ ದಂಡು ಮತ್ತು ನಗರಭಾಗಗಳನ್ನು ಹೊಂದಿದೆ. ದಂಡಿನ ಭಾಗ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿತವಾಯಿತು. ಇದು ಅಂಬಾಲ ನಗರದ ಪುರ್ವಕ್ಕಿದೆ.
ಇತಿಹಾಸ[ಬದಲಾಯಿಸಿ]
ಈ ಪಟ್ಟಣವನ್ನು ೧೪ನೆಯ ಶತಮಾನದಲ್ಲಿ ಅಂಬಾ ರಜಪೂತ್ ಎಂಬವನು ಸ್ಥಾಪಿಸಿದನು. ಅನಂತರ ಪಟ್ಟಣವನ್ನು ಆತನ ಜ್ಞಾಪಕಾರ್ಥವಾಗಿ ಅಂಬಾಲವೆಂದು ಕರೆಯಲಾಯಿತು. ಈ ಹೆಸರು ಅಂಬಾಲದ ಸುತ್ತಮುತ್ತಲಿನ ಆವರಣದಲ್ಲಿ ಗೋಚರವಾಗುವ ಮಾವಿನತೋಪುಗಳಿಂದ ಬಂದಿರಲಿಕ್ಕೂ ಸಾಕು. ಅಂಬವಾಲ ಎಂಬುದಾಗಿ ಕರೆಯಲಾಗುತ್ತಿದ್ದುದು ಅನಂತರ ಅಶುದ್ಧವಾಗಿ ಅಂಬಾಲವಾಗಿರಬಹುದು. 1809ರಲ್ಲಿ ಒಡೆಯನಾಗಿದ್ದ ದಯಾಕಾರ್ ಸತ್ತಮೇಲೆ 1823ರಲ್ಲಿ ಅದು ಬ್ರಿಟಿಷರ ಕೈಸೇರಿತು; ಮುಂದೆ 1849ರಲ್ಲಿ ಜಿಲ್ಲೆಯ ಕೇಂದ್ರಕಚೇರಿ ಇಲ್ಲಿ ಸ್ಥಾಪಿತವಾಯಿತು.
ಭೌಗೋಳಿಕ[ಬದಲಾಯಿಸಿ]
ಭೌಗೋಳಿಕವಾಗಿ ಅಂಬಾಲ ಮೈದಾನ ಮತ್ತು ಬೆಟ್ಟಗುಡ್ಡಗಳು ಸೇರುವ ನೆಲೆಯಲ್ಲಿದೆ. ತನ್ನ ಹಿನ್ನೆಲೆಯ ಪ್ರಭಾವದಿಂದ ಒಂದು ಪ್ರಮುಖ ಕೈಗಾರಿಕಾ ಪಟ್ಟಣವಾಗಿ ಬೆಳೆದಿದೆ. ಕಾಗದ ತಯಾರಿಕೆ, ಹಣ್ಣುಗಳನ್ನು ಕೂಡಿಡುವುದು, ರೇಷ್ಮೆ ಕೈಗಾರಿಕೆ, ಗಾಜು ಮತ್ತು ವೈಜ್ಞಾನಿಕ ಸಲಕರಣೆಗಳು ಮತ್ತು ಆಟದ ಸಾಮಾನುಗಳ ತಯಾರಿಕೆ ಅಂಬಾಲದ ಪ್ರಮುಖ ಚಟುವಟಿಕೆಗಳು. ಅಂಬಾಲ ಇಂದಿಗೂ ಕೂಡ ಧಾರ್ಮಿಕತೆಗೆ ಹೆಸರುವಾಸಿ. ಸಿಖ್ಖರ ಒಂದು ಪ್ರಮುಖ ದೇವಸ್ಥಾನವಾದ ಗುರುದ್ವಾರ ಮಂಜಿ ಸಾಹಿಬ್ ಇಲ್ಲಿ ಇದ್ದು, ಪ್ರತಿ ವರ್ಷವೂ ಅನೇಕ ಯಾತ್ರಿಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಜನಸಂಖ್ಯೆ[ಬದಲಾಯಿಸಿ]
೨೦೧೧ರ ಜನಗಣತಿಯಂತೆ ಅಂಬಾಲ ಜಿಲ್ಲೆಯ ಜನಸಂಖ್ಯೆ ೧೧,೩೬,೭೮೪. ಸಾಂದ್ರತೆ :೭೨೨ ಇದ್ದು ೮೨.೯% ಸಾಕ್ಷರತೆ ಇದೆ. ಲಿಂಗಾನುಪಾತ ೮೮೨.
ಭೌಗೋಳಿಕ[ಬದಲಾಯಿಸಿ]
![]() |
ಮೊಹಾಲಿ ಜಿಲ್ಲೆ, ಪಂಜಾಬ್ | ಪಂಚಕುಲ ಜಿಲ್ಲೆ ಸಿರ್ಮೌರ್ ಜಿಲ್ಲೆ, ಹಿಮಾಚಲ ಪ್ರದೇಶ |
![]() | |
ಪಟಿಯಾಲ ಜಿಲ್ಲೆ, ಪಂಜಾಬ್ | ![]() |
ಯಮುನಾ ನಗರ ಜಿಲ್ಲೆ | ||
![]() ![]() | ||||
![]() | ||||
ಕುರುಕ್ಷೇತ್ರ ಜಿಲ್ಲೆ |