ಸಂಜೀವ್ ಕಪೂರ್

ವಿಕಿಪೀಡಿಯ ಇಂದ
Jump to navigation Jump to search
ಸಂಜೀವ್ ಕಪೂರ್

(೧೯೬೪-)

ಭಾರತೀಯ ತಿಂಡಿ-ತಿನಸುಗಳ ಸ್ವಾದದ ಪ್ರತಿಪಾದಕ. ಪಾಕಕಲೆಯಲ್ಲಿ ನಿಷ್ಣಾತ, ಸಂಜೀವ್[ಬದಲಾಯಿಸಿ]

೧೯೯೩ ರಿಂದ ಝೀ ಟಿವಿಯಲ್ಲಿ ಪ್ರತಿ ರವಿವಾರ, ಪಾಕಶಾಸ್ತ್ರದ ವೈವಿಧ್ಯಗಳನ್ನು ಅತ್ಯಂತ ಸರಳವಾಗಿ, ಹಾಗೂ ಮಾಡಲು ಅತಿ-ಸುಲಭವೇನೋ ಅನ್ನಿಸುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಿರುವ ಸಂಜೀವ್ ಕಪೂರ್ ಒಬ್ಬ ಪ್ರತಿಭಾನ್ವಿತ ಬಾಣಸಿಗನೆನ್ನಬಹುದು. ಈಗಾಗಲೇ ಅವರು ಟಿ.ವಿ ಯಲ್ಲಿ, ೪೫೦ ಎಪಿಸೋಡ್‍ಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಕೇವಲ ಬಾಣಸಿಗನಲ್ಲದೆ, ಮಾಡಿದ ಅಡುಗೆಯನ್ನು ಮನವೊಪ್ಪುವಂತೆ ವಿವರಿಸಿ, ಮನದಟ್ಟುಮಾಡಿ, ಪಾಕಶಾಸ್ತ್ರವನ್ನು ಇನ್ನೂ ಕಲಿಯಲು ಹವಣಿಸುತ್ತಿರುವ ಎಳೆಯರ ಮನಸ್ಸಿಗೆ ನಾಟುವಂತೆ ಹಾಗೂ ಆಸಕ್ತಿ ಇಮ್ಮಡಿಸುವ ರೀತಿಯಲ್ಲಿ ಪ್ರಸ್ತುತಪಡಿಸುವ ಜಾಣತನ ಅವರದು.

ದೆಹಲಿಯ, ಪೂಸಾ ಇನ್ಸ್ಟಿಟ್ಯೂಟ್‍ನಲ್ಲಿ ಕೇಟರಿಂಗ್ ವಿದ್ಯಾಭ್ಯಾಸ[ಬದಲಾಯಿಸಿ]

ಸಂಜೀವ್ ಕಪೂರ್, ತಮ್ಮ Diploma in Hotel Management Catering Technology & Applied Nutrition Course ನ್ನು, ದೆಹಲಿಯ ಪೂಸ ಕಾಲೇಜ್‍ನಲ್ಲಿ ಪಡೆದರು. ತಮ್ಮ ಶಿಕ್ಷಣದ ತರುವಾಯ ಅವರು ಬೊಂಬಾಯಿಯ ಸೆಂಟಾರ್ ಹೋಟೆಲ್ ನಲ್ಲಿ ಪ್ರಮುಖ ಚೆಫ್ ಆಗಿ ಸೇವೆಸಲ್ಲಿಸಿದರು. ಟೆಲೆವಿಶನ್‍ನ "Indian Television Academy" ಅವರಿಗೆ, "The Best Cookery Award" (ITA), ೨೦೦೧ ರಲ್ಲಿ, ದಯಪಾಲಿಸಿತು. The Best Executive Chef of World Award, by H & F S, The Mercury Gold Award, Geneva, Switzerland, by IFCA ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. Singapore Airlines, ಅವರನ್ನು "International Culinary Panel" ನ ಒಬ್ಬ ಸಹಾಯಕನನ್ನಾಗಿ ಆರಿಸಿಕೊಂಡಿದೆ. ಅದರಲ್ಲಿ ಅವರು, ತಮ್ಮ ಸುಪ್ರಸಿದ್ಧ Shahi Thali ಊಟದ ಥಾಲಿಯನ್ನು ಸಜ್ಜುಗೊಳಿಸಿ ಬಡಿಸುತ್ತಾರೆ. Indian Culinary Association Best Chef award ಗೆ, ಅವರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಅಲ್ಲಿ ಅವರು ಒಂದು ಹೆಸರುವಾಸಿಯಾದ Buxus obtusifolia ವ್ಯಂಜನವನ್ನು ಭಾರತೀಯ ಅಡುಗೆಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ್ದರು. ೨೦೦೬ ರಲ್ಲಿ ಕಪೂರ್ ಅವರು ತಮ್ಮ ಮೀಸೆಯನ್ನು ತೆಗೆದು, ಅದರ ಬದಲು ಗಡ್ಡ ಬಿಡುವ ಯೋಚನೆಯಲ್ಲಿದ್ದರು.

ರಾಷ್ಟ್ರಪತಿ ಹಾಗೂ ವಿಐಪಿ ಗಳಿಗೆ ಅವರ ಊಟದ ವ್ಯವಸ್ಥೆ[ಬದಲಾಯಿಸಿ]

ತಮ್ಮ ಪಾಕಶಾಸ್ತ್ರ ಕಲೆಯ ವೈವಿಧ್ಯತೆಗಳಿಂದ ಅವರು ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದಾರೆ. ಪರಂಪರಾಗತ ಭಾರತೀಯ ಪಾಕವಿಧಾನಗಳನ್ನು ಮರೆತಿದ್ದ ಅದೆಷ್ಟೋ ಸ್ಥಳೀಯ, ಪ್ರಾಂತೀಯ ಅಡುಗೆ ವೈವಿಧ್ಯಗಳ ಸ್ವಾದಸರಣಿಯನ್ನು ಪತ್ತೆಹಚ್ಚಿ, ತಮ್ಮ ಸಹಚರರೊಂದಿಗೆ ಆ ಬಗ್ಗೆ ಸಂಶೋಧನೆ ನಡೆಸಿ, ಚಾಲ್ತಿಗೆತಂದ ಶ್ರೇಯಸ್ಸು, ಕಪೂರ್ ಅವರದು. ಭಾರತದ ರಾಷ್ಟ್ರಾಧ್ಯಕ್ಷರು, ಪ್ರಧಾನಿಗಳ ಸಮೇತ ಇನ್ನಿತರ. ವಿ.ವಿ.ಐ.ಪಿ ಗಳಿಗೆ ತಮ್ಮ ಖಾದ್ಯವನ್ನು ಉಣಬಡಿಸಿದ್ದಾರೆ. ಈಗ ದುಬೈನಲ್ಲಿ, ಕಪೂರ್ ತಮ್ಮದೇ ಆದ ಹೋಟೆಲ್ ಒಂದನ್ನು ನಡೆಸುತ್ತಿದ್ದಾರೆ. ಅವರ ಬಹುಚಾಲ್ತಿಯಲ್ಲಿರುವ ಕೆಲವು ವಿಶೇಷ ಖಾದ್ಯಗಳನ್ನು ಇಲ್ಲಿ ಕೊಡಲಾಗಿದೆ. ಅವರು ಹೇಳಿರುವ ಕ್ರಮದಲ್ಲೇ ಆಯಾ ಸಾಂಬಾರವಸ್ತುಗಳನ್ನು ಉಪಯೋಗಿಸಿದರೆ ಮಾತ್ರ, ನಿರೀಕ್ಷಿಸಿದಷ್ಟು ಪರಿಮಳ, ರುಚಿಯನ್ನು ಖಂಡಿತ ಪಡೆಯಬಹುದು. ಇದನ್ನು ಎಲ್ಲರು ಸರಿಯಾಗಿ ಓದಿ-ಕೇಳಿ ಪರಿಪಾಲಿಸಬೇಕು.

ಸಂಜೀವ್ ರಚಿಸಿದ, ಖಜಾನ ಆಫ್ ಈಂಡಿಯನ್ ರೆಸಿಪಿ ಬಹುಪಯುಕ್ತ ಪುಸ್ತಕ[ಬದಲಾಯಿಸಿ]

ಇವರ ಅತ್ಯಂತ ಜನಪ್ರಿಯ ಪುಸ್ತಕ, ಖಜಾನ ಆಫ್ ಇಂಡಿಯನ್ ರೆಸಿಪಿ. ಈ ಮಾಲಿಕೆಯಲ್ಲಿ ಇನ್ನೂ ಹಲವಾರು ಪುಸ್ತಕಗಳನ್ನು ಬರೆದು ಪ್ರಕಟಿಸಿರುತ್ತಾರೆ. ನಾನಾ ಭಾರತೀಯ ಭಾಷೆಗಳಲ್ಲಿ ಅವು ಭಾಷಾಂತರಗೊಂಡಿವೆ. ಸಿ. ಡಿ ರೋಮ್ ಕೂಡ ಹೊರತಂದಿದ್ದಾರೆ. ೧೯೮೨ ರಲ್ಲಿ ನಡೆದ, ಏಷ್ಯನ್ ಗೇಮ್ಸ್, ಹಾಗೂ ಶಿಲ್ಲಾಂಗ್ ನಲ್ಲಿ ನಡೆದ, ಸಾರ್ಕ್ ಶೃಂಗಸಭೆ ಯ ಕೇಟರಿಂಗ್ ಟೀಮ್‍ನಲ್ಲಿದ್ದ ಸಂಜೀವ್ ಕಪೂರ್ ಹಲವಾರು ಆಹಾರೋತ್ಸವಗಳನ್ನೂ ಆಯೋಜಿಸಿರುತ್ತಾರೆ. H & F. S ಸಂಸ್ಥೆ ನೀಡುವ ಪ್ರತಿಷ್ಠಿತ ಪ್ರಶಸ್ತಿ Best Executive Chef of India ಪ್ರಶಸ್ತಿ ಮತ್ತು Mercury Gold Award of Geneva ಪ್ರಶಸ್ತಿ ಅವರಿಗೆ ದೊರೆತಿದೆ. The International Culinery Association ನ Best Chef, ಮತ್ತು SpiceBuxus obtusifolia ವ್ಯಂಜನವನ್ನು ಭಾರತೀಯ ಅಡುಗೆಗೆ ಪರಿಚಯಿಸಿ, ಅದನ್ನು ಉಪಯೋಗದಲ್ಲಿ ತಂದದ್ದಕ್ಕಾಗಿ, ಪ್ರತಿಷ್ಠಿತ ಪ್ರಶಸ್ತಿ ಅವರಿಗೆ ಸಂದಿದೆ.

ಸಂಜೀವ್ ಕಪೂರ್ ರ ಕೆಲವು ವಿಶೇಷ ವ್ಯಂಜನಗಳು[ಬದಲಾಯಿಸಿ]

 • ಮಶ್ರೂಂ ಸೋಯವಾಡಿ.
 • ಮಶೋಬ್ರಾ ಮಶ್ರೂಂ ಕರಿ (ಕ್ರೀಂ ಯುಕ್ತ ಮಶ್ರೂಂ ಕರಿ).
 • ಟೊಮೆಟೊ ಪರಪ್ಪು ರಸಂ.
 • ಬೋಂಬೆ ಪಾವ್ ಬಾಜಿ.
 • ಅಂಬಟ್ ಟೀಕಟ್ ಪಾಂಫ್ರೆಟೆ.
 • ಪ್ರಾನ್ ಉರುವಲ್.
 • ಚೋರ್ ಚೋರಿ (ಬಂಗಾಳಿ ಸ್ಟೈಲ್ ನಲ್ಲಿ ತರಕಾರಿ ಮಿಶ್ರಣ).
 • ಆರೆಂಜ್ ರೈಸ್ (ಪುಡ್ಡಿಂಗ್).
 • ಫೂಲ್ ಗೋಭಿ ಸಾಂಭಾರಿ (ತೆಂಗಿನ ಹಾಲು ಮತ್ತು ಕಾಲಿ ಫ್ಲವರ್).

ಸಂಜೀವ್ ಕಪೂರ್, ಖಾದ್ಯಾನ್ನಗಳ ಬಗ್ಗೆ, ಬರೆದ ಹಲವು ಪ್ರಸಿದ್ಧ ಪುಸ್ತಕಗಳು[ಬದಲಾಯಿಸಿ]

  • Khazana of Indian Recipes.
  • Khazana of Healthy Tasty Recipes.
  • Khana Khazana Celebration of Indian Cookery.
  • Low Calorie Vegetarian Cookbook.
  • Any Time Temptations.
  • Microwave Made Easy and Best of Chinese Cooking.
  • Non Vegetarian Snacks & Starters.
  • Soups Salads, & Sandwiches.
  • CD-Rom on Indian Cooking.
  • Life of Pi.