ವಿಷಯಕ್ಕೆ ಹೋಗು

ರುಡ್ಯಾರ್ಡ್ ಕಿಪ್ಲಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಡ್ಯಾರ್ಡ್ ಕಿಪ್ಲಿಂಗ್ ಇಂದ ಪುನರ್ನಿರ್ದೇಶಿತ)
ರುಡ್ಯಾರ್ಡ್ ಕಿಪ್ಲಿಂಗ್

ರುಡ್ಯಾರ್ಡ್ ಕಿಪ್ಲಿಂಗ್
ಜನನ: ಡಿಸೆಂಬರ್ ೩೦, ೧೮೬೫
ಜನನ ಸ್ಥಳ: ಮುಂಬಯಿ, ಬ್ರಿಟಿಷ್ ಭಾರತ
ನಿಧನ:ಜನವರಿ ೧೮, ೧೯೩೬
ಲಂಡನ್, ಇಂಗ್ಲೆಂಡ್ []
ವೃತ್ತಿ: ಸಾಹಿತಿ
ರಾಷ್ಟ್ರೀಯತೆ:ಬ್ರಿಟಿಷ್
ಸಾಹಿತ್ಯದ ವಿಧ(ಗಳು):ಕಥಾ ಸಾಹಿತ್ಯ, ಕವನ, ಮಕ್ಕಳ ಸಾಹಿತ್ಯ
ಪ್ರಮುಖ ಕೃತಿ:ದ ಜಂಗಲ್ ಬುಕ್
ಪ್ರಭಾವಿತರು:ರಾಬರ್ಟ್ ಹೈನ್ಲೀನ್, ಜೋರ್ಗೆ ಬೋರ್ಗೆಸ್

(ಡಿಸೆಂಬರ್, ೩೦, ೧೮೬೫-ಜನವರಿ, ೧೮, ೧೯೩೬)

ರುಡ್ಯಾರ್ ಕಿಪ್ಲಿಂಗ್ [] ಭಾರತ'ದಲ್ಲಿ ಜನಿಸಿದ ಇಂಗ್ಲೀಷ್ ನಾಗರಿಕ. 'ರುಡ್ಯಾರ್ಡ್ ಕಿಪ್ಲಿಂಗ್', ಪ್ರತಿಷ್ಠಿತ 'ನೋಬೆಲ್ ಪ್ರಶಸ್ತಿ,' (೧೯೦೭) ಗೆ ಪಾತ್ರರಾದರು. ಅವರು ಬರೆದ ಹಲವಾರು ಜನಪ್ರಿಯ ಕಾಂದಂಬರಿ, ಕಥೆಗಳಲ್ಲಿ 'ಜಂಗಲ್ ಬುಕ್,' (೧೮೯೪) ಅತಿ ಮಹತ್ವದ ಪಾತ್ರವಹಿಸಿತ್ತು. 'ರುಡ್ಯಾರ್ಡ್ ಕಿಪ್ಲಿಂಗ್' ರವರ ಪುಸ್ತಕದ, ದೃಷ್ಟಾಂತಗಳಿಗೆ ಅವರ ತಂದೆ, 'ಜಾನ್ ಲಾಕ್ ವುಡ್ ಕಿಪ್ಲಿಂಗ್,' ರವರು ಸಚಿತ್ರೀಕರಿಸಿದ್ದಾರೆ. ಲಂಡನ್ ನ " ವಿಕ್ಟೋರಿಯ ಅಂಡ್ ಆಲ್ಬರ್ಟ್ ಮ್ಯೂಸಿಯಮ್," ನ ಅಲಂಕರಿಸುವ ಕೆಲಸದಲ್ಲಿಯೂ ಬಹಳ ಕೊಡುಗೆ ನೀಡಿದ್ದಾರೆ. ಬೊಂಬಾಯಿನ, 'ಕ್ರಾಫರ್ಡ್ ಮಾರ್ಕೆಟ್,' ನಕ್ಷೆಯಲ್ಲಿ ಹಲವು ಸಂಗತಿಗಳನ್ನು ರೂಪಿಸಲು ಸಹಾಯಮಾಡಿದ್ದಾರೆ.

ಮನೆಯ ಪರಿಸರ

[ಬದಲಾಯಿಸಿ]

'ರುಡ್ಯಾರ್ಡ್ ಕಿಪ್ಲಿಂಗ್' ರವರ ತಂದೆ,'ಲಾಕ್ ವುಡ್ ಕಿಪ್ಲಿಂಗ್,' [] ರವರು, ಆಗಿನ ಬೊಂಬಾಯಿನ (೧೮೩೭-೧೯೧೧) 'ಸರ್ ಜೆ. ಜೆ. ಕಾಲೇಜ್ ಆಫ್ ಆರ್ಟ್,' ಮಹಾವಿದ್ಯಾಲಯದ, ಪ್ರಥಮ ಪ್ರಿನ್ಸಿಪಲ್ ಆಗಿನೇಮಿಸಲ್ಪಟ್ಟಿದ್ದರು. ಪ್ರಖ್ಯಾತ ವರ್ಣಚಿತ್ರ ಕಲಾಕಾರ, ಸಚಿತ್ರಕಾರ, ಶಿಲ್ಪಿ, ಶ್ರೇಷ್ಟ ಚಿತ್ರಕಲಾ-ಉಪನ್ಯಾಸಕ, ಹಾಗೂ ಕುಶಲ-ಕಲೋಪಾಸಕರಾಗಿದ್ದರು. ಇಂಗ್ಲೆಂಡ್ ನಗರವಲ್ಲದೆ, ವಿಶ್ವದಲ್ಲೆಲ್ಲಾ ಇಂಗ್ಲೀಷ್ ಭಾಷೆಯನ್ನು ಬಲ್ಲ ಹಾಗೂ ಓದುವ ಜನರ ಬಾಯಿನಲ್ಲಿ, ಎಲ್ಲೆಲ್ಲೂ ಕಿಪ್ಲಿಂಗ್ ರ ಬಗ್ಗೆ ಪ್ರಶಂಸೆ, ಹಾಗೂ ಪ್ರೀತಿಯ ಮಾತುಗಳು ಕೇಳಿಬರುತ್ತಿದ್ದವು. ಇಂತಹ ಮಹಾಕಲಾಕಾರನ ಮಗನಾಗಿ ಜನಿಸಿದ್ದ 'ರುಡ್ಯಾರ್ಡ್, ಸಹಜವಾಗಿ ಕಲಾವಂತಿಕೆ ಅವರ ರಕ್ತದಲ್ಲಿ ಬಂದಿತ್ತು. ಮುಂದೆ ಅವರು ತಮ್ಮ ತಂದೆ-ತಾಯಿಯರ ಹೆಸರನ್ನು ಅಮರಗೊಳಿಸಿದರು. 'ನೋಬೆಲ್ ಪಾರಿತೋಷಕ,'ವನ್ನು ಗಳಿಸುವುದು ಆಗಿನ ಕಾಲದಲ್ಲಿ ಸಾಮಾನ್ಯ ವಿಷಯವಾಗಿರಲಿಲ್ಲ. ಅಪಾರ ಸಾಹಿತ್ಯರಚನೆ, ಭಾರತ, ಆಫ್ರಿಕ, ಮತ್ತು ಬರ್ಮಾದೇಶ, ಗಳ ದುರ್ಗಮ ಕಾಡುಗಳಲ್ಲಿ, ಕಾಡುಮೃಗಗಳ ಮಧ್ಯೆ-ತಿರುಗಾಟ, ವಿಷಯಸಂಗ್ರಹಣೆ, ಸಂಪಾದನೆಗಾಗಿ, ನಿರಂತರ-ಪರದಾಟಗಳಿಂದಾಗಿ, ಅವರು ವಿಶ್ವದಾದ್ಯಂತ, ಗುರುತಿಸಲ್ಪಟ್ಟರು. ಅವರ ಪರಿವಾರದ ಸಹಕಾರ, ಸಹಾನುಭೂತಿ, ಇತ್ತು.

ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ವಿಜೇತರು

[ಬದಲಾಯಿಸಿ]

'ಭಾರತ'ದಲ್ಲಿ ಜನಿಸಿದ ಇಂಗ್ಲೀಷ್ ನಾಗರಿಕ, 'ರುಡ್ಯಾರ್ಡ್ ಕಿಪ್ಲಿಂಗ್', ಪ್ರತಿಷ್ಠಿತ 'ನೋಬೆಲ್ ಪ್ರಶಸ್ತಿ,' (೧೯೦೭) ಗೆ ಪಾತ್ರರಾದರು. ಅವರು ಬರೆದ ಹಲವಾರು ಜನಪ್ರಿಯ ಕಾಂದಂಬರಿ, ಕಥೆಗಳಲ್ಲಿ 'ಜಂಗಲ್ ಬುಕ್,' (೧೮೯೪) ಅತಿ ಮಹತ್ವದ ಪಾತ್ರವಹಿಸಿತ್ತು. "ಫ್ಲೋರಾ ಆನಿ ಸ್ಟೀಲ್," ರವರು ರಚಿಸಿದ, "ಟೇಲ್ಸ್ ಆಫ್ ಪಂಜಾಬ್," ಎಂಬ ಕೃತಿಗೂ, ಸಮಯೋಚಿತವಾಗಿ, ಲಕ್ಷಣವಾಗಿ, ಚಿತ್ರೀಕರಿಸಿದ್ದಾರೆ. ಲಾಹೋರ್ ನಲ್ಲಿ ಸೇವೆಯಲ್ಲಿದ್ದಾಗ, ಭಾರತೀಯ ಚತುರ ಕಲಾವಿದ,'ಭಾಯಿ ರಾಮ್ ಸಿಂಗ್,' ರವರಿಗೆ, ಪ್ರೋತ್ಸಾಹದ ನುಡಿಗಳಿಂದ ಹುರಿದುಂಬಿಸುತ್ತಿದ್ದರಂತೆ. 'ಓಸ್ ಬೋರ್ನ್,' ನಲ್ಲಿದ್ದಾಗ, ಬ್ರಿಟಿಷ್ ಸಾಮ್ರಾಜ್ಯದ ಧಣಿಯವರ, ಚಕ್ರವರ್ತಿ, ೫ ನೇ ಜಾರ್ಜ್ ರ, ಪಟ್ಟಾಭಿಷೇಕ ಮಹೋತ್ಸವದ ಸಮಯದಲ್ಲಿ, ದರ್ಬಾರ್ ಹಾಲ್ ನ ಸಿಂಗರಿಸುವಕಾರ್ಯದಲ್ಲಿ, ಕಿಪ್ಲಿಂಗ್ ವಿಶೇಷ ಆಸಕ್ತಿವಹಿಸಿದ್ದರು. ಭಾರತಕ್ಕೆ ಬಂದ ತರುವಾಯ, " ಜರ್ನಲ್ ಆಫ್ ಇಂಡಿಯನ್ ಆರ್ಟ್ ಅಂಡ್ ಇಂಡಸ್ಟ್ರಿ," 'ಮೇಯೋ ಕಾಲೇಜ್,' ನ ವಿದ್ಯಾರ್ಥಿಗಳ ಚಿತ್ರಕಲೆಯ ಕೊಡುಗೆಗಳನ್ನು ಎಲ್ಲೆಡೆ ಪ್ರಚುರಪಡಿಸಲು ಶ್ರಮವಹಿಸಿದರು. ಇದೇ ರೀತಿ, ಮುಂಬಯಿನಗರದಲ್ಲಿದ್ದಾಗ, 'ವಿಕ್ಟೋರಿಯ ಟರ್ಮಿನಸ್,' ಕಟ್ಟಡದ ವಿನ್ಯಾಸದಲ್ಲಿ, ಹಾಗೂ 'ರಾಜಾಬಾಯಿ ಗಡಿಯಾರದ ಟವರ್,' ಕಟ್ಟಡದ ನಿರ್ಮಾಣಕಾರ್ಯದಲ್ಲೂ, ಅವರ ವಿದ್ಯಾರ್ಥಿಗಳ, ಸಲಹೆ ಹಾಗೂ ಕೆಲವು ಬದಲಾವಣೆಗಳನ್ನು ಸ್ವೀಕರಿಸಿ, ಅದನ್ನು ಕಟ್ಟಡ ನಿರ್ಮಾಪಕರ ಗಮನಕ್ಕೆ ತಂದರು.

ಮುಂಬಯಿನಲ್ಲಿ ಜನಿಸಿದರು

[ಬದಲಾಯಿಸಿ]

'ರುಡ್ಯಾರ್ಡ್ ಕಿಪ್ಲಿಂಗ್' ರವರು ಜನಿಸಿದ್ದು, ಬೊಂಬಾಯಿನ 'ವಿ.ಟಿ. ರೈಲ್ವೆ ಸ್ಟೇಷನ್' (ಈಗಿನ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಟರ್ಮಿನಸ್) ಸಮೀಪದ ಜೆ.ಜೆ.ಸ್ಕೂಲ್ ಆಫ್ ಆರ್ಟ್ ಮಹಾವಿದ್ಯಾಲಯ'ದ ಶಿಕ್ಷಕರ ವಸತಿಗೃಹದಲ್ಲಿ, ಭಾರತದ ವಾಣಿಜ್ಯ ರಾಜಧಾನಿ ಬೊಂಬಾಯಿನಲ್ಲಿ, ೩೦-೧೨-೧೮೬೫ ರಲ್ಲಿ, ಜನಿಸಿದರು. ತಂದೆ, 'ಲಾಕ್ ವುಡ್ ಕಿಪ್ಲಿಂಗ್', ಜೆ. ಜೆ. ಸ್ಕೂಲ್ ಆಫ್ ಆರ್ಟ್ ಶಿಕ್ಷಣ ಮಹಾಕಲಾಸಂಸ್ಥೆಯಲ್ಲಿ ಶಿಕ್ಷಕರು. ತಾಯಿ, 'ಆಲಿಸ್', ಪ್ರಖ್ಯಾತ ಕಲಾಕಾರ, ಪೇಂಟರ್ ಎಡ್ವರ್ಡ್ ಬರ್ನ್-ಜೋನ್ಸ್ ರವರ ಅತ್ತಿಗೆ. ೪ ಜನ, ಪ್ರಖ್ಯಾತ, ಮ್ಯಾಗ್ಡೊನಾಲ್ಡ್ ಸೋದರಿಯರಲ್ಲಿ, ಒಬ್ಬರು. ದಂಪತಿಗಳು ಬೊಂಬಾಯಿಗೆ, ೧೮೬೫ ರಲ್ಲಿ ಬಂದರು. ೧೮೭೫ ರಲ್ಲಿ ಅವರು, " ಮೇಯೋ ಸ್ಕೂಲ್ ಆಫ್ ಅರ್ಟ್ ಮ್ಯೂಸಿಯೆಮ್", ಲಾಹೋರ್, ನಲ್ಲಿ 'ಕ್ಯುರೇಟರ್,' ಆಗಿ ಸೇರಿದರು. ಅಲ್ಲಿ ಅವರು ವಾಸಿಸುತ್ತಿದ್ದ ಮನೆಯಬಗ್ಗೆ 'ಕಿಮ್,' ಕಥಾಸಂಕಲನದಲ್ಲಿ ಸಾಕಷ್ಟು ವಿವರಗಳಿವೆ. "ವಂಡರ್ ಹೌಸ್," ಅಥವಾ 'ಅಜೀಬ್ ಘರ್,' ಎಂದು ವರ್ಣಿಸಿದ್ದಾರೆ. ರ್ಯಾಫೆಲೈಟ್ಸ್ ನ ಪ್ರಭಾವ ಅವರ ಮೇಲಾಗಿತ್ತು. ೧೩ ನೆಯ ವಯಸ್ಸಿನಲ್ಲೇ ಬರೆಯಲು ಆರಂಭಿಸಿದರು. ೬ ನೆಯ ವಯಸ್ಸಿನಲ್ಲಿ ತಂದೆ-ತಾಯಿ, ಅವರನ್ನು ಇಂಗ್ಲೆಂಡ್ ಗೆ ಕರೆದೊಯ್ದು, ೫ ವರ್ಷ ಅವರಿಗೆ, 'ಸೌತ್ ಸೀ,' ನಲ್ಲಿದ್ದ 'ಫಾಸ್ಟರ್ ಹೋಮ್,' ನಲ್ಲಿ ಬಿಟ್ಟಿದ್ದರು.

ಇಂಗ್ಲೆಂಡ್ ನಲ್ಲಿ

[ಬದಲಾಯಿಸಿ]

'ಇಂಗ್ಲೆಂಡ್' ನಲ್ಲಿ ಕಳೆದ, ' ಬಾಲ್ಯದ ಶಾಲಾಶಿಕ್ಷಣದ ದಿನಗಳು,' 'ರುಡ್ಯಾರ್ಡ,' ರಿಗೆ ಕಡು-ಬೇಸರವನ್ನು ತಂದ ದಿನಗಳಾಗಿದ್ದವು. ಅಲ್ಲಿ ಕಳೆದ ಬೇಸರದ ಅನುಭವಗಳನ್ನು, ದಾರುಣ ಕಥೆಯನ್ನು ಅವರು, ತಮ್ಮ, ಪುಸ್ತಕ 'ಬ್ಯಾ ಬ್ಯಾ ಬ್ಲ್ಯಾಕ್ ಶೀಪ್' ನಲ್ಲಿ ತೋಡಿಕೊಂಡಿದ್ದಾರೆ. ೧೮೭೮ ರಲ್ಲಿ ಕಿಪ್ಲಿಂಗ್, "ಯುನೈಟೆಡ್ ಸರ್ವಿಸಸ್ ಕಾಲೇಜ್," ಸೇರಿದರು. ಅದೊಂದು ಬೋರ್ಡಿಂಗ್ ಕಾಲೇಜ್. 'ಉತ್ತರ ದೆವನ್,' ನ ಶಾಲೆ, ಭಾರಿ ತುಟ್ಟಿಯಜಾಗ. ಅಲ್ಲಿ, 'ಮಿಲಿಟರಿ ಅಕ್ಯಾಡಮಿ,' ಗೆ ಹೋಗಿ ಸೇರಲು ರಪೇತಿಕೊಡಲಾಗುತ್ತಿತ್ತು. ಕಣ್ಣಿನ ತೊಂದರೆ, ಹಾಗೂ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆಯದೆ ಸುಮ್ಮನೆ ಕನಸುಕಾಣುವುದರಲ್ಲಿ ಯಾವ ಉಪಯೊಗವಾಗವೂ ಆಗಲಿಲ್ಲ. ಅಲ್ಲಿ ಪ್ರವೇಶ ಸಿಗಲಿಲ್ಲ. ಇವುಗಳೆಲ್ಲದರ ಅನುಭವವಗಳನ್ನು ತಮ್ಮ, ಇನ್ನೊಂದು ಹೆಸರುವಾಸಿಯಾದ ಕೃತಿ,'ದ ಲೈಟ್ ದಟ್ ಫೇಲ್ಡ್' (೧೮೯೦), ಮತ್ತು ತಮ್ಮ 'ಆಟೋ ಬಯಾಗ್ರಫಿ,' ಯಲ್ಲಿ (೧೯೩೭, ಕಾಣಬಹುದು.

'ಸ್ಟಾಲ್ಕಿ ಅಂಡ್ ಕಂ,' (೧೮೯೯) ಯಲ್ಲಿ, ತಿಳಿಸಿದ್ದಾರೆ.

'ಜಸ್ಟ್ ಸೊ ಸ್ಟೋರೀಸ್' (೧೯೦೨), ಪ್ರಾಣಿಗಳು ಈಗಿರುವಹಾಗೆ ಇರಲು ಹೇಗೆ ಕಾರಣವಾಯಿತು ಎನ್ನುವುದರ ಬಗ್ಗೆ, ಬರೆದ 'ವಿಚಾರಾತ್ಮಕ ಕೃತಿ'.

೧೮೮೨, ನಲ್ಲಿ ಭಾರತಕ್ಕೆ ವಾಪಸ್, ಬಂದರು. ಲಾಹೋರ್ ನಗರದಲ್ಲಿ 'ಸಿವಿಲ್ ಮತ್ತು ಮಿಲಿಟರಿ ಗೆಝೆಟ್,' ಪತ್ರಿಕೆಗೆ ಸಂಪಾದರಾಗಿ, (೧೮೮೨-೮೭) ಸಹಾಯಕ ಸಂಪಾದಕ ಮತ್ತು ಓವರ್ಸೀಸ್ ಬಾತ್ಮಿದಾರರಾಗಿ ದುಡಿದರು. ಮುಂದೆ, ಅಲಹಾಬಾದ್ ನಲ್ಲಿ 'ಪಯೊನೀರ್,' ಪತ್ರಿಕೆಗೆ (೧೮೮೭-೮೯) ಸಂಪಾದಕರಾಗಿ ಕೆಲಸಮಾಡಿದರು. ಅವರ ಕವನಗಳು, ಚಿಕ್ಕಕಥೆಗಳು ವಿಶ್ವದ ಇಂಗ್ಲೀಷ್ ಓದುಗರಿಗೆ, ಪ್ರಿಯವಾದವು. ೧೯೮೦ ರ ನಂತರ, ೧೮೮೯, ರಲ್ಲಿ ಮತ್ತೆ ಇಂಗ್ಲೆಂಡ್, ಗೆ. ಚಾರ್ಲ್ಸ್ ಡಿಕನ್ಸ್, ರವರ ಛಾಪನ್ನು ಅವರ ಕೆಲವು ಬರಹಗಳಲ್ಲಿ ಕಾಣಬಹು. ೧೮೯೨, ರಲ್ಲಿ, 'ಕ್ಯಾರೊಲಿನ್ ಸ್ಟಾರ್,' ಬ್ಯಾಲೆಸ್ಟರ್, ರನ್ನು ವಿವಾಹವಾದರು. ಆಕೆ, ಅಮೆರಿಕನ್, ಬರಹಗಾರನ ತಂಗಿ. ಅಣ್ಣ, ಪ್ರಕಾಶಕರಾಗಿದ್ದರಿಂದ, ಕಿಪ್ಲಿಂಗ್ ರ, ಪುಸ್ತಕಗಳನ್ನು ಶೀಘ್ರವಾಗಿ ಪ್ರಕಟಿಸಲು ಬಹಳ ಸಹಾಯವಾಯಿತು.

'ದ ನೌಲಖ,' ನಾವೆಲ್, (೧೮೯೨) ರಲ್ಲಿ, ಬರೆದರು.

ಮಡದಿಯ ಜೊತೆ, ಅಮೆರಿಕಕ್ಕೆ ಹೋಗಿ, 'ವರ್ ಮೌಂಟ್', ನಗರದಲ್ಲಿ ವಾಸ್ತವ್ಯಹೂಡಿದರು. ಅಲ್ಲಿನ ಜೀವನ ಪದ್ಧತಿ ಅವರಿಗೆ ಏಕೋ ಸರಿಬೀಳಲಿಲ್ಲ. 'ವರ್ ಮೌಂಟ್' ನಲ್ಲಿ ಅವರ ಇಬ್ಬರು ಹೆಣ್ಣುಮಕ್ಕಳು, 'ಜೊಸೆಫೈನ್' ಹಾಗೂ 'ಎಲ್ಸಿ', ಜನಿಸಿದರು. ಅಲ್ಲೇ ಬರೆದ ಪುಸ್ತಕಗಳು, 'ಜಂಗಲ್ ಬುಕ್,' ಮತ್ತು 'ಕ್ಯಾಪ್ಟನ್ ಕರೇಜಿಯಸ್'. ದುರದೃಷ್ಟವಶಾತ್, ಕಿಪ್ಲಿಂಗ್ ರವರ ಹಿರಿಯ ೬ ವರ್ಷದ ಮಗಳು, ಜೋಸೆಫೈನ್, ಆ ನಗರದಲ್ಲಿ ತೀರಿಕೊಂಡಳು. ಬೇಸರದಿಂದ ಕಿಪ್ಲಿಂಗ್ ದಂಪತಿಗಳು, ವಾಪಸ್ ಇಂಗ್ಲೆಂಡ್ ಗೆ ಬಂದು, 'ಬುರ್ವಾಶ್', (ಸಸೆಕ್ಸ್), ನಲ್ಲಿ ವಾಸ್ತವ್ಯ, ಮಾಡಿದರು. ಮುಂದಿನ ಜೀವನದಲ್ಲಿ ತಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಅಳವಡಿಸಿಕೊಂಡರು. ಒಬ್ಬ ಉದಾತ್ತಧ್ಯೇಯದ ವ್ಯಕ್ತಿತ್ವವನ್ನು '(ಪೆರ್ಸೊನ),' ಬೆಳೆಸಿಕೊಂಡು, ಪ್ರದರ್ಶಿಸತೊಡಗಿದರು.

ಮುಂದೆ ಬರೆದ ಕೃತಿಗಳು

[ಬದಲಾಯಿಸಿ]

ಆಗಲೇ ಜನರು ಅವರು ನೋಬೆಲ್ ಪ್ರಶಸ್ತಿಗೆ ಹಕ್ಕುದಾರರೆಂದು ತಿಳಿದಿದ್ದರು. ಆರ್ಡರ್ ಆಫ್ ಮೆರಿಟ್, ಅವರಿಗೆ ಇಷ್ಟವಾಗಲಿಲ್ಲ. -೧೮೯೯ ನ 'ಬೋರ್ ಯುದ್ಧ', ಕೆಲ ತಿಂಗಳು, ದಕ್ಷಿಣ ಆಫ್ರಿಕದಲ್ಲಿ ಕಳೆದರು. ೧೯೦೨ ಮತ್ತೆ ಸಸೆಕ್ಸ್. ಮತ್ತೆ ಮಧ್ಯೆ ದಕ್ಷಿಣ ಆಫ್ರಿಕ. 'ಸೆಸಿಲ್ ರೋ ಡ್ದ್ಸ್', ಅವರಿಗೆ ಪ್ರತ್ಯೇಕವಾಗಿ, ಬಂಗಲೆಯೊಂದನ್ನು ಬಿಟ್ಟುಕೊಟ್ಟಿದ್ದರು. 'ಕಿಮ್', ೧೯೦೧ ರಲ್ಲಿ, ಹೊರಬಂತು. ಅವರು ಬರೆದ ಅತ್ಯಂತ ಪ್ರಭಾವಿ ಪುಸ್ತಕಗಳಲ್ಲೊಂದು.

೫ ನೆ, ಜಾರ್ಜ್ ಚಕ್ರವರ್ತಿ, 'ಭಾರತದ ಜಂಗಲ್ ' ಗಳ ಬಗ್ಗೆ, ಆಸಕ್ತ

[ಬದಲಾಯಿಸಿ]

ಭಾರತದ ಜಂಗಲ್ ನ ಬಗ್ಗೆ ಸಾಹಸಗಳ ಬಗ್ಗೆ ತಿಳಿಸಿ ಬರೆಯಲು ರುಡ್ಯಾರ್ಡ್ ಕಿಪ್ಲಿಂಗ್ ಯಾವಾಗಲೂ ಸಿದ್ಧರಾಗಿದ್ದರು.[] ಅವರಿಗೆ ಅತ್ಯಂತ ಮುದುಕೊಟ್ಟ ಕೃತಿ, 'ಜಂಗಲ್ ಬುಕ್.' ಬ್ರಿಟನ್ ನ ಚಕ್ರವರ್ತಿ, '೫ ನೆ ಜಾರ್ಜ್', ರವರಿಗೆ ಭಾರತದ ಕಾಡುಪ್ರಾಣಿಗಳ ಕಥೆ ಎಂದರೆ,ಪ್ರಾಣ. ಭಾರತದ ಕಾಡುಪ್ರಾಣಿಗಳ ಬಗ್ಗೆ ನೈಜ, ಜೀವಂತಪ್ರಸಂಗಗಳನ್ನು, ಕಿಪ್ಲಿಂಗ್ ರವರಿಂದ ತಿಳಿಯಲು ಸದಾ-ಕಾತುರರಾಗಿದ್ದರು. ಅವರ ಕೆಲಸವನ್ನು ಮೆಚ್ಚಿ ಹಲವಾರು ಪ್ರಶಸ್ತಿ, ಮನ್ನಣೆಗಳನ್ನು ಅವರು, ಮಂಜೂರುಮಾಡಿದರು. ಆದರೆ,ಕಿಪ್ಲಿಂಗ್ ರವರಿಗೆ ಅವ್ಯಾವುದೂ ಇಷ್ಟವಾಗಲಿಲ್ಲ. "ನೈಟ್ ಹುಡ್", "ಆರ್ಡರ್ ಆಫ್ ಮೆರಿಟ್", ಹಾಗೂ "ಪೊಯಟ್ ಲಾರೆಲ್",' ಮುಂತಾದ ಮನ್ನಣೆಗಳನ್ನು ತೆಗೆದುಕೊಳ್ಳಲಿಲ್ಲ. ಮುಂದೆ, ೧೯೨೬ ರಲ್ಲಿ, ರಾಯಲ್ ಸೊಸೈಟಿ ಫಾರ್ ಲಿಟರೇಚರ್, ಪ್ರಶಸ್ತಿಯನ್ನೂ ಮತ್ತು ಗೋಲ್ಡ್ ಮೆಡಲ್ ನ್ನೂ ತೆಗೆದುಕೊಳ್ಳಲು ಆಗ್ರಹ ಬಂತು. ಆಗ ಒಲ್ಲೆಯೆನ್ನಲು ಸಾಧ್ಯವಾಗಲಿಲ್ಲ. ಅವರಿಗೆ, ೧೯೦೭ ರಲ್ಲಿ, ಜಂಗಲ್ ಬುಕ್, ಕೃತಿಗೆ, ನೋಬೆಲ್ ಪ್ರಶಸ್ತಿ ಬಂತು. ಒಬ್ಬ ಬ್ರಿಟಿಷ್ ಬರಹಗಾರನಿಗೆ, ದೊರೆತ 'ಪ್ರಪ್ರಥಮ ನೋಬೆಲ್ ಪುರಸ್ಕಾರ,' ವೆಂದು ಪರಿಗಣಿಸಲ್ಪಟ್ಟಿದೆ. ಬ್ರಿಟಿಷ್ ನೋಬೆಲ್ ಪ್ರೈಸ್ ಪುರಸ್ಕೃತ ಕಾದಂಬರಿಕಾರರಲ್ಲಿ ಅತಿ ಕಿರಿಯವ್ಯಕ್ತಿಯೆಂದು ದಾಖಲಾತಿಯಾಗಿದೆ. ಇದಾದನಂತರ ಅವರ ಕಥೆ, ಕಾಲ್ಪನಿಕ ಕಾದಂಬರಿಗಳು, ಕವಿತೆಗಳ, ಮೌಲ್ಯಕುಸಿಯಿತೆಂದು ಕೆಲವರು ಅಭಿಪ್ರಾಯಪಟ್ಟರು. ಮೊದಲನೆಯ ವಿಶ್ವ ಯುದ್ಧದ ಸಮಯದಲ್ಲಿ, 'ಪ್ರಾಪಗಾಂಡ ಬುಕ್ಸ್,' ಗಳನ್ನು ಬರೆದು ಪ್ರಕಟಿಸಿದರು. ಮೊದಲನೆಯ ವಿಶ್ವ ಯುದ್ಧದಲ್ಲಿ ಮಗನ ಮರಣ, ಅವರಿಗೆ ಬಹಳ ಸಂಕಟವನ್ನು ತಂದಿತು.

೧೯೨೫ ರ ಮಧ್ಯಭಾಗದಲ್ಲಿ, 'ಯೂನಿವರ್ಸಿಟಿ ಆಫ್ ಸೇಂಟ್ ಅಂಡ್ರೂಸ್,' ನಲ್ಲಿ 'ಡೈರೆಕ್ಟರ್,' ಆಗಿ ನೇಮಿಸಲ್ಪಟ್ಟರು. ಕಿಪ್ಲಿಂಗ್ ರ ಆತ್ಮಕಥನ,

  • 'ಸಮ್ ಥಿಂಗ್ ಆಫ್ ಮೈಸೆಲ್ಫ್', ಮೊದಲೇ ಬರೆದಿದ್ದರೂ, ೧೯೩೭ ರಲ್ಲಿ, ಅವರ ಮರಣಾನಂತರ ಅದರ ಪ್ರತಿಗಳು ಹೊರಬಂದವು. ಬ್ರಿಟಿಷ್ ಸಾಮ್ರಾಜ್ಯದ ವೈಭವೀಕರಣ, ಅವರ ಬರಹಗಳಲ್ಲಿ ಎದ್ದುಕಾಣುತ್ತಿದ್ದ ವಿಷಯಗಳಲ್ಲೊಂದಾಗಿತ್ತು. ಜಾತಿ-ಮತದ ವಿಷಯದಲ್ಲಿ ಅವರಿಗೆ, ಆದರವಿರಲಿಲ್ಲ.
  • 'ದ ವೈಟ್ ಮ್ಯಾನ್ಸ್ ಬರ್ಡನ್ ' (೧೮೯೯) ರಲ್ಲಿ ತಿಳಿಸಿದ್ದಾರೆ.

'ನೋಬೆಲ್ ಪ್ರೈಸ್,' ಗಳಿಸಿದ ತರುವಾಯ ಬರೆದ ಬರಹಗಳು ಓದುಗರಿಗೆ ಹಿಡಿಸಲಿಲ್ಲ. ಸ್ವಲ್ಪ ಓದುಗರಿಗೆ ಬೇಸರತಂದಿತು. 'ಡಬ್ಲ್ಯು . ಬಿ. ಯೀಟ್ಸ್,' ಮತ್ತು 'ಟಿ. ಎಸ್. ಯಿಲಿಯೆಟ್', ರವರುಗಳ, ರೋಮ್ಯಾಂಟಿಕ್ ಕಥೆಗಳನ್ನು ಜನ ಸ್ವಾಗತಿಸಿದರು. 'ಎಲ್ಲೋ, ಯಾರಿಗೂ ಗೊತ್ತಿರದ ಪೃಥ್ವಿಯ ಮೂಲೆಯೊಂದಕ್ಕೆ ಹೋಗಿ, ಇಂಗ್ಲೀಷ್ ಜನರು ಮಾಡಿದ ಸಾಹಸದ ಕೆಲಸಗಳು ಅನನ್ಯ, ಹಾಗೂ ಸರ್ವಕಾಲಕ್ಕೂ ಅನುಕರಣೀಯವಾಗಿವೆ'. ಕಿಪ್ಲಿಂಗ್, ವಿಶೇಷವಾಗಿ ಮಕ್ಕಳಿಗಾಗಿಯೇ ರಚಿಸಿದ ಸಾಹಸ ಕಥೆಗಳನ್ನು, ಎಲ್ಲರೂ ಸ್ವಾಗತಿಸಿದರು. ಅವರ ಮಕ್ಕಳೇ, 'ಡಾನ್,' ಮತ್ತು 'ಊನ' -

  • 'ದ ಡೆತ್ ಆಫ್ 'ಡನ್ವಿ',' ಯುದ್ಧ ಕಥೆಗಳಲ್ಲಿ, ಯುದ್ಧದ ಸನ್ನಿವೇಶಗಳನ್ನು ಚೆನ್ನಾಗಿ ವರ್ಣಿಸಿದ್ದಾರೆ. ಕಿಪ್ಲಿಂಗ್, ರವರಿಗೆ ತಮ್ಮ ಅಂತ್ಯದ ದಿನಗಳು ಬಹಳ ಬೇಸರವನ್ನು ತಂದವು. ಅವರ ಕಥೆಗಳಲ್ಲಿ ನಾವುಕಾಣುವುದು, ಅವರ ಸ್ವಭಾವದಲ್ಲಿನ, ನೈಜತೆ, ಶುದ್ಧ ಕಾಲ್ಪನಿಕತೆ, ಮತ್ತು ವೈವಿಧ್ಯಮಯ, ಭೌಗೋಳಿಕ ಭಾಗಗಳ, ರೋಚಕ ಸಂಗತಿಗಳು, ಕೆಲವೊಮ್ಮೆ, ಫ್ಯಾಂಟಸಿ, ಮತ್ತು ಶಾರ್ಪ್, ಗಳನ್ನು ಜನರಿಗೆ, ಪ್ರಸ್ತುತಪಡಿಸುವ ರೀತಿ ಅನನ್ಯವಾಗಿದೆ. ರೇಸಿ ಸ್ಟೈಲ್ ಹಾಗೂ ಸಾಮ್ರಾಜ್ಯಶಾಹೀ ಮನೋಭಾವಗಳನ್ನು ಓದುಗರು ಗಮನಿಸಬಹುದು. ಭಾರತದ ಉಪಖಂಡ ಮತ್ತು ಬರ್ಮಾದೇಶದ ಜಂಗಲ್ ಗಳ ಬ್ರಿಟಿಷ್ ಯೋಧರು ಪ್ರದರ್ಶಿಸಿದ ಶೌರ್ಯ, ದುರ್ಗಮ ಕಾಡುಗಳಲ್ಲಿ ಅಲೆದಾಟಗಳ ಬೆವರು ಮೂಡಿಸುವ, ಮೈನವಿರೇಳಿಸುವ, ಸಾಹಸ ಕಥಾನಕಪ್ರಸಂಗಗಳು, 'ಕಿಪ್ಲಿಂಗ್,' ರನ್ನು ಒಬ್ಬ ಮರೆಯಲಾರದ ಬರಹಗಾರ/ವರದಿಗಾರರನ್ನಾಗಿ ಕಡೆದವು. 'ಬ್ಯಾಟಲ್ ಆಫ್ ಲೂಸ್,' ನಲ್ಲಿ, ಅವರ ೧೮ ವರ್ಷದ ಮಗ 'ಜಾನ್,' ರವರು ಮಡಿದರು. 'ಬೋರ್ ವಾರ್ ' ನ ಬಳಿಕ, ಬರೆದ ಕವನ ಸಂಗ್ರಹ, 'ಆಬ್ಸೆಂಟ್ ಮೈಂಡೆಡ್ ಬೆಗ್ಗರ್', ಪುಸ್ತಕವನ್ನು, ಮಾರಿಬಂದ ಹಣವನ್ನೆಲ್ಲಾ 'ಬೋರ್ ಯುದ್ಧ,' ದಲ್ಲಿ ಮಡಿದ ಯೋಧರ ಪರಿವಾರದವರಿಗೆ, ಸಹಾಯಧನವಾಗಿ ಸಮರ್ಪಿಸಿದರು. ಬ್ರಿಟನ್ ನ ಕವಿ, 'ಜಾರ್ಜ್ ಆರ್ವೆಲ್,' ರವರು, ಒಂದುಕಡೆ, 'ರುಡ್ಯಾರ್ಡ್ ಕಿಪ್ಲಿಂಗ್,' ರವರ ಬಗ್ಗೆ ಮಾತನಾಡುತ್ತಾ, "ಪ್ರಾಫೆಟ್ ಆಫ್ ಬ್ರಿಟಿಷ್ ಇಂಪೀರಿಯಲಿಸಮ್", ಎಂದು ತಮ್ಮ ಅನಿಸಿಕೆಯನ್ನು ಮಂಡಿಸಿದ್ದಾರೆ. ೧೯೬೦ ರಲ್ಲಿ ವಾಲ್ಟ್ ಡಿಸ್ನೆ ಕಂಪೆನಿಯವರು, 'ಜಂಗಲ್ ಬುಕ್,' ಕಥಾಪ್ರಸಂಗಗಳನ್ನು ಚಲನಚಿತ್ರವಾಗಿ ಪ್ರಸ್ತುತಪಡಿಸಿದಾಗ, ಅದು ವಿಶ್ವದಲ್ಲೇಲ್ಲಾ ಪ್ರಸಿದ್ಧಿಯನ್ನು ಪಡೆಯಿತು. 'ಜಂಗಲ್ ಬುಕ್' ನಲ್ಲಿ ಬಂದ ಪ್ರಧಾನ ಪಾತ್ರಗಳಾದ, 'ಬಗೀರ', 'ಮೊಗ್ಲಿ', ವಿಶ್ವದ ಜನರೆಲ್ಲರ ಬಾಯಿಯಲ್ಲೂ, ಕಾಣಿಸಿಕೊಂಡು, ಪ್ರಚಂಡ ಜನಪ್ರಿಯತೆಯನ್ನು ಹಾಸಿಲ್ ಮಾಡಿತು.

ಲಂಡನ್ ನಲ್ಲಿ ಮೃತರಾದರು

[ಬದಲಾಯಿಸಿ]

' ರುಡ್ಯಾರ್ಡ್ ಕಿಪ್ಲಿಂಗ್,' ರವರು, ಜನವರಿ, ೧೮, ೧೯೩೬ ರಂದು, ಲಂಡನ್ ನಲ್ಲಿ, ಮೃತರಾದರು. 'ವೆಸ್ಟ್ ಮಿನಿಸ್ಟರ್ ಅಬ್ಬೆ,' ಯ 'ಪೊಯಟ್ಸ್ ಕಾರ್ನರ್,' ನಲ್ಲಿ ಅವರ ಪಾರ್ಥಿವ ಶರೀರವನ್ನು ಮಣ್ಣುಮಾಡಲಾಯಿತು. ಅವರು ಹುಟ್ಟಿದ ಮನೆಯನ್ನು ಇಂದಿಗೂ ಮುಂಬಯಿ ನ, " ಜೆ. ಜೆ. ಮಹಾ ಕಲಾ ವಿದ್ಯಾಲಯದ ಕ್ಯಾಂಪಸ್," ನಲ್ಲಿ ಕಾಣಬಹುದು. ಕೇವಲ ಟೀಕ್ ಮರದಲ್ಲಿಯೇ ಸಂಪೂರ್ಣವಾಗಿ, ನಿರ್ಮಿಸಿರುವ, ಭವ್ಯ ಹಳೆಯ ಬಂಗಲೆಯ ಮುಖದ್ವಾರದಲ್ಲಿ, ನಮಗೆ ಕಾಣುವ ತಲೆಬರಹ, " ಈ ಮನೆಯಲ್ಲಿ, "ರುಡ್ಯಾರ್ಡ್ ಕಿಪ್ಲಿಂಗ್," ರವರು, ಡಿಸೆಂಬರ್, ೩೦, ೧೮೬೫ ರಂದು, ಜನಿಸಿದ್ದರು." ಎಂಬ ತೂಗುಬಿಟ್ಟ ಮರದ 'ಫಲಕ', ಕಲಾಪ್ರಿಯರಿಗೆಲ್ಲರಿಗೂ, ಮುದನೀಡುತ್ತದೆ.

'ರುಡ್ಯಾರ್ಡ್ ಕಿಪ್ಲಿಂಗ್,' ಒಟ್ಟಾರೆಬರೆದ ಕೃತಿಗಳು

[ಬದಲಾಯಿಸಿ]
  • (೧೮೮೮) 'ದ ಸ್ಟೋರಿ ಆಫ್ ದ ಗ್ಯಾಡ್ಸ್ ಬಿಸ್'.
  • (೧೮೮೮) 'ಪ್ಲೇನ್ ಟೇಲ್ಸ್ ಫ್ರಂಮ್ ದ ಹಿಲ್ಸ್'.
  • (೧೮೮೮) 'ದ ಫ್ಯಾಂಟಮ್ ರಿಕ್ಷ ಅಂಡ್ ಅದರ್ ಈರಿ ಟಾಕ್'.
  • (೧೮೮೮) 'ದ ಮ್ಯಾನ್ ಹು ವುಡ್ ಬಿ ಕಿಂಗ್, ಅಂಡ್ ಸೆವೆರಲ್ ಸ್ಟೋರೀಸ್'
  • (೧೮೯೦) 'ದ ಲೈಟ್ ದಟ್ ಫೇಲ್ಡ್'.
  • (೧೮೯೦) 'ಮ್ಯಾಂಡಲೆ' (ಕವನಗಳು).[]
  • (೧೮೯೦) 'ಗುಂಗಾದಿನ್ '(ಕವನಗಳು).[]
  • (೧೮೯೪) 'ಜಂಗಲ್ ಬುಕ್' (ಶಾರ್ಟ್ ಸ್ಟೋರೀಸ್).
  • (೧೮೯೫) 'ಸೆಕೆಂಡ್ ಜಂಗಲ್ ಬುಕ್'.
  • (೧೮೯೫) 'ಇಫ್' (ಕವನಗಳು).
  • (೧೮೯೭) 'ಕ್ಯಾಪ್ಟನ್ ಕರೇಜಿಯಸ್'.
  • (೧೮೯೮) 'ದ ಡೇಸ್ ವರ್ಕ್'.
  • (೧೮೯೯) 'ಸ್ಟಾಕಿ ಅಂಡ್ ಕಂ'.
  • (೧೯೦೧) 'ಕಿಮ್'.
  • (೧೯೦೨) 'ಜಸ್ಟ್ ಸೊ ಸ್ಟೋರೀಸ್'.
  • ೧೯೦೪ 'ಟ್ರ್ಯಾಫಿಕ್ಸ್ ಅಂಡ್ ಡಿಸ್ಕವರೀಸ್'.
  • (೧೯೦೬) 'ಪುಕ್ ಆಫ್ ಪೂಕ್ಸ್ ಹಿಲ್'.
  • (೧೯೦೬) 'ಆಕ್ಟಿಂಗ್ ಅಂಡ್ ರಿಯಾಕ್ಟಿಂಗ್'.
  • (೧೯೧೨) 'ಉಲ್ ಸ್ಟರ್'.
  • (೧೯೧೫) 'ಲೈಫ್ಸ್ ಹ್ಯಾಂಡಿಕ್ಯಾಪ್'. (ಶಾರ್ಟ್ ಸ್ಟೋರೀಸ್)
  • (೧೯೨೬) 'ಡೆಬಿಟ್ಸ್ ಅಂಡ್ ಕ್ರೆಡಿಟ್ಸ್'.
  • (೧೯೩೦) 'ದೈ ಸರ್ವೆಂಟ್ ಅಂಡ್ ಡಾಗ್'.
  • (೧೯೩೨) 'ಲಿಮಿಟ್ಸ್ ಅಂಡ್ ರೆನೆವಲ್ಸ್'.
  • (೧೯೩೩) 'ಕಲೆಕ್ಟೆಡ್ ಪೊಯಮ್ಸ್'.

'ಮುಂಬಯಿನ ಕಿಪ್ಲಿಂ ಬಂಗಲೆ',ಪರ್ಯಟಕರ ಅವಲೋಕನೆಗೆ

[ಬದಲಾಯಿಸಿ]

'ರುಡ್ಯಾರ್ಡ್ ಕಿಪ್ಲಿಂಗ್' ರ,ಮುಂಬಯಿನ ವಾಸದ ಮನೆಯನ್ನು [] ಭೇಟಿಕೊಡುವ ಪರ್ಯಟಕರ ಅವಲೋಕನೆಗೆ ಮೀಸಲಾಗಿಡಲಾಗಿದೆ,Watch and listen] <ref>

ಉಲ್ಲೇಖಗಳು

[ಬದಲಾಯಿಸಿ]
  1. The Times, 18 January 1936, p.12
  2. Bio-Rudyard Kipling Biography, Writer (1865–1936)
  3. 'Rudyard kipling English Wikipedia'
  4. The Famous People-Writers, Rudyard Kipling
  5. Poems
  6. TOI, Bombay, The Broadview Anthology of British Literature: The Victorian Era - Second By Joseph Black et al.
  7. Documentary about Rudyard Kipling (1 minute)

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]