ಪಂಚಕುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಚಕುಲ
Panchkula
Population
 (2001)
 • Total೧,೪೦,೯೯೨
Panchkula has the highest per capita income among all the cities of Haryana

ಪಂಚಕುಲ (ಹಿಂದಿ:पंचकुला़, ಪಂಜಾಬಿ:ਪੰਚਕੁਲਾ) ಭಾರತಹರಿಯಾಣ ರಾಜ್ಯದ ಪಂಚಕುಲ ಜಿಲ್ಲೆಯ ಒಂದು ಯೋಜಿತ ನಗರವಾಗಿದೆ. ಇದು ಚಂಡಿಗಢ ಯೂನಿಯನ್ ಟೆರಿಟರಿಯ(ಕೇಂದ್ರಾಡಳಿತ ಪ್ರದೇಶದ) ಒಂದು ಉಪನಗರವಾಗಿದೆ.ಅಲ್ಲದೇ ಚಂಡಿಗಢ ಕ್ಯಾಪಿಟಲ್ ರೀಜನ್‌‌ನ ಭಾಗವಾಗಿದೆ.(ರಾಜಧಾನಿಯ ಪ್ರದೇಶ) ಇದು ಪಂಜಾಬ್‌‌ನ ಮೊಹಾಲಿ ಜಿಲ್ಲೆಯೊಂದಿಗೆ ಕೂಡುಗೆರೆಯಿಲ್ಲದ ಸೀಮೆಯನ್ನು ಹಂಚಿಕೊಳ್ಳುತ್ತದೆ. ಇಂಡಿಯನ್ ಆರ್ಮಿ ವೆಸ್ಟರ್ನ್ ಕಮಾಂಡ್‌ನ ಘನತೆಯುಳ್ಳ ಚಂಡಿಮಂದಿರ್ ಕಾಂಟೋನ್ಮೆಂಟ್(ಸೈನ್ಯಾವಾಸ)‌ ಪ್ರಧಾನಕಛೇರಿಯೂ ಸಹ ಪಂಚಕುಲ ನಗರದಲ್ಲಿದೆ. ಪಂಚಕುಲ ಜಿಲ್ಲೆಯಲ್ಲಿ ಐದು ನಗರಗಳಿವೆ, ಅವುಗಳೆಂದರೆ - ಪಿಂಜೋರ್‌, ಕಾಲ್ಕ, ಬರ್ವಾಲ, ಮೋರ್ನಿ ಮತ್ತು ರೈಪುರ್ ರಾಣಿ. ಮೋರ್ನಿಯು ಹರಿಯಾಣದಲ್ಲಿರುವ ಏಕೈಕ ಗಿರಿಧಾಮವಾಗಿದೆ. ಪಂಚಕುಲ ನಗರದ ಜನಸಂಖ್ಯೆಯು 2006ರಲ್ಲಿ 2,00,000ರಷ್ಟಿತ್ತೆಂದು ಅಂದಾಜಿಸಲಾಗಿದೆ. ಪಂಚಕುಲ ಮತ್ತು ಮೊಹಾಲಿ (ಪಂಜಾಬ್‌ನಲ್ಲಿ) ಚಂಡಿಗಢದ ಎರಡು ಉಪನಗರಗಳಾಗಿವೆ. ಈ ಮೂರು ನಗರಗಳನ್ನು ಒಟ್ಟಾಗಿ ಚಂಡಿಗಢ ಟ್ರೈಸಿಟಿ ಎಂದು ಕರೆಯಲಾಗುತ್ತದೆ.

ಪಂಚಕುಲ ಹೆಸರಿನ ಮೂಲವು ಐದು ನೀರಾವರಿ ಕಾಲುವೆಗಳನ್ನು (ಅಥವಾ ಐದು ಕಾಲುವೆಗಳ ಪಂಚ ಕುಲವಾಗಿ ಮಾಡುವುದರಿಂದ ಕುಲಗಳು) ಆಧರಿಸಿದೆ. ಈ ಕಾಲುವೆಗಳು ಎತ್ತರ ಪ್ರದೇಶದಲ್ಲಿರುವ ಘಗ್ಗರ್ ನದಿಯಿಂದ ನೀರನ್ನು ಪಡೆಯುತ್ತವೆ.ಅಲ್ಲದೇ ಅದನ್ನು ನಾಡ ಸಾಹಿಬ್‌ನಿಂದ ಮಾನಸ ದೇವಿಯವರೆಗೆ ಹಂಚುತ್ತವೆ. ನಾಡ ಕಾಲುವೆಯು ಈಗ ನದಿಯಿಂದ ಸವೆದುಹೋಗಿದೆ. ಹೆಚ್ಚಿನ ಕುಲಗಳು ಚಂಡಿಮಂದಿರ್‌‌ನ ಸಿಪಾಯಿಬೀಡಿನ ಮೂಲಕ ಮಾನಸ ದೇವಿಯ ಕಡೆಗೆ ಸಾಗುತ್ತವೆ. ಈ ಕಾಲುವೆಗಳು ಸಮುದಾಯ ಆಸ್ತಿಗೆ ಒಂದು ಸುಂದರ,ಮಾದರಿ ಉದಾಹರಣೆಯಾಗಿವೆ.ಅವುಗಳನ್ನು ಗ್ರಾಮಸ್ಥರು ಆಯಾ ದಿನಗಳಲ್ಲಿ ಸಮನಾಗಿ ಹಂಚಿಕೊಂಡು ನಿರ್ವಹಿಸುತ್ತಾರೆ. ಈ ಕಾಲುವೆಗಳನ್ನು ಹಿಂದೆ ಒಬ್ಬ ರಾಜನು ನಿರ್ಮಿಸಿದ್ದನು. ನದಿಗಿಂತ ಹೆಚ್ಚು ಎತ್ತರದ ಪ್ರದೇಶಗಳಿಗೆ ನೀರನ್ನು ಸಾಗಿಸಲು ಮೇಲ್ಮೈ ಮಟ್ಟಕ್ಕೆ ಅನುಸಾರವಾಗಿ ಅವುಗಳನ್ನು ರಚಿಸಲಾಗಿದೆ.

ಭಾಷೆಗಳು[ಬದಲಾಯಿಸಿ]

ಹಿಂದಿ ಮತ್ತು ಪಂಜಾಬಿ ಪಂಚಕುಲದಲ್ಲಿ ಮಾತನಾಡುವ ಮುಖ್ಯ ಭಾಷೆಗಳಾಗಿವೆ. ಇಲ್ಲಿ ಇಂಗ್ಲಿಷ್ ಸಹ ಪ್ರಚಲಿತದಲ್ಲಿದೆ.

ಪ್ರಾಕೃತಿಕ ಲಕ್ಷಣಗಳು[ಬದಲಾಯಿಸಿ]

ಪಂಚಕುಲವು ಉತ್ತರ ಮತ್ತು ಪೂರ್ವದಲ್ಲಿ ಹಿಮಾಚಲ ಪ್ರದೇಶದಿಂದ, ಪಶ್ಚಿಮದಲ್ಲಿ ಪಂಜಾಬ್‌ ಮತ್ತು ಚಂಡಿಗಢದ ಯೂನಿಯನ್ ಟೆರಿಟರಿಯಿಂದ ಹಾಗೂ ದಕ್ಷಿಣ ಮತ್ತು ಪೂರ್ವದಲ್ಲಿ ಅಂಬಾಲ ಜಿಲ್ಲೆಯಿಂದ ಆವರಿಸಲ್ಪಟ್ಟಿದೆ. ಪಂಚಕುಲವು ಅದರ ಸೀಮೆಗಳನ್ನು ಚಂಡಿಗಢ, ಮೊಹಾಲಿ, ಸೊಲಾನ್ ಮತ್ತು ಅಂಬಾಲ ಜಿಲ್ಲೆಗಳೊಂದಿಗೆ ಹಂಚಿಕೊಂಡಿದೆ.

ಪಂಚಕುಲ ಜಿಲ್ಲೆಯು ಉಪೋಷ್ಣವಲಯದ ಮುಂಗಾರಿನ ಹವಾಗುಣವನ್ನು ಹೊಂದಿದೆ. ಇಲ್ಲಿ ಹೆಚ್ಚು ಬಿಸಿಯಾದ ಬೇಸಿಗೆ, ತಂಪಾದ ಚಳಿಗಾಲ, ಉತ್ತಮ ಮುಂಗಾರು ಮಳೆಗಾಲವಿರುತ್ತದೆ. ಇಲ್ಲಿನ ತಾಪಮಾನವು ಅತಿ ಹೆಚ್ಚಿನ ಪ್ರಮಾಣದಲ್ಲಿ ವ್ಯತ್ಯಾಸಗೊಳ್ಳುತ್ತದೆ. (-1 °C ರಿಂದ 43 °C). ಡಿಸೆಂಬರ್ ಮತ್ತು ಜನವರಿಯ ಚಳಿ ಸಮಯದಲ್ಲಿ ಕೆಲವೊಮ್ಮೆ ಇಬ್ಬನಿಯು ಬೀಳುತ್ತದೆ. ಈ ಜಿಲ್ಲೆಯಲ್ಲಿ ಪಶ್ಚಿಮ ವೈಪರಿತ್ಯದಿಂದಾಗಿ ಚಳಿಗಾಲದಲ್ಲೂ ಮಳೆಬರುತ್ತದೆ. ಇಲ್ಲಿ ಮಳೆಯು ಹೆಚ್ಚಾಗಿ ಮುಂಗಾರಿನಿಂದ ಬರುತ್ತದೆ. ಮೋರ್ನಿ ಬೆಟ್ಟಗಳು ಈ ಜಿಲ್ಲೆಯ ಮತ್ತು ಹರಿಯಾಣದ ಅತ್ಯಂತ ಎತ್ತರ ಪ್ರದೇಶವಾಗಿವೆ. ಘಗ್ಗರ್‌ ನದಿಯು ವರ್ಷದ ಎಲ್ಲಾ ಕಾಲದಲ್ಲೂ ಹರಿಯುವ ಏಕೈಕ ನದಿಯಾಗಿದೆ. ಈ ನದಿಯಲ್ಲಿ ಮುಂಗಾರನ್ನು ಬಿಟ್ಟು ಉಳಿದ ಕಾಲದಲ್ಲಿ ಹೆಚ್ಚು ಆಳದ ನೀರಿರುವುದಿಲ್ಲ. ಘಗ್ಗರ್‌ ನದಿಯ ವ್ಯವಸ್ಥೆಯನ್ನು ಈಗ ಮೂಲ ಸರಸ್ವತಿ ನದಿಯೆಂದು ಪರಿಗಣಿಸಲಾಗುತ್ತದೆ. ಇದು ಈಗ ರಾಜಸ್ಥಾನದಲ್ಲಿ ಬತ್ತಿಹೋಗಿ, ಸಮುದ್ರದ ವರೆಗೆ ತಲುಪುವುದಿಲ್ಲ. ಇದಕ್ಕೆ ಕಾರಣ ಭೌಗೋಳಿಕ ಬದಲಾವಣೆಗಳು. ಇವು ಸಟ್ಲೆಜ್‌ಅನ್ನು ಮತ್ತೊಂದು ಕಾಲುವೆಯಾಗಿ ರೊಪಾರ್‌ನಿಂದ ದಿಕ್ಕುಬದಲಾಯಿಸುತ್ತವೆ. ಈ ಜಿಲ್ಲೆಯ ಪ್ರಮುಖ ನದಿಗಳು/ಹೊಳೆಗಳೆಂದರೆ ಘಗ್ಗರ್‌, ಸಿರ್ಸಾ, ಕೌಶಲ್ಯ.

ಸಾಮಾನ್ಯವಾಗಿ ಜಿಲ್ಲೆಯ ಇಳಿಜಾರು ಪ್ರದೇಶವು ಈಶಾನ್ಯದಿಂದ ನೈಋತ್ಯ ಭಾಗದವರೆಗೆ ಇದೆ. ಈ ದಿಕ್ಕಿನಲ್ಲಿ ಹೆಚ್ಚಿನ ನದಿಗಳು/ಹೊಳೆಗಳು ರಭಸವಾಗಿ ಕೆಳಮುಖವಾಗಿ ಹರಿಯುತ್ತವೆ ಹಾಗೂ ಅವುಗಳ ತಳದಲ್ಲಿ ಹೆಚ್ಚು ಗ್ರ್ಯಾವೆಲ್‌ಗಳು(ಜಲ್ಲಿ ಮತ್ತು ಗರಸುಗಲ್ಲಿನ ಹಾದಿ) ಮತ್ತು ಉರುಟುಗಲ್ಲುಗಳು ಸಂಗ್ರಹವಾಗುತ್ತವೆ. ಸಿರ್ಸಾ ನದಿಯು ಮಾತ್ರ ಕಾಲ್ಕಾ ಟೆಹ್ಸಿಲ್‌ನಲ್ಲಿ(ಪ್ರದೇಶದಲ್ಲಿ) ಶಿವಾಲಿಕ್ ಹರವಿನ ಯು ಬಾಣದ ರೀತಿಯ ನಿಲುಗಡೆಯ ಮೂಲಕ ವಾಯವ್ಯ ದಿಕ್ಕಿಗೆ ಹರಿಯುತ್ತದೆ. ಜಿಲ್ಲೆಯಲ್ಲಿರುವ ಮಣ್ಣಿನ ವಿಧಗಳೆಂದರೆ - ತಿಳಿಯಾದ ಕಲಸುಮಣ್ಣು (ಸಿಯೋಟಿ), ಪಿಯೆಡ್ಮಂಟ್ (ಘರ್ ಮತ್ತು ಕಂದಿ), ಸ್ವಾಲಿಕ್ (ಪಹಾರ್), ಸಿಲ್ಟಿಕ್ಲೇ (ನೈಲಿ ಮತ್ತು ಚಾಚ್ರ ದಕಾರ್) ಇತ್ಯಾದಿ.

ಜಿಲ್ಲೆಯಲ್ಲಿ ಅಂತರ್ಜಲವು ಬಲಪಡಿಸಿದ ಮತ್ತು ಅರೆ-ಬಲಪಡಿಸಿದ ಸ್ಥಿತಿಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಶುದ್ಧವಾಗಿರುತ್ತದೆ. ಹಾಗಾಗಿ ಗೃಹ ಮತ್ತು ನಿರಾವರಿ ಬಳಕೆಗೆ ಯೋಗ್ಯವಾಗಿರುತ್ತದೆ. ಅಂತರ್ಜಲ ಮಟ್ಟವು ಸಾಮಾನ್ಯವಾಗಿ ದಕ್ಷಿಣ ಭಾಗದಲ್ಲಿ ಹೆಚ್ಚಾಗಿರುತ್ತದೆ ಹಾಗೂ ಉತ್ತರ ಮತ್ತು ಈಶಾನ್ಯದಲ್ಲಿ ಗುಡ್ಡಗಳಿಂದ ಕೂಡಿದ ಪ್ರದೇಶದಲ್ಲಿ ಕಡಿಮೆಯಿರುತ್ತದೆ. ಈ ಜಿಲ್ಲೆಯು ಭೂಕಂಪನ ವಲಯದಲ್ಲಿ ಬರುತ್ತದೆ. ಇಲ್ಲಿ ಹಿಂದೆ ಸ್ವಲ್ಪ ಮಟ್ಟಿನ ಭೂಕಂಪನಗಳು ಕಂಡುಬಂದಿದ್ದವು. ಹಿಮಾಲಯ ಗಡಿಯ ದೋಷ ವಲಯದಲ್ಲಿ ಕಂಡುಬರುವ ಇದು ಭೂಕಂಪನಗಳಿಗೆ ಈಡಾಗುವ ಸಂಭವಗಳು ಹೆಚ್ಚಿರುತ್ತದೆ.

ಅರಣ್ಯ ವ್ಯಾಪ್ತಿ[ಬದಲಾಯಿಸಿ]

ಹರಿಯಾಣದ ಪಿಂಜೋರ್‌ನಲ್ಲಿರುವ ಮೊಘಲ್ ಉದ್ಯಾನಗಳು

ಈ ಜಿಲ್ಲೆಯಲ್ಲಿ 42.54 %ನಷ್ಟು ಪ್ರದೇಶವು ಅರಣ್ಯದಿಂದ ಕೂಡಿದೆ. ಈ ಪ್ರಮಾಣವು ರಾಜ್ಯದಲ್ಲೇ ಅತಿ ಹೆಚ್ಚಾಗಿದೆ. ಇದು ಮೂಲತಃ ಪಂಚಕುಲ ನಗರದಿಂದ ಹೊರಗೆ ಗುಡ್ಡ ಪ್ರದೇಶಗಳಲ್ಲಿ ಕಂಡುಬರುತ್ತದೆ. ಎತ್ತರವಾದ ಸ್ಥಳವಿದ್ದು, ಯುಕ್ತವಾಗಿ ಉತ್ತಮ ಮಳೆಬೀಳುವುದರಿಂದ ಈ ಜಿಲ್ಲೆಯು ಯಥೇಚ್ಛ ಮತ್ತು ಸಮೃದ್ಧ ಸಸ್ಯವರ್ಗದ ಬೆಳವಣಿಗೆಗೆ ಸೂಕ್ತವಾದ ಹವಾಗುಣ ಹೊಂದಿದೆ. ಶೈಶಮ್ (ಡಲ್ಬರ್ಜಿಯ ಸಿಸ್ಸೊ), ಕಿಕಾರ್ (ಅಕೇಶಿಯ ನಿಲೋಟಿಕ) ಮತ್ತು ಮ್ಯಾಂಗೊ (ಮ್ಯಾಂಜಿಫೆರ ಇಂಡಿಕ) ಮೊದಲಾದವು ಈ ಜಿಲ್ಲೆಯ ಬಯಲು ಪ್ರದೇಶಗಳಲ್ಲಿ ಬೆಳೆಯುವ ಮರಗಳ ಮುಖ್ಯ ಜಾತಿಗಳಾಗಿವೆ. ಸಫೇದ (ಯುಕ್ಯಾಲಿಪ್ಟಸ್ ಹೈಬ್ರಿಡ್)ವನ್ನು 1963ರಿಂದ ಅರಣ್ಯ ಪ್ರದೇಶಗಳಲ್ಲಿ ಮಾತ್ರವಲ್ಲದೆ ಖಾಸಗಿ ಜಮೀನಿನಲ್ಲೂ ಬೆಳೆಸಲಾಗುತ್ತಿದೆ. ಪಾಪ್ಲಾರ್ಅನ್ನೂ ಸಹ ಗುತ್ತಿಗೆ ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ನೈಸರ್ಗಿಕ ಸಸ್ಯವರ್ಗವು ಮುಖ್ಯವಾಗಿ ಅರಣ್ಯ ಬೆಳವಣಿಗೆ ಮತ್ತು ಅದರ ನಾಶದ ಹಂತಗಳನ್ನು ಅವಲಂಬಿಸಿದೆ. ಇಲ್ಲಿ ಉಷ್ಣವಲಯದ ಶುಷ್ಕ, ವರ್ಷಕ್ಕೊಮ್ಮೆ ಎಲೆ ಉದುರುವ ಅರಣ್ಯಗಳು ಮತ್ತು ಉಪೋಷ್ಣವಲಯದ ಅರಣ್ಯಗಳು ಕಂಡುಬರುತ್ತವೆ. ಪೈನ್ ಮರಗಳು ಮೋರ್ನಿ ಬೆಟ್ಟಗಳಲ್ಲಿ ಕಂಡುಬರುತ್ತವೆ. ಜಿಲ್ಲೆಯ ಹೆಚ್ಚಿನ ಅರಣ್ಯಗಳು ಮೋರ್ನಿ-ಪಿಂಜೋರ್‌ ವಲಯದಲ್ಲಿವೆ. ಈ ಗುಡ್ಡಗಳಿಂದ ಕೂಡಿದ ಅರಣ್ಯ ಪ್ರದೇಶವು ಮೋರ್ನಿಯನ್ನು ಮತ್ತು ಪಿಂಜೋರ್‌ನ ಅಂಚು ಪ್ರದೇಶವನ್ನು ಆವರಿಸುತ್ತದೆ. ಆದ್ದರಿಂದ ಪಂಚಕುಲ ಜಿಲ್ಲೆಯ ಅರಣ್ಯಗಳ ನಿರ್ವಹಣೆಯನ್ನು ಮೋರ್ನಿ-ಪಿಂಜೋರ್‌ ಫಾರೆಸ್ಟ್ ಡಿವಿಜನ್ ವಹಿಸುತ್ತದೆ.

ಪಂಚಕುಲದ ಅರ್ಬನ್ ಎಸ್ಟೇಟ್ (ನಗರದ ಭೂಮಿಕಾಣಿ-ಪ್ರದೇಶ)[ಬದಲಾಯಿಸಿ]

ಪಂಚಕುಲದ ಹೊಸ ಅರ್ಬನ್ ಎಸ್ಟೇಟ್ ಚಂಡಿಗಢದ ಪಶ್ಚಿಮಕ್ಕಿದೆ. ಚಂಡಿಗಢ ರೈಲು ನಿಲ್ದಾಣವು ಚಂಡಿಗಢ-ಪಂಚಕುಲ ಗಡಿಪ್ರದೇಶದಲ್ಲಿದೆ ಹಾಗೂ ಇದು ಪಂಚಕುಲದ ಕಡೆಗೆ ಒಂದು ನಿರ್ಗಮನವನ್ನು ಹೊಂದಿದೆ. ಶಿವಾಲಿಕ್ ಎಂಕ್ಲೇವ್(ಪರಾವೃತಪ್ರದೇಶ) ಮತ್ತು ಮಣಿಮಾಜ್ರ ಪಂಚಕುಲದ ಅರ್ಬನ್ ಎಸ್ಟೇಟ್‌ನ ವಾಯವ್ಯ ಭಾಗಕ್ಕಿದೆ. ಚಂಡಿಮಂದಿರ್‌‌ನ ಸೈನ್ಯಾವಾಸವು ಪಂಚಕುಲದ ಅರ್ಬನ್ ಎಸ್ಟೇಟ್‌ನ ಉತ್ತರಕ್ಕಿದೆ. ಅರ್ಬನ್ ಎಸ್ಟೇಟ್‌ನ ದಕ್ಷಿಣದ ಅಂಚಿನಲ್ಲಿ ಪಂಜಾಬ್‌ನ ಜಿರಾಕ್ಪುರ್‌ ಇದೆ.

ಹೆಚ್ಚಿನ ಅಭಿವೃದ್ಧಿ ಹೊಂದಿದ ಪ್ರದೇಶಗಳು ಘಗ್ಗರ್‌ ನದಿಯ ಪಶ್ಚಿಮ ದಿಕ್ಕಿನಲ್ಲಿವೆ. ಶಿಮ್ಲಾ ಹೆದ್ದಾರಿಯು ಘಗ್ಗರ್‌ ನದಿಗೆ ಸಮಾನಂತರವಾಗಿ ಎಸ್ಟೇಟ್‌ನ ಮೂಲಕ ಹಾದುಹೋಗುತ್ತದೆ. ಇದರ ಹೊಸ ಪ್ರದೇಶಗಳು ಘಗ್ಗರ್‌ ನದಿಯ ಪಶ್ಚಿಮ ತೀರದಲ್ಲಿವೆ. ಇವು ಚಂಡಿಗಢದ ಹೊರವಲದಲ್ಲಿ ಶಿವಾಲಿಕ್ ಬೆಟ್ಟಗಳ ಮತ್ತು ಘಗ್ಗರ್‌ ನದಿಯ ಚಿತ್ರಸದೃಶ ಹಿನ್ನೆಲೆಯಲ್ಲಿ ಅಭಿವೃದ್ಧಿಗೊಂಡಿವೆ. ಈ ನಗರವು ವಾಸಗೃಹಗಳಿರುವ ಪ್ರದೇಶ, ಕೈಗಾರಿಕಾ ಕ್ಷೇತ್ರ, ಉದ್ಯಾನಗಳು ಮತ್ತು ಪ್ರಾದೇಶಿಕ ಮನರಂಜನಾ ಪ್ರದೇಶಗಳು, ಪ್ರಮುಖ ಸಂಸ್ಥೆಗಳು, ಮಾರುಕಟ್ಟೆಗಳು ಹಾಗೂ ಸರ್ಕಾರಿ ಮತ್ತು ಅರೆ-ಸರ್ಕಾರಿ ಕಛೇರಿಗಳಾಗಿ ಉಪವಿಭಾಗಗೊಂಡಿದೆ.

ಪೂರ್ವದ ಪ್ರದೇಶಗಳು ರಾಮಗಢದ ಗಡಿರೇಖೆಯಲ್ಲಿವೆ. ಇದರ ಮೂಲಕ ರಸ್ತೆಯೊಂದು ದಕ್ಷಿಣಕ್ಕೆ ಪಂಜಾಬ್‌‌ನ ದೇರ ಬಸ್ಸಿಗೆ ಮುಬಾರಕ್‌ಪುರ್ ಮೂಲಕ ಹಾದುಹೋಗುತ್ತದೆ. ರಾಮಗಢದ ಪೂರ್ವಕ್ಕೆ ನರೈನ್‌ಗಢಕ್ಕೆ (ಅಂಬಾಲ ಜಿಲ್ಲೆಯಲ್ಲಿ) ಹೋಗುವ ಮಾರ್ಗದಲ್ಲಿ ಬರ್ವಾಲವಿದೆ. ಅಲ್ಲಿ ಒಂದು ಕೈಗಾರಿಕಾ ಎಸ್ಟೇಟ್ಅನ್ನು ವ್ಯವಸ್ಥೆಗೊಳಿಸಲಾಗಿದೆ. ರೈಪುರ್ ರಾಣಿಯಲ್ಲಿ ಸಬೀರ್ ಭಾಟಿಯಾ ಒಂದು ನ್ಯಾನೊ ನಗರವನ್ನು ಯೋಜಿಸುವ ಗುರಿಯನ್ನು ಹೊಂದಿದ್ದಾನೆ. ನಹಾನ್-ಪಯೋಂಟ-ಡೆಹ್ರಾಡೂನ್‌ಗೆ ಹೋಗುವ ರಸ್ತೆಯು ಈ ನಗರಗಳ ಮೂಲಕ ಹಾದುಹೋಗುತ್ತದೆ. ರೈಪುರ್ ರಾಣಿಯ ಕಿರುದಾರಿಯು ಒಂದು ತಿರುವು ಆಗಿದೆ, ಇದು ಅಂಬಾಲ ಮತ್ತು ಯಮುನಗರದ ಮಧ್ಯೆ ದೊಸಾರ್ಕಕ್ಕೆ ಹೋಗುತ್ತದೆ.

ಅಂಬಾಲ-ಕಾಲ್ಕ ರಾಷ್ಟ್ರೀಯ ಹೆದ್ದಾರಿ ಮತ್ತು ಘಗ್ಗರ್‌ ನದಿಯ ನಡುವಿನ ಹಳೆಯ ಪಂಚಕುಲದ ದಕ್ಷಿಣಕ್ಕಿರುವ ವಿಶಾಲ ಪ್ರದೇಶವನ್ನು ಮನರಂಜನೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಪ್ರದೇಶವು ಒಂದು ಗಾಲ್ಫ್ ಮೈದಾನವನ್ನು ಮತ್ತು ಟಾ ದೇವಿ ಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಎಂಬ ಹೆಸರಿನ ಒಂದು ಕ್ರೀಡಾ ಸಂಕೀರ್ಣವನ್ನು ಹೊಂದಿದೆ. ಟಾ ದೇವಿ ಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ICL ಕ್ರಿಕೆಟ್ ಪಂದ್ಯಾವಳಿಗಳು ನಡೆಯುವುದರಿಂದ ಅದು ಹೆಚ್ಚು ಪ್ರಸಿದ್ಧವಾಗಿದೆ.

ಚಂಡಿಮಂದಿರ್‌ನ ಉತ್ತರಕ್ಕೆ ಬೆಟ್ಟಗಳು, ಪಿಂಜೋರ್‌ ಮತ್ತು ಕಾಲ್ಕ ಇದೆ. ಪಿಂಜೋರ್‌ಗೆ ನೇರವಾಗಿ ಪಶ್ಚಿಮಕ್ಕೆ ಕೈಗಾರಿಕಾ ಪ್ರದೇಶ ಬಡ್ಡಿ ಇದೆ. HMT ಕಾರ್ಖಾನೆಯು ಪಿಂಜೋರ್‌ನಲ್ಲಿದೆ ಹಾಗೂ ನಿರ್ಮಿತ ಶೆಡ್‌ಗಳೊಂದಿಗೆ HMT ಯ ಒಂದು ಸಹಾಯಕ ಕೈಗಾರಿಕಾ ಎಸ್ಟೇಟ್ಅನ್ನು ಇಲ್ಲಿ ಸ್ಥಾಪಿಸಲಾಗಿದೆ. ಭಾರತ್ ಎಲೆಕ್ಟ್ರೋನಿಕ್ಸ್ ಲಿಮಿಟೆಡ್ (BEL-ಒಂದು ಭಾರತ ಸರ್ಕಾರದ ಉದ್ಯಮ) ಪಂಚಕುಲ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 58 ಎಕರೆ ಜಾಗವನ್ನು ಆವರಿಸಿದೆ ಹಾಗೂ ಇದು ಇಂದು ಅತಿ ಹೆಚ್ಚಿನ ಕಾರ್ಮಿಕ ವರ್ಗವನ್ನು ಹೊಂದಿದೆ.

ಪಂಚಕುಲದ ಅರ್ಬನ್ ಎಸ್ಟೇಟ್[ಬದಲಾಯಿಸಿ]

ಹಂತ I[ಬದಲಾಯಿಸಿ]

1ರಿಂದ 19ರವರೆಗಿನ ವಲಯಗಳಿರುವ ಈ ಕೈಗಾರಿಕಾ ಪ್ರದೇಶವು ದೊಡ್ಡ ತ್ರಿಕೋನಾಕಾರದಲ್ಲಿದೆ, ಈ ತ್ರಿಕೋನದ ಒಂದು ಬಾಹು ರೈಲು ಮಾರ್ಗವಾಗಿದ್ದು, ಮತ್ತೊಂದು ಜಿರಾಕ್‌ಪುರ್ ಕಾಲ್ಕ ರಸ್ತೆಯಾಗಿದೆ. ಈ ಕೈಗಾರಿಕಾ ಪ್ರದೇಶವು ಹೆಚ್ಚಾಗಿ ರೈಲು ಮಾರ್ಗದುದ್ದಕ್ಕೂ ಚಾಚಿಕೊಂಡಿದೆ. ಎಲ್ಲಾ ಪ್ರಮುಖ ವಲಯಗಳು ಮತ್ತು ಉತ್ತಮವಾಗಿ ಅಭಿವೃದ್ಧಿಹೊಂದಿದ ಮಾರುಕಟ್ಟೆಗಳು ಈ ತ್ರಿಕೋನವನ್ನು ಆವರಿಸುತ್ತವೆ.

ಹಂತ 2[ಬದಲಾಯಿಸಿ]

20ರಿಂದ 30ರವರೆಗಿನ ವಲಯಗಳು. ಇದು ಜಿರಾಕ್ಪುರ್-ಕಾಲ್ಕ ಮಾರ್ಗದಾದ್ಯಂತ ಮತ್ತು ಘಗ್ಗರ್ ನದಿಯ ಎರಡೂ ತೀರಗಳಲ್ಲಿ ಕೆಲವು ವಲಯಗಳನ್ನು ಹೊಂದಿದೆ. ಈ ಪ್ರದೇಶವು ಅಭಿವೃದ್ಧಿಯಾಗುತ್ತಿದೆ ಹಾಗೂ ಮುಂದಿನ ವರ್ಷಗಳಲ್ಲಿ ಇದನ್ನು ಆಧುನಿಕ ಪಂಚಕುಲವೆಂದು ಕರೆಯಲಾಗುತ್ತದೆ.

ಹಂತ 3[ಬದಲಾಯಿಸಿ]

ಇವು ರಾಮಗಢದ ಆಚೆಗೆ, ಅಸ್ತಿತ್ವದಲ್ಲಿರುವ ವಲಯಗಳ ಪೂರ್ವಕ್ಕಿರುವ ಹೊಸದಾಗಿ ಘೋಷಿಸಲಾದ ವಲಯಗಳಾಗಿವೆ.

ಪ್ರವಾಸಿಗರ ಆಕರ್ಷಣೆಯ ಸ್ಥಳಗಳು[ಬದಲಾಯಿಸಿ]

ಮೋರ್ನಿ ಬೆಟ್ಟಗಳು[ಬದಲಾಯಿಸಿ]

ಮೋರ್ನಿ ಬೆಟ್ಟಗಳು ಹಿಮಾಲಯದ ಶಿವಾಲಿಕ್ ಶ್ರೇಣಿಯ ಕವಲುಗಳಾಗಿವೆ, ಇವು ಎರಡು ಸಮಾಂತರ ಶ್ರೇಣಿಗಳಲ್ಲಿ ಕಂಡುಬರುತ್ತವೆ. ಮೋರ್ನಿ ಹಳ್ಳಿಯು (ಭೋಜ್ ಜಬಿಯಲ್) ಬೆಟ್ಟದ ಪಾರ್ಶ್ವದಲ್ಲಿ, ಸಮುದ್ರ ಮಟ್ಟಕ್ಕಿಂತ 1220 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಸಂಪ್ರದಾಯಗಳು ಮೋರ್ನಿ ಹೆಸರು ರಾಣಿಯ ಹೆಸರಿಗೆ ಸೇರಿದ್ದೆಂದು ಸೂಚಿಸುತ್ತವೆ, ಆಕೆಯು ಈ ಪ್ರದೇಶವನ್ನು ಆಳಿದ್ದಳೆಂದು ನಂಬಲಾಗುತ್ತದೆ. ಈ ಬೆಟ್ಟಗಳ ಚಾಚಿನಲ್ಲಿರುವ ಎರಡು ಸರೋವರಗಳಲ್ಲಿ, ದೊಡ್ಡದಾದ ಒಂದು ಸುಮಾರು 550 ಮೀಟರ್‌ಗಳಷ್ಟು ಉದ್ದ ಮತ್ತು 460 ಮೀಟರ್‌ಗಳಷ್ಟು ಅಗಲವಾಗಿದೆ ಹಾಗೂ ಮತ್ತೊಂದು ಸರೋವರವು ಸುಮಾರು 365 ಮೀಟರ್‌ಗಳಷ್ಟು ಉದ್ದ ಮತ್ತು ಅಗಲವಿದೆ. ಈ ಎರಡು ಸರೋವರಗಳನ್ನು ಒಂದು ಬೆಟ್ಟವು ವಿಭಾಗಿಸುತ್ತದೆ. ಆದರೆ ಅಲ್ಲಿ ಮರೆಯಾಗಿರುವ ಕಾಲುವೆಯಿರುವುದರಿಂದ ಎರಡು ಸರೋವರಗಳ ಮಟ್ಟವು ಒಂದೇ ರೀತಿ ಇರುತ್ತದೆ. ಅಲ್ಲಿನ ಜನರು ಈ ಸರೋವರಗಳನ್ನು ಪೂಜ್ಯವಾದುದೆಂದು ಭಾವಿಸುತ್ತಾರೆ. ಅಲ್ಲಿ ಒಂದು ಹಳೆಯ ಕೋಟೆಯಿದೆ, ಅದು ಈಗ ಪಾಳುಬಿದ್ದಿದೆ. ಈ ಬೆಟ್ಟಗಳಲ್ಲಿ ಪೈನ್ ಮರಗಳು ಆವರಿಸಿವೆ. ಇಲ್ಲಿನ ಹವಾಗುಣವು ಹಿತಕರವಾಗಿದೆ ಮತ್ತು ಈ ಪ್ರದೇಶವು ಟ್ರೆಕ್ಕಿಂಗ್‌ಗೆ ಸೂಕ್ತವಾಗಿದೆ. ಹರಿಯಾಣ ಸರ್ಕಾರವು ಈ ಗಿರಿಧಾಮವನ್ನು ಅಭಿವೃದ್ಧಿಪಡಿಸಿದೆ ಹಾಗೂ ಪ್ರವಾಸಿಗರಿಗೆ ಅನೇಕ ಸೌಕರ್ಯಗಳನ್ನು ಒದಗಿಸುತ್ತದೆ. ಮೋರ್ನಿ ಬೆಟ್ಟಗಳನ್ನು ಪಂಚಕುಲದ ಹತ್ತಿರ ಹರಿಯಾಣ ರಾಜ್ಯ ಹೆದ್ದಾರಿಯೊಂದಿಗೆ ಸಂಪರ್ಕ ಕಲ್ಪಿಸಲು ಮೋಟಾರು ವಾಹನಗಳು ಸಂಚರಿಸಬಹುದಾದ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಅಲ್ಲಿ ಹರಿಯಾಣ ಪ್ರವಾಸೋದ್ಯಮವು "ಮೌಂಟೇನ್ ಕೈಲ್" ಎಂಬ ಹೆಸರಿನ ಒಂದು ಹೋಟೆಲ್ಅನ್ನು ಹೊಂದಿದೆ. ಅಲ್ಲಿ "ಲಾಲ್ ಮುನಿಯ" ಎಂಬ ಹೆಸರಿನ ಒಂದು ಅರಣ್ಯ ವಿಭಾಗದ ವಿಶ್ರಾಂತಿಧಾಮ ಮತ್ತು ಒಂದು PWD ಪ್ರವಾಸಿ ಮಂದಿರವಿದೆ. ಅಲ್ಲಿ ಒಂದು ಖಾಸಗಿ ಹೋಟೆಲ್ ಸಹ ಇದೆ.

ಟಿಕ್ಕರ್ ತಾಲ್ ಎಂಬುದು ಅಲ್ಲಿರುವ ಒಂದು ಮುಖ್ಯ ಪ್ರವಾಸಿಗರ ಆಕರ್ಷಣಾ ಕೇಂದ್ರವಾಗಿದೆ.

ಪಿಂಜೋರ್‌ ಉದ್ಯಾನಗಳು[ಬದಲಾಯಿಸಿ]

ಪಿಂಜೋರ್‌ ಯಾದವಿಂದ್ರ ಗಾರ್ಡನ್ಸ್ ಎನ್ನುವ ಸುಂದರವಾದ ಮೊಘಲ್ ಉದ್ಯಾನಗಳಿಗೆ ಪ್ರಸಿದ್ಧವಾಗಿದೆ. ಇದು ಉತ್ತರ ಭಾರತದಲ್ಲೇ ಅತಿ ಸೊಗಸಾದ ಮತ್ತು ಹಳೆಯ ಉದ್ಯಾನವಾಗಿದೆ. ಇದನ್ನು 17ನೇ ಶತಮಾನದಲ್ಲಿ ಫಿದೈಖಾನ್ ನಿರ್ಮಿಸಿದನೆಂದು ಹೇಳಲಾಗುತ್ತದೆ. ಈ ಸಂಪೂರ್ಣ ಸಂಕೀರ್ಣವನ್ನು ಹರಿಯಾಣ ಪ್ರವಾಸಿ ವಿಭಾಗವು ಅಭಿವೃದ್ಧಿಪಡಿಸಿತು. ಇದು ವಿದ್ಯುತ್ ದೀಪಾಂಲಕೃತ ಕಾರಂಜಿಗಳು, ಒಂದು ರೆಸ್ಟಾರೆಂಟ್, ಕೆಲವು ಕೊಠಡಿಗಳು ಮತ್ತು ಒಂದು ಸಣ್ಣ ಮೃಗಾಲಯವನ್ನು ಹೊಂದಿದೆ. ರಾಜೋಚಿತ ರಾಜ್ಯ ಪಂಜಾಬ್‌‌ನ ಪಟಿಯಾಲದ ರಾಜ ದಿವಂಗತ ಯಾದವಿಂದ್ರ ಸಿಂಗ್ ಮಹಾರಾಜನ ಗೌರವ ಸೂಚಕವಾಗಿ ಇದಕ್ಕೆ ಯಾದವಿಂದ್ರ ಗಾರ್ಡನ್ಸ್ ಎಂದು ಮರುಹೆಸರಿಸಲಾಯಿತು. ಉದ್ಯಾನದ ಮುಖ್ಯ ದ್ವಾರವು ಅತ್ಯಂತ ಎತ್ತರದ ಟೆರೇಸ್‌ನಲ್ಲಿ ತೆರೆದುಕೊಳ್ಳುತ್ತದೆ ಹಾಗೂ ಉದ್ಯಾನದ ಬಹುವ್ಯಾಪಕ ಸೀಮೆಯೊಳಗೆ ಏಳು ಟೆರೇಸ್‌ಗಳು ಕಂಡುಬರುತ್ತವೆ. ಮೊದಲ ಟೆರೇಸ್‍ನ ಮಧ್ಯಭಾಗದಲ್ಲಿ ಶಿಶ್ ಮಹಲ್ ಇದೆ, ಇದು ಸಣ್ಣ ಕಿಟಕಿಗಳು ಮತ್ತು ಕಿಂಡಿಗಳೊಂದಿಗೆ ರಾಜಸ್ಥಾನಿ ಮೊಘಲ್ ಶೈಲಿಯಲ್ಲಿದೆ. ಅಲ್ಲಿ ಒಂದು ಸಂಗೀತಮಯ ಹವಾ ಮಹಲ್ ಇದೆ, ಗೋಡೆಯ ಬದಿಯಲ್ಲಿರುವ ಮೆಟ್ಟಿಲುಗಳ ಮೂಲಕ ಅಲ್ಲಿಗೆ ಹೋಗಬಹುದು. ಎರಡನೇ ಟೆರೇಸ್ಅನ್ನು ದೊಡ್ಡ ಕಮಾನಿನಾಕಾರದ ಬಾಗಿಲ ದಾರಿಯ ಮೂಲಕ ಹತ್ತಬಹುದು. ಅದರ ಮೇಲೆ ವಾಸ್ತುಶಿಲ್ಪಿಯು ಅತ್ಯಂತ ಚತುರತೆಯಿಂದ ನಿರ್ಮಿಸಿದ ಒಂದು ರಂಗ್ ಮಹಲ್ ಇದೆ. ಇಲ್ಲಿನ ತೆರೆದ ಹಜಾರದಿಂದ ಕೆಳಗಿನ ಟೆರೇಸ್‌ಗಳನ್ನು ವೀಕ್ಷಿಸಬಹುದು. ಈ ಮಹಲು ಒಂದು ಬೃಹತ್ ಅಂಗಣವನ್ನು ಹೊಂದಿದೆ. ಈ ದೊಡ್ಡ ಮಹಲಿನ ಎರಡೂ ಕಡೆಗಳಲ್ಲಿರುವ ಮರೆಯಾಗಿರುವಂತಿರುವ ಮೆಟ್ಟಿಲುಗಳ ಮೂಲಕ ಮೂರನೇ ಟೆರೇಸ್‌ಗೆ ಹೋಗಬಹುದು. ಅಲ್ಲಿ ಸೈಪ್ರಿಸ್‌ಗಳು ಮತ್ತು ಹೂಪಾತಿಗಳಿವೆ, ನಂತರ ಕೆಳಗೆ ಬರುವಾಗ ಪ್ರತಿಯೊಂದು ಪದರದಲ್ಲಿ ಒತ್ತಾಗಿರುವ ಹಣ್ಣಿನ ಮರಗಳಿವೆ. ಹಚ್ಚ ಹಸಿರಿನ ಎಲೆಗಳ ದಟ್ಟತೆಯು ಆಳದ ತೀವ್ರತೆಯನ್ನು ಎತ್ತಿತೋರಿಸುತ್ತದೆ. ಕಾರಂಜಿಗಳ ಮೇಲ್ಮುಖ ಹರಿವು ಕಣ್ಣಿಗೆ ಮನಮೋಹಕವಾಗಿರುತ್ತದೆ. ಅಲ್ಲಿ ಒಂದು ಚೌಕಾಕಾರದ ಕಾರಂಜಿ ಮತ್ತು ಕುಳಿತುಕೊಂಡು ಆನಂದಿಸಲು ಕಂಬದ ಪೀಠವನ್ನು ಒಳಗೊಂಡ ಒಂದು ಘನಾಕಾರದ ಜಲ್ ಮಹಲ್ ಇದೆ. ಮುಂದಿನ ಟೆರೇಸ್‍‌ನ ಅಕ್ಕಪಕ್ಕದಲ್ಲಿ ಒತ್ತಾಗಿರುವ ಮರಗಳಿದ್ದು, ಮಧ್ಯದಲ್ಲಿ ವಿದ್ಯುತ್ ದೀಪಾಲಂಕೃತ ನೀರಿನ ಉಪಕರಣಗಳಿವೆ. ಬಾಗಿಲದಾರಿಯ ಕೊನೆಯ ರಚನೆಯನ್ನು ಇತ್ತೀಚೆಗೆ ಡಿಸ್ಕ್-ರೀತಿಯ ಹೊರಾಂಗಣವಾಗಿ ನಿರ್ಮಿಸಲಾಗಿದೆ. ಉದ್ಯಾನದ ಬಲವಾದ ಹೊರಗಿನ ಗೋಡೆಯು ಕೋಟೆಯ ಗೋಡೆಗಳನ್ನು ನೆನಪಿಗೆ ತರುತ್ತದೆ. ಈಗ ಇದು ಮೃಗಾಲಯವನ್ನೂ ಒಳಗೊಂಡಿದೆ. ಹರಿಯಾಣ ಪ್ರವಾಸೋದ್ಯಮವು ಈ ಉದ್ಯಾನದಲ್ಲಿ ಬುಡೆರಿಗಾರ್ ಎಂಬ ಒಂದು ಹೋಟೆಲ್ಅನ್ನು ಮತ್ತು ಅದಕ್ಕೆ ಹೊಂದಿಕೊಂಡಂತಹ ಒಂದು ರೆಸ್ಟಾರೆಂಟ್ಅನ್ನು ಹೊಂದಿದೆ.

ಪಿಂಜೋರ್‌ ಸಹ ಒಂದು ಐತಿಹಾಸಿಕ ಸ್ಥಳವಾಗಿದೆ. ಪೇಲಿಯೊಲಿಥಿಕ್ ಅವಧಿಯಲ್ಲಿ ಕ್ವಾರ್ಟ್ಸೈಟ್‌ನಿಂದ ರಚಿಸಲಾದ ಗೋಪುರದ ಸಾಧನಗಳು ಪಿಂಜೋರ್‌‌ನಿಂದ ನಲಗಢದವರೆಗೆ ಹರಡಿಕೊಂಡ ಪ್ರದೇಶದಲ್ಲಿ ಕಂಡುಬಂದಿದೆ. ಈ ಸ್ಥಳದಲ್ಲಿ ಕಂಡುಬಂದ ಪ್ರಮುಖ ಶಿಲ್ಪಗಳು ಮತ್ತು ಇತರ ಪ್ರಾಚೀನ ಅವಶೇಷಗಳು ಕ್ರಿ.ಶ. 9ನೇ ಶತಮಾನದಿಂದ ಕ್ರಿ.ಶ. 12ನೇ ಶತಮಾನದವರೆಗಿನ ಅವಧಿಯದೆಂದು ಹೇಳಲಾಗುತ್ತದೆ.

ನಾಡ ಸಾಹಿಬ್[ಬದಲಾಯಿಸಿ]

ಗುರುದ್ವಾರ ನಾಡ ಸಾಹಿಬ್ ಪಂಚಕುಲದಲ್ಲಿ ಘಗ್ಗರ್ ನದಿಯ ತೀರದಲ್ಲಿದೆ. ಗುರು ಗೋಬಿಂದ್ ಸಿಂಗ್ ಮತ್ತು ಅವರ ಸೈನ್ಯವು ಭಂಗಾನಿ ಕದನದಲ್ಲಿ ಅದ್ಭುತ ಗೆಲುವನ್ನು ಗಳಿಸಿ ಹಿಂತಿರುವಾಗ ಈ ಸ್ಥಳದಲ್ಲಿ ಉಳಿದುಕೊಂಡರು. ಗುರು ಗೋಬಿಂದ್ ಸಿಂಗ್‌ನ ಅನುಯಾಯಿ ನಾಡು ಶಾ ಅವರನ್ನು ಸ್ವಾಗತಿಸಿ, ಉಪಚರಿಸಿದನು. ಗುರು ಜಿ ನಾಡು ಶಾನನ್ನು ಆಶೀರ್ವದಿಸಿ, ಆತನ ಆಳ್ವಿಕೆಯಿಂದಾಗಿ ಆ ಸ್ಥಳವು ನಾಡ ಸಾಹಿಬ್ ಎಂಬ ಹೆಸರು ಪಡೆಯುತ್ತದೆಂದು ಹೇಳಿದರು. ಪ್ರತಿ ತಿಂಗಳ ಹುಣ್ಣಿಮೆಯ ದಿನಗಳಲ್ಲಿ (ಪೂರಣ್ಮಾಶಿ) ಸಾವಿರಾರು ಭಕ್ತರು ಈ ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ.

ಮಾನಸ ದೇವಿ ದೇವಾಲಯ[ಬದಲಾಯಿಸಿ]

ಮಾನಸ ದೇವಿಯ ದೇವಾಲಯವನ್ನು ಮಣಿಮಾಜ್ರದ ಅರಸನಾದ ಮಹಾರಾಜ ಗೋಪಲ್ ಸಿಂಗ್ ಕ್ರಿ.ಶ. 1815ರಲ್ಲಿ ನಿರ್ಮಿಸಿದನು. ಮಾನಸ ದೇವಿ ಎಂಬ ಹೆಸರಿನ್ನಿಟ್ಟುಕೊಂಡ ದೇವಿಯು ಕೋರಿಕೆಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿರುವುದರಿಂದ ಈ ದೇವಾಲಯವು ಆಶ್ರಯದಾತರಿಗೆ ಹೆಚ್ಚು ಜನಪ್ರಿಯವಾಗಿದೆ. ಇದರ ಸುತ್ತಮುತ್ತಲ ಪ್ರದೇಶಗಳಲ್ಲಿ ನವರಾತ್ರಿಯ ಪವಿತ್ರ ದಿನಗಳಲ್ಲಿ ಉತ್ಸವಗಳನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಲಕ್ಷಗಟ್ಟಲೆ ಭಕ್ತರು ದೇವಿಗೆ ಭಕ್ತಿ ಸಲ್ಲಿಸಲು ನೆರೆಯುತ್ತಾರೆ. ಈ ದೇವಾಲಯದ ಹತ್ತಿರದಲ್ಲಿ ಪಟಿಯಾಲದ ಮಹಾರಾಜನು ನಿರ್ಮಿಸಿದ ಮತ್ತೊಂದು ದೊಡ್ಡ ದೇವಾಲಯವಿದೆ. ಹರಿಯಾಣ ಪ್ರವಾಸೋದ್ಯಮವು ಈ ಪ್ರದೇಶದಲ್ಲಿ ಜಟಾಯು ಎಂದು ಕರೆಯುವ ಒಂದು ಯಾತ್ರಿಕ ರೆಸ್ಟಾರೆಂಟ್ಅನ್ನು ನಡೆಸುತ್ತದೆ.[೧]

ಪಂಚಕುಲ ಬಸ್ ನಿಲ್ದಾಣದಿಂದ 30 ನಿಮಿಷಗಳ ಕಾಲ ಪ್ರಯಾಣಿಸಿದಾಗ ಪ್ರಸಿದ್ಧ ಗಿರಿಧಾಮ ಕಸೌಲಿ ಸಿಗುತ್ತದೆ.

ಛಾಕಿ ಮಾಡ್ ಒಂದು ವಿಶ್ರಾಂತಿ ಸ್ಥಳವಾಗಿದೆ, ಇಲ್ಲಿ ನೈಸರ್ಗಿಕ ಚಿಲುಮೆಯಿಂದ ಜಳಕಮಾಡಬಹುದು.

ಟಿಂಬೆಲ್ ರೈಲು ನಮ್ಮನ್ನು ಬೆಟ್ಟದ ತುದಿಯವರೆಗೆ ಕರೆದೊಯ್ಯುತ್ತದೆ, ಅಲ್ಲಿಂದ ನಾವು ಸಂಪೂರ್ಣ ಪಂಚಕುಲ ಮತ್ತು ಚಂಡಿಗಢವನ್ನು ನೋಡಬಹುದು. ಈ ದೃಶ್ಯವನ್ನು ರಾತ್ರಿಯಲ್ಲಿ ನೋಡಿದರೆ ಇನ್ನಷ್ಟು ಮನಮೋಹಕವಾಗಿರುತ್ತದೆ.

ಪಾಪಾಸುಕಳ್ಳಿ ಉದ್ಯಾನ[ಬದಲಾಯಿಸಿ]

ನ್ಯಾಷನಲ್ ಕ್ಯಾಕ್ಟಸ್ ಆಂಡ್ ಸಕ್ಯುಲೆಂಟ್ ಬೊಟಾನಿಕಲ್ ಗಾರ್ಡನ್ ಆಂಡ್ ರಿಸರ್ಚ್ ಸೆಂಟರ್ ಏಷ್ಯಾದ ಅತಿ ದೊಡ್ಡ ಹೊರಾಂಗಣ ದೃಶ್ಯದ ಪಾಪಾಸುಕಳ್ಳಿ ಮತ್ತು ರಸಭರಿತ ಸಸ್ಯಗಳ ಉದ್ಯಾನವಾಗಿದೆ.

ಭಾರತದ ರಸಭರಿತ ಸಸ್ಯಗಳ ಈ ಭಾರೀ ಸಂಗ್ರಹವನ್ನು ಪ್ರಪಂಚದಲ್ಲೇ ಅತಿದೊಡ್ಡದೆಂದು ಪರಿಗಣಿಸಲಾಗುತ್ತದೆ. ಈ ಉದ್ಯಾನದ ಮುಖ್ಯ ವಿನ್ಯಾಸಕ ಡಾ. J.S. ಸರ್ಕಾರಿಯ. ಆತನು ಈ ಉದ್ಯಾನಕ್ಕೆ ಅತಿ ಹೆಚ್ಚಿನ ಪ್ರಮಾಣದ ಪಾಪಾಸುಕಳ್ಳಿ ಮತ್ತು ರಸಭರಿತ ಸಸ್ಯಗಳನ್ನು ಒದಗಿಸಿದನು. ಈ ಉದ್ಯಾನ ರಚನೆಯ ಮುಖ್ಯ ಗುರಿಯೆಂದರೆ ಈ ಅಳಿವಿನಂಚಿನಲ್ಲಿರುವ ಜಾತಿಗಳನ್ನು ಉಳಿಸುವುದಾಗಿದೆ. ಇಲ್ಲಿ ಕಂಡುಬರುವ ಕೆಲವು ಅಳಿವಿನಂಚಿನಲ್ಲಿರುವ ಜಾತಿಗಳು ಭಾರತೀಯ ಮೂಲದ ಜೀನಸ್ ಕ್ಯಾರಲುಮದ ಸಂಪೂರ್ಣ ಸಂಗ್ರಹವನ್ನು ಒಳಗೊಳ್ಳುತ್ತದೆ. ಸುಮಾರು 2500 ಜಾತಿಯ ಪಾಪಾಸುಕಳ್ಳಿ ಮತ್ತು ರಸಭರಿತ ಸಸ್ಯಗಳನ್ನು ಹೊಂದಿರುವ ಈ ಅಪೂರ್ವ ಉದ್ಯಾನವು ಅತಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಮತ್ತು ಸಸ್ಯವಿಜ್ಞಾನಿಗಳನ್ನು ಆಕರ್ಷಿಸುತ್ತದೆ. ಪಾಪಾಸುಕಳ್ಳಿ ಮತ್ತು ರಸಭರಿತ ಸಸ್ಯಗಳು ಅವುಗಳ ವೈದ್ಯಕೀಯ ಅಂಶಗಳಿಗೂ ಹೆಸರುವಾಸಿಯಾಗಿವೆ.

ಪಾಪಾಸುಕಳ್ಳಿ ಪ್ರದರ್ಶನವು ಪಾಪಾಸುಕಳ್ಳಿ ಉದ್ಯಾನದಲ್ಲಿ ಆಯೋಜಿಸುವ ಪ್ರಮುಖ ಪ್ರದರ್ಶನವಾಗಿದೆ. ಇದನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ನಡೆಸಲಾಗುತ್ತದೆ. ಇದನ್ನು ವೀಕ್ಷಿಸಲು ಎಲ್ಲಾ ಕಡೆಗಳಿಂದ ಜನರು ಬರುತ್ತಾರೆ.

ವಲಯ 5 ಪಂಚಕುಲ[ಬದಲಾಯಿಸಿ]

ವಲಯ 5 ಕೆಲವು ವಾಣಿಜ್ಯ ಮಳಿಗೆಗಳು, ಉದ್ಯಾನಗಳು ಮತ್ತು ಸಭಾಂಗಣಗಳನ್ನು ಹೊಂದಿದೆ. ಅಲ್ಲದೆ ಇಲ್ಲಿ ಯಾವನಿಕ ಎಂಬ ಒಂದು ವರ್ತುಲ ಕ್ರೀಡಾಂಗಣ ಹಾಗೂ ವಾಟಿಕ ಎಂಬ ಹೆಸರಿನ ನೀರಿನ ಕಾರಂಜಿ ಮತ್ತು ಸಣ್ಣ ಹೋಟೆಲ್‌ಅನ್ನು ಒಳಗೊಂಡ ಉದ್ಯಾನವೊಂದಿದೆ. ಇದಕ್ಕೆ ಹೊಂದಿಕೊಂಡಂತೆ ಒಂದು ಸಂಗೀತಮಯ ಕಾರಂಜಿ ಉದ್ಯಾನವಿದೆ. ಇದನ್ನು ರಾತ್ರಿಯಲ್ಲಿ ಬಣ್ಣ ಬಣ್ಣದ ದೀಪಗಳಿಂದ ಬೆಳಗಿಸಲಾಗುತ್ತದೆ. ಪಂಚಕುಲದ ಮುಖ್ಯ ಆರಕ್ಷಕ ಠಾಣೆಯೂ ಸಹ ವಲಯ ಐದರಲ್ಲಿದೆ.

ಟರ್ಮಿನಲ್ ಬಲ್ಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL) ಯು ಡಿಫೆನ್ಸ್ ರಿಸರ್ಚ್ ಆಂಡ್ ಡೆವೆಲಪ್ಮೆಂಟ್ ಆರ್ಗನೈಸೇಶನ್ (DRDO)ನ ಒಂದು ಪ್ರಯೋಗಾಲಯವಾಗಿದೆ. ಪಂಚಕುಲ(ರಾಮಗಡ)ದಲ್ಲಿರುವ ಈ ಪ್ರಯೋಗಾಲಯವು ಶಸ್ತ್ರಾಸ್ತ್ರ ಅಧ್ಯಯನಗಳ ಪ್ರಮುಖ DRDO ಪ್ರಯೋಗಾಲಯಗಳಲ್ಲಿ ಒಂದಾಗಿದೆ. TBRLಅನ್ನು DRDOನ ಶಸ್ತ್ರಾಸ್ತ್ರ ನಿರ್ದೇಶನಾಲಯದಡಿಯಲ್ಲಿ ಆಯೋಜಿಸಲಾಗಿದೆ. TBRLನ ಪ್ರಸ್ತುತ ನಿರ್ದೇಶಕ ಡಾ. ಸತಿಶ್ ಕುಮಾರ್.TBRL ಭಾರಿ ಸ್ಫೋಟಕಗಳು, ಆಸ್ಫೋಟಕಗಳು ಮತ್ತು ಆಘಾತ ತರಂಗಗಳ ವಿಷಯದಲ್ಲಿ ಮೂಲ ಮತ್ತು ಅನ್ವಯ ಸಂಶೋಧನೆಯನ್ನು ನಡೆಸುತ್ತದೆ. ಇದು ಹೊಸ ಶಸ್ತ್ರಾಸ್ತ್ರಗಳಿಗೆ ಮಾಹಿತಿ ಮತ್ತು ವಿನ್ಯಾಸ ಪರಿಮಾಣಗಳನ್ನು ಅಭಿವೃದ್ಧಿಪಡಿಸುವುದನ್ನು ಹಾಗೂ ಯುದ್ಧಸಾಮಾಗ್ರಿಗಳ ಅಂತಿಮ ಪರಿಣಾಮಗಳನ್ನು ಗೊತ್ತುಮಾಡುವುದನ್ನು ಒಳಗೊಳ್ಳುತ್ತದೆ.TBRL ಸೇನೆಗೆ ಸಹಾಯಕವಾದ ಸೈನ್ಯದ ಮತ್ತು ಪೋಲೀಸ್‌ರ ಬಳಕೆಗಾಗಿ ಮಾರಕವಲ್ಲದ ದಂಗೆ ನಿಯಂತ್ರಿಸುವ ಪ್ಲಾಸ್ಟಿಕ್ ಗುಂಡುಗಳನ್ನೂ ಸಹ ಅಭಿವೃದ್ಧಿಪಡಿಸಿದೆ.

ರಾಮಗಢ ಕೋಟೆ ' ರಾಮಗಢ ಕೋಟೆಯು ಅದ್ಭುತ 360-ವರ್ಷದ ಇತಿಹಾಸದೊಂದಿಗೆ ಅನುರಣಿಸುತ್ತದೆ. ಚಾಂದೆಲ್ ರಜಪೂತರು ಇದರ ರಾಜರಾಗಿದ್ದರು, ಇವರು ಇಲ್ಲಿಗೆ ಹಿಮಾಚಲ ಪ್ರದೇಶದ ಬಿಲಾಸ್‌ಪುರದಿಂದ ಬಂದಿದ್ದರು. ಅವರು ಚಾಂದೆಲ್ ರಾಜವಂಶದ ಸಂತತಿಯವರಾಗಿದ್ದರು, ಅವರ ಸಾಮ್ರಾಜ್ಯವು ಕ್ರಿ.ಶ. 800ರಿಂದ 1182ರವರೆಗೆ ಸಂಪೂರ್ಣ ಕೇಂದ್ರ ಭಾರತವನ್ನು ಆವರಿಸಿತ್ತು. ಪ್ರಸಿದ್ಧವಾದ "ಲಿಮ್ಕ ದಾಖಲೆ ಪುಸ್ತಕ"ದಲ್ಲಿ ಭಾರತದಲ್ಲೇ ಅತ್ಯಂತ ಎತ್ತರದ ಮರದ ಬಾಗಿಲೆಂದು ಹೇಳಲಾದ 37 ಅಡಿ ಎತ್ತರದ ಬಾಗಿಲಿನ ಮೂಲಕ ಪ್ರವೇಶಿಸಿ ಈ ಕೋಟೆಯೊಳಗೆ ಇಂದಿನದರೊಂದಿಗೆ ಮಿಶ್ರಗೊಂಡ ಹಿಂದಿನದರ ಹಿತವಾದ ಲವಲವಿಕೆಯುಳ್ಳ ಕುರುಹುಗಳನ್ನು ಕಾಣಬಹುದು. ಅಲ್ಲಿನ ಸನ್ನಿವೇಶವು ನಮ್ಮನ್ನು ಆಕರ್ಷಕ ಭವ್ಯ ಪರಿಸರಕ್ಕೆ ಕೊಂಡೊಯ್ಯುತ್ತದೆ, ಪ್ರತಿಯೊಂದು ಹೆಜ್ಜೆಯಲ್ಲೂ ರಜಪೂತ ಸಂಪ್ರದಾಯವನ್ನು ಕಾಣಬಹುದು. “ರಾಮಗಢ ಕೋಟೆ”ಯಲ್ಲಿರುವುದು ಸಾಟಿಯಿಲ್ಲದ ಅನುಭವವಾಗಿದೆ. ರಾಮಗಢ ಕೋಟೆಯಲ್ಲಿರುವ ಒಂದು ಸಾಂಪ್ರದಾಯಿಕ ಹೋಟೆಲ್ ರಾಜೋಚಿತ ಆತಿಥ್ಯ, ಸಂಪ್ರದಾಯದ ಸಂರಕ್ಷಣೆ ಮತ್ತು ಅತ್ಯುತ್ತಮ ರುಚಿಗೆ ಪರ್ಯಾಯ ಪದವಾಗಿದೆ.

ಶೈಕ್ಷಣಿಕ ಸಂಸ್ಥೆಗಳು[ಬದಲಾಯಿಸಿ]

ಪಂಚಕುಲದಲ್ಲಿರುವ ಮತ್ತು ಸುತ್ತಮುತ್ತಲಿರುವ ಜನಪ್ರಿಯ ಶಾಲೆಗಳೆಂದರೆ: -

 • ಮಾನವ್ ಮಂಗಲ್ ಶಾಲೆ (ವಲಯ 11)
 • ಭವನ್ ವಿದ್ಯಾಲಯ (ವಲಯ 15)
 • ಲಿಟಲ್ ಫ್ಲವರ್ ಕಾನ್ವೆಂಟ್ ಶಾಲೆ (ವಲಯ 14).
 • ಹಂಸರಾಜ್ ಪಬ್ಲಿಕ್ ಶಾಲೆ, ವಲಯ 6
 • D C ಮಾಡೆಲ್ ಶಾಲೆ, ವಲಯ 7
 • ಚಮನ್ ಲಾಲ್ D.A.V ಪಬ್ಲಿಕ್ ಶಾಲೆ, ವಲಯ 11
 • ದಿ ಬ್ರಿಟಿಷ್ ಶಾಲೆ
 • ಆರ್ಮಿ ಶಾಲೆ (ಚಂಡಿಮಂದಿರ್‌)
 • ದೆಹಲಿ ಪಬ್ಲಿಕ್ ಶಾಲೆ (ಪಿಂಜೋರ್‌)
 • ಹಾಲ್‌ಮಾರ್ಕ್ ಪಬ್ಲಿಕ್ ಶಾಲೆ
 • ಕೇಂದ್ರೀಯ ವಿದ್ಯಾಲಯ (ಚಂಡಿಮಂದಿರ್‌)
 • ಸಟ್ಲಜ್ ಪಬ್ಲಿಕ್ ಶಾಲೆ (ವಲಯ 2 ಮತ್ತು 4)
 • ಸಾರ್ಥಕ್ ಶಾಲೆ, ವಲಯ 12 A
 • ದಿ ಗುರುಕುಲ್, ವಲಯ 20

ಪ್ರಸಿದ್ಧ ಕಾಲೇಜುಗಳೆಂದರೆ:-

 • ಸರ್ಕಾರಿ ಕಾಲೇಜು (ವಲಯ-1)
 • ಬಾಲಕಿಯರ ಸರ್ಕಾರಿ ಕಾಲೇಜು (ವಲಯ-14) ಪಂಚಕುಲ

ತರಬೇತಿ ಸಂಸ್ಥೆಗಳು:-

 • ಇಂಡಸ್ಟ್ರಿಯಲ್ ಆಟೊಮೇಶನ್ ಟ್ರೈನಿಂಗ್ ಸೆಂಟರ್ (IATC)

ಹೋಟೆಲ್‌ಗಳು, ರೆಸ್ಟಾರೆಂಟುಗಳು ಮತ್ತು ಸಿನೆಮಾಗಳು[ಬದಲಾಯಿಸಿ]

ಪಂಚಕುಲದಲ್ಲಿರುವ ಮತ್ತು ಸುತ್ತಮುತ್ತಲಿರುವ ರೆಸ್ಟಾರೆಂಟುಗಳು[ಬದಲಾಯಿಸಿ]

 • ಡಾಮಿನೋಸ್ ಪಿಜ (ವಲಯ 9,20)
 • ಪಿಜ ಹಟ್ (ವಲಯ 10)
 • ಮ್ಯಾಕ್‌ಡೊನಾಲ್ಡ್ ಫನ್ ರಿಪಬ್ಲಿಕ್, ಮಣಿಮಾಜ್ರ
 • ರೂಬಿ ಟ್ಯೂಸ್ಡೆ , ಫನ್ ರಿಪಬ್ಲಿಕ್, ಮಣಿಮಾಜ್ರ
 • ಸಬ್‌ವೇ (ವಲಯ 10)
 • ಕೋಸ್ಟ ಕಾಫೀ (ವಲಯ 8)
 • T.G.I. ಫ್ರೈಡೇಸ್
 • ಪಾಪ ಜಾನ್ಸ್ ಪಿಜ
 • ಬಾರ್ಬೆಕ್ಯು ನೇಷನ್ (ವಲಯ 8)
 • ಕೆಫೆ ಕಾಫೀ ಡೇ (ವಲಯ 9)
 • ದಿ ಯೆಲ್ಲೊ ಚಿಲ್ಲಿ (ವಲಯ 9)
 • ಹಾಟ್ ಮಿಲಿಯನ್ಸ್ (ವಲಯ 9)
 • ಸಾಗರ ರತ್ನ (ವಲಯ 9)
 • ಅಥೆನ , ಫನ್ ರಿಪಬ್ಲಿಕ್, ಮಣಿಮಾಜ್ರ
 • ನಿಕ್ ಬೇಕರ್ಸ್ (ವಲಯ 9)
 • ಗೋಪಾಲ್ ಸ್ವೀಟ್ಸ್ (ವಲಯ 8)
 • ಅನುಪಮ್ ಸ್ವೀಟ್ಸ್ (ವಲಯ 11)
 • ಪೆನಿನ್ಸುಲ (ವಲಯ 8)
 • ಬೇಕರ್ಸ್ ಓವನ್(ವಲಯ 9)
 • ಕುಪ್ಪ ಮೋಚ(ವಲಯ 9)
 • ಟೈಮ್ಸ್ ಸ್ಕ್ವೇರ್(ವಲಯ 14)
 • ವೆಸ್ಟರ್ನ್ ಕೌಂಟ್

ಹೋಟೆಲ್‌ಗಳು[ಬದಲಾಯಿಸಿ]

ಸಿನೆಮಾಗಳು[ಬದಲಾಯಿಸಿ]

 • ಫೇಮ್ ಸಿನೆಮಾಸ್ (ಶಾಲಿಮಾರ್ ಮಾಲ್, ವಲಯ-5)
 • ಫನ್ ಸಿನೆಮಾಸ್(ಫನ್ ರಿಪಬ್ಲಿಕ್ ಮಾಲ್, ಮಣಿಮಾಜ್ರ)
 • DT ಸಿನೆಮಾಸ್ (DLF ಸಿಟಿ ಸೆಂಟರ್ ಮಾಲ್, IT ಪಾರ್ಕ್)
 • PVR ಸಿನೆಮಾಸ್ (ಸೆಂಟ್ರ ಮಾಲ್)
 • BIG ಸಿನೆಮಾಸ್ (ಪರಾಸ್ ಮಾಲ್, ಜಿರಾಕ್ಪುರ್)
 • K C (ವಲಯ-5)
 • ಸೂರಜ್ (ವಲಯ-1)

ಜಿಲ್ಲಾ ಆಡಳಿತ[ಬದಲಾಯಿಸಿ]

 • ಡೆಪ್ಯುಟಿ ಕಮೀಷನರ್ ಅಥವಾ DC - ಭಾರತೀಯ ಆಡಳಿತಾತ್ಮಕ ಸೇವೆಗೆ ಸಂಬಂಧಿಸಿದ ಅಧಿಕಾರಿ, ಈತನು ಜಿಲ್ಲೆಯ ಸಾರ್ವತ್ರಿಕ ಆಡಳಿತದ ಸಂಪೂರ್ಣ ಮೇಲ್ವಿಚಾರಣೆಯನ್ನು ಹೊಂದಿರುತ್ತಾನೆ. DCಗೆ ಹರಿಯಾಣ ನಾಗರಿಕ ಸೇವೆ ಮತ್ತಿತರ ಹರಿಯಾಣ ರಾಜ್ಯ ಸೇವೆಗಳಿಗೆ ಸೇರಿದ ಅನೇಕ ಅಧಿಕಾರಿಗಳು ನೆರವಾಗುತ್ತಾರೆ.
 • ಸೂಪರಿಂಟೆಂಡೆಂಟ್ ಆಫ್ ಪೋಲೀಸ್ ಅಥವಾ SP - ಭಾರತೀಯ ಪೋಲೀಸ್ ಸೇವೆಗೆ ಸಂಬಂಧಿಸಿದ ಅಧಿಕಾರಿ, ಈತನು ಜಿಲ್ಲೆಯಲ್ಲಿ ಕಾನೂನು ಮತ್ತು ಆದೇಶವನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯಗಳನ್ನು ನಿರ್ವಹಿಸಲು ಜವಾಬ್ದಾರನಾಗಿರುತ್ತಾನೆ. ಹರಿಯಾಣ ಪೋಲೀಸ್ ಸೇವೆ ಮತ್ತು ಇತರ ಹರಿಯಾಣ ಪೋಲೀಸ್ ಅಧಿಕಾರಿಗಳು SPಗೆ ಸಹಾಯ ಒದಗಿಸುತ್ತಾರೆ.
 • ಡೆಪ್ಯುಟಿ ಕನ್ಸರ್ವೇಟರ್ ಆಫ್ ಫಾರೆಸ್ಟ್ಸ್ ಅಥವಾ DCF - ಭಾರತೀಯ ಅರಣ್ಯ ಸೇವೆಗೆ ಸಂಬಂಧಿಸಿದ ಅಧಿಕಾರಿ, ಆತನು ಮೋರ್ನಿ-ಪಿಂಜೋರ್‌ ಫಾರೆಸ್ಟ್ ಡಿವಿಜನ್ ಅನ್ನೂ ಒಳಗೊಂಡಂತೆ ಅರಣ್ಯಗಳು, ಪರಿಸರ ಮತ್ತು ವನ್ಯಜೀವಿಗಳ ನಿರ್ವಹಣೆಗೆ ಜವಾಬ್ದಾರನಾಗಿರುತ್ತಾನೆ. DCFಗೆ ಹರಿಯಾಣ ಅರಣ್ಯ ಸೇವೆಯ ಅಧಿಕಾರಿಗಳು ಮತ್ತಿತರ ಹರಿಯಾಣ ಅರಣ್ಯಾಧಿಕಾರಿಗಳು ಹಾಗೂ ಹರಿಯಾಣ ವನ್ಯಜೀವಿ ಅಧಿಕಾರಿಗಳು ನೆರವಾಗುತ್ತಾರೆ.
 • ವಲಯದ ಅಭಿವೃದ್ಧಿಯನ್ನು PWD, ಆರೋಗ್ಯ, ಶಿಕ್ಷಣ, ಕೃಷಿ, ಪ್ರಾಣಿಸಂಗೋಪನೆ ಇತ್ಯಾದಿ ಪ್ರತಿಯೊಂದು ಅಭಿವೃದ್ಧಿ ವಿಭಾಗದ ಜಿಲ್ಲಾ ಮುಖ್ಯ/ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಅಧಿಕಾರಿಗಳು ವಿವಿಧ ಹರಿಯಾಣ ರಾಜ್ಯ ಸೇವೆಗಳಿಗೆ ಸೇರಿದವರಾಗಿರುತ್ತಾರೆ.

ಆಸ್ಪತ್ರೆಗಳು[ಬದಲಾಯಿಸಿ]

ಪಂಚಕುಲದ ಹತ್ತಿರವಿರುವ ಭೇಟಿನೀಡಬಹುದಾದ ಗಿರಿಧಾಮಗಳು[ಬದಲಾಯಿಸಿ]

 • ಕಾಲ್ಕ
 • ಪಿಂಜೋರ್‌
 • ಕಸೌಲಿ
 • ಶಿಮ್ಲಾ
 • ಚೈಲ್
 • ಮೋರ್ನಿ
 • ನಹಾನ್
 • ಡಾಗ್ಶೈ

ಆಕರಗಳು[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2009-08-15. Retrieved 2010-08-19.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಪಂಚಕುಲ&oldid=1056256" ಇಂದ ಪಡೆಯಲ್ಪಟ್ಟಿದೆ