ವಿಷಯಕ್ಕೆ ಹೋಗು

ಪಟಿಯಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Patiala

Patiala
ರಾಜ್ಯ
 - ಜಿಲ್ಲೆ
Punjab
 - Patiala
ನಿರ್ದೇಶಾಂಕಗಳು 30.33° N 76.4° E
ವಿಸ್ತಾರ
 - ಎತ್ತರ
 km²
 - 250 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
302870
 - {{{population_density}}}/ಚದರ ಕಿ.ಮಿ.
Deputy Commissioner Dipinder Singh, IAS
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 147 00x
 - +175
 - 

ಭಾರತ ದೇಶದ, ಪಂಜಾಬ್ ರಾಜ್ಯದಲ್ಲಿನ, ಒಂದು ನಗರ ಪಟಿಯಾಲ pronunciation (ಪಂಜಾಬಿ: ਪਟਿਆਲਾ). ಪಟಿಯಾಲ ಜಿಲ್ಲೆಯು ಪಂಜಾಬಿ ನಗರದಲ್ಲಿ ಪೂರ್ವದಲ್ಲಿ ರಾಜನಗರಿಯಾಗಿತ್ತು. ಈ ನಗರವು ರಾಜ್ಯದ ದಕ್ಷಿಣ -ಪೂರ್ವ ಭಾಗದಲ್ಲಿನೆಲೆಗೊಂಡಿದೆ. 29°49’ ಮತ್ತು 30°47’ ಉತ್ತರ ಅಕ್ಷಾಂಶ , 75°58’ ಹಾಗು 76°54' ಪೂರ್ವ ರೇಖಾಂಶದ ಮಧ್ಯೆ ನೆಲೆಸಿದೆ.

ಪಟಿಯಾಲ/ಪಾಟಿಯಾಲ ಅಂದರೆ ಪಾಟಿ (ಭೂಮಿ )ಯ ಬಾಬಾ ಅಲ ಸಿಂಗ್^^ನು ಪಟಿಯಾಲ ರಾಜ್ಯವನ್ನು ಗುರುತಿಸಿದವನು.

ಈ ನಗರವು ಪಟಿಯಾಲ ಜಿಲ್ಲೆ ಯ ಆಡಳಿತದ ಮುಖ್ಯ ಕೇಂದ್ರವಾಗಿದೆ.ಬ್ರಿಟಿಷ್ ಭಾರತ ದ ಪಂಜಾಬ್ ಪ್ರಾಂತ್ಯದಲ್ಲಿ ,ಪೂರ್ವದಲ್ಲಿ ರಾಜರುಗಳ ರಾಜ್ಯ ದ ನಗರವಾಗಿ ಇದು ಮೆರೆದಿತ್ತು. ಇದರ ಉಸ್ತುವಾರಿಯನ್ನು ಸಿದ್ಹು ಸಾಮ್ರಾಜ್ಯವು ನೋಡಿಕೊಳ್ಳುತ್ತಿತ್ತು.(ಆಳುತ್ತಿತ್ತು) ಪಟಿಯಾಲವು ತನ್ನ ತಲೆಯ ರುಮಾಲಿಗೆ (ಸಂಪ್ರದಾಯ ಪೇಟ ) ಹೆಸರುವಾಸಿಯಾಗಿದೆ. ಪರಂದ (ಕೂದಲನ್ನು ಕಟ್ಟಿ ಹಾಕುವ ಗೊಂಡೆ/ಕುಚ್ಚು ), ಪೆಗ್ (ಪಟಿಯಾಲ ಪೆಗ್ - ಎರಡು ಅಥವಾ ದೊಡ್ಡ ಪೆಗ್ ವ್ಹಿಸ್ಕಿ ), ಮತ್ತು ಜುಟ್ಟಿ/ಜುತ್ತಿ ( ಪಂಜಾಬಿನ ಸಂಪ್ರದಾಯಬದ್ಧ ಚಪ್ಪಲಿ ) ಹಾಗು "ಪಟಿಯಾಲಶಾಹಿ " ಸಲ್ವಾರ್^^ಗೆ ಹೆಸುವಾಸಿಯಾಗಿದೆ. ಹೆಸರಾಂತ ಪಂಜಾಬಿ ಗಾಯಕ ಪಮ್ಮಿ ಬಾಯಿ ,ಹೆಸರುವಾಸಿಯಾದ ಪಟಿಯಾಲಶಾಹಿ ಪೇಟದ ಬಗ್ಗೆ ಹಾಡನ್ನೂ ಹಾಡಿದ್ದಾರೆ.

ಕ್ಯಾಪ್ಟನ್ . ಗೌರವಾನ್ವಿತ ಮಹಾರಾಜಾಧಿರಾಜ ಅಮರಿಂದೆರ್ ಸಿಂಗ್ , ಇಂದಿನ ಪಟಿಯಾಲದ ಮಹಾರಾಜ ರಾಗಿದ್ದಾರೆ.

ಸಹಜವಾಗಿ ನೀಡುವ ಮದ್ಯ ಸರಬರಾಜಿನ ಎರಡರಷ್ಟು ಮದ್ಯದ ಸರಬರಾಜಿಗೆ , ಪಟಿಯಾಲ ಪೆಗ್ ಎಂದು ಕರೆಯಲಾಗುತ್ತದೆ. ಭಾರತದ ಹಲವಾರು ಕಡೆ ಇದನ್ನು ಅರ್ಥಮಾಡಿಕೊಂಡಿದ್ದಾರೆ. ಇದರ ಹಿನ್ನಲೆಯಾಗಿ ಹಲವಾರು ಕಥೆಗಳೇ ಇವೆ. ಇದಕ್ಕೆ ಸಂಬಂಧಿಸಿದಂತೆ ತುಂಬಾ ಧನಿಕನಾದ ಮತ್ತು ವಿಲಾಸಪ್ರಿಯ ಜೀವನಶೈಲಿ ಹೊಂದಿದ ಪಟಿಯಾಲ ಮಹಾರಾಜ - ಮಹಾರಾಜ ಭುಪಿಂದೆರ್ ಸಿಂಗ್, ಒಬ್ಬ ಮಹಾನ್ ಕುಡುಕ.

ಪಟಿಯಾಲ ನಗರವು ಹಲವಾರು ಹೆಸರಾಂತ ವ್ಯಕ್ತಿಗಳಿಗೆ ತವರುಮನೆಯಾಗಿದ್ದು, ಕ್ರಿಕೆಟಿಗರಾದ ನವಜೋತ್ ಸಿದ್ಹು , ಮೊಹಿಂದೆರ್ ಅಮರ್ನಾಥ್ , ರೀತಿಂದೆರ್ ಸೋಧಿ , ಬಾಲಿವುಡ್ ತಾರೆಯರಾದ ಜಿಮ್ಮಿ ಶ್ರೆಗಿಲ್ , ಓಂ ಪುರಿ , ಪಂಜಾಬಿ ಗಾಯಕ ಹರಭಜನ್ ಮನ್ನ , ಜೆಟ್ ಏರ್ ವೇಯ್ಸ್ ಛೇರ್ಮನ್ ನರೇಶ್ ಗೋಯಲ್ ಮತ್ತು ಅಂತರಿಕ್ಷಕ್ಕೆ ಹಾರಿದ ಮೊದಲ ಭಾರತೀಯ , ಸ್ಕ್ವಾಡ್ ಲೀಡರ್ ರಾಕೇಶ್ ಶರ್ಮ-ಇವರೆಲ್ಲರೂ ಪಟಿಯಾಲದವರೇ .

ಭೌಗೋಳಿಕ ಕ್ಷೇತ್ರ/ಭೂಗೋಳ

[ಬದಲಾಯಿಸಿ]

ಪಟಿಯಾಲ ನೆಲೆಸಿರುವುದು, 30°20′N 76°24′E / 30.33°N 76.4°E / 30.33; 76.4[] ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿ. ಪಿ ಇ ಪಿ ಎಸ್ ಯು ,ಕಡಿಮೆ ಅಸ್ತಿತ್ವದ ಅವಧಿಯಲ್ಲಿ ಪಟಿಯಾಲ ರಾಜಧಾನಿ ನಗರವಾಗಿ ಸೇವೆ ಸಲ್ಲಿಸಿದೆ.

ಇತಿಹಾಸ/ಚರಿತ್ರೆ

[ಬದಲಾಯಿಸಿ]
ಪಟಿಯಾಲದ ರಾಜರ ಧ್ವಜ
ಪಟಿಯಾಲದ ಮಹಾರಾಜ ಭುಪಿಂದರ್ ಸಿಂಗ್

ಪಟಿಯಾಲ ಚರಿತ್ರೆಯು ಪೂರ್ವಿಕರಾದ, ಸಿಖ್ ಪಟಿಯಾಲ ರಾಜ ಮನೆತನದ, ಮೋಹನ್ ಸಿಂಗ್^^ರವರಿಂದ ಪ್ರಾರಂಭವಾಗುತ್ತದೆ. ನೆರೆಯವರಾದ ಭುಲ್ಲರ್ಸ್ ಮತ್ತು ಧಲಿವಾಲಸ್ ( ಪ್ರಾಂತ್ಯದ ತಪ್ಪೇದಾರರು)ಗಳಿಂದ ಭಾಧಿಸಲ್ಪಟ್ಟವರು. ಅವರು ಮೋಹನ್ ಸಿಂಘನಿಗೆ ನೆಲೆಯೂರಲು ಅವಕಾಶವನ್ನೇ ಮಾಡಿಕೊಡಲಿಲ್ಲ. ಅವನು ಗುರು ಹರಗೋಬಿಂದ್ ಸಿಂಗ್^^ನ ಹಿಂಬಾಲಕ ಹಾಗು ಮೋಹನ್ ಪರವಾಗಿ ನಿವೇದಿಸಿಕೊಂಡನು. ಆದರೆ ಅದರಿಂದ ಏನೂ ಪ್ರಯೋಜನವಾಗದಾಯಿತು. ಇದರ ಫಲವಾಗಿ ಗುರುಗಳ ಕಡೆಯವರಿಂದ ಭುಲ್ಲರ್ಸ್ ಮತ್ತು ಧಲಿವಾಲಸ್ ಸೋತುಹೋದರು. ಇದರಿಂದಾಗಿ ಮೋಹನ್ 1627ರಲ್ಲಿ ಮೆಹರಾಜ್ ಹಳ್ಳಿಯನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಯಿತು.[]

ಗುರು ಹರಗೋಬಿಂದ್ ಸಿಂಗನ ಜೊತೆಗೂಡಿ 1631ರಲ್ಲಿ ಮಹರಾಜ ರಣರಂಗ ದಲ್ಲಿ ಮುಘಲರ ವಿರುದ್ಧ ಮೋಹನ್ ಯುದ್ಧವನ್ನು ಮಾಡಿದನು. ತದನಂತರ ನಡೆದ ಯುದ್ಧದಲ್ಲಿ ಭಟ್ಟಿ ರಜಪೂತರು ಮೋಹನ್ ಮತ್ತು ಅವನ ಹಿರಿಯ ಮಗ ರೂಪ್ ಚಂದ್^^ನನ್ನು ಕೊಂದುಹಾಕಿದರು. (ಅವನನ್ನು ಸತತವಾಗಿ ಹಿಂಸಿಸಲ್ಪಟ್ಟಿತ್ತು.) ಮೋಹನನ ಕಿರಿಯ ಮಗ ಕಾಲ,"ಚೌದ್ರಿಯತ್"^^ಅನ್ನು ಗೆದ್ದು, ರೂಪ್ ಚಂದನ ಮಗನಾದ ಪ್ಹುಲ್ ಸಿಂಗ್ ಜಟ್ತ್ ಮತ್ತು ಸಂಡಲಿಗೆ ಪೋಷಕನಾಗಿ ನಿಂತನು.

ಕಾಲ ಸತ್ತ ಮೇಲೆ, 1663ರಲ್ಲಿ ಮೆಹರಾಜನಿಂದ 5 ಮೈಲಿಗಳ ದೂರದಲ್ಲಿ (ಸಿಖ್ ಗುರುವಿನ ಆಶೀರ್ವಾದದೊಂದಿಗೆ ) ಪ್ಹುಲ್ ತನ್ನದೇ ಹಳ್ಳಿಯನ್ನು ನಿರ್ಮಿಸಿದನು. (ಪ್ಹುಲ್ ) ನಭ ಮತ್ತು ಜಿಂದ್ ಅವರ ವಂಶಾವಳಿಯನ್ನು ಪತ್ತೆ ಹಚ್ಚಿ ಸಿಖ್ ಪ್ಹುಲ್^^ಗೆ ಪೂಜನೀಯವಾಗಿದ್ದಾರೆ. ಇದು ಮೊದಲನೇ ಜಟ್ತ್ ಸಿಖ್ ಪಂಜಾಬಿನ ರಾಜಧಾನಿಯಾಗಿ ರಚನೆಯಾಯಿತು. "ಫುಲ್ಕಿಯನ್ " ಸಾಮ್ರಾಜ್ಯದ ನಾಮಧೇಯವನ್ನು ಸಹಜವಾಗಿ ಸಾಮಾನ್ಯ ಸಂಸ್ಥಾಪಕನಿಂದ ಪಡೆಯಿತು. ಅವರ ಒಬ್ಬ ಮಗ, ಚೋಟ ರಾಮ್ ಗ್^^ನಿಗೆ, ಗುರು ಗೋಬಿಂದ್ ಸಿಂಗ್ ಆಶೀರ್ವಾದ ಮತ್ತು ಜ್ಞಾನ ಸ್ನಾನ ದೊರೆಯಿತು. ಮುಘಲರ ವಿರುದ್ಧ ಭೀಕರ ಯುದ್ಧವನ್ನು ಬಂದ ಬಹಾದುರ್ 1714ರಲ್ಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಚೋಟ ರಾಮ ಸಿಂಗನ ಮಗ 'ಅಲ ಸಿಂಗ್'ನಾಯಕತ್ವವನ್ನು ವಹಿಸಿದನು. ನಾಯಕತ್ವ ವಹಿಸಿದ ಅಲ ಸಿಂಗ್ಹನು ದೂರದ್ರುಷ್ಟಿಯುಲ್ಲವನಾಗಿದ್ದು, ಧೈರ್ಯಶಾಲಿಯೂ ಆಗಿದ್ದನು.ಅಲ ಸಿಂಗನ ಮುಖ್ಯ ಸೇನಾನಿ, ಗುರ್ಬಕ್ಷ್ ಸಿಂಗ್ ಕಲೆಕನು, 30 ಹಳ್ಳಿಗಳ ಜಮೀನ್ದಾರಿ /0}ಯ ಪ್ರತ್ಯೇಕ ಅಸ್ಥಿತ್ವವನ್ನು ಸ್ಥಾಪಿಸಿದನು. ಅವನ ಕೈ-ಕೆಳಗಿನ ಉತ್ತರಾಧಿಕಾರಿಗಳಿಂದ, ಅವು ದೊಡ್ಡ ರಾಜ್ಯವಾಗಿ, ಉತ್ತರದಲ್ಲಿ ಶಿವಾಲಿಕ್ಸ್^^ವರೆಗೆ, ದಕ್ಷಿಣದಲ್ಲಿ ರಾಜಸ್ಥಾನದವರೆಗೆ ಹಾಗು ಯಮುನಾ ಮತ್ತು ಸಟ್ಲೆಜ್ ನದಿಯ ವಿಸ್ತಾರದವರೆವಿಗೂ ಸಂದರ್ಭಗಳನ್ನು ಎದುರಿಸಿ ಮುಖಾ ಮುಖಿಯಾಗಿಸಿತು.

18ನೇ ಶತಮಾನದ ಮಧ್ಯದಲ್ಲಿ, ತನ್ನ ಸಮಕಾಲೀನರಿಗಿಂತ ವಿಭಿನ್ನವಾಗಿ ಬಾಬಾ ಅಲ ಸಿಂಗ್^^ನು,ಮುಘಲರನ್ನು ಪಳಗಿಸಲು , ಆಫ್ಘನರು ಮತ್ತು ಮರಾಠರನ್ನು ತಹಬಂದಿಗೆ ತರಲು, ಹಾಗು ಯಶಸ್ವಿಯಾಗಿ ಎದುರಿಸಿ, ನ್ಯುಕ್ಲಿಯಸ್ ಬರ್ನಾಲ ರಾಜ್ಯವನ್ನು ಅಭಿವೃದ್ಧಿ ಪಡಿಸಿದನು.

ರಾತ್ರಿಯಲ್ಲಿ ಕ್ವಿಲ ಮುಬಾರಕ್^^ನ ಮುಖ್ಯ ದ್ವಾರ. ವಿನ್ಯಾಸಗಾರ ಅತಿತ್ ಕುಮಾರ್ ಮತ್ತು ಬಲ್ವಿಂದರ್ ಕೌರ್^^ನಿಂದ ದರ್ಬಾರ್ ಹಾಲ್^^ನ ಯೋಜನೆಯ ತಯಾರಿ , ಕ್ವಿಲ ಮುಬಾರಕ್

1763ರಲ್ಲಿ ಬಾಬಾ ಅಲ ಸಿಂಗ್ ^^ನು ಪಟಿಯಾಲ ಕೋಟೆಗೆ ಅಸ್ಥಿಭಾರವನ್ನು ಹಾಕಿದ್ದು, ಆ ಕೋಟೆಯೇ ಖಿಲ ಮುಬಾರಕ್ ಎಂದು ಕರೆಸಿಕೊಂಡಿದೆ. ಇಂದಿನ ಪಟಿಯಾಲ ನಗರ ಅದರ ಸುತ್ತ ಬೆಳೆಯಿತು. 1761ರಲ್ಲಿನ 3ನೇ ಪಾಣಿಪಟ್ ಕದನವಾದ ನಂತರ ಮರಾಠರು ಯುಧ್ಧದಲ್ಲಿ ಸೋತಮೇಲೆ, ಪಂಜಬಿನಾದ್ಯಂತ ಆಫ್ಘನರ ರಾಯಭಾರ ಮುಂದುವರೆಯಿತು. ಈ ಸಂದರ್ಭದಲ್ಲಿ ಪಟಿಯಾಲದ ರಾಜರು ಸಾರ್ವಭೌಮತ್ವವನ್ನು ಗಳಿಸಲು ಆರಂಭಿಸಿದರು. ಅಹ್ಮದ್ ಶಃ ಅಬ್ದಲಿ ಅಲ ಸಿಂಗ್^^ನ ಮೇಲೆ ಆಶೀರ್ವದಿಸಿ ಫುರ್ಮ್ ಮತ್ತು ಬ್ಯಾನರ್ ಅನ್ನು ಕರುಣಿಸಿದನು, ಮತ್ತು ಪಟಿಯಾಲದ ಮಹಾರಾಜ ಎಂದು ಬಿರುದನ್ನೂ ನೀಡಿದನು. ಅವನ ಮರಣಾನಂತರ , ಅವನ ಮೊಮ್ಮಗ ಅಮರ್ ಸಿಂಗ್ ಅಧಿಕಾರಕೆ ಬಂದು, ರಾಜ -ಐ -ರಾಜನ್ ಎಂದು ಬಿರುದಾಂಕಿತನಾದನು. ಅವನು ನಾಣ್ಯಗಳ ಮುದ್ರಣದಲ್ಲಿ ತೊಡಗಲು ಸಾಧ್ಯವಾಯಿತು.

40 ವರ್ಷಗಳ ಕಾಲ ಸತತವಾಗಿ ಮುಘಲರ, ಆಫ್ಘನರ ಮತ್ತು ಮರಾಠರ ಹೋರಾಟದೊಂದಿಗೆ ಪಟಿಯಾಲದ ಗಡಿ ಭಾಗದಲ್ಲಿ ರಂಜಿತ್ ಸಿಂಗ್^^ನ ಹಾದಿ ಧಗಧಗಿಸುತ್ತ ಪಟಿಯಾಲದ ಉತ್ತರ ಭಾಗದಲ್ಲಿ ಮತ್ತು ಬ್ರಿಟಿಷರ ಪೂರ್ವ ಭಾಗದಲ್ಲಿ ಸಾಕ್ಷಿಯಾದವು. ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಹಂಬಲದಲ್ಲಿ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡ ಪಟಿಯಾಲದ ದೊರೆ ಬ್ರಿಟಿಷರೊಂದಿಗೆ ಸಾಧನೆ ನಡೆಸಿ,1808ರಲ್ಲಿ ರಂಜಿತ್ ಸಿಂಗ್^^ನ ವಿರುಧ್ಧ ನಿಂತನು. ಇದರಿಂದಾಗಿ ಭಾರತ ಉಪಖಂಡದಲ್ಲಿ ಬ್ರಿಟಿಷರ ಸಾಮ್ರಾಜ್ಯ ನಿರ್ಮಾಣದಲ್ಲಿ ಸಹವರ್ತಿಯಾಗಿ ನೆರವಾದರು. ಪಟಿಯಾಲದ ಆಡಳಿತಗಾರರಾದ, ಕರಂ ಸಿಂಗ್, ನರಿಂದೆರ್ ಸಿಂಗ್, ಮಹೇಂದ್ರ ಸಿಂಗ್, ರಜಿನ್ದೆರ್ ಸಿಂಗ್, ಭುಪಿಂದೆರ್ ಸಿಂಗ್ ಮತ್ತು ಯದ್ವಿಂದ್ರ ಸಿಂಗ್^^ರವರನ್ನು ಸಮಾನ ಗೌರವ ಮತ್ತು ಘನತೆಯಿಂದ ಬ್ರಿಟಿಷರು ನಡೆಸಿಕೊಂಡರು.

ಮಹಾರಾಜ ಭುಪಿಂದೆರ್ ಸಿಂಗ್ (ಆಡಳಿತ - 1900 ರಿಂದ 1938) ಪಟಿಯಾಲಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿ, ಭಾರತ ದೇಶದ ರಾಜಕೀಯ ಮತ್ತು ಅಂತರ ರಾಷ್ಟ್ರೀಯ ಕ್ರೀಡೆಯ ಮಟ್ಟದಲ್ಲಿ ಪಟಿಯಾಲಕ್ಕೆ ಮನ್ನಣೆಯನ್ನು ನೀಡಿದನು. ಈ ನಿಟ್ಟಿನಲ್ಲಿ ನಾಯಿಯ ಗೂಡಿಗೆ ಆದ್ಯತೆ ನೀಡಿದ್ದು,ಮಹಾರಾಜ ಜಿಂದ್ ಇಬ್ಬರೂ ನಾಯಿಯ ತಳಿಗಳ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿದರು. ಅವನ ಮಗ ಮಹಾರಾಜ ಯದವಿಂದ್ರ ಸಿಂಗ್ ಭಾರತದ ಮೊದಲನೇ ರಾಜನಾಗಿ ಸಿಂಹಾಸನಾರೋಹಣಕ್ಕೆ ಒಡಂಬಡಿಕೆಯನ್ನು ಮಾಡಿಕೊಂಡನು. ಇದರಿಂದಾಗಿ 1947ರ ಸ್ವಾತಂತ್ರೋತ್ಸವದ ನಂತರ ರಾಷ್ಟ್ರೀಯ ಭಾವೈಕ್ಯತೆಗೆ ನಾಂದಿಯಾಯಿತು. ಅವನ ಸೇವೆಯನ್ನು ಗುರುತುಸಿ, ಹೊಸದಾಗಿ ರಚಿಸಲ್ಪಟ್ಟ ಪಟಿಯಾಲ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟದ (ಪಿ ಇ ಪಿ ಎಸ್ ಯು ) ರಾಜಪ್ರಮುಖನನ್ನಾಗಿ ಮಾಡಲಾಯಿತು. 1948ರ ಸ್ಥಾಪನೆಯಾದ ವರ್ಷದಿಂದ,1956ರಲ್ಲಿ ಪಂಜಾಬ್ ^^ನೊಂದಿಗೆ ಸೇರಿಕೊಳ್ಳುವವರೆವಿಗೂ ಇದು ಮುಂದುವರಿಯಿತು. ಪಟಿಯಾಲದ ಕೆಳಮುಖ ಪ್ರದೇಶವಾದ ಅದಾಲತ್ ಬಜಾರ್ , ಅಂದರೆ 'ನ್ಯಾಯಾಲಯ ಪ್ರಾಂಗಣ' ವನ್ನು ಆಡಳಿತ ವಿಭಾಗದ ಕಟ್ಟಡವಾಗಿ ಉಪಯೋಗಿಸಿಕೊಳ್ಳಲಾಯಿತು. ಕಾರಣವೆಂದರೆ ಅಲ್ಲಿನ ರಾಜ ಪ್ರಮುಖರಿಂದ, ಮಹಾರಾಜ ಭುಪಿಂದೆರ್ ಸಿಂಗ್ ವಯಸ್ಕ ವಯಸ್ಸಿಗೆ ಅಂದರೆ ತನ್ನ ಆಡಳಿತ ವಯಸ್ಸನ್ನು ತಲುಪುವವರೆಗೆ. ರಾಜ ಕುಟುಂಬದ ಜತ್ತ್ ನ ಸಿದ್ಹು ಕುಟುಂಬದವರು , ರಾಜಮಾತ ಮೊಹಿಂದೆರ್ ಕೌರ್^^ರವರು ಹಳೆಯ ಸದಸ್ಯರು.

ದಿ ಫೌರ ಚೌಕ್ (ಲಿಟ್ . ದಿ ಫೌಂಟನ್ಕ್ರಾಸಿಂಗ್ ) ಪಟಿಯಾಲದ ಕೇಂದ್ರ (ಮುಖ್ಯ) ಸ್ಥಳದ ಗುರುತು.
ಪಟಿಯಾಲ ಬಾಗಿಲುಗಳ ಗೋಡೆಗಳ ನಗರ
  • ದರ್ಶನಿ ಬಾಗಿಲು - ಕ್ವಿಲ ಮುಬಾರಕ್^^ನ ಮುಖ್ಯ ಪ್ರವೇಶ ದ್ವಾರ
  • ಲಹೌರಿ ಬಾಗಿಲು
  • ನಭ ಬಾಗಿಲು
  • ಸಮಾನ ಬಾಗಿಲು
  • ಸಿರ್ಹಿಂಡಿ ಬಾಗಿಲು
  • ಶೇರನ್ವಲ ಬಾಗಿಲು
  • ಸಫಾಬಡಿ ಬಾಗಿಲು
  • ಸುನಾಮಿ ಬಾಗಿಲು
  • ಟಾಪ್ ಖಾನ ಬಾಗಿಲು
ಮೋತಿ ಬಗ್ಹ್ ಅರಮನೆ , ಪಟಿಯಾಲ - ಈಗ ರಾಷ್ಟ್ರೀಯ ಕ್ರೀಡಾ ಸಂಸ್ಥೆಗೆ ಮನೆಯಂತಿದೆ .

ಶಿಕ್ಷಣ/ವಿದ್ಯಾಭಾಸ

[ಬದಲಾಯಿಸಿ]

"ಮುನ್ಷಿ ನವಾಲ್ ಕಿಶೋರ್ ಪ್ರಿಂಟಿಂಗ್ ಪ್ರೆಸ್ " ಎಂದು ಕರೆಯಲ್ಪಡುವ ಪಟಿಯಾಲದ ಮೊದಲನೇ ಮುದ್ರಾಣಲಯವು 1870ರಲ್ಲಿ ಸ್ಥಾಪನೆಯಾಯಿತು. ಆಗಿಂದಲೇ ಪಟಿಯಾಲವು, ಪಂಜಾಬಿ ಭಾಷೆಗೆ ಕೇಂದ್ರ ಸ್ಥಳವಾಗಿ ಮಾರ್ಪಟ್ಟಿತು/ಹೊರಹೊಮ್ಮಿದೆ. ಪಂಜಾಬ್ ರಾಜ್ಯ ಸರ್ಕಾರದ 'ಭಾಷಾ ಇಲಾಖೆ' ಗಳ ಕೇಂದ್ರವಾಗಿದ್ದು, ಪಟಿಯಾಲ ನಗರದಲ್ಲಿನ 'ಶೇರನ್ವಾಲ ಬಾಗಿಲ' ಬಳಿ ಇದೆ.

1947ರ ಭಾರತ ಸ್ವಾತಂತ್ರ್ಯ ಬಂದಾಗಿನಿಂದ ಪಟಿಯಾಲ ಬಹು ಮುಖ್ಯ ವಿದ್ಯಾಕೇಂದ್ರವಾಗಿ ಪಂಜಾಬ್ ರಾಜ್ಯದಲ್ಲಿ ಬೆಳೆದಿದೆ. 'ದಿ ಸಿಟಿ ಹೌಸೆಸ್'^^ನ ಪಂಜಾಬಿನಿ ವಿಶ್ವವಿದ್ಯಾನಿಲಯ ,[] ಥಾಪರ್ ವಿಶ್ವವಿದ್ಯಾನಿಲಯ ,[] ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ,[] ಗಳು ಇವೆ. ಮೊಹಿಂದರ ಕಾಲೇಜ್ , ಸರ್ಕಾರಿ ವೈದ್ಯಕೀಯ ಕಾಲೇಜ್ , ಪಟಿಯಾಲ , ಮುಲ್ತಾನಿ ಮಾಲ್ ಮೋದಿ ಕಾಲೇಜ್ , ಹೆಣ್ಣುಮಕ್ಕಳ ಸರ್ಕಾರಿ ಕಾಲೇಜ್, ಬಿಕರಂ ವಾಣಿಜ್ಯ ಕಾಲೇಜ್, ಗವರ್ನಮೆಂಟ್ ಕಾಲೇಜ್ ಆಫ್ ಎಜುಕೇಶನ್, ದೈಹಿಕ ಶಿಕ್ಷಣದ ಸರ್ಕಾರಿ ಕಾಲೇಜ್, ಖಾಲ್ಸ ಕಾಲೇಜ್ , ಸರ್ಕಾರಿ ಆಯುರ್ವೇದ ಕಾಲೇಜ್ ಮತ್ತು ಯದವಿಂದ್ರ ಸಾರ್ವಜನಿಕ ಶಾಲೆ . ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆ ,ಇವುಗಳೆಲ್ಲದರಿಂದ ಉತ್ತರ ಭಾರತದಲ್ಲಿ ಪಟಿಯಾಲ ನಗರವು ಕ್ರೀಡಾ ತವರಾಗಿದೆ. ರಾಜೀವ್ ಗಾಂಧಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ, ಪಟಿಯಾಲ [] ಮೊದಲನೇ ಉತ್ತರ ಭಾಗದ ಕಾನೂನು ಶಾಲೆಯಾಗಿದ್ದು, ಪಂಜಾಬ್ ಸರ್ಕಾರದ ಕಾಯ್ದೆ 2006ರ ಅನ್ವಯ ಪ್ರಾರಂಭವಾಯಿತು.

ಪಟಿಯಾಲ ನಗರವು ಹಲವು ಆಟದ ಮೈದಾನಗಳನ್ನು ಹೊಂದಿದ್ದು, ಅದರಲ್ಲಿ ಲೋಯರ್ ಮಾಲ್ ರಸ್ತೆಯಲ್ಲಿರುವ ಪೋಲೋ ಆಟದ ಮೈದಾನ ಸಹ ಒಂದಾಗಿದೆ ; ಇದರಲ್ಲಿ ಒಳ ಕ್ರೀಡಾಂಗಣದ ವ್ಯವಸ್ಥೆಯಿದೆ. ಇತರ ಕ್ರೀಡಾ ಸೌಲಭ್ಯಗಳೆಂದರೆ, ಯದವಿಂದ್ರ ಕ್ರೀಡಾಂಗಣವು ಅಂಗಸಾಧನೆಗಾಗಿ(ವ್ಯಾಯಾಮ), ರೋಲರ್ ಸ್ಕೇಟಿಂಗ್ ರಿಂಕ್ ಹಾಲ್ ಕ್ರೀಡಾಂಗಣ ಮತ್ತು ರಾಷ್ಟ್ರೀಯ ಕ್ರೀಡಾ ಸಂಸ್ಥೆ , ಪಟಿಯಾಲದಲ್ಲಿದೆ. ಪಂಜಾಬಿ ವಿಶ್ವವಿದ್ಯಾನಿಲಯವು ತನ್ನದೇ ಸ್ವಂತ ಕ್ರೀಡಾ ಮೈದಾನ ಹೊಂದಿದ್ದು, ವೇಲೋಡ್ರೋಮ್ ಸಹ ಸೇರಿದೆ.

ಪಂಜಾಬ್ ರಾಜ್ಯದ ಹಲವಾರು ಆಡಳಿತ ವಿಭಾಗದ ಕಟ್ಟಡಗಳು ಪಟಿಯಾಲದಲ್ಲಿದೆ. ಪಂಜಾಬ್ ರಾಜ್ಯ ವಿದ್ಯುಚ್ಚಕ್ತಿ ಮಂಡಳಿ, ಪಂಜಾಬ್ ಲೋಕಸೇವಾ ಆಯೋಗ , ಪಂಜಾಬ್ ಪರಿಸರ ಸ್ನೇಹಿ ನಿಗಮ, ಅಬಕಾರಿ ಮತ್ತು ತೆರಿಗೆ ಅಧಿಕಾರಿಗಳ ಕಚೇರಿ, ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, (ಬಿ ಮತ್ತು ಆರ್ ), ಪಂಜಾಬ್ ಭಾಷಾ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಸೇರಿವೆ.

ಉನ್ನತ ಶಿಕ್ಷಣ

ರಾಜೀಂದ್ರ ಕೋಥಿ, ಬರದರಿ ಉದ್ಯಾನದಲ್ಲಿ ಪಟಿಯಾಲ ಸ್ಥಾಪಿತವಾಗಿದೆ.
  • ಪಂಜಾಬ್ ಏರ್ ಕ್ರಾಫ್ಟ್ ಮೈನ್ಟನೆನ್ಸ್ ಇಂಜಿನಿಯರಿಂಗ್ ಕಾಲೇಜ್ (ಎ.ಎಂ.ಇ.ಗಾಗಿ ಇರುವ ಎರಡು ಸರಕಾರೀ ಕಾಲೇಜುಗಳಲ್ಲಿ ಇದೂ ಒಂದಾಗಿದೆ )
  • [ವೈಷ್ನೂ ಮಾ ಕಂಪ್ಯೂಟರ್ಸ್ ][]
  • ಮೊಹಿಂದ್ರ ಕಾಲೇಜ್ ಸ್ಥಾಪನೆ . 1875.
  • ರಾಷ್ಟ್ರೀಯ ಡಿಫೆನ್ಸ್ ಯುನಿವರ್ಸಿಟಿ ಆಫ್ ಇಂಡಿಯಾ (ಸೂಚಿಸಿದ/ಉದ್ದೇಶಿತ )
  • ಪಂಜಾಬಿ ಯುನಿವರ್ಸಿಟಿ ಸ್ಥಾಪನೆ . 1962.
  • ಥಾಪರ್ ಯುನಿವರ್ಸಿಟಿ ಸ್ಥಾಪನೆ 1956.
  • ರಾಜೀವ್ ಗಾಂಧಿ ರಾಷ್ಟ್ರೀಯ ಯುನಿವರ್ಸಿಟಿ ಆಫ್ ಲಾ []
  • ಮುಲ್ತಾನಿ ಮಲ್ ಮೋದಿ ಕಾಲೇಜ್ , ಲೋವೆರ್ ಮಾಲ್ ಸ್ಥಾಪನೆ . 1967.
  • ಬಿಕ್ರಂ ಕಾಲೇಜ್ ಆಫ್ ಕಾಮರ್ಸ್, ಪಟಿಯಾಲ .
  • ಸರ್ಕಾರಿ ಮೆಡಿಕಲ್ ಕಾಲೇಜ್ , ಪಟಿಯಾಲ .
  • ಖಾಲ್ಸ ಕಾಲೇಜ್ , ಪಟಿಯಾಲ .
  • ಜಿಸಿಜಿ, ಪಟಿಯಾಲ
  • ದೈಹಿಕ ಶಿಕ್ಷಣದ ಕಾಲೇಜ್ ,ಪಟಿಯಾಲ
  • ಬಿ.ಎಡ್ ಕಾಲೇಜ್
  • ಸರ್ಕಾರಿ . ಪಾಲಿಟೆಕ್ನಿಕ್ , ಪಟಿಯಾಲ
ಹೆಸರಾಂತ ಶಾಲೆಗಳು
  • ಅಪೋಲೋ ಪಬ್ಲಿಕ್ ಸ್ಕೂಲ್ ( ಅರ್ಬನ್ ಎಸ್ಟೇಟ್ ,ಪಟಿಯಾಲ )
  • ದಿ ಬ್ರಿಟಿಷ್ ಸಹ -ಶಿಕ್ಷಣ ಶಾಲೆ ,ಲೋವೆರ್ ಮಾಲ್ , ಪಟಿಯಾಲ
  • ಬುಧ ದಲ್ ಪಬ್ಲಿಕ್ ಸ್ಕೂಲ್ , ಲೋವೆರ್ ಮಾಲ್ , ಪಟಿಯಾಲ
  • ಶ್ರೀ ಅರಬಿಂದೋ ಅಂತರ ರಾಷ್ಟ್ರೀಯ ಸ್ಕೂಲ್ ಪಟಿಯಾಲ .
  • ವೀರ್ ಹಕೀಕತ್ ರೈ ಮಾಡೆಲ್ ಸೀನಿಯರ್ ಸೆಕಂಡರಿ ಸ್ಕೂಲ್ ,ಪಟಿಯಾಲ
  • ಆರ್ಮಿ ಪಬ್ಲಿಕ್ ಸ್ಕೂಲ್ ,ತರಪುರ್ ಎನ್ಕ್ಲೇವ್ , ಪಟಿಯಾಲ ಕ್ಯಾಂತ್ತ್, ಪಟಿಯಾಲ
  • ಶ್ರೀ ಗುರು ತೇಗ್ ಬಹಾದುರ್ ಪಬ್ಲಿಕ್ ಸ್ಕೂಲ್ , ತ್ರಿಪುರಿ , ಪಟಿಯಾಲ .
  • ಸನ್ ಫ್ಲವರ್ ಮಾಡೆಲ್ ಹೈಸ್ಕೂಲ್ , ತ್ರಿಪುರಿ , ಪಟಿಯಾಲ .
  • ರಯಾನ್ ಅಂತರ ರಾಷ್ಟ್ರೀಯ ಸ್ಕೂಲ್ , ಅರ್ಬನ್ ಎಸ್ಟೇಟ್ , ಪಟಿಯಾಲ .
  • ಮಾಡ್ರನ್ ಸೀನಿಯರ್ ಸೆಕೆಂಡರಿ ಸ್ಕೂಲ್ ಪಟಿಯಾಲ .
  • ಸೆಂಟ್ .ಪೀಟರ್ಸ್ ಅಕಾಡೆಮಿ ಪಟಿಯಾಲ .
  • ಅವರ್ ಲೇಡಿ ಆಫ್ ಫಾತಿಮಾ ಕಾನ್ವೆಂಟ್ ಹೈಸ್ಕೂಲ್ ಪಟಿಯಾಲ .
  • ಯಾದವಿಂದ್ರ ಪಬ್ಲಿಕ್ ಸ್ಕೂಲ್ ಪಟಿಯಾಲ ಸ್ಥಾಪನೆ . 1948.
  • ಫೀಲ್ ಖಾನ , ಪಟಿಯಾಲ ಸ್ಥಾಪನೆ . 1955.
  • ಪ್ಲೇ ವೇಸ್ ಹೈಸ್ಕೂಲ್ ಪಟಿಯಾಲ .
  • ಸೀನಿಯರ್ ಮಾಡೆಲ್ ಸ್ಕೂಲ್ , ಸಿವಿಲ್ ಲೈನ್ಸ್ ಪಟಿಯಾಲ ಸ್ಥಾಪನೆ . 1956.
  • ಡಿ .ಎ .ವಿ ಪಬ್ಲಿಕ್ ಸ್ಕೂಲ್ , 22 ನಂ . ಫಾಟಕ್ ಪಟಿಯಾಲ .
  • ನ್ಯೂ ಡ್ಯಾಫಡೈಲ್ಸ್ ಪಬ್ಲಿಕ್ ಸ್ಕೂಲ್ ಪಟಿಯಾಲ .
  • ಮಾಡ್ರನ್ ಸೀನಿಯರ್ ಸೆಕೆಂಡರಿ ಸ್ಕೂಲ್ , ಪಟಿಯಾಲ
  • ಕೇಂದ್ರೀಯ ವಿದ್ಯಾಲಯ , ಪಟಿಯಾಲ .
  • ಸ್ಪ್ರಿಂಗ್ ದಲೇ ಪಬ್ಲಿಕ್ ಸ್ಕೂಲ್ , ಪಟಿಯಾಲ .
  • ಮಾಳ್ವ ಸೀನಿಯರ್ ಸೆಕೆಂಡರಿ ಸ್ಕೂಲ್ , ಭಾಡ್ಸನ್ ರೋಡ್ , ಪಟಿಯಾಲ
  • ಶಿವಾಲಿಕ್ ಪಬ್ಲಿಕ್ ಸ್ಕೂಲ್ , ಪಟಿಯಾಲ
  • ಎಸ್ .ತೇಜ ಸಿಂಗ್ ಕಂಧರಿ ಪಬ್ಲಿಕ್ ಸ್ಕೂಲ್ , ಪಟಿಯಾಲ
  • ಶ್ರೀ ಗುರು ಹರ ಕೃಷನ್ ಹೈ ಸ್ಕೂಲ್ ( ಶೇರ್ -ಎ -ಪಂಜಾಬ್ ಮಾರ್ಕೆಟ್ ಪಟಿಯಾಲ )

ಕಂಪ್ಯೂಟರ್ ಶಿಕ್ಷಣ

  • ಜಿ ಟಿ ಇ ಸಿ ಪಟಿಯಾಲ ಕಂಪ್ಯೂಟರ್ ಶಿಕ್ಷಣ , ಚೊಟ್ಟಿ ಬರದರಿ ಪಟಿಯಾಲ
ಇತರೆ

ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಥಾಪರ್ ಕೇಂದ್ರ.

[ಬದಲಾಯಿಸಿ]
ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಥಾಪರ್ ಕೇಂದ್ರವು (ಟಿ ಸಿ ಐ ಆರ್ ಡಿ ),[] ಒಂದು ಲಾಭದಾಯಕವಲ್ಲದ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯಾಗಿದ್ದು, ಪಟಿಯಾಲದಲ್ಲಿ (ಪಂಜಾಬ್ ) ನೆಲೆಸಿದೆ.  1984ರಲ್ಲಿ ಇದನ್ನು ಸ್ಥಾಪಿಸಲಾಗಿ, ಟಿ ಸಿ ಐ ಆರ್ ಡಿ ಯನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಘಟನೆ   ಎಂದು  ಭಾರತ ಸರ್ಕಾರದಿಂದ ಗುರುತಿಸಲಾಗಿದ್ದು, ಉತ್ತರ ಭಾರತದಲ್ಲಿ ಒಂದು ಪ್ರಮುಖ ತಾಂತ್ರಿಕ ಅಭಿವೃದ್ಧಿ ಕೇಂದ್ರವಾಗಿದೆ.

ಜನಸಂಖ್ಯಾಶಾಸ್ತ್ರ/ಅಂಕಿಸಂಖ್ಯೆ

[ಬದಲಾಯಿಸಿ]

As of 2001 ಭಾರತ ಜನಗಣತಿ ಯ ಪ್ರಕಾರ [] ಪಟಿಯಾಲ ಜನಸಂಖ್ಯೆ 302,870. ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 54 ರಷ್ಟು ಪುರುಷರೂ ಮತ್ತು ಶೇಕಡಾ 46 ರಷ್ಟು ಮಹಿಳೆಯರೂ ಇದ್ದಾರೆ. ಪಟಿಯಾಲದಲ್ಲಿರುವ ಶೇಕಡವಾರು ‌77 ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದ್ದು, ರಾಷ್ಟ್ರೀಯ ಸರಾಸರಿಮಟ್ಟ ಶೇಕಡಾ 59.5% ಕ್ಕಿಂತ ಹೆಚ್ಚಿಗಿದೆ. ಪುರುಷರ ಸಾಕ್ಷರತೆ ಪ್ರಮಾಣ ಶೇಕಡಾ79 ಮತ್ತು ಮಹಿಳಾ ಸಾಕ್ಷರತೆ ಪ್ರಮಾಣ ಶೇಕಡಾ 73 ರಷ್ಟಿದೆ. ಪಾಟಿಯಾಲದಲ್ಲಿ ಜನಸಂಖ್ಯೆಯ ಶೇಕಡಾ 10 ರಷ್ಟು ಆರು ವರ್ಷದ ಕೆಳಗಿನ ಮಕ್ಕಳು. ಶೇಕಡಾ 50 ರಷ್ಟು ಜನಸಂಖ್ಯೆ ಸಿಖ್ಖಿಸಂ ಅನ್ನು ಅಳವಡಿಸಿಕೊಂಡಿದ್ದರೆ, ಮತ್ತುಳಿದವರು ಹಿಂದುಗಳಾಗಿದ್ದಾರೆ.

ಸಂಸ್ಕೃತಿ ಮತ್ತು ಸಂಪ್ರದಾಯಗಳು

[ಬದಲಾಯಿಸಿ]
ಪಟಿಯಾಲದ ಫುಲ್ ಕರಿ

ಪಟಿಯಾಲದ ಮಾಳ್ವ ಮೇಲಿನ ಪ್ರಭುತ್ವ ರಾಜಕೀಯ ವರ್ಚಸ್ಸಿಗಿಂತ ಹೆಚ್ಚಿನದಾಗಿತ್ತು. ಪಟಿಯಾಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಕೇಂದ್ರವಾಗಿದೆ. ವಿದ್ಯಾಭ್ಯಾಸದ ದೃಷ್ಟಿಯಿಂದ , ಪಟಿಯಾಲ ಬಹಳ ಮುಂದೆ ಇದೆ. ದೇಶದ ಈ ಭಾಗದಲ್ಲಿ , 1870 ರಲ್ಲಿ ಮೊಟ್ಟ ಮೊದಲನೇ ಬಾರಿಗೆ ಪಟಿಯಾಲವು ಡಿಗ್ರಿ ಕಾಲೇಜ್, ಮೊಹಿಂದರ ಕಾಲೇಜ್ ಹೊಂದಿದ ಪಟ್ಟಣವಾಗಿದೆ. 19ನೇ ಶತಮಾನದಲ್ಲಿ 70ರ ದಶಕದಲ್ಲಿ ಮುನ್ಷಿ ನವಾಲ್ ಕಿಶೋರ್ ಮುದ್ರಣಾಲಯ ಪ್ರಾರಂಭವಾಗಿದೆ. ಪಟಿಯಾಲ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿದ್ದು, "ಪಟಿಯಾಲವಿ " ಜಿಲ್ಲಾ ಸಂಸ್ಕೃತಿ ಕೇಂದ್ರವಾಗಿ ಬೆಳೆದಿದೆ. ಪಟಿಯಾಲ ತನ್ನದೇ ಆದ ವಿಶಿಷ್ಟ ವಾಸ್ತುಶಿಲ್ಪವನ್ನು ಹೊಂದಿದೆ. ರಜಪೂತರ ಶೈಲಿಯಿಂದ ಪ್ರಭಾವಿತರಾಗಿದ್ದು,ತನ್ನ ಸೌಂದರ್ಯ ಮತ್ತು ಸೊಬಗನ್ನು ಸ್ಥಳೀಯ ಸಂಸ್ಕೃತಿ ಬಿಂಬಿಸುತ್ತದೆ.

ಫಾಲ್ ಸಿನಿಮಾ, ಮಾಲ್^^ಗೆ ಎದುರುಮುಖವಾಗಿರುವ ಫೌಂಟನ್ ಚೌಕವನ್ನು ಆರ್ಟ್ ಡೆಕೋ ಶೈಲಿಯಲ್ಲಿ ಕಟ್ಟಲಾಗಿದೆ.
ಪಟಿಯಾಲ ಆಡಳಿತಗಾರರ ಪೋಷಣೆಯಿಂದ, ಹಿಂದುಸ್ತಾನಿ ಶೈಲಿಯ ಸಂಗೀತ  "ಪಟಿಯಾಲ  ಘರಾಣ " ಅಸ್ತಿತ್ವಕ್ಕೆ ಬಂದಿದ್ದು, ಈಗಲೂ ಇದು ಪ್ರಸ್ತುತವಿದೆ.  ಈ ಸಂಗೀತ ಶಾಲೆಯು ಹಲವಾರು ಪ್ರಸಿದ್ಧ ಸಂಗೀತಗಾರರನ್ನು ಹೊಂದಿದೆ. ಅದರಲ್ಲಿ ಹಲವರು ಪಟಿಯಾಲದಿಂದ ಬಂದವರಾಗಿದ್ದು, 18ನೇ ಶತಮಾನದ ದೆಹಲಿ ಯ ಮುಘಲ್ ಸಾಮ್ರಾಜ್ಯದಿಂದ   ಬಂದವರಾಗಿದ್ದಾರೆ. ಶತಮಾನದ ತಿರುವಿನಲ್ಲಿ ,'ಉಸ್ತಾದ್ ಅಲಿ ಬಕ್ಸ್'ಎಂಬ  ಹೆಸರಾಂತ ಸಂಗೀತಗಾರನು ಈ ಘರಾಣದಲ್ಲಿ ಸಾಧನೆ ಮಾಡಿದ್ದಾನೆ. ನಂತರ ಅವನ ಮಕ್ಕಳು , ಉಸ್ತಾದ್ ಅಖ್ತರ್ ಹುಸ್ಸೈನ್ ಖಾನ್  ಮತ್ತು  ಉಸ್ತಾದ್ ಬಡೆ ಘುಲಂ ಅಲಿ ಖಾನ್  ಇವರು ಪ್ರಪಂಚದಾದ್ಯಂತ ಹೆಸರನ್ನು ಮಾಡಿ ಪಟಿಯಾಲ ಘರಾಣಗೆ ಹೆಸರನ್ನು ತಂದುಕೊಟ್ಟರು.  ಈ ಸಂಗೀತ ಶಾಲೆಗೆ ಹಲವು ಪೋಷಕರು ರಾಜ್ಯದಲ್ಲಿದ್ದು, ಉಉತರ ವಲಯ ಸಂಸ್ಕೃತ ಕೇಂದ್ರ  - ಎನ್ ಜೆಡ್ ಸಿ ಸಿ   -  ಪಟಿಯಾಲದಲ್ಲಿ ಅಭಿವೃದ್ಧಿ ಹೊಂದಿದೆ.

ಭಾರತ ದೇಶದ ವಿಭಜನೆಯ ನಂತರ, ಹಲವು ಬಹವಾಲ್ ಪುರಿ ಜನರು ಬಹವಾಲ್ ಪುರದಿಂದ (ಪಾಕಿಸ್ತಾನ )ಬಂದು ಪಟಿಯಾಲದಲ್ಲಿ ನೆಲೆನಿಂತರು. ಈ ಜನಾಂಗವು ವೈವಿಧ್ಯಮಯವಾಗಿ ಬೆಳೆದಿದ್ದು, ಹೆಚ್ಚು ವಾಸಿಸುವ ಪ್ರದೇಶವಾದ, ತ್ರಿಪುರಿ ಪಟ್ಟಣ ಪಟಿಯಾಲದಲ್ಲಿದೆ. ಈ ಸ್ಥಳದಲ್ಲಿ ವಾಸ ಮಾಡುವ ಬಹಳಷ್ಟು ನಿವಾಸಿಗಳು ಪೂರ್ವಿಕರ ಭಾಷೆಯಾದ "ಬಹವಾಲ್ ಪುರಿ " ಯನ್ನು ಮಾತನಾಡುತ್ತಾರೆ. ಇದು ಪಾಕಿಸ್ತಾನಿ ಭಾಷೆಯಾದ ಮುಲ್ತಾನಿ ಭಾಷೆಗೆ ಸಮಾನಾಂತರ ಭಾಷೆಯಾಗಿದೆ.

ಜಿಲ್ಲಾ ಆಡಳಿತ

[ಬದಲಾಯಿಸಿ]
  • ಜೀಲಾ ದಂಡಾಧಿಕಾರಿ, ಭಾರತೀಯ ಆಡಳಿತ ಸೇವೆ ,ಇವರು ಜಿಲ್ಲೆಯ ಸಮಸ್ತ ಆಡಳಿತದ ಸಂಪೂರ್ಣ ಉಸ್ತುವಾರಿ ಹೊಂದಿದ್ದಾರೆ. ಇವನಿಗೆ ಹಲವಾರು ಸಹಾಯಕ ಅಧಿಕಾರಿಗಳಾದ ಹರಿಯಾಣ ನಾಗರಿಕ ಸೇವೆ ಮತ್ತಿತರ ಹರಿಯಾಣ ಸರ್ಕಾರಿ ಸೇವೆಗಳಿಗೆ ಸೇರಿದ ಅನೇಕ ನೌಕರರು ಅವರಿಗೆ ನೆರವಾಗುತ್ತಾರೆ.
  • ಕಾರ್ಯದರ್ಶಿಗಳ ಮಟ್ಟದ ಕಾರ್ಯಾಲಯ, ನಭ ರಸ್ತೆಯಲ್ಲಿದ್ದು, ಇಲ್ಲಿ ಹೆಚ್ಚಿನ ಆಡಳಿತ ವಿಭಾಗದ ಕಟ್ಟಡಗಳು ಇದ್ದು, ಜಿಲ್ಲಾಧಿಕಾರಿಗಳು, ಎಸ್ ಎಸ್ ಪಿ ಅಧಿಕಾರಿಗಳ ಕಛೇರಿಗಳು ಪಟಿಯಾಲ ಮತ್ತು ಸ್ಥಳೀಯ ಆಡಳಿತವನ್ನು ನೀಡುವ ಕಛೇರಿಗಳು ಲೋಕಸಭೆಯ ಸದಸ್ಯರ ಜವಾಬ್ದಾರಿಗಳಿಂದ ನಿರ್ಮಾಣವಾಗಿದೆ.
  • ಹಿರಿಯ ಅಧಿಕಾರಿಯಾದ ಪೋಲಿಸ್ ಸೂಪರಿಂಟೆಂಡೆಂಟ್,ಭಾರತಿಯ ಪೋಲಿಸ್ ಸೇವೆ, ಇವರು ಚಂಢೀಘಢ್ ಕಾನೂನು ಮತ್ತು ಸುವ್ಯವಸ್ಥೆ ಹಾಗು ಸಂಬಂಧಿತ ವಿಷಯಗಳ ಪಾಲನೆಯ ಹೊಣೆ ಹೊತ್ತಿದ್ದು, ಇವರಿಗೆ ಪಂಜಾಬ್ ಲೋಕಸೇವಾ ಆಯೋಗದ ಇತರ ಅಧಿಕಾರಿಗಳು ಹಾಗು ಇತರ ಪಂಜಾಬ್ ಪೋಲಿಸ್ ಅಧಿಕಾರಿಗಳು ನೆರವಾಗುತ್ತಾರೆ.
  • ವಿಭಾಗೀಯ ಅರಣ್ಯ ಅಧಿಕಾರಿಯು, ಭಾರತ ಅರಣ್ಯ ಸೇವೆಗೆ ಸಂಬಂಧಿಸಿದ ಅಧಿಕಾರಿಯಾಗಿದ್ದು, ಈತನು ಸ್ಥಳೀಯ ಅರಣ್ಯದ ಆಡಳಿತ, ಜಿಲ್ಲೆಯಲ್ಲಿನ ಪರಿಸರ ಮತ್ತು ವನ್ಯ ಮೃಗಗಳ ಜವಾಬ್ದಾರಿಯನ್ನು ಹೊತ್ತಿರುತ್ತಾನೆ. ಈತನಿಗೆ ಪಂಜಾಬ್ ಅರಣ್ಯ ಸೇವೆಯ ಅಧಿಕಾರಿಗಳು ಮತ್ತು ಇತರ ಪಂಜಾಬ್ ಅರಣ್ಯ ಆಡಳಿತಾಧಿಕಾರಿಗಳು ಮತ್ತು ಪಂಜಾಬ್ ವನ್ಯಮೃಗ ಅಧಿಕಾರಿಗಳು ಸಹಕಾರವನ್ನು ನೀಡುತ್ತಾರೆ.
  • ವೃತ್ತ ವಲಯ ಅಭಿವೃದ್ಧಿಯನ್ನು ಜಿಲ್ಲೆಯ ಮುಖ್ಯಸ್ಥ/ಅಧಿಕಾರಿಯು, ಪ್ರತೀ ಅಭಿವೃದ್ಧಿ ಇಲಾಖೆಗಳಾದ ಪಿ.ಡಬ್ಲ್ಯು.ಡಿ(ಲೋಕೊಪಯೋಗೀ ಇಲಾಖೆ), ಆರೋಗ್ಯ, ಶಿಕ್ಷಣ, ವ್ಯವಸಾಯ, ಪಶು ಸಂಗೋಪನೆ, ಮುಂತಾದ ಇಲಾಖಾ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಈ ಆಡಳಿತಗಾರರೆಲ್ಲಾ ಪಂಜಾಬ್ ರಾಜ್ಯದ ವಿವಿಧ ಸೇವೆಗಳಲ್ಲಿದ್ದಾರೆ.
  • ಪಟಿಯಾಲ ರೈಲ್ವೆ ನಿಲ್ದಾಣವು ಒಂದು ಚಾರಿತ್ರಿಕ ಸ್ಥಳವಾಗಿದ್ದು, ಅನೇಕ ದೊಡ್ಡ ಚಿತ್ರಗಳಾದಂತಹ 'ಲವ್ ಆಜ್ ಕಲ್'(ಸೈಫ್,ದೀಪಿಕಾ ) ಪಟಿಯಾಲದಲ್ಲಿ ಚಿತ್ರೀಕರಣಗೊಂಡಿದೆ.

ಪಟಿಯಾಲದ ಹೆಸರಾಂತ ಜನರು

[ಬದಲಾಯಿಸಿ]
ಚಿತ್ರ:MohindraCollege.jpg
ಮೊಹಿಂದ್ರ ರಾತ್ರಿ ಕಾಲೇಜು , ಪಟಿಯಾಲ
  • ಶಹೀದ್ -ಇ -ಅಜ್ಯಮ್ ಸರ್ದಾರ್ ಉಧಮ್ ಸಿಂಗ್ – ಕ್ರಾನತೀಕಾರಿ ಸಮಾಜವಾದಿ
  • ನಾಯಕ ಅಮರಿಂದೆರ್ ಸಿಂಗ್ – ಪಂಜಾಬಿನ 29ನೇ ಮುಖ್ಯ ಮಂತ್ರಿ
  • ಜಿಮ್ಮಿ ಶೇರ್ಗಿಲ್
  • ಗುಲ್ ಪನಾಗ್
  • ವಿಂಗ್ ಕಮಾನ್ಡರ್ ರಾಕೇಶ್ ಶರ್ಮ – ಆಕಾಶಕಾಯದಲ್ಲಿ(ಯಾನ)ಪಯಣಿಸಿದ ಮೊದಲನೇ ಭಾರತೀಯ ಮತ್ತು 138ನೇ ಮನುಷ್ಯ
  • ಓಂ ಪುರಿ – ಬಾಲಿವುಡ್ ನಟ
  • ದಲೇರ್ ಮೆಹಂದಿ – ಪಂಜಾಬಿ ಸಂಗೀತ ಕಲಾವಿದ
  • ಗುರ್ದಾಸ್ ಮಂನ್
  • ಹರ್ಭಜನ್ ಮಂನ್
  • ಶೇರ್ಅಲಿ ಮತ್ತು ಮೆಹರ್ಅಲಿ ಅವರ ತಂದೆ – ಪ್ರಸಿದ್ಧ ಖವ್ವಾಲಿಗಳು
  • ನವಜೋತ್ ಸಿಂಗ್ ಸಿದ್ಹು – ಕ್ರಿಕೆಟಿಗ , ನಟ , ವ್ಯಾಖ್ಯಾನಕಾರ ಮತ್ತು ರಾಜನೀತಿಜ್ಞ .
  • ಧನ್ವಂತ್ ಸಿಂಗ್ ಕಾಂಗ್ – ಅಂತರರಾಷ್ಟ್ರೀಯ ಕತ್ತಿವರಸೆ ಸ್ಪರ್ಧೆಯಲ್ಲಿ 2ನೇ ಸ್ಥಾನ ಗಳಿಸಿದವನೆಂಬ ಉಕ್ತಿ.
  • ಪರನ್ದೀಪ್ ಸಿಂಗ್ ಕೈಂತ್ – ಪತ್ರಿಕಾ ಛಾಯಾಗ್ರಾಹಕ , ನಟ , ಬರಹಗಾರ , ಬೇಹುಗಾರಿಕೆಯಲ್ಲಿ ರಾಜ್ಯಪಾಲ ಪ್ರಶಸ್ತಿ.
  • ಮೇಜರ್ ಸಂಧು – ಲಂಡನ್^^ನಲ್ಲಿ ದೂರದರ್ಶನವನ್ನು ಪ್ರಸ್ತುತಪಡಿಸಿದವನು .
  • ರೂಪ್ ಭಿಂದೆರ್ - ಎಂಟಿವಿ ರೋಡೀಸ್ 6 ಸ್ಪರ್ಧಿ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಪಟಿಯಾಲ ಸಲ್ವಾರ್

ಉಲ್ಲೇಖಗಳು/ಆಕರಗಳು

[ಬದಲಾಯಿಸಿ]
  1. "Falling Rain Genomics, Inc - Patiala".
  2. ಎ ಹಿಸ್ಟರಿ ಆಫ್ ಸಿಖ್ ಮಿಸಲ್ಸ್ - ಡಾ. ಭಗತ್ ಸಿಂಗ್
  3. "ಆರ್ಕೈವ್ ನಕಲು". Archived from the original on 2006-04-08. Retrieved 2021-08-10.
  4. "ಆರ್ಕೈವ್ ನಕಲು". Archived from the original on 2010-11-14. Retrieved 2021-08-10.
  5. ೫.೦ ೫.೧ "ಆರ್ಕೈವ್ ನಕಲು". Archived from the original on 2018-04-13. Retrieved 2021-08-10.
  6. rgnulpatilala.org
  7. "ಆರ್ಕೈವ್ ನಕಲು". Archived from the original on 2011-02-02. Retrieved 2010-08-23.
  8. "ಆರ್ಕೈವ್ ನಕಲು". Archived from the original on 2018-08-10. Retrieved 2021-08-10.
  9. GRIndia

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಪಟಿಯಾಲ&oldid=1233881" ಇಂದ ಪಡೆಯಲ್ಪಟ್ಟಿದೆ