ವಿಷಯಕ್ಕೆ ಹೋಗು

ಪರಿಸರ ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಡಿರೋಂಡಾಕ್‌ ಪಾರ್ಕ್‌ನಲ್ಲಿನ [0] ಉನ್ನತ ಶಿಖರಗಳ ಪಾಳುಭೂಮಿ ಪ್ರದೇಶವು ಒಂದು ವೈವಿಧ್ಯಮಯ ಪರಿಸರ ವ್ಯವಸ್ಥೆಗೆ ಒಂದು ಉದಾಹರಣೆಯಾಗಿದೆ.
ಟಾಂಜಾನಿಯಾದ, ಗೊರೊಂಗೊರೊ ಸಂರಕ್ಷಣಾ ಪ್ರದೇಶದಲ್ಲಿನ ಹುಲ್ಲುಗಾಡು.
ಮೆಕ್ಸಿಕೋದ ಕ್ಯಾಟ್‌ವೀನಾ ವಲಯದಲ್ಲಿನ ಬಾಜಾ ಕ್ಯಾಲಿಫೋರ್ನಿಯಾ ಮರುಭೂಮಿಯ ಸಸ್ಯವರ್ಗ.

ಪರಿಸರ ವ್ಯವಸ್ಥೆ ಎಂದರೆ ಪರಿಸರದ ಭೌತಿಕವಾದ ಮತ್ತು ಜೈವಿಕವಾದ ಸಂಯೋಜಿತ ಘಟಕಗಳಿಗೆ ಅನ್ವಯಿಸುತ್ತದೆ. ಪರಿಸರ ವ್ಯವಸ್ಥೆ ಒಂದು ನೈಸರ್ಗಿಕ ಪರಿಸರದೊಳಗಿನ ಪ್ರದೇಶವಾಗಿದೆ.ಈ ಪರಿಸರದಲ್ಲಿ ನಾವು ಜೈವಿಕ ಮತ್ತು ಅಜೈವಿಕ ವಸ್ತುಗಳು ಅಂದರೆ , ಬಂಡೆಗಳು ಮತ್ತು ಮಣ್ಣಿನಂಥ ಪರಿಸರದ ಭೌತಿಕ (ಜೈವಿಕ) ಅಂಶಗಳು, ಸಸ್ಯಗಳು ಮತ್ತು ಪ್ರಾಣಿಗಳಂಥ ಸ್ವತಂತ್ರ (ಜೈವಿಕ) ಜೀವಿಗಳೊಂದಿಗೆ ಅದೇ ಸ್ವಾಭಾವಿಕ ನೆಲೆಯೊಳಗೆ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ . ಪರಿಸರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಅಥವಾ ಶಾಶ್ವತ ವ್ಯವಸ್ಥೆಯನ್ನು ಕಾಣಬಹುದು ಮತ್ತು ಸಾಮಾನ್ಯವಾಗಿ ಒಂದು ಅಸಂಖ್ಯಾತ ಆಹಾರ ಜಾಲಗಳನ್ನು ರೂಪಿಸುತ್ತವೆ.[]

ಸ್ಥೂಲ ಅವಲೋಕನ

[ಬದಲಾಯಿಸಿ]

ಜೀವಂತ ಜೀವಿಗಳು ತಮ್ಮ ಸ್ಥಳೀಯ ಪರಿಸರದಲ್ಲಿನ ಇತರ ಪ್ರತಿಯೊಂದು ಘಟಕಗಳೊಂದಿಗೂ ಪಾರಸ್ಕರಿಕವಾಗಿ ವರ್ತಿಸುತ್ತವೆ ಅಥವಾ ಪ್ರಭಾವ ಬೀರುತ್ತವೆ ಎಂಬ ಅಭಿಪ್ರಾಯವು ಪರಿಸರ ವ್ಯವಸ್ಥೆಯ ಪರಿಕಲ್ಪನೆಯ ಕೇಂದ್ರಸ್ಥಾನದಲ್ಲಿದೆ. ಪರಿಸರ ವಿಜ್ಞಾನದ ಓರ್ವ ಸಂಸ್ಥಾಪಕನಾದ ಯೂಜೀನ್‌ ಓಡಮ್‌ ಹೇಳುವ ಪ್ರಕಾರ, "ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಎಲ್ಲಾ ಜೀವಿಗಳನ್ನೂ (ಅಂದರೆ: "ಸಮುದಾಯ") ಒಳಗೊಳ್ಳುವ ಯಾವುದೇ ಘಟಕವು ಭೌತಿಕ ಪರಿಸರದೊಂದಿಗೆ ಪರಸ್ಪರ ಕಾರ್ಯನಿರ್ವಹಿಸುತ್ತಾ, ತನ್ಮೂಲಕ ಒಂದು ಶಕ್ತಿಯ ಹರಿಯುವಿಕೆಯು ವ್ಯವಸ್ಥೆಯೊಳಗಿನ ಸ್ಪಷ್ಟವಾಗಿ ವಿಶದೀಕರಿಸಲ್ಪಟ್ಟ ಪೋಷಕ ರಚನೆ, ಜೈವಿಕ ವೈವಿಧ್ಯತೆ, ಮತ್ತು ಮೂಲದ್ರವ್ಯದ ಚಕ್ರಗಳಿಗೆ (ಅಂದರೆ: ಜೀವಂತ ಹಾಗೂ ನಿರ್ಜೀವ ಭಾಗಗಳ ನಡುವಿನ ಮೂಲದ್ರವ್ಯಗಳ ವಿನಿಮಯ) ಕಾರಣವಾಗುತ್ತದೋ ಅದು ಒಂದು ಪರಿಸರ ವ್ಯವಸ್ಥೆಯಾಗಿರುತ್ತದೆ."[] ಮಾನವ/ಪ್ರಕೃತಿಯ ಎರಡೆರಡಾಗಿ ಶಾಖೆಯಾಗುತ್ತಾ ಹೋಗುವುದರ ಅನಿರ್ಮಾಣದಲ್ಲಿ ಮತ್ತು ಎಲ್ಲಾ ಜಾತಿಗಳೂ ಪರಿಸರ ವಿಜ್ಞಾನದ ಅನುಸಾರ ಒಂದರೊಂದಿಗೆ ಒಗ್ಗೂಡಿವೆ, ಜೊತೆಗೆ ತಮ್ಮ ಜೈವಿಕ ಸಮುದಾಯದ ಅಜೀವಕ ಘಟಕಗಳೊಂದಿಗೆ ಒಗ್ಗೂಡಿವೆ ಎಂಬ ಆಧಾರವಾಕ್ಯದಲ್ಲಿ ಆಗ ಮಾನವ ಪರಿಸರ ವ್ಯವಸ್ಥೆಯು ನೆಲೆಗೊಳಿಸಲ್ಪಡುತ್ತದೆ.

ವ್ಯುತ್ಪತ್ತಿ

[ಬದಲಾಯಿಸಿ]

ಪರಿಸರವೊಂದರ ಭೌತಿಕ ಮತ್ತು ಜೈವಿಕ ಘಟಕಗಳ ಸಂಯೋಜನೆಯನ್ನು ಅರ್ಥೈಸಲು ಪರಿಸರ ವ್ಯವಸ್ಥೆ ಎಂಬ ಪದವನ್ನು 1930ರಲ್ಲಿ ರಾಯ್‌ ಕ್ಲಾಫಾಮ್‌ ಎಂಬಾತ ರೂಪಿಸಿದ. ಅರ್ಥರ್ ಟಾನ್ಸ್‌ಲೆ ಎಂಬ ಬ್ರಿಟಿಷ್‌ ಪರಿಸರಶಾಸ್ತ್ರಜ್ಞ ನಂತರ ಈ ಪದವನ್ನು ಮತ್ತಷ್ಟು ಪರಿಷ್ಕರಿಸಿ, ಅದನ್ನು ಹೀಗೆ ವಿವರಿಸಿದ: "ಕೇವಲ ಜೀವಿಯ-ಸಂಕೀರ್ಣವನ್ನಷ್ಟೇ ಅಲ್ಲದೇ, ಪರಿಸರ ಎಂದು ನಾವು ಕರೆಯುವ ವ್ಯವಸ್ಥೆಯನ್ನು ರೂಪಿಸುವ ಭೌತಿಕ ಅಂಶಗಳ ಸಮಗ್ರ ಸಂಕೀರ್ಣವನ್ನೂ ಒಳಗೊಂಡಿಉವ ಒಂದು ಸಮಗ್ರ ವ್ಯವಸ್ಥೆ" ಎಂಬುದು ಆತನ ವಿವರಣೆಯಾಗಿತ್ತು.[] ಟಾನ್ಸ್‌ಲೆಯು ಪರಿಸರ ವ್ಯವಸ್ಥೆಗಳನ್ನು ಕೇವಲ ಸ್ವಾಭಾವಿಕ ಘಟಕಗಳಾಗಿ ಪರಿಗಣಿಸದೆ, ಮಾನಸಿಕ ಪ್ರತ್ಯೇಕಿತ ವಸ್ತುಗಳಾಗಿ ಪರಿಗಣಿಸಿದ.[] ಟಾನ್ಸ್‌ಲೆಯು ನಂತರದಲ್ಲಿ[] ಪರಿಸರ ಸಮುದಾಯ ಎಂಬ ಪರವನ್ನು ಬಳಸುವ ಮೂಲಕ ಪರಿಸರ ವ್ಯವಸ್ಥೆಗಳ ಪ್ರಾದೇಶಿಕ ಹರವನ್ನು ವ್ಯಾಖ್ಯಾನಿಸಿದ.

ಪರಿಸರ ವ್ಯವಸ್ಥೆಗಳ ಉದಾಹರಣೆಗಳು

[ಬದಲಾಯಿಸಿ]
ಕ್ಯಾನರಿ ದ್ವೀಪಗಳ ಒಂದು ದ್ವೀಪವಾದ ಗ್ರಾನ್‌ ಕೆನೇರಿಯಾದಲ್ಲಿನ ಒಂದು ಸಿಹಿನೀರು ಪರಿಸರ ವ್ಯವಸ್ಥೆ.

ಬಯೋಮ್‌‌ಗಳು

[ಬದಲಾಯಿಸಿ]
ಸಸ್ಯವರ್ಗದ ಆಧಾರದ ಮೇಲೆ ವರ್ಗೀಕರಿಸಲಾಗಿರುವ ಭೂಮಿಯ ಬಯೋಮ್‌‌ಗಳ ನಕ್ಷೆ.

ಬಯೋಮ್‌‌ಗಳ ಒಂದು ಮೂಲಭೂತ ವರ್ಗೀಕರಣ ಹೀಗಿದೆ:

  1. ಭೂಮಿಯ (ನೆಲದ) ಬಯೋಮ್‌‌ಗಳು
  2. ಸಿಹಿನೀರಿನ ಬಯೋಮ್‌‌ಗಳು
  3. ಸಾಗರದ ಬಯೋಮ್‌‌ಗಳು

ಬಯೋಮ್‌‌‌ಗಳು ಪರಿಸರ ವ್ಯವಸ್ಥೆಗಳ ರೀತಿಯಲ್ಲೇ ಇರುತ್ತವೆ, ಮತ್ತು ಪರಿಸರ ವ್ಯವಸ್ಥೆಗಳು ಎಂದು ಅನೇಕ ಬಾರಿ ಉಲ್ಲೇಖಿಸಲ್ಪಡುವ ಸಸ್ಯಗಳು, ಪ್ರಾಣಿಗಳು, ಮತ್ತು ಮಣ್ಣು ಜೀವಿಗಳ ಸಮುದಾಯಗಳಂಥ, ಪರಿಸರ ವಿಜ್ಞಾನಕ್ಕೆ ಅನುಗುಣವಾದ ರೀತಿಯಲ್ಲಿರುವ ವಾಯುಗುಣದ ಸ್ಥಿತಿಗಳ ವಾಯುಗುಣದ ಅನುಸಾರವಾಗಿ ಮತ್ತು ಭೌಗೋಳಿಕವಾಗಿ ವ್ಯಾಖ್ಯಾನಿಸಲ್ಪಟ್ಟ ಪ್ರದೇಶಗಳಾಗಿ ಬಯೋಮ್‌ಗಳು ವ್ಯಾಖ್ಯಾನಿಸಲ್ಪಟ್ಟಿವೆ. ಸಸ್ಯದ ಸಂರಚನೆಗಳು (ಮರಗಳು, ಪೊದೆಸಸ್ಯಗಳು, ಮತ್ತು ಹುಲ್ಲುಗಳಂಧವು), ಎಲೆಯ ಬಗೆಗಳು (ಅಗಲವಾದ ಎಲೆ ಮತ್ತು ಚೂಪಾದ ಎಲೆಯಂಥದು), ಸಸ್ಯದ ಅಂತರ ಬಿಡುವಿಕೆ (ಅರಣ್ಯ, ಗುಡ್ಡಗಾಡು, ಹುಲ್ಲುಗಾಡು), ಮತ್ತು ಹವಾಮಾನದಂಥ ಅಂಶಗಳ ಆಧಾರದ ಮೇಲೆ ಬಯೋಮ್‌ಗಳನ್ನು ವ್ಯಾಖ್ಯಾನಿಸಲಾಗುತ್ತದೆ.

ಪರಿಸರ ವಲಯಗಳಿಗಿಂತ ಭಿನ್ನವಾಗಿರುವ ಬಯೋಮ್‌‌ಗಳು ತಳಿ ವಿಜ್ಞಾನದ, ಜೀವಿ ವರ್ಗೀಕರಣದ, ಅಥವಾ ಐತಿಹಾಸಿಕ ಹೋಲಿಕೆಗಳಿಂದ ವ್ಯಾಖ್ಯಾನಿಸಲ್ಪಡುವುದಿಲ್ಲ. ಪರಿಸರ ವಿಜ್ಞಾನದ ಪರಂಪರೆ ಮತ್ತು ಸಮಸ್ಥಿತಿಯ ಸಸ್ಯವರ್ಗದ ನಿರ್ದಿಷ್ಟ ಮಾದರಿ ಅಥವಾ ನಮೂನೆಗಳೊಂದಿಗೆ ಬಯೋಮ್‌ಗಳು ಅನೇಕ ವೇಳೆ ಗುರುತಿಸಲ್ಪಡುತ್ತವೆ.

ಪರಿಸರ ವ್ಯವಸ್ಥೆಯ ವಿಷಯಗಳು

[ಬದಲಾಯಿಸಿ]

ವರ್ಗೀಕರಣ

[ಬದಲಾಯಿಸಿ]
ಬೆಲ್ಜಿಯಮ್‌ನಲ್ಲಿರುವ ಬೇಸಿಗೆಯ ಕ್ಷೇತ್ರ (ಹಮೊಯಿಸ್‌).ನೀಲಿ ಬಣ್ಣದ ಹೂವು ಸೆಂಟೌರಿಯಾ ಸಯಾನಸ್‌ ಮತ್ತು ಕೆಂಪು ಬಣ್ಣದ ಹೂವು ಒಂದು ಪಪಾವರ್‌ ರಿಯಾಸ್‌ ಆಗಿದೆ.

ರಾಜಕೀಯದ ದೃಷ್ಟಿಯಿಂದ ಪರಿಸರ ವ್ಯವಸ್ಥೆಗಳು ವಿಶೇಷವಾಗಿ ಪ್ರಾಮುಖ್ಯತೆಯನ್ನು ಪಡೆದಿವೆ. ಏಕೆಂದರೆ, 192 ದೇಶಗಳಿಂದ ಊರ್ಜಿತಗೊಳಿಸಲ್ಪಟ್ಟಿರುವ ಜೈವಿಕ ವೈವಿಧ್ಯತೆಗಳ ಕುರಿತಾದ ಸಮ್ಮೇಳನವು (ಕನ್ವೆನ್ಷನ್‌ ಆನ್‌ ಬಯಲಾಜಿಕಲ್‌ ಡೈವರ್ಸಿಟಿ-CBD), "ಪರಿಸರ ವ್ಯವಸ್ಥೆಗಳು, ಸ್ವಾಭಾವಿಕ ನೆಲೆಗಳು ಅಥವಾ ಆವಾಸಸ್ಥಾನಗಳ ರಕ್ಷಣೆ ಮತ್ತು ಸ್ವಾಭಾವಿಕ ಸನ್ನಿವೇಶಗಳಲ್ಲಿನ[] ಜಾತಿಗಳ ಜೀವಿಸಬಲ್ಲ ಸಂಖ್ಯೆಗಳ ನಿರ್ವಹಣೆಯನ್ನು" ಊರ್ಜಿತಗೊಳಿಸುವ ದೇಶಗಳ ಒಂದು ಬದ್ಧತೆಯನ್ನಾಗಿ ವ್ಯಾಖ್ಯಾನಿಸಿದೆ. ಪರಿಸರ ವ್ಯವಸ್ಥೆಗಳನ್ನು ಪ್ರದೇಶದ ಕಲ್ಪನೆಯಿಂದ ಗುರುತಿಸಲು ಮತ್ತು ಅವುಗಳ ನಡುವೆ ಹೇಗಾದರೂ ಭಿನ್ನಲಕ್ಷಣಗಳನ್ನು ತೋರಿಸಲು ಇದು ರಾಜಕೀಯ ಅನಿವಾರ್ಯತೆಯನ್ನು ಸೃಷ್ಟಿಸಿದೆ. CBDಯು ವ್ಯಾಖ್ಯಾನಿಸಿರುವ ಪ್ರಕಾರ ಒಂದು "ಪರಿಸರ ವ್ಯವಸ್ಥೆ"ಯು, "ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮ-ಜೀವಿ ಸಮುದಾಯಗಳ ಒಂದು ಚಲನಶೀಲ ಸಂಕೀರ್ಣವಾಗಿ ಮತ್ತು ಅವುಗಳ ಜೀವವಿರದ ಪರಿಸರವು ಒಂದು ಕ್ರಿಯಾತ್ಮಕ ಘಟಕವಾಗಿ ಪ್ರಭಾವ ಬೀರುವಂತಿರುವ" ರೀತಿಯಲ್ಲಿ ವ್ಯಾಖ್ಯಾನಿಸಿದೆ.

ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವುದರ ಅಗತ್ಯದೊಂದಿಗೆ, ಅವುಗಳನ್ನು ಪರಿಣಾಮಕಾರಿಯಾಗಿ ವಿವರಿಸುವ ಮತ್ತು ಗುರುತಿಸುವ ರಾಜಕೀಯ ಅಗತ್ಯವೂ ಉದ್ಭವಿಸಿತು. ವ್ರಿಯುಗ್‌ಡೆನ್‌ಹಿಲ್‌ ಮತ್ತು ಇತರರು ವಾದ ಮಂಡಿಸಿರುವ ಪ್ರಕಾರ, ಪರಿಸರ ವ್ಯವಸ್ಥೆಗಳನ್ನು ಕ್ಷೇತ್ರದಲ್ಲಷ್ಟೇ ಅಲ್ಲದೇ ಉಪಗ್ರಹದ ಬಿಂಬಗಳ ಮೇಲೂ ಸುಲಭವಾಗಿ ಗುರುತಿಸಬಹುದಾದ್ದರಿಂದ, ಬಾಹ್ಯ ಲಕ್ಷಣದ-ಪರಿಸರ ವಿಜ್ಞಾನದ ವರ್ಗೀಕರಣ ವ್ಯವಸ್ಥೆಯೊಂದನ್ನು ಬಳಸುವ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಇದನ್ನು ಸಾಧಿಸಬಹುದು. ಅವರು ತಮ್ಮ ವಾದವನ್ನು ಮುಂದುವರಿಸುತ್ತಾ, ಪರಿಸರ ವಿಜ್ಞಾನದ ದತ್ತಾಂಶದೊಂದಿಗೆ (ಎತ್ತರ, ಆರ್ದ್ರತೆ, ಮತ್ತು ಹರಿದುಹೋಗುವಿಕೆಯಂಥವು) ಪೂರಕವಾಗಿರುವ ಸಹವರ್ತಿಯಾಗಿರುವ ಸಸ್ಯವರ್ಗದ ರಚನೆ ಹಾಗೂ ಋತುವಿಗೆ ತಕ್ಕುದಾಗಿರುವಿಕೆಗಳು ಪ್ರತಿಯೊಂದೂ ನಿರ್ಧಾರಕ ಪರಿವರ್ತಕಗಳಾಗಿದ್ದು, ಜಾತಿಗಳ ವಿಶಿಷ್ಟ ಜೋಡಿಗಳನ್ನು ಆಂಶಿಕವಾಗಿ ಪ್ರತ್ಯೇಕಿಸುತ್ತವೆ. ಇದು ಕೇವಲ ಸಸ್ಯ ಜಾತಿಗಳಿಗಷ್ಟೇ ಅಲ್ಲದೇ, ಪ್ರಾಣಿಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾದ ಜಾತಿಗಳಿಗೆ ಸಂಬಂಧಿಸಿದಂತೆಯೂ ಸತ್ಯವಾಗಿದೆ. ಪರಿಸರ ವ್ಯವಸ್ಥೆಯ ಪ್ರತ್ಯೇಕಿಸುವಿಕೆಯ ಮಟ್ಟವು ಬಾಹ್ಯ ಲಕ್ಷಣದ ಪರಿವರ್ತಕಗಳಿಗೆ ಅನುಗುಣವಾಗಿದ್ದು, ಈ ಪರಿವರ್ತಕಗಳನ್ನು ಒಂದು ಬಿಂಬದ ಮೇಲೆ ಮತ್ತು/ಅಥವಾ ಕ್ಷೇತ್ರದಲ್ಲಿ ಗುರುತಿಸಬಹುದಾಗಿದೆ. ಎಲ್ಲಿ ಅಗತ್ಯ ಕಂಡುಬರುತ್ತದೋ ಅಲ್ಲಿ ನಿರ್ದಿಷ್ಟ ಪ್ರಾಣಿಕೋಟಿಯ ಅಂಶಗಳನ್ನು, ಅಂದರೆ, ಋತುವಿಗನುಸಾರವಾದ ಪ್ರಾಣಿಗಳ ದಟ್ಟಣೆ ಮತ್ತು ಹವಳದ ದಿಬ್ಬಗಳ ಹರಡುವಿಕೆಯಂಥವುಗಳನ್ನು ಸೇರಿಸಬಹುದಾಗಿದೆ.

ಮಳೆಕಾಡುಗಳು ಈ ಭೂಮಿಯ ಮೇಲಿನ ಜೀವವೈವಿಧ್ಯತೆಗೆ ಒಂದು ಉದಾಹರಣೆಯಾಗಿದ್ದು, ಸಸ್ಯ ಮತ್ತು ಪ್ರಾಣಿ ಜಾತಿಗಳ ವೈವಿಧ್ಯತೆಯ ಒಂದು ಭಾರೀ ಮೊತ್ತವನ್ನು ವಿಶಿಷ್ಟವಾಗಿ ಪ್ರತಿನಿಧಿಸುತ್ತವೆ ಮತ್ತು ಪರಿಸರ ವ್ಯವಸ್ಥೆ ವರ್ಗೀಕರಣವೊಂದಕ್ಕೆ ಉದಾಹರಣೆಗಳಾಗಿ ನಿಲ್ಲುತ್ತವೆ.ಇದು ಸೆನೆಗಲ್‌ನ ನಿಯೊಕೋಲಾ-ಕೋಬಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ಗ್ಯಾಂಬಿಯಾ ನದಿಯಾಗಿದೆ.

ಹಲವಾರು ಬಾಹ್ಯ ಲಕ್ಷಣದ-ಪರಿಸರ ವಿಜ್ಞಾನದ ವರ್ಗೀಕರಣ ವ್ಯವಸ್ಥೆಗಳು ಲಭ್ಯವಿವೆ:

  • ಭೂಮಿಯ ಸಸ್ಯ ರೂಪುಗೊಳ್ಳುವಿಕೆಗಳ ಬಾಹ್ಯ ಲಕ್ಷಣದ-ಪರಿಸರ ವಿಜ್ಞಾನದ ವರ್ಗೀಕರಣ: ಮುಲ್ಲರ್‌-ಡೊಂಬಾಯ್ಸ್‌ ಮತ್ತು ಹೇನ್ಜ್‌ ಎಲೆನ್‌ಬರ್ಗ್‌[] ಎಂಬಿಬ್ಬರು 1974ರಲ್ಲಿ ಕೈಗೊಂಡ ಮತ್ತು UNESCOದಿಂದ ಅಭಿವೃದ್ಧಿಪಡಿಸಲ್ಪಟ್ಟ ಕೆಲಸವನ್ನು ಈ ವ್ಯವಸ್ಥೆಯು ಆಧರಿಸಿದೆ. ಈ ವರ್ಗೀಕರಣವು "ಸಸ್ಯ ಜೀವದ ಸ್ವರೂಪಗಳು ಎಂದು ವಿವರಿಸಲ್ಪಟ್ಟಿರುವ, ನೆಲದ-ಮೇಲಿನ ಅಥವಾ ನೀರಿನ ಕೆಳಗಿನ ಸಸ್ಯವರ್ಗದ ರಚನೆಗಳು ಹಾಗೂ ಹೊದಿಕೆಯನ್ನು ಕ್ಷೇತ್ರದಲ್ಲಿ ವೀಕ್ಷಿಸಲಾದಂತೆ ವಿವರಿಸುತ್ತದೆ. ಈ ವರ್ಗೀಕರಣವು ಮೂಲಭೂತವಾಗಿ ಒಂದು ಜಾತಿ-ಅಧೀನವಲ್ಲದ ಬಾಹ್ಯ ಲಕ್ಷಣದ, ಶ್ರೇಣಿ ವ್ಯವಸ್ಥೆಯ ಸಸ್ಯವರ್ಗ ವರ್ಗೀಕರಣ ವ್ಯವಸ್ಥೆಯಾಗಿದ್ದು, ಹವಾಮಾನ, ಎತ್ತರದಂಥ ಪರಿಸರ ವಿಜ್ಞಾನದ ಅಂಶಗಳು, ಮೇಯಿಸುವಿಕೆ, ಜಲಜನಕ ಸಂಬಂಧಿ ಪರಿಸ್ಥಿತಿಗಳಂಥ ಮಾನವ ಪ್ರಭಾವಗಳು, ಮತ್ತು ಋತುವಿಕೆ ತಕ್ಕುದಾಗಿರುವಿಕೆಯಂಥ ಉಳಿಯುವಿಕೆಯ ತಂತ್ರಗಳನ್ನೂ ಈ ವ್ಯವಸ್ಥೆಯು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಮುಕ್ತ ನೀರಿನ ರೂಪುಗೊಳ್ಳುವಿಕೆಗಳಿಗಾಗಿರುವ ಒಂದು ಮೂಲಭೂತ ವರ್ಗೀಕರಣದೊಂದಿಗೆ ಈ ವ್ಯವಸ್ಥೆಯು ವಿಸ್ತರಿಸಲ್ಪಟ್ಟಿತು".[]
  • ಭೂಹೊದಿಕೆಯ ವರ್ಗೀಕರಣ ವ್ಯವಸ್ಥೆಯನ್ನು (LCCS), ಆಹಾರ ಮತ್ತು ಕೃಷಿ ಸಂಘಟನೆಯು (FAO) ಅಭಿವೃದ್ಧಿಪಡಿಸಿದೆ.[]
  • ಅರಣ್ಯ-ವಲಯದ ಪರಿಸರೀಯ ಅಧ್ಯಯನ ಪರಿಸರ ವ್ಯವಸ್ಥೆಗಳನ್ನು (FRES) ಅಮೆರಿಕ ಸಂಯುಕ್ತ ಸಂಸ್ಥಾನಗಳ ಅರಣ್ಯ ಸೇವೆಯು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿನ ಬಳಕೆಗಾಗಿ ಅಭಿವೃದ್ಧಿಪಡಿಸಿದೆ.[]

ಹಲವಾರು ಜಲಜೀವಿ ವರ್ಗೀಕರಣ ವ್ಯವಸ್ಥೆಗಳು ಲಭ್ಯವಿವೆ, ಮತ್ತು ಭೂಮಿಯ ಹಾಗೂ ಜಲಜೀವಿ ಪರಿಸರ ವ್ಯವಸ್ಥೆಗಳೆರಡನ್ನೂ ಒಳಗೊಳ್ಳುವ ಒಂದು ಸಂಪೂರ್ಣ ಪರಿಸರ ವ್ಯವಸ್ಥೆ ವರ್ಗೀಕರಣ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲು ಯುನೈಟೆಡ್‌ ಸ್ಟೇಟ್ಸ್‌ ಜಿಯಾಲಜಿಕಲ್‌ ಸರ್ವೆ (USGS) ಮತ್ತು ಇಂಟರ್-ಅಮೆರಿಕನ್‌ ಬಯೋಡೈವರ್ಸಿಟಿ ಇನ್ಫರ್ಮೇಷನ್‌ ನೆಟ್‌ವರ್ಕ್‌ (IABIN) ಸಂಸ್ಥೆಗಳಿಂದ ಒಂದು ಪ್ರಯತ್ನವು ನಡೆಯುತ್ತಿದೆ.

ವಿಜ್ಞಾನದ ತತ್ತ್ವಜಿಜ್ಞಾಸೆಯ ದೃಷ್ಟಿಕೋನವೊಂದರಿಂದ ಹೇಳುವುದಾದರೆ, ಪರಿಸರ ವ್ಯವಸ್ಥೆಗಳು ಪ್ರಕೃತಿಯ ಪ್ರತ್ಯೇಕ ಘಟಕಗಳಲ್ಲ. ಒಂದು "ಸೂಕ್ತವಾದ" ವರ್ಗೀಕರಣ ವಿಧಾನದಿಂದ ಅವುಗಳನ್ನು ಗುರುತಿಸಬಹುದು. ಟಾನ್ಸ್‌ಲೆಯು ನೀಡಿರುವ ವ್ಯಾಖ್ಯಾನದ ಅನುಸಾರ ("ಮಾನಸಿಕ ಪ್ರತ್ಯೇಕಿತ ವಸ್ತುಗಳು"), ಪರಿಸರ ವ್ಯವಸ್ಥೆಗಳನ್ನು ನಿರೂಪಿಸುವ ಅಥವಾ ವರ್ಗೀಕರಿಸುವ ಯಾವುದೇ ಪ್ರಯತ್ನವು ವರ್ಗೀಕರಣದ ಪ್ರಮಾಣಕ ತಾರ್ಕಿಕ ವಿವರಣೆಯನ್ನೊಳಗೊಂಡಂತೆ ವರ್ಗೀಕರಣದಲ್ಲಿನ ವೀಕ್ಷಕ/ವಿಮರ್ಶಕ ಮಾಹಿತಿ ಒದಗಿಸುವಿಕೆಯ ಕುರಿತಾದ ಕೊನೆಯ ಮಾತುಗಳಾಗಿರಬೇಕು.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿನ ಡೈನ್‌ಮರದ ಮಳೆಕಾಡು.

ಪರಿಸರ ವ್ಯವಸ್ಥೆಯ ಸೇವೆಗಳು

[ಬದಲಾಯಿಸಿ]

ಪರಿಸರ ವ್ಯವಸ್ಥೆಯ ಸೇವೆಗಳು “ಮೂಲಭೂತವಾದ ಜೀವಾಧಾರಕ ಸೇವೆಗಳಾಗಿದ್ದು ಅವುಗಳ ಮೇಲೆ ಮಾನವ ನಾಗರಿಕತೆಯು ಅವಲಂಬಿತವಾಗಿದೆ,”i ಮತ್ತು ಈ ಸೇವೆಗಳು ಪ್ರತ್ಯಕ್ಷ ಅಥವಾ ಪರೋಕ್ಷ ಸ್ವರೂಪದಲ್ಲಿರಬಹುದಾಗಿದೆ. ಪ್ರತ್ಯಕ್ಷ ಪರಿಸರ ವ್ಯವಸ್ಥೆ ಸೇವೆಗಳ ಉದಾಹರಣೆಗಳೆಂದರೆ: ಪರಾಗಸ್ಪರ್ಶ, ಮರ, ಮತ್ತು ಸವಕಳಿ ತಡೆಗಟ್ಟುವಿಕೆ. ಹವಾಮಾನದ ತಗ್ಗಿಸುವಿಕೆ, ಪೌಷ್ಟಿಕ ದ್ರವ್ಯ ಚಕ್ರಗಳು, ಮತ್ತು ಸ್ವಾಭಾವಿಕ ವಸ್ತುಗಳ ನಿರ್ವಿಷಗೊಳಿಸುವಿಕೆಗಳನ್ನು ಪರೋಕ್ಷ ಸೇವೆಗಳೆಂದು ಪರಿಗಣಿಸಬಹುದು.

ಪರಿಸರ ವ್ಯವಸ್ಥೆಯೊಂದು ಒದಗಿಸುವ ಸೇವೆಗಳು ಹಾಗೂ ಸರಕುಗಳ ಪೈಕಿ ಹಲವು ಮಾರುಕಟ್ಟೆ ಮೌಲ್ಯವನ್ನು ಹೊಂದಿಲ್ಲವಾದ್ದರಿಂದ ಅವು ಅನೇಕವೇಳೆ ಕಡೆಗಣಿಸಲ್ಪಡುತ್ತವೆ[೧೦]. ವ್ಯಾಪಕ ಉದಾಹರಣೆಗಳಲ್ಲಿ ಇವು ಸೇರಿವೆ:

  • ನಿಯಂತ್ರಿಸುವಿಕೆ (ಹವಾಮಾನ, ಪ್ರವಾಹಗಳು, ಪೋಷಕಾಂಶ ಸಮತೋಲನ, ನೀರಿನ ಸೋಸುವಿಕೆ)
  • ಒದಗಿಸುವಿಕೆ (ಆಹಾರ, ಔಷಧಿ, ತುಪ್ಪುಳು ಉಡುಪು)
  • ಸಾಂಸ್ಕೃತಿಕ (ವಿಜ್ಞಾನ, ಆಧ್ಯಾತ್ಮಿಕ, ವಿಧ್ಯುಕ್ತ, ವಿನೋದ, ಸೌಂದರ್ಯ ಪ್ರಜ್ಞೆ)
  • ಆಧಾರವಾಗಿರುವಿಕೆ (ಪೋಷಕಾಂಶದ ಆವರ್ತನ, ದ್ಯುತಿಸಂಶ್ಲೇಷಣೆ, ಮಣ್ಣು ರೂಪುಗೊಳ್ಳುವಿಕೆ).[೧೧]

ಪರಿಸರ ವ್ಯವಸ್ಥೆಯ ಕಾನೂನುಬದ್ಧ ಹಕ್ಕುಗಳು

[ಬದಲಾಯಿಸಿ]

ಶಾಸನಬದ್ಧವಾಗಿ ಜಾರಿಗೆ ತರಬಹುದಾದ ಪ್ರಕೃತಿಯ ಹಕ್ಕುಗಳು, ಪರಿಸರ ವ್ಯವಸ್ಥೆಯ ಹಕ್ಕುಗಳನ್ನು ಗುರುತಿಸುವಲ್ಲಿ ಈಕ್ವೆಡಾರ್‌ನ 2008ರ ಹೊಸ ಸಂವಿಧಾನವು ಮೊದಲನೆಯದೆನಿಸಿದೆ.[೧೨]

ಪೆನ್ಸಿಲ್ವೇನಿಯಾದಲ್ಲಿನ ತಮಾಕುವಾದ ಪ್ರಾಂತ್ಯವು ಪರಿಸರ ವ್ಯವಸ್ಥೆಗಳಿಗೆ ಶಾಸನಬದ್ಧ ಹಕ್ಕುಗಳನ್ನು ನೀಡುವ ಕಾನೂನೊಂದನ್ನು ಅನುಮೋದಿಸಿದೆ. ಪುರಸಭಾ ಸರ್ಕಾರ ಅಥವಾ ತಮಾಕುವಾದ ಯಾವುದೇ ನಿವಾಸಿಯು ಸ್ಥಳೀಯ ಪರಿಸರ ವ್ಯವಸ್ಥೆಯ ಪರವಾಗಿ ಕಾನೂನು ದಾವೆಯೊಂದನ್ನು ಹೂಡಬಹುದು ಎಂದು ಈ ಅಧಿಶಾಸನವು ದೃಢಪಡಿಸಿದೆ.[೧೩] ರಷ್‌ನಂಥ ಇದರ ಪಟ್ಟಣಗಳು ಈ ಅರಿಕೆಯನ್ನು ಅನುಸರಿಸಿ ತಮ್ಮದೇ ಆದ ಕಾನೂನುಗಳನ್ನು ಅನುಮೋದಿಸಿವೆ.[೧೪]

ಇದು 'ಉಗ್ರವಾದ ಕಾನೂನನ್ನು' ಪ್ರಸ್ತಾಪಿಸುತ್ತಿರುವ ಒಂದು ಬೆಳೆಯುತ್ತಿರುವ ಕಾನೂನು ಸಂಬಂಧಿ ಅಭಿಪ್ರಾಯದ ಅಂಗದ ಭಾಗವಾಗಿದೆ. ಕೋರ್ಮ್ಯಾಕ್‌ ಕಲಿನನ್‌ (ದಕ್ಷಿಣ ಆಫ್ರಿಕಾ ಮೂಲದ ಓರ್ವ ವಕೀಲ) ಎಂಬಾತನಿಂದ ರೂಪಿಸಲ್ಪಟ್ಟ ಉಗ್ರವಾದ ಕಾನೂನು ಎಂಬ ಪದವು, ಹಕ್ಕಿಗಳು ಮತ್ತು ಪ್ರಾಣಿಗಳು, ನದಿಗಳು ಮತ್ತು ಮರುಭೂಮಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ.[೧೫][೧೬]

ಕಾರ್ಯವಿಧಾನ ಮತ್ತು ಜೀವ ವೈವಿಧ್ಯತೆ

[ಬದಲಾಯಿಸಿ]
ಹವಳ ದಿಬ್ಬವೊಂದರ ಒಂದಷ್ಟು ಜೀವವೈವಿಧ್ಯತೆ.

ಮಾನವಶಾಸ್ತ್ರದ ಒಂದು ದೃಷ್ಟಿಕೋನದಿಂದ ಹೇಳುವುದಾದರೆ ಕೆಲವೊಂದು ಜನರು, ಪರಿಸರ ವ್ಯವಸ್ಥೆಗಳನ್ನು ಅರಣ್ಯ ಪರಿಸರ ವ್ಯವಸ್ಥೆಗಳಿಂದ ಬರುವ ಮರ ಮತ್ತು ಸ್ವಾಭಾವಿಕ ಹುಲ್ಲುಭೂಮಿಗಳಿಂದ ಪಶುಗಳಿಗಾಗಿ ಬರುವ ಹುಲ್ಲಿನಂಥ ಸರಕುಗಳು ಮತ್ತು ಸೇವೆಗಳನ್ನು ಉತ್ಪಾದಿಸುವ ಉತ್ಪಾದನಾ ಘಟಕಗಳಾಗಿ ಗ್ರಹಿಸುತ್ತಾರೆ. ಪೊದೆಗಾಡಿನ ಮಾಂಸ ಎಂದು ಆಫ್ರಿಕಾದಲ್ಲಿ ನೇಕ ಬಾರಿ ಕರೆಯಲ್ಪಡುವ ಕಾಡುಪ್ರಾಣಿಗಳ ಮಾಂಸವು, ದಕ್ಷಿಣ ಆಫ್ರಿಕಾ ಮತ್ತು ಕೀನ್ಯಾದಲ್ಲಿನ ಸುನಿಯಂತ್ರಿತ ನಿರ್ವಹಣಾ ವ್ಯವಸ್ಥೆಗಳ ಅಡಿಯಲ್ಲಿ ಅತ್ಯಂತ ಯಶಸ್ವಿಯಾಗಿದೆ ಎಂದು ಸಾಬೀತುಗೊಳಿಸಲ್ಪಟ್ಟಿದೆ. ಔಷಧೀಯ ಉದ್ದೇಶಗಳಿಗಾಗಿರುವ ವನ್ಯಜೀವಿಯ ವಸ್ತುಗಳ ಆವಿಷ್ಕಾರ ಮತ್ತು ವಾಣಿಜ್ಯೀಕರಣವು ಅಷ್ಟೊಂದು ಯಶಸ್ಸನ್ನು ತಂದುಕೊಟ್ಟಿಲ್ಲ. ಪರಿಸರ ವ್ಯವಸ್ಥೆಗಳಿಂದ ಜನ್ಯವಾಗಿರುವ ಸೇವೆಗಳನ್ನು ಪರಿಸರ ವ್ಯವಸ್ಥೆ ಸೇವೆಗಳೆಂದು ಕರೆಯಲಾಗುತ್ತದೆ. ಅವು ಈ ಅಂಶಗಳನ್ನು ಒಳಗೊಂಡಿರಬಹುದು: (1) ಪರಿಸರ-ಪ್ರವಾಸೋದ್ಯಮ ಎಂದು ಅನೇಕ ಬಾರಿ ಉಲ್ಲೇಖಿಸಲ್ಪಡುವ ಪ್ರವಾಸೋದ್ಯಮ ವಲಯದಲ್ಲಿನ ಆದಾಯ ಹಾಗೂ ಉದ್ಯೋಗದ ಅನೇಕ ಸ್ವರೂಪಗಳ ಹುಟ್ಟಿಗೆ ಕಾರಣವಾಗಬಹುದಾದ ಪ್ರಕೃತಿಯ ಅನುಭವಿಸುವಿಕೆಯನ್ನು ಇದು ಸುಗಮಗೊಳಿಸಬಹುದು, (2) ನೀರಿನ ಹಿಡಿದಿಡುವಿಕೆಯನ್ನು ಹೊಂದಿರುವುದರ ಮೂಲಕ ಅತ್ಯಂತ ಸಮಾನವಾದ ನೀರಿನ ಬಿಡುಗಡೆಯನ್ನು ಸರಾಗಗೊಳಿಸಬಹುದು, (3) ವೈಜ್ಞಾನಿಕ ಸಂಶೋಧನೆಗಾಗಿರುವ ತೆರೆದ-ವಾತಾವರಣದ ಪ್ರಯೋಗಾಲಯ, ಮಣ್ಣಿನ ಸಂರಕ್ಷಣೆ ಇತ್ಯಾದಿಗಳನ್ನು ಒಳಗೊಳ್ಳಬಹುದು.

ಜೀವ ವೈವಿಧ್ಯತೆ ಎಂದು ಜನಪ್ರಿಯ ರೀತಿಯಲ್ಲಿ ಉಲ್ಲೇಖಿಸಲ್ಪಡುವ ಪರಿಸರ ವ್ಯವಸ್ಥೆಯೊಂದರ ಜೀವಜಾತಿಗಳ ಒಂದು ಉನ್ನತ ಮಟ್ಟ ಅಥವಾ ಜೈವಿಕ ವೈವಿಧ್ಯತೆಯು, ಪರಿಸರ ವ್ಯವಸ್ಥೆಯೊಂದರ ಮಹಾನ್‌ ಚೇತರಿಕೆಗೆ ಅಥವಾ ಸ್ಥಿತಿಸ್ಥಾಪಕತ್ವಕ್ಕೆ ಕೊಡುಗೆಯನ್ನು ನೀಡಬಹುದು. ಏಕೆಂದರೆ ಬದಲಾವಣೆಗೆ ಪ್ರತಿಕ್ರಿಯಿಸಲು ತಾಣವೊಂದರಲ್ಲಿ ಹೆಚ್ಚು ಜೀವಜಾತಿಗಳು ಇರುತ್ತವೆ ಮತ್ತು ಹೀಗಾಗಿ ಅದರ ಪ್ರಭಾವಗಳನ್ನು "ಮೈಗೂಡಿಸಿಕೊಳ್ಳುತ್ತವೆ" ಅಥವಾ ತಗ್ಗಿಸುತ್ತವೆ. ಪರಿಸರ ವ್ಯವಸ್ಥೆಯ ರಚನೆಯು ಮೂಲಭೂತವಾಗಿ ಒಂದು ವಿಭಿನ್ನ ಸ್ಥಿತಿಗೆ ಬದಲಾಗುವುದಕ್ಕೆ ಮುಂಚೆಯೇ ಇದು ಪ್ರಭಾವವನ್ನು ತಗ್ಗಿಸುತ್ತದೆ. ಇದೊಂದು ಸಾರ್ವತ್ರಿಕ ನಿದರ್ಶನವಲ್ಲ ಮತ್ತು ಪರಿಸರ ವ್ಯವಸ್ಥೆಯೊಂದರ ಜೀವಿಗಳ ವೈವಿಧ್ಯತೆ ಮತ್ತು ಒಂದು ಊರ್ಜಿತವಾಗಬಹುದಾದ ಮಟ್ಟದಲ್ಲಿ ಸರಕುಗಳು ಹಾಗೂ ಸೇವೆಗಳನ್ನು ಒದಗಿಸುವ ಇದರ ಸಾಮರ್ಥ್ಯದ ನಡುವೆ ಯಾವುದೇ ಸಾಧಿತ ಸಂಬಂಧವಿಲ್ಲ: ತೇವವಾದ ಉಷ್ಣವಲಯದ ಕಾಡುಗಳು ಕೆಲವೇ ಕೆಲವು ಸರಕುಗಳನ್ನು ಮತ್ತು ಪ್ರತ್ಯಕ್ಷ ಸೇವೆಗಳನ್ನು ಉತ್ಪಾದಿಸುತ್ತವೆ ಮತ್ತು ಬದಲಾವಣೆಗೆ ಅತೀವವಾಗಿ ಈಡಾಗುತ್ತವೆ. ಬಿದ್ದ ನಂತರ ಅಥವಾ ಒಂದು ಕಾಡಿನ ಬೆಂಕಿಯು ಸಂಭವಿಸಿದ ನಂತರ ಸಮಶೀತೋಷ್ಣ ವಲಯದ ಅನೇಕ ಕಾಡುಗಳು ಒಂದು ಜೀವಿತಾವಧಿಯೊಳಗೆ ತಮ್ಮ ಹಿಂದಿನ ಬೆಳವಣಿಗೆಯ ಸ್ಥಿತಿಗೆ ಅನಾಯಾಸವಾಗಿ ಬೆಳೆಯುತ್ತವೆ. ಕೆಲವೊಂದು ಹುಲ್ಲುಭೂಮಿಗಳು ಸಾವಿರಾರು ವರ್ಷಗಳಿಂದ ಸಮರ್ಥನೀಯವಾಗಿ ಉಪಯೋಗಿಸಲ್ಪಟ್ಟಿವೆ (ಮಂಗೋಲಿಯಾ, ಆಫ್ರಿಕಾ, ಯುರೋಪ್‌ನ ಸಸ್ಯದಿದ್ದಿಲು ಮತ್ತು ಮೂರ್‌ಲೆಂಡ್‌ ಸಮುದಾಯಗಳು).

ಪರಿಸರ ವ್ಯವಸ್ಥೆಗಳ ಅಧ್ಯಯನ

[ಬದಲಾಯಿಸಿ]
ಅಪೊಲೊ 17ರ ಸಿಬ್ಬಂದಿಯಿಂದ 1972ರಲ್ಲಿ ಚಿತ್ರಿಸಲ್ಪಟ್ಟ ದಿ ಬ್ಲ್ಯೂ ಮಾರ್ಬಲ್‌. ಈ ಬಿಂಬವು ಇದುವರೆಗಿನ ಈ ಸ್ವರೂಪದ ಏಕೈಕ ಛಾಯಾಚಿತ್ರವಾಗಿದ್ದು, ಸಂಪೂರ್ಣ ಬಿಸಿಲುಬಿದ್ದಿರುವ ಭೂಮಿಯ ಒಂದು ಗೋಳಾರ್ಧವನ್ನು ತೋರಿಸುತ್ತಿದೆ.ಭೂಮಿಯ ಮೇಲ್ಮೈನ ಸುಮಾರು 72%ನಷ್ಟು ಭಾಗವು (ಸುಮಾರು 361 ದಶಲಕ್ಷ ಚದರ ಕಿಲೋಮೀಟರುಗಳಷ್ಟಿರುವ ಒಂದು ಪ್ರದೇಶ) ಸಾಗರವನ್ನು ಒಳಗೊಂಡಿದೆ.

ಪರಿಸರ ವ್ಯವಸ್ಥೆಯ ಪ್ರೇರಕಶಕ್ತಿಗಳು

[ಬದಲಾಯಿಸಿ]
ಮಡಗಾಸ್ಕರ್‌ನ ಇಫ್ಯಾಟಿಯಲ್ಲಿನ ಮುಳ್ಳುತುಂಬಿದ ಕಾಡು. ಅಡನ್ಸೋನಿಯಾ (ಬಾವೋಬಾಬ್‌) ಜಾತಿಗಳು, ಅಲ್ಯುವಾಡಿಯಾ ಪ್ರೊಸೆರಾ (ಮಡಗಾಸ್ಕರ‍್ ಒಕೊಟಿಲ್ಲೊ) ಮತ್ತು ಇತರ ಸಸ್ಯವರ್ಗವನ್ನು ಇದು ಒಳಗೊಂಡಿದೆ.

ಪರಿಸರ ವ್ಯವಸ್ಥೆಯೊಂದಕ್ಕೆ ಜೈವಿಕ ಅಥವಾ ಅಜೀವಕವಾದ ಹೊಸ ಅಂಶಗಳ ಪರಿಚಯಿಸುವಿಕೆಯು ಒಂದು ವಿಚ್ಛಿದ್ರಕಾರಕ ಪ್ರಭಾವವನ್ನು ಹೊಂದುವ ಪ್ರವೃತ್ತಿಯದಾಗಿರುತ್ತದೆ. ಕೆಲವೊಂದು ನಿದರ್ಶನಗಳಲ್ಲಿ, ಇದು ಪರಿಸರ ವಿಜ್ಞಾನದ ಕುಸಿಯುವಿಕೆಗೆ ಅಥವಾ "ಪೋಷಕ ಧಾರೆಯಾಗಿ ಸುರಿಯುವಿಕೆಗೆ" ಮತ್ತು ಪರಿಸರ ವ್ಯವಸ್ಥೆಯೊಳಗಿನ ಅನೇಕ ಜೀವಜಾತಿಗಳ ಸಾವಿಗೆ ಕಾರಣವಾಗಬಹುದು. ಈ ನಿಯಂತ್ರಣವಾದದ ದೃಷ್ಟಿಕೋನದ ಅಡಿಯಲ್ಲಿ, ಪರಿಸರ ವಿಜ್ಞಾನ ಆರೋಗ್ಯದ ಅಮೂರ್ತ ಎಣಿಕೆಯು ಪರಿಸರ ವ್ಯವಸ್ಥೆಯೊಂದಕ್ಕಾಗಿರುವ ಶಕ್ತಿಯುಕ್ತತೆ ಮತ್ತು ಪುನರ್ಲಾಭದ ಸಾಮರ್ಥ್ಯವನ್ನು ಅಳೆಯುವ ಪ್ರಯತ್ನ ಮಾಡುತ್ತದೆ; ಆಂದರೆ, ಪರಿಸರ ವ್ಯವಸ್ಥೆಯು ತನ್ನ ಸ್ಥಿರಸ್ಥಿತಿಯಿಂದ ಎಷ್ಟುದೂರವಿದೆ ಎಂಬುದನ್ನು ಅಳೆಯುವ ಪ್ರಯತ್ನ ಇದಾಗಿರುತ್ತದೆ.

ಆದಾಗ್ಯೂ, ಹಲವು ಬಾರಿ ಪರಿಸರ ವ್ಯವಸ್ಥೆಗಳು ಒಂದು ವಿಚ್ಛಿದ್ರಕಾರಕ ಮಧ್ಯವರ್ತಿಯಿಂದ ಹಿಂಪುಟಿಯುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಹಿಂಪುಟಿತ ಅಥವಾ ಒಂದು ಲಘುವಾದ ಹಿಂಪುಟಿತದ ನಡುವಿನ ವ್ಯತ್ಯಾಸವು ಎರಡು ಅಂಶಗಳಿಂದ ನಿರ್ಧರಿಸಲ್ಪಡುತ್ತವೆ. ಅವೆಂದರೆ, ಪರಿಚಯಿಸಲಾದ ಅಂಶದ ವಿಷತ್ವ ಮತ್ತು ಮೂಲ ಪರಿಸರ ವ್ಯವಸ್ಥೆಯ ಚೇತರಿಸಿಕೊಳ್ಳುವಿಕೆ.

ಪರಿಸರ ವ್ಯವಸ್ಥೆಗಳು ಮುಖ್ಯವಾಗಿ ಸಂಭವನೀಯ (ಅವಕಾಶ) ಘಟನೆಗಳಿಂದ, ಜೀವವಿರದ ಸಾಮಗ್ರಿಗಳ ಮೇಲೆ ಈ ಅಂಶಗಳು ಉಂಟುಮಾಡುವ ಪ್ರತಿಕ್ರಿಯೆಗಳು, ಮತ್ತು ಅವುಗಳನ್ನು ಸುತ್ತುವರೆದಿರುವ ಪರಿಸ್ಥಿತಿಗಳಿಗೆ ಜೀವಿಗಳಿಂದ ಉಂಟಾಗುವ ಪ್ರತಿಕ್ರಿಯೆಗಳಿಂದ ನಿಯಂತ್ರಿಸಲ್ಪಡುತ್ತವೆ. ಹೀಗಾಗಿ, ಜೀವಿಗಳ ಪ್ರತ್ಯೇಕ ಪ್ರತಿಕ್ರಿಯೆಗಳಿಂದ ಪರಿಸರದಲ್ಲಿನ ಅಂಶಗಳಿಂದ ಬಂದ ಪ್ರಚೋದನೆಗಳವರೆಗಿನ ಒಂದು ಮೊತ್ತದಿಂದ ಪರಿಸರ ವ್ಯವಸ್ಥೆಯೊಂದು ಉಂಟಾಗುತ್ತದೆ. ಸಂತಾನೋತ್ಪತ್ತಿಯ ಮತ್ತು ಹರಡುವಿಕೆಯ ಯಶಸ್ಸು ಜೀವಜಾತಿಗಳ ಸಂಖ್ಯೆಗಳ ಹಾಜರಾತಿ ಅಥವಾ ಗೈರುಹಾಜರಾತಿಯು ಅವಲಂಬಿತವಾಗಿರುತ್ತದೆ, ಮತ್ತು ಸಂಭವನೀಯ ಘಟನೆಗಳಿಗೆ ಪ್ರತಿಸ್ಪಂದನೆಯಾಗಿ ಜೀವಜಾತಿಯ ಸಂಖ್ಯೆಯ ಮಟ್ಟಗಳು ಏರಿಳಿವಾಗುತ್ತವೆ. ಪರಿಸರ ವ್ಯವಸ್ಥೆಯೊಂದರಲ್ಲಿನ ಜೀವಜಾತಿಗಳ ಸಂಖ್ಯೆಯು ಹೆಚ್ಚಿನದಾಗಿರುವುದರಿಂದ ಪ್ರಚೋದನೆಗಳ ಸಂಖ್ಯೆಯೂ ಹೆಚ್ಚಿನ ಮಟ್ಟದ್ದಾಗಿರುತ್ತದೆ. ಜೀವದ ಉಗಮವಾದಂದಿನಿಂದ ಜೀವಿಗಳು ಯಶಸ್ವೀ ಪೋಷಣೆ, ಪುನರುತ್ಪಾದಕ ಮತ್ತು ಹರಡುವಿಕೆಯ ನಡವಳಿಕೆಯ ಸ್ವಾಭಾವಿಕ ಆಯ್ಕೆಯ ಮೂಲಕದ ನಿರಂತರ ಬದಲಾವಣೆಯನ್ನು ಕಾಣುತ್ತಾ ಬಂದಿವೆ. ಸ್ವಾಭಾವಿಕ ಆಯ್ಕೆಯ ಮೂಲಕ ಈ ಭೂಮಿಯ ಜೀವಿಗಳು ತಮ್ಮ ಜೈವಿಕ ಸಂಯೋಜನೆ ಮತ್ತು ವಿತರಣೆಯಲ್ಲಿನ ಬದಲಾವಣೆಯ ಮೂಲಕ ಬದಲಾವಣೆಗೆ ನಿರಂತರವಾಗಿ ಮಾರ್ಪಾಡಾಗಿರುತ್ತವೆ. ಪರಸ್ಪರ ಪ್ರಭಾವ ಬೀರುವ ಹೆಚ್ಚಿನ ಸಂಖ್ಯೆಯಲ್ಲಿನ ಭಿನ್ನವಾದ ಅಂಶಗಳು ಪ್ರತ್ಯೇಕವಾದ ಅಂಶಗಳ ಪ್ರತಿಯೊಂದರಲ್ಲಿನ ಏರಿಳಿತಗಳನ್ನು ಮಂದಗೊಳಿಸುವ ಪ್ರವೃತ್ತಿಯನ್ನು ಹೊಂದಿರುತ್ತವೆ ಎಂಬುದನ್ನು ಕರಾರುವಾಕ್ಕಾಗಿ ಪ್ರಮಾಣೀಕರಿಸಬಹುದಾಗಿದೆ.

ಸ್ಯಾನ್‌ ಜುವಾನ್‌ ದ್ವೀಪದಲ್ಲಿನ ಕಾಡು

ಭೂಮಿಯ ಮೇಲಿನ ಜೀವಿಗಳ ಪೈಕಿ ಮಹಾನ್‌ ವೈವಿಧ್ಯತೆಯ ತಿಳಿದಿರುವ ಪರಿಸ್ಥಿತಿಯಲ್ಲಿ, ಕೆಲವೊಂದು ಜೀವಿಗಳು ಕಣ್ಮರೆಯಾಗಿ ಮತ್ತೆ ಕೆಲವು ಒಳಗೆ ಬರುವುದರಿಂದ ಬಹುತೇಕ ಪರಿಸರ ವ್ಯವಸ್ಥೆಗಳು ಕೇವಲ ಕ್ರಮೇಣವಾಗಿ ಬದಲಾಗಿವೆ. ಸ್ಥಳೀಯವಾಗಿ, ಉಪ-ಜೀವಿಸಂಖ್ಯೆಗಳು ನಿರಂತರವಾಗಿ ಅಳಿಸಿಹೋಗಿದ್ದು, ನಂತರ ಇತರ ಉಪ-ಜೀವಿಸಂಖ್ಯೆಗಳ ಹರಡುವಿಕೆಯ ಮೂಲಕ ಆ ಸ್ಥಾನವು ತಂಬಲ್ಪಡುತ್ತದೆ. ಸಂಭವನೀಯಕಾರರು ಗುರುತಿಸುವ ಪ್ರಕಾರ ಪ್ರಕೃತಿಯಲ್ಲಿ ಕೆಲವೊಂದು ನಿರ್ದಿಷ್ಟ ಸ್ವಾಭಾವಿಕ ನಿಯಂತ್ರಣಾ ಕಾರ್ಯವಿಧಾನಗಳು ಸಂಭವಿಸುತ್ತವೆ. ಜೀವಜಾತಿಯ ಮಟ್ಟದಲ್ಲಿನ ಪರಿಣಾಮ ಮಾಹಿತಿ ಮತ್ತು ಪ್ರತಿಕ್ರಿಯೆಯ ಕಾರ್ಯವಿಧಾನಗಳು ಜೀವಿಗಳ ಸಂಖ್ಯೆಯ ಮಟ್ಟಗಳನ್ನು ನಿಯಂತ್ರಿಸುತ್ತವೆ. ಇದು ಅತ್ಯಂತ ಗಮನಾರ್ಹವಾದ ರೀತಿಯಲ್ಲಿ ಪ್ರದೇಶ ರಕ್ಷಕ ವರ್ತನೆಯ ಮೂಲಕ ನಡೆಯುತ್ತದೆ. ಆಂಡ್ರಿವಥಾ ಮತ್ತು ಬಿರ್ಚ್‌[೧೭] ಎಂಬಿಬ್ಬರು ಸೂಚಿಸುವ ಪ್ರಕಾರ, ಪ್ರದೇಶ ರಕ್ಷಕ ವರ್ತನೆಯು ಆಹಾರ ಸರಬರಾಜು ಒಂದು ಸೀಮಿತಗೊಳಿಸುವ ಅಂಶವಾಗಿರದ ಮಟ್ಟಗಳಲ್ಲಿ ಜೀವಿ ಸಂಖ್ಯೆಗಳನ್ನು ಇರಿಸುವ ಕಡೆಗೆ ಒಲವನ್ನು ಹೊಂದಿರುತ್ತದೆ. ಆದ್ದರಿಂದ, ಸಂಭವನೀಯಕಾರರು ಪ್ರದೇಶ ರಕ್ಷಕ ವರ್ತನೆಯನ್ನು ಜೀವಿಜಾತಿಯ ಮಟ್ಟದಲ್ಲಿನ ಒಂದು ನಿಯಂತ್ರಣಾ ಕಾರ್ಯವಿಧಾನವಾಗಿ ನೋಡುತ್ತಾರೆಯೇ ಹೊರತು ಪರಿಸರ ವ್ಯವಸ್ಥೆಯ ಮಟ್ಟದಲ್ಲಲ್ಲ. ಹೀಗಾಗಿ, ಅವರ ದೃಷ್ಟಿಕೋನದ ಪ್ರಕಾರ, ಪರಿಸರ ವ್ಯವಸ್ಥೆಗಳು ಪರಿಣಾಮ ಮಾಹಿತಿ ಮತ್ತು ಪ್ರತಿಕ್ರಿಯಾ ಕಾರ್ಯವಿಧಾನಗಳಿಂದ ಮತ್ತು ಸ್ವತಃ (ಪರಿಸರ) ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲ ಹಾಗೂ ಪ್ರಕೃತಿಯ ಒಂದು ಸಮತೋಲನ ಎಂಬಂಥ ಯಾವುದೇ ಅಂಶವೂ ಅಸ್ತಿತ್ವದಲ್ಲಿಲ್ಲ.

ಒಂದು ವೇಳೆ ಪರಿಸರ ವ್ಯವಸ್ಥೆಗಳು ಸಂಭವನೀಯ ಪ್ರಕ್ರಿಯೆಗಳಿಂದ ಪ್ರಮುಖವಾಗಿ ನಿಯತ್ರಿಸಲ್ಪಟ್ಟರೆ, ಹಾಗೂ ಇದರ ಮೂಲಕ ಊಹಿಸಬಹುದಾದ ಮತ್ತು ಗೊತ್ತುಗುರಿಯಿಲ್ಲದ ಕ್ರಿಯೆಗಳಿಂದ ಅದರ ನಂತರದ ಸ್ಥಿತಿಯು ನಿರ್ಧರಿಸಲ್ಪಡಬಹುದಾದರೆ, ಅವು ಪ್ರತಿ ಜೀವಿಯೂ ಪ್ರತ್ಯೇಕವಾಗಿ ಈಡಾಗುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ಹಠಾತ್‌ ಬದಲಾವಣೆಗೆ ಅವು ಚೇತರಿಸಿಕೊಳ್ಳಬಹುದು. ಪ್ರಕೃತಿಯ ಒಂದು ಸಮತೋಲನದ ಅನುಪಸ್ಥಿತಿಯಲ್ಲಿ ಪರಿಸರ ವ್ಯವಸ್ಥೆಗಳ ಜೀವಿಜಾತಿಗಳ ಸಂಯೋಜನೆಯ ಪಲ್ಲಟಗಳಿಗೆ ಈಡಾಗುತ್ತವೆ. ಈ ಪಲ್ಲಟಗಳು ಬದಲಾವಣೆಯ ಸ್ವರೂಪವನ್ನು ಅವಲಂಬಿಸಿರುತ್ತವೆ. ಆದರೆ ಪರಿಸರ ವಿಜ್ಞಾನದ ಸಮಗ್ರ ಕುಸಿಯುವಿಕೆಯು ಪ್ರಾಯಶಃ ವಿರಳವಾದ ಸಂಗತಿಗಳಾಗಿರುತ್ತವೆ.

ರಷ್ಯಾದ ರ್ಯಾಂಗೆಲ್‌ ದ್ವೀಪದಲ್ಲಿನ ಉತ್ತರ ಧ್ರುವ ಪ್ರದೇಶದ ಪಾಚಿಬಯಲು.

ರಾಬರ್ಟ್‌ ಉಲನೋವಿಕ್ಜ್‌ ಎಂಬ ಸೈದ್ಧಾಂತಿಕ ಪರಿಸರಶಾಸ್ತ್ರಜ್ಞನು ಅಧ್ಯಯನಕ್ಕೊಳಗಾದ ವ್ಯವಸ್ಥೆಗಳಲ್ಲಿನ ಪೂರಕ ಮಾಹಿತಿಗೆ (ಪರಸ್ಪರ ಸಂಬಂಧಗಳು) ಒತ್ತುನೀಡಲು, ಪರಿಸರ ವ್ಯವಸ್ಥೆಗಳ ರಚನೆಯನ್ನು ವಿವರಿಸಲು ಮಾಹಿತಿ ಸಿದ್ಧಾಂತದ ಸಾಧನಗಳನ್ನು ಬಳಸಿದ್ದಾನೆ. ಈ ಕಾರ್ಯವಿಧಾನ ಮತ್ತು ಸಂಕೀರ್ಣ ಪರಿಸರ ವ್ಯವಸ್ಥೆಗಳ ಪೂರ್ವವರ್ತಿ ವೀಕ್ಷಣೆಗಳನ್ನು ಅವಲಂಬಿಸಿ, ಪರಿಸರ ವ್ಯವಸ್ಥೆಗಳ ಮೇಲಿನ ಒತ್ತಡದ ಮಟ್ಟಗಳನ್ನು ನಿರ್ಧರಿಸುವಲ್ಲಿನ ಮಾರ್ಗಗಳನ್ನು ಹಾಗೂ ತಮ್ಮ ಸನ್ನಿವೇಶಗಳಲ್ಲಿನ ಮಾರ್ಪಾಡುಗಳ ವ್ಯಾಖ್ಯಾನಿತ ವಿಧಗಳಿಗೆ ವ್ಯವಸ್ಥೆಯ ಪ್ರತಿಕ್ರಿಯೆಗಳನ್ನು ಊಹಿಸುವುದನ್ನು ಉಲನೋವಿಕ್ಜ್‌ ನಿರೂಪಿಸಿದ್ದಾನೆ.[೧೮]

ಇದನ್ನೂ ನೋಡಿ: ರಿಲೇಷನಲ್‌ ಆರ್ಡರ್ ಥಿಯರೀಸ್‌ , ಜೀವದ ಸಂಘಟನೆಯ ಮೂಲಭೂತ ತತ್ವಗಳಿಗಿರುವಂಥದು

ಪರಿಸರ ವ್ಯವಸ್ಥೆಯ ಪರಿಸರ ವಿಜ್ಞಾನ

[ಬದಲಾಯಿಸಿ]

ಪರಿಸರ ವ್ಯವಸ್ಥೆ ಪರಿಸರ ವಿಜ್ಞಾನ ಎಂಬುದು ಪರಿಸರ ವ್ಯವಸ್ಥೆಗಳ ಜೈವಿಕ ಮತ್ತು ಅಜೀವಕ ಘಟಕಗಳ ಮತ್ತು ಪರಿಸರ ವ್ಯವಸ್ಥೆಯೊಂದರ ಚೌಕಟ್ಟಿನೊಳಗಿನ ಅವುಗಳ ಪಾರಸ್ಪರಿಕ ಕ್ರಿಯೆಗಳು ಅಥವಾ ಪ್ರಭಾವಗಳ ಒಗ್ಗೂಡಿತ ಅಧ್ಯಯನವಾಗಿದೆ. ಪರಿಸರ ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಮತ್ತು ರಾಸಾಯನಿಕಗಳು, ಆಧಾರಶಿಲೆ, ಮಣ್ಣು, ಸಸ್ಯಗಳು, ಮತ್ತು ಪ್ರಾಣಿಗಳು ಇವೇ ಮೊದಲಾದ ತಮ್ಮ ಘಟಕಗಳೊಂದಿಗೆ ಇದನ್ನು ಸಂಬಂಧ ಕಲ್ಪಿಸುತ್ತವೆ ಎಂಬುದನ್ನು ಈ ವಿಜ್ಞಾನವು ಪರಿಶೀಲಿಸುತ್ತದೆ. ಪರಿಸರ ವ್ಯವಸ್ಥೆಯ ಪರಿಸರ ವಿಜ್ಞಾನವು ಭೌತಿಕ ಮತ್ತು ಜೈವಿಕ ರಚನೆಯನ್ನು ಪರಿಶೀಲಿಸುತ್ತದೆ ಮತ್ತು ಪರಿಸರ ವ್ಯವಸ್ಥೆಯ ಈ ಗುಣಲಕ್ಷಣಗಳು ಹೇಗೆ ಪರಸ್ಪರ ಪ್ರಭಾವ ಬೀರುತ್ತವೆ ಎಂಬುದನ್ನು ಪರಿಶೀಲಿಸುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
ಬ್ರೆಜಿಲ್‌ನಲ್ಲಿರುವ ಅಮೆಜಾನ್‌ ನದಿ.

ಆಕರಗಳು

[ಬದಲಾಯಿಸಿ]
  1. ವಿಚ್‌ ಷೋ ದಿ (1996) ಜಿಯೋಸಿಸ್ಟಮ್ಸ್‌: ಆನ್‌ ಇಂಟ್ರಡಕ್ಷನ್‌ ಟು ಫಿಸಿಕಲ್‌ ಜಿಯಾಗ್ರಫಿ . ಪ್ರೆಂಟೀಸ್‌ ಹಾಲ್‌ ಇಂಕ್‌.
  2. ಓಡಮ್‌, EP (1971) ಫಂಡಮೆಂಟಲ್ಸ್‌ ಆಫ್‌ ಇಕಾಲಜಿ, ಮೂರನೇ ಆವೃತ್ತಿ, ಸೌಂಡರ್ಸ್‌ ನ್ಯೂಯಾರ್ಕ್‌
  3. ೩.೦ ೩.೧ ಟಾನ್ಸ್‌ಲೆ, AG (1935) ದಿ ಯೂಸ್‌ ಅಂಡ್‌ ಅಬ್ಯೂಸ್‌ ಆಫ್‌ ವೆಜಿಟೇಷನಲ್‌ ಟರ್ಮ್ಸ್‌ ಅಂಡ್‌ ಕಾನ್ಸೆಪ್ಟ್ಸ್‌. ಇಕಾಲಜಿ 16, 284-307.
  4. ಟಾನ್ಸ್‌ಲೆ, AG (1939) ದಿ ಬ್ರಿಟಿಷ್‌ ಐಲ್ಯಾಂಡ್ಸ್‌ ಅಂಡ್‌ ದೆರ್‌ ವೆಜಿಟೇಷನ್‌. 2ರ ಸಂಪುಟ 1. ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್‌, ಯುನೈಟೆಡ್‌. ಕಿಂಗ್‌ಡಂ. 484 ಪುಟಗಳು.
  5. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ. ಜೈವಿಕ ವೈವಿಧ್ಯತೆಯ ಕುರಿತಾದ ಸಮ್ಮೇಳನ ಜೂನ್ 1992. UNEP ದಸ್ತಾವೇಜು ಸಂ. ಲಭ್ಯವಿಲ್ಲ 92-78. ಮರುಮುದ್ರಣ Archived 2009-12-12 ವೇಬ್ಯಾಕ್ ಮೆಷಿನ್ ನಲ್ಲಿ.
  6. ಮೋಲ್ಲರ್-ಡೊಂಬೋಯ್ಸ್‌ & ಎಲೆನ್‌ಬರ್ಗ್‌: "ಎ ಟೆಂಟಾಟಿವ್‌ ಫಿಸಿಯೋಗ್ನಾಮಿಕ್‌-ಇಕಲಾಜಿಕಲ್‌ ಕ್ಲಾಸಿಫಿಕೇಷನ್‌ ಆಫ್‌ ಪ್ಲಾಂಟ್‌ ಫಾರ್ಮೇಷನ್ಸ್‌ ಆಫ್‌ ದಿ ಅರ್ತ್‌".
  7. ಮ್ಯಾಪ್‌ ಆಫ್‌ ದಿ ಇಕೋಸಿಸ್ಟಮ್ಸ್‌ ಆಫ್ ಸೆಂಟ್ರಲ್‌ ಅಮೆರಿಕಾ, WICE 2005. 2008ರ ಆಗಸ್ಟ್‌ 30ರಂದು ಮರುಸಂಪಾದಿಸಲಾಯಿತು
  8. ಆಂಟೋನಿಯೋ ಡಿ ಗ್ರೆಗೊರಿಯೊ & ಲೂಯ್ಸಾ J.M. ಜಾನ್ಸೆನ್‌ (2000). ಲ್ಯಾಂಡ್‌ ಕವರ್‌ ಕ್ಲಾಸಿಫಿಕೇಷನ್‌ ಸಿಸ್ಟಮ್‌ (LCCS): ಕ್ಲಾಸಿಫಿಕೇಷನ್‌ ಕಾನ್ಸೆಪ್ಟ್ಸ್‌ ಅಂಡ್ ಯೂಸರ್‌ ಮ್ಯಾನ್ಯುಯೆಲ್‌ . 2008ರ ಆಗಸ್ಟ್‌ ರಂದು ಮರುಸಂಪಾದಿಸಲಾಯಿತು.
  9. ಗ್ಯಾರಿಸನ್‌, ಜಾರ್ಜ್‌ A.; ಜಗ್‌ಸ್ಟಾಡ್‌, A. J.; ಡಂಕನ್‌, D. A.; ಲೂಯಿಸ್‌, M. E.; ಮತ್ತು ಸ್ಮಿತ್‌, D. R. (1977) ವೆಜಿಟೇಷನ್‌ ಅಂಡ್‌ ಇನ್ವಿರಾನ್ಮೆಂಟಲ್‌ ಫೀಚರ್ಸ್‌ ಆಫ್‌ ಫಾರೆಸ್ಟ್‌ ಅಂಡ್‌ ರೇಂಜ್‌ ಇಕೋಸಿಸ್ಟಮ್ಸ್‌ (ಅರಣ್ಯ ಸೇವಾ ಕೈಪಿಡಿ ಸಂಖ್ಯೆ 465) ಅಮೆರಿಕ ಸಂಯುಕ್ತ ಸಂಸ್ಥಾನಗಳ ಕೃಷಿ ಇಲಾಖೆ, ವಾಷಿಂಗ್ಟನ್‌, D.C., OCLC 3359594
  10. Costanza, R.; d'Arge, R.; de Groot, R.; Farber, S.; Grasso, M.; Hannon, B.; et al. (1997). "The value of the world's ecosystem services and natural capital" (PDF). Nature. 387: 253–260. {{cite journal}}: Explicit use of et al. in: |last7= (help); line feed character in |title= at position 35 (help)
  11. ಮಿಲೆನಿಯಂ ಇಕೋಸಿಸ್ಟಮ್‌ ಅಸೆಸ್‌ಮೆಂಟ್‌, 2005. ಇಕೋಸಿಸ್ಟಮ್ಸ್‌ ಅಂಡ್‌ ಹ್ಯೂಮನ್‌ ವೆಲ್‌-ಬೀಯಿಂಗ್‌: ಬಯೋಡೈವರ್ಸಿಟಿ ಸಿಂಥಸಿಸ್‌. ವರ್ಲ್ಡ್ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌, ವಾಷಿಂಗ್ಟನ್‌, DC. [೧][೨]
  12. ದಿ ಕಮ್ಯುನಿಟಿ ಎನ್ವಿರಾನ್ಮೆಂಟಲ್‌ ಲೀಗಲ್‌ ಡಿಫೆನ್ಸ್‌ ಫಂಡ್‌: ಎಬೌಟ್‌ ದಿ ನ್ಯೂ ಕಾನ್ಸ್ಟಿಟ್ಯೂಷನ್‌ 2008 ದಿ ಕಮ್ಯುನಿಟಿ ಎನ್ವಿರಾನ್ಮೆಂಟಲ್‌ ಲೀಗಲ್‌ ಡಿಫೆನ್ಸ್‌ ಫಂಡ್‌ Archived 2008-10-03 ವೇಬ್ಯಾಕ್ ಮೆಷಿನ್ ನಲ್ಲಿ., 2009-09-07ರಂದು ಮರುಸಂಪಾದಿಸಿದ್ದು
  13. "ತಮಾಕುವಾ ಲಾ ರೆಕಗ್ನೈಸಸ್‌ ರೈಟ್ಸ್‌ ಆಫ್‌ ನೇಚರ್‌". Archived from the original on 2009-10-07. Retrieved 2010-02-25.
  14. "ರಷ್‌ ಟೌನ್‌ಷಿಪ್‌ ಸ್ಟ್ರಿಪ್ಸ್‌ ಸ್ಲಜ್‌ ಕಾರ್ಪೊರೇಷನ್‌ "ರೈಟ್ಸ್‌"". Archived from the original on 2007-08-13. Retrieved 2010-02-25.
  15. "ಆನ್‌ ಥಿನ್‌ ಐಸ್‌". Archived from the original on 2009-02-25. Retrieved 2010-02-25.
  16. ಅರ್ತ್ಲಿ ರೈಟ್ಸ್‌
  17. ಆಂಡ್ರೆವಾಥಾ, HG ಮತ್ತು LC ಬರ್ಚ್‌ (1954) ದಿ ಡಿಸ್ಟ್ರಿಬ್ಯೂಷನ್‌ ಅಂಡ್‌ ಅಬಂಡೆನ್ಸ್‌ ಆಫ್‌ ಅನಿಮಲ್ಸ್‌. ಯೂನಿವರ್ಸಿಟಿ ಆಫ್‌ ಚಿಕಾಗೋ ಪ್ರೆಸ್‌, ಚಿಕಾಗೋ, IL
  18. ರಾಬರ್ಟ್‌ ಉಲನೋವಿಕ್ಜ್‌ (1997). ಇಕಾಲಜಿ, ದಿ ಅಸೆಂಡೆಂಟ್‌ ಪರ್‌ಸ್ಪೆಕ್ಟಿವ್‌ . ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌. ISBN 0-231-10828-1.


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
U.S.ನ ಅಲಾಸ್ಕಾ ಸಂಸ್ಥಾನದಲ್ಲಿನ ಚಾಮಿಸೊ ಪಾಳುಭೂಮಿಯಲ್ಲಿನ ಚಾಮಿಸೊ ದ್ವೀಪ.
  • ಬೋಯೆರ್, P.J. ಡೆನ್‌, ಮತ್ತು J. ರೆಡ್ಡಿಂಗಿಯಸ್‌. 1996. ರೆಗ್ಯುಲೇಷನ್‌ ಅಂಡ್‌ ಸ್ಟೆಬಿಲೈಸೇಷನ್‌ ಪ್ಯಾರಾಡೈಮ್ಸ್‌ ಇನ್‌ ಪಾಪ್ಯುಲೇಷನ್‌ ಇಕಾಲಜಿ. ಪಾಪ್ಯುಲೇಷನ್‌ ಅಂಡ್‌ ಕಮ್ಯುನಿಟಿ ಬಯಾಲಜಿ ಸೀರೀಸ್‌ 16. ಚಾಪ್‌ಮನ್‌ ಅಂಡ್‌ ಹಾಲ್‌, ನ್ಯೂಯಾರ್ಕ್‌. 397 ಪುಟಗಳು
  • ಇಕಲಾಜಿಕಲ್‌ ಸೊಸೈಟಿ ಆಫ್‌ ಅಮೆರಿಕಾ, ಇಕೋಸಿಸ್ಟಮ್‌ ಸರ್ವೀಸಸ್‌ Archived 2007-12-11 ವೇಬ್ಯಾಕ್ ಮೆಷಿನ್ ನಲ್ಲಿ., 25 ಮೇ 2007
  • ಎಲ್ರಿಚ್‌, ಪಾಲ್‌; ವಾಕರ್‌, ಬ್ರಿಯಾನ್‌ "ರಿವೆಟ್ಸ್‌ ಅಂಡ್‌ ರಿಡಂಡೆನ್ಸಿ".ಬಯೋಸೈನ್ಸ್‌ ಸಂಪುಟ 48 ಸಂಖ್ಯೆ 5. ಮೇ 1998. ಪುಟಗಳು 387. ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯಲಾಜಿಕಲ್‌ ಸೈನ್ಸಸ್‌.
  • ಗ್ರೈಮ್‌, J.P. "ಬಯೋಡೈವರ್ಸಿಟಿ ಅಂಡ್‌ ಇಕೋಸಿಸ್ಟಮ್‌ ಫಂಕ್ಷನ್‌: ದಿ ಡಿಬೇಟ್‌ ಡೀಪನ್ಸ್‌." ಸೈನ್ಸ್‌ ಸಂಪುಟ 277. ಸಂಖ್ಯೆ 533029 ಆಗಸ್ಟ್‌ 1997 ಪುಟಗಳು 1260 - 1261. 25 ಮೇ 2007
  • ಗ್ರೂಮ್‌, ಮಾರ್ಥಾ J., ಮತ್ತು ಗ್ಯಾರಿ K. ಮೆಫೆ. ಪ್ರಿನ್ಸಿಪಲ್ಸ್‌ ಆಫ್‌ ಕನ್ಸರ್ವೇಷನ್‌ ಬಯಾಲಜಿ 3. ಸಂದರ್‌ಲ್ಯಾಂಡ್‌, MA: ಸಿನವೇರ್‌ ಅಸೋಸಿಯೇಟ್ಸ್‌, ಇಂಕ್‌, 2006.
  • ಲಾಟನ್‌, ಜಾನ್‌ H., ವಾಟ್‌ ಡು ಸ್ಪೀಸೀಸ್‌ ಡು ಇನ್‌ ದಿ ಇಕೋಸಿಸ್ಟಮ್ಸ್‌? , ಓಯಿಕೋಸ್‌, ಡಿಸೆಂಬರ್‌, 1994. ಸಂಪುಟ 71, ಸಂಖ್ಯೆ 3.
  • ಲಿಂಡೆಮನ್‌, R.L. 1942. ದಿ ಟ್ರೋಫೀಕ್‌-ಡೈನಮಿಕ್‌ ಆಸ್ಪೆಕ್ಟ್‌ ಆಫ್‌ ಇಕಾಲಜಿ ಇಕಾಲಜಿ '23: 399-418.
  • ಪ್ಯಾಟನ್‌, B.C. 1959. ಆನ್ ಇಂಟ್ರಡಕ್ಷನ್‌ ಟು ದಿ ಸೈಬರ್ನೇಟಿಕ್ಸ್‌ ಆಫ್‌ ದಿ ಇಕೋಸಿಸ್ಟಮ್‌: ದಿ ಟ್ರೋಫಿಕ್‌-ಡೈನಮಿಕ್‌ ಆಸ್ಪೆಕ್ಟ್‌. ಇಕಾಲಜಿ 40, ಸಂ. 2.: 221-231.
  • ರಂಗನಾಥನ್‌, J & ಇರ್ವಿನ್‌, F. (2007, ಮೇ 7). ರಿಸ್ಟೋರಿಂಗ್ ನೇಚರ್ಸ್‌ ಕ್ಯಾಪಿಟಲ್‌: ಆನ್‌ ಆಕ್ಷನ್‌ ಅಜೆಂಡಾ ಟು ಸಸ್ಟೇನ್‌ ಇಕೋಸಿಸ್ಟಂ ಸರ್ವೀಸಸ್‌
  • ವ್ರಿಯುಗ್‌ಡೆನ್‌ಹಿಲ್‌, D., ಟೆರ್ಬೋರ್ಗ್‌, J., ಕ್ಲೀಫ್‌, A.M., ಸಿನಿಟ್‌ಸಿನ್‌, M., ಬೋಯೆರ್‌, G.C., ಅರ್ಚಾಗ, V.L., ಪ್ರಿನ್ಸ್‌, H.H.T., 2003, ಕಾಂಪ್ರಹೆನ್ಸಿವ್‌ ಪ್ರೊಟೆಕ್ಟೆಡ್‌ ಏರಿಯಾಸ್‌ ಸಿಸ್ಟಂ ಕಾಂಪೊಸಿಷನ್‌ ಅಂಡ್‌ ಮಾನಿಟರಿಂಗ್‌, IUCN, ಗ್ಲಾಂಡ್‌, ಸ್ವಿಜರ್‌ಲೆಂಡ್‌. 106 ಪುಟಗಳು.

ಹೊರಗಿನ ಕೊಂಡಿಗಳು

[ಬದಲಾಯಿಸಿ]