ವಿಷಯಕ್ಕೆ ಹೋಗು

ಸುಂಕದಕಟ್ಟೆ ಆನೆ ಶಿಬಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಂಕದಕಟ್ಟೆಆನೆ ಶಿಬಿರ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಲ್ಲಿದೆ.

ಆನೆ ಸುಂಕದಕಟ್ಟೆ ಶಿಬಿರದಲ್ಲಿದೆ.೫೪ ವರ್ಷದ ಹೆಣ್ಣಾನೆ ಮೇರಿ ೨.೧೧ ಮೀಟರ್ ಎತ್ತರವಿದೆ. ಇದನ್ನು ೧೯೭೭ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿತ್ತು. ಇದುವರೆಗೆ ೯ ಬಾರಿ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದೆ.

ವರಲಕ್ಷ್ಮಿ

[ಬದಲಾಯಿಸಿ]

ಆನೆ ಸುಂಕದಕಟ್ಟೆ ಶಿಬಿರದಲ್ಲಿದೆ.ಈ ಆನೆಯನ್ನು ೧೯೭೭ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದ್ದು. ೭ನೇ ಬಾರಿಗೆ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.

ಅಭಿಮನ್ಯು

[ಬದಲಾಯಿಸಿ]

ಲಿಂಗ : ಗಂಡು, ವಯಸ್ಸು : 44 ವರ್ಷಗಳು. ಅಂದಾಜು ತೂಕ : 4270 ಕೆಜಿ. ಶಿಬಿರ ಮತ್ತು ವಿಭಾಗ : ಮೂರ್ಕಲ್ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ. ಗುಣ ಲಕ್ಷಣಗಳು : ಇದನ್ನು 1977ರಲ್ಲಿ ಕೊಡಗು ಜಿಲ್ಲೆಯ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಮತ್ತು ಚಿಕಿತ್ಸೆ ನೀಡುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು 12 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿಯನ್ನು ಹೊತ್ತಿರುತ್ತದೆ.

ವರಲಕ್ಷ್ಮಿ

[ಬದಲಾಯಿಸಿ]

ಲಿಂಗ : ಹೆಣ್ಣು, ವಯಸ್ಸು :55 ವರ್ಷಗಳು, ಅಂದಾಜು ತೂಕ : 3090 ಕೆಜಿ. ಶಿಬಿರ ಮತ್ತು ವಿಭಾಗ : ಸುಂಕದಕಟ್ಟೆ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ. ಗುಣ ಲಕ್ಷಣಗಳು : ಈ ಆನೆಯು ತುಂಬಾ ಸಾಧುಸ್ವಭಾವದ್ದಾಗಿದ್ದು ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು 7 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

ಗಜೇಂದ್ರ

[ಬದಲಾಯಿಸಿ]

ಲಿಂಗ : ಗಂಡು, ವಯಸ್ಸು : 55 ವರ್ಷಗಳು, ಅಂದಾಜು ತೂಕ : 4570 ಕೆಜಿ. ಶಿಬಿರ ಮತ್ತು ವಿಭಾಗ : ಕೆ.ಗುಡಿ ಆನೆ ಶಿಬಿರ. ಚಾಮರಾಜನಗರ ವನ್ಯಜೀವಿ ವಿಭಾಗ. ಗುಣ ಲಕ್ಷಣಗಳು : ಇದನ್ನು 1987ರಲ್ಲಿ ಕೊಡಗು ಜಿಲ್ಲೆಯ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯ ವಿಶೇಷ ಗುಣವೆಂದರೆ ಕಾಡಾನೆಯನ್ನು ಹಿಡಿದು ಪಳಗಿಸುವ ಕೆಲಸದಲ್ಲಿ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಆನೆಯು ಬಲಿಷ್ಠವಾಗಿರುತ್ತದೆ. ಈ ಆನೆಯು 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ. ಇದು ದಸರಾ ಮಹೋತ್ಸವದ ಪಟ್ಟದ ಆನೆಯ ಜವಾಬ್ದಾರಿಯನ್ನು ಹೊತ್ತಿರುತ್ತದೆ.

ಲಿಂಗ : ಗಂಡು, ವಯಸ್ಸು : 50 ವರ್ಷಗಳು, ಅಂದಾಜು ತೂಕ : 4750 ಕೆಜಿ. ಶಿಬಿರ ಮತ್ತು ವಿಭಾಗ : ಬಳ್ಳೆ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ. ಗುಣ ಲಕ್ಷಣಗಳು : ಈ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು ಒಂದು ಬಾರಿ ಚಿನ್ನದ ಅಂಬಾರಿಯನ್ನು ಹೊತ್ತಿರುತ್ತದೆ.

ಲಿಂಗ : ಹೆಣ್ಣು, ವಯಸ್ಸು : 68 ವರ್ಷಗಳು, ಅಂದಾಜು ತೂಕ : 3250 ಕೆಜಿ. ಶಿಬಿರ ಮತ್ತು ವಿಭಾಗ : ಸುಂಕದಕಟ್ಟೆ ಆನೆ ಶಿಬಿರ. ಹುಣಸೂರು ವನ್ಯಜೀವಿ ವಿಭಾಗ. ಗುಣ ಲಕ್ಷಣಗಳು : ಇದನ್ನು 1968ರಲ್ಲಿ ಖೆಡ್ಡಾದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಯಿತು. ಈ ಆನೆಯು ಸುಮಾರು 11 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದೆ.

Read more at: http://kannada.oneindia.com/festivals/dasara/2010/0906-mysore-dasara-2010-gaja-payana.html

ಇವನ್ನೂ ನೋಡಿ

[ಬದಲಾಯಿಸಿ]