ಎಲಿಫೆಂಟಾ ಗುಹೆಗಳು
ಎಲಿಫೆಂಟಾ ಗುಹೆಗಳು* | |
---|---|
UNESCO ವಿಶ್ವ ಪರಂಪರೆಯ ತಾಣ | |
ರಾಷ್ಟ್ರ | ಭಾರತ |
ತಾಣದ ವರ್ಗ | ಸಾಂಸ್ಕೃತಿಕ |
ಆಯ್ಕೆಯ ಮಾನದಂಡಗಳು | (i)(iii) |
ಆಕರ | 244 |
ವಲಯ** | ಏಷ್ಯಾ-ಪೆಸಿಫಿಕ್ |
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ | |
ಘೋಷಿತ ವರ್ಷ | 1987 (11ನೆಯ ಅಧಿವೇಶನ) |
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ. ** UNESCO ರಚಿಸಿರುವ ವಲಯಗಳು. |
ಎಲಿಫೆಂಟಾ ಗುಹೆಗಳು ಭಾರತ ಮುಂಬಯಿ ನಗರದ ಸಮೀಪ ಸಾಗರದಲ್ಲಿರುವ ಎಲಿಫೆಂಟಾ ದ್ವೀಪದಲ್ಲಿವೆ. ಎಲಿಫೆಂಟಾ ದ್ವೀಪದ ಮೂಲ ಮರಾಠಿ ಹೆಸರು ಘಾರಾಪುರಿ. ಪೋರ್ಚುಗೀಸರು ಈ ಹೆಸರನ್ನು ಎಲಿಫೆಂಟಾಎಂದು ಬದಲಾಯಿಸಿದರು. ೧೯೮೭ರಲ್ಲಿ ಎಲಿಫೆಂಟಾ ಗುಹೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಿತು.
ಎಲಿಫೆಂಟಾ ಗುಹೆಗಳಲ್ಲಿನ ಹೆಚ್ಚಿನ ಶಿಲಾಮೂರ್ತಿಗಳನ್ನು ಪೋರ್ಚುಗೀಸರು ವಿರೂಪಗೊಳಿಸಿದರು. ೧೭ ನೆಯ ಶತಮಾನದಲ್ಲಿ ಇಲ್ಲಿನ ಶಿಲಾಮೂರ್ತಿಗಳನ್ನು ಬಂದೂಕಿನ ಗುರಿಸಾಧನೆ ಕಲಿಯಲು ಗುರಿಯನ್ನಾಗಿ ಪೋರ್ಚುಗೀಸರು ಬಳಸುತ್ತಿದ್ದರು. ಎಲಿಫೆಂಟಾ ಗುಹೆಗಳ ಇತಿಹಾಸವು ೯ ರಿಂದ ೧೩ನೆಯ ಶತಮಾನದಲ್ಲಿದ್ದ ಸಿಲ್ಹರ ಅರಸರ ಕಾಲದ್ದೆಂದು ನಂಬಲಾಗಿದೆ. ಆದರೆ ಇಲ್ಲಿನ ಕೆಲ ಶಿಲಾಮೂರ್ತಿಗಳು ಮಾನ್ಯಖೇಟದ ರಾಷ್ಟ್ರಕೂಟರ ಕಾಲದವೆಂದು ಸಹ ಕೆಲ ಅಭಿಪ್ರಾಯಗಳಿವೆ. ಇಲ್ಲಿ ಶಿವನ ಮೂರು ಮುಖಗಳನ್ನು ಹೊಂದಿರುವ ತ್ರಿಮೂರ್ತಿ ಸದಾಶಿವ ವಿಗ್ರಹವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಬಲು ಮಟ್ಟಿಗೆ ಹೋಲುತ್ತದೆ. ಈ ಸದಾಶಿವ ತ್ರಿಮೂರ್ತಿಯು ರಾಷ್ಟ್ರಕೂಟರ ರಾಜಲಾಂಛನವು ಸಹ ಆಗಿತ್ತು. ನಟರಾಜ ಮತ್ತು ಅತ್ಯಾಕರ್ಷಕವಾಗಿರುವ ಅರ್ಧನಾರೀಶ್ವರ ಮೂರ್ತಿಗಳು ಸಹ ರಾಷ್ಟ್ರಕೂಟ ಶೈಲಿಯವು. ಶಿಲೆಯಲ್ಲಿ ಕೊರೆದು ರೂಪಿಸಲಾಗಿರುವ ಎಲಿಫೆಂಟಾ ಗುಹೆಗಳು ಸುಮಾರು ೬೦೦೦೦ ಚದರ ಅಡಿಗಳಷ್ಟು ವಿಸ್ತಾರವಾಗಿವೆ. ಇಲ್ಲಿ ಅನೇಕ ಮೊಗಸಾಲೆಗಳು, ಹಜಾರಗಳಿದ್ದು ಹಲವು ಗುಡಿಗಳನ್ನು ಕಾಣಬಹುದು. ಈ ಗುಡಿಗಳಲ್ಲಿ ನಾನಾ ಶಿಲಾಮೂರ್ತಿಗಳಿವೆ. ಜೊತೆಗೆ ಒಂದು ಶಿವಾಲಯವು ಸಹ ಪ್ರಧಾನವಾಗಿದೆ. ಈ ದೇವಾಲಯ ಸಂಕೀರ್ಣವು ಶಿವನ ಆವಾಸತಾಣವೆಂದು ಸ್ಥಳೀಯರ ನಂಬಿಕೆ.
ಎಲಿಫೆಂಟಾ ಗುಹೆಗಳನ್ನು ತಲುಪಬೇಕಾದರೆ ಮುಂಬಯಿನ ಗೇಟ್ ವೇ ಆಫ್ ಇಂಡಿಯಾದಿಂದ ಮೋಟಾರ್ ಲಾಂಚ್ಗಳಲ್ಲಿ ಪಯಣಿಸಬೇಕಾಗುವುದು. ಇಲ್ಲಿ ಪ್ರವಾಸಿಗಳಿಗೆ ಯಾವುದೇ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಈ ಪ್ರದೇಶದ ಸೌಂದರ್ಯ ಮತ್ತು ಸ್ವಚ್ಛತೆಗಳನ್ನು ಕಾಪಿಟ್ಟುಕೊಳ್ಳುವ ದೃಷ್ಟಿಯಿಂದ ಮಹಾರಾಷ್ಟ್ರ ಸರಕಾರವು ಈ ನಿರ್ಧಾರ ಕೈಗೊಂಡಿದೆ.
ಇವನ್ನೂ ನೋಡಿ
[ಬದಲಾಯಿಸಿ]ಮಹಾರಾಷ್ಟ್ರ ಮುಂಬಯಿ ವಿಶ್ವ ಪರಂಪರೆಯ ತಾಣ
ಬಾಹ್ಯ ಸಂಪರ್ಕಕೊಂಡಿಗಳು
[ಬದಲಾಯಿಸಿ]- ಎಲಿಫೆಂಟಾ ಗುಹೆಗಳ ಬಗ್ಗೆ ಒಂದು ವಿಡಿಯೋ
- ಎಲಿಫೆಂಟಾ ಗುಹೆಗಳ ಚಿತ್ರಗಳು
- ಎಲಿಫೆಂಟಾ ಗುಹೆಗಳ ಮತ್ತು ಮಹಾರಾಷ್ಟ್ರದ ಇತರ ತಾಣಗಳ ಚಿತ್ರಗಳು
- ಎಲಿಫೆಂಟಾ ಗುಹೆಗಳ ಬಗ್ಗೆ ಮಾಹಿತಿ
- ಎಲಿಫೆಂಟಾ ಗುಹೆಗಳಲ್ಲಿನ ರಾಷ್ಟ್ರಕೂಟ ಶೈಲಿಯ ಕೆತ್ತನೆಗಳ ವಿವರ
- ಎಲಿಫೆಂಟಾ ಗುಹೆಗಳು
- ಎಲಿಫೆಂಟಾ ಗುಹೆಗಳ ನಕಾಶೆ Archived 2007-01-29 ವೇಬ್ಯಾಕ್ ಮೆಷಿನ್ ನಲ್ಲಿ.