ಕೌಸಲ್ಯೆ
ಗೋಚರ
ಕೌಸಲ್ಯೆ ಶ್ರೀರಾಮನ ತಾಯಿ. ದಶರಥನ ಮೊದಲನೆಯ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ - ಪಟ್ಟದ ರಾಣಿ. ಕೋಸಲ ದೇಶದ ರಾಜಕುಮಾರಿ. ತ್ಯಾಗಕ್ಕೆ, ಪ್ರೀತಿಗೆ ಹೆಸರು ವಾಸಿಯಾದವಳು. ದಶರಥನಿಗೆ ಕೌಸಲ್ಯೆ, ಸುಮಿತ್ರ, ಕೈಕೇಯಿ ಎಂಬ ಮೂರು ಜನ ಪತ್ನಿಯರು.
ಬಾಲಕಾಂಡದಿಂದ ಅರಣ್ಯಕಾಂಡದ ಆದಿಯವರೆಗೆ ರಾಮಾಯಣದಲ್ಲಿ ಕೌಸಲ್ಯೆಯ ಪಾತ್ರ ಹೆಚ್ಚು. ದಶರಥ ಮಕ್ಕಳಿಲ್ಲದೆ ಪುತ್ರಕಾಮೇಷ್ಟಿ ಯಾಗ ಮಾಡಿದಾಗ ಅದರ ಫಲದ ಮೊದಲ ಅರ್ಧ ಕೌಸಲ್ಯೆಗೂ , ಉಳಿದ ಅರ್ಧ ಭಾಗ ಕೈಕೇಯಿಗೂ ಕೊಡುತ್ತಾನೆ. ಕೌಸಲ್ಯೆ ಹಾಗೂ ಕೈಕೇಯಿ ಇಬ್ಬರೂ ತಮ್ಮ ಪಾಲಿನಿಂದ ಸುಮಿತ್ರೆಗೆ ಹಂಚುತ್ತಾರೆ. ಯಾಗದ ಫಲವಾಗಿ ಕೌಸಲ್ಯೆ ಚೈತ್ರ ಶುದ್ದ ನವಮಿಯಂದು(ರಾಮನವಮಿ) ರಾಮನಿಗೆ ಜನ್ಮ ನೀಡುತ್ತಾಳೆ. ನಂತರದ ದಿನಗಳಲ್ಲಿ ಕೈಕೇಯಿ ಭರತನಿಗೂ,ಸುಮಿತ್ರೆ ಲಕ್ಷ್ಮಣ ಹಾಗೂ ಶತ್ರುಘ್ನನಿಗೂ ಜನುಮ ನೀಡುತ್ತಾರೆ. ದಶರಥ , ಪುತ್ರ ವಿಯೋಗದ ನಂತರ, ತನ್ನ ಜೀವನ ಕೊನೆಯ ಘಳಿಗೆಗಳನ್ನು ಕೌಸಲ್ಯೆಯೊಂದಿಗೆ ಅವಳ ಅರಮನೆಯಲ್ಲಿಯೆ ಕಳೆಯುತ್ತಾನೆ.
ಉಲ್ಲೇಖಗಳು
[ಬದಲಾಯಿಸಿ]
ವಾಲ್ಮೀಕಿ ವಿರಚಿತ ರಾಮಾಯಣ |
---|
ಪಾತ್ರಗಳು |
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ |
ಇತರೆ |
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು | |