ವಿಷಯಕ್ಕೆ ಹೋಗು

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ವಿಜಯಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯಪುರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 1919ರ ಜೂಲೈ 28ರಂದು ಪ್ರಾರಂಭವಾಗಿದೆ.

ರಾಜ್ಯದಲ್ಲಿ ಸರಿಸುಮಾರು 32 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ಗಳಿವೆ ಹಾಗೂ ಅನೇಕ ಶಾಖೆಗಳಿವೆ. ಅವುಗಳ ಪೈಕಿ ಶತಮಾನ ಕಂಡ ಬ್ಯಾಂಕ್​ಗಳು ಬೆರಳೆಣಿಕೆಯಷ್ಟು. ಅದರಲ್ಲಿ ವಿಜಯಪುರದ ಡಿಸಿಸಿ ಬ್ಯಾಂಕ್ ಕೂಡ ಒಂದು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಡಿಸಿಸಿ ಬ್ಯಾಂಕ್​ಗಳು ಡಿಜಿಟಲೀಕರಣಗೊಳ್ಳುತ್ತಿವೆ. ಇತರ ಬ್ಯಾಂಕ್​ಗಳಿಗೆ ಮಾದರಿಯಾಗುವ ರೀತಿಯಲ್ಲಿ ಡಿಸಿಸಿ ಬ್ಯಾಂಕ್​ಗಳು ಸೇವೆ ಸಲ್ಲಿಸುತ್ತಿದ್ದು, ಅವುಗಳಲ್ಲಿ ವಿಜಯಪುರ ಡಿಸಿಸಿ ಬ್ಯಾಂಕ್ ಸಹ ಮುಂಚೂಣಿಯಲ್ಲಿದೆ.

ಡಿಜಿಟಲೀಕರಣ

[ಬದಲಾಯಿಸಿ]

ಗ್ರಾಹಕರ ಗಮನ ಸೆಳೆಯುವ, ಮನೆ ಬಾಗಿಲಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್​ಗಳು ಇದೀಗ ಡಿಜಿಟಲೀಕರಣದತ್ತ ಹೆಜ್ಜೆ ಹಾಕಿವೆ. ಗ್ರಾಹಕರ ಅನುಕೂಲಕ್ಕಾಗಿ ಡಿಜಿಟಲ್ ಲಾಕರ್ ವ್ಯವಸ್ಥೆ, ಎಟಿಎಂ, ಮೊಬೈಲ್ ಎಟಿಎಂ ವ್ಯಾನ್​ಗಳಂತಹ ಸೌಕರ್ಯಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ವಿಜಯಪುರದ ಡಿಸಿಸಿ ಬ್ಯಾಂಕ್ ಕೂಡ ಮೊಬೈಲ್ ಎಟಿಎಂ ವ್ಯಾನ್​ಗೆ ಚಾಲನೆ ನೀಡಿ, ಬ್ಯಾಂಕ್ ವಹಿವಾಟುಗಳಿಗೆ ಡಿಜಿಟಲ್ ಸ್ಪರ್ಶ ನೀಡಿದ್ದಾರೆ.

ಎಟಿಎಂ

[ಬದಲಾಯಿಸಿ]

ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತ ಎಟಿಎಂಗಳಿಲ್ಲದ ಕಾರಣ ಗ್ರಾಮೀಣರು ಸುಮಾರು 15ರಿಂದ 20 ಕಿ.ಮೀ. ದೂರದ ಸ್ಥಳಗಳಿಗೆ ಹೋಗಿ ಹಣ ಪಡೆಯಬೇಕಾಗುತ್ತದೆ. ಅದನ್ನು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ದೂರ ಮಾಡಿದೆ. ಮೊಬೈಲ್ ಎಟಿಎಂ ವ್ಯಾನಿನಲ್ಲಿ ಯಾವುದೇ ಬ್ಯಾಂಕಿನ ಕಾರ್ಡ್ ಬಳಸಿ ಹಣ ಪಡೆಯಬಹುದು. ಈ ವ್ಯಾನ್ ಹಳ್ಳಿಹಳ್ಳಿಗೂ ಸಂಚರಿಸುತ್ತಿದ್ದು, ಯಾವುದೇ ಬ್ಯಾಂಕಿನ ಎಟಿಎಂ ಕಾರ್ಡ್ ಬಳಸಿ ಹಣ ಪಡೆಯಬಹುದಾಗಿದೆ. ಈ ಮೊಬೈಲ್ ಎಟಿಎಂ.

ಶತಮಾನದ ಸಂಭ್ರಮ

[ಬದಲಾಯಿಸಿ]

1919ರ ಜೂಲೈ 28ರಂದು ಪ್ರಾರಂಭವಾದ ವಿಜಯಪುರ ಡಿಸಿಸಿ ಬ್ಯಾಂಕ್ ಇದೀಗ ಒಂದು ಶತಮಾನ ಪೂರೈಸುತ್ತಿದೆ. 2018ರ ಜು.28ಕ್ಕೆ 100ನೇ ವರ್ಷಕ್ಕೆ ಕಾಲಿಟ್ಟಿದೆ. ಬ್ಯಾಂಕ್ ಈವರೆಗೆ 13 ಜನ ಅಧ್ಯಕ್ಷರನ್ನು ಕಂಡಿದೆ. ಪಾಂಡುರಂಗರಾವ್ ದೇಸಾಯಿ ಸಂಸ್ಥಾಪಕ ಅಧ್ಯಕ್ಷರಾಗಿ ಬ್ಯಾಂಕಿನ ಅಭಿವೃದ್ಧಿಗೆ ದುಡಿದಿದ್ದಾರೆ. 1997ರಿಂದ ಪ್ರಸಕ್ತ ಸಾಲಿನವರೆಗೂ ಸತತ ಎರಡು ದಶಕಗಳ ಕಾಲ ಜಿಲ್ಲಾಧ್ಯಕ್ಷರಾಗಿ ಶಿವಾನಂದ ಪಾಟೀಲ ಆಯ್ಕೆಯಾಗಿದ್ದಾರೆ.

ಸ್ಥಾನ

[ಬದಲಾಯಿಸಿ]

ಈ ಬ್ಯಾಂಕ್ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಈಗಾಗಲೇ ಬ್ಯಾಂಕ್ 100ನೇ ವರ್ಷಕ್ಕೆ ಕಾಲಿಟ್ಟಿದೆ.[]

ಪ್ರಶಸ್ತಿ

[ಬದಲಾಯಿಸಿ]
  • 1999-2000ನೇ ಸಾಲಿನಲ್ಲಿ ನಬಾರ್ಡ್​ನಿಂದ ರಾಷ್ಟ್ರಮಟ್ಟದ ವಿಶೇಷ ಪ್ರಶಸ್ತಿ 2013-14ರಲ್ಲಿ ಅತ್ಯುತ್ತಮ ಸಾಧನಾ ಪ್ರಶಸ್ತಿ.
  • 2014-15ರಲ್ಲಿ ನಬಾರ್ಡ್​ದಿಂದ ರಾಷ್ಟ್ರಮಟ್ಟದ ಸಾಧನಾ ಪ್ರಶಸ್ತಿ.
  • 2014-15ರಲ್ಲಿ ಅಪೆಕ್ಸ್​ನಿಂದ ಪ್ರಶಂಸನಾ ಪುರಸ್ಕಾರ.
  • 2014-15ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ ಬ್ಯಾಂಕ್‌ ರಾಜ್ಯದ ಮಟ್ಟದ ದ್ವಿತೀಯ ಪ್ರಶಸ್ತಿಗೆ ಆಯ್ಕೆ

ಉಲ್ಲೇಖಗಳು

[ಬದಲಾಯಿಸಿ]