ಶಿವಾನಂದ ಪಾಟೀಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಿವಾನಂದ ಪಾಟೀಲ
ಜನನವಿಜಯಪುರ, ಕರ್ನಾಟಕ
ವೃತ್ತಿರಾಜಕೀಯ
ರಾಷ್ಟ್ರೀಯತೆಭಾರತೀಯ

ಶಿವಾನಂದ ಪಾಟೀಲರು ಪ್ರಸ್ತುತ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಶಾಸಕರು. ಇವರು ಮಾಜಿ ನಗರ ಸಭೆ ಅಧ್ಯಕ್ಷರು, ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು, ಉದ್ಯಮಿಗಳು ಹಾಗೂ ರಾಜಕೀಯ ಧುರೀಣರು.

ಶಿಕ್ಷಣ[ಬದಲಾಯಿಸಿ]

ಶಿವಾನಂದ ಪಾಟೀಲರು ಬೆಳಗಾವಿಯ ಕೆ.ಎಲ್.ಈ. ಸಂಸ್ಥೆಯ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದಿಂದ 1981ರಲ್ಲಿ D.Pharm ಪದವಿ ಪಡೆದಿದ್ದಾರೆ.

ರಾಜಕೀಯ[ಬದಲಾಯಿಸಿ]

 • ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು.
 • ಶಿವಾನಂದ ಪಾಟೀಲ ನಂತರ 1991ರಲ್ಲಿ ನಡೆದ ತಿಕೋಟಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ಸ್ಪರ್ಧಿಸಿ ಸೋಲುಂಡಿದ್ದರು.
 • 1992ರಲ್ಲಿ ವಿಜಯಪುರ ನಗರಸಭೆಯ ಅಧ್ಯಕ್ಷರಾಗಿದ್ದರು.
 • 1994ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಜನತಾ ದಳದಿಂದ ಆಯ್ಕೆಯಾಗಿದ್ದರು.
 • 1999ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಪಕ್ಷ ಬದಲಿಸಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದರು.
 • 2004ರ ಚುನಾವಣೆಯಲ್ಲಿ ಪಕ್ಷಾಂತರ ಅಷ್ಟೇ ಅಲ್ಲ, ಕ್ಷೇತ್ರಾಂತರವನ್ನೂ ಮಾಡಿ ತಿಕೋಟಾ ವಿಧಾನಸಭೆ ಕ್ಷೇತ್ರವನ್ನು ಬಿಟ್ಟು ಅಲ್ಲದೇ, ಬಿಜೆಪಿಯನ್ನೂ ತೊರೆದು ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್​ನಿಂದ ಆಯ್ಕೆಯಾದರು.
 • 2008ರಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ಸಿನಂದ ಪುನರಾಯ್ಕೆ ಬಯಸಿ, ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಬೆಳ್ಳುಬ್ಬಿ ವಿರುದ್ಧ ಸೋಲುಂಡರು.
 • 2013ರಲ್ಲಿ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸನಿಂದ ಮತ್ತೆ ಸ್ಪರ್ಧಿಸಿ ಆಯ್ಕೆಯಾದರು.
 • 2018ರಲ್ಲಿ ಬಸವನ ಬಾಗೇವಾಡಿಯಿಂದ ಕಾಂಗ್ರೆಸ್​ನಿಂದ ಪುನರಾಯ್ಕೆಯಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.[೧]

ಸಚಿವರು[ಬದಲಾಯಿಸಿ]

ಬಸವಣ್ಣನ ತವರು ಬಸವನ ಬಾಗೇವಾಡಿ ಕ್ಷೇತ್ರದಿಂದ 3ನೇ ಬಾರಿಗೆ ಶಾಸಕರಾಗಿರುವ ಶಿವಾನಂದ ಪಾಟೀಲರು 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.[೨]

ವೈಯಕ್ತಿಕ ಜೀವನ[ಬದಲಾಯಿಸಿ]

ಶ್ರೀಯುತರು ಭಾಗ್ಯಶ್ರೀ ಪಾಟೀಲರನ್ನು ಮದುವೆಯಾಗಿದ್ದು ಸತ್ಯಜೀತ್, ಸಂಯುಂಕ್ತಾ ಮತ್ತು ಸಂಪ್ರದಾ ಮೂವರು ಮಕ್ಕಳಿದ್ದು ವಿಜಯಪುರ ನಗರದಲ್ಲಿ ವಾಸವಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

 1. "ಆರ್ಕೈವ್ ನಕಲು". Archived from the original on 2018-04-18. Retrieved 2018-08-15.
 2. https://m.dailyhunt.in/news/india/kannada/allindiannews+com-epaper-allindia/siem+samputadalli+sachivaraadha+shaasaka+shivaanandha+paatila-newsid-89475250