ವಿಷಯಕ್ಕೆ ಹೋಗು

ಧಾರವಾಡ ಕನ್ನಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧಾರವಾಡ ಕನ್ನಡ
ಬಳಕೆಯಲ್ಲಿರುವ 
ಪ್ರದೇಶಗಳು:
ಧಾರವಾಡ
ಒಟ್ಟು 
ಮಾತನಾಡುವವರು:
೧೦,೦೦,೦೦೦+
ಭಾಷಾ ಕುಟುಂಬ: ದ್ರಾವಿಡ
 ದಕ್ಷಿಣ ದ್ರಾವಿಡ
  ತಮಿಳು-ಕನ್ನಡ
   ಕನ್ನಡ
    ಧಾರವಾಡ ಕನ್ನಡ 
ಬರವಣಿಗೆ: ಕನ್ನಡ ಲಿಪಿ
ಭಾಷೆಯ ಸಂಕೇತಗಳು
ISO 639-1: kn
ISO 639-2: kan
ISO/FDIS 639-3: kan

ಧಾರವಾಡ ಕನ್ನಡ ಕನ್ನಡದ ಪ್ರಾದೇಶಿಕ ಉಪಭಾಷೆಗಳಲ್ಲಿ ಪ್ರಮುಖ ಉಪಭಾಷಾಪ್ರಭೇದ. ಇದರಲ್ಲಿ ಧಾರವಾಡ, ಬಿಜಾಪುರ ಮತ್ತು ಬೆಳಗಾಂವಿ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಭಾಷಾರೂಪಗಳು ಸಮಾವೇಶಗೊಳ್ಳುತ್ತವೆ. ಜಿಲ್ಲೆ ಜಿಲ್ಲೆಗೆ, ತಾಲ್ಲೂಕು ತಾಲ್ಲೂಕಿಗೆ, ಮತ್ತೆ ಒಳಭೇದಗಳು ಕಂಡುಬಂದರೂ ಈ ಪ್ರದೇಶದ ವಿಶಿಷ್ಟ ರೂಪಗಳೆನ್ನಲು ಬರುವಂಥ ಪ್ರಯೋಗಗಳಿವೆ. ಈ ಪ್ರಯೋಗಗಳನ್ನು ಇತರ ಉಪಭಾಷಾ ಪ್ರಭೇದಗಳಲ್ಲಿ ಕಂಡುಬರುವ ರೂಪಗಳೊಡನೆ ಹೋಲಿಸಿ ನೋಡಿದಾಗ ಧಾರವಾಡ ಕನ್ನಡದ ವೈಶಿಷ್ಟ್ಯಗಳು ವಿಶಿಷ್ಟವಾಗಿ ಕಂಡುಬಂದು, ಅದಕ್ಕೆ ಒಂದು ಭಿನ್ನಸ್ಥಾನ ಒದಗಿಸಿಕೊಡುತ್ತವೆ.

ಭಾಷಾವ್ಯತ್ಯಾಸ

[ಬದಲಾಯಿಸಿ]
  • ಗ್ರಂಥಸ್ಥ ಭಾಷೆಯಲ್ಲಿ (ಅದೇ ರೀತಿ, ಮೈಸೂರು ಮುಂತಾದ ಪ್ರಭೇದಗಳಲ್ಲಿ) ಎ ಕಾರದಲ್ಲಿ ಕೊನೆಗೊಳ್ಳುವ ಶಬ್ದಗಳು ಇಲ್ಲಿ ಇ ಕಾರಾಂತವಾಗುತ್ತವೆ. ಉದಾ ಮನೆ- ಮನಿ,ತೆನೆ-ತೆನಿ, ತಲೆ-ತಲಿ, ಬರೆ-ಬರಿ ಇತ್ಯಾದಿ.
  • ಶಬ್ದಮಧ್ಯದ ಒ ಸ್ವರ ಇಲ್ಲಿ ಆ್ಯ ಆಗುತ್ತದೆ. ಉದಾ ಕೋಟೆ- ಕ್ವಾಟೆ, ದೋಸೆ- ದ್ವಾಸಿ, ಗೋಡೆ- ಗ್ವಾಡಿ ಕೊರೆ - ಕ್ವಾರಿ ಇತ್ಯಾದಿ

ಶಬ್ದಮಧ್ಯದ ಎ ಇಲ್ಲಿ ಅ್ಯ ಆಗಿದೆ. ಉದಾ ಮೇಲೆ - ಮ್ಯಾಲೆ ಕೆರೆ - ಕ್ಯಾರಿ ಮೆರೆ - ಮ್ಯಾರಿ ಇತ್ಯಾದಿ ಮಹಾಪ್ರಾಣದ ಉಚ್ಫಾರ ಮೈಸೂರು ಕನ್ನಡದಲ್ಲಿ ಕಂಡುಬರುವುದಕ್ಕಿಂತ ಇಲ್ಲಿ ಹೆಚ್ಚು ಸ್ಪಷ್ಟವಾಗಿದೆ. ಉದಾ ಭಾಸೆ -(ಮೈ ಬಾಸಿ-) ವಿದ್ಯಾರ್ಥಿ -(ಮೈ ವಿದ್ಯಾರ್ತಿ-), ಭೆಟ್ಟಿ -(ಮೈ ಬೆಟ್ಟಿ-) ಇತ್ಯಾದಿ

ಅನ್ಯಭಾಷಾ ಪ್ರಯೋಗ

[ಬದಲಾಯಿಸಿ]
  • ಧಾರವಾಡ ಕನ್ನಡದಲ್ಲಿ ಕಂಡುಬರುವ ಸಂಸ್ಕೃತ ಪದಗಳ ಉಚ್ಚಾರಣೆ (ಅನುಸ್ವಾರದ ಉಚ್ಚಾರ) ಮೈಸೂರು ಕನ್ನಡಕ್ಕಿಂತ ಭಿನ್ನವಾಗಿದೆ. ಉದಾ ಸಂಸಾರ (ಮೈ. ಸಮ್ಸಾರ,) ಸಿಂಹ (ಮೈ. ಸಿಮ್ಮ) ಇತ್ಯಾದಿ.
  • ಧಾರವಾಡ ಕನ್ನಡದಲ್ಲಿ ಲಿ ಬಳಕೆಯಾಗುವ ಇಂಗ್ಲಿಷ್ ಪದಗಳ ಉಚ್ಚಾರ ಮೈಸೂರು ಕನ್ನಡಕ್ಕಿಂತ ಬಿsನ್ನವಾಗಿದೆ. ಉದಾ: ರೇಲು (ಮೈ.ರೈಲು), ಜಜ್ (ಮೈ.ಜಡ್ಜ್‌), ಜಾಯಿಂಟ್ (ಮೈ.ಜಂಟಿ), ರಜಿಸ್ಟ್ರಾರ್ (ಮೈ.ರಿಜಿಸ್ಟ್ರಾರ್) ಇತ್ಯಾದಿ.

ವ್ಯಾಕರಣಾಂಶ ವ್ಯತ್ಯಾಸ

[ಬದಲಾಯಿಸಿ]
  • ಕ್ರಿಯಾರೂಪಗಳಲ್ಲಿಯ ಶಬ್ದಾಂತ್ಯ- ಎ ಕಾರ ಇಲ್ಲಿ ಇ ಕಾರಾಂತವಾಗಿದೆ. ಉದಾ: ಹೋಗ್ತೀನಿ (ಹೋಗ್ತೇನಿ), ಬರ್ತೀನಿ (ಬರ್ತೇನೆ), ಕೊಡತೀನಿ (ಕೊಡತೇನೆ) ಇತ್ಯಾದಿ.
  • ಕ್ರಿಯಾರೂಪಗಳಲ್ಲಿಸಮರೂಪಧಾರಣೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಉದಾ: ತಿನ್ನಿ (ತಿಂದೆ), ಬಾನ್ನಿ (ಬಂದೆ) ಮಲಕೊನ್ನಿ (ಮಲಗಿಕೊಂಡೆ), ತಾನ್ನಿ (ತಂದೆ) ಇತ್ಯಾದಿ.
  • ಕ್ರಿಯಾರೂಪಗಳಲ್ಲಿ ಇನ್ನೊಂದು ರೀತಿಯ ವೈಶಿಷ್ಟ್ಯವÆ ಇದೆ. ಉದಾ: ಬರತತಿ (ಮೈ. ಬರುತ್ತೆ), ಹೋಗತತಿ (ಮೈ. ಹೋಗತ್ತೆ), ತಿಂತತಿ (ಮೈ. ತಿನ್ನುತ್ತೆ) ಇತ್ಯಾದಿ.

ಧಾರವಾಡ ಕನ್ನಡದ ವಿಶಿಷ್ಟ ಪದ ಪ್ರಯೋಗ

[ಬದಲಾಯಿಸಿ]

ಧಾರವಾಡ ಕನ್ನಡಕ್ಕೆ ವಿಶಿಷ್ಟವೆನಿಸುವ ಕೆಲಪದಪ್ರಯೋಗಗಳಿವೆ. ಉದಾ ತಿನಸು (ಮೈ. ತಿಂಡಿ), ಗಿಡ (ಮೈ. ಮರ), ಆಯೆರೀ (ಮೈ. ಉಡುಗೊರೆ), ತೊಪ್ಪಲು (ಮೈ. ಸೊಪ್ಪು), ಚಲೂ (ಮೈ. ಚನ್ನಾಗಿ, ಚನ್ನಾದು, ಅಮ್ಮ (ಮೈ. ಅಜ್ಜಿ), ಸಿರಾ (ಮೈ. ಕೇಸರಿಭಾತ್), ತಿಂದು (ಮೈ. ತಿಂದ್ಕೂಂಡು), ಹಾಲು ಹಿಂಡು (ಮೈ. ಹಾಲುಕರಿ), ಚಲೂ ಐತಿ (ಮೈ. ಚನ್ನಾಗಿದೆ). ದಂಡಿ ಮುಟ್ಟಬೇಕು (ಮೈ. ದಡ ಸೇರಬೇಕು) ಇತ್ಯಾದಿ.

ಇತರ ಭಾಷೆಗಳ ಪ್ರಭಾವ

[ಬದಲಾಯಿಸಿ]

ಇಲ್ಲಿಯ ಭೌಗೋಳಿಕ ಪರಿಸರ ಮತ್ತು ಐತಿಹಾಸಿಕ ಕಾರಣಗಳಿಂದ ಧಾರವಾಡ ಕನ್ನಡದ ಮೇಲೆ ಮರಾಠಿಯ ಪ್ರಭಾವ ಕಂಡುಬರುತ್ತದೆ. ಉದಾಹರಣೆಗೆ ಶಂಬರ್ (ನೂರು), ಸವ್ವಾಸೇರು (ಒಂದೂಕಾಲು ಸೇರು), ಪೋನೆ ಏಳು (6 ಮುಕ್ಕಾಲು), ಛತ್ತೀಸ್ (36, ಆಢ್ಯ ಮನುಷ್ಯ), ತಿರಸಟ್ಟಿ (63, ಎಡವಟ್ಟ ಮನುಷ್ಯ), ಟಕ್ಕೆ (ಪ್ರಮಾಣ), ಮಿಸಳ್ (ಒಂದು ತಿಂಡಿ), ಭಾಮಟ್ಯಾ (ಒಂದು ಬೈಗಳು), ಮುಂತಾದ ಪ್ರಯೋಗಗಳ ಬಹುಸಂಖ್ಯೆಯಲ್ಲಿ ಬಳಕೆಯಲ್ಲಿವೆ. ಮೈಸೂರು ಕನ್ನಡ ಗ್ರಂಥಸ್ಥ ಭಾಷೆಗೆ ಸಮೀಪವಾಗಿದ್ದರೆ ಧಾರವಾಡ ಕನ್ನಡ ಗ್ರಂಥಸ್ಥ ಭಾಷೆಗೆ ಬಲು ದೂರವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: